Date : 11-08-2008 | 4 Comments. | Read More
ಆಕೆ ಇಂದು ನಮ್ಮೊಂದಿಗಿಲ್ಲ. ಅಕಾಲಿಕವಾಗಿ ಕೊಲೆಯಾಗಿ ೧೬ ವರ್ಷಗಳೇ ಕಳೆದವು. ಅಂದು ಆಕೆ ಅಸಹಜವಾಗಿ ಹೆಣವಾಗಿ ಬಿದ್ದಾಗ ೧೭ ದಿನಗಳ ಕಾಲ ತನಿಖೆ ನಡೆದಿತ್ತು. ಕೊನೆಗೆ ಸತ್ಯವನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲಾಯಿತು. ಆದರೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದನ್ನು ಬೆಳಕಿಗೆ ತರುವ ಬದಲು ಸತ್ಯವನ್ನೇ ಹೊಸಕಿ ಹಾಕಿದ ಸಿಬಿಐ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯಿತು. ಆ ತಪ್ಪಿಗಾಗಿ ಕಟಕಟೆಗೆ ತಂದು ನಿಲ್ಲಿಸುವ ಕೇಂದ್ರ ತನಿಖಾ ದಳವೇ(ಸಿಬಿಐ), ಬರುವ ಆಗಸ್ಟ್ ೧೨ರಂದು ಕೇರಳ ಹೈಕೋರ್ಟ್ ಮುಂದೆ ಕಟಕಟೆಯಲ್ಲಿ […]
Date : 04-08-2008 | 6 Comments. | Read More
“ನನಗೆ ಅರ್ಥವಾಗುತ್ತದೆ, ಮುಷರ್ರಫ್ ಅವರಿಗೆ ಅವರದ್ದೇ ಆದ ಸಮಸ್ಯೆ, ಸವಾಲುಗಳಿವೆ. ಆದರೆ ನಾನೊಂದು ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಮೂರು ಸಾವಿರ ಅಮೆರಿಕನ್ನರನ್ನು ಕೊಲೆಗೈದ ಭಯೋತ್ಪಾದಕರು ಇಂದಿಗೂ ಪಾಕ್ ಹಾಗೂ ಅಫ್ಘಾನಿಸ್ತಾನದ ಪರ್ವತ ಶ್ರೇಣಿಗಳಲ್ಲಿ ಅಡಗಿ ಕುಳಿತಿದ್ದಾರೆ. ಒಸಾಮಾ ಬಿನ್ ಲಾಡೆನ್ ಹಾಗೂ ಆಯ್ಮನ್ ಅಲ್ ಝವಾಹಿರಿ ಸೇರಿದಂತೆ ಪ್ರಮುಖ ಅಲ್ ಖಾಯಿದಾ ನಾಯಕರು ೨೦೦೫ರಲ್ಲಿ ಪಾಕಿಸ್ತಾನದ ಗಡಿಯೊಳಗಿನ ಪ್ರದೇಶವೊಂದರಲ್ಲಿ ಸಭೆ ಸೇರಿದ್ದರು. ಈ ಬಗ್ಗೆ ಅಮೆರಿಕಕ್ಕೆ ಸ್ಪಷ್ಟ ಮಾಹಿತಿಯೂ ದೊರೆತಿತ್ತು. ಆದರೆ ಅವರ ಮೇಲೆ ದಾಳಿ ಮಾಡಿದರೆ […]
Date : 19-07-2008 | 6 Comments. | Read More
ಅದೇನು ಇದ್ದಕ್ಕಿದ್ದಂತೆಯೇ ಬೆಳಕಿಗೆ ಬಂದ ವಿಷಯವೂ ಅಲ್ಲ, ಕದ್ದುಮುಚ್ಚಿ ಕಬಳಿಸಿದ ಭೂಮಿಯೂ ಅಲ್ಲ. ಕಳೆದ ಮೂರು ವರ್ಷಗಳಿಂದಲೂ ವಿಷಯ ನನೆಗುದಿಗೆ ಬಿದ್ದಿತ್ತು. ಬಲ್ತಾಲ್ ಬಳಿ ಭೂಮಿ ಕೊಡಿ ಎಂದು ‘ಶ್ರೀ ಅಮರನಾಥ್ ಶ್ರೈನ್ ಬೋರ್ಡ್’ ೨೦೦೫ರಲ್ಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಅದಕ್ಕೂ ಕಾರಣವಿದೆ. ಅಮರನಾಥ ಗುಹೆ ಇರುವುದು ಶ್ರೀನಗರದಿಂದ ೧೪೧ ಕಿ.