Date : 15-03-2010 | 4 Comments. | Read More
Brawn GP ಇದ್ಯಾವುದಪ್ಪಾ ‘ಬ್ರಾನ್ ಜಿಪಿ’? 2009ನೇ ಸಾಲಿನ ಫಾರ್ಮುಲಾ-1 ತಂಡಗಳ ಪಟ್ಟಿ ಬಿಡುಗಡೆಯಾದಾಗ ಹೀಗೊಂದು ಆಶ್ಚರ್ಯ ಕಾದಿತ್ತು. ಹೋಂಡಾ ಕಂಪನಿ ಫಾರ್ಮುಲಾ ಒನ್ಗೆ ವಿದಾಯ ಹೇಳಿತ್ತು. ಅದರ ಸ್ಥಾನದಲ್ಲಿ ‘ಬ್ರಾನ್ ಜಿಪಿ’ ಎಂಬ ಹೊಸ ತಂಡದ ಹೆಸರಿತ್ತು. ಅದರ ಇಬ್ಬರು ಡ್ರೈವರ್ಗಳು-ಜೆನ್ಸನ್ ಬಟನ್ ಹಾಗೂ ರೂಬೆನ್ಸ್ ಬ್ಯಾರಿಕೆಲೋ. 2000ನೇ ಸಾಲಿನಲ್ಲಿ ಫಾರ್ಮುಲಾ ಒನ್ಗೆ ಕಾಲಿಟ್ಟಾಗ ಜೆನ್ಸನ್ ಬಟನ್ ಭಾರೀ ಭರವಸೆ ಮೂಡಿಸಿದ್ದರಾದರೂ ತದನಂತರ ಎಲ್ಲೋ ಕಳೆದುಹೋಗಿಬಿಟ್ಟಿದ್ದರು. ಅದರಲ್ಲೂ ಸ್ವದೇಶದವರೇ ಆದ ಲೂಯಿಸ್ ಹ್ಯಾಮಿಲ್ಟನ್ 2008ನೇ ಸಾಲಿನ […]
Date : 08-03-2010 | 16 Comments. | Read More
ತಮಿಳುನಾಡಿನ ಶಿವಗಂಗಾದಲ್ಲಿ ಪಿ. ಚಿದಂಬರಂಗೆ ಸೋಲು!! 2009, ಮೇ 16. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ನ ಏಕಾಂಗಿ ಬಲಾಬಲವೇ 200 ದಾಟುವುದು ಖಚಿತವಾಗಿತ್ತು, ಯುಪಿಎ ಮತ್ತೆ ಸರಕಾರ ರಚಿಸುವುದೂ ಅಷ್ಟೇ ಸ್ಪಷ್ಟವಾಗಿತ್ತು. ಮೂರೂವರೆ ಗಂಟೆಗೆ ಆಘಾತಕಾರಿ ಸುದ್ದಿ-ಪಿ. ಚಿದಂಬರಂಗೆ ಸೋಲು. ಅವರ ವಿರುದ್ಧ ಎಐಎಡಿಎಂಕೆ ಅಭ್ಯರ್ಥಿ ರಾಜಾ ಕಣ್ಣಪ್ಪನ್ ಮೂರೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬ ಸುದ್ದಿ, ಚಾನೆಲ್ಗಳಲ್ಲಿ ಬಿತ್ತರವೂ ಆಯಿತು. ಈ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ಪ್ರತಿಕ್ರಿಯೆಯನ್ನೂ ನೀಡಿತು-ಚಿದಂಬರಂ ಮಂತ್ರಿಯಾಗಿ ಮುಂದುವರಿಯಲಿದ್ದಾರೆ!!
