Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಬೆಳಗಾಗುವಷ್ಟರಲ್ಲಿ ಆ ಹಾಡಿಗೆ ಅವನೇ ಅನ್ವರ್ಥನಾಗಿದ್ದ!

ಬೆಳಗಾಗುವಷ್ಟರಲ್ಲಿ ಆ ಹಾಡಿಗೆ ಅವನೇ ಅನ್ವರ್ಥನಾಗಿದ್ದ!

Like A Comet
Blazing ‘Cross The Evening Sky
Gone Too Soon

Like A Rainbow
Fading In The Twinkling Of An Eye
Gone Too Soon

Like A Sunset
Dying With The Rising Of The Moon
Gone Too Soon…

ವಿಶ್ವವಿಖ್ಯಾತ ‘ಡೇಂಜರಸ್’ ಆಲ್ಬಮ್‌ನಲ್ಲಿ ‘Gone Too Soon’ ಎಂಬ ಇಂಥದ್ದೊಂದು ಹಾಡಿದೆ. ಭಾರತೀಯರಾದ ನಾವು ಶುಕ್ರವಾರ ಬೆಳಗ್ಗೆ ಕಣ್ಣುಬಿಡುವಷ್ಟರಲ್ಲಿ ಆ ಗೀತೆಯನ್ನು ಬರೆದು ಹಾಡಿದ್ದ ವ್ಯಕ್ತಿಯೇ ಅನ್ವರ್ಥವಾಗಿದ್ದ. ಐವತ್ತು ವರ್ಷ ಖಂಡಿತ ಸಾಯುವ ವಯಸ್ಸಲ್ಲ. “He never missed the beat, But the beat missed him today” ಎಂದು ಹೃದಯಾಘಾತಕ್ಕೆ ತುತ್ತಾಗಿದ್ದ ಆತನ ಅಕಾಲಿಕ ಮರಣದ ಬಗ್ಗೆ ಸಿಎನ್‌ಎನ್ ಚಾನೆಲ್‌ನಲ್ಲಿ ಲ್ಯಾರಿ ಕಿಂಗ್ ಭಾವನಾತ್ಮಕವಾಗಿ ವರ್ಣಿಸಿದ್ದು ನಿಜಕ್ಕೂ ಅರ್ಥಗರ್ಭಿತವಾಗಿತ್ತು. ಆದರೆ ಅವನ ಅಗಲಿಕೆಯನ್ನು ಒಪ್ಪಿಕೊಳ್ಳಲು ಮನಸ್ಸಿಗೆ ಮಾತ್ರ ಕಷ್ಟವಾಗುತ್ತಿತ್ತು. ಅಷ್ಟಕ್ಕೂ ಅವನು ನಮ್ಮ ತಲೆಮಾರಿನವರ ಹೀರೋ. ಬ್ರೂಸ್ ಲೀ, ಜಾಕಿ ಚಾನ್, ಸ್ಟ್ಯಾಲನ್, ಆರ್ನಾಲ್ಡ್, ವಿವಿಯನ್ ರಿಚರ್ಡ್ಸ್, ಸಚಿನ್, ಬೆಕರ್, ಸ್ಯಾಂಪ್ರಾಸ್, ಅಗಾಸಿ, ರೊಮಾರಿಯೋ, ಬ್ಯಾಜಿಯೋ, ಸೆನ್ನಾ, ಶುಮಿ, ಕಾರ್ಲ್ ಲೂಯಿಸ್, ಮೈಕೆಲ್ ಜಾನ್ಸನ್, ಟೈಸನ್ ಇವರೆಲ್ಲ ನಮಗೆ ಬರೀ ತಾರೆಗಳಾಗಿ ಉಳಿದವರಲ್ಲ. ಅವರಂತೆ ಫೈಟ್ ಮಾಡುವುದನ್ನು, ಸಿಕ್ಸರ್ ಹೊಡೆಯುವುದನ್ನು, ಫುಟ್ಭಾಲ್ ಆಡುವುದನ್ನು, ಕಾರು ಚಾಲನೆ ಮಾಡುವುದನ್ನು, ಓಡುವುದನ್ನು ಮನದಲ್ಲೇ ಕಲ್ಪಿಸಿಕೊಂಡು, ಆ ಕಲ್ಪನೆ ಕೊಡುವ ಸುಖವನ್ನು ಸವಿದವರು, ಅದೇ ವಾಸ್ತವವೆಂಬಂತೆ ಬೀಗಿದವರು ನಾವು. ಈಗಿನವರಂತೆ ನಾವೆಂದೂ ಅಂಕಿ-ಅಂಶಗಳನ್ನು ತುಲನೆ ಮಾಡಿ, ನಿರ್ಭಾವುಕರಾಗಿ ಗ್ರೇಟ್‌ನೆಸ್ ಅಳೆದವ ರಲ್ಲ. ಹೃದಯದ ಗೂಡೊಳಗೆ ಅವರನ್ನು ಬಿಟ್ಟುಕೊಂಡು ಆರಾಧನೆ ಮಾಡುತ್ತಾ ಬಂದಿದ್ದೇವೆ. ನಮ್ಮ ಹಿಂದಿನ ತಲೆಮಾರಿನವರಿಗೆ ಎಲ್ವಿಸ್ ಪ್ರೆಸ್ಲಿ ಹೇಗೋ, ನಮ್ಮ ತಲೆಮಾರಿನವರಿಗೆ ಮೈಕೆಲ್ ಜಾಕ್ಸನ್ ಹಾಗೇ. Lyrics  ಅರ್ಥವಾಗದಿದ್ದರೂ ಬೀಟ್ಸ್‌ಗಾಗಿ ಅವನ ಹಾಡುಗಳನ್ನು ಕೇಳುತ್ತಿದ್ದೆವು. “ನಾನೇನಾಗಿದ್ದೇನೋ ಅದಕ್ಕೆ ಮೈಕೆಲ್ ಜಾಕ್ಸನ್ ಕಾರಣ. ನನ್ನ ನೆನಪಿಗೆ ಬರುವುದು ಆತನ ಹಾಡು ಮತ್ತು ನೃತ್ಯ ಮಾತ್ರ” ಎನ್ನುತ್ತಿದ್ದಾರೆ ‘ಕಾದಲನ್’ ಚಿತ್ರದ ಮೂಲಕ ನಮ್ಮ ಚಿತ್ರರಂಗದ ನೃತ್ಯಕ್ಕೆ ಹೊಸ ಆಯಾಮ ನೀಡಿದ ಪ್ರಭುದೇವ.  “ಮೈಕೆಲ್ ಜಾಕ್ಸನ್ ಇಲ್ಲದಿದ್ದರೆ ನಾನು ‘ಡಿಸ್ಕೋ ಡಾನ್ಸರ್’ ಚಿತ್ರವನ್ನು ಮಾಡುವುದಕ್ಕೇ ಆಗುತ್ತಿರಲಿಲ್ಲ” ಎಂದು ಮಿಥುನ್ ಹೇಳುತ್ತಿದ್ದಾರೆ.

