Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆ ಕೆಟ್ಟ ಘಟನೆ ಒಂದು ಒಳ್ಳೆಯ ಬದಲಾವಣೆಗೆ ಭಾಷ್ಯ ಬರೆಯುತ್ತಿದೆಯೇ?

ಆ ಕೆಟ್ಟ ಘಟನೆ ಒಂದು ಒಳ್ಳೆಯ ಬದಲಾವಣೆಗೆ ಭಾಷ್ಯ ಬರೆಯುತ್ತಿದೆಯೇ?

I take instructions from God!

ನನ್ನನ್ನು ದೇವರೇ ಮುನ್ನಡೆಸುತ್ತಿದ್ದಾನೆ, ನನಗೆ ದೇವರೇ ಮಾರ್ಗ ತೋರುತ್ತಿದ್ದಾನೆ, ನಾನು ದೇವರಿಂದ “ನೇರವಾಗಿ” ಆe ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಳು ಫ್ರಾನ್ಸ್‌ನ ದಂತಕಥೆ ಜೋನ್ ಆಫ್ ಆರ್ಕ್. ಆದರೆ ಆಕೆ ಹಾಗೆ ಹೇಳಿದ್ದು ಕ್ಯಾಥೋಲಿಕ್ ಪಾದ್ರಿಗಳ ದೃಷ್ಟಿಯಲ್ಲಿ ಕ್ಷಮಿಸಲಾರದ ತಪ್ಪಾಗಿತ್ತು. ಅಷ್ಟಕ್ಕೂ ೧೪, ೧೫ನೇ ಶತಮಾನದಲ್ಲಿ ಎಂತಹ ಪರಿಸ್ಥಿತಿಯಿತ್ತೆಂದರೆ, ಯಾರಾದರೂ ದೇವರನ್ನು ಕಾಣಬೇಕಿದ್ದರೆ, ದೇವರಿಗೆ ಮೊರೆಯಿಡಬೇಕಾಗಿದ್ದರೆ ಪಾದ್ರಿಗಳ ಮುಖಾಂತರವೇ ದೇವರನ್ನು Contact ಮಾಡಬೇಕಿತ್ತು!

ದೇವರು ಮತ್ತು ಮಾನವರ ನಡುವೆ ತಾವೇ ಮಧ್ಯವರ್ತಿಗಳು ಎಂಬಂತೆ ಬೀಗುತ್ತಿದ್ದರು ಪಾದ್ರಿಗಳು. ಅವರು ಹೇಳಿದ್ದೇ ದೈವವಾಣಿಯಾಗುತ್ತಿತ್ತು, ಕೆಲವೊಮ್ಮೆ ಶಾಸನವೂ ಆಗಿ ಸತ್ಯ ಹೇಳಿದವರನ್ನು ಸುಟ್ಟುಹಾಕುತ್ತಿತ್ತು. ಹಾಗಾಗಿಯೇ ‘ದೇವರೇ ನನ್ನನ್ನು ಮುನ್ನಡೆಸುತ್ತಿದ್ದಾನೆ, ದಾರಿ ತೋರುತ್ತಿದ್ದಾನೆ’ ಎಂದ ಜೋನ್ ಆಫ್ ಆರ್ಕ್ ಜೀವಂತವಾಗಿ ಬೂದಿಯಾಗಬೇಕಾಯಿತು. ‘ಇಲ್ಲಾ..ಇಲ್ಲಾ.. ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತದೆ’ ಎಂದ ಇಟಲಿಯ ಗಿಯೋರ್ಡನೋ ಬ್ರೂನೋನನ್ನು ಜೀವಂತವಾಗಿ ಸುಟ್ಟವರು, ಗೆಲಿಲಿಯೋನನ್ನು ಸಾಯುವವರೆಗೂ ಗೃಹಬಂಧನದಲ್ಲಿಟ್ಟವರೂ ವ್ಯಾಟಿಕನ್ ಪಾದ್ರಿಗಳೇ. “ವಿಕಾಸವಾದ” ಅಥವಾ “Evolution Theory”ಯನ್ನು ಮಂಡಿಸಿ ಸೃಷ್ಟಿಯ ರಹಸ್ಯದ ಮೇಲೆ ಬೆಳಕು ಚೆಲ್ಲಿದ ಚಾರ್ಲ್ಸ್ ಡಾರ್ವಿನ್ನನ್ನೂ ಪಾದ್ರಿಗಳು ಬಿಡಲಿಲ್ಲ. ಇದು ಆ ಕಾಲದಲ್ಲಿ ಪ್ರಗತಿಪರ ಚಿಂತಕರನ್ನು ಎಷ್ಟು ಕಾಡಿತೆಂದರೆ ಇವತ್ತು Atheism ಅಥವಾ ‘ನಿರೀಶ್ವರವಾದ’ದ ಬಗ್ಗೆ ಇರುವ ಪುಸ್ತಕಗಳಲ್ಲಿ ಅತಿಹೆಚ್ಚನ್ನು ಬರೆದಿರುವವರೆಲ್ಲ ಕ್ರೈಸ್ತರೇ, ದೇವರ ಅಸ್ತಿತ್ವವನ್ನೇ ಅಲ್ಲಗಳೆದು ಅತಿ ಹೆಚ್ಚು ಪುಸ್ತಕಗಳು ಬಂದಿರುವುದೂ ಕ್ರೈಸ್ತ ಧರ್ಮದ ವಿರುದ್ಧವೇ.

ಅವತ್ತು ಕ್ಯಾಥೋಲಿಕ್ಕರು ವಿeನ ಮತ್ತು ವೈeನಿಕ ಪ್ರಗತಿಗೆ ಅಡ್ಡವಾಗಿ ನಿಂತಿದ್ದರು.

