Date : 16-02-2009, Monday | 24 Comments
“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. ಈ ಕೆಲಸವನ್ನು ಕಳ್ಳಕಾಕರಿಗೆ ವಹಿಸಬೇಡಿ. ಈ ಕೆಲಸ ಮಾಡಿದರೆ ನೀವು ಪುನಃ ಅಧಿಕಾರಕ್ಕೆ ಬರುವುದು ಖಚಿತ. ಇದು ನನ್ನ ಭವಿಷ್ಯವಾಣಿ”.
ಕಳೆದ ವಾರ ಚಿತ್ರದುರ್ಗದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಪ್ರೊ. ಎಲ್. ಬಸವರಾಜು ಸರಕಾರಕ್ಕೆ ಹೇಳಿದ ಕಿವಿಮಾತಿದು.
“ಮಠಗಳು, ಮಠಾಧೀಶರು ನಮ್ಮ ಶತ್ರುಗಳು” ಎಂದು ಹೇಳಿಕೆ ನೀಡುವ ಮೂಲಕ ಸಮ್ಮೇಳನಕ್ಕೂ ಮುನ್ನವೇ ಒಂದಿಷ್ಟು ಅನಗತ್ಯ ಚರ್ಚೆ, ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಬಿಟ್ಟರೆ ಬಸವರಾಜು ಅವರು ಎತ್ತಿರುವ ವಿಚಾರಗಳ ಬಗ್ಗೆ ನೈಜ ಕಾಳಜಿ ಇರುವವರೆಲ್ಲ ಖಂಡಿತ ಯೋಚಿಸಬೇಕಾದ ಅಗತ್ಯವಿದೆ.
ಬಹುಶಃ ನೀವು Jim Crow laws ಬಗ್ಗೆ ಕೇಳಿರಬಹುದು.
ಹದಿನೆಂಟನೇ ಶತಮಾನದಲ್ಲಿ ಅಮೆರಿಕದಲ್ಲಿ ಕರಿಯರನ್ನು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದರು. ಇಂತಹ ಗುಲಾಮಗಿರಿ ಹಾಗೂ ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದ್ದ ನೀತಿಯ ವಿರುದ್ಧ ೧೮೬೧ರಿಂದ ೬೫ರವರೆಗೂ ಅಮೆರಿಕದಾದ್ಯಂತ ಒಂದು ಯಶಸ್ವಿ ‘ಸಿವಿಲ್ ವಾರ್’ ನಡೆಯಿತು. ಆನಂತರ ಗುಲಾಮಗಿರಿಯನ್ನು ನಿಷೇಧಿಸಿದ್ದಲ್ಲದೆ, ಕರಿಯರಿಗೆ ರೈಲು, ಬಸ್, ಶಾಲೆ, ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸೇವೆಗಳಲ್ಲೂ “ಪ್ರತ್ಯೇಕ, ಆದರೆ ಸಮಾನ”(Separate but Equal) ವ್ಯವಸ್ಥೆಯನ್ನು ಮಾಡಲಾಯಿತು. ಅವುಗಳನ್ನೇ ‘ಜಿಮ್ ಕ್ರೋ ಲಾ’ ಎನ್ನುವುದು. ಈ ಕಾನೂನಿನ ಪ್ರಕಾರ ಕರಿಯರಿಗೂ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಶಾಲೆ, ಕಾಲೇಜುಗಳನ್ನು ತೆರೆಯಲಾಯಿತು. ಉಚಿತ ಶಿಕ್ಷಣ ಸೇವೆ ಆರಂಭವಾಯಿತು. ತೊಗಲಿನ ಬಣ್ಣದ ಸಲುವಾಗಿ ಶಿಕ್ಷಣದಿಂದಲೇ ವಂಚಿತರಾಗಿದ್ದ ಕರಿಯರಿಗೆ ಪ್ರತ್ಯೇಕ ಶಾಲೆ, ಕಾಲೇಜುಗಳ ಸ್ಥಾಪನೆಯಿಂದಾಗಿ ವಿದ್ಯೆ ಸಿಗುವಂತಾಯಿತು. Historically Black Colleges and Universities (ಎಚ್‌ಬಿಸಿಯು) ಸ್ಥಾಪನೆಯಿಂದಾಗಿ ಕರಿಯರು ಬಿಳಿಯರ ಜತೆ ಸ್ಪರ್ಧೆ ಮಾಡುವಷ್ಟರ ಮಟ್ಟಿಗೆ ಬೆಳೆಯಲು ಅನುಕೂಲವಾಯಿತು. ಎಲ್ಲದರಲ್ಲೂ ಕರಿಯರನ್ನು ಪ್ರತ್ಯೇಕವಾಗಿಡಲು ಆರಂಭಿಸಿದ ಈ ಕಾಯಿದೆ ಕಾಲಾಂತರದಲ್ಲಿ ಅರ್ಥ ಕಳೆದುಕೊಂಡು ಕರಿಯರೇ ಅದನ್ನು ವಿರೋಧಿಸುವಂತಾದರೂ, ೧೯೫೪ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಕಾಯಿದೆಗೆ ತಡೆಹಾಕಿದರೂ ಶಿಕ್ಷಣದ ವಿಷಯದಲ್ಲಿ ಕಾಯಿದೆಯಿಂದ ಕರಿಯರಿಗೆ ಅಪಾರ ಲಾಭವಾಗಿದ್ದಂತೂ ನಿಜ. ಇಂದಿಗೂ ಅಮೆರಿಕದಲ್ಲಿ ೧೦೩ ಎಚ್‌ಬಿಸಿಯುಗಳಿವೆ. ಅವುಗಳಲ್ಲಿ ದೊರೆಯುತ್ತಿರುವ ಗುಣ ಮಟ್ಟದ ಶಿಕ್ಷಣ ಎಷ್ಟು ಹೆಸರುವಾಸಿಯಾಗಿದೆಯೆಂದರೆ ಬಿಳಿಯರೂ ಎಚ್‌ಬಿಸಿಯುಗಳನ್ನು ಸೇರಿದ್ದಾರೆ. ಅಲ್ಲಿ ಕಲಿತು ಮೇಲೆ ಬಂದ ವಿದ್ಯಾರ್ಥಿಗಳು ಪ್ರತಿಯಾಗಿ ನೀಡುತ್ತಿರುವ ದೇಣಿಗೆ ಸರಕಾರದ ಸಹಾಯ ಧನಕ್ಕಿಂತ ಹೆಚ್ಚಾಗಿದೆ. ಅಂದರೆ ಸರಕಾರದಿಂದ ಉಚಿತವಾಗಿ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ನಿಂತ ಮೇಲೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಾಲೇಜುಗಳಿಗೆ ಸಹಾಯ ನೀಡುವ ಮೂಲಕ ಸಮಾಜದ ಋಣಭಾರವನ್ನು ತೀರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, “ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ” ಎಂಬ ಬಸವರಾಜು ಅವರ ಕೂಗಿನ ಹಿಂದೆಯೂ ಒಂದು ತರ್ಕವಿದೆ, ದಲಿತರ ಆರ್ತನಾದವಿದೆ. ಅಷ್ಟಕ್ಕೂ ಪ್ರತ್ಯೇಕ ಶಾಲೆಗಳೆಂದರೆ ಸಾಮಾಜಿಕವಾಗಿ ದೂರವಿಡುವುದೆಂದಲ್ಲ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ದೀನ-ದಲಿತರಿಗೆ ಉತ್ತಮ ದರ್ಜೆಯ ಶಿಕ್ಷಣ ಉಚಿತವಾಗಿ ಸಿಗುವಂತೆ ಮಾಡುವ ವ್ಯವಸ್ಥೆ ಯಷ್ಟೇ.
ಇಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸ್ವಾತಂತ್ರ್ಯ ಬಂದು ೬೨ ವರ್ಷಗಳ ನಂತರ ಕರೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ?
ತುಂಬಾ ಹೆಚ್ಚು ಹಿಂದಕ್ಕೆ ಹೋಗುವುದು ಬೇಡ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ಕಟಾವಾಗಿ, ಸಂಕ್ರಾಂತಿ ಕಳೆದ ನಂತರ ನಮ್ಮ ಕಿರಿಯ ಮಠಾಧೀಶರು ಊರೂರು ಗಳಿಗೆ ಬರುತ್ತಿದ್ದರು. ಅವರ ಜತೆ ಒಂದು ದೊಡ್ಡ ದಂಡೂ ಬರುತ್ತಿತ್ತು. ಒಂದು ಊರಿನಲ್ಲಿ ಒಂದೆರಡು ದಿನ ಮೊಕ್ಕಾಂ ಹೂಡಿ, ನೆರೆಯ ಹಳ್ಳಿಗಳಿಗೂ ಭೇಟಿಕೊಟ್ಟು ಸಂಜೆ ಬೀಡಿಗೆ ಮರಳುತ್ತಿದ್ದರು. ಹಾಗೆ ಆಗಮಿಸಿದ ಸ್ವಾಮೀಜಿ ಯಾವ ಜಾತಿ, ಮಠದವರು ಎಂದು ಯಾರೂ ಕೇಳುತ್ತಿರಲಿಲ್ಲ. ಸ್ವಾಮೀಜಿಗಳೂ ತಮ್ಮ ಜಾತಿಯವರನ್ನು ಮಾತ್ರ ಕಾಣಲು ಆಗಮಿಸುತ್ತಿರಲಿಲ್ಲ. ಒಬ್ಬ ಸ್ವಾಮೀಜಿ ಬಂದಿದ್ದಾರೆ ಎಂದರೆ ಎಲ್ಲ ಮನೆಯವರೂ ತಮ್ಮ ಶಕ್ತಿಗನುಸಾರ ದವಸ-ಧಾನ್ಯ, ಕಾಣಿಕೆಗಳನ್ನು ತಂದು ಒಪ್ಪಿಸುತ್ತಿದ್ದರು. ಸಂಜೆಯ ವೇಳೆ ಧಾರ್ಮಿಕ ಕಾರ್ಯಕ್ರಮ, ಪ್ರವಚನ ನಡೆಯುತ್ತಿತ್ತು. ಅವತ್ತು ಜನ ಕೊಟ್ಟ ದವಸ-ಧಾನ್ಯ, ಕಾಣಿಕೆಯಿಂದ ಮಠಗಳು ವರ್ಷ ಕಳೆಯುತ್ತಿದ್ದವು. ಜನ ಕೂಡ ಆ ಜಾತಿ, ಈ ಜಾತಿ ಎನ್ನದೆ ಎಲ್ಲರೂ ಏಕೆ ಕಾಣಿಕೆ ನೀಡುತ್ತಿದ್ದರು ಎಂದರೆ ಮಠಗಳು ಯಾವುದೇ ಜಾತಿಗಳದ್ದಾಗಿದ್ದರೂ ಸಮಾಜದ ಎಲ್ಲರ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು.
