Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ

ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.

ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.

ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.

ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.

ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!!
ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!
ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?

ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್‌ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್‌ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕೆ ಕಾರಣವೂ ಇದೆ.

೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ  ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು.  ೧೯೫೭ರಲ್ಲಿ  ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.

ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!

ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.

ಇದರಲ್ಲಿ ತಪ್ಪೇನಿದೆ?

ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ.
ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…

ಹೇ ಆದಿಶಂಕರಾ!

26 Responses to “ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?”

 1. Pradeep says:

  Thanks for enlightening us on this issue in detail with facts.

 2. Ganeshprasad Hegde says:

  Hi…….
  I am 1 of ur regular reader. This article is simply superb and this will answers several who doesnt know much about Gokarna.
  please keep tab on more n more real facts in future also.
  Thank you……
  Bye

 3. Santosh DT says:

  Hi Pratap,

  I really appreciate this article. This article cleared all my doubts in detail. Thank you for such a woderful writing. Keep going.

  With best wishes,

  Santosh DT

 4. Venaktesh Dodmane says:

  Hi Pratap,
  Appriciate your beauty of writing.
  At least some is there to tell the truth boldly/frankly.
  I felt so much relieved after reading your article.
  Kindly write an article on Thirupathi Temple also, where our money is being utmis-used for haj piligrims & churches.
  Best Regards
  Venkatesh, Tx-USA

 5. Shilpa Sagar says:

  Hi Pratap,

  Thank u for such a wonderful article about the Gokarna issue.

  Best Wishes,
  Shilpa Sagar

 6. Mahabaleshwara Holla says:

  Dear Pratap,
  Nice article. I read almost all articles published in “Bettale Jagatthu” either in VK or in thatskannada. From past coulple of weeks I can’t see your article in TK. Today while reading comments for an article in TK, I come to know about your wesite. The way of thinking and research about the facts is interesting. I rememberd you only mentioned in one article that some of your friends will also provide you the necessary stuff for your articles.
  I read in VK that “Sri Sri Sri Siddaganga Swamiji” also appriciated your aticles.
  Good work, keep it up…………………
  Mahabaleshwara Holla

 7. Amarnath Devdhar says:

  Pratap Namaste,

  TK.com nalli ide vishayada bagge odi tumba kasivisi mattu samshaya moodittu. Aadare savistaaravagi vishayada moolakke nammannu kardukondu hogiddakke dhanyavaadagaLu!
  Keep sharing such a informations!

 8. Gowtham says:

  ಪ್ರಬುದ್ದವಾದ ಲೇಖನ, ೨ ವರ್ಷಗಳ ಕಾಲ ಓರ್ವ ವೇದ ಕಲಿಯುವ ವಿದ್ಯಾರ್ಥಿಯಾಗಿ ಗೋಕರ್ಣದ ವೇದ ಪಾಠಶಾಲೆಯಲ್ಲಿದ್ದೆ. “ವಿದ್ವಾನ್ ಏವವಿಜಾನಾತಿ ವಿದ್ವಜ್ಜನ ಪರಿಶ್ರಮಂ” ಎನ್ನುವಂತೆ, ಗೋಕರ್ಣದ ಅರ್ಚಕರ ವಿಷಯದಲ್ಲಿ ತಾವು ಹೇಳಿದ ವಿಷಯವೆಲ್ಲವೂ ಸತ್ಯ ಎಂದು ಅರ್ಚಕನಾಗಿರುವ(ಅಮೇರಿಕದಲ್ಲಿ) ನಾನೇ ಸ್ಪಷ್ಟೀಕರಿಸುತ್ತೆನೆ, ಕೇವಲ ಪತ್ರಿಕೆಯ ಮಾರಾಟಕ್ಕಾಗೆ ವಿಷಯದ ಸಂಗ್ರಹಣೆಯಿಲ್ಲದೆ ತೋಚಿದ್ದನ್ನು ಗೀಚುವ ಮೂರ್ಖರು ಈ ಲೇಖನವನ್ನು ನೋಡಿ ಕಲಿಯಲಿ ಲೇಖನವೊಂದಕ್ಕೆ ವಿಷಯ ದಟ್ಟಣೆ(ಸ್ಪಷ್ಟನೆ) ಎಷ್ಟಿರಬೇಕೆಂದು. ದಾಖಲೆಗಳೊಂದಿಗಿನ ಈ ಲೇಖನ ಸತ್ಯತೆಯನ್ನು ಎತ್ತಿ ತೋರಿಸುತ್ತಿದೆ. ನಿಮ್ಮ ಈಲೇಖನಕ್ಕೆ ನಿಮ್ಮನ್ನು ಅಭಿನಂದಿಸಿ, ಸರಸ್ವತಿಯನ್ನು ಅಭಿವಂದಿಸುತ್ತೇನೆ.