ಆತನ ಮೋಡಿಗೆ ಒಳಗಾಗದವರೇ ಇಲ್ಲ.

1996ರಲ್ಲಿ ಮೈಕೆಲ್ ಜಾಕ್ಸನ್‌ನನ್ನು ಮುಂಬೈಗೆ ಕರೆಸಿದ್ದು ಹಿಂದೂ ರಾಷ್ಟ್ರವಾದಿ ಬಾಳಾ ಠಾಕ್ರೆ ಎಂದರೆ ಈಗಿನವರಿಗೆ ನಂಬಲು ಸಾಧ್ಯವಿದೆಯೆ?! “ಯಾರವನು ಮೈಕೆಲ್ ಜಾಕ್ಸನ್? ಹಿಂದೂ ಸಂಸ್ಕೃತಿಗೂ ಆತನಿಗೂ ಏನು ಸಂಬಂಧ?” ಎಂದು ಕೆಲವು ಟೀಕಾಕಾರರು ಪ್ರಶ್ನಿಸಿದಾಗ, “ಜಾಕ್ಸನ್ ಒಬ್ಬ ಮಹಾನ್ ಕಲಾವಿದ. ಆತನನ್ನು ಕಲಾವಿದನನ್ನಾಗಿಯೇ ಒಪ್ಪಿಕೊಳ್ಳಬೇಕು. ಆತನಂತೆ ಡಾನ್ಸ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಪ್ರಯತ್ನಿಸಿದರೆ ಮೂಳೆ ಮುರಿದುಕೊಳ್ಳಬೇಕಾಗುತ್ತದೆ”, “ಇನ್ನು ಸಂಸ್ಕೃತಿ ಎಂದರೇನು? ಮೈಕೆಲ್ ಜಾಕ್ಸನ್ ಅಮೆರಿಕದ ಒಂದಿಷ್ಟು ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. ಅದನ್ನು ಒಪ್ಪಿಕೊಳ್ಳಲು ಭಾರತೀಯರಿಗೆ ಯಾವ ಹಿಂಜರಿಕೆಯೂ ಇರಬಾರದು” ಎಂದು ಬಾಳಾ ಠಾಕ್ರೆ ಮಾರುತ್ತರ ನೀಡಿದ್ದರು.

“ಆತನ ಅಭಿಮಾನಿಗಳು ಎಂಟು ವರ್ಷದವರಿಂದ ಎಂಬತ್ತೆಂಟು ವರ್ಷದವರವರೆಗೂ ಇದ್ದಾರೆ” ಎನ್ನುವ ಪತ್ರಕರ್ತ ರಶೋದ್ ವಲ್ಲಿಸನ್ ಅವರ ಮಾತುಗಳು ನಿಜಕ್ಕೂ ಅರ್ಥ ಗರ್ಭಿತ. ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಕೂಡ ಮೈಕೆಲ್ ಜಾಕ್ಸನ್‌ನೊಂದಿಗೆ ತನ್ನನ್ನು ರಿಲೇಟ್ ಮಾಡಿಕೊಳ್ಳಬಹುದು. ಆತನ ಜೀವನೋತ್ಸಾಹವೇ ಅಂಥದ್ದಾಗಿತ್ತು. ಮೈಯಲ್ಲಿ ಮೂಳೆಯೇ ಇಲ್ಲದವನಂತೆ ಆತ ಮಾಡುತ್ತಿದ್ದ ರೋಬೋ, ಬ್ರೇಕ್‌ಡಾನ್ಸ್, ಮೂನ್‌ವಾಕ್ ಅನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ನಮಗಿಂತ ಮೊದಲಿನ ತಲೆಮಾರಿನವರು ಎಲ್ವಿಸ್ ಪ್ರೆಸ್ಲಿ, ಬಾಬ್ ಡೈಲಾನ್, ಜಾನ್ ವಿನ್‌ಸ್ಟನ್ ಲೆನಾನ್, ಪಾಲ್ ಮೆಕಾರ್ಟ್ನಿ, ಫಿಲ್ ಕಾಲಿನ್ಸ್ ಮುಂತಾದವರನ್ನು ಇಷ್ಟಪಟ್ಟಿರಬಹುದು. ಆದರೆ ಚಾರ್ಲಿ ಚಾಪ್ಲಿನ್ ನಂತರ ಎಷ್ಟೇ ಒಳ್ಳೆಯ ಹಾಸ್ಯ ನಟರು ಬಂದಿದ್ದರೂ ಹೇಗೆ ಯಾರೂ ಚಾಪ್ಲಿನ್‌ನಷ್ಟು ಇಷ್ಟವಾಗುವುದಿಲ್ಲವೋ ಹಾಗೆಯೇ ಮೈಕೆಲ್ ಜಾಕ್ಸನ್ ಯಾವತ್ತೂ ನಮಗೆ ಸ್ಪೆಷಲ್. ABC, The Love You Save, I’ll Be There ಮುಂತಾದ ಐದು ಹಾಡುಗಳನ್ನು ಹೊಂದಿದ್ದ “ಜಾಕ್ಸನ್ 5″ ಆಲ್ಬಮ್‌ನೊಂದಿಗೆ 1969 ಅಕ್ಟೋಬರ್‌ನಲ್ಲಿ ಪಾಪ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಾಗ ಜಾಕ್ಸನ್‌ಗೆ 11 ವರ್ಷ.

