Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅನ್ನಕ್ಕಾಗಿ ಕೈಯೊಡ್ಡುತ್ತಿದ್ದವರಿಗೆ ಅಣುಶಕ್ತಿಯ ಆಸೆ ತೋರಿದ ನಿಮ್ಮನ್ನು ಮರೆಯಲಾದೀತೆ?

ಅನ್ನಕ್ಕಾಗಿ ಕೈಯೊಡ್ಡುತ್ತಿದ್ದವರಿಗೆ ಅಣುಶಕ್ತಿಯ ಆಸೆ ತೋರಿದ ನಿಮ್ಮನ್ನು ಮರೆಯಲಾದೀತೆ?

(Photo: Albert Einstein, Hideki Yukawa, John Archibald Wheeler, Homi Jehangir Bhabha)

ನೀವೇಕೆ ಮದುವೆ ಆಗಲೇ ಇಲ್ಲ?

ಅಂತ ಕೇಳಿದರೆ “I am married to creativity” ಎನ್ನುತ್ತಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ವ್ಯಕ್ತಿಯ ಬಾಯಿಂದ ಬರುವ, ಬರಬೇಕಾದ ಮಾತುಗಳು ಅವಾಗಿರಲಿಲ್ಲ. ಅಪ್ಪ ಜಹಾಂಗೀರ್ ಹರ್ಮ್‌ಜಿ ಭಾಭಾ ಬ್ರಿಟನ್‌ನ ಆಕ್ಸ್‌ಫರ್ಡ್‌ನಲ್ಲಿ ಕಲಿತ ಖ್ಯಾತ ವಕೀಲ. ಅಜ್ಜ ಹರ್ಮುಸ್ಜಿ ಭಾಭಾ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯಸ್ಥ. ಅಮ್ಮ ಮೆಹರ್‌ಬಾಯಿ ಜಗದ್ವಿಖ್ಯಾತ ಟಾಟಾ ಕುಟುಂಬದ ಸಂಬಂಧಿ. ಜತೆಗೆ ಪಾರ್ಸಿಗಳು ಆ ಕಾಲಕ್ಕೆ ತೀರಾ Westernised ಆಗಿದ್ದರು.

ಇಂತಹ ಹಿನ್ನೆಲೆಯೊಂದಿಗೆ 1909, ಅಕ್ಟೋಬರ್ 30ರಂದು ಜನಿಸಿದವರೇ ಹೋಮಿ ಜಹಾಂಗೀರ್ ಭಾಭಾ. ಬಾಲ್ಯಾವಸ್ಥೆಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಚಿಂತಿತರಾದ ಅಪ್ಪ-ಅಮ್ಮ ಬಹಳ ಜನ ಹೆಸರಾಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ಆದರೆ ಹೋಮಿ ಭಾಭಾಗೇಕೆ ನಿದ್ರೆ ಬರುತ್ತಿಲ್ಲ ಅಥವಾ ಹೋಮಿ ಭಾಭಾ ಏಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬುದು ಮಾತ್ರ ತಿಳಿಯಲಿಲ್ಲ. ಎಲ್ಲ ವಿಧದ ಪರೀಕ್ಷೆಗಳಿಗೂ ಒಳಪಡಿಸಿದ ವೈದ್ಯರು, ಈತ ಆರೋಗ್ಯದಿಂದಿದ್ದಾನೆ, ಭಯಪಡಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ಹೇಳಿ ಕಳುಹಿಸಿದರು. ಆದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಢ ಚಿಂತನೆಯಲ್ಲಿ ತೊಡಗಿದ್ದುದು ನಿದ್ರಾಹೀನತೆಗೆ ಕಾರಣವಾಗಿತ್ತು.

1916ರಲ್ಲಿ ಬಾಂಬೆಯ ಹೆಸರಾಂತ ಕೆಥೆಡ್ರಲ್ ಸ್ಕೂಲ್ ಸೇರಿದ ಭಾಭಾ ವ್ಯಾಸಂಗ ಆರಂಭಿಸಿದರು. ಆನಂತರ 1922ರಲ್ಲಿ ಜಾನ್ ಕ್ಯಾನನ್ ಸ್ಕೂಲ್ ಸೇರಿದ ಅವರು, 15ನೇ ವಯಸ್ಸಿಗೆ ಎಲ್ಫಿನ್‌ಸ್ಟನ್ ಕಾಲೇಜು ಮೆಟ್ಟಿಲೇರಿದರು. ಕೇಂಬ್ರಿಡ್ಜ್  ವಿಶ್ವ ವಿದ್ಯಾಲಯ ನಡೆಸುವ ಪ್ರತಿಭಾ ಪರೀಕ್ಷೆಯಲ್ಲಿ ಪಾಸಾದ ಭಾಭಾಗೆ ವಿದ್ಯಾರ್ಥಿ ವೇತನ ದೊರೆಯಲಾರಂಭಿಸಿತು. ವಿeನಿಯಾಗುವ ಕನಸು ಕಾಣಲಾರಂಭಿಸಿದರು. ಆದರೆ ಅಪ್ಪ ಹಾಗೂ ಅಂಕಲ್ ಸರ್ ದೊರಾಬ್ ಜೆ. ಟಾಟಾ ಅವರ ಯೋಚನೆ ಇನ್ನೇನೋ ಆಗಿತ್ತು. ಮಗನನ್ನು ಎಂಜಿನಿಯರಿಂಗ್ ಓದಿಸಿ ಜೆಮ್‌ಷೆಡ್‌ಪುರದಲ್ಲಿರುವ “ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ”ಗೆ ಕೆಲಸಕ್ಕೆ ಸೇರಿಸುವ ತವಕ ಅವರದ್ದು. ಆದರೆ ಕುಪಿತರಾದ ಹೋಮಿ ಭಾಭಾ ಅಪ್ಪನಿಗೆ ಪತ್ರವೊಂದನ್ನು ಬರೆದರು.

