Date : 16-03-2009, Monday | 25 Comments
“ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳ ಬಂಡವಾಳಶಾಹಿ ಆರ್ಥಿಕ ನೀತಿಯ ವಿರುದ್ಧವಾಗಿ, ಸಾಮಾಜ್ರಶಾಹಿ ಧೋರಣೆ ಹಾಗೂ ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಬೆಳವಣಿಗೆ ಇವುಗಳ ವಿರುದ್ಧವಾಗಿ
ಮತ್ತು
ರೈತರು, ಬಡವರು, ಶೋಷಿತರು, ಕಾರ್ಮಿಕರು, ಹಿಂದುಳಿದ ವರ್ಗದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಜನತಂತ್ರಪ್ರೇಮಿಗಳು, ಪ್ರಗತಿಪರರು ಮತ್ತು ಯುವಜನತೆ ಇವರುಗಳ ಪರವಾಗಿ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗಕ್ಕೆ ಚಾಲನೆ”.
ಮೊನ್ನೆ ಬುಧವಾರ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟ ವಾದ ಈ ಮೇಲಿನ ಜಾಹೀರಾತನ್ನು ನೋಡಿದಾಗ ಕಥೆಯೊಂದು ನೆನಪಾಯಿತು.
ಒಮ್ಮೆ ಕಾಶಿಯ ಮಣಿಕರ್ಣಿಕ ಘಟ್ಟದಲ್ಲಿ ಮದುಕನೊಬ್ಬ “ಡುಕೃಞಕರಣೆ… ಡುಕೃಞಕರಣೆ… ಡುಕೃಞಕರಣೆ…” ಎಂದು ವ್ಯಾಕರಣದ ಬಾಲ ಪಾಠಗಳನ್ನು ಕಂಠಪಾಠ ಮಾಡುತ್ತಾ ಕುಳಿತಿದ್ದನು. ಆದರೆ ಆ ವಯಸ್ಸಿಗೆ ಬೇಕಾಗಿರುವ ಮನಶಾಂತಿಯನ್ನು ಹುಡುಕಿಕೊಳ್ಳುವುದನ್ನೋ ಅಥವಾ ಸಮಾಜ ಸೇವೆಯ ಉಪಕಾರ ವನ್ನೋ ಮಾಡದೆ ತನ್ನ ವಯಸ್ಸಿಗೆ ಅಪ್ರಸ್ತುತವಾಗಿದ್ದ ಶುಷ್ಕ ವ್ಯಾಕರಣದ ಗೋಜಿನಲ್ಲಿ ಗಿಣಿಪಾಠ ಮಾಡುತ್ತಿರುವುದನ್ನು ಕಂಡ, ಶಂಕರಾಚಾರ್ಯರು, ‘ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನ ಹಿ ನ ಹಿ ರಕ್ಷತಿ ಡುಕೃಞಕರಣೆ’ ಎನ್ನುತ್ತಾರೆ. ಅಂದರೆ ಯಾವ ವಯಸ್ಸಿಗೆ ಯಾವುದನ್ನು ಮಾಡಬೇಕು ಅದನ್ನೇ ಮಾಡಬೇಕು. ಈ ವಯಸ್ಸಿಗೆ ಆತ್ಮಶಾಂತಿಯನ್ನು ಹುಡುಕಬೇಕೇ ಹೊರತು ಬರೀ ಭಾಷಾ ಪಾಂಡಿತ್ಯ ಸಂಪಾದನೆ ವ್ಯರ್ಥ. ಅರ್ಥವಾಗದ ಸೂತ್ರಗಳ ಬಾಯಿಪಾಠ ಮತ್ತೂ ಹಾಸ್ಯಾಸ್ಪದ. ಸಾವು ಹತ್ತಿರ ಬಂದಾಗ ಬಾಯಿಪಾಠ ಮಾಡಿದ ಸೂತ್ರಗಳು ಉಪಯೋಗ ಬರುವುದಿಲ್ಲ ಎನ್ನುತ್ತಾರೆ.
ಎಡಪಂಥೀಯವಾದಕ್ಕೆ ಸಾವು ಸನ್ನಿಹಿತವಾಗಿ ಎಷ್ಟೋ ದಶಕಗಳೇ ಆಗಿವೆ. ಆದರೂ ೨೧ನೇ ಶತಮಾನದಲ್ಲಿ ಭಾರತವನ್ನಾಳುವ ಕನಸು ಕಾಣುತ್ತಿರುವ ಎಡಪಂಥೀಯರು ಹಾಗೂ ಅವರ ಹೊಸ ಸಂಗಾತಿ ಗಳು ಮಾತ್ರ ‘ಡುಕೃಙಕರಣೆ’ಯಂತೆ ೧೯ನೇ ಶತಮಾನದ ಕೊನೆ ಹಾಗೂ ೨೦ನೇ ಶತಮಾನದ ಆದಿಯ “ಮಾರ್ಕ್ಸು, ಲೆನಿನ್ನು, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ’ ಎಂಬ ಕುರುಡು ಪಾಠದ ಸೂತ್ರಗಳನ್ನು ಇಂದಿಗೂ ಪಠಿಸುತ್ತಿದ್ದಾರೆ. ಗುರುವಾರ ಬೆಂಗಳೂರು ಬಳಿಯ ದಾಬಸ್‌ಪೇಟೆಯಲ್ಲಿ ನಡೆದ ತೃತೀಯ ರಂಗದ ಸಾರ್ವಜನಿಕ ಸಭೆಯಲ್ಲಿ ಮೊಳಗಿದ್ದೂ ಇಂತಹ ಮಾಮೂಲಿ ಮಂತ್ರಘೋಷವೇ. ಇವತ್ತಿಗೂ Sloganeeringನಿಂದ ಅವರಿಗೆ ಹೊರಬರಲಾಗಿಲ್ಲ, ಬವಣೆಯೇ ಇವರ ಘೋಷಣೆ. ಅದರಿಂದಾಚೆಗಿನ ಪರಿಹಾರವನ್ನು ಕಂಡುಕೊಳ್ಳುವ ದೂರದೃಷ್ಟಿಯಾಗಲಿ, ಸಾಮರ್ಥ್ಯವಾಗಲಿ ಇವರಲ್ಲಿಲ್ಲ. ಇನ್ನು ಬಹಳ ನಗು ತರುವ ವಿಚಾರ ವೆಂದರೆ, ಆ ಜಾಹೀರಾತಿಗೆ ಕೊಟ್ಟಿದ್ದ ಶೀರ್ಷಿಕೆ.
“ಅದೂ ಇದೂ ಸಾಕಿನ್ನು: ಮೂರನೆಯ ಶಕ್ತಿ ಬೇಕಿನ್ನು!”
ಇವರ ಮಾತಿನಂತೆ ತೃತೀಯ ರಂಗವೇ ಪರಿಹಾರವೆನ್ನುವು ದಾದರೆ ಶೀರ್ಷಿಕೆಗೆ “ಆಶ್ಚರ್ಯಕರ”(!) ಚಿಹ್ನೆಯನ್ನು ಹಾಕುವ ಅಗತ್ಯವೇನಿತ್ತು?! ಬಹುಶಃ ನಾವೆಲ್ಲ ಏಕೆ ಒಂದೆಡೆ ಸೇರಿದ್ದೇವೆ ಎಂಬುದನ್ನು ಯೋಚಿಸಿದರೆ ಅವರಿಗೇ ಆಶ್ಚರ್ಯ ವಾಗಬಹುದೇನೋ? ಅಷ್ಟೇ ಅಲ್ಲ, ಪ್ರಕಾಶ್ ಕಾರಟ್, ಎ.ಬಿ. ಬಧನ್, ಚಂದ್ರಬಾಬು ನಾಯ್ಡು, ಎಚ್.ಡಿ. ದೇವೇಗೌಡ, ಮಾಯಾವತಿಯವರ ಪ್ರತಿನಿಧಿಯಾಗಿ ಬಂದ ಅವರ ಬಂಟ ಸತೀಶ್‌ಚಂದ್ರ ಮಿಶ್ರಾ, ಜಯಲಲಿತಾ ಪರವಾಗಿ ಬಂದ ಮೈತ್ರೇಯನ್, ಹರಿಯಾಣದ ಕುಲದೀಪ್ ಬಿಷ್ಣೋಯ್, ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ ರಾವ್ ಪುತ್ರ… ಇವರನ್ನೆಲ್ಲಾ ಒಂದೇ ವೇದಿಕೆಯ ಮೇಲೆ ನೋಡಿದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ? ಇವರು ಯಾವ ಸಾಧನೆಯಾಗಿ ತೃತೀಯ ರಂಗ ಕಟ್ಟಲು ಹೊರಟಿದ್ದಾರೆ? ಈ ಒಬ್ಬೊಬ್ಬರ ಹೆಸರು ಕೇಳಿದರೆ ಯಾವ ಸಾಧನೆ ನೆನಪಾಗುತ್ತದೆ ಹೇಳಿ? ಅಲ್ಲಿ ಇಲ್ಲಿ ಸಂಸಾರ ಮಾಡಿ, ಫೇಲಾದವರೇ ಮತ್ತೆ ಕೈ ಕೈ ಹಿಡಿದುಕೊಂಡು ನವ ದಾಂಪತ್ಯದ ಮಾತನಾಡುತ್ತಿದ್ದಾರೆ ಅಷ್ಟೇ. ಈ ಮಾಜಿ ವಿಚ್ಛೇದಿತ ಪತಿ, ಪತ್ನಿಯರ ಮಿಲನದಿಂದ ಯಾವ ಹೊಸತನವನ್ನು ನಿರೀಕ್ಷಿಸಲು ಸಾಧ್ಯ? ಇನ್ನು ಕಮ್ಯುನಿಸ್ಟರಿಗಂತೂ ದಾಂಪತ್ಯದ ಸುಖ ಬೇಕು, ಜವಾಬ್ದಾರಿ ಬೇಡ.
ಪ್ರಸ್ತುತ ಸುದ್ದಿ ಮಾಡುತ್ತಿರುವ ತೃತೀಯ ರಂಗವನ್ನು ಗೇಲಿ ಮಾಡಿ ಮರೆಯುವ ವಿಚಾರ ಇದಲ್ಲ.
