Date : 29-12-2009 | 8 Comments. | Read More
1.ಆದಾಯವನ್ನು ಮೀರಿ ಸಂಪತ್ತು ಸಂಗ್ರಹ 2. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಮಂಡಳಿಯ ೫ ನಿವೇಶನಗಳ ಖರೀದಿ 3. 1988ರ ಬೇನಾಮಿ ಹಣ ವರ್ಗಾವಣೆ ತಡೆ ಕಾಯಿದೆಯಡಿ ಯಾವುದನ್ನು ನಿಷೇಧಿಸಲಾಗಿದೆಯೋ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆಯೋ ಅಂತಹ ಬೇನಾಮಿ ಹಣಕಾಸು ವಹಿವಾಟು 4. 1961ರ ತಮಿಳುನಾಡು ಆಸ್ತಿ ಮಿತಿ ಕಾಯಿದೆ ಉಲ್ಲಂಘಿಸಿ ಕೃಷಿ ಭೂಮಿ ಸ್ವಾಧೀನ 5. ಸರಕಾರಿ ಹಾಗೂ ಸಾರ್ವಜನಿಕ ಆಸ್ತಿಯ ಒತ್ತುವರಿ 6. ಆ ಮೂಲಕ ದಲಿತರ […]
Date : 24-12-2009 | 11 Comments. | Read More
ಅವರು 1990ರ ಹೊತ್ತಿಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಧಾನಿ ದಿಲ್ಲಿಯಲ್ಲಿದ್ದ ತಮ್ಮ ಬಂಗಲೆಯನ್ನು ಬಿಟ್ಟು ಹೈದರಾಬಾದ್ಗೆ ತೆರಳಲು ಅಣಿಯಾಗಿದ್ದರು. ಹಾಗೆಂದುಕೊಂಡು ಗಂಟುಮೂಟೆ ಕಟ್ಟಿ ರೆಡಿಯಾಗಿ 18 ತಿಂಗಳುಗಳೇ ಆಗಿದ್ದವು. ಇನ್ನೇನೂ ಸಾಮಾನು ಸರಂಜಾಮು ಹಾಗೂ ಪುಸ್ತಕ ಭಂಡಾರದೊಂದಿಗೆ ಕಾಲ್ಕೀಳಬೇಕು ಅಷ್ಟರಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು. 1984ರಲ್ಲಿ ಇಂದಿರಾ ಹತ್ಯೆಯಾಗಿದ್ದರು, 1991ರಲ್ಲಿ ರಾಜೀವ್ ಬಲಿಯಾದರು. ಅದರೊಂದಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಳಿತಪ್ಪಿದಂತಾಯಿತು. ಪಕ್ಷವನ್ನು ಮತ್ತೆ ಹಳಿಗೆ ತರಲು ಒಬ್ಬ […]
Date : 19-12-2009 | 47 Comments. | Read More
“ಅದು ಜಗತ್ತಿನ ಅತ್ಯಂತ ಪುರಾತನ ವೃತ್ತಿ ಎಂದು ನೀವೇ ಹೇಳುವುದಾದರೆ, ಕಾನೂನಿನ ಮೂಲಕ ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಏಕೆ ಕಾನೂನುಬದ್ಧಗೊಳಿಸಬಾರದು? ಮಹಿಳೆಯರ ಮಾರಾಟ, ಸಾಗಾಟವನ್ನು ತಡೆಯಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸುವುದೇ ಯೋಗ್ಯ ಮಾರ್ಗ ಹಾಗೂ ಜಗತ್ತಿನ ಯಾವ ರಾಷ್ಟ್ರ ದಲ್ಲೂ ಕಠಿಣ ಕ್ರಮಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ”. ಹಾಗಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಡಿಸೆಂಬರ್ ೯ರಂದು ಕೇಂದ್ರದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರನ್ನು ಪ್ರಶ್ನಿಸಿದ್ದಾರೆ! ನಮ್ಮ ದೇಶದಲ್ಲಿ […]
