Date : 13-08-2009 | 14 Comments. | Read More
ಕ್ಷಮಿಸಿ… ಕಾರಣಾಂತರಗಳಿಂದ ಈ ವಾರದ ಲೇಖನವನ್ನು ಬರೆಯಲು ಸಾಧ್ಯವಾಗುತ್ತಿಲ್ಲ. ಇತ್ತ ಇಡೀ ದೇಶವನ್ನೇ ಭಾವನಾತ್ಮಕವಾಗಿ ಒಂದುಮಾಡಿದ್ದ ಕಾರ್ಗಿಲ್ ಯುದ್ಧ ವಿಜಯಕ್ಕೆ ಹತ್ತು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕಿರಿಯ ಪರಮವೀರ ಚಕ್ರ ಪುರಸ್ಕೃತ ಕಾರ್ಗಿಲ್ ವೀರ ವಿಕ್ರಮ್ ಬಾತ್ರಾ ಅವರ ಬಗ್ಗೆ ನಾನು ಐದು ವರ್ಷಗಳ ಹಿಂದೆ ಬರೆದಿದ್ದ ಲೇಖನವನ್ನು ಮತ್ತೊಮ್ಮೆ ಓದಿಕೊಳ್ಳಿ. ವ್ಯಾಪಾರಿ ಹಡಗೊಂದರಲ್ಲಿ ಕೆಲಸ ದೊರೆತಿತ್ತು. ಯೂನಿ ಫಾರ್ಮ್ ಕೂಡ ಸಿದ್ಧಗೊಂಡಿತ್ತು. ಟಿಕೆಟ್ ಬುಕ್ ಆಗಿತ್ತು. ಇನ್ನೇನು ಹಾಂಕಾಂಗ್ಗೆ ಹಾರಬೇಕು. ಅದೇಕೋ, ವಿಕ್ರಮ್ […]
Date : 02-08-2009 | 14 Comments. | Read More
ಕನ್ಸರ್ವೇಟಿವ್ ಪಾರ್ಟಿ ಲೇಬರ್ ಪಾರ್ಟಿ ಬ್ರಿಟನ್ನಲ್ಲಿ ಮುಖ್ಯವಾಗಿ ಇರುವುದೇ ಈ ಎರಡು ಪಕ್ಷಗಳು. ಒಮ್ಮೆ ಲೇಬರ್, ಮತ್ತೊಮ್ಮೆ ಕನ್ಸರ್ವೇಟಿವ್…ಒಂಥರಾ ಸರದಿಯ ಪ್ರಕಾರ ಅಧಿಕಾರಕ್ಕೇರುತ್ತಿರುತ್ತವೆ. ಸಾರ್ವತ್ರಿಕ ಚುನಾ ವಣೆಯ ನಂತರ ಲೇಬರ್ ಪಕ್ಷ ಅಧಿಕಾರಕ್ಕೆ ಬಂದು ಅದರ ನೇತಾರ ಪ್ರಧಾನಿಯಾದರೆ ಮುಖ್ಯ ಪ್ರತಿಪಕ್ಷವನ್ನು(ವಿರೋಧ ಪಕ್ಷ) ಅಲ್ಲಿನ ಪತ್ರಿಕೆಗಳು “Our Party” (ನಮ್ಮ ಪಕ್ಷ) ಅಂತ ಸಂಬೋಧಿಸುತ್ತವೆ. ಒಂದು ವೇಳೆ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದರೆ ಲೇಬರ್ ಪಕ್ಷ “Our Party”ಯಾಗುತ್ತದೆ.
