*/
Date : 20-05-2017 | no Comment. | Read More
ಕೇವಲ 56 ಇಂಚಿನ ಎದೆಯಲ್ಲ, ಎದೆಗಾರಿಕೆಯೂ ಇದೆ ಆ ಭರವಸೆಗೆ ಈಗ ಮೂರು ವರ್ಷಗಳು. ದೇಶಕ್ಕೆ ದೇಶವೇ ಆಶಾಭಾವನೆಯಿಂದ ಕಾದು, ಸುನಾಮಿಯಂಥಾ ಅಲೆಯೊಂದು ಎದ್ದು, ಎದುರಾಳಿಗಳ ಹಂಗಿಸುವ ಮಾತುಗಳೆಲ್ಲವನ್ನೂ ಕೇಳಿಯೂ ಸಿಕ್ಕ ಮಹಾವಿಜಯಕ್ಕೆ ಮೂರು ವರ್ಷಗಳಾಗಿ ಬಿಟ್ಟಿತೇ ಎಂದು ಅಚ್ಚರಿಪಡುವಷ್ಟು ಆ ವಿಜಯ ಇಂದಿಗೂ ಹಚ್ಚ ಹಸಿರು. ದೇಶವನ್ನೇ ತುದಿಗಾಲಲ್ಲಿ ನಿಲ್ಲಿಸಿದ ಆ ದಿನ, ಮಹಾನಿರೀಕ್ಷೆಗಳನ್ನು ಈಡೇರಿಸುವ ಭಾರೀ ಹೊರೆ ಹೊತ್ತ ಆ ವಿಜಯ, ಕೋಟ್ಯಂತರ ಜನರ ಎದೆಯಲ್ಲಿ ಹುರುಪು ಹುಟ್ಟಿಸಿದ ಆ ವಿಜಯ, ಹುರುಪಿನ ಕೆಲಸಕ್ಕೆ, […]
Date : 13-05-2017 | no Comment. | Read More
ಚೇತಕ್ ಹೊತ್ತ ಮೇವಾಡದ ರತ್ನ, ನೆಪೋಲಿಯನ್ನನಾಚೆಗೂ ನಿಲ್ಲುವ ಮಹಾರಾಣಾ ಪ್ರತಾಪ ಕೆಲವು ತಿಂಗಳುಗಳ ಹಿಂದೆ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ರವರು ರಾಜಾಸ್ಥಾಾನದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತನ್ನು ದೇಶದ ಸೆಕ್ಯುಲರ್ ಬಣ ಭಾರೀ ವಿವಾದ ಎಂಬಂತೆ ಬಿಂಬಿಸಿತು. ಕೆಲವು ಸೆಕ್ಯುಲರ್ ವಾಹಿನಿಗಳು ಅದನ್ನು ಸಾಧ್ಯವಾದಷ್ಟೂ ಉದ್ದವಾಗಿ ಎಳೆದರು. ‘ದೇಶದ ಗೃಹಸಚಿವರಿಗೆ ಮೊಘಲ್ ಅರಸರ ಬಗ್ಗೆ ದ್ವೇಷವಿದೆ, ಆರೆಸ್ಸೆಸ್ ಮಾನಸಿಕತೆಯನ್ನು ಸಚಿವರು ತೋರಿದ್ದಾರೆ, ಅಕ್ಬರ್ ದಿ ಗ್ರೇಟ್ ಎನ್ನುವುದನ್ನು ಅಲ್ಲಗೆಳೆದಿದ್ದಾರೆ’ ಎಂದು ಆರೋಪಿಸಿತು. ತನ್ನ ಎಲ್ಲಾ ಪಟ್ಟುಗಳು ವಿಫಲರಾಗುತ್ತಾ ಸಾಗುತ್ತಿದ್ದರೆ […]
Date : 06-05-2017 | no Comment. | Read More
ಹದಿನೆಂಟು ವರ್ಷಗಳ ಹಿಂದೆ ಈ ಹೊತ್ತಿಗೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು! ಮನಸ್ಸೇಕೋ ಕಾರ್ಗಿಲ್ನತ್ತ ಎಳೆಯುತ್ತಿದೆ. ಅಷ್ಟಕ್ಕೂ 18 ವರ್ಷಗಳ ಹಿಂದೆ ಇದೇ ವೇಳೆಯಲ್ಲಿ ಕಾರ್ಗಿಲ್ನಲ್ಲಿ ಯುದ್ಧ ನಡೆಯುತ್ತಿತ್ತು. ಮೇ 8ರಿಂದ ಜುಲೈ 14ರವರೆಗೂ ನಡೆದ ಕಾರ್ಗಿಲ್ ಯುದ್ಧಕ್ಕೆ ಹದಿನೆಂಟು ಸಂವತ್ಸರಗಳು ತುಂಬಿವೆ. ಆದರೆ ನಮ್ಮೆಲ್ಲರ ದೃಷ್ಟಿ ಕಳೆದ ಒಂದೂವರೆ ತಿಂಗಳಿನಿಂದ ರಾಜಕೀಯದ ಮೇಲೆಯೇ ನೆಟ್ಟಿದೆ. ಮುಂದಿನ ಸರಕಾರ ವನ್ನು ಯಾರು ರಚಿಸಬಹುದು, ಯಾರು ಅಧಿಕಾರಕ್ಕೆ ಬಂದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎಂದು ನಾವೆಲ್ಲ ಯೋಚಿಸುತ್ತಿದ್ದೇವೆ. ಆದರೆ ಒಬ್ಬ […]