ಇವತ್ತು ಯಾವುದಾದರೂ ಹುಡುಗ ಚೆನ್ನಾಗಿ ಡಾನ್ಸ್ ಮಾಡಿ ದರೆ ಹೃತಿಕ್ ರೋಶನ್, ಪ್ರಭುದೇವಾ ನೆನಪಾಗಬಹುದು. ಆದರೆ ಹತ್ತು ವರ್ಷಗಳ ಹಿಂದಿನವರೆಗೂ ಜಾಕ್ಸನ್ ಎಂದರೆ ಬ್ರೇಕ್ ಡಾನ್ಸ್, ಮೂನ್ ವಾಕ್ ನೆನಪಾಗುತ್ತಿತ್ತು. “ಏನೋ ಜಾಕ್ಸನ್ ಥರಾ ಕುಣಿಯುತ್ತೀಯಾ? ಅವನು ಮೈಕೆಲ್ ಜಾಕ್ಸನ್, ನೀನು ಸೈಕಲ್ ಜಾಕ್ಸನ್ನಾ?” ಎಂದು ಕಿಚಾಯಿಸುತ್ತಿದ್ದರು. ಮೈಕೆಲ್ ಜಾಕ್ಸನ್ ಎಂದೋ ಮಾಡಿದ ಡಾನ್ಸ್‌ನ ಕಳಪೆ ಕಾಪಿಯೇ “ಕ್ರೇಝಿ-೪” ಚಿತ್ರದಲ್ಲಿ ಹೃತಿಕ್ ರೋಶನ್ ಮಾಡಿರುವುದು!! ಪ್ರಭುದೇವನ ‘ಮುಖಾಬಲ’ ಹಾಡಿನ ನೃತ್ಯವೂ ನಕಲೇ ಆಗಿದೆ. ಹಾಗಂತ ಮೈಕೆಲ್ ಜಾಕ್ಸನ್ ಕೇವಲ ಒಬ್ಬ ಉತ್ತಮ ಡಾನ್ಸರ್ ಆಗಿರಲಿಲ್ಲ. ಮನಮುಟ್ಟುವ ಸಾಹಿತ್ಯ ರಚನೆಯ ಮೂಲಕ ಪಾಪ್ ಸಂಗೀತವೆಂದರೆ ಬರೀ ಸದ್ದು ಗದ್ದಲವಲ್ಲ ಎಂಬುದನ್ನು ಸಾಬೀತು ಮಾಡಿದವರಲ್ಲಿ ಅವನೂ ಒಬ್ಬ.

She’s Out Of My Life
She’s Out Of My Life
And I Don’t Know Whether To Laugh Or Cry
I Don’t Know Whether To Live Or Die
And It Cuts Like A Knife
She’s Out Of My Life

I Don’t Need No Dreams When I’m By Your Side
Every Moment Takes Me To Paradise
Darlin’, Let Me Hold You
Warm You In My Arms And Melt Your Fears Away
Show You All The Magic That A Perfect Love Can
Make
I Need You Night And Day

ಅವನ ಹಾಡುಗಳಲ್ಲಿ ನೋವೂ ಇದೆ, ನಲಿವೂ ಇದೆ, ಹತಾಶೆಯೂ ವ್ಯಕ್ತವಾಗುತ್ತದೆ, Foot Tapping ಕೂಡ ಆಗಿವೆ. ನಮ್ಮಂತೆ ಹಾಡು ಬರೆಯುವುದು ಯಾರೋ, ಹಾಡುವುದು ಇನ್ಯಾರೋ, ತುಟಿ ಪಿಟಿಪಿಟಿ ಮಾಡುವುದು ಮತ್ಯಾರೋ ಅಲ್ಲ. ಈ ಎಲ್ಲವೂ ಅವನು ಸ್ವತಃ ಬರೆದು, ಹಾಡಿ, ಕುಣಿದ ಹಾಡುಗಳೇ. 1982, ಡಿಸೆಂಬರ್ 1 ರಂದು ಬಿಡುಗಡೆಯಾದ ಆತನ ‘ಥ್ರಿಲ್ಲರ್” ಆಲ್ಬಮ್ ಸತತ ೩೭ ವಾರಗಳ ಕಾಲ ನಂಬರ್-1 ಸ್ಥಾನದಲ್ಲಿತ್ತು.  10 ಕೋಟಿ ಕಾಪಿಗಳು ಮಾರಾಟವಾದವು. ಇಂದಿಗೂ ಆ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ಥ್ರಿಲ್ಲರ್‌ನಲ್ಲಿದ್ದ “Beat It” ಹಾಡಿನ ಬಗ್ಗೆ ಬರೆಯುತ್ತಾ “ಆ ಹಾಡು ಸಂಗೀತವನ್ನು ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು” ಎಂದಿತು ‘ರೋಲಿಂಗ್ ಸ್ಟೋನ್’ ಮ್ಯಾಗಝಿನ್. ಮತ್ತೊಂದು ಹಾಡು “Billie Jean” 7 ವಾರಗಳ ಕಾಲ ನಂಬರ್-1 ಪಟ್ಟ ಆಕ್ರಮಿಸಿತು. “ಬ್ಯಾಡ್”ಗಿಂತ ಮೊದಲು ಬಿಡುಗಡೆಯಾದ ಸೀಡ್ಹಾ ಗ್ಯಾರೆಟ್ ಜತೆಗಿನ “I Just Can’t Stop Loving You” ಯುಗಳ ಗೀತೆ ಜನರನ್ನು ವಾಸ್ತವದಲ್ಲಿ ಹುಚ್ಚೆಬ್ಬಿಸಿತು. 1992ರಲ್ಲಿ ಅಮೆರಿಕದ ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ ಫೈನಲ್ ಪಂದ್ಯದ ಮಧ್ಯಂತರ ಅವಧಿಯಲ್ಲಿ ಆಯೋಜನೆಯಾಗಿದ್ದ ಮೈಕೆಲ್ ಜಾಕ್ಸನ್ ಶೋವನ್ನು ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸುವ ಮೂಲಕ ಯಾರೂ ಮುರಿಯಲಾಗದ ದಾಖಲೆ ಸೃಷ್ಟಿಯಾಯಿತು.

Zoom to Zenith, Fall to Nadir!

