Date : 26-10-2009 | 13 Comments. | Read More
“ಇನ್ಸ್ಪೆಕ್ಟರ್ ಹಾಗೂ ಕಿರಿಯ ದರ್ಜೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರಕಾರ ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ವರ್ಗಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ಮೂಲಕ ಹಿರಿಯ ಅಧಿಕಾರಿಗಳೇ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಾರೆ”. ಹಾಗಂತ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.
Date : 20-10-2009 | 41 Comments. | Read More
ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! “ಲವ್ ಜಿಹಾದ್” ಅಥವಾ “ರೋಮಿಯೋ ಜಿಹಾದ್” ಎಂಬ ಕಾರ್ಯಸೂಚಿ ನಿಜಕ್ಕೂ ನಡೆ ಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? “ಲವ್ […]
Date : 13-10-2009 | 20 Comments. | Read More
ಆ ಕಾಲದಲ್ಲಿ ಬ್ರಿಟಿಷರ ಬಗ್ಗೆ ದೇವತಾಭಾವನೆ ಹೊಂದಿದ್ದ ಭಾರತೀಯರೂ ಇದ್ದರು! ಡಾಕ್ಟರ್ ಸಾಹಿಬ್ ದಿಟ್ಟಾ ಅಂಥವರಲ್ಲಿ ಒಬ್ಬ ರಾಗಿದ್ದರು. ಅವರು ಪಂಜಾಬ್ನ ಅಮೃತಸರದ ಪ್ರಸಿದ್ಧ ವೈದ್ಯರು. ವೈದ್ಯರ ತೀವ್ರ ಕೊರತೆ ಎದುರಿಸುತ್ತಿದ್ದ ಕಾಲವದು. ಸಹಜವಾಗಿಯೇ ಸಾಹಿಬ್ ದಿಟ್ಟಾ ಕೈತುಂಬಾ ಸಂಪಾದನೆ ಮಾಡುತ್ತಿದ್ದರು. ಅವರಿಗೆ ಬ್ರಿಟಿಷರ ಬಗ್ಗೆ ಎಲ್ಲಿಲ್ಲದ ಗೌರವ. ಬಹುಶಃ ದೇವರಷ್ಟೇ ಬ್ರಿಟಿಷರ ಬಗ್ಗೆಯೂ ಭಯ-ಭಕ್ತಿ ಇಟ್ಟುಕೊಂಡಿದ್ದರು. ಅಂತಹ ವ್ಯಕ್ತಿಯ ಮಗನೇ ಮದನ್ಲಾಲ್ ಧಿಂಗ್ರಾ. ಆತ ಹುಟ್ಟಿದ್ದು 1883ರಲ್ಲಿ. ಧಿಂಗ್ರಾಗೊಬ್ಬ ಅಣ್ಣನಿದ್ದ. ಅಪ್ಪನ ಹಾಗೇ ಆತನಿಗೂ ಬ್ರಿಟಿಷರ […]
Date : 04-10-2009 | 20 Comments. | Read More
1.1948ರಲ್ಲಿ ಭಾರತ-ಪಾಕಿಸ್ತಾನ ಯುದ್ಧ: ನಾವು ಪಾಕಿ ಸ್ತಾನವನ್ನು ಹಿಮ್ಮೆಟ್ಟಿಸಿದರೂ ಕಾಶ್ಮೀರದ ಶೇ.೩೩ರಷ್ಟು ಭೂಭಾಗ ಕೈತಪ್ಪಿ ಹೋಯಿತು. 2. 1950ರಲ್ಲಿ ಭಾರತ(ನೆಹರು) ಕೈಕಟ್ಟಿ ಕುಳಿತುಕೊಂಡ ಕಾರಣ ಸ್ವತಂತ್ರ ರಾಷ್ಟ್ರವಾಗಿದ್ದ ಟಿಬೆಟ್ ಚೀನಾದ ಕೈವಶವಾಯಿತು, ನೆರೆಯ ರಾಷ್ಟ್ರದ ಸ್ಥಾನಕ್ಕೆ ಟಿಬೆಟ್ ಬದಲು ಚೀನಾ ಬಂದು ಕುಳಿತುಕೊಂಡಿತು. 3. 1962ರಲ್ಲಿ ಭಾರತ-ಚೀನಾ ಯುದ್ಧ: ವಾಯುಸೇನೆಯನ್ನು ಬಳಸಲು ನೆಹರು ನಕಾರ. ಹೀನಾಯ ಸೋಲು, ಲದ್ದಾಕ್ ಮತ್ತು ಈಶಾನ್ಯ ಭಾಗದಲ್ಲಿ ಚೀನಿ ಅತಿಕ್ರಮಣ.