Date : 29-04-2017 | no Comment. | Read More
ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು! ಮೇಜರ್ ಬಾರ್ಬರಾ! ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾ ಅವರಿಗೂ ಬ್ರಿಟನ್ನ ಲೆಜೆಂಡರಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು Class,, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇರ್ಜ ಬಾರ್ಬರಾ’ ನಾಟಕ ಏರ್ಪಡಾಯಿತು. ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆಯೇ ಹೆಚ್ಚಾಗಿ ನಡೆಯುತ್ತವೆ. ವಿನ್ಸ್ಟನ್ ಚರ್ಚಿಲ್ಗೆ ಟೆಲಿಗ್ರಾಂ […]
Date : 22-04-2017 | no Comment. | Read More
ಕನ್ನಡ ಚಿತ್ರಪ್ರೇಮಿ ಯಾವತ್ತೂ ಮದ್ರಾಸಿನ ಮರ್ಜಿಗೆ ಬೀಳಲಿಲ್ಲ, ಏಕೆಂದರೆ…? ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಪಡೆಯಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾವಂತನ ಕನಸ್ಸು. ಇನ್ನು ಕೆಲವರಿಗೆ ಶ್ರಮವಿಲ್ಲದೆ ಗೌರವ ಡಾಕ್ಟರೇಟ್ ಪಡೆಯುವ ಆಸೆ. ಹೀಗೆ ತಮ್ಮ ಹೆಸರಿನ ಮುಂದೆ ಡಾ. ಎಂದು ಸೇರಿಸಿಕೊಳ್ಳಲು ಕೆಲವರು ಪಡುವ ಪರಿಪಾಟಲುಗಳು ಆಗಾಗ ವಿವಾದಗಳನ್ನು ಸೃಷ್ಟಿಸಿದ್ದನ್ನು ನೋಡಿದ್ದೇವೆ. ವಶೀಲಿಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದನ್ನೂ ನೋಡಿದ್ದೇವೆ. ಕೆಲವರಿಂದ ಆ ಪದವಿಯ ಗೌರವ ಹೆಚ್ಚಾಗಿದ್ದನ್ನೂ, ಕೆಲವರಿಂದ ಆ ಪದವಿಯ ಬಗೆಗಿನ ಗೌರವ ಕಡಿಮೆಯಾಗಿದ್ದನ್ನೂ ನೋಡಿದ್ದೇವೆ. ಹಾಗೆಯೇ ಗೌರವ ಡಾಕ್ಟರೇಟಿನ […]
Date : 15-04-2017 | no Comment. | Read More
ನಮ್ಮ ಕಾಲದಲ್ಲಿ…. ಅನ್ನುತ್ತಾ ಬಹಳ ವರ್ಷಗಳ ಅಥವಾ ದಶಕಗಳ ಹಿಂದಕ್ಕೆ ಹೋಗಬೇಕಿಲ್ಲ. ಮೊನ್ನೆ ಮೊನ್ನೆ ಅಂದರೆ ಕಳೆದ ಡಿಸೆಂಬರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ವೈರಲ್ ಆಗಿದ್ದು ನಿಮ್ಮೆಲ್ಲರಿಗೂ ನೆನಪಿರಬಹುದು. ಅಂದು ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಬೈಠಕ್ ಒಂದು ನಡೆಯುವುದಿತ್ತು. ಮುಂಬರುವ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ಚರ್ಚಿಸಲು ಆ ರಾಜ್ಯದ ಸುಮಾರು 26,000ಕ್ಕೂ ಹೆಚ್ಚಿನ ಕಾರ್ಯಕರ್ತರು ಬೈಠಕಿಗೆ ಅಪೇಕ್ಷಿತರಿದ್ದರು. ಅದರ ಹಿಂದಿನ ದಿನ ಪಕ್ಷ ತನ್ನ ಎಲ್ಲಾ ಕಾರ್ಯಕರ್ತರಿಗೂ ಸಭೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ, ಎಲ್ಲರೂ […]
