Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಾನಿಯಾ ನಿಖಾದಲ್ಲೂ ಹುಳುಕು ಹುಡುಕಬೇಕಾ?

ಸಾನಿಯಾ ನಿಖಾದಲ್ಲೂ ಹುಳುಕು ಹುಡುಕಬೇಕಾ?

ಅವಳಿಗೆ ಯಾರೂ ಭಾರತೀಯರು ಸಿಗಲಿಲ್ಲವೆ? ಆ ಪಾಕಿ ಸ್ತಾನಿಯೇ ಆಗಬೇಕಿತ್ತೆ? ಆಕೆಯೆಷ್ಟು ಧರ್ಮಾಂಧಳು ಎಂಬುದಕ್ಕೆ ಶೋಯೆಬ್ ಮಲಿಕ್‌ನನ್ನು ಮದುವೆಯಾಗು ತ್ತಿರುವುದೇ ದೊಡ್ಡ ಉದಾಹರಣೆಯಲ್ಲವೆ? ಇಂತಹ ತರ್ಕಗಳು ಒಂದೆಡೆಯಾದರೆ ಸಾನಿಯಾ ವಿವಾಹಕ್ಕೆ ತಮಿಳುನಾಡು-ಆಂಧ್ರಪ್ರದೇಶದಲ್ಲಿ ವಿಎಚ್‌ಪಿ ಹಾಗೂ ಇತರ ಬಲಪಂಥೀಯ ಸಂಘ ಟನೆಗಳ ವಿರೋಧ…, ಆಕೆಗೆ ಹೆಸರು, ಖ್ಯಾತಿ, ಕಾಸು ಕೊಟ್ಟಿದ್ದು ಭಾರತ, ಆದರೆ ವಿವಾಹವಾಗುತ್ತಿರುವುದು ಭಾರತದ ಬದ್ಧವೈರಿ ಪಾಕಿಸ್ತಾನದ ವ್ಯಕ್ತಿಯನ್ನು ಎಂಬ ತಗಾದೆ, ತಕರಾರುಗಳು ಮತ್ತೊಂದೆಡೆ!

ಅಬ್ಬಬ್ಬಾ…

ಇದೇನು ತಮಾಷೆಯೋ? ಅಥವಾ ನಿಜಕ್ಕೂ ವಿರೋಧ ಮಾಡುತ್ತಿದ್ದಾರೆಯೋ?

ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್‌ರನ್ನು ನಮ್ಮ ಟೆನಿಸ್ ತಾರೆ ಸಾನಿಯಾ ಮಿರ್ಜಾ ವರಿಸಲಿದ್ದಾರೆ ಎಂಬ ಸುದ್ದಿಯನ್ನು ಅಲ್ಲಿನ ‘ಜಿಯೋ’ ಟಿವಿ ವರದಿ ಮಾಡಿದ್ದು ಮಾರ್ಚ್ ೨೯ರ ಮಧ್ಯಾಹ್ನ. ಇದಾಗಿ ಒಂದೆರಡು ಗಂಟೆಗಳಲ್ಲಿ ಭಾರತದ ಮಾಧ್ಯಮಗಳೂ ಕೂಡ ‘ಬ್ರೇಕಿಂಗ್ ಸುದ್ದಿ’ಯಾಗಿ ಅದನ್ನು ಬಿತ್ತರಿಸತೊಡಗಿದವು. ಅದರ ಬೆನ್ನಲ್ಲೇ, ಒಂದೆಡೆ ಏನೋ ಉಲ್ಲಾಸ ವ್ಯಕ್ತವಾದರೆ, ಕೆಲವರು ವಟವಟ ಎನ್ನಲಾರಂಭಿಸಿದರು. ಅಲ್ಲಾ, ಸಾನಿಯಾ ಯಾರನ್ನೇ ಮದುವೆಯಾದರೂ ಇತರರೇಕೆ ತಲೆಕೆಡಿಸಿಕೊಳ್ಳಬೇಕು? ಆಕೆ ಪಾಕಿಸ್ತಾನಿಯನ್ನು ಮದುವೆಯಾದ ಮಾತ್ರಕ್ಕೆ ದೇಶವಿರೋಧಿ ಎಂದು ತೀರ್ಪು ನೀಡುವುದಾದರೆ 1968ರಲ್ಲಿ ಈ ದೇಶದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿ ಮಾಡಿದ್ದೇನು? ಅವರು ವಿವಾಹವಾಗಿದ್ದು ಸೋನಿಯಾ ಮೈನೋ ಎಂಬ ವಿದೇಶಿಯಾಕೆಯನ್ನೇ ಅಲ್ಲವೆ? ಆ ಕಾಲದ ಪರಿಸ್ಥಿತಿ ಹೇಗಿತ್ತು? ಇಡೀ ಜಗತ್ತು ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳೆಂಬ ಎರಡು ಬಣಗಳ ನಡುವೆ ಒಡೆದುಹೋಗಿತ್ತು. ಇತ್ತ ಅಲಿಪ್ತ ರಾಷ್ಟ್ರ ಚಳವಳಿಯಲ್ಲಿ (Non-Aligned Movement -NAM) ತನ್ನನ್ನು ಗುರುತಿಸಿ ಕೊಂಡರೂ ಭಾರತ ರಷ್ಯಾದ ಜತೆ ಕೈಜೋಡಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿತ್ತು. ಮತ್ತೊಂದೆಡೆ ಇಟಲಿ ಅಮೆರಿಕದ ಬಣದಲ್ಲಿತ್ತು. ಹೀಗೆ ವಿಶ್ವವೇ ಎರಡು ಬಣಗಳಾಗಿ ಒಡೆದ ಮೇಲೆ ಎದುರಾಳಿ ಬಣದಲ್ಲಿದ್ದ ಇಟಲಿಯನ್ನು ಭಾರತದ ಮಿತ್ರ ಎನ್ನುವುದಕ್ಕಾಗುತ್ತಿತ್ತೆ? ಅಂತಹ ಸಂದರ್ಭದಲ್ಲಿ ರಾಜೀವ್  ಇಟಲಿಯ ಸೋನಿಯಾರನ್ನು ವಿವಾಹವಾದಾಗ ಶತ್ರು ರಾಷ್ಟ್ರದ ಪುತ್ರಿಯನ್ನು ವಿವಾಹವಾದ ದ್ರೋಹಿ ಎಂಬಂತೇಕೆ ಅವರನ್ನು ಕಾಣಲಿಲ್ಲ? ರಾಜೀವ್ ಗಾಂಧಿ ಸೋನಿಯಾ ಅವರನ್ನು ಮದುವೆ ಯಾಗಬಹುದಾದರೆ, ಸಾನಿಯಾ ಶೋಯೆಬ್‌ನನ್ನು ವರಿಸುವು ದರಲ್ಲಿ ಯಾವ ತಪ್ಪಿದೆ? ಅದಕ್ಕೂ ಮಿಗಿಲಾಗಿ, ಪಾಕಿಸ್ತಾನ-ಭಾರತ ಎಂದು ನಾವೆಷ್ಟೇ ಬಡಿದಾಡಿದರೂ We share the common blood. ಇಚ್ಛಿಸಿ ವರಿಸುತ್ತಿರುವ ಇಬ್ಬರ ವಿವಾಹದ ನಡುವೆಯೂ ಏಕೆ ಮತ್ಸರವನ್ನು ಎಳೆದು ತರಬೇಕು? ಪಾಕಿಸ್ತಾನಿಯನ್ನು ಮದುವೆಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಸಮಗ್ರತೆಯನ್ನೇ ಪ್ರಶ್ನಿಸುವುದು ಎಷ್ಟು ಸರಿ? ಆಕೆಗೆ ಹೆಸರು, ಖ್ಯಾತಿ, ಕಾಸು ಕೊಟ್ಟಿದ್ದು ಭಾರತವೆಂಬುದರಲ್ಲಿ ಯಾವ ಅನುಮಾನವೂ ಇಲ್ಲ, ಹಾಗಂತ ಆಕೆಯಿಂದ ಭಾರತಕ್ಕೇನೂ ಸಿಗಲಿಲ್ಲವೆ?

Sania mania.

