Date : 17-11-2008, Monday | 21 Comments
ನಮಗೆ ಆಗಸ್ಟ್ ೧೫ ಹೇಗೋ ಪಾಕಿಸ್ತಾನಿಯರಿಗೆ ಆಗಸ್ಟ್ ೧೪ ಹಾಗೇ. ಅದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ. ಕಳೆದ ಆಗಸ್ಟ್ ೧೪ರಂದು ಬೆಳಗ್ಗೆ ಮಕ್ಕಳೆಲ್ಲಾ ಸಮವಸ್ತ್ರ ತೊಟ್ಟು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಶಾಲೆಯತ್ತ ತೆರಳುತ್ತಿದ್ದರೆ, ಸ್ನೇಹಿತರ ಜತೆ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಬಿದ್ದ ೧೫ ವರ್ಷದ ನಾಸಿರ್ ಸುಲ್ತಾನ್ ಸಂಜೆಯಾದರೂ ಹಿಂದಿರುಗಲಿಲ್ಲ.
ಗಾಬರಿಗೊಂಡ ಮನೆಯವರು ನಗರವನ್ನೆಲ್ಲ ಹುಡುಕಿದರು, ಸಂಬಂಧಿಕರ ಮನೆಗಳಿಗೆಲ್ಲ ಫೋನು ಮಾಡಿ ವಿಚಾರಿಸಿ ದರು. ಯಾವ ಸುಳಿವೂ ಸಿಗಲಿಲ್ಲ. ಇತ್ತ ಯಾರಿಗೂ ಹೇಳದೇ-ಕೇಳದೇ ಹದಿಹರೆಯದ ಮಕ್ಕಳು ಮನೆ ಬಿಟ್ಟು ಓಡಿಹೋಗಿದ್ದಾರೆಂದರೆ ಭಯೋತ್ಪಾದಕರ ಜತೆ ಸೇರಿದ್ದಾರೆ ಎಂದೇ ಯೋಚಿಸಬೇಕಾದಂತಹ ಪರಿಸ್ಥಿತಿ ಪಾಕಿಸ್ತಾನದಲ್ಲಿದೆ. ನಾಸಿರ್ ಸುಲ್ತಾನ್ ಕಾಣೆಯಾದಾಗ ಅದೇ ಅನುಮಾನ ಕಾಡತೊಡಗಿತು. ಅಂತಹ ಆತಂಕ, ನೋವಿನೊಂದಿಗೇ ನಾಲ್ಕು ದಿನಗಳನ್ನು ದೂಡಿದರು. ನಾಲ್ಕನೇ ದಿನ ಸಂಜೆ ನಾಸಿರ್ ಅಪ್ಪ ಸುಲ್ತಾನ್ ಝರೀನ್ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆಬಂತು.
ಅದು ಭಾರತದ್ದಾಗಿತ್ತು!
ನಾಸಿರ್ ಸುಲ್ತಾನ್ ಭಾರತದ ಪಂಜಾಬ್‌ನ ಫರೀದ್‌ಕೋಟ್ ಜೈಲಿನಲ್ಲಿದ್ದ. ಸಹ ಕೈದಿಯ ಸೆಲ್‌ಫೋನನ್ನು ಎರವಲು ಪಡೆದುಕೊಂಡು ಕರೆ ಮಾಡಿದ್ದ. ನಾಸಿರ್ ಭಾರತದ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅವರ ಕಟ್ಟಾ ಅಭಿಮಾನಿ. ಒಂದಲ್ಲ ಒಂದು ನಾನೂ ಶಾರುಖ್ ಆಗುತ್ತೇನೆ ಎಂದು ಸ್ನೇಹಿತರ ಮುಂದೆ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದ. ಮುಂಬೈಗೆ ಹೋಗುವುದು ಹೇಗೆ ಎಂದು ಚಿಕ್ಕಪ್ಪ ಹುಸೇನ್ ಬಳಿ ಮಾರ್ಗ ಕೇಳಿಕೊಂಡಿದ್ದ. ಶಾರುಖ್ ಖಾನ್ ಆಗಬೇಕೆಂಬ ಇಚ್ಛೆ ಆತನನ್ನು ಭಾರತದತ್ತ ಸೆಳೆದಿತ್ತು. ಆಗಸ್ಟ್ ೧೪ರಂದು ಮನೆಯಿಂದ ಪರಾರಿಯಾಗಿ ಭಾರತದ ಗಡಿ ದಾಟುವಾಗ ಬಿಎಸ್‌ಎಫ್ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ನಾಸಿರ್ ಹಾಗೂ ಇನ್ನೂ ೭ ಪಾಕಿಸ್ತಾನಿ ಮಕ್ಕಳು ಇಂತಹದ್ದೇ ಆರೋಪದ ಮೇಲೆ ನಮ್ಮ ಪಂಜಾಬ್‌ನ ಬಾಲಾಪರಾಧ ಕೇಂದ್ರದಲ್ಲಿದ್ದಾರೆ. ಯಾವುದೇ ದುರುದ್ದೇಶವಿಲ್ಲದೆ ಗಡಿದಾಟಿ ಬಂಧನಕ್ಕೊಳಗಾಗಿರುವ ಈ ಮಕ್ಕಳನ್ನು ಬಿಡಿಸಿಕೊಂಡು ಹೋಗುವ ಸಲುವಾಗಿ ಮೊನ್ನೆ ಅಕ್ಟೋಬರ್ ೨೯ರಂದು ಅನ್ಸರ್ ಬುರ್ನಿ ಭಾರತಕ್ಕೆ ಬಂದಿದ್ದರು. ಹಾಗೆ ಬಂದವರು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಲಾಲ್ ಕೃಷ್ಣ ಆಡ್ವಾಣಿಯವರನ್ನು ಭೇಟಿಯಾಗಿದ್ದರು. ಶಿಕ್ಷಾ ಅವಧಿ ಮುಗಿದ ನಂತರವೂ ಜೈಲುಗಳಲ್ಲೇ ಕೊಳೆಯುತ್ತಿರುವ ಪಾಕಿಸ್ತಾನದ ಎಷ್ಟೋ ಕೈದಿಗಳು ಭಾರತದಲ್ಲಿದ್ದಾರೆ. ಅವರ ಬಿಡುಗಡೆಗೆ ಸಹಕಾರ ನೀಡಬೇಕೆಂದು ಬುರ್ನಿ ಮಾಡಿದ ಮನವಿಗೆ ಪೂರಕವಾಗಿ ಪ್ರತಿಕ್ರಿಯಿಸಿದ ಆಡ್ವಾಣಿ, ವಿಚಾರ ವನ್ನು ಭಾರತ ಸರಕಾರದ ಮುಂದಿಟ್ಟು ಬಿಡುಗಡೆಗೆ ಪ್ರಯತ್ನಿ ಸುವುದಾಗಿ ಭರವಸೆ ನೀಡಿದ್ದಾರೆ.