Date : 12-12-2009 | 18 Comments. | Read More
‘ಪಾ‘! ಒಂದು ವೇಳೆ ನೀವು ಈಗಾಗಲೇ ಈ ಚಿತ್ರವನ್ನು ನೋಡಿದ್ದರೆ ನಿಮಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲವಾದರೆ ಅದರ ಒಂದೊಂದು ದೃಶ್ಯಗಳಲ್ಲೂ ಮೈತೆರೆದುಕೊಳ್ಳುತ್ತಾ ಹೋಗುವ ಜೀವನ ಪ್ರೀತಿಯ ಬಗ್ಗೆ ತಿಳಿದುಕೊಳ್ಳುವ ಮೊದಲು ಸ್ವಲ್ಪ ಚಿತ್ರಕಥೆಯನ್ನೂ ಕೇಳಿ. ಹೆಸರು ಆರೋ. ವಯಸ್ಸು 13. ‘ಪ್ರೊಜೇರಿಯಾ’ ಅಂದರೆ ಎಳೆಯ ವಯಸ್ಸಿನಲ್ಲೇ ಮುದಿತನ ತರುವ ಒಂದು ವಿಚಿತ್ರ ಕಾಯಿಲೆ. ಆರೋ ನರಳುತ್ತಿದ್ದುದು ಅದೇ ಕಾಯಿಲೆಯಿಂದ. ಆದರೆ ನೋಡಲು 70 ವರ್ಷದ ಮುದುಕನಂತೆ ಕಂಡರೂ ಅವನ ವರ್ತನೆಯಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. […]
Date : 08-12-2009 | 13 Comments. | Read More
“ಸಚಿನ್ ತೆಂಡೂಲ್ಕರ್ನನ್ನು ನಾನು ಮೊದಲ ಬಾರಿಗೆ ಟಿವಿ ಪರದೆ ಮೇಲೆ ನೋಡಿದ್ದು 1992ರಲ್ಲಿ. ಅದು ವಿಶ್ವಕಪ್ ಪಂದ್ಯಾವಳಿ. ನಾನಾಗ ೭ನೇ ತರಗತಿಯಲ್ಲಿದ್ದೆ. ಪರೀಕ್ಷೆ ನಡೆಯುತ್ತಿತ್ತು. ಚಕ್ಕರ್ ಹೊಡೆದಿದ್ದೆ. ಏಕೆಂದರೆ ವಿಶ್ವಕಪ್ ನಡೆಯುತ್ತಿದ್ದುದು ಆಸ್ಟ್ರೇಲಿಯಾದಲ್ಲಿ. ಪಂದ್ಯಗಳು ಬೆಳಗಿನ ಜಾವ ಪ್ರಾರಂಭವಾಗುತ್ತಿದ್ದವು. ಸ್ಕೂಲ್ ಟೈಮಿಗೂ ಕ್ರಿಕೆಟ್ ಮ್ಯಾಚುಗಳಿಗೂ ಮಧ್ಯೆ ಸಮಯ ಹೊಂದಾಣಿಕೆ ಯಾಗುತ್ತಿರಲಿಲ್ಲ. ಹಾಗಾಗಿ ಪರೀಕ್ಷೆಗೆ ಶರಣುಹೊಡೆದಿದ್ದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುತ್ತಿದ್ದ ವಿಧಾನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನೆನಪಿನ ಬುತ್ತಿಯೊಳಗೆ ಇನ್ನೂ ಹಸಿಹಸಿಯಾಗಿದೆ. ನಜಾಫ್ಗಢದ ನಮ್ಮ ಹಳೇ […]
Date : 28-11-2009 | 34 Comments. | Read More
TRC ಅಥವಾ Truth and Reconciliation Commission! “ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗದ ಹೆಸರನ್ನು ಬಹುಶಃ ನೀವು ಕೇಳಿರಬಹುದು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅದರ ಅಧ್ಯಕ್ಷರಾಗಿದ್ದರು. ಡಾ. ಅಲೆಕ್ಸ್ ಬೊರೈನ್, ಮೇರಿ ಬರ್ಟನ್, ವಕೀಲ ಕ್ರಿಸ್ ಡಿ ಜಾಗರ್, ಬೊಂಗಾನಿ ಫಿಂಕಾ, ರೆವೆರೆಂಡ್ ಖೋಝಾ ಮೊಜೋ, ಡುಮಿಸಾ ಎನ್ಸೆಬೆಝಾ, ಯಾಸ್ಮಿನ್ ಸೂಕಾ ಮುಂತಾದ ಖ್ಯಾತನಾಮರು ಸದಸ್ಯರಾಗಿದ್ದರು. ಅದು ಮೂರು ಉಪಸಮಿತಿಗಳನ್ನು ನೇಮಕ ಮಾಡಿತು.