ಇಂತಹ ವಿನಾಶಕಾರಿ ನೀತಿ, ಗೊಡ್ಡು ಸಂಪ್ರದಾಯದ ವಿರುದ್ಧ ೧೫ನೇ ಶತಮಾನದಲ್ಲಿ ಕ್ರೈಸ್ತರೇ ಸಿಡಿದೆದ್ದರು. ಅವರಲ್ಲಿ ಮಾರ್ಟಿನ್ ಲೂಥರ್ ಪ್ರಮುಖರು. ಸ್ವತಃ ಪಾದ್ರಿಯಾಗಿದ್ದ ಮಾರ್ಟಿನ್ ಲೂಥರ್ ನೈಜ ಅರ್ಥದಲ್ಲಿ ಪ್ರಗತಿಪರ ಚಿಂತಕರಾಗಿದ್ದರು. “ಬೈಬಲ್ಲೇ ಆದರ್ಶ ಮತ್ತು ಬೈಬಲ್ಲೇ ಮಾರ್ಗದರ್ಶಿ. ದೇವರು ಎಲ್ಲರಿಗೂ ಲಭ್ಯ. ದೇವರ ಅನುeಯಂತೆ ನಡೆದುಕೊಳ್ಳುವವರಿಗೆಲ್ಲ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ. ದೇವರು ಮತ್ತು ಮನುಷ್ಯನ ನಡುವೆ ಯಾವ ಮಧ್ಯವರ್ತಿಗಳೂ ಇಲ್ಲ” ಎಂದು ಪ್ರತಿಪಾದಿಸಿದ ಮಾರ್ಟಿನ್ ಲೂಥರ್, ಪಾದ್ರಿಗಳ ಪುರೋಹಿತಶಾಹಿತ್ವವನ್ನು ವಿರೋಧಿಸಿದರು. ಅಲ್ಲದೆ “ದೇವರಿಗೆ ಯಾರೂ Head ಇಲ್ಲ” ಎಂದು ವ್ಯಾಟಿಕನ್ ಅನ್ನೂ ಧಿಕ್ಕರಿಸಿದರು. ಈ ಮಾರ್ಟಿನ್ ಲೂಥರ್ ಮತ್ತಾರೂ ಅಲ್ಲ, Protestantismನ ಪಿತಾಮಹ. ದೇವರನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ, ದೇವರಿಗೆ ಬೇಲಿ ಹಾಕುವ ನೀತಿ ಮತ್ತು ಪದ್ಧತಿಗೆ ವಿರೋಧ ವ್ಯಕ್ತಪಡಿಸಿದವರೇ ಪ್ರೊಟೆಸ್ಟೆಂಟರು. ಇಂದಿಗೂ ಪ್ರೊಟೆಸ್ಟೆಂಟರಿಗೆ ಪೋಪ್ ಇಲ್ಲ. ಪ್ರೊಟೆಸ್ಟೆಂಟರಲ್ಲಿ ಪಾದ್ರಿಗಳು ಬ್ರಹ್ಮಚಾರಿಗಳಾಗಿರಬೇಕಿಲ್ಲ, ವಿವಾಹವಾಗಬಹುದು. ಮಾರ್ಟಿನ್ ಲೂಥರ್ ಕೂಡ ವಿವಾಹವಾಗಿದ್ದರು. ಆರು ಮಕ್ಕಳ ತಂದೆಯಾಗಿದ್ದರು. ಹೀಗೆ ಔದಾರ್ಯವನ್ನು ಬೆಳೆಸಿಕೊಂಡ ಕಾರಣ, ಪ್ರಗತಿಪರ ನಿಲುವು ತಳೆದ ಪರಿಣಾಮವಾಗಿ ‘ಪ್ರೊಟೆಸ್ಟೆಂಟಿಸಮ್’ ಜನರ ಸ್ವೀಕೃತಿಯನ್ನು ಪಡೆದುಕೊಳ್ಳತೊಡಗಿತು. ಇಂದು ಅಮೆರಿಕ, ಬ್ರಿಟನ್‌ನಂತಹ ಅತ್ಯಂತ ಪ್ರಗತಿಪರ ರಾಷ್ಟ್ರಗಳು ಪ್ರೊಟೆಸ್ಟಂಟ್ ದೇಶಗಳಾಗಿವೆ. ಅಷ್ಟೇ ಅಲ್ಲ, ಇಂದು ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಅನುಸರಿಸುವ ಪಂಥ ಪ್ರೊಟೆಸ್ಟೆಂಟಿಸಮ್. ಅಂದರೆ ಕಳೆದ ೫೦೦ ವರ್ಷಗಳಲ್ಲಿ ಕ್ರಿಶ್ಚಿಯಾನಿಟಿಯಲ್ಲಿ ಸಾಕಷ್ಟು ಸುಧಾರಣೆ ಗಳಾಗಿವೆ, ಹಲವಾರು ತಪ್ಪುಗಳನ್ನು ಸರಿಪಡಿಸಿಕೊಂಡಿದ್ದಾರೆ, ಅನಿಷ್ಟಗಳನ್ನು ಹೊರಹಾಕಿದ್ದಾರೆ. ಜೋನ್ ಆಫ್ ಆರ್ಕ್‌ಳನ್ನು ಸುಟ್ಟುಹಾಕಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ, ಡಾರ್ವಿನ್‌ನನ್ನು ಖಂಡಿಸಿದ್ದು ತಪ್ಪು ಎಂದು ಕ್ಷಮೆ ಕೇಳುವ ಹೃದಯ ವೈಶಾಲ್ಯತೆಯನ್ನು ತೋರಿದ್ದಾರೆ. ಹಾಗಾಗಿ, ಇಂದಿಗೂ ಮಾಟ, ಮಂತ್ರ, ಮ್ಯಾಜಿಕ್ ಎನ್ನುವ ಕರ್ಮಠ ಕ್ರಿಶ್ಚಿಯನ್ನರಿದ್ದರೂ, ಕತ್ತಿ ಹಿಡಿದು ಧರ್ಮಪ್ರಚಾರ ಮಾಡಿದಂತಹ ಕೊಳಕು ಇತಿಹಾಸವನ್ನು ಕ್ರೈಸ್ತ ಮತ ಹೊಂದಿದ್ದರೂ ಅವುಗಳನ್ನು ಬೇರ್ಪಡಿಸಿ ನೋಡಿದಾಗ ಕ್ರಿಶ್ಚಿಯಾನಿಟಿ ಅತ್ಯಂತ ಪ್ರಗತಿಪರ ಧರ್ಮವಾಗಿ ಕಾಣುತ್ತದೆ. ಅಷ್ಟಕ್ಕೂ ಒಂದು ಧರ್ಮ ಕಾಲದ ಜತೆ ಹೆಜ್ಜೆ ಹಾಕಿದಾಗ, ವಿeನವನ್ನು ಒಪ್ಪಿಕೊಂಡಾಗ ಅದು ‘ಯುಗಧರ್ಮ’ವಾಗುತ್ತದೆ. ಇಂದು ಜಗತ್ತಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ Church is restricted to Sundays!!

ಇದೇನೇ ಇರಲಿ, ಕ್ರಿಶ್ಚಿಯಾನಿಟಿ ಸುಧಾರಣೆಗೊಳ್ಳಲು ೫೦೦ ವರ್ಷಗಳು ಬೇಕಾದರೆ, ೫ ಸಾವಿರ ವರ್ಷಗಳ ಇತಿಹಾಸ ಹೊಂದಿ ರುವ ಹಿಂದೂ ಧರ್ಮ ಸಾಕಷ್ಟು ಅನಿಷ್ಟಗಳನ್ನು ಹೊಂದಿದ್ದರೂ ವಿeನಕ್ಕೆ ಮಾತ್ರ ಎಂದೂ ಅಡ್ಡಿಪಡಿಸಲಿಲ್ಲ, ಬದಲಾವಣೆಗೆ ಮಾರಕವಾಗಲಿಲ್ಲ. ಹಿಂದೂಧರ್ಮದಲ್ಲಿ ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಹೀನಕೃತ್ಯಗಳಿಗೆ ಶಾಸ್ತ್ರದ ಸಮ್ಮತಿಯಿದ್ದರೂ ಕಾಲಾಂತರದಲ್ಲಿ ಕೆಲವು ಅನಿಷ್ಟಗಳನ್ನು ತೊಡೆದುಕೊಂಡಿದೆ.  Live Bombನಂತೆ ಜಾತಿವಾದಿಗಳೆಂಬ ಜೀವಂತ ಪಳೆಯುಳಿಕೆಗಳು ಇಂದಿಗೂ ನಮ್ಮ ಸಮಾಜದಲ್ಲಿರಬಹುದು. ಆದರೆ ನಮ್ಮ ಧರ್ಮ ಮಗದೊಂದು ಅಭಿಪ್ರಾಯ ಮಂಡನೆಗೆ, ಪ್ರತಿವಾದಕ್ಕೆ, ಪ್ರಶ್ನೆಗೆ ಯಾವತ್ತೂ space ಅನ್ನು ನಿರಾಕರಿಸಲಿಲ್ಲ. ದೇವರ ಅಸ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವುದಕ್ಕೂ ಅವಕಾಶವೀಯುತ್ತಾ ಬಂದಿದೆ. ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ಗಾಂಧೀಜಿ, ಅಂಬೇಡ್ಕರ್ ಮುಂತಾದವರು ನಮ್ಮ ಹುಳುಕುಗಳನ್ನು ಕಟು ಶಬ್ದಗಳಿಂದ ಖಂಡಿಸುವ ಕೆಲಸವನ್ನೂ ಮಾಡಿದರು, ಬದಲಾವಣೆಯನ್ನೂ ತರಲು ಪ್ರಯತ್ನಿಸಿದರು. ಹಾಗಾಗಿಯೇ ಜಗತ್ತಿನ ಅತ್ಯಂತ ಗೊಡ್ಡು ಧರ್ಮಗಳಲ್ಲಿ ಒಂದು ಎನ್ನಬಹುದಾಗಿದ್ದ ಹಿಂದೂ ಧರ್ಮ, ಕಾಲಾಂತರದಲ್ಲಿ ಎಷ್ಟೋ ಹುಳುಕುಗಳನ್ನು ಹೊರ ಹಾಕಿ ಪ್ರಗತಿಯತ್ತ ಹೆಜ್ಜೆಹಾಕಿತು. ಹಿಂದೂಗಳೂ ಅಷ್ಟೇ ಇತರರ ತಪ್ಪುಗಳನ್ನು ಖಂಡಿಸುವ ಜತೆಗೆ ಸ್ವಂತ ತಪ್ಪುಗಳನ್ನು ಒಪ್ಪಿಕೊಳ್ಳುವ ಹೃದಯ ವೈಶಾಲ್ಯವನ್ನೂ ಬೆಳೆಸಿಕೊಂಡಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಹಿಂದೂಗಳು, ಸ್ವಧರ್ಮೀಯರ ನಕ್ಸಲಿಸಂ ಅನ್ನೂ ಅಷ್ಟೇ ಕಟುವಾಗಿ ಖಂಡಿಸುತ್ತಾರೆ, ನಿರ್ದಯವಾಗಿ ಮಟ್ಟಹಾಕಬೇಕು ಎನ್ನುತ್ತಾರೆ.

ಇಂತಹ ಮುಕ್ತ ವಾತಾವರಣವನ್ನು ಮುಸ್ಲಿಮರಲ್ಲಿ ಕಾಣುವುದು ಕಷ್ಟವಾಗಿತ್ತು.

ಅವರಲ್ಲಿ ಧರ್ಮದ ಬಗ್ಗೆ ಚರ್ಚೆ ನಡೆಸುವ ಮಾತು ಹಾಗಿರಲಿ, ಕೆಲವು ದಾರಿ ತಪ್ಪಿದ ಧರ್ಮಾಂಧರ ನಡವಳಿಕೆಗಳನ್ನು ಪ್ರಶ್ನಿಸುವುದಕ್ಕೂ ಅಂಜಬೇಕಿತ್ತು. ಆದರೆ ಮೊನ್ನೆ ನವೆಂಬರ್ ೨೬ರಂದು ಮುಂಬಯಿಯನಲ್ಲಿ ಏನು ನಡೆಯಿತೋ ಅದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದರೂ ಆ ಘಟನೆಯ ನಂತರ ನಾವೆಲ್ಲ ಖುಷಿಪಟ್ಟುಕೊಳ್ಳಬಹುದಾದ ಒಂದು ಮಹತ್ವದ “ಬದಲಾವಣೆ” ಕಂಡುಬರುತ್ತಿದೆ! ಮುಂಬಯಿ ಮೇಲೆ ಆಕ್ರಮಣ ಮಾಡಿದ ಪಾಕಿ ಸ್ತಾನದ ೯ ಭಯೋತ್ಪಾದಕರ ಶವಗಳಿಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿರುವ ಮುಂಬಯಿ ಜಾಮಾ ಮಸೀದಿ ಟ್ರಸ್ಟ್, ‘ಹೆಣಗಳನ್ನು ಸಮುದ್ರಕ್ಕೆ ಬೇಕಾದರೆ ಎಸೆಯಿರಿ. ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ’ ಎಂದಿದೆ.