ಇದೆಲ್ಲಾ ಆರಂಭವಾಗಿದ್ದು ೨೦೦೫ರಲ್ಲಿ. ಏಕೆ ವರ್ಷದ ಮೊದಲನೇ ಗ್ರ್ಯಾಂಡ್‌ಸ್ಲ್ಯಾಮ್ ಆದ ‘ಆಸ್ಟ್ರೇಲಿಯನ್ ಓಪನ್’ ನಲ್ಲಿ ಮೂರನೇ ಸುತ್ತನ್ನು ಪ್ರವೇಶಿಸಿದಾಗ ಮೊದಲ ಸ್ಫೋಟಕ ಸುದ್ದಿ ಹೊರಬಿತ್ತು. ಆ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತರಲ್ಲಿ ಒಬ್ಬರಾಗಿದ್ದ ಸೆರೆನಾ ವಿಲಿಯಮ್ಸ್ ಎದುರು ಸೋತರೂ ಸಾನಿಯಾ ಕಠಿಣ ಸ್ಪರ್ಧೆ ನೀಡಿದಳು. ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಔತಣಕೂಟವೊಂದನ್ನು ಏರ್ಪಡಿಸಿದ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಗಣ್ಯರ ಜತೆ ಸಾನಿಯಾಳನ್ನೂ ಆಹ್ವಾನಿಸಿದರು. ಆಕೆಯ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿ, ಆಸ್ಟ್ರೇಲಿಯನ್ ಓಪನ್‌ನಲ್ಲಿ ತೋರಿದ ಸಾಧನೆಗಾಗಿ ಅಭಿನಂದಿಸಿದರು. ಹೀಗೆ ಒಂದೇ ಒಂದು ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲೇ ಸಾನಿಯಾ ರಾಷ್ಟ್ರಪತಿಯ ಗಮನ ಸೆಳೆಯುವ ಸಾಧನೆ ತೋರಿದಳು. ಅಂದಮಾತ್ರಕ್ಕೆ ಆಕೆಯೇನು ಮತ್ತೊಬ್ಬ ಮೋನಿಕಾ ಸೆಲೆಸ್, ಸ್ಟೆಫಿ ಗ್ರಾಫ್, ಗ್ರ್ಯಾಬ್ರಿಯಾಲಾ ಸೆಬಾಟಿನಿಯಾಗುತ್ತಾಳೆಂಬ ಯಾವ ಸೂಚನೆಗಳೂ ಇರಲಿಲ್ಲ. ಆದರೂ ಆಕೆಯನ್ನು ನಾವು ಹೊತ್ತು ಮೆರೆಯಲು, ಒಪ್ಪಿ ಸ್ವೀಕರಿಸಲು, ಹೆಮ್ಮೆಪಡಲು ಕಾರಣವೂ ಇತ್ತು. ಪುರುಷರ ಟೆನಿಸ್‌ನಲ್ಲಿ ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್, ಅಮೃತ್‌ರಾಜ್ ಸೋದರರು, ಲಿಯಾಂಡರ್ ಪೇಸ್ ಹೀಗೆ ಸಾಕಷ್ಟು ಪ್ರತಿಭಾನ್ವಿತರು ಬಂದು ಹೋಗಿದ್ದರು, ಇದ್ದರು. ಆದರೆ ಭಾರತದ ಮಹಿಳಾ ಟೆನಿಸ್ ಮಟ್ಟಿಗೆ ಒಂದು ಬಹುನಿರೀಕ್ಷಿತ, ಅಗತ್ಯ ಆಶಾಕಿರಣವಾಗಿ ಬಂದವಳು ಸಾನಿಯಾ. Beauty with brain ಎನ್ನುತ್ತಾರಲ್ಲಾ ಹಾಗೆಯೇ ಸಾನಿಯಾ ನೋಡುವುದಕ್ಕೂ ಚೆಂದವಾಗಿದ್ದಳು. ಆಂತರಿಕ ಸೌಂದರ್ಯದ ಬಗ್ಗೆ ನಾವೆಷ್ಟೇ ಪ್ರವಚನ ನೀಡಿದರೂ ಬಾಹ್ಯ ಸೌಂದರ್ಯದ ಬಗ್ಗೆ ನಮಗಿರುವ ಮೋಹವನ್ನು ಅಲ್ಲಗಳೆಯುವುದಕ್ಕಾಗುತ್ತದೆಯೇ? ಅಂದದ ಜತೆ ಪ್ರತಿಭೆಯನ್ನೂ ಹೊಂದಿದ್ದ ಸಾನಿಯಾ ಬಗ್ಗೆ ಮಾಧ್ಯಮಗಳೂ ಕುತೂಹಲ ಹೊಂದಲಾರಂಭಿಸಿದವು. ಜಾಹೀರಾತು ಕಂಪನಿಗಳೂ ಆಸಕ್ತಿ ತೋರತೊಡಗಿದವು. 2005ರಲ್ಲಿ ಆಕೆ ಆಸ್ಟ್ರೇಲಿಯನ್ ಓಪನ್‌ಗೆ ಪದಾರ್ಪಣೆ ಮಾಡುವ ಮೊದಲೇ ಜಿ.ವಿ.ಕೆ. ಇಂಡಸ್ಟ್ರೀಸ್, ಆಟ್ಲಾಸ್ ಸೈಕಲ್, ಟಾಟಾ ಟೀ, ಸಹಾರಾ ಹಾಗೂ ಆಂಧ್ರ ಕ್ರೀಡಾ ಪ್ರಾಧಿಕಾರ ಹೀಗೆ ಸಾನಿಯಾ 5 ಜಾಹೀರಾತುಗಳನ್ನು ಹೊಂದಿದ್ದಳು. 2005ರಲ್ಲೇ ವರ್ಷದ ಕೊನೆಯ ಗ್ರ್ಯಾಂಡ್‌ಸ್ಲ್ಯಾಮ್ ಆದ ಯುಎಸ್ ಓಪನ್‌ನಲ್ಲಿ ನಾಲ್ಕನೆ ಸುತ್ತು ಪ್ರವೇಶಿಸಿದ ಸಾನಿಯಾ ತನ್ನಲ್ಲಿರುವ ಪ್ರತಿಭೆಯನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದಳು. ನಮಗೆಲ್ಲ ಒಂಥರಾ ಖುಷಿ, ಭಾರತೀಯಳೆಂಬ ಅಭಿಮಾನ, ಹೆಮ್ಮೆ ಮೂಡತೊಡಗಿತು. ಅನಿವಾಸಿ ಭಾರತೀಯರೂ ಇಂತಹ ಭಾವನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆಕೆ ಯಾವುದೇ ಗ್ರ್ಯಾಂಡ್‌ಸ್ಲ್ಯಾಮ್‌ಗಳಿಗೆ ಹೋದರೂ ಆಯಾ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸತೊಡ ಗಿದರು. ಸಾನಿಯಾಗಳ ಶ್ರೇಯಾಂಕ ೨೭ಕ್ಕೆ ಬಂದಿತು. ಮುಂದೊಂದು ದಿನ ಸಿಂಗಲ್ಸ್‌ನಲ್ಲಿ ಆಕೆ ಭಾರತಕ್ಕೆ ಗ್ರ್ಯಾಂಡ್‌ಸ್ಲ್ಯಾಮ್ ತಂದುಕೊಟ್ಟರೂ ಆಶ್ಚರ್ಯವಿಲ್ಲ ಎಂಬ ಭಾವನೆ ದೇಶವಾಸಿಗಳಲ್ಲಿ ಮೂಡುವಂತೆ ಮಾಡಿದಳು.