Date : 24-11-2009 | 18 Comments. | Read More
ಇಂಥದ್ದೊಂದು ಶೀರ್ಷಿಕೆಯಡಿ ಅಕ್ಟೋಬರ್ 31ರಂದು ‘ದಿ ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ದೊಡ್ಡ ವರದಿಯೊಂದು ಪ್ರಕಟವಾಗಿತ್ತು. “ನಮ್ಮ ಮನೆ ಜನರಿಂದ ತುಂಬಿತುಳುಕದೇ ಇದ್ದ ಒಂದೇ ಒಂದು ದಿನವನ್ನೂ ನನಗೆ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಊಟದ ಟೇಬಲ್ನಲ್ಲಿ ಕುಳಿತುಕೊಳ್ಳುವಾಗ ಅಚ್ಚು ಮೆಚ್ಚಿನ ಕುರ್ಚಿಯಲ್ಲೇ ಕುಳಿತುಕೊಳ್ಳಬೇಕೆಂದು ನಾನು, ನನ್ನ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಸದಾ ಕಿತ್ತಾಡುತ್ತಿದ್ದೆವು. ನನ್ನ ಗಂಡ ಅತುಲ್ ಭಾರ್ಗವ್ಗೆ ಕೂಡ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿದ್ದಾನೆ. ಎಲ್ಲರೂ ಒಂದೇ ರೀತಿಯಲ್ಲಿ ಬೆಳೆದೆವು” ಎನ್ನುತ್ತಾರೆ ಫ್ಯಾಶನ್ ಡಿಸೈನರ್ […]
Date : 15-11-2009 | 4 Comments. | Read More
“ವಕೀಲರಿಂದ ನ್ಯಾಯಾಲಯಗಳ ಕಲಾಪ ಬಹಿಷ್ಕಾರ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನಕರನ್ ವಿರುದ್ಧ ಅವಾಚ್ಯ ಪದಗಳ ನಿಂದನೆ, ನ್ಯಾಯಮೂರ್ತಿ ವಿ. ಗೋಪಾಲಗೌಡರ ಮೇಲೆ ಹಲ್ಲೆ, ಕಲಾಪಕ್ಕೂ ಅಡ್ಡಿ, ತಳ್ಳಾಟ- ನೂಕಾಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ….” ಇಂತಹ ಮುಖಪುಟದ ವರದಿಗಳು, “ನ್ಯಾಯ ಕುರುಡಾಯಿತು”, “ಗೂಂಡಾಗಿರಿ”, “ಜಡ್ಜ್ಗಳ ಮೇಲೆ ವಕೀಲರ ಹಲ್ಲೆ”, “ನ್ಯಾಯ ಮೂರ್ತಿಗೇ ಗೂಸಾ”, ಮುಂತಾದ ಶೀರ್ಷಿಕೆಗಳನ್ನು ನೋಡಿದ ನೀವು ನಮ್ಮ ಕರ್ನಾಟಕ ಹೈಕೋರ್ಟ್ ವಕೀಲರೆಂದರೆ ಖಂಡಿತ ಗೂಂಡಾಗಳು ಎಂಬ ನಿರ್ಧಾರಕ್ಕೆ ಬಂದಿರಬಹುದಲ್ಲವೆ?! ಎಲ್ಲರೂ ವಕೀಲರನ್ನು, ವಕೀಲರ ಸಂಘವನ್ನು […]
Date : 10-11-2009 | 14 Comments. | Read More
ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್! ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂ ಬತ್ತನೇ ಶತಮಾನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭೀಷ್ಮಪಿತಾಮಹನಂತಿದ್ದರು. ಮಹಾತ್ಮ ಗಾಂಧೀಜಿಯವರ ಪ್ರೀತಿಯ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತಗಾರ ಅವರು. ನಮ್ಮ ಶಾಸ್ತ್ರೀಯ ಸಂಗೀತವನ್ನು ಕಲಿಸಲೆಂದು 1901ರಲ್ಲಿ ಲಾಹೋರ್ ನಲ್ಲಿ ‘ಗಂಧರ್ವ ಮಹಾವಿದ್ಯಾಲಯ’ ಸ್ಥಾಪಿಸಿದ್ದರು. ಸಾರ್ವ ಜನಿಕರು ನೀಡಿದ ದೇಣಿಗೆ ಮೇಲೆ ನಡೆಯುತ್ತಿದ್ದ […]
Date : 03-11-2009 | 14 Comments. | Read More
ಆಕೆಯನ್ನು ತೆಗಳಬೇಕು ಎಂದುಕೊಂಡರೆ ನೂರಾರು ಕಾರಣಗಳು ಸಿಗುತ್ತವೆ. ತುರ್ತು ಪರಿಸ್ಥಿತಿಯನ್ನು ನೆನಪಿಸಿ ಕೊಳ್ಳಬಹುದು, ಆಪರೇಶನ್ ಬ್ಲೂಸ್ಟಾರ್ ಕಣ್ಣಮುಂದೆ ಬರುತ್ತದೆ, ಆಡಳಿತದ ದುರುಪಯೋಗ, ದರ್ಪ ಎದ್ದು ಕಾಣುತ್ತದೆ, ರಾಜಕೀಯ ಪ್ರತೀಕಾರ ಎದ್ದು ನಿಲ್ಲುತ್ತದೆ. ಈ ಕಾರಣಗಳಿಗಾಗಿ ಆಕೆಯನ್ನು ಸಾಕಷ್ಟು ಬಾರಿ ಕಟಕಟೆಗೆ ತಂದುನಿಲ್ಲಿಸಿದ್ದೂ ಆಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ಮನದ ಯಾವುದೋ ಮೂಲೆಯಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಗೌರವ ಮೂಡುತ್ತದೆ. ಅವರೆಂತಹ ಗಟ್ಟಿಗಿತ್ತಿ ಎಂಬುದಕ್ಕೆ ಬಾಂಗ್ಲಾ ಯುದ್ಧವೊಂದೇ ಸಾಕು. ಅದು ಬರೀ ಒಂದು ಯುದ್ಧವಾಗಿರಲಿಲ್ಲ, ಪೌರುಷ ಪ್ರದರ್ಶನದ ವೇದಿಕೆಯೂ […]