Date : 20-10-2008 | 20 Comments. | Read More
ಅಂಕಿತ್ ಗುಜರಾತಿನವನು. ಆತನ ವಿವಾಹ ನಿಶ್ಚಿತಾರ್ಥವಾಯಿತು. ಅದರ ಜತೆಗೆ ವಿಚಿತ್ರ ಸಮಸ್ಯೆಯೂ ಶುರುವಾಯಿತು. ಅಂಕಿತ್ನ ಸೆಲ್ಫೋನ್ಗೆ ಆತ ವಿವಾಹವಾಗಲಿದ್ದ ವಧುವಿನ ಸೆಲ್ನಿಂದ ದಿನಕ್ಕೆ ಐದಾರು ಎಸ್ಸೆಮ್ಮೆಸ್ಗಳು ಬರಲಾರಂಭಿಸಿದವು. ಆದರೆ ಅವು ಪ್ರೀತಿ, ಕಾಳಜಿಯ ಸಂದೇಶಗಳಾಗಿರಲಿಲ್ಲ. ಎಚ್ಚರಿಕೆಯ ಗಂಟೆಗಳಾಗಿದ್ದವು. ನನಗೆ ಬೇರೊಬ್ಬನ ಜತೆ ಸಂಬಂಧವಿದೆ. ನನ್ನನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹುಶಾರ್. ಇಂತಹ ಎಸ್ಸೆಮ್ಮೆಸ್ಗಳನ್ನು ಕಂಡು ಆಶ್ಚರ್ಯಚಕಿತನಾದ ಅಂಕಿತ್, ಕಾರಣ ತಿಳಿದುಕೊಳ್ಳುವ ಸಲುವಾಗಿ ನೇರವಾಗಿ ವಧುವನ್ನು ಕಂಡು ವಿಚಾರಿಸಿದಾಗ ಅಂತಹ ಎಸ್ಸೆಮ್ಮೆಸ್ಗಳನ್ನು ಆಕೆ ಕಳುಹಿಸಿಯೇ ಇರಲಿಲ್ಲ!
Date : 13-10-2008 | 16 Comments. | Read More
ಠಾಕೂರ್, ಬನಿಯಾ, ಬ್ರಾಹ್ಮಣ್ ಚೋರ್ ಬಾಕಿ ಸಬ್ ಹೈ ದುಶ್ವರ್ ತಿಲಕ್, ತರಾಜು ಔರ್ ತಲ್ವಾರ್ ಇನ್ಕೋ ಮಾರೋ ಜೂತಾ ಚಾರ್ ಹಾಗಂತ ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಠಾಕೂರರ ವಿರುದ್ಧ ದ್ವೇಷ ಕಾರಿಕೊಳ್ಳುತ್ತಿದ್ದ ಕುಮಾರಿ ಮಾಯಾವತಿ ಅವರಿಗೆ, ಬರೀ ಮೇಲ್ಜಾತಿ ದೂಷಣೆ ಹಾಗೂ ದಲಿತರ ಮತ ಗಳಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಿವಾದ ಕೂಡಲೇ ಅದೆಷ್ಟು ಚೆನ್ನಾಗಿ ಬಣ್ಣ ಬದಲಾಯಿಸಿದರೆಂದರೆ –
Date : 07-10-2008 | 27 Comments. | Read More
“ಒಬ್ಬ ಸೈನಿಕನ ಎದೆಗಾರಿಕೆ ಹಾಗೂ ಗಟ್ಟಿತನ ೧೯೪೭ರಲ್ಲಿ ಕಾಶ್ಮೀರದ ಇತಿಹಾಸವನ್ನೇ ಬರೆ ಯಿತು. ಒಂದು ವೇಳೆ, ಆತ ಪ್ರಾಣದ ಹಂಗು ತೊರೆದು ಹೋರಾಡದಿದ್ದರೆ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡದೇ ಹೋಗಿದ್ದಿದ್ದರೆ ಕಾಶ್ಮೀರದ ಇತಿಹಾಸವೇ ಬದಲಾಗುತ್ತಿತ್ತು, ಪಾಕಿಸ್ತಾನದ ಕೈವಶವಾಗುತ್ತಿತ್ತು” . ೨೦೦೬, ಆಗಸ್ಟ್ ೨೨ರಂದು “ಬದ್ಗಾಂ ವಾರ್ ಮೆಮೋರಿ ಯಲ್” ಅನ್ನು ಉದ್ಘಾಟನೆ ಮಾಡಿದ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಭಾವುಕರಾಗಿ ಮಾತನಾಡುತ್ತಿದ್ದರು.
