Date : 10-03-2009 | 29 Comments. | Read More
(Photo: Albert Einstein, Hideki Yukawa, John Archibald Wheeler, Homi Jehangir Bhabha) ನೀವೇಕೆ ಮದುವೆ ಆಗಲೇ ಇಲ್ಲ? ಅಂತ ಕೇಳಿದರೆ “I am married to creativity” ಎನ್ನುತ್ತಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ವ್ಯಕ್ತಿಯ ಬಾಯಿಂದ ಬರುವ, ಬರಬೇಕಾದ ಮಾತುಗಳು ಅವಾಗಿರಲಿಲ್ಲ. ಅಪ್ಪ ಜಹಾಂಗೀರ್ ಹರ್ಮ್ಜಿ ಭಾಭಾ ಬ್ರಿಟನ್ನ ಆಕ್ಸ್ಫರ್ಡ್ನಲ್ಲಿ ಕಲಿತ ಖ್ಯಾತ ವಕೀಲ. ಅಜ್ಜ ಹರ್ಮುಸ್ಜಿ ಭಾಭಾ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯಸ್ಥ. ಅಮ್ಮ ಮೆಹರ್ಬಾಯಿ ಜಗದ್ವಿಖ್ಯಾತ ಟಾಟಾ ಕುಟುಂಬದ ಸಂಬಂಧಿ. […]
Date : 01-03-2009 | 66 Comments. | Read More
ಅವತ್ತು ಭಾರತೀಯ ಬಾಹ್ಯಾಕಾಶ ವಿಜಾನದ ಪಿತಾಮಹ ವಿಕ್ರಂ ಸಾರಾಭಾಯಿ ಅವರಿಂದ ಪ್ರೇರಿತರಾಗಿದ್ದ ಸತೀಶ್ ಧವನ್, ಅಬ್ದುಲ್ ಕಲಾಂ ಮುಂತಾದ ವಿಜಾನಿಗಳು ಒಂದು ಜಗುಲಿಯಂತಹ ಜಾಗದಲ್ಲಿ ಕುಳಿತು ದೇಶದ ಮೊದಲ ಉಪಗ್ರಹವಾದ ‘ಆರ್ಯಭಟ’ವನ್ನು Assemble ಮಾಡಿದ್ದರು. ಅದಕ್ಕೂ ಮೊದಲು ಒಂದೊಂದು ಬಿಡಿ ಭಾಗಗಳನ್ನೂ ಸೈಕಲ್ ಮೇಲೆ ತಂದಿದ್ದರು. ಎಲ್ಲ ಭಾಗಗಳನ್ನೂ ಜೋಡಿಸಿದ ನಂತರ ಸೋವಿಯತ್ ರಷ್ಯಾಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಬೈಕನೂರ್ ಉಡಾವಣಾ ಕೇಂದ್ರದಿಂದ 1975ರಲ್ಲಿ ಭೂಸ್ಥಿರ ಕಕ್ಷೆಯಲ್ಲಿ ಸ್ಥಿರಗೊಳಿಸಿದ್ದರು.
Date : 24-02-2009 | 71 Comments. | Read More
ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧಗಳು ಎನ್ನೊಳಿರಲಾಗಿ…. ಅನ್ನ ಮದ ಅರ್ಥ ಮದ ಅಷ್ಟೈಶ್ವರ್ಯ ಮದ ಮುನ್ನ ಪ್ರಾಯದ ಮದವು, ರೂಪ ಮದವು….
Date : 16-02-2009 | 24 Comments. | Read More
“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. […]
Date : 11-02-2009 | 11 Comments. | Read More
ಈ ಬಿಜೆಪಿಯವರು ಬೇಕೆಂದೇ ತಕರಾರು ತೆಗೆಯುತ್ತಿದ್ದಾರೆ ಎನ್ನಲು ಇದೇನು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕಂಡು ಹುಡುಕಿದ, ಬಗೆದು ತೆಗೆದ ವಿವಾದವಲ್ಲ. “ನಿಷ್ಪಕ್ಷಪಾತ ನಿರ್ಧಾರ, ನಿಲುವನ್ನು ನಿರೀಕ್ಷಿಸುವ ಹಾಗೂ ಇತರರಿಗೆ ನ್ಯಾಯದಾನ ಮಾಡಬೇಕಾದ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಲು ಈ ವ್ಯಕ್ತಿ ಅನರ್ಹ” ಎಂದು ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ 1979ರಲ್ಲೇ ಹೇಳಿದ್ದರು.
