Date : 31-12-2017 | no Comment. | Read More
ಕಾಂಗ್ರೆಸಿಗರು ಪ್ರತಿಭಟಿಸಬೇಕಾದ ಜಾಗ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಅಂಗಳವೇ ಹೊರತು ಜಗನ್ನಾಥ ಭವನವಲ್ಲ ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಇಷ್ಟೆಲ್ಲಾ ನಾಟಕವನ್ನು ಆಡಬೇಕಾಗಿಯೂ ಇರಲಿಲ್ಲ. ಅದಕ್ಕೆ ಮೊದಲು ಆಗಬೇಕಾಗಿರುವುದು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ, ಹಿಂಬಾಗಿಲ ರಾಜಕಾರಣ ಮಾಡುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿತನದ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು […]
Date : 23-12-2017 | no Comment. | Read More
ನಿನ್ನೆ ಅವರ ಜನ್ಮದಿನವಿತ್ತು , ಹಾಗೇ ನೆನಪಿಸಿಕೊಳ್ಳಬೇಕೆನಿಸಿತು! He can be compared to a great mathema hcian like Srinivasa Ramanujan!’ ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋಬ್ಸರ್ ನ್ಯಾಶ್ ಅವರನ್ನು ಉಲ್ಲೇಖಿಸಿ Beautiful Mind’’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ Good Will Hunting’ ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ Will might have the potential to be as great […]
Date : 09-12-2017 | no Comment. | Read More
ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು? ಅಂದು ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಹಿಂದೂ ವಾದಿ ಎಂದು ಫತ್ವಾಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಶಿಸ್ತು ಉಲ್ಲಂಘನೆ, ಪಕ್ಷದ ಘನತೆ, ಸಭ್ಯತೆಯ ಮಾತುಗಳು? ಮಣಿಶಂಕರ ಅಯ್ಯರ್ನೆಂಬ ಹಲ್ಲಿಲ್ಲದ ಹಾವನ್ನು ಮುಲಾಜಿಲ್ಲದೆ ಕಿತ್ತು ಬಿಸಾಡಿದಾದ ಇದ್ದ ಧೈರ್ಯ ಈ ಮೊದಲಿನ ಯಾವ ಕಾಂಗ್ರೆಸಿನ ಶಿಸ್ತು ಸಮಿತಿಗೂ ಇರಲಿಲ್ಲ! ಈಗ ಏಕಾಏಕಿ ಉಂಟಾದ ಶಿಸ್ತು ಆಗೆಲ್ಲಿ ಹೋಗಿತ್ತು? ಮೊದಲೆಲ್ಲಾ ಮೋದಿಯನ್ನೂ ಅವರ […]
Date : 02-12-2017 | no Comment. | Read More
