Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಗುದ್ದು ಕೊಟ್ಟಿದ್ದೇನೋ ನಿಜ, ಬೇರೇನು ಮಾಡಿದ್ರಿ ಸಿದ್ದು?

ಗುದ್ದು ಕೊಟ್ಟಿದ್ದೇನೋ ನಿಜ, ಬೇರೇನು ಮಾಡಿದ್ರಿ ಸಿದ್ದು?

Siddu

ಕನ್ಸರ್ವೇಟಿವ್ ಪಾರ್ಟಿ
ಲೇಬರ್ ಪಾರ್ಟಿ

ಬ್ರಿಟನ್‌ನಲ್ಲಿ ಮುಖ್ಯವಾಗಿ ಇರುವುದೇ ಈ ಎರಡು ಪಕ್ಷಗಳು. ಒಮ್ಮೆ ಲೇಬರ್, ಮತ್ತೊಮ್ಮೆ ಕನ್ಸರ್ವೇಟಿವ್…ಒಂಥರಾ ಸರದಿಯ ಪ್ರಕಾರ ಅಧಿಕಾರಕ್ಕೇರುತ್ತಿರುತ್ತವೆ. ಸಾರ್ವತ್ರಿಕ ಚುನಾ ವಣೆಯ ನಂತರ ಲೇಬರ್ ಪಕ್ಷ ಅಧಿಕಾರಕ್ಕೆ ಬಂದು ಅದರ ನೇತಾರ ಪ್ರಧಾನಿಯಾದರೆ ಮುಖ್ಯ ಪ್ರತಿಪಕ್ಷವನ್ನು(ವಿರೋಧ ಪಕ್ಷ) ಅಲ್ಲಿನ ಪತ್ರಿಕೆಗಳು “Our Party” (ನಮ್ಮ ಪಕ್ಷ) ಅಂತ ಸಂಬೋಧಿಸುತ್ತವೆ. ಒಂದು ವೇಳೆ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದರೆ ಲೇಬರ್ ಪಕ್ಷ “Our Party”ಯಾಗುತ್ತದೆ.

ಅಂದರೆ ಆಳುವ ಪಕ್ಷ ಜನಹಿತ ಮರೆತಾಗ ಪ್ರತಿಪಕ್ಷವೆಂಬುದು ಸರಕಾರದ ಮುಂದೆ ಜನರ ಪ್ರತಿನಿಧಿಯಾಗಿ ವಕಾಲತ್ತು ವಹಿಸಿ, ಹೋರಾಡಿ ಹಿತರಕ್ಷಣೆ ಮಾಡಬೇಕು. ಅಕಸ್ಮಾತ್ ಜನರಿಗೇ ನೇರವಾಗಿ ಸರಕಾರವನ್ನು ಪ್ರಶ್ನಿಸಲು ಅವಕಾಶವಿದ್ದರೆ ಯಾವ ಪ್ರಶ್ನೆ ಕೇಳುತ್ತಿದ್ದರೋ ಆ ಪ್ರಶ್ನೆಗಳನ್ನು ಜನರ ಪರವಾಗಿ ಪ್ರತಿಪಕ್ಷ ಕೇಳಬೇಕು. ಆ ಕಾರಣಕ್ಕಾಗಿಯೇ ಪ್ರತಿಪಕ್ಷವನ್ನು ‘ನಮ್ಮ ಪಕ್ಷ’, ನಮ್ಮ ಪರವಾಗಿ ಹೋರಾಡುವ ಪಕ್ಷ ಎಂಬ ಅರ್ಥದಲ್ಲಿ ನೋಡುತ್ತಾರೆ.  ಇನ್ನು ಪ್ರತಿಪಕ್ಷದ ನಾಯಕನನ್ನು “People’s No-1 representative” ಅಥವಾ “Shadow Prime Minister” ಎನ್ನುತ್ತಾರೆ. ಆತನನ್ನು ಮುಂದಿನ ಅಥವಾ ಪರ್ಯಾಯ ಪ್ರಧಾನಿಯೆಂಬಂತೆ ಕಾಣಲಾಗುತ್ತದೆ. ಆಡಳಿತ ನಡೆಸುವ, ಅಧಿಕಾರ ಚಲಾಯಿಸುವ ಹಕ್ಕು ಆತನಿಗಿಲ್ಲದಿದ್ದರೂ ಪ್ರಧಾನಿಯನ್ನೇ ‘ಮಾನಿಟರ್’ ಮಾಡುವ ಗುರುತರ ಜವಾಬ್ದಾರಿಯಿರುತ್ತದೆ. ನೆರಳು ನಮ್ಮನ್ನು ಹೇಗೆ ಹಿಂಬಾಲಿಸುತ್ತದೋ ಹಾಗೆ ಪ್ರತಿಪಕ್ಷದ ನಾಯಕ ಪ್ರಧಾನಿಯ ಕಾರ್ಯಚಟುವಟಿಕೆಗಳನ್ನು ನೆರಳಿನಂತೆ ಹಿಂಬಾಲಿಸಬೇಕು, ಕಣ್ಣಿಡಬೇಕು, ತಪ್ಪೆಸಗಿದಾಗ ಎತ್ತಿತೋರಿಸಬೇಕು. ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಿಂತ ಜವಾಬ್ದಾರಿ ಬಹುಮುಖ್ಯ. ಮೊನ್ನೆ ವಿಧಾನಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಾಲಿ ಜವಾಬ್ದಾರಿಯಾದ ‘ಪ್ರತಿಪಕ್ಷದ ನಾಯಕ’ನ ಸ್ಥಾನವನ್ನು “Shadow Chief Minister” ಅಂತ ವರ್ಣಿಸಿದ್ದು ಇದೇ ಅರ್ಥದಲ್ಲಿ ಹಾಗೂ ಕಾರಣಕ್ಕೆ. ಆದರೆ ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕರೊಬ್ಬರು ಇದ್ದಾರೆ ಎಂಬುದು ಕಳೆದ ಒಂದು ವರ್ಷದಲ್ಲಿ ಎಂದಾದರೂ ನಿಮಗೆ ಅನಿಸಿತ್ತಾ?

ಅಬ್ಬಾ!