‘ಇವನಾರವ ಇವನಾರವ ಎನ್ನದಿರು, ಇವ ನಮ್ಮವ’ ಎಂದು ಬಸವಣ್ಣ ಹೇಳಿದಂತೆ ಮಠಗಳೂ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಮಕ್ಕಳಿಗೆ ಮೂಲ ಶಿಕ್ಷಣವನ್ನು (ಫಂಡಮೆಂಟಲ್ ಎಜುಕೇಶನ್) ಹೇಳಿಕೊಡುತ್ತಿದ್ದವು. ಧಾರ್ಮಿಕ ಪಾಠದ ಜತೆಗೆ “”3 R’s” ಅಂದರೆ ಓದು, ಬರಹ, ಲೆಕ್ಕ (Reading, Writing, Arithmetics) ಮುಂತಾದ ಬದುಕಿಗೆ ಬೇಕಾದ ಪ್ರಾಥಮಿಕ ವಿದ್ಯೆಯನ್ನು ಹೇಳಿ ಕೊಡುವ ಕೆಲಸ ಮಾಡುತ್ತಿ ದ್ದವು. ಹಾಗಾಗಿ ಮಠಗಳೆಂದರೆ ಸಮಾಜದ ಎಲ್ಲರೂ ಗೌರವಿ ಸುವ ಕೇಂದ್ರಗಳಾಗಿದ್ದವು. ‘ಮಠಕ್ಕೆ ಹಾಕಿದರೆ ಮಗ ಉದ್ಧಾರ ಆಗುತ್ತಾನೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಒಂದು ವೇಳೆ, ಮಠದಲ್ಲಿ ಕಲಿತು ಹೊರಬಂದವನೊಬ್ಬ ಸಣ್ಣ ತಪ್ಪು ಮಾಡಿದರೂ ಅದು ಅಕ್ಷಮ್ಯ ಅಪರಾಧವೆನಿಸುತ್ತಿತ್ತು. ಅಂದರೆ ಮಠದಲ್ಲಿ ಕಲಿತವನೆಂದರೆ ಆತ ಎಲ್ಲ ಸದ್ಗುಣಗಳನ್ನೂ ರೂಢಿಸಿಕೊಂಡವನೆಂಬ ನಂಬಿಕೆ ಇತ್ತು. ಹೀಗೆ ನಮ್ಮ ಜನ ಮಠ-ಮಂದಿರಗಳಲ್ಲಿ ತಮ್ಮ ವಿಶ್ವಾಸದ ಗಂಟನ್ನಿಟ್ಟಿದ್ದರು.
ಆದರೆ ಇಂದು ಆ ಮಾತನ್ನು ಹೇಳಲು ಸಾಧ್ಯವಿದೆಯೇ?
ಯಾವ ಮಠಾಧೀಶರೂ ಸಂಕ್ರಾಂತಿ ಕಳೆದ ನಂತರ ಊರೂರು ಸುತ್ತಲು ಬರುವುದಿಲ್ಲ. ಜನರೇ ಶಾಲೆ, ಕಾಲೇಜು ಪ್ರಾರಂಭ ವಾಗುವ ಮುನ್ನ ಮಗ, ಮಗಳಿಗೆ ಅಡ್ಮಿಶನ್ ಕೋರಿ ಸ್ವಾಮೀಜಿಗಳ ಕಾಲ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅಂದು ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸಿದರೆ ಭಸ್ಮ ಕೊಡುತ್ತಿದ್ದರು, ಇಂದು ನಮಸ್ಕರಿಸಿ ನೋಟು, ಚೆಕ್ಕು ಇಟ್ಟರೆ ‘ಸೀಟು’, ಸೇಬು, ಮೂಸಂಬಿ ಅಥವಾ ಕಿತ್ತಳೆ ಹಣ್ಣನ್ನು ನಿಮ್ಮ ಕೈಗಿಡುತ್ತಾರೆ.
ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು?
ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿಕ್ಷಣದ ವಿಚಾರ ಬಂದಾಗ “Profit is a dirty word” ಎನ್ನುತ್ತಿದ್ದರು. ಅಂದರೆ ವಿದ್ಯೆ ಎಂಬುದು ಲಾಭದ ಉದ್ದೇಶ ಇಟ್ಟುಕೊಂಡು ಮಾಡುವ ಉದ್ದಿಮೆಯಲ್ಲ. ಅದಕ್ಕೇ ನಮ್ಮಲ್ಲಿ ‘ವಿದ್ಯಾದಾನ’ ಎನ್ನುತ್ತಿದ್ದುದು. ಆದರೆ ಸರಕಾರವೊಂದರಿಂದಲೇ ಹತ್ತಾರು ಕೋಟಿ ಭಾರತೀಯರಿಗೆ ವಿದ್ಯಾದಾನ ಮಾಡಲು ಸಾಧ್ಯವಿಲ್ಲ ಎಂದರಿತ ಸರಕಾರ, ಸಾಮಾಜಿಕ ಕಾಳಜಿ ಇರುವವರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು, ಸ್ವತಂತ್ರವಾಗಿ ನಡೆಸಲು ಧಾರಾಳವಾಗಿ ಅನುಮತಿ ಕೊಡಲು ಆರಂಭಿಸಿತು. ಇದರ ಲಾಭವನ್ನು ದುಡ್ಡಿದ್ದವರು ಹಾಗೂ ಮಠಗಳು ಪಡೆದುಕೊಳ್ಳಲಾರಂಭಿಸಿದವು. ಆದರೆ ಯಾವಾಗ ಮಠಗಳು ಬದುಕಿಗೆ ಬೇಕಾದ ಮೂಲ ಶಿಕ್ಷಣದ ಬದಲು ಉನ್ನತ ಶಿಕ್ಷಣದತ್ತ ಹೆಚ್ಚು ಹೆಚ್ಚು ಗಮನಹರಿಸಲು ಪ್ರಾರಂಭಿಸಿದವೋ ಆಗ ನೆಹರು ಹೇಳಿದ್ದ ಮಾತು ಅರ್ಥಕಳೆದುಕೊಳ್ಳಲಾರಂಬಿಸಿತು. ಇವತ್ತು ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಡಿ (ವಿಟಿಯು) ೧೫೯ ಎಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಮೇನೇಜ್‌ಮೆಂಟ್ ಕಾಲೇಜುಗಳಿವೆ. ಅವುಗಳಲ್ಲಿ ಎಷ್ಟು ಸರಕಾರಿ ಕಾಲೇಜುಗಳಿವೆ ಹಾಗೂ ಎಷ್ಟು ಕಾಲೇಜುಗಳು ಮಠಗಳು ಹಾಗೂ ದುಡ್ಡಪ್ಪಗಳ ನಿಯಂತ್ರಣದಲ್ಲಿವೆ ಎಂಬುದನ್ನು ಲೆಕ್ಕಹಾಕಿ. ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಬಲ ಎನಿಸಿಕೊಂಡ ಎಲ್ಲ ಮಠಗಳ ಬಳಿಯಲ್ಲೂ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಎರಡೂ ಕಾಲೇಜುಗಳಿವೆ. ಅವುಗಳಿಗೆ ಪ್ರಾಬಲ್ಯ ಬಂದಿದ್ದೇ ಇಂತಹ ಕಾಲೇಜುಗಳಿಂದ. ಹೀಗೆ ಕಾಲೇಜುಗಳನ್ನೇ ಕಾಮಧೇನುಗಳನ್ನಾಗಿ ಮಾಡಿಕೊಂಡ ಮಠಗಳು ‘ಪವರ್ ಸೆಂಟರ್’ಗಳಾದವು. ಅಂದು ರಾಜಕಾರಣಿಗಳು ಎಲ್ಲರಿಗೂ ಸರಕಾರವೇ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಠಗಳಿಗೆ ಜವಾಬ್ದಾರಿ ಕೊಟ್ಟರು. ಇವತ್ತು ಮಠಗಳು ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿ ಬೆಳೆದಿವೆ. ನೀವೇ ಯೋಚನೆ ಮಾಡಿ, ರಾಮಕೃಷ್ಣ ಮಠದಂತಹ ಕೆಲವನ್ನು ಬಿಟ್ಟು ಯಾವುದೇ ಮಠವನ್ನು ಹೆಸರಿಸಿ, ಕೂಡಲೇ ‘ಇಂತಹ ಜಾತಿಯದ್ದು’ ಎಂಬ ಯೋಚನೆ ಅರಿವಿಲ್ಲದಂತೆಯೇ ನಿಮ್ಮ ಮನಸ್ಸಿಗೆ ಬರುತ್ತದೆ. ಅಂದರೆ ಹಿಂದೆ ಸರ್ವಜನರ ಅಭ್ಯುದಯದ ಗುರಿ ಇಟ್ಟುಕೊಂಡಿದ್ದ ಮಠಗಳ ಕೈಗೆ ಉನ್ನತ ಶಿಕ್ಷಣದ ‘ಫಲ’ ಸಿಕ್ಕಿದ ನಂತರ ದುಡ್ಡು ಹರಿದು ಬಂತು. ಆ ದುಡ್ಡು ಎಷ್ಟು ಪ್ರಚೋದಕವಾಗಿತ್ತೆಂದರೆ ಮಠಗಳಿಗೆ “”3 R’s” ಇತ್ತಲ್ಲ ಅದು “”Rs” ಥರಾ ಕಾಣಲಾರಂಭಿಸಿತು. ಹೀಗೆ ಮೂಲ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗುತ್ತಾ ಹೋದ ಮಠಗಳು ಹಾಗೂ ಜನರ ನಡುವೆ ಅಂತರ ಸೃಷ್ಟಿಯಾಗತೊಡಗಿತು. ಕಾಲಕ್ರಮೇಣ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಎಲ್ಲ ಮಠಗಳಿಗೂ ಹೋಗುತ್ತಿದ್ದ ಕಾಲ ಬದಲಾಗಿ ಅವು ಜಾತಿ ಮಠಗಳಾಗತೊಡಗಿದವು. ಹೀಗೆ ಮಠಗಳು ಆಯಾ ಜಾತಿಗಳಿಗೆ ಸೀಮಿತವಾಗಿದ್ದು ಸಮಾಜಕ್ಕೆ ನಷ್ಟವಾದರೂ, ಮಠಗಳಿಗೆ ಮಾತ್ರ ವರದಾನವಾಯಿತು. ಅಂದರೆ ಮಠಗಳೂ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಸಲು ಅವಕಾಶ ಲಭ್ಯವಾಯಿತು. ಇಂತಹ ಸ್ವಾಮೀಜಿಯವರನ್ನು ಎದುರು ಹಾಕಿಕೊಂಡರೆ ಅವರ ಸಮುದಾಯದವರು ಮುನಿಸಿಕೊಳ್ಳುತ್ತಾರೆ, ಇಂತಹ ಜಾತಿಯ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ನಮ್ಮ ರಾಜಕಾರಣಿಗಳನ್ನು ಕಾಡು ವಂತೆ ಮಾಡಿದರು. ಹೀಗೆ ಮಠಗಳು ಇಂದು ರಾಜಕೀಯದ ಮೇಲೆಯೂ ನಿಯಂತ್ರಣ ಸಾಧಿಸಿವೆ.
