*/
Date : 24-02-2009, Tuesday | 71 Comments
ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧಗಳು
ಎನ್ನೊಳಿರಲಾಗಿ….
ಅನ್ನ ಮದ ಅರ್ಥ ಮದ
ಅಷ್ಟೈಶ್ವರ್ಯ ಮದ
ಮುನ್ನ ಪ್ರಾಯದ ಮದವು, ರೂಪ ಮದವು….
ದುರಹಂಕಾರ ಮಾಡಿದರೆ ಕೊನೆಗೆ ಗಂಜಿಗೂ ಗತಿಯಿಲ್ಲ ದಂತಾಗುತ್ತದೆ ಅಂತ ೫೦೦ ವರ್ಷಗಳ ಹಿಂದೆಯೇ ಪುರಂದರ ದಾಸರು ಹೇಳಿದ್ದರು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕಂಡುಬರುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದಾಸರು ಹೇಳಿದ್ದ ಮಾತು ಇಂದಿಗೂ ಎಷ್ಟು ನಿಜ ಎನಿಸಲಾರಂಭಿಸಿದೆ. ಫ್ಲ್ಯಾಟು, ಸೈಟು ಎನ್ನುತ್ತಿದ್ದವರೆಲ್ಲ ಗಂಜಿಯ ಮಾತನಾಡುತ್ತಿದ್ದಾರೆ. ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದರೆ, ಉಳಿದವರು ನಮ್ಮ ಸರದಿ ಯಾವ ಕ್ಷಣದಲ್ಲೂ ಬರಬಹುದು ಎಂಬ ಆತಂಕ ದಲ್ಲಿದ್ದಾರೆ. ನಿಜಕ್ಕೂ ಐಟಿ ಕ್ಷೇತ್ರದಲ್ಲಿರುವವರು ನೀರಿನಿಂದ ಮೇಲೆತ್ತಿ ದಡಕ್ಕೆ ಹಾಕಿದ ಮೀನಿನಂತಾಗಿದ್ದಾರೆ.
ಹಾಗಂತ ಯಾರೂ ಇವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿಲ್ಲ!
‘ಬಹಳ ಹಾರಾಡುತ್ತಿದ್ದರು, ತಕ್ಕ ಶಾಸ್ತಿಯಾಗಿದೆ’ ಎಂದು ಉಳಿದವರು ಒಂದು ರೀತಿ rejoice ಮಾಡುತ್ತಿದ್ದಾರೆ!! ಆದರೆ ಅದು ಶ್ರೀಮಂತಿಕೆಯ ಮೇಲಿನ ಮತ್ಸರದಿಂದಲ್ಲ. ಇವತ್ತು ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಬಿಪಿಒ, ಕೆಪಿಒದಲ್ಲಿದ್ದವರು ಕೆಲಸ ಕಳೆದುಕೊಂಡರೆ ಅವರ ಬಗ್ಗೆ ಸಮಾಜ ಕಿಂಚಿತ್ತೂ ಅನುಕಂಪವನ್ನು ತೋರದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡವರು ಅವರೇ.
Force of the market is force of the devil ಎನ್ನುತ್ತಿದ್ದರು ಗಾಂಧೀಜಿ. ಅವರ ಮಾತನ್ನು ಐಟಿ ಕ್ಷೇತ್ರದಲ್ಲಿರುವವರು ಯಾವತ್ತೂ ಅರ್ಥಮಾಡಿಕೊಳ್ಳಲಿಲ್ಲ. ಅಪ್ಪ ನಿವೃತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನು ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ಹಾಗೆಂದು ಐಟಿ ಕ್ಷೇತ್ರದಲ್ಲಿರುವವರಿಗೆ ಅಷ್ಟು ಸಂಬಳ ಕೊಟ್ಟಿದ್ದು ತಪ್ಪು ಅಂತ ಯಾರೂ ಭಾವಿಸಲಿಲ್ಲ. ಕಷ್ಟಪಟ್ಟು ದುಡಿಯುವವರಿಗೆ ಒಳ್ಳೆಯ ಸಂಬಳ ಕೊಟ್ಟರೆ ಯಾರಾದರೂ ಬೇಡ ಎನ್ನಲು ಸಾಧ್ಯವೆ? ಇಪ್ಪತ್ಮೂರು ವರ್ಷಕ್ಕೇ ಕೈ ತುಂಬ ದುಡ್ಡೇನೋ ಬಂತು, ದುಡ್ಡಿನ ಬೆಲೆ ಅರ್ಥಮಾಡಿಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಹಾಗಾಗಿ ದುಡ್ಡು ಬಂದ ಮೇಲೆ ಅವರ “Attitude”ಗಳೇ ಬದಲಾಗಿ ಬಿಟ್ಟಿದ್ದವು. “ನನ್ನ ದುಡ್ಡು, ನಾನು ಖರ್ಚು ಮಾಡುತ್ತೇನೆ” ಎನ್ನಲಾರಂಭಿಸಿದರು. ನಿಮಗೆ ಜವಾಬ್ದಾರಿಯೇ ಇಲ್ಲ, ನಿಮ್ಮಿಂದಾಗಿ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಯಾರಾ ದರೂ ನೋವು ತೋಡಿಕೊಂಡರೆ, “ಟ್ಯಾಕ್ಸ್ ಕಟ್ಟಲ್ವಾ, ನಾವು ಕಟ್ಟುತ್ತಿರುವ ಟ್ಯಾಕ್ಸ್‌ನಿಂದಾಗಿಯೇ ಸರಕಾರ ನಡೆಯುತ್ತಿದೆ” ಎಂಬ ಉಡಾಫೆಯ ಮಾತುಗಳನ್ನು ಹೇಳಲಾರಂಭಿಸಿದರು. ಅರ್ಹತೆ ಮೀರಿ ಸಿಕ್ಕಿದ ಸಂಬಳ ‘ಪ್ರಾಯ ಬರುವ ಮುನ್ನದ ಮದ’ಕ್ಕೆ ಕಾರಣವಾಯಿತು. ಹಾಗಾಗಿ ತಮಗೂ ಸಾಮಾಜಿಕ ಜವಾಬ್ದಾರಿ (ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಇದೆ ಎಂಬುದು ಇವರಿಗೆ ಅರ್ಥವಾಗಲೇ ಇಲ್ಲ.
ನಮ್ಮ ಸ್ವಾತಂತ್ರ್ಯ ಚಳವಳಿಯನ್ನು ತೆಗೆದುಕೊಳ್ಳಿ.
ಆಗಲೂ ಆಗರ್ಭ ಶ್ರೀಮಂತರಿದ್ದರು. ಮೋತಿ ಲಾಲ್ ನೆಹರು, ಜಮ್ನಾ ಲಾಲ್ ಬಜಾಜ್, ಬಿರ್ಲಾ ಅವರಂತಹ ಕೋಟ್ಯಧಿಪತಿಗಳು ಬಂಗಲೆಯಲ್ಲಿ ಆಡಂಬರದ ಜೀವನ ನಡೆಸಬಹುದಿತ್ತು. ಆದರೆ ಭೋಗದ ಆಸೆ ಬಿಟ್ಟ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ್ದವರಿಗೆ ಹಣಕಾಸು ನೆರವು ನೀಡುವ ಜತೆಗೆ ಮನೆಯಿಂದ ಹೊರಬಂದು ಬ್ರಿಟಿಷರ ವಿರುದ್ಧ ಸ್ವತಃ ಬೀದಿಗಿಳಿದಿದ್ದರು. ಒಬ್ಬ ಸಾಮಾನ್ಯ ಭಾರತೀಯನ ಮಧ್ಯೆ ಸಾಮಾನ್ಯನಾಗಿ ಹೋರಾಡಿದರು. ಅಂತಹ ಸರಳ ನಡೆ, ನುಡಿ ಹಾಗೂ ಜೀವನದ ಮೂಲಕ ಎಲ್ಲರಿಗೂ ಒಂದು ಮೇಲ್ಪಂಕ್ತಿ ಹಾಕಿಕೊಟ್ಟರು. ಅವರ ವೇಷ-ಭೂಷಣಗಳೂ ಯಾರ ಕಣ್ಣುಕುಕ್ಕುವಂತಿರಲಿಲ್ಲ. ಅವರು ಶ್ರೀಮಂತರು ಎಂದು ಯಾರಿಗೂ ಅನಿಸಲಿಲ್ಲ. ಅಂತಹ ಶ್ರೀಮಂತರೇ ಸಾಮಾನ್ಯರಂತೆ ಹೋರಾಡುತ್ತಿದ್ದಾರೆ, ಇನ್ನು ನಾವು ಸುಮ್ಮನೆ ಕುಳಿತುಕೊಳ್ಳುವುದಾದರೂ ಹೇಗೆ ಎಂಬ ಭಾವನೆ ಇತರರಲ್ಲಿ ಮೂಡತೊಡಗಿತು. ಹೀಗೆ ದೇಶವೇ ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತು.
ಇವತ್ತು ಅಂತಹ ಮನಸ್ಥಿತಿಯನ್ನು ಕಾಣಲು ಸಾಧ್ಯವಿಲ್ಲ.