ಅನ್ನುವ ಹಾಗೆ, ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಮೈಕೆಲ್ ಜಾಕ್ಸನ್ ವಿವಾದಗಳ ಸುಳಿಗೆ ಸಿಲುಕಿ ಕೊಳಕನೆನಿಸಿ ಕೊಂಡ. ೧೯೯೩, ಸೆಪ್ಟೆಂಬರ್ ೧೫ರಂದು ೧೩ ವರ್ಷದ ಬಾಲಕ ನೊಬ್ಬ ಜಾಕ್ಸನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ. ಅದು ಜಾಕ್ಸನ್‌ನನ್ನು ಎಷ್ಟು ಪೇಚಿಗೀಡು ಮಾಡಿತೆಂದರೆ ೨೨ ದಶಲಕ್ಷ ಡಾಲರ್ ಪರಿಹಾರ ಕೊಟ್ಟು ಕೋರ್ಟ್‌ನ ಹೊರಗೆ ವಿವಾದಕ್ಕೆ ತೆರೆ ಎಳೆಯಬೇಕಾಗಿ ಬಂತು. ಆದರೂ ವಿವಾದಗಳು ಬಿಡಲಿಲ್ಲ. ಇವತ್ತು ಜಾಕ್ಸನ್‌ನ ಹೆಸರೆತ್ತಿದರೆ ಬಹುಶಃ ಈಗಿನ ತಲೆಮಾರಿಗೆ ಆತನ ವಿಕೃತ ಮುಖವೇ ನೆನಪಾಗುತ್ತದೆ. ೨೦೦೫ರವರೆಗೂ ನಡೆದ ಕೋರ್ಟ್ ವಿಚಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳೇ ಕಣ್ಣಮುಂದೆ ಬರುತ್ತವೆ.

ಇಂತಹ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾದರೂ ಏನು?

ಹಗಲು ಉಕ್ಕಿನ ಕಾರ್ಖಾನೆಯಲ್ಲಿ ದುಡಿದು ರಾತ್ರಿ ಸಂಗೀತ ನುಡಿಸುತ್ತಿದ್ದ ಜೋ ಜಾಕ್ಸನ್ ಒಬ್ಬ Failed ‘ಆರ್ ಆಂಡ್ ಬಿ’(Rhythm and Blues) ಪರ್ಫಾರ್ಮರ್. ಎಷ್ಟೋ ಅಪ್ಪ-ಅಮ್ಮಂದಿರು ತಮ್ಮಿಂದಾಗದ್ದನ್ನು ಮಕ್ಕಳ ಮೂಲಕ ಸಾಧಿಸಲು ಹಂಬಲಿಸುತ್ತಾರೆ. ಹಾಗೆಯೇ ಜೋ ಜಾಕ್ಸನ್ ಮಕ್ಕಳ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಳ್ಳಬೇಕೆಂದು ಹಂಬಲಿಸತೊಡಗಿದ. ಇಂತಹ ಹಂಬಲ ಮತ್ತೆ ಹತಾಶೆಯಾಗಿ ಪರಿಣಮಿಸಿ ಕೆಲವು ಸಲ ಮಕ್ಕಳ ಜತೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಒಮ್ಮೆ ಮೈಕೆಲ್ ಜಾಕ್ಸನ್ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಭೂತದ ವೇಷ ಹಾಕಿಕೊಂಡು ಕಿಟಕಿಯ ಮೂಲಕ ಆಗಮಿಸಿದ ಜೋ ಜಾಕ್ಸನ್ ಮಗನನ್ನು ಭಯಭೀತಗೊಳಿಸಿದ್ದ. ರಾತ್ರಿ ವೇಳೆ ಕಿಟಕಿ ಮುಚ್ಚಿ ಮಲಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಹಾಗೆ ಮಾಡಿದೆ ಎಂದು ಸಮಜಾಯಿಷಿ ನೀಡಿದ. ಆದರೆ ಆ ಘಟನೆ ಮೈಕೆಲ್ ಜಾಕ್ಸನ್‌ನನ್ನು ಎಷ್ಟು ಅಧೀರನನ್ನಾಗಿ ಮಾಡಿತು ಎಂದರೆ ಎಷ್ಟೋ ವರ್ಷಗಳವರೆಗೂ ಬೆಡ್‌ರೂಮ್‌ನಿಂದ ತನ್ನನ್ನು ಯಾರೋ ಅಪಹರಿಸುತ್ತಿರುವಂತೆ ದುಃಸ್ವಪ್ನಗಳು ಬೀಳಲಾರಂಭಿಸಿದವು. ಆತನ ಥ್ರಿಲ್ಲರ್ ಆಲ್ಬಮ್‌ನಲ್ಲಿ ಈ ಭಯದ ಛಾಯೆಗಳಿವೆ. ಅಪ್ಪನ ವಿಚಿತ್ರ ವರ್ತನೆ ಮತ್ತು ಶ್ವೇತವರ್ಣೀಯರಿಂದ ಕೂಡಿದ್ದ ತಾರತಮ್ಯಯುತ ಜಗತ್ತು ಕಪ್ಪು ವರ್ಣೀಯನಾದ ಆತನ ಮೇಲೆ ಕೆಟ್ಟ ಪರಿಣಾಮ ಬೀರಿದವು. ಅದಕ್ಕಾಗಿಯೇ ಪ್ಲಾಸ್ಟಿಕ್ ಸರ್ಜರಿಯ ಮೂಲಕ ತನ್ನ ತೊಗಲಿನ ಬಣ್ಣವನ್ನೇ ಬದಲಾಯಿಸಿಕೊಳ್ಳಲು ಹೊರಟ!