ಈ ರೀತಿ ಸರಕಾರ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು ವಿದ್ಯಾದಾನದ ಜವಾಬ್ದಾರಿಯನ್ನು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ದುಡ್ಡಪ್ಪಗಳು ಮತ್ತು ಮಠಗಳಿಗೆ ವಹಿಸಿದ್ದು ಹಾಗೂ ವಹಿಸಿಕೊಂಡವರು ಅದನ್ನು ಉದ್ಯಮದಂತೆ ನಡೆಸಿಕೊಂಡಿದ್ದರ ಪರಿಣಾಮವಾಗಿ ದೀನ ದಲಿತರು ಮೂಲ ಹಾಗೂ ಉನ್ನತ ಶಿಕ್ಷಣ ಎರಡರಿಂದಲೂ ವಂಚಿತರಾಗಬೇಕಾಗಿ ಬಂತು. ಇತ್ತ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿ ಹಾಕಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿರುವವರು ‘ನಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್. ನಾವು ಮೀಸಲಾತಿ ಕೊಡಬೇಕೆಂದಿಲ್ಲ’ ಎಂದು ವಾದಿಸಿ ಗೆದ್ದರು. ಇನ್ನೊಂದೆಡೆ ದುಡ್ಡಪ್ಪಗಳು ಹಾಗೂ ಮಠಗಳು ರಾಜಕೀಯದ ಮೇಲೆ ತಾವು ಸಾಧಿಸಿರುವ ನಿಯಂತ್ರಣವನ್ನು ಉಪಯೋಗಿಸಿಕೊಂಡು ತಮ್ಮ ಶಿಕ್ಷಣ ಸಂಸ್ಥೆಗಳನ್ನು “ಡೀಮ್ಡ್ ಯೂನಿವರ್ಸಿಟಿ”ಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆ, ಇಲ್ಲವೇ “ಸ್ವಾಯತ್ತ ಸಂಸ್ಥೆ”(ಅಟಾನಮಸ್ ಸ್ಟೇಟಸ್) ಎಂಬ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸರಕಾರಿ ಸೀಟುಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿವೆ. ಹೀಗೆ ಎಲ್ಲರೂ ತಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್, ರಿಸರ್ವೇಶನ್ ಕೊಡುವುದಿಲ್ಲ ಎನ್ನಲು ಆರಂಭಿಸಿದರೆ, ಡೀಮ್ಡ್ ಹಾಗೂ ಆಟಾನಮಸ್ ಎಂಬ ತಡೆಗೋಡೆ ಕಟ್ಟಿಕೊಂಡರೆ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ, ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತನಾಗಿರುವ ದಲಿತರು ಎಲ್ಲಿಗೆ ಹೋಗಬೇಕು? ಅವರ ನೋವು ನಮಗೇಕೆ ಅರ್ಥವಾಗುವುದಿಲ್ಲ?
“ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ”, “ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ” ಎಂದಿರುವ ಬಸವರಾಜು ಅವರ ಕೂಗಿನ ಹಿಂದೆ ಇಂತಹ ಹಾಲಿ ಪರಿಸ್ಥಿತಿಯ ಕ್ರೂರ ಅಣಕವಿದೆ, ದಲಿತ ಹಾಗೂ ಎಲ್ಲ ಜಾತಿಯ ಬಡಬಗ್ಗರ ಹತಾಶೆಯಿದೆ ಎಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?
ಖಂಡಿತ ಮಠಗಳು ಏನನ್ನೂ ಮಾಡಿಲ್ಲ ಎಂದು ಸಾರಾ ಸಗಟಾಗಿ ಇಲ್ಲಿ ಹೇಳುತ್ತಿಲ್ಲ.
ಒಂದು ವೇಳೆ, ಬಸವರಾಜು ಅವರ ಮಾತು, ಟೀಕೆಯಲ್ಲಿ ಹುರುಳಿಲ್ಲ ಎನ್ನುವುದಾದರೆ ಎಲ್ಲ ಮಠಗಳೂ ತಮ್ಮ ಆದಾಯ ಮತ್ತು ಬಡವರ ಕಲ್ಯಾಣಕ್ಕಾಗಿ ಇದುವರೆಗೂ ಮಾಡಿರುವ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಲಿ? ಒಬ್ಬ ಸಾಮಾನ್ಯ ನಾಗರಿಕ ಸರಕಾರಕ್ಕೆ ತನ್ನ ಆದಾಯ ಹಾಗೂ ವೆಚ್ಚದ ಲೆಕ್ಕ ಕೊಡುತ್ತಾನೆ. ಆ ಕೆಲಸವನ್ನು ಮಠಗಳೂ ಮಾಡಲಿ. ಅವು ನಡೆಸುತ್ತಿರುವ ಉಚಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನೂ ತೆರೆದಿಡಲಿ.
ಇವತ್ತು ಶಿಕ್ಷಣ ವ್ಯವಸ್ಥೆ ಮೇಲೆ ಮಠಗಳ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ತಮ್ಮ ಪ್ರಾಬಲ್ಯವಿರುವ, ಶಿಕ್ಷಣ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳ ಸರಕಾರಿ ಕಾಲೇಜುಗಳನ್ನು ಸ್ಥಾಪಿಸುವುದಕ್ಕೂ ಅಡ್ಡಿ ಬಂದಿವೆ. ಇನ್ನು ವೃತ್ತಿಪರ ಕಾಲೇಜುಗಳೆಂಬ ಕಾಮಧೇನು ನೀಡುವ ಫಲವನ್ನು ಕೆಳಸ್ತರಕ್ಕೆ ಹಂಚುವ ಕೆಲಸವನ್ನಾದರೂ ಮಠಗಳು ಮಾಡುತ್ತಿವೆಯೇ? ಎಷ್ಟು ಮಠಗಳು ಎಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳನ್ನು ಕನಿಷ್ಠ ಮಟ್ಟದ ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಿವೆ? ಮಠಮಾನ್ಯಗಳು ಈ ಸಾಮಾಜಿಕ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಅಂಗನವಾಡಿಗಳ ಅಗತ್ಯವಾದರೂ ಏನಿತ್ತು? ಕ್ಯಾಪಿಟೇಶನ್ ವಿರುದ್ಧ ವೀರಪ್ಪ ಮೊಯಿಲಿ ಅವರು ಕೆಂಡಕಾರಿ ಅದರ ನಿಷೇಧಕ್ಕೆ ಕರೆ ನೀಡಿದಾಗ ರೌದ್ರಾವತಾರ ತಳೆದ ಈ ‘ಉಳ್ಳವರ’ ಮಠಗಳು ಸರಕಾರವನ್ನು ಕಿತ್ತೊಗೆಯಲು ಪಣತೊಟ್ಟಿದ್ದನ್ನು ಮರೆಯಲಾದೀತೆ? ಅಷ್ಟೇ ಏಕೆ, ಮಠಗಳು ಸ್ವಜಾತಿಯ ಬಡವರಿಗೇ ಸಹಾಯ ಮಾಡುತ್ತಿಲ್ಲ ಎಂಬ ಆರೋಪ ವನ್ನು ಅಲ್ಲಗಳೆಯಲು ಸಾಧ್ಯವಿದೆಯೆ?
ಅಂದ ಮಾತ್ರಕ್ಕೆ “ಮಠಗಳಿಂದ ಶಿಕ್ಷಣವನ್ನು ಕಿತ್ತುಕೊಳ್ಳಬೇಕು ಎಂದಲ್ಲ”, ನರ್ಸಿಂಗ್, ಮೆಡಿಕಲ್, ಎಂಜಿನಿಯರಿಂಗ್, ಬ್ಯುಸಿನೆಸ್ ಮೇನೇಜ್‌ಮೆಂಟ್ ಮುಂತಾದ ಉನ್ನತ ಶಿಕ್ಷಣದ ಮೋಹವನ್ನು ಸ್ವಲ್ಪ ಕಡಿಮೆ ಮಾಡಿ “”Back to roots” ಎಂಬಂತೆ ಮಕ್ಕಳಿಗೆ ಓದು, ಬರಹ, ಲೆಕ್ಕವನ್ನು ಕಲಿಸುವಂತಹ ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಎಲ್ಲ ಮಕ್ಕಳೂ ಒಟ್ಟಿಗೆ ಕುಳಿತು ಧಾರ್ಮಿಕ ಹಾಗೂ ಲೌಖಿಕ ಪಾಠವನ್ನು ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಿ ಜಾತಿರಹಿತ ಭಾವನೆ ಮೂಲದಲ್ಲೇ ಮೈಗೂಡುವಂತೆ ಮಾಡಬೇಕು. ಅಂತಹ ಸಮಾನ ಶಿಕ್ಷಣ ವ್ಯವಸ್ಥೆ ಸಿಕ್ಕಾಗ ಮಾತ್ರ ಒಂದು ಸ್ವಸ್ಥ ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ವಾದ ಅಂಶವಿದೆ.