ಅದರಲ್ಲೂ ಈ ‘First Time Rich’ ಅಥವಾ ‘Neo-Rich’ ಅಥವಾ Neo-Capitalists’ಗಳಿದ್ದಾರಲ್ಲಾ ಅವರು “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ” ಎಂಬ ನಾಣ್ನುಡಿಯನ್ನು ನಿಜವಾಗಿಸಲಾರಂಭಿಸಿದರು. ಇಂತಹ ವರ್ತನೆಯನ್ನು ಕಂಪನಿಗಳು ಬಹಳ ಚೆನ್ನಾಗಿಯೇ ಅರ್ಥಮಾಡಿಕೊಂಡವು. ಮೊದಲೆಲ್ಲ ಬ್ಯಾಂಕ್‌ನಲ್ಲಿ ಒಂದು ಅಕೌಂಟ್ ತೆರೆಯಬೇಕೆಂದರೆ ಅದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮತ್ತೊಬ್ಬರ ಸಹಿ ಬೇಕಿತ್ತು, ಬ್ಯಾಂಕ್ ಮೇನೇಜರ್ ಎದುರು ಕೈಕಟ್ಟಿ ನಿಂತುಕೊಂಡು ತನಗೇಕೆ ಅಕೌಂಟ್ ಬೇಕೆಂದು ಮನವರಿಕೆ ಮಾಡಿಕೊಡಬೇಕಿತ್ತು, ಖಾತೆ ತೆರೆಯುವಾಗ ಇಂತಿಷ್ಟು ಠೇವಣಿ ಇಡಬೇಕಿತ್ತು. ಆದರೆ ಐಟಿ ಕ್ಷೇತ್ರ ಭಾರತದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪುವ ಜತೆಗೆ ಖಾಸಗಿ ಬ್ಯಾಂಕ್‌ಗಳೂ ಆಗಮಿಸಿದವು. ಒಬ್ಬ ಎಂಜಿನಿಯರ್ ಕೆಲಸಕ್ಕೆ ಸೇರಿದ ದಿನವೇ ಕಂಪನಿಗಳು ಆತನ ಕೈಗೊಂದು ಪಾಸ್ ಮತ್ತು ಚೆಕ್ ಬುಕ್, ಎಟಿಎಂ ಕಾರ್ಡ್ ಜತೆಗೊಂದು ಕ್ರೆಡಿಟ್ ಕಾರ್ಡ್ ಕೊಡಲಾರಂಭಿಸಿದವು. ದುಡ್ಡು ಬಿಡಿಸಿಕೊಳ್ಳಲು ಎಟಿಎಂ, ಖರ್ಚು ಮಾಡಲು ಕ್ರೆಡಿಟ್ ಕಾರ್ಡ್. ಅಂದರೆ ಕಾಸು ಕೊಟ್ಟ ಕಂಪನಿಗಳು ಅದನ್ನು ಖರ್ಚು ಮಾಡುವ ದಾರಿಯನ್ನೂ ತೋರಿದವು. ಅಷ್ಟಕ್ಕೂ ಸರಕಾರವೆಂಬುದು “Welfare Oriented” ಆಗಿದ್ದರೆ, ಕಂಪನಿಗಳೇನಿದ್ದರೂ “Profit oriented”. ಉದ್ಧಾರ ಮಾಡುವುದಕ್ಕಿಂತ ಎಷ್ಟು ಖರ್ಚು ಮಾಡಿಸಬಹುದು, ಎಷ್ಟು ಗಿಟ್ಟುತ್ತದೆ ಎಂಬುದನ್ನೇ ಲೆಕ್ಕಹಾಕುತ್ತವೆ. ಇಪ್ಪತ್ತೆರಡು, ಇಪ್ಪತ್ಮೂರು ವರ್ಷ ಇಂತಹ ತಂತ್ರಗಳನ್ನು ಅರ್ಥಮಾಡಿಕೊಳ್ಳುವ ವಯಸ್ಸಲ್ಲ. ‘ನಾವು ದುಡಿದಿದ್ದನ್ನು ನಾವೇ ತಿನ್ನಬೇಕು’ ಎಂಬ ಮನಸ್ಥಿತಿ ನಮ್ಮ ಯುವಜನಾಂಗದಲ್ಲಿ ಬೇರು ಬೀಡಲು ಆರಂಭಿಸಿತು. “ನಮ್ಮಪ್ಪ ಹೊಟ್ಟೆ-ಬಟ್ಟೆ ಕಟ್ಟಿಕೊಂಡು ನಿವೃತ್ತಿಯಾಗುವವರೆಗೂ ದುಡಿದ, ಈಗ ಅನುಭವಿಸಲು ಆರೋಗ್ಯವೇ ಸರಿಯಿಲ್ಲ” ಅಂತ ಅದಕ್ಕೊಂದು ಸಮಜಾಯಿಷಿಯನ್ನೂ ಕಂಡುಕೊಂಡರು. ಭವಿಷ್ಯಕ್ಕೆ ಕೂಡಿಡುವ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿದರು. “ನನ್ನ ದುಡ್ಡು-ನಾನು ಖರ್ಚು ಮಾಡುತ್ತೇನೆ, ನಾನು ದುಡಿಯು ತ್ತೇನೆ-ನಾನೇ ತಿನ್ನುತ್ತೇನೆ” ಎಂಬ ಧೋರಣೆ ಜೀವನವನ್ನೇ ದಿಕ್ಕುತಪ್ಪಿಸಲಾರಂಭಿಸಿತು. ‘ಇಂದು ಕಷ್ಟಪಟ್ಟರೆ ನಾಳೆ ಸುಖ’ ಅಲ್ಲ, ‘ಬೆಳಗ್ಗೆ ಕಷ್ಟಪಟ್ಟರೆ ಸಂಜೆಯೇ ಸುಖ ಅನುಭವಿಸಬೇಕು’, “ನಾನು, ನನ್ನದು, ನಾನೇ”… ಇವುಗಳು ಎಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವು ಎಂದರೆ ಅವರ “ವರ್ಕ್ ಕಲ್ಚರ್” ಮೇಲೆಯೇ ಪರಿಣಾಮ ಬೀರಲಾರಂಭಿಸಿದವು.
ಐಟಿಯವರು ಒಂಥರಾ “Salary oriented workers” ಆಗಿ ಬಿಟ್ಟರು.
ಅವರದ್ದೇ ಆದ ಒಂದು “ವರ್ಕ್ ಕಲ್ಚರ್” ಏನಿದೆ ಹೇಳಿ? ಒಬ್ಬ ಮಿಲಿಟರಿಯವನು ಎಂದ ಕೂಡಲೇ ಜನರಿಗೆ ಶಿಸ್ತುಬದ್ಧ ಜೀವನ ನೆನಪಾಗುತ್ತದೆ. ಒಬ್ಬ ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾನೆ ಎಂದರೆ ಕೂಡ, ‘ಅವನು ಬಿಡಪ್ಪ ಶಿಸ್ತಿನ ಸಿಪಾಯಿ’ ಎಂದು ಜನ ಹೇಳುವುದನ್ನು ಕಾಣಬಹುದು. ಮೇಷ್ಟ್ರು ವಿಷಯಕ್ಕೆ ಬಂದಾಗ ಥಟ್ಟನೆ “ಗುರು” ಎಂಬ ಭಾವನೆ ಮೂಡುತ್ತದೆ. ಒಬ್ಬ ವಿeನಿ ಎಂದ ಕೂಡಲೇ ‘ದೇಶ ಸೇವೆ’ಯ ನೆನಪಾಗುತ್ತದೆ. ಅಂದರೆ ಯಾವುದೇ ವೃತ್ತಿಗಳನ್ನು ತೆಗೆದುಕೊಳ್ಳಿ. ಅವುಗಳೆಲ್ಲವೂ ಮೂಲತಃ ವೃತ್ತಿಗಳೇ ಆಗಿದ್ದರೂ, ಆ ವೃತ್ತಿಯಲ್ಲಿರುವವರೂ ಸಂಬಳ ಪಡೆಯುವವರೇ ಆಗಿದ್ದರೂ, ಆ ವೃತ್ತಿಗಳಿಗೆ ಅವುಗಳದ್ದೇ ಒಂದು ವೈಶಿಷ್ಟ್ಯ, ಗುಣ-ಲಕ್ಷಣಗಳಿವೆ. ಆದರೆ ಐಟಿ ಎಂದ ಕೂಡಲೇ ಏನು ನೆನಪಾಗುತ್ತದೆ? ಐಟಿ ಬೂಮ್ ಪ್ರಾರಂಭವಾಗಿ ೧೫ ವರ್ಷಗಳೇ ಆಗಿದ್ದರೂ ಅವರು ಏನು ಮಾಡುತ್ತಿದ್ದಾರೆ ಎಂಬುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂದಿಗೂ ಅರ್ಥವಾಗಿಲ್ಲ. ಐಟಿ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಬರೀ ದುಡ್ಡು!!
ಹಾಗಂತ ಜನರನ್ನು ದೂರಿ ಪ್ರಯೋಜನವಿಲ್ಲ.
‘ದುಡ್ಡಿಗಿಂತ ಕಸುಬು ಕಲಿಯಬೇಕು’ ಎಂಬ ಮೆಂಟಾಲಿಟಿ ಐಟಿಯವರಲ್ಲಿ ಬರಲೇ ಇಲ್ಲ. ಸೋಮವಾರ ಬಂದರೆ ಯಾವಾಗ ಶುಕ್ರವಾರ ಬರುತ್ತದೋ ಎಂಬ ಮನಸ್ಥಿತಿ. ಇಂತಹ ಮನಸ್ಥಿತಿಯಿಂದಾಗಿ, ಎಲ್ಲಿ ಹುಲ್ಲು ಚೆನ್ನಾಗಿ ಬೆಳೆದಿದೆಯೋ ಅಲ್ಲಿಗೆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಾನಲ್ಲಾ ಅಂತಹ ಕೌಬಾಯ್‌ನಂತಾದರು. ಅಂದರೆ ‘ಜಾಸ್ತಿ ಸಿಕ್ಕುವ ಕಡೆಗೆ ಹೋಗುವ’ ಕೌಬಾಯ್ ಮೆಂಟಾಲಿಟಿ. ವೃತ್ತಿ ನಿಷ್ಠೆ ಇವರಿಗೆ ಬರಲೇ ಇಲ್ಲ, ಅವರ ನಿಷ್ಠೆಯೇನಿದ್ದರೂ ದುಡ್ಡಿಗೆ. ಹಾಗಾಗಿ ಐಟಿ ಕ್ಷೇತ್ರದಲ್ಲಿ ಕತ್ತೆಯಂತೆ ದುಡಿದರೂ ಒಳ್ಳೆಯ ‘ವರ್ಕ್ ಕಲ್ಚರ್’ ಬರಲೇ ಇಲ್ಲ. ಅವರಿಗೆ ದುಡ್ಡಿನ ‘ಪ್ರಮಾಣ’ದ ಅರಿ ವಾಯಿತಾದರೂ ಅದರ ‘ಮೌಲ್ಯ’ದ ಅಂದಾಜು ಸಿಗಲಿಲ್ಲ. ಕಿಸೆಯಿಂದ ನೋಟನ್ನು ಎಳೆದುಕೊಡುವ ಮೊದಲು, ವಸ್ತುವಿನ ನೈಜ ಬೆಲೆಯನ್ನು ನಾಲ್ಕಾರು ಕಡೆ ವಿಚಾರಿಸಿ ಕೊಡಬೇಕು, ಕೇಳಿದ ಕೂಡಲೇ ಕೇಳಿದಷ್ಟನ್ನು ಕೊಡಬಾರದು, ಅದರಿಂದ ದುಡ್ಡಿಲ್ಲದವರ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಯೋಚನೆಯೇ ಅವರ ಮನಸ್ಸಿನಲ್ಲಿ ಬರಲಿಲ್ಲ. ನಮ್ಮಪ್ಪ ಪೈಸಾ ಪೈಸಾ ಲೆಕ್ಕಹಾಕಿ ಕೂಡಿಟ್ಟಿದ್ದರಿಂದ, ಮನೆ ಖರ್ಚಿಗೆಂದು ಅಪ್ಪ ಕೊಟ್ಟಿದ್ದರಲ್ಲಿಯೂ ಅಮ್ಮ ಜಿಗುಟಿ ಕೂಡಿಹಾಕಿದ್ದರಿಂದ ನಮಗೆ ಒಳ್ಳೆಯ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಲಭ್ಯವಾಯಿತು, ನಾವೂ ಕೂಡಿಡಬೇಕು, ಕಂಡಾಪಟ್ಟೆ ಖರ್ಚು ಮಾಡಿದರೆ ಮನೆಯೂ ಹಾಳಾಗುತ್ತದೆ, ಕಾಸಿಲ್ಲದವರ ಮೇಲೂ ಕೆಟ್ಟ ಪರಿ ಣಾಮವಾಗುತ್ತದೆ, ಇತರರಲ್ಲಿ ಹತಾಶೆ ನೆಲೆಗೊಳ್ಳಬಹುದು. ಈ ಯಾವ ಅಂಶಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ.
ಒಂದು ಹಂತದವರೆಗೂ ಸುಮ್ಮನಿದ್ದ ಕೆಲವು ಜನರು, ಐಟಿ ಯವರ ಕಿಸೆ ಮೇಲೆ ಕಣ್ಣುಹಾಕಲಾರಂಭಿಸಿದರು.