ಯುಪಿ ಸ್ಥಳೀಯ ಸಂಸ್ಥೆಯಲ್ಲಿ ಬಿದ್ದ ಮತಗಳಲ್ಲಿ ಭಕ್ತಿಯಿತ್ತು, ಪ್ರೀತಿಯಿತ್ತು, ಸಮರ್ಪಣೆಯೂ ಇತ್ತು. ಹಾಗಾಗಿ ಫಲಿತಾಂಶ ಹಾಗಿತ್ತು ದೇಶದಲ್ಲಿ ನರೇಂದ್ರ ಮೋದಿಯವರ ಹವಾ ಮುಗಿದಿದೆ. ಈಗೇನಿದ್ದರೂ ಕಾಂಗ್ರೆಸಿನದ್ದೇ ದಿನ ಎಂದು ಮೊನ್ನೆ ತಾನೇ ನಮ್ಮ ಮುಖ್ಯಮಂತ್ರಿಗಳು ಮಾತನ್ನಾಡಿದ್ದರು. ವಿಚಿತ್ರ ಎಂದರೆ ಕಾಂಗ್ರೆಸಿಗರು ಯಾವ ಸಮಯದಲ್ಲೂ ಮೋದಿ ಹವಾ ಇತ್ತು ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಮಾತಿನಂತೆ ಮೊದಲು ಹವಾ ಇತ್ತು. ಈಗ ಅದನ್ನು ಪ್ರಮಾಣೀಕರಿಸಬೇಕಾದ ಪ್ರಮೇಯವೇ ಇಲ್ಲ. ಏಕೆಂದರೆ ಮೊದಲೂ ಇತ್ತು. ಈಗಲೂ ಇದೆ ಮತ್ತು ಮುಂದೂ ಇರಲಿದೆ […]
Date : 25-11-2017 | no Comment. | Read More
ಸುಬ್ರಮಣಿಯನ್ ಸ್ವಾಮಿ ಬರುತ್ತಿದ್ದಾರೆ ಎಂದರೆ ಏನೋ ಒಂಥರಾ ಉತ್ಸಾಹ! ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ ಮಾಡಿದ ವ್ಯಕ್ತಿ ಡಾ. ಸುಬ್ರಮಣಿಯನ್ ಸ್ವಾಮಿ! […]
Date : 18-11-2017 | no Comment. | Read More
ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ? 2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ -ನಲ್ ಪಂದ್ಯ ನಡೆಯುತ್ತಿತ್ತು. ಬಾಲಿಂಗ್ ಪಿಚ್. ಚೆಂಡು ಎಂದಿಗಿಂತ ಹೆಚ್ಚು ಪುಟಿಯುತ್ತಿತ್ತು. ಕುಮಾರ ಸಂಗಕ್ಕರ ಅವರ 71 ರನ್ಗಳ ನೆರವಿನಿಂದ ಶ್ರೀಲಂಕಾ ಕೇವಲ ೨೦೧ ರನ್ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್ಗಳಲ್ಲಿ ಕೇವಲ 4 ರನ್ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ […]
Date : 11-11-2017 | no Comment. | Read More
ಕನ್ನಡ ಬಾರದ ಪರಪುಟ್ಟನಿಗೆ ಕಾರ್ಯಪ್ಪ ಹೇಗೆ ತಾನೇ ಅರ್ಥವಾದಾರು? ಕಳೆದ ವಾರ ಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೋಡಿದವರಿಗೆ ಗಾಬರಿಯಾಗುವ ಸಂಗತಿಯೊಂದು ಕಾದಿತ್ತು. ನಾಡು–ನುಡಿಗಳ ಸಾಧಕರ ಹೆಸರಿನ ಜತೆಗೆ ಕನ್ನಡದಲ್ಲದ, ಕನ್ನಡದ ಗಂಧ ಗಾಳಿಯೂ ಇಲ್ಲದ ರಾಮಚಂದ್ರ ಗುಹಾ ಎಂಬ ಹೆಸರು ಕರ್ನಾಟಕದ ಏಕೀಕರಣವನ್ನೂ, ಕನ್ನಡದ ಮಣ್ಣಿನ ವಾಸನೆಯನ್ನೂ ಅಣಕಿಸುವಂತೆ ರಾರಾಜಿಸುತ್ತಿತ್ತು. ಹಲವರ ವಿರೋಧದ ನಡುವೆ ರಾಮಚಂದ್ರ ಗುಹಾ ಪ್ರಶಸ್ತಿಯನ್ನು ಯಾವ ನಾಚಿಕೆ ಇಲ್ಲದೆ ಸ್ವೀಕರಿಸಿದ್ದರು. ಸದಾ ಬಲಪಂಥೀಯ ವಿಚಾರಧಾರೆಯ ವಿರುದ್ಧ ಇಂಗ್ಲಿಷಿನಲ್ಲಿ ಬರೆವ ಗುಹಾನನ್ನು […]
Date : 04-11-2017 | no Comment. | Read More
