Date : 27-05-2009 | 18 Comments. | Read More
ಡುಬಾಯ್ಸ್, ಮಾಲ್ಕಮ್ ಎಕ್ಸ್ , ರೋಜರ್ ವಿಲ್ಕಿನ್ಸ್, ಮಾರ್ಟಿನ್ ಲೂಥರ್ ಕಿಂಗ್, ಜೆಸ್ಸಿ ಜಾಕ್ಸನ್… ಯಾವುದೇ ಹೆಸರು ಹೇಳಿ, ಯಾರ ಹೆಸರನ್ನು ಬೇಕಾದರೂ ತೆಗೆದುಕೊಳ್ಳಿ. ಇವರೆಲ್ಲರೂ ಅತ್ಯಂತ ಜನಪ್ರಿಯ ಕರಿಯ ನಾಯಕರಾಗಿದ್ದವರೇ. ಡುಬಾಯ್ಸ್ ಅವರಂತೂ ೨೦ನೇ ಶತಮಾನದ ಪ್ರಭಾವಿ ಕರಿಯ ನಾಯಕರೆನಿಸಿಕೊಂಡಿದ್ದವರು. ಇನ್ನು ಮಾಲ್ಕಮ್ ಎಕ್ಸ್ ಅವರು ಕರಿಯರಿಗಾಗಿಯೇ ಪ್ರತ್ಯೇಕ (Blacks-Only) ರಾಜ್ಯ ಅಥವಾ ರಾಷ್ಟ್ರ ರಚನೆಗಾಗಿ ಕರೆಕೊಟ್ಟವರು. ಅಮೆರಿಕದಲ್ಲಿ ಸಮಾನ ಹಕ್ಕಿಗಾಗಿ ನಡೆದ ಕರಿಯರ ಹೋರಾಟದಲ್ಲಿ ರೋಜರ್ ವಿಲ್ಕಿನ್ಸ್ರದ್ದೂ ಸಣ್ಣ ಹೆಸರಲ್ಲ. ಮಾರ್ಟಿನ್ ಲೂಥರ್ ಕಿಂಗ್ […]
Date : 21-05-2009 | 17 Comments. | Read More
Being the largest party, BJP, should have been in the POSITION, but it is in the OPPOSITION. In contrast the second largest party, Congress, which should have been in the OPPOSITION, is neither in the POSITION nor in the OPPOSITION. Those who are in the POSITION deserve neither POSITION nor OPPOSITION. ಪ್ರಮೋದ್ ಮಹಾಜನ್ ಇಂದು ನಮ್ಮೊಂದಿಗಿಲ್ಲ, […]
Date : 13-05-2009 | 14 Comments. | Read More
ಕ್ಯೂಬಾ ರಷ್ಯಾಕ್ಕೆ ಹತ್ತಿರವಾದರೆ ಅಮೆರಿಕ ಕ್ಕೇನು ತ್ರಾಸ, ಮೆಕ್ಸಿಕೊ ಮಾದಕ ವಸ್ತು ಉತ್ಪಾದನೆ ಮಾಡಿದರೆ ಅಮೆರಿಕದ ಅಧ್ಯಕ್ಷರಿಗೇಕೆ ಕೋಪ, ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದರೆ ಜಪಾನ್ ಹಾಗೂ ದಕ್ಷಿಣ ಕೊರಿಯಾಗಳಿಗೇನು ಚಿಂತೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತನಗೆ ಖಾಯಂ ಸ್ಥಾನ ನೀಡಬೇಕೆಂದು ಬ್ರೆಝಿಲ್ ಬೇಡಿಕೆಯಿಟ್ಟರೆ ಅರ್ಜೆಂಟೀನಾವೇಕೆ ವಿರೋಧಿಸುತ್ತದೆ, ಇರಾಕ್ ಅಣುಸ್ಥಾವರ ನಿರ್ಮಾಣ ಮಾಡಲು ಹೊರಟಾಗ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿ ನಾಶಪಡಿಸಿದ್ದೇಕೆ, ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡಲು ಹೊರಟರೆ ಅಮೆರಿಕ-ಇಸ್ರೇಲ್ಗಳೇಕೆ ವಿರೋಧಿಸುತ್ತಿವೆ?