Date : 27-07-2009 | 18 Comments. | Read More
ಹಾನ್ಸ್ ಲೂಥರ್ ಅಂದರೆ ಬಹುಶಃ ಯಾರಿಗೂ ಅರ್ಥವಾಗುವುದಿಲ್ಲ. ಮಾರ್ಟಿನ್ ಲೂಥರ್ ಅಂದರೆ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಎಂದು ತಪ್ಪಾಗಿ ಗ್ರಹಿಸುವವರೇ ಹೆಚ್ಚು. ಅಣಕವೆಂದರೆ ಕಿಂಗ್ಗೆ ಆ ಹೆಸರು ಬಂದಿದ್ದೇ ಜರ್ಮನಿಯ ಮಾರ್ಟಿನ್ ಲೂಥರ್ ಅವರಿಂದ. ಮಾರ್ಟಿನ್ ಲೂಥರ್ ಸಾಮಾನ್ಯ ವ್ಯಕ್ತಿಯಲ್ಲ. ಕ್ರೈಸ್ತಮತಕ್ಕೆ ಒಂದು ಮಹತ್ತರ ತಿರುವು ನೀಡಿದ ಧರ್ಮಸುಧಾರಕ. ಮಾರ್ಟಿನ್ ಲೂಥರ್ ಅವರ ಮೂಲ ಹೆಸರು ಹಾನ್ಸ್ ಲುದರ್, ತದನಂತರ ಲೂಥರ್ ಆಯಿತು. ಅವರು ಹುಟ್ಟಿದ್ದು 1483, ನವೆಂಬರ್ 10ರಂದು, ಜರ್ಮನಿಯಲ್ಲಿ. ಆಗ ಜರ್ಮನಿ […]
Date : 22-07-2009 | 9 Comments. | Read More
ಟಿವಿಯಿಂದ ಎಲ್ಲಕ್ಕಿಂತ ಮಿಗಿಲಾದ ಒಂದು ಲಾಭವಿದೆ! ಒಂದು ವೇಳೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಿದರೆ ಜನ ನಡುರಾತ್ರಿಯವರೆಗೂ ಟಿವಿ ನೋಡಿ, ಮಲಗಿಕೊಂಡು ಬಿಡುತ್ತಾರೆ. ಮಕ್ಕಳನ್ನು ಮಾಡಲು ಅವರಿಗೆ ಸಮಯಾವಕಾಶವೇ ಸಿಗುವುದಿಲ್ಲ!! ಎಲ್ಲಿ ವಿದ್ಯುತ್ ಇಲ್ಲವೋ ಅಲ್ಲಿ ಮಕ್ಕಳು ಹುಟ್ಟಿಸುವುದನ್ನು ಬಿಟ್ಟರೆ ಬೇರೇನೂ ಕೆಲಸವಿರುವುದಿಲ್ಲ!!! ಇದನ್ನು ಲಘುವಾಗಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. I am serious. ಟಿವಿ ಬಹುದೊಡ್ಡ ಪರಿಣಾಮ ಬೀರಬಲ್ಲದು. ಜನಸಂಖ್ಯಾಸ್ಫೋಟ ಸಮಸ್ಯೆಯನ್ನು ನಿವಾರಿಸಲು ಇದೊಂದು ಪರಿಣಾಮಕಾರಿ ಮಾರ್ಗ. ಜನಸಂಖ್ಯೆ ಹೆಚ್ಚಳ ಸಮಸ್ಯೆಯನ್ನು ಟಿವಿ […]
Date : 12-07-2009 | 9 Comments. | Read More
ಅವರು ಹೇಳುತ್ತಿರುವುದೆಲ್ಲ ಕೇಳಲು ಚೆನ್ನಾಗಿಯೇ ಇದೆ. ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರು ಜೂನ್ 25ರಂದು “ಶತದಿನಗಳ ಯೋಜನೆ” ಯನ್ನು ಘೋಷಣೆ ಮಾಡುತ್ತಾ ಆಡಿರುವ ಮಾತುಗಳು, ಮುಂದಿಟ್ಟಿರುವ ಹೊಸ Plan ಖಂಡಿತ ಕುತೂಹಲಕಾರಿಯಾಗಿದೆ. “ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೊಳಗಾಗು ತ್ತಾರೆ. ಮಕ್ಕಳ ಜತೆಗೆ ತಂದೆ-ತಾಯಂದಿರ ಮೇಲೂ ಅನಗತ್ಯ ಒತ್ತಡವುಂಟಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ. ವಿದ್ಯಾರ್ಥಿಗಳ ಮೇಲಿನ ಹೊರೆ, ಒತ್ತಡವನ್ನು ಕಡಿಮೆ ಮಾಡಲೇಬೇಕು. ಆದ ಕಾರಣ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ […]
Date : 05-07-2009 | 32 Comments. | Read More
ಅಯ್ಯಯ್ಯೋ ಪರಿಸ್ಥಿತಿ ಎಲ್ಲಿಗೆ ಬಂತಪ್ಪಾ, ನಮ್ಮ ಜನರಿಗೆ ಏನಾಗುತ್ತಿದೆಯಪ್ಪಾ ಎಂದು ತಲೆಕೆಡಿಸಿಕೊಳ್ಳಬೇಡಿ. ಇದೂ ಕೂಡ ಒಂದು Fad. Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad ಆಗಿತ್ತು. ದಿಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್ಯು), ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕ್ಲಾಸ್ರೂಮ್ಗಳಲ್ಲಿ, ಕಾರಿಡಾರ್ನಲ್ಲಿ ನಿಂತು ಎಡಪಂಥೀಯ ವಾದದ ಬಗ್ಗೆ ಮಾತನಾಡುವುದು, ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ ‘Animal Rights’ ಎಂಬ ಹೊಸ ಫ್ಯಾಡ್ ಬಂತು. […]
Date : 30-06-2009 | 23 Comments. | Read More
Like A Comet Blazing ‘Cross The Evening Sky Gone Too Soon Like A Rainbow Fading In The Twinkling Of An Eye Gone Too Soon Like A Sunset Dying With The Rising Of The Moon Gone Too Soon…
Date : 20-06-2009 | 50 Comments. | Read More
ಆ… ಮಗ, ಈ…ಮಗ, ಹ…ಮಗ, ರ…ಮಗ… ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ.
