*/
Date : 21-10-2017 | no Comment. | Read More
ಬೆಳಕಿನ ಹಬ್ಬದಲ್ಲಿ ಆರದಿರಲಿ ದೃಷ್ಟಿದೀಪ ! ಪ್ರತಿವರ್ಷ ಬೆಳಕಿನ ಹಬ್ಬವಾದ ದೀಪಾವಳಿ ಬಂತೆಂದರೆ ಸಂಭ್ರಮದ ಬಗಲಲ್ಲೇ ಆತಂಕ ಸುಳಿದಾಡತೊಡಗುತ್ತದೆ. ಈ ಹಬ್ಬದ ಬೆನ್ನಲ್ಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವರ್ಷ ವರ್ಷವೂ ದೃಷ್ಟಿಭಾಗ್ಯ ಕಳೆದುಕೊಂಡು ಬದುಕಿಗೆ ಕತ್ತಲೆಯನ್ನು ಆಹ್ವಾನಿಸಿಕೊಂಡು ಮಲಗುವ ಮಕ್ಕಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಹುಟ್ಟಿ ಹದಿನೆಂಟು ತಿಂಗಳು ತುಂಬುವಷ್ಟರಲ್ಲೇ ದೃಷ್ಟಿ ಕಳೆದುಕೊಂಡ ದಂತಕತೆ ಹೆಲೆನ್ ಕೆಲ್ಲರ್, 1933, ಜನವರಿಯಲ್ಲಿ “ದಿ ಅಟ್ಲಾಂಟಿಕ್ ಮಂತ್ಲಿ” ಎನ್ನುವ ನಿಯತಕಾಲಿಕೆಗೆ ಬರೆದ “Three Days to See” ಪ್ರಬಂಧ ನೆನಪಾಗುತ್ತದೆ. […]
Date : 14-10-2017 | no Comment. | Read More
ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ! ಒಂದು ಸುಂದರ, ಸಮರಸ ಸಮಾಜದ ನಿರ್ಮಾಣ ಕಾರ್ಯವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾರ್ಪಣ್ಯದ ನಡುವೆಯೂ ಮಾಡಬಹುದು ಎಂಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕರ್ತರಾದವರನ್ನು ಮರೆತಿಲ್ಲ. ಇಂದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎಂಬ ಗೌರವಸೂಚಕ ಪದದಿಂದಲೇ ಸಂಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ. ಕೊಡಗಿನ ವಿರಾಜಪೇಟೆಯಿಂದ ನಾಪೋಕ್ಲುವಿಗೆ ಸಾಗುವ ದಾರಿ ಮಧ್ಯೆ ಕಿರುಂದಾಡು ಗ್ರಾಮ ಎಂಬ ಫಲಕ ಕಂಡಾಗಲೆಲ್ಲಾ ಬಳಿಯಲ್ಲಿರುವವರು ಇದೇ ಮಹಾಕವಿ ಅಪ್ಪಚ್ಚನ ಊರು ಎಂದು […]
Date : 07-10-2017 | no Comment. | Read More
ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ? ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದಕ್ಕೆ ಪಶ್ಚಿಮ ಬಂಗಾಳದ ಕೆಲವು ಘಟನೆಗಳೇ ಸಾಕ್ಷಿ. ಕಳೆದೊಂದು ವರ್ಷದಿಂದ ಪ.ಬಂಗಾಳದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನೇ ನೋಡಿ. ಹೌರಾ, ಭೀರ್ಭೂಮ್ಗಳಲ್ಲಿ ಹಿಂದೂ ಮನೆಗಳಿಗೆ ಬೆಂಕಿ. ವರ್ಧಮಾನ್ ಜಿಲ್ಲೆಯ ಕಾಟ್ವಾ ಶನಿದೇವಸ್ಥಾನ ಧ್ವಂಸ. ಧೂಲಾಗಢದಲ್ಲಿ ಈದ್ ಉನ್ ನಬಿ ದಿನ ಹಿಂದೂಗಳ ಮೇಲೆ ಏಕಾಏಕಿ ದಾಳಿ. ಸಕರಾಯಿಲ್ ಮತ್ತು ಪೋಚ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಗಲಭೆಗಳಿಂದ ಹಿಂದುಗಳ ವಲಸೆ. ಮಾಲ್ಡಾದಲ್ಲಿ ಹೆಚ್ಚಿದ ನಕಲಿ ನೋಟುಗಳ […]
Date : 23-09-2017 | no Comment. | Read More
ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ! ಕೆಲವರ್ಷಗಳ ಹಿಂದೆ ಅಂಕಣವೊಂದರಲ್ಲಿ ಹೀಗೆ ಬರೆದಿದ್ದೆ. ಅದಕ್ಕೆ ನಾನು ಈಗಲೂ ಬದ್ಧ ಎನ್ನುವುದಕ್ಕಿಂತಲೂ ಆ ಲೇಖನದ ವಸ್ತು ಈಗಲೂ ಹಾಗೇ ಇದೆ ಎನ್ನುವುದು ಹೆಚ್ಚು ಸೂಕ್ತ. ಅಂದು ನಾನು ಬರೆದಿದ್ದು ಇಷ್ಟು. ನಮ್ಮ ಹಳಬರಲ್ಲಿ ಕೆಲ Notions presumpons ಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ಅದು ‘ಕರ್ಲಾನ್ ಬೆಡ್’. ಮಿನರಲ್ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ […]
Date : 16-09-2017 | no Comment. | Read More
ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ ತಿಂಗಳುಗಟ್ಟಲೇ ಡೊಕಾ ಲಾ ನಲ್ಲಿ ಕಣ್ಣೆವೆ ಮುಚ್ಚದೆ ಮುಖಾಮುಖಿಯಾಗಿ, ಇನ್ನೇನು ಸ್ಫೋಟಿಸಿಯೇ ಬಿಡುತ್ತದೆಂಬಂತೆ ಸೃಷ್ಟಿಯಾಗಿದ್ದ ವಾತಾವರಣ ಈಗ ಮಂಜಿನಂತೆ ಕರಗಿದೆ. ಉಭಯ ದೇಶಗಳಷ್ಟೇ ಅಲ್ಲದೆ ವಿಶ್ವದ ಬಲಾಢ್ಯ ದೇಶಗಳಲ್ಲೂ ಬಿಗುವನ್ನು ಉಂಟುಮಾಡಿದ್ದ ಬಿಕ್ಕಟ್ಟು ಇಷ್ಟು ಸರಳವಾಗಿ ಪರಿಹಾರವಾಗಿದ್ದು ಹೇಗೆ? ಒಂದೇ ಒಂದು ಗುಂಡು ಹಾರದೆ ವಿಸ್ತರಣಾವಾದಿ ಮಾನಸಿಕತೆ ಹಿಂದಕ್ಕೆ ತೆರಳಲು ಕಾರಣರಾದವರು ಯಾರು? ಬೆಟ್ಟದಂಥ ವಿಪತ್ತು ಕಡ್ಡಿಯಂತೆ ಸುಲಲಿತಗೊಳಿಸಿದ್ದರ ಹಿಂದಿನ ರಣತಂತ್ರವಾದರೂ ಏನು? ಡೊಕಾ ಲಾ ಬಿಕ್ಕಟ್ಟು […]
Date : 09-09-2017 | no Comment. | Read More
ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಜಾರ್ಜ್ ರಾಜೀನಾಮೆ ಕೊಟ್ಟಿಲ್ಲವೇಕೆ? ಈ ಪ್ರಕರಣದಲ್ಲಿ ಕೆಲವೊಂದು ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳಿವೆ. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ… ಆದರೆ ಒಂದು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ! ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಇಂದಿಗೆ ಐದು ದಿನಗಳಾದವು. ಆದರೆ ಕೆ.ಜೆ. ಜಾರ್ಜ್ ಸಾಹೇಬರು ಮಾತ್ರ ಕುರ್ಚಿ ಬಿಟ್ಟು ಇಳಿದಿಲ್ಲ. ತೀರ್ಪು ಹೊರಬಂದ ದಿನವೇ ಪತ್ರಕರ್ತೆ ಗೌರಿ ಲಂಕೇಶರ ಬರ್ಬರ ಹತ್ಯೆ ನಡೆದ ಕಾರಣ […]
Date : 02-09-2017 | no Comment. | Read More