Date : 06-05-2009 | 13 Comments. | Read More
LOTUS-POTUS! ಹಾಗೆಂದರೆ ಈಗಿನ ತಲೆಮಾರಿನವರಿಗೆ ಅರ್ಥವಾಗೊಲ್ಲ ಬಿಡಿ. ಇಂದಿರಾ ಗಾಂಧಿಯವರು ಪ್ರಧಾನಿ ಯಾಗಿದ್ದ ಕಾಲದಲ್ಲಿ ಪತ್ರಕರ್ತರು ‘ಲೋಟಸ್-ಪೋಟಸ್’ ಎಂದು ಜೋಕ್ ಮಾಡುತ್ತಿದ್ದರು. ಆ ಜೋಕಿಗೆ ಕಾಲು-ಬಾಲ ಎಲ್ಲ ಸೇರಿಕೊಂಡು ಜಾನಪದ ಕಥೆಗಳಂಥ ಸ್ಟೋರಿಗಳು ಸೃಷ್ಟಿ ಯಾಗಿದ್ದವು. ಅವತ್ತು ಸಂಜಯ್ ಗಾಂಧಿಯವರ ಹೆಲಿಕಾಪ್ಟರ್ ದುರಂತಕ್ಕೀಡಾದಾಗ, ಘಟನೆ ನಡೆದ ಸ್ಥಳಕ್ಕೆ ಓಡಿಬಂದ ಇಂದಿರಾ ಗಾಂಧಿಯವರು ಮಗನ ಸಾವಿಗೆ ದುಃಖಿಸುವ ಬದಲು ಸಂಜಯ್ ಕೈಯಲ್ಲಿದ್ದ ವಾಚ್ ಹುಡುಕುತ್ತಿದ್ದರಂತೆ! ಅದರೊಳಗೆ ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಕಳ್ಳ ಹಣದ ಕೋಡ್ ಇತ್ತಂತೆ. ಆ ಕೋಡ್ ಮೊದಲ […]
Date : 01-05-2009 | 13 Comments. | Read More
ಕಳೆದ ಜನವರಿಗೂ ಮೊದಲೇ ಗುಸು ಗುಸು ಆರಂಭವಾಗಿತ್ತು. ಕಲ್ಯಾಣ್ ಸಿಂಗ್ ಪಕ್ಷ ಬಿಡುತ್ತಾರಂತೆ, ಪಕ್ಷದ ಇತರ ನಾಯಕರ ಧೋರಣೆಗಳ ಬಗ್ಗೆ ಬೇಸತ್ತಿ ದ್ದಾರಂತೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರ ನ್ನಾಗಿ ಮಾಡಿದ್ದರೂ ತಕ್ಕ ಮನ್ನಣೆ ನೀಡುತ್ತಿಲ್ಲವಂತೆ, ಅವರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆಯಂತೆ, ಪರ್ಯಾಯ ಮಾರ್ಗ ಹುಡುಕಲಾರಂಭಿಸಿದ್ದಾರಂತೆ, ಮುಲಾಯಂ ಸಿಂಗ್ ಜತೆ ಈಗಾಗಲೇ ಗೌಪ್ಯ ಮಾತುಕತೆ ನಡೆಸಿದ್ದಾರಂತೆ, ಸದ್ಯದಲ್ಲೇ ಸಮಾಜ ವಾದಿ ಪಕ್ಷವನ್ನು ಸೇರಿಕೊಳ್ಳುತ್ತಾರಂತೆ…
Date : 20-04-2009 | 26 Comments. | Read More
ಸ್ಥಳ: ಹುಸೇನ್ ನಗರ, ನರೋಡಾ ಪಾಟಿಯಾ ಪ್ರತ್ಯಕ್ಷದರ್ಶಿ: ಅಮೀನಾ ಆಪಾ ಆಗ ಬೆಳಗ್ಗೆ 9 ಗಂಟೆ 10 ನಿಮಿಷವಾಗಿತ್ತು. ಅದು 2002, ಫೆಬ್ರವರಿ 28, ಗುರುವಾರ. ನಾನು ಚಹಾ ಸಿದ್ಧಪಡಿಸುತ್ತಿದ್ದೆ. ನಮ್ಮ ಮೊಹಲ್ಲಾದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆಯೇ ಮನೆ ಕೆಲಸ ಬಿಟ್ಟು ಗಾಬರಿಯಿಂದ ಹೊರಗೋಡಿ ಬಂದಳು. ಬಜರಂಗ ದಳದ ವ್ಯಕ್ತಿಗಳು ಬರುತ್ತಿದ್ದಾರೆ ಎಂದು ಅವರು ಕೂಗುತ್ತಿದ್ದರು. ನಾನೂ ಕೂಡ ಮನೆಯಿಂದ ಹೊರಗೋಡಿದೆ. ಕಾಲುಪುರ್ ಹಾಗೂ ನರೋಡಾ ಪಾಟಿಯಾ ನಡುವೆ ಜನಜಂಗುಳಿ ಸೃಷ್ಟಿ ಯಾಗುತ್ತಿತ್ತು. ಎಲ್ಲಿ ನೋಡಿದರೂ ತಲೆ, ತಲೆ, […]
Date : 10-04-2009 | 57 Comments. | Read More
ಹೆಸರು: ಡಾ ಮನಮೋಹನ್ ಸಿಂಗ್ ಹುದ್ದೆ: ಭಾರತದ ಪ್ರಧಾನಿ ಶಿಕ್ಷಣ: ಪ್ರತಿಷ್ಠಿತ ಆಕ್ಸ್ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ೧೯೬೨ರಲ್ಲಿ ಅರ್ಥ ಶಾಸ್ತ್ರದಲ್ಲೇ ಡಾಕ್ಟರೇಟ್. ಸಾಧನೆ: 1966ರಲ್ಲಿ UNCTAD ಕಾರ್ಯದರ್ಶಿಯಾಗಿ ನೇಮಕ, 1971ರಲ್ಲಿ ಕೇಂದ್ರ ವಾಣಿಜ್ಯ ಖಾತೆಯ ಆರ್ಥಿಕ ಸಲಹೆಗಾರರಾಗಿ ನೇಮಕ, ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಉಪನ್ಯಾಸಕರಾಗಿ ಸೇವೆ, 1982ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ)ದ ಗವರ್ನರ್, 1987ರಲ್ಲಿ ‘ನ್ಯಾಮ್’ನ ‘ದಿ ಸೌತ್ ಕಮಿಷನ್’ನ ಮಹಾ ಕಾರ್ಯದರ್ಶಿಯಾಗಿ ಆಯ್ಕೆ. ಅಷ್ಟೇ ಅಲ್ಲ, 1991ರಲ್ಲಿ ಕೇಂದ್ರ ಹಣಕಾಸು […]
Date : 05-04-2009 | 55 Comments. | Read More
“ಒಂದು ವೇಳೆ ಯಾರಾದರೂ ಹಿಂದೂಗಳ ಮೇಲೆ ಕೈ ಎತ್ತಿದರೆ, ಹಿಂದೂಗಳು ದುರ್ಬಲರು, ನಾಯಕರೇ ಇಲ್ಲದವರು, ಅವರ ಹಿಂದೆ ಯಾರೂ ಇಲ್ಲ ಎಂದು ಯಾರಾದರೂ ಎಣಿಸಿದರೆ, ಹಿಂದೂಗಳತ್ತ ಬೆರಳೆತ್ತಿದ್ದರೆ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ವರುಣ್ ಗಾಂಧಿ ಆ ಕೈಯನ್ನು ಕತ್ತರಿಸುತ್ತಾನೆ. ಈ ಕೈ…ತಾವರೆಯ ಕೈ!ಎಲ್ಲರೂ ನಿಮ್ಮ ನಿಮ್ಮ ಹಳ್ಳಿಗಳಿಗೆ ಹೋಗಿ, ಈ ಕ್ಷೇತ್ರ ಮತ್ತೊಂದು ಪಾಕಿಸ್ತಾನವಾಗದಂತೆ ತಡೆಯಬೇಕಾದರೆ ಹಿಂದೂಗಳೆಲ್ಲ ಒಂದಾಗಬೇಕು ಎಂದು ಹೇಳಿ. ಹಿಂದೂಗಳೆಲ್ಲ ಒಂದೆಡೆ ನಿಂತು ಉಳಿದವರನ್ನು ಪಾಕಿಸ್ತಾನಕ್ಕೆ ತಳ್ಳಿ. ಈ ವ್ಯಕ್ತಿಗಳ ಕರೀಮುಲ್ಲಾ, […]
Date : 25-03-2009 | 16 Comments. | Read More
1.ಅಯರ್ಟನ್ ಸೆನ್ನಾ 2. ಮೈಕೆಲ್ ಶುಮಾಕರ್ 3. ಜಿಮ್ ಕ್ಲಾರ್ಕ್ 4. ನಿಗೆಲ್ ಮ್ಯಾನ್ಸೆಲ್ 5. ರಾನಿ ಪೀಟರ್ಸನ್ 6. ಜುವಾನ್ ಮ್ಯಾನ್ಯುಯೆಲ್ ಫ್ಯಾಂಜಿಯೋ 7. ಮಿಕ ಹೈಕಿನೆನ್ 8. ಫರ್ನಾಂಡೋ ಅಲೊನ್ಸೊ 9. ಜಾಕಿ ಸ್ಟಿವರ್ಟ್ 10. ಜೋಕೆನ್ ರಿಂಡ್ಟ್
Date : 16-03-2009 | 25 Comments. | Read More
“ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳ ಬಂಡವಾಳಶಾಹಿ ಆರ್ಥಿಕ ನೀತಿಯ ವಿರುದ್ಧವಾಗಿ, ಸಾಮಾಜ್ರಶಾಹಿ ಧೋರಣೆ ಹಾಗೂ ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಬೆಳವಣಿಗೆ ಇವುಗಳ ವಿರುದ್ಧವಾಗಿ ಮತ್ತು ರೈತರು, ಬಡವರು, ಶೋಷಿತರು, ಕಾರ್ಮಿಕರು, ಹಿಂದುಳಿದ ವರ್ಗದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಜನತಂತ್ರಪ್ರೇಮಿಗಳು, ಪ್ರಗತಿಪರರು ಮತ್ತು ಯುವಜನತೆ ಇವರುಗಳ ಪರವಾಗಿ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗಕ್ಕೆ ಚಾಲನೆ”.