Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮುರಿದ ಕೈಯಲ್ಲೇ ಕಾಶ್ಮೀರಕ್ಕಾಗಿ ಕಾದಾಡಿದವನ ನೆನಪೇಕೋ ಕಾಡುತಿದೆ

ಮುರಿದ ಕೈಯಲ್ಲೇ ಕಾಶ್ಮೀರಕ್ಕಾಗಿ ಕಾದಾಡಿದವನ ನೆನಪೇಕೋ ಕಾಡುತಿದೆ

“ಒಬ್ಬ ಸೈನಿಕನ ಎದೆಗಾರಿಕೆ ಹಾಗೂ ಗಟ್ಟಿತನ ೧೯೪೭ರಲ್ಲಿ ಕಾಶ್ಮೀರದ ಇತಿಹಾಸವನ್ನೇ ಬರೆ ಯಿತು. ಒಂದು ವೇಳೆ, ಆತ ಪ್ರಾಣದ ಹಂಗು ತೊರೆದು ಹೋರಾಡದಿದ್ದರೆ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡದೇ ಹೋಗಿದ್ದಿದ್ದರೆ ಕಾಶ್ಮೀರದ ಇತಿಹಾಸವೇ ಬದಲಾಗುತ್ತಿತ್ತು, ಪಾಕಿಸ್ತಾನದ ಕೈವಶವಾಗುತ್ತಿತ್ತು” .

೨೦೦೬, ಆಗಸ್ಟ್ ೨೨ರಂದು “ಬದ್ಗಾಂ ವಾರ್ ಮೆಮೋರಿ ಯಲ್” ಅನ್ನು ಉದ್ಘಾಟನೆ ಮಾಡಿದ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಭಾವುಕರಾಗಿ ಮಾತನಾಡುತ್ತಿದ್ದರು.

ಈ ಶ್ರೀನಿವಾಸ್ ಕುಮಾರ್ ಸಿನ್ಹಾ ಯಾರೆಂದು ನೆನಪಾಯಿತೆ? ಕಳೆದ ಮೇನಲ್ಲಿ ಅಮರನಾಥ ಶ್ರೈನ್ ಬೋರ್ಡ್‌ಗೆ ೪೦ ಹೆಕ್ಟೇರ್ ಭೂಮಿ ವರ್ಗಾವಣೆ ಮಾಡುವ ಆದೇಶ ಹೊರಡಿಸಿ, ಪದಚ್ಯುತಗೊಂಡ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು. ಅಂದು ಎಸ್.ಕೆ. ಸಿನ್ಹಾ ಶ್ಲಾಘಿಸುತ್ತಿದ್ದ ಸೈನಿಕ ಮತ್ತಾರೂ ಅಲ್ಲ, ಇಪ್ಪತ್ತನಾಲ್ಕು ವರ್ಷಕ್ಕೇ ಮರೆಯಾದ ಮೇಜರ್ ಸೋಮನಾಥ ಶರ್ಮಾ! ಸಿನ್ಹಾ ಮತ್ತು ಶರ್ಮಾ ಹೆಚ್ಚೂಕಡಿಮೆ ಒಂದೇ ವಯಸ್ಸಿನವರು, ಒಂದೇ ಸೇನೆಯಲ್ಲಿ ಹೋರಾಡಿದವರು. ಜತೆಗೆ ಆಪ್ತ ಸ್ನೇಹಿತರೂ ಹೌದು.