ಜತೆಜತೆಗೇ ಆಕೆ ನವ, ಯುವ ಭಾರತದ New Icon, ಪ್ರತಿನಿಧಿಯಂತೆ ಗೋಚರಿಸತೊಡಗಿದಳು.

115 ಕೋಟಿ ಜನಸಂಖ್ಯೆಯಿದ್ದರೂ ಹೀರೋಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತೀಯ ಸಮಾಜಕ್ಕೆ, ಅದರಲ್ಲೂ ಮಹಿಳಾ ವೃಂದಕ್ಕೆ ಸಾನಿಯಾಳಂಥ ತಾರೆಯ ತೀವ್ರ ಹಾಗೂ ತ್ವರಿತ ಅಗತ್ಯ ವಿತ್ತು. ಆಕೆ IT-driven, knowledge-based, Forward-looking nation ಎಂಬ ಭಾರತದ ಹೆಸರಿಗೆ ಮತ್ತೊಂದು ಗರಿಯೆಂಬಂತೆ ಭಾಸವಾಗತೊಡಗಿದಳು. ನಮ್ಮ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ‘ಹೆಣ್ಣು ಶಿಶು ರಕ್ಷಿಸಿ’(Save the Girl Child) ಎಂಬ ತನ್ನ ಜನಜಾಗೃತಿ ಪ್ರಚಾರಾಂದೋಲನಕ್ಕೆ ಸಾನಿಯಾಳನ್ನು ರೂಪದರ್ಶಿಯಾಗಿ ನಿಯುಕ್ತಿ ಮಾಡಿತು. ನಿಮಗೆ ಗೊತ್ತಾ, ಹೆಣ್ಣುಭ್ರೂಣವನ್ನು ಹತ್ಯೆ ಮಾಡುವ ಸಮಾಜಕ್ಕೆ ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸಲು ನಿಯುಕ್ತಿಗೊಂಡ ಮೊದಲ ಮುಸ್ಲಿಂ ಮಹಿಳೆ ಸಾನಿಯಾ ಮಿರ್ಜಾ! ಮುಸ್ಲಿಮ್ ಮಹಿಳೆಯರೆಂದರೆ ಹೆಚ್ಚಾಗಿ ಮನೆಯಿಂದಲೇ ಹೊರ ಬಾರದವರು ಎಂಬ ಭಾವನೆಯಿರುವ ಸಂದರ್ಭದಲ್ಲಿ ಸಾನಿಯಾ ಆಧುನಿಕತೆ, ಸಾಕ್ಷರತೆ, ಸಶಕ್ತೀಕರಣದ ಸಂಕೇತವಾಗಿ ಬಿಟ್ಟಳು. ಒಮ್ಮೆ ತನ್ನ ಟೆನಿಸ್ ಸ್ಕರ್ಟ್ ಬಗ್ಗೆ ಮುಲ್ಲಾಗಳು ತಕರಾರು ತೆಗೆದಾಗ ಸಾನಿಯಾ ತೆಪ್ಪಗೆ ಕುಳಿತುಕೊಳ್ಳಲಿಲ್ಲ, ಹೆದರಿ ಸುಮ್ಮನಾಗಲಿಲ್ಲ. “ಯಾರೂ ಪರಿಪೂರ್ಣರಲ್ಲ. ನಾನು ಚೋಟುದ್ದದ ಸ್ಕರ್ಟ್, ಪ್ಯಾಂಟ್ ಧರಿಸುತ್ತೇನೆ ಎಂಬ ಕಾರಣಕ್ಕೆ ಕೆಟ್ಟ ಮುಸ್ಲಿಂ ಆಗುವುದಿಲ್ಲ” ಎಂದಳು. ಅಷ್ಟೇ ಅಲ್ಲ, “ನನ್ನ ಸ್ಕರ್ಟ್ 6 ಅಡಿಯಾದರೂ ಇರಬಹುದು ಅಥವಾ 6 ಇಂಚಾದರೂ ಇರಬಹುದು, ಗೆಲುವಷ್ಟೇ ನನಗೆ ಮುಖ್ಯ” ಎಂದು ಫತ್ವಾ ಹೊರಡಿಸಿದ್ದ ಧರ್ಮಾಂಧರಿಗೆ ಮಾತಿನಲ್ಲೇ ಕಪಾಳಮೋಕ್ಷ ಮಾಡಿದ್ದಳು.