“ಭಯೋತ್ಪಾದಕರಿಗೆ ಯಾವ ಧರ್ಮವೂ ಇಲ್ಲ ಎಂಬುದನ್ನು ಈ ರಾಜಕಾರಣಿಗಳು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಭಯೋತ್ಪಾದಕರು ಹಿಂದೂಗಳೂ ಅಲ್ಲ, ಮುಸ್ಲಿಂ, ಕ್ರಿಶ್ಚಿಯನ್ನರೂ ಅಲ್ಲ. ಅವರು ಯಾವುದೇ ಧರ್ಮ, ದೇವರಿಗೆ ಸೇರಿದವರಲ್ಲ. ಅವರು ತಲೆಯಲ್ಲಿ ರೋಗತುಂಬಿಕೊಂಡಿರುವ ಜನರು ಹಾಗೂ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು” ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ ಆಮೀರ್ ಖಾನ್. “ನಾನೂ ಪವಿತ್ರ ಕುರಾನ್ ಓದಿದ್ದೇನೆ. ಒಂದು ವೇಳೆ ನೀವು ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಮಾಡಿದರೆ, ಇಡೀ ಮನುಕುಲಕ್ಕೆ ಒಳ್ಳೆಯದನ್ನು ಮಾಡಿದಂತೆ. ಒಬ್ಬ ವ್ಯಕ್ತಿಗೆ ನೋವುಂಟು ಮಾಡಿದರೆ ಇಡೀ ಮಾನವಜನಾಂಗಕ್ಕೆ ನೋವುಂಟು ಮಾಡಿದಂತೆ ಎಂದು ಕುರಾನ್ ಹೇಳುತ್ತದೆ. ಜಿಹಾದ್ ಹೆಸರಿನಲ್ಲಿ ಪ್ರಾಣಾರ್ಪಣೆ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಕುರಾನ್‌ನಲ್ಲೆಲ್ಲೂ ಹೇಳಿಲ್ಲ. ಅದು ಯುದ್ಧದ ಸಂದರ್ಭವೇ ಆಗಿರಬಹುದು, ಮಹಿಳೆಯನ್ನು ಕೊಲ್ಲಬಾರದು, ಮಗುವನ್ನು ಹತ್ಯೆ ಮಾಡಬಾರದು, ಪ್ರಾಣಿಗಳನ್ನು ಕೊಲ್ಲಕೂಡದು, ಬೆಳೆಯನ್ನೂ ಹಾಳುಗೆಡವಬಾರದು ಎನ್ನುತ್ತದೆ ಕುರಾನ್. ಜಿಹಾದ್ ಅನ್ನು ಸ್ವತಃ ಪ್ರವಾದಿಯವರೇ ಬೋಧಿಸಬೇಕು. ದುರದೃಷ್ಟವಶಾತ್ ಇಂದು ಎರಡು ವಿಧದ ಇಸ್ಲಾಂಗಳಿವೆ-ಒಂದು ಅಲ್ಲಾ ಅವರ ಇಸ್ಲಾಂ, ಮತ್ತೊಂದು ಮುಲ್ಲಾಗಳ ಇಸ್ಲಾಂ. ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ, ಕುರಾನ್ ಬಗ್ಗೆ ಯುವಜನಾಂಗಕ್ಕೆ ಸರಿಯಾದ ತಿಳಿವಳಿಕೆ ನೀಡಿ” ಎಂದು ಮೊಟ್ಟಮೊದಲ ಬಾರಿಗೆ ನಟ ಶಾರುಖ್ ಖಾನ್ ಬಹಿರಂಗವಾಗಿ ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇತ್ತ ಪ್ರತಿವರ್ಷ ಡಿಸೆಂಬರ್ ೬ ಬಂತೆಂದರೆ ದೇಶಾದ್ಯಂತ ಕೆಲವು ಮುಸ್ಲಿಂ ಸಂಘಟನೆಗಳು ಕಪ್ಪುಪಟ್ಟಿ ಧರಿಸಿಕೊಂಡು ಬಾಬರಿ ಮಸೀದಿ ನೆಲಸಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಮುಂಬಯಿ ಆಕ್ರಮಣದ ಹಿನ್ನೆಲೆಯಲ್ಲಿ  ಈ ಬಾರಿ ಪ್ರತಿಭಟನೆ ಮಾಡದೇ ಇರುವ ನಿರ್ಧಾರ ಕೈಗೊಳ್ಳಲಾಯಿತು. ಅಷ್ಟೇ ಅಲ್ಲ, ಕೆಲವು ಇಸ್ಲಾಮಿಕ್ ಸ್ಕಾಲರ್‌ಗಳು ಡಿಸೆಂಬರ್ ೬ರಂದು “Muslims initiative against Terrorism” ಚಳವಳಿಯನ್ನೇ ಆರಂಭಿಸಿದ್ದಾರೆ. ‘ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ಸಂಸ್ಥಾಪಕ ಸದಸ್ಯ ಹಾಗೂ ಜನಪ್ರಿಯ ನಾಯಕ ಕಮಲ್ ಫಾರುಕಿ, ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್, ಫತೇಪುರಿ ಮಸೀದಿಯ ಧರ್ಮಗುರು ಮುಫ್ತಿ ಮೊಹಮದ್ ಮುಕಾರ್ರನ್ ಅವರಂತಹ ಗಣ್ಯ ವ್ಯಕ್ತಿಗಳು ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿದ್ದಾರೆ.  “ಭಯೋತ್ಪಾದನೆಯೆಂಬುದೇ ಇಲ್ಲ ಎಂದು ನಿರಾಕರಿಸುವ ಮನಸ್ಥಿತಿಯಿಂದ ಭಾರತೀಯ ಮುಸ್ಲಿಮರು ಹೊರಬರಬೇಕು. ಕೆಲವು ಮುಸ್ಲಿಮರು ಭಯೋತ್ಪಾದನೆಯಲ್ಲಿ ಭಾಗಿಯಾಗಿರಬಹುದು ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಆದರೆ ಈ ಭಯೋತ್ಪಾದಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡಬೇಕಾದುದು ನಮ್ಮ ಕರ್ತವ್ಯ. ನಮ್ಮ ಪ್ರೀತಿಯ ನಾಡನ್ನು ಬಲಗೊಳಿಸಬೇಕಾದ ಕರ್ತವ್ಯದಲ್ಲಿ ನಾವು ವಿಫಲಗೊಳ್ಳಬಾರದು” ಎಂದಿದ್ದಾರೆ ಕಮಲ್ ಫಾರುಕಿ.

ಸಲ್ಮಾನ್ ಖಾನ್, ಮೊಹಮದ್ ಅಜರುದ್ದೀನ್ ಕೂಡ ಭಯೋತ್ಪಾದನೆಯ ವಿರುದ್ಧ ಮಾತನಾಡಿದ್ದಾರೆ.

ಅದು ೧೯೯೩ರ ಮುಂಬಯಿ ಸ್ಫೋಟ, ದಿಲ್ಲಿ ಸರಣಿ ಬಾಂಬ್ ಸ್ಫೋಟ, ಅಹ್ಮದಾಬಾದ್ ಬಾಂಬ್ ದಾಳಿ, ರಘುನಾಥ, ವಿಶ್ವನಾಥ ಮಂದಿರದ ಮೇಲಿನ ಆಕ್ರಮಣವಿರಬಹುದು, ಅಕ್ಷರಧಾಮದ ಮೇಲಿನ ಅಟ್ಯಾಕ್ ಆಗಿರಬಹುದು. ಪ್ರತಿಬಾರಿ ಇಂತಹ ಅಹಿತಕರ ಘಟನೆಗಳು ಸಂಭವಿಸಿದಾಗಲೂ ಮುಸ್ಲಿಮರನ್ನು ಅನುಮಾನದಿಂದ ನೋಡಲಾಗುತ್ತಿತ್ತು. ಆದರೆ ಮುಂಬಯಿ ಆಕ್ರಮಣದ ನಂತರ ಕಂಡುಬರುತ್ತಿರುವ ಒಂದು ಮಹತ್ತರ ಬದಲಾವಣೆಯೆಂದರೆ ಯಾರೂ ನೆರೆಯ ಮುಸ್ಲಿಮರ ಮೇಲೆ ಅನುಮಾನಪಡುತ್ತಿಲ್ಲ. ಅದಕ್ಕೂ ಕಾರಣವಿದೆ. ಈ ಹಿಂದೆಲ್ಲಾ ಬಾಂಬ್ ಸ್ಫೋಟಗಳು ಸಂಭವಿಸಿದಾಗ ಮುಸ್ಲಿಮ್ ನಾಯಕತ್ವ ಮಾತನಾಡುತ್ತಿರಲಿಲ್ಲ, ಸಾರ್ವಜನಿಕವಾಗಿ ಭಯೋತ್ಪಾದನೆಯನ್ನು ಖಂಡಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಆದರೆ ಇಂದು ಮುಸ್ಲಿಂ ನಾಯಕತ್ವವೇ ಮುಂದೆ ನಿಂತು ಭಯೋತ್ಪಾದನೆಯನ್ನು ಖಂಡಿಸುತ್ತಿದೆ.

ಈ ಮೊದಲು ಏನಾಗುತ್ತಿತ್ತು?