Date : 29-09-2009 | 14 Comments. | Read More
ಇತಿಹಾಸವನ್ನು Dispassionate ಅಥವಾ ನಿರ್ಭಾ ವುಕರಾಗಿಯೇ ಓದಬೇಕಾಗುತ್ತದೆ. ಹಾಗೆ ಓದಿದರೂ ಪುಸ್ತಕ ಕೆಳಗಿಟ್ಟ ನಂತರ ಮನಸ್ಸು ಕೆಲವೊಮ್ಮೆ ಉದ್ವೇಗಕ್ಕೊಳಗಾಗುತ್ತದೆ. ನಮ್ಮ ನಾಯಕರು ಏಕೆ ಆ ತಪ್ಪು ಗಳನ್ನೆಸಗಿದರು? ಅವರು ಎಸಗಿದ ತಪ್ಪಿನಿಂದಾಗಿಯೇ ಅಲ್ಲವೆ ನಾವೀಗ ಕಷ್ಟ ಅನುಭವಿಸುತ್ತಿರುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?” ಪುಸ್ತಕವನ್ನು ಬರೆದು, ಬಿಡುಗಡೆ ಮಾಡಿಯಾದ ನಂತರವೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತಾ ಇವೆ. ಪಾಕ್ಸ್ತಾನ್! ಪಂಜಾಬ್, ಅಫ್ಘಾನಿಸ್ತಾನ್, ಕಾಶ್ಮೀರ, ಸಿಂಧ್ ಹಾಗೂ ಬಲೂಚಿಸ್ತಾನ್ […]
Date : 19-09-2009 | 8 Comments. | Read More
“ನೂರಾರು ಭಾರತೀಯ ವಿeನಿಗಳು, ನೀತಿ ನಿರೂಪಕರು, ಕೋಟ್ಯಂತರ ರೈತರ ಹೆಸರಿನಲ್ಲಿ ನಾನು ಈ ಪುರಸ್ಕಾರವನ್ನು ಸ್ವೀಕರಿಸುತ್ತೇನೆ. ಅವರೆಲ್ಲರ ಸಹಾಯ, ಸಹಕಾರವಿಲ್ಲದಿದ್ದರೆ ‘ಹಸಿರು ಕ್ರಾಂತಿ’ ಅಸಾಧ್ಯದ ಮಾತಾಗುತ್ತಿತ್ತು. ಅದರಲ್ಲೂ ನನ್ನ ಪ್ರೀತಿಯ ಭಾರತದಿಂದ ಈ ಗೌರವ ಪಡೆದುಕೊಳ್ಳಲು ನಾನು ತುಂಬಾ ಆಭಾರಿಯಾಗಿದ್ದೇನೆ”. 2006ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳ ಪರವಾಗಿ ಮೆಕ್ಸಿಕೋದಲ್ಲಿ ನಮ್ಮ ರಾಯಭಾರಿ ಆರ್.ಕೆ. ಭಾಟಿಯಾ ನೀಡುವಾಗ ಡಾ. ನಾರ್ಮನ್ ಅರ್ನೆಸ್ಟ್ ಬೋರ್ಲಾಗ್ ಆಡಿದ ಮಾತುಗಳಿವು! ಡಾ. ಬೋರ್ಲಾಗ್ ಭಾರತಕ್ಕೆ […]
Date : 13-09-2009 | 12 Comments. | Read More
ಮೈ ಬ್ರದರ್, ದಿ ಮ್ಯಾನ್ ಹೂ ಡಿವೈಡೆಡ್ ಇಂಡಿಯಾ, 100 ಗ್ರೇಟ್ ನೇಮ್ಸ್ ಫ್ರಮ್ ಇಂಡಿಯಾಸ್ ಪಾಸ್ಟ್, ಇಂಡಿಯಾ ವಿನ್ಸ್ ಫ್ರೀಡಂ, ಫ್ರೀಡಂ ಅಟ್ ಮಿಡ್ನೈಟ್, ದಿ ಟ್ರಯಲ್ ಆಫ್ ಭಗತ್ ಸಿಂಗ್, ದಿ ಐಡಿಯಾ ಆಫ್ ಪಾಕಿಸ್ತಾನ ಆಂಡ್ ಇಕ್ಬಾಲ್, ಸ್ಟಡೀಸ್ ಇನ್ ಇಸ್ಲಾಮಿಕ್ ಕಲ್ಚರ್ ಇನ್ ದಿ ಇಂಡಿಯನ್ ಎನ್ವಿರಾನ್ಮೆಂಟ್, ವೈ ಐ ಸಪೋರ್ಟೆಡ್ ದಿ ಎಮರ್ಜೆನ್ಸಿ, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಷನ್, ಇಂಡಿಯನ್ ಕಾಂಟ್ರೊವರ್ಸೀಸ್, ಫ್ಯಾಕ್ಟ್ಸ್ ಆರ್ ಫ್ಯಾಕ್ಟ್ಸ್; ದಿ ಅನ್ […]