ಒಬ್ಬ ದಲಿತ ಮತಾಂತರಗೊಂಡ ಕೂಡಲೇ ನಮಗೆ ಸಿಟ್ಟು ಬರುತ್ತದೆ. ಮಿಷನರಿಗಳನ್ನು ದೂಷಿಸಲಾರಂಭಿಸುತ್ತೇವೆ. ಆದರೆ ಆ ದಲಿತ ಮಾತೃಧರ್ಮ ತೊರೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವರಾರು? ಮತಾಂತರಗೊಳ್ಳುವವರೇನೂ ದಡ್ಡರಲ್ಲ. ಯೇಸುವನ್ನು ಪ್ರಾರ್ಥಿಸಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ, ಪಾದ್ರಿಗಳು ಹೇಳುತ್ತಿರುವುದೆಲ್ಲ ಪೊಳ್ಳು ಎಂಬುದು ಅವರಿಗೂ ಗೊತ್ತು. ಆದರೂ ಸಾಮಾಜಿಕ ಅಸಮಾನತೆ, ತಾರತಮ್ಯಗಳಿಲ್ಲದ ಒಂದು Better life ಎಂಬ ಮರೀಚಿಕೆಯನ್ನರಸಿಕೊಂಡು, ತಮ್ಮ ಮಕ್ಕಳಿಗೆ ಕಾನ್ವೆಂಟ್‌ಗಳಲ್ಲಿ ಪ್ರವೇಶ ಹಾಗೂ ಪುಕ್ಕಟೆ ಶಿಕ್ಷಣ ಸಿಗುತ್ತದೆ, ನಮ್ಮ ಮಕ್ಕಳಿಗಾದರೂ ಒಂದು ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತದೆ ಎಂಬ ಆಸೆಯಿಂದ ಹೋಗುತ್ತಾರೆ. ಅಂತಹ ಅನುಕೂಲಗಳನ್ನು ಸ್ವಧರ್ಮೀಯರೇ ಏಕೆ ಸೃಷ್ಟಿಸಬಾರದು? ಆಗಾಧ ಆದಾಯವನ್ನು ಹೊಂದಿರುವ ನಮ್ಮ ಮಠ-ಮಂದಿರಗಳೇಕೆ ಆ ಕೆಲಸ ಮಾಡಬಾರದು? ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲಾಗದು. ಅಷ್ಟಕ್ಕೂ, ಸರಕಾರ ದಲಿತರಿಗೆ ಒಂದಿಷ್ಟು ಮೀಸಲು ನೀಡಬಹುದು, ಒಂದು ಹಂತದವರೆಗೂ ಪುಕ್ಕಟೆ ಶಿಕ್ಷಣ ಕೊಡಬಹುದು. ಆದರೆ ಮನಸ್ಸು-ಮನಸ್ಸುಗಳ ನಡುವೆ ಇರುವ ಕಂದಕವನ್ನು ಯಾವ ಕಾನೂನಿನಿಂದಲೂ ಮುಚ್ಚಲು ಸಾಧ್ಯವಿಲ್ಲ. ಆ ಕೆಲಸ ವನ್ನು ಮಠ-ಮಂದಿರಗಳು ಮಾಡಬೇಕು. ಹೀಗಿದ್ದರೂ ‘ಮತಾಂತರಗೊಳ್ಳಬೇಡಿ, ನಿಮ್ಮನ್ನೆಲ್ಲ ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ’ ಎಂದು ಭಾಷಣ ಕೊಟ್ಟು, ಸಹಪಂಕ್ತಿ ಬೋಜನ ಮಾಡೋಣ ಬನ್ನಿ ಎಂದ ಕೂಡಲೇ ಮೌನಕ್ಕೆ ಶರಣಾಗುತ್ತಾರೆ. ಹಾಗಾದರೆ ಒಬ್ಬ ಶಂಕರಾಚಾರ್ಯ, ವಿವೇಕಾನಂದ ಯಾವ ಉದ್ದೇಶಕ್ಕಾಗಿ ದೇಶ ಸುತ್ತಿದರು? ಶ್ರೀ ನಾರಾಯಣ ಗುರುಗಳು ಯಾವ ಕಾರಣಕ್ಕಾಗಿ ನಾಡನ್ನಲೆದರು? ಅವರೂ ಪೀಠದ ಮೇಲೆ ಕುಳಿತುಕೊಂಡು ನೋಟು ಮುಂದಿಟ್ಟವರಿಗೆ ಸೀಟು, ಸೇಬು, ಮೂಸಂಬಿ, ಕಿತ್ತಳೆ ಹಣ್ಣು ಕೊಡಬಹುದಿತ್ತಲ್ಲವೆ? ಹಾಗೆ ಕೊಟ್ಟಿದ್ದರೆ ಅವರು ದೇಹಬಿಟ್ಟ ನಂತರವೂ ಬದುಕಿರುತ್ತಿರಲಿಲ್ಲ.
ಇದು ಎಲ್ಲ ಮಠಾಧೀಶರಿಗೂ ಅರ್ಥವಾಗಬೇಕು. ಮಠ ಎಂದರೆ ಪೀಠದ ಮೇಲೆ ಆಸೀನರಾಗಿ, “ರೆವಿನ್ಯೂ ಜನರೇಟಿಂಗ್ ಸ್ಕೂಲ್, ಕಾಲೇಜು”ಗಳನ್ನು ಸ್ಥಾಪಿಸಿ, ಗಂಟಿದ್ದವರಿಗೆ ಮಾತ್ರ ತಮ್ಮ ಕಾಲೇಜುಗಳ ಬಾಗಿಲು ತೆರೆಯುವುದಲ್ಲ.
ಈ ಹಿನ್ನೆಲೆಯಲ್ಲಿ, ಎಲ್ಲ ಮಠಗಳನ್ನೂ ಒಂದೇ ತಕ್ಕಡಿಗೆ ಹಾಕಿ, ಮಠಗಳೆಂದರೆ ಸಮಾಜ ವಿರೋಧಿಗಳು ಎಂದು ಏಕಾಏಕಿ ತೀರ್ಪು ಕೊಟ್ಟ ಬಸವರಾಜು ಅವರ ಆ ಮಾತನ್ನು ನಿರ್ಲಕ್ಷಿಸಿ, ಬಸವರಾಜು ಅವರನ್ನೂ ನಿಮಿತ್ತವಾಗಿಟ್ಟುಕೊಂಡು ಅವರು ಎತ್ತಿರುವ ಕೆಲವು ಪ್ರಶ್ನೆಗಳ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿ ಹಾಗೂ ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ದಲಿತರು ಮತ್ತು ಎಲ್ಲ ಜಾತಿಗಳ ಹಿಂದುಳಿದವರನ್ನು ಕಡೆಗಣಿಸಿದರೆ ಮುಂದೆ ಎಂತಹ ಅಪಾಯ ಎದುರಾಗಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ.
ಎಲ್ಲವೂ ನಿಮ್ಮ ವಿವೇಚನೆಗೆ ಬಿಟ್ಟಿದ್ದು.
thanks for superb article………it is a well know fact that matas are there for making money……..tey have their own medical and engineering colleges…..they r doing 24 hours politics……
only ramakrishna mutt is doing real service to people from all catagories……..
casteism will destroy india one day……….these mutts r doing caste politics……
pejavara swamy is not ready to eat food with dalit boys………he has only statements to say not any work for upliftment of dalits……..
s.. u are absolutely right… i know a college of engineering SJCIT headed by bal gangadarnath swamiji… here if u have money u will get any seat!!!!
This is one of the best articles from you Pratap, when others were degrading the Prof. you presented his arguments better than him. The truth is always bitter but if all the Mutts go back to providing basic primary education to all economically backward and socially downtrodden then they can reclaim the same respect once accorded to them. Pratap, please continue your work to make this society a better place for all.
Nice One Mr. Prataap
thanks for writing on this topic. it cant be denied that the mutts have been instumental in providing basic education in rural karnataka. but today all the jagadgurus seem to be on a marathon to flex their muscles nd show their power. with the spiritual and money power they have they can do lots of things which elected govts cant. unfortunately the vasted interests in the society, so called dhureenas shun any new swamiji who tries to do some good. not to forget the endless trips abroad, let them clean the mess here first.
I was expected V day articles. Not all famous Math have college. for ex all 8 math of Udupi, Raghavendra swamy math mantralayam, shankara math don,t have any college even schools. why you have forgotten to mention those things.
I was expected V day articles. Not all famous Math have college. for ex all 8 math of Udupi, Raghavendra swamy math mantralayam, shankara math don,t have any college even ( so called international)schools. why you have forgotten to mention those things.