ಇದೇನೇ ಇರಲಿ, ಬಾಂಬ್‌ಸ್ಫೋಟ, ಹಿಂಸೆ ಮುಂತಾದವುಗಳ ಮೂಲಕ ಮುಸ್ಲಿಮ್ ಸಮುದಾಯಕ್ಕೆ ಕೆಟ್ಟ ಹೆಸರು ತರುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾಲದಲ್ಲಿ ಸಾನಿಯಾ ಭರವಸೆಯ ಆಶಾಕಿರಣವಾಗಿ ಮೂಡಿಬಂದವಳು. ದೇಶಪ್ರೇಮವೆಂಬುದು ಯಾವುದೋ ಒಂದು ಸಮುದಾಯದ ಆಸ್ತಿಯಲ್ಲ, ಆಧುನಿಕವಾಗಿ ಚಿಂತಿಸುವವರು, ಬದುಕುವವರು ಎಲ್ಲ ಧರ್ಮಗಳಲ್ಲೂ ಇದ್ದಾರೆ ಎಂಬುದನ್ನು ಮತ್ತೊಮ್ಮೆ ಆಕೆ ಸಾಬೀತು ಮಾಡತೊಡಗಿದಳು. ಈಗಲೂ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಾರದು ಎಂಬ ಧೋರಣೆಯನ್ನು ಹೊಂದಿರುವವರ ಮಧ್ಯೆ, ಅಂತಹ ಮನಸ್ಥಿತಿಯನ್ನು ಧಿಕ್ಕರಿಸುವಂತೆ ಬಂದವಳು ಆಕೆ. ಜತೆಗೆ ಇಂದಿಗೂ ‘ಸೆಟ್ಲಿಂಗ್ ಡೌನ್’ ಎಂದ ಕೂಡಲೇ ಪೋಷಕರೆಲ್ಲ ಎಂಜಿನಿಯ ರಿಂಗ್, ಮೆಡಿಕಲ್ ಕ್ಷೇತ್ರಗಳತ್ತಲೇ ನೋಡುತ್ತಿರುವ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರವನ್ನು ಆಯ್ದುಕೊಂಡ ಸಾನಿಯಾಳನ್ನು ಮೆಚ್ಚಲೇಬೇಕು. ಅಂಜಲಿ ಭಾಗವತ್, ಅಂಜುಬಾಬಿ ಜಾರ್ಜ್ ಅವರಂತಹ ಮಹಿಳಾ ಸಾಧಕರು ಹೊರಹೊಮ್ಮಿದರೂ ಸಾನಿಯಾ ಬಹಳಷ್ಟು ವಿಚಾರಗಳಲ್ಲಿ ಅವರೆಲ್ಲರಿಗಿಂತಲೂ ಹೆಚ್ಚಿನ ‘ಅಡ್ವಾಂಟೇಜ್’ ಹೊಂದಿದ್ದಳು. ಪಿ.ಟಿ. ಉಷಾ ನಂತರ ಈ ದೇಶ ಕಂಡ ಅತ್ಯಂತ ಜನಪ್ರಿಯ ಮಹಿಳಾ ಕ್ರೀಡಾ ತಾರೆ ಸಾನಿಯಾ ಮಿರ್ಜಾ ಎಂದರೆ ಖಂಡಿತ ಅತಿಶಯೋಕ್ತಿಯಾಗುವುದಿಲ್ಲ. ಸಾನಿಯಾ ಎಷ್ಟು  ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದಳು ಅಥವಾ ಗೆಲ್ಲಲೇ ಇಲ್ಲ ಎನ್ನುವಂಥ ಅಂಕಿ-ಅಂಶಗಳಾಚೆ ಆಕೆ ಈ ದೇಶಕ್ಕೆ, ತನ್ನ ಸಮುದಾಯಕ್ಕೆ ಏನು ನೀಡಿದಳು, ಎಂತಹ ಒಳ್ಳೆಯ ಹೆಸರು ತಂದಳು, ಒಂದು ಸಮಾಜ ತಾನು ಯೋಚಿಸುವ ವಿಧಾನವನ್ನೇ ಬದಲಾಯಿಸುವಂತೆ ಹೇಗೆ ಮಾಡಿದಳು ಎಂಬುದನ್ನು ನಾವು ಗಮನಿಸಬೇಕು, ಗಣನೆಗೆ ತೆಗೆದುಕೊಳ್ಳಬೇಕು. ಆಗ ಸಾನಿಯಾಳ ಮಹತ್ವ ಅರಿವಾಗುತ್ತದೆ. ಸಾನಿಯಾ ಸಣ್ಣ ಹುಡುಗಿಯಲ್ಲ, ಒಬ್ಬ ಯಶಸ್ವಿ ಮಹಿಳೆ. ಏನು ಬೇಕು, ಬೇಡ, ಯಾವುದು ಸರಿ, ಯಾವುದು ತಪ್ಪೆಂದು ನಿರ್ಧರಿಸುವ ಶಕ್ತಿ, ವಿವೇಚನೆ ಆಕೆಗಿದೆ. ಆಕೆಯ ವೈಯಕ್ತಿಕ ಹಾಗೂ ಸ್ವತಂತ್ರ ಆಯ್ಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಲು ನಾವ್ಯಾರು?