ಕೊಡಗಿಗೆ ಜನರಲ್ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ ಕೊಡಗಿನಲ್ಲಿ ನಾಟಿ ಕೆಲಸವಿರಲಿ, ಕಟಾವಿನ ಭರಾಟೆಯಿರಲಿ, ಕಾಫಿಯ ಸೀಸನ್ನೇ ಇರಲಿ ಬೆಳಗೆದ್ದು ಕ್ಷೌರ ಮುಗಿಸಿ ಟಾಕುಠೀಕಾಗಿ ತಯಾರಾಗಿ ಪೇಟೆಗೆ ಹೋಗುವ ಮಧ್ಯವಯಸ್ಕರನ್ನು ಕಂಡರೆ ನಿಸ್ಸಂಶಯವಾಗಿ ಅವರು ಮಾಜಿ ಯೋಧರೆಂದೇ ಅರ್ಥ! ಪುಟಿಯುವ ಚೆಂಡಿನಂಥಾ ಉತ್ಸಾಹ, ಬಿರುಸಾದ ನಡಿಗೆ, ಮಾತಿನಲ್ಲಿ ಶಿಸ್ತು, ಸಮಯದಲ್ಲಿ ಕಟ್ಟುನಿಟ್ಟು. ಅಂಥ ಮಾಜಿ ಯೋಧರು ಕೆಲದಿನಗಳಿಂದ ಎಂದಿಗಿಂತ ಹೆಚ್ಚು ಉಲ್ಲಸಿತರಾಗಿದ್ದರು. ಏಕೆಂದರೆ ಅವರ ಮೆಚ್ಚಿನ ಚೀಫ್ ‘ಆಫ್ ಆರ್ಮಿ ಸ್ಟಾಫ್’ ಇಂದು ಕೊಡಗಿಗೆ ಆಗಮಿಸುತ್ತಿದ್ದಾರೆ. ಅದರಲ್ಲೂ […]
Date : 28-10-2017 | no Comment. | Read More
ಧರ್ಮ ಗೆಲ್ಲುವವರೆಗೂ ಹೋರಾಡುತ್ತಲೇ ಇರುತ್ತೇವೆ… ಶತವಧಾನಿ ರಾ. ಗಣೇಶ್ ಅವರು ತಮ್ಮ ಉಪನ್ಯಾಸದಲ್ಲಿ ಆಗಾಗ್ಗೆ ಒಂದು ಮಾತನ್ನಾಡುತ್ತಿರುತ್ತಾರೆ. ಶಂಖ ಊದಬೇಕು, ಊದುತ್ತಲೇ ಇರಬೇಕು. ಕುರುಕ್ಷೇತ್ರ ಯುದ್ಧದಲ್ಲೇ ನೋಡಿ ಕ್ರಷ್ಣ ಪಾಂಚಜನ್ಯವೊಂದನ್ನು ಊದಿದ್ದರೂ ಸಾಕಾಗಿತ್ತು. ಆದರೆ ಭೀಮಾರ್ಜುನ ಯುಧಿಷ್ಠಿರಾಧಿಗಳೂ ಶಂಖ ಊದಿದರು. ಹೇಳುವುದನ್ನೇ ಮತ್ತೆ ಮತ್ತೆ ಹೇಳಬೇಕು. ಮತ್ತೆ ಮತ್ತೆ ಶಂಖ ಊದುತ್ತಲೇ ಇರಬೇಕು. ಹಾಗೆ ಮತ್ತೆ ಮತ್ತೆ ಶಂಖವನ್ನು ಊದುವ ಪರಿಸ್ಥಿತಿ ಈಗ ನಮ್ಮದು, ಹಿಂದುಗಳದ್ದು ಮತ್ತು ಕ್ಯಾಥೋಲಿಕರದ್ದು. ಏಕೆಂದರೆ ಮತ್ತೆ ಟಿಪ್ಪು ಜಯಂತಿ ಬಂದಿದೆ. ಭಾವನೆಗಳಿಗೆ […]
Date : 21-10-2017 | no Comment. | Read More
ಬೆಳಕಿನ ಹಬ್ಬದಲ್ಲಿ ಆರದಿರಲಿ ದೃಷ್ಟಿದೀಪ ! ಪ್ರತಿವರ್ಷ ಬೆಳಕಿನ ಹಬ್ಬವಾದ ದೀಪಾವಳಿ ಬಂತೆಂದರೆ ಸಂಭ್ರಮದ ಬಗಲಲ್ಲೇ ಆತಂಕ ಸುಳಿದಾಡತೊಡಗುತ್ತದೆ. ಈ ಹಬ್ಬದ ಬೆನ್ನಲ್ಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವರ್ಷ ವರ್ಷವೂ ದೃಷ್ಟಿಭಾಗ್ಯ ಕಳೆದುಕೊಂಡು ಬದುಕಿಗೆ ಕತ್ತಲೆಯನ್ನು ಆಹ್ವಾನಿಸಿಕೊಂಡು ಮಲಗುವ ಮಕ್ಕಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಹುಟ್ಟಿ ಹದಿನೆಂಟು ತಿಂಗಳು ತುಂಬುವಷ್ಟರಲ್ಲೇ ದೃಷ್ಟಿ ಕಳೆದುಕೊಂಡ ದಂತಕತೆ ಹೆಲೆನ್ ಕೆಲ್ಲರ್, 1933, ಜನವರಿಯಲ್ಲಿ “ದಿ ಅಟ್ಲಾಂಟಿಕ್ ಮಂತ್ಲಿ” ಎನ್ನುವ ನಿಯತಕಾಲಿಕೆಗೆ ಬರೆದ “Three Days to See” ಪ್ರಬಂಧ ನೆನಪಾಗುತ್ತದೆ. […]