Date : 20-06-2009, Saturday | 50 Comments
ಆ… ಮಗ, ಈ…ಮಗ, ಹ…ಮಗ, ರ…ಮಗ… ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ.
ಈ ಅಮ್ಮ-ಮಗನ ಸಂಬಂಧವೇ ಅಂಥದ್ದು.
ಅದಕ್ಕೇ ‘Mama’s Boy’ ಎಂಬ ಮಾತಿದೆಯೇ ಹೊರತು, ಯಾರೂ ‘Papa’s son’ ಅಂತ ಯಾರನ್ನೂ ಕರೆಯುವುದಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ಅಪ್ಪನೂ, ಸಂತಾನ ಮುಂದುವರಿಸಿದುಕೊಂಡು ಹೋಗಲು ಗಂಡು ಮಗುವೇ ಬೇಕೆಂದು ಯೋಚಿಸಿದರೂ, ದೇವರಲ್ಲಿ ಮೊರೆಯಿಟ್ಟು, ಹರಕೆ ಹೊತ್ತು ಗಂಡು ಮಗುವನ್ನು ಪಡೆದುಕೊಂಡರೂ ಮಗ ಯಾವತ್ತೂ ಅಮ್ಮನ ಸ್ವತ್ತೇ. “ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯದಿರು” ಎನ್ನುತ್ತಾರೆಯೇ ಹೊರತು, “ತುತ್ತು ಕೊಟ್ಟವನನ್ನು” ಎನ್ನುವುದಿಲ್ಲ! ಅಮ್ಮನನ್ನೇ ಕೀಳಾಗಿ ಕಾಣುವವರು ಖಂಡಿತ ಇದ್ದಾರೆ. ಸಾಮಾನ್ಯವಾಗಿ ಅಮ್ಮನ ವಿಷಯದಲ್ಲಿ ಗಂಡು ಮಕ್ಕಳ ಮನದಲ್ಲಿ ಯಾವತ್ತೂ ಮೃದು ಧೋರಣೆ ಇರುತ್ತದೆ. ತನ್ನ ಪತ್ನಿಗೇ ಕಿರುಕುಳ ಕೊಟ್ಟರೂ ಗಂಡು ಮಕ್ಕಳು ಅಮ್ಮನನ್ನು ಬಿಟ್ಟುಕೊಡುವುದಿಲ್ಲ. ಅಮ್ಮನದ್ದೇ ತಪ್ಪಿದ್ದರೂ ಹೆಂಡತಿಯನ್ನು ಬೆದರಿಸುವುದು, ಸಹಿಸಿಕೊಂಡು ಹೋಗು ಎಂದು ಬುದ್ಧಿವಾದ ಹೇಳುವುದನ್ನು ಕಾಣಬಹುದು. ‘ಮಾವ ಪರ್ವಾಗಿಲ್ಲ, ಅತ್ತೆಯದ್ದೇ ಕಿರಿಕ್ಕು’ ಎನ್ನುವವರನ್ನೇ ನೀವು ಬಹುವಾಗಿ ನೋಡಿರುತ್ತೀರಿ. ಆದರೂ ಮಗನ ಪಾಲಿಗೆ ಅಮ್ಮ ಯಾವತ್ತೂ ಕೆಟ್ಟವಳಂತೆ ಕಾಣುವುದಿಲ್ಲ. ‘ಮುಂಗಾರು ಮಳೆ’ ಚಿತ್ರದ ನವಿರಾದ ಪ್ರೇಮಗೀತೆಗಳು ನಮಗೆಷ್ಟೇ ಖುಷಿಕೊಟ್ಟರೂ, ಕೈಕೊಟ್ಟ ಹುಡುಗಿಯನ್ನು ನೆನಪಿಸಿಕೊಂಡು ಆ ನೋವು ಕೊಡುವ ಆಹ್ಲಾದವನ್ನು ನಾವೆಷ್ಟೇ ಸವಿದರೂ ಅವು ‘ಜೋಗಿ’ ಚಿತ್ರದ ‘ಬೇಡುವೆನು ವರವನ್ನು, ಕೊಡೆ ತಾಯೆ ಜನುಮವನು’ ಗೀತೆಯಂತೆ ಮನಕಲಕುವುದಿಲ್ಲ. ಮುಂದೊಂದು ದಿನ ನಾವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಅಮ್ಮನ ಜತೆಗಿನ ಸಂಬಂಧ ಬದಲಾಗುವುದಿಲ್ಲ. ಹುಟ್ಟಿನ ಜತೆ ಬರುವ ಹೊಕ್ಕಳ ಬಳ್ಳಿಯನ್ನು ಕಡಿದುಕೊಂಡು ಪ್ರತ್ಯೇಕಗೊಂಡರೂ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವುದಿಲ್ಲ. ಅಂತಹ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆಯೇ ಹೊರತು, ಅಮ್ಮ ಅಮ್ಮ ಎಂದು ಈಗಲೂ ಕನವರಿಸುತ್ತಾರೆಯೇ ವಿನಾಃ ಅಪ್ಪಿ-ತಪ್ಪಿಯೂ ಅಪ್ಪನ ಬಗ್ಗೆ ಮಾತನಾಡುವುದಿಲ್ಲ. ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ತಂದೆ ಕೀನ್ಯಾದವರೆಂಬ ಕಾರಣಕ್ಕೆ ಆ ದೇಶದವರು ಸಂಭ್ರಮಪಟ್ಟರು. ಆದರೆ ಒಬಾಮ ಯಾವತ್ತೂ ಅಪ್ಪನ ಬಗ್ಗೆ ಮಾತನಾಡಲಿಲ್ಲ. ‘ಊರಿಗೆ ಒಡೆಯನಾದರೂ ತಾಯಿಗೆ ಮಗ’ ಎಂಬ ಮಾತೇ ಇದೆಯಲ್ಲವೆ?!