ಈ ಹಿಂದೆ ಕೂಡ ಪಾಕಿಸ್ತಾನ ಹಾಗೂ ಇತರ ದೇಶಗಳ ಕ್ರೀಡಾ ತಾರೆಗಳ ಹಿಂದೆ ಹೋದ ಭಾರತೀಯರಿದ್ದಾರೆ. ರೀನಾ ರಾಯ್ ಮೊಹ್ಸೀನ್ ಖಾನ್ ಹಿಂದೆ, ನೀನಾ ಗುಪ್ತಾ ವಿವಿಯನ್ ರಿಚರ್ಡ್ಸ್ ಜತೆಗೆ, ಅಂಜು ಮಹೇಂದ್ರ ಗ್ಯಾರಿ ಸೋಬರ್ಸ್ ಬಳಿಗೆ ಹೋಗಿದ್ದಿದೆ. ಒಂದಷ್ಟು ಕಾಲದ ನಂತರ ಕೈಸುಟ್ಟುಕೊಂಡು ವಾಪಸ್ ಬಂದವರೇ ಎಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ, ನಮ್ಮ ದೇಶದ ರಾಷ್ಟ್ರೀಯ ತಾರೆ ಕ್ರಿಕೆಟ್‌ನಿಂದಲೇ ನಿಷೇಧಕ್ಕೊಳಗಾಗಿರುವ ಶೋಯೆಬ್ ಮಲಿಕ್ ಅವರಂತಹ ಪಾಕಿಸ್ತಾನದ ‘ಫಾಲನ್ ಸ್ಟಾರ್’ನನ್ನು ವಿವಾಹವಾಗುತ್ತಿರುವ ವಿಚಾರ ಖಂಡಿತ ಒಂಥರಾ ಕಸಿವಿಸಿ ಯನ್ನುಂಟು ಮಾಡುತ್ತದೆ. ಆದರೂ ಅದು ಆಕೆಯ ವೈಯಕ್ತಿಕ ಆಯ್ಕೆ. ಅದಕ್ಕೆ ಪೋಷಕರ ಬೆಂಬಲವೂ ಇದೆ. ಆಕೆ ಶೋಯೆಬ್‌ನನ್ನು ವಿವಾಹವಾಗುವುದರಿಂದ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಯಾಗುತ್ತದೆ ಎನ್ನುತ್ತಿರುವ ಎನ್‌ಡಿಟಿವಿಯ ಬರ್ಖಾ ದತ್‌ರಂತೆ ನಾವು ಕೂಡ ವಿವೇಕ ಕಳೆದುಕೊಂಡು ಮಾತನಾಡುವುದು, ಯೋಚಿಸುವುದು ಬೇಡ. ಶೋಯೆಬ್ ಈ ಹಿಂದೆ ಮಾಜಿ ‘ಮಿಸ್ ಇಂಡಿಯಾ’ ಸಯಾಲಿ ಭಗತ್ ಜತೆ ಸರಸವಾಡಿದ, ಆಯೇಷಾ ಸಿದ್ದಿಕಿ ಎಂಬ ಮತ್ತೊಬ್ಬಳು ಹೈದರಾಬಾದಿ ಜತೆ ವಿವಾಹವಾದ ಆರೋಪಕ್ಕೂ ಒಳಗಾಗಿದ್ದಾನೆ. ಇತ್ತ ಸೊಹ್ರಾಬ್ ಮಿರ್ಜಾನ ಜತೆಗಿನ ನಿಶ್ಚಿತಾರ್ಥವನ್ನು ಮುರಿದು ಶೋಯೆಬ್‌ನನ್ನು ವಿವಾಹವಾಗಲು ಹೊರಟಿರುವ ಸಾನಿಯಾಳ ನಿರ್ಧಾರ ಆಕೆ ಟೆನಿಸ್ ಅಂಗಳದಲ್ಲಿ ಆಗಾಗ್ಗೆ ಮಾಡುವ ‘ಡಬಲ್ ಫಾಲ್ಟ್’ನಂತಾಗದಿರಲಿ.

ಜಗತ್ತಿನೆಲ್ಲೆಡೆ ಕ್ರೀಡಾ ತಾರೆಗಳನ್ನು ‘ಇಂಟರ್‌ನ್ಯಾಷನಲ್ ಅಂಬಾ ಸಿಡರ್’ಗಳಂತೆ ನೋಡುತ್ತಾರೆ, ನಾವು ಕೂಡ ಸಾನಿಯಾಳನ್ನು ಹಾಗೆಯೇ ನೋಡಬೇಕು. “ಮದುವೆಯಾದ ನಂತರವೂ ನಾನು ಭಾರತಕ್ಕಾಗಿ ಆಟವಾಡುತ್ತೇನೆ. 2012ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ” ಎಂದು ಸಾನಿಯಾ ಹೇಳಿದ್ದಾಳೆ. ಸಾನಿಯಾಳ ಆಟವನ್ನು ನೋಡಿದರೆ ಆಕೆ ಮಾಡುವ ಡಬಲ್‌ಫಾಲ್ಟ್ ಹಾಗೂ ಅನ್‌ಫೋರ್ಸಡ್ ಎರರ್‍ಸ್ ಉನ್ನತ ಸಾಧನೆಗೆ ದೊಡ್ಡ ಅಡಚಣೆಯಂತೆ ಕಾಣುತ್ತವೆ. ಅದನ್ನು ಆಕೆ ಆದಷ್ಟು ಬೇಗ ಸರಿಪಡಿಸಿಕೊಳ್ಳಲಿ.