ನಾಯಿಗೆ ಒಂದೠಸಲ ನೀವೠಬಿಸà³à²•ಿಟೠಹಾಕಿದರೆ ಅದೠಪà³à²°à²¤à²¿ ಬಾರಿ ನಿಮà³à²®à²¨à³à²¨à³ ಹಿಂಬಾಲಿಸà³à²¤à³à²¤à²¦à³†. ಬಿಸà³à²•ಿಟೠಸಾಕೠಎಂದರೂ ತಾನೠಕೇಳà³à²µ ಚಾಳಿ ಬಿಡà³à²µà³à²¦à²¿à²²à³à²² . ಹಾಗೆಯೇ ದಲಿತರಿಗೆ ಬರೋಬà³à²¬à²°à²¿ ೬೦ ವರà³à²·à²—ಳಿಂದ Reservation ಕೊಡà³à²¤à³à²¤à²¾ ಬಂದರೂ ಇನà³à²¨à³‚ ತೃಪà³à²¤à²¿à²¯à²¾à²—ಿಲà³à²².3 generation ಗಳಿಂದ ಒಂದೠಸಮಾಜವನà³à²¨à³ ಚಿನà³à²¨à²¦ ತಕà³à²•ಡಿಯಲà³à²²à²¿à²Ÿà³à²Ÿà²°à³‚ atleast ಚಿನà³à²¨à²¦ ವಾಸನೆಯನà³à²¨à²¾à²¦à²°à³‚ ಮೈಗೂಡಿಸಿಕೊಳà³à²³ ಲಾಗಲಿಲà³à²²à²µà³†à²‚ದರೆ ತಪà³à²ªà³ ಸಮಾಜದà³à²¦à³† ಹೊರತೠಚಿನà³à²¨à²¦à³à²¦à²²à³à²² .
reservation! reservation !reservation !!!!ಪà³à²°à²¾à²¥à²®à²¿à²• ಶಾಲೆ ಫà³à²°à³€ ಶಿಕà³à²·à²£
ಮಾಧà³à²¯à²®à²¿à²• ಶಾಲೆ ಉಚಿತ ಶಿಕà³à²·à²£
ಪà³à²°à³Œà²¢ ಶಾಲೆ ಅದೂ ಉಚಿತ
P U C ಉಚಿತ
ಇದೇನೠretail ಶಾಪೠಕೊಡà³à²—ೆ ಎಂದೠà²à²¾à²µà²¿à²¸à²¬à³‡à²¡à²¿ . ಇದೠದಲಿತರೋದà³à²§à²¾à²° ಕೊಡà³à²—ೆ . ಇರಲಿ ಒಪà³à²ªà²¿à²•ೊಳà³à²³à³‹à²£ ..ನಂತರ ಕಾಲೇಜೠ.. ಪದವಿ .. PhD .. & so on
ಎಸà³à²Ÿà³†à²²à³à²² ಕಡೆ reservation ಕೊಟà³à²Ÿà³‚ ನಂತರ ಉದà³à²¯à³‹à²— ? ಅಲà³à²²à³‚ ರೆಸೆರà³à²µà²¶à²¨à³ !!!
ನೀವೇ ಹೇಳಿ … ರೆಸೆರà³à²µà²¶à²¨à³ ಕೊಡà³à²µ ಉದà³à²¦à³‡à²¶ à²à²¨à³?.. ಒಬà³à²¬ ಹಿಂದà³à²³à²¿à²¦ ಮನà³à²·à³à²¯à²¨à²¨à³à²¨à³ ಸಮಾಜದಲà³à²²à²¿ ಎಲà³à²²à²°à²‚ತೆಯೇ ಜೀವಿಸಲೠಅವಕಾಶ ಕೊಡà³à²µà³à²¦à³ ತಾನೇ? ೧೫ ವರà³à²·à²—ಳಲà³à²²à²¿ ಒಬà³à²¬ ಸರಿ ದಾರಿಗೆ ಬರಲಾಗà³à²µà³à²¦à²¿à²²à³à²²à²µà³‡? ಪà³à²£à³à²¯ ಸಾಯà³à²µà²¾à²— ಒಂದೠreservation ಇಲà³à²²!!
ಹಾಗಾಗಿ ನನà³à²¨ ಅನಿಸಿಕೆ à²à²¨à³†à²‚ದರೆ ೬೦ ವರà³à²·à²—ಳಿಂದ ತಿಂದೠಕೊಬà³à²¬à²¿à²¦à²‚ತಹ so caled ಮà³à²‚ದà³à²µà²°à²¿à²¦ ದಲಿತರಿಗೆ reservation ಕೊಡà³à²µ ಬದಲೠಸಮಾಜದಲಿರà³à²µ ಎಲà³à²² ಬಡವರಿಗೆ ಶಿಕà³à²·à²£ ಕೊಡà³à²µà³à²¦à³ ಲೇಸà³..
ಮಠಗಳೠಕೆರೆಯ ನೀರನà³à²¨à³ ಕೆರೆಗೆ ಚೆಲà³à²²à³à²¤à³à²¤à²¿à²¦à³à²¦à²µà³†à²¯à³‡ ಹೊರತà³,ಕೂಡಿಟà³à²Ÿà³ switzerland ನಲà³à²²à²¿ ಇಡà³à²¤à³à²¤à²¿à²²à³à²²à²µà²²à³à²². ಸಮಾಜ ಬದಲಾಗà³à²¤à³à²¤à²¿à²¦à³† . ನೀರಿನ ಜೊತೆಯಲà³à²²à²¿ ಹರಿಯà³à²µà³à²¦à³ ವಸà³à²¤à³à²µà²¿à²¨ ಗà³à²£à²§à²°à³à²®..
Dear Pratap, you must be receiving possitive comments always. Am I correct? you must be strong enough to accept the negative comments too and give the right answers to those who send the negative comments.
ಲೇಖನವೇನೋ ಚೆನà³à²¨à²¾à²—ಿದೆ, ಸಮಾಜದ ಕಣà³à²£à³ ತೆರೆಸà³à²µà²‚ತಿದೆ, ಹಿಂದà³à²³à²¿à²¦à²µà²°à²¿à²—ೆ ಅಶೋತà³à²¤à²°à²µà²¾à²—ಿದೆ ಎಂದೆಲà³à²² ಅನà³à²¨à²¬à²¹à³à²¦à³.
ಆದರೆ ಇನà³à²¨à³Šà²‚ದೠಕೋನದಲà³à²²à²¿ ನೋಡಿದಾಗ ಇದೠಎಷà³à²Ÿà²° ಮಟà³à²Ÿà²¿à²—ೆ ನಿಜ?
ಇಂದೠನಾವೠ‘ಜಾತಿಯ’ ಬಗà³à²—ೆ ಉದà³à²¦à³à²¦à³à²¦ à²à²¾à²·à²£ ಮಾಡà³à²¤à³à²¤à³‡à²µà³†, ಲೇಖನ ಬರೆಯà³à²¤à³à²¤à³‡à²µà³†, ಮೇಲà³à²µà²°à³à²—ದವರನà³à²¨à³ ಬಾಯಿಗೆ ಬಂದ ಹಾಗೆ ಬೈಯà³à²¯à³à²¤à³à²¤à³‡à²µà³†. ಆದರೆ ‘ಜಾತಿ’ ಎಂಬ ಹಣೆಪಟà³à²Ÿà²¿ ಬೇಕಾಗಿರà³à²µà³à²¦à³ ನಿಜವಾಗಿಯೂ ಯಾರಿಗೆ?
ಇವತà³à²¤à²¿à²¨ ಪತà³à²°à²¿à²•ೆ ನೋಡಿ, ಮೈಸೂರಿನಲà³à²²à²¿ ‘ಜಾತಿ ಪà³à²°à²®à²¾à²£ ಪತà³à²°à²•à³à²•ೆ’ ಒತà³à²¤à²¾à²¯… ಈ ಗಲಾಟೆಯನà³à²¨ ಮೇಲà³à²µà²°à³à²—ದವರೠಮಾಡಿದà³à²°? ಅಥವಾ ‘ಒಳ ಮೀಸಲಾತಿ’ ಎಂದೠಬೊಬà³à²¬à²¿à²°à²¿à²¯à³à²µà²µà²°à³ ಮೇಲà³à²œà²¾à²¤à²¿à²¯à²µà²°?
ನಮà³à²® ದೇಶ ಮà³à²‚ದà³à²µà²°à³†à²¯à³à²¤à³à²¤à²¿à²¦à³†à²¯ ಇಲà³à²²à²¾ ಮತà³à²¤à²·à³à²Ÿà³ ಹಿಂದೆ ಹೋಗà³à²¤à³à²¤à²¿à²¦à³†à²¯?
‘ದಲಿತ’ ಎಂದೠಹಣೆಪಟà³à²Ÿà²¿ ಕಟà³à²Ÿà²¿, ರಿಸರà³à²µà³‡à²¶à²¨à³ ಇನà³à²¨à³‚ ಹೆಚà³à²šà²¿à²¸à²¿à²¦à²°à³† ಈಗಾಗಲೆ ಸೋಮಾರಿಗಳಾಗಿರà³à²µ ಇವರೠಇನà³à²¨à²·à³à²Ÿà³ ಸೋ೦à²à³‡à²°à²¿à²—ಳಾಗà³à²µà³à²¦à³ ನಿಶà³à²šà²¿à²¤. ಮತಾಂತರ ತಡೆಗಟà³à²Ÿà²²à³†à²‚ದೇ ಇವರನà³à²¨à³ ಈ ರೀತಿ ‘ವಿಶೇಷವಾಗಿ’ ನೋಡಬೇಕೇ?. ಅಥವಾ ಮತಾಂತರ ತಡೆಗಟà³à²Ÿà²²à³ ಬೇರೆ ಕಾನೂನೠತರಬೇಕ?