ಇವತ್ತು ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೋಟದ ಮನೆಗಳ ಮುಂದೆಲ್ಲ “ಹೋಮ್ ಸ್ಟೇ” ಎಂಬ ಬೋರ್ಡು ನೇತು ಹಾಕಿಕೊಂಡಿರುವುದನ್ನು ಕಾಣಬಹುದು. ವಾರದ ಐದು ದಿನ ದುಡಿದು ಶನಿವಾರ, ಭಾನುವಾರವೂ ಬೆಂಗಳೂರಲ್ಲೇ ಇದ್ದು ಹೊಗೆ ಕುಡಿಯಲು ಯಾವ ಟೆಕ್ಕಿ ಕೂಡ ಇಷ್ಟಪಡುವುದಿಲ್ಲ. ಶುಕ್ರವಾರ ರಾತ್ರಿಯೇ ‘ಇನೋವಾ’ ಬುಕ್ ಮಾಡಿ ಮಲೆನಾಡಿನ ಕಡೆಗೆ ಹೊರಟು ಬಿಡುತ್ತಾರೆ. ಇವರಿಂದಾಗಿ ಹಳ್ಳಿಯವರು ಯಾವ ಸ್ಥಿತಿಗೆ ಬಂದಿದ್ದಾರೆ ಎಂದರೆ ಸ್ವಂತ ಮನೆಯನ್ನೇ ಟೆಕ್ಕಿಗಳಿಗೆ ಬಿಟ್ಟುಕೊಟ್ಟು ಶೆಡ್‌ನಲ್ಲಿ ಬಿಡಾರ ಹೂಡಿದ್ದಾರೆ. “ಒಂದೆರಡು ದಿನ ಮನೆ ಬಿಟ್ಟು ಕೊಟ್ಟರೆ ದಿನಕ್ಕೆ ಕನಿಷ್ಠ ಐದಾರು ಸಾವಿರ ರೂ. ಸಿಗುತ್ತದೆ” ಎಂಬ ಲಾಭದ ಯೋಚನೆ. ಒಂದು ದಿನಕ್ಕೆ ‘ಅಷ್ಟೊಂದು’ ಚಾರ್ಜ್ ಮಾಡಬೇಕಾದ ಅಗತ್ಯವಿದೆಯೇ ಎಂದು ಕೇಳಿದರೆ, “ಯಾರಪ್ಪನ ದುಡ್ಡು ಕೊಡುತ್ತಾರೆ, ತಿಂಗಳಿಗೆ ಮೂವತ್ತು ನಲ್ವತ್ತು ಸಾವಿರ ಸಿಗುತ್ತದಲ್ವಾ?” ಎಂದು ಕಾರಣ ನೀಡುತ್ತಾರೆ. ‘ಅಕಸ್ಮಾತ್ ನಾವು ಕಡಿಮೆ ಚಾರ್ಜ್ ಮಾಡಿದರೆ ಕ್ವಾಲಿಟಿ ಸರಿಯಿಲ್ಲ ಅಂತ ಐಟಿಯವರು ಭಾವಿಸುತ್ತಾರೆ’ ಎಂದು ಸಬೂಬು ನೀಡುತ್ತಾರೆ. ಹೀಗೆ ವಾರಾಂತ್ಯದಲ್ಲಿ ಕಾಡುದಾರಿ ಹಿಡಿಯುವ, ತೋಟದ ಮನೆ ಹುಡುಕುವ ಐಟಿಯವರಿಂದಾಗಿ ‘ಹೋಮ್ ಸ್ಟೇ’, ‘ಮಾಲ್’ಗಳ ರೂಪದಲ್ಲಿ ಪರಸ್ಪರ ದೋಚುವ ಕೆಲಸ ಆರಂಭವಾಯಿತು. ಇತ್ತ ಐಟಿ ಎಂಬ ದುಡ್ಡು ಕೊಡುವ ‘ಜಾಬ್ ಮಾರ್ಕೆಟ್’ನಿಂದ ‘ಮ್ಯಾರೇಜ್ ಮಾರ್ಕೆಟ್’ ಕೂಡ ರಂಗೇರಿತು. ಬಿಕಾಂ, ಬಿಎಸ್ಸಿ ಓದಿದವಳೂ ತನ್ನ ಅರ್ಹತೆ ಎಷ್ಟೇ ಇದ್ದರೂ ಐಟಿ ಗಂಡನೇ ಬೇಕು ಎನ್ನಲಾರಂಭಿಸಿದ್ದಳು. ಐಟಿ ಅಲ್ಲದವರು ಮೂರು ಕಾಸಿಗೂ ಬೇಡದವರು ಎಂಬ ಭಾವನೆ ಸೃಷ್ಟಿಯಾಗಿ, ಫೀಲಿಂಗ್ಸ್ ಕೂಡ ‘ಮಾರ್ಕೆಟ್ ಓರಿಯೆಂಟೆಡ್’ ಆಗಿತ್ತು. ಈ ಐಟಿ ಉಪಟಳ ಎಷ್ಟಾಗಿತ್ತು ಎಂದರೆ ಇತರ ವೃತ್ತಿಗಳಲ್ಲಿರುವವರು ತಮ್ಮ ಸಂಬಳ ಎಷ್ಟೆಂದು ಹೇಳಿಕೊಳ್ಳುವುದಕ್ಕೂ ನಾಚಿಕೆ, ಮುಜುಗರಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಈ ನಾಡಲ್ಲಿ ಬಡವರಿಗೆ ಜಾಗವೇ ಇಲ್ಲ, ಬಡವರೇ ಇರಬಾರದು ಎಂಬ ಪರಿಸ್ಥಿತಿ ಸೃಷ್ಟಿ ಯಾಗುತ್ತಿತ್ತು.
ಖಂಡಿತ ದುಡ್ಡು ಎಲ್ಲರೂ ಇಷ್ಟಪಡುವಂತಹ ವಸ್ತುವೇ.
ಆದರೆ ದುಡ್ಡಿನ ಒಳಹರಿವಿನಿಂದ ಬರುವ ‘ಎಕಾನಮಿಕ್ ಎಂಪವರ್‌ಮೆಂಟ್’ ಅಂತಿಮವಾಗಿ ‘ಸೋಷಿಯಲ್ ಎಂಪವರ್ ಮೆಂಟ್’ನಲ್ಲಿ ಪರ್ಯವಸಾನಗೊಳ್ಳಬೇಕಿತ್ತು. ಆದರೆ ಆಗಿ ದ್ದೇನು? ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳ ಪ್ರಕಾರ ಮೂರು ತಿಂಗಳಿಗೊಮ್ಮೆ ಯಾವುದಾದರೂ ಅನಾಥಾಲಯ, ವೃದ್ಧಾಶ್ರಮಗಳಿಗೆ ಭೇಟಿ ಕೊಟ್ಟು, ಒಂದಿಷ್ಟು ಸಮಯ ಕಳೆದು, ನೂರು ರೂ. ನೋಟನ್ನಿಟ್ಟು ಹಿಂದಿರುಗುವುದೇ ಮಹಾನ್ ಸಾಮಾಜಿಕ ಕಾರ್ಯವಾಗಿ ಬಿಟ್ಟಿದೆ. ಟ್ಯಾಕ್ಸ್ ಕಟ್ಟುವುದೇ ಈ ಸಮಾಜ ಹಾಗೂ ಸರಕಾರಕ್ಕೆ ನಾವು ಕೊಡುತ್ತಿರುವ ದೊಡ್ಡ ಕೊಡುಗೆ ಎಂದು ಭಾವಿಸಿದ್ದಾರೆ. ಹಾಗಾಗಿಯೇ ಕಳಪೆ ರಸ್ತೆ, ಲೋಡ್‌ಶೆಡ್ಡಿಂಗ್ ಬಗ್ಗೆ ಹರಿಹಾಯುವ ಐಟಿ ದೊರೆಗಳಿಗೆ ರಸ್ತೆ ಅಭಿವೃದ್ಧಿ, ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಬಂಡವಾಳ ತೊಡಗಿಸುವುದೂ ಕೂಡ ಸಾಮಾಜಿಕ ಸೇವೆ, ಜವಾಬ್ದಾರಿ ಎಂದನಿಸುವುದಿಲ್ಲ. ಈ ವಿಷಯದಲ್ಲಿ ದೇಶ ಕಟ್ಟಿದ ಟಾಟಾ, ಬಿರ್ಲಾ ಇವರಿಗೆ ಮಾದರಿಯಾಗುವುದಿಲ್ಲ. ಇನ್ನು ಇಂತಹ ಮಾಲೀಕರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಂದ ಸಾಮಾಜಿಕ ಜವಾಬ್ದಾರಿಯನ್ನು ನಿರೀಕ್ಷಿಸಲು ಸಾಧ್ಯ?
ಅಷ್ಟೇ ಅಲ್ಲ, ಇವತ್ತು ಪ್ರಗತಿಯ ಮಾನದಂಡಗಳೇ ಬದಲಾಗಿ ಬಿಟ್ಟಿವೆ. ಸೆಲ್‌ಫೋನ್‌ಗಳ ಸಂಖ್ಯೆ ಇಷ್ಟು ಹೆಚ್ಚಾಗಿದೆ, ಟೆಲಿಕಾಂ ಕ್ಷೇತ್ರ ಇಷ್ಟು ಗತಿಯಲ್ಲಿ ವೃದ್ಧಿಯಾಗುತ್ತಿದೆ ಎಂಬುದರ ಮೇಲೆ ಅಭಿವೃದ್ಧಿಯನ್ನು ಅಳೆಯುತ್ತಾರೆ. ಸೆಲ್‌ಫೋನ್ ಸಂಖ್ಯೆ ಹೆಚ್ಚಳ ಪ್ರಗತಿಯ ಸಂಕೇತವೇ? ಒಂದು ಪುಟ್ಟ ಪಟ್ಟಣದ ಕೂಲಿ ಕಾರ್ಮಿಕನ ಕೈಯಲ್ಲೂ ವಿಚಿತ್ರ ನಮೂನೆಯ ಮೊಬೈಲ್ ಸೆಟ್‌ಗಳನ್ನು ಕಾಣಬಹುದು. ಆತನಿಗೆ ಕೂಲಿಯಿಂದ ದಿನಕ್ಕೆ ೧೨೦ ರೂ. ಬಂದರೆ, ಅದರಲ್ಲಿ ೫೦ ರೂ. ಕಿವಿ ಬಳಿ ಮೊಬೈಲ್ ಇಟ್ಟುಕೊಂಡು “ಹಲೋ……” ಎಂದು ಕೂಗುವುದಕ್ಕೇ ಬೇಕು. ಎಷ್ಟು ಜೋರಾಗಿ ಕೂಗಿದರೂ ಅತ್ತ ಕಡೆ ಇರುವವರಿಗೆ ಎಷ್ಟು ಕೇಳಬೇಕೋ ಅಷ್ಟೇ ಕೇಳುತ್ತದೆ ಎಂಬ ಸಾಮಾನ್ಯ ಅರಿವು ಇಲ್ಲದವರೂ ಮೊಬೈಲ್ ದಾಸರಾಗಿ ಬಿಟ್ಟಿದ್ದಾರೆ. ಇವು ಐಟಿ ಹಾಗೂ ಜಾಗತೀಕರಣ ಪ್ರೇರಿತ ಬೆಳವಣಿಗೆಗಳು. ಇವುಗಳನ್ನು ಯಾವ ದೃಷ್ಟಿಯಲ್ಲಿ ಪ್ರಗತಿ ಎನ್ನುತ್ತೀರಿ? ಹಣ, ಶ್ರೀಮಂತಿಕೆ ಬಂದ ಕೂಡಲೇ ಒಂದು ಸಮಾಜ ಉದ್ಧಾರವಾಗುವುದಿಲ್ಲ, ಸಮಗ್ರ ಅಭಿವೃದ್ಧಿ ಹೊಂದುವುದಿಲ್ಲ ಎಂಬುದಕ್ಕೆ ಹಾಲಿ ಭಾರತವೇ ದೊಡ್ಡ ಉದಾಹರಣೆ.
