*/
Date : 29-07-2017 | no Comment. | Read More
ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ! ಇದುವರೆಗೂ ಭಾರತ 14 ರಾಷ್ಟ್ರಪತಿಗಳನ್ನು ಕಂಡಿದೆ. ಆದರೆ ಇಂದಿಗೂ ಜನರ ಮನಸ್ಸಲ್ಲಿ ಉಳಿದವರು ಸರ್ವೇಪಲ್ಲಿ ರಾಧಾಕೃಷ್ಣನ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮಾತ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವತ್ತು ನಮ್ಮ ಸ್ಯಾಂಡಲ್ವುಡ್ ಚಿತ್ರರಂಗ ಎಷ್ಟೇ ಮುಂದುವರಿದಿರಲಿ, ಕನ್ನಡ ಸಿನಿಮಾ ಎಂದರೆ ರಾಜ್ಕುಮಾರ್ ಎಂದು ಹೇಗೆ ಹೇಳುತ್ತಾರೋ ಹಾಗೇ ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಂ ಎನ್ನುತ್ತಾರೆ. ಕಲಾಂ ಬದುಕಿರಲಿ, ಬಿಡಲಿ ಅದೆಲ್ಲ ಲೆಕ್ಕಕ್ಕೇ ಇಲ್ಲ, ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಮೇ ಎನ್ನುವಷ್ಟರ […]
Date : 22-07-2017 | no Comment. | Read More
ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು! ಕ್ಯಾಪ್ಟನ್ ವಿಕ್ರಂ ಬಾತ್ರಾ ಕ್ಯಾಪ್ಟನ್ ಹನೀಫುದ್ದೀನ್ ಲೆಫ್ಟಿನೆಂಟ್ ಸೌರಭ್ ಕಾಲಿಯಾ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮೇಜರ್ ಮರಿಯಪ್ಪನ್ ಸರವಣನ್ ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್ ರೈಫಲ್ಮನ್ ಮೊಹಮದ್ ಅಸ್ಲಾಂ ಈ ಒಂದೊಂದು ಹೆಸರುಗಳೂ ನಮ್ಮ ಸಮಾಜದಲ್ಲಿ ಜನಪದ ಕಥೆಗಳಂಥ ಸ್ಥಾನ ಪಡೆದುಕೊಂಡಿವೆ, ಪ್ರೇರಣೆ ಕೊಡುತ್ತವೆ, ಅತ್ಯುನ್ನತ ತ್ಯಾಗವೇನನ್ನುವುದನ್ನು ಸೂಚಿಸುತ್ತವೆ, ವೀರಗಾಥೆಗಳನ್ನು ಹೇಳುತ್ತವೆ. ಪ್ರತಿವರ್ಷ ಮೇ-ಜೂನ್-ಜುಲೈಗಳು ಬಂತೆಂದರೆ ಮನಸ್ಸು ಕಾರ್ಗಿಲ್ ಬಗ್ಗೆ ಯೋಚಿಸಲಾರಂಭಿಸುತ್ತದೆ, […]
Date : 15-07-2017 | no Comment. | Read More
ಹುಲ್ಲುಹಾಸಿನ ಅಂಕಣ ಹಸುಗಳಿಗೆ ಎನ್ನುತ್ತಿದ್ದವರ ಕನಸ್ಸೂ ವಿಂಬಲ್ಡನ್ ಗೆಲ್ಲಬೇಕು ಎಂದೇ ಆಗಿರುತ್ತಿತ್ತು! Grass is for the cows! ಟೆನಿಸ್ ದಂತಕಥೆ ರಾಡ್ ಲೆವರ್ರಿಂದ”He is a magician on clay’ ಎಂದು ಹೊಗಳಿಸಿಕೊಂಡಿದ್ದ ಸ್ಪೇನ್ನ ಖ್ಯಾತ ಆಟಗಾರ ಮ್ಯಾನ್ಯುಯೆಲ್ ಸಂಟಾನಾಗೆ ಗ್ರಾಸ್ ಕೋರ್ಟ್ (ಹುಲ್ಲುಹಾಸು) ಬಹಳ ಕಸಿವಿಸಿಯನ್ನುಂಟುಮಾಡುತ್ತಿತ್ತು. ಹಾಗಾಗಿ ಮೊದಲ ಸಲ ವಿಂಬಲ್ಡನ್ ಆಡಲು ಬಂದಾಗ ಈ ಮೇಲಿನ ಹೇಳಿಕೆ ನೀಡಿದ್ದರು ಸಂಟಾನಾ! ನಾಲ್ಕು ಗ್ರಾನ್ಸ್ಲಾಮ್ಗಳಲ್ಲಿ ವಿಂಬಲ್ಡನ್ ಮಾತ್ರ ಇಂಥದ್ದೇ ನಿಗದಿತ ತಾರೀಖಿನಂದು ಆರಂಭವಾಗುವುದಿಲ್ಲ. ಅಗಸ್ಟ್ […]