ಹೋಗಲಿ ಕೊನೆ ಪಕà³à²·, ಇವರೠಈಗ ೬೦ ವರà³à²·à²¦à²¿à²‚ದ ಎಷà³à²Ÿà³ ಉದà³à²¦à²¾à²° ಆಗಿದà³à²¦à²¾à²°à³† ಎಂದೠಅಂಕಿ-ಅಂಶದೊಂದಿಗೆ ತಿಳಿಸಲಿ. ರಾಜ ಕಾರಣಿಗಳಿ೦ದಾಗಿ ನಮà³à²® ದೇಶ ಎತà³à²¤ ಸಾಗà³à²¤à³à²¤à²¿à²¦à³† ಎಂದೠನಿಮಗೇ ಗೊತà³à²¤à²¾à²—à³à²¤à³à²¤à²¦à³†. ಹà³à²²à³à²¸à²¾à²¦ ಸರಕಾರಿ ಸೌಲà²à³à²¯à²¦à²²à³à²²à²¿ ಓದಿದ ‘ದಲಿತ’ ವಿದà³à²¯à²¾à²°à³à²¥à²¿ ಮತà³à²¤à³† ರಿಸರà³à²µà³†à²¶à²¨à³à²¨à²²à³à²²à²¿ ಕೆಲಸ ಗಿಟà³à²Ÿà²¿à²¸à³à²¤à³à²¤à²¾à²¨à³†. ನಂತರ ಲಂಚ ತೆಗೆದà³à²•ೊಂಡರೂ ಅವನನà³à²¨à³ ಅಷà³à²Ÿà³ ಸà³à²²à²à²µà²¾à²—ಿ ಶಿಕà³à²·à²¿à²¸à²²à²¾à²—à³à²µà³à²¦à²¿à²²à³à²². ಇನà³à²¨à³ ಅವನ ಕೆಳಗಿನ ಅಧಿಕಾರಿಗಳೂ ಪà³à²°à²¤à²¿à²à²Ÿà²¿à²¸à²²à²¾à²—ದà³. ಮೇಲಾಧಿಕಾರಿಯಂತೂ ಸà³à²®à³à²®à²¨à²¿à²¦à³à²¦à²°à³† ಬಚಾವà³. ಅಷà³à²Ÿà³‡à²•ೆ, ಒಬà³à²¬ ಕಸಗà³à²¡à²¿à²¸à³à²µà²µà²¨à³ ಒಂದೠಕಂಪà³à²²à³‡à²‚ಟೠಕೊಟà³à²Ÿà²°à³‚ ಯಾವà³à²¦à³‡ ‘ಮೇಲà³à²µà²°à³à²—ದವರನà³à²¨à³’ ಪೋಲಿಸರೠಕೈಕೋಳ ಹಾಕಬಹà³à²¦à³. ಇವತà³à²¤à³ ವರದಕà³à²·à²¿à²£à³† ಕಾನà³à²¨à²¿à²¨à²·à³à²Ÿà³‡ ‘ à²à²¯à²‚ಕರ’ ವಾಗಿದೆ ಇದರ ಆರà³à²à²Ÿ.
ಅರವತà³à²¤à³ ವರà³à²·à²¦à²¿à²‚ದ ಮಿಸಲಾತಿ ಸೌಲà²à³à²¯ ತೆಗೆದà³à²•ೊಂಡ ಎಷà³à²Ÿà³ ಜನ ದಲಿತ ವಿಜà³à²¨à³à²¯à²¾à²¨à²¿ ಇದà³à²¦à²¾à²°à³† ತಿಳಿಸಿ? ಎಷà³à²Ÿà³ ದಲಿತರೠಅತà³à²¯à³à²¤à³à²¤à²® ಡಾಕà³à²Ÿà²°à³, ಇಂಜಿನಿಯರà³, ಕà³à²¶à²² ಪೈಲಟೠಗಳೠಇದà³à²¦à²¾à²°à³† ತಿಳಿಸಿ. ಅದೇ ಡೊನೇಶನೠಕೊಟà³à²Ÿà²¾à²¦à²°à³‚ ಸà³à²µà²‚ತ ಬà³à²¦à³à²¦à²¿à²¯à²¿à²‚ದ ಕಷà³à²Ÿà²ªà²Ÿà³à²Ÿà³ ಓದಿ, ದೇಶ ವಿದೇಶಗಳಲà³à²²à²¿ ಹೆಸರೠಗಳಿಸಿದ ಸಾವಿರಾರೠಮಂದಿ ಮೇಲà³à²µà²°à³à²—ದವರೠಇಂದೠದೇಶದ ಆಸà³à²¤à²¿à²¯à²¾à²—ಿದà³à²¦à²¾à²°à³†.
ಇಂದೠಬಡವರೠಅನà³à²¨à³à²µà³à²¦à²•à³à²•ೆ ಅರà³à²¥à²µà³‡ ಇಲà³à²². ಕಪà³à²ªà²—ಿರà³à²µà²µà²°à³†à²²à³à²² ಹಿಂದà³à²³à²¿à²¦à²µà²°à³. ಹಸಿರೠಕಾರà³à²¡à³ ಹಿಡಿದವರೆಲà³à²² ಬಡವರà³.’ದಲಿತ’ ರಂತೂ ಕಡà³à²¬à²¡à²µà²°à³. ಮಲà³à²²à²¿à²•ಾರà³à²œà³à²¨ ಕರà³à²—ೆ, ಮà³à²¨à²¿à²¯à²ªà³à²ªà²¨ ಮಕà³à²•ಳೆಲà³à²² ರೆಸರà³à²µà³‡à²¶à²¨à³ ಗೆ ಅರà³à²¹à²°à³.
‘ ಆರà³à²¥à²¿à²•ವಾಗಿ ಬಡವರೠ‘ ಎಂದೠಹà³à²¡à³à²•ಿದರೆ, ಎಲà³à²² ಜಾತಿ, ಮತಗಳಲà³à²²à³‚ ಬಡವರಿದà³à²¦à²¾à²°à³†. ‘ಮೇಲà³à²µà²°à³à²—’ ಎಂದೠಹೆಸರಿಸà³à²µ ಜಾತಿಗಳಲà³à²²à³‚ ೩೦-೪೦ à²à²¾à²— ಒಂದೠಹೊತà³à²¤à²¿à²¨ ಊಟಕà³à²•ೂ ಕಷà³à²Ÿà²µà²¿à²°à³à²µà²°à³ ಇದà³à²¦à²¾à²°à³†.
ಬಸವರಾಜರ ಮಾತೠಕಟà³à²Ÿà²¿à²•ೊಂಡೠ‘ದಲಿತರಿಗೆ’ ಎಲà³à²² ಪà³à²°à²¤à³à²¯à³‡à²• ವà³à²¯à²µà²¸à³à²¥à³† ಮಾಡà³à²¤à³à²¤ ಬೇರೆಯವರನà³à²¨à³ ಕಡೆಗಣಿಸಿದರೆ, ಅವರೆಲà³à²² ಎಲà³à²²à²¿ ಹೋಗಬೇಕà³? ಅವರ ಜೀವನ ನಿರà³à²µà²¹à²£à³† ಎಂಥದà³?
ಅಷà³à²Ÿà²•à³à²•ೂ ಯಾವಾಗಲೂ ಹಿಂದೠಮಠಗಳನà³à²¨à³ ದೂಷಿಸà³à²µ ಪತà³à²°à²¿à²•ೆಗಳೠಕà³à²°à³ˆà²¸à³à²¤à²°, ಮà³à²¸à²²à³à²®à²¾à²¨à²° ಆಸà³à²¤à²¿, ಅಧಿಕಾರಗಳ ಬಗà³à²—ೆ ಯಾಕೆ ಸೊಲà³à²²à³†à²¤à³à²¤à³à²µà³à²¦à²¿à²²à³à²²? à²à²¾à²°à²¤à²¦à²²à³à²²à²¿ ಕà³à²°à²¿à²¶à³à²šà²¿à²¯à²¨à³à²¨à²° ಆಸà³à²¤à²¿ ಎಷà³à²Ÿà²¿à²¦à³†à²¯à³†à²‚ದರೆ, ಮಠ-ಮಂದಿರ ಬಿಟà³à²Ÿà²¾à²•ಿ, ರಕà³à²·à²£à²¾ ಪಡೆಗಳ ನಂತರ ಇರà³à²µ ಅತà³à²¯à²‚ತ ಹೆಚà³à²šà³ ಆಸà³à²¤à²¿, à²à³‚ಮಿ ಇವರ ಒಡೆತನದಲà³à²²à²¿à²¦à³†. ಮà³à²¸à²²à³à²®à²¾à²¨à²°à²¦à³à²¦à³ ಕಡಿಮೆ à²à²¨à²¿à²²à³à²². ಹಾಗಿದà³à²¦à³‚ ಇವರೠ‘ಅಲà³à²ªà²¸à²‚ಖà³à²¯à²¾à²¤à²°à³’ ಹೆಸರಿನಲà³à²²à²¿ ಎಲà³à²²à²¾ ಸೌಲà²à³à²¯à²—ಳನà³à²¨à³‚ ಪಡೆಯà³à²¤à³à²¤à²¾à²°à³†. ಮತà³à²¤à³† ತಿರà³à²—ಾ, ಮತಾ೦ತರವಾದ ‘ದಲಿತರಿಗೆ’ ರೆಸರà³à²µà³‡à²¶à²¨à³.
ಹೀಗಾದರೆ ಬೇರೆ ವರà³à²—ದವರೠà²à²¨à³ ಮಾಡಬೇಕà³?
ಹಾಗೇ, ಎಲà³à²²à²¾ ಮಠಗಳೂ ನೀತಿಯನà³à²¨à³ ಕಳೆದà³à²•ೊಂಡಿಲà³à²² ಎಂದೠನಮಗೆ ಮನವರಿಕೆಯಾಗಬೇಕಿದೆ.