I Said If
You’re Thinkin’ Of
Being My Brother
It Don’t Matter If You’re
Black Or White

ಅಥವಾ

Beat me, hate me
You can never break me
Will me, thrill me
You can never kill me
Jew me, sue me
Everybody do me
Kick me, kick me
Don’t you black or white me

All I wanna say is that
They don’t really care about us

ಈ ಗೀತೆಗಳಲ್ಲಿ ಆತನ ನೋವು, ಹತಾಶೆಯನ್ನು ಕಾಣಬಹುದು. ಇವತ್ತು ಕಾಣುವ ಇಂಟರ್‌ನೆಟ್, ಸೆಲ್‌ಫೋನ್, ಐ ಪಾಡ್‌ಗಳಿಲ್ಲದ ಕಾಲದಲ್ಲೇ ಅವನ ಹಾಡುಗಳು ಮಾಡಿದ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂದರೆ ಮೈಕೆಲ್ ಜಾಕ್ಸನ್‌ನ ಹಾಡುಗಳ ಜನಪ್ರಿಯತೆ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ದುರದೃಷ್ಟವೆಂದರೆ ಜನಪ್ರಿಯತೆ ಹೆಚ್ಚಾದಂತೆ ಆತನ ಹುಚ್ಚುತನಗಳೂ ಹೆಚ್ಚಾದವು. 1988ರಲ್ಲಿ ಬೃಹತ್ ತೋಟವನ್ನು ಖರೀದಿ ಮಾಡಿ, “ನೆವರ್ ಲ್ಯಾಂಡ್” ಹೆಸರು ಕೊಟ್ಟ. ಸ್ನೇಹಿತರು, ಕುಟುಂಬದಿಂದ ದೂರವಾದ. ಅಂತಹ ಏಕಾಂತ ಆತನಿಗೇ ಮುಳುವಾಯಿತು. ನಾಳೆ ಎಂಬುದೇ ಇಲ್ಲವೇನೋ ಎಂಬಂತೆ ಹಣ ವ್ಯಯ ಮಾಡತೊಡಗಿದ. ‘ನೆವರ್ ಲ್ಯಾಂಡ್’ನೊಳಕ್ಕೆ ಪ್ರಾಣಿಗಳು ಹಾಗೂ ಮಕ್ಕಳಿಗಷ್ಟೇ ಪ್ರವೇಶ ನೀಡಿ “False Reality”ಯಲ್ಲಿ ಬದುಕ ತೊಡಗಿದ ಆತ, ವಿವಾದಗಳನ್ನೂ ಮೈಮೇಲೆಳೆದುಕೊಂಡ. 1993ರಲ್ಲಿ ಮೊಟ್ಟಮೊದಲ ಬಾರಿಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದರೂ 2003ರಲ್ಲಿ ಮತ್ತೆ ಭುಗಿಲೆದ್ದ ಇದೇ ಆರೋಪವಂತೂ ಆತನ ಭವಿಷ್ಯವನ್ನು ಶಾಶ್ವತವಾಗಿ ಹಾಳುಗೆಡವುವ ಅಪಾಯ ತಂದೊಡ್ಡಿತು. ಆತನ ಮೇಲೆ  50  ವಿಧದ ಆರೋಪಗಳು ಕೋರ್ಟ್‌ನಲ್ಲಿ ಪಟ್ಟಿಯಾದವು. ದೀರ್ಘ ಕಾಲದವರೆಗೂ ನಡೆದ ನ್ಯಾಯಾಂಗ ವಿಚಾರಣೆಯಿಂದಾಗಿ ಜಾಕ್ಸನ್ ತತ್ತರಿಸಿ ಹೋದ. ಆತ ಎಷ್ಟು ಕುಂದಿಹೋದನೆಂದರೆ ಕೂಲಂಕಷ ವಿಚಾರಣೆಯ ನಂತರ ಕೋರ್ಟ್ ಆತನನ್ನು ದೋಷ ಮುಕ್ತನೆಂದು ಘೋಷಿಸಿದಾಗ ನಿಟ್ಟುಸಿರು ಬಿಡುವ ತಾಕತ್ತೂ ಆತನಲ್ಲಿರಲಿಲ್ಲ, ಮುಖ ನಿರ್ಭಾವುಕವಾಗಿತ್ತು. ಎಂದೆಂದೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದ.
ಇಂದು ಮೈಕೆಲ್ ಜಾಕ್ಸನ್ ಎಂದರೆ ಒಬ್ಬ ಹುಚ್ಚ ಅಂತ ಅನ್ನಿಸ ಬಹುದು. ಆದರೆ ಅವನ ಹುಚ್ಚುತನದ ಹಿಂದೆ ಕರಾಳ ಬಾಲ್ಯದ ಕರಿಛಾಯೆ ಇದೆ. ಕರಿಯರ ಆರ್ದ್ರನಾದವಿದೆ.

We are the world, we are the children
We are the ones who make a brighter day
So lets start giving
Theres a choice we’re making
We’re saving our own lives
its true we’ll make a better day
Just you and me

ಅಥವಾ

Heal The World
Make It A Better Place
For You And For Me
And The Entire Human Race
There Are People Dying
If You Care Enough
For The Living
Make A Better Place
For You And For Me