ಈ ಅನ್ಸರ್ ಬುರ್ನಿ ಯಾರೆಂದು ನೆನಪಾಯಿತೆ?
ಗೂಢಚರ್‍ಯದ ಆರೋಪದ ಮೇಲೆ ಮೂವತ್ತೈದು ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿದ್ದ ಕಾಶ್ಮೀರ್ ಸಿಂಗ್‌ನನ್ನು ಬಿಡಿಸಿ ಭಾರತಕ್ಕೆ ಕಳುಹಿಸಿದ್ದು (ಕಳೆದ ಮಾರ್ಚ್ ೪ರಂದು) ಮತ್ತಾರೂ ಅಲ್ಲ ಬುರ್ನಿ. ಒಂದು ವೇಳೆ ಅನ್ಸರ್ ಬುರ್ನಿಯವರು ತಮ್ಮ ಕಾಸು ಖರ್ಚು ಮಾಡಿ, ಕೋರ್ಟ್ ಮೆಟ್ಟಿಲೇರಿ, ಕೊನೆಗೆ ಮುಷರ್ರಫ್ ಮುಂದೆ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿ ಗೋಗರೆಯದೇ ಹೋಗಿದ್ದಿದ್ದರೆ ಕಾಶ್ಮೀರ್ ಸಿಂಗ್ ಇಂದಿಗೂ ಪಾಕಿಸ್ತಾನದ ಜೈಲಿನಲ್ಲೇ ಕೊಳೆಯುತ್ತಿರುತ್ತಿದ್ದರು. ಬುರ್ನಿಯವರ ಕಾಳಜಿಗೆ ದೇಶ, ಧರ್ಮದ ತಾರತಮ್ಯವಿಲ್ಲ. ಸ್ವತಃ ಜೈಲು ಸೇರಿ, ನರಕಯಾತನೆ ಅನುಭವಿಸಿರುವ ಅವರಿಗೆ ನೋವು, ಯಾತನೆಗೆ ದೇಶವೆಂಬ ಎಲ್ಲೆಯಿಲ್ಲ ಎಂಬುದು ತಿಳಿದಿದೆ.
ನಮ್ಮಲ್ಲಿ ಕಾಣಸಿಗುವ Self Styled Human Rights Activistsಗಳಿಗೂ ಬುರ್ನಿಯವರಿಗೂ ಇರುವ ವ್ಯತ್ಯಾಸವೇ ಅದು.
ಅನ್ಸರ್ ಬುರ್ನಿ ಜನಿಸಿದ್ದು ೧೯೫೬ರಲ್ಲಿ ಹಾಗೂ ಪಾಕಿ ಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ ೧೪ರಂದು. ಪಾಕಿಸ್ತಾನ ತಾನೊಂದು ಗಣರಾಜ್ಯವೆಂದು ಘೋಷಣೆ ಮಾಡಿಕೊಂಡಿದ್ದೂ ಅದೇ ವರ್ಷ. ಆದರೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತರೂ ಆಳುವವರ ದೌರ್ಜನ್ಯದಿಂದ ಜನರಿಗೆ ಮುಕ್ತಿ ಸಿಗಲಿಲ್ಲ. ಒಂದು ಬಲಿಷ್ಠ ಪ್ರಜಾತಾಂತ್ರಿಕ ರಾಷ್ಟ್ರವಾಗಿ ಪಾಕ್ ಹೊರಹೊಮ್ಮಲಿಲ್ಲ. ಮಿಲಿಟರಿ ಕ್ಷಿಪ್ರಕ್ರಾಂತಿ, ಸೇನಾ ಆಡಳಿತ ದೇಶಕ್ಕೆ ದೊಡ್ಡ ತಲೆನೋವಾಗ ತೊಡಗಿತು. ಎಷ್ಟೋ ಜನ ಅಮಾಯಕ ಮಹಿಳೆಯರು, ಮಕ್ಕಳು ಜೈಲು ಸೇರುತ್ತಿರುವುದನ್ನು ಬುರ್ನಿಗೆ ನೋಡ ಲಾಗಲಿಲ್ಲ. ಕಾನೂನು ಪದವಿ ಪಡೆಯಲು ಕರಾಚಿ ವಿಶ್ವವಿದ್ಯಾಲಯವನ್ನು ಸೇರಿದ ಅವರು ಸೇನಾ ಆಡಳಿತದ ವಿರುದ್ಧ ಕಾಲೇಜಿನ ವೇದಿಕೆಗಳಲ್ಲೇ ದನಿಯೆತ್ತ ತೊಡಗಿದರು. ರೊಚ್ಚಿಗೆದ್ದ ಮಿಲಿಟರಿ ಬುರ್ನಿಯವರನ್ನು ಬಂಧಿಸಿ ಜೈಲಿಗೆ ತಳ್ಳಿತು. ಯಾವುದೇ ಬಲವಾದ ಕಾರಣಗಳಿಲ್ಲದಿದ್ದರೂ ೮ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಹಾಗೆ ಶಿಕ್ಷೆ ಅನುಭವಿಸಿ ಹೊರಬಂದ ಬುರ್ನಿ, ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮತ್ತೆ ಸೇನಾ ಆಡಳಿತದ ವಿರುದ್ಧ ಭಾಷಣ ಮಾಡಿದರು, ಪುನಃ ಜೈಲು ಸೇರಿದರು. ಆದರೆ ಮೂರನೇ ಬಾರಿಗೆ ಜೈಲು ಸೇರಿದ ಅವರು, ಶಿಕ್ಷೆ ಮುಗಿಸಿ ಹೊರಬಂದ ನಂತರ ಭಾಷಣ ಮಾಡುವ ಬದಲು ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. ಕಾನೂನಿ ನಲ್ಲಿ ಎಷ್ಟು ತೊಡಕಿದೆ ಎಂಬುದು ಜೈಲು ಸೇರಿದವರಿಗೆ ಮಾತ್ರ ಅರಿವಾಗುತ್ತಿತ್ತು. ಜೈಲಿನಲ್ಲಿ ಹೊಲಸು ಬೈಗುಳ, ದೈಹಿಕ ಹಿಂಸೆಗೆ ಗುರಿಯಾಗಿದ್ದ ಬುರ್ನಿ, ಕಾನೂನು ಪದವಿಯನ್ನು ಮುಗಿಸಿದ ಕೂಡಲೇ ವಕೀಲನಾಗಿ ಮಾನವ ಹಕ್ಕುಗಳ ಸಂರಕ್ಷಣೆಗಿಳಿದರು. ಆ ಸಲುವಾಗಿ ‘ಅನ್ಸರ್ ಬುರ್ನಿ ವೆಲ್ಫೇರ್ ಟ್ರಸ್ಟ್ ಮತ್ತು ಕೈದಿಗಳ ಸಹಾಯ ಸಮಾಜ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಅದರ ಮೂಲಕ ಅನ್ಯಾಯಕ್ಕೊಳಗಾಗಿ ಜೈಲು ಸೇರಿರುವವರಿಗೆ, ಕಾನೂನುಬಾಹಿರವಾಗಿ ಜೈಲಿನಲ್ಲೇ ಕೊಳೆಯುತ್ತಿರುವವರಿಗೆ, ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಮತ್ತು ಮಕ್ಕಳಿಗೆ ದೇಶಾದ್ಯಂತ ಉಚಿತ ಕಾನೂನು ಸಹಾಯ ಸೌಲಭ್ಯ ಒದಗಿಸಲಾರಂಭಿಸಿದರು. ಇಂತಹ ಪ್ರಯತ್ನದ ಫಲವಾಗಿ ಸಾವಿರಾರು ಜನರು ಕಾನೂನು ಬಾಹಿರ ಜೈಲುವಾಸದಿಂದ ಮುಕ್ತಿ ಪಡೆದು ಹೊರಬಂದಿದ್ದಾರೆ!
ಅದರಲ್ಲೂ ಜಫ್ರಾನಾ ಬೀಬಿ ಕೊನೆಯುಸಿರಿರುವವರೆಗೂ ಬುರ್ನಿಯವರನ್ನು ನೆನಪಿಸಿಕೊಳ್ಳಬೇಕು.
ಆಕೆ ಪಾಕಿಸ್ತಾನದ ಕೊಹತ್ ಎಂಬ ಗ್ರಾಮಕ್ಕೆ ಸೇರಿದ ವಳು. ನೈಮತ್ ಖಾನ್ ಎಂಬವರ ಜತೆ ಆಕೆಯ ವಿವಾಹವೂ ಆಯಿತು. ಆದರೆ ಮದುವೆಯಾಗಿ ಕೆಲ ದಿನಗಳಲ್ಲೇ ಕೊಲೆಯೊಂದರ ಆರೋಪದ ಮೇಲೆ ಆಕೆಯ ಗಂಡ ಜೈಲು ಸೇರಿದ. ಇತ್ತ ಅತ್ತೆ ಮನೆಯಲ್ಲಿ ದಿನ ದೂಡಲಾರಂಭಿಸಿದ ಜಫ್ರಾನಾಳಿಗೆ ಮೈದುನ ಜಮಾಲ್ ಖಾನ್ ದೊಡ್ಡತಲೆನೋವಾದ. ಕೊನೆಗೊಂದು ದಿನ ಆಕೆಯ ಮೇಲೆ ಅತ್ಯಾಚಾರವನ್ನೂ ಎಸಗಿದ. ಆದರೆ ವಿಷಯ ತಿಳಿದ ಅತ್ತೆ-ಮಾವ ಅನುಕಂಪದ ನಾಟಕವಾಡಿದರು. ಇತ್ತ ಅದೇ ಗ್ರಾಮದ ಅಕ್ಮಲ್ ಖಾನ್ ಎಂಬಾತ ಜಫ್ರಾನಾಳ ನಾದಿನಿಯನ್ನು ವಿವಾಹವಾಗುವ ಪ್ರಸ್ತಾಪವನ್ನಿಟ್ಟ. ಆದರೆ ಎರಡೂ ಕುಟುಂಬಗಳ ಮಧ್ಯೆ ಮೊದಲಿನಿಂದಲೂ ವೈಷಮ್ಯವಿತ್ತು. ಹಾಗಾಗಿ ಆತನ ಪ್ರಸ್ತಾಪವನ್ನು ತಿರಸ್ಕರಿಸಿದರು. ಈ ಮಧ್ಯೆ ಜಫ್ರಾನಾ ಗರ್ಭಿಣಿಯಾಗಿರುವುದು ತಿಳಿದು ಬಂತು. ಮಗ ಜಮಾಲ್ ಖಾನ್ ವಿರುದ್ಧವೇ ದೂರು ನೀಡೋಣ ಎಂದು ನಂಬಿಸಿ ಜಫ್ರಾನಾಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಅತ್ತೆ-ಮಾವ ಲಿಖಿತ ದೂರಿನ ಮೇಲೆ ಹೆಬ್ಬೆರಳ ಮುದ್ರೆಯನ್ನು ಒತ್ತಿಸಿಕೊಂಡರು. ಅನಕ್ಷರಸ್ಥೆಯಾದ ಆಕೆಗೆ ಏನೂ ತಿಳಿಯಲಿಲ್ಲ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಜಮಾಲ್ ಖಾನ್ ಎಂದು ದಾಖಲಿಸುವ ಬದಲು ಅಕ್ಮಲ್ ಖಾನ್ ಹೆಸರು ಬರೆದಿದ್ದರು! ಒಂದೆಡೆ ವೈಷಮ್ಯಕ್ಕೆ ಪ್ರತೀಕಾರವನ್ನೂ ತೆಗೆದುಕೊಂಡರು, ಇನ್ನೊಂದೆಡೆ ಸಮಸ್ಯೆ ಯಿಂದ ಮಗನನ್ನೂ ಪಾರು ಮಾಡಲು ಯತ್ನಿಸಿದರು! ಇಂತಹ ಕುತಂತ್ರವನ್ನು ಕೊನೆಗೂ ಅರಿತ ಜಫ್ರಾನಾ ನ್ಯಾಯಾಧೀಶರ ಮುಂದೆ ನಿಜ ಸಂಗತಿಯನ್ನು ಹೇಳಿದಳು. ಆದರೆ ಆಕೆಯ ಮಾತಿಗೆ ಬೆಲೆ ಸಿಗಲಿಲ್ಲ. ‘ವ್ಯಭಿಚಾರ’ದ ಆರೋಪದ ಮೇಲೆ ೨೦೦೨, ಏಪ್ರಿಲ್ ೧೭ರಂದು ಆಕೆಗೆ ಮರಣ ದಂಡನೆಯನ್ನು ವಿಧಿಸಲಾಯಿತು. ಷರಿಯತ್ ಪ್ರಕಾರ ವ್ಯಭಿಚಾರವೆಸಗುವ ಮಹಿಳೆಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆಯದು. ಇಂತಹ ಅಮಾನವೀಯ ಶಿಕ್ಷೆ ನೀಡಿರುವುದು ತಿಳಿದ ಕೂಡಲೇ ಕಾನೂನು ಸಹಾಯ ನೀಡಲು ವಕೀಲರ ತಂಡವೊಂದನ್ನು ಕಳುಹಿಸಿದ ಅನ್ಸರ್ ಬುರ್ನಿ ಟ್ರಸ್ಟ್, ಶಿಕ್ಷೆಗೆ ತಡೆಯಾe ಸಿಗುವಂತೆ ಮಾಡಿತು. ಅಷ್ಟೇ ಅಲ್ಲ, ಜೈಲಿನಲ್ಲಿದ್ದ ಆಕೆಯ ಗಂಡನ ಮನವೊಲಿಸಿ ‘ಮಗು ತನ್ನದೇ, ಜೈಲಿನಲ್ಲಿ ತನ್ನನ್ನು ಖಾಸಗಿಯಾಗಿ ಭೇಟಿ ಮಾಡಿದಾಗ ಪತ್ನಿ ಜತೆ ಸಂಪರ್ಕ ಮಾಡಿದ ಕಾರಣ ಆಕೆ ಗರ್ಭಿಣಿಯಾಗಿದ್ದಾಳೆ’ ಎಂದು ಕೋರ್ಟ್ ಮುಂದೆ ಹೇಳಿಸಿ ದರು. ಮಗು ತನ್ನದೆಂದು ಗಂಡನೇ ಪ್ರತಿಪಾದಿಸಿದ ಕಾರಣ ಜಫ್ರಾನಾ ಬಿಡುಗಡೆಯಾಗಿ ಮನೆಗೆ ಬಂದಳು. ಬುರ್ನಿಯವರ ಕಾಳಜಿಗೆ ಕನ್ನಡಿಗೆ ಕನ್ನಡಿ ಹಿಡಿಯುವ ಇಂತಹ ಸಾಕಷ್ಟು ನಿದರ್ಶನಗಳಿವೆ.
ಪಾಕಿಸ್ತಾನದ ಬುರ್ನಿ ಭಾರತದ ಸ್ನೇಹಿತರೂ ಹೌದು.
ಕಟ್ಟಾ ಹಿಂದುತ್ವವಾದಿ ಎಂದೇ ಹೆಸರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರಂತಹ ನಾಯಕರೇ ಪಾಕಿಸ್ತಾನಿ ಕೈದಿಗಳ ಬಿಡುಗಡೆ ವಿಚಾರವನ್ನು ಸರಕಾರದ ಮುಂದಿಟ್ಟು ಚರ್ಚಿಸು ವುದಾಗಿ ಭರವಸೆ ನೀಡಿದ್ದಾರೆಂದರೆ ಬುರ್ನಿಯವರದ್ದು ಅದೆಂಥ ವ್ಯಕ್ತಿತ್ವವಿರಬಹುದು?! ತಾತ್ಕಾಲಿಕ ಅವಧಿಗೆ ಪಾಕಿಸ್ತಾನದ ಮಾನವ ಹಕ್ಕು ಖಾತೆ ಸಚಿವರಾಗಿದ್ದಾಗ ನಮ್ಮ ಕಾಶ್ಮೀರ್ ಸಿಂಗ್‌ನನ್ನು ಬಿಡುಗಡೆಗೊಳಿಸಿದ್ದಲ್ಲದೆ, ೧೯೯೧ರಲ್ಲಿ ೧೪ ಜನರನ್ನು ಬಲಿತೆಗೆದುಕೊಂಡ ಲಾಹೋರ್ ಬಾಂಬ್ ಸ್ಫೋಟದ ರೂವಾರಿ ಎಂಬ ಆರೋಪದ ಮೇಲೆ ಕಳೆದ ೧೭ ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿರುವ ಸರಬ್‌ಜಿತ್ ಸಿಂಗ್ ಪ್ರಕರಣವನ್ನು ಬೆಳಕಿಗೆ ತಂದು, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದೂ ಬುರ್ನಿಯವರೇ. ಕಳೆದ ವರ್ಷ ಸರಬ್‌ಜಿತ್ ಅವರ ಇಬ್ಬರು ಪುತ್ರಿಯರು ಹಾಗೂ ಅಕ್ಕ ದಲ್ಬೀರ್ ಕೌರ್ ಅವರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಆತಿಥ್ಯ ನೀಡಿ, ಜೈಲಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ ಬುರ್ನಿ, ಸರಬ್‌ಜಿತ್ ಒಬ್ಬ ಅಮಾಯಕ ವ್ಯಕ್ತಿಯಾಗಿದ್ದು ಆತನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಸ್ವಂತ ಖರ್ಚಿನಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸರಬ್‌ಜಿತ್ ಪರವಾಗಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಮಾಜಿ ಪಾಕ್ ಅಧ್ಯಕ್ಷ ಮುಷರ್ರಫ್ ತಿರಸ್ಕರಿಸಿದ ನಂತರವೂ ಧೃತಿಗೆಡದೆ ಹೊಸ ಅಧ್ಯಕ್ಷರ ಮುಂದೆ ಎರಡನೇ ಬಾರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ಬುರ್ನಿಯವರ ಪ್ರಯತ್ನದ ಫಲವಾಗಿಯೇ ಸರಬ್‌ಜಿತ್ ಅವರನ್ನು ಗಲ್ಲಿಗೇರಬೇಕಾಗಿರು ವವರನ್ನು ಇಡುವ ಲಾಹೋರ್‌ನ ಕೋಟ್ ಲೋಕಪತ್ ಜೈಲಿನಿಂದ ಇತ್ತೀಚೆಗೆ ವರ್ಗಾಯಿಸಲಾಗಿದೆ.
