Date : 30-05-2010 | 20 Comments. | Read More
Unparliamentary. ನಮ್ಮ ಮಾಜಿ ಪ್ರಧಾನಿ ದೇವೇಗೌಡರಂತೆ ‘ಬ್ಲಡಿ ಬ್ಯಾಸ್ಟರ್ಡ್’ ಎಂದು ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯನ್ನೇ ಅಸಭ್ಯ ಹಾಗೂ ಅನೈತಿಕವಾಗಿ ನಿಂದಿಸುವುದು ಬಿಡಿ, ಆಸ್ಟ್ರೇಲಿಯಾ ಸಂಸತ್ತಿನಲ್ಲಿ “ಸುಳ್ಳುಗಾರ” ಎಂದು ಜರಿದರೂ ‘ಅಸಂಸದೀಯ’ (ಅನ್ಪಾರ್ಲಿಯಾಮೆಂಟರಿ) ಪದವಾಗುತ್ತದೆ, ಸಭಾಧ್ಯಕ್ಷರಿಂದ ವಾಗ್ದಂಡನೆಗೆ ಗುರಿಯಾಗಬೇಕಾಗುತ್ತದೆ, ಸಂಸತ್ತಿನ ಕಲಾಪಗಳ ದಾಖಲೆಗೆ ಆ ಪದವನ್ನು ಸೇರಿಸುವುದಿಲ್ಲ. ಕೆನಡಾ ಸಂಸತ್ತಿನಲ್ಲಿ “Evil genius’, “Weathervane’ (ಗಾಳಿ ಬಂದ ಕಡೆ ವಾಲುವವನು) ಎಂದೂ ಕುಟುಕುವಂತಿಲ್ಲ. ಹಾಂಕಾಂಗ್ನಲ್ಲಿ, “ಕೊಳಚೆ ಕಾಲುವೆಯಲ್ಲಿ ಬೆಳೆಯುವುದು ಕೊಳಕು ಹುಲ್ಲೇ…” ಎಂಬ ಗಾದೆ ಮಾತನ್ನೂ ಹೇಳುವಂತಿಲ್ಲ. […]
Date : 23-05-2010 | 41 Comments. | Read More
ಅವರು ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರನ್ನು ವಿವಾಹವಾಗಿದ್ದು 1968ರಲ್ಲಿ. ರಾಹುಲ್ ಗಾಂಧಿ 1970ರಲ್ಲಿ ಹುಟ್ಟಿದರು. 1972ರಲ್ಲಿ ಪ್ರಿಯಾಂಕಾ ಜನನವಾಯಿತು. 1980ರಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಸಂಜಯ್ ಗಾಂಧಿ ಅಗಲಿದ ಕಾರಣ 1982ರಲ್ಲಿ ರಾಜೀವ್ ಗಾಂಧಿ ಅಧಿಕೃತವಾಗಿ ರಾಜಕಾರಣಕ್ಕಿಳಿದರು. 1968ರಿಂದ 1982ರವರೆಗೆ ಅಂದರೆ ಸುಮಾರು 14 ವರ್ಷ ಕಳೆದರೂ ಸೋನಿಯಾ ಗಾಂಧಿಯವರು ಮಾತ್ರ ಇಟಲಿಯ ನಾಗರಿಕಳೇ ಆಗಿದ್ದರು. ಒಬ್ಬ ಪ್ರಧಾನಿಯೆಂದರೆ ದೇಶದ ಚುಕ್ಕಾಣಿಯಂಥ ಗುರುತರ ಜವಾಬ್ದಾರಿಯನ್ನು ಹೊತ್ತ ವ್ಯಕ್ತಿ ಮಾತ್ರವಲ್ಲ, ನಮ್ಮ […]
Date : 16-05-2010 | 7 Comments. | Read More
