Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇದು ಒಬ್ಬಿಬ್ಬರ ಕಥೆ-ವ್ಯಥೆಯಲ್ಲ, ಸರದಿಯಲ್ಲಿ ನಿಂತಿರುವವರೇ ಎಲ್ಲ!

ಇದು ಒಬ್ಬಿಬ್ಬರ ಕಥೆ-ವ್ಯಥೆಯಲ್ಲ, ಸರದಿಯಲ್ಲಿ ನಿಂತಿರುವವರೇ ಎಲ್ಲ!

keshav

ಕ್ಷಣವೊಂದರಲ್ಲಿ ನಡೆದುಹೋಗುವ ಅಚಾತುರ್ಯ, ಅವಘಡ, ಅಪಘಾತ ಸುಂದರ ಬದುಕನ್ನು ಹೇಗೆ ನರಕಸದೃಶ ಮಾಡಬಲ್ಲದು, ಅತಂತ್ರ ಸ್ಥಿತಿಗೆ ತಳ್ಳಬಲ್ಲದು ಎಂಬುದನ್ನು ಕಳೆದ ವಾರ ಕಣ್ಣಾರೆ ನೋಡಬೇಕಾಗಿ ಬಂತು. ನಾಲ್ಕು ದಿನಗಳ ಕಾಲ ಬೆಳಗ್ಗೆ 8 ರಿಂದ ರಾತ್ರಿ 9.30ವರೆಗೂ ಮಂಗಳೂರಿನ ಪ್ರಸಿದ್ಧ ‘ತೇಜಸ್ವಿನಿ ಆಸ್ಪತ್ರೆ’ಯ ತೀವ್ರ ನಿಗಾ ಘಟಕದ(ಐಸಿಯು) ಮುಂದೆ ಕುಳಿತಿದ್ದಾಗ ಎಲ್ಲ ಥರದ ದುಃಖ, ಸಂಕಷ್ಟಗಳು ಕಣ್ಣಮುಂದೆಯೇ ಚಲನರಹಿತವಾಗಿ ಮಲಗಿದ್ದವು. ಒಂದು ಹೆರಿಗೆ ಆಸ್ಪತ್ರೆಗೆ ಹೋದರೆ ಅದಾಗ ತಾನೇ ಜನಿಸಿದ ಮಗುವಿನ ಮೊದಲ ಧ್ವನಿಯನ್ನು ಕೇಳುವ ಭಾಗ್ಯ ದೊರೆಯುತ್ತದೆ. ಅಪ್ಪ-ಅಮ್ಮ, ಬಂಧು-ಬಳಗದವರ ಸಂತಸ-ಸಂಭ್ರಮವನ್ನು ನೋಡಬಹುದು. ಇಲ್ಲಿ ಮಾತ್ರ ಬರೀ ಕಣ್ಣೀರು, ಬಂಧು-ಬಳಗದವರ ಜೀವಕಳೆ ಕಳೆದುಕೊಂಡ ಮುಖಗಳೇ ಕಾಣಸಿಗುತ್ತಿದ್ದವು. ಇತರರು ಬಿಕ್ಕಳಿಸಿ ಅಳುತ್ತಿದ್ದರೆ ನಮ್ಮ ಕಣ್ಣುಗಳೂ ಅರಿವಿಲ್ಲದೆ ಜಿನುಗುತ್ತಿರುತ್ತವೆ. ನಮ್ಮ ಮನಸ್ಸು ತನ್ನ ದುಃಖದ ಜತೆಗೆ ಇತರರ ನೋವಿನಲ್ಲೂ ಭಾಗಿಯಾಗುತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಮಧ್ಯ ಪ್ರಾಯ ಮೀರಿದ ಗೃಹಿಣಿಯೊಬ್ಬರು ಮಾತಿಗೆ ಎಳೆದರು.

ನಿಮ್ಮವರು ಯಾರಾದರೂ ಇಲ್ಲಿದ್ದಾರಾ?
ಹೌದು.

ಉತ್ತರಿಸಿ ಒಂದು ಕ್ಷಣ ಸುಮ್ಮನಾದೆ. ಏಕೋ ಮನಸ್ಸು ತಡೆಯ ಲಿಲ್ಲ, ಸೌಜನ್ಯದ ಸಲುವಾಗಿ ಮರುಪ್ರಶ್ನೆ ಹಾಕಿದೆ.
ನೀವು ಏಕೆ ಬಂದಿದ್ದೀರಿ, ನಿಮ್ಮ ಮನೆಯವರ್‍ಯಾರಿಗಾದರೂ ಸೌಖ್ಯವಿಲ್ಲವೆ?
ಹೌದು, ಐಸಿಯುನ ಎಡಭಾಗದಲ್ಲಿ ಇದ್ದಾರಲ್ಲಾ ಅವರೇ ನನ್ನ ಗಂಡ…
ಏನಾಗಿದೆ?

