Date : 21-12-2008 | 29 Comments. | Read More
(Photo: Master Hirannaiah, Beechi and Uday Shankar) ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
Date : 16-12-2008 | 22 Comments. | Read More
I take instructions from God! ನನ್ನನ್ನು ದೇವರೇ ಮುನ್ನಡೆಸುತ್ತಿದ್ದಾನೆ, ನನಗೆ ದೇವರೇ ಮಾರ್ಗ ತೋರುತ್ತಿದ್ದಾನೆ, ನಾನು ದೇವರಿಂದ “ನೇರವಾಗಿ” ಆe ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಳು ಫ್ರಾನ್ಸ್ನ ದಂತಕಥೆ ಜೋನ್ ಆಫ್ ಆರ್ಕ್. ಆದರೆ ಆಕೆ ಹಾಗೆ ಹೇಳಿದ್ದು ಕ್ಯಾಥೋಲಿಕ್ ಪಾದ್ರಿಗಳ ದೃಷ್ಟಿಯಲ್ಲಿ ಕ್ಷಮಿಸಲಾರದ ತಪ್ಪಾಗಿತ್ತು. ಅಷ್ಟಕ್ಕೂ ೧೪, ೧೫ನೇ ಶತಮಾನದಲ್ಲಿ ಎಂತಹ ಪರಿಸ್ಥಿತಿಯಿತ್ತೆಂದರೆ, ಯಾರಾದರೂ ದೇವರನ್ನು ಕಾಣಬೇಕಿದ್ದರೆ, ದೇವರಿಗೆ ಮೊರೆಯಿಡಬೇಕಾಗಿದ್ದರೆ ಪಾದ್ರಿಗಳ ಮುಖಾಂತರವೇ ದೇವರನ್ನು Contact ಮಾಡಬೇಕಿತ್ತು!
Date : 06-12-2008 | 35 Comments. | Read More
The Arabs will stop fighting us when they love their children more than they hate Jews! ಹಾಗಂತ ಹೇಳಿದ್ದು ಇಸ್ರೇಲ್ನ ಮಾಜಿ ಪ್ರಧಾನಿ ದಿವಂಗತ ಗೋಲ್ಡಾ ಮೈಯರ್. ಮಾರ್ಗರೆಟ್ ಥ್ಯಾಚರ್ಗಿಂತ ಮೊದಲು “Iron Lady” ಎಂದು ಕರೆಯುತ್ತಿದ್ದುದು ಗೋಲ್ಡಾ ಮೈಯರ್ ಅವರನ್ನೇ. ಇಸ್ರೇಲ್ನ ಮೊದಲ ಪ್ರಧಾನಿ ಬೆನ್ ಗುರಿಯನ್ ಅವರಂತೂ “The only man in the Cabinet” ಎಂದು ಆಕೆಯನ್ನು ವರ್ಣಿಸಿದ್ದರು.
Date : 30-11-2008 | 63 Comments. | Read More
Even the rain couldn’t dampen the spirits of thousands of cricket fans… ಅದು ಎಂಥದ್ದೇ ಸಂದರ್ಭವಾಗಿರಬಹುದು, ಯಾವುದೇ ಸ್ಥಳವಾಗಿರಬಹುದು. ಭಾರತ ಭಾಗಿಯಾಗಿರುವ ಕ್ರಿಕೆಟ್ ಪಂದ್ಯವೊಂದರ ವೇಳೆ ಮಳೆ ಬಂದರೂ ನಮ್ಮ ಕ್ರಿಕೆಟ್ ಪ್ರಿಯ ವೀಕ್ಷಕರು ಮಾತ್ರ ಜಾಗ ಬಿಟ್ಟು ಕದಲುವುದಿಲ್ಲ. ಮಳೆಯನ್ನೂ ಲೆಕ್ಕಿಸದೆ ಮತ್ತೆ ಪಂದ್ಯ ಆರಂಭವಾಗುವುದನ್ನೇ ಇದಿರು ನೋಡುತ್ತಾ ಕುಳಿತುಕೊಳ್ಳುತ್ತಾರೆ.