ನಾವು ಚಿಕ್ಕವರಿದ್ದಾಗ ಇರಬಹುದು, ಅಪ್ಪನ ಎದೆಯೆತ್ತರಕ್ಕೆ ಬೆಳೆದ ನಂತರವಾಗಿರಬಹುದು, ಏನಾದರೂ ಕೆಲಸವಾಗಬೇಕು, Favour ಬೇಕೆಂದಾದರೂ ಅಪ್ಪನಿಗೆ ಸಂದೇಶ ತಲುಪುವುದು ಮಾತ್ರ ಅಮ್ಮನ ಮೂಲಕವೇ. ಮಗಳು ಪಾಕೆಟ್ ಮನಿ ಬೇಕೆಂದಾದರೆ ನೇರವಾಗಿ ಅಪ್ಪನ ಕಿಸೆಗೇ ಕೈಹಾಕುವ ಧೈರ್ಯತೋರಿಸಿಬಿಡುತ್ತಾಳಾದರೂ ನಾವು ಮಾತ್ರ ಶಾಲೆ, ಕಾಲೇಜಿಗೆ ಫೀ ಕಟ್ಟುವಾಗಲೂ ಅಮ್ಮನ ಮೂಲಕವೇ ಕೇಳುತ್ತೇವೆ. ಅಪ್ಪನ ಬಗ್ಗೆ ಯೋಚನೆ ಮಾಡಿದಾಗಲೆಲ್ಲ ಪೆಟ್ಟು, ಲಾತಾ, ಗದರಿಕೆ, ಸಿಡುಕು, ಕೆಂಗಣ್ಣುಗಳೇ ನೆನಪಾಗಿ ಬಿಡುತ್ತವೆ. ಹಾಗಂತ ಅಮ್ಮ ಪೆಟ್ಟು ಕೊಟ್ಟೇ ಇರುವುದಿಲ್ಲ ಎಂದಲ್ಲ. ಮೊದಲು ಕೊಟ್ಟ ಪೆಟ್ಟಿಗಿಂತ, ನಂತರ ಕೊಟ್ಟ ಅಕ್ಕರೆಯ ಮುತ್ತು, ಮುದ್ದು, ಚಾಕಲೇಟು ತಿನ್ನಲು ಕೊಟ್ಟ ನಾಲ್ಕಾಣೆಗಳೇ ನೆನಪಿನಲ್ಲಿ ಉಳಿದು ಬಿಡುತ್ತದೆ. ಅಪ್ಪ ಅನ್ನುವವನು ಒಂಥರಾ ಮನೆಯೊಳಗಿನ ‘ಪಿಟಿ’ ಮೇಷ್ಟ್ರು. ಪೆಟ್ಟಿನ ರುಚಿ ತೋರಿಸುವವನು, ದಂಡಿಸುವವನು ಅವನು. ಅಮ್ಮ ಮಾತ್ರ ನಾವು ತಪ್ಪು ಮಾಡಿದಾಗಲೂ ಸಮರ್ಥಿಸಿಕೊಳ್ಳುತ್ತಾಳೆ. ಹಾಗಾಗಿಯೇ ಅಮ್ಮನ ಜತೆ ಅಪ್ಪ ನಡೆದುಕೊಳ್ಳುವ ರೀತಿ ಕೂಡ ಮುಂದೆ ಆತನ ಬಗ್ಗೆ ನಾವು ರೂಢಿಸಿಕೊಳ್ಳುವ ಅಭಿಪ್ರಾಯವನ್ನು ನಿರ್ಧರಿಸಿ ಬಿಡುತ್ತದೆ. ಬಹಳಷ್ಟು ಬಾರಿ ನಾವು ಅಪ್ಪನನ್ನು ದ್ವೇಷಿಸಲು ಆತ ಅಮ್ಮನ ಜತೆ ಕೆಟ್ಟದಾಗಿ ನಡೆದುಕೊಳ್ಳುವುದೇ ಮುಖ್ಯ ಕಾರಣ. ಅದಕ್ಕೆ “The most important thing that a father can do for his children is to love their mother” ಎಂದು ಥಿಯೋಡರ್ ಎಂ. ಹೆಸ್ಬರ್ಗ್ ಹೇಳಿರುವುದು.