ಇವರಿಬ್ಬರೆಂದರೆ ವಿರೋಧಿಗಳೂ ಬೆಚ್ಚುತ್ತಾರೆ, ಏಕೆಂದರೆ… ಒಂದು ಕಾಲವಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗುವವರನ್ನು ಕೆಲಸವಿಲ್ಲದವರು ಎಂದು ಹಂಗಿಸಲಾಗುತ್ತಿತ್ತು. ಕ್ರಮೇಣ ಜನ ಸಾಮಾನ್ಯನೂ ಅದರತ್ತ ಆಕರ್ಷಿತನಾಗುತ್ತಿದ್ದಾಗ ಲೈಕು, ಶೇರುಗಳ ಆಸೆಬುರುಕರು, ಪ್ರಚಾರ ವ್ಯಸನಿಗಳು ಎಂದು ಹಂಗಿಸುವ ಕಾಲ ಆರಂಭವಾಯಿತು. ವರ್ಷ ಕಳೆದಂತೆ ಜಾಲತಾಣಗಳಲ್ಲಿ ಇಲ್ಲದ ವ್ಯಕ್ತಿಯನ್ನು ಅನಕ್ಷರಸ್ಥನ ಧಾಟಿಯಲ್ಲಿ ನೋಡುವ ವರ್ಗ ಸೃಷ್ಟಿಯಾಯಿತು. ಅನಂತರ ವ್ಯಕ್ತಿ ನಿಂದೆ, ಸಿದ್ಧಾಂತ ನಿಂದೆ, ಅವಹೇಳನಕಾರಿ ಪ್ರಕಟಣೆಗಳು, ಕೊಲೆಬೆದರಿಕೆಗಳಿಗೂ ಜಾಲತಾಣಗಳು ಬಳಕೆಯಾದಾಗ ಕೆಲವರು ಇದು ಅಪಾಯಕಾರಿ ಎಂದು ಕರೆದರು. ಇವೆಲ್ಲವನ್ನೂ ಮೀರಿ ನೋಡಿದರೆ ಸಾಮಾಜಿಕ […]
Date : 19-08-2017 | no Comment. | Read More
ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!! ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! ‘ಲವ್ ಜಿಹಾದ್’ ಅಥವಾ ‘ರೋಮಿಯೋ ಜಿಹಾದ್’ ಎಂಬ ಕಾರ್ಯಸೂಚಿ ನಿಜಕ್ಕೂ ನಡೆಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ […]
Date : 12-08-2017 | no Comment. | Read More
ಬಲಿದಾನಿಗಳ ಸ್ಮರಣೆ ಮಾಡೋಣ, ನವ ಭಾರತದ ಸಂಕಲ್ಪ ಕೈಗೊಳ್ಳೋಣ ಐತಿಹಾಸಿಕ ಘಟನೆಯೊಂದನ್ನು ಹೀಗೂ ವಿಶ್ಲೇಷಿಸಲ್ಪಡುತ್ತವೆ ಎಂಬ ವಿಚಿತ್ರವನ್ನು ನಾವು ಕಳೆದ ಮೂರ್ನಾಲ್ಕು ದಿನಗಳಿಂದ ನೋಡುತ್ತಿದ್ದೇವೆ. ಐತಿಹಾಸಿಕವಾದ ಪ್ರೇರಣೆ ಒಬ್ಬರಿಗೆ ಗುರುವಾಗಿಯೂ ಕಾಣಬಹುದು ಮತ್ತು ಮತ್ತೊಬ್ಬರಿಗೆ ಅದು ಗುರಿ ಇಡಲೂ ಬಳಸಲ್ಪಡಬಹುದು ಎಂಬುದನ್ನು ದೇಶ ನೋಡಿತು. ಒಬ್ಬರು ಮುಂದಿನ ಗುರಿಗೆ ಹಿಂದೊಬ್ಬ ಗುರು ಇರಬೇಕೆನ್ನುವ ವಾದವನ್ನಿಟ್ಟರೆ ಮತ್ತೊಬ್ಬರು, ಹಿಂದಿನ ಪ್ರೇರಣೆಯನ್ನು ತಮಗರಿವಿಲ್ಲದೆ ಹಳಿಯುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯಲ್ಲಿ ಕಾಂಗ್ರೆಸ್ ಆರೆಸ್ಸೆಸ್ ಅನ್ನು ಟೀಕಿಸಲು ಆ ಪ್ರೇರಣೆಯನ್ನು […]
Date : 05-08-2017 | no Comment. | Read More
ಇಂದಿನ ತಂತ್ರಗಾರಿಕೆಯೂ ಇರಲಿಲ್ಲ, ಎದೆಗಾರಿಕೆಯೂ ಇರಲಿಲ್ಲ, ಇದು ಅರವತ್ತೆರಡರ ಭಾರತವೂ ಅಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದಾಗ ಆಡಿದ ಒಂದು ಮಾತು ಮುಂದಿನ ಸವಾಲು ಮತ್ತು ಭಾರತದ ನಡೆಯನ್ನು ಸ್ಪಷ್ಟವಾಗಿ ತಿಳಿಸುವಂತಿತ್ತು. ತಜ್ಞರಿಗೆ ಅದರ ಮುನ್ಸೂಚನೆಯೂ ಅಂದೇ ಸಿಕ್ಕಿಬಿಟ್ಟಿತ್ತು. ಅಷ್ಟಕ್ಕೂ ಮೋದಿಯವರು ಹೇಳಿದ್ದು ಇಷ್ಟೇ. ‘ವಿಶ್ವದಲ್ಲಿ ಕೆಲವರು ಶಾಂತಿ-ಸೌಹಾರ್ಧಕ್ಕೆ ಹಾತೊರೆಯುತ್ತಿದ್ದರೆ ಇನ್ನು ಕೆಲವರು ವಿಸ್ತರಣಾವಾದವನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದಿದ್ದರು. ಅದು ನೇರವಾಗಿ ಚೀನಾವನ್ನುದ್ದೇಶಿಸಿ ಆಡಿದ ಮಾತು ಎಂಬುದರಲ್ಲಿ ಯಾರಿಗೂ ಸಂಶಯ ಉಳಿದಿರಲಿಲ್ಲ. ಚೀನಾದ ಶತ್ರು […]