ಈ ಬಾರಿ ದೇಶವೇನಾದರೂ ತೃತೀಯ ರಂಗದ ಕೈಗೆ ಜಾರಿದರೆ ಪರಿಸ್ಥಿತಿ ಏನಾಗಬಹುದೆಂಬುದನ್ನು ಯೋಚಿಸಿ ನೋಡಿ? ಇಡೀ ಜಗತ್ತೇ ‘ಆರ್ಥಿಕ ಹಿಂಜರಿತ’ವೆಂಬ ದೊಡ್ಡ ಕಂಟಕವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಮಸ್ಯೆಗಳಿಗೆ ‘ಪ್ರಾಕ್ಟಿಕಲ್ ಸೊಲೂಷನ್’ ಕಂಡುಹುಡುಕುವವರು ಬೇಕೋ, ಎಲ್ಲದಕ್ಕೂ ‘ಐಡಿಯಾಲಜಿಕಲ್ ಸೊಲೂಷನ್’ ಹುಡುಕುವ ಈ ಎಡಬಿಡಂಗಿಗಳ ಮೊರೆಹೋಗುತ್ತೀರೋ? ಅಷ್ಟಕ್ಕೂ ತೃತೀಯ ರಂಗಕ್ಕೆ ಜೋತು ಬೀಳಲು (a+b)2=a2+b2+2ab ಎಂಬ ಸಿದ್ಧ ಸೂತ್ರ ಗಣಿತ ಹಾಗೂ ಕೆಲ ಸಂದರ್ಭಗಳಲ್ಲಿ ಮಾತ್ರ ವರ್ಕ್ ಆಗುತ್ತದೆಯೇ ಹೊರತು ಎಲ್ಲ ಕಾಲ, ಸಂದರ್ಭಕ್ಕೂ ಹೊಂದುವಂಥದ್ದಲ್ಲ. ಹಾಗಿರುವಾಗ, ಹಾಲಿ ಸಮಸ್ಯೆಗಳಿಗೆ ನಾಯ್ಡು, ಗೌಡ, ಕಾರಟ್‌ಗಳ ಕ್ಯಾಪಿಟಲಿಸ್ಟ್, ಫ್ಯಾಸಿಸ್ಟ್, ಕಮ್ಯುನಲ್ ಎನ್ನುವ “ಸಿದ್ಧಾಂತ ಆಧಾರಿತ”(Ideology Based) ಸಿದ್ಧ ಸೂತ್ರ, ಮಂತ್ರಗಳು ಪರಿಹಾರವಾದಾವೆ? ಈ ಹಿನ್ನೆಲೆಯಲ್ಲಿ ನಾವೆಲ್ಲರೂ ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಚಿಂತನೆ ಮಾಡಬೇಕಾದ ಕಾಲ ಬಂದಿದೆ. ನಮ್ಮ ಮುಂದೆ ಮೂರು ಆಯ್ಕೆಗಳಿವೆ.
ಯುಪಿಎ, ಎನ್‌ಡಿಎ, ತೃತೀಯ ರಂಗ.
ಒಂದೆಡೆ ತೃತೀಯ ರಂಗದವರು ಈ ಬಾರಿ ದೇಶವನ್ನಾಳುವವರು ನಾವೇ ಎಂದು ಬೀಗುತ್ತಿದ್ದಾರೆ. ಇನ್ನೊಂದೆಡೆ ಎನ್‌ಡಿಎ, ಯುಪಿಎ ಎರಡನ್ನೂ ನೋಡಿದ್ದಾಗಿದೆ, ಇವರನ್ನೂ ಒಮ್ಮೆ ಟೆಸ್ಟ್ ಮಾಡೋಣ ಎಂಬ ನಿರ್ಧಾರಕ್ಕೆ ನೀವು ಬರುವ ಮುನ್ನ ಹಳೆಯ ಘಟನೆಗಳು ಹಾಗೂ ಮುಂದೆ ಎದುರಾಗಲಿರುವ ಅಪಾಯಗಳ ಬಗ್ಗೆ ಒಂದಿಷ್ಟು ಯೋಚನೆ ಮಾಡಿ.
೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವೇನೋ ಬಂತು. ಆದರೆ ಗೋಧಿ ಮತ್ತು ಬ್ರೆಡ್ಡನ್ನೂ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಒಂಬೈನೂರು ವರ್ಷ ಮುಸ್ಲಿಂ ಆಡಳಿತಗಾರರ ನಿಯಂತ್ರಣದಲ್ಲಿದ್ದೆವು, ಸುಮಾರು ಇನ್ನೂರು ವರ್ಷ ಬ್ರಿಟಿಷರ ಆಳ್ವಿಕೆಯಲ್ಲಿದ್ದೆವು. ಹಾಗಾಗಿ ನಮಗೆ ಆದೇಶ ಪಾಲಿಸಿದ ಆನುಭವವಿತ್ತೇ ಹೊರತು, ಆಡಳಿತ ನಡೆಸಿದ ಅನುಭವಿರಲಿಲ್ಲ. ಅದರ ಜತೆಗೆ ಕಿತ್ತುತಿನ್ನುವ ಆರ್ಥಿಕ ಸಂಕಷ್ಟ. ಅಂತಹ ಸಂದರ್ಭದಲ್ಲಿ ಸ್ವಾಮಿನಾಥನ್, ಚಿಂತಾಮಣಿ ದೇಶಮುಖ್, ವಿ.ಕೆ. ಮೆನನ್ , ಬಾಲಸುಬ್ರಹ್ಮಣ್ಯಂ, ಮಹಾಲನೋಬಿಸ್ ಮುಂತಾದ “Non-profit Thinkers” ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ದರು. ೧೯೪೭ರ ನಂತರ ಈ ದೇಶ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು ೧೯೮೯ರಲ್ಲಿ. ಆಗಲೂ ಯುನೈಟೆಡ್ ಫ್ರಂಟ್ ಎಂಬ ತೃತೀಯ ರಂಗವೇ ಅಧಿಕಾರದಲ್ಲಿತ್ತು. ಒಂದು ಕಡೆ ಚಿನ್ನವನ್ನು ಅಡವಿಟ್ಟು ಬಂದರು, ಇನ್ನೊಂದು ಕಡೆ ದೇಶ ಆರ್ಥಿಕವಾಗಿ ಎಂತಹ ಪರಿಸ್ಥಿತಿಗೆ ತಲುಪಿತೆಂದರೆ ಜನ ಪಡಿತರ ಚೀಟಿಯನ್ನು ನಂಬಿ ಕುಳಿತುಕೊಳ್ಳಬೇಕಾಯಿತು. ರೇಶನ್ ಕಾರ್ಡ್ ಮೂಲಕ ಅಕ್ಕಿ, ಬಟ್ಟೆ, ಸೀಮೇಎಣ್ಣೆ ವಿತರಿಸಬೇಕಾಯಿತು. ಹಣ ಹಾಗೂ ಸಾಲಕ್ಕಾಗಿ ಸಾರ್ವಜನಿಕ ಬ್ಯಾಂಕ್‌ಗಳ ದುಂಬಾಲು ಬೀಳಬೇಕಾ ಯಿತು. ೧೯೯೬ರಲ್ಲಿ ಮತ್ತೆ ತೃತೀಯ ರಂಗ ರಚನೆಯಾಗಿ ದೇವೇಗೌಡರು ಪ್ರಧಾನಿಯಾದಾಗಲೂ, ಅವರ ನಂತರ ಐ.ಕೆ. ಗುಜ್ರಾಲ್ ಪ್ರಧಾನಿ ಸ್ಥಾನಕ್ಕೇರಿದಾಗಲೂ ಮತ್ತದೇ ಪರಿಸ್ಥಿತಿ ಸೃಷ್ಟಿಯಾಗುವಂತಾಗಿತ್ತು.
ಒಂದು ವೇಳೆ ತೃತೀಯ ರಂಗಕ್ಕೇನಾದರೂ ಅಧಿಕಾರ ದಕ್ಕಿದರೆ ಮತ್ತೆ ಅಂತಹದ್ದೇ ಪರಿಸ್ಥಿತಿ ಸೃಷ್ಟಿಯಾದರೂ ಆಶ್ಚರ್ಯಪಡಬೇಡಿ. ಈ ಬಾರಿ ತೃತೀಯ ರಂಗದ ಮಾತ ನಾಡುತ್ತಿರುವವರಂತೂ ಈ ದೇಶ ಕಂಡ ಅತ್ಯಂತ ಹೊಣೆಗೇಡಿ ರಾಜಕಾರಣಿಗಳು. ಇವರೆಲ್ಲರೂ ಕಾಂಗ್ರೆಸ್, ಬಿಜೆಪಿ ಜತೆ ಸಂಸಾರ ನಡೆಸಿ ಹೊರಬಂದಿ ರುವ ಅವಕಾಶವಾದಿಗಳೇ ಆಗಿದ್ದಾರೆ. ಇವರಲ್ಲಿ ತತ್ವ ಸಿದ್ಧಾಂತ ನಿಷ್ಠೆಯಾಗಲಿ, ಜನಪರ ಕಾಳಜಿಯಾಗಲಿ ಇಲ್ಲ ಎಂಬುದೂ ಕಾಲಾಂತರದಲ್ಲಿ ಸಾಬೀತಾಗಿದೆ. ಅಷ್ಟಕ್ಕೂ ಈ ಜಯಲಲಿತಾ, ಗೌಡ, ಕಾರಟ್‌ಗೆ ಗೊತ್ತಿರುವುದಾದರೂ ಏನು? ಜಗತ್ತಿನ ಸಮಸ್ಯೆಗಳಿಗೆಲ್ಲ ಅಮೆರಿಕ ಕಾರಣ, ಭಾರತ ಅಮೆರಿಕದ ಜತೆ ಸೇರಿದ್ದೇ ನಮ್ಮೆಲ್ಲರ ಸಂಕಷ್ಟಗಳಿಗೆ ಕಾರಣ ಎನ್ನುವ ಕಾರಟ್ ಅವರಂತಹವರ ಕೈಗೆ ಈ ಸಂದರ್ಭದಲ್ಲಿ ಅಧಿಕಾರ ಸೇರಬೇಕೇ ಯೋಚಿಸಿ ನೋಡಿ?