ಕರ್ನಾಟಕದಲ್ಲೂ ಪ್ರತಿಪಕ್ಷಗಳಿವೆ, ಮುಖ್ಯ ಪ್ರತಿಪಕ್ಷವೊಂದಿದೆ, ಅದಕ್ಕೊಬ್ಬ  ನೇತಾರನಿದ್ದಾನೆ, ಆತನಿಗೆ ಮುಖ್ಯಮಂತ್ರಿಯನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ, ಬೆವರಿಳಿಸುವ ತಾಕತ್ತಿದೆ ಎಂಬುದು ಒಂದು ವರ್ಷ ಕಳೆದ ನಂತರ ಇದೀಗ ರಾಜ್ಯದ ಜನತೆಯ ಅನುಭವಕ್ಕೆ ಬಂದಿದೆ! ಕಾಂಗ್ರೆಸ್ ಶಾಸಕಾಂಗ ಪಕ್ಷದ ನೇತಾರರಾಗಿ ಸಿದ್ದರಾಮಯ್ಯನವರು ನೇಮಕವಾದಾಗಲೇ ಮುಂದಿನ ರಾಜ್ಯ ವಿಧಾನಸಭೆ ಅಧಿವೇಶನ ಸ್ವಲ್ಪವಾದರೂ ರಂಗೇರಲಿದೆ ಎಂಬುದರ ಸೂಚನೆ ಸಿಕ್ಕಿತ್ತು. ಕಾರ್ಯಭಾರ ವಹಿಸಿಕೊಂಡ ಬೆನ್ನಲ್ಲೇ ತುಮಕೂರಿನಲ್ಲಿ ಅಧಿಕಾರಿಗಳ ಸಭೆ ಕರೆದು, ಮಾಹಿತಿ ಕೇಳಿ ಸರಕಾರಕ್ಕೆ ಮುಂದೈತೆ ಊರಹಬ್ಬ ಎಂಬ ಸೂಚನೆಯನ್ನು ರವಾನೆಯೂ ಮಾಡಿದ್ದರು. ಇಷ್ಟಾಗಿಯೂ ಕಳೆದ 1 ವರ್ಷದಲ್ಲಿ ನಡೆದ ಅಧಿವೇಶನಗಳನ್ನು ಕಂಡಿದ್ದ ಜನರಿಗೆ, ಈ ಬಾರಿಯ ಅಧಿವೇಶನವೂ ಧರಣಿ, ಸಭಾತ್ಯಾಗಗಳಿಗೆ ತುತ್ತಾಗಿ ವಾರ, ಹತ್ತು ದಿನಗಳೊಳಗೆ ಪರಿಸಮಾಪ್ತಿಗೊಳ್ಳಬಹುದು ಎಂಬ ಆತಂಕವೂ ಇತ್ತು. ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳೆರಡೂ ಸದನದೊಳಗೆ ಒಂದಾಗಿ ನಿಂತರೆ ಮಾತ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಾಧ್ಯ, ಆದರೆ ಸಿದ್ದರಾಮಯ್ಯನವರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಾರೇ ಎಂಬ ಅನುಮಾನಗಳೂ ಇದ್ದವು. ಎಲ್ಲರೂ ಆಶ್ಚರ್ಯಪಡುವಂತೆ ಸಿದ್ದು ಸ್ವತಃ Rallying Point ಆಗಿ, ಜೆಡಿಎಸ್ ಅನ್ನೂ ಜತೆಗೆ ಕೊಂಡೊಯ್ದರು. ಎಚ್.ಡಿ. ರೇವಣ್ಣನವರೂ ಎಂದಿನ ಆಲಸ್ಯ ಬಿಟ್ಟು ಚರ್ಚೆ, ವಾದಕ್ಕೆ ನಿಂತು ಬಿಟ್ಟರು. ನಿಜಕ್ಕೂ ವಿಧಾನಸಭೆಯಲ್ಲಿ ಸಿದ್ದು, ರೇವಣ್ಣ, ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್‌ನಲ್ಲಿ ಎಂ.ಸಿ. ನಾಣಯ್ಯ, ಉಗ್ರಪ್ಪ ಮುಂತಾದವರು ಭರ್ಜರಿಯಾ ಗಿಯೇ ಬ್ಯಾಟಿಂಗ್ ಆರಂಭಿಸಿದರು. ಒಂದು ವರ್ಷದಲ್ಲಿ ಬಿಜೆಪಿ ಸರಕಾರ ಸೃಷ್ಟಿಸಿರುವುದು ಅದೇನು ಕಡಿಮೆ ಹಗರಣಗಳಾ?

ಕರ್ನಾಟಕ ಗೃಹ ಮಂಡಳಿ ಭೂ ಖರೀದಿ ಹಗರಣ,
ಸಾರಿಗೆ ಇಲಾಖೆ ಹಗರಣ
ವರ್ಗಾವಣೆ ಹಗರಣ
ಸೈಕಲ್ ಖರೀದಿಯಲ್ಲಿ 35 ಕೋಟಿ ಗುಳುಂ
ಇಸ್ಕಾನ್ ಅವ್ಯವಹಾರ
ರಾಜ್ಯವ್ಯಾಪಿ ಅನಾರೋಗ್ಯ, ನೆರೆ, ರಸಗೊಬ್ಬರ ಕೊರತೆ
ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಹಗರಣ
ಪಂಪ್‌ಸೆಟ್ ಖರೀದಿ ಹಗರಣ
ರೆಡ್ಡಿ ಸಹೋದರರ ವಿರುದ್ಧದ ಕೇಸು ಹಿಂತೆಗೆತ
ಆಗ್ರೋಕಾರ್ನ್ ಹಗರಣ

ಇಂತಹ ಒಂದೊಂದು ವಿಚಾರಗಳನ್ನು ಕೈಗೆತ್ತಿಕೊಂಡು ಸಿದ್ದು, ನಾಣಯ್ಯ, ಡಿ.ಕೆ. ಶಿವಕುಮಾರ್, ರೇವಣ್ಣ ಮುಂತಾದವರು ಸರಿಯಾಗಿಯೇ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೂ ಬರು ಬರುತ್ತಾ ಅಧಿವೇಶನ ಪ್ರತಿಷ್ಠೆಯ ಕಣವಾಗಿ, ನೈಜ ಉದ್ದೇಶ ಎಲ್ಲೋ ಕಳೆದುಹೋಯಿತು! ಕರ್ನಾಟಕ ಗೃಹ ಮಂಡಳಿಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಸೃಷ್ಟಿಸಿದ್ದ ಭೂ ಖರೀದಿ ಹಗರಣವೊಂದನ್ನೇ ಇಟ್ಟುಕೊಂಡು ನಾಲ್ಕು ದಿನ ಕಲಾಪ ಹಾಳುಮಾಡಿದ್ದು ಎಷ್ಟು ಸರಿ?