ಕಣ್ಣಿಂದ ಜಾರುತ್ತಿದ್ದ ನೀರನ್ನು ಕೈಯಿಂದ ಅದ್ದಿಕೊಳ್ಳುತ್ತಾ, ಆಕೆ ತನ್ನ ಸಂಕಷ್ಟವನ್ನು ತೆರೆದಿಡುತ್ತಾ ಹೋದರು…..ಆಕೆಯ ಗಂಡನ ಹೆಸರು ಕೇಶವ ದಾಮೋದರ ಶೆಟ್ಟಿ. ಅಂಕೋಲ ಸಮೀಪದ ಗ್ರಾಮದವರು. ಮದುವೆಯಾಗಿ 13 ವರ್ಷಗಳು ಕಳೆದಿವೆ. ಅವರಿಗೆ ಡ್ರೈವಿಂಗ್ ಗೊತ್ತು. ಯಾರಾದರೂ ಕಾರಿದ್ದವರು ಬೇರೆಡೆಗೆ ಹೋಗಬೇಕಾಗಿ ಬಂದರೆ ಕೇಶವ ಶೆಟ್ಟಿಯವರಿಗೆ ಅವತ್ತಿನ ಸಂಪಾದನೆ ಸಿಗುತ್ತದೆ. ಇತ್ತ ಹೆಂಡತಿ  ಒಂದಿಷ್ಟು ಸಂಪಾದನೆ ಮಾಡುತ್ತಾರೆ. ಇಬ್ಬರೂ ಸೇರಿ ಸಂಸಾರದ ಬಂಡಿ ನಡೆಸುತ್ತಿದ್ದರು. ಹೀಗಿರುವಾಗ ಒಂಬತ್ತು ವರ್ಷದ ಹಿಂದೆ ಕೇಶವ ಶೆಟ್ಟಿ ಅಪಘಾತಕ್ಕೊಳಗಾದರು. ಕಾಲಿನ ಮಂಡಿಯ ಕೆಳಗಿನ ಮೂಳೆ ಚೂರು ಚೂರಾಯಿತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ರಾಡ್ ಹಾಕಿ ತುಂಡಾದ ಮೂಳೆಗಳನ್ನು ಕೂಡಿಸಿದರು. ಆದರೂ ಕಾಲು ಮತ್ತೆ ಮೊದಲಿನಂತಾಗಲಿಲ್ಲ. ಐದು ವರ್ಷಗಳಿಂದೀಚೆಗೆ ಬದುಕು ಸ್ವಲ್ಪ ಯಥಾಸ್ಥಿತಿಗೆ ಬಂದಿತ್ತು. ಸ್ವಲ್ಪ ಕುಂಟುತ್ತಲೇ ಓಡಾಡಲಾರಂಭಿಸಿದ ಕೇಶವ ಶೆಟ್ಟಿ ಡ್ರೈವಿಂಗ್ ವೃತ್ತಿಯನ್ನು ಪುನಾರಂಭಿಸಿದ್ದರು. ಆದರೆ 2008, ಜೂನ್‌ನಲ್ಲಿ ಜಾರಿ ಬಿದ್ದ ಕಾರಣ, ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕಾಲಿನ ಮಂಡಿಚಿಪ್ಪು ಜಾರಿತು. ಸ್ಥಳೀಯ ಆಸ್ಪತ್ರೆಗೆ ಹೋದಾಗ, ಒಂದು ಚುಚ್ಚುಮದ್ದು ಹಾಗೂ ಒಂದಿಷ್ಟು ಗುಳಿಗೆಗಳನ್ನು ಕೊಟ್ಟು ಕಳುಹಿಸಿದರು. ಬಡವರಾದ ಅವರಿಗೆ ಮುಂದೆ ಎದುರಾಗಬಹುದಾದ ಅಪಾಯಕ್ಕಿಂತ ಹಾಲಿ ವೆಚ್ಚದ ಭಯವೇ ಹೆಚ್ಚಾಗಿರುವಾಗ ಮತ್ತೇನು ಮಾಡಿಯಾರು? ಎಷ್ಟು ಬಾರಿ ಸರಕಾರಿ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದು, ಗುಳಿಗೆ ತೆಗೆದುಕೊಂಡರೂ ಮಂಡಿ ಸರಿಯಾಗಲಿಲ್ಲ. ಈ ಮಧ್ಯೆ ಮಂಡಿಯ ಭಾಗದಲ್ಲಿ ಊತ ಆರಂಭವಾಯಿತು. ಕಾಲನ್ನು ಮುಂದಿಡುವುದೇ ಕಷ್ಟವಾಯಿತು. ಸರಕಾರದವರು ಬಡವರಿಗೆ ನೀಡುವ ಆಂಬು ಲೆನ್ಸ್‌ನಲ್ಲಿ ಮಣಿಪಾಲಕ್ಕೆ ಕರೆದುಕೊಂಡು ಹೋದರು. ಅಲ್ಲಿ ತೊಡೆಯಿಂದ ಮಣಿಕಟ್ಟಿನವರೆಗೂ ಸ್ಟ್ರ್ಯಾಪ್ ಕಟ್ಟಿ ಏನೇನೋ ಸರ್ಕಸ್ ಮಾಡಿದರು, ಊತ ಕಡಿಮೆಯಾಗುತ್ತದೆ ಎಂದು ಕಣ್ಣೊರೆಸಿ ೩೫ ಸಾವಿರ ಖರ್ಚು ಮಾಡಿಸಿ ಮನೆಗೆ ಕಳುಹಿಸಿದರು. ಸಾಲ ಮಾಡಿ ತಂದಿದ್ದ ದುಡ್ಡು ಖರ್ಚಾಯಿತೇ ಹೊರತು ಮಂಡಿ ಸರಿಯಾಗಲಿಲ್ಲ. ಹೀಗೆ ನೋವಿನಲ್ಲೇ ಒಂದು ವರ್ಷ ಕಳೆದರು.