Date : 24-11-2008 | 18 Comments. | Read More
ನಾವು ತಮಿಳರಿಗೆ ‘ಕೊಂಗಾ’, ತೆಲುಗು ಭಾಷಿಕರಿಗೆ ‘ವಾಳ್ಳು’, ಮಲೆಯಾಳಿಗಳಿಗೆ ‘ಕುಟ್ಟಿ’ ಎಂದು ಹೇಗೆ ಕಿಚಾಯಿಸುತ್ತೇವೋ ಹಾಗೆಯೇ ಹಾಲಿವುಡ್ನಲ್ಲಿ ಯಾರನ್ನಾದರೂ, ಯಾವ ದೇಶದವರನ್ನಾದರೂ ಕಾಲೆಳೆಯಬೇಕಾದರೆ ಕೆಲವು ‘ಅಡ್ಡ’ ಹೆಸರುಗಳಿಂದ ಕರೆಯುತ್ತಾರೆ. ಅವು ಕೆಲವೊಮ್ಮೆ ಅವಮಾನಕಾರಿಯಾಗಿಯೂ, ಜನಾಂಗೀಯ ನಿಂದನೆ ಎನಿಸಿಕೊಳ್ಳುವಂತಹ ಪದಗಳಾಗಿರುತ್ತವೆ. ಕಪ್ಪುವರ್ಣೀಯರಿಗೆ ‘ನಿಗ್ಗರ್’, ಇಟಾಲಿಯನ್ಸ್ಗೆ ‘ಡ್ಯಾಗೋಸ್’, ಏಷ್ಯನ್ನರಿಗೆ ಅದರಲ್ಲೂ ವಿಯೆಟ್ನಾಮಿಯರಿಗೆ ‘ಗೂಕ್ಸ್’, ಜಪಾನಿಯರಿಗೆ ‘ಸ್ಲಿಟ್ ಐಯ್ಡ್ ಜಾಪ್ಸ್’ ಅಥವಾ ‘ನಿಪ್, ಪಿಲಿಪ್ಪೀನ್ಸ್ನವರಿಗೆ ‘ಪಿಲಿಪ್ಪೀನೋ’, ಚೀನಿಯರಿಗೆ ‘ಚಿನ್ಕ್ ’, ಇರಾಕಿಯರಿಗೆ ‘ಹಾಜಿ’-ಇಂತಹ ‘ಪದ’ಪ್ರಯೋಗಗಳನ್ನು ಹಾಲಿವುಡ್ ಚಿತ್ರ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದು.
Date : 17-11-2008 | 21 Comments. | Read More
ನಮಗೆ ಆಗಸ್ಟ್ ೧೫ ಹೇಗೋ ಪಾಕಿಸ್ತಾನಿಯರಿಗೆ ಆಗಸ್ಟ್ ೧೪ ಹಾಗೇ. ಅದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ. ಕಳೆದ ಆಗಸ್ಟ್ ೧೪ರಂದು ಬೆಳಗ್ಗೆ ಮಕ್ಕಳೆಲ್ಲಾ ಸಮವಸ್ತ್ರ ತೊಟ್ಟು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಶಾಲೆಯತ್ತ ತೆರಳುತ್ತಿದ್ದರೆ, ಸ್ನೇಹಿತರ ಜತೆ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಬಿದ್ದ ೧೫ ವರ್ಷದ ನಾಸಿರ್ ಸುಲ್ತಾನ್ ಸಂಜೆಯಾದರೂ ಹಿಂದಿರುಗಲಿಲ್ಲ.