ಅದು ಮನೆಯವರಿರಲಿ, ಸ್ನೇಹಿತರಿರಲಿ ಎಲ್ಲರೂ ಆತನನ್ನು ಪ್ರೀತಿಯಿಂದ ಪುಟ್ಟದಾಗಿ ‘ಸೋಮ್’ ಎಂದೇ ಕರೆಯುತ್ತಿದ್ದರು. ಸೋಮನಾಥನಿಗೆ ಅಚ್ಚುಮೆಚ್ಚಿನ ವಿಷಯವೆಂದರೆ ಅಜ್ಜ ಪಂಡಿತ್ ದೌಲತ್ ರಾಮ್ ಅವರು ಹೇಳುತ್ತಿದ್ದ ಭಗವದ್ಗೀತೆಯ ಕಥೆಗಳು. ದ್ವಾಪರದಲ್ಲಿ ಶ್ರೀಕೃಷ್ಣ ರಣರಂಗದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಕಲಿಯುಗದ ಸೋಮನಾಥನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ೧೯೪೭ರಲ್ಲಿ ಬದ್ಗಾಂನಲ್ಲಿ ಹೆಣವಾಗಿ ಬಿದ್ದಿದ್ದ ವಿರೂಪಗೊಂಡ ದೇಹ ಸೋಮನಾಥನದ್ದೇ ಎಂದು ಗುರುತಿಸಲು ಕಾರಣವಾಗಿದ್ದು ಆತನ ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಪುಟಗಳೇ!
೧೯೨೩, ಜನವರಿ ೩೧ರಂದು ಜನಿಸಿದ ಸೋಮನಾಥ ಶರ್ಮಾ ಅವರದ್ದು ಸೇನಾ ಹಿನ್ನೆಲೆ ಹೊಂದಿದ್ದ ಕುಟುಂಬ. ಅಪ್ಪ ಮೇಜರ್ ಜನರಲ್ ಅಮರ್‌ನಾಥ್ ಶರ್ಮಾ ಮಿಲಿಟರಿಯಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿ ದ್ದವರು. ಒಬ್ಬ ಸಹೋದರ ಲೆಫ್ಟಿನೆಂಟ್ ಜನರಲ್ ಸುರೀಂದರ್‌ನಾಥ್ ಶರ್ಮಾ ಸೇನೆಯಲ್ಲೇ ಮುಖ್ಯ ಎಂಜಿನಿಯರ್ ಆಗಿದ್ದರು. ಇನ್ನೊಬ್ಬ ವಿಶ್ವನಾಥ್ ಶರ್ಮಾ ೧೯೮೮ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾ ದವರು. ಸಹೋದರಿ ಮೇಜರ್ ಕಮಲಾ ತಿವಾರಿ ಸೇನೆಯಲ್ಲೇ ವೈದ್ಯೆಯಾಗಿದ್ದರು. ಆದರೆ ಸೋಮನಾಥನ ಮೇಲೆ ಬಹುವಾಗಿ ಪ್ರಭಾವ ಬೀರಿದ್ದು ಜಪಾನಿ ಸೇನೆಯ ಜತೆ ನಡೆದ ಕಾಳಗದಲ್ಲಿ ಪ್ರಾಣಾರ್ಪಣೆ ಮಾಡಿದ ಚಿಕ್ಕಪ್ಪ ಕ್ಯಾಪ್ಟನ್ ಕೃಷ್ಣದತ್ ವಾಸುದೇವ್. ಚಿಕ್ಕಪ್ಪನಂತೆ ತಾನೂ ರಣರಂಗದಲ್ಲಿ ಹೋರಾಡಬೇಕೆಂಬ ತುಡಿತವನ್ನಿಟ್ಟುಕೊಂಡಿದ್ದ ಸೋಮನಾಥ, ೧೧ನೇ ವರ್ಷಕ್ಕೆ ಅಂದರೆ ೧೯೩೪ರಲ್ಲಿ ರಾಯಲ್ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡ. ಏಳು ವರ್ಷಗಳ ಕಾಲ ಪರಿಶ್ರಮಪಟ್ಟು ಓದಿ ತೇರ್ಗಡೆಯಾದ ಸೋಮನಾಥನನ್ನು ೧೯೪೨, ಫೆಬ್ರವರಿ ೨೨ರಂದು ಬ್ರಿಟಿಷ್ ಸೇನೆಯ ‘ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆ ಮಾಡಲಾಯಿತು. ಅದರ ಬೆನ್ನಲ್ಲೇ ಮೊದಲ ಸತ್ವಪರೀಕ್ಷೆಯೂ ಎದುರಾಯಿತು. ಅದಾಗಲೇ ಎರಡನೇ ಮಹಾಯುದ್ಧ ಆರಂಭವಾಗಿ ಮೂರು ವರ್ಷಗಳಾಗಿದ್ದವು. ಭಾರತವನ್ನಾಳುತ್ತಿದ್ದ  ಬ್ರಿಟಿಷ ರನ್ನು ಜಪಾನಿ ಸೇನೆ ನಿದ್ದೆಗೆಡಿಸಿತ್ತು. ಬರ್ಮಾ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿದ್ದ ಜಪಾನಿ ಸೇನೆಯನ್ನು ಅರಕ್ಕಾನ್‌ನಲ್ಲಿ ಎದುರಿಸಲಾಯಿತು. ಆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯನ್ನು ಮುನ್ನಡೆಸು ತ್ತಿದ್ದವರು ನಮ್ಮ ಜನರಲ್ ಕೆ.ಎಸ್. ತಿಮ್ಮಯ್ಯ. ಅಂತಹ ವೀರಸೇನಾನಿಯ ಕೆಳಗೆ ಯುವ ಲೆಫ್ಟಿನೆಂಟ್ ಸೋಮನಾಥ ಶರ್ಮಾ ಮೊದಲ ಯುದ್ಧಪಾಠ ಕಲಿಯಲಾರಂಭಿಸಿದರು. ೧೯೪೫, ಸೆಪ್ಟೆಂಬರ್‌ನಲ್ಲಿ ಜಪಾನ್ ಶರಣಾಗುವುದರೊಂದಿಗೆ ಸೋಮನಾಥ ಶರ್ಮಾ ದೇಶಕ್ಕೆ ವಾಪಸ್ಸಾದರು. ಇದಾಗಿ ಎರಡು ವರ್ಷಗಳಲ್ಲಿ ಭಾರತಕ್ಕೂ ಸ್ವಾತಂತ್ರ್ಯ ಬಂತು. ಅದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಕೋಮುದಳ್ಳುರಿ ಆರಂಭವಾಯಿತು. ಅದನ್ನು ನಂದಿಸುವ ಕೆಲಸಕ್ಕಾಗಿ ಹೈದರಾಬಾದ್ ರೆಜಿಮೆಂಟನ್ನು ನಿಯೋಜಿಸಲಾಯಿತು. ಹೀಗೆ ಪಂಜಾಬ್‌ಗೆ   ತೆರಳಿದ ಸೋಮನಾಥ್ ಶರ್ಮಾ ಕೋಮು ಹಿಂಸಾಚಾರವನ್ನು ನಂದಿಸಿ ದಿಲ್ಲಿಗೆ ವಾಪಸ್ಸಾಗುವ ವೇಳೆಗೆ ಕೈ ಮುರಿದುಕೊಂಡಿದ್ದರು, ಪಟ್ಟಿಕಟ್ಟಿಕೊಂಡು ಓಡುತ್ತಿದ್ದರು. ಗುಣಮುಖರಾಗುವವರೆಗೂ ಯಾವ ಮಿಲಿಟರಿ ಕಾರ್ಯಾ ಚರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ.

ಅದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಆಘಾತವುಂಟಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದವು.

೧೯೪೭, ಅಕ್ಟೋಬರ್ ತಿಂಗಳ ಮೊದಲ ಭಾಗದಲ್ಲಿ ಡೇರಾದ ಕಮೀಷನರ್ ಇಸ್ಮಾಯಿಲ್ ಖಾನ್ ಅವರಿಂದ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂದೇಶವೊಂದು ಬಂತು. ಪಾಕಿಸ್ತಾನ ಕಾಶ್ಮೀರದ ಗಡಿಯತ್ತ ತನ್ನ ಶಸ್ತ್ರಸಜ್ಜಿತ ಪಡೆಯನ್ನು ನಿಯೋಜಿಸುತ್ತಿರುವ ಸುದ್ದಿ ಅದಾಗಿತ್ತು. ಆ ಅಧಿಕಾರಿ ಪಾಕಿಸ್ತಾನದ ದೂರ್ತ ಉದ್ದೇಶದ ಬಗ್ಗೆ ಎಚ್ಚರಿಕೆಯ ಸಂದೇಶವನ್ನೇನೋ ಮುಟ್ಟಿಸಿದ. ಆದರೆ ಕ್ರಮ ಕೈಗೊಳ್ಳಲು ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ. ಒಂದೆಡೆ ಮಹಾರಾಜ ಹರಿಸಿಂಗ್ ಕಾಶ್ಮೀರವನ್ನು ಭಾರತದೊಂದಿಗೇ ವಿಲೀನಗೊಳಿಸಲು ನಿರಾಕರಿಸಿದರೆ, ಪಾಕ್ ವಿರುದ್ಧ ಆಯಾಚಿತವಾಗಿ ಕ್ರಮಕೈಗೊಳ್ಳಲು ಪ್ರಧಾನಿ ನೆಹರು ಒಪ್ಪದಾದರು. ಆದರೆ ಕೇವಲ ಎರಡೇ ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ೧೯೪೭, ಅಕ್ಟೋಬರ್ ೨೨ರಂದು ವೇಷ ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದ್ದ ಮುಜಫರಾಬಾದ್ ಮೇಲೆ ಆಕ್ರಮಣ ಮಾಡಿ, ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದರು. ಉರಿ, ಮಹುರಾಗಳನ್ನೂ ವಶಪಡಿಸಿಕೊಂಡರು. ಕೇವಲ ೫೦ ಮೈಲು ದೂರದಲ್ಲಿದ್ದ ಶ್ರೀನಗರದ ವಿದ್ಯುತ್ ಸಂಪರ್ಕವನ್ನೇ ಕಡಿದು ಕತ್ತಲಲ್ಲಿ ಮುಳುಗಿಸಿದರು. ಹೀಗೆ ನಾಟಕೀಯ ತಿರುವು ಪಡೆದುಕೊಂಡ ಪರಿಸ್ಥಿತಿಯ ಮೇಲೆ ನಿಗಾಯಿಟ್ಟಿದ್ದ ಆಗಿನ ಗೃಹ ಸಚಿವ ಸರ್ದಾರ್ ಪಟೇಲರು ತಮ್ಮ ಆಪ್ತ ಸಹಚರ ವಿ.ಪಿ. ಮೆನನ್ ಅವರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿ ಭಾರತದೊಂದಿಗೆ ವಿಲೀನಗೊಳ್ಳುವ ಪ್ರಸ್ತಾ ವಕ್ಕೆ ಸಹಿಹಾಕಲು ಮಹಾರಾಜ ಹರಿಸಿಂಗ್ ಅವರ ಮನವೊಲಿಸಿದರು. ಅಲ್ಲದೆ ವಿಲೀನ ಪತ್ರಕ್ಕೆ ಸಹಿಯನ್ನೂ ಹಾಕಿಸಿಕೊಂಡರು. ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲು ದಿಲ್ಲಿಯಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಕಚೇರಿಯಲ್ಲಿ ಐತಿಹಾಸಿಕ ಸಭೆ ಏರ್ಪಾಡಾಯಿತು. ಆದರೆ ಅಂತಹ ಗಂಭೀರ ಸನ್ನಿವೇಶದಲ್ಲೂ ‘ವಿಶ್ವಸಂಸ್ಥೆ, ರಷ್ಯಾ, ಆಫ್ರಿಕಾ, ದೇವರು-ದಿಂಡಿರು’ ಅಂತ ನೆಹರು ಹುಂಬತನದಿಂದ ಮಾತನಾಡುತ್ತಿದ್ದರು. ಆದರೆ ತಾಳ್ಮೆ ಕಳೆದುಕೊಂಡ ಸರ್ದಾರ್ ಪಟೇಲ್, “ಜವಾಹರ್, ನಿನಗೆ ಕಾಶ್ಮೀರ ಬೇಕೋ ಅಥವಾ ಕಾಶ್ಮೀರವನ್ನು ಧಾರೆ ಎರೆಯುತ್ತೀಯೋ?” ಎಂದು ಏರು ಧ್ವನಿಯಲ್ಲಿ ಕೇಳಿದರು. ಸರ್ದಾರ್ ಮಾತಿಗೆ ಹೆದರಿದ  ನೆಹರು “ಖಂಡಿತ, ನನಗೆ ಕಾಶ್ಮೀರ ಬೇಕು” ಎಂದರು. ಹಾಗಾದರೆ “ಅನುಮತಿ ಕೊಡು” ಎಂದು ಮತ್ತೆ ಗದರಿಸಿದರು. ನೆಹರು ಅನುಮತಿಯೂ ದೊರೆಯಿತು. ಎಲ್ಲವೂ ತ್ವರಿತವಾಗಿ ಸಂಭವಿಸಲಾರಂಭಿಸಿದವು. ಮರುದಿನ ಬೆಳಗ್ಗೆ ದಿಲ್ಲಿಯ ಪಾಲಂ ಏರ್‌ಪೋರ್ಟ್ ನಿಂದ ಶ್ರೀನಗರಕ್ಕೆ ಸೇನೆ ಹಾಗೂ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಹಾಗೆ ಶ್ರೀನಗರಕ್ಕೆ ಆಗಮಿಸಿದ ಯುವ ಸೇನಾಧಿಕಾರಿಯೇ ಮೇಜರ್ ಎಸ್.ಕೆ. ಸಿನ್ಹಾ. “ಭಾರತೀಯ ಸೈನಿಕರ ಮುಖದಲ್ಲಿ ಅಂಥದ್ದೊಂದು ಉತ್ಸಾಹ, ಏನಾದರೂ ಮಾಡಬೇಕೆಂಬ ಛಲವನ್ನು ಹಿಂದೆಂದೂ ಕಂಡಿರಲಿಲ್ಲ. ಭಾರತೀಯರೆಲ್ಲರ ದೃಷ್ಟಿ ನಾವು ತೋರುವ ಶೌರ್ಯದ ಮೇಲೆಯೇ ನೆಟ್ಟಿದೆ ಎಂದು ಸೈನಿಕರಿಗೂ ಗೊತ್ತಿತ್ತು” ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಸಿನ್ಹಾ.

ಶ್ರೀನಗರ ಏರ್‌ಪೋರ್ಟ್‌ನಲ್ಲಿ ಸ್ನೇಹಿತ ಮೇಜರ್ ಸೋಮನಾಥ ಶರ್ಮಾ ಕೈಗೆ ಪಟ್ಟಿಕಟ್ಟಿಕೊಂಡು ನಿಂತಿರುವುದು ಕಂಡಿತು. ಯುದ್ಧಕ್ಕೆ ತೆರಳುವಂತೆ ಹೈದರಾಬಾದ್ ರೆಜಿಮೆಂಟ್‌ಗೆ ಸೂಚಿಸಿದ್ದ ಕಾರಣ ಸಿನ್ಹಾ ಅವರಿಗಿಂತ ಒಂದು ದಿನ ಮೊದಲೇ ಶರ್ಮಾ ಶ್ರೀನಗರಕ್ಕೆ ಆಗಮಿಸಿದ್ದರು. ಆದರೆ ಎಲ್ಲರೂ ಉತ್ಸಾಹಿತರಾಗಿದ್ದರೆ, ಶರ್ಮಾ ಮಾತ್ರ ಹ್ಯಾಪುಮೋರೆ ಹಾಕಿಕೊಂಡಿದ್ದರು. ಕೈ ಮುರಿದುಕೊಂಡಿದ್ದ ಅವರಿಗೆ ಯಾವ ಜವಾಬ್ದಾರಿಯನ್ನೂ ನೀಡಿರಲಿಲ್ಲ. ಆದರೆ ಅವರ ಹೈದರಾಬಾದ್ ರೆಜಿಮೆಂಟನ್ನು ಯುದ್ಧಕ್ಕೆ ನಿಯೋಜಿಸಿದ್ದ ಕಾರಣ ಸೇನಾ ತುಕಡಿಯೊಂದಿಗೆ ಶ್ರೀನಗರಕ್ಕೆ ಬಂದಿದ್ದರು. ಅವರ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ಸಿನ್ಹಾ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯತೆ ಹಾಗೂ ವಿವಿಧ ಸೇನಾ ತುಕಡಿಗಳ ನಡುವಿನ ಸಂಚಾಲನೆಯ ಪ್ರಾಮುಖ್ಯತೆಯ ಬಗ್ಗೆ ಶರ್ಮಾ ಜತೆ ಚರ್ಚಿಸಿದರು. ಆದರೆ ಸೋಮನಾಥ ಶರ್ಮಾ ಮನಸ್ಸು ರಣರಂಗದಲ್ಲಿ ಶತ್ರುವಿಗೆ ಸವಾಲೆಸೆಯಲು ಹಾತೊರೆಯುತ್ತಿತ್ತು. ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ ಸಿನ್ಹಾ ದಿಲ್ಲಿಗೆ ವಾಪಸ್ಸಾದರು. ಆದರೆ ಮುಂದಿನ ೪೮ ಗಂಟೆಗಳಲ್ಲಿ ಹೀರೊವೊಬ್ಬ ಹೊರಹೊಮ್ಮಿ ವೀರ ಮರಣವನ್ನಪ್ಪುತ್ತಾನೆ ಎಂದು ಅವರು ಎಣಿಸಿರಲಿಲ್ಲ.

ಅಂದು ೧೯೪೭, ನವೆಂಬರ್ ೩.

ಪಾಕಿಸ್ತಾನಿ ಸೈನಿಕರು ಶ್ರೀನಗರಕ್ಕೆ ತೀರಾ ಸಮೀಪ ದಲ್ಲಿರುವ ಬದ್ಗಾಂವರೆಗೂ ಆಗಮಿಸಿದರು. ಒಂದು ವೇಳೆ, ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋದಂತೆಯೇ. ಅಷ್ಟಕ್ಕೂ ವಿಮಾನ ನಿಲ್ದಾಣ ಕೈತಪ್ಪಿದರೆ ಕಾದಾಡುತ್ತಿದ್ದ ನಮ್ಮ ಸೇನೆಗೆ ಯುದ್ಧಸಾಮಗ್ರಿಗಳನ್ನು ಪೂರೈಸುವುದಕ್ಕೇ ಕುತ್ತು ಎದುರಾಗುತ್ತಿತ್ತು. ಸೋಲು ಖಚಿತವಾಗುತ್ತಿತ್ತು. ಶ್ರೀನಗರಕ್ಕೆ ಕಾಲಿಡುವವರೆಗೂ ಕೈಕಟ್ಟಿಕೊಂಡು ಕುಳಿತರೆ ಅಪಾಯ ಖಂಡಿತ ಎಂದರಿತ ಸೋಮನಾಥ ಶರ್ಮಾ, ಕೈ ಮುರಿದಿರುವುದನ್ನೂ ಲೆಕ್ಕಿಸದೇ ಸೇನಾ ತುಕಡಿಯನ್ನು ಕೊಂಡೊಯ್ದು ಬದ್ಗಾಂನಲ್ಲೇ ಶತ್ರುವಿಗೆ ಸವಾಲೆಸೆದರು. ಆದರೆ ಬೃಹತ್ ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ನಮ್ಮ ಒಬ್ಬ ಸೈನಿಕನಿಗೆ ಪ್ರತಿಯಾಗಿ  ೭ ಜನರಿದ್ದರು! ಆದರೂ ತುರ್ತು ಪಡೆ ಆಗಮಿಸುವವರೆಗೂ ಹೋರಾಡಬೇಕಾಗಿತ್ತು. ಶತ್ರು ಒಂದು ಇಂಚೂ ಮುಂದೆ ಬಾರದಂತೆ ತಡೆಯಬೇಕಿತ್ತು. ಮಧ್ಯಾಹ್ಮ ೨.೩೦ಕ್ಕೆ ಕಾದಾಟ ಆರಂಭವಾಯಿತು. “ಶತ್ರುಗಳು ನಮ್ಮಿಂದ ಕೇವಲ ೫೦ ಯಾರ್ಡ್ ದೂರದಲ್ಲಿದ್ದಾರೆ, ಭಾರೀ ಸಂಖ್ಯೆಯಲ್ಲೂ ಇದ್ದಾರೆ. ಆದರೇನಂತೆ ಕೊನೆಯ ಶತ್ರುವನ್ನು ಕೆಳಗೆ ಕೆಡವುವವರೆಗೂ, ಕಡೆಯ ಸುತ್ತಿನ ಗುಂಡು ಮುಗಿಯುವವರೆಗೂ ಹೋರಾಡುವೆ” ಎಂಬ ವೈರ್‌ಲೆಸ್ ಸಂದೇಶ ಕಳುಹಿಸಿದ ಸೋಮನಾಥ ಶರ್ಮಾ ಮುರಿದ ಕೈಯಲ್ಲೇ ಬಂದೂಕು ಹಿಡಿದು ಶತ್ರುವಿನ ಮೇಲೆ ಮುಗಿಬಿದ್ದರು. ಅದೇ ಅವರ ಕೊನೆಯ ಸಂದೇಶವೂ ಆಗಿತ್ತು! ಕಾದಾಟದಲ್ಲಿ ಹೈದರಾಬಾದ್ ರೆಜಿಮೆಂಟ್‌ನ ಅರ್ಧಕ್ಕರ್ಧ ಸೈನಿಕರು ಹತರಾದರು. ಆದರೇನಂತೆ ೨೦೦ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನೂ ಕೊಂದುಹಾಕಿದ ಭಾರತೀಯ ಯೋಧರು, ಶತ್ರುಗಳು ಮುಂದೆ ಹೆಜ್ಜೆ ಹಾಕಲು ಬಿಡಲಿಲ್ಲ. ಅಷ್ಟರಲ್ಲಿ ಸಾಯಂಕಾಲವಾಯಿತು, ತುರ್ತುಪಡೆಯೂ ಆಗಮಿಸಿತು. ಪಾಕಿಸ್ತಾನವನ್ನು ಮಟ್ಟಹಾಕಲಾಯಿತು.

ಆದರೆ ಶತ್ರುಗಳನ್ನು ತಡೆದು ನಿಲ್ಲಿಸಿದ ಮೇಜರ್ ಸೋಮನಾಥ್ ಶರ್ಮಾ ಹೆಣವಾಗಿದ್ದರು.

ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಯಿತು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹ ಅವರದ್ದೇ ಎಂದು ಸಾರಿ ಹೇಳಿದ್ದು ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಹಾಳೆಗಳು! ಅದುವರೆಗೂ ಯುದ್ಧ ಕಾಲದಲ್ಲಿ ತೋರುವ ಶೌರ್ಯಕ್ಕಾಗಿ ನೀಡುತ್ತಿದ್ದ ಅತಿದೊಡ್ಡ ಗೌರವವೆಂದರೆ ‘ವಿಕ್ಟೋರಿಯಾ ಕ್ರಾಸ್’ ಆಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ದಾಸ್ಯದ ಸಂಕೇತವಾಗಿದ್ದ ವಿಕ್ಟೋರಿಯಾ ಕ್ರಾಸ್ ಬದಲು ‘ಪರಮವೀರ ಚಕ್ರ’ವನ್ನು ರೂಪಿಸಲಾಯಿತು. ಪರಮವೀರ ಚಕ್ರವನ್ನು ವಿನ್ಯಾಸ ಮಾಡಿದ್ದು ಸೇನಾಧಿಕಾರಿ ವಿಕ್ರಮ್ ಕಾನೋಲ್ಕರ್ ಅವರ ಹಂಗರಿ ಮೂಲದ ಪತ್ನಿ ಸಾವಿತ್ರಿ ಕಾನೋಲ್ಕರ್(ಇವಾ ಲಿಂಡಾ). ಕುತೂಹಲದ ಸಂಗತಿಯೆಂದರೆ ಆಕೆ ವಿನ್ಯಾಸ ಮಾಡಿದ ಮೊದಲ ಪರಮವೀರ ಚಕ್ರ ಆಕೆಯ ಹಿರಿಯ ಮಗಳ ಮೈದುನ ಮೇಜರ್ ಸೋಮನಾಥ ಶರ್ಮಾ ಅವರಿಗೇ ನೀಡಲಾಯಿತು. ಮೊದಲ ಪರಮ ವೀರ ಚಕ್ರ ಪುರಸ್ಕೃತ ಸೋಮನಾಥ ಶರ್ಮಾ ಹಾಗೂ ೧೯೯೯ರಲ್ಲಿ ಮರಣೋತ್ತರವಾಗಿ ಪರಮವೀರ ಚಕ್ರ ಪಡೆದ ಕಾರ್ಗಿಲ್ ಕಲಿ ವಿಕ್ರಂ ಬಾತ್ರಾ ಇಬ್ಬರೂ ಒಂದೇ ಊರಿನವರು. ಹಿಮಾಚಲ ಪ್ರದೇಶದ ಪಾಲಂಪುರದವರು.