ಡಾ. ಶಾಂತಾರಾಮ ಶೆಟ್ಟಿ ಅವರದ್ದು ದಕ್ಷಿಣ ಕನ್ನಡದಲ್ಲೇ ದೊಡ್ಡ ಹೆಸರು. ಪ್ರತಿಷ್ಠಿತ ‘ಇಂಡಿಯನ್ ಆರ್ಥೋಪಿಡಿಕ್ ಅಸೋಶಿಯೇಶನ್’ನ (ಐಓಎ) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಯಾದ ಮೊದಲ ಕನ್ನಡಿಗ ಅವರು. ಮಂಗಳೂರಿನಲ್ಲಿರುವ ‘ತೇಜಸ್ವಿನಿ’ ಎಂಬ ಅಪಘಾತ ಹಾಗೂ ಮೂಳೆಗೆ ಸಂಬಂಧಿಸಿದ ವಿಶೇಷ ಆಸ್ಪತ್ರೆ ಅವರದ್ದೇ. ಅಪಘಾತಕ್ಕೊಳಗಾಗುವವರ ಪ್ರಾಣ, ಕೈ-ಕಾಲುಗಳನ್ನು ಉಳಿಸುತ್ತಾ ಬಂದಿರುವ ಅವರ ಸಾಮರ್ಥ್ಯದ ಬಗ್ಗೆ ಸಣ್ಣ ಅಪಸ್ವರವೆತ್ತುವವರೂ ಇಲ್ಲ ಎನ್ನಬಹುದು. ಕಾಲನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಾಗದೇ ಇದ್ದಾಗ ಕೇಶವ ದಾಮೋದರ ಶೆಟ್ಟಿಯವರಿಗೆ ಉಳಿದಿದ್ದ ಏಕೈಕ ಆಶಾಕಿರಣ ಡಾ. ಶಾಂತಾರಾಮ ಶೆಟ್ಟಿಯವರು. ಪತಿಯನ್ನು ಕರೆದುಕೊಂಡು ‘ತೇಜಸ್ವಿನಿ’ಗೆ ಬಂದಾಗ ಕೂಡಲೇ, ಮಂಡಿಯ ಶಸ್ತ್ರಚಿಕಿತ್ಸೆಯಾಗಬೇಕು, ಇಲ್ಲದಿದ್ದರೆ ಗ್ಯಾಂಗ್ರಿನ್‌ಗೆ ತಿರುಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೂ ಹಣದ ಚಿಂತೆಯಿಂದ ಅಂಕೋಲಕ್ಕೆ ವಾಪಸ್ಸಾದರು. ವಿಷಯ ತಿಳಿದ ಊರಿನ ಕೆಲವರು 15 ಸಾವಿರ ರೂ. ಹಣ ಸಂಗ್ರಹಿಸಿ, “ನೀವು ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿ, ಇನ್ನಷ್ಟು ಹಣ ಸೇರಿಸಿ ನೇರವಾಗಿ ಆಸ್ಪತ್ರೆಗೇ ಕಟ್ಟುತ್ತೇವೆ” ಎಂದು ಕಳುಹಿಸಿದ್ದಾರೆ. ಹಾಗೇ ವಾಪಸ್ ಬಂದು ಆಸ್ಪತ್ರೆಗೆ ಅಡ್ಮಿಟ್ ಆಗುವಷ್ಟರಲ್ಲಿ ಮತ್ತೆ ಒಂದು ತಿಂಗಳು ವ್ಯಯವಾಗಿದೆ. ಅಷ್ಟರಲ್ಲಿ ಕೇಶವ ಶೆಟ್ಟಿಯವರ ಮಂಡಿಯ ಮೂಳೆಗೆ ಗ್ಯಾಂಗ್ರಿನ್ ಅಂಟಿ ಕೊಂಡಿದೆ. ಮಂಡಿ, ಮಂಡಿಯಿಂದ ಸ್ವಲ್ಪ ಮೇಲೆ ಹಾಗೂ ಕೆಳಗಿನ ಭಾಗದ ಗ್ಯಾಂಗ್ರಿನ್ ಪೀಡಿತ ಮೂಳೆಗಳನ್ನು ಕಿತ್ತುಹಾಕಿರುವ ಡಾ. ಶಾಂತಾರಾಮ ಶೆಟ್ಟರು, ಕಾಲನ್ನು ಸದ್ಯಕ್ಕೆ ಉಳಿಸಿದ್ದಾರೆ. ಎರಡು ಬದಿಗೂ ರಾಡು ಹಾಕಿದ್ದಾರೆ. ಒಂದು ವೇಳೆ ಕಾಲು ಉಳಿದರೂ ಮಡಿಚಲು ಶಾಶ್ವತವಾಗಿ ಸಾಧ್ಯವಿಲ್ಲವಂತೆ.

“ನನ್ನ ಗಂಡ ಚಿಕ್ಕವರಾಗಿದ್ದಾಗಲೇ ಅವರ ಅಪ್ಪ-ಅಮ್ಮ ತೀರಿ ಹೋಗಿದ್ದಾರೆ, ಸಹೋದರರೂ ಇಲ್ಲ, ದುಡ್ಡು ಎಲ್ಲಿಂದ ತರಲಿ, ನಮ್ಮ ಮಗಳಿಗೆ 12 ವರ್ಷ, ದುಡಿಯುವ ಕಾಲಿಗೇ ಹೀಗಾಯ್ತಲ್ಲ” ಎಂದು ಆಕೆ (93426 07745)ಕಣ್ಣೀರಿಡುತ್ತಿದ್ದರೆ ಏನು ಮಾಡ ಬೇಕೆಂಬುದೇ ತಿಳಿಯದಾಗಿತ್ತು. ಅವರ ಹುಟ್ಟಿನ ಜತೆಗೇ ಬಳುವಳಿ ಯಾಗಿ ಬಂದಿರುವ ಬಡತನವನ್ನು ದೂರಬೇಕೋ, ಬಡತನದ ಜತೆ ದುಡಿಯುವ ಕಾಲನ್ನೇ ಕಿತ್ತುಕೊಂಡ ದೇವರನ್ನು ಶಪಿಸಬೇಕೋ ಅಥವಾ ನಮ್ಮನ್ನಾಳುತ್ತಾ ಬಂದಿರುವ ದರಿದ್ರ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕಬೇಕೋ? ಅಷ್ಟಕ್ಕೂ ಕೇಶವ ಶೆಟ್ಟಿಯವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಕಾಲು ಉಳಿಯುತ್ತಿತ್ತಲ್ಲವೆ? ಹಾಗಿರುವಾಗ ಯಾರನ್ನು ದೂರಬೇಕು? ಒಬ್ಬ ಸಾಮಾನ್ಯ ಬಡ ಅನಕ್ಷರಸ್ಥನಿಗೆ ರೋಗಗಳು ಬಂದಾಗ ಆತನಿಗೆ ದಾರಿ ತೋರುವವರಾರು? ಗ್ಯಾಂಗ್ರಿನ್ ಮತ್ತು ಗಂಭೀರ ರೋಗಗಳ ಬಗ್ಗೆ ಹೇಳಿದರೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರಿಗೆ ಸೂಕ್ತ ಸಲಹೆ ಹಾಗೂ ಸಹಾಯ ನೀಡಬೇಕಾಗಿದ್ದು ಯಾರ ಕರ್ತವ್ಯ?

ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿಯ ವರ ಹೆಸರನ್ನು ಯಾರು ತಾನೇ ಕೇಳಿಲ್ಲ?