“ನಾನು ಬಹಳ ಗಂಭೀರವಾಗಿ ನಿಮಗೆ ಹೇಳುತ್ತಿದ್ದೇನೆ. ಈ ಉದ್ಯಮ ಅಥವಾ ಎಂಜಿನಿಯರಿಂಗ್ ನನಗೆ ಹಿಡಿಸುವ ವಿಚಾರವಲ್ಲ. ನನ್ನ ಮನಸ್ಥಿತಿಗೂ ಈ ವಿಚಾರಗಳಿಗೂ ಹೋಲಿಕೆಯೇ ಆಗುವುದಿಲ್ಲ. ಭೌತಶಾಸ್ತ್ರವೇ ನನ್ನ ಕ್ಷೇತ್ರ. ಈ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಲ್ಲೆ ಎಂದು ನನಗೆ ಗೊತ್ತು. ಪ್ರತಿಯೊಬ್ಬ ಮನುಷ್ಯನೂ ಆತ ಇಷ್ಟಪಡುವ ಕ್ಷೇತ್ರದಲ್ಲಿ ಮಾತ್ರ ಅಮೋಘ ಸಾಧನೆ ಮಾಡಲು ಸಾಧ್ಯ. ಆತ ಹುಟ್ಟಿದ್ದು ಆ ಕಾರಣಕ್ಕಾಗಿಯೇ ಹಾಗೂ ವಿಧಿ ಬರೆದಿರುವುದೂ ಅದನ್ನೇ. ಅವನು, ಇವನು, ಯಾವನೋ ಹೇಳಿದ್ದರ ಮೇಲೆ ನನ್ನ ಭವಿಷ್ಯ ಅವಲಂಬಿತವಾಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಪರಿಶ್ರಮದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಅದೂ ಅಲ್ಲದೆ ವಿeನಕ್ಕೆ ಒಲ್ಲದ ಜಾಗ ಭಾರತವೆಂದೇನೂ ಅಲ್ಲ. ಭೌತಶಾಸ್ತ್ರದ ಬಗ್ಗೆ ನನ್ನಲ್ಲಿ ಉತ್ಕಟ ತುಡಿತವಿದೆ. ನಾನು ಅದನ್ನೇ ಓದುತ್ತೇನೆ, ಅದೇ ನನ್ನ ಮಹತ್ವಾಕಾಂಕ್ಷೆ. ಒಂದು ದೊಡ್ಡ ಕಂಪನಿಯ ಯಶಸ್ವಿ ಮುಖ್ಯಸ್ಥನಾಗುವ ಯಾವ ಆಸೆಗಳೂ ನನ್ನಲ್ಲಿಲ್ಲ. ‘ಮಹಾನ್ ಸಾಧನೆಗಾಗಿ ನೀನು ವಿeನಿಯಾಗಬೇಕೆಂದು’ ಬೀಥೋವನ್‌ಗೆ, ‘ನೀನು ಎಂಜಿನಿಯರ್ ಆಗು, ಅದು ಬುದ್ಧಿವಂತರು ಮಾಡುವ ಕೆಲಸ’ ಎಂದು ಸಾಕ್ರೆಟಿಸ್‌ಗೆ ಹೇಳಿದ್ದರೆ ಹೇಗೆ ಯಾವ ಉಪ ಯೋಗವೂ ಆಗುತ್ತಿರಲಿಲ್ಲವೋ, ಕೆಲವು ಬುದ್ಧಿವಂತರೂ ಹಾಗಿರುತ್ತಾರೆ, ಅವರನ್ನು ಹಾಗೆಯೇ ಬಿಡಿ.  ನಿಮ್ಮನ್ನು ವಿನೀತನಾಗಿ ಕೇಳಿಕೊಳ್ಳುತ್ತೇನೆ, ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಿ”.

ಇಂತಹ ಪತ್ರವನ್ನು ಓದಿದ ಹರ್ಮ್‌ಜಿಗೆ ಮಗನ ತುಡಿತ ಅರ್ಥವಾಯಿತು.

ಹಾಗಂತ ಪಟ್ಟು ಸಡಿಸಲಿಲ್ಲ. ಒಂದು ವೇಳೆ ನೀನು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದರೆ ‘ಥಿಯರಿಟಿಕಲ್ ಫಿಸಿಕ್ಸ್’ನಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವುದಾಗಿ ಪೂರ್ವ ಷರತ್ತು ಹಾಕಿದರು. ಅಪ್ಪನ ಆಸೆಯಂತೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಸೇರಿದ ಹೋಮಿ ಭಾಭಾ, ೧೯೩೦ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರೈಸಿದರು. ಆದರೆ ಭೌತಶಾಸ್ತ್ರದ ವ್ಯಾಮೋಹ ಹೊರಟು ಹೋಗಿರಲಿಲ್ಲ. ಅಪ್ಪ ಮಾತಿನಂತೆ ನಡೆದುಕೊಂಡರು, ಭಾಭಾಗೆ ತನಿಗಿಷ್ಟಬಂದ ವಿಷಯವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಮೊದಲಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೇ ಗಣಿತಶಾಸ್ತ್ರದ ಅಧ್ಯಯನವನ್ನು ಆರಂಭಿಸಿದರು. ರಾಸ್ ಬಾಲ್ ಪ್ರವಾಸಿ ವಿದ್ಯಾರ್ಥಿ ವೇತನ ದೊರೆಯಿತು. ಯುರೋಪ್‌ಗೆ ಪ್ರವಾಸ ಮಾಡಿ, ವುಲ್ಫ್‌ಗ್ಯಾಂಗ್ ಪೌಲಿ, ಎನ್ರಿಕೋ ಫೆರ್ಮಿ ಮುಂತಾದವರ ಜತೆ ಅಧ್ಯಯನ ನಡೆಸುವ ಅವಕಾಶ ಸಿಕ್ಕಿತು. ಹೀಗೆ, ಮುಂದೆ ನೊಬೆಲ್ ಪುರಸ್ಕಾರ ಪಡೆದ ಪಾಲ್ ಆಡ್ರಿಯನ್ ಮಾರಿಸ್ ಡಿರಾಕ್ ಅವರ ಕೈಕೆಳಗೆ ೧೯೩೨ರಿಂದ ೩೪ರವರೆಗೂ ಎರಡು ವರ್ಷ ಗಣಿತವನ್ನು ಅಧ್ಯಯನ ಮಾಡಿದ ಭಾಭಾ ಅಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಈ ಮಧ್ಯೆ, ೧೯೩೩ರಲ್ಲಿ ಪ್ರಕಟವಾದ ಭಾಭಾ ಅವರ ಮೊಟ್ಟಮೊದಲ ಸಂಶೋಧನಾ ಪ್ರಬಂಧಕ್ಕೆ ಐಸಾಕ್ ನ್ಯೂಟನ್ ‘ಸ್ಟುಡೆಂಟ್‌ಶಿಪ್’ ಸಿಕ್ಕಿತ್ತು. ಕೂಪನ್‌ಹೇಗನ್‌ನಲ್ಲಿ ನೀಲ್ ಬೋರ್ ಜತೆ ಸಂಶೋಧನೆ ಮಾಡುವ ಅವಕಾಶವೂ ಲಭ್ಯವಾಗಿತ್ತು. ಪ್ರಖ್ಯಾತ ಕ್ಯಾವೆಂಡಿಶ್ ಪ್ರಯೋಗಾಲಯ ಸೇರಿದ ಭಾಭಾ, ಅಣು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. 1937ರಲ್ಲಿ ಹೀತ್ಲರ್ ಜತೆ ಸೇರಿ ಮಂಡಿಸಿದ “Cascade Theory of Electron” ಮಹಾಪ್ರಬಂಧ, ಆಂತಿಮವಾಗಿ “Bhabha-Heitler Cascade Theory” ಎಂದೇ ಪ್ರಸಿದ್ಧಿ ಪಡೆಯಿತು. ಹೀಗೆ ರುದರ್‌ಫೋರ್ಡ್, ಹೀತ್ಲರ್, ನೀಲ್ ಬೋರ್, ಡಿರಾಕ್ ಜತೆ ಕಳೆದ ಸಮಯ, ನಡೆಸಿದ ಸಂಶೋಧನೆ ಭಾಭಾ ಅವರ ಜೀವನ ಹಾಗೂ ಯೋಚನೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಮದುವೆಯ ಆಸೆಯನ್ನೇ ಬಿಟ್ಟು, ಸಂಶೋಧನೆಯನ್ನೇ ಕೈಹಿಡಿದರು!