ಭಾರತದಂತಹ ಶತ್ರು ರಾಷ್ಟ್ರದ, ಅದರಲ್ಲೂ ಪಾಕ್ ನೆಲದಲ್ಲಿ ಬಾಂಬ್ ಸ್ಫೋಟ ಮಾಡಿರುವ ಆರೋಪ ಹೊತ್ತಿರುವ ವ್ಯಕ್ತಿಯ ಬಿಡುಗಡೆಗಾಗಿ ಪ್ರಯತ್ನಿಸುತ್ತಿರುವ ಬುರ್ನಿಯವರನ್ನು ನಾವೇನೋ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದೇವೆ. ಆದರೆ ಪಾಕಿಸ್ತಾನಿಯರಿಗೆ ಬುರ್ನಿ ವಿಲನ್ ಆಗಿ ಕಾಣುತ್ತಿದ್ದಾರೆ. “ಭಾರತೀಯ ಭಯೋತ್ಪಾದಕರ ರಕ್ಷಕ” ಎಂದು ದೂರುತ್ತಿದ್ದಾರೆ. ಕೆಲವರಿಂದ ದೇಶದ್ರೋಹಿ ಎಂಬ ಮಾತುಗಳನ್ನೂ ಕೇಳಿಸಿಕೊಳ್ಳಬೇಕಾಗಿ ಬಂದಿದೆ. ಬುರ್ನಿ ಜೀವಕ್ಕೇ ಅಪಾಯ ಎದುರಾಗಿದೆ. ಕಳೆದ ಶುಕ್ರವಾರ (ನವೆಂಬರ್ ೭)ವಂತೂ ಅನ್ಸರ್ ಬುರ್ನಿಯವರು ಇನ್ನೇನು ಕಚೇರಿಯಿಂದ ಹೊರಬಂದು ಕಾರುಹತ್ತಲು ಅನುವಾಗಬೇಕು ಎನ್ನುವಷ್ಟರಲ್ಲಿ ಕಚೇರಿಯ ಮೇಲೆ ಸತತ ೧೫ ನಿಮಿಷಗಳ ಕಾಲ ಗುಂಡಿನ ಸುರಿಮಳೆಗೈಯ್ಯಲಾಗಿದೆ. ಬುರ್ನಿಯವರಿಗೆ ನೀಡಲಾಗಿದ್ದ ಭದ್ರತೆಯನ್ನು ಪಾಕ್ ಸರಕಾರ ಹಿಂತೆಗೆದುಕೊಂಡ ಬೆನ್ನಲ್ಲೇ ಇಂತಹ ಆಕ್ರಮಣ ನಡೆದಿದೆ. ಅದೃಷ್ಟವಶಾತ್ ಬುರ್ನಿಯವರಿಗೆ ಏನೂ ಆಗಿಲ್ಲ. “ಮಾನವ ಹಕ್ಕುಗಳ ರಕ್ಷಣೆ ಎಂತಹ ಅಪಾಯ ತಂದೊಡ್ಡ ಬಲ್ಲದು ಎಂಬುದರ ಅರಿವು ನನಗಿದೆ. ಆದರೆ ನಾನು ಹೋರಾಡುತ್ತಿರುವುದು ಮಾನವ ಹಕ್ಕುಗಳ ಪರವಾಗಿಯೇ ಹೊರತು ಭಾರತೀಯರು, ಪಾಕಿಸ್ತಾನಿಯರು, ಹಿಂದೂಗಳು, ಯಹೂದಿಗಳು ಅಥವಾ ಕ್ರಿಶ್ಚಿಯನ್ನರ ಪರವಾಗಿ ಅಲ್ಲ” ಎಂದಿದ್ದಾರೆ.
ಬುರ್ನಿಯವರಂತಹ ಮಾನವ ಹಕ್ಕು ಹೋರಾಟಗಾರರು ನಮ್ಮಲ್ಲೂ ಇದ್ದಾರೆ ಎಂದು ನೀವು ಹೇಳಬಹುದು. ಅರುಂಧತಿ ರಾಯ್, ತೀಸ್ತಾ ಸೆತಲ್ವಾಡ್‌ಗಳು ನಿಮ್ಮ ನೆನಪಿಗೆ ಬರಬಹುದು. ಅಫ್ಜಲ್ ಗುರುವಿನ ಪರ ಹೋರಾಡುತ್ತಿರುವ ಇವರನ್ನೇಕೆ ಟೀಕಿಸುತ್ತಾರೆ ಎಂದು ಪ್ರಶ್ನಿಸಬಹುದು. ನಮಗೆ ಅಫ್ಜಲ್ ಗುರು ಹೇಗೆ ದೇಶದ್ರೋಹಿಯಂತೆ ಕಾಣುತ್ತಾನೋ ಹಾಗೆಯೇ ಕಾಶ್ಮೀರ್ ಸಿಂಗ್, ಸರಬ್‌ಜಿತ್ ಪಾಕಿಸ್ತಾನಿಯರ ಪಾಲಿಗೆ ದೇಶದ್ರೋಹಿಯಲ್ಲವೆ? ಎಂದು ಕೇಳಬಹುದು.