ಕರ್ನಾಟಕ ಹಾಲು ಒಕ್ಕೂಟ(KMF) ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಡಾ. ದೇವಿ ಶೆಟ್ಟಿಯವರು, ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಒಂದು ವಿನೂತನ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪವಿಟ್ಟು, ಅದಕ್ಕೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿಕೊಂಡರು. ಅದರ ಫಲವೇ ‘ಯಶಸ್ವಿನಿ ಆರೋಗ್ಯ ವಿಮೆ’. ಸಮಾಜದ ಕೆಲವು ದಾನಿಗಳು, ಸಂಘ-ಸಂಸ್ಥೆಗಳು ನೀಡಿದ ಸಹಾಯಧನದೊಂದಿಗೆ ಪ್ರಾರಂಭವಾದ ಈ ಯೋಜನೆ ಪ್ರಾರಂಭದಲ್ಲಿ ಹಾಲು ಒಕ್ಕೂಟಕ್ಕೆ ಸೇರಿದ ರೈತರಿಗಷ್ಟೇ ಅನುಕೂಲ ಕಲ್ಪಿಸಿದರೂ ತದನಂತರ ಇತರ ಸಹಕಾರಿ ಸಂಘ-ಸಂಸ್ಥೆಗಳಿಗೂ ವಿಸ್ತರಿಸಲಾಯಿತು. ಅದರಲ್ಲೂ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಸಕ್ತಿಯ ಫಲವಾಗಿ 2003ರಲ್ಲಿ ಕರ್ನಾಟಕ ಸರಕಾರವೇ ‘ಯಶಸ್ವಿನಿ ಆರೋಗ್ಯ ವಿಮಾ ಯೋಜನೆ’ಯನ್ನು ಜಾರಿಗೆ ತಂದಿತು. ಇದೊಂದು ರೀತಿಯ ಸಮುದಾಯ ಆಧಾರಿತ ವಿಮಾ ಯೋಜನೆ. ಸದಸ್ಯರು ಇಂತಿಷ್ಟು ವಂತಿಗೆಯನ್ನು ಮುಂಗಡವಾಗಿ ನೀಡಿ ಯೋಜನೆಯ ವ್ಯಾಪ್ತಿಗೆ ಒಳಪಡಬೇಕು. ಈ ಯೋಜನೆ ಒಂದು ಉತ್ತಮ ಪ್ರಾರಂಭವಾಗಿತ್ತಷ್ಟೇ ಹಾಗೂ ಅದನ್ನು ವಿಸ್ತರಿಸುವ ಮತ್ತು ಲೋಪಗಳನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಿತ್ತು. ಇಷ್ಟಾಗಿಯೂ ಎಸ್.ಎಂ. ಕೃಷ್ಣ ಅವರ ನಂತರ ಬಂದ ಸರಕಾರಗಳು ಏಕೆ ‘ಯಶಸ್ವಿನಿ’ಯನ್ನು ಬಲಗೊಳಿಸಲಿಲ್ಲ? ‘ಯಶಸ್ವಿನಿ’ ಒಂದು ಒಳ್ಳೆಯ ಯೋಜನೆಯೇ ಆಗಿದ್ದರೂ ಅದರಲ್ಲಿರುವ ಲೋಪದೋಷಗಳೇನು?

ಈ ಯೋಜನೆ ಪ್ರಾರಂಭವಾಗಿ 6 ವರ್ಷಗಳಾದರೂ ‘ಯಶಸ್ವಿನಿ’ ಇನ್ನೂ ಪ್ರಾಯೋಗಿಕ ಹಂತದಲ್ಲೇ (Experimental Stage) ಇದೆ!

ಸರಕಾರ ಪ್ರತಿ ವರ್ಷವೂ ನಿಗದಿಪಡಿಸುವ ಗಡುವಿನೊಳಗೆ 120 ರೂ. ಸಂದಾಯ ಮಾಡಿ ರೈತರು ತಮ್ಮ ಹೆಸರನ್ನು ದಾಖಲು ಮಾಡಿಸಿಕೊಳ್ಳಬೇಕು. ಹಾಗಂತ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಆತ ಯಾವುದಾದರೂ ಒಂದು ಸಹಕಾರ ಸಂಸ್ಥೆಯ ಸದಸ್ಯನಾಗಿರಬೇಕು. ಸದಸ್ಯತ್ವ ಪಡೆದು ಕನಿಷ್ಠ 6 ತಿಂಗಳಾಗಿರಬೇಕು. ಈ ಕಾರಣದಿಂದಾಗಿಯೇ ಕರ್ನಾಟಕದ ಜನಸಂಖ್ಯೆ ೫.೨೮ ಕೋಟಿಯಾಗಿದ್ದರೂ ಯಶಸ್ವಿನಿ ಯೋಜನೆಯಡಿ ಹೆಸರು ದಾಖಲಿಸಿಕೊಂಡಿರುವವರ ಸಂಖ್ಯೆ ಕೆಲವು ಲಕ್ಷಗಳನ್ನು ದಾಟಿಲ್ಲ!! ಯೋಜನೆ 1600 ರೋಗಗಳಿಗೆ ಅನ್ವಯವಾಗುತ್ತದೆ ಎಂದು ಹೇಳುತ್ತಾರಾದರೂ ಅಲ್ಲೂ ಸಾಕಷ್ಟು ಲೋಪಗಳಿವೆ. ನಮ್ಮ ರಾಜ್ಯದಲ್ಲಿ ರೋಗಗಳಿಗಿಂತ ವಾಹನ ಅಪಘಾತಗಳಲ್ಲಿ ಕಣ್ಣು, ಕೈ-ಕಾಲು ಮುಂತಾದ ಅಂಗಾಂಗಗಳನ್ನೇ ಕಳೆದುಕೊಳ್ಳುವವರು ಹೆಚ್ಚು. ಅಪಘಾತ, ಅವಘಡಗಳೂ ‘ಯಶಸ್ವಿನಿ’ಯಡಿ ಬರುತ್ತವಾ ದರೂ ಅಲ್ಲೂ ಒಂದು ನಿರ್ಬಂಧವನ್ನಿಟ್ಟಿದ್ದಾರೆ. ಅಂದರೆ ಕೃಷಿ ಸಲಕರಣೆ, ವಿದ್ಯುತ್ ಅವಘಡ, ನಾಯಿ ಅಥವಾ ಹಾವು ಕಡಿತ, ಎತ್ತು-ದನಗಳ ದಾಳಿಯಿಂದಾಗುವ ಅಪಘಾತಗಳಿಗೆ ಮಾತ್ರ ‘ಯಶಸ್ವಿನಿ’ ಅನ್ವಯವಾಗುತ್ತದೆ! ಈ ಯೋಜನೆಯ ಮತ್ತೊಂದು ಮೂಲ ಲೋಪವೆಂದರೆ  ಇದು ಹೃದಯ, ಕಿಡ್ನಿಯಂತಹ ಕೆಲವೇ ಕೆಲವು ಸರ್ಜರಿಗಳಿಗಷ್ಟೇ ಪ್ರಾಮುಖ್ಯತೆ ಕೊಡುತ್ತದೆ. ಶಸ್ತ್ರಚಿಕಿತ್ಸೆಗಳಿಗೆ 1 ಲಕ್ಷ ರೂ.ಗಳವರೆಗೂ ನೆರವು ನೀಡುತ್ತದೆ. ವೈದ್ಯರ ಸಲಹೆ ಹಾಗೂ ರೋಗತಪಾಸಣೆಗಳಿಗೆ ರಿಯಾಯಿತಿ ನೀಡುವುದಾಗಿ ಹೇಳುತ್ತದಾದರೂ ಅದಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ. ಅಣಕ ವೆಂದರೆ ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾ ಗುವವರ ಪ್ರಮಾಣ 0.08 ಪರ್ಸೆಂಟ್!