Date : 08-07-2017 | no Comment. | Read More
ಎಂಟೆಬೆಯಲ್ಲಿ ತೋರಿದ ಎಂಟೆದೆ ಬಗ್ಗೆ ಮತ್ತೊಮ್ಮೆ ಹೇಳಲಾ? ಮೊನ್ನೆ ಜುಲೈ 4ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ನ ರಾಜಧಾನಿ ಟೆಲ್ ಅವಿವ್ಗೆ ಬಂದಿಳಿದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಟ್ಟಿಲ ಬಳಿಯೇ ನಿಂತು ಸ್ವಾಗತಿಸಿದ್ದನ್ನು ನೀವು ನೋಡಿರುತ್ತೀರಿ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ನೆತನ್ಯಾಹು ಅವರಿಗೆ ಧನ್ಯವಾದ ಹೇಳಲು ನಿಂತ ಮೋದಿಯವರು, ಜುಲೈ 4 ಒಂದು ಮಹತ್ತರ ದಿನ. ನಲವತ್ತೊಂದು ವರ್ಷಗಳ ಹಿಂದೆ ಉಗಾಂಡದ ಎಂಟೆಬೆ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಜಮಿನ್ ನೆತನ್ಯಾಹು ಅವರ […]
Date : 01-07-2017 | no Comment. | Read More
ಟೆಲಿಗ್ರಾಮ್ ಗೆ ಆದ ಗತಿಯೇ ಅಂಚೆಯಣ್ಣನಿಗೂ ಆದೀತು ಅನ್ನುವಷ್ಟರಲ್ಲಿ ಬಂದರು ಮೋದಿಯಣ್ಣ! ಓಲೆಯ ಹಂಚಲು ಹೊರಡುವೆ ನಾನು ತೇಲಲು ಮುಗಿಲಲಿ ಬಿಳಿ ಭಾನು ಮನೆಯಲಿ ನೀವು ಬಿಸಿಲಲಿ ನಾನು ಕಾಗದ ಬಂತು ಕಾಗದವು… ಸೊಗಸಿನ ಸುದ್ದಿಯ ತರುವೆನು ನಿಮಗೆ ಮಸಣದ ವಾರ್ತೆಯ ತರುವೆನು ತಮಗೆ ಎಲ್ಲಾ ಸುದ್ದಿಗಳೊಂದೇ ನಮಗೆ ಕಾಗದ ಬಂತು ಕಾಗದವು… ಹಳೆ ತಲೆಮಾರಿನವರಿಗಂತೂ ದಿನಕರ ದೇಸಾಯಿಯವರ ಈ ಪದ್ಯ ನೆನಪಿರಲೇಬೇಕು. ಅಂಚೆ ಬರಲಿ, ಬಾರದಿರಲಿ. ಅಂಚೆಯಣ್ಣ ದಿನಕ್ಕೊಮ್ಮೆ ಮಾತ್ರ ಬಂದು ನಕ್ಕು ಹೋಗಲಿ ಎಂದು […]
Date : 24-06-2017 | no Comment. | Read More
ಕೆಟ್ಟ ಕಾರಣಕ್ಕಾಗಿ ಸುದ್ಧಿಯಾಗುವಂಥ ಸ್ಥಿತಿ ತಲುಪಿತೇ ನಮ್ಮ ಕರ್ನಾಟಕ? ಯಾಸಿನ್ ಭಟ್ಕಳ್ ರಿಯಾಝ್ ಭಟ್ಕಳ್ ಇಕ್ಬಾಲ್ ಭಟ್ಕಳ್ ಇದೀಗ ಇವರ ಸಾಲಿಗೆ ಮಹಮ್ಮದ್ ಶಫೀ ಅರ್ಮರ್ ಹೊಸದಾಗಿ ಸೇರಿಕೊಂಡಿದ್ದಾನೆ! ಇವರೆಲ್ಲರ ನಡುವಿನ ಒಂದು ಸಾಮ್ಯತೆಯೇನೆಂದರೆ, ಎಲ್ಲರೂ ಕರ್ನಾಟಕದವರೇ. ಅದರಲ್ಲೂ ಭಟ್ಕಳದವರು. ಏಕೆ ಇವರ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆಯೆಂದರೆ, ಮೊನ್ನೆ ತಾನೆ ಅಮೆರಿಕ ಮಹಮ್ಮದ್ ಶಫೀ ಅರ್ಮರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಅಷ್ಟು ಮಾತ್ರವಲ್ಲ ಕುಖ್ಯಾತ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ನ ಮೊದಲ ಭಾರತೀಯ ನೇತಾರ […]
Date : 17-06-2017 | no Comment. | Read More