ಬಾಂಬ್ ಸ್ಫೋಟಗಳಾದಾಗ ಸೌಮ್ಯವಾದಿ, ಉದಾರವಾದಿ ಮುಸ್ಲಿಂ ನಾಯಕರು ಮನೆಯಿಂದ ಹೊರಬಂದು ಮಾತನಾಡು ತ್ತಿರಲಿಲ್ಲ. ಇದು ಬಹುಸಂಖ್ಯಾತರನ್ನು ಕುಪಿತಗೊಳಿಸುತ್ತಿತ್ತು, ಅನುಮಾನಕ್ಕೆ ಎಡೆಮಾಡಿಕೊಡುತ್ತಿತ್ತು. ಇನ್ನೊಂದೆಡೆ ಅರುಂಧತಿ ರಾಯ್, ತೀಸ್ತಾ ಸೆತಲ್ವಾಡ್, ಶಾಂತಿಭೂಷಣ್, ಮೂರ್ತಿ ಅವರಂತಹ ವ್ಯಕ್ತಿಗಳು ಭಯೋತ್ಪಾದಕರು ಹಾಗೂ ಅಲ್ಪಸಂಖ್ಯಾತರ ಪರ ವಕಾಲತ್ತು ವಹಿಸಲು ಧಾವಿಸುತ್ತಿದ್ದರು. ಈ ವ್ಯಕ್ತಿಗಳ ಆಷಾಢಭೂತಿತನ, ಅವಕಾಶವಾದಿ ಧೋರಣೆ, ಪ್ರಚಾರಪ್ರಿಯತೆ ಬಗ್ಗೆ ಮೊದಲೇ ಅರಿವಿರುವ ಬಹುಸಂಖ್ಯಾತರಿಗೆ ಕೋಪ ಇನ್ನೂ ಹೆಚ್ಚಾಗುತ್ತಿತ್ತು. ಇವರ ಜತೆಗೆ, ಹಣೆಗೆ ಅಗಲವಾದ ಕೆಂಪು ಬೊಟ್ಟು ಹಾಕಿಕೊಂಡು ಹಿಂದೂಗಳನ್ನೇ ಟೀಕಿಸುತ್ತಿದ್ದ ನಫೀಸಾ ಅಲಿ, ಶಬಾನಾ ಆಜ್ಮಿಯವರಂತಹ ಸೋಗಲಾಡಿಗಳ ಧೋರಣೆಯಂತೂ ರೇಜಿಗೆ ಹುಟ್ಟಿಸುತ್ತಿತ್ತು. ಅಷ್ಟಕ್ಕೂ ಬಲಿಪಶುಗಳಾಗಿದ್ದಲ್ಲದೆ ಬೈಗುಳನ್ನೂ ಕೇಳಿಸಿಕೊಳ್ಳಬೇಕಾಗಿ ಬಂದರೆ ಯಾರು ತಾನೇ ಸುಮ್ಮನಾಗುತ್ತಾರೆ? ಅದಿರಲಿ, ಈ ವ್ಯಕ್ತಿಗಳು ಆಡುತ್ತಿದ್ದ ಮಾತುಗಳಾದರೂ ಎಂಥವು? ಕಾಶ್ಮೀರದ ಭಯೋತ್ಪಾದನೆಯ ವಿಷಯ ಬಂದಾಗ “ನಿರುದ್ಯೋಗ, ಬಡತನ, ಅನಕ್ಷರತೆಯೇ ಭಯೋತ್ಪಾದನೆಗೆ ಕಾರಣ” ಎಂದು ಸಬೂಬು ಹೇಳುತ್ತಿದ್ದರು. ಮುಂಬಯಿ ಸ್ಫೋಟದ ಬಗ್ಗೆ ಬೆರಳು ತೋರಿದ ಕೂಡಲೇ “ಮುಸ್ಲಿಮರು ಭಯೋತ್ಪಾದನೆಯ ಹಾದಿ ಹಿಡಿಯಲು ೧೯೯೨ರ ಬಾಬರಿ ಮಸೀದಿ ಧ್ವಂಸವೇ ಮುಖ್ಯ ಕಾರಣ’ ಎನ್ನುತ್ತಿದ್ದರು.  ಇತ್ತೀಚೆಗೆ ದೇಶಾದ್ಯಂತ ಕಂಡುಬರುತ್ತಿರುವ ಬಾಂಬ್‌ಸ್ಫೋಟಗಳ ಬಗ್ಗೆ ಗಮನ ಸೆಳೆದ ಕೂಡಲೇ “ಗುಜರಾತ್ ಹಿಂಸಾಚಾರವೇ ಬಾಂಬ್ ಸ್ಫೋಟಗಳಿಗೆ ಕಾರಣ” ಎಂಬ ಹೊಸ ವ್ಯಾಖ್ಯಾನ ಕೊಡುತ್ತಿದ್ದರು.  ಹಾಗಾದರೆ ನಿರುದ್ಯೋಗ, ಅನಕ್ಷರತೆ, ಬಡತನಗಳು ಮುಸ್ಲಿಮರನ್ನು ಮಾತ್ರ ಕಾಡುತ್ತಿರುವ ಸಮಸ್ಯೆಗಳೇ? ಮಸೀದಿ ಧ್ವಂಸ, ಗುಜರಾತ್ ಹಿಂಸಾಚಾರವೇ ಬಾಂಬ್ ಸ್ಫೋಟಗಳಿಗೆ ಕಾರಣ ಎಂದು ನೆಪ ಹೇಳುವುದಾದರೆ ಹಿಂದೂಗಳು ಒಂದು ಸಾವಿರ ವರ್ಷಗಳ ಹಿಂದೆಯೇ ಮುಸ್ಲಿಮರ ವಿರುದ್ಧ, ೨೦೦ ವರ್ಷಗಳ ಹಿಂದೆಯೇ ಕ್ರೈಸ್ತರ ವಿರುದ್ಧ ಭಯೋತ್ಪಾದನೆ ಆರಂಭಿಸಿರಬೇಕಿತ್ತು ಅಲ್ಲವೆ? ಬಾಂಬ್ ಸ್ಫೋಟದಂತಹ ಅಮಾನವೀಯ ಕೃತ್ಯಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ಜಾಗೃತಿ ಮೂಡಿಸುವ ಬದಲು ನಮ್ಮ ಬುದ್ಧಿಜೀವಿಗಳು ಸಮಸ್ಯೆಗೆ ಕುಂಟು ನೆಪಗಳನ್ನು ಹೇಳಿಕೊಡುತ್ತಿದ್ದರು. ಈ ‘ಡಿನಾಯಲ್ ಮೈಂಡ್‌ಸೆಟ್’ (ನಿರಾಕರಣೆ ಮನಸ್ಥಿತಿ), “ಮೈನಾರಿಟಿ ಸಿಂಡ್ರೋಮ್” ಮುಂತಾದುವುಗಳನ್ನು ಮುಸ್ಲಿಮರ ತಲೆಗೆ ತುಂಬಿದವರೇ ಇವರು. ನಿಜಹೇಳಬೇಕೆಂದರೆ ಭಯೋತ್ಪಾದಕರಿಗಿಂತ ಸದಾ ಮುಸ್ಲಿಮರ ಪರ ವಕಾಲತ್ತು ವಹಿಸುವ ಬುದ್ಧಿಜೀವಿಗಳಿಂದಲೇ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಕೆಟ್ಟ ಹೆಸರು ಬರುತ್ತಿತ್ತು. ಹಿಂದೂ ಹೆಸರುಗಳನ್ನಿಟ್ಟುಕೊಂಡು ಹಿಂದೂವಿರೋಧಿ ಧೋರಣೆ ಅನುಸರಿಸುತ್ತಿರುವ ಇವರಿಗೆ ಸಮಾಜದಲ್ಲಿ ಗೌರವ ಕೊಡುವ ವರು ಅಷ್ಟಕಷ್ಟೇ. ಇಂತಹ ವ್ಯಕ್ತಿಗಳಿಂದ ಮುಸ್ಲಿಂ ಸಮುದಾಯಕ್ಕೆ ಯಾವ ಲಾಭವಾದೀತು? ಅಷ್ಟಕ್ಕೂ ಮುಸ್ಲಿಂ ಸಮುದಾಯದಲ್ಲಿ ಯಾರೂ ಬುದ್ಧಿಜೀವಿಗಳೇ ಇಲ್ಲವೆ? ಎಂ.ಜೆ. ಅಕ್ಬರ್, ಫರೀದ್ ಝಕಾರಿಯಾ ಇರುವಾಗ, ಎರಡೂ ಕಡೆಯ ತಪ್ಪನ್ನು ತೋರಿಸುವ ಬದಲು ಒಬ್ಬರನ್ನು ಮಾತ್ರ ಸಮರ್ಥಿಸುವ ಪ್ರಗತಿಪರರು, ಜಾತ್ಯ ತೀತವಾದಿಗಳೆಂದು ಹೇಳಿಕೊಳ್ಳುವ ಕಳಪೆ ಹಿಂದೂಗಳೇಕೆ ಬೇಕು?