ಇವತ್ತು ಸೋಮನಾಥ ಶರ್ಮಾ ನಮ್ಮೊಂದಿಗಿಲ್ಲ.

ಮಡಿದು ೬೦ ವರ್ಷಗಳಾದವು. ಅಂದು ಒಬ್ಬ ಆರ್ಮಿ ಮ್ಯಾನ್ ಆಗಿದ್ದ ಅವರು ತೋರಿದ ಶೌರ್ಯದಿಂದಾಗಿ ಶ್ರೀನಗರ ವಿಮಾನ ನಿಲ್ದಾಣ ಶತ್ರುಗಳ ಪಾಲಾಗಿ ಏರ್‌ಫೋರ್ಸ್‌ಗೆ ಹಿನ್ನಡೆಯುಂಟಾಗುವುದು ತಪ್ಪಿತು. ನಾಡಿದ್ದು ಅಕ್ಟೋಬರ್ ೮ರಂದು ‘ಏರ್‌ಫೋರ್ಸ್ ಡೇ’. ಹಾಗಾಗಿ ಶರ್ಮಾ ಅವರನ್ನು ನೆನಪಿಸಿಕೊಳ್ಳಬೇಕೆನಿಸಿತು. “ಒಬ್ಬ ಅಪ್ಪನಾದವನ ಜೀವಮಾನದ ಅತ್ಯಂತ ದುಖಃಕರ ಕ್ಷಣವೆಂದರೆ ಮಗನ ಹೆಣಕ್ಕೆ ಹೆಗಲು ಕೊಡುವ ದಿನ” ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್.  ಅಮರ್‌ನಾಥ್ ಶರ್ಮಾ, ಜಿ.ಎಲ್. ಬಾತ್ರಾ ಅವರಂತಹ ತಂದೆಯರು ದೇಶ ರಕ್ಷಣೆಗಾಗಿ ಮಕ್ಕಳನ್ನೇ ಬಲಿಕೊಟ್ಟಿದ್ದಾರೆ. ಇಂತಹ ಮಹಾನ್ ತ್ಯಾಗಿಗಳ ನಡುವೆ “ಔಟ್‌ಲುಕ್ ಮ್ಯಾಗಝಿನ್‌ಗೆ ಮಾರುದ್ದದ ಆರ್ಟಿಕಲ್ ಬರೆದು ಮುಸಲ್ಮಾನರ ಇಚ್ಛೆಯಂತೆ ಕಾಶ್ಮೀರವನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ವಾದಿಸುವ ಅರುಂಧತಿ ರಾಯ್ ಅವರಂತಹ ಕ್ಷುಲ್ಲಕ ಮನಸ್ಸುಗಳೂ ಇವೆ. ಆದರೇನಂತೆ ಕೈಮುರಿದುಕೊಂಡಿದ್ದರೂ ಕಾಶ್ಮೀರವನ್ನು ಬಿಟ್ಟುಕೊಡಲು ಒಪ್ಪದ ಸೋಮನಾಥ ಶರ್ಮಾ ಅವರನ್ನು  ನಾವಾದರೂ ನೆನಪಿಸಿಕೊಳ್ಳೋಣ.

27 Responses to “ಮುರಿದ ಕೈಯಲ್ಲೇ ಕಾಶ್ಮೀರಕ್ಕಾಗಿ ಕಾದಾಡಿದವನ ನೆನಪೇಕೋ ಕಾಡುತಿದೆ”

 1. kiran says:

  i am just Speach less …………. Really Heart touching ……..

 2. kumar says:

  ಮತ್ಹೊಂದು ಉತ್ತಮ ಅಂಕಣ ನಿಮ್ಮಿಂದ ಪ್ರತಾಪ್ ರವರೆ. ಧನ್ಯವಾದಗಳು ನಿಮಗೆ.

 3. Shobha says:

  EXcellent article,
  I never miss your saturday article. Its really very informative.

  India is weak because of the persons like Arundhati Roy, Many people are like this who is against to our country only.. We dont have unity in ourselves itself.

 4. ಶ್ರೀನಿಧಿ. says:

  ಪ್ರತಾಪ್ ಅವರೆ,

  ಮೇಜರ್ ಸೋಮನಾಥ್ ಶರ್ಮಾ ಅವರ ವೀರಗಾಥೆ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು.
  ಆಟ್ಳುಕ್ ಪತ್ರಿಕೆ, ಅರುಂದತಿ ರಾಯ್, ಸಬಾ ನಕ್ವಿ ಅಂತಹವರು ಬೊಗಳುತ್ತಾ ಇರುತ್ತಾರೆ ಬಿಡಿ.

  ಶ್ರೀನಿಧಿ.

 5. Nandeesh Gowda says:

  Its good for all

 6. Shripathi Bhat says:

  Hi, Pratap Sir,
  Thank you for another mind blowing article. Again you awakened the partriotism.

 7. ವೆಂಕಟೇಶ್ says:

  ಉತ್ತಮವಾದ ರಾಷ್ಟ್ರ ಪ್ರೇಮ ಹೆಚ್ಚಿಸುವ ಲೇಖನ. ಆದರೆ ಈ ಬಾರಿ ಬಹಳ ಚುಟುಕಾಗಿ ಮುಗಿಸಿದ್ದೀರ.
  ಆದಾಗ್ಯೂ ಇಂಥಾ ಉತ್ಕೃಷ್ಟ ಬರಹಕ್ಕಾಗಿ ಧನ್ಯವಾದಗಳು.

  ‘ ಅರುಂಧತಿ ರಾಯ್ ‘ ಇವಳನ್ನು ಬಹಳಜನ ಬೆಂಗಾಲಿ ಹಿಂದೂ ಎಂದು ಅಪಾರ್ಥ ಮಾಡಿ ಕೊಳ್ಳುತ್ತಾರೆ.
  ಇವಳು ಮಲೆಯಾಳಿ / ಬೆಂಗಾಲಿ ಕ್ರಿಶ್ಚಿಯನ್. ಪೂರ್ಣ ಹೆಸರು ‘ಸುಜಾನ ಅರುಂಧತಿ ರಾಯ್’. NDTV ಯ
  ಪ್ರಣಯ್ ರಾಯ್, ಇವಳ ಹತ್ತಿರದ ಸಂಭಂಧಿ.

  ಸ್ನೇಹಿತರೇ, ಇವತ್ತು ನಮ್ಮ ಧರ್ಮ, ದೇಶ ಒಂದು ಕಡೆಯಿಂದ ಅರುಂಧತಿ ರಾಯ್, ಪ್ರಣಯ್ ರಾಯ್, ಕರುಣಾನಿಧಿ, ರಾಜಶೇಖರ ರೆಡ್ಡಿ, ಸೋನಿಯಾ ಗಾಂಧಿ, ಅಂಬಿಕಾ ಸೋನಿ ಮುಂತಾದ ಅನೇಕ ಹಿಂದೂ ಹೆಸರುಗಳಿ೦ದ ಮೋಸ ಹೋಗುತ್ತಿದೆ. ಮತಾಂತರಿ/ಕ್ರಿಶ್ಚಿಯನ್ ವಿಷ ವರ್ತುಲದಿ೦ದ ಅವರಿಸಲ್ಪಟ್ಟಿದ್ದೇವೆ.
  ಮತ್ತೊಂದು ಕಡೆಯಿಂದ ಆತಂಕಕಾರಿ ಮುಸ್ಲಿಮರು ನಮ್ಮ ಎದೆ ಸೀಳುತ್ತಿದ್ದಾರೆ.

  ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಿಂದೂ ಗಳೇ (ಬುದ್ಧಿ ಜೀವಿಗಳು ಅಂತ ಕರೆದುಕೊಳ್ಳುವರು ಮತ್ತು ರಾಜಕಾರಣಿಗಳು) ಹಿಂದಿನಿಂದ ಚೂರಿ ಹಾಕುತ್ತಿದ್ದಾರೆ.

  ನಾನು ಶ್ರೀ VK ಶಶಿಕುಮಾರ ರವರ ‘ಟೆಹೆಲ್ಕಾ’ ಲೇಖನ ಓದಿದೆ. ನಿಜಕ್ಕೂ ಭಯವಾಗುತ್ತದೆ. ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಮ್ಮ ೮೦% ಗಿಂತ ಹೆಚ್ಚಿನವರಿಗೆ ಈ ವ್ಯವಸ್ಥಿತ ಮತಾಂತರದ ಬಗ್ಗೆ ಲವ- ಲೇಶವೂ ಗೊತ್ತಿಲ್ಲ.
  ಒಟ್ಟಿನಲ್ಲಿ ನಾವು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದೇವೆ. ನಾವು ಈಗಲಾದರೂ ನಿದ್ದೆಯಿಂದ ಎದ್ದು ಸೆಟೆದು ನಿಲ್ಲ ಬೇಕು. ಶ್ರೀ ಪ್ರತಾಪ ಸಿಂಹರಂಥ ಸಮರ್ಥರಿಗೆ ಹೆಗಲು ಕೊಟ್ಟು ನಿಂತು ಹೋರಾಡಬೇಕು.
  ಹಿಂದೂ ಗಳು ಹಿಂದಿನ ಎಲ್ಲ ಅಪಾಯದ ಸ್ಥಿತಿಯಲ್ಲೂ ಒಟ್ಟಾಗಿ ಹೊರಾದಿದ್ದೇವೆ, ಇವತ್ತೂ ಒಗ್ಗಟ್ಟಿಂದ ಹೋರಾಡೋಣ.
  ಜೈ ಹಿಂದೂ…

 8. Usha Vasu says:

  I like the fire in your articles. So many times I am reminded of Swami Vivekananda when I read your articles. You touch the heart and the head and hit where it is required just like Swamy Vivekananda. We need pure, uncorrupted, ferocious journalist thinkers like you. Otherwise majority of us get swayed by what is written or shown in media which make us mediocre. Your articles reflect the good preparation that you do before writing such articles. I wait for saturdays to read your article. I am proud of you. Keep it up!

 9. Vinutha Iyengar says:

  Sir

  You are really great. Such information no one will write in Kannada. I am your fan. I eagerly await for saturday to come. Please write more of such articles.

 10. Rajesh says:

  Too good article…hats up to Somanath Sharma…..We salute you for ur success….