Date : 08-04-2017 | no Comment. | Read More
ಅವರೊಬ್ಬ ಹಠವಾದಿ ಮಾತ್ರವಲ್ಲ, ಹಿಡಿದಿದ್ದನ್ನು ಸಾಧಿಸಿ ತೋರಿಸುವ ಛಲವಾದಿ! ಸ್ವಗತದಿಂದಲೇ ಮಾತು ಆರಂಭಿಸುವುದಾದರೆ, ಬಹುಶಃ ವಿಜಯ ಸಂಕೇಶ್ವರರಿಂದ ಅತಿ ಹೆಚ್ಚು ಸಲ ಬಯ್ಯಿಸಿಕೊಂಡಿರುವುದು ನಾನೇ. ಅಷ್ಟು ಮಾತ್ರವಲ್ಲ, ವಿಶ್ವೇಶ್ವರಭಟ್ಟರನ್ನು ಹೊರತುಪಡಿಸಿ ಸಂಕೇಶ್ವರರಿಂದ ಅತಿ ಹೆಚ್ಚು ಬಾರಿ ಮೆಚ್ಚುಗೆಗೆ ಗುರಿಯಾದ ವಿಜಯ ಕರ್ನಾಟಕದ ಯಾವುದಾದರೂ ಪತ್ರಕರ್ತನಿದ್ದರೆ ಅದೂ ನಾನೇ ಎಂದು ಹೆಮ್ಮೆಯಿಂದ ಹೇಳಬಲ್ಲೆ!! ಅವರಿಂದ ಬೈಯಿಸಿಕೊಳ್ಳುವುದು ಹಾಗೂ ಹೊಗಳಿಸಿಕೊಳ್ಳುವುದು ಎರಡೂ ಸುಲಭವಲ್ಲ. ಅವರೊಬ್ಬ Perfectionist ಕೆಲಸದ ವಿಷಯದಲ್ಲಿ ಕಾಂಪ್ರೊಮೈಸ್ ಇಲ್ಲವೇ ಇಲ್ಲ. ಸಂಕೇಶ್ವರರೆಂದರೆ ಸೀರಿಯಸ್ನೆಸ್. ನೌಟಂಕಿತನಕ್ಕೆ ಅವರ ಬಳಿ […]
Date : 01-04-2017 | no Comment. | Read More
ವಯಸ್ಸು ನೂರಾಹತ್ತು, ಹಸಿದು ಬಂದವರಿಗೆ ಕೊಡದೆ ಕಳಿಸಿಲ್ಲ ತುತ್ತು! ಅಮೆರಿಕದಲ್ಲೊಂದು ರಿಮೋಟ್ ವಿಲೇಜ್. ಆ ದೂರದ, ದುರ್ಗಮ ಹಳ್ಳಿಯಲ್ಲೊಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ಅಜ್ಜಿ ಹಾಗೆ.. ಅಜ್ಜಿ ಹೀಗೆ… ಅಂತೆಲ್ಲಾ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಎಲ್ಲರ ಕಣ್ಣು ಕೆಂಪಾಗಿರುತ್ತದೆ. ಒಂದು ದಿನ ಅಜ್ಜಿ ಮನೆಯಲ್ಲಿರುತ್ತಾಳೆ. […]
Date : 25-03-2017 | no Comment. | Read More
ಭೋಗಿಗಳೇ ತುಂಬಿರುವ ರಾಜಕಾರಣದಲ್ಲಿ ಯೋಗಿಯೊಬ್ಬ ಮುಖ್ಯಮಂತ್ರಿಯಾದ ಕಥೆ! ————————————————- ಮೊದಲೆಲ್ಲ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಮುಂದೆ ಏನಾಗಬೇಕು ಅಂದುಕೊಂಡಿದ್ದೀಯಾ ಎಂದರೆ, ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಎನ್ನುತ್ತಿದ್ದರು. ಬರಬರುತ್ತಾ ಸಾಫ್ಟ್ ವೇರ್ ಕ್ಷೇತ್ರ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ, ಎಲ್ಲರ ಬಾಯಲ್ಲೂ ನಾನೂ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು ಎಂಬ ಮಾತು ಬರಲಾರಂಭಿಸಿತು. ಅದರಲ್ಲೂ ಹೆಗಲಿಗೆ ಒಂದು ಲ್ಯಾಪ್ಟಾಪ್ ಬ್ಯಾಗನ್ನು ಸಿಕ್ಕಿಸಿಕೊಂಡು ವಾಹನ ಏರಿದರಂತೂ ಜನ ಒಮ್ಮೆ ಮೆಚ್ಚುಗೆಯಿಂದ, ಬುದ್ಧಿವಂಥ ಎಂಬ ಭಾವನೆಯಿಂದ ನೋಡುವಂತಾಯಿತು. ಈಗಂತೂ ಇವೆಲ್ಲ […]