ಈ ಹಿನ್ನೆಲೆಯಲ್ಲಿ ಮುಂಬಯಿ ಸ್ಫೋಟದ ಕರಾಳತೆಯಲ್ಲೂ ಹೊಸ ಆಶಾಕಿರಣವೊಂದು ಗೋಚರಿಸುತ್ತಿದೆ.

ನಾವೆಲ್ಲ ಧರ್ಮವನ್ನು ಮೀರಿ ಪ್ರೀತಿಸುವ, ಗೌರವಿಸುವ ಶಾರುಖ್ ಖಾನ್, ಆಮೀರ್ ಖಾನ್, ಎಂ.ಜೆ. ಅಕ್ಬರ್, ಅಜರ್ ಅವರಂತಹ ವ್ಯಕ್ತಿಗಳು ಇಂದು ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತುವುದರೊಂದಿಗೆ ಸರಿಯಾದ ವ್ಯಕ್ತಿಗಳು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಜತೆಗೆ ನಮಗೆ ಸತ್ಯದ ಪರವಾಗಿ ಮಾತನಾಡುವವರು ಬೇಕೇ ಹೊರತು, ಒಂದು ಸಿದ್ಧಾಂತ, ನಿಲುವಿಗೆ ಅಂಟಿಕೊಂಡಿರುವ ಜಡ ಮನಸ್ಸುಗಳಲ್ಲ. ಎಡ್ವರ್ಡ್ ಸೆಡ್, ನೋಮ್ ಚೋಮ್‌ಸ್ಕಿ ಅವರಂತಹ ಸಮ ನಿಲುವಿನ ಬುದ್ಧಿ ಜೀವಿಗಳು ನಮ್ಮಲ್ಲೂ ಹೊರ ಹೊಮ್ಮಬೇಕು. ಇರಾಕ್ ವಿಷಯದಲ್ಲಿ ಅಮೆರಿಕ ನಡೆದುಕೊಂಡ ರೀತಿಯನ್ನೂ ಟೀಕಿಸುವ ಚೋಮ್‌ಸ್ಕಿ, ಇರಾಕಿಯರ ಲೋಪಗಳನ್ನೂ ಎತ್ತಿ ತೋರಿಸುತ್ತಾರೆ.

ಇದೇನೇ ಇರಲಿ, ಈ ‘ಮೈನಾರಿಟಿ ಸಿಂಡ್ರೋಮ್’ ನಮ್ಮಲ್ಲಿ ಮಾತ್ರ ಕಂಡುಬರುತ್ತಿದ್ದ ವಿಚಾರವಲ್ಲ. ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೆಸ್ಸಿ ಜಾಕ್ಸನ್ ಸೇರಿದಂತೆ ಎಲ್ಲಾ ಬ್ಲ್ಯಾಕ್ ನಾಯಕರೂ “ಕರಿಯರೆಲ್ಲ ಒಂದಾಗಬೇಕು” ಎಂದೇ ಕರೆ ಕೊಡುತ್ತಿದ್ದರು. ಆದರೆ ಸ್ವತಃ ಕರಿಯರಾದ ಬರಾಕ್ ಒಬಾಮ ಯಾವತ್ತೂ ‘ಮೈನಾರಿಟಿ’, ‘ಮೆಜಾರಿಟಿ’ಯ ಮಾತನಾಡಲಿಲ್ಲ. ಕರಿ, ಬಿಳಿ ಎನ್ನಲಿಲ್ಲ. “ಅಮೆರಿಕನ್ನರೆಲ್ಲ ಒಂದಾಗಬೇಕು” ಎಂದು ವಾದಿಸಿದರು, ಜನರಲ್ಲಿ ಮೊರೆಯಿಟ್ಟರು. ಹಾಗಾಗಿ ಬಿಳಿ, ಕರಿ, ಹಿಸ್ಪ್ಯಾನಿಕ್, ಏಷ್ಯನ್ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಬಾಮಗೆ ವೋಟು ಕೊಟ್ಟರು. ಹಾಗೆ ನಮ್ಮಲ್ಲೂ ‘ಮೈನಾರಿಟಿಸಂ’ ಬದಲು ‘ನ್ಯಾಷನಲಿಸಂ’ ಬಗ್ಗೆ ಮಾತನಾಡುವಂತಹ ಮುಸ್ಲಿಮ್ ನಾಯಕರು ಹೊರಹೊಮ್ಮಬೇಕು. ಮುಂಬಯಿ ದುರ್ಘಟನೆಯ ನಂತರ ಅಂತಹ ನಾಯಕತ್ವ ಕೊನೆಗೂ ತಲೆಯೆತ್ತುತ್ತಿರುವುದು ಕಂಡುಬರುತ್ತಿದೆ. ‘ನಾವೆಲ್ಲ ಭಾರತೀಯರು’ ಎಂಬ ಮಾತು ಮುಸ್ಲಿಂ ಸಮುದಾಯದಲ್ಲೇ ಮಾರ್ದನಿಸತೊಡಗಿದೆ. ಇಂತಹ ಧ್ವನಿಗಳು ಇನ್ನಷ್ಟು ಬಲಗೊಂಡರೆ, ಎಲ್ಲರಲ್ಲೂ ನಾವು ಭಾರತೀಯರು ಭಾವನೆ ಅಂತರಂಗದಿಂದ ಮೂಡಿಬಂದರೆ ಭಾರತ ಜಗತ್ತಿಗೇ ಮಾದರಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ, Are we seeing the real change of  heart?