ಅಪ್ಪ ಯಾವತ್ತೂ ನಮ್ಮ “Emotional Frame” ನೊಳಗೆ ಬರುವುದೇ ಇಲ್ಲ. ಬಂದರೂ ತೀರಾ ವಿರಳ ಹಾಗೂ ಸೀಮಿತವಾಗಿ. ತುಂಬಾ Irony ಎಂದರೆ ಮುಂದೊಂದು ದಿನ ನಾವೂ ಅಪ್ಪ ಆಗುತ್ತೇವೆ, ಬೈಯಿಸಿಕೊಳುವ ಸರದಿ ನಮ್ಮದಾಗುತ್ತದೆ ಎಂದು ಗೊತ್ತಿದ್ದರೂ ಅಪ್ಪನನ್ನು ಬೈದುಕೊಳ್ಳುತ್ತೇವೆ, ಆತನ ಬಗ್ಗೆ ಇರುಸು-ಮುರುಸುಗೊಳ್ಳು ವುದನ್ನು ನಿಲ್ಲಿಸುವುದಿಲ್ಲ. ಅಮ್ಮನನ್ನು ಬಹುವಾಗಿ ಪ್ರೀತಿಸುವ ನಾವೇ ಅವಳ ಬದುಕಿನಲ್ಲಿ ಅಷ್ಟು ವರ್ಷಗಳಿಂದ ಸಾಗಿ ಬಂದ ಅಪ್ಪನ ಬಗ್ಗೆ ಹಗುರವಾಗಿ, ಉಡಾಫೆಯಿಂದ ಕೂಡಿದ ಮಾತುಗಳನ್ನಾಡಿ ಬಿಡುತ್ತೇವೆ. ದುಡ್ಡು ಕೊಡುವುದಕ್ಕೆ, ಬಟ್ಟೆ ಕೊಡಿಸುವುದಕ್ಕೆ, ಫೀ ಕಟ್ಟುವುದಕ್ಕೆ ಆತ ಸೀಮಿತವಾಗಿ ಬಿಡುತ್ತಾನೆ. ನಮ್ಮ ಬೈಗುಳಕ್ಕೂ ಭಾಜನನಾಗಬೇಕಾಗುತ್ತದೆ. ನಮ್ಮೆಲ್ಲ ಕುಂದು-ಕೊರತೆಗಳಿಗೆ ಅವನ ಮೇಲೆಯೇ ಗೂಬೆ ಕೂರಿಸುತ್ತೇವೆ. ಬಾಲ್ಯದಲ್ಲಾಗಲಿ, ಕಾಲೇಜಿಗೆ ಕಾಲಿಟ್ಟ ಸಂದರ್ಭದಲ್ಲಾಗಲಿ ಕೇಳಿದ್ದನ್ನು ಕೊಡಿಸಲಿಲ್ಲ ಅಂದರೂ ಅವನನ್ನೇ ದೂರುತ್ತೇವೆ, ಹೆಂಡತಿ ಬಂದ ನಂತರ ಜೀವನ ಸಾಗಿಸುವುದು ಕಷ್ಟವಾದಾಗಲೂ “ನಮ್ಮಪ್ಪ ಸರಿಯಾಗಿ ಮಾಡಿಟ್ಟಿದ್ದರೆ ನಮಗೇಕೆ ಇಂತಹ ಗತಿ ಬರುತ್ತಿತ್ತು” ಎಂದು ಆಗಲೂ ಅಪ್ಪನನ್ನು ಶಪಿಸುವುದನ್ನು ಬಿಡುವುದಿಲ್ಲ!!
ನಿಜಕ್ಕೂ ಅಪ್ಪ ಎಂಬ ಸ್ಥಾನವೇ ಒಂದು Thankless position. ಮಗನ ವಿಷಯದಲ್ಲಿ ಮಾತ್ರವಲ್ಲ, ಕುಂಟುಂಬಕ್ಕೇ ಕೂಳು ಕೊಟ್ಟರೂ ಕುಟುಂಬದ ನಂಬರ್-1 ಶತ್ರು ಅವನೇ ಆಗಿರುತ್ತಾನೆ. ಆತ ಎಲ್ಲರ common enemy!
ಗಂಡು ಮಕ್ಕಳಾದ ನಾವು ಅಪ್ಪನನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ, ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಮಗನ ಎದುರೇ ಪೆಗ್ ಹಾಕುವ, ಬೀಡಿ-ಸಿಗರೇಟು ಸೇದುವ ಅಪ್ಪ, ಮಗ ಕದ್ದುಮುಚ್ಚಿ ಅದೇ ಕೆಲಸ ಮಾಡಿ ಸಿಕ್ಕಿಹಾಕಿಕೊಂಡರೆ ಪೆಟ್ಟು ಕೊಡದೇ ಬಿಡುವುದಿಲ್ಲ! ಹೀಗೆ ಜೈಲಿನ ಮೇಲ್ವಿಚಾರಕನಂತೆ ವರ್ತಿಸುವ ಆತನನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ನಾವೇ ಅಪ್ಪನಾಗಿ ಬಿಟ್ಟಿರುತ್ತೇವೆ. “By the time a man realizes that maybe his father was right, he usually has a son who thinks he’s wrong” ಎಂಬ ಚಾರ್ಲ್ಸ್ ವ್ಯಾಡ್ಸ್‌ವರ್ತ್ ಮಾತಿನಲ್ಲಿ ಅದೆಷ್ಟು ಸತ್ಯ ಅಡಗಿದೆಯಲ್ಲವೆ?! ಅಪ್ಪನಾದವನು ನಮ್ಮ ಜತೆ ಕಟುವಾಗಿಯೇ ನಡೆದುಕೊಳ್ಳಬಹುದು, ನಮ್ಮ ಇತಿ-ಮಿತಿ, ಚಟಗಳನ್ನೂ ಅವನೇ ನಿರ್ಧರಿಸಬಹುದು, ಅಪ್ಪ ಎಂದ ಕೂಡಲೇ ನಮಗೆ ಕೆಂಗಣ್ಣು, ಗದರಿಕೆ, ಲಾತಾಗಳೇ ನೆನಪಾಗಬಹುದು, ಆದರೂ ಅವನದ್ದು ಗುರುತರ ಸ್ಥಾನ. ಅಮ್ಮನ ಜತೆ ನಮಗೆ ಭಾವನಾತ್ಮಕ ಕೊಂಡಿ ಇರುತ್ತದಷ್ಟೆ. ಅಪ್ಪ ನಮ್ಮ ಭವಿಷ್ಯ, ಬದುಕು, ಕೆರಿಯರ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಮಗಳು ಬೆಳೆದು ಮದುವೆಗೆ ಸಿದ್ಧಳಾಗಿ ನಿಂತಾಗ ಭಾವಿ ಪತಿಯಲ್ಲಿ ಅಪ್ಪನ ಗುಣಗಳನ್ನು ಹುಡುಕುತ್ತಾಳೆ. ಅಪ್ಪನಾದವನು ಯಾವತ್ತೂ ಮಗನಿಗೆ ‘ತನ್ನಂತಾಗು’ ಎಂದು ಹೇಳಿಕೊಡುವುದಿಲ್ಲ. ಮಗಳ ವಿಷಯದಲ್ಲಿ ಬಹಳ protective ಆಗಿ ನಡೆದುಕೊಂಡರೂ, ಅವಳಿಗೆ ಮಾತ್ರ ಭವಿಷ್ಯದ ಬಗ್ಗೆ assurance ಕೊಡುತ್ತಾನಾದರೂ, ಅದೇ ನಮಗೆ ಕಿರಿಕಿರಿಯನ್ನುಂಟು ಮಾಡಿದರೂ, ತಾರತಮ್ಯದ ವಾಸನೆ ನಮ್ಮ ಮೂಗಿಗೆ ಬಡಿದರೂ ಅಪ್ಪನ ಉದ್ದೇಶ ಮಾತ್ರ ಬೇರೆಯೇ ಆಗಿರುತ್ತದೆ. ನೀನು ಓದಿ, ಕೆಲಸಕ್ಕೆ ಸೇರಿ ನಿನ್ನ ಕಾಲ ಮೇಲೆ ನಿಂತುಕೋ ಎನ್ನುವ ಆತನ ಮಾತಿನ ಹಿಂದೆ ಸ್ವಾವಲಂಬನೆಯ ಪಾಠವೇ ಇರುತ್ತದೆ. ಆತ ದುಡಿದದ್ದೆಲ್ಲಾ ಗಂಡು ಮಕ್ಕಳಿಗೇ ಎಂದಾಗಿದ್ದರೂ ಅದನ್ನೆಂದೂ ಆತ ಬಾಯಿ ಬಿಟ್ಟು ಹೇಳುವುದಿಲ್ಲ. ಹಾಗಾಗಿ ಆತನ ಬಗ್ಗೆ ನಮ್ಮಲ್ಲಿ ಸದಭಿಪ್ರಾಯ ಮೂಡುವುದು ಕಡಿಮೆ. ನಮ್ಮ ಬೇಕು-ಬೇಡಗಳನ್ನು ಅವನೇ ನಿರ್ಧರಿಸುತ್ತಾನೆ ಎಂದು ಸಿಟ್ಟಿಗೇಳುತ್ತೇವೆ. ನಮ್ಮ ಅನುಭವಕ್ಕೆ ಬರುವುದು ಅವನ ಗದರಿಕೆ, ಗೂಸಾಗಳೇ ಹೊರತು, ಅವುಗಳ ಹಿಂದಿರುವ ಪ್ರೀತಿಯಲ್ಲ.
ಅಮ್ಮ ಯಾವತ್ತೂ ತನ್ನ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸು ತ್ತಾಳೆ. ಹಾಗಾಗಿ ಅವಳು ನಮಗೆ ಪ್ರಿಯವಾಗಿ ಬಿಡುತ್ತಾಳೆ. ಅಪ್ಪನ ಪ್ರೀತಿ ಕಟ್ಟು-ಪಾಡುಗಳಲ್ಲೇ ವ್ಯಕ್ತವಾಗುವುದರಿಂದ ಅದು ನಮಗೆ ಅರ್ಥವಾಗುವುದಿಲ್ಲ. ನಾವು ತಪ್ಪು ಮಾಡಬಾರದು, ಎಡವಿ ಬೀಳಬಾರದು ಎಂದು ಆತ ತೆಗೆದುಕೊಳ್ಳುವ ಮುಂಜಾಗ್ರತೆ, ಕೊಡುವ ಪೆಟ್ಟು, ಎಚ್ಚರಿಕೆಗಳು ನಮಗೆ ಕಾನೂನು, ಕಟ್ಟಳೆಗಳಂತೆ ಕಂಡುಬಿಡುತ್ತವೆ, ಆತ ದಂಡಾಧಿಕಾರಿಯಂತೆ ಗೋಚರಿಸ ಲಾರಂಭಿಸುತ್ತಾನೆ. ಅಮ್ಮ ಕ್ಯಾರಿಯರ್ ತುಂಬ ಬಿಸಿ ಬಿಸಿ ಊಟ ತುಂಬಿ ಕೊಡಬಹುದು, ಯಾವ ಕೋರ್ಸಿಗೆ, ಯಾವ ಕಾಲೇಜಿಗೆ ಸೇರಬೇಕು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುವುದು ಅಪ್ಪನೇ ಆಗಿರುತ್ತಾನೆ. ನಿಜ ಹೇಳಬೇಕೆಂದರೆ, ವಿಶ್ವೇಶ್ವರ್‍ಯನವರಂತಹ ವಿeನಿಯೋ, ಎಂಜಿನಿಯರ್, ಡಾಕ್ಟರೋ, ದೇಶ ರಕ್ಷಣೆ ಮಾಡುವ ಸೈನಿಕನೋ ಆಗಬೇಕು ನೀನು ಎಂದು ಗುರಿಹಾಕಿಕೊಡುವವನು ಹಾಗೂ ನಮಗೆ ಪ್ರೇರಣೆ ನೀಡುವವನು ಅಪ್ಪನೇ ಹೊರತು ಅಮ್ಮನಲ್ಲ. ಅಮ್ಮ ಹೋಂ ವರ್ಕ್ ಮಾಡುವಾಗ ಸಹಾಯ ಮಾಡಬಹುದು, ಲೆಕ್ಕ ಹೇಳಿಕೊಡಬಹುದು, ಗ್ರಾಮರ್ ಕಲಿಸಬಹುದು, ಇಲ್ಲವೇ ಮುದ್ದು ಮಾಡಿ ಶಾಲೆಗೆ ಕಳುಹಿಸಬಹುದು. ಪ್ರೇರಕ ಶಕ್ತಿ ಹೆಚ್ಚಾಗಿ ಅಪ್ಪನೇ ಆಗಿರುತ್ತಾನೆ. ಕೆಲವೊಬ್ಬರ ವಿಷಯದಲ್ಲಿ ಅಮ್ಮನೇ ಅಪ್ಪನ ಸ್ಥಾನವನ್ನು ತುಂಬಬಹುದು, ಆದರೆ ನಮ್ಮ ಭವಿಷ್ಯ ನಿರ್ಧಾರದಲ್ಲಿ ಅಪ್ಪನದ್ದೇ ಮಹತ್ವದ ಪಾತ್ರವಿರುತ್ತದೆ.
ನೆಹರು-ಇಂದಿರಾಗಾಂಧಿ
ಮಿಲ್ಖಾಸಿಂಗ್-ಜೀವ್
ಎಸ್‌ಡಿ ಬರ್ಮನ್-ಆರ್‌ಡಿ ಬರ್ಮನ್
ರಮೇಶ್ ತೆಂಡೂಲ್ಕರ್-ಸಚಿನ್ ತೆಂಡೂಲ್ಕರ್
ಶಿವರಾಮ ಹೆಗಡೆ-ಶಂಭು ಹೆಗಡೆ
ಅಮಿತಾಭ್ ಬಚ್ಚನ್- ಅಭಿಷೇಕ್ ಬಚ್ಚನ್
ಕುವೆಂಪು-ತೇಜಸ್ವಿ
ಅಪ್ಜಿತ್ ಸಿಂಗ್ ಭಿಂದ್ರಾ-ಅಭಿನವ್ ಬಿಂದ್ರಾ
ಇವರೆಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿರು ವುದು ಅಪ್ಪನೇ. ಇಷ್ಟಾಗಿಯೂ ಎಷ್ಟೇ ಒಳ್ಳೆಯ ಉದ್ದೇಶವಿಟ್ಟುಕೊಂಡಿದ್ದರೂ ನಮ್ಮನ್ನು ತಿದ್ದಿ-ತೀಡುವ, ಕಿವಿ ಹಿಂಡಿ ಬುದ್ಧಿ ಹೇಳುವ ಅಪ್ಪ ನಮಗೆ ಆಪ್ಯಾಯಮಾನವಾಗುವುದು ಬಹಳ ಕಡಿಮೆ. ತಾನು ದುಡಿದ ಪಿಎಫ್ ಹಣವನ್ನು ಕೂಡ ಮಗನ ಭವಿಷ್ಯಕ್ಕೆಂದೇ ಮೀಸಲಿಟ್ಟು ಬಿಡುತ್ತಾನೆ. ಆದರೂ ಅಪ್ಪನನ್ನು ಅಪಾರ್ಥ ಮಾಡಿಕೊಳ್ಳುವುದು ಗಂಡು ಮಕ್ಕಳೇ. ನಮ್ಮ ಚಲನಚಿತ್ರಗಳನ್ನೇ ತೆಗೆದುಕೊಳ್ಳಿ. ‘ನಿನ್ನಂಥ ಅಪ್ಪ ಇಲ್ಲ…’ ಅಂತ ಮಗಳು ಹಾಡುತ್ತಾಳೆಯೇ ಹೊರತು ಮೀಸೆ ಬಂದ ಮಗ ಅಪ್ಪನನ್ನು ಸ್ತುತಿಸುವುದನ್ನು ಕಾಣಲು ಕಷ್ಟ. ಅಷ್ಟಕ್ಕೂ ಅಪ್ಪನ ಪ್ರೀತಿಯನ್ನು ನಾವು Feel ಮಾಡುವುದು ತೀರಾ ವಿರಳ. ಮಿಗಿಲಾಗಿ, ಮಗನ ಮೇಲಿನ ಪ್ರೀತಿಯನ್ನು ಆತ ಹೆಚ್ಚಾಗಿ ವ್ಯಕ್ತಪಡಿಸುವುದೇ ಇಲ್ಲ. ಹೀಗಿದ್ದರೂ ನಾವು ದುಡಿಯಲು ಪ್ರಾರಂಭಿಸಿ ನಮ್ಮ ಕಾಲ ಮೇಲೆ ನಿಂತುಕೊಂಡ ನಂತರವೂ ತನ್ನ ಜವಾಬ್ದಾರಿ ಮುಗಿಯಿತೆಂದು ಅಪ್ಪ ಭಾವಿಸುವುದಿಲ್ಲ. ಜವಾಬ್ದಾರಿಯನ್ನು ವರ್ಗಾಯಿಸಲಾಗದ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದ ಸ್ಥಾನ ಅವನದ್ದು. “A king, realizing his incompetence, can either delegate or abdicate his duties. A father can do neither. If only sons could see the paradox… they would understand the dilemma…..” ಎಂಬ ಮರ್ಲಿನ್ ಮನ್ರೋ ಮಾತನ್ನು ನೆನಪಿಸಿಕೊಳ್ಳಿ. ‘ಅರೇಂಜ್ಡ್ ಮ್ಯಾರೇಜ್’ ಸಂದರ್ಭದಲ್ಲಿ ವಧುವನ್ನು ನೋಡಿ ಒಪ್ಪಿಗೆ ಸೂಚಿಸುವುದಷ್ಟೇ ನಮ್ಮ ಕೆಲಸ. ಆನಂತರದ ಜವಾಬ್ದಾರಿ ಅಪ್ಪನ ಹೆಗಲೇರಿ ಬಿಡುತ್ತದೆ. ಅದಕ್ಕೇ ಹೇಳುವುದು ಅಪ್ಪನದ್ದು “Thankless position’. ನಾವು ನಮ್ಮದೇ ಆದ ಗೂಡು ಕಟ್ಟಿಕೊಂಡು ಪ್ರತ್ಯೇಕಗೊಂಡ ನಂತರವೂ ಜೀವನವೆಂಬ ದೀರ್ಘ ಹಾದಿಯಲ್ಲಿ ಹೇಗೆ ಸಾಗಬೇಕು ಎಂದು ಅಪ್ಪ ಸಲಹೆ ಕೊಡುತ್ತಿರುತ್ತಾನೆ.