ಅಪ್ಪ ಎಂಬ ಅಗೋಚರ ಪ್ರೀತಿ ಮತ್ತು ನಿಸ್ವಾರ್ಥ ಜೀವಿಯನ್ನು ನೆನೆ ನೆನೆದು…! ಇತ್ತೀಚೆಗೆ ಬಿಡುಗಡೆಯಾಗಿದ್ದ “ಚೌಕ” ಚಿತ್ರದ ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪಾ …. ಅಪ್ಪಾ ಐ ಲವ್ ಯೂ ಹಾಡು ಕೇಳಿ ಕಣ್ಣು ಜಿನುಗದ ಹೆಣ್ಣುಮಕ್ಕಳೇ ಇರಲಿಕ್ಕಿಲ್ಲ. ನಿನ್ನಂಥ ಅಪ್ಪಾ ಇಲ್ಲಾ, ಒಂದೊಂದು ಮಾತು ಬೆಲ್ಲ ಹಾಡಿನ ರಾಜ್ ಕುಮಾರ್ ರನ್ನು ನೆನಪಿಸಿಕೊಂಡಾಗಲೂ ಕಣ್ಣ ಮುಂದೆ ಬರುವುದೂ ಅಪ್ಪ- ಮಗಳ ಚಿತ್ರಣವೇ. ಆದರೆ ಅಪ್ಪ- […]
Date : 10-06-2017 | no Comment. | Read More
ಬಂದೂಕಿನ ನಳಿಕೆಗಳು ಶಬ್ಧ ಮಾಡಿದರೆ 70 ಲಕ್ಷ ಸೈನಿಕರೇಕೆ, ಏಳೇ ನಿಮಿಷದಲ್ಲಿ ನಿಶ್ಶಬ್ದವಾಗಿಬಿಡುತ್ತದೆ ಕಾಶ್ಶೀರ! ನೂರೈವತ್ತು ವರ್ಷಗಳ ಕಾಲ ಬ್ರಿಟಿಷರ ನಿಯಂತ್ರಣದಲ್ಲಿದ್ದ ಹಾಂಕಾಂಗ್ 1997ರಲ್ಲಿ ಚೀನಾದ ಪಾಲಾಯಿತು. 442 ವರ್ಷಗಳ ಕಾಲ ಮಕಾವು ಅನ್ನು ಆಳಿದ ಪೋರ್ಚುಗೀಸರು 1999ರಲ್ಲಿ ತುಟಿಪಿಟಿಕ್ ಅನ್ನದೆ ಚೀನಾದ ವಶಕ್ಕೆ ನೀಡಿ ಕಾಲ್ಕಿತ್ತರು. ಇನ್ನು ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದರೂ ತೈವಾನ್ನಲ್ಲಿ ಇಂದಿಗೂ ನಡೆಯುವುದು ಚೀನಾದ್ದೇ ದರ್ಬಾರು. ಕಳೆದ 2 ಸಾವಿರ ವರ್ಷಗಳಲ್ಲಿ ಚೀನಾವನ್ನು ಆಳಿದ ಹಾನ್, ತಾಂಗ್, ಸಾಂಗ್, ಮಿಂಗ್, ಯಾನ್ ಮತ್ತು ಕಿಂಗ್ […]
Date : 03-06-2017 | no Comment. | Read More
ಧರಣಿ ಮಂಡಲ ಮಧ್ಯದೊಳಗೆ ……ಗೋವಿನ ಹಾಡು ಕೇಳಿ ಬೆಳೆದವರು ನಾವೇನಾ?! ಹೀಗೊಂದು ಸ್ವಗತದಿಂದಲೇ ಮಾತು ಆರಂಭಿಸುವುದಾದರೆ…. ನಮ್ ಅಪ್ಪ ಯಾವ ಗಳಿಗೆಯಲ್ಲಿ ‘ಗೋಪಾಲ’ ಅಂತ ಹೆಸರಿಟ್ಟರೋ ದನಗಳನ್ನು ನೋಡಿಕೊಳ್ಳುವುದೇ ನನ್ನ ಜೀವನವಾಯಿತು ಎಂದು ಅವರಿವರ ಬಳಿ ತನ್ನನ್ನು ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದರು ನನ್ನ ಅಪ್ಪಯ್ಯ. ಒಮ್ಮೊಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಂಡಾಗ ಅವರು ಹೆಂಡತಿ-ಮಕ್ಕಳಿಗಿಂತ ತಮ್ಮ ಪುಸ್ತಕಗಳು ಮತ್ತು ನಮ್ಮ ದನಕರುಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದರೇನೋ ಎಂದನಿಸುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕರು ಹುಟ್ಟಿದಾಗ ಮೈಬಣ್ಣ ಕಪ್ಪಾಗಿದ್ದರೆ ಕರಿಯಾ, ಬಿಳಿಯಾಗಿದ್ದರೆ ಬಿಳಿಯ, ಕೆಂಪಿದ್ದರೆ […]
Date : 27-05-2017 | no Comment. | Read More
ಸಾವರ್ಕರ್ ಎಂಬ ಸ್ಪೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ! ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. ‘ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ ‘ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ […]