Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸ್ವಚ್ಛಂದ ಕಾಮನ್ನೇ ಒಪ್ಪದ ಸಮಾಜದಲ್ಲಿ ಸಲಿಂಗ ಕಾಮ?!

ಸ್ವಚ್ಛಂದ ಕಾಮನ್ನೇ ಒಪ್ಪದ ಸಮಾಜದಲ್ಲಿ ಸಲಿಂಗ ಕಾಮ?!

ಅಯ್ಯಯ್ಯೋ ಪರಿಸ್ಥಿತಿ ಎಲ್ಲಿಗೆ ಬಂತಪ್ಪಾ, ನಮ್ಮ ಜನರಿಗೆ ಏನಾಗುತ್ತಿದೆಯಪ್ಪಾ ಎಂದು ತಲೆಕೆಡಿಸಿಕೊಳ್ಳಬೇಡಿ. ಇದೂ ಕೂಡ ಒಂದು Fad. Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad ಆಗಿತ್ತು. ದಿಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್‌ಯು), ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕ್ಲಾಸ್‌ರೂಮ್‌ಗಳಲ್ಲಿ, ಕಾರಿಡಾರ್‌ನಲ್ಲಿ ನಿಂತು ಎಡಪಂಥೀಯ ವಾದದ ಬಗ್ಗೆ ಮಾತನಾಡುವುದು, ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ ‘Animal Rights’ ಎಂಬ ಹೊಸ ಫ್ಯಾಡ್ ಬಂತು. ಈ ಮೇನಕಾ ಗಾಂಧಿ ಮುಂತಾದವರು ‘ಆನಿಮಲ್ ರೈಟ್ಸ್’ ಎಂದಂದುಕೊಂಡು ಕಂಡಕಂಡವರನ್ನೆಲ್ಲ ಕಚ್ಚುವ ಬೀದಿನಾಯಿಗಳ ಪರವಾಗಿ, ಅವುಗಳನ್ನು ಕೊಲ್ಲುವ ಕಾರ್ಪೊರೇಶನ್‌ಗಳ ವಿರುದ್ಧವಾಗಿ ಟೊಂಕಕಟ್ಟಿ ನಿಂತರು! ಅದರ ಬೆನ್ನಲ್ಲೇ ಹಾಗೂ ಅದಕ್ಕೇ ಸಂಬಂಧಿಸಿದ ‘ವೆಜಿಟೇರಿಯನಿಸಂ’ ಆರಂಭವಾಯಿತು. ಪ್ರಾಣಿಹತ್ಯೆ ವಿರುದ್ಧ, ಲೆದರ್ ಬಳಸುವುದರ ವಿರುದ್ಧ ಕೂಗಾಟ ಆರಂಭವಾಯಿತು. ಆಮೇಲೆ “Child Rights’,  “Tribal Rights’, “Tiger Conservation’, “Forest Preservation’ ಮುಂತಾದುವುಗಳು ಆರಂಭವಾದವು. ಎಲ್ಲವೂ ಮುಗಿದ ಮೇಲೆ  “Trekking’ನಂಥ ವಿಷಯವನ್ನೂ ಬಿಡಲಿಲ್ಲ. ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುವವರಾದರೂ ಯಾರು? ಕೈತುಂಬಾ ಹಣವಿರುವ, ಮಾಡಲು ಕೆಲಸವಿಲ್ಲದ, ಮಾತನಾಡಲು ಇಂಗ್ಲಿಷ್ ಬರುವ ಪ್ರಚಾರಪ್ರಿಯ ಆತ್ಮಗಳೇ. ಈಗ ತಲೆಯೆತ್ತಿರುವ  Gay Rights ಕೂಡ ಕೆಲಸವಿಲ್ಲದವರು ಆರಂಭಿಸಿರುವ ಒಂದು ಲೇಟೆಸ್ಟ್ ಫ್ಯಾಡೇ ಹೊರತು ಬೇರೇನೂ ಅಲ್ಲ. 1960ರ ದಶಕದಲ್ಲಿ ಯಾವ ವಿಷಯಕ್ಕಾಗಿ ಬ್ರಿಟನ್‌ನಲ್ಲಿ ದೊಡ್ಡ ಚರ್ಚೆಯಾಗಿತ್ತೋ ಅದೇ ವಿಷಯ 40 ವರ್ಷಗಳ ನಂತರ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ ಅಷ್ಟೇ. ಅದರಿಂದ ಮಾಧ್ಯಮಗಳಿಗೆ ಒಂದು ವಾರಕ್ಕಾಗುವಷ್ಟು  ‘Fodder’ ಸಿಕ್ಕಿದ್ದು ಬಿಟ್ಟರೆ ಸಮಾಜಕ್ಕಾಗಲಿ, ಸಾಮಾನ್ಯ ಜನರಿಗಾಗಲಿ ಯಾವ ಲಾಭವಾಗಲಿದೆ?

ಅಷ್ಟಕ್ಕೂ ಸಲಿಂಗ ಕಾಮದ ಬಗ್ಗೆ ಗುರುವಾರ ನೀಡಿದ ತೀರ್ಪಿನಲ್ಲಿ ದಿಲ್ಲಿ ಹೈಕೋರ್ಟ್ ಹೇಳಿರುವುದಾದರೂ ಏನು?

ಈ Homosexuality ಎಂಬ ಪದ ಬಂದಿದ್ದು ಗ್ರೀಕ್ ಹಾಗೂ ಲ್ಯಾಟಿನ್ ಮೂಲದಿಂದ. Homos ಎಂದರೆ ‘Same’ ಎಂದರ್ಥ. Homosexuality ಎಂದರೆ ಸಲಿಂಗಿಗಳ ನಡುವಿನ ರತಿಕ್ರೀಡೆ. ಸಾಮಾನ್ಯವಾಗಿ ಗಂಡಸರಿಬ್ಬರ ನಡುವಿನ ಕಾಮಕೇಳಿಯನ್ನು ‘Gay’ ಎಂದು ಕರೆದರೆ, ಸ್ತ್ರೀಯರ ನಡುವಿನ ಸಲಿಂಗ ಕಾಮವನ್ನು Lesbianism ಎನ್ನುತ್ತಾರೆ. ಪುರುಷ ಹಾಗೂ ಸ್ತ್ರೀ ಇಬ್ಬರ ಜತೆಯೂ ಸರಸವಾಡುವವರನ್ನು Bisexual ಎಂದು ಕರೆಯಲಾಗುತ್ತದೆ. ಆದರೆ ಜಗತ್ತಿನ ಯಾವ ಸಮಾಜಗಳೂ ಸಲಿಂಗ ಕಾಮವನ್ನು ಒಪ್ಪಿಕೊಂಡಿರಲಿಲ್ಲ. ಅಮೆರಿಕದ ಕ್ಯಾಲಿಫೋರ್ನಿಯಾದಂತಹ ರಾಜ್ಯ ಸಲಿಂಗ ಕಾಮಿಗಳಿಬ್ಬರು ವಿವಾಹವಾಗುವುದಕ್ಕೆ ಕಾನೂನಿನ ಮಾನ್ಯತೆ ನೀಡಿದ್ದರೂ, ಕೆಲವು ದೇಶಗಳು ಸಲಿಂಗ ಕಾಮಕ್ಕೆ ಅವಕಾಶ ನೀಡಿದ್ದರೂ, ಇಂದಿಗೂ ಯಾವ ಸಮಾಜವೂ ಸಲಿಂಗ ಕಾಮವನ್ನು ಮುಕ್ತಮನಸ್ಸಿನಿಂದ ಮಾನ್ಯ ಮಾಡಿಲ್ಲ. 1967ರಲ್ಲಿ ಕಾನೂನು ತರುವ ಮೂಲಕ ಸಲಿಂಗ ರತಿಗೆ ಮಾನ್ಯತೆ ನೀಡಿದರೂ ಅದುವರೆಗೆ ಬ್ರಿಟನ್‌ನಲ್ಲೂ ಸಲಿಂಗ ಕಾಮ ಕಾನೂನಿನ ದೃಷ್ಟಿಯಿಂದ ಅಪರಾಧವಾಗಿತ್ತು. ಅದೊಂದು ಅಸ್ವಾಭಾವಿಕ, ಅಶುದ್ಧ ಕ್ರಿಯೆ ಎಂದು ಇಂದಿಗೂ ವ್ಯಾಟಿಕನ್ ಪ್ರತಿಪಾದಿಸುತ್ತದೆ ಹಾಗೂ ಖಡಾಖಂಡಿತವಾಗಿ ವಿರೋಧಿಸುತ್ತದೆ. ಖಜುರಾಹೋದಲ್ಲಿ ಹಾಗಿದೆ, ನಮ್ಮ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ ಎಂದು ಯಾರೆಷ್ಟೇ ಬೊಬ್ಬೆಹಾಕಿದರೂ, ಸಮಜಾಯಿಷಿ ಕೊಟ್ಟರೂ ಹಿಂದೂ ನೀತಿ-ನಿಯಮಾವಳಿಗಳ ಮನುಸ್ಮೃತಿ, ಸಲಿಂಗ ರತಿಯನ್ನು ಲೈಂಗಿಕ ಕ್ರಿಯೆಗಳಲ್ಲಿ ಒಂದು ವಿಧ ಎಂದು ಪಟ್ಟಿಮಾಡಿದ್ದರೂ ಅದಕ್ಕೆ ಶಿಕ್ಷೆಯನ್ನು ನಿಗದಿ ಮಾಡಿದೆ! ಸಲಿಂಗ ಕಾಮಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಸಹಜ ಸ್ಥಿತಿಗೆ ತರಬೇಕು ಎಂದು ಕ್ಯಾಥೋಲಿಕ್ ಚರ್ಚ್‌ಗಳು ಹೇಳಿದರೆ, ಇಸ್ಲಾಂನ ಷರಿಯತ್ ಕಾನೂನಿನಲ್ಲಂತೂ ಸಲಿಂಗ ಕಾಮವೊಂದು ಅಪರಾಧ ಹಾಗೂ ಅದು ನಿರ್ಬಂಧಿತ. ಯಾವುದೇ ಧರ್ಮಗಳನ್ನು ತೆಗೆದುಕೊಳ್ಳಿ, ಆ ಧರ್ಮಗಳು ಎಷ್ಟೇ ಉದಾರವಾಗಿರಲಿ. ಆದರೆ ಗಂಡಸು ಗಂಡಸಿನ, ಹೆಣ್ಣು-ಹೆಣ್ಣಿನ ನಡುವಿನ ಲೈಂಗಿಕತೆಯನ್ನು ಒಪ್ಪಿಕೊಂಡಿಲ್ಲ. ಜತೆಗೆ ಅದನ್ನು ಪಾಪ, ಅಪರಾಧವೆಂಬಂತೇ ಕಾಣುತ್ತಾ ಬಂದಿವೆ.

ಭಾರತೀಯ ದಂಡ ಸಂಹಿತೆ(IPC)ಯ 377ನೇ ಸೆಕ್ಷನ್ ಕೂಡ ಇಂತಹ ಅಂಶಗಳನ್ನೇ ಒಳಗೊಂಡಿದೆ!

ಅದು ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆಯೂ ಅಪರಾಧವೆನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ. ಈ ಅಪರಾಧವೆಸಗಿರುವುದು ಸಾಬೀತಾದರೆ ೧೦ ವರ್ಷಗಳವರೆಗೂ ಜೈಲು ಶಿಕ್ಷೆ ನೀಡಬಹುದು. 2001ರಲ್ಲಿ ಈ ಕಾಯಿದೆಯ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯನ್ನು ಹಾಕಿದ ‘ನಾಝ್’ ಎಂಬ ಸ್ವಯಂ ಸೇವಾ ಸಂಸ್ಥೆ, ಇಬ್ಬರು ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಕಾಮದಲ್ಲಿ ತೊಡಗಿದರೂ ಶಿಕ್ಷಿಸುವ ಭಾರತೀಯ ದಂಡ ಸಂಹಿತೆಯ ೩೭೭ನೇ ಸೆಕ್ಷನ್ ಸಂವಿಧಾನದ 14, 15, 19(1)(ಎ-ಡಿ) ಹಾಗೂ 21ನೇ ವಿಧಿಗಳು ನೀಡಿರುವ ಹಕ್ಕಿನ ಮೇಲೆ ಪ್ರಹಾರ ಮಾಡುತ್ತಿದೆ ಎಂದು ದೂರಿತು. ಪೊಲೀಸರು ಕಾನೂನನ್ನು ಮುಂದಿಟ್ಟುಕೊಂಡು ಸಲಿಂಗ ಕಾಮಿಗಳನ್ನು ಬೆದರಿಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡಿತು. ಆದರೆ ಸಲಿಂಗ ಕಾಮವನ್ನು ಅಪರಾಧವೆಂದು ಕಾಣುವ ಕಾನೂನಿಗೆ ಕಡಿವಾಣ ಹಾಕಲೊಪ್ಪದ ದಿಲ್ಲಿ ಹೈಕೋರ್ಟ್ 2004ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೇ ವಜಾ ಮಾಡಿತು. ಆದರೇನಂತೆ ತನ್ನ ತೀರ್ಪನ್ನು ಮರು ಪರಾಮರ್ಶೆ ಮಾಡಬೇಕು ಎಂದು 2004, ಸೆಪ್ಟೆಂಬರ್ ೩ರಂದು ಮತ್ತೆ ಮನವಿ ಮಾಡಿಕೊಳ್ಳಲಾಯಿತು. ಇಷ್ಟಾಗಿಯೂ ದಿಲ್ಲಿ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿತು. ಕೊನೆಗೆ ಸಲಿಂಗ ಕಾಮಿಗಳ ಪರವಾಗಿ ಹೋರಾಡುತ್ತಿರುವವರು 2004, ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿದರು. 2006, ಏಪ್ರಿಲ್ 3ರಂದು ದಿಲ್ಲಿ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂದಿರುಗಿಸಿದ ಸುಪ್ರೀಂಕೋರ್ಟ್, ಆದ್ಯತೆ ಮೇಲೆ ಮರು ಪರಾಮರ್ಶೆ ನಡೆಸುವಂತೆ ಸೂಚನೆ ನೀಡಿತು. ಇತ್ತ ಮಾಜಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್, 2008, ಆಗಸ್ಟ್ 9ರಂದು “ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ಗೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕ್ರಿಮಿನಲ್ ಅಪರಾಧವೆಂಬಂತೆ ಕಾಣುವುದಕ್ಕೆ ಕಡಿವಾಣ ಹಾಕಬೇಕು” ಎಂದು ಹೇಳಿಕೆ ನೀಡುವ ಮೂಲಕ ಸಲಿಂಗ ಕಾಮಿಗಳ ಪರ ಹೋರಾಡುತ್ತಿರುವವರ ವಿಶ್ವಾಸವನ್ನು ಹೆಚ್ಚಿಸಿದರು. ಈ ಕುರಿತು ವಿವರಣೆ ನೀಡುವಂತೆ ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸೂಕ್ತ ಹಾಗೂ ವೈeನಿಕ ಕಾರಣಗಳನ್ನು ನೀಡುವ ಬದಲು ಕೇಂದ್ರದ ಯುಪಿಎ ಸರಕಾರ, “ಅದೊಂದು ಅನೈತಿಕ ಕಾರ್ಯ ಹಾಗೂ ಮಾನಸಿಕ ದೌರ್ಬಲ್ಯದ ಪ್ರತೀಕ. ಅದರಿಂದ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತದೆ” ಎಂಬ ಕಳಪೆ ಸಮಜಾಯಿಷಿ ನೀಡಿತು.

ಇದರ ಪರಿಣಾಮವನ್ನು ಗುರುವಾರ ದಿಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಕಾಣಬಹುದು.

“ಹದಿನೆಂಟು ವರ್ಷ ತುಂಬಿರುವ ಇಬ್ಬರು ವಯಸ್ಕರು ಪರಸ್ಪರ ಇಚ್ಛಿಸಿ ಖಾಸಗಿಯಾಗಿ ಕಾಮಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಕಾಣುವ ಭಾರತೀಯ ದಂಡ ಸಂಹಿತೆಯ ೩೭೭ನೇ ಸೆಕ್ಷನ್ ಸಂವಿಧಾನದ 14, 21 ಹಾಗೂ 15ನೇ ವಿಧಿಗಳ ಉಲ್ಲಂಘನೆಯಾಗಿದೆ” ಎಂದು ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಎಸ್. ಮುರಳೀಧರ್ ತೀರ್ಪು ನೀಡಿದ್ದಾರೆ. ಅಲ್ಲಿಗೆ 18 ವರ್ಷದ ದಾಟಿದ ಸಲಿಂಗ ಕಾಮಿಗಳಿಬ್ಬರು ‘ಕೂಡು’ವುದಕ್ಕೆ ನ್ಯಾಯಾಲಯದ ಮಾನ್ಯತೆ, ಆ ಮೂಲಕ ಕಾನೂನಿನ ರಕ್ಷಣೆ ಸಿಕ್ಕಂತಾಗಿದೆ. ದಿಲ್ಲಿ ಹೈಕೋರ್ಟ್ ತೀರ್ಪಿನ ಒಟ್ಟಾರೆ ಸಾರಾಂಶವೇ ಇಷ್ಟು.

ಆದರೆ ಸಮಸ್ಯೆ ಅದಲ್ಲ.

ಯಾರೋ ೧೮ ವರ್ಷ ಕಳೆದ ಗಂಡಸರು ಅಥವಾ ಹೆಂಗಸರಿಬ್ಬರು ತಮಗೆ ಬೇಕಾದುದನ್ನು ಮಾಡಿ ಕೊಳ್ಳಲು, ತಮಗಿಷ್ಟ ಬಂದಂತೆ ಬದುಕಲು ಅವಕಾಶ ಮಾಡಿಕೊಡು ವುದಕ್ಕಷ್ಟೇ ಸೀಮಿತವಾದ ವಿಚಾರ ಖಂಡಿತ ಇದಾಗಿಲ್ಲ. ಹಾಗೇನಾದರೂ ಆಗಿದ್ದರೆ ಸುಮ್ಮನಾಗಬಹುದಿತ್ತು. ಸಲಿಂಗ ಕಾಮಕ್ಕೆ ವೈeನಿಕ, ದೈಹಿಕ ಕಾರಣಗಳಷ್ಟನ್ನೇ ನೀಡಿದರೂ ಸಮಾಜದಲ್ಲಿ ಅದರದ್ದೇ ನೀತಿ-ನಿಯಮಗಳು, Value System ಇರುತ್ತದೆ, ಕೆಲವೊಂದು ಸ್ಥಾಪಿತ ಹಾಗೂ ರೂಢಿಗತ ಮೌಲ್ಯಗಳಿರುತ್ತವೆ. ಅವುಗಳನ್ನು ನಾವು ಅಷ್ಟು ಸುಲಭಕ್ಕೆ ಧಿಕ್ಕರಿಸಲು ಸಾಧ್ಯವಿಲ್ಲ. ಒಂದು ವೇಳೆ, ಲೆಕ್ಕಿಸದೇ ಹೋದರೆ ಸಮಾಜವೇ ಅಲುಗಾಡುವ ಸಾಧ್ಯತೆ ಇರುತ್ತದೆ. ಸಲಿಂಗ ಕಾಮವನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅಷ್ಟಕ್ಕೂ ಸ್ವಚ್ಛಂದ ಕಾಮವನ್ನೇ ಒಪ್ಪಲು ಹಿಂದೆ-ಮುಂದೆ ನೋಡುವ ಸಮಾಜ ಸಲಿಂಗ ಕಾಮವನ್ನು ಹೇಗೆತಾನೇ ಒಪ್ಪಿಕೊಂಡೀತು? ಸಲಿಂಗ ಕಾಮವೆಂಬುದು ಯಾವುದೋ ಒಂದು ತೀರ್ಪಿನಿಂದ ಬಗೆಹರಿಸುವ ಸಮಸ್ಯೆಯಲ್ಲ. ಆದರೆ ಗುರುವಾರ ಹೊರಬಿದ್ದಂತಹ ತೀರ್ಪೊಂದು ಹಲವಾರು ಸಮಸ್ಯೆಗಳನ್ನೇ ಸೃಷ್ಟಿಸಿ ಬಿಡಬಲ್ಲದು. ಉಮೇಶ್ ರೆಡ್ಡಿಗೆ ಮಹಿಳೆಯರ ಒಳ ಉಡುಪನ್ನು ಕದಿಯುವುದರಲ್ಲಿ, ಸಂಗ್ರಹಿಸುವುದರಲ್ಲಿ ಮಜಾ ಸಿಗುತ್ತದೆ ಎಂಬ ಕಾರಣಕ್ಕೆ ಅದು Individual Freedom ಎಂದು ಸುಮ್ಮನಾಗಲು ಸಾಧ್ಯವೆ? ಸಹಜ ಹಾಗೂ ಸಲಿಂಗ ಕಾಮಗಳು ಬಲ ಮತ್ತು ಎಡಗೈಗಳಿದ್ದಂತೆ. ಕೆಲವರು ಬಲಗೈಲಿ ಊಟ ಮಾಡುತ್ತಾರೆ, ಕೆಲವರು ಎಡಗೈಲಿ ಆ ಕೆಲಸ ಮಾಡುತ್ತಾರೆ ಎಂದು ಸಮಜಾಯಿಷಿ ಕೊಡುವಷ್ಟು ಸರಳ ವಿಚಾರವೇ ಈ ಸಲಿಂಗ ಕಾಮ? ಭಾರತದಲ್ಲಿ ಸುಮಾರು ೨೫ ಲಕ್ಷ ಸಲಿಂಗ ಕಾಮಿಗಳಿದ್ದಾರೆ. ಅಂದರೆ ಶೇ. 0.3 ಜನರಿಗೋಸ್ಕರ ಕಾನೂನಿಗೇ ತಿದ್ದುಪಡಿ ತಂದು ಉಳಿದ 97.7 ಪರ್ಸೆಂಟ್ ಜನರಿಗೆ ಕಿರಿಕಿರಿಯುಂಟು ಮಾಡುವ ಅಗತ್ಯವೇನಿದೆ? ಭಾರತದಲ್ಲಿ ಶೇ. 86ರಷ್ಟು ಎಚ್‌ಐವಿ ಸೋಂಕು ಹರಡುತ್ತಿರುವುದೇ ಸಲಿಂಗ ಕಾಮದ ಮೂಲಕ ಎಂಬ ವಾಸ್ತವ ಕಣ್ಣಮುಂದೆ ಇದ್ದರೂ ಅದಕ್ಕೆ ಕಾನೂನಿನ ಮಾನ್ಯತೆ ಕೊಡಿಸುವ ತೆವಲೇಕೆ? ಅಷ್ಟಕ್ಕೂ ಸಲಿಂಗ ಕಾಮವೆಂಬುದು ಭಾರತದಂತಹ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಬಲ್ಲದಲ್ಲವೆ? ಮದುವೆಯಾಗಿ 4 ವರ್ಷ ಆಯ್ತು. ಇನ್ನೂ ಮಕ್ಕಳಾಗಿಲ್ಲವಾ? ಏನಾದರೂ ಸಮಸ್ಯೆಯಿದೆಯೇ? ಎಂದು ಕೇಳುವ ಸಮಾಜ ನಮ್ಮದು. ಇಲ್ಲಿ ಸೆಕ್ಸ್ ಎಂಬುದು ಮಕ್ಕಳನ್ನು ತಯಾರಿಸುವ ಪ್ರಕ್ರಿಯೆ ಇಲ್ಲವೇ, ದೈಹಿಕ ತೃಷೆ ತೀರಿಸಿಕೊಳ್ಳುವ ಒಂದು ವಿಧಾನವೆಂಬಂತಿದೆ. ಪಾಶ್ಚ್ಯಾತ್ಯ ರಾಷ್ಟ್ರಗಳಂತೆ ಸೆಕ್ಸ್‌ನಲ್ಲಿ Fulfillment ಕಂಡುಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ನಮ್ಮಲ್ಲಿ ತೀರಾ ಕಡಿಮೆ. ಇಂತಹ ಸಮಾಜ ಸಲಿಂಗ ಕಾಮವನ್ನು ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಮಿಗಿಲಾಗಿ, ಪ್ರತಿಯೊಂದು ಸಮಾಜಕ್ಕೂ ಅದರದ್ದೇ ‘Value System’ ಎಂಬುದು ಇರುತ್ತದೆ. ಈಗಾಗಲೇ ಉನ್ನತ ವರ್ಗದಲ್ಲಿ ಚಾಲ್ತಿಯಲ್ಲಿರುವ Wife swapping  ಅನ್ನೂ, ‘ನನ್ನ ಹೆಂಡತಿಯನ್ನು ನಾನು ಯಾರ ಜತೆ ಬೇಕಾದರೂ ಹಂಚಿಕೊಳ್ಳುತ್ತೇನೆ’ ಎಂದು ಮುಂದೊಂದು ದಿನ ವಾದಿಸಿದರೆ ಅದನ್ನೂ ವೈಯಕ್ತಿಕ ಸ್ವಾತಂತ್ರ್ಯವೆಂದು ಸಮಾಜ ಒಪ್ಪಿಕೊಳ್ಳಲು ಸಾಧ್ಯವೆ? ಸಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ, ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಚೀ…ಥೂ… ಗಲೀಜು… ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೇಕು? ಎಂಥೆಂಥಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಈ ಕಾಲದಲ್ಲಿ ಸಲಿಂಗ ಕಾಮವೆಂಬ ವ್ಯಾಧಿಗೂ ಸಲಹೆ, ಮಾರ್ಗದರ್ಶನ ಅಥವಾ ಇನ್ನಿತರ ಪರಿಹಾರಗಳನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಬಾರದು?

ಅದಿರಲಿ, ಹೋರಾಡುವುದಕ್ಕೆ ಬೇರಾವ ವಿಚಾರ, ಸಮಸ್ಯೆಗಳಿಲ್ಲವೆ?

ಮಾಜಿ ಮಿಸ್ ಇಂಡಿಯಾ ಹಾಗೂ ಖಾಲಿ ಕುಳಿತಿರುವ ಹಾಲಿ ಬಾಲಿವುಡ್ ನಟಿ ಸೆಲೀನಾ ಜೇಟ್ಲಿಯವರಂಥವರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ‘ಗೇ ರೈಟ್ಸ್’ ಎಂದು ಬೊಬ್ಬೆ ಹಾಕುತ್ತಾರೆ. ಇವರ ಮಾತಿಗೆ ತಲೆಯಾಡಿಸಿ ಸಲಿಂಗ ಕಾಮಕ್ಕೆ ಅವಕಾಶ ಮಾಡಿಕೊಟ್ಟರೆ ಅದರಿಂದ ಎದುರಾಗಲಿರುವ ಇತರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ. ಈಗಾಗಲೇ ಫ್ಯಾಶನ್ ಜಗತ್ತಿನಲ್ಲಿ  ಗಂಡಸರು ಗಂಡರಿಂದಲೇ ‘ಸೆಕ್ಷುವಲ್ ಫೇವರ್‍ಸ್’ ಪಡೆದುಕೊಳ್ಳುವ ಕಾಸ್ಟಿಂಗ್ ಕೌಚ್ ಚಾಲ್ತಿಯಲ್ಲಿದೆ. ಅದು ‘Gay prostitution’ ಆಗಿ ಪರಿವರ್ತನೆಯಾದರೆ ಗತಿಯೇನು? ಈ ಹಿನ್ನೆಲೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶ ನೀಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಸಲಿಂಗ ಕಾಮಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ‘ಮ್ಯಾರೇಜ್’ ಎಂಬ ‘ಇನ್‌ಸ್ಟಿಟ್ಯೂಶನ್’ ಅನ್ನೇ ಬದಲಾಯಿಸಬೇಕಾಗಿ ಬರಬಹುದಲ್ಲವೆ? ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲ ಧರ್ಮಗುರುಗಳೂ ಒಕ್ಕೊರಲಿನಿಂದ ಏಕೆ ಸಲಿಂಗ ಕಾಮವನ್ನು ವಿರೋಧಿಸುತ್ತಿದ್ದಾರೆ? ಅವರ ಮಾತಿನಲ್ಲಿ ಅರ್ಥವಿಲ್ಲದೇ ಇದೆಯೇ? ಅವರು ವಿರೋಧದ ಹಿಂದೆ ಇರುವುದೂ ಸಾಮಾಜಿಕ ಕಳಕಳಿಯೇ ಅಲ್ಲವೆ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ LGBT rights (Lesbian, Gay, Bisexual and Transgender) ಎಂಬ ಹೋರಾಟ ನಡೆಯುತ್ತಿರುವುದು ನಿಜವಾದರೂ ಅಂತಹ ಹೋರಾಟವನ್ನು ಭಾರತದಲ್ಲೂ ಆರಂಭಿಸಬೇಕೆ? ‘Western Virtue’ಗಳನ್ನು ನಮ್ಮ ಸಮಾಜಕ್ಕೆ ಅನ್ವಯಿಸಲು, ಜಾರಿಗೆ ತರಲು ಹೊರಡುವುದು ಎಷ್ಟು ಸರಿ? ಪ್ರಜಾಪ್ರಭುತ್ವ ಹಾಗೂ ಅದು ಕೊಟ್ಟಿರುವ ಮೂಲಭೂತ ಹಕ್ಕುಗಳೆಂಬ Big Umbrella ಕೆಳಗೆ ಎಲ್ಲವನ್ನೂ ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಸುಲಭವೇ? ಹಾಗೂ ಸಾಧುವೆ? ತಮ್ಮ ಮಗನೋ ಮಗಳೋ ಸಲಿಂಗ ರತಿಯಲ್ಲಿ ತೊಡಗಿದರೆ ಪೋಷಕರಿಗೆ ಆಗುವ ನೋವು, ಸಾಮಾಜಿಕ ಅವಮಾನ ಗಣನೆಗೆ ತೆಗೆದುಕೊಳ್ಳಬೇಕಾದ ವಿಚಾರವಲ್ಲವೆ? ಸಲಿಂಗ ಕಾಮವೆಂಬುದು ಬರೀ ಲಾಜಿಕ್ಕಿನ ಪರಿಧಿಯೊಳಗೆ ನೋಡಬೇಕಾದ ವಿಚಾರವೋ ಅಥವಾ ಸಾಮಾಜಿಕ ಮೌಲ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕೋ?

ಯೋಚನೆ ಮಾಡಿ…

32 Responses to “ಸ್ವಚ್ಛಂದ ಕಾಮನ್ನೇ ಒಪ್ಪದ ಸಮಾಜದಲ್ಲಿ ಸಲಿಂಗ ಕಾಮ?!”

  1. Kiran says:

    Sorry pratap, this time i won’t agree with u,,, Homosexuals should have the freedom to do whatever makes them happy ,as long as it won’t affect others physically,, if homosexuality affects someone’s religious belief or someone mentally then its not fair to punish them criminally. Its just the way they are, they are born with it.
    ಯೋಚನೆ ಮಾಡಿ……..

  2. Guruprasad says:

    If homosexuality is the only way for them to have sexual pleasure, then they should be free to do it on mutual consent. It should not be compared with wife swapping, this is the act of sick minds.

    And you have written about fads.. and in that you have included, Tiger conservation and Forest conservation. I don’t know how working towards conservation or afforestation can be a fad(I said working not speaking)?? The reality is, there is no mankind without the forests. Appiko/Chipko movement activists are not the rich people who have no work to do.. But they were the villagers who had to work hard for their daily bread. Go and see at Kokkare Bellur, Kaggaladu villages, conservation is done by villagers but not the rich people with no work to do.

  3. putti says:

    ninge ishta illa andre madbeda bidu.bekadavru madkotare.

  4. Sanjeev kumar sirnoorkar says:

    ಅಬ್ಬ ಸಧ್ಯ ಇವತ್ತು ಸಿಕ್ತು ನಿಮ್ಮ ಲೇಖನ ಅದೂ ವೆಬ್ ನಲ್ಲಿ!!! ತುಂಬಾ ಅದ್ಭುತವಾತ ಲೇಖನ ಪ್ರತಾಪ್ ನಿಮ್ಮ points ಗಳನ್ನು ಪ್ರತಿಯೊಬ್ಬ ನಿಜವಾದ ಜವಾಬ್ದಾರಿಯುತ ಭಾರತೀಯ ನಾಗರೀಕ ಒಪ್ಪಲೇಬೇಕು. ಅಸಲು ಕರಣ್ ಜೋಹರ ಅಂತ ಒಬ್ಬ so called creative film director ತನ್ನ coffee with karan ಎನ್ನುವ ಡಬ್ಬ show ನಲ್ಲಿ ನಾಯಕ ನಯಿಕರಿಗೆ what is your opinion about sex? ಅಂತ ಪ್ರಶ್ನೆ ಕೇಳಿದನೋ ಅಂದೇ ಇದು ತೀರ ಕೆಳ ಮಟ್ಟಕ್ಕೆ ಇಳಿದು ಹೋಯ್ತು……ಸಿನಿಮ ನಾಯಕ ನಾಯಕಿಯರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು …..ಅಂಥವರು ಸ್ತನಗಳನ್ನು ಪ್ರದರ್ಶಿಸುತ್ತ public shows ಗಳಿಗೆ ಹೋಗುವ ನೀಚ ಮಟ್ಟಕ್ಕೆ ಇಳಿದಿದ್ದಾರೆ. ಚರಿತ್ರೆಯಲ್ಲಿ ಹೆಸರು ಮಡಿದ ಭಾರತೀಯ ಸ್ತ್ರೀಯ ಲಕ್ಷಣಗಳು ಇವೆಯೇ? ಎಂತಹ ವಿಪರ್ಯಾಸ ಇವರು ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳು ತುಂಬಾ ನೋವು ಉಂಟು ಮಾಡುತ್ತಿವೆ. so ಯಾವ sex ಅನ್ನೋ ವಿಷಯವನ್ನು ನಾಲ್ಕು ಗೋಡೆಗಳ ಮದ್ಧ್ಯೆ ಜನ ಮಾತಾಡುತಿದ್ದರೂ ಅಂತಹ ವಿಷಯವನ್ನು ಬಟ್ಟ ಬಯಲು ಅದೂ ಸಮಾಜದ ಸಭ್ಯ ವರ್ಗದ ಮುಂದೆ ಮಾತನಾಡುವ ಹೀನ ಸ್ತಿತಿಗೆ ನಾವು ಬಂದಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಈ ಸಲಿಂಗ ಕಾಮ ಮಣ್ಣು , ಮಸಿ , ಸುಡುಗಾಡು ಇದರ ಕಲ್ಪನೆಯೇ ಅತ್ತ್ಯಂತ ಘೋರ. ಇದು ಹೀಗೆ ಮುಂದುವರಿದರೆ…………?
    “ತನ್ನ ಜಯಿಸಿದ ಶಕ್ತನು , ಅವನೆಲ್ಲ ಜಯಿಸಿದ ಮುಕ್ತನು”….ಈ ಸಾಲುಗಳನ್ನು ಒಮ್ಮೆ ಯೋಚಿಸಿ….!!!!Thanks for the fentastic article pratap.
    ವಂದೇ ಭಾರತ ಮಾತರಂ .

  5. mysore huduga says:

    Section 377 tiddupadi madidare ok. Halagogli.

    Inmundhe our govt shouls also define the word RAPE. bari huduga hogi hudgina rape madi, police station li hudugi rape case hako kaala hotoythu 🙂

    Innu ratri mele hudugru safe agi odado kaala hotoythu, yaarig gothu hudugru rape ago chance jaasthine ide 🙂 amele hogi police station li rape case register adre, nam englissu media india great andru annathe 🙂

    377 section rocks 🙂 Pratap thanks for a good pen down

  6. Sushanth Banari says:

    Dear Pratap,
    If homosexuality isn’t a crime, then drinking and driving is also not a crime as both of these issues are concerned with ‘individual rights’ but by disturbing the ‘public health’. I too agree with your ‘FAD FACT’.
    Many people who’re thriving to make news were lagging behind these days, may be due to recession (lack of funding). But they’ve got an opportuinity by the new fad. But they’ll surely shut their mouth after they come face to face with some of these ‘abnormals’
    fir bhi…
    mera bharath mahaan

  7. Pravs says:

    yes, its a Fad…but its not something that’s new to India…
    abolishing the article 377 can be dangerous to the society, particularly when the youth population in India is close to 50%.
    How can anybody say that “sex with any living (may be even dead) is acceptable with mutual consent” when Living Partners relationship (or even the love marriages) is naive in Indian society.

    The verdict must be questioned

  8. Nagesh says:

    Just I was waiting for your article on section 377 verdict. Ofcourse I do agree about fad.

    We must raise our voice against
    Over expose of body in fashion shows by models,
    worst dresses of film heroines and heroes also.
    Worst advertisements of Lingerie, Alcohal , Cigaratte, Candoms, Dresses where woman are shown with less cloth on their body.
    Sometimes even the saree advertisements focus on chest of a woman not on saree. It is shameful that even our PSU’s are fall in line with this like Mysore Sandal Soap Advertisement.

    Respect woman don’t exploit- Surprised why women is not raising voice against this who play major role in building a healthy society with their children.

  9. sanjeev kumar sirnoorkar says:

    This is reply to putti’s comment……
    hello puttammanavare!!!!swalpa control nalli iri……neenu obba bharateeya hennu intaha maatugalannu aadalu swalpa nachike irali……munde ondu dina ninna makkale heege madidre ninnalli aaguva maanasika yaataneya bagge neenu yochane maadideya………
    sumne enenoo comment maadabeda………sari na….!

  10. kiran says:

    @mysore huduga @Pravs – Its mutual consent, u guys should understand it. Both agree for what they are doin. Pratap as explained section 377 well, understand it.

  11. kiran says:

    @Nagesh Hi buddy i understand ur concern and appreciate it, but u r askin way too much more. That all can’t be stopped,, its too late now,,, u should need communism rule for ur dream to come true…..

  12. Bharat N S says:

    Dear Pratap,

    I am sure you understand the difference between de-criminalizing homosexuality, and same sex union. Although the latter is not possible without the former, Indian Social structure has its checks and balances to protect itself from degenerating into a typical third world nation fast trying to catch up with west (such as Philippines, for e.g.). Try to look at the positive aspect of it, the courts have decided that homosexuality is legal only if it happens between to consenting adults having attained the age of 21 years. This can definitely prevent young and impressionable minds of teenagers. They tend to get carried away by peer pressure/ aggressive Gay evangelism, as described by a leading English Columnist. While declaring the highly personal, nature driven homosexuality as legal, the courts have not given their sanction to same sex marriage. Now it is left to Social Institutions and religious orders to prevent any such anomalies which could arise in the name of sexual freedom. I am sorry to say that by wasting your precious thoughts for some thing so trivial, you are in way giving the importance to the so-called Gay Evangelists, which they certainly do not deserve!!

  13. Bharat N S says:

    Another word about a factual error in your write up, AIDS is not spreading because of Homosexuality in India, not any more! Sir. It is now through un-protected sex with infected people, even if it is a heterosexual intercourse.

  14. once i was watching an award function,may be filmfare,with my family members.they were showing the nominations for ‘best scene’ of the year.one of the nominations was a scene from Dostana.it was the kissing scene of Abhishek and John.it was so embarassing to see that with my parents.i just changed the channel.the thing which made me wonder was,that it was nominated for the best scene.how can such dirty thing can be the best scene??????now a days gay jokes have become common in bollywood award functions…….
    don’t know what all things the govt. is going to legalise…….
    its horrible to imagine the future society with such people.i don’t know the scientific reason behind it but i am sure its against nature.if it is according to the laws of nature then why did nature create ‘WOMEN’……

  15. Mysore huduga says:

    @Kiran
    Gurugale, even male and female sexual relations is also mutual consent. We here are talking about type of sexual relation or the type of mutual consent. If each and everyone in this country are so law abiding persons there would been no Rape cases right? Now another type of relation has become legal. Probably we will be hearing male getting raped by another male in coming days 🙂

  16. kiran says:

    @mysore huduga
    Sishya mysore huduga so u think by keeping this section there won’t be rape on men by men?, and there are such incidents happenin already(the kind of rape u mentioned) if that happens most of them don go to police,,, i guess by removing this section and making some changes to the section definin rape, ur problem can be solved,,,,
    @Bhargavi Bhat –Then wat about the other scenes where guy and gal kiss, won’t it be annoying? so will u ask government to stop that relation too…?
    And its not against nature or god,,,, they are born like that. Nature created them too, don forget it….And u can’t predict nature…. It acts in its own mysterious ways,,, and this is one of it. …..

  17. Ravi says:

    Hi I am realy loving to read comment more then mail article; but any war very good article Prataap!!

  18. Pravs says:

    @kiran,
    look @ the young crowd today, many of them have adapted the western culture , when these laws are not legislated, its makes easier to adopt these Screwy , absurd and etc… etc… things into their lives. Off late most of our parenting culture has changed to larger extent such as giving children freedom in shaping the future, accepting love marriages, these are much like western culture, which I welcome ,keeping the basic principles like safeguarding, cautioning @ every step and etc… When our parents (30 years elder to me) have adapted to our needs , shouldn’t we safe guard our basic principles of our culture for parents sake, for our own sake and for the future generation. Forget Indian culture, isn’t against the natural to have intercourse with with same sex ? which book of sex or religion has encourages this “Openly”…

    Day are not far when people will fear using public toilets, you don’t know what kind of proposal you get (esp the gents toilet where two toilets seats are separated with thin wall, someone might start luring)….

    Finally I’m happy Shiney Ahuja had sex with his maid , not with his driver.

  19. Chethan, Coorg says:

    Ayoo Yen bekadru aagli…. kelavru accept madikoltare.. inna kelavru illa… E section 377 inda nange problem aagilla andre sake bere avrinda 🙂

  20. kiran says:

    @Pravs Ancient Hindu scriptures, such as Rig Veda make clear mention to sexual acts between women. Further the carvings and depictions in the famous temples of Khajuraho, Konark, Puri are proof of the same.
    Stories of Muslim Nawabs and Hindu noblemen with habits such as maintaining a harem full of young boys also point towards the existence of the notion of same sex relationships. Not to overlook the fact that India is also the birthplace of the Vatsayan’s Kamasutra, which is hailed as the bible of intimate acts, that includes a complete chapter referring to homosexuality.
    With the coming of the Aryans in 1500 B.C., and assertion of the patriarchal system of society, homosexual tendencies were looked down upon and suppressed. Links to the same find a mention in the Manusmriti, which discusses punishment for homosexual behavior and this directly indicates that the norm of compulsory heterosexuality was preached and prescribed by the Brahmins(nothing offense meant).
    With the advent of the British Raj came the Puritanical values, which regarded display of sexuality as evil or satanic. To the Puritans, sex existed for the sole reason of procreation, and thus homosexuality was considered to be contrary to God’s will.
    In the 20th Century, slowly but steadily, world over the concept of homosexuality became somewhat acceptable. The American Psychiatric Association removed homosexuality from its Diagnostic and Statistical Manual of Psychiatric Disorder in 1973 and the American Psychological Association followed suit in 1975. The World Health Organization also removed it from its list of mental illnesses in 1981. The turning point was when the Vatican published an article in 1975 called ‘Declaration on Certain Questions Concerning Sexual Ethics’. It said, For some individuals homosexuality is an innate instinct. This makes it reasonable for us to conclude, that even the Church had now accepted, the fact that for some people homosexuality is their natural preference and that is how God has created them. Even though the Church still discourages such acts they were forced to accept the existence of the same.
    So what say you?

  21. Pavan says:

    100% – 0.3 is not 97.7. its 99.7.

    Anyways this is the reason i like Mr. Simha. He always has a different view of everything and that view which nobody would have had thought. Hats Off man!!!!!! Keep up the good work. Expecting a lot more from u.

    —–Pavan

  22. dev says:

    salinga kamakke nanna virodhavilla. yakandare adu avaravara ishta. aadare indiadalli tamage ishtaviddavarodane bisexualge kanunu adda barutthe, innu gaysexge yake anumathi kodtira? oba huduga hagu hudugi ishtapattu LODGEnalli room madkondu maja madidre POLICE raid madtare anno bhayaviratte. sarkara idakke yake PERMISSION kodbardu? modalu idakke SC Kanunu tiddupadi madli. amele bekadare gaysexualge anumati kodli, enanteera?

  23. manju says:

    yes, that fist of what he wrote about N G O very true .

    Please look about article , and think about future generation

  24. manju says:

    ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ ‘Animal Rights’ ಎಂಬ ಹೊಸ ಫ್ಯಾಡ್ ಬಂತು. ಈ ಮೇನಕಾ ಗಾಂಧಿ ಮುಂತಾದವರು ‘ಆನಿಮಲ್ ರೈಟ್ಸ್’ ಎಂದಂದುಕೊಂಡು ಕಂಡಕಂಡವರನ್ನೆಲ್ಲ ಕಚ್ಚುವ ಬೀದಿನಾಯಿಗಳ ಪರವಾಗಿ, ಅವುಗಳನ್ನು ಕೊಲ್ಲುವ ಕಾರ್ಪೊರೇಶನ್‌ಗಳ ವಿರುದ್ಧವಾಗಿ ಟೊಂಕಕಟ್ಟಿ ನಿಂತರು! ಅದರ ಬೆನ್ನಲ್ಲೇ ಹಾಗೂ ಅದಕ್ಕೇ ಸಂಬಂಧಿಸಿದ ‘ವೆಜಿಟೇರಿಯನಿಸಂ’ ಆರಂಭವಾಯಿತು. ಪ್ರಾಣಿಹತ್ಯೆ ವಿರುದ್ಧ, ಲೆದರ್ ಬಳಸುವುದರ ವಿರುದ್ಧ ಕೂಗಾಟ ಆರಂಭವಾಯಿತು. ಆಮೇಲೆ “Child Rights’, “Tribal Rights’, “Tiger Conservation’, “Forest Preservation’ ಮುಂತಾದುವುಗಳು ಆರಂಭವಾದವು. ಎಲ್ಲವೂ ಮುಗಿದ ಮೇಲೆ “Trekking’ನಂಥ ವಿಷಯವನ್ನೂ ಬಿಡಲಿಲ್ಲ. ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುವವರಾದರೂ ಯಾರು? ಕೈತುಂಬಾ ಹಣವಿರುವ, ಮಾಡಲು ಕೆಲಸವಿಲ್ಲದ, ಮಾತನಾಡಲು ಇಂಗ್ಲಿಷ್ ಬರುವ ಪ್ರಚಾರಪ್ರಿಯ ಆತ್ಮಗಳೇ. kindly
    ಎಂತಹ ವಿಪರ್ಯಾಸ ಇವರು ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳು ತುಂಬಾ ನೋವು ಉಂಟು ಮಾಡುತ್ತಿವೆ.

  25. Supremethinker says:

    Homosexuality is totally meaningless.Pratap i support your article.whoever supports the homosexuality they are mad.Several things are in life to achive.our high court is one of the junk place simply wasting time for this matter.

  26. raju says:

    hai pratap anna,
    its fact and truthnes, but know one can understand truthness they all think about only what they will do that is correct way thats why ? we are …………

    raju b r

  27. suma says:

    Hi Pratap,
    I do not agree with you. I just ask you one simple question, I am a purely heterosexual by birth and by choice as well, and I assume that you are also a heterosexual. Would you like to have “enjoy” a man? ( I can’t either) . If you answered honestly, you got my point!. –

  28. Shreedevi says:

    I like your articles very much yaar…it gives mutliple views, mutliple ways of thinking…you are simply superb, wish you more success, take care

  29. shivaprasad udupi says:

    hi sir i ;like ur bettale jagattu very much,
    homosex bagge heluvudadre idondu neecha hesigeya sex anta namma hindu sanskratiya yallide….
    e bevarsi film maker karan johar nanthaha neecha manushyaru bharatiya samajakke kalanka, heege adre film industry namma desha dalli hindu sanskratiye illavagisuttade……….
    idara bagge yaradru comment maduvavaru hindu dharma virodigalu

  30. ಲೋ ದ್ಯಾ ಶಿ says:

    ಈ ತೀರ್ಪು ಬಂದ ದಿನ ನಾನು ಡೆಲ್ಲಿ ಇಂದ ಬೆಂಗಳೂರು ಗೆ ಬರ್ತಾ ಇದ್ದೆ…
    ಡೆಲ್ಲಿ TOI ನಲ್ಲಿ ಸುಮಾರು 70 ಭಾಗ ಇದರ ಬಗ್ಗೆನೇ ಬರಿದಿದ್ರು…

    ಈ ವಿಷಯದ ಬಗ್ಗೆ ನಮ್ಮ ಜನ ತಲೆ ಕೆಡಿಸ್ಕೊಳ್ಳೋದು ಬಿಟ್ಟು ತಮ್ಮ ಹೆಂಡ್ತಿ ಮಕ್ಕಳ ಬಗ್ಗೆ ನಾದ್ರೂ ತಲೆ ಕೆಡಿಸ್ಕೊಂದ್ರೆ, ಎಸ್ಟೊಂದು ಸಂಸಾರಗಳು ಉದ್ದಾರ ಆಗಬಹುದೇನೋ…

    ಇರಲಿ, ಪ್ರತಾಪ್, ನಮ್ಮ ಜನ ಬುದ್ದಿ ಕಲಿಯಲ್ಲ ರೀ… ನಿಮ್ಮ ಬರವಣಿಗೆನ ಮುಂದು ವರಿಸಿ… ಯಾಕಂದ್ರೆ ನಮ್ಮಂತ ನಿಮ್ಮಂತ ಅನೇಕರು ಸ್ವಲ್ಪ ಹೊತ್ತು ನಮ್ಮ ಸಮಾಜದ ಆಗು-ಹೋಗುಗಳನ್ನ ಚರ್ಚಿಸೋದ್ರಲ್ಲಿ ನಮ್ಮ ಸಮಾಜದ ಒಳಿತು ಇದೆ ಅನ್ನೋದು ನನ್ನ ಭಾವನೆ..

    -ಲೋ ದ್ಯಾ ಶಿ

  31. pramod says:

    Hi
    I don’t to say my view whether homosexuality is right or wrong but i just wanted to say watch movie “Milk” on life of Harvey Milk and also talk of it’s
    screen play writer in Oscar award ceremony this year.

  32. parvathi thanaya says:

    dear prathap i dont agree with u. homosexuality is not any ones wish. birth is not in our contro. homosexuality is caused by some hormone dificiency. they cant conrol their attraction towards same sex. unfortunately they attracted by the same sex. they are suffering from unknown pain. this is my own experience. can u guess my pain? i am living with untollerable pain