Date : 28-09-2008 | 95 Comments. | Read More
City of God. ಜೆರುಸಲೇಂ ಅನ್ನು ಕ್ರೈಸ್ತರು ಕರೆಯುವುದೇ ಹಾಗೆ. ಅವರ ಆರಾಧ್ಯದೈವ ಜೀಸಸ್ ಜನಿಸಿದ್ದು ಜೆರುಸಲೇಂ ಬಳಿಯ ಬೆತ್ಲಹೇಮ್ನಲ್ಲಿ. ಬಾಲ್ಯವನ್ನು ಕಳೆದಿದ್ದು ಜೆರುಸಲೇಂನಲ್ಲಿ. ಜೀಸಸ್ನನ್ನು ಶಿಲುಬೆಗೆ ಏರಿಸಿದ ಕ್ಯಾಲ್ವರಿ ಹಿಲ್ ಇರುವುದೂ ಜೇರುಸಲೇಂನಲ್ಲೇ. ಈ ಎಲ್ಲ ಕಾರಣ ಗಳಿಂದಾಗಿ ಕ್ರೈಸ್ತರಿಗೆ ಜೆರುಸಲೇಂಗಿಂತ ಪವಿತ್ರ ಸ್ಥಳ ಜಗತ್ತಿನಲ್ಲಿ ಬೇರೊಂದಿಲ್ಲ. ಇಂತಹ ಜೇರುಸಲೇಂ 1076ರಲ್ಲಿ ಮುಸ್ಲಿಮರ ವಶವಾಯಿತು.
Date : 21-09-2008 | 61 Comments. | Read More
ಒಬ್ಬ ಕ್ಯಾಥೋಲಿಕ್ಕನಾಗಿ ನಾನು ಪೂರ್ವಗ್ರಹಪೀಡಿತನಾಗಿದ್ದೆ. ನನ್ನ ಅಂಕಲ್ ಅಂದು ಹಾಗೂ ಇಂದಿಗೂ ಒಬ್ಬ ಮಿಷನರಿ. ಒಂದು ವೇಳೆ ದಕ್ಷಿಣ ಅಮೆರಿಕದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡದೇ ಹೋದರೆ ಅವರು ಅನಂತ ಅನಾಹುತಕ್ಕೆ ಈಡಾಗುತ್ತಾರೆ ಎಂದು ಆತ ಅಲ್ಲಿಗೆ ತೆರಳಿದ. ನಾನು ಕ್ಯಾಥೋಲಿಕ್ ಶಾಲೆಯಲ್ಲಿ ಕಲಿತವನು. ಹಿಂದೂಯಿಸಂ ಎಂದರೆ ಬಹುದೇವತಾರಾಧನೆ, ಮೂರ್ತಿಪೂಜೆ ಮತ್ತು ಮೂಢನಂಬಿಕೆ. ಹಿಂದೂಗಳಿಗೆ ಸ್ವರ್ಗದಲ್ಲಿ ಯಾವುದೇ ಜಾಗವಿಲ್ಲ ಎಂದು ನನಗೆ ಹೇಳಿಕೊಡಲಾಯಿತು. ನನ್ನ ಬಾಲ್ಯದ ಕ್ಯಾಥೋಲಿಸಂ ಅಂದರೆ ಇದಾಗಿತ್ತು, ಇಂದಿಗೂ ಹಿಂದೂಧರ್ಮವನ್ನು ಅವಹೇಳನ ಮಾಡುವ […]
Date : 15-09-2008 | 10 Comments. | Read More
ಅಂಥದ್ದೊಂದು ಕಾರನ್ನು ಮಾಡಲು ಸಾಧ್ಯವೇ ಇಲ್ಲ. ಒಂದು ಲಕ್ಷಕ್ಕೆ ಕಾರು ತಯಾರು ಮಾಡಲು ಖಂಡಿತ ಆಗದು ಅಂತ ನಮ್ಮ ಇಂಜಿನಿಯರ್ಗಳೂ ಹೇಳಿದ್ದಾರೆ ಎಂದಿದ್ದರು ಸುಝುಕಿ ಕಂಪನಿಯ ಮುಖ್ಯಸ್ಥ ಶಿನ್ಝೋ ನಕಾನಿಶಿ. ಆದರೆ ಜನವರಿ ೧೦ರಂದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ. ಅಂದು ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿದ್ದ ಕಾರು ಪ್ರದರ್ಶನದ ವೇಳೆ ವಿಶ್ವದ ಅತ್ಯಂತ ಅಗ್ಗದ ಕಾರಿನ ಮುಖಪರಿಚಯ ಮಾಡಿದ ರತನ್ ಟಾಟಾ, “ಈ ಕಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ […]
Date : 10-09-2008 | 17 Comments. | Read More
೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು. ೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್ಗಿರಿಯಲ್ಲಿ ಜಾನ್ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ […]
Date : 02-09-2008 | 11 Comments. | Read More
ಅವನೊಬ್ಬ ಅರ್ಧ ವಯಸ್ಸು ಮೀರಿದ ವ್ಯಕ್ತಿ. ಅಗಲವಾದ ಕರಿ ಕನ್ನಡಕ ಆತನ ಕಣ್ಣುಗಳಿಗೆ ಪರದೆ ಹಾಕಿದೆ. ಕೆಂಪು ಬಣ್ಣದ ಬೇಸ್ಬಾಲ್ ಕ್ಯಾಪ್ ಮುಖದ ಅರ್ಧ ಭಾಗವನ್ನು ಆವರಿಸಿದೆ. ಆದರೂ ಪ್ಲಾಸ್ಟಿಕ್ ಸರ್ಜರಿಯ ಗುರುತು ಹಾಗೆಯೇ ಕಾಣುತ್ತಿದೆ. ಚರ್ಮ ಸುಕ್ಕುಗಟ್ಟಿದೆ, ನೋಟ ಕಳೆಗುಂದಿದೆ, ಕೈ ಬೆರಳಿನ ಉಗುರುಗಳು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿವೆ. ಆತ ಪೈಜಾಮ ಹಾಕಿಕೊಂಡಿದ್ದಾನೆ. ವ್ಹೀಲ್ ಚೇರ್ ಮೇಲೆ ಕುಳಿತಿದ್ದಾನೆ. ಆ ವ್ಹೀಲ್ ಚೇರನ್ನು ಆತನ ಸಹಾಯಕ ರಸ್ತೆ ಬದಿಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾನೆ. ಅದರ ಮುಂದೆ […]
Date : 24-08-2008 | 26 Comments. | Read More
ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.
Date : 20-08-2008 | 5 Comments. | Read More
“ಕೋಲ್ಕತಾದ ಹೋಟೆಲ್ನಿಂದ ನಿರ್ಗಮಿಸುವಾಗ ಲಗೇಜ್ ತುಂಬಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಯೇ ಬಹುಶಃ ಆ ಡ್ರಗ್ಸ್ ಪ್ಯಾಕ್ ಹಾಕಿರಬೇಕು. Send-off ಪಾರ್ಟಿ ಯೊಂದರ ಸಂದರ್ಭದಲ್ಲಿ ಸ್ನೇಹಿತರೊಬ್ಬರು ನನ್ನ ಹೋಟೆಲ್ ಕೊಠಡಿಗೆ ಆ ಡ್ರಗ್ಸನ್ನು ತಂದಿದ್ದರು. ನಾನು ಆತುರದಲ್ಲಿದ್ದ ಕಾರಣ ದುಬೈ ವಿಮಾನವೇರುವ ಮೊದಲು ಬ್ಯಾಗನ್ನು ಚೆಕ್ ಮಾಡಿಕೊಳ್ಳಲಾಗಲಿಲ್ಲ. ಆದರೆ ದುಬೈ ಏರ್ಪೋರ್ಟ್ ಅಧಿಕಾರಿಗಳಿಗೆ ನನ್ನ ಬ್ಯಾಗ್ನಲ್ಲಿ ಡ್ರಗ್ಸ್ ಸಿಕ್ಕಿದಾಗ ನಿಜಕ್ಕೂ ದಿಗ್ಭ್ರಮೆಗೊಳಗಾದೆ. ಅದು ನನ್ನ ಜೀವಮಾನದ ಅತ್ಯಂತ ಕೆಟ್ಟ ರಾತ್ರಿ”.