ಇಂತಹ ಹಾಡುಗಳನ್ನು ಕೇಳಿ, ಅವನ ಮನದಾಳದ ತುಡಿತ ಅರ್ಥವಾಗುತ್ತದೆ. ನಿಮ್ಮ ಕಣ್ಣುಗಳೂ ತುಂಬಿಕೊಳ್ಳುತ್ತವೆ. ಇವತ್ತು ದುಡಿದಿದ್ದೆಲ್ಲವನ್ನೂ ಕೊಡಲು ಮುಂದಾದ ಉದ್ಯಮಿ ವಾರೆನ್ ಬಫೆಟ್ ಅವರನ್ನು ಮಹಾದಾನಿ ಎಂದು ಜಗತ್ತು ಹಾಡಿ ಹೊಗಳುತ್ತಿದೆ. ಮೈಕೆಲ್ ಜಾಕ್ಸನ್ 1980ರ ದಶಕದಲ್ಲಿ ದಾನ, ಸಹಾಯ ಮಾಡುವುದಕ್ಕಾಗಿಯೇ “We are the world”, “”Heal The World”, “”Man In The Mirror” ” ಹಾಡುಗಳನ್ನು ಬರೆದು, ಲಯೋನೆಲ್ ರಿಚಿ, ಕೆನ್ನಿ ರೋಜರ್‍ಸ್, ಡಯಾನಾ ರೋಸ್, ಬ್ರೂಸ್ ಸ್ಟ್ರಿಂಗ್‌ಸ್ಟೀನ್, ಬಾಬ್ ಡೈಲಾನ್ ಅವರಂತಹ ಖ್ಯಾತನಾಮ ಕಲಾವಿದರನ್ನು ಕರೆಸಿ ತನ್ನ ಜತೆ ಹಾಡಿಸಿದ. “USA for Africa” ಸಂಗೀತ ಕಾರ್ಯಕ್ರಮ, “Heal the World Foundation” ಸ್ಥಾಪನೆ  ಮೊದಲಾದುವುಗಳ ಮೂಲಕ ೩೦೦ ದಶಲಕ್ಷ ಡಾಲರ್‌ಗೂ ಅಧಿಕ ಹಣ ಸಂಗ್ರಹಣೆ ಮಾಡಿಕೊಟ್ಟ. ಎಚ್‌ಐವಿ/ಏಯ್ಡ್ಸ್ ಪೀಡಿತರನ್ನು ಗೌರವದಿಂದ ಕಾಣಬೇಕು ಎಂದು ಜಗತ್ತಿಗೆ ಜೋರಾಗಿ ಕಿವಿಮಾತು ಹೇಳಿದವನೇ ಅವನು. ಅದರಲ್ಲೂ ರೆಯಾನ್ ವೈಟ್ ಎಂಬ 19 ವರ್ಷದ ಯುವಕ 1991ರಲ್ಲಿ ಏಯ್ಡ್ಸ್‌ಗೆ ಬಲಿಯಾದಾಗ ಜಾಕ್ಸನ್ ಎಷ್ಟುನೊಂದು ಕೊಂಡನೆಂದರೆ, ಚಿಕಿತ್ಸೆಯ ಸಂಶೋಧನೆಗಾಗಿ ಹೋದಲೆಲ್ಲ ಹಣಸಂಗ್ರಣೆ ಮಾಡಿದ, ಹಣಸಂಗ್ರಹಣೆಗಾಗಿಯೇ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾರಂಭಿಸಿದ. ನೆಲ್ಸನ್ ಮಂಡೇಲಾ ಮಕ್ಕಳ ನಿಧಿ, ರೆಡ್‌ಕ್ರಾಸ್, ಯುನೆಸ್ಕೋ ರಾಯಭಾರಿಯಾಗಿ ಕೆಲಸ ಮಾಡಿದ. ಇಷ್ಟೆಲ್ಲಾ ಪ್ರೀತಿ, ಅನುಕಂಪವನ್ನು ಹೊಂದಿದ್ದ ಆತ ವೈಯಕ್ತಿಕ ಜೀವನದಲ್ಲಿ ಮಾದಕವಸ್ತುಗಳಿಗೆ ದಾಸನಾಗಿ ಜೀವನವನ್ನೇ ಹಾಳುಮಾಡಿಕೊಂಡ. ನಮ್ಮ ಹೃದಯದ ಬಡಿತ ಹೆಚ್ಚಿಸುತ್ತಿದ್ದ ಆತನ ಕಾಲುಗಳೇ ಸೋತು ಹೋದವು. ಆತನ ಕೊಳಕುತನವನ್ನು ಟೀಕಿಸಲು ಖಂಡಿತ ಬೇಕಾದಷ್ಟು ಕಾರಣಗಳು ಸಿಗುತ್ತವೆ. ಆದರೆ ನೀವೊಬ್ಬ ಮೈಕೆಲ್ ಜಾಕ್ಸನ್ ಅಭಿಮಾನಿಯಾಗಿದ್ದರೆ ಆತನನ್ನು ಶಪಿಸಲು ಮನಸ್ಸು ಮಾತ್ರ ಒಪ್ಪುವುದಿಲ್ಲ. ಅವನು ಏರಿದ ಎತ್ತರವನ್ನು, ಗಳಿಸಿದ ಖ್ಯಾತಿ, ಕೀರ್ತಿಯನ್ನು, ಪ್ರೇಕ್ಷಕರಿಗೆ ನೀಡಿದ ಉದ್ವೇಗ, ಆನಂದವನ್ನು ನೀಡಲು Lesser Mortalsಗಳಿಂದ ಸಾಧ್ಯವಿಲ್ಲ. ಇದೊಂದೇ ಕಾರಣಕ್ಕಾಗಿ ಆತ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. 1991ರಲ್ಲಿ ಆತನ “ಬ್ಲ್ಯಾಕ್ ಆರ್ ವೈಟ್” ಆಲ್ಬಮ್ ಬಿಡುಗಡೆಯಾದಾಗ ಅಮೆರಿಕ, ಆಸ್ಟ್ರೇಲಿಯಾ, ಬೆಲ್ಜಿಯಂ, ಕ್ಯೂಬಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಮೆಕ್ಸಿಕೋ, ನ್ಯೂಜಿಲ್ಯಾಂಡ್, ನಾರ್ವೆ, ಸ್ಪೇನ್, ಸ್ವೀಡನ್, ಜಿಂಬಾಬ್ವೆ ಹಾಗೂ ಬ್ರಿಟನ್ ಇಷ್ಟು ದೇಶಗಳಲ್ಲಿ ನಂಬರ್-1 ಸ್ಥಾನದಲ್ಲಿತ್ತು ಎಂದರೆ ನಂಬುತ್ತೀರಾ?

ಇಂತಹ ವ್ಯಕ್ತಿ, ಜನರ ಎದೆಬಡಿತ ಹೆಚ್ಚಿಸಲು ಮತ್ತೊಂದು ವಿಶ್ವಪರ್ಯಟನೆಗೆ ಸಿದ್ಧವಾಗಿದ್ದ ಸಂದರ್ಭದಲ್ಲೇ ಏಕಾಏಕಿ ಆತನ ಎದೆಬಡಿತವೇ ನಿಂತುಹೋಗಿ ನಮ್ಮನ್ನಗಲಿದನೆಂದರೆ ಹೇಗೆತಾನೇ ಒಪ್ಪಿಕೊಳ್ಳುವುದು? 1969ರಲ್ಲಿ ಸಂಗೀತ ಪ್ರಪಂಚಕ್ಕೆ ಕಾಲಿಟ್ಟಾಗ ಆತ ಹಾಡಿದ ಮೊದಲ ಗೀತೆ-“”I want you back”.

Sorry, He won’t be back!!

23 Responses to “ಬೆಳಗಾಗುವಷ್ಟರಲ್ಲಿ ಆ ಹಾಡಿಗೆ ಅವನೇ ಅನ್ವರ್ಥನಾಗಿದ್ದ!”

  1. Ravi says:

    Good Article!