ವ್ಯತ್ಯಾಸ ಇರುವುದೇ ಅಲ್ಲಿ.
ನಮ್ಮ ಅರುಂಧತಿ ರಾಯ್, ತೀಸ್ತಾ ಸೆತಲ್ವಾಡ್‌ಗಳ ಹೋರಾಟ, ಬೊಬ್ಬೆಗೆ ಧರ್ಮವೇ ಮಾನದಂಡ. ಈಚೆಗೆ ದಿಲ್ಲಿಯಲ್ಲಿ ಬಂಧಿತರಾದ ಇಬ್ಬರು ಶಂಕಿತ ಉಗ್ರರಿಗೆ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಸರಕಾರದ ಹಣ ಖರ್ಚುಮಾಡಿ ಕಾನೂನು ಸಹಾಯ ನೀಡಲು ಮುಂದಾಗಿದ್ದನ್ನು ಸಮರ್ಥಿಸುವ ಇವರು, ಸಾಧ್ವಿ ಪ್ರeಸಿಂಗ್‌ಗೆ ಶಿವಸೇನೆ ಕಾನೂನು ಸಹಾಯ ನೀಡುವ ಮಾತನಾಡಿದ ಕೂಡಲೇ ಕೋಮುವಾದಿಗಳು ಎಂದು ಪಟ್ಟಕಟ್ಟುತ್ತಾರೆ. ಆರೋಪ ಸಾಬೀತಾಗುವವರೆಗೂ ನಿರಪರಾಧಿಗಳು, ಅವ ರನ್ನು ಉಗ್ರರು ಎಂದು ಚಿತ್ರಿಸಬೇಡಿ ಎಂದು ಬೋಧನೆ ನೀಡುವ ರಾಯ್, ಸೆತಲ್ವಾಡ್‌ಗಳು ಸಾಧ್ವಿ ಪ್ರeಸಿಂಗ್ ಬಂಧನಕ್ಕೊಳಗಾದ ಕೂಡಲೇ “ಸ್ಯಾಫ್ರನ್ ಟೆರರ್” ಎಂದು ತೀರ್ಪನ್ನೇ ಕೊಟ್ಟುಬಿಡುತ್ತಾರೆ. ಪ್ರeಸಿಂಗ್ ಮತ್ತು ಪುರೋಹಿತ್ ಅವರನ್ನೂ ಆರೋಪ ದೃಢೀಕರಣ ಗೊಳ್ಳು ವವರೆಗೂ ಏಕೆ ನಿರಪರಾಧಿಗಳು ಎಂಬಂತೆ ಕಾಣುವು ದಿಲ್ಲ? ಒರಿಸ್ಸಾದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಬೊಬ್ಬೆ ಹಾಕುವ ಇವರು, ೨೦೦೫ರಲ್ಲಿ ಮಧ್ಯಪ್ರದೇಶದ ಚರ್ಚ್ ಆವರಣದೊಳಗೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹಿಂದೂ ಬಾಲಕಿ ಸುಜಾತಾಳ ಬಗ್ಗೆ ಧ್ವನಿಯನ್ನೇ ಎತ್ತುವುದಿಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಕ್ರೈಸ್ತ ಮತಪ್ರಚಾರಕರು, ಅಪಾಯಕ್ಕೆ ಆಹ್ವಾನ ನೀಡಿ ದೌರ್ಜನ್ಯಕ್ಕೊಳಗಾಗುವ ನನ್‌ಗಳು, ದೇಶಕ್ಕೇ ಬಾಂಬಿಟ್ಟು ಸಿಕ್ಕಿಬೀಳುವವರಿಗಷ್ಟೇ ಮಾನವ ಹಕ್ಕಿದೆ ಎಂಬಂತೆ ಇವರು ವರ್ತಿಸುತ್ತಾರೆ. ಭಾರತದಿಂದ ಮತ್ತೆ(ಅಕ್ಟೋಬರ್ ೧೫) ಹೊರದಬ್ಬಲ್ಲಟ್ಟಿರುವ ತಸ್ಲಿಮಾ ನಸ್ರೀನ್ ಅವರ ಬದುಕಿನ ಹಕ್ಕಿನ ಬಗ್ಗೆಯೂ ಇವರಿಗೆ ಕಾಳಜಿಯಿಲ್ಲ, ಧ್ವನಿಯನ್ನೂ ಎತ್ತುವುದಿಲ್ಲ. ಇಂತಹ ಇಬ್ಬಂದಿತನದಿಂದಾಗಿಯೇ, ಅಲ್ಪ ಸಂಖ್ಯಾತರ ಪಕ್ಷಪಾತಿಗಳು ಎಂಬ ಕಾರಣಕ್ಕಾಗಿಯೇ ಈ ದೇಶದ ಬಹುಸಂಖ್ಯಾತರು ನಮ್ಮ ಮಾನವ ಹಕ್ಕು ಹೋರಾಟಗಾರರಿಗೆ ಗೌರವ ಕೊಡುತ್ತಿಲ್ಲ.