ಮೀ. ದೂರದಲ್ಲಿ, ೧೨,೭೬೦ ಅಡಿ ಎತ್ತರದಲ್ಲಿ. ಪ್ರತಿವರ್ಷ ಮೇ ಬಂತೆಂದರೆ ಅಲ್ಲಿನ ಗುಹೆಯಲ್ಲಿ ಹಿಮದ ಶಿವಲಿಂಗ ಉದ್ಭವವಾಗ ತೊಡಗುತ್ತದೆ ಹಾಗೂ ಆಗಸ್ಟ್ನಲ್ಲಿ ಕರಗುತ್ತದೆ. ಇಂತಹ […]
Date : 12-07-2008 | 13 Comments. | Read More
“ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿಯೆಂದರೆ ಮನಮೋಹನ್ ಸಿಂಗ್” ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಆಡ್ವಾಣಿಯವರು ಹೇಳುತ್ತಲೇ ಬಂದಿದ್ದಾರೆ. ಅಷ್ಟು ಸಾಲದೆಂಬಂತೆ ಈಗ ಹೊಸ ರಾಗ ಎಳೆದಿದ್ದಾರೆ. ಅಮೆರಿಕದೊಂದಿಗಿನ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿರುವ ಆಡ್ವಾಣಿಯವರು, ‘ಪ್ರಧಾನಿ ಮನಮೋಹನ್ ಸಿಂಗ್ ದೇಶವನ್ನು ದಾರಿತಪ್ಪಿಸಿದ್ದಾರೆ’ ಎಂದು ಹೊಸ ಆರೋಪ ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ನಿಜಕ್ಕೂ ದೇಶವನ್ನು ದಾರಿತಪ್ಪಿಸಿದ್ದಾರೆಯೇ? ಒಂದು ವೇಳೆ ಆಡ್ವಾಣಿಯವರು ಹೇಳಿದಂತೆ ಅವರು […]
Date : 05-07-2008 | 21 Comments. | Read More
ಆ ಘಟನೆ ನಡೆದು ೧೨೦೦ ವರ್ಷಗಳೇ ಕಳೆದು ಹೋದವು. ಅದು ಎಂಟನೆಯ ಶತಮಾನ. ಮುಸಲ್ಮಾನರು ಖಡ್ಗ ಹಿಡಿದು ಮತಪ್ರಚಾರಕ್ಕೆ ಹೊರಟಿದ್ದರು. ಅವರ ಧಾರ್ಮಿಕ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲದಂತಾ ಯಿತು. ಹಾಗಂತ ಎದುರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಪಾರ್ಸಿಗಳು ದೇಶವನ್ನೇ ಬಿಟ್ಟು ಹೊರಟರು. ಹಾಗೆ ತಮ್ಮ ಮೂಲಸ್ಥಾನವಾದ ಪರ್ಷಿಯಾವನ್ನು(ಈಗಿನ ಇರಾನ್) ಬಿಟ್ಟು ಹೊರಟ ಒಂದಿಷ್ಟು ಪಾರ್ಸಿಗಳು ಬಂದು ತಲುಪಿದ್ದು ನಮ್ಮ ಗುಜರಾತ್ ಬಳಿ ಇರುವ ‘ದಿಯು’ ದ್ವೀಪವನ್ನು. ಅಲ್ಲಿಂದ ಸಂಜನ್ಗೆ ಆಗಮಿಸಿದರು. ಅದು ಗುಜರಾತ್ನ ರಾಜನಾಗಿದ್ದ ಜಾಧವ್ ರಾಣಾನ […]