ರತ್ನಗಿರಿ ರಹಸ್ಯ
ಭೈರವಿ ದ್ವೀಪಂ

ಮುಂತಾದ ಹಳೆಯ ಕನ್ನಡ ಚಲನಚಿತ್ರಗಳನ್ನು ಈ ಕಾಂಗ್ರೆಸ್ಸಿಗರು ಹಾಗೂ ಜೆಡಿಎಸ್‌ನವರು ಬಹಳಷ್ಟು ಬಾರಿ ನೋಡಿದ್ದಾರೆ ಅಂತ ಅನಿಸುತ್ತದೆ! ಅಂದರೆ ಹಿಂದೆಲ್ಲಾ ಬಿಡುಗಡೆಯಾಗುತ್ತಿದ್ದ ಚಿತ್ರಗಳನ್ನು ತೆಗೆದುಕೊಳ್ಳಿ. ವಿಲನ್ ಅಥವಾ ರಾಕ್ಷಸನನ್ನು ಹೀರೋ ಎಷ್ಟೇ ಹೊಡೆದರೂ ಆತ ಸಾಯುತ್ತಿರಲಿಲ್ಲ, ಸೋಲುತ್ತಲೂ ಇರಲಿಲ್ಲ. ಒಂದು ವೇಳೆ ಗುದ್ದು ತಿಂದು ಕೆಳಗೆ ಬಿದ್ದರೂ ಮತ್ತೆ ಎದ್ದು ಬಂದು ಹೀರೋ ಜತೆ ಕಾಳಗಕ್ಕಿಳಿಯುತ್ತಿದ್ದ. ಆ ವಿಲನ್/ರಾಕ್ಷಸನ ಜೀವ ಯಾವುದೋ ಒಂದು ಗಿಳಿ, ಪಾರಿವಾಳ ಅಥವಾ ಕನ್ನಡಿಯಲ್ಲಿರುತ್ತಿತ್ತು. ಗಿಳಿ, ಪಾರಿವಾಳಗಳನ್ನು ಮುಷ್ಟಿಯಲ್ಲಿ ಬಿಗಿದರೆ ವಿಲನ್‌ಗೆ ಕುತ್ತಿಗೆಯನ್ನು ಹಿಸುಕಿದಂತಾಗುತ್ತಿತ್ತು. ಅದನ್ನರಿತ ಕೂಡಲೇ ಹೀರೋ ಗಿಳಿ, ಪಾರಿವಾಳವನ್ನು ಕೊಲ್ಲುತ್ತಿದ್ದ. ಆಗ ವಿಲನ್ ಸಾಯುತ್ತಿದ್ದ. ಗಿಳಿಗೆ ಪೆಟ್ಟಾದರೆ ವಿಲನ್‌ಗೆ ನೋವಾಗುವ ಚಿತ್ರಕಥೆಗಳಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಯಾರಿಗೆ ಗುದ್ದಿದರೂ ನೋವಾಗುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೇ ಎಂಬುದನ್ನು ಅರಿತುಕೊಂಡು ಕೃಷ್ಣಯ್ಯ ಶೆಟ್ಟಿ, ಇಸ್ಕಾನ್, ಸಾರಿಗೆ ಹಗರಣ, ರೆಡ್ಡಿ ಕೇಸು ಮುಂತಾದ ವಿಚಾರಗಳನ್ನೆತ್ತಿಕೊಂಡು ಮುಖ್ಯಮಂತ್ರಿಯವರನ್ನು ಪೇಚಿಗೆ ಸಿಲುಕಿಸಲು, ಅವಮಾನ ಮಾಡಲು ಯತ್ನಿಸಲಾರಂಭಿಸಿದವೇ ಹೊರತು Constructive opposition ಅಥವಾ ರಚನಾತ್ಮಕ ಪ್ರತಿಪಕ್ಷಗಳಾಗಿ ಕಾರ್ಯ ನಿರ್ವಹಿಸಲಿಲ್ಲ. ಈ ಮಾತನ್ನು ಹೇಳಲೇಬೇಕಾಗಿದೆ. ಎರಡು ವಾರಗಳಲ್ಲಿ ಪ್ರತಿಪಕ್ಷಗಳು ಎತ್ತಿದ ವಿಷಯಗಳೆಂಥವು? ಹಗರಣ ಗಳನ್ನೆತ್ತಿಕೊಂಡು ಯಡಿಯೂರಪ್ಪನವರ ಕಾಲೆಳೆಯಲು, ಒಂಥರಾ Insult ಮಾಡಲು ಯತ್ನಿಸಿದ್ದನ್ನು, ಅದೇ ತಮ್ಮ ಉದ್ದೇಶ, ಗುರಿ ಎಂಬಂತೆ ವರ್ತಿಸಿದ್ದನ್ನು ಬಿಟ್ಟರೆ ಬೇರೇನನ್ನು ಮಾಡಿದವು? Insult  ಮಾಡಬೇಡಿ ಎಂದು ಖಂಡಿತ ಹೇಳುತ್ತಿಲ್ಲ, ಆದರೆ ಹಗರಣಗಳ ಜತೆಗೆ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವಂತಹ ಹಾಲಿ ಸಮಸ್ಯೆ, ವಿಷಯ, ವಿಚಾರಗಳನ್ನೂ ಎತ್ತಿಕೊಂಡು ಸರಕಾರ ಹಾಗೂ ಮುಖ್ಯಮಂತ್ರಿಗೆ ಮಂಗಳಾರತಿ ಮಾಡಿದ್ದರೆ ನಾಡಿನ ಜನರಿಗೂ ಒಳಿತಾಗುತ್ತಿರಲಿಲ್ಲವೆ?

ಅಷ್ಟಕ್ಕೂ ಹಗರಣಗಳನ್ನು ಬಿಟ್ಟರೆ ಬೇರಾವ ವಿಷಯಗಳೂ ಇರಲಿಲ್ಲವೆ?