Date : 14-06-2009 | 18 Comments. | Read More
ಈ Federphiles, Fed freaks ಅಥವಾ ಫೆಡರರ್ ಅವರ ಹುಚ್ಚು ಅಭಿಮಾನಿಗಳಿದ್ದಾರಲ್ಲಾ ಇವರು, ಕಳೆದ ಭಾನುವಾರದಿಂದ ತಮ್ಮ ಆರಾಧ್ಯ ದೈವವೇ “Best Ever’, “Best Ever’ ಎಂದು ಹಿಂದೆಂದಿಗಿಂತಲೂ ಜೋರಾಗಿ ಬೊಬ್ಬೆಹಾಕಲಾ ರಂಭಿಸಿದ್ದಾರೆ. ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ನೇ ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂಬ ವಾದವನ್ನು ಈ ಹಿಂದೆಯೇ ಆರಂಭಿಸಿದ್ದರು. ಆದರೆ ಫ್ರೆಂಚ್ ಓಪನ್ ಅವರ ವಾದಕ್ಕೆ ಅಡ್ಡವಾಗಿ, ಅಡ್ಡಿಯಾಗಿ ನಿಂತಿತ್ತು. ಸ್ಪೇನ್ನ Clay King (ಮಣ್ಣಿನ ಮಗ) ರಾಫೆಲ್ ನಡಾಲ್ ಪೆಡಂಭೂತವಾಗಿ ಇವರನ್ನು ಕಾಡುತ್ತಿದ್ದ. […]
Date : 01-06-2009 | 17 Comments. | Read More
ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಡೆವಿಡ್ ಬೆಕಮ್, ಹಾಲಿವುಡ್ ತಾರೆಗಳಾದ ಸ್ಕಾರ್ಲೆಟ್ ಜೊಹಾನ್ಸನ್. ಟೋನಿ ರಾಬಿನ್ಸನ್, ಜೋಆನ್ನಾ ಲುಮ್ಲೆ ಅಂತಹ ಖ್ಯಾತನಾಮರೇ ಆಕೆಯ ಅಭಿಮಾನಿಗಳಾಗಿದ್ದಾರೆ, ಆಕೆಯ ಪರವಾಗಿ ಆಗಾಗ್ಗೆ ಧ್ವನಿಯೆತ್ತುತ್ತಾರೆ. ಆಕೆಯನ್ನು ಭೇಟಿ ಮಾಡಲು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯೇ ಅಣಿಯಾಗುತ್ತಿದ್ದಾರೆ. ಹಾಗಿರುವಾಗ ಒಬ್ಬ ಭಾವುಕ ಅಭಿಮಾನಿ ಜೀವದ ಹಂಗುತೊರೆದು ತನ್ನ ಆರಾಧ್ಯ ದೈವವನ್ನು ಕಾಣಲು ಬಂದಿದ್ದರಲ್ಲಿ ಯಾವ ಆಶ್ಚರ್ಯವಿದೆ? ಮೊನ್ನೆ ಮೇ 3ರಂದು ನಡೆದಿದ್ದು ಇಷ್ಟೇ.