  ಗೌತಮ

 9. Ramesh Hegde says:

  Hi Pratap,

  This is a beautiful article which must be read by everyone. Thanks for your information and enlighting the people regarding Gokarna issue. Thanks for your work.

 10. Yajnesh says:

  ಗೆಳೆಯ ಪ್ರತಾಪ್….

  ನಿಮ್ಮ ಲೇಖನ ತುಂಬಾ ಸುಂದರವಾಗಿ ಮೂಡಿಬಂದಿದೆ. ನಮ್ಮ ದೇಶ ಉದ್ದಾರವಾಗಬೇಕಾದರೆ, ನಮ್ಮ ಪರಂಪರೆ ನಶಿಸಿ ಹೋಗದೇ ಉಳಿಯಬೇಕಾದರೆ ಇಂದಿನ ಯುವಪೀಳಿಗೆ ಮುಂದೆ ಬರಬೇಕು. ಜನರಲ್ಲಿ ಧನದಾಹ ಬಂದರೆ ಎಂತ ಹೇಸಿಗೆ ಕೆಲಸವನ್ನು ಮಾಡಲು ಹಿಂಜರಿಯರು. ಅದು ಅವರ ವ್ಯಕ್ತಿತ್ವ. ಅವರು ಬೆಳೆದು ಬಂದ ದಾರಿ, ಅವರ ತಂದೆ ತಾಯಿ, ಕುಟುಂಬದ ವ್ಯಕ್ತಿತ್ವವನ್ನು ಹೇಳತ್ತೆ. ಒಬ್ಬ ವ್ಯಕ್ತಿ ಸರಿಯಿಲ್ಲವೆಂದರೆ ಮೊದಲು ಹೇಳೋದು ಅವನ ಸಂಸ್ಕಾರ ಸರಿ ಇಲ್ಲ ಅಂತ. ಸಂಸ್ಕಾರವೆಂದರೆ ಮೇಲಿನ ಎಲ್ಲವೂ ಸೇರಿದ್ದಾಗಿದೆ.

  ತಮ್ಮ ಪತ್ರಿಕೆ ಹೆಚ್ಚು ವ್ಯಾಪಾರವಾಗಬೇಕಾದರೆ ಎಂತಹ ಕೆಲಸಕ್ಕೂ ಹೇಸೊಲ್ಲ ಜನ. ಅದನ್ನು ನಿರ್ಮೂಲನ ಮಾಡಬೇಕಾದರೆ ಬುದ್ದಿವಂತ ಯುವಕರ ಅವಶ್ಯಕತೆಯಿದೆ. ನಿಮ್ಮಲ್ಲಿ ಆ ಪ್ರತಿಭೆಯಿದೆ. ನಿಮ್ಮಿಂದ ಇಂತಹ ಅನೇಕ ಲೇಖನಗಳು ಮುಂದೆ ಬರಲಿ. ಜನರನ್ನು ಬಡಿದೆಬ್ಬಿಸಲಿ. ಸತ್ಯವನ್ನು ಹೇಳಿದರೆ ಅದಕ್ಕೆ ಅನೇಕ ತೊಂದರೆಗಳು ಎದುರಾಗುತ್ತವೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸತ್ಯವನ್ನು ಬರೆಯಿರಿ. ಯಾರೂ ಶಹಬ್ಬಾಸ್ ಅನ್ನದಿದ್ದರೂ ಚಿಂತೆಯಿಲ್ಲ. ನಿಮ್ಮ ಒಳಮನಸ್ಸಿಗೆ ತೃಪ್ತಿಯಾದರೆ ಸಾಕು….