ಸರಕಾರ ಏನು ಮಾಡಬಹುದಿತ್ತು ಹಾಗೂ ಏನೆಲ್ಲ ಮಾಡ ಬಹುದು?

ನಮ್ಮ ದೇಶದ ಒಟ್ಟು ಜನಸಂಖ್ಯೆಯ 6ನೇ 1 ಭಾಗಕ್ಕಿಂತಲೂ ಕಡಿಮೆ ಜನರಿಗೆ ಮಾತ್ರ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಇತ್ತ ಆರೋಗ್ಯ ರಕ್ಷಣೆಗಾಗಿ ಜನ ಮಾಡಬೇಕಾಗಿರುವ ಖರ್ಚು ನಮ್ಮ ದೇಶದ ಕಾಲು ಭಾಗದಷ್ಟು ಜನರನ್ನು ಬಡತನ ರೇಖೆಗಿಂತ ಕೆಳಗೆ (BPL) ತಳ್ಳುತ್ತಿದೆ. ಅದರಲ್ಲೂ ಆಸ್ಪತ್ರೆ ಸೇರಬೇಕಾಗಿ ಬಂದವರಂತೂ ಸಾಲಕ್ಕೆ ಬೀಳುತ್ತಿದ್ದಾರೆ. ಅನಾರೋಗ್ಯ ಬೇರೆಲ್ಲ ಸಮಸ್ಯೆಗಳಿಗಿಂತಲೂ ಜನರಿಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ದಕ್ಷಿಣ ಕರ್ನಾಟಕದ ಶೇ.56ರಷ್ಟು ಕಾರ್ಮಿಕರು ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೇಗೆ ನೋಡಿದರೂ ಇಂದಿಗೂ ಕೃಷಿಯೇ ಅತಿ ದೊಡ್ಡ ಉದ್ಯೋಗದಾತ. ಸಾಮಾನ್ಯವಾಗಿ ರೋಗಗಳಿಗೆ ತುತ್ತಾಗುವವರೂ ಅವರೇ ಹೆಚ್ಚು. ಹಾಗೆ ರೋಗ-ರುಜಿನಗಳು ಬಂದಾಗ ಕೂಲಿ ಕಾರ್ಮಿಕರು ಏನು ಮಾಡಬೇಕು? ಬೆನ್ನಿಗೆ ಸಂಸಾರವನ್ನೂ ಕಟ್ಟಿಕೊಂಡು, ಕೈಕೊಟ್ಟ ಆರೋಗ್ಯವನ್ನು ಕಾಸು ಖರ್ಚು ಮಾಡಿ ಆತ ಹೇಗೆತಾನೇ ಸರಿಪಡಿಸಿಕೊಳ್ಳಲು ಸಾಧ್ಯ? ಈ ಹಿನ್ನೆಲೆಯಲ್ಲಿ ‘ಯಶಸ್ವಿನಿ’ ಯೋಜನೆಯನ್ನು ಸಮಾಜದ ಎಲ್ಲ ವರ್ಗ, ಸ್ತರಗಳ ಜನರಿಗೂ ಏಕೆ ವಿಸ್ತರಿಸಬಾರದು? ಬರೀ ಸಹಕಾರಿ ಸಂಘ-ಸಂಸ್ಥೆಗಳ ಸದಸ್ಯರಿಗೆ ಮಾತ್ರ ರೋಗ-ರುಜಿನಗಳು ಬರುತ್ತವೆಯೇ? ಇದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ‘ಯಶಸ್ವಿನಿ’ಯನ್ನು ಜನಾನುರಾಗಿಯನ್ನಾಗಿ ಮಾಡಬಾರದೇಕೆ? ಒಂದು Foolproof medical policyಯನ್ನು ಏಕೆ ಜಾರಿಗೆ ತರಬಾರದು? ಉಚಿತ ಚಿಕಿತ್ಸೆ ಜತೆ ಔಷಧವನ್ನೂ ಏಕೆ ರಿಯಾಯಿತಿ ದರದಲ್ಲಿ ನೀಡಬಾರದು? ಖಾಸಗಿ ಆಸ್ಪತ್ರೆಗಳಿಗೂ ಬ್ಲೇಡು ಕಂಪನಿ ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಯಾರಿಗೂ ತಿಳಿಯದ ಸಂಗತಿಯೇ? ಬಡವನಾದವನು ರೋಗ ಬಂದಾಗ ಎಲ್ಲಿಗೆ ಹೋಗಬೇಕು? ಒಂದು ವೇಳೆ ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಏನೇನು ಮಾಡಬಹುದು?

1. ಎಲ್ಲ ಸರಕಾರಿ ಜಿಲ್ಲಾ ಆಸ್ಪತ್ರೆಗಳನ್ನೂ ಮೆಡಿಕಲ್ ಕಾಲೇಜು ಗಳಾಗಿ ಪರಿವರ್ತಿಸಬೇಕು.
2. ಒಂದು ವ್ಯವಸ್ಥಿತ ಆರೋಗ್ಯ ವಿಮಾ ಯೋಜನೆಯನ್ನು ರೂಪಿಸಬೇಕು.
3. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ರೇಶನ್ ಕಾರ್ಡ್ ಜತೆ ‘ಯಶಸ್ವಿನಿ’ ಕಾರ್ಡ್ ನೀಡಬೇಕು.