Direct democracy! ಅದನ್ನು Athenian democracy ಎಂದೂ ಕರೆಯುತ್ತಾರೆ. ಕಾರಣ, ಪ್ರಜಾಪ್ರಭುತ್ವದ ಮೊದಲ ಪ್ರಯೋಗ ನಡೆದಿದ್ದೇ ಗ್ರೀಸ್ನ ಅಥೆನ್ಸ್ನಲ್ಲಿ, ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ. ಈ ಡೈರೆಕ್ಟ್ ಡೆಮಾಕ್ರಸಿ ಅಥವಾ ನೇರ ಪ್ರಜಾಪ್ರಭುತ್ವ ಎಂದರೆ ಜನರಿಂದ ಕೂಡಿರುವ, ತಮಗೆ ಬೇಕಾದ ನೀತಿ-ನಿಯಮಗಳನ್ನು ಜನರೇ ರೂಪಿಸಿಕೊಳ್ಳುವ ಒಂದು ಸರಕಾರ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇಲ್ಲಿ ಶಾಸಕ, ಸಂಸದರಂಥ ಜನಪ್ರತಿನಿಧಿಗಳಿರುವುದಿಲ್ಲ. ಹದಿನೆಂಟು ವರ್ಷ ವಯೋಮಾನ ಮೀರಿದ ಎಲ್ಲರೂ ಇದರ ಸದಸ್ಯರೇ. ಇದೊಂದು ಗ್ರಾಮ ಮಟ್ಟದ ಪುಟ್ಟ ವ್ಯವಸ್ಥೆ. ವರ್ಷಕ್ಮೊಮ್ಮೆ, ಎರಡು […]
Date : 14-05-2010 | 9 Comments. | Read More
ಹನ್ನೆರಡು ವರ್ಷದ ಬಾಲಕಿ ಮಜ್ದಾ ಆರೀಫ್. ಆಕೆಯ ಸಹೋದರ ಸಮಿ ಐದು ವರ್ಷ ಚಿಕ್ಕವನು. ಇಬ್ಬರೂ ಕೆನಡಾ ಸಂಸತ್ ಭವನದ ಸಭಾಂಗಣದಲ್ಲಿ ಕಣ್ಣರಳಿಸಿಕೊಂಡು ಕಾಯುತ್ತಿದ್ದಾರೆ. ಜನಸಂದಣಿಯ ಮಧ್ಯೆ ಮೇಟುಗಾಲಿನಲ್ಲಿ ನಿಂತು ಇಣುಕಿ ಇಣುಕಿ ನೋಡುತ್ತಿದ್ದಾರೆ. ಹಾಗೆ ಕಾಯುತ್ತಾ, ಇದಿರು ನೋಡುತ್ತಾ ೪೫ ನಿಮಿಷಗಳು ಕಳೆದರೂ ಅಮ್ಮ ಮಾತ್ರ ಕಣ್ಣಿಗೆ ಕಾಣಿಸುತಿಲ್ಲ. “ಎಲ್ಲಿ ಅಮ್ಮ”? ಲಂಡನ್ನಿಂದ ಆಗಮಿಸಿದ್ದ ತನ್ನ ಅಂಕಲ್ ಸಿದ್ದಿಕ್ ಲೆಹ್ಮರ್ನನ್ನು ಕೇಳುತ್ತಾನೆ ಸಮಿ. “ಸಹನೆಯಿಂದಿರು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ಬರುತ್ತಾಳೆ” ಎಂದು ಆತ ಸಮಾಧಾನಪಡಿಸುತ್ತಾನೆ. […]
Date : 02-05-2010 | 15 Comments. | Read More
ಹೆಸರು: ಡಾ. ಕೇತನ್ ದೇಸಾಯಿ ಪದವಿ: MBBS, MS. Mch, F.R.C.S. ಹುದ್ದೆ: ಅಧ್ಯಕ್ಷ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ). ಸಂಪತ್ತು: 2200 ಕೋಟಿ ರೂಪಾಯಿ, 1 ಟನ್ಗೂ ಅಧಿಕ ಚಿನ್ನ ಹಾಗೂ ವಜ್ರ!! ಹಾಗೂ ಹೆಸರು: ಲಲಿತ್ ಕುಮಾರ್ ಮೋದಿ ಪದವಿ: ಎಂಬಿಎ ಹುದ್ದೆ: ಐಪಿಎಲ್ ಕಮಿಷನರ್ ಸಂಪತ್ತು: ಕಿಂಗ್ಸ್ ಇಲೆವೆನ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕೊತಾ ನೈಟ್ ರೈಡರ್ಸ್ ತಂಡಗಳಲ್ಲಿ ಷೇರು. ಸ್ವಂತ ಜೆಟ್, ಒಂದು ಯಾಚ್ (ಸುಸಜ್ಜಿತ ಖಾಸಗಿ ದೋಣಿ). ಸೆಟ್ […]
Date : 25-04-2010 | 28 Comments. | Read More