ಅಮೆರಿಕದಲ್ಲಿ ಮಗ ಅಥವಾ ಮಗಳು 12-13 ವರ್ಷಕ್ಕೆ ಕಾಲಿಟ್ಟಾಗ ‘Breaking the plate’ ಎಂಬ ಒಂದು ಕಾರ್ಯಕ್ರಮ ಮಾಡುತ್ತಾರೆ. ಅಂದರೆ ಮಕ್ಕಳು ಪ್ರವರ್ಧಮಾನಕ್ಕೆ ಕಾಲಿಟ್ಟರೆಂದರೆ ಅವರ ಅನ್ನವನ್ನು ಅವರೇ ದುಡಿದುಕೊಳ್ಳಬೇಕು, ಇನ್ನು ಮುಂದೆ ಅಪ್ಪ-ಅಮ್ಮನನ್ನು ಅವಲಂಬಿಸಬಾರದು ಎಂದರ್ಥ. ಹೀಗೆ 13ನೇ ವರ್ಷಕ್ಕೇ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ‘ಮದರ್‍ಸ್ ಡೇ’, ‘ಫಾದರ್‍ಸ್ ಡೇ’ ಆಚರಿಸುತ್ತಾರೆ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ-ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ?! ಇದೆಲ್ಲಾ ವೆಸ್ಟ್‌ರ್ನ್ ಕಾನ್ಸೆಪ್ಟ್, ಗ್ರೀಟಿಂಗ್ಸ್ ಕಾರ್ಡ್ ಕಂಪನಿಯವರ ವ್ಯಾಪಾರ ತಂತ್ರ ಎಂದು ಯಾರೇನೇ ಬೊಬ್ಬೆ ಹಾಕಲಿ. ನಾಳೆ ಜೂನ್ ೨೧ ‘ಫಾದರ್‍ಸ್ ಡೇ’. ನಾವು ಅಂಬೆಗಾಲಿಡುವಾಗ ಕೈಹಿಡಿದು ಮುನ್ನಡೆಸಿದ, ನಾವೇ ಜನ್ಮಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ಞತೆಯನ್ನಾದರೂ ಹೇಳೋಣ. ಮರೆಯದಿರಿ.
Happy Father’s Day!
Sooper Maga,
Nange Nam Appa Andre Sakat Hemme… Avrigu Ashte maga andre Sakat Hemme…Nanu Nam Appana Bagge Nan friends ge helteeni.. He is very great anta.. Avru Ashte nan Bagge avara friends jote Heltare anta nange avar friendse helidaare… Yeshtu santosha alwa E matanna keloke… Ishtu Idru nange one korate Ide.. nanu Nam Daddy Jote Matade illa…Matadbeku anta ansutte..Aadre Aagta illa… He is Reserved kind…I miss u papa – n love u so much. ” Dad, you’re someone to look up to no matter how tall I’ve grown
ಇದೠ೧ ಲೇಖನವಾ!! ಪೇಜೠತà³à²‚ಬಿಸ ಬೇಕೆಂದೠಅದೇ ಕಾರಣಕà³à²•ೆ ಬರಿಬೇಡಿ.ಜೊಳà³à²³à³ ಲೇಖನ……
few thoughts came into my mind after reading your article.they are regarding your father. was your father the support behind your career? do you inherit the aggressiveness from your father?…..
anyway,nice article.i really liked it….
thanks for writing this
one of the best artical on father
Ya U are right
Good Article
hi pratap,
A good article on a interesting subject
cheers
Hi Prataph,
Been Reading consistently ur article & u have won many hearts by writing creative articles which r different & give different views.Keep th good work going,coz in this new age u r like a silver lining for many critcs who believe youngsters cant make Impact…..Good work once again prataph……………….
tumba chennagide, nanna jeevanadaali nadeda esto gatanegalige tumba attiravagide
hi,
good article
happy fathers day to u too
tc
Dear Pratap
A very good article on a different topic!!! enjoyed every word of it. The picturer was too good….