Date : 11-11-2008 | 10 Comments. | Read More
ನನ್ನಲ್ಲೊಂದು ಕನಸಿದೆ… ನನ್ನ ನಾಲ್ವರು ಪುಟ್ಟ ಮಕ್ಕಳನ್ನು ಅವರ ಚರ್ಮದ ಬಣ್ಣಕ್ಕೆ ಬದಲು ಚಾರಿತ್ರ್ಯದಿಂದ ಅಳೆ ಯುವ ಕಾಲ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ನನ್ನಲ್ಲೊಂದು ಕನಸಿದೆ… ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾ ಮರು ಹಾಗೂ ಅವರನ್ನು ಗುಲಾಮರನ್ನಾಗಿ ಮಾಡಿದವರ ಮಕ್ಕಳು ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡಿಕೊಳ್ಳುವಂತಹ ಕಾಲ ಬಂದೇ ಬರು ತ್ತದೆ. ನನ್ನಲ್ಲೊಂದು ಕನಸಿದೆ… ಈ ರಾಷ್ಟ್ರ ಒಂದಲ್ಲ ಒಂದು ದಿನ ‘ಎಲ್ಲರೂ ಸಮಾನರು’ ಎಂಬ ಮಾನವತೆಯ ನೈಜ […]
Date : 04-11-2008 | 40 Comments. | Read More
೧೯೫೭ರಿಂದ ೬೩ರವರೆಗೂ ಬಾಬು ಜಗಜೀವನ್ ರಾಮ್, ೧೯೬೯ರಿಂದ ೭೦ರವರೆಗೂ ಡಾ. ರಾಮ್ ಸುಭಾಗ್ ಸಿಂಗ್, ೧೯೭೩ರಿಂದ ೭೫ರವರೆಗೂ ಲಲಿತ್ ನಾರಾಯಣ ಮಿಶ್ರ, ೧೯೮೦ರಿಂದ ೮೧ರವರೆಗೂ ಕೇದಾರ್ ಪಾಂಡೆ, ೧೯೯೦ರಿಂದ ೧೯೯೧ರವರೆಗೂ ಜಾರ್ಜ್ ಫರ್ನಾಂಡಿಸ್, ೧೯೯೬ರಿಂದ ೧೯೯೮ರವರೆಗೂ ರಾಮ್ ವಿಲಾಸ್ ಪಾಸ್ವಾನ್, ೨೦೦೨ರಿಂದ ೦೪ರವರೆಗೂ ನಿತೀಶ್ ಕುಮಾರ್, ೨೦೦೪ರಿಂದ ಇಂದಿನವರೆಗೂ ಲಾಲು ಪ್ರಸಾದ್ ಯಾದವ್.
Date : 30-10-2008 | 2 Comments. | Read More
“ಭಾರತವನ್ನು ಬೈಯ್ಯಿರಿ, ‘ಬುಕರ್’ ಪಡೆಯಿರಿ” ಎಂಬ ನನ್ನ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಆದರೆ ಕೆಲವೇ ಕೆಲವು ಜನರು ಅಪಸ್ವರವನ್ನೂ ಎತ್ತಿದರು. ನಮ್ಮ ದೇಶದ ಹುಳುಕನ್ನು ಎತ್ತಿತೋರಿಸುವುದರಲ್ಲಿ ತಪ್ಪೇನಿದೆ? ತಪ್ಪನ್ನೇ ಎತ್ತಿ ತೋರಿಸಬಾರದು ಎಂದರೆ ಹೇಗೆ?
Date : 28-10-2008 | 30 Comments. | Read More
ಮಿಸ್ಟರ್ ಜಿಯಾಬಾವೋ, ಇಂಟರ್ನೆಟ್ನಿಂದ ಗಗನ ನೌಕೆಗಳವರೆಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದು ಭಾರತೀ ಯರೇ. ಅವುಗಳನ್ನೆಲ್ಲ ಬ್ರಿಟಿಷರು ನಮ್ಮಿಂದ ಕದ್ದುಕೊಂಡು ಹೋದರು. ಇಂತಹ ಕಥೆಯನ್ನು ನೀವು ಭಾರತಕ್ಕೆ ಕಾಲಿಟ್ಟ ಕೂಡಲೇ ಹೇಳುತ್ತಾರೆ! Nonsense. ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ ಕೋಳಿಗೂಡು!