ಆಶ್ರಯ ಮನೆಗಳನ್ನೇ ತೆಗೆದುಕೊಳ್ಳಿ. ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಕೊಡುತ್ತೇವೆ ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ವಾಗ್ದಾನ ಮಾಡಿತ್ತು. ವಾಗ್ದಾನ ಮಾಡಿದರಷ್ಟೇ ಸಾಕೇ? ಮೊದಲು ಆಶ್ರಯ ಸಮಿತಿಗಳನ್ನು ರಚನೆ ಮಾಡಬೇಕು. ಅದು ಬಡತನ ರೇಖೆಗಿಂತ ಕೆಳಗಿರುವ ಹಾಗೂ ವಸತಿ ರಹಿತರಾಗಿರುವವರನ್ನು ಪಂಚಾಯಿತಿ ಮಟ್ಟದಲ್ಲಿ ಗುರುತಿಸಿ ಫಲಾನುಭವಿಗಳನ್ನು ಪಟ್ಟಿ ಮಾಡಬೇಕು. ಅದರ ಆಧಾರದ ಮೇಲೆ ಒಟ್ಟು ನಿರ್ಮಾಣ ಆಗಬೇಕಿರುವ ಮನೆಗಳ ಸಂಖ್ಯೆ, ಅದಕ್ಕೆ ಬೇಕಾಗಿರುವ ವೆಚ್ಚ, ಕಾಮಗಾರಿ ಮುಂತಾದುವುಗಳನ್ನು ನಿರ್ಧರಿಸಬೇಕು. ಆ ಮೇಲೆ ಸರಕಾರ ನಿಧಿ ಬಿಡುಗಡೆ ಮಾಡಿ, ಕಾರ್ಯಚಾಲನೆಗೆ ಅನುವು ಮಾಡಿಕೊಡಬೇಕು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಡಿಯೂರಪ್ಪ ಸರಕಾರ ಆಶ್ರಯ ಸಮಿತಿಗಳನ್ನೇ ರಚನೆ ಮಾಡಿಲ್ಲ! ಈಗ ಮಳೆಗಾಲ ಬಂದಿದೆ, ಸೂರಿಲ್ಲದವರ ಕಥೆ ಏನಾಗಬೇಕು?

ಇದು ಚರ್ಚೆ ಮಾಡುವಂತಹ, ಸರಕಾರವನ್ನು ಪ್ರಶ್ನಿಸುವಂತಹ ಗಂಭೀರ ಸಮಸ್ಯೆಯಲ್ಲವೆ ಸಿದ್ದು?

ರಾಜ್ಯದ ಒಟ್ಟು ಜನಸಂಖ್ಯೆ 5.28 ಕೋಟಿ. ಒಟ್ಟು ಕುಟುಂಬಗಳ ಸಂಖ್ಯೆ 1.06 ಕೋಟಿ. ಅವುಗಳಲ್ಲಿ ಬಡತನ ರೇಖೆಗಿಂತ(BPL) ಕೆಳಗಿರುವ ಕುಟುಂಬಗಳು 33 ಲಕ್ಷ. ಆದರೆ ರಾಜ್ಯದಲ್ಲಿ ಒಟ್ಟು 98 ಲಕ್ಷ ಪಡಿತರ ಚೀಟಿಗಳಿವೆ(ರೇಶನ್ ಕಾರ್ಡ್)!! ಅಂದರೆ ಇಡೀ ರಾಜ್ಯವೇ BPLನಲ್ಲಿದೆಯೇ? ಶ್ರೀಮಂತರು 1ಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುವುದಿಲ್ಲವೆ? ಇದೇ ಜುಲೈನಲ್ಲಿ 28 ಲಕ್ಷ ಕುಟುಂಬಗಳಿಗೆ ಅಕ್ಕಿ ಸಿಕ್ಕಿಲ್ಲ. ಏಕೆ? ತೊಗರಿ ಬೇಳೆಗೆ 100 ರೂ., ಅಕ್ಕಿಗೆ 40 ರೂ. ಆಗಿದೆ. ಏಕೆ ರಾಜ್ಯಾದ್ಯಂತ ಯದ್ವಾತದ್ವಾ ಬೆಲೆಯೇರಿಕೆಯಾಗುತ್ತಿದೆ? ಡೀಲರ್‍ಸ್ ಹಾಗೂ ಟ್ರೇಡರ್‍ಸ್‌ಗಳ ಕುತಂತ್ರವನ್ನು ಮಟ್ಟಹಾಕಲು ಸರಕಾರವೇಕೆ ಪ್ರಯತ್ನಿಸುತ್ತಿಲ್ಲ? ಅಲ್ಲೂ ಜಾತಿ ಮತ್ತು ಪಕ್ಷ ರಾಜಕಾರಣ ಕೆಲಸ ಮಾಡುತ್ತಿದೆಯೇ? ಈ ಬಗ್ಗೆ ಪ್ರತಿಪಕ್ಷಗಳು ಅಧಿವೇಶನದಲ್ಲಿ ಮಾಡಿದ್ದೇನು? ನಾವು ಅಧಿಕಾರಕ್ಕೆ ಬಂದ ಮೇಲೆ ಪಡಿತರ ವಿತರಣೆ ವ್ಯವಸ್ಥೆ(PDS)ಯನ್ನು ಸರಿಮಾಡುತ್ತೇವೆ ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾಗಲೇ ಯಡಿಯೂರಪ್ಪನವರು ಭರವಸೆ ಕೊಟ್ಟಿದ್ದರು. ಪಡಿತರ ವಿತರಣೆ ವ್ಯವಸ್ಥೆಯನ್ನು ಸರಿ ಮಾಡುವುದು ಅಂದರೆ ಜನ ಏನು ತಿನ್ನುತ್ತಾರೋ ಅದನ್ನೇ ಕೊಡುವುದು. ಉತ್ತರ ಕರ್ನಾಟಕದ ಜನ ಜೋಳ, ದಕ್ಷಿಣ ಕರ್ನಾಟಕದವರು ಸಣ್ಣ ಅಕ್ಕಿ, ರಾಗಿ, ಕರಾವಳಿ ಭಾಗದವರು ದಪ್ಪ ಅಕ್ಕಿ ಬಳಸುತ್ತಾರೆ. ಈ ಮೂರೂ ಧಾನ್ಯಗಳು PDSನಲ್ಲಿಲ್ಲ!! ಏಕೆಂದರೆ ಶೇ.70ರಷ್ಟು ಪಡಿತರ ಬರುವುದು ಪಂಜಾಬಿನಿಂದ. ಅಲ್ಲಿನ ರೈತರು ಬೆಳೆದ ಗೋಧಿ ಮತ್ತು ಅಕ್ಕಿಯೇ ವಿತರಣೆಯಾಗುತ್ತದೆ. ಪಂಜಾಬ್‌ನ ರೈತರಿಗೆ ಮಾತ್ರ ಸದಾ ಸ್ಥಿರ ಮಾರುಕಟ್ಟೆ ಹಾಗೂ ನಿಶ್ಚಿತ ಬೆಲೆ ಲಭ್ಯವಾಗುತ್ತದೆ. ನಮ್ಮಲ್ಲಿ ಅಕ್ಕಿ ಬೆಲೆ 40 ರೂ. ಆಗಿದ್ದರೂ ಭತ್ತದ ಬೆಲೆ ಕ್ವಿಂಟಾಲ್‌ಗೆ ಕೇವಲ 700-800 ರೂ. ಇದೆ! ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತಂದು ಅಥವಾ ಜಗಳವಾಡಿಯಾದರೂ ನಮ್ಮ ರೈತರಿಂದಲೇ PDSಗೆ ಧಾನ್ಯ ಖರೀದಿ ಮಾಡಿ ಎಂದು ಒತ್ತಾಯಿಸಬಹುದಲ್ಲವೆ? ಅಥವಾ ರಾಜ್ಯ ಸರಕಾರವೇ ನಮ್ಮ ರೈತರಿಂದ ಭತ್ತ, ಜೋಳ, ರಾಗಿ ಖರೀದಿ ಮಾಡಿ PDS ಮೂಲಕ ನೀಡಬಹುದಲ್ಲವೆ? ಆ ಮೂಲಕ ಪಡಿತರ ವಿತರಣೆ ವ್ಯವಸ್ಥೆಯನ್ನು ಬಲಗೊಳಿಸಲು ಸಾಧ್ಯವಾಗುವುದಿಲ್ಲವೆ? ಛತ್ತೀಸ್ ಗಢದಂತಹ ರಾಜ್ಯವೇ ಪಡಿತರ ಖರೀದಿಗೆ 2000 ಕೋಟಿ ರೂ. ವೆಚ್ಚ ಮಾಡಿದರೆ ಕರ್ನಾಟಕ ಖರ್ಚು ಮಾಡುವುದು 1000 ಕೋಟಿಗೂ ಕಡಿಮೆ. ಕೇಂದ್ರ ಸರಕಾರ ಕೊಟ್ಟಿದ್ದನ್ನು ಹಂಚಿ ಕೈತೊಳೆದುಕೊಳ್ಳುತ್ತಿದೆ.