ತà³à²®à²•ೂರಿನ ಸಿದà³à²¦à²—ಂಗಾ ಮಠ, ಶಿವಮೊಗà³à²—ದ ರಾಮಚಂದà³à²°à²¾à²ªà³à²° ಮಠ, ಸಿರಿಗೆರೆಯ ಮಠ….ಇವೠಉತà³à²¤à²® ನಿರà³à²µà²¹à²£à³†à²—ೆ ಉದಾಹರಣೆಗಳà³. ಇವೠಜೀವನ ನಿರà³à²µà²¹à²£à³†à²—ೆ ಬೇಕಾದ ಕನಿಷà³à² ವಿದà³à²¯à³†à²¯à²¨à³à²¨à³ ಪà³à²°à²¾à²¥à²®à²¿à²•ದಲà³à²²à²¿ ಹೇಳಿಕೊಡà³à²¤à³à²¤à²µà³†. ಬೇರೆ ಮಠಗಳೠಸೀಟà³à²•ೊಡà³à²µà²¾à²— ಮಠಗಳೠಕà³à²¯à²¾à²ªà²¿à²Ÿà³‡à²¶à²¨à³/ಡೊನೇಶನೠತೆಗೆದೠಕೊಳà³à²³à²¬à²¹à³à²¦à³. ಆದರೆ ಅವೠಯಾವ ವಿದà³à²¯à²¾à²¸à²‚ಸà³à²¥à³†à²¯à³ ಮಾಡದ ಕೆಟà³à²Ÿ ಕೆಲಸ ಮಾಡà³à²¤à³à²¤à²¿à²µà³†à²¯? ೮೦-೮೫% ತೆಗೆದà³à²•ೊಂಡೂ ಸರಕಾರಿ ಸೀಟೠಪಡೆಯಲಾರದ ‘ಮೇಲà³à²µà²°à³à²—ದ’ ವಿದà³à²¯à²¾à²°à³à²¥à²¿ ಇನà³à²¨à³‡à²¨à³ ಮಾಡಿಯಾನà³? ಎಲà³à²²à²¾à²¦à²°à³‚ ಸಾಲ-ಸೋಲ ಮಾಡಿ ಡೊನೇಶನೠಕೊಟà³à²Ÿà³ ವಿದà³à²¯à²¾à²°à³à²œà²¨à³† ಮಾಡà³à²¤à³à²¤à²¾à²¨à³†. ಅಂಥಾ ಪà³à²°à²¤à²¿à²à²¾à²µà²‚ತರಿಗೆ ಕೊನೇಪಕà³à²· ಒಂದೠದಾರಿ ಇದೆ.
ಸರಕಾರಿ ಹಣ ತೆಗೆದà³à²•ೊಂಡ ಮà³à²¸à³à²²à²¿à²®à²° ಮದರಸಾಗಳೠಇಂದೠಮಕà³à²•ಳಿಗೆ à²à²¨à³ ಹೇಳಿಕೊಡà³à²¤à³à²¤à²¿à²µà³†? ಇದರ ಬಗà³à²—ೆ ಪತà³à²°à²¿à²•ೆಗಳೠಯಾಕೆ ಜಾಣ ಮೌನ? ‘ವಿಚಾರ ವಾದಿಗಳ೒ ಎಲà³à²²à²¿?
ಅಷà³à²Ÿà³ ಆಸà³à²¤à²¿à²¯à²¿à²°à³à²µ ಕà³à²°à²¿à²¶à³à²šà²¿à²¯à²¨à³ ಸಂಸà³à²¥à³†à²—ಳೠಅಪà³à²²à²¿à²•ೇಶನೠಹಾಕಿದಗೆಲà³à²² ಹೆಕà³à²Ÿà³‡à²°à³ ಗಟà³à²Ÿà²²à³† ಜಾಗ ಮಂಜೂರೠಮಾಡà³à²µ ಸರಕಾರಗಳà³, ಹಿಂದೂ ಸಂಸà³à²¥à³†à²—ಳೠಸಣà³à²£ ಜಾಗ ಕೇಳಿದಾಗ ಮೀನ-ಮೇಷ ಎಣಿಸà³à²µà³à²¦à³ à²à²•ೆ?
ಸರಕಾರಿ ಹಣದಿಂದಲೇ, ಸರಕಾರಿ (ದಲಿತ) ಅಧಿಕಾರಿಗಳಿಂದಲೇ ನೆಡೆಯà³à²µ ದಲಿತರ ಹಾಸà³à²Ÿà³†à²²à³ ಗೆ ಒಮà³à²®à³† à²à³‡à²Ÿà²¿ ಕೊಟà³à²Ÿà³ ನೋಡಿ, ಅಲà³à²²à²¿à²¯ ಅವಸà³à²¥à³†à²¯à²¨à³à²¨à³. ಇದೠ‘ಪà³à²°à²¤à³à²¯à³‡à²•’ ವà³à²¯à²µà²¸à³à²¥à³†à²¯ ಒಂದೠಉದಾಹರಣೆ. ಹೀಗಾದರೆ ಅವರೠಸಮಾಜದಿಂದ ಮತà³à²¤à²·à³à²Ÿà³ ದೂರ ಸರಿಯà³à²µ ಅಪಾಯವಿದೆ.
ದಲಿತರೠಹಲವೠಕೆಲಸಗಳಲà³à²²à²¿ ಕà³à²¶à²²à²°à²¿à²¦à³à²¦à²¾à²°à³†. ಅವರೠಬà³à²Ÿà³à²Ÿà²¿ ಹೆಣೆಯà³à²µà³à²¦à²°à²¿à²‚ದ ಹಿಡಿದೠಹಲವೠಕರ ಕà³à²¶à²² ಕಲೆಗಳಲà³à²²à²¿ ಚಾಣಾಕà³à²·à²°à²¿à²¦à³à²¦à²¾à²°à³†.ಅವರಿಗೆ ಇದೇ ವಿಷಯದಲà³à²²à²¿ ಇನà³à²¨à³ ಹೆಚà³à²šà²¿à²¨ ತರಬೇತಿ ಕೊಟà³à²Ÿà³, ಸೌಲà²à³à²¯ ಕೊಟà³à²Ÿà³, ಅವರ ಉತà³à²ªà²¨à³à²¨à²—ಳಿಗೆ ಮಾರà³à²•ಟà³à²Ÿà³† ಒದಗಿಸಿದರೆ ಹಳà³à²³à²¿à²—ಳಲà³à²²à²¿à²°à³à²µ ದಲಿತರ ಉದà³à²¦à²¾à²° ತಾನಾಗೆ ಆಗà³à²¤à³à²¤à²¦à³†, ಅವರೠನಮà³à²® ದೇಶದ ಅಮೂಲà³à²¯ ಆಸà³à²¤à²¿ ಆಗ ಬಲà³à²²à²°à³. ಇದಕà³à²•ೆ ಪà³à²°à²¾à²¥à²®à²¿à²•ದಿಂದ ಪà³à²°à³Œà²¢à²¶à²¾à²²à³†à²¯ ವರೆಗಿನ ಶಿಕà³à²·à²£ ಸಾಕà³. ಇದನà³à²¨à³ ಬಿಟà³à²Ÿà³ ಓದಲೠಮನಸà³à²¸à²¿à²°à²¦ ಅವರನà³à²¨à³ ಕರೆದà³à²•ೊಂಡೠಬಂದà³, ಒತà³à²¤à²¾à²¯ ಮಾಡಿ ಡಾಕà³à²Ÿà²°à²¨à³à²¨à³, ಪೈಲೆಟà³à²Ÿà²¨à³à²¨à³ ಮಾಡಲೠಹೊರಟರೆ ಆಗà³à²µ ನಷà³à²Ÿ ಯಾರಿಗೆ?
ಇನà³à²¨à³, ನಗರದಲà³à²²à²¿à²°à³à²µ ದಲಿತ ಮಕà³à²•ಳಿಗೆ, ಬೇರೆ ಮಕà³à²•ಳಿಗೆ à²à²¨à³ ವà³à²¯à²¤à³à²¯à²¾à²¸?
ಇಷà³à²Ÿà²¾à²—ಿಯೂ ಪà³à²°à²¤à²¾à²ª ಸಿಂಹರಿಗೆ ಧನà³à²¯à²µà²¾à²¦à²—ಳನà³à²¨à³ ಅರà³à²ªà²¿à²¸à³à²¤à³à²¤à³‡à²¨à³†. ಅವರ ಸಾಮಾಜಿಕ ಕಳಕಳಿ ಮೆಚà³à²šà³à²µà²‚ಥಾದà³à²¦à³.
ಆದರೆ ಇನà³à²¨à³ ಮà³à²‚ದೆ ‘ಪಾರà³à²¶à²¿à²¯à²²à³’ ಆಗದಿರಲಿ, ಬೇರೆ ವರà³à²—ದವರೂ ಇದೇ ನಾಡಿನ ಮಕà³à²•ಳ೅
Kindly refer to his study, you can know how christians treat Dalits after conversion.
http://indianhope.free.fr/site_eng/article_5.php3
let the news papers know that, ‘not only in Hinduism but also Dalits in all religions descriminate Dalits’
So, journalists, pls use your pen for the right purpose, not only on soft Hindus, as its always.
By the by where is that “AMBADAS”?
You can understand his purpose is only to abuse Hindus… otherwise, he woluld have thanked Pratap for this article.
very nice article
ನನà³à²¨à²¦à³ ಒಂದೇ ಪà³à²°à²¶à³à²¨à³† à²à²¨à²‚ದರೆ ” ಇದೆ ರೀತಿ ದಲಿತರ ಬಗà³à²—ೆ ಮಾತಾಡಿದà³à²°à³† ಜನ ಸà³à²®à³à²¨à³† ಬಿಡà³à²¤à²¾ ಇದರ ಸà³à²µà²¾à²®à²¿”
ಅದರಲà³à²²à³‚ ಈ ಬà³à²¦à³à²¦à³€ ಜೀವಿಗಳೠಸà³à²®à³à²¨à³† ಕà³à²°à³à²¤à²¿à²¦à³à²°? ನಾಡಿಗೆ ನಡೆ ಅರà³à²šà³à²µ ಹಾಗೆ ಮಾತಾಡà³à²¤à²¾ ಇದà³à²°à³‚ ”
ದಲಿತ ಸಂಘರà³à²· ಸಮಿತಿ ಗಳಂತಹ ಸಂಸà³à²¥à³†à²—ಳೠಕೂಗಾಡಿದà³à²¦à³† ಕೂಗಾಡಿದà³à²¦à³ .