ಆದರೆ ಬುರ್ನಿ ಪಾಕಿಸ್ತಾನದವರಾದರೂ ದೇಶ, ಧರ್ಮ ನೋಡಿ ಮಾನವ ಹಕ್ಕು ಪ್ರತಿಪಾದನೆ ಮಾಡುವುದಿಲ್ಲ. ಅವರ ಮಾನವ ಪ್ರೀತಿ, ಕಾಳಜಿಗೆ ದೇಶ, ಧರ್ಮ, ಮತದ ಹಂಗಿಲ್ಲ, ಜಫ್ರಾನಾಳಿಗೆ ಒದಗಿಬಂದ ಪರಿಸ್ಥಿತಿಯ ಬಗ್ಗೆ ಮರುಗುವ ಅವರ ಮನಸು, ಕಾಶ್ಮೀರ್ ಸಿಂಗ್ ಹಾಗೂ ಸರಬ್‌ಜಿತ್ ಸಿಂಗ್‌ಗೂ ಮಿಡಿಯುತ್ತದೆ. ಬುರ್ನಿಯವರಂತಹ ತಾರತಮ್ಯರಹಿತ ಮನಸ್ಸುಗಳು ನಮ್ಮ ನಡುವೆ ಇರಬೇಕು. ಆಗ ಮಾತ್ರ ಹಿಂದುತ್ವವಾದಿ ಪಕ್ಷವೊಂದರ ನಾಯಕರೂ ಧರ್ಮವನ್ನು ಮೀರಿ ಸ್ಪಂದಿ ಸಲು ಮುಂದಾಗುತ್ತಾರೆ. ಪಾಕಿಸ್ತಾನಿಯರು ಹಾಗೂ ಭಾರತೀಯರ ನಡುವೆ ಇರುವ ಅಪನಂಬಿಕೆ, ವೈಷಮ್ಯ ಮರೆಯಾಗಬೇಕಾದರೆ ಬುರ್ನಿಯವರಂತಹ ಸಾಕಷ್ಟು ಶುದ್ಧ ಮನಸ್ಸುಗಳು ಹೊರಹೊಮ್ಮಬೇಕು. ಸದ್ಯಕ್ಕೆ ಇರುವ ಒಬ್ಬರಾದರೂ ಸುರಕ್ಷಿತವಾಗಿರಲಿ.
Let’s pray for his safety.
Let’s Pray for safety of Mr.Ansar Burni….!
Thanks for a great article stating the Humanity to be present in all the people without consideration of their religion, community, caste, culture, country!!!
ಮೊದಲೠನಿನà³à²¨ ಮನವನà³à²¨à³ ಶà³à²¦à³à²¦ ಮಾಡಿಕೋ ಹಿಂದà³à²¤à³à²µà²µà²¾à²¦à²¿ ಪà³à²°à²¤à²¾à²ªà²¨à³†
@Suma
First you read this article properly madam. I think you have written your comment without reading this. Or you have written simply for the sake of blame to Mr. Prathap.
Mr. Prathap,
Excellent article!
Sir Read the saturday Article Very nice, Write that type of Humanitarian Persons,
always You give surprise Articles
#2suma
Hey SUMA what u know about him. First try to read the article carefully. And then place u r comments. Pure man dosn’t need purification. As impure people like …… needs purification.
Fantastic is the word.
It is really a timorous situation that we the general public never get to know the realities, unless people like you speak up. More than for the safety of Burni I will pray that there will be more Pratap Simhas’ clones in every language of India.
You have aptly cited the example of how ragtag peddlers like Arundhati Roy do self-styled propaganda. She has used all her poetic creativity to throw away Taslima Nasrin out of India; as she was hurting the minority sentiments !
We expect some article throwing light for us on these latest events
– On sadhwi and how the media is sending canards like Saffron Terror. That’s a technique of Enlish media that a newly conied term used some hundred times takes life a gospel truth.
– On Ms.Sonal Shah who is in Barack Obama’s transition team and has been carked, for once being part of VHP and being a Gujarati ! Please do googling to understand the extent of trouble she is undergoing..
@ #2 Suma
” ಮೊದಲೠನಿನà³à²¨ ಮನವನà³à²¨à³ ಶà³à²¦à³à²¦ ಮಾಡಿಕೋ ಹಿಂದà³à²¤à³à²µà²µà²¾à²¦à²¿ ಪà³à²°à²¤à²¾à²ªà²¨à³† ”
I can only laugh at you. But for the reason that you had done the line trenchantly short let me question all the self claimed secular guardians onbehalf of you-
1. SO you mean being a proponent of Hindutva is to have a dirty mind?
2. The word Hindu, Hindutva or the political wings VHP, RSS are all dirty words?
3. All the cacophony happening around says that there has nothing been wrong in the formation of countries based on religion- Isreal, the Arab blocks, or even the Islamic Republic of Pakistan. So why does formation of India based on Hindu ideology is ever a sin? May be this question is too heavy for your kind to digest.
4. Too much of optimism, but try to understand things unbiased.
@ #2 Suma
Before criticising others we have to think …
Madam Please read the article correctly….dont make comments with out any base….
Good one. Shows ur real concern towards a Human. Who works for other beyond his religion n nation.
Good one. Shows ur real concern towards a Human. Who works for others beyond his religion n nation.
Nice article dear pratap!!!!!!
Dear Pratap,
Realy good one…………….
Hey Pratap,
I read your article completely first time. Some of your thoughts make me understand that you are really Hindutwavadi. When do you grow up Mr. Pratap?
Very good article Mr.pratap
Hello Suma madam,
We are all hindus so we r writting abt hinduism& hindustan…..IF u r a muslim or christian dont read this and dont write comments ok..