ತಮಿಳುನಾಡಿನ ಈ ಮುತ್ತಜ್ಜಿಯ ಹೆಸರು ಕರುಪ್ಪಾಯಿ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (NREGS) ಕಚೇರಿ ಎದುರು ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವ ಮೊದಲಿಗರಲ್ಲಿ ಆಕೆಯೂ ಒಬ್ಬಳಾಗಿರುತ್ತಾಳೆ. ವರ್ಷಕ್ಕೆ 100 ದಿನ ಕೆಲಸ ಕೊಡುವ ಈ ಯೋಜನೆಯ ಕೆಲಸಗಾತಿಯ ವಯಸ್ಸು 101!! ಆಕೆಯ ನಿರ್ದಿಷ್ಟ ವಯಸ್ಸನ್ನು ತೋರಿಸುವ ಯಾವುದೇ ದಾಖಲೆಗಳಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಬಂದಾಗ ತನಗೆ 110 ವರ್ಷ ಎಂದಿದ್ದಳು. ಆಕೆಯ ಹಿರಿಯ ಮಗನ ವಯಸ್ಸು 82. ಅದನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿ ಆಕೆಯ […]
Date : 18-04-2010 | 19 Comments. | Read More
ಒಮ್ಮೆ ದೂರದ ಶಾಲೆಯಲ್ಲಿ ಕಲಿಯುತ್ತಿದ್ದ ಸಹೋದರರಿಬ್ಬರಿಗೆ ಅಪ್ಪನನ್ನು ನೋಡುವ ಬಯಕೆಯುಂಟಾಯಿತು. ರೈಲಿನಲ್ಲಿ ಬಂದಿಳಿದ ಅವರು ಕುದುರೆಗಾಡಿಯನ್ನು ಗೊತ್ತುಮಾಡಿ ಮನೆಯತ್ತ ಹೊರಟರು. ಗಾಡಿ ಮುಂದೆ ಮುಂದೆ ಸಾಗಿತು, ಅದರ ಚಾಲಕನ ಜತೆ ಮಾತೂ ಆರಂಭವಾಯಿತು. ಮಾತಿನ ಮಧ್ಯೆ ಆತನಿಗೆ ಬಾಲಕರಿಬ್ಬರು ದಲಿತ(ಮಹರ್) ಸಮುದಾಯಕ್ಕೆ ಸೇರಿದವರು ಎಂದು ತಿಳಿಯಿತು. ಕೂಡಲೇ ಬಂಡಿಯಿಂದ ಕೆಳಗಿಳಿದ ಆತ ನೊಗವನ್ನು ಮೇಲೆತ್ತಿದ. ಆಯತಪ್ಪಿದ ಹುಡುಗರು ಅನಾಮತ್ತಾಗಿ ನೆಲಕ್ಕುರುಳಿದರು. ಅಷ್ಟೇ ಅಲ್ಲ, ಬಾಲಕರು ಅಂಗಲಾಚುತ್ತಿದ್ದರೂ ಬಾಯಿಗೆ ಬಂದಂತೆ ನಿಂದಿಸಿದ ಆತ ಮಾರ್ಗ ಮಧ್ಯದಲ್ಲೇ ಬಿಟ್ಟು ವಾಪಸ್ […]
Date : 04-04-2010 | 35 Comments. | Read More
ಅವಳಿಗೆ ಯಾರೂ ಭಾರತೀಯರು ಸಿಗಲಿಲ್ಲವೆ? ಆ ಪಾಕಿ ಸ್ತಾನಿಯೇ ಆಗಬೇಕಿತ್ತೆ? ಆಕೆಯೆಷ್ಟು ಧರ್ಮಾಂಧಳು ಎಂಬುದಕ್ಕೆ ಶೋಯೆಬ್ ಮಲಿಕ್ನನ್ನು ಮದುವೆಯಾಗು ತ್ತಿರುವುದೇ ದೊಡ್ಡ ಉದಾಹರಣೆಯಲ್ಲವೆ? ಇಂತಹ ತರ್ಕಗಳು ಒಂದೆಡೆಯಾದರೆ ಸಾನಿಯಾ ವಿವಾಹಕ್ಕೆ ತಮಿಳುನಾಡು-ಆಂಧ್ರಪ್ರದೇಶದಲ್ಲಿ ವಿಎಚ್ಪಿ ಹಾಗೂ ಇತರ ಬಲಪಂಥೀಯ ಸಂಘ ಟನೆಗಳ ವಿರೋಧ…, ಆಕೆಗೆ ಹೆಸರು, ಖ್ಯಾತಿ, ಕಾಸು ಕೊಟ್ಟಿದ್ದು ಭಾರತ, ಆದರೆ ವಿವಾಹವಾಗುತ್ತಿರುವುದು ಭಾರತದ ಬದ್ಧವೈರಿ ಪಾಕಿಸ್ತಾನದ ವ್ಯಕ್ತಿಯನ್ನು ಎಂಬ ತಗಾದೆ, ತಕರಾರುಗಳು ಮತ್ತೊಂದೆಡೆ! ಅಬ್ಬಬ್ಬಾ…