  2. if today i have a good opinion about MJ and if i am feeling bad that he’s dead(especially the way he died) then its only because of you…..
    yes,many days before,may be during his 50th birthday you had written an article regarding him.that really changed my opinion about him.till then i never saw him through my own eyes.but when i saw him through my own eyes i saw a real achiever in him…..
    hope his soul rests in peace…..

  3. Kiran says:

    Ya! we will miss him Pratap!!!

  4. shami says:

    hi…as usual nice article…
    BUT…
    Pratap neevu obranna hogallo baradalli bereyavaranna jariyodu thappu ansothe …!
    Elli hruthic,prabudev ella avara level ge olle kalavidare. so comparision sallada mathu…
    Nevu hindhe federor gu edanne madidri…………!

  5. girija says:

    Really,

    he was so great,
    lead a life of light,
    at last
    went to light,

    thanks for such a great article, u r right there may be many reasons to criticise one person but u choose many good thougts with his own words. simply superb.

  6. Basu says:

    Nice article again.. !! 🙂

  7. ಲೋ ದ್ಯಾ ಶಿ says:

    ನಮ್ಮದೇ ಊರಿನವರಾದ “ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ” ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆಯೋ ಇಲ್ಲವೋ ಆದ್ರೆ ಮೈಕೆಲ್ ಜಾಕ್ಸನ್ ವಿಧಿ ವಶ ಆದಾಗ ಮಾತ್ರ ತೀರ ಡಿಸ್ಟರ್ಬ್ ಆಗ್ಬಿಟ್ಟೆ ಅಂತ ಅಂತಾರೆ…
    ಸ್ನೇಹಿತರೆ, ಇದು ನಾನು ತೀರ ಎಲ್ಲರಿಗು ಸೇರಿಸಿ ಹೇಳ್ತಿರೋ ಮಾತಲ್ಲ….

    ಒಂದು ಸನ್ನಿವೇಶನ ವಿವರಿಸ್ತಿನಿ ನೀವೇ ಓದ್ಕೊಲ್ಲಿ…
    ಕೆಲವು ದಿನಗಳ ಹಿಂದೆ ಪಂಡಿತ್ ಭೀಮಸೇನ್ ಜೋಶಿ ಅವ್ರಿಗೆ ಭಾರತ ರತ್ನ ಪ್ರಶಸ್ತಿ ಕೊಡುವುದು ಅಂತ ಕೇಂದ್ರ ಸರ್ಕಾರ ತೀರ್ಮಾನ ತಗೊಂತು … ಜೋಶಿ ಅವರಿಗೆ ಆರೋಗ್ಯ ತೀರ ಅದಗೆತ್ತಿರೋದ್ರಿಂದ ಅವ್ರಿಗೆ ಡೆಲ್ಲಿ ಗೆ ಹೋಗಿ ಪ್ರಶಸ್ತಿ ಪಡಿಯೋಕ್ಕೆ ಆಗ್ಲಿಲ್ಲ ಅದಕ್ಕೆ ಮಾನ್ಯ ಪ್ರಧಾನಿ ಅವರು ಪ್ರಶಸ್ತಿನ ನಮ್ಮ P.A. ಇಂದ ಕಲಿಸಿಕೊಟ್ಟರು e ವಿಷಯ ಇಲ್ಲಿ ತುಂಬಾ ಜನಕ್ಕೆ ಗೊತ್ತೇ ಇದೆ….. ಅದಿಕ್ಕೆ ನಾನು ಒಬ್ಬ ಸ್ನೇಹಿತನ ಹತ್ತಿರ ಚರ್ಚಿಸಿದೆ ಯಾಕಪ್ಪ ಮಾನ್ಯ ಪ್ರಧಾನಿ ಅವರೇ ಖುದ್ದು ಬಂದು ಪ್ರಶಸ್ತಿನ ನೀಡಲಿಲ್ಲ ಅಂತ… ಅಷ್ಟಕ್ಕೂ ಈ ಪ್ರಶಸ್ತಿ ಭಾರತ ದ ಅತ್ತ್ಯುನ್ನತ ಪ್ರಶಸ್ತಿ… ಇದು ಒಬ್ಬ ವ್ಯಕ್ತಿಗೆ ನೀದುತ್ತರಾದರು
    ಇಲ್ಲಿ ವ್ಯಕ್ತಿ ಮುಖ್ಯ ಆಗೋದಿಲ್ಲ…. ಮುಖ್ಯ ಆಗೋದು ಒಂದು ಸಾಧನೆ ….
    ಸರಿ, ನಾನು ಇಷ್ಟು ಹೇಳಿದ ತಕ್ಷಣ ನನ್ನ ಪಕ್ಕಕ್ಕೆ ಇದ್ದ ನನ್ನ ಸ್ನೇಹಿತ ಅಂತ ಅಂದು ಕೊಂಡಿದ್ದ ವ್ಯಕ್ತಿ ಏನು ಹೇಳೋದು ಗೊತ್ತೇ
    “ಪ್ರಧಾನ ಮಂತ್ರಿ ಗಳಿಗೆ ಬೇರೆ ಕೆಲಸ ಇರಲ್ವಾ?, ಅಷ್ಟಕ್ಕೂ ಭಾರತ ರತ್ನ ಪ್ರಶಸ್ತಿ ಏನು ಅಂತ ಮಹಾ ಪ್ರಶಸ್ತ್ನಿನ ಅಂತ ಕೆಲ್ತನಲ್ರಿ?”
    ಅದೆ ನಿನ್ನೆ ಜಾಕ್ಸನ್ ಸತ್ತಾಗ, ಇದೆ ಮನುಸ್ಯ ಬಂದು ಏನು ಹೇಳೋದು ಗೊತ್ತೇ? ಈತನಿಗೆ ಸಿಕ್ಕಾಪಟ್ಟೆ ದುಃಖ ಆಯ್ತಂತೆ ಮತ್ತೆ
    ಒಂದು ದಿನ ಫುಲ್ ಸುಧಾರಿಸಿ ಕೊಂಡನಂತೆ!!!

  8. Akash says:

    Hi Pratap,

    Good article, thanks for sharing these things with the people.

    But somewhere I feel your comparison with Hrithik & Prabudev is not acceptable!