ಶಿವಮೊಗ್ಗ, ಶಿರಸಿ, ಸಾಗರ ಭಾಗದಲ್ಲೊಂದು ವಿಚಿತ್ರ ಸಮಸ್ಯೆ ಎದುರಾಗಿದೆ. ಎಷ್ಟೋ ಅಪ್ಪ-ಅಮ್ಮಂದಿರು ಅಂಗೈ ಅಗಲದ ಅಡಕೆ ತೋಟದಲ್ಲಿ ಕಷ್ಟಪಟ್ಟು ದುಡಿದು, ಬೆಲೆಯಲ್ಲಿನ ಏರು-ಪೇರನ್ನೂ ಸಹಿಸಿಕೊಂಡು ಮಕ್ಕಳನ್ನು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಮಾಡಿದ್ದಾರೆ. ಮಕ್ಕಳು ದುಡಿಯಲು ಆರಂಭಿಸಿದ ನಂತರ ಮನೆ, ಊರು ಉದ್ಧಾರವಾಗಬೇಕಿತ್ತು ತಾನೇ? ಒಂದು ವೇಳೆ ದುಡ್ಡಿನಿಂದ ಪ್ರಗತಿ ಹೆಚ್ಚಾಗಿದ್ದರೆ ಊರಲ್ಲಿರುವ ತೋಟ ಅರ್ಧ, ಒಂದು ಎಕರೆಯಿಂದ ಎರಡು, ಮೂರು ಎಕರೆಗಳಾಗಬೇಕಿತ್ತು ಅಲ್ಲವೆ? ಕನಿಷ್ಠ ಅಭಿವೃದ್ಧಿಯನ್ನಾದರೂ ಕಾಣಬೇಕಿತ್ತು ಅನಿಸುವು ದಿಲ್ವಾ? ಆದರೆ ಈ ಭಾಗದ ಮಲೆನಾಡಿನಲ್ಲಿ, ‘ಕೆಲಸಕ್ಕೆ ಜನರೇ ಸಿಗುತ್ತಿಲ್ಲ, ಅಡಕೆಗೆ ಬೆಲೆಯೂ, ಮಕ್ಕಳಿಗೆ ತೋಟದ ಮೇಲೆ ಆಸಕ್ತಿಯೂ ಇಲ್ಲ’ ಎಂಬ ಕೊರಗು ಕೇಳಿಬರುತ್ತಿದೆ. ಊರಲ್ಲಿದ್ದ ತೋಟವನ್ನು ಕೇರಳದ ಕಾಕಾಗಳಿಗೆ ಮಾರಿ ಬೆಂಗಳೂರು ಸೇರುತ್ತಿದ್ದಾರೆ. ಅಪ್ಪ-ಅಮ್ಮ ಯಾವ ಕೃಷಿಯಿಂದಾಗಿ ತಮ್ಮನ್ನು ಓದಿಸಿ ವಿದ್ಯಾ ವಂತರನ್ನಾಗಿ ಮಾಡಿದರೋ ಆ ಕೃಷಿಯ ಬಗ್ಗೆಯಾಗಲಿ, ಭೂಮಿಯ ಬಗ್ಗೆಯಾಗಲಿ ಮಕ್ಕಳಿಗೆ ಪ್ರೀತಿಯೇ ಇಲ್ಲದಾಗಿದೆ. ಮುಂದೊಂದು ದಿನ ಕಾಕಾಗಳು ಶಿರಸಿ, ಸಾಗರ, ಬನವಾಸಿಗಳನ್ನು ಮತ್ತೊಂದು ಭಟ್ಕಳವನ್ನಾಗಿಸಿದರೂ ಆಶ್ಚರ್ಯ ವಿಲ್ಲ!
ಇದೇನೇ ಇರಲಿ, ಎಲ್ಲ ಭಾಗಗಳ ಜನರೂ ಒಂದಿಲ್ಲೊಂದು ನೆಪ ಹೇಳಿಕೊಂಡು, ‘ಬೆಂಗಳೂರಿನಲ್ಲಿ ದುಡ್ಡಿದೆ’ ಎಂಬ ದೂರ ದೃಷ್ಟಿಯನ್ನಿಟ್ಟುಕೊಂಡು ಬೆಂಗಳೂರು ಸೇರುತ್ತಿರುವುದರಿಂದ ವಿನಾಕಾರಣ ಎಲ್ಲದರ ಬೆಲೆಗಳೂ ಹೆಚ್ಚಾಗುತ್ತಿವೆ.
ಇಂತಹ ಒಂದು ಪರಿಸ್ಥಿತಿಯಲ್ಲಿ, ಹೋಳಿ ಹುಣ್ಣಿಮೆಯ ದಿನ ಜೋರಾಗಿ ಮಳೆ ಬಂದರೆ ಏನಾಗಬಹುದೋ ಹಾಗೆ “ಇಕನಾಮಿಕ್ ರಿಸೆಷನ್”(ಆರ್ಥಿಕ ಹಿಂಜರಿತ) ಆಗಮಿಸಿದೆ. ರಿಸೇಷನ್ ಎಂಬ ಭಾರೀ ಮಳೆಯಿಂದಾಗಿ ಬಣ್ಣ ತೊಳೆದುಹೋಗಿ ನಗ್ನದರ್ಶನವಾಗುತ್ತಿದೆ. ಇದು ದೇಶಕ್ಕೆ ಹಿನ್ನಡೆ ಎಂದು ಗೊತ್ತಿದ್ದರೂ ಅದನ್ನು ಸ್ವಾಗತಿಸಬೇಕಾದ, ಅದರಲ್ಲೂ ಒಂದು ಆಶಾಕಿರಣವನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ೯/೧೧ ನಂತರ ನಮ್ಮ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿಯನ್ನು ನಡೆಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಬೀಗುತ್ತಿದ್ದ ಅಮೆರಿಕ ಅಸಹಾಯಕವಾಗಿ ನಿಂತಿದೆ. ಲಾಡೆನ್‌ಗೆ ಹೆದರದ ಅಮೆರಿಕ ರಿಸೆಷನ್‌ಗೆ ಬೆದರಿ ಕುಳಿತಿದೆ. ಅಮೆರಿಕವನ್ನೇ ನಂಬಿಕೊಂಡಿದ್ದ ಭಾರತದ ಐಟಿ ಕ್ಷೇತ್ರ ಕೂಡ ಕುಸಿದು ಬೀಳಲಾರಂಭಿಸಿದೆ. ಖಂಡಿತ ಐಟಿ ಕ್ಷೇತ್ರದ ಬಗ್ಗೆ ನಮಗ್ಯಾರಿಗೂ ಮತ್ಸರವಿಲ್ಲ. ಐಟಿಯಿಂದಾಗಿಯೇ ಭಾರತಕ್ಕೆ ವಿಶ್ವಮಾನ್ಯತೆ ದೊರೆಯಿತು, ಸಾಕಷ್ಟು ಬದಲಾವಣೆಗಳಾದವು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಾಗಲಿ, ಮಾಲೀಕರಾಗಲಿ ಒಂದು ವೇಳೆ ಐಟಿ ಬಿದ್ದು ಹೋದರೆ ಏನು ಮಾಡಬೇಕು? ಎಂಬುದರ ಬಗ್ಗೆ ಎಂದೂ ಯೋಚಿಸಲಿಲ್ಲ. ೧೯೯೧ರ ನಂತರ ಅಂದರೆ ನರಸಿಂಹರಾವ್ ನೀತಿಗಳ ಲಾಭ ಪಡೆದು ರಾತ್ರೋರಾತ್ರಿ ಶ್ರೀಮಂತರಾಗಿ ಮಧ್ಯಮವರ್ಗದವರ ಹೀರೋಗಳಾದ ಐಟಿ ದೊರೆಗಳು ಅಮೆರಿಕ, ಬ್ರಿಟನ್‌ನ ದುಡ್ಡನ್ನು ಭಾರತಕ್ಕೆ ತಂದರೇ ಹೊರತು, ಆ ದುಡ್ಡಿನಿಂದ ತಂತ್ರeನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸ ಲಿಲ್ಲ. ಅಮೆರಿಕದ ಕಾಮಗಾರಿಗಳನ್ನು ಗುತ್ತಿಗೆ ಹಿಡಿದು ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಐಟಿ ಕೂಲಿಗಳನ್ನಾಗಿ ಮಾಡಿದರೇ ಹೊರತು ಐಬಿಎಂ, ಮೈಕ್ರೋಸಾಫ್ಟ್, ಆಪಲ್‌ಗಳಂತೆ ಅಭಿವೃದ್ಧಿ ಮತ್ತು ಸಂಶೋಧನೆಗೆ (ಆರ್ ಆಂಡ್ ಡಿ) ಬಂಡವಾಳ ತೊಡಗಿಸಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲಿಲ್ಲ. ಹಾಗಾಗಿ ಅವರ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದವರೂ ಕೂಡ ಭವಿಷ್ಯದ ದೃಷ್ಟಿಯಿಂದ ದುಡ್ಡನ್ನು ಕೂಡಿಡುವ ಬದಲು ಶೋಕಿ ಬೆಳೆಸಿಕೊಂಡರು. ಇವತ್ತು ನಮ್ಮ ಯಾವ ಖ್ಯಾತನಾಮ ಐಟಿ ಕಂಪನಿಗಳ ಬಳಿ ಪೇಟೆಂಟ್‌ಗಳಿವೆ ಹೇಳಿ? ಜಾಸ್ತಿ ಕೂಲಿ ಕೊಟ್ಟಿದ್ದೇ ದೊಡ್ಡ ಸಾಧನೆಯೆಂದು ಬೀಗುವುದರ ಹೊರತು ಭಾರತದ ಐಟಿ ಕ್ಷೇತ್ರದ ಭವಿಷ್ಯವನ್ನು ಹಸನಾಗಿಟ್ಟುಕೊಳ್ಳಲು ಯಾರೂ ಪ್ರಯತ್ನಿಸಲಿಲ್ಲ. ಇವತ್ತು ಒಬ್ಬ ಐಟಿಯವನು ಕೆಲಸ ಕಳೆದುಕೊಂಡರೆ ಪ್ಯಾನಿಕ್ ಆಗುತ್ತಾನೆ. ಅವನಿಗೆ ಬೇರೆ ಕೆಲಸವೂ ಗೊತ್ತಿಲ್ಲ, ತನ್ನ ಭವಿಷ್ಯಕ್ಕಾಗಿ ಕೂಡಿಡುವುದೂ ಒಂದು ಸಾಮಾಜಿಕ ಜವಾಬ್ದಾರಿ ಎಂಬುದನ್ನೂ ಕಲಿಯಲಿಲ್ಲ.
ತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಹಾಗೂ ಜೀನ್ ಡ್ರೆಝ್ ಅವರ “Being rich doesn’t mean being happy” ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ದುಡ್ಡಿನಿಂದ ಅಭಿವೃದ್ಧಿಯನ್ನು ಅಳೆಯಲಾಗದು, ನಾಲ್ಕು ಜನ ಶ್ರೀಮಂತರಾದ ಮಾತ್ರಕ್ಕೆ ದೇಶ ಅಭಿವೃದ್ಧಿಯಾದಂತಲ್ಲ ಎಂಬುದನ್ನು ನಿರೂಪಿಸಲು ಇವರು “ಹ್ಯೂಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್” ಎಂಬ ಹೊಸ ಮಾನದಂಡವನ್ನು ರೂಪಿಸಿದರು. ವಿಶ್ವಸಂಸ್ಥೆಯ ಸಲಹೆಗಾರರಾಗಿದ್ದಾಗ ಇವರಿಬ್ಬರುಗಳು ನೀಡಿದ ಸಲಹೆಯಿಂದಾಗಿಯೇ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಮಕ್ಕಳಿಗೆ “ಮಧ್ಯಾಹ್ನದ ಊಟ”(ಮಿಡ್ ಡೇ ಮೀಲ್ಸ್) ಯೋಜನೆ ಯನ್ನು ಜಾರಿಗೆ ತಂದಿದ್ದು. ೧. ಆತ್ಮಗೌರವ ಮತ್ತು ಸಮಾನ ಅವಕಾಶ, ೨. ಆರೋಗ್ಯ, ೩. ಶಿಕ್ಷಣ, ೪. ಉದ್ಯೋಗ ಎಲ್ಲರಿಗೂ ಲಭ್ಯವಾಗಬೇಕು ಎಂದು ಹೇಳಿದ್ದೂ ಇವರೇ. ಕೆಲವು ಮೂಲಭೂತ ವೃತ್ತಿಗಳ (ಫಂಡಮೆಂಟಲ್ ಆಕ್ಯುಪೇಶನ್ಸ್) ಮೇಲೆ ಸಮಾಜ ನಿಂತಿದೆ. ಇವುಗಳಾಚೆಯ ಯಾವುದೋ ಒಂದು ಕ್ಷೇತ್ರ ಅಸಹಜವಾಗಿ ಅಭಿವೃದ್ಧಿಯಾದರೆ, ಆ ಕ್ಷೇತ್ರದವರು ಅತಿಯಾಗಿ ವರ್ತಿಸಿದರೆ ಅದರಿಂದ ಸಮಾಜದ ಮೇಲೆ ಆಗುವುದು ಕೆಟ್ಟಪರಿಣಾಮವೇ. ಈ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದವರು ತಮ್ಮ ಸಾಮಾಜಿಕ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು, False pride ನಿಂದ ಹೊರಬರುವಂತಾಗಲು, ಕೂಡಿಡುವುದನ್ನು ಕಲಿಯಲು ಇಂಥದ್ದೊಂದು ಆರ್ಥಿಕ ಹಿಂಜರಿತ ಬೇಕಿತ್ತು ಎನಿಸುತ್ತಿದೆ. ಅಷ್ಟಕ್ಕೂ ಐಟಿಯಿಂದಾಗಿ ಸಾವಿರಾರು ಕುಟುಂಬಗಳು ಉದ್ಧಾರ ವಾದವು ಎಂಬುದು ಎಷ್ಟು ಸತ್ಯವೋ, ಐಟಿಯವರ ಹಣದ ಮದದಿಂದಾಗಿ ಹತ್ತು ಪಟ್ಟು ಹೆಚ್ಚು ಕುಟುಂಬಗಳು ಸಂಕಷ್ಟಕ್ಕೂ ಸಿಲುಕಿದವು ಎಂಬುದು ಅಷ್ಟೇ ಸತ್ಯ.