ಇವತ್ತು ಬರಾಕ್ ಒಬಾಮ ಅವರಂತಹ ನಾಯಕರೇ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಒಂದು ಅವಧಿಯೂ (ನಾಲ್ಕು ವರ್ಷ) ಸಾಲದೇ ಹೋಗಬಹುದು ಎನ್ನುತ್ತಿದ್ದಾರೆ. ಇತ್ತ ನಮ್ಮ ಆರ್ಥಿಕ ಅಭಿವೃದ್ಧಿ ದರವೂ(ಜಿಡಿಪಿ) ಶೇ.೮ರಿಂದ ಶೇ.೬ಕ್ಕೂ ಕಡಿಮೆಗೆ ಕುಸಿದಿರುವ ಈ ಸಂದರ್ಭದಲ್ಲಿ ತೃತೀಯ ರಂಗಕ್ಕೇ ನಾದರೂ ಅಧಿಕಾರ ಜಾರಿದರೆ ನಾವು ಮತ್ತೊಂದು ‘ಆರ್ಥಿಕ ಹಿಂಜರಿತ’ಕ್ಕೆ ಆಹ್ವಾನ ನೀಡಿದಂತೆಯೇ ಸರಿ. ಒಂದು ವೇಳೆ ನಾವು ಎಚ್ಚರ ತಪ್ಪಿದರೆ ಇಂದಿರಾಗಾಂಧಿಯವರ ಕಾಲದಲ್ಲಾದಂತೆ ‘ನೆಗೆಟಿವ್ ಡೆವೆಲಪ್‌ಮೆಂಟ್’ಗೂ ಹೋಗಿ ಬಿಡಬಹುದು. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಮುಂದಿರುವುದು ಎರಡೇ ಆಯ್ಕೆಗಳು-ಯುಪಿಎ ಅಥವಾ ಎನ್‌ಡಿಎ.
ಅದಕ್ಕೂ ಕಾರಣವಿದೆ.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಅಧಿಕಾರಕ್ಕೇರ ಬಹುದು ಎಂಬುದು ನಿಜವಾದರೂ, ಗೊಡ್ಡು ಹಸುಗಳಿಂದ ಕೂಡಿರುವ ತೃತೀಯ ರಂಗದಂತಹ ಮತ್ತೊಂದು ಹಳಸಲು ಪ್ರಯೋಗ ನಡೆಸಲು ಕಾಲ ಸೂಕ್ತವಾಗಿಲ್ಲ. ನಮ್ಮ ಅರ್ಥವ್ಯವಸ್ಥೆ ಸಂಕಷ್ಟದಲ್ಲಿರುವುದರಿಂದ ಸೈದ್ಧಾಂತಿಕ ಮಾರ್ಗಗಳಿಗಿಂತ ಇನೊ ವೇಟಿವ್ ಮತ್ತು ಪ್ರಾಕಿಕ್ಟಲ್ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಇದ್ದು, ಅದಕ್ಕೆ ದೂರದೃಷ್ಟಿಯ ಅಗತ್ಯವಿದೆ. ಸರಕಾರ ನಡೆಸಿ ಅನುಭವ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡು ಪಕ್ಷಗಳಿಗೆ ಮಾತ್ರ. ಕಾಂಗ್ರೆಸ್‌ಗೆ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಅನುಭವವೂ ಇದೆ, ಉದಾರೀಕರಣ ತರುವಾಯ (Post-liberalisation) ಸವಾಲುಗಳನ್ನು ನಿಭಾಯಿಸಿಯೂ ಗೊತ್ತು. ಇತ್ತ ಉದಾರೀಕರಣವನ್ನು ಇನ್ನೂ ವಿಸ್ತರಿಸಿದ ಹಾಗೂ ಉದಾರೀಕರಣವನ್ನು ಉಪಯೋಗಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಅನುಭವ ಬಿಜೆಪಿ ನೇತೃತ್ವದ ಎನ್‌ಡಿಎಗಿದೆ. ಅಂದರೆ ಉದಾರೀಕರಣವನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ಸಾದರೂ ಅದರಿಂದ ಬರೀ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗದೆ ಸಾಮಾನ್ಯ ಜನರಿಗೂ ಆರ್ಥಿಕ ಉದಾರೀಕರಣದ ಫಲವನ್ನು ತಲುಪಿಸುವ ಕೆಲಸ ಮಾಡಿದ್ದು ಎನ್‌ಡಿಎ. ಅದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಅಧಿಕಾರದಲ್ಲಿದ್ದಾಗ ಕಿಸೆಯಲ್ಲಿ ೩ ಸಾವಿರ ರೂ. ಹಾಗೂ ಅಡ್ರೆಸ್ ಪ್ರೂಫ್ ಇಟ್ಟುಕೊಂಡು ಹೋದರೆ ಎಲ್‌ಪಿಜಿ ಸಿಲಿಂಡರ್ ಮತ್ತು ಸ್ಟವ್‌ನೊಂದಿಗೆ ಮನೆಗೆ ಹಿಂದಿರುಗಬಹುದಿತ್ತು. ಅರ್ಜಿ ಹಾಕಿಕೊಂಡು ಭಕಪಕ್ಷಿಗಳಂತೆ ಸಿಲಿಂಡರ್‌ಗಾಗಿ ಕಾಯುವ ಪರಿಸ್ಥಿತಿಯನ್ನೇ ವಾಜಪೇಯಿ ಬದಲಾಯಿಸಿದರು. ಸಾಮಾನ್ಯ ಜನರಿಗೂ ಸುಲಭ, ಸರಳ ಹಾಗೂ ಸಿದ್ಧವಾಗಿ ಎಲ್‌ಪಿಜಿ ಸಂಪರ್ಕ ಸಿಗುವಂತೆ ಮಾಡಿದ್ದರು. ಇನ್ನು ಇಂಧನ ವಿಚಾರವನ್ನು ತೆಗೆದುಕೊಳ್ಳಿ. ನಾವು ಬಳಸುವ ಪೆಟ್ರೋಲ್, ಡೀಸೆಲ್, ಸೀಮೇಎಣ್ಣೆ ಮುಂತಾದ ತೈಲ ಹಾಗೂ ಅವುಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲದ ಬೆಲೆ ಜಾಸ್ತಿಯಾದರೆ ಸರಕಾರ ತಡ ಮಾಡದೆ ಬೆಲೆ ಹೆಚ್ಚಳ ಮಾಡಿಬಿಡುತ್ತದೆ. ಆದರೆ ಬೆಲೆಯಲ್ಲಿ ಇಳಿತವಾದರೂ ಹೆಚ್ಚಳವಾಗಿದ್ದಾಗ ಯಾವ ದರದಲ್ಲಿ ನೀಡುತ್ತಿದ್ದರೋ ಅದನ್ನು ಕಡಿಮೆ ಮಾಡುವುದಿಲ್ಲ. ಇತ್ತೀಚೆಗೆ ಯುಪಿಎ ಸರಕಾರ ಮಾಡಿದ್ದೂ ಇದೇ ಕೆಲಸವನ್ನು. ಆದರೆ ಹೊಸದಾದ ಇಂಧನ ನೀತಿಯನ್ನೂ ಜಾರಿಗೆ ತಂದ ವಾಜಪೇಯಿ, ಪ್ರತಿ ೧೫ ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಣೆ ಮಾಡಲು ಮುಂದಾಗಿದ್ದರು. ಬೆಲೆ ಹೆಚ್ಚಾದರೆ ಅದನ್ನು ಗ್ರಾಹಕರು ನೀಡಬೇಕು, ಕಡಿಮೆಯಾದರೆ ಮರು ಕ್ಷಣದಲ್ಲೇ ಲಾಭ ಗ್ರಾಹಕರಿಗೆ ಸಿಗುತ್ತಿತ್ತು. ಅಲ್ಲದೆ ಟೆಲಿಫೋನ್, ಸೆಲ್‌ಫೋನ್ ವಿಷಯದಲ್ಲೂ ಎನ್‌ಡಿಎ ಪ್ರಯೋಗ ಮಾಡಿತು. ಬಿಎಸ್‌ಎನ್‌ಎಲ್‌ಗೆ ಜನ ಜೋತುಬೀಳುವುದು ಬೇಡ ಎಂದು ಖಾಸಗಿ ಉದ್ಯಮಿಗಳೂ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ಕಲ್ಪಿಸಿತು. ಹಾಗೆ ಟೆಲಿಕಾಂ ಕ್ಷೇತ್ರವನ್ನು ತೆರೆದ ಪರಿಣಾಮವಾಗಿಯೇ ಭಾರತದಲ್ಲಿ ಸೆಲ್‌ಫೋನ್ ಕ್ರಾಂತಿಯಾಗಿದ್ದು. ಒಳಬರುವ ಕರೆಗೂ ದಂಡ ತೆರುವಂತಹ ಕಾಲ ಹೋಗಿ ಮೊಬೈಲ್ ಅತ್ಯಂತ ಸುಲಭ ಹಾಗೂ ಅಗ್ಗದ ಸಂಪರ್ಕವಾಗಿ ಮಾರ್ಪಟ್ಟಿತ್ತು. ಹೀಗೆ ಎನ್‌ಡಿಎ ಮಾಡಿದ ಪ್ರಯೋಗಗಳಿಂದ ಸಾಮಾನ್ಯ ಜನರಿಗೂ ಉದಾರೀಕರಣದ ಫಲ ದೊರೆಯುವಂತಾಯಿತು.