ಇದು ಪ್ರತಿಪಕ್ಷಗಳಿಗೆ ತಿಳಿದಿಲ್ಲವೆ? ಆಳುವ ಬಿಜೆಪಿ ಸರಕಾರ ಕ್ಕಂತೂ ಬುದ್ಧಿಯಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗಳಿಗೆ 60 ವರ್ಷ ರಾಜ್ಯವನ್ನಾಳಿದ, ದೋಚಿದ “ಶ್ರೀಮಂತ” ಅನುಭವವಿದೆಯಲ್ಲವೆ?! ಬುದ್ಧಿವಂತರಾದ ನೀವು ಈ ವಿಷಯ ಗಳನ್ನೆತ್ತಿಕೊಂಡು ಸದನದಲ್ಲಿ ಸರಕಾರದ ನೀರಿಳಿಸಬಹುದಿತ್ತಲ್ಲವೆ?

ಅಲ್ಲಾ, “ನೇಗಿಲ ಯೋಗಿ” ಪದ್ಯವನ್ನು ನಾಡಗೀತೆ ಮಾಡುವಂತಹ ಸಾಂಕೇತಿಕ ಕ್ರಮಗಳಿಂದ ರೈತನಿಗೆ ಯಾವ ಉಪಯೋಗವಾಗುತ್ತದೆ?

Agriculture policy document-2004 ಹಾಗೂ 2006ಗಳೆಂಬ ಎರಡು ಕರಡುಗಳು ಕೊಳೆಯುತ್ತಾ ಬಿದ್ದಿವೆ. 2004ರ ಕರಡಿನ ಪ್ರಕಾರ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕೃಷಿ ಉತ್ಪನ್ನ ಸಂಸ್ಕರಣಾ ಘಟಕ (ಆಗ್ರೋ ಪ್ರೊಸೆಸಿಂಗ್ ಯುನಿಟ್’) ಸ್ಥಾಪನೆ ಮಾಡಬೇಕು. ಅಂದರೆ ಆಯಾ ಜಿಲ್ಲೆಯಲ್ಲಿ ಯಾವುದು ಮುಖ್ಯ ಬೆಳೆಯೋ ಅದಕ್ಕೆ ಸಂಬಂಧಿಸಿದ ಕೃಷಿ ಉತ್ಪನ್ನ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡುವ ಮೂಲಕ ರೈತನ ಕೈಬಲಪಡಿಸಬೇಕು. ಉದಾಹರಣೆಗೆ ಮಂಗಳೂರಿನಲ್ಲಿ ಮೀನು ಮತ್ತು ಕೊಬ್ಬರಿ ಎಣ್ಣೆ, ಕೋಲಾರದಲ್ಲಿ ಟೊಮೇಟೊ ಕೆಚಪ್, ಹಾಸನದಲ್ಲಿ ರಾಗಿ ಮಾಲ್ಟ್, ಆಲೂಗಡ್ಡೆ ಚಿಪ್ಸ್, ಶಿರಸಿಯಲ್ಲಿ ಗಂಧದ ಎಣ್ಣೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಬ್ಬು, ಕಾಳು, ಜೋಳ, ಎಣ್ಣೆಬೀಜ ಹಾಗೂ ಇತರ ದವಸ ಧಾನ್ಯಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಿದರೆ ರೈತರಿಗೆ ಮಾರುಕಟ್ಟೆಯೂ ಲಭ್ಯವಾಗುತ್ತದೆ, ಸೂಕ್ತ ಹಾಗೂ ಸ್ಥಿರ ಬೆಲೆಯೂ ದೊರೆತಂತಾಗುತ್ತದೆ. ಇತ್ತೀಚೆಗೆ ಕೇಂದ್ರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿಯೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ! ಈ ಮೇಲಿನ ವ್ಯವಸ್ಥೆ ಕಲ್ಪಿಸಿದರೆ ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಮಹಾರಾಷ್ಟ್ರದಲ್ಲಿ ರೈತ ಸಹಕಾರಿ ಸಂಸ್ಥೆಗಳು ಪೆಟ್ರೋಲ್ ಬಂಕ್ ನಡೆಸುತ್ತಿವೆ. ಉತ್ತಮ ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸುತ್ತಿವೆ. ನಮ್ಮ 2006ರ ಕೃಷಿ ನೀತಿ ಕೂಡ ಸಾಲದಿಂದ ರೈತನನ್ನು ಋಣಮುಕ್ತನನ್ನಾಗಿ ಮಾಡಬೇಕು. ಆತನಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ, ಮರುಪಾವತಿಗೆ ದೀರ್ಘಾವಧಿ ನೀಡಬೇಕೆನ್ನುತ್ತದೆ. ಇಂತಹ ಕೆಲಸಗಳನ್ನು ರಾಜ್ಯ ಸರಕಾರ ಮಾಡಬೇಕೇ ಹೊರತು ನಾಡಗೀತೆಯನ್ನು ಬದಲಾ ಯಿಸುವುದಲ್ಲ. “ನೇಗಿಲ ಯೋಗಿಯ ನೇತಾರ” ಅಂತ ತಾವೇ ಬೋರ್ಡು ಹಾಕಿಕೊಂಡು ಓಡಾಡುವ ಯಡಿಯೂರಪ್ಪನವರು ಘೋಷಣೆ, ಗಿಮಿಕ್‌ಗಳಲ್ಲಿ ಎತ್ತಿದ ಕೈ. ಪ್ರತಿಪಕ್ಷಗಳು ಇಂತಹ ವಿಷಯಗಳನ್ನೆತ್ತಿಕೊಂಡು ಸರಕಾರವನ್ನು ದಬಾಯಿಸಿದ್ದರೆ, ಕಾರ್ಯ ಪ್ರವೃತ್ತಗೊಳ್ಳುವಂತೆ ಮಾಡಿದ್ದರೆ ನಾಡಿನ ಜನರಿಗೆ ಅನುಕೂಲ ವಾಗುತ್ತಿರಲಿಲ್ಲವೆ?