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು….
ಅಂಗಾತ ಬಿತ್ತು ಹೆಗಲಾಗೆ ಎತ್ತು…
ಎಂಬ ಬೇಂದ್ರೆಯವರ ಮಾತುಗಳನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ. ಒಮ್ಮೆ ಕೆಳಗೆ ಬಿದ್ದರೆ ಹೆಗಲ ಮೇಲೆಯೇ ಹೊತ್ತು ಕೊಂಡು ಹೋಗಬೇಕಾಗುತ್ತದೆ.
grt article by pratap simha………..these it people make parties and tey r the people who started pub and bar culture……..these people always complains about bad roads etc…….but they r not willing to help poor children……….tey will make big parties every week and they have no systematic culture ie no of divorces and culprit cases r more……….
right thing have happened to them at the right time……….
The spectacle of Malenadu becoming Bhatkal (malayalle muslim dominated) is frighteningly serious. It is very real.
What the readers have expressed is also biased….. most of the readers have commented on your opinion about techies but not about your concern for the need of Indian IT companies to work on R&D……. we should look at the writers writing from a broader perspective which is genuinely issue based and IT employees are quoted only to explain the issue……
ಪà³à²°à²¤à²¾à²ªà³ ಅವರೆ… ನೀವೠಬರೆದ ಲೇಖನ ನಿಜವಾಗಲೂ ತರà³à²•ಕà³à²•ೆ ಎಡೆ ಮಾಡಿ ಕೊಡà³à²¤à³à²¤à²¾ ಇದೆ….. ಆದರೆ ಒ೦ದೠಮಾತà³à²° ಸತà³à²¯… ಆಗ ITಯವರೠಸಂಪಾದಿಸà³à²¤à³à²¤à²¿à²¦à³à²¦ ಹಣ ನೋಡಿ ಜನ ಅಸೂಯೆ ಪಡà³à²¤à³à²¤à²¾ ಇದà³à²¦à³Šà²°à³ ಈಗ ಆತà³à²® ತà³à²°à²ªà³à²¤à²¿à²—ೆ ಹೀಗೆ ಹೇಳೋದೠಸಹಜ.. ಮೊದಲೠನೀವೠಬರೆಯà³à²¤à³à²¤à²¿à²¦à³à²¦ ಲೇಖನಗಳಲà³à²²à²¿ ಹà³à²°à³à²³à³ ಇರà³à²¤à²¿à²¤à³à²¤à³.. ಆದರೆ ಈ ಲೇಖನ ಮಾತà³à²° ನೀವೠಅಸಮಂಜಸವಾಗಿ ಬರೆದಿದà³à²¦à³€à²°.. ನಿಮà³à²® ಲೆಖನ ದೇಶದ ಅà²à²¿à²µà³à²°à²¦à³à²¦à²¿à²—ೆ ಹೇಗೆ ಸಹಾಯಕ ಅಂತ ಸà³à²µà²²à³à²ª ತಿಳಿಸಿ ಪà³à²£à³à²¯ ಕಟà³à²Ÿà²¿à²•ೊಳà³à²³à²¿…
Criticism ಮಾಡೋದೠಸà³à²²à².. ಆದರೆ ಅದನà³à²¨ ಅರà³à²¥à²—ರà³à²à²¿à²¤à²µà²¾à²—ಿ ಬರೆಯೋದೠಕಷà³à²Ÿ ಅಲà³à²µ 🙂
ಮೋಹನà³
ಬೆಂಗಳೂರ೅.
I giggle at you. sometimes people like you are really pratap simhas.
I had read couple of your other articles and felt that the articles were pretty good… But recently when I read this new article, I was totally disappointed.
Even though few of your points are really true, the way you have gone about writing the article seems really pathetic and not well thought out. Its like our Masala Bollywood movies with less of truth and more of nonsense.
Anything in life has both positives and negatives and so has IT impact in India. Surely there were so many benefited from it while it has caused negative impact on some others. You cannot ignore all the good things and highlight only the darker part of it. Im sure all the ones who are negatively impacted by IT are here to praise your article…
Being candid doest mean that you can write any crap what comes to your mind… especially, when you know that you are reaching out to so many people through your articles… So think ten times before you make (especially generalized) statements… Instead of posting comment later to explain what you really mean (patch up job), its better you write articles in a manner where it speaks for itself.
Good Luck.
kurudu kaanchana kuniyutalittu..pratapana lekhaniyannnu kenakutalittu.. avana kai inda ee lekhana vannu baresittu..yuva janaangada hrudyakke kicchu hacchisutalitthu…
Dear Pratap,
Do good research before writing down something because readers wait for your article every satuarday. I am from Malanadu. I am not techi. but know their struggle. They have sleepless nights, work load, tension. Any indian or outside company are not so stupid to pay high. They extract whatever they could from techies, so no need for techies to be faithful to those companies. Today what our politicians starting from munciple cousilor to PM making money is the direct contribution of hard work of these these techies. I found 90% of young generation is blaming IT guys which is hiden agenda of jealousy. Some readers have pointed out that “If they are not like other techies then why should they feel bad and raise vioce against Pratap” You guys always support when Pratap writes against Aravind Adiga , Millioner Slum dog etc.If slum is sporadic in India then why do you raise vioce against such books , films ? If you are not in slum don’t raise vioce against such things.
Dear pratap, you are vioce of Hindus. Don,t shift your thoughts.
Waiting for good articles in future
Tushar
Hi Pratap,
I am forced by my friends to read your column. Its great that you have mentioned, how IT and BT affected to our culture.
My Point is- Only IT or BT people is not responsible for what’s happening in our envn. Everyone is contributing themselves either directly or indirectly for everything.
You have just bombarded about the IT guy. Do you know how much effort he/she has put to become an engineer. Why all cant become Engineer or Doctors. Few cant even pass 10 or 12. Bcz they( who dint pass) enjoy and waste thier time at that point of period, which engineers or doctors or any high profile people wont do. Finally after their education they are deserves to get high pay.
Tmr if your son or daughter reads well, will you make them a high profile graduate or not? If they get more salary, does it mean that they are going to spoil culture.
Not yet all… All fingures are not equal. Your words wont imply to all IT likes including me.
You told that, in few places including coorg HOMESTAY kind of thing is started. Do u want the people of this place to be still where they where before 10yrs. In City, technology improves, more jobs, more salary. etc etc.. Day to day daily needs getting costly, what these people should do for their source of income. Only agriculture is not source of income. If no rain, what the farmer will do? Will you politician will help this poor farmer for his needs. He needs to look for the alternative for the safe to avoid the count of farmers death.
Which one you want, count of farmers death or farmers homestay kind of stuff which provides him food and shelter during bad time.
Kindly accept that few things are going wrong by IT guys, but again Everythign is not from IT guys.
Chethan, Coorg
ಹದಗೆಟà³à²Ÿ ಆಯà³à²Ÿà²¿ ಇಂಡಸà³à²Ÿà³à²°à²¿ ಇನà³à²¨à²·à³à²Ÿà³ ಹದಗೆಡಿಸà³à²µ ವಿಚಾರ ಇವರದà³
ಇತà³à²¤ à²à²Ÿà²¿ ಎಂಬ ದà³à²¡à³à²¡à³ ಕೊಡà³à²µ ‘ಜಾಬೠಮಾರà³à²•ೆಟà³â€™à²¨à²¿à²‚ದ ‘ಮà³à²¯à²¾à²°à³‡à²œà³ ಮಾರà³à²•ೆಟà³â€™ ಕೂಡ ರಂಗೇರಿತà³. ಬಿಕಾಂ, ಬಿಎಸà³à²¸à²¿ ಓದಿದವಳೂ ತನà³à²¨ ಅರà³à²¹à²¤à³† ಎಷà³à²Ÿà³‡ ಇದà³à²¦à²°à³‚ à²à²Ÿà²¿ ಗಂಡನೇ ಬೇಕೠಎನà³à²¨à²²à²¾à²°à²‚à²à²¿à²¸à²¿à²¦à³à²¦à²³à³. à²à²Ÿà²¿ ಅಲà³à²²à²¦à²µà²°à³ ಮೂರೠಕಾಸಿಗೂ ಬೇಡದವರೠಎಂಬ à²à²¾à²µà²¨à³† ಸೃಷà³à²Ÿà²¿à²¯à²¾à²—ಿ, ಫೀಲಿಂಗà³à²¸à³ ಕೂಡ ‘ಮಾರà³à²•ೆಟೠಓರಿಯೆಂಟೆಡà³â€™ ಆಗಿತà³à²¤à³.
I completely agree with your points regarding marriage market [:D]….I personally being doctorate in science and doing research in abroad, has faced lot of problem to get bride. Since people in Karnataka know only IT professionals and professionals like me are not been considered.
Dr. Gururaj
Dear Pratap,
Stop writing junk.
Use you aptitude to write how to defeat or overcome the circumstances.
Present scenario not only on IT, it’s interlinked with each and every one in the sphere. (Counting you)
If an IT guy dropped from his work, it circuitously harms an Unloading & loading guy in the market.
Please think wise…
Many Thanks,
Srinivas Erappa
Hi Pratap
Splendid..I really like the way you write and ‘am one of your fan.
One important thing I like is the way you have connected IT and marriage.Coming from the district of Uttarkannada I have seen many instances related to this.Even a girl who has just studied upto SSLc dream of getting married to a IT guy…..she may not the full form of IT though.
The situation is that,it does not matter how much land you have…the only thing that matters is IT and Bangalore for marriage.
Hope people will learn and improve…Hatts off to your article
Friends, I did not read the article and the responses completely. However, I feel both should be interesting and will read later. “ಸಾಫà³à²Ÿà³ – ವೇರೠಕಂಪೆನಿಯವರೠಸà³à²¥à²³à²¿à²¯à²°à²¿à²—ೆ ಯಾಕೆ ಹೆಚà³à²šà³ ಅವಕಾಶ ಒದಗಿಸಲಿಲà³à²²…?” I felt this could be a topic for discussion.
– Gangadhar Hegde
It’s false notion about IT people made you to write this article.I agree they ll spend money lavishly till they get married after that they ll get responsibility, and regarding work culture the stress level due to dead line for project is high so they ve to ve some enjoyment.
You mentioned about some great people ya really they are great but why did’t their descendants names(for some good cause) did’t appear after that in history….?
Thanks
tumba chennagi mudibandide ee lekhana.
aadare, neevu IT Engineers kastagala bageeyu swalpa gamana kodabekittu.
Ivattu obba auto davanu minimum charge badalu Rs 40 keluttane,( naavu IT andre atava IT Office hatra andre)
Heege ellarigu hana beku. Innu naavu savings yelli maduvudu.
so good
sir u r artcle so supers we r waiting when u r come to back
Hi pratap.
Nice article.
But i dont agree all ur points.
In this world, no industry or company will pay for free… they pay high and take work for that. working infront of computer more than 10 to 12 hours per day is not easy. They work and will get paid for that. Thats it.
None of the job is high profile or Low profile.
Hard working/Smart working people will always get paid to their job.
Regards,
Rashmi
HI
BROTHER THESE IS SUPER ARTICLE I LIKED VERY MUCH
ಅನಿಷà³à²Ÿà²•à³à²•ೆಲà³à²² ಶನೆಶà³à²µà²°à²¨à³† ಕಾರಣ ಅನà³à²¨à³à²µà²‚ತೆ , ಕೇವಲ ಒಂದೠಕೋನ ದಿಂದ ಯೋಚಿಸಿ ಬರೆದ ಲೇಖನ ಇದà³.