ಈ ಮಧ್ಯೆ, Let’s learn to respect our sporting Heroes…

35 Responses to “ಸಾನಿಯಾ ನಿಖಾದಲ್ಲೂ ಹುಳುಕು ಹುಡುಕಬೇಕಾ?”

 1. RAMNATH NAYAK says:

  dear sir please make availbale vijaya karnata news paper in delhi we r waiting for that plese plese plese

 2. Arpana Hegde says:

  Hi,
  The article was unbiased and was nonjudgemental. It made us to think without any prejudice. Its true that marriage is a personal affair and what we could do is only respect and wish good for them when public person like Sania takes decision of marriage.

  The people who say you support hinduism , must read this article. Ofcourse everyone loves their religion.

  We need more writers like you who makes the youth to think and guide them in right direction .

  Warm Regards,
  Arpana

 3. Vikram says:

  Sir.. wonderfull article…. as u say lets respect our sporting heroes..!

 4. ಸೋನಿಯಾಳ ಮದುವೆ ಅವಳ ವೈಯಕ್ತಿಕ ವಿಷಯ. ನಾವು ತಲೆ ಹಾಕಬಾರದು. ವಿವಾಹದ ನಂತರ, ಆಕೆ ಯಾವ ದೇಶದಲ್ಲಿ ನೆಲಸುತ್ತಾಳೊ (-ಪಾಕಿಸ್ತಾನ ಅಥವಾ ದುಬೈ–), ಆ ದೇಶದ ಪರವಾಗಿ ಆಡುವ ಹಕ್ಕು ಅವಳಿಗಿದೆ. ಸೋನಿಯಾ ಗಾಂಧಿ ಮದುವೆಯಾದ ಬಳಿಕ ಭಾರತೀಯಳಾಗಬೇಕು ಎಂದು ನಾವು ಅಪೇಕ್ಷಿಸುವದಾದರೆ, ಸಾನಿಯಾ ಪಾಕಿಸ್ತಾನೀಯಳಾಗುವದರಲ್ಲಿ ತಪ್ಪೇನಿದೆ?

 5. good article sir

 6. samhitha says:

  I guess the article was neither pro nor against of her decision. Ofcourse we dont have any rights to speak about her life. Just because she is a celebrity we were made to discuss on this. Wat if this had happened to a common man? And as usual good artilce Pratap:)
  thank u.

 7. chethan says:

  MR. Ramnath nayak. e- news paper of vijayakarnataka is available.. check it out…

 8. Poornima N says:

  sania shoilb malik nannu maduvetaguvudu avala vaiyyakthika vishaya. adakke thale hakuvudu thappu.

 9. Raghavendra K says:

  Hi pratap, your article was superb.

 10. Donold says:

  Dear Prathap
  Really a good article. Please write this type of human interest articles. Dont be too communalist. Sangh pariwar may have supported you, but that doesnt mean that you should always write communal articles. Right now we want a HERO who loves our nation and teach us to love our nation. Like marriage, religion is also personal. There are Good and bad people in all religion. So to show your faithfullness to Sangpariwar dont try to save Kamuki swami nithyananda! You are a good writer, but some times you write fictions too! Its too bad, please write the facts.
  WE WANT YOU AS OUR PATRIOT…. NOT A COMMUNAL….
  Try to build a `maanavatha Dharma’ in the minds and hearts of your readers… not any other dharma / adharma….
  We are proud of you dear Prathap for this reason….

 11. P Santhosh Shetty says:

  Relating to this issue one sms is repeatedly coming from all ends, that is “Anthu Saniya Indiadalliruva yava muslimaruu gandasaralla antha prove maadiddale…..”

 12. PRADEEP says:

  Hello sir, im a medico
  nanu nim abhimani neevene baredru adaralli artha idde barithira
  I DONT HAVE RIGHT TO COMMENT ON U
  GOOOOOOOOOD JOB
  ALL UR ARTICLES R SIMPLY SUPERB,……,.,.,,.,.,.,.,.,.,.,.,.,.,.,.,,

 13. Sree Harsha says:

  Super article that is very diplomatic… It was wonderful to read it..

 14. 100%True……….Sir,Superb artical……

 15. Raghavendra Y. K ,HUBLI says:

  Too much for Sania Mirza, she is not eligible for this is kind of respect. Although marriage is her personal decision but in this case it include with India and Pakistan were subsequent decisions are necessary, it doesn’t mean that if your Islam you can marry a Pakistani. Suppose if Sania marries shoib then she is treated as Enemy that’s it.

 16. Indian says:

  Dear Pratap,

  Not much impressed with this article..
  I am still puzzled why Sania is going to shortened chisel of Pakistan which has lost his sharpness ones: D, In India we have so many sharp and shortened chisels but not sure why she want to use this shortened chisel itself to dig into her tennis court!

  Pratap,
  I do agree it’s her personal choice, but she is Indian ICON and we were her fans and we won’t accept such a blunder from our stars.

 17. Vishwesh Bhat says:

  A nice one indeed 🙂 Truly said.