ರಾಜ್ಯದಲ್ಲಿ ೩೦ ಪರ್ಸೆಂಟ್ ವಿದ್ಯುತ್ ಕೊರತೆ ಇದೆ. ನೀರಾವರಿ ಯೋಜನೆಗಳಾದ ಕಳಸಾ-ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳ ಕಥೆ ಏನಾಯಿತು? ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ ಮಾಡಿಕೊಂಡು ಬರುವುದು ಮತ್ತು ವಿಜಾಪುರ ವಿದ್ಯುತ್ ಸ್ಥಾವರದ ಸ್ಟೇಟಸ್ ಏನು? ಆಲಮಟ್ಟಿಯಲ್ಲಿ ಸಾಕಷ್ಟು ನೀರಿದೆ. ಅಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚು ಮಾಡುವ ಬಗ್ಗೆ ಏಕೆ ಆಲೋಚಿಸಬಾರದು? ಒಬ್ಬ ಸರಕಾರಿ ಉದ್ಯೋಗಿಯನ್ನು ಕನಿಷ್ಠ ಮೂರು ವರ್ಷ, ಗರಿಷ್ಠ 7 ವರ್ಷ ಒಂದು ಕಡೆಯಲ್ಲಿ ಉಳಿಸಿಕೊಳ್ಳಬಹುದು ಎನ್ನುತ್ತದೆ ಕರ್ನಾಟಕ ವರ್ಗಾವಣೆ ನೀತಿ. ಆದರೆ ವಾರ, ತಿಂಗಳಿಗೊಮ್ಮೆ ಎತ್ತಂಗಡಿ ಮಾಡುತ್ತಿರುವ ಬಿಜೆಪಿ ಸರಕಾರ ಮಾಡಿದ್ದು, ಮಾಡುತ್ತಿರುವುದೇನು? ಜನರ ಮೇಲೆ ಪ್ರಭಾವ ಬೀರುವ ಇಂಥ ಸಮಸ್ಯೆಗಳ ನಿವಾರಣೆ ಬಗ್ಗೆ ಯಾವ ಪ್ರಶ್ನೆ ಕೇಳಿದ್ದೀರಿ ಸಿದ್ದು? ಏಳು ಬಾರಿ ಬಜೆಟ್ ಮಂಡಿಸಿದ ಅನುಭವ ಹೊಂದಿರುವ ಹಾಗೂ ಪ್ರತಿಪಕ್ಷದ ನಾಯಕನಾಗಿರುವ ನೀವೇ ಕಳ್ಳ ಸರಕಾರವನ್ನು ಹಣಿಯದಿದ್ದರೆ ರಾಜ್ಯದ ಗತಿಯೇನಾದೀತು? ಮುಖ್ಯಮಂತ್ರಿಗಳಿಗೆ ಬರೀ Pinch, Itch, Embarrass  ಮಾಡುವುದರಲ್ಲಿ ಕಾಲಹರಣ ಮಾಡಿದರೆ ಜನಸಾಮಾನ್ಯರು ಯಾರ ಮೊರೆ ಹೋಗಬೇಕು? ಎರಡು ವಾರಗಳಲ್ಲಿ ನಾವು ಕೇಳಿದ್ದು, ಕಂಡಿದ್ದು, ಓದಿದ್ದು ಬರೀ ಹಗರಣ, ಬೀದಿ ಜಗಳ, ಮೇಲಾಟ, ವೈಯಕ್ತಿಕ ಪ್ರತಿಷ್ಠೆಗಳ ಸುದ್ದಿಯನ್ನೇ. ಬಿಜೆಪಿಯವರು ದುಡ್ಡು ಹೊಡೆಯುವುದಕ್ಕೇ ಜನ್ಮತಳೆದಿದ್ದಾರೆ ಎಂದೇ ಅಂದುಕೊಂಡರೂ 224 ಸದಸ್ಯ ಬಲದ ಸದನದಲ್ಲಿ 100ಕ್ಕೂ ಹೆಚ್ಚಿರುವ ಪ್ರತಿಪಕ್ಷ ಶಾಸಕ ಮಹಾಶಯರಾದ ನಿಮ್ಮಗಳನ್ನು ಆರಿಸಿ ಕಳುಹಿಸಿರುವುದೇಕೆ? ‘Power tends to corrupt, and absolute power corrupts absolutely” ಎಂಬ ಲಾರ್ಡ್ ಆಕ್ಟನ್  ಮಾತಿನಂತೆ ಬಿಜೆಪಿಯನ್ನು ಅಧಿಕಾರವೆಂಬುದು ಭ್ರಷ್ಟಗೊಳಿಸುತ್ತಿರಬಹುದು. ಆದರೆ ಜನರ ಪರವಾಗಿ ನಿಲ್ಲದ ಪ್ರತಿಪಕ್ಷಗಳೂ ಅದಕ್ಕೆ ಹೊಣೆಗಾರರಲ್ಲವೆ? ಪ್ರತಿಪಕ್ಷಗಳಾದ ನಿಮಗೆ ಬಿಜೆಪಿಯನ್ನು ಧೈರ್ಯವಾಗಿ ಎದುರಿಸಲು ನಿಮ್ಮಗಳ Past record ಅಡ್ಡಬರುತ್ತಿದೆಯೇ?! ಅಳುಕು, ಅರೆಮನಸ್ಸಿನ ವಿರೋಧ, ಹೋರಾಟಗಳನ್ನು ನೀವು ಬಿಡದಿದ್ದರೆ ಇನ್ನೂ ನಾಲ್ಕು ವರ್ಷ ನಾವು ಕೆಟ್ಟ ಆಡಳಿತವನ್ನು ಸಹಿಸಿಕೊಳ್ಳಬೇಕಾದ ದೌರ್ಭಾಗ್ಯಕ್ಕೊಳಗಾಗಬೇಕಾಗುತ್ತದೆ. ಪ್ರತಿಪಕ್ಷಗಳು ಧ್ವನಿಯೆತ್ತಿ ದರೆ ಮಾತ್ರ ಹಾಲಿ ಸರಕಾರದಿಂದ ಸ್ವಲ್ಪವಾದರೂ ಉತ್ತಮ ಆಡಳಿತವನ್ನು ನಾವು ನಿರೀಕ್ಷಿಸಲು ಸಾಧ್ಯ. ದಕ್ಷಿಣ ಆಫ್ರಿಕಾದ ಭೆಕಿ ಸಿಬಿಯಾ ಏನಂಥ ಹೇಳಿದ್ದಾರೆ ಗೊತ್ತಾ?