ಪà³à²°à²¤à²¾à²ªà³ ಅವರನà³à²¨à³ ಒಳಗೊಂಡಂತೆ ಹಲವಾರೠಮಂದಿ ಠಟಿ ಉದà³à²¯à³‹à²—ಿ ಗಳನà³à²¨à³ à²à²¨à³†à²‚ದೠಕೊಂಡಿದà³à²¦à²°à³‹ ಗೊತà³à²¤à²¿à²²à³à²². ಅವರೆಲà³à²² sadist ಥರ ನಡೆದà³à²•ೊಳà³à²³à³à²¤à³à²¤à²¿à²¦à³à²¦à²¾à²°à³†. ಇಲà³à²²à²¿ ಕೆಲವೊಂದೠವಿಚಾರ ಗಳನà³à²¨à³ ಪಟà³à²Ÿà²¿ ಮಾಡà³à²¤à³à²¤à²¿à²¦à³à²¦à³‡à²¨à³†… ಓದಿ.
1.ಠಟಿ ಉದà³à²¯à³‹à²—ಿ ಗಳಿಗೆ work culture ಇಲà³à²µà²‚ತೆ !!!!!!!!. ಸರಕಾರೀ ಕೆಲಸ ದವರೠಬೆಳಿಗà³à²—ೆ ೧೦ ರಿಂದ ಸಂಜೆ ೫.೩೦ ಅಥವಾ ೬ ಗಂಟೆ ವರೆಗೆ ಕೆಲಸ ಮಾಡà³à²¤à³à²¤à²¾à²°à³† (ಆಫೀಸೠನಲà³à²²à²¿ ಇರà³à²¤à²¾à²°à³†. ಆದà³à²°à³† ಕೆಲಸ ಮಾಡà³à²¤à³à²¤à²¾à²°à²¾? ಗೊತà³à²¤à²¿à²²à³à²². )
2. ಪà³à²°à²¤à²¿à²¯à³Šà²¬à³à²¬à²°à²¿à²—ೂ ಅವರವರ ವೃತà³à²¤à²¿à²¯ ಬಗà³à²—ೆ ಅà²à²¿à²®à²¾à²¨ ಗೌರವ ಇರà³à²¤à³à²¤à²¦à³†. ನಮà³à²® ಠಟಿ ವೃತà³à²¤à²¿à²¯ ಬಗà³à²—ೆ ಗೊತà³à²¤à²¿à²²à³à²² ದವರಿಗೆ ಈ ಕೆಲಸದ ಬಗà³à²—ೆ work culture ಬಗà³à²—ೆ ಹೇಗೆ ಮಾಹಿತಿ ಸಿಕà³à²•ಿತೠಎಂದೠಇನà³à²¨à³ ನನಗೆ ತಿಳಿದಿಲà³à²².
3..ನಾವೠಬೆಳಿಗà³à²—ೆ à³®.೩೦ ರಿಂದ ರಾತà³à²°à²¿ ಕನಿಷà³à²Ÿ ೬.೩೦ ವರೆಗೂ ಆಫೀಸೠನಲà³à²²à²¿à²°à³à²¤à³à²¤à³‡à²µà³†. ಅಷà³à²Ÿà³ ಹೊತà³à²¤à³ ಆಫೀಸೠನಲà³à²²à²¿ ಮಾಡಿದ ಪà³à²°à²¤à²¿ ಕೆಲಸ ವನà³à²¨à³, ಅದಕà³à²•ಾಗಿ ವಿನಿಯೋಗಿಸಿದ ಸಮಯವನà³à²¨à³ ಟೈಮೠಶೀಟೠನಲà³à²²à²¿ à²à²°à³à²¤à²¿ ಮಾಡಿ ಬರಬೇಕà³. ಸಾಫà³à²Ÿà³à²µà³‡à²°à³ ನಲà³à²²à²¿ ಕೆಲಸ ಮಾಡà³à²µà³à²¦à³ ಜೋಕೠಅಲà³à²². ಪà³à²°à²¾à²œà³†à²•à³à²Ÿà³ ಟೈಮೠಗೆ ಸರಿಯಾಗಿ ಮà³à²—ಿಸಬೇಕà³. ಕಷà³à²Ÿ ಪಟà³à²Ÿà³ ದà³à²¡à²¿à²¯à³à²¤à³à²¤à³‡à²µà³† ಅದಕà³à²•ೆ ತಕà³à²• ಸಂಬಳ ಪಡೆಯà³à²¤à³à²¤à³‡à²µà³†. ನಮà³à²® ಕೆಲಸಕà³à²•ೆ ಅಷà³à²Ÿà³Šà²‚ದೠಬೆಲೆ ಕೊಡà³à²¤à³à²¤à²¾à²°à³† ಎಂದರೆ ಕೆಲಸದಲà³à²²à²¿à²¨ ಕಷà³à²Ÿ ಅರಿತೠಕೊಳà³à²³à²¿.ಹಣ ಕೊಡà³à²µà²µà²°à³ ಯಾರೂ ಸà³à²®à³à²®à²¨à³‡ ಕೊಡà³à²µà³à²¦à²¿à²²à³à²².
4.ಪà³à²°à²¤à²¾à²ªà³ ರವರ ಪà³à²°à²•ಾರ, 23 ವರà³à²·à²•à³à²•ೆ ಕೆಲಸ ಸಿಕà³à²•ಿ ಕೈ ಸಂಬಳ ಸಿಗà³à²¤à³à²¤à²¦à³† ಅಂತ attitude ಬದಲಾಗà³à²¤à³à²¤à²¦à³† ಯಂತೆ. ಹಾಗೆಂದೠನಾವà³à²—ಳೠನಮà³à²® ತಂದೆ ತಾಯಂದಿರಿಗೆ ಗೌರವ ಕೊಡದೇ ನಡೆದೠಕೊಳà³à²³à³à²µà³à²¦à²¿à²²à³à²².
ದೇವರ ಬಗà³à²—ೆ , ಸಂಪà³à²°à²¦à²¾à²¯à²¦ ಬಗà³à²—ೆ à²à²¯ à²à²•à³à²¤à²¿ ಕಳೆದೠಕೊಂಡಿಲà³à²². ನಮಗೂ ತಿಳಿದಿದೆ ನಮà³à²® ತಂದೆ ತಾಯಂದಿರೠನಮಗಾಗಿ ಎಷà³à²Ÿà³ ಕಷà³à²Ÿ ಪಟà³à²Ÿà²¿à²¦à³à²¦à²¾à²°à³† ಎಂದà³. ಅವರೠ30 ವರà³à²· ಸರà³à²µà²¿à²¸à³à²¨ ಅಂತà³à²¯à²¦à²²à³à²²à²¿ ಪಡೆಯà³à²µà³à²¦à²•à³à²•ಿಂತ ಹೆಚà³à²šà³ ಸಂಬಳ ಹಣವನà³à²¨à³ ನಾವೠಮೊದಲ ಸಂಬಳದಲà³à²²à³‡ ಪಡೆಯà³à²¤à³à²¤à³‡à²µà³†. ತಕà³à²·à²£ ನಾವೠಮಾಡà³à²µ ಮೊದಲನೆ ಕೆಲಸ ಅಪà³à²ªà²¨à²¿à²—ೆ ಮನೆಯಲà³à²²à²¿ ವಿಶà³à²°à²®à²¿à²¸à²²à³ ಹೇಳà³à²µà³à²¦à³. ಕಷà³à²Ÿ ಪಟà³à²Ÿà³ ದà³à²¡à²¿à²¦ ಅವರೠಸà³à²µà²¯à²‚ ನಿವೃತà³à²¤à²¿ ತೆಗೆದೠಕೊಂಡೠನೆಮà³à²®à²¦à²¿ ಇಂದ ಇರಲಿ ಬಯಸà³à²¤à³à²¤à³‡à²µà³†,
5.ಪà³à²°à²¤à²¿à²¯à³Šà²¬à³à²¬à²°à²¿à²—ೆ ಅವರದೇ ಆದ ಜವಾಬà³à²¦à²¾à²°à²¿ ಗಳಿರà³à²¤à³à²¤à²µà³†. ಅಣà³à²£ ನಾದವನಿಗೆ ತಂಗಿ ತಮà³à²®à²¨à²¿à²—ೆ ವಿದà³à²¯à²¾à²à³à²¯à²¾à²¸ ಕೊಡಿಸà³à²µ, ಒಳà³à²³à³‡ ಕಡೆ ತಂಗಿ ಮದà³à²µà³† ಮಾಡಿಸà³à²µ, ಸà³à²µà²‚ತ ಮನೆ ಕೊಲà³à²²à³à²µ ಆಸೆ ಜವಾಬà³à²¦à²¾à²°à²¿ ಗಳೠಇದà³à²¦à³‡ ಇರà³à²¤à³à²¤à²µà³†. 23 ವರà³à²·à²•à³à²•ೆ ದà³à²¡à³à²¡à²¿à²¨ ಬೆಲೆ ಗೊತà³à²¤à²¿à²°à²²à³à²² ಅನà³à²¨à³à²µà³à²¦à³ ತಪà³à²ªà³ . ಮಧà³à²¯à²® ವರà³à²— ದಿಂದ ಬಂದ ಯಾವà³à²¦à³‡ ಸಾಫà³à²Ÿà³â€Œà²µà³‡à²°à³ ಇಂಜಿನಿಯರೠಗೆ ಕೂಡ ಬೇರೆ ಎಲà³à²²à²°à²¿à²—ೂ ಗೊತà³à²¤à²¿à²°à³à²µà²‚ತೆ ಕಷà³à²Ÿà²¦ ಅರಿವಿರà³à²¤à³à²¤à²¦à³†.
ಕೆಲವೠಜನ ಇರà³à²¤à³à²¤à²¾à²°à³† ಹà³à²Ÿà³à²Ÿà³à²µà²¾à²—ಕೆ ಚಿನà³à²¨à²¦ ಚಮಚ ಬಾಯಿಯಲà³à²²à²¿ ಇಟà³à²Ÿà³à²•ೊಂಡೠಹà³à²Ÿà³à²¤à²¿à²°à³à²µà²µà²°à³ ಅವರೠದà³à²‚ದೠವೆಚà³à²š ಮಾಡಬಹà³à²¦à³‡à²¨à³‹. ಆದರೆ ಎಲà³à²²à²°à²¨à³à²¨à³‚ ಒಂದೇ ತಕà³à²•ಡಿಯಲà³à²²à²¿ ತೂಗà³à²µà³à²¦à³ ಬೇಡ.
6. ಹಾಗೆಂದೠಎಲà³à²²à²°à²¿à²—ೂ ಕಾಲೇಜೠನಲà³à²²à²¿à²°à³à²µà²¾à²—ೆ ಕೆಲà³à²¸à²¾ ಸಿಕà³à²•ಿಬಿಡà³à²µà³à²¦à²¿à²²à³à²². ಠಟಿ ಯಲà³à²²à²¿ ಕೆಲಸ ಸಿಗೋದಕà³à²•ೆ ಲಂಚ ಅಥವಾ ಇನà³à²«à³à²²à³à²¯à³†à²¨à³à²¸à³ ಸಹಾಯ ಮಾಡà³à²µà³à²¦à²¿à²²à³à²². 7 ಅಥವಾ 8 ಸà³à²¤à³à²¤à³ ಗಳನà³à²¨à³ ಮà³à²—ಿಸ ಬೇಕà³. ಪà³à²°à²¤à²¿à²¬à³† ಇದà³à²¦à²°à³‚ ಲಂಚ ಇಲà³à²²à²¦à³‡ ಸರಕಾರಿ ಕೆಲಸ ಸಿಗà³à²µà³à²¦à²¿à²²à³à²² ಇದೠಎಲà³à²²à²°à²¿à²—ೂ ಗೊತà³à²¤à²¿à²°à³à²µ ವಿಷಯ.