ಅಷ್ಟೇ ಅಲ್ಲ, ಎನ್‌ಡಿಎ ಸರಕಾರ ಮಾಡಿದ ಮತ್ತೊಂದು ಗಮನಾರ್ಹ ಕೆಲಸವೆಂದರೆ ‘ಪ್ರಧಾನ್ ಮಂತ್ರಿ ಗ್ರಾಮೀಣ ಸಡಕ್ ಯೋಚನೆ’. ಅಂದರೆ ಹಿಂದೆಲ್ಲ ನಿಮ್ಮೂರಿನ ಒಂದು ರಸ್ತೆ ಹಾಳಾಯಿತೆಂದರೆ ಗ್ರಾಮ ಪಂಚಾಯಿತಿ ಆ ರಸ್ತೆ ರಿಪೇರಿ ಮಾಡಬೇಕಿತ್ತು. ಗ್ರಾಮ ಪಂಚಾಯಿತಿಗೆ ನಗರ, ಅದಕ್ಕೆ ಜಿಲ್ಲಾ ಪಂಚಾಯಿತಿ ಹಣ ಬಿಡುಗಡೆ ಮಾಡಬೇಕಿತ್ತು. ಎಲ್ಲ ದುಡ್ಡೂ ರಾಜ್ಯ ಸರಕಾರದಿಂದಲೇ ಬರಬೇಕಿತ್ತು. ಜತೆಗೆ ರಿಪೇರಿ ಕೆಲಸವನ್ನು ಯಾರು ಮಾಡಬೇಕು ಎಂಬುದೂ ಒಂದು ಸಮಸ್ಯೆಯಾಗುತ್ತಿತ್ತು. ಆದರೆ ‘ಪ್ರಧಾನ ಮಂತ್ರಿ ಗ್ರಾಮೀಣ ಸಡಕ್’ ಯೋಜನೆಯನ್ನು ಜಾರಿಗೆ ತಂದ ವಾಜಪೇಯಿ, ನಿಮ್ಮೂರಿನ ರಸ್ತೆ ರಿಪೇರಿ ಹಾಗೂ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ನೇರವಾಗಿ ಹಣ ಪಡೆದುಕೊಳ್ಳುವಂತಹ ವ್ಯವಸ್ಥೆ ಮಾಡಿದರು. ಇಡೀ ದೇಶಾದ್ಯಂತ ‘ಕನ್‌ಸ್ಟ್ರಕ್ಷನ್ ಆಕ್ಟಿವಿಟಿ’ ಚುರುಕುಗೊಂಡಿತು. ಅಂದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ಸರಳಗೊಳಿಸಿದ ಕಾರಣ ವಿಳಂಬಗಳು ಕಡಿಮೆಯಾದವು. ಎಲ್ಲಿ ಸಮಸ್ಯೆ ಇದೆಯೋ ಅದನ್ನು ಯಾರಾದರೂ ಒಬ್ಬರು ಮುಂದಾಗಿ ಪರಿಹರಿಸೋಣ ಎನ್ನುವ ಮನಸ್ಥಿತಿ ಸೃಷ್ಟಿಯಾಯಿತು.
ನಮ್ಮ ಸೇನೆಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಖರೀದಿ ಮಾಡುವ (ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್) ಪ್ರಕ್ರಿಯೆಯನ್ನೂ ಸರಳ ಗೊಳಿಸಿದರು. ರಷ್ಯಾವೊಂದನ್ನೇ ನಂಬಿ ಕುಳಿತು ಕೊಳ್ಳುವ ಬದಲು ಇಸ್ರೇಲ್, ಫ್ರಾನ್ಸ್, ಬ್ರಿಟನ್‌ಗಳತ್ತಲೂ ಗಮನಹರಿಸಲಾಯಿತು. ಜತೆಗೆ ದೇಶ ಸೇವೆ ಮಾಡುವ ಆಸಕ್ತಿ ಹೊಂದಿರುವ ಡಾಕ್ಟರ್, ಎಂಜಿನಿಯರ್‌ಗಳೂ ಕೂಡ ಸೇನೆ ಸೇರಲು ಅವಕಾಶ ಮಾಡಿ ಕೊಡುವ ಸಲುವಾಗಿ ೫ ವರ್ಷದ ‘ಶಾರ್ಟ್ ಸರ್ವೀಸ್ ಕಮೀಶನ್’ ಪ್ರಾರಂಭಿಸಿದರು.
ಆರ್ಥಿಕ ಉದಾರೀಕರಣ, ಖಾಸಗೀಕರಣ ಎಂದ ಕೂಡಲೇ ಬರೀ ವಿದೇಶಿ ಬಂಡವಾಳದ ಆಗಮನ ಹಾಗೂ ಸಂಪನ್ಮೂಲದ ನಿರ್ಗಮನ ಎಂದು ಭಾವಿಸಬೇಡಿ.
ಈ ಮೇಲಿನ ಉಪಯೋಗಗಳೂ ಕಾಂಗ್ರೆಸ್ ಆರಂಭಿಸಿದ ಉದಾರೀಕರಣ ಹಾಗೂ ಎನ್‌ಡಿಎ ಮಾಡಿದ ಪ್ರಯೋಗಗಳ ಫಲಗಳೇ. ಇಂತಹ ನೀತಿಗಳಿಂದಾಗಿಯೇ ನಮ್ಮ ಖಾಸಗೀ ಕ್ಷೇತ್ರ ಪ್ರಾಮುಖ್ಯತೆಗೆ ಬಂದಿದ್ದು, ಪ್ರತಿಭಾನ್ವಿತರು ಸರಕಾರಿ ಉದ್ಯೋಗವನ್ನೇ ನಂಬಿ ಕುಳಿತುಕೊಳ್ಳದೆ ಹೊಸ ಆಶ್ರಯ, ಅವಕಾಶ ಕಂಡುಕೊಳ್ಳಲಾಗಿದ್ದು. ಖಂಡಿತ ಉದಾರೀಕರಣ ನೀತಿಗಳಿಂದ ಅನಾನುಕೂಲಗಳೂ ಆಗಿವೆ. ಆದರೆ ಉಪಯೋಗ ಗಳು ಅನಾನುಕೂಲಗಳಿಗಿಂತ ಹೆಚ್ಚಿವೆ. ಹಾಗಿದ್ದರೂ ಇವುಗಳನ್ನು ‘ಕ್ಯಾಪಿಟಲಿಸ್ಟ್’ ನೀತಿಗಳು ಎಂದು ದೂರುತ್ತಾರಲ್ಲಾ ಈ ತೃತೀಯ ರಂಗದವರು ಅಂತಹವರ ಕೈಗೆ ದೇಶವನ್ನು ಕೊಡುತ್ತೀರಾ? ಅಷ್ಟಕ್ಕೂ ಇವರ ಸಾಧನೆಯಾದರೂ ಏನು? ಪಶ್ಚಿಮ ಬಂಗಾಳದ ಹೆಗ್ಗಣಗಳಾದ ಕಮ್ಯುನಿಸ್ಟರು ಇಡೀ ರಾಜ್ಯವನ್ನು ಕೊಳೆಗೇರಿ ಮಾಡಿದ್ದೇ ಅವರ ದೊಡ್ಡ ಸಾಧನೆ. ಇನ್ನು ವಿ.ಪಿ. ಸಿಂಗ್, ಗುಜ್ರಾಲ್, ದೇವೇಗೌಡ ಮುಂತಾದ ತೃತೀಯ ರಂಗದ ಪ್ರಧಾನಿಗಳು ಮಾಡಿದ ಘನ ಕಾರ್ಯಗಳಾವುವು ತಿಳಿಸಿ ನೋಡೋಣ?
ಜಗತ್ತೇ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವುದರಿಂದ ಮುಂದಿನ ಐದು ವರ್ಷಗಳು ಎಲ್ಲ ದೇಶಗಳಿಗೂ ಅತ್ಯಂತ ಸಂದಿಗ್ಧ ಹಾಗೂ ಸಂಕೀರ್ಣ ಸಮಸ್ಯೆಗಳನ್ನು ತಂದಿಡಬಹುದು. ಅಂತಹ ಸಂಕಷ್ಟಗಳು ಬಂದಾಗ ಎದುರು ನೋಡಲು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಮನಮೋಹನ್ ಸಿಂಗ್, ಚಿದಂಬರಂ, ಪ್ರಣವ್ ಮುಖರ್ಜಿ ಇದ್ದಾರೆ. ಎನ್‌ಡಿಎಗೆ ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಅರುಣ್ ಶೌರಿ, ಅರುಣ್ ಜೇಟ್ಲಿಗಳಿದ್ದಾರೆ. ಈ ತೃತೀಯ ರಂಗಕ್ಕೆ ಯಾರಿದ್ದಾರೆ? ನಾಯ್ಡು, ಜಯಲಲಿತಾ ಅವರಿಗೆ ಬ್ಲ್ಯಾಕ್‌ಮೇಲ್ ತಂತ್ರಗಳು, ಮಾಯಾವತಿಗೆ ಅನ್ಯರನ್ನು ಮೆಟ್ಟುವ ವಿದ್ಯೆ, ಕಾರಟ್‌ಗಂತೂ ನಕ್ಸಲರನ್ನು ಮುಂದೆ ಕಳುಹಿಸಿ ಹಿಂದಿನಿಂದ ಅಧಿಕಾರ ಕಬಳಿಸುವ ಹಾಗೂ ಚೀನಾಕ್ಕೆ ಸಲಾಂ ಹೊಡೆಯುವುದಷ್ಟೇ ಗೊತ್ತು. ಇವರನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವೆ?