There is no strong democracy which has no strong opposition.

ನಿಜ ಅಲ್ವಾ?

14 Responses to “ಗುದ್ದು ಕೊಟ್ಟಿದ್ದೇನೋ ನಿಜ, ಬೇರೇನು ಮಾಡಿದ್ರಿ ಸಿದ್ದು?”

  1. Basu says:

    Superb article pratap…!!
    Please try to tame this currupted govt by your articles,..once in a while.
    Thank you again.

  2. mohan hegade says:

    ಹಾಯ್ ಪ್ರತಾಪಜಿ,
    ನಿಮ್ಮ ಮಾತು ಸರಿಯಾದದ್ದೇ, ಏನೇ ಮಾಡಲಿ ಎಷ್ಟೇ ಹಣ ತಿನ್ನಲಿ ವಿಧಾನಸೌದದಲ್ಲಿ ಕುಳಿತ ಕೂಡಲೇ ದರಿದ್ರತನ ಎಲ್ಲ ರಾಜಕಿಯದವರಿಗೂ ಬರುತ್ತೆ, ಅದಕ್ಕೆ ಅರಂಭದಿಂದಲೇ ಹಗರಣಗಳನ್ನು ಆರಂಭಿಸಿ ಒಂದಷ್ಟು ಹಣ ಮಾಡಿಕೊಳ್ಳುವ ಬುದ್ದಿ. ಸರಿ ಆ ರಾಜಕೀಯಾನೆ ಹಾಗೆ, ಆದರೆ ಸ್ವಲ್ಪನಾದರೂ ಜನರ ಒಳ್ಳೆಯದಕ್ಕೆ ಕೆಲಸ ಮಾಡಿದ್ದರೆ ಅವ್ರ ಆ ದರಿದ್ರ ಕೆಲಸಗಳೆಲ್ಲ ಮುಚ್ಚಿಹೋಗುತ್ತಿತ್ತೇನೋ !!!!!.
    ಬಿ ಜೆ ಪಿ ಪ್ರಥಮ ಬಾರಿ ಬಂದಾಗ ಜನರಲ್ಲಿ ಒಂದು ವಿಶೇಷವಾದ ನಿರೀಕ್ಷೆ ಎತ್ತು. ಆದರೆ ದಿನ ಕಳೆದಂತೆ ಹಿಂದಿನ ಸರಕಾರಕ್ಕೂ ಇದಕ್ಕೂ ಸ್ವಲ್ಪನು ವ್ಯತ್ಯಾಸ ಎಲ್ಲ ಎನ್ನುವುದು ಗೊತ್ತಾಯಿತು. ಅಪರೇಷನ್ ಕಮಲ, ಹಗರಣಗಳು, ವರ್ಗಾವಣೆ, ಇತ್ಯಾದಿ.
    ಪ್ರತಾಪಜಿ ನೀವು ಹೇಳದಂತೆ ಪ್ರತಿಪಕ್ಷದವರು ಮಾಡಿದ್ದರು, ಅದಷ್ಟೇ ಕೆಲಸ ಸರಕಾರದಿಂದ ಆಗಿದ್ದರು ಮುಂದಿನ ಕೆಲ ವರ್ಷ ಬಿ ಜೆ ಪಿ ನೆ ಇರ್ರುತ್ತಿತ್ತು. ಈಗಿನ ಸ್ತಿತಿ ನೋಡಿದರೆ ಬಿ ಜೆ ಪಿ ಫಸ್ಟ್ ಅಂಡ್ ಲಾಸ್ಟ್ ಸರಕಾರ ಆಗಬಹುದು.
    ಸ್ನೇಹಿ,
    ಮೋಹನ ಹೆಗಡೆ

  3. vijay says:

    Do you want to know your Sonia. Go through the below link. I’m sure you will be shockingly surprised as me.
    http://www.hindurashtra.org/The_Real_Sonia_Gandhi.pdf

  4. Pravs says:

    Prathap,
    Wonderful article again, thanks for enlightening us on the Argo policies. Congress and JD(sons) are agitated and devastated because they have failed to make money (in the past) in the areas which BJP is making now. Mr. CM , having taken the outh in the name of farmer, you haven’t done anything to them and this must be a check point for you and your team, pls act now or it’ll be too late.