 11. Murthy D R says:

  Monne Arundathi Roy avrna beti aagi avra mane, kaarugalanna nanna iccheyanthe nanage baredu kodi antha kelde… Thaksanave avanna nange kottubitru… Nimagu enadru bekidre please contact her at: 420420.. Arundathi Roy ge Jai !!

  – DR

 12. Sheshu says:

  You are really great pratap…… Thanks for giving such a igniting article.

 13. Dear Pratap,
  Excellent Article.
  Endina brashta rajakaiya dindagi Enta mahanubhavara hesaru mule gumpagirodu nijakku kheada.
  “Hats up to SOMANATH SHARMA..”
  Pratap avare tamagoo dhanyavadagalu.

  -Raghavendra Shet

 14. ಶ್ರೀ ಹರ್ಷವರ್ಧನ says:

  ಮತ್ತೊಂದೊ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ಪ್ರತಾಪ್.

 15. ರಾಕೇಶ್ ಶೆಟ್ಟಿ says:

  ಪ್ರತಾಪ್,
  ಈ ಲೇಖನ ಓದುತ್ತ ನನಗೆ ಗೊತ್ತಿಲ್ಲದಂತೆ ಕಣ್ಣಾಲಿಗಳು ತೇವವಾಯ್ತು. ಅದೆಲ್ಲಿಂದಲೋ ಇಂತ ವಿಷಯಗಳನ್ನೂ ತಂದು ನಮ್ಮ ಮುಂದೆ ಇಡುತ್ತಿಯಲ್ಲ ಅದೇ ನಿನ್ನ speciality.
  ‘ಸೋಮನಾಥ ಶರ್ಮ’ ಅಂತಹ ಮಹಾನ್ ಯೋಧರಿಂದಾಗಿಯೇ ಕಾಶ್ಮೀರ ಇನ್ನು ಭಾರತದ ಅಂಗವಾಗಿ ಉಳಿದಿದೆ, ಆದರೆ ನೆಹರು ಅವರ ಹೊಣೆಗೇಡಿ ನಿರ್ಧಾರದಿಂದಾಗಿ ಕಾಶ್ಮೀರದ ಒಂದು ಭಾಗ ಇನ್ನು ಅವರ ಬಳಿಯೇ ಉಳಿದು ಬಿಟ್ಟಿದೆ.

 16. Jp says:

  Really Heart touching………………………..

 17. ಧನಂಜಯ ಎ ಎಂ says:

  ಆತ್ಮೀಯ ಪ್ರತಾಪ್,
  ನಿಜವಾಗಿಯೂ ‘ಸೋಮನಾಥ ಶರ್ಮ’ ಅವರಂತಹ ನಿಸ್ವಾರ್ಥ ಯೋಧರಿಂದಾಗಿಯೇ ನಾವು ಇಂದು ಬಾಳುತಿದ್ದೀವಿ. ಹೆಮ್ಮೆ ಅನಿಸುತಿದೆ. ಉತ್ತಮವಾದ ಲೇಖನ. ಪ್ರತಿಯೊಬ್ಬನ ರಕ್ತದಲ್ಲೂ ರಾಷ್ಟ್ರ ಪ್ರೇಮ ಹರಿಯುತಿರಬೇಕು.

 18. kiran says:

  Hats off to Major Somnath Sharma!!!We salute you.

 19. Subrahmanya says:

  really wonderful.

 20. Lohi says:

  i don how many Sharmas laid their life to protect our country……….Its India …Here we do hav People lik Arundhati Rai ji…..Let them leave lik the way they want……… But we should not forget our soldiers and their sacrifice…..!!!
  thanks Pratap ji for ur words…………

 21. lokesh shetty manglore says:

  I cant tell any thing …my eyes are wetting …thank u so…much pratap

 22. Pradhan says:

  ಪ್ರತಾಪ್ ಅವರೆ, ನೀವು ನಮ್ಮ ವೀರ ಸೈನಿಕರ ತ್ಯಾಗ, ದೇಶಪ್ರೇಮದ ಬಗ್ಗೆ ಬರೆಯುವ ಲೇಖನಗಳು ತುಂಬಾ ಹೃದಯಸ್ಪರ್ಶಿಯಾಗಿರುತ್ತವೆ…ಓದಿದ ಮೇಲೆ ರೋಮಾಂಚನದೊಂದಿಗೆ ಎದೆಯೂ ಭಾರವಾಗುತ್ತದೆ. ನಿಮಗೆ ತಿಳಿಯಬಯಸುವುದೇನೆಂದರೆ ಭಾರತ ಸರಕಾರ ೨೦೦೩ರಲ್ಲಿ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಅದು ಇಷ್ಟು ಸಮಯದಿಂದ ನನ್ನಲ್ಲಿದ್ದರೂ ಅವರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ . ತಿಳಿಸಿಕೊಟ್ಟದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು…

 23. Ashwini Bhat says:

  what can i say..??? realy tuching article.. hats of to u somanath sharma.. we r proud about u…

 24. prashanth says:

  simha avare v v menan kashmirakke raja harising ge oppisalu hogiddara atava gurooji hogiddara? dayavittu tilisi

 25. nandeeshgandhi says:

  Pratapji Thank You for good article

 26. srinivas pradhaan says:

  you are simply great!!!!!! i love your narration and courage… i am ur great fan to be honest.. may i get ur phone number??? plz plz.. every article makes me more proud to be an indian…..by this i am awaring of many truths and facts… hats off to your narration…..

 27. hi, Prathap avattu nimma lekanakke kelavu cristion naayigalu eno bogalidvu ivattu elli Amadi tinnoke hogive