ಕಳೆದ ನಾಲ್ಕೈದು ದಶಕಗಳಿಂದಲೂ ಕರ್ನಾಟಕದಲ್ಲಿ ಇದ್ದಿದ್ದು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಮುಂತಾದ ನಾಲ್ಕು ಸರಕಾರಿ ಮೆಡಿಕಲ್ ಕಾಲೇಜುಗಳು ಮಾತ್ರ. ಕಳೆದ ಐದು ವರ್ಷಗಳಲ್ಲಿ ಹಾಸನ, ಮಂಡ್ಯ, ಬೆಳಗಾವಿ, ರಾಯಚೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಸ್ಥಾಪನೆ ಮಾಡಿದ 6 ಹೊಸ ಮೆಡಿಕಲ್ ಕಾಲೇಜುಗಳಲ್ಲಿ ಎರಡಕ್ಕೆ ಇನ್ನೂ ಮಾನ್ಯತೆ ದೊರೆಯಬೇಕು. ಏಕೆಂದರೆ MCI (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ನಿಯಮಗಳ ಪ್ರಕಾರ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕನಿಷ್ಠ 25 ಎಕರೆ ಕ್ಯಾಂಪಸ್ ಇರಬೇಕು. ಇದೇನು ಪರಿಹರಿಸಲಾರದ ಸಮಸ್ಯೆಯೆ? ಸರಕಾರಕ್ಕೆ ಜನರ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ಪ್ರತಿ ಜಿಲ್ಲಾ ಆಸ್ಪತ್ರೆಗಳನ್ನೂ ಮೆಡಿಕಲ್ ಕಾಲೇಜುಗಳಾಗಿ ಏಕೆ ಪರಿವರ್ತಿಸಬಾರದು? ಒಂದು ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ. ಸಾಕು. ಆರೋಗ್ಯಕ್ಕಾಗಿ ವರ್ಷಕ್ಕೆ 500 ಕೋಟಿ ರೂ ಖರ್ಚು ಮಾಡಲು, 5 ವರ್ಷಗಳವರೆಗೂ ವರ್ಷಕ್ಕೆ  5 ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆ ಮಾಡಲು ಸರಕಾರಕ್ಕೆ ಸಾಧ್ಯವಿಲ್ಲವೆ? ಹಾಸನ-ಚಿಕ್ಕಮಗಳೂರು- ಶಿವಮೊಗ್ಗಗಳಲ್ಲಿ ಯಾರಿಗಾದರೂ ಗಂಭೀರ ಅಪಘಾತವಾದರೆ ಮಂಗಳೂರು-ಬೆಂಗಳೂರು ಇಲ್ಲವೆ ಮೈಸೂರಿಗೆ ಧಾವಿಸಿ ಬರಬೇಕು. ಅಷ್ಟರಲ್ಲಿ ಪ್ರಾಣ ಉಳಿಯುವುದೇ ಕಷ್ಟ. ಉತ್ತರ ಕರ್ನಾಟಕದವರಂತೂ ಎಲ್ಲ ವಿಷಯಗಳಲ್ಲೂ ನತದೃಷ್ಟರೇ. ಇನ್ನು ಮಂಗಳೂರು-ಬೆಂಗಳೂರು -ಮೈಸೂರು-ಧಾರವಾಡ ಎಲ್ಲಿಗೇ ಧಾವಿಸಿ ಬಂದರೂ ಕಾಣುವುದು ಖಾಸಗಿ ಆಸ್ಪತ್ರೆಗಳೇ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜುಗಳಾಗಿ ಪರಿವರ್ತಿಸಿದರೆ ಜನರಿಗೆ ಸಮೀಪದಲ್ಲೇ ಉಚಿತ ಆರೋಗ್ಯ ಸೇವೆಯೂ ದೊರೆಯುತ್ತದೆ ಹಾಗೂ ವರ್ಷಕ್ಕೆ ಕನಿಷ್ಠ ಎರಡು ಸಾವಿರ ಹೆಚ್ಚುವರಿ ವೈದ್ಯರೂ ರೂಪುಗೊಳ್ಳುತ್ತಾರೆ. ಬಡಬಗ್ಗರ ಪ್ರತಿಭಾನ್ವಿತ ಮಕ್ಕಳು ಮೆಡಿಕಲ್ ಓದಿ, ಸ್ವಸ್ಥಾನದಲ್ಲೇ ಜನರ ಸೇವೆಯನ್ನೂ ಮಾಡಬಹುದು. ಜಿಲ್ಲಾ ಆಸ್ಪತ್ರೆಗಳನ್ನು ಕಾಲೇಜುಗಳಾಗಿ ಪರಿವರ್ತಿಸುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೂ ಅನುಕೂಲವಾಗುತ್ತದೆ. ಜನ ಖಾಸಗಿ ಆಸ್ಪತ್ರೆಗಳ ಕದ ತಟ್ಟಿ ಇದ್ದುದ್ದೆಲ್ಲವನ್ನೂ ಕಳೆದುಕೊಳ್ಳುವುದು, ಸಾಲ ಮಾಡಿ ಶೂಲಕ್ಕೇರುವುದೂ ತಪ್ಪುತ್ತದೆ. ಹೈದರಾಬಾದ್ ಕರ್ನಾಟಕದ ನಾಲ್ಕು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಮಹಿಳಾ ವೈದ್ಯರ ಸಂಖ್ಯೆ 10 ದಾಟುವುದಿಲ್ಲ! ಎಷ್ಟೋ ಜನ ಪೋಷಕರು ಮಗಳು ಎಷ್ಟೇ ಬುದ್ಧಿವಂತಳಾಗಿದ್ದರೂ ಒಳ್ಳೆಯ ಮಾರ್ಕ್ಸ್ ಗಳಿಸಿ ದ್ದರೂ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ದೂರದ ಸ್ಥಳಗಳಿಗೆ ವ್ಯಾಸಂಗಕ್ಕೆ ಕಳುಹಿಸುವುದಿಲ್ಲ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ತೆರೆದರೆ ಅಂತಹ ಹೆಣ್ಣುಮಕ್ಕಳೂ ಉನ್ನತ ವ್ಯಾಸಂಗಕ್ಕೆ ಬರುತ್ತಾರಲ್ಲವೆ? ವೈದ್ಯೆಯರ ಕೊರತೆಯೂ ನೀಗುವುದಿಲ್ಲವೆ? ಜತೆಗೆ ಒಳ್ಳೆಯ ಆಸ್ಪತ್ರೆಗಳೂ ನಿರ್ಮಾಣವಾದಂತಾಗುತ್ತದಲ್ಲವೆ?