    Regards
    Pravs

  5. Chethan, Coorg says:

    U r very true….
    Almost are all but not 100% politicians are bullshits.

    One good thing i like from Siddu is, He prepares for the next assembly session. If he asks some question, he will be knowing very deep into this.

    I mean to say that he prepares for the session which many people wont do….

  6. Basu says:

    Hi Vijay,

    Thanks alot for providing me such a great story of Sonia.
    Please circulate this story as many Indians as possible.

  7. Mohan says:

    ಈ ಬರಹ ಮತ್ತು ಇಲ್ಲಿನ ಚರ್ಚೆಗಳನ್ನು ಎಲ್ಲ ಕಾಂಗ್ರೆಸ್ ನವರಿಗೂ ಮತ್ತು ಇತರೆ ವಿರೋಧ ಪಕ್ಷಗಳಿಗೂ ಕಳುಹಿಸಿ

  8. Basu says:

    Hi Vijay,

    Thanks alot for providing me such a great story of Sonia.
    Please circulate this story as many Indians as possible.

    Pratap sir – Could you please refer the link and let us know the truth? If you are interested. If the story in Vijay’s link is correct, could you kindly write a article on the same?

  9. anil dinde says:

    dear pratap simha your article stands out again. the present government in karnataka is corrupted recent days even though they had some good work towards the development of the state they are not impressed by the people. so your sincere efforts towards people praise able so continue your god work towards our state.best of luck..

  10. Ravi kumar says:

    ಬರಹದಲ್ಲಿ ಬರೆದದ್ದು ಜನಪರ ಪಕ್ಷಗಳಾಗಬೇಕಿದ್ದ ರಾಜಕೀಯ ಪಕ್ಷಗಳು ಜನರನ್ನು ತಿನ್ನುವಸ್ಟು ದುರುಳವಾಗುತ್ತಿವೆ .ಈ ಬೆತ್ತಲೆ ಜಗತ್ತಿಗೆ ಬತ್ತೆಹಾಕುವ ಬದಲಿಗೆ ಬೆತ್ತಲೆಯಲ್ಲಿಯೆ ಬೆಳಕಿಗೆ ತ0ದು ಪ್ರದರ್ಶನಕ್ಕಿರಿಸಿವಮಟ್ಟಕ್ಕೆ ಬ0ದು ನಿ0ತಿವೆ .

    ನಿಜಕ್ಕೂ ಶೋಚನೀಯ

  11. krishnamurthy mayya says:

    as usual super pratapanna……….
    i just hate this politics….
    super article…….
    nice ….. continue ur work t.c

  12. Soujanya N Jain says:

    Very good article Pratap .. ..i remember that we used to by rice Rs 12 to Rs18 that is good quality , but in this year its unbelievable…!! the price is going……. like a anything……..
    Suger Rs32 to Rs35 per KG
    Rice Rs35 to Rs40 Rice per Kg
    Tuvar Dal Rs80 to Rs100/- Per Kg Enidu ..? after election ..what is this ?
    ಅಕ್ಕಿ, ಬೇಳೆ, ತರ್ಕಾರಿ, ಎಲ್ಲಾ ವಸ್ತುಗಳ ರೇಟು ಬೇಕಾದ್ರೆ ಮೇಲೆ ಏರಿರಬಹುದು……ಆದ್ರೆ ಇದರಿಂದ ರೈತರಿಗೇನಾದ್ರೂ ಉಪಯೋ ಗ ಆಗಿದೆಯೇ..? ಕಂಡಿತಾ ಇಲ್ಲ , ದಿನಕ್ಕೆ ಮೂವತ್ತು ಹಾಗೂ ನಲವತ್ತು ರೂಪಾಯಿಗೆ ಕೆಲಸ ಮಾಡ್ತಾ ಇದ್ದ ಜನರಿಗೆ ಬೇಕಾದ್ರೆ ..ಸರಕಾರ ಉದ್ಯೋಗ ಕೊಟ್ಟು ಸಂಬಳ ಸ್ವಲ್ಪ ಜಾಸ್ತಿ ಕೊಡಬಹುದು , ಹಾಗೂ ರೈತರಿಂದ ಕಡಿಮೆ ಬೆಲೆಗೆ ಅಕ್ಕಿ, ಬೇಳೆ ತಂಗೊಂಡು ..fixed ರೇಟ್ ಅಂತ ..ಪ್ರಿಂಟಾ ಮಾಡಿ ಮಾರಾಟ ಮಾಡಬಹುದು …,
    ಇದರಿಂದ ಏನು ಸುದಾರಣೆ ನಾವು ನೀರೀಕ್ಷಿಸಬಹುದು ?.. ಆಗ ಅಂದ್ರೆ Vajpayee government ಇದ್ದಾಗ ಬರೆ ನೀರುಳ್ಳಿ ಬೆಲೆ ಜಾಸ್ತಿಯಾಗಿದ್ದಕ್ಕೆ … ಅಷ್ಟು ದೊಡ್ಡ issue ಮಾಡಿದ್ರೂ .ಆದ್ರೆ … ಈಗ ನಡೀತಾ ಇರೋ ಕಥೇ ಏನು ? Green card ಇರೋರಿಗೆ ಸರ್ಕಾರ ..ಕಮ್ಮಿ ಬೆಲೆಗೆ ಅಕ್ಕಿ ಕೊಡಬಹುದು…..ಆದ್ರೆ middle class family ಕಥೆ ಏನು?

  13. RAJENDRA KUMAR says:

    pratap sir good one

  14. My Dear Pratap.. Illi problem yenappa andre neenu helidanthe Naavu kelasa madidre Yadiyoorappana kaladalliye Rajya abivraddi yagi bidutthe, nanthara naanu Permanentagi Prathi pakshada nayaka nagi kulithu kolla bekagutthe..!! Nanna Guri Jeevanadalli Ommeyadaru Karnatakada Mukyamantri Agabekembude horathu ee Nadina Abivraddi yagabembudalla…!!
    (Naanu ee Reethi heliddu secret aagirali idanna yellareduru heli nanna maryade thegi beda…. OK…)