 18. veeresh s says:

  dear sir
  nanu nimma abhimani oduga. prathap simha avare nivu ravi belegere avarige yava rithiya uthara nidalu bayasuthira nimma haritha baravanige mulaka odugarige avara matthu reddygala moha enthaudu endu yava karannake avaru avaranna vahisi bareutthare embudanna thilisi rajyave avarannu ugulutthiruvaga ivarigyantha preethi .duddige marikondane belegere ? nimmannu teekisuva hakku kanishtavu avanigilla. betthale jagattu ankanadalli avana bagge neravagi bareyiri. pleasenanu obba hindu abhimani bellary avanu .illi reddy galu jiya-ul-haq gintaiu apayakari please reply me at this mail

 19. venkatesh says:

  I think talking about India and Pakistan relationship through this marriage is baseless.
  You should remember when Ganguly eas leading the first series in pakistan he had said “I’m going there to play cricket. Let our leaders talk about strategic relationship”. Here also, they are just two persons getting married. Let us leave them alone.
  The main culprits are the TRP hungry media and our obsession for beautiful faces.
  Saina Nehwal is better athlete than Sania Mirza, but she has no controversy so her TRP value is less. Totally Eight golds were won in the recent boxing WC, we know only Vijender, he looks smart and a page 3 star, media friendly.
  Remember Mary Kom-Indian boxers are best in the worl(both men and women),
  Anju bobby george, PT Usha, Pilley, Koneru Hampi, Kapil dev..etc…all share minimum news space than the B-grade actors and skimpily cla gals…
  Still, its our mentality too…we dont like them too..
  Mary Kom received Padma award alon with Vijender but we were busy watching Saif and Aamir receiving the award.
  We love Yusuf Pathan while he hits sixes, t how many of us would like him doing an ad?
  Untill and unless we respect athletes more than their faces and personal appeal it will be same. To be famous and rich, learn to get into Page3.

 20. Praveen mogebettu says:

  Pratap sir….
  Deshadalli yellaru Saniya Nikha bagge viroda vyakta padisuttiruvaaga…..
  Nimma aartical uttamavaagi bandide…
  Uttamavaada sandeshavanne neediddiri…Danyavaadagalu..

 21. Praveen mogebettu says:

  Tumbaa uttamavaada artical…
  danyavaadagalu..

 22. Thank u sir its a good artical

 23. Dear Pratap sir…..
  Artical tumba uttamavagi bandide…
  Deshadalli yellaru Saaniya NIKHA bagge apaswara yettiruvaaga tumba uttama sandeshavannu neediddiri…
  Danyavaadagalu..

 24. Chethan, Coorg says:

  Sania was filled with great energy in her arms for Tennis. She spoiled herself just because of fame. Now all energy has been sacrified to face media.

  Ayoo Sania Illa andre bere avru bandu Tennis aadtare bidri. E media davru last 15 days inda Sania and Shoiab Mallik na Torsi torsi tale kedsidaare. Let her marry anyone. Why we (other Indians) should bother.

  Hello Media Guys, Dont go and sit in front of her house waiting to telecast something non sense. I felt very sad by hearing saying, In sania’s marriage they are going to prepare these items (list of items) for dinner. Next day again about Mehandi program. Other day for Dancing. Uf Uffff. Stop this rediculous news. One day it is okay to inform everyone that she is going to marry this person (Stop here).

  Telecast some good things that govt should take care some necessary actions and get the things done for better future. Many loop holes are still pending in front of us. Solve it

 25. Chethan, Coorg says:

  Hereafter you can expect triple faults (not there in Tennis rules) and forced errors from Sania.

 26. Karthik says:

  I was very happy when I came home (from Abu Dhabi) & saw in the news paper that u were sharing a stage in Udupi with ministers & swamiji. I missed it. Any way, i am not agreeing with you on this. I wish it is a divorce case or she dies in blast in toiletistan. There is no accountability for crores of Indian tax payer’s money spent for her domestic & overseas training. Even though i hate Italy as much as i hate Pakistan, i can not see resemblance between those 2 countries.

 27. SUKESH RAI says:

  Article was superb. but i thought u ll be writing against sania,,,, at first i felt bad about sania. bcoz sania s in top position bcoz of india. but 2day she married a paki and she s moving out of india. v all didnt see her as a muslim girl. v all gave support to her thinking that she s indian. lets see , time s the answer

 28. COMMON MAN says:

  excellent article

 29. anju says:

  She has a long way to go ! hope she will not disappoint on court

 30. rohith says:

  good . .
  i agree with ur opinion
  deffinetly after her marrige with sohib the relation b\n india and pakistan is not improove its true . . . . .
  PAKISTAN IS ALWAYS PAKISTAN

 31. Nitesh thirthahalli says:

  Hi Pratap,

  Really not impressed…..If Sania is right…Sharukh also right by saying Pakistan is our good neighbour…….dear make it clear to readers…r u following the way of self called buddhijeevi from my native Ananthamurthy….

  Regards,
  Nitesh Shetty – Thirthahalli

 32. Channa says:

  Nobady have right to coment on her personal(marriage) matter.
  Happy married life SANIYA.
  May GOd bless yoU

 33. Joseph says:

  excellent article

 34. Vinod Kumar says:

  This is opp to the article which u have written about shah rukh khan.

 35. archana says:

  this was a very good article……………