But i feel, a mother’s job is thankless…..whatever the child achieves , the credit goes to the father….people say,” he/she is the son of Mr….xyz”
Thank u
Nice article dude………
Quoting from Anglo-American sources and building a value structure is becoming Pratap’s “style”. Lear Japanese, Chinese, Bahasa Indonesia and get over your obsession with euro-centric value system..
Hey Pratap,
Great Article..
We luv my father very much..He is very reserved but whenever we have chat with him he will talk for long hours.. He is inspiration of our life.. We always try to keep him happy..
Who says that Children don’t care for father.. We do care ..
It is the respect shown to papa coz he will always be “PILLER OF THE FAMILY”
Its nothing like Papa and Momy coz because of them we are on this beautiful earth!!
Thank u for such a nice article..
Hi Pratap,,
Really I am feeling shy, since I didnot wished to my father.. Any how today I will wish…
It is nice article
ಕರೆಕà³à²Ÿà³ ಆಗಿ ಹೇಳಿದಿರ . ನನಗೆ ಇಂಜಿನಿಯರಿಂಗೠಮà³à²—ಿಯೋ ತನಕ ನನà³à²¨ ಊಟ ಬಟà³à²Ÿà³† ನನà³à²¨ ಆಸೆ ಪà³à²°à³ˆà²¸à³à²µà²‚ಥ ಮನà³à²·à³à²¯ ನನà³à²¨ ತಂದೆ ಅಂದೠಕೊಂಡಿದà³à²¦à³† . ಆದರೆ ಒಂದೠಘಟನೆ ಆದà³à²®à³‡à²²à³† ನನà³à²¨ ಜೀವನದಲà³à²²à²¿ ಅಪà³à²ªà²¨à²¦à³ ಎಂಥ ಪಾತà³à²° ಇದೆ ಅಂತ ಗೊಥೈತೠ. ಥà³à²¯à²¾à²‚ಕà³à²¸à³ ಅದನà³à²¨ ಪà³à²¨à²ƒ ನೆನಪೠಮಾಡಿದà³à²¦à²•à³à²•ೆ
Thumbaa chennagithu nimma e article,pratapanna.
Adhyaako yeno……thandhe jothe ashtondu free aagirokey aagalla..
Avarandrey yeno ondhu thara bhaya….aadroo manadaaladalli preethi maathra kanditha idhey…..
hats off bro…..
hi pratap,
I have been reading your articles ,from long time.Your articles contain very interesting ideas regarding different topics.I read d article which was written on the occasion of fathers day.It was very well written .I like the straight forward attitude of yours.You present the topics in a great understandable manner.I like your selection of topics and their depth of information.Do keep on writing in the same unique way.!!I would like to read all your articles.Congratulations.
Dear Pratap sir
realy i ges tha lost wek articol was were good about the mj
It is nice article
Thank u for such a nice article..
pratap,
i really appreciate your article, because now i am a father, ten years back i was of the opinion that all dads are stubborn, rude.
ಆತà³à²®à³€à²¯ Pratap ,
ಲೇಖನೆ ತà³à²‚ಬಾ ಚೆನಾಗಿದೆ … ಓದà³à²¤à³à²¤ ಓದà³à²¤à³à²¤ à²à²¨à³‹ ನಮà³à²® ಹಿಂದಿನ ದಿನಗಳೆಲà³à²² ಜà³à²žà²¾à²•ಪ ಆಗà³à²¤à³à²¤à³† .. ನೆಜವಾದ ಮಾತà³à²—ಳಿವೆ ಈ ಲೇಖನೆಯಲà³à²²à²¿ … ತà³à²‚ಬಾ ಧನà³à²¯à²µà²¾à²¦à²—ಳೠ.
ಇಂತೀ ನಿಮà³à²® ಪà³à²°à³€à²¤à²¿à²¯ ,
Lingraaj Gavimath .
nice article
hi sir u always write an artical well . u r GREAT
dear pratap your views are right even though the father has a huge roal in the devolopement of the children he ha snot given the best words that actually he deserves. mainly the fact could be he is always very angry and scolding his childrens that it self made the children to go away from the father. even though he made for the best of his childrens they could not understand it.so in my view he desrves the best but he has been taking the worst at the moment that is really bad.
Nimma article oodi nann friend hege barithane
“Thanks Adarsh sending this link.
Very nice article…… This has changed view that I am looking into my father……….Now I am getting shame on myself…really…I am sorry friends If by mistake I have commented on my dad…. I forgot all the things that my dad did it for me and he sacrifies lot in his life and shown/directed to the good road there I can succeed in life…..
In my life I won’t comment anything on my dad…………………..sorry ….sorry…………………………………….sooooooooooooooooooooorrrrrry
and finally I am saying once again sorry Dad……..as even I can’t able to tel this to u directly………………..
”
Thnks for such a grt article
Indeed a good article. The best relationship on this earth is that of a Father and Son. Because a male learns all actions from his father/father figure.
appa andre higoo antha gothorlilla. really, hearttouching article on father. What counts is responsibility but what we feel are emotions of mom.I’m very sorry for you for commenting at this situation. May your father’s soul rest in peace
I stumbled on this article after a long time and you have written it so well that my eyes were vet by the time I finish. Our society has alway portray mother as the most generous and makes great sacrifices for her kids, though I don’t deny this fact but at the same all the sacrifices that a father does goes un noticed / doesn’t even get mentioned anywhere, you terming father as a Thankless Positions is an excellent one and we all should be greatful to him for all the things he provides us right from the day we are concived and until his last breath.
I think our next generations are more open about identifying dad’s contribution and also more open with him than our or previous generations, this will only strengthen the bond and will make every father happy.
Wow..wat an article…. Hats up ..Pratap Sir
Hi Pratap,
It is nice article about ‘father and son’ relationship, but not about ‘father’!
Perhaps you have forgotten that ‘common enemy’ is not just a bread and butter of the family, but he also a good friend. Many boys (including my brothers and friends) they just do not think Dad is an ATM or a PT master! They enjoy his company, discuss their problems and find a good friend, mentor and guide in him.
My dad, always use to say ‘I want to be a king-maker’! When I was kid, I always use to wonder why he say so? Today, I happily admit that he is a king-maker and that’s true for many families.
Yet another issue that is missing your article is ‘father and daughter’ relationship (If you have a daughter you realize the value of this relationship!). I do agree many parents think marriage is the ultimate aim of life for girls!. Many of us are exception to this because we enjoying our dream job and life. its all because of unbiased support from our parents, especially from father.
Super article loved reading it>>>>>>
wonderfull
touching
dear
prath simma
today I read d article which was written on the occasion of fathers day. .I like the straight forward attitude of yours.You present the topics in a great understandable manner.I like your selection of topics and their depth of information.Do keep on writing in the same unique way.
Tumba olle article sir.
But I was expecting one more thing from u, what does he expect from his children once they grow up. Really a break after reading too many political based articles.
lekhana tumbha chennagide, hindinadella nenasikondare kannali neeru baruthade, thanks prathap simha.
Hi Pratap,
Thank you for this article. It touches my heart. Each word in your article make my feelings wet. At the last i am not able to control my tears.
Once again, thank you for this article
Umesh JR
Navu gandu makkalige appana bagge heloke sankocha. Adralli istondu vicharana tumba sogasagi bidisiddiri pratap. Great work. Even I had different opinion about Appaji but after my marriage im able to see what he has been through and what he was trying to tell.. through his eyes (Maatu kadime appaji jote). Recently I started talking to him a lot and got to know he knows so many things and solutions!! Sorry and Thanks u Appaji. Wish u happy fathers day in Advance.Love u.
SIR TUBHA CHENAGI BARADIDDIRA NIMMA LEKANAGALU EGE MUDIBARALI NANU NIMMA ABHIMANI NIMMA BOOKS& LEKANAGALANU TUBHA ODUTENE THANK U SIR
nice article ………..loved it…
appa arthavagadha bavishya agidhu nan palige dhuranthavu houdu … nanu appa idaga dveshisidhe jasti adru agaga i love u dad andidu nija … appa este baidru ivathgu avr never give up son emba mathu nan illiyavaregina jeevanakku amruthadantagidhu sullala .. thanks for this nice and best article
Hi Pratap!
Thank you so much for cherishing wonderful memories! There are so many moments in my life, when i miss my DAD so much that i just want to pick them up from my mind and hug them. Happy fathers day.
In memory of all Fathers that have been called to Heavens.
Super cool article… indeed
Actually I don’t have mom 7 yrs ago. She left all of us after that ma dad got so many marriage offers he discarded that because of mine n my sister’s future, now m staying in Bangalore with ma sis(married) but ma dad is still there in native alone.
He never reminded us mom at any situation he is our dad as well as mom also he sacrificed his whole life for our future but to build ma own future i left him alone(m feeling guilty now 🙁 ) he is ma lifetime best friend, mentor, teacher, guide, mother everything he never ever let me go down after failing in ma studies also.
Hats off papa.
thank you Pratap sir for your article
(Made my eyes wet)
Waav! Splendid article Pratap bhai! I love my dad and I wish not only my dad my uncle who treats me as his daughter. Thank you for a magnificent article 🙂
Dear Mr. Prathap Simha,
Very good article about a father. But, i find that there was no reference to the irresponsible fathers who took a role by themselves in shaping the views of a child towards himself.!! There are fathers who took that position by a biological point of view and not from the point of view of the responsibility they had to fill in.
Sorry to point it out,
I had a good time reading the article..
Thank you,
Regards,
vhdamle
Super article sir.. I love u Appa..
thanks you sir ……………………………………………..finally an enlightenment it bought
Hi sir.. very nice article… I had read your all articles… I waiting for Saturday morning to be read your article and I have collected all books… please be continue the support to Narendra Modi… he only save the country….. bye sir and take care.. wish you all the best…………….
Hi pratap sir..Article is very nice… I waiting for the Saturday.. to read your wonderful article. Please be continue the support to modi…. he is only save the nation for our kids……take care yourself sir….
ಆತà³à²®à³€à²¯ Pratap Sir,
ಲೇಖನೆ ತà³à²‚ಬಾ ಚೆನಾಗಿದೆ … ಓದà³à²¤à³à²¤ ಓದà³à²¤à³à²¤ à²à²¨à³‹ ನಮà³à²® ಹಿಂದಿನ ದಿನಗಳೆಲà³à²² ಜà³à²žà²¾à²•ಪ ಆಗà³à²¤à³à²¤à³† .. ನೆಜವಾದ ಮಾತà³à²—ಳಿವೆ ಈ ಲೇಖನೆಯಲà³à²²à²¿ … ತà³à²‚ಬಾ ಧನà³à²¯à²µà²¾à²¦à²—ಳೠ.
ಇಂತೀ ನಿಮà³à²® ಪà³à²°à³€à²¤à²¿à²¯ ,
Manjunath
A Father’s work is never done
He works from morning until dawn
He spreads his love And keeps you warm
But only once a year we say
Father we wish you “Happy Father’s Dayâ€
Niv nange eesta aagokke ee nimma article super sir