22 Responses to “ಆ ಕೆಟ್ಟ ಘಟನೆ ಒಂದು ಒಳ್ಳೆಯ ಬದಲಾವಣೆಗೆ ಭಾಷ್ಯ ಬರೆಯುತ್ತಿದೆಯೇ?”

  1. Mahendra says:

    Nice article

  2. Vijay says:

    Really Nice article Prathap

  3. Nagendra says:

    Hi Pratap.. you have a good writing skill. It will be pleasant if you write some article on nature, science, rural development or kannada culture. I didn’t find any fruitfulness in this article. Nothing will happen by simply condemning the Mumbai attacks. We cannot forgive them for attacking on India from the time of Mohammad Ghori to recent terrorist attacks. I had recently visited Hampi. The temples were brutally demolished. If this is the situation of the temples, think about the people who were leaving in that place. We can find a lot of examples from Kashmir to Kanyakumari. Forget about India, in Karnataka itself we have plenty of examples. If anybody are having guts please talk these issues in Muslim populated areas. I will not think the person comes out from that place. One more interesting thing i found in the news that most of the people who had protested are not pure muslims, either they have a Hindu wife or Hindu mother.
    Pratap, i request you to write articles which unite the people around you who are in faith on the Indian culture and its values.

  4. Siddu says:

    Another good column reflecting on the changing times and values that we all live in.

    It takes courage to criticize a particular community that is always blamed for being on the wrong side of law. It takes equal courage and humility to applaud the same community that is sending all the right signals to the society and the nation at large that has always viewed them through the prism of prejudice and bigotry.

    Siddu
    NY,USA.

  5. Nanda says:

    Pratap,thanks for one more very nice article.keep going……

  6. harsha says:

    ಒಂದು ಸಾಧಾರಣವಾದ ಅಂಕಣ, ಇದರಲ್ಲಿ ನನಗೆ ಪ್ರತಾಪ ಸಿಂಹರ ಬೇರೆ ಅಂಕಣಗಳಲ್ಲಿ ಕಾಣುವ ನೇರ ಮತ್ತು ಸ್ಪಷ್ಟವಾದ ವಿಚಾರದಾರೆ ಕಾಣಿಸುತ್ತಿಲ್ಲ.
    ಎಲ್ಲರನ್ನು ಬೈದು, ಎಲ್ಲರನ್ನು ಹೊಗಳಿ ಈ ಅಂಕಣದ ಮೂಲಕ ಎಲ್ಲರನ್ನು ಮೆಚ್ಚಿಸಲು ಪ್ರಯತ್ನಿಸಿರುವ ಹಾಗೆ ಕಾಣುತ್ತದೆ.

  7. Nagaraj says:

    A nice article with balanced outlook. Acknowledging the opposition from the muslim community to the terrorism is appreciable.

  8. Vinutha Iyengar says:

    Hi Pratap,
    Its a good article. Even am happy that people are coming out with only one feeling “India”. But just by praising them nothing is going to change.

    I wish to see what can we normal citizens do against Terrorism. At last we are the building blocks of the country. I feel, if we want to change anything in the country, It should start from Us. Hope to see you addressing such citizens in your forthcoming columns.

  9. Kesh says:

    Hi Pratap,
    Nice article…
    Most of the people who had protested are not pure muslims, either they have a Hindu wife or Hindu mother.

  10. Pratap Simha says:

    My Dear Friend,

    Salman’s mother(Susheela Charak), Shahrukh n Aamir’s wives may be Hindus, but all Indian Muslims and Christians are either Hindus by birth or Hindu descendents. So the question of PURE or IMPURE doesn’t arise!! Even Jesus Christ was a Jew by birth!!!

    Please understand

  11. ಪ್ರವೀಣ್ ಎ ವಿ says:

    Well said Pratap,
    they (Muslims and Christians) have to realize that they are either Hindus by birth or Hindu descendants, then only true patriotism and felling of BHARATA can arise with in them.

    Once again thank you for writing such a good article…

  12. vishnu says:

    Good to see positive and responsible actions from the citizens, most importantly politicians from all the parties should stop misusing every event ,issue, and tragedy to their own political desire. Such bombings are not targetted against any particular community, it is against indians.

  13. Venkatesh says:

    ಕ್ರಿಶ್ಚಿಯನ್ನರ ಹುಳುಕುಗಳನ್ನ ಎತ್ತಿ ತೋರಿಸುತ್ತಾ, ಅವರ ಧರ್ಮದ ಉದ್ದಾರ ಹೇಗಾಯಿತು ಎಂದು ವಿವರಿಸುತ್ತಾ, ಹಿಂದೂಗಳ ಈಗಿನ ಸ್ಥಿತಿ ತಿಳಿಸುತ್ತಾ, ಮುಸ್ಲಿಮರು ಕೂಡ ಹೇಗೆ ಬದಲಾಗುತ್ತಿದ್ದಾರೆ ಎಂಬುದನ್ನೂ ವಿವರಿಸಿದ ರೀತಿ ತುಂಬಾ ಇಷ್ಟವಾಯಿತು. ಯಾರನ್ನೂ ಹೆಚ್ಚು ನೋಯಿಸದೆ ಯಾರನ್ನೂ ಹೆಚ್ಚು ಹೊಗಳದೆ ತುಂಬಾ ಬ್ಯಾಲೆನ್ಸ್ ಮಾಡಿ ಬರೆದ ಲೇಖನ ಇದು. ಹಾಗೇ ನಮ್ಮ ಫೇಮಸ್ (ವಿಚಿತ್ರ) ಬುದ್ದಿಜೀವಿಗಳ ಬಗ್ಗೆ ಬರೆದಿದ್ದೂ ಸರಿಯಾಗೇ ಇದೆ. ನಿಜ ಹೇಳಬೇಕೆಂದರೆ ಈ ಬುದ್ದಿಜೀವಿಗಳಿಂದಲೇ ಎಲ್ಲಾ ಹಾಳಾಗುತ್ತಿರೋದು. ಹಿಂದೂ ಗಳು ಈ ಬುದ್ದಿ ಜೀವಿಗಳಿಗೆ ಸಾಫ್ಟ್ ಟಾರ್ಗೆಟ್ ಆಗಿದ್ದಾರೆ.
    ಮುಸ್ಲಿಮರು ಬದಲಾಗುತ್ತಿರುವುದು ನಮಗೆ ಒಳ್ಳೆಯದು, ಅದು ಎಷ್ಟು ದಿನ ಹೀಗಿರುತ್ತಾರೋ, ಆ ಅಲ್ಲಾನೇ ಬಲ್ಲ! ಮುಸ್ಲಿಮರನ್ನು ಈ ದೇಶದಿಂದ ಓಡಿಸಲು ಆಗುವುದಿಲ್ಲ. ಹಾಗಾಗಿ ಕೊನೇಪಕ್ಷ ನಮ್ಮ ದೇಶದ ಸಾಮಾನ್ಯ ಪ್ರಜೆಗಳಗಿದ್ದರೆ ಸಾಕು. ಕ್ರಿಕೆಟಲ್ಲಿ ಪಾಕಿಸ್ತಾನ ಗೆದ್ದರೆ ಶಿವಾಜಿನಗರದಲ್ಲಿ ಪಟಾಕಿ ಹೊಡೆಯದಿದ್ದರೆ ಸಾಕು. ನಾವು ಮೆರವಣಿಗೆ ಮಾಡುತ್ತಿದ್ದಾಗ ಗಲ್ಲಿ ಗಳಲ್ಲಿ ಅಡಗಿಕೊಂಡು ಕಲ್ಲು ಹೊಡೆಯದಿದ್ದರೆ ಸಾಕು!