ಒಂದು ದೇಶದ ಅಳಿವು-ಉಳಿವು, ಪ್ರಗತಿ-ದುರ್ಗತಿಗಳನ್ನು ನಿರ್ಧರಿಸುವುದು ಕೃಷಿ, ವ್ಯಾಪಾರ, ಕೈಗಾರಿಕೋದ್ಯಮ ಹಾಗೂ ಸೇವಾ ಕ್ಷೇತ್ರ. ಕೃಷಿ ಅಗತ್ಯತೆಯ ಬಗ್ಗೆ ಹೇಳುವ ಅಗತ್ಯವಿಲ್ಲ. ಜಗತ್ತಿನ ಎಲ್ಲ ಮಾರುಕಟ್ಟೆಗಳೂ ಕುಸಿದಿರುವುದರಿಂದ ಭಾರತ ‘Western Looking’ ನೀತಿಗಳನ್ನು ಕೈಬಿಟ್ಟು ‘Internal Looking’ ನೀತಿಯನ್ನು ಅನುಸರಿಸಬೇಕಾದ ಅಗತ್ಯವಿದೆ. ಅಂದರೆ ನಾವು ರಫ್ತನ್ನು ನಂಬಿ ಕುಳಿತುಕೊಳ್ಳುವ ಬದಲು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನೇ ಹೆಚ್ಚಿಸುವ ಮೂಲಕ ವ್ಯಾಪಾರ ವಹಿವಾಟನ್ನು ಚುರುಕುಗೊಳಿಸಬೇಕು. ಪ್ರತಿ ಜಿಲ್ಲೆಗೊಂದು “ಕೃಷಿ ಸಂಸ್ಕರಣ” ಘಟಕವನ್ನು (ಅಗ್ರಿಕಲ್ಚರ್ ಪ್ರೊಸೆಸಿಂಗ್) ಸ್ಥಾಪಿಸಿ, ಸರಕಾರವೇ ಇಂತಿಷ್ಟು ಪ್ರಮಾಣದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿದರೆ ರೈತನಿಗೂ ಮಾರುಕಟ್ಟೆ ಸಿಕ್ಕಿದಂತಾಗುತ್ತದೆ, ವಾಣಿಜ್ಯ ವ್ಯವಹಾರವೂ ತ್ವರಿತಗೊಳ್ಳುತ್ತದೆ. ಇನ್ನು ಕೈಗಾರಿಕಾ ಅಭಿವೃದ್ಧಿಯೆಂಬುದು ಸುಲಭ ಸಾಲ(Easy Credit) ಮತ್ತು ಸರಳ ಪ್ರಕ್ರಿಯೆ (ಪಾಲಿಸಿ ಅಬ್‌ಸ್ಟೆಕಲ್ಸ್ ಇಲ್ಲದ) ಮೇಲೆ ನಿಂತಿದೆ. ಇನ್ನು ಸೇವಾ (ಕನ್ಸಲ್ಟೆನ್ಸಿ, ಟ್ಯಾಕ್ಸಿ, ಹೇರ್‌ಕಟ್, ನರ್ಸಿಂಗ್‌ನಿಂದ ಸಾಫ್ಟ್‌ವೇರ್‌ವರೆಗೂ)ಕ್ಷೇತ್ರದ ಸಮಸ್ಯೆಗಳಿಗೆ Ideology based ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ತೈವಾನ್, ಸಿಂಗಪುರ್, ಜಪಾನ್, ಥಾಯ್ಲೆಂಡ್‌ಗಳನ್ನು ತೆಗೆದುಕೊಳ್ಳಿ. ಅವರು ‘ಲೇಬರ್ ಮಾರ್ಕೆಟ್’ ಮೇಲೆಯೇ ಹೆಚ್ಚು ಗಮನಹರಿಸಿದರು. ಹಾಗಾಗಿ ಅಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬೆಳೆಯಿತು. ಆದರೆ ಭಾರತ “Non-Labour Market” ಮೇಲೆ ಗಮನಹರಿಸಿತು. ಹತ್ತು, ಹದಿನೈದು ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ದೇಶಾದ್ಯಂತ ಆಪ್ಟೆಕ್, ಎನ್‌ಐಐಟಿ ಮುಂತಾದ ಕಂಪ್ಯೂಟರ್ ತರಬೇತಿ ಕೇಂದ್ರಗಳು ಆರಂಭವಾಗಿದ್ದವು. ಅವು ನೀಡುತ್ತಿದ್ದ ಡಿಗ್ರಿಗಳು ವಿಶ್ವವಿದ್ಯಾಲಯಗಳು ನೀಡುತ್ತಿದ್ದ ಪದವಿಗೆ ಸಮಾನ ಅಥವಾ ಇನ್ನೂ ಯೋಗ್ಯ ಎಂಬ ಕಾಲವಿತ್ತು. ಆನಂತರ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಕಂಪ್ಯೂಟರ್ ಕೋರ್ಸ್‌ಗಳು ಭಾರೀ ಪ್ರಮಾಣದಲ್ಲಿ ಸ್ಥಾಪನೆ ಯಾದವು. ಕಂಪ್ಯೂಟರ್ ಮತ್ತು ಇನ್‌ಫರ್ಮೇಶನ್ ಸೈನ್ಸ್ ವಿಭಾಗಗಳು ಹೆಚ್ಚಾದವು. ಹಾಗಾಗಿಯೇ ನಮ್ಮಲ್ಲಿ ಸೇವಾ ಕ್ಷೇತ್ರ ಈ ಪರಿ ಬೆಳೆಯಲು ಸಾಧ್ಯವಾಗಿದ್ದು. ಆದರೆ ಇಂದು ಜಾಗತಿಕ ಆರ್ಥಿಕ ಹಿಂಜರಿತವುಂಟಾಗಿರುವುದರಿಂದ Non-Labour Marketಗೂ ಹೊಡೆತ ಬಿದ್ದಿದೆ. ನಮ್ಮ ಎಷ್ಟೋ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಆಗಮಿಸುವ ಅಪಾಯವೂ ಇದೆ. ಅಂತಹ ಪ್ರತಿಭಾನ್ವಿತರ ಪುನರ್ವಸತಿ ಅಂದರೆ Rehabilitation of the Intelligent ಮತ್ತು ಪ್ರತಿ ವರ್ಷವೂ ಕಾಲೇಜುಗಳಿಂದ ಹೊರಬರುತ್ತಿರುವ ಐದೂವರೆ ಲಕ್ಷ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಕೆಲಸವಿದೆಯಲ್ಲಾ ಅದು ತೀರಾ ಕಷ್ಟದ್ದು. ಕೊಲ್ಲಿ ಯುದ್ಧ ನಡೆದಾಗಲೂ ೩೦ ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದನ್ನು ನೆನಪಿಸಿಕೊಳ್ಳಿ. ಈ ಹಿನ್ನೆಲೆಯಲ್ಲಿ “Future thinking” ಇದ್ದವರು ಮಾತ್ರ ದೇಶ ಮತ್ತು ಅರ್ಥವ್ಯವಸ್ಥೆಯನ್ನು ಮುನ್ನಡೆಸಬಲ್ಲರು. ಹಾಗಿರುವಾಗ ಸ್ವಂತ ಭವಿಷ್ಯವನ್ನೇ ಸರಿಯಾಗಿ ರೂಪಿಸಿಕೊಳ್ಳದ ಹಾಗೂ ಮಾರ್ಕ್ಸು, ಲೆನ್ನಿನ್ನು, ಬಡವ-ಬಲ್ಲಿದ, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಎಂಬ Regressive ನೀತಿಗಳಿಗೆ ಅಂಟಿಕೊಂಡಿರುವವ ತೃತೀಯ ರಂಗದವರನ್ನು ನಂಬಿ ವೋಟು ಹಾಕುತ್ತೀರಾ? ಅಲ್ಲಿ ಇರುವವ ರಾದರೂ ಯಾರು? ದೇವೇಗೌಡ, ನಾಯ್ಡು, ಜಯಲಲಿತಾ, ಮಾಯಾವತಿ ಈ ಎಲ್ಲರೂ ಪ್ರಧಾನಿ ಸ್ಥಾನದ ಆಕಾಂಕ್ಷಿಗಳೇ. ಅಧಿಕಾರವೆಂಬ ದೈವವೇ ಇವರನ್ನು ಒಂದು ಮಾಡಿರುವುದು. ಇಂಥವರೆಲ್ಲ ಸೇರಿ ಸರಕಾರ ರಚಿಸಿದರೆ ಖಾಸಗಿ ಕ್ಷೇತ್ರದಲ್ಲೂ ಮೀಸಲು ನೀತಿ ತಂದು ಇಡೀ ಸಾಫ್ಟ್‌ವೇರ್ ಹಾಗೂ ಇತರ ಸೇವಾ ಕ್ಷೇತ್ರಗಳನ್ನೂ ಹಾಳುಗೆಡವಿ ಭಾರತವನ್ನು ಮತ್ತೊಂದು ಕ್ಯೂಬಾ, ಕಾಂಬೋಡಿಯಾ ಮಾಡಿದರೂ ಆಶ್ಚರ್ಯವಿಲ್ಲ. ಆ ಮೇಲೆ, “ತೃತೀಯ ರಂಗಕ್ಕೆ ಅಧಿಕಾರ: ದೇಶದ ತುಂಬ ಹಾಹಾಕಾರ” ಎಂದು ಬರೆಯಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಹೇಳಿದ್ದು ನಮ್ಮ ಮುಂದಿರುವುದು ಎರಡೇ ಆಯ್ಕೆ-ಯುಪಿಎ ಅಥವಾ ಎನ್‌ಡಿಎ. ಇವರಿಬ್ಬರಲ್ಲಿ ಯಾರೂ ಆದೀತು.
ಆಯ್ಕೆ ನಿಮ್ಮದು.
oLLe lekhana, pratap!
Yes i agree with the fact that. Either it should be NDA or UPA.
Not the Idiots like Third front…….
They does not have any concern on the development of india.
Olle lekhana.
Simple… desha vannu olle haadiyalli nadeso capacity irorige vote maadi.
Hope everybody not forgoton what ”JDS did in karnataka, and communist did in bengal and did for congrss in nuclear deal and mayavati did..
Everybody has to think 5times before voting..
Hi pratap,
I hope every body knows this why they have gathered and doing all these stupid things. Even though this aimless Devegouda has already been a PM to our nation he couldn’t save his position and now he is struggling in all the ways to get it back. On what morals does he condemn other parties?
All the leaders aiming towards PM’s position are agreegated and ready to spoil this nation.
As we all know mony can buy anything, Please pratap give more awareness to the people of this nation through your articles and help to save the same!!!!!
Thanks alot for very good article..!!
Exactly right… Prathap…
I have a request for you
Raise voice on Media reports!
See Media like CNN-IBN, NDTV, Times of India, TV9(just show whatever other channels showing) have accupied complete place in TV media also Times of INDIA is accupying the Daily news papers.
No one is showing or writing the exact truth, everywhere there is a hole in media’s soul.
Each and every matter has to be considered. There are some internal ajenda’s behind everything.
I feel like going for a Rally against media but i cant because of my own restrictions. But i can join them :). RAISE VOICE on MEDIA. RAISE INDIA.
We have servived 900 +200 years of rule when we were deep in Adyathma. But now its not the case. There is more change needs to be drived.
Remember, we have a Woman and Child welfare minister who say’s PUB BHARO! 🙂 Not a joke when you think of your child.
we have several cruel networks going around, which is smelt everyday. Which scares me.
When EAST WEST NORTH of world is supporting some activities with money why cant our own big ducks cant support this.
How can a Individual can contribute to make my HOME Stronger. Please guide our Youth not by blogs only!!!
Each and every organization should take a good turn so that these media’s can never say a word. Thats a way which every Hindian loves to do instead of fighting.
Lets clean ourself lets clean our home.
People who are reading this, try to discuss this with a youth who supports third front, ok forget it just discuss the problem with one who has seen news and paper and dont have the analysing power or just leads his common thoughts, he will just joke on you.
The problem is MOST of the people see just Headlines and believe it, even i was one for several days. Some people even may be thinking “oh! this time Third front will come for sure” And it may become true only because of these large number of people.
So there is a need for a true Media! which reports these things.
“Dont just throw the ball in darkness and think whichever Fruit falls we will eat. Aim for a fruit.” And here the person who throws the stone is whole INDIA and fruits are NDA, BJP and Third…cl….s.
Presently we cant change the system. But the thing is we can bring front who serves common man’s purpose, but who cares about common man. If we need to get this deeper. Media is the source, HERE I AM NOT ONLY TALKING ABOUT MEDIA BUT ALSO ABOUT THE YOUTHS WHO WANTS TO DRIVE CHANGE THE ORGANIZATIONS WHO WANTS TO SERVE HINDIAN PURPOSE AND the WAY THEY are DRIVING.
Media has the power to change the route of a nation.
Most of the Hindian’s care only for food and shelter, if thats there they dont care whats happening outside. When something happens to same person he cries and fights alone there is no support for him. each and every organization should support him. the organizations behind Hindians is trying to apply they have to be brought out from this trauma. Even i am the same now.
Feel like writing more but its not the time to write or speak. its time to do something. Jago Hindian Jago…
Yaro huduga thuma involve agbittidane ansatha… hagenilla office mugithu manege hogthidini… Lets SUPPORT morally, ORALLy, By Becoming strenth, Financially. Adre nam ee bike ride madakke Mentle galu sikkudre problem, so need to choose a good driver and drive the Driver. 🙂
realy good man…ur correct we want NDA
ಪà³à²°à²¤à²¾à²ªà³……
ಉತà³à²¤à²® ಲೇಖನ…..ಆದರೆ ನಿಮà³à²® ಲೇಖನವನà³à²¨à³ ಓದಿ ಚೆನà³à²¨à²¾à²—ಿದೆ ಅಂದರೆ ಸಾಲದà³. ಅದರಿಂದ ಒಂದಷà³à²Ÿà³ ಪà³à²°à²¯à³Šà²œà²¨à²µà²¾à²—ಬೇಕà³.
ಅದಕà³à²•ಾಗಿ ಪà³à²°à²¤à²¾à²ªà³ ರ ಲೇಖನವನà³à²¨à³‹à²¦à²¿à²¦ ಎಲà³à²² ಸà³à²¨à³‡à²¹à²¿à²¤à²°à²²à³à²²à²¿ ನನà³à²¨à²¦à³Šà²‚ದೠಮನವಿ……ಚà³à²¨à²¾à²µà²£à³†à²¯ ದಿನ ನೀವೆಲà³à²²à²°à³‚ ಓಟೠಮಾದà³à²µà³à²¦à²°à³Šà²‚ದಿಗೆ ನಿಮà³à²®à³†à²²à³à²²à²¾ ಗೆಳೆಯರೂ ಓಟೠಮಾಡà³à²µà²‚ತೆ ಪà³à²°à³‡à²°à³‡à²ªà²¿à²¸à²¿. ನಿಮà³à²®à²‚ತಹಾ ಕಲಿತವರ ಓಟಿನ ಅಗತà³à²¯ ಬಹಳವಿದೆ.
ಪà³à²°à²¤à²¾à²ªà³…………… ಇವರೆಲà³à²²à²¾ ಓಟೠಮಾಡಲೇಬೇಕೆಂಬà³à²¦à²¨à³à²¨à³ ಪರಿಣಾಮಕಾರಿಯಾಗಿ ಹೇಳಲೠದಯವಿಟà³à²Ÿà³ ಒಂದೠಲೇಖನ ಬರೆಯಿರಿ.
woooowwwww superb… hatsoff prathap….
ಇದೊಂದೠಮೂರà³à²–ರ ಗà³à²‚ಪà³,ಇವರಿಗೆ ಓಟೠಹಾಕà³à²µà²µà²°à³ ದೊಡà³à²¡ ಮೂರà³à²–ರà³
ya its true, but i dont think our voters will think so much before voting!
its good to spread the awareness among the people and u r doing a good job in that direction.
ಪà³à²°à²¤à²¾à²ªà³ ಜಿ,.. ಸಮಯೋಚಿತ ’ನಿಜವಾದ’ ಪà³à²°à²¤à²¾à²ªà³ ಸಿ೦ಹರ ಬರಹ, ಧನà³à²¯à²µà²¾à²¦à²—ಳà³.
ಕಳೆದೆರೆಡà³à²®à³‚ರೠವಾರಗಳಿ೦ದ ನಿಮà³à²® ಅ೦ಕಣ ’ಮೋಡಕವಿದ ವಾತಾವರಣ’ ದಿ೦ದಾಗಿ ಮಬà³à²¬à²¾à²—ಿತà³à²¤à³, ಈಗ ಮತà³à²¤à³† ಬಿಸಿಲೠಬ೦ದೠನಳನಳಿಸà³à²¤à³à²¤à²¿à²¦à³†.
ನಿಮà³à²® ಅ೦ಕಣ ಓದà³à²¤à³à²¤à²¿à²¦à³à²¦à³¦à²¤à³† ನನಗೊ೦ದೠಪ೦ಚತ೦ತà³à²°à²¦ ಕಥೆ ಜà³à²¨à³à²¯à²¾à²ªà²•ಕà³à²•ೆ ಬರà³à²¤à²¾ ಇದೆ.
ಒ೦ದೠದಿನ ನರಿ ಕà³à²³à²¿à²¤à³ ಯೋಚಿಸಿತà³, ಸà³à²²à²à²µà²¾à²—ಿ ಆಹಾರ ದೊರಕಿಸಿಕೊಳà³à²³à²¬à³‡à²•ಲà³à²², ಹೇಗೆ? ’ನರಿ’ಯಲà³à²²à²µà²¾, ಚಕà³à²•ನೆ ಉಪಾಯಯೊ೦ದೠಹೊಳೆಯಿತà³. ಅದರ೦ತೆ ಅವರವರ ಗೂಡೊಳಗೆ ಇದà³à²¦ ಬಾತà³à²•ೋಳಿ, ಹಾವೠಮತà³à²¤à³ ಮà³à³¦à²—à³à²¸à²¿à²¯à²¨à³à²¨à³ ಕರೆಯಿತà³. ಅವರೆಲà³à²²à²¾ ’ಆ ಸ೦ದರà³à²à²•à³à²•ೆ’ ಸೇಹಿತರೇ. ನರಿ ಹೇಳಿತೠ“ಇತà³à²¤à³€à²šà³†à²—ೆ ಶತà³à²°à³à²—ಳ à²à²¯ ಜಾಸà³à²¤à²¿ ಆಗà³à²¤à³à²¤à²¿à²¦à³†, ಹಾಗಾಗಿ ನಾವೆಲà³à²²à²¾ ಸà³à²¨à³‡à²¹à²¿à²¤à²°à²¾à²—ಿ ಪಾಳಿಯ ಮೇಲೆ ಸà³à²µà²²à³à²ª ದೂರದಲà³à²²à²¿ ನಿ೦ತೠಕಾವಲೠಕಾಯೋಣ ಶತà³à²°à³ ಬ೦ದ ಕೂಡಲೆ ಸೂಚನೆಕೊಟà³à²Ÿà²°à²¾à²¯à²¿à²¤à³, ಎಲà³à²²à²°à³‚ ಸà³à²°à²•à³à²·à²¿à²¤à²°à²¾à²—ಿರಬಹà³à²¦à³. ಬಾತà³à²•ೋಳಿ “ವಾವà³, ಎ೦ಥಾ ಒಳà³à²³à³† ಉಪಾಯ ನಾನೇ ಮೊದಲ ಪಾಳಿ ಕಾಯà³à²¤à³à²¤à³‡à²¨à³†” ಅ೦ತ ಶà³à²°à³ ಮಾಡಿತà³. ಉಳಿದವೠಅವರವರ ಗೂಡಿಗೆ ಹೋದವà³. ಒ೦ದೆರಡೠತಾಸಿನ ಮೇಲೆ ಹಾವಿನ ಬà³à²¦à³à²¦à²¿ ಜಾಗೃತವಾಯಿತà³, ನಿಧಾನವಾಗಿ ಬಾತà³à²•ೋಳಿಯ ಗೂಡಿಗೆ ಹೋಗಿ ಮೊಟà³à²Ÿà³†à²¯à²¨à³à²¨à³ ನà³à³¦à²—ಿ ವಾಪಸà³à²¸à³ ಬ೦ದೠಎನೂ ಗೊತà³à²¤à³‡ ಇಲà³à²²à²µà³‡à²¨à³‹ ಅನà³à²¨à³à²µà³¦à²¤à³† ಬ೦ದೠಗೊರಕೆ ಹೊಡೆಯತೊಡಗಿತà³. ಇದನà³à²¨à³‡ ಕಾಯà³à²¤à³à²¤à²¿à²¦à³à²¦ ಮà³à³¦à²—à³à²¸à²¿ ಸರಸರನೆ ಹೋಗಿ ಹಾವನà³à²¨à³ ಮà³à²—ಿಸಿ ಸೇಡà³à²¤à³€à²°à²¿à²¸à²¿ ಕೊ೦ಡಿತà³. ಅಷà³à²Ÿà³Šà²¤à³à²¤à²¿à²—ೆ ಬಾತà³à²•ೋಳಿಯ ಪಾಳಿ ಮà³à²—ಿದà³, ಹೋಗಿ ನೋಡಿದಾಗ ಮೊಟà³à²Ÿà³†à²‡à²°à²²à²¿à²²à³à²². ನರಿಯ ಹತà³à²¤à²¿à²° ದೂರೠಹೇಳಿತà³. ನರಿರಾಯ ನೋಡೋಣ ನೆಡೆ ಎನà³à²¤à³à²¤à²¾ ಗೂಡೠಹತà³à²¤à²¿à²° ಬರà³à²¤à³à²¤à²¿à²¦à³à²¦à³¦à²¤à³† ಕೋಳಿಯನà³à²¨à³ ಗà³à²³à³à³¦ ಮಾಡಿತà³! ಇವರೠಸà³à²¨à³‡à²¹à²¿à²¤à²°à³. ನೀತಿ: ದà³à²·à³à²Ÿ ಬà³à²¦à³à²¦à²¿à²¯à³à²³à³à²³à²µà²°à³ ಪರಸà³à²ªà²° ಎ೦ದೂ ನ೦ಬಿಕೆಗೆ ಅರà³à²¹à²°à²²à³à²².
ಈ ಕಥೆ ಇಡೀ ತೃತೀಯ ರ೦ಗವನà³à²¨à³ represent ಮಾಡà³à²¤à³à²¤à²¦à³†. ಇಲà³à²²à²¿ ನರಿ ಯಾರೆ೦ದೠಕನà³à²¨à²¡ ಮಣà³à²£à²¿à²¨à²²à³à²²à²¿ ಹà³à²Ÿà³à²Ÿà²¿à²¦à²µà²°à³†à²²à³à²²à²°à²¿à²—ೂ ಗೊತà³à²¤à²¿à²°à²²à³‡à²¬à³‡à²•à³. ಚà³à²¨à²¾à²µà²£à³† ಬ೦ದ ಕೂಡಲೆ ಎಲà³à²²à²¾ ಒಟà³à²Ÿà³à²—ೂಡà³à²µà³à²¦à³, ದೊ೦ಬಿ ಮಾಡà³à²µà³à²¦à³, ಅನಾವಶà³à²¯à²•ವಾಗಿ ಮೆತà³à²¤à²—ಿರà³à²µà²µà²°à²¨à³à²¨à³ ಬಯà³à²¯à³à²µà³à²¦à³, ಸಮಾಜದಲà³à²²à²¿ ಒಡಕà³à³¦à²Ÿà³à²®à²¾à²¡à³à²µà³à²¦à³, ಹೇಗೋ ನಾಲà³à²•ೠಸೀಟೠಗಿಟà³à²Ÿà²¿à²¸à³à²µà³à²¦à³, ನಿರà³à²£à²¾à²¯à²• ವಿಶà³à²µà²¾à²¸ ಮತದಲà³à²²à²¿ ಲಾà²à²ªà²¡à³†à²¦à³ à²à²¦à³ ವರà³à²· ಸಣà³à²£-ಪà³à²Ÿà³à²Ÿ ಗಲà²à³† ಮಾಡà³à²¤à³à²¤à²¾, ಹಣ ಬೇಕಾದಾಗೆಲà³à²²à²¾ ’ಬೆ೦ಬಲ ವಾಪಸà³à²¸à³â€™ ಅ೦ತ press statement ಕೊಟà³à²Ÿà³ ಕರಡಿ ಬೆದರೠತೋರಿಸà³à²¤à³à²¤à²¾, ಹಫà³à²¤à²¾ ತರ ಬಾಚಿಕೊಳà³à²³à³à²¤à³à²¤à²¾ ಸà³à²µà²¿à²¸à³ ಬà³à²¯à²¾à³¦à²•ಲà³à²²à²¿ ಜಮಾ ಮಾಡà³à²¤à³à²¤à²¾ ವೋಟೠಹಾಕಿದವನನà³à²¨ ಹಾಡà³à²¹à²—ಲೇ ದರೋಡೆ ಮಾಡà³à²µà³à²¦à³. ಇಷà³à²Ÿà³‡ ಇವರ ಗà³à²°à²¿, ಅಜೆ೦ಡಾ.
ಇವರ ಹಾರಾಟ à²à²¨à²¿à²¦à³à²¦à²°à³‚ ಚà³à²¨à²¾à²µà²£à³†à²—ೆ ಮೊದಲà³. ನ೦ತರ ಅವರವರ ಹಳೆ ಚಾಳಿ ಶà³à²°à³. ಯಾರೠಹಣಜಾಸà³à²¤à²¿ ಕೊಡà³à²¤à³à²¤à²¾à²°à³‹ ಅವರ ಕಡೆಗೆ ಒಲವà³, ಮತದಾರನ ಹರಾಜà³.
ಇವರ ಈ ದà³à²·à³à²Ÿ ಕೂಟಕà³à²•ೆ ಇನà³à²¨à³‚ ಕೆಲವೠvery much fit ಎಡಬಿಡ೦ಗಿಗಳಾದ ಕರà³à²¨à²¾à²Ÿà²•ದ ಖಳಸೇಕರ, ಸà³à²¸à²¾à²°à²¿…, ಕà³à²²à²¶à³‡à²–ರ (ಕಾಗೆ) ಬ೦ಗಾರಪà³à²ª, ಟಾಟಾದವರ ಮೇಲೆ ಒ೦ಚೂರೂ ಮಮತೆ ಇಲà³à²²à²¦ ಬ೦ಗಾಳದ ದà³à²·à³à²Ÿà²¶à²•à³à²¤à²¿, ಸಮಯಾಧಾರಿತ ಮà³à²²à²¾à²®à³ ಹಚà³à²šà³à²µ ರೀತಿ-ನೀತಿಯಿಲà³à²²à²¦ ಯಾದವà³, ಸà³à²³à³à²³à³à²¹à²³à²¿à²—ಳ ಮೇಲೇ ರೈಲೠಓಡಿಸà³à²µ ಮತà³à²¤à³Šà³¦à²¦à³ ಬà³à²°à²·à³à²Ÿ ಯಾದವà³, ಕà³à²°à²¿à²•ೆಟೠಸ೦ಸà³à²¥à³†à²¯à²¨à³à²¨à³ ಗಬà³à²¬à³†à²¬à³à²¬à²¿à²¸à²²à³ ಪà³à²°à²¯à²¤à³à²¨à²¿à²¸à²¿à²¦ ಶರತà³à²¤à³ ಹಾಕà³à²µ ಪವಾರೠ(ಗಮಾರà³?) ….. ಇನà³à²¨à³‚ ಕೆಲವೠಚೋಟ-ಮೋಟ ನಾಯಕರೆ೦ದೠಕೊ೦ಡೠತನಗೆ ಜಾತಿವೋಟೠಇದೆ ಎ೦ದೠಹೇಳಿಕೊಳà³à²³à³à²¤à³à²¤à²¾ ಪà³à²°à²œà²¾à²ªà³à²°à²à³à²¤à³à²µà²µà²¨à³à²¨à³‡ ನಾಶಮಾಡà³à²µ ಗಬà³à²¬à³ ನಾಯಕರà³à²—ಳೠಯಾಕೆ ಸೇರಿಕೊಳà³à²³à²²à²¿à²²à³à²²à²µà³‹ ಬಹà³à²¶à²ƒ ಈ ತೃತೀಯ ರದà³à²¦à²¿à²•ೂಟಕà³à²•ೇ ಇನà³à²¨à³‚ ಚಿದ೦ಬರ ರಹಸà³à²¯ ಆಗಿರಬಹà³à²¦à³?!
ಕà³à²°à²¿à²•ೆಟà³à²Ÿà²¿à²¨ ಗಟà³à²Ÿà²¿à²— ಅಮರನಾಥರ à²à²¾à²·à³†à²¯à²²à³à²²à³‡ ಹೇಳಬೇಕೆ೦ದರೆ ಇವರೆಲà³à²²à²¾ ಒ೦ದೠ” bunch of jokers “.
ಚà³à²¨à²¾à²µà²£à²¾ ವೇಳೆಯಲà³à²²à²¿ ಹಣ ಮತà³à²¤à³ ಹೆ೦ಡವೇ ಮà³à²–à³à²¯à²µà²¾à²—ಿರà³à²µ ’ಅಸಾಮಾನà³à²¯ ಬà³à²¦à³à²§à²¿à²µà³¦à²¤â€™à²°à²¾à²¦ ನಮà³à²® ದೇಶಬ೦ಧೠಮತದಾರರೠಇವರಲà³à²²à²¿ ಹಲವರನà³à²¨à³ ಮತà³à²¤à³† ಸಿ೦ಹಾಸನಾರೂಡರನà³à²¨à²¾à²—ಿ ಮಾಡಿದರೆ ಖ೦ಡಿತಾ ಆಶà³à²šà²°à³à²¯ ಪಡಬೇಡಿ, ಅದೠಅತà³à²¯à³¦à²¤ ಸಹಜ ವಿಷಯ. ನಾವೠ2020ರಲà³à²²à²¿ super power!, ಕಲಾಮೠಎಷà³à²Ÿà³ ದೊಡà³à²¦ ಹಾಸà³à²¯ ಮಾಡಿದರà³!!
Plese remember, world is watching at us…..
Dear Pratap,
Well written, I am sure we better think and vote responsibly this time. Just a suggestion, please write series of articles until elections to highlight the good/improvement work done by both Congress & NDA. May be this will make people think whom we should choose as our next government. It would be great if the electrol agenda of each party could also be a topic of discssion.
Thanks for an informative article! hope see more on this one until elections.