Date : 29-03-2010 | 27 Comments. | Read More
ಪ್ರಾಪ್ತ ವಯಸ್ಕರಿಬ್ಬರು ‘ಕೂಡಿ’ ಬಾಳಲು ಬಯಸಿದರೆ ತಪ್ಪೇನು? ಅದೇನು ಅಪರಾಧವೇ? ಪುರಾಣಗಳ ಪ್ರಕಾರ ಕೃಷ್ಣ-ರಾಧೆ ಒಟ್ಟಿಗೆ ಬಾಳ್ವೆ ನಡೆಸುತ್ತಿದ್ದರು. ಒಟ್ಟಿಗೆ ಬಾಳುವುದು ಅಪರಾಧವಲ್ಲ ಹಾಗೂ ಅಪರಾಧವಾಗುವುದಕ್ಕೂ ಸಾಧ್ಯವಿಲ್ಲ. ಕೂಡಿ ಬಾಳುವಿಕೆಯನ್ನು ಹಾಗೂ ವಿವಾಹಪೂರ್ವ ಲೈಂಗಿಕ ಸಂಬಂಧವನ್ನು ಯಾವ ಕಾನೂನೂ ತಡೆಯುವುದಿಲ್ಲ. ನಮ್ಮ ಸಂವಿಧಾನದ 21ನೇ ವಿಧಿ ಎಲ್ಲರಿಗೂ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಿದೆ. ದಯವಿಟ್ಟು ಹೇಳಿ, ಯಾವ ಕಾನೂನಿನ ಯಾವ ಸೆಕ್ಷನ್ನಡಿ ಖುಷ್ಬು ಹೇಳಿಕೆ ಅಪರಾಧವೆನಿಸುತ್ತದೆ? ಆಕೆಯದ್ದು ವೈಯಕ್ತಿಕ ಹೇಳಿಕೆ, ಅಭಿಪ್ರಾಯ. ಅದು ಅಪರಾಧ ಹೇಗಾಗುತ್ತದೆ? […]
Date : 22-03-2010 | 17 Comments. | Read More
ಆಗಷ್ಟೇ ಡಿವಿಜಿ 80ಕ್ಕೆ ಕಾಲಿಟ್ಟಿದ್ದರು. ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಒಟ್ಟು ಸೇರಿ ಬೆಂಗಳೂರಿನ ಟೌನ್ಹಾಲ್ನಲ್ಲಿ ಒಂದು ಸನ್ಮಾನ ಸಮಾ ರಂಭವನ್ನು ಆಯೋಜನೆ ಮಾಡಿದ್ದರು. ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆರ್ಥಿಕತೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಡಿವಿಜಿ ಅವರನ್ನು ಕಾಡುತ್ತಿತ್ತು. ಅದು ಸ್ನೇಹಿತರೆಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಸ್ವಲ್ಪವಾದರೂ ಸಹಾಯವಾಗಲಿ, ಗೌರವಧನ ನೀಡೋಣ ಎಂದು ಒಂದಿಷ್ಟು ಹಣವನ್ನು ಒಟ್ಟುಹಾಕಿದ್ದರು. ಕಾರ್ಯಕ್ರಮದ ವೇಳೆ ಗೌರವ ಹಾಗೂ ಪ್ರೀತಿಪೂರ್ವಕವಾಗಿ ಅದನ್ನು ಡಿವಿಜಿಯವರಿಗೆ ಅರ್ಪಿಸಲಾಯಿತು. ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ-ಒಂದು ಲಕ್ಷ ರೂಪಾಯಿ! ನೀವೇ […]