ಇಂತಹವರಿಂದಲೇ ಅಲà³à²µà³‡ à²à²¾à²°à²¤ ಮಾತೆಗೆ ಚಪà³à²ªà²²à²¿ ಹಾರ ಹಾಕಿದà³à²¦à³, ಸà³à²µà²²à³à²ª ಯೋಚನೆ ಮಾಡಬೇಕà³
ನೀವೠಬರೆದಿದà³à²¦à³ ತಪà³à²ªà³ ಅಂತ ಹೇಳಿಲà³à²²,ನಮà³à²®à²²à³à²²à²¿ ಒಂದೇ ದೋಷ à²à²¨à²‚ದರೆ ಜಾತೀಯತೆ , ನಮà³à²® ಉಡà³à²ªà²¿ ಮಠದ ಸà³à²µà²¾à²®à²¿à²—ಳೠಪಂಕà³à²¤à²¿ à²à³‹à²œà²¨à²•à³à²•ೆ ಮಾತà³à²° ಬರà³à²µà³à²¦à²¿à²²à³à²² ಎಲà³à²²à²µà²¨à³à²¨à³ ಚಾಲೆಂಜೠಅಂತ ತೆಗೆದೠಕೊಂಡರೆ ಚಾಲೆಂಜೠಮಾಡಬೇಕೠಅವರೠಅದಕà³à²•ೆ ಹೆದರà³à²¤à³à²¤à²¾à²°à³† ಅದರಿಂದ ನಮà³à²® ದೋಷವನà³à²¨à³ ಗà³à²°à³à²¤à³ ಹಿಡಿದೠಅದನà³à²¨à³‡ ದೊದà³à²¦à³à²¦à³ ಮಾಡà³à²¤à²¾ ಇದà³à²¦à²¾à²°à³† ಇ ನಮà³à²® ಲದà³à²¦à²¿ ಜೀವಿಗಳà³
Realy Nice Comment, and truth Opinion ಪà³à²°à²¤à²¾à²ªà²¸à²¿à²‚ಹರ ಅà²à²¿à²®à²¾à²¨à²¿.[ What is your good name ]
Every one talks about the problem itself,Nobody strives to improve this version era.Pratap points out,where the problem is under our system and i feel it would be better enough ,if he brief more on how we can tackle these uneven events,atleast from now onwards we people think about doing some thing in new change in these areas.At the most if we can’t change it,we can do implement some ways which stops these kind of activities ,if we encounter in our way. I am not talking against this article but what i am expecting is,we together can minimise this kind of mishandling of the laws in future.
HI PRATAP,
TO WHOME YOU ARE TRYING TO IMPRESS HERE. WHY CANT YOU THINK LET THIS BLOODY SOCIETY SEPERATE AS RICH AND POOR . LET THE POOR GET ALL THE FACILYTIES LIKE EDUCATION,JOB AND OTHER STUFFS WITH FREE OF COST. WHY THE RICH BACKWORD CLASS PEOPLE GET ALL THESE FACILITIES??????
DO YOU MEAN TO SAY KHARGE SO CALLED CONGRESS ELDEST LEADER AND A ORDINARY TEMPLE POOJAARI ARE SAME??? NEVER RIGHT…….
BEING AN AGGRESSIVE WRITER DONT TRY TO IMPRESS SO CALLED DHALITS OK .
HUMAN RIGHTS PEOPLE ARE THERE TO SPEAK AGAINST YOU . THEY WILL BE THERE FOR EVER AND APART FROM SPEAKING THEY CANT DO ANY CONSTRUCTIVE JOB. YOU JUST GO TO YOUR PRVIOUS WRITINGS YOU ARE GRADUALLY LOOSING YOUR AGGRESSIVENESS . IF IT CONTINOUS ONE DAY YOU WILL BECOME ONE MORE RAVI BELEGERE ASHTE.
BE CHOOSY IN TAKING TOPICS DEAR . IN THE FORCE OF IMPRESSING DHALITS YOU HAVE FORGOTTEN WHAT YOU WROTE IN YOUR PREVIOUSE ARTICLES.
I AM JUST EXPECTING ALSO REQUESTING BE AGGRESSIVE AND AGGRESSIVE
NEVER TRY TO IMPRESS A PART OF SOCIETY. TRY TO IMPRESS WHOLE SOCIETY.
ಪà³à²°à²¤à²¾à²ªà²¸à²¿à²‚ಹರ ಅà²à²¿à²®à²¾à²¨à²¿ and ಪà³à²°à²¤à²¾à²ªà²¸à²¿à²‚ಹ have brought out very contrasting yet truthful fact. I really see a very horrifying future to my country. I feel another freedom moment is required to free ourselves from our own politicians and build a nation with morality
@ಪà³à²°à²¤à²¾à²ªà²¸à²¿à²‚ಹರ ಅà²à²¿à²®à²¾à²¨à²¿
Thanks for matured comment. Your comment is eye opener for the present system.
ನಮà³à²® à³à³« ನೆ ಕನà³à²¨à²¡ ಸಾಹಿತà³à²¯ ಸಂಮೇಳನಾದà³à²¯à²•à³à²·à²°à²¿à²—ೆ ಈ ವಿಚಾರ ಹೇಳಲೠಇಷà³à²Ÿà³ ವರà³à²· ಕಾಯà³à²µ ಅಗತà³à²¯à²µà²¿à²¤à³à²¤ ? ಈ ವಿಷಯವನà³à²¨ ಬೇರೆ ವೇದಿಕೆಗಳಲà³à²²à²¿ ಮಂಡಿಸಬಹà³à²¦à²¿à²¤à³à²¤à²²à³à²².ಇಂತಹ ಸಾಹಿತಿಗಳಿಂದ ನಮà³à²® ಕನà³à²¨à²¡ ಸಾಹಿತà³à²¯ ಉದà³à²¦à²¾à²°à²µà²¦à²‚ತೆಯೇ! ಕನà³à²¨à²¡ ಸಾಹಿತಿಗಳೇ,ನಿಮà³à²® ಕೈಲಾದರೆ ಕನà³à²¨à²¡ ಸರಸà³à²µà²¤à²¿à²¯ ಸೇವೆ ಮಾಡಿರಿ ಇಲà³à²²à²µà²¾à²¦à²°à³† ರಾಜಕೀಯ ಸೇರಿ ದೇಶ ಉದà³à²¦à²¾à²° ಮಾಡಿ.ಬರಿ ಬಾಷಣದಿಂದ ದೇಶ ಉದà³à²¦à²¾à²°à²µà²¾à²—ೊಲà³à²².
ಕರà³à²¨à²¾à²Ÿà²•ದ ಮಠಗಳ,ಸಮಾಜ ಸೇವೆ ಅಪಾರ. ತಲೆ ಹರಟೆ,ಕಾಮಾಲೆ ಕಣà³à²£à²¿à²¨ ಸಾಹಿತಿಗಳಿಗೆ ಒಳà³à²³à³†à²¯à²¦à³ ಕಾಣಿಸೋಲà³à²².ಸಾಹಿತಿಗಳೠಎಷà³à²Ÿà³ ಜನಕà³à²•ೆ ಅನà³à²¨à²¦à²¾à²¨, ವಿದà³à²¯à²¾à²¦à²¾à²¨ ಮಾಡಿದà³à²¦à²¾à²°à³† ? ನಮà³à²® ದೇಶಕà³à²•ೆ,ನಮà³à²® ಸಮಾಜಕà³à²•ೆ ಸಾಹಿತಿಗಳ ಕೊಡà³à²—ೆ à²à²¨à³ ? ನನà³à²¨ ಅà²à²¿à²ªà³à²°à²¾à²¯à²¦à²²à³à²²à²¿ ನಮà³à²® ಸಾಹಿತಿಗಳೠಜನಗಳ ದಾರಿತಪà³à²ªà²¿à²¸à³à²¤à³à²¤à²¿à²¦à³à²¦à²¾à²°à³† ಅಷà³à²Ÿà³†.
ನಮà³à²® ದೇಶದಲà³à²²à²¿ ಇನà³à²¨à³ ನಮà³à²® ಧರà³à²®à²µà³‡à²¨à²¾à²¦à²°à³ ಉಳಿದಿದà³à²¦à²°à³† ನಮà³à²® ಮಠಗಳೇ ಕಾರಣ.ಒಂದೠಪಕà³à²· ಮಠಗಳೆನಾದರೠಇಲà³à²²à²¦à²¿à²¦à³à²¦à²²à³à²²à²¿, ಹೊರಗಿನವರ,ಅನà³à²¯ ಧರà³à²®à²§à²µà²° ಕà³à²¤à²‚ತà³à²° ಗಳಿಗೆ ನಾವà³,ನೀವೆಲà³à²² ಇಂದೠಬಲಿಪಶà³à²—ಲಾಗಿರà³à²¤à³à²¤à²¿à²¦à³à²¦à³†à²µà³.ಬಾಬ ರಾಮà³à²¦à³‡à²µà³ ರವರ ಬಗà³à²—ೆ ನಮà³à²® ಸಾಹಿತಿಗಳà³,ಮಾದà³à²¯à²®à²¦à²µà²°à³ à²à²•ೆ ಕà³à²°à³à²¡à²°à²¾à²—ಿದà³à²¦à²¾à²°à³†,ಅವರ ಸಮಾಜ ಸೇವೆಗಳ ಬಗà³à²—ೆ à²à²•ೆ ನಮà³à²® ಸಾಹಿತಿಗಳೠಮಾತನಾಡೋಲà³à²²? ನಮಗೆ ನಮà³à²® ದೇಶ, ಧರà³à²®, ಬಾಷೆ ಇವà³à²—ಳೠಮà³à²–à³à²¯,ಇವà³à²—ಳ ಮà³à²‚ದೆ ಇತರವೠನಗಣà³à²¯
“ಜೈ ಹಿಂದ೔ ” ಜೈ ಕರà³à²¨à²¾à²Ÿà²•” ” ಜೈ ಕನà³à²¨à²¡”
Hi Pratap.
This is not an your regular article.
Specal Tahnks to #10 ಪà³à²°à²¤à²¾à²ªà²¸à²¿à²‚ಹರ ಅà²à²¿à²®à²¾à²¨à²¿ and #13 ಪರಮೇಶà³à²µà²°
Hello every one
I wish to thank Pratap as well as commenter #10, for wonderful view about our country.
Lets join hands together to make these views implemented in a proper way.
Discus on how to start with …
Discuss on how to implement this ….
This will give a good start for the Young India .
Lets understand our roles and responsibilities as a citizen !!!!!!!
Sir first reservation nillisi amele matagala bage matadake heli nau 90% tagondru seat sigalla avaru 40% tagondru seat mathe money bere kodtare adarinda mata gallu illa andidre brahamins lingayats vokkaligarana beliyakke bittirlila………………………… evaga kashta anbvisutiruudu nau gale