ಮನುಕುಲ ಕಂಡ ಮಹಾಪಾಪಿ ಅಡಾಲ್ಫ್ ಹಿಟ್ಲರ್‌ಗೂ ಕೆಲವೊಮ್ಮೆ ಥ್ಯಾಂಕ್ಸ್ ಹೇಳಬೇಕೆನಿಸಿ ಬಿಡುತ್ತದೆ!!

ಒಂದೆಡೆ ಬ್ರಿಟನ್‌ನಲ್ಲಿ ಸಂಶೋಧನೆ ಮಾಡಿಕೊಂಡಿದ್ದ ಭಾಭಾ ಒಂದಿಷ್ಟು ದಿನಗಳಿಗಾಗಿ ರಜೆ ಕಳೆಯಲು 1939ರಲ್ಲಿ ಭಾರತಕ್ಕೆ ಬಂದಿದ್ದರು. ಇನ್ನೊಂದೆಡೆ ಭೌತಶಾಸ್ತ್ರದಲ್ಲಿಯೇ ಪದವಿ ಪೂರೈಸಿ, ‘ಕ್ಲೌಡ್ ಚೇಂಬರ್’ ಸಂಶೋಧಕ ಸಿ.ಟಿ.ಆರ್. ವಿಲ್ಸನ್ ಕೈಕೆಳಗೆ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿಯೇ ಸಂಶೋಧನೆ ನಡೆಸಲು ತಯಾರಿ ಮಾಡಿಕೊಂಡಿದ್ದ ಪ್ರಶಾಂತ ಚಂದ್ರ ಮಹಲ ನೋಬಿಸ್ ಕೂಡ ರಜೆ ಕಳೆಯಲು ಅದೇ ಸಮಯಕ್ಕೆ ಭಾರತಕ್ಕೆ ಆಗಮಿಸಿದ್ದರು.

ಎರಡನೇ ಮಹಾಯುದ್ಧ ಆರಂಭವಾಯಿತು!

ಬ್ರಿಟನ್‌ನಲ್ಲಿದ್ದ ವಿeನಿಗಳೂ ಕೂಡ ಯುದ್ಧ ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೇಂಬ್ರಿಡ್ಜ್‌ನಲ್ಲಿ ಸಂಶೋಧನೆಯನ್ನು ಮುಂದು ವರಿಸಬೇಕೆಂದುಕೊಂಡಿದ್ದ ಭಾಭಾ ತಮ್ಮ ಉದ್ದೇಶವನ್ನೇ ಕೈಬಿಡಬೇಕಾಗಿ ಬಂತು. ಅಂದು ಹಿಟ್ಲರ್ ಆರಂಭಿಸಿದ ಯುದ್ಧ ತಂದಿಟ್ಟ ಅನಿವಾರ್ಯತೆಯಿಂದಾಗಿ ಭಾಭಾ ಹಾಗೂ ಮಹಲನೋಬಿಸ್ ಭಾರತದಲ್ಲೇ ಉಳಿದುಕೊಳ್ಳುವ ನಿರ್ಧಾರ ಕೈಗೊಂಡರು. ಅದರಿಂದ ನಮ್ಮ ದೇಶದ ಭವಿಷ್ಯವೇ ಬದಲಾಗುವಂತಾಯಿತು. ೧೯೪೦ರಲ್ಲಿ ಹೋಮಿ ಭಾಭಾ ಅವರ ಸಲುವಾಗಿಯೇ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಭಾರತೀಯ ವಿeನ ಮಂದಿರ-ಐಐಎಸ್‌ಸಿ)ನಲ್ಲಿ ‘ಥಿಯೋರಿಟಿಕಲ್ ಸೈನ್ಸ್’ ಎಂಬ ವಿಭಾಗ ತೆರೆದು, ರೀಡರ್ ಹುದ್ದೆಯನ್ನು ಸೃಷ್ಟಿಸಿಕೊಟ್ಟರು. ಆಗ ಭಾರತೀಯ ವಿeನ ಮಂದಿರದ ನಿರ್ದೇಶಕರಾಗಿದ್ದವರು ಮತ್ತಾರೂ ಅಲ್ಲ ಸಿ.ವಿ. ರಾಮನ್! ಭಾರತೀಯ ಬಾಹ್ಯಾಕಾಶ ವಿeನದ ಪಿತಾಮಹರೆನಿಸಿಕೊಂಡ ವಿಕ್ರಂ ಸಾರಾಭಾಯಿ ಕೂಡ ಅಲ್ಲೇ ಅಧ್ಯಯನ ನಡೆಸುತ್ತಿದ್ದರು. ಹೀಗೆ ಅತಿರಥಮಹಾರಥ ವಿeನಿಗಳ ಆಗಮನದಿಂದಾಗಿ ಐಐಎಸ್‌ಸಿ ರಂಗೇರಿತು. ಭಾಭಾ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ(ವಿಶ್ವಕಿರಣ) ಸಂಶೋಧನೆ ಆರಂಭವಾಯಿತು. ಹೀಗೆ ಐಐಎಸ್‌ಸಿಯಲ್ಲಿ ಕೆಲವು ವರ್ಷಗಳನ್ನು ಕಳೆದ ಭಾಭಾ, ಯುದ್ಧದ ನಂತರ ಇಂಗ್ಲೆಂಡ್‌ಗೆ ತೆರಳುವ ಆಲೋಚನೆಯನ್ನೇ ಕೈಬಿಟ್ಟರು. ನಾವು, ನಮ್ಮ ದೇಶ ಎಂಬ ಭಾವನೆ ಅವರೊಳಗೆ ಆಳವಾಗಿ ಬೇರೂರಲು ಆರಂಭವಾಯಿತು. ತಾಯ್ನಾಡಿನ ಶ್ರೇಯೋಭಿವೃದ್ಧಿ ಮಾಡಬೇಕಾದ ಜವಾಬ್ದಾರಿಯ ಅರಿವಾಗತೊಡಗಿತು. ಭಾರತದ ಬಡತನ ಹಾಗೂ ಪ್ರಗತಿಗೆ ವಿeನವೇ ಮದ್ದು ಎನಿಸತೊಡಗಿತು.

೧೯೪೪, ಮಾರ್ಚ್ ೧೨ರಂದು ಭಾಭಾ ಮತ್ತೆ ಪತ್ರ ಬರೆದರು.

ಆದರೆ ಈ ಬಾರಿ ಅಪ್ಪನ ಬದಲು ಅಂಕಲ್ ಸರ್ ದೊರಾಬ್‌ಜಿ ಜೆ. ಟಾಟಾ ಟ್ರಸ್ಟ್‌ಗೆ ಪತ್ರ ಬರೆದಿದ್ದರು. ಅಂದು ವೈಯಕ್ತಿಕ ಇಚ್ಛೆಯನ್ನು ಹೊತ್ತ ಪತ್ರ ಕಳುಹಿಸಿದ್ದ ಭಾಭಾ, ಈ ಬಾರಿ ಬರೆದ ಪತ್ರದಲ್ಲಿ ದೇಶದ ಉಜ್ವಲ ಭವಿಷ್ಯದ ಬಗೆಗಿನ ಕನಸುಗಳೇ ತುಂಬಿದ್ದವು. “ಈ ಕ್ಷಣದಲ್ಲಿ ಭೌತಶಾಸ್ತ್ರದ ಮೂಲ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವಂತಹ ಪ್ರಯೋಗಾಲಯಗಳೇ ನಮ್ಮ ದೇಶದಲ್ಲಿಲ್ಲ. ನಮ್ಮಲ್ಲಿ ಸಣ್ಣ ಪುಟ್ಟ ಸಂಶೋಧನೆಗಳು ನಡೆಯುತ್ತಿದ್ದರೂ ಅವು ದೇಶಾದ್ಯಂತ ಚೆಲ್ಲಾಪಿಲ್ಲಿಯಾಗಿವೆ. ಎಲ್ಲ ವಿeನಿಗಳನ್ನೂ ಒಂದೇ ಸೂರಿನಡಿ ತಂದು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇನ್ನು ಒಂದೆರಡು ದಶಕಗಳಲ್ಲಿ ಅಣುಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ವಿನಿಯೋಗಿಸುವಂತಹ ತಂತ್ರeನವನ್ನು ರೂಪಿಸುವಲ್ಲಿ ಜಗತ್ತಿನ ವಿeನಿಗಳು ಯಶಸ್ವಿಯಾಗಬಹುದು. ಒಂದು ವೇಳೆ, ನಾವು ಉನ್ನತ ಸಂಶೋಧನಾ ಸಂಸ್ಥೆಯೊಂದನ್ನು ತೆರೆದು, ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮುಂದೆ ಭಾರತ ಪರಿಣತರಿಗಾಗಿ ವಿದೇಶಗಳತ್ತ ಮುಖ ಮಾಡಬೇಕಾದ ಅಗತ್ಯ ಎದುರಾಗುವುದಿಲ್ಲ. ಇತರ ದೇಶಗಳಲ್ಲಿ ಕಂಡುಬರುತ್ತಿರುವ ವೈeನಿಕ ಅಭಿವೃದ್ಧಿಯ ಬಗ್ಗೆ ಅರಿವಿರುವ ಯಾರೂ ನಾನು ಪ್ರಸ್ತಾಪಿಸುತ್ತಿರುವ ಸಂಶೋಧನಾ ಸಂಸ್ಥೆಯ ಅಗತ್ಯ ಭಾರತಕ್ಕಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ”.

೧೯೪೨ರಲ್ಲಿ ಅಮೆರಿಕ ವಿಶ್ವದ ಮೊದಲ ಅಣುಪರೀಕ್ಷೆಯನ್ನು ನಡೆಸಿತ್ತು. ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಅಣು ಬಾಂಬ್‌ಗಳಿನ್ನೂ ಬಿದ್ದಿರಲಿಲ್ಲ. ಇತ್ತ ಭಾರತಕ್ಕಂತೂ ಸ್ವಾತಂತ್ರ್ಯವೇ ಬಂದಿರಲಿಲ್ಲ. ಅಂತಹ ಸಂದರ್ಭದಲ್ಲೂ ಭಾಭಾ ನಮ್ಮ ದೇಶದ ಭವಿಷ್ಯದ ವೈeನಿಕ ಪ್ರಗತಿ ಬಗ್ಗೆ ಯೋಚಿಸುತ್ತಿದ್ದರು. ಈ ದೇಶ ಕಟ್ಟಿದ ಟಾಟಾ ಕಂಪನಿ, ಭಾಭಾ ಅವರ ಆಸೆಗೆ ಕಲ್ಲು ಹಾಕಲಿಲ್ಲ. ೧೯೪೫ರಲ್ಲಿ ಬಾಂಬೆಯಲ್ಲಿ (ಟ್ರಾಂಬೆ) “ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್” ಸ್ಥಾಪನೆಯಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಹೋಮಿ ಭಾಭಾ, “Return to Trombay; return to the motherland” ಎಂದು ಕರೆಕೊಟ್ಟರು. “ತಾಯ್ನಾಡಿಗೆ ಮರಳಿ ಅಥವಾ ತಾಯ್ನಾಡಲ್ಲೇ ಉಳಿದುಕೊಂಡು, ಯುರೇನಿಯಂ ಸಂಸ್ಕರಣೆ ನಡೆಸುತ್ತಿರುವ ಇತರ ದೇಶಗಳಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ಸಮನಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ” ಎಂಬ ಅವರ ಕರೆಗೆ ಓಗೊಟ್ಟು ದೇಶ, ವಿದೇಶಗಳಿಂದೆಲ್ಲ ಯುವ ಭಾರತೀಯ ವಿeನಿಗಳು ಆಗಮಿಸಿದರು. ಪಿ.ಕೆ. ಅಯ್ಯಂಗಾರ್, ಬಿ.ವಿ. ಶ್ರೀಕಂಠನ್ ಮುಂತಾದ ಖ್ಯಾತ ವಿeನಿಗಳಿಗೆ ಭಾಭಾ ಕರೆಯೇ ಪ್ರೇರಣೆಯಾಗಿತ್ತು. ಭಾಭಾ ಸ್ವತಃ ವಿeನಿಗಳ ಯೋಗಕ್ಷೇಮದ ವ್ಯವಸ್ಥೆ ಮಾಡಿಸಿದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ವೈeನಿಕ ಹಾಗೂ ಕೈಗಾರಿಕಾ ಸಂಶೋಧನಾ ಇಲಾಖೆ(DSIR) ಸ್ಥಾಪನೆ ಮಾಡಬೇಕೆಂದು ಪ್ರಧಾನಿ ನೆಹರು ಮುಂದೆ ಪ್ರಸ್ತಾಪವನ್ನಿಟ್ಟರು, ಭಾರತೀಯ ಅಣುಶಕ್ತಿ ಕಾಯಿದೆಯನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು. ಎಲ್ಲವೂ ಅವರು ಹೇಳಿದಂತೆಯೇ ಆಯಿತು. ೧೯೪೭ರಲ್ಲಿ ಕಾಯಿದೆ ಬಂತು, ೧೯೪೮ರಲ್ಲಿ ಅಣುಶಕ್ತಿ ಆಯೋಗ ರಚನೆಯಾಯಿತು.

ಇವೇನು ಸಾಮಾನ್ಯ ಸಾಧನೆಗಳಲ್ಲ.

ಅವತ್ತು ಭಾರತ ವಿಶ್ವಸಂಸ್ಥೆಯಿಂದ ಗೋಧಿ ಪಡೆದು ಊಟ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಶೀಘ್ರ ಫಲಿತಾಂಶವನ್ನೇ ನೀಡದ ಅಣುವಿeನದಂತಹ ತಂತ್ರeನ ಅಭಿವೃದ್ಧಿ ಬಗ್ಗೆ ಭಾಭಾ ಅವರು ಸಂಸತ್ತಿನ ಮನವೊಲಿಸಿದ್ದು ಅದೆಂತಹ ಸಾಧನೆ ಇರಬಹುದೆಂಬುದನ್ನು ಊಹಿಸಿಕೊಳ್ಳಿ? ಅದರಲ್ಲೂ ಅನ್ನ, ಬಟ್ಟೆ, ವಸತಿ, ಶಿಕ್ಷಣವೇ ಪರಮ ಧ್ಯೇಯವೆಂದುಕೊಂಡಿದ್ದ ಸೋಷಿಯಲಿಸ್ಟ್ ಸರಕಾರವನ್ನು ಮನವೊಲಿಸುವುದು ಸಾಮಾನ್ಯ ಮಾತೇ? ಎಲ್ಲರನ್ನೂ ಎಸ್ಸೆಸ್ಸೆಲ್ಸಿವರೆಗೂ ಓದಿಸಿ ಅಕ್ಷರಸ್ಥರನ್ನಾಗಿ ಮಾಡುತ್ತೇವೆ ಎಂದಂದುಕೊಂಡಿದ್ದರೆ ಭಾರತ ‘ಲೇಬರ್ ಫ್ಯಾಕ್ಟರಿ’ ಆಗುತ್ತಿತ್ತು. ಆದರೆ ಭಾಭಾ ಅವರು, ತಾಂತ್ರಿಕ ಹಾಗೂ ವೈeನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಗತ್ಯವನ್ನು ಮನಗಂಡು, ಟಾಟಾ ಕಂಪನಿಯ ಸಹಾಯ ಪಡೆದು ಸ್ಥಾಪನೆ ಮಾಡಿದರು, ಸರಕಾರದ ಮನವೊಲಿಸುವ ಮೂಲಕ ಹೆಚ್ಚಿನ ಸಂಸ್ಥೆಗಳು ಹೊರಹೊಮ್ಮಲು ಕಾರಣರಾದರು. ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ, ೧೯೭೪ರಲ್ಲಿ ನಡೆಸಿದ ಅಣುಪರೀಕ್ಷೆಯ ಹಿಂದಿರುವ ದೂರದೃಷ್ಟಿ, ಪರಿಶ್ರಮವೂ ಭಾಭಾ ಅವರದ್ದೇ. ಅವರೇ ನಮ್ಮ ದೇಶದ ಅಣುವಿeನದ ಪಿತಾಮಹ. ನಮ್ಮ ದೇಶವನ್ನು ಸುರಕ್ಷಿತವಾಗಿಟ್ಟಿರುವ ಅಣುಬಾಂಬ್ ಭಾಭಾ ಪರಿಶ್ರಮದ ಫಲಶ್ರುತಿ. ೧೯೫೫ರಲ್ಲಿ ಜಿನೀವಾದಲ್ಲಿ ನಡೆದ ಅಣುಶಕ್ತಿಯ ಶಾಂತಿಯುತ ಬಳಕೆ ಮೇಲಿನ ವಿಶ್ವಶೃಂಗದ ಅಧ್ಯಕ್ಷರಾಗಿದ್ದ ಹೋಮಿ ಭಾಭಾ, ಭಾರತದಲ್ಲೊಂದು ರಿಯಾಕ್ಟರ್ ನಿರ್ಮಿಸಿ ಕೊಡುವಂತೆ ಕೆನಡಾಕ್ಕೆ ಮನವಿ ಮಾಡಿಕೊಂಡಿದ್ದರು. ಕೆನಡಾ ಸ್ಥಳದಲ್ಲಿಯೇ ಒಪ್ಪಿಕೊಂಡ ಕಾರಣ, ಕೂಡಲೇ ನೆಹರು ಅವರಿಗೆ ಟೆಲಿಗ್ರಾಂ ಮಾಡಿದ ಭಾಭಾ ಮೂರೇ ದಿನಗಳಲ್ಲಿ ಪ್ರಧಾನಿಯವರ ಒಪ್ಪಿಗೆ ಪಡೆದುಕೊಂಡಿದ್ದರು. ಅವರ ಮಾತಿಗೆ ಅಂತಹ ಬೆಲೆಯಿತ್ತು. ಅದರ ಫಲವೇ ಭಾರತದ ಮೊಟ್ಟಮೊದಲ ಅಣುರಿಯಾಕ್ಟರ್ ‘ಅಪ್ಸರಾ’ ನಿರ್ಮಾಣ. ಕಳೆದ ವರ್ಷ ಭಾರತ-ಅಮೆರಿಕ ನಡುವೆ ಏರ್ಪಟ್ಟ ಅಣು ಸಹಕಾರ ಒಪ್ಪಂದ ಕೂಡ ಭಾಭಾ ದೂರದೃಷ್ಟಿಯ ಫಲವೇ. ಕಲ್ಲಿದ್ದಲು, ತೈಲದಂತಹ ಬರಿದಾಗುವ ಶಕ್ತಿಮೂಲಗಳನ್ನು ಹೆಚ್ಚು ಕಾಲ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಅಣುಶಕ್ತಿಯ ಬಗ್ಗೆ ಗಮನಹರಿಸಬೇಕು ಎಂದು ಮೊದಲಿಗೆ ಹೇಳಿದವರೇ ಅವರು. ಇವತ್ತು ನಮ್ಮ ಬಳಿ ಯುರೇನಿಯಂ ಇಲ್ಲ, ಆದರೆ ಯುರೇನಿಯಂ ಚಾಲಿತ ರಿಯಾಕ್ಟರ್‌ಗಳಿವೆ. ನಮ್ಮ ಬಳಿ ಜಗತ್ತಿನಲ್ಲಿ ಎರಡನೇ ಅತಿಹೆಚ್ಚು ಥೋರಿಯಂ ನಿಕ್ಷೇಪ ಇದೆ, ಆದರೆ ಥೋರಿಯಂ ಅನ್ನು ವಿದ್ಯುತ್ ಆಗಿ ಪರಿವರ್ತಿಸುವ ರಿಯಾಕ್ಟರ್‌ಗಳು ಅಮೆರಿಕದ ಬಳಿ ಇವೆ. ಈ ಎಲ್ಲ ಕಾರಣಗಳಿಗಾಗಿಯೇ ಅಮೆರಿಕದ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂತು. ನಾವು ಸಂಶೋಧನೆ ಮಾಡಿದ ‘ಈ-ಮೇಲ್’ ಅನ್ನು ಅಮೆರಿಕ ಬಳಸಿಕೊಳ್ಳಬಹುದಾದರೆ ಅಮೆರಿಕದ ಬಳಿ ಇರುವ ಥೋರಿಯಂ ತಂತ್ರeನವನ್ನು ನಾವೇಕೆ ಪಡೆದುಕೊಳ್ಳಬಾರದು ಅಲ್ಲವೆ?

‘A scientist does not belong to a particular nation. He belongs to the whole world. The doors of science should be kept open to all those who work for the welfare of humanity‘ ಎನ್ನುತ್ತಿದ್ದರು ಭಾಭಾ.

೧೯೭೪, ಮೇ ೧೮ರಂದು ಮೊದಲ ಅಣು ಪರೀಕ್ಷೆ ನಡೆಸಿದ ಭಾರತ ಅಣ್ವಸ್ತ್ರ ಹೊಂದಿರುವ ಐದು ರಾಷ್ಟ್ರಗಳ ಪ್ರತಿಷ್ಠಿತ ಸಾಲಿಗೆ ಸೇರಿಕೊಂಡಿತು. ಆದರೆ ವೈeನಿಕ ಕ್ಷೇತ್ರದಲ್ಲಿ ಅಮೋಘ ವೈಯಕ್ತಿಕ ಸಾಧನೆಯ ಅವಕಾಶವನ್ನು ಬದಿಗಿಟ್ಟು ೧೯೩೯ರಿಂದ ೬೫ರವರೆಗೂ ಭಾರತದಲ್ಲಿ ವಿeನ ಮತ್ತು ತಂತ್ರeನದ ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸಿದ ಅಣುಶಕ್ತಿಯ ಜನಕ ಭಾಭಾ, ಕನಸು ಸಾಕಾರಗೊಳ್ಳುತ್ತಿರುವುದನ್ನು ನೋಡಲು ಇರಲಿಲ್ಲ. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭಾಭಾ ೧೯೬೬, ಜನವರಿ ೨೪ರಂದು ಸ್ವಿಟ್ಜರ್‌ಲ್ಯಾಂಡ್‌ನ ಮಾಂಟ್ ಬ್ಲಾಂಕ್ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ತೀರಿಕೊಂಡಿದ್ದರು. “You can give a new direction to everything in life, except death” ಎನ್ನುತ್ತಿದ್ದ ಭಾಭಾ ಅವರನ್ನು ಐವತ್ತಾರು ವರ್ಷಕ್ಕೇ ಸಾವು ಕಿತ್ತುಕೊಂಡಿತು.

ಅದು ಕಣ್ಣೀರಿಗೂ ನಿಲುಕದ ನೋವು ತಂದ ಸಾವು.

ಇವಿಷ್ಟೂ ವಿಚಾರಗಳು ನಿಮಗೆಲ್ಲರಿಗೂ ತಿಳಿದಿರುವಂಥವೇ. ಹಾಗಂತ ನೆನಪಿಸಿಕೊಳ್ಳದೇ, ನೆನಪು ಮಾಡಿಕೊಡಲಾರದೇ ಇರಲಾದೀತೆ? ಅವತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಪ್ರಸ್ತಾವವನ್ನು ಕಟುವಾಗಿ ವಿರೋಧಿಸಿದ ವಿನ್‌ಸ್ಟನ್ ಚರ್ಚಿಲ್, “ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದುಕೊಳ್ಳಬಹುದು. ಆದರೆ ‘ಸ್ವಾತಂತ್ರ್ಯ’ ಪಡೆದುಕೊಳ್ಳಲು ಅದರಿಂದಾಗದು. ಭಾರತೀಯರಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಸಾಮರ್ಥ್ಯವಿಲ್ಲ.  All Indian leaders will be of low calibre and men of straw. They will have sweet tongues and silly hearts. They will fight amongst themselves for power and India will be lost in political squabbles”. “”India is a geographical term. It is no more a united nation than the equator” ಹೀಗೆಲ್ಲ ಹಳಿದಿದ್ದರು. ಒಂದು ವೇಳೆ ಇಂದು ಚರ್ಚಿಲ್ ಬದುಕಿದ್ದಿದ್ದರೆ ತಮ್ಮ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿ ಬರುತ್ತಿತ್ತು. ನಾವು ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದುಕೊಂಡ ನಂತರ ಆಫ್ರಿಕಾ ಖಂಡದ ರಾಷ್ಟ್ರಗಳಂತಾಗಲಿಲ್ಲ. ಇವತ್ತಿಗೂ ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವ, ಸಂಶೋಧನೆ ನಡೆಸುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಾಣಲು ಸಾಧ್ಯವಿಲ್ಲ. ಅವರು ಭಾರತದತ್ತ ಮುಖ ಮಾಡುತ್ತಾರೆ. ಏಕೆಂದರೆ ಸ್ವಾತಂತ್ರ್ಯ ಗಳಿಸಿಕೊಂಡ ಪ್ರಾರಂಭದಲ್ಲೇ ನಮ್ಮ ವಿeನಿಗಳು ಸರಕಾರದ ಮನವೊಲಿಸಿ ಉನ್ನತ ಶಿಕ್ಷಣವನ್ನು ನೀಡುವ ವಿಶ್ವಮಾನ್ಯ ಸಂಸ್ಥೆಗಳನ್ನು ಸ್ಥಾಪನೆ ಮಾಡಿಸಿದರು. ನಮ್ಮ ದೇಶದಲ್ಲೇ ವಿeನ ತಂತ್ರeನ, ಬಾಹ್ಯಾಕಾಶ, ಕೃಷಿ, ರಕ್ಷಣೆ ಮುಂತಾದ ಎಲ್ಲ ಕ್ಷೇತ್ರಗಳ ಬಗ್ಗೆಯೂ ಸಂಶೋಧನೆ ಆರಂಭವಾಯಿತು. ಒಂದೆಡೆ ಗಾಂಧೀಜಿ ಹಾಗೂ ಕ್ರಾಂತಿಕಾರಿಗಳು ದೇಶವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಿಗೊಳಿಸಿದರೆ, ಇನ್ನೊಂದೆಡೆ ಸಿ.ವಿ.ರಾಮನ್, ವಿಶ್ವೇಶ್ವರಯ್ಯ, ಹೋಮಿ ಭಾಭಾ, ವಿಕ್ರಂ ಸಾರಾಭಾಯಿ, ಸ್ವಾಮಿನಾಥನ್, ಸತೀಶ್ ಧವನ್, ವಿ.ಎಸ್. ಅರುಣಾಚಲಂ, ಅಬ್ದುಲ್ ಕಲಾಂ, ಆರ್. ಚಿದಂಬರಂ, ಪ್ರೊ. ಯು.ಆರ್. ರಾವ್ ಅವರಂತಹ ವಿeನಿಗಳು ಸ್ವಾವಲಂಬನೆಯೆಂಬ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅವರಿಲ್ಲದಿದ್ದರೆ ನಾವು ಮತ್ತೊಂದು ಪಾಕಿಸ್ತಾನ, ಸೊಮಾಲಿಯಾ, ನೈಜೀರಿಯಾಗಳಾಗಿರುತ್ತಿದ್ದೆವೋ ಏನೋ! ಇಂತಹ ನಮ್ಮ ವಿeನಿಗಳೇ ಭಾರತದ ನಿಜವಾದ ‘ಫೌಂಡಿಂಗ್ ಫಾದರ್‍ಸ್’. ಇದು ಭಾಭಾ ಅವರ ಜನ್ಮಶತಮಾನೋತ್ಸವ ವರ್ಷ. ೧೯೦೯ರಲ್ಲಿ ಜನಿಸಿದ ಭಾಭಾ ಇಂದು ಬದುಕಿರುತ್ತಿದ್ದರೆ ನೂರಕ್ಕೆ ಕಾಲಿಡುತ್ತಿದ್ದರು.

ಅವರ ನೆನಪನ್ನಾದರೂ ಮಾಡಿಕೊಳ್ಳೋಣ.

29 Responses to “ಅನ್ನಕ್ಕಾಗಿ ಕೈಯೊಡ್ಡುತ್ತಿದ್ದವರಿಗೆ ಅಣುಶಕ್ತಿಯ ಆಸೆ ತೋರಿದ ನಿಮ್ಮನ್ನು ಮರೆಯಲಾದೀತೆ?”

  1. Basavaraja says:

    Good Article on H j Bhabha.

  2. Dinesh S says:

    superb article……

  3. Vinay says:

    goog article pratap.

  4. Rani says:

    ಅದ್ಭುತವಾದ ಲೇಖನ! ಬಾಬಾ ಅವರ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಟಿದ್ದಕ್ಕಾಗಿ ಧನ್ಯವಾದಗಳು

  5. surya says:

    Dear Pratap simha sir,
    This is realy good article

    VERY VERY ………………….
    Thanks you for given this “HEART TOUCHABLE ARTICLE”

  6. Dr. Gururaj says:

    All Indian leaders will be of low calibre and men of straw. They will have sweet tongues and silly hearts. They will fight amongst themselves for power and India will be lost in political squabbles”. “”India is a geographical term. It is no more a united nation than the equator” ಹೀಗೆಲ್ಲ ಹಳಿದಿದ್ದರು. ಒಂದು ವೇಳೆ ಇಂದು ಚರ್ಚಿಲ್ ಬದುಕಿದ್ದಿದ್ದರೆ ತಮ್ಮ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿ ಬರುತ್ತಿತ್ತು.

    Dear Pratap,
    How can you deny the statement of Vincent Churchill. I think if he was alive today he would have agreed to his statement regarding Indian leaders. India has already lost in political squabbles.
    Dr.Gururaj
    Research scholar
    FL. USA

  7. Dhruva says:

    sequence of past three articles was very good..
    I hope the people will also give importance to basic sciences along with IT

  8. Dhruva says:

    sequence of past three articles was very good..
    I hope the people will also give importance to basic sciences along with IT

    but i couldnt able to understand the “ನಾವು ಸಂಶೋಧನೆ ಮಾಡಿದ ‘ಈ-ಮೇಲ್’ ಅನ್ನು ಅಮೆರಿಕ ಬಳಸಿಕೊಳ್ಳಬಹುದಾದರೆ “.. who invented e mail technology???

  9. ಯೋಗೇಶ್ ಗೌಡ.ಆರ್ says:

    ಭಾಭಾ ತರಹ ದೇಶದ ಬಗ್ಗೆ ಈಗ ಯಾರಾದರೂ ಮಾತಾಡಿದರೆ, ಹೊರಗಿನವರು ಬಿಡಿ ನಮ್ಮ ಜೊತೆಯಲ್ಲಿರುವವರು ಅಪಹಾಸ್ಯ ಮಾಡ್ತಾರೆ. ನಮ್ಮಲ್ಲಿ ಇರೋ Mentality ಎಂತಹುದು ಅಂದರೆ ಸೈಕಲ್ ಓಡಿಸೊದರಿಂದ ಆಗೊ Adventage ಬಗ್ಗೆ ಹೇಳೊದಕ್ಕಿಂತ ಬಿದ್ದರೇ, ಮುರಿದರೇ, ಸತ್ತರೇ, ಅಂತ ಭಯಹುಟ್ಟಿಸೋರೆ ಜಾಸ್ತಿ. ಭಾಭಾ ಕಲಾಂ ತರಹದ ಮನಸ್ಸು ಎಲ್ಲರಲ್ಲೂ ಇರುತ್ತದೆ, ಆದರೆ ಆ ಮನಸ್ಸನ್ನು ಸದಾ ಜಾಗೃತವಾಗಿಡೊದಕ್ಕೆ ಎಲ್ಲರಿಂದ ಸಾಧ್ಯವಾಗೋದಿಲ್ಲ. ಕಾರಣ ನಮ್ಮ Internal Capacity ಇರಬಹುದು ಅಥವ ನಮ್ಮ ಸುತ್ತಮುತ್ತಲಿನ ಪರಿಸರ ಇರಬಹುದು.Keep writing PRATHAP….

  10. vijay says:

    Superb article pratap! Keep it up………………

  11. Sindhoo says:

    Very informative. Thanks

  12. Deepak H says:

    Thanx for the good article..

  13. sanjeev kumar sirnoorkar says:

    ನಮಸ್ತೆ ಪ್ರತಾಪ್… ಈ ವಾರದ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಬಾಬಾ ಅವರ ಬಗ್ಗೆ ಒಳ್ಳೆಯ ವಿಚರರಗಳನ್ನು ಬರೆದಿದ್ದೀರಿ. ಭೌತಶಾಸ್ತ್ರದ ಬಗ್ಗೆ ಅವರಿಗೆ ಇದ್ದ ಒಲವು ನಿಜಕ್ಕೂ ಶ್ಲಾಘನೀಯ ಧನ್ನ್ಯವಾದಗಳು .

  14. D.M.Sagar,Dr. says:

    “ಒಂದೆಡೆ ಗಾಂಧೀಜಿ ಹಾಗೂ ಕ್ರಾಂತಿಕಾರಿಗಳು ದೇಶವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಿಗೊಳಿಸಿದರೆ, ಇನ್ನೊಂದೆಡೆ ಸಿ.ವಿ.ರಾಮನ್, ವಿಶ್ವೇಶ್ವರಯ್ಯ, ಹೋಮಿ ಭಾಭಾ, ವಿಕ್ರಂ ಸಾರಾಭಾಯಿ, ಸ್ವಾಮಿನಾಥನ್, ಸತೀಶ್ ಧವನ್, ವಿ.ಎಸ್. ಅರುಣಾಚಲಂ, ಅಬ್ದುಲ್ ಕಲಾಂ, ಆರ್. ಚಿದಂಬರಂ, ಪ್ರೊ. ಯು.ಆರ್. ರಾವ್ ಅವರಂತಹ ವಿeನಿಗಳು ಸ್ವಾವಲಂಬನೆಯೆಂಬ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅವರಿಲ್ಲದಿದ್ದರೆ ನಾವು ಮತ್ತೊಂದು ಪಾಕಿಸ್ತಾನ, ಸೊಮಾಲಿಯಾ, ನೈಜೀರಿಯಾಗಳಾಗಿರುತ್ತಿದ್ದೆವೋ ಏನೋ!” – ಆಹಾ!. ಶಹಬ್ಭಾಸ್ ಪ್ರತಾಪಸಿಂಹ!. ಈ ವಾಕ್ಯ ಓದಿ ಮಹದಾನಂದವಾಯಿತು. ಈ ವಾಕ್ಯ ನಿಜವಾಗಿಯು ಮನನೀಯ. ಬಾಭಾ ಹಾಗು ಅವರಂತಹ ವಿಜ್ಞಾನಿಗಳ ಪ್ರಭಾವಲಯದಿಂದ ವಿಜ್ಞಾನದ ಬಗೆಗೆ ಆಸಕ್ತಿ ಮೂಡಿಸಿಕೊಂಡು ಆ ದಿಸೆಯಲ್ಲಿ ಮುನ್ನಡೆಯುತ್ತಿರುವ ನನಗೆ ನಿಮ್ಮ ಲೇಖನ ಬಹಳ ಸಂತೋಷ ಕೊಟ್ಟಿತು. ಮಾತ್ರವಲ್ಲ, ತಾವು ಬಹುತೇಕ ಪತ್ರಕರ್ತರಂತೆ ಕೇವಲ ಸಾಹಿತ್ಯದ ಚರ್ವಿತ-ಚರ್ವಣ ಗಳ ಬಗ್ಗೆ ಮಾತ್ರ ಬರೆಯದೇ, ಇಂತಹ ವೈವಿಧ್ಯಮಯವಾದ ಬರಹಗಳನ್ನು ಪ್ರಬುದ್ಧವಾಗಿ ಬರೆಯುತ್ತಿರುವುದು ಸಂತೋಷ ಕೊಡುವ ವಿಚಾರ, ಜೊತೆಗೆ, ತಮ್ಮ ಬುಧ್ಧಿ ಪ್ರವಾಹ ದ ಗತಿ ಕುಉದ ಆದರಣೀಯ.
    ಅಂದ ಹಾಗೆ, ಮದುವೆಯಾಗದೆ ಬದುಕನ್ನೇ ವಿಜ್ಞಾನಕ್ಕೆ ಹೋಮಿಸಿದ ಹೋಮಿ ಗೆ, “ಅಪ್ಸರ” ಗಂಟು ಬಿದ್ದದ್ದು ಮಾತ್ರ ಶುಧ್ಧ ಕುಹುಕ!. -D.M.Sagar,Dr.-UK.

  15. shama says:

    information & narration both beautiful.. thanks for the article

  16. Basu says:

    Hi Pratap,

    Superb article.. keep it up!! You are really adding value to the country’s great person by giving thier awareness towards “real free India” concept to this generation.

    Thanks alot!

  17. savitha says:

    hats off to u sir

  18. Manjunath SD says:

    Hi Simha,
    Its really good article.
    Thanks again for giving these remarkable and many unknown informations…

    Many Thanks,
    Manju

  19. Shripathi Bhat says:

    Hi , Pratap !
    super article. Keep it up!

  20. ಸಮುದ್ಯತಾ says:

    nice article…ತುಂಬಾ ವಿಷಯಗಳನ್ನ ತಿಳಿಸಿಕೊಟಟ್ಟಿದ್ದಕ್ಕೆ ಧನ್ಯವಾದಗಳು

  21. pawan kumar says:

    Dear pratap
    very good article, informative and thought provoking.

  22. Sumanth Gowda says:

    Hi, Pratap!
    Its really excellent, superb. Thank you friend

  23. harsha says:

    Good one Pratap…
    I knew abt Homi Baba, but not this much…Thanks for the informative article

  24. Chethan, Coorg says:

    I miss you Baba and other indian pillars. Nimma shramakke nanu Runni

  25. kaveri says:

    tumba channagide nimmante

  26. chandrashekar says:

    GOODDDDD ARTICALE illiayavarge nanage BHARATAD anu janak yaru anta gotte iralilla Thumbu Hrudayad dhanyavaadgalu

  27. CHETHAN says:

    ಪ್ರಾತಾಪ್ ರವರೇ ತುಂಬಾ ನಮಗೆ ಗೊತ್ತಲ್ಲದ ವೈಷಯನೆಲ್ಲಾ ತಿಲಿಸ್ಕೊಟ್ಟಿದ್ದಕ್ಕೆ ಧನ್ಯವಾದಗಳು

  28. Ramesha says:

    Very good article about Bhabha. There was an allegation that H.J.Bhabha was killed in a plot by CIA (USA) to avoid India going nuclear. This was proved later by Wikileaks.

  29. simmy says:

    simsana navarinda pratap ge hrtpoorvaka abinandanegalu