We want “SANGH PARIVAR” to save our “COUNTRY “from like “U”peoples
mr.pratap thanks for this article very nice
Nice Article Mr. Pratap
I am really impressed on u
continue…
ತà³à²‚ಬ ಚೊಕà³à²•ವಾಗಿ ಅರà³à²¥à²ªà³‚ರà³à²£ ವಾಗಿದೆ.Burni ಯಂತವರಿಂದ ಸರಬೠಜಿತೠನಂತ ನೂರಾರೠà²à²¾à²°à²¤à³€à²¯ ಜನ ಪಾಕೠಜೈಲà³à²—ಳಲà³à²²à²¿ ಯಾತನೆ ಅನà³à²à²µà²¿à²¸à³à²¤à³à²¤à²¿à²¦à³à²¦à²¾à²°à³†, ದೇವರೠಅವರನà³à²¨à³†à²²à²¾ ತಾಯಿ ನಾಡಿಗೆ ಮರಲಿಸಲಿ ಹಾಗೆ USHA ಅಂತವರಿಗೆ ಸà³à²µà²²à³à²ª ಬà³à²¦à³à²¦à²¿ ಕೊಡಲಿ. ಪà³à²°à²¤à²¾à²ªà³ ನಿಮà³à²® ಪà³à²°à²¯à²¾à²£ ಮà³à²‚ದà³à²µà²°à³†à²¸à²¿.
Sorry Usha ರವರೇ,Suma ಎನà³à²¨à³à²µ ಬದಲೠusha ಎಂದೠಸೇರಿಸಿದà³à²¦à²•à³à²•ೆ.
ಮತà³à²¤à³Šà²‚ದೠಶà³à²°à³‡à²·à³à²Ÿ ಬರಹ ಪà³à²°à²¤à²¾à²ªà²°à²¿à²‚ದ, ಧನà³à²¯à²µà²¾à²¦à²—ಳà³.
ಇದರೊಂದಿಗೆ ಹಲವಾರೠ‘ಕೆಟà³à²Ÿ ಸೆಕà³à²²à²°à³’ ಗಳ ಬಾಯಿಗೆ ಬೀಗ ಹಾಕಿದಂತಾಯಿತà³.
ಇದರೊಂದಿಗೆ ನಾವೇನೂ ಬೇರೆ ಧರà³à²®à²¦à²µà²°à²¨à³à²¨à³ ಅದರಲà³à²²à³‚ ಮà³à²¸à³à²²à²¿à²®à²°à²¨à³à²¨à³ ಮಾತà³à²° ಬಯà³à²¯à³à²¤à³à²¤à³‡à²µà³† ಅನà³à²¨à³à²µà³à²¦à³ ಸತà³à²¤à³ ಹೋಯಿತà³. ಅಂದರೆ ಒಳà³à²³à³†à²¯à²µà²°à²¨à³à²¨à³ ನಾವೠಧರà³à²®à²¦ ಹೆಸರೠಎತà³à²¤à²¦à³† ಸà³à²µà³€à²•ರಿಸà³à²¤à³à²¤à³‡à²µà³† ಎಂದಾಯಿತà³.
ಬà³à²°à³à²¨à²¿à²—ೆ ಅà²à²¿à²¨à²‚ದನೆ ಗಳà³.
ಬà³à²°à³à²¨à²¿à²¯à²‚ಥವರೠಮಾತà³à²° ಮಾನವ ಹಕà³à²•à³à²—ಳ ಸಮಿತಿಯ ಸದಸà³à²¯à²°à²¾à²—ಲಿಕà³à²•ೆ ಅರà³à²¹à²°à³.
ಪà³à²°à²¤à²¾à²ªà²° ವಿರà³à²¦à³à²¦ ಬರೆಯà³à²µ # suma (ನಿಜವಾದ ಹೆಸರೠಅಲà³à²² ಅಂತ ನನಗೆ ಗೊತà³à²¤à³!) ಅಂಥವರಿಗೆ ದಿಕà³à²•ಾರ.
Hello Pratap Sir,
A very nice article. It shows that you are concerned about all religious people who have played a major role in the society. I read one of the comments written by Mr. Nagarjun n also Ms.Suma that when would pratap grew up , clearly indicating to stop hinduism… Its very essential to tell Mr.Nagarjun that Hindus have grown up to the standard level. What is the wrong in being a hindutvavadi?? What is the hectic stuff u found in that??? Pls one thing u remember that Hindu Dharma is the Sanathana Dharma… ‘n that need not grow no longer….Who will prite about hindus or protect hindus?? No doubt it should b hindus….Think and write… Hindus ROCKS
à²à²¾à²°à²¤à²¦à²²à³à²²à²¿ ‘ಅಲà³à²ªà²¸à³¦à²–à³à²¯à²¾à²¤à²° ಕಣà³à²£à²¿à²—ೆ ಬೆಣà³à²£à³†, ಬಹà³à²¸à³¦à²–à³à²¯à²¾à²¤à²° ಕಣà³à²£à²¿à²—ೆ ಸà³à²£à³à²£ ‘ ಎ೦ಬ ಪರಿಸà³à²¥à²¿à²¤à²¿ ಇದೆ. ಹೀಗಾಗಿರà³à²µà³à²¦à³ ವೋಟೠಬà³à²¯à²¾à³¦à²•ೠರಾಜಕಾರಣದಿ೦ದ. ಎಲà³à²²à²°à²¨à³à²¨à³‚ ಸಮಾನವಾಗಿ ಕಾಣಿರಿ ಎ೦ದೠಹೇಳà³à²µ ಪà³à²°à²¤à²¾à²ªà²°à³ ಹಿ೦ದà³à²¤à³à²µà²µà²¾à²¦à²¿à²¯à²²à³à²². ಹಿ೦ದà³à²—ಳ ಮೇಲಿನ ಅನà³à²¯à²¾à²¯à²¦ ವಿರà³à²§à³à²§ ದನಿಯೆತà³à²¤à²¿à²°à³à²µ ಅವರನà³à²¨à³ ಟೀಕೆ ಮಾಡà³à²µ ಮà³à²¨à³à²¨, ಸà³à²®à²¾à²°à³¦à²¤à²¹ ‘closed minds’ ಆತà³à²®à²¾à²µà²²à³‹à²•ನ ಮಾಡಿಕೊಳà³à²³à³à²µà³à²¦à³ ಒಳಿತà³.
ಬà³à²°à³à²¨à²¿à²¯à²µà²°à³¦à²¤à²¹ ಅನೇಕರೠà²à²¾à²°à²¤à²¦à²²à³à²²à²¿ ಕ೦ಡà³à²¬à²°à²²à²¿.
To Suma..
U shold be hanged first..