ಇನ್ನು ಬೆಂಗಳೂರು, ಮಂಗಳೂರು, ಮೈಸೂರಿನಂತಹ ಮಹಾನಗರಗಳ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆರೋಗ್ಯ ವಿಮೆ ಸೌಲಭ್ಯದ ಅರಿವು ಇರುತ್ತದೆ. ಉಳಿದವರು ಏನು ಮಾಡಬೇಕು? ಸರಕಾರವೇಕೆ ಅಪಘಾತವನ್ನೂ ಒಳಗೊಂಡ ಒಂದು ವ್ಯವಸ್ಥಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಬಾರದು? ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ರೇಶನ್ ಕಾರ್ಡ್ ಜತೆ ‘ಯಶಸ್ವಿನಿ’ ಕಾರ್ಡ್ ಏಕೆ ನೀಡಬಾರದು? ನಮ್ಮನ್ನಾಳುವ ಸರಕಾರಕ್ಕೆ ಕಾಳಜಿಯಿದ್ದರೆ ರಾಜ್ಯದ ಪ್ರತಿ ನಾಗರಿಕನಿಗೂ ವಿಮೆ ಸೌಲಭ್ಯ ನೀಡಿ, ಖಾಸಗಿ ಸಹಿತ ಪ್ರತಿ ಆಸ್ಪತ್ರೆಗಳನ್ನೂ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು.

1. ವೈದ್ಯಕೀಯ ಸಲಹೆ
2. ರೋಗ ತಪಾಸಣೆ ಮತ್ತು ಪತ್ತೆ
3. ಚಿಕಿತ್ಸೆ
4. ಚಿಕಿತ್ಸೆ ತರುವಾಯದ ಖರ್ಚು.

ಇವಿಷ್ಟನ್ನೂ “Cash-less” ಮಾಡಿದರೆ, ಯಾವುದೇ ಆಸ್ಪತ್ರೆಗೆ ಹೋದರೂ ಬಡವರು, ನಿರ್ಗತಿಕರಿಗೆ ಉಚಿತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿದರೆ ಈ ರಾಜ್ಯದ ಯಾವ ನಾಗರಿಕನೂ ದುಡ್ಡಿಲ್ಲ ಎಂಬ ಕಾರಣಕ್ಕೆ ಸಾಯುವ, ನರಳುವ ಸ್ಥಿತಿ ಬರುವುದಿಲ್ಲ. ಇಷ್ಟು ಮಾಡಲು ಸರಕಾರ ಭಾರೀ ಹಣ ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಯಶಸ್ವಿನಿ ಕಾರ್ಡ್ ಪಡೆಯಲು ಮುಂಗಡವಾಗಿ 120 ರೂ. ಕಟ್ಟಬೇಕು. ರಾಜ್ಯದ ಎಲ್ಲ 5.28 ಕೋಟಿ ಜನರಿಗೂ ಯಶಸ್ವಿನಿ ಕಾರ್ಡ್ ನೀಡಿ, ತಲಾ 120 ರೂ. ಸಂಗ್ರಹಿಸಿದರೆ ಅದರಲ್ಲೇ 600 ಕೋಟಿ ಬಂದು ಬಿಡುತ್ತದೆ. ಸಾಮಾನ್ಯರಾದ ನಮಗೇ ಇಷ್ಟೆಲ್ಲಾ ಹೊಳೆಯುವುದಾದರೆ ಐಎಎಸ್ ಓದಿಕೊಂಡು, 30 ವರ್ಷ ಅನುಭವ ಹೊಂದಿರುವ ಅಧಿಕಾರಿಗಳಿಗೆ ಹಾಗೂ ಜನಸೇವೆಯ ಹೆಸರಲ್ಲಿ ಅಧಿಕಾರಕ್ಕೇರುವವರಿಗೆ ಹೊಳೆಯುವು ದಿಲ್ಲವೆ? ಆರೋಗ್ಯ ಸಚಿವ ಶ್ರೀರಾಮುಲುಗಂತೂ ಗಣಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನೇಗಿಲಯೋಗಿಯ ನೇತಾರ ಎಂದು ಕರೆದುಕೊಳ್ಳುತ್ತೀರಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪನವರೇ  ನಿಮಗೂ ಕೇಶವ ದಾಮೋದರ ಶೆಟ್ಟಿಯಂಥ ಶ್ರೀಸಾಮಾನ್ಯನ ವೇದನೆ ಅರ್ಥವಾಗುವುದಿಲ್ಲವೆ? ಒಂದಿಲ್ಲೊಂದು ಕಾರಣಕ್ಕೆ ನಾವೆಲ್ಲರೂ ಯಾವುದೋ ಒಂದು ಸಂದರ್ಭದಲ್ಲಾದರೂ ಆಸ್ಪತ್ರೆಯ ಮೆಟ್ಟಿಲು ತುಳಿಯಬೇಕಾಗುತ್ತದೆ. ನಮ್ಮನ್ನಾಳುವವರು ಇಷ್ಟೊಂದು ಸಂವೇದನಾರಹಿತರಾಗಿ ಬಿಟ್ಟರೆ ಗತಿಯೇನು? “ಆರೋಗ್ಯವೇ ಭಾಗ್ಯ” ಎಂಬ ಮಾತೇನೋ ಇದೆ. ಆದರೆ ಜನರ ಆರೋಗ್ಯ ರಕ್ಷಣೆ ಮಾಡಬೇಕಾದುದು ಯಾರು, ಹೇಳಿ ಮುಖ್ಯಮಂತ್ರಿಗಳೇ?

7 Responses to “ಇದು ಒಬ್ಬಿಬ್ಬರ ಕಥೆ-ವ್ಯಥೆಯಲ್ಲ, ಸರದಿಯಲ್ಲಿ ನಿಂತಿರುವವರೇ ಎಲ್ಲ!”

  1. few months back i came to know that there’s a scheme called as ‘Yashaswini’ in karnataka,that too when my grandpa has to undergo a heart surgery.it was then i checked for the information about the scheme.i am shocked to know that they won’t provide any support in case of accidents and other informations i got from your article,thanks a lot for that………
    i hope that who ever was in ICU is alright now………
    i always think that if the concerned authorities had read your article,not just this one,it may be about population control,education,politics……… and had taken it seriously,then so many things might have changed……..

  2. Hai,
    Pratap,

    Article Subject is good.and your writing also good.