  9. ಲೋ ದ್ಯಾ ಶಿ says:

    ಪ್ರತಾಪ್,
    ಕ್ಸಮಿಸು … ನಾನು ನನ್ನ ಈ ಹಿಂದಿನ ಕಾಮೆಂಟ್ ನಲ್ಲಿ ನಿಮ್ಮ ಬರಹ ದ ಬಗ್ಗೆ ಒಂದು ಮಾತೂ ಹೇಳ ಲಿಲ್ಲ
    ನಾನು ಕೂಡ ಈಗ ನಿಮ್ಮ ಬ್ಲಾಗ್ ನ ಹೊಸ ಕಸ್ಟಮರ್
    ಈ ಬರಹ ನನಿಗೆ ಆಸಕ್ತಿ ಇಂದ ಕೂಡಿದೆ ಅಂತ ಅನ್ನಿಸ್ತು..
    .
    .
    .
    ನಿಜ ಏನಪ ಅಂದ್ರೆ ನಾನು ಈ ಬರಹ ನ ವಿಜಯ ಕರ್ನಾಟಕ ದ, E-ಪೇಪರ್ ನಲ್ಲಿ ಶನಿವಾರ ನೆ ಓದಿ ಯಾಗಿತ್ತು…
    ನನಿಗೆ ನಿನ್ನ ಲೇಖನ ದ ಜೊತೆಗೆ ಇಲ್ಲಿನ ಕಾಮೆಂಟ್ಸ್ ಕೂಡ ತುಂಬಾ ಆಸಕ್ತಿ ತರುತ್ತವೆ..

  10. suma says:

    It looks like “shraadhada kaipidi”

  11. Dhananjaya says:

    attractive article

  12. Close analyzer says:

    pratapanna……cool article again….
    in the recent past…media had forgotten to shed light towards the humane values of MJ!!!…really sad…
    one more thing…..dont get me wrong..
    you have told that a few dances of prabhudeva and hrithik were a remake or rather a copy from MJ’s albums….
    that may be true…but MJ’s dance steps cannot be imitated so easily..
    even that needs years of practise and expertise….
    they may not be as talented as MJ…but i think they have tried their best…
    ..anyways…nice article……..i enjoyed reading it….

  13. ಯೆನ್.ಗಿರೀಶ್ says:

    ನಮಸ್ಕಾರ್ ಪ್ರತಾಪ್

    ತಮ್ಮ ಲೇಖನ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ.

    ನಾನು ಕೂಡ ನಿಮ್ಮ ಅನಿಸಿಕೆಗೆ ಒಪ್ಪಿಕೊಳ್ಳುತೇನೆ. ಮೈಕಲ್ ಜಾಕ್ಸನ್ ನಿಜವಾಗ್ಯು ಒಬ್ಬ ಮಹಾನ್ ಸಂಗೀತಗಾರ ಮತ್ತು ನುರ್ತ್ಯಪಟು, ಇದರಲ್ಲಿ ಸಂಷಯವಿಲ್ಲ, ಅವನ ಅತ್ಮಕ್ಕೆ ಶಾಂತಿ ದೊರೆಯಲಿ.

    ಶುಭ ಹಾರೈಕೆಗಳು

    ಜೈ ಹೊ

    ಯೆನ್.ಗಿರೀಶ್

  14. shiva... says:

    Hello ಲೋ ದ್ಯಾ ಶಿ, nimma baraha oodidre “Hitthala gida maddalla” emba gaade mathu estu parinaamakarayagide ansutthe…

  15. B.V.Rajaram says:

    Good article.

    Adare itare kalavidaranna tegaluva munna swalpa yochisabekittu endenisuttade. Hrutik athava prabhudev avaru MJ avarannu copy madirabahudu, Adare avara dance kalapeyalla. avaru tammade aada chapannu bharateeyara manadalli mudisiddare. Uttama kalavidarannu hige compare madiruvudannu bittare lekhana uttamavagide.

  16. Nivedita says:

    Hello!
    i always had a doubt,whether person like MJ really gone crazy to the extent if changing skin color, walking with umbrella and most of the time, wearing a crazy face masks, may be many thought its all about a crazy pop star but i had a suspicion that there must be some strong reason behind it.
    yes its true MJ was suffering from vitiligo, discoid lupus to add to this pain he met with 2nd and 3rd dgree accidental burns. oh my god what a pain! he was suffering all alone and undergoing plastic surgeries and on many priscription pain meds. Hiding his pain from the world,may be thats the reason he isolated himself from family and was living a(crazy what the world thought) life in Never land ranch.

  17. Soujanay N Jain says:

    Nice article…i enjoyed thank you ……..Pratap

  18. amarnath says:

    its really a nice article….. keep the good work going…….

  19. sundar kishor says:

    i am the greatest fan of MJ. i just love the way he is.
    all my friends had bad opinion about him, but the day when you wrote about him they changed their opinion… i am happy on their approach towards MJ.
    thank you for such a nice article…..
    i luv u MJ…..
    i luv u PRATAP SIMHA

  20. Sir, this article is most beautifull with most sensitive feelings. u r digging news like ants how they search food n they never give up hopes of acheiving targets. Really ur mind works hard to cover complete world with ur inner feelings. YEs I read about MJ story of childhood n he faced lot of challenges from outside circumference. We can say anything about person but his determination n consistency to prove what he has planned is not so easy to discuss. our mind many times go into wrong streets in thinking but we wont excute into practical.Great people never take chance to avoid their internal tune in some exceptional ways. Character is a branch of a tree , it can be cut at any time but main root is imp to support its height of success. some musicians coppied his tune also n this one will come to know who listened his all songs. Our nearest Bhimshen Joshi is known to every one here but MJ from 20thousand miles away from us n he painted his art on wall of world ie y he is being picturised in many hearts irrespective of his only one negative branch. Just let us see inside us how many -ve ideas r swimming at critical time to get something! superb n fantastic article about MJ.

  21. shri says:

    ಮೈಕೆಲ್ ಜಾಕ್ಸನ್ ಎಂದೋ ಮಾಡಿದ ಡಾನ್ಸ್‌ನ ಕಳಪೆ ಕಾಪಿಯೇ “ಕ್ರೇಝಿ-೪” ಚಿತ್ರದಲ್ಲಿ ಹೃತಿಕ್ ರೋಶನ್ ಮಾಡಿರುವುದು!! super!!!!!!

  22. Chandrahas Charmady says:

    Its really Good Article.

  23. Vani K S says:

    very nice..i dint knw much abu him..thnk u so much fr dis superb article…