  ಹಿಂದೆಲ್ಲೋ ಕೇಳಿದ ಹಾಡು…”ಹರನೆ ನಿನ್ನನೂ ಒಲಿಸಲುಬಹುದು..ನರರನು ಒಲಿಸುವುದತಿ ಕಷ್ಟ… ಸರಿ ಬಂದಂತೆ ಆಡುವ ಜನರೊಳು ಕಡೆತನಕಿರುವುದು ಅತಿ ಕಷ್ಟ”

  ಗೋಕರ್ಣದ ನೈಜ ವರದಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

 11. soma dixit says:

  ಪ್ರತಾಪ್ ರೇ,

  ಗೋಕರ್ಣದ ಹಸ್ತಾಂತರವನ್ನು ವಿರೋದಿಸುತ್ತಿರುವವರು ಕೆಲವು ವ್ಯಕ್ತಿಗಳು ಮಾತ್ರ. ಇಲ್ಲಿಯ ತನಕ ಬಂದವರನ್ನೆಲ್ಲಾ ದೇವರ ಹೆಸರಲ್ಲಿ ದೋಚುತ್ತಿದ್ದ ವ್ಯಕ್ತಿಗಳು. ತಮ್ಮ ಬುಡಕ್ಕೆ ಕತ್ತರಿ ಬಿದ್ದಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡ್ತಾಯಿದ್ದಾರೆ. ಅಂತಹ ವ್ಯಕ್ತಿಗಳ ಬ್ಯಾಂಕ್ ಅಕೌಂಟನ್ನು ಒಮ್ಮೆ ತಿಳಿಯಲು ಪ್ರಯತ್ನಿಸಿ.

  ಅದರ ನೈಜ ವರದಿ ಬರಲಿ. ಅವರ ಹಿಂದಿರುವ ವ್ಯಕ್ತಿಗಳು/ಮಠಾದೀಶರುಗಳು ಯಾರೆಂದು ಅರಿಯಲು ಪ್ರಯತ್ನಿಸಿ.

 12. Prasanna says:

  Hi Pratap, Congrats & thanks for giving us a very neat & well researched article. Your article answers all the questions & issues rised by some third class jounalists like Ravi Belagare.

 13. Devapriya Naik says:

  Good article.
  I know closely both the Gokarna & Sri Mutt.
  Sri Raghaveshwara Swamiji is doing wonderful job, he is already ‘talk of the town’ in Shivamogga, Mangaluru & all over Malenadu if not whole Karnataka for his unselfish contribution.
  Many people confuses, this is a Brahmin’s Mutt. But This math has deciples from 18 casts including Brahmins. I have great respect to this mutt, even though being a non-Brahmin. Many huge contribution comes from ‘other’ castes also. Swamiji looks everyone with equal and love. He protects us, he donated many things to many of us, the lower castes. Whenever we went with our problems he has solved. What else we expect?
  I support the transfer of Gokarna Temple to Sri Ramachandrapura Mutt, strongly.
  Dear readers, pl remember, transferring of Temples not only benefits the Hindus but also prevents our money goes to Haj & Converts.

  Best Regards to Pratapsimha for valueable writing, unlike Ravi.
  Devegowda is another manace to Hindus, he is a opportunist.
  How can he perform yajnya/yaga for his own benefits? He is a pure ‘caste’ based person.
  Naik from london.

 14. Anamika says:

  Dear Friend Pratap,

  Ypur article has come out well… But, have a feeling, lacked the historial part which made purohits of Gokarna to use our culture for business purpose….

 15. GURUPRASAD says:

  Mr.Pratap,
  I was not surprised to see a biased article from you..
  It would be nice to ponder over the following issues
  With all respects to Sri Adishankara,how do you project the present seer or the mutt as a good administrator(not great) ?
  Is it because Mr.Vishveshwar bhat is a havyak brahmin ??
  Have you visited the Goshalas built by the mutt, and understood the state of anarchy there??
  What is the state of the various other projects on Savayava KRISHI,cattle related products,etc ??
  How well are the pooja’s being conducted at the various shakha mutt’s of the same mutt ??
  What is the energy spent by the mutt to propogate Veda’s which was the primary objective of Adishankara ??
  Why did the mutt eye on only Gokarna while there are enough temples without any promoters ??
  How will the mutt stop foriegners stripping in the beaches when the govt itself was not able to do ??
  Hope you will reduce penning such half boiled/ill researched/biased articles.
  regards,
  Guruprasad

 16. Ashwini Bhat says:

  Namaste Pratap,
  Truthful article…
  Keep writin like this….

 17. Shripathi Bhat says:

  This is a very good aricle. I also experienced personally the condition of Gokarna temple. It is very sorry to say about that. Hosnagara Ramachandrapura matt doing a very fantastic job in Hosanagara by constructing cattle shed to lookafter the endagered varieties of indegenous cows. Keep it up your super straight forward wrtitings . I wish you to give some more details about these in coming articles

 18. Nagendra Shastry says:

  This is superb…….fantastic job….keep on doingit pratap sir……..

 19. ಅನಾಮಿಕ says:

  ಪ್ರತಾಪಣ್ಣ,
  ಚೆನ್ನಾಗಿದ್ದೀರಾ? ನಿಮ್ಮ ಲೇಖನಗಳು ಪ್ರತಿಯೊಬ್ಬರಲ್ಲೂ ಮೂಡುವ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡುತ್ತವೆ. ಅದರಲ್ಲಿ ಮಾತ್ರ ಎರಡು ಮಾತಿಲ್ಲ. ಆದರೂ ಸಹಾ ನನ್ನಲ್ಲಿ ಅದೇಕೋ ಕಸಿವಿಸಿ, ಕಳವಳದಿಂದ ಒಂದು ಮಾತು ಹೇಳಲೆಬೇಕಾಗಿದೆ. ಹೀಗಾಗಿ ಇದನ್ನು ಹೇಳದಿದ್ದರೆ ತಪ್ಪಾಗುತ್ತದೆ. ಏಕೆಂದರೆ ನೀವೂ ಇತ್ತೀಚಿನ ದಿನಗಳಲ್ಲಿ ಕೇಸರಿ ಪಕ್ಷ ಹಾಗೂ ಅದರ ಸಿದ್ದಾಂತದ ವಕ್ತಾರರಾಗಿ ಲೇಖನ ಬರೆಯುತ್ತಿದ್ದಿರೆಯೇ, ಹೊರತು ಹೆಚ್ಚಿನದ್ದೇನೂ ಕಾಣುದಿಲ್ಲ. ಹೀಗಾಗಿ ದಯವಿಟ್ಟು ಇದರ ಕಡೆ ಗಮನಹರಿಸಿದರೆ ಒಳಿತು ಎಂಬ ಅಭಿಪ್ರಾಯ ನನ್ನದು. ಇನ್ನೂ ಈ ಲೇಖನದಲ್ಲಂತೂ ಜಾತಿ ಪ್ರೇಮ ಅತಿಯಾಗಿ ಕಾಣುತ್ತಿರುವುದು ಸುಳ್ಳಲ್ಲ. ಬದಲಾವಣೆ ನಿರೀಕ್ಷಿಸುತ್ತೇವೆ. ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದಿಕ್ಕಾಗಿ. ಧನ್ಯವಾದ..

  ವಂದನೆಗಳೊಂದಿಗೆ
  ಅಭಿಮಾನಿ ಅನಾಮಿಕ

 20. ಸಿಂಹ ಪ್ರತಾಪಿಗಳೇ,
  ಲೇಖನ ಅದ್ಭುತ ಎರಡು ಮಾತಿಲ್ಲ. (ನಿಮ್ಮ ಬ್ಲಾಗ್ ತಡವಾಗಿ ದೊರೆತಿದ್ದಕ್ಕೆ ಪಶ್ಚಾತ್ತಾಪವಿದೆ) ಆದರೆ ನಿಮ್ಮ ಎಲ್ಲಾ (100%) ಬೆತ್ತಲೆಜಗತ್ತನ್ನು ಕಂಡ ನನಗೆ ತಮ್ಮ ಶೈಲಿ ಭಾಷೆ ಅವಲೋಕಿಸಿದರೆ ಇದು ತಮ್ಮ ಲೇಖನದಂತಿಲ್ಲ. ಆದರೂ ತಮ್ಮದಾಗಿದ್ದರೆ ಮಹಾಸಂತೋಷ ತಮಗೆ ಈ ಶೈಲಿಯೂ ಗೊತ್ತು ಎಂದು.

 21. Sudarshana H S bhat & Raveesh K P says:

  Hi Pratap,
  Article is Good,Thaks to more infomation about Gokarna.
  Lot of devotees don’t know about the real fact.
  You remembered and realised the real truth of Gokarna.

  Thanks,
  RAVEESH K P AND SUDARSHANA H S

 22. Prabhuling says:

  Hi Pratap,
  Article is Good,Thaks to more infomation about Gokarna.
  Lot of devotees don’t know about the real fact.
  You remembered and realised the real truth of Gokarna.

  Thanks,

  PRABHULING G UMADI

 23. Kumar padyana says:

  Dear pratap,

  great article, thanks for the time u spend on collecting & put it in proper way. God bless you in your activity.
  This is true that many heritage centre become comercial centre.

  rgds,

  PG

 24. A Reader says:

  As usual a nice article

 25. mahesh says:

  ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
  ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
  ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
  ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ,
  ಎಂದು ನೀವು ಉಲ್ಲೇಖಿಸಿದ ಶ್ಲೋಕ ಹಿಂದಿನ ಗುರು ಪರಂಪರೆಯಿಂದ ತಿಳಿದು ಬಂದಂತೆ, ಹಾಗೂ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರ ಮಠ. ಅಂದರೆ ಈಗಿನ ರಾಘವೇಶ್ವರರ ಹಿಂದಿನ ಗುರುಗಳು ಅವರ ಕಾಲದಲ್ಲಿ ಮಠದ ಇತಿಹಾಸವನ್ನು ಸಾರುವ, ಹಾಗೂ ಈಗಿನ ಗುರುಗಳೇ ಮುದ್ರಿಸಿದ ಗ್ರಂಥಗಳಲ್ಲಿ =
  ಇದೇ ಮಠದ ವತಿಯಿಂದ ಮುದ್ರಿತವಾದ, ” ಶ್ರೀ ಮಠದ ಗುರುಪರಂಪರೆ ಮತ್ತು ಇತಿಹಾಸ ( ಧರ್ಮಪ್ರವೃತ್ತಿ ಎನ್ನುವ ತಾಳೆಗರಿ ಎನ್ನಲಾಗಿದೆ ) ಎಂಬ ಹೆಸರಿನ ಪುಸ್ತಕದಲ್ಲಿ
  ೧೯೭೫ ರಲ್ಲಿ ಮುದ್ರಿತವಾದ=” ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ” ಎಂಬ ಹೆಸರಿನ ಪುಸ್ತಕದಲ್ಲಿ
  ನೀವು ಮೊದಲು ಉಲ್ಲೇಖಿಸಿದ ಶ್ಲೋಕ=ರಾಮಚಂದ್ರಾಪುರ ಮಠ ಎನ್ನುವ ಶಿರೋಲೇಖನದ ಅಡಿಯಲ್ಲಿ ಪುಟ ಸಂಖ್ಯೆ ೪-೫ ರಲ್ಲಿ ಹಾಗೂ
  ೧೯೧೯ ರಲ್ಲಿ ಮುದ್ರಿತವಾದ “ಶ್ರೀ ಗುರುಭಗವತ್ಪಾದ ವೈಭವಂ ಎಂಬ ಗ್ರಂಥದ ೮-೯ ನೇ ಪುಟದ ಅರ್ಥದಲ್ಲಿ
  ೧೯೯೯ ರಲ್ಲಿ ಮುದ್ರಣವಾದ ” ಗುರುಭಾರತೀ” ಯಲ್ಲಿ ೩೯ ನೇ ಪುಟಗಳಲ್ಲಿ ,ಎಲ್ಲೂ ಹೀಗೆ ಕಂಡು ಬರದೇ ಕೇವಲ=
  ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ |
  ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ || ಎಂದು ಕಂದು ಬರುವ ಹಿಂದಿನ ಮರ್ಮವೇನು?
  ” ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
  ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈ”” ಎಂಬ ಎರಡು ಸಾಲನ್ನು ಸೇರಿಸಿದ ಭೂಪನಾರು? ಹಿಂದಿನ ಗುರು ಪರಂಪರೆಗೆ ತಿಳಿಯದೇ ಇದ್ದ ನಿಗೂಢ ರಹಸ್ಯ ಶ್ಲೋಕ ಇವರಿಗೆ ಹೇಗೆ ತಿಳಿಯಿತು? ಇದನ್ನು ಪ್ರಶ್ನಿಸಿದರೆ ಉತ್ತರಿಸುವ ಅಗತ್ಯವಿಲ್ಲ ಎಂಬ ಉದ್ಧಟತನವೇ ಉತ್ತರವಾಗಿದೆ. ಬೇಡ ಈ ಶ್ಲೋಕವನ್ನು ಇತ್ತೀಚಿಗೆ ಪ್ರಕಟಿಸಿದ ವಿದ್ವಾಂಸರು, ಇತಿಹಾಸ ಸಂಶೋಧಕರು ಎಂಬ ಬಿರುದು ಹೊಂದಿದ ಮಹಾಶಯರೂ ಕೂಡ ತಾಳೆಗರಿಯೆಲ್ಲಿದೆ. ಎಂದು ಹೇಳುತ್ತಾರೆಯೇ ವಿನಹ ಮುಖ ತೋರಿಸದೇ ಮರೆಯಾಗಿದ್ದಾರೆ. ಇರಲಿ ಕಾಗದ ಪತ್ರ ಸೃಷ್ಟಿಯನ್ನಾದರೂ ( ಲಂಚದಿಂದ ) ಮಾಡಬಹುದಿತ್ತು. ಅದನ್ನು ಬಿಟ್ಟು ಶಂಕರಾಚಾರ್ಯರ ಮಾತು ಇದು ಎಂದು ಹೊಸ ಸೃಷ್ಟಿ ಮಾಡಲು ಹೋಗಿ, (ಸಂಸ್ಕೃತಜ್ನರ ಪ್ರಕಾರ ಸರಿಯಾಗಿ ಅನ್ವಯವಾಗಲಾರದು ) ಅನ್ವಯವಾಗದ ರೀತಿ ಎರಡು ಸಾಲನ್ನು ತಂದಿಡುವ ಜ್ನಾನಿಗಳ ಕೊರತೆ ಇವರಲ್ಲಿತ್ತೇ? ಇಂತಹ ಕಪಟತನದ ಸನ್ಯಾಸಿಗಳ ಅವಶ್ಯಕತೆ ಖಂಡಿತ ಇವತ್ತಿನ ಸಮಾಜಕ್ಕಿಲ್ಲ. ಶಂಕರಾಚಾರ್ಯರ ಹೆಸರನ್ನು ಹಾಳುಮಾಡುವ ಇವರ ಬುದ್ಧಿಗೆ ಮಂಕು ಕವಿದಿದೆಯೇ?ಸುಳ್ಳಿಗೆ ಬೆಲೆಕೊಡುವ ಮಠ ಇದು ಎನ್ನುವುದು ಈ ಶ್ಲೋಕದ ಸೃಷ್ಟಿಯಿಂದ ಜಗಜ್ಜಾಹೀರಾಗಿದೆ.
  ನಿಮಗೆ ಒಂದು ಮಾತು, ಗುರುಗಳನ್ನು ಹೊಗಳಬೇಡಿ ಎಂದು ನಾನು ಹೇಳಲಾರೆ. ನಿಮಗೆ ಆದ್ಯಶಂಕರರ ತತ್ವಗಳಿಗೆ ಬೆಲೆ ಕೊಡುವ ಮನಸ್ಸಿದ್ದಲ್ಲಿ, ಸಂಸ್ಕೃತದಲ್ಲಿ ” ಸತ್ ಶಿಷ್ಯೋ ಗುರುಮಾಶ್ರಯೇತ್ || “, ಎನ್ನುವ ವಾಕ್ಯವಿದೆ. ಭಾರತದಲ್ಲಿ ಶಂಕರರ ನಾಲ್ಕು ಆಮ್ನಾಯ ಪೀಠಗಳಿವೆ. ಪ್ರಧಾನವಾದ ಶೃಂಗೇರಿ ಪೀಠವಿದೆ. ಬೇಡ ಅವರ ಶಿಷ್ಯ ಪರಂಪರೆ ಇದೆ. ಅದೂ ಬೇಡದಿದ್ದಲ್ಲಿ ಸ್ವರ್ಣವಲ್ಲಿ, ಎಡತೊರೆ, ಇತ್ಯಾದಿ ಅನೇಕ ಪೀಠಗಳಿವೆ ಇವುಗಳನ್ನು ಆಶ್ರಯಿಸಿ, ಹೊಗಳಿ.
  ಆಚಾರ್ಯ ಶಂಕರರು ಚತುರಾಮ್ನಾಯ ಪೀಠಗಳನ್ನು ಸಂಸ್ಥಾಪಿಸಿದರು. ಅನೇಕರಿಗೆ ವೈದಿಕ ಧರ್ಮದ ಉತ್ಥಾನಕ್ಕಾಗಿ ಸನ್ಯಾಸ ದೀಕ್ಷೆಗೈದರು. ಜೊತೆಗೆ ಅನೇಕ ನಿಬಂಧನೆಗಳನ್ನು ಕೂಡ ಇಟ್ಟಿದ್ದರು. ಅದನ್ನು ಮರೆತ ಈ ಪೀಠ ಮನಸೋ ಇಚ್ಛೆ ವ್ಯವಹರಿಸುತ್ತಿದೆ. “ಪರಸ್ಪರ ವಿಭಾಗೇ ತು ನ ಪ್ರವೇಶೋ ಕದಾಚನ ” ಇತ್ಯಾದಿ ನಿಬಂಧನೆಗಳಿದ್ದರೂ ಕೇವನ ದುಡ್ಡಿಗಾಗಿ ಬಾಯ್ಬಿಡುವ ಪ್ರಸ್ತುತ ರಾಘವೇಶ್ವರರು ಮನ ಬಂದಂತೆ ಬೇರೆ ಪೀಠಗಳ ಪ್ರದೇಶದಲ್ಲಿ ತಿರುಗುತ್ತಿದ್ದಾರೆ. ತಾವು ತುಂಡು ಮಠವೊಂದರ ಮೇಲ್ವಿಚಾರಕ ಎಂಬುದನ್ನು ಮರೆತು ವ್ಯವಹರಿಸುತ್ತಿರುವುದು ಶೋಭೆ ತರುವುದಿಲ್ಲ. ಇದೇ ವ್ಯವಹಾರವನ್ನು ರಾಜರ ಕಾಲದಲ್ಲಿ ಮಾಡಿದ್ದರೆ ಇವರಿಗೆ ಗಡೀಪಾರು ಇಲ್ಲವೇ ಬಹಿಷ್ಕಾರವೇ ಗತಿಯಾಗಿರುತ್ತಿತ್ತು.

 26. Harsha Lingadahalli Prabhakar says:

  Hello prathap,

  I feel very proud of Sri Ramachandrapur matt, a classy direction towards the development and I like this article, this article gives much knowledge to me.