Date : 02-02-2009 | 46 Comments. | Read More
ಕೆವಿನ್ ಕಾರ್ಟರ್, ಕೆನ್ ಓಸ್ಟರ್ಬ್ರೋಕ್, ಗ್ರೆಗ್ ಮರಿ ನೋವಿಚ್, ಜೊಆವೋ ಸಿಲ್ವಾ. ಇವರೆಲ್ಲರೂ ದಕ್ಷಿಣ ಆಫ್ರಿಕಾದ ಫೋಟೋಗ್ರಾಫರ್ಸ್. ವರ್ಣಭೇದ ನೀತಿಯ ವಿರುದ್ಧ ಭುಗಿಲೆದ್ದಿದ್ದ ಜನಾಂಗೀಯ ಸಮರ, ಸಾಮಾಜಿಕ ಕಲಹ ೧೯೯೦ರ ವೇಳೆಗೆ ತುತ್ತತುದಿಗೇರಿತ್ತು. ಬಿಳಿಯರು ಕರಿಯರು ಕೊಲೆ, ಕಚ್ಚಾಟದಲ್ಲಿ ತೊಡಗಿದ್ದರು. ಅಂತಹ ಹಿಂಸೆಯ ಹಸಿ ಹಸಿ ಫೋಟೋಗಳನ್ನು ತೆಗೆಯುವುದೇ ಈ ನಾಲ್ವರು ಛಾಯಾಚಿತ್ರಕಾರರ ಮುಖ್ಯ ದಂಧೆಯಾಗಿತ್ತು. ಜೋಹಾನ್ನೆಸ್ಬರ್ಗ್ನ ಮ್ಯಾಗಝಿನ್ನಲ್ಲಿ ಪ್ರಕಟವಾಗುತ್ತಿದ್ದ ಹೃದಯ ವಿದ್ರಾವಕ ಚಿತ್ರಗಳೆಲ್ಲ ಇವರದ್ದೇ ಆಗಿರುತ್ತಿದ್ದವು. “The Bang-Bang Club” ಎಂದೇ ಇವರು ಹೆಸರಾಗಿ ದ್ದರು. […]
Date : 26-01-2009 | 34 Comments. | Read More
ದೋಷವಿದ್ದಿದ್ದು ಅವರ ಇಂಗ್ಲಿಷ್ನಲ್ಲಿ, ಗುಂಡಿಗೆಯಲ್ಲಲ್ಲ! ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.
Date : 19-01-2009 | 7 Comments. | Read More
ಮೊನ್ನೆ ಜನವರಿ ೧೨ರಂದು ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ತಮ್ಮ ಕೊನೆಯ ಪತ್ರಿಕಾಗೋಷ್ಠಿ ಕರೆದಿದ್ದರು. ಸಹಜವಾಗಿಯೇ ಎಲ್ಲ ತೆರನಾದ ಟೀಕೆ, ವಾಗ್ಬಾಣಗಳನ್ನು ಬುಷ್ ಎದುರಿಸಬೇಕಾಯಿತು. “ನೂತನ ಅಧ್ಯಕ್ಷರು ಜಾಗತಿಕ ಮಟ್ಟದಲ್ಲಿ ಅಮೆರಿಕದ ನೈತಿಕ ಸ್ಥಾನಮಾನವನ್ನು ಮರು ಸ್ಥಾಪಿಸಬೇಕಾದ ಅಗತ್ಯವಿದೆ” ಎಂದ ಪತ್ರಕರ್ತರೊಬ್ಬರು, ಜಾರ್ಜ್ ಬುಷ್ ಆಡಳಿತದಡಿ ಅಮೆರಿಕದ ಪ್ರತಿಷ್ಠೆಗೆ ಭಾರೀ ಧಕ್ಕೆಯಾಗಿದೆ ಎಂದು ಪರೋಕ್ಷವಾಗಿ ಚುಚ್ಚಿದರು.
Date : 11-01-2009 | 50 Comments. | Read More
ನಾಲ್ಕೂವರೆ ವರ್ಷಗಳ ಹಿಂದಿನ ಮಾತು. ೨೦೦೪, ಆಗಸ್ಟ್ನಲ್ಲಿ ಖ್ಯಾತ ‘ಔಟ್ಲುಕ್’ ವಾರಪತ್ರಿಕೆ ಒಂದು ವಿಶೇಷ ಸಂಚಿಕೆಯನ್ನು ಹೊರ ತಂದಿತು. “What if” ಎಂಬ ಅದರ ಶೀರ್ಷಿಕೆಯೇ ಸಾಕಿತ್ತು ಓದುಗರ ಗಮನ ಸೆಳೆಯಲು, ಆಸಕ್ತಿ ಹುಟ್ಟಿಸಲು. ಇಂತಹ ಒಂದು ಸಂಚಿಕೆಯನ್ನು ಹೊರತರುವ ಕಲ್ಪನೆ ಹೊಳೆ ದಿದ್ದು ಕರ್ನಾಟಕ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾದ ಮೈಸೂರಿನ ಕೃಷ್ಣ ಪ್ರಸಾದ್ ತಲೆಯಲ್ಲಿ. ಆ ಸಂಚಿಕೆಗೆ ಕೃಷ್ಣ ಪ್ರಸಾದ್ ಅವರೇ ಸಂಪಾದಕರು. ಒಂದು ವೇಳೆ ಭಾರತ ಇಬ್ಭಾಗವಾಗದೇ […]
Date : 04-01-2009 | 30 Comments. | Read More
ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?