Date : 07-09-2009 | 17 Comments. | Read More
ಡಾ. ಅಬ್ದುಲ್ ಕಲಾಂ. ಅವರ ಹೆಸರೇ ನಮಗೆ ಒಂದು ಪ್ರೇರಕಶಕ್ತಿ ಯಾಗಿ ಬಿಟ್ಟಿದೆ. ಹಾಲಿ ರಾಷ್ಟ್ರಪತಿಗಿಂತ ಈ ನಮ್ಮ ಮಾಜಿ ರಾಷ್ಟ್ರಪತಿಯ ಬಗ್ಗೆಯೇ ನಮಗೆ ಹೆಚ್ಚು ಹೆಮ್ಮೆ ಯೆನಿಸುತ್ತದೆ. ಕಲಾಂ ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ ರಾಷ್ಟ್ರಪತಿ ಹಾಗೂ ಮಾಜಿ ರಾಷ್ಟ್ರಪತಿ! ಅಧಿಕಾರಾವಧಿ ಮುಗಿದ ನಂತರವೂ ಹಾಲಿ ರಾಷ್ಟ್ರಪತಿಗಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಕಲಾಂ ಪಾಲ್ಗೊಳ್ಳುತ್ತಾರೆ. ಒಮ್ಮೆ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ರಾಮಕೃಷ್ಣ ಮಠದ ಸ್ವಾಮೀಜಿ, “ಕಲಾಂರನ್ನು ಕಂಡಾಗ ಮಕ್ಕಳು ಅದ್ಯಾವ ಪರಿ ಚೀರಾಡುತ್ತವೆ. ಅವುಗಳ ಮುಖದಲ್ಲಿ […]
Date : 24-08-2009 | 25 Comments. | Read More
“We don’t want to have Talibans in the country. Tomorrow a girl student may come and say that she wants to wear the burqa. Can we allow it?” ಮಧ್ಯಪ್ರದೇಶದ ಮೊಹಮದ್ ಸಲೀಂ ಎಂಬ ವಿದ್ಯಾರ್ಥಿ, “ಗಡ್ಡ ಬೋಳಿಸುವುದು ಇಸ್ಲಾಮ್ಗೆ ವಿರುದ್ಧ. ಗಡ್ಡ ಬೆಳೆಸಿಕೊಂಡು ಶಾಲೆಗೆ ಹೋಗಲು ಅನುಮತಿ ನೀಡಬೇಕು” ಎಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು 2009, ಮಾರ್ಚ್ 30ರಂದು “Dismissed” ಎಂಬ ಒಂದೇ ಪದದಲ್ಲಿ […]
Date : 15-08-2009 | 7 Comments. | Read More
ಕ್ಷಣವೊಂದರಲ್ಲಿ ನಡೆದುಹೋಗುವ ಅಚಾತುರ್ಯ, ಅವಘಡ, ಅಪಘಾತ ಸುಂದರ ಬದುಕನ್ನು ಹೇಗೆ ನರಕಸದೃಶ ಮಾಡಬಲ್ಲದು, ಅತಂತ್ರ ಸ್ಥಿತಿಗೆ ತಳ್ಳಬಲ್ಲದು ಎಂಬುದನ್ನು ಕಳೆದ ವಾರ ಕಣ್ಣಾರೆ ನೋಡಬೇಕಾಗಿ ಬಂತು. ನಾಲ್ಕು ದಿನಗಳ ಕಾಲ ಬೆಳಗ್ಗೆ 8 ರಿಂದ ರಾತ್ರಿ 9.30ವರೆಗೂ ಮಂಗಳೂರಿನ ಪ್ರಸಿದ್ಧ ‘ತೇಜಸ್ವಿನಿ ಆಸ್ಪತ್ರೆ’ಯ ತೀವ್ರ ನಿಗಾ ಘಟಕದ(ಐಸಿಯು) ಮುಂದೆ ಕುಳಿತಿದ್ದಾಗ ಎಲ್ಲ ಥರದ ದುಃಖ, ಸಂಕಷ್ಟಗಳು ಕಣ್ಣಮುಂದೆಯೇ ಚಲನರಹಿತವಾಗಿ ಮಲಗಿದ್ದವು. ಒಂದು ಹೆರಿಗೆ ಆಸ್ಪತ್ರೆಗೆ ಹೋದರೆ ಅದಾಗ ತಾನೇ ಜನಿಸಿದ ಮಗುವಿನ ಮೊದಲ ಧ್ವನಿಯನ್ನು ಕೇಳುವ ಭಾಗ್ಯ […]