  3. Chaitra Bhat says:

    An article that has come out of real concern. The one which is felt to the core before being penned down. Honestly I would say that this article stands apart from many other of yours which sometimes feel like written to complement your image of a good or ‘aggressive’ writer.
    Lets hope the suggested ideas become a reality…

  4. nagendra says:

    superb…
    good thinking…
    why don’t concentrate on these issues which makes us thinking, rather than blody terrorists…

  5. Ravi says:

    Hi Pratap,
    No doubt you write a very good articles, even you focus on current scenorio/problems.
    But i obeserved that, every one will read this on each saturday and wait for another saturday article.
    Some people they say its very good, excellent etc,,,,
    My question is If people are soo worryed about all this problems, why dont they take it seriously on these issues and fight against this?
    I hope your articles is not a words, these are the facts which come through words.Its no use we comment good, fantastic etcc,,, because every one know that u r articles is really good.We never read these for curiosity/time pass.
    We should Fight for our rights and We should really needs to do Some thing for this.
    I m really worryed what will happen to society in future, if we still sleep.
    Please wake Up guys (People, society).

  6. Karthik says:

    Dear Chaitra Bhat & Nagendra,

    Pratap is a think tank & he knows what is he doing. Nimmannella secularism enno bootha metkondide. There are hardly some authors who concentrate on Hindutva. Every other author is sold himself out. Please have a look at the below reality.
    Please spend some time for this….

    A) Is this Government really protecting us??!!

    7/11 2006: Mumbai Train Blasts. 209 Killed.
    25/8 2007: Hyderbad Blasts: 42 Killed
    Oct 11 2007: Ajmer Blasts : 2 Killed
    May 13 2008: Jaipur Blasts : 68 Killed
    July 16th 2008: Ahmedabad Blasts : 57 Killed
    July 25th 2008: Banglaore Blasts: 1 killed
    Sept 13th 2008: Delhi Blasts: 26 Killed
    Sept 27th 2008: Delhi Blasts: 2 Killed
    Sept 29th 2008 : Gujrat Blasts : 1 killed
    Oct 21st 2008: Imphal Blasts : 17 Killed
    Oct 30th 2008: Assam Blasts : 40 Killed
    Nov 26th 2008: Mumbai Attack: 180 killed

    Every major city in India has been attacked consistently over the last two years.
    Since 2004, 3850 Indians have died in Terror attacks in over 3000 incidents.
    Is the common Indian on the streets really safe ?

    Did you know that on the day of the Mumbai train blasts, the Government gave Rs 150 crores for earthquake relief in Pakistan ? Last year our Govt. has given Rs 3000 crores (600 Million Dollars) to Afghanistan? This, when victims of terror in India have not yet got aid? What’s going on?

    B) Is this Government really secular ?

    1) When Madrasas are being shut down in Pakistan, the Indian Government is giving them CBSE status !! It is depriving Muslim children in getting secular education. A Madrasa educated person can get a job in any government office without going through the secular education system. Can India afford to have fundamentalists in government departments? Why cannot the government shut down Madrassas and let Muslim children study with the rest?

    2) Our Government has given 25 lakh scholarships ONLY to minority students.
    What sin have the majority done not to deserve these?
    Why cannot poor students of all communities be given scholarships instead of only Muslim children?

    3) Thanks to the AP Government, out of 36000 temples in Andhra Pradesh, 28000 have closed down in the last five years. Do you want the same trend to continue in other parts of the country? Do you want a Nagaland type of situation in the whole of India? While government controls most of the Hindu temples, the minority community has had full freedom to organize their religious bodies. The minority communities now have the first right over resources. Is this not a blatant violation of fundamental rights of the majority community? Now you know the consequence also. YSR is with Jesus!!!

    4) Why have the minorities in Nagaland, Mizoram & Kashmir not got the similar privileges like the minorities in other states? Why is the Govt following different rules for different religions?

    C) Is this government really making friends or enemies for India ?
    Thanks to a weak and visionless foreign policy, India has created enemies all around. By the Home Minister’s own admission : “India is surrounded by a circle of fire”. Rajiv Gandhi’s vision of a powerful “SAARC” is now defunct.

    1) Today, India commands little respect from all its neighbours, despite being the largest democracy in the world.
    2) Terrorism has engulfed the country from inside and outside. Of course Pakistan,the motherland of international terrorism continues to be a big threat.
    3) China has territorial ambitions on India.
    4) Nepal, is now being headed by a Maoist government and is ideologically more aligned to China. While India helped to dismantle the dynastic rule in Nepal our own Government surreptitiously supports dynastic rule within its own party.
    5) Myanmar is increasingly aligning with Chinese forces with huge Chinese investments in that region.
    6) Indian Policies in Srilanka have made Tamil Nadu burn. Will Tamils ever forgive India for encouraging military assault rather than facilitating peaceful dialogue on their north and north east regions.
    7) Bangladesh continues to repeatedly aid and abet terrorism.

    D) Is this Government really pro-poor?
    The number of people living below the poverty line has increased by a horrifying 20 per cent. India had some 270 million people below the poverty line in 2004-2005, when the present Government took office. That number has gone up by 55 million, or 20 per cent!

    E) Does this Government really care about the nation?
    The Pakistani flag is now being hoisted in five districts of states like Assam where the Muslim population has gone up significantly. 92000 Hindu and 6000 Christians are now languishing in refugee camps. The government has turned a blind eye to this.
    In the name of security, innocent people have been put in jails, whereas people like Yaasin Malik who has 23 murder charges on him, are moving Scot free and gathering their own strength. Is it acceptable to any patriotic Indian?

    Can the Government promise a non-muslim CM in J&K ? Reservation for a Hindu student in Nagaland ? If so, we wholeheartedly support them. Otherwise they should sit at home the next few years and rethink their policies.
    Can our politicians stop stooping down to any lengths just for money and power ?
    Don’t be deceived. What appears to be communal is not communal, and what appears to be secular is not secular. It is time we change our thinking.

    Stand up for this most tolerant and ancient civilization and prevent this great nation from becoming a communal battleground. As citizens of India we must vote for change.

  7. Natesh says:

    Hi Karthik,
    Nice one, I think this is what happening in our country now. We are in conflict with each other’s and outsider [terrorist] will come and attack on our place, these attacks will hurt our emotions rather than causing any other pain. Please guys, Try to do something from your end first. In this article, Mr. Prathap took a topic and gave# to help needy, but topic went elsewhere.

    Prathap,
    I think, the effort you put to write this article is waste. It didn’t serve the purpose.