    ಆದರೆ ಹೀಗೆ ಆಗುವುದನ್ನು ನಾವು ನೋಡುತ್ತೇವೆಯೇ? ಅದು ಮುಂದಿನ ಪ್ರಶ್ನೆ.
    ನಾವೆಲ್ಲ ಭಾರತ ದೇಶದ ಪ್ರಜೆಗಳೆಂದು ಹೆಮ್ಮೆ ಪಡುತ್ತೇವೆ. ತ್ರಿವರ್ಣ ಬಾವುಟ ಹಾರಿಸುತ್ತೇವೆ, ಜನಗಣ ಮನ ಹಾಡುತ್ತೇವೆ, ವಂದೇ ಮಾತರಂ ಎನ್ನುತ್ತೇವೆ.
    ಆದರೆ ಮುಸ್ಲಿಮರು??
    ಅರೇಬಿಯಾ, ಪಾಕಿಸ್ತಾನ ವನ್ನು ಹೊಗಳುತ್ತಾರೆ.
    ಗೋರಿಗಳ ಮೇಲೆ, ಮಸೀದಿಯಲ್ಲಿ, ಶಿವಾಜಿನಗರದಲ್ಲಿ, ಗೌರಿ ಪಾಳ್ಯದಲ್ಲಿ, ಜೆಸಿ ನಗರದಲ್ಲಿ, ಸಿಟಿ ಮಾರ್ಕೆಟಿನಲ್ಲಿ, ಬಿಜಾಪುರದಲ್ಲಿ ಪಾಕಿಸ್ತಾನ ಬಾವುಟ!
    ಜನಗಣ ಮನ ಎಷ್ಟು ಖುಸಿಯಿಂದ ಹೇಳುತ್ತಾರೋ ಗ್ಯಾರೆಂಟಿ ಇಲ್ಲ. ಒಂದೇ ಮಾತರಂ ಗೆ ವಿರೋಧ. ಇನ್ನು ಗಾಂಧೀಜಿ ಹೇಳಿದ “ಪತೀತ ಪಾವನ ಸೀತಾರಾಮ್” ಯಾವದಾದರೂ ಮುಸ್ಲಿಮನ ಬಾಯಿಂದ ಹೇಳಿಸಿಬಿಡಿ ನೋಡೋಣ?

    ಆದರೆ ಇದೆಲ್ಲದರ ನಡುವೆ ನನಗೆ ಸಮಾಧಾನ ಕೊಟ್ಟಿದ್ದು ಮೊನ್ನೆ ಚಾಮರಾಜ ಪೇಟೆಯಲ್ಲಿ ಶಾಸಕ ಜಮೀರ್ ಅಹಮದ್ ಹಣೆಗೆ ತಿಲಕವಿಟ್ಟು ಸ್ವತಹ ಗಣೇಶ ಮೂರ್ತಿಗೆ ಆರತಿ ಎತ್ತಿದ್ದು! ೧೫ರ ಸಂಜೆವಾಣಿ ನೋಡಿ. ಅದೇನೇ ರಾಜಕೀಯವಿರಬಹುದು (ಹೀಗೇ ಮಾಡುವ ನಮ್ಮವರು ಎಷ್ಟು ಸಾಚಾಗಳು?). ಆದರೆ ಮುಲ್ಲಾಗಳ ಫತ್ವಗೆ ಹೆದರದೆ ಇಂಥಹ ಉದಾಹರಣೆ ಗಳು ಸಿಗುತ್ತಾ ಹೋದರೆ ನಮ್ಮಲ್ಲೇಕೆ ಬೇಧ ಭಾವ ಬರುತ್ತದೆ? ಇಬ್ಬರ ಧಾರ್ಮಿಕ ಭಾವನೆಗಳನ್ನೂ ಪರಸ್ಪರ ಅರ್ಥ ಮಾಡಿಕೊಳ್ಳಬಹುದು.

    ಭಾರತದ ಪ್ರಜೆಯಾಗಿ ನಮಗೆ ಏನು ಬೇಕು?
    ಯಾವ ಧರ್ಮ, ಜಾತಿ, ಪಂಗಡ, ಪ್ರದೇಶ, ಭಾಷೆಗಳ…. ಬೇಧವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ, ಒಂದೇ ಕಾನೂನು, ಒಂದೇ ರೀತಿಯ ಹಕ್ಕುಗಳು ಬೇಕು. ಆದರೆ ಇದು ನಿಜವಾಗಿಯೂ ಈಡೆರುತ್ತದೆಯ?

    ಯಾವ ರಾಜಕಾರಣಿ ಹೀಗೆ ಆಗಲು ಕೊಟ್ಟಾನು? ಯಾವ ಬುದ್ದಿ ಜೀವಿ ಇದಕ್ಕೆ ಬೆಂಬಲ ಕೊಟ್ಟಾನು?
    -ವೆಂಕಟೇಶ್ ಟೆಕ್ಸಾಸ್

  14. seshadri says:

    What has happened to Kashmiri Hindus, the pandits. When in majority the muslims are merciless. When in minority ..they complain, protest, and all that can be done for self preservation. This is proven historic fact borne out by centuries…. Hindu self preservation does not come from ideological debates and obligations. Hindus have the sole responsibility of their preservation. They dont need approval from ideologies. Pure and simple.

  15. ಯಶವಂತ says:

    ತುಂಬಾ ಚನ್ನಾಗಿದೆ.

  16. kk says:

    Sir, I heard Vijaya karnataka is closing. is it true? I hope to hear that it is not true.

  17. Kiran says:

    PLEASE SET A LINK IN YOUR WEBSITE TO DOWNLOAD THE REQUIRED KANNADA FONT.. MOST OF THE TIMES THE SITE DOESN’T LOAD WITH PROPER CHARACTERS AS I KEEP IN JOURNEY IN DIFFERENT PLACES

  18. Shankar says:

    Dear Prathap

    After anthule’s drama & support he is getting from that community i think your question at last para is correct ” Are we seeing the real change of heart?”
    the change what we seen is just a first reaction not reaction from heart _ for them still there community is more than any thing inthe world

  19. Shankar says:

    yes prathap , kiran heliddu correct , namage kanndadalle baribeku nadre agtha illa , help madi

  20. Varaha says:

    Dear Pratap,

    Are you patriotic? I don’t think so. Prove your patriotism. Anybody can write like you spreading hatred. But it is not patriotism. I am sure that you are a traitor, a DESHADROHI, trying to dissect our nation into more pieces. You should be tried on treason charges.

  21. Naveen says:

    super and dynamic article

  22. Shashank Dambal says:

    Can somebody please pass the address of this Varaha??