7.ಪà³à²°à²¤à²¾à²ªà³ ರವರ ಪà³à²°à²•ಾರ, ಸಾಫà³à²Ÿà³â€Œà²µà³‡à²°à³ ಇಂಜಿನೀಯರà³à²¸à³ ಬಿಟà³à²Ÿà³ ಬೇರೆ ಎಲà³à²²à²°à²¿à²—ೂ ಸೋಶಿಯಲೠರೆಸà³à²ªà²¾à²¨à³à²¸à²¿à²¬à²¿à²²à²¿à²Ÿà³€ ಇದೆ ಯಂತೆ.ಯಾರಿಗಾದರೂ ರಕà³à²¤à²¦ ಅವಶà³à²¯à²•ತೆ ಇದೆ ಅಂತ ಒಂದೇ ಒಂದೠಈ ಮೇಲೠಫಾರà³à²µà²°à³à²¡à³ ಮಾಡಿ ನೋಡಿ. 10 ನಿಮಿಷದಲà³à²²à²¿ ಕನಿಷà³à²Ÿ 100 ಕರೆಗಳೠಬಂದಿರತà³à²¤à²¦à³†,ಯಾವ ಆಸà³à²ªà²¤à³à²°à³† ಗೆ ಬರಬೇಕೠಅಂತ.
ದಾರಿಯಲà³à²²à²¿ ಅಶಕà³à²¤à²°à³, ವೃದà³à²§à²°à²¨à³à²¨à³ ಕಂಡರೆ ಬೇರೆ ಜನಕà³à²•ೆ ಇರà³à²µà²·à³à²Ÿà³‡ ಅನà³à²•ಂಪ ಇದೆ.
8.ಸಮಯಕà³à²•ೆ ಸರಿಯಾಗಿ ಟà³à²¯à²¾à²•à³à²¸à³ ಕಟà³à²Ÿà³à²¤à³à²¤à³€à²µà²¿. ಸಮà³à²¹ ಸಾರಿಗೆ ಉಪಯೋಗಿಸà³à²¤à³à²¤à³‡à²µà³†. ಯಾವ ರೀತಿಯ ಸೋಶಿಯಲೠರೆಸà³à²ªà²¾à²¨à³à²¸à²¿à²¬à²¿à²²à²¿à²Ÿà³€ ಬಗà³à²—ೆ ಮಾತಾಡà³à²¤à³à²¤à²¿à²¦à³à²¦à²°à³‹ ನಂಗೆ ಗೊತà³à²¤à²¿à²²à³à²².
ನಮà³à²® ಸà³à²¤à³à²¤ ಮà³à²¤à³à²¤à²¾ ಇರà³à²µ ಕನà³à²¨à²¡ ಗೊತà³à²¤à²¿à²²à³à²²à²¦ ಜನಕà³à²•ೆ ಕನà³à²¨à²¡ ಕಳಿಸೂತà³à²¹à³‡à²µà³†. ಕಾರà³à²ªà³Šà²°à³‡à²Ÿà³ ಕಂಪನೀ ಗಳಲà³à²²à²¿ ಕನà³à²¨à²¡ ಕಲಿ ಕಾರà³à²¯à²•à³à²°à²® ಮಾಡà³à²¤à³€à²µà²¿. ಆಫೀಸೠನಲà³à²²à²¿ ಕನà³à²¨à²¡ ದಲà³à²²à²¿ ಮಾತಾಡà³à²¤à³€à²µà²¿ .
ಕನà³à²¨à²¡ ನಾಡೠನà³à²¡à²¿à²¯ ಬಗà³à²—ೆ ವಿಚಾರ ವಿನಿಮಯ ಮಾಡಿಕೊಳà³à²³à³à²¤à³à²¤à³‡à²µà³†. ( ನಮà³à²® ಠಟಿ ಕನà³à²¨à²¡à²¿à²—ರೠಗà³à²°à³‚ಪೠನೋಡಿ, enguru.blogspot.com).
ಕನà³à²¨à²¡ ರಾಜà³à²¯à³‹à²¤à³à²¸à²µ ಆಚರಿಸà³à²¤à³à²¤à³‡à²µà³†. ಬೇರೆ ರಾಜà³à²¯à²¦ ಜನಕà³à²•ೆ ಕನà³à²¨à²¡à²¦ ಬಗà³à²—ೆ ತಿಳಿಸಿಕೊಡà³à²¤à³‡à²µà³†. (ನಮà³à²® ನಾಡಹಬà³à²¬ ಬà³à²²à²¾à²—ೠನೋಡಿ, http://naadahabba.blogspot.com/ )
9.ನೆಹರೠಅವರà³à²¸à³à²µà²¾à²¤à³à²‚ತà³à²° ಹೋರಾಟದಲà³à²²à²¿ à²à²¾à²—ವಹಿಸಿದರೠಅನà³à²¨à³à²µà³à²¦à³ ನಮಗೂ ಗೊತà³à²¤à³. ಈಗ ಯಾವ ಹೋರಾಟ ದಲà³à²²à²¿ ನಾವೠà²à²¾à²—ವಹಿಸಬೇಕೠಅಂತ ತಿಳಿಸಿ. ಶನಿವಾರ ಮತà³à²¤à³ à²à²¾à²¨à³à²µà²¾à²° ಗಳಂದೠನಮಗೆ ಸಮಯ ಇದೆ. ನಾವೠಹೋರಾಟ ಮಾಡà³à²¤à³à²¹à³‡à²µà³†. ಈಗ ನಡೆಯà³à²µ ರಾಸà³à²¤ ರೋಕೋ, ಚಳà³à²µà²³à²¿ ಗಳೠಟà³à²°à²¾à²«à²¿à²•ೠಅನà³à²¨à³ ಜಾಮೠಮಾಡಿ ಜನಸಾಮಾನà³à²¯à²°à²¿à²—ೆ ತೊಂದರೆ ಕೊಡà³à²µà²‚ಥವà³. ಅಂತವà³à²—ಳಲà³à²²à²¿ à²à²¾à²—ವಹಿಸà³à²µ ಆಸೆ ನಮಗೆ ಇಲà³à²².
10.ಹಣ ಕೂಡಿಡà³à²µà³à²¦à²° ಬಗà³à²—ೆ ಎಲà³à²²à²°à²¿à²—ಿಂತ ಚೆನà³à²¨à²¾à²—ಿ ನಮಗೆ ತಿಳಿದಿದೆ. ನಾವೠಸಾಯà³à²µ ವರೆಗೂ ಅಥವಾ 60 ವರà³à²· ಆಗà³à²µà²µà²°à³†à²—ೂ ಸಾಫà³à²Ÿà³â€Œà²µà³‡à²°à³ ನಲà³à²²à²¿ ಇರಬೇಕೆಂದೂ ಬಯಸà³à²µà³à²¦à²¿à²²à³à²². ಇರà³à²µà²·à³à²Ÿà³ ದಿನ ಹಣ ಕೂಡಿಸಿ ಸà³à²µà²‚ತ ಉದà³à²¯à³‹à²— ಅಥವಾ ಹೊಲ, ತೋಟ ಮಾಡಿಸà³à²µ ಯೋಜನೆ ಗಳೠಇರà³à²¤à²µà³†. ಇದಕà³à²•ೆಲà³à²² ಹಣ ಸಂಗà³à²°à²¹ ಮಾಡಬೇಕà³.ನಾವೠಸà³à²¯à²¾à²²à²°à³€ ಓರಿಯೆನà³â€Œà²Ÿà³†à²¡à³ ಆಗà³à²µà³à²¦à²°à²²à³à²²à²¿ ತಪà³à²ªà³‡à²¨à²¿à²¦à³†?
11. ಯಾವà³à²¦à³‡ ದೇಶದ ಆರà³à²¥à²¿à²•ತೆ (economy) ನಿರಂತರ ವಾಗಿ ಬೆಳೆಯ ಬೇಕಾದರೆ ಜನಗಳೠಹಣ ಖರà³à²šà³ ಮಾಡಬೇಕà³. ಗಳಿಸಿದà³à²¦à²¨à³à²¨à³†à²²à³à²² ಕೂಡಿಟà³à²Ÿà²°à³† ಎಕಾನಮೀ ನಿಂತ ನೀರಿನಂತಾಗà³à²¤à³à²¹à²¾à²¦à³†. ಹಣ ಖರà³à²šà³ ಮಾಡಿದರೆ demand for goods ಜಾಸà³à²¤à²¿à²¯à²¾à²—à³à²¤à³à²¤à²¦à³†. ಗà³à²°à²¾à²¹à²•ರೠಜಾಸà³à²¤à²¿à²¯à²¾à²¦à²‚ತ,. ಉದà³à²¯à³‹à²— ಗಳೠಸೃಷà³à²Ÿà²¿ ಯಾಗà³à²¤à²µà³†. ಹೀಗೆ ದೇಶ ಮà³à²‚ದà³à²µà²°à³†à²¯à³à²¤à³à²¤à²¦à³†.
12.ನಮಗೆ ಬರà³à²µ ಹಣ ಪೂರà³à²¤à²¿ ಬೇರೆ ದೇಶದà³à²¦à³. ಅವರಿಂದ ಮಿಲಿಯನೠಗಟà³à²Ÿà²²à³† ದà³à²¡à³à²¡à³ ನಾವೠಪಡೆಯà³à²¤à³‡à²µà³†. ಪಡೆದದà³à²¦à²¨à³à²¨à³ ನಾವೠಖರà³à²šà³ ಮಾಡà³à²µà³à²¦à³ à²à²¾à²°à²¤à²¦à²²à³à²²à²¿à²¯à³‡… ಹಗಲೂ ರಾತà³à²°à²¿ ಕಷà³à²Ÿ ಪಟà³à²Ÿà³ ದà³à²¡à²¿à²¦ ನಾವೠವಾರಾಂತà³à²¯à²¦à²²à³à²²à²¿ ಗೆಳೆಯರ ಜೊತೆ ಅಥವಾ ಕà³à²Ÿà³à²‚ಬದವರ ಜೊತೆ ಸಮಯ ಕಳೆಯà³à²µà³à²¦à³ ತಪà³à²ªà³‡?
ನಾನೠಲಂಚ ತೆಗೆದೠಕೊಂಡಿದà³à²¦à²¾à²°à³† ಅಥವಾ ಯಾರಿಗಾದರೂ ಅನà³à²¯à²¾à²¯ ಮಾಡಿ ಹಣ ಗಳಿಸಿ ಮೋಜೠಮಾಡಿದà³à²¦à²°à³† ಅದೠತಪà³à²ªà³ ಆದರೆ ದà³à²¡à²¿à²¦ ಹಣ ನಮಗಾಗಿ , ನಮà³à²® ಕà³à²Ÿà³à²‚ಬಕà³à²•ಾಗಿ ಖರà³à²šà³ ಮಾಡಿದರೆ ತಪà³à²ªà²¾?
13..ಠಟಿ ಯವರೠà²à²¨à³ ಕೆಲಸ ಮಾಡà³à²¤à²¿à²¦à³à²¦à²¾à²°à³† ಎಂದೠಜನ ಸಾಮಾನà³à²¯à²¨à²¿à²—ೆ ತಿಳಿದಿಲà³à²² ಎಂದರೆ ನಮà³à²® ತಪà³à²ªà²²à³à²². ಇವತà³à²¤à³ ಪà³à²°à²¤à²¿à²¯à³Šà²‚ದೠಮಧà³à²¯à²® ಗಾತà³à²°à²¦, ಹೊಟೆಲೠನಲà³à²²à³‚, ಆಸà³à²ªà²¤à³à²°à³† ಯಲà³à²²à³‚, ಶಾಲೆಯಲà³à²²à³‚ ಕಂಪà³à²¯à³‚ಟರೠಬಳಸà³à²¤à³à²¤à²¿à²¦à³à²¦à²¾à²°à³†. ನಮà³à²® ದಿನ ನಿತà³à²¯à²¦ ಕೆಲಸ ದಲà³à²²à²¿ ಕಂಪà³à²¯à³‚ಟರೠಬಳಸಿ ಮಾನವ ಸಮಯ ಉಳಿಸಬಹà³à²¦à³. ಹಾಗೠಸಾಕಷà³à²Ÿà³ ದಾಖಲೆ ಗಳನà³à²¨à³ ಸಂಗà³à²°à²¹à²¿à²¸à²¿ ಇಡಬಹà³à²¦à³.
ಸರಳ ವಾದ ಉದಾಹರಣೆ ಎಂದರೆ ಆಸà³à²ªà²¤à³à²°à³† ಗಳಲà³à²²à²¿ (ಪà³à²°à³ˆà²µà³‡à²Ÿà³ ಆಸà³à²ªà²¤à³à²°à³† ಗಳಲà³à²²à²¿ ಈಗ ಬಳಸà³à²¤à³à²¤à²¿à²¦à³à²¦à²¾à²°à³†. ಸರಕಾರಿ ಆಸà³à²ªà²¤à³à²°à³† ಗಲà³à²²à²¿ ಬಳಸà³à²¤à³à²¤à²¿à²²à³à²² .ಅದೠನಮà³à²® ತಪà³à²ªà²²à³à²²!!!!) ದಾಖಳಾದ ರೋಗಿಗಳ ವಿವರಗಳನà³à²¨à³ ಅವನೠದಾಖಲಾದ ಕà³à²·à²£ ದಿಂದ ಬಿಡà³à²—ಡೆ ಯಾಗಿ ಹೊರ ಹೋಗà³à²µ ತನಕ ಮಾಡà³à²µ ಎಲಾ ಚಿಕಿತà³à²¸à³† ಗಳà³, ಕಟà³à²Ÿà²¿à²¦ ಹಣ, ದೈಹಿಕ ಲಕà³à²·à²£ ಎಲà³à²²à²µà²¨à³à²¨à³ ದಾಖಲಿಸಿ ಇಡಬಹà³à²¦à³. ಇದೠಸಾಕಷà³à²Ÿà³ ಪೇಪರೠವರà³à²•ೠಅನà³à²¨à³ ಕಡಿಮೆ ಮಾಡà³à²¤à³à²¤à²¦à³†. ಇದೆ ರೀತಿ ದೊಡà³à²¡ ಕಂಪನಿ ಗಳನà³à²¨à³ manage ಮಾಡà³à²µà³à²¦à²•à³à²•ೆ ಸಾಫà³à²Ÿà³â€Œà²µà³‡à²°à³ ಗಳನà³à²¨à³ ಬಳಸà³à²¤à³à²¤à²¾à²°à³†. ನಾವೠಅವà³à²—ಳನà³à²¨à³ ಡಿಸೈನೠಮಾಡಿ ಕೊಡà³à²¤à³à²¤à³‡à²µà³†. ಇದನà³à²¨à³ ಸಾಮಾನà³à²¯ ಜನ ಅರà³à²¥ ಮಾಡಿ ಕೊಳà³à²³à²¦à²¿à²¦à³à²¦à²°à³† ಅದೠನಮà³à²® ತಪà³à²ªà²²à³à²². ಅವರಿಗೆ ತಿಳಿದà³à²•ೊಳà³à²³ ಬೇಕೠಅನà³à²¨à²¿à²¸à²¿à²¦à²°à³† ತಿಳಿದೠಕೊಳà³à²³à²²à²¿.
14. ಬೇರೆ ಜನಗಳೠನಮà³à²®à²¿à²‚ದ ಹಣ ವಸೂಲಿ ಮಾಡಲೠಕಾಯà³à²¤à³à²¤à²¿à²°à³à²¤à³à²¤à²¾à²°à³†. ಆಟೋ ದವನೠನಾವೠಸಾಫà³à²Ÿà³â€Œà²µà³‡à²°à³ ನವರೠಎಂದೠತಿಳಿದರೆ ಮೀಟರೠಮೇಲೆ 4 ಪಟà³à²Ÿà³ ಹಣ ಕೇಳà³à²¤à³à²¤à²¾à²¨à³†!!!!! ಬೇರೆ ಜನಗಳೠನಮà³à²®à²¿à²‚ದ ಹಣ ಪೀಕà³à²µà³à²¦à²°à²²à³à²²à²¿ ನಿಪà³à²£à²°à²¾à²—à³à²¤à³à²¤à²¿à²¦à³à²¦à²¾à²°à³†. ಇನà³à²¨à³ ಹೋಮೠಸà³à²Ÿà³‡ ಬಗà³à²—ೆ …. ಹೋಮೠಸà³à²Ÿà³‡ ಗಳಲà³à²²à²¿ ಉಳಿದೠಕೊಂಡೠಪà³à²°à²¾à²•ೃತಿಕ ಸೌಂದರà³à²¯ ಸವೀಯà³à²µà³à²¦à²°à²²à³à²²à²¿ ತಪà³à²ªà³‡à²¨à²¿à²¦à³†? ಅಲà³à²²à²¿à²¨ ಜನ ನಮಗೆ ಮನೆ ಬಿಟà³à²Ÿà³ ಕೊಡà³à²¡à³ ಶೆಡೠನಲà³à²²à²¿ ಬಿಡಾರ ಹೂಡಿದà³à²¦à²¾à²°à²‚ತೆ . ಅದೂ ನಮà³à²® ತಪà³à²ªà²¾? ನಾವೠಕೊಡà³à²µ ಸಾವಿರ ದà³à²¡à³à²¡à²¿à²¨à²²à³à²²à²¿ ಮಕà³à²•ಳ ಸà³à²•ೂಲೠಫೀಸೠಕಟà³à²Ÿà²¬à²¹à³à²¦à³, ಮನೆಗೆ ಆಹಾರ ಸಾಮಗà³à²°à²¿ ಕೊಲà³à²²à²¬à²¹à³à²¦à³. ಅವರà³à²Š ನಾಲà³à²•ೠಜನದಂತೆ ಒಳà³à²³à³‡ ಜೀವನ ನಡೆಸಬಹà³à²¦à³. ಇದರಲà³à²²à²¿ ತಪà³à²ªà³‡à²¨à²¿à²¦à³†? ನಾವೇನೂ ಅವರನà³à²¨à³ ಮನೆ ಬಿಟà³à²Ÿà³ ಓಡಿಸಿದà³à²¦à³†à²µà²¾?
15.ಇನà³à²¨à³ ಮà³à²–à³à²¯ ವಾದ ಮà³à²¯à²¾à²°à³‡à²œà³ ಮಾರà³à²•ೆಟ೅ ಬಿ ಕಾಮೠಓದಿರà³à²µ ಹà³à²¡à³à²—ಿ ಸಾಫà³à²Ÿà³à²µà³‡à²°à³ ಗಂಡನà³à²¨à³ ಆಸೆ ಪದಬಾರದ? ಯಾವ ಹà³à²¡à³à²—ಿಯೇ ಆಗಲಿ ಆರà³à²¥à²¿à²• ವಾಗಿ ಸಬಲ ರಾಗಿರà³à²µà²µà²°à²¨à³à²¨à³ ಇಷà³à²Ÿ ಪಡà³à²µà³à²¦à²°à²²à³à²²à²¿ ತಪà³à²ªà³‡à²¨à³? ಅದೠಅವರ ಪರà³à²¸à²¨à²²à³ ವಿಷಯಗಳà³. ಮà³à²‚ದಿನ ಜೀವನ ಚೆನà³à²¨à²¾à²—ಿರಬೇಕೠಅಂದರೆ ಜೀವನ ಸಂಗಾತಿ ಆರà³à²¥à²¿à²• ವಾಗಿ ಸಬಲ ರಾಗಿರಬೇಕೠಅಂತ ಆಸೆ ಪಡà³à²µà³à²¦à²°à²²à³à²²à²¿ ಮಹಾಪರಾಧ ವೇನಾದರೂ ಇದೆಯಾ?
16.ಜಾಬೠಮಾರà³à²•ೆಟ೅ ಠಟಿ ಬಂದಮೇಲೆ ಎಲà³à²²à²°à³‚ ಠಟಿ ನೇ ಬೇಕೠಎಂದೠಅಂದೠಕೊಂಡಿಲà³à²². ಇವತà³à²¤à³ ಕೂಡ ಯಾವà³à²¦à²¾à²¦à²°à³‚ 200 ಸರಕಾರಿ ಹà³à²¦à³à²¦à³† ಗಳಿಗೆ ಕಾಲೠಮಾಡಿದರೆ ಕನಿಷà³à²Ÿ 2 ಲಕà³à²· ಅರà³à²œà²¿à²—ಳೠಬರà³à²¤à³à²¤à²µà³†. ಸರಕಾರಿ ಕೆಲಸವನà³à²¨à³ ಯಾರೠಕಡೆಗಣಿಸಿಲà³à²². ಸರಕಾರಿ ಕೆಲಸ ವೇನೠಪà³à²•à³à²•ಟೆ ಸಿಗà³à²µà³à²¦à²¿à²²à³à²². ಲಂಚ ವಿಲà³à²²à²¦à³‡ ಸರಕಾರಿ ಕೆಲಸ ಪಡೆಯà³à²µà³à²¦à³ ಸಾವಿಲà³à²²à²¦ ಮೆನೆಿಂದ ಸಾಸಿವೆ ತಂದ ಹಾಗೆ ….
17.ಠಟಿ ಯವರೠ3 ತಿಂಗಳಿಗೊಮà³à²®à³† ಯಾದರೠಅನಾಥಾಲಯ ಮತà³à²¤à³ ವೃದà³à²§à²¶à³à²°à²® ಗಳಿಗೆ à²à³‡à²Ÿà²¿ ನೀಡà³à²¤à³à²¤à²¾à²°à³†, ಬೇರೆ ಯವರೠಎಂದಾದರೂ à²à³‡à²Ÿà²¿ ನೀಡಿದà³à²¦à²¾à²° ?
ಅನà³à²•ಂಪ ಸಹಾಯ ಎಲà³à²² ಅವರವರ ಪರà³à²¸à²¨à²²à³ ವಿಚಾರ ಗಳ೅
18.ತರಕಾರಿ ಮಾಡà³à²µà²µà²¨à³ ಮೊಬೈಲೠಇಟà³à²Ÿà³à²•ೊಂಡಿರà³à²µà³à²¦à²•à³à²•ೂ ಠಟಿ ಕಾರಣವಂತೆ…. ತಗಳಪà³à²ªà²¾ 🙂
ಪà³à²°à²¤à²¾à²ªà³ ರವರೆ … ಠಟಿ ಯವರಿಗೆ ಕೆಲà³à²¸à²¾ ಹೋಯà³à²¤à³ ಅಂತ ಯಾರೂ ಅನà³à²•ಂಪ ತೋರಿಸಬೇಕಾಗಿಲà³à²²…. ಖà³à²·à²¿ ಪಡà³à²µà²µà²°à³ … ಮನೆ ಕಾರೠಮಾರಿ ಲೋನೠಗಳನà³à²¨à³ ಕಟà³à²Ÿà³à²¤à³à²¤à³‡à²µà³†. ಗಂಜಿ ಗೠಗತಿ ಇಲà³à²²à²¦à²‚ತೆ ಆದರೆ, ನಮà³à²® ಹೆಣೆ ಬರಹ, ಅನà³à²à²µà²¿à²¸à³à²¤à³à²¤à³‡à²µà³†, ನಮà³à²® ಕಷà³à²Ÿ ನೋಡಿ ರಿಜಾಯà³à²¸à³ ಮಾಡà³à²µà²‚ಥ ಮಂದಿಯ ಬಳಿ ಗಂತೂ ಸಾಲ ಕೇಳà³à²µà³à²¦à²•à³à²•ೆ ಬರà³à²µà³à²¦à²¿à²²à³à²²….
ಇನà³à²¨à³Šà²®à³à²®à³† ಯಾವà³à²¦à³‡ ವೃತà³à²¤à²¿à²¯ ಬಗà³à²—ೆ ಬರೆಯà³à²µ ಮà³à²¨à³à²¨ ಆ ವೃತà³à²¤à²¿à²¯ ಜನರನà³à²¨à³ ಮಾತನಾಡಿಸಿ ಕಷà³à²Ÿà²—ಳನà³à²¨à³ ತಿಳಿದೠಕೊಂಡೠನಂತರ ಬರೆಯಿರಿ.