Hai Pratap,
very Good Atricle
All Indians gives a first preference to NDA
ಹಾಯೠಪà³à²°à²¤à²¾à²ªà³,
ಒಂದೠತà³à²‚ಬಾ ಒಳà³à²³à³†à²¯ ಲೇಖನವನà³à²¨à³ ಬರೆದಿದà³à²¦à³€à²°à²¿. ತೃತೀಯ ರಂಗದ ಕà³à²¤à²‚ತà³à²° ರಾಜಕಾರಣದ, ರಾಜಕಾರಣಿಗಳ ನಿಜ ಬಣà³à²£à²µà²¨à³à²¨à³ ಬಯಲೠಮಾಡಿದà³à²¦à³€à²°. ನನಗೆ ಒಂದೠವಿಚಾರ ಗೊತà³à²¤à²¾à²—à³à²¤à³à²¤à²¿à²²à³à²² ಅಂದರೆ à²à²µà³à²¯ à²à²¾à²°à²¤à²¦ ಪà³à²°à²¦à²¾à²¨à²®à²‚ತà³à²°à²¿ ಸà³à²¥à²¾à²¨à²•à³à²•ೆ ಇವರà³à²—ಳೆಲà³à²² ನಾ ಮà³à²‚ದೠತಾ ಮà³à²‚ದೠಎಂದೠಕಡಿದಾಡà³à²¤à²¿à²°à³à²µà³à²¦à²¨à³à²¨à³ ನೋಡಿದರೆ ನಗà³à²µà³à²¦à³‹ ಅಳà³à²µà³à²¦à³‹ ಗೊತà³à²¤à²¾à²—à³à²¤à³à²¤à²¿à²²à³à²²à²¾……ಪà³à²°à²¦à²¾à²¨à²®à²‚ತà³à²°à²¿ ಸà³à²¥à²¾à²¨à²•à³à²•ೆ ಇವರಿಗೆ ಆಗಲೇ ಮತದಾರ ಪà³à²°à²à³ ಒಪà³à²ªà²¿à²—ೆ ಸೂಚಿಸಿದà³à²¦à²¾à²¨à³†à²¯à³‡. ಅಥವಾ ಪà³à²°à²¦à²¾à²¨à²®à²‚ತà³à²°à²¿ ಸà³à²¥à²¾à²¨ à²à²¨à³ ಇವರ ಸà³à²µà²‚ತ ಆಸà³à²¤à²¿à²¯à³‚ ? ಗೊತà³à²¤à²¾à²—à³à²¤à³à²¤à²¿à²²à³à²²à²¾…. ಈ ರಂಗದಲà³à²²à²¿à²°à³à²µ ಯಾರಿಗೂ ಪà³à²°à²¦à²¾à²¨à²®à²‚ತà³à²°à²¿ ಸà³à²¥à²¾à²¨à²•à³à²•ೆ à²à²°à³à²µ ಅರà³à²¹à²¤à³† ಇಲà³à²². ಒಟà³à²Ÿà²¿à²¨à²²à³à²²à²¿ ಒಂದಂತೠಸತà³à²¯ ಈ ತೃತೀಯ ರಂಗಕà³à²•ೆನಾದರೠಅಧಿಕಾರ ಸಿಕà³à²•ರೆ ದೇಶವನà³à²¨à³ ಹಾಳೠಮಾಡà³à²µà³à²¦à²‚ತೂ ಶತಸಿದà³à²§…..ಕೊನೆಗೆ ನೀವೠಹೇಳಿದ ಹಾಗೆ “ತೃತೀಯ ರಂಗಕà³à²•ೆ ಅಧಿಕಾರ: ದೇಶದ ತà³à²‚ಬ ಹಾಹಾಕಾರ ……, ಇದà³à²¦à²¦à²°à²²à³à²²à²¿ B J P (ಎನೠಡಿ ಎ) ಸೂಕà³à²¤, ಮತದಾರರೇ ಎಚà³à²šà²°..
ಓ à²à²¾à²°à²¤ ಮಾತೆ ಇಂಥಾ ನೀತಿಗೆಟà³à²Ÿ ರಾಜಕಾರಣಿಗಳಿಂದ ನಮà³à²®à²¨à³à²¨à³ ರಕà³à²·à²¿à²¸à³ ರಕà³à²·à²¿à²¸à³……..,
Our choice is to select BEST among WORST !!!!
the president and the prime minister represent the whole nation.so i think, such a prime minister should be elected who represents the developing INDIA. enough,we don’t want any puppet as our P.M who can’t take any decisions without asking ‘high command’……….
let the NDA win……..let ADVANI be the P.M……..
nice article sir… rightly said…..
ಗà³à²®à²¾à²¸à³à²¤à²°à²¾à²—ಲೠಲಾಯಕà³à²•ಿಲà³à²²à²¦à²µà²°à³†à²²à³à²² ಜನನಾಯಕರಗಲೠಹೊರಟಿರà³à²µà³à²¦à³ ಹಾಸà³à²¯à²¾à²¸à³à²ªà²¦. ಜನಗಳೠಇನà³à²¨à³ ಮà³à²‚ದಾದರೠವಿದà³à²¯à²¾à²µà²‚ತರನà³à²¨à³,ಬà³à²¦à³à²¦à²¿à²µà²‚ತರನà³à²¨à³, ದೇಶದ ಹಿತದ ಬಗà³à²—ೆ ಪà³à²°à²¾à²®à²¾à²£à²¿à²• ಕಾಳಜಿಯà³à²³à³à²³ ನಾಯಕರನà³à²¨à³ ಗೆಲà³à²²à²¿à²¸à²¬à³‡à²•à³.
ಅಮೆರಿಕದ ಚà³à²¨à²¾à²µà²£à³† ನಂತರ,ಪà³à²°à²ªà²‚ಚದಾದà³à²¯à²‚ತ ಅತà³à²¯à²‚ತ ಕà³à²¤à³‚ಹಲಕಾರಿ ಚà³à²¨à²¾à²µà²£à³† à²à²¾à²°à²¤à²¦à³à²¦à³.ಇಡಿ ವಿಶà³à²µà²µà³‡ ಫಲಿತಾಂಶಕà³à²•ಾಗಿ ಕಾತರದಿಂದಿದೆ. ಅà²à²¿à²µà³ƒà²¦à³à²¦à²¿ ಪಥದಲà³à²²à²¿à²°à³à²µ ನಮà³à²® ದೇಶಕà³à²•ೆ ಸೂಕà³à²¤ ಪಕà³à²·,ಪà³à²°à²§à²¾à²¨à²¿à²¯à²¨à³à²¨à³ ಚà³à²¨à²¾à²¯à²¿à²¸à³à²µ ಜವಾಬà³à²¦à²¾à²°à²¿ ಎಲà³à²² à²à²¾à²°à²¤à³€à²¯à²¨ ಆದà³à²¯ ಕರà³à²¤à²µà³à²¯.
Hello Prathap,
Nice article, Your points have to reach masses, particularly old mysuru region which is JD(s) belt. People should not vote for 3rd class front. I don’t have to elaborate on what the soil son HDD has done for the country.
The need of the hour is all of us to execute our right to vote, ensure we achieve 80 ~ 85% voting in the upcoming elections. Vote out 3rf front and choose either UPA/NDA.
UPA is again is hungry for power, and its sure that Dr. MMS will not continue, and i don’t want SG/RG to lead India and some idiot like Shivraj Patil or Naveen Chawla or some one close to Gandhi family will come into power and be puppet in the hands of Mrs. SG.
And bacha kaun NDA, in the absence of Mr. ABVP, it will be extremely difficult for Mr. LKA to run the coalition. With deepening internal crisis within BJP, this election will not sail smooth for NDA. My concern is provided NDA comes to power, what is the guaranteed that new govt won’t act like the current BJP govt in state. Karnataka Govt is acting like “ಅಲà³à²ªà²¨à³€à²—ೆ à²à²¶à³à²µà²°à³à²¯ ಬಂದà³à²°à³† ಅರà³à²§ ರಾತà³à²°à²¿à²¯à²²à²¿ ಕೊಡೆ ಹಿಡಿದ ಹಾಗೆ”.
But still I give chance to NDA, because Mr. LKA deserves a chance, for all his struggle in his life and this will be his last chance.
Regards
Pravs
Advani for PM
hi pen gun, it is really the time has come to eliminate these third grade front from our nation and DEVE gowda has plan to lift his son to nation politics as next 4-5 years no work here and his assumption/illusion is if third class front comes to power kumarswamy will get ministership and then BUDDA Devve gowda can get control over state and start to write his famous LOVE LETTERS to central government ahhhh!!!!! what an idea!!!
ನಮಸà³à²•ಾರ ಪà³à²°à²¤à²¾à²ªà²°à³‡,
ಇದೠತà³à²‚ಬಾ ಒಳà³à²³à³†à²¯ ಲೇಖನ. ಈ ಲೇಖನ ಪà³à²°à²¤à²¿à²¯à³Šà²¬à³à²¬ à²à²¾à²°à²¤à³€à²¯à²¨à²¿à²—ೂ ತಲà³à²ªà²¬à³‡à²•à³. ಆಗಲೇ ನಿಮà³à²® ಶà³à²°à²® ಸಾರà³à²¥à²•.
ಧನà³à²¯à²µà²¾à²¦à²—ಳà³!
ನಮಸà³à²•ಾರ ಪà³à²°à²¤à²¾à²ªà²°à³‡,
ಇದೠತà³à²‚ಬಾ ಒಳà³à²³à³†à²¯ ಲೇಖನ. ಇದೠThird-Front ಅಲà³à²², ಅಧಿಕಾರಕà³à²•ಾಗಿ ಕಾಯà³à²¤à³à²¤à²¿à²°à³à²µ “Thirst-Front”. ಆದà³à²¦à²°à²¿à²‚ದ ಈ ಲೇಖನ ಪà³à²°à²¤à²¿à²¯à³Šà²¬à³à²¬ à²à²¾à²°à²¤à³€à²¯à²¨à²¿à²—ೂ ತಲà³à²ªà²¬à³‡à²•à³. ಆಗಲೇ ನಿಮà³à²® ಶà³à²°à²® ಸಾರà³à²¥à²•.
ಧನà³à²¯à²µà²¾à²¦à²—ಳà³!
ur articles keep alarming the sleepy citizens of india… Right points at the Right time..
simply superb.
“ಅಕà³à²•” ಮಾಯಾವತಿ …ಆವಾಗಲೇ ತೃತೀಯ-ರಂಗದಿಂದ ದೂರ ಹೋಗಾಯಿತà³. ಉಳಿದವರಲà³à²²à²¿ ಇತರ ಮೂರೠಪಕà³à²·à²—ಳೠಆಗಲೇ ನಾಲà³à²•ನೆ-ರಂಗ ಮಾಡಿದà³à²¦à³à²†à²¯à²¿à²¤à³ …ಇವರೆಲà³à²² ಸೇರಿ ನಮà³à²® ದೇಶನ ಆಳà³à²¤à²¾à²°à²‚ತೆ…ನಾವೆಲà³à²²à²¾ ಇವರಿಗೆ ವೋಟೠಹಾಕಬೇಕಂತೆ…ಎಂತ ತಮಾಷೆ…