Date : 04-03-2010 | 17 Comments. | Read More
Independent Media! ಇಂಟರ್ನೆಟ್ ವ್ಯವಸ್ಥೆ ಇಂಥದ್ದೊಂದು ಮುಕ್ತ ವೇದಿಕೆಯನ್ನು ಪ್ರತಿವ್ಯಕ್ತಿಗೂ ಕಲ್ಪಿಸಿಕೊಟ್ಟಿದೆ. ನಿಮ್ಮದೇ ಬ್ಲಾಗ್, ವೆಬ್ಸೈಟ್ಗಳನ್ನು ಪ್ರಾರಂಭ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸ ಬಹುದು, ಇ-ಮೇಲ್ ಮೂಲಕ ಇತರರ ಜತೆ ಹಂಚಿಕೊಳ್ಳ ಬಹುದು. ಆರ್ಕಟ್, ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಯಾರಿಗೂ ಜಾಡಿಸಬಹುದು. ಅಷ್ಟಕ್ಕೂ Opinion makers ಆಗಿದ್ದ ಮಾಧ್ಯಮಗಳು ಇವತ್ತು Opinion ಅನ್ನು ಬಹಳ ಚೆನ್ನಾಗಿ suppress ಮಾಡಲಾರಂಭಿಸಿವೆ. ಮೊನ್ನೆ ಕೂಡ ಹಾಗೆಯೇ ಆಯಿತು. ಐಪಿಎಲ್ ಆಟಗಾರರ(ಪಾಕಿಸ್ತಾನದ) ಆಯ್ಕೆ ವಿಷಯದಲ್ಲಿ ಶಾರುಖ್ ಖಾನ್ ನೀಡಿದ ಹೇಳಿಕೆಗಳ ಬಗ್ಗೆ […]
Date : 23-02-2010 | 74 Comments. | Read More
My Name Is Khan. ಕಳೆದ ವಾರ ಬಿಡುಗಡೆಯಾದ ಈ ಚಿತ್ರವನ್ನು ಒಂದೇ ಪದದಲ್ಲಿ ವರ್ಣಿಸುವುದಾದರೆ ‘Horrible’. ಎರಡು ಪದಗಳಲ್ಲಿ ಹೇಳುವುದಾದರೆ ‘Bull shit’, ಮೂರು ಪದಗಳಲ್ಲಿ ವಿಮರ್ಶಿಸುವುದಾದರೆ ‘It’s a torture’, ನಾಲ್ಕು ಪದಗಳಲ್ಲಿ ಷರಾ ಬರೆಯುವುದಾದರೆ, ‘Pain in the ass’! ಮೂರು ತಾಸು ಕುಳಿತು ನೋಡಿ, ಹೀಗನಿಸದೇ ಹೋದರೆ ಹೇಳಿ. ಬೆಂಗಳೂರಿನ ಊರ್ವಶಿ ಥಿಯೇಟರ್ಗೆ ‘ಅವತಾರ್’ ಚಿತ್ರ ನೋಡಲು ಕಳೆದ ಬಾರಿ ಹೋದಾಗ ಒಂದು ಕಪ್ ಕೋಕ್ ಹಾಗೂ ಪಾಪ್ ಕಾರ್ನ್ ಫ್ರೀ […]
Date : 08-02-2010 | 35 Comments. | Read More
ಪ್ರತಿ ಶನಿವಾರ ನಾನು ಆಫೀಸಿಗೆ ಬರುವುದಿಲ್ಲ. ನನಗದು ವಾರದ ರಜಾ ದಿನ. ಮತ್ತೆ ವಾರದ ಕೆಲಸ ಆರಂಭವಾಗುವುದು ಭಾನುವಾರದಿಂದ. ಕಳೆದ ಭಾನುವಾರ ಎಂದಿನಂತೆ ಕಚೇರಿಗೆ ಕಾಲಿಡುತ್ತಲೇ ನಮ್ಮ ಸೆಕ್ಯುರಿಟಿ ಯವರು ಮಾತು ಆರಂಭಿಸಿದರು. “ಸಾರ್, ನಿನ್ನೆ ನೀವು ರಜೆ ಇದ್ರಲ್ಲಾ, ತುಂಬಾ ಫೋನ್ಗಳು ಬಂದಿದ್ದವು. ಅಶ್ವಿನಿ ಪ್ರೇಮ ಪ್ರಕರಣದ ಬಗ್ಗೆ ನೀವು ಬರೆದಿದ್ದ ಲೇಖನ ಓದಿ ಸುಮಾರು ಜನ ಕಾಲ್ ಮಾಡಿದ್ದರು. ನಿಮ್ಮ ಜತೆ ಮಾತನಾಡಬೇಕು ಎಂದು ಕೇಳಿದರು. ನಾಳೆ ಹನ್ನೆರಡೂವರೆ ಗಂಟೆ ನಂತರ ಕಾಲ್ ಮಾಡಿ, […]
Date : 31-01-2010 | 70 Comments. | Read More
ಅಮ್ಮಾ ನಿನ್ನ ಎದೆಯಾಳದಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು ಕಡಿಯಲೊಲ್ಲೆ ನೀ ಕರುಳ ಬಳ್ಳಿ- ಒಲವೂಡುತ್ತಿರುವ ತಾಯೆ ಬಿಡದ ಬುವಿಯ ಮಾಯೆ… ಆ ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್ರಾವ್ ತಮ್ಮ ಕವಿತೆಯೊಂದರಲ್ಲಿ ಈ ರೀತಿ ಹಿಡಿದಿಟ್ಟಿದ್ದಾರೆ. ಅಮ್ಮಾ… ಅದು ಹೆಣ್ಣಿರಲಿ, ಗಂಡಾಗಿರಲಿ, ಒಂದು ಮಗು ಜಾರಿ ಬಿದ್ದಾಗ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಇದೆಯಲ್ಲಾ ಅದೇ ‘ಅಮ್ಮಾ…’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ‘ಅಮ್ಮ ಎಂಬ […]
Date : 23-01-2010 | 11 Comments. | Read More
Thank you Mr. Kapil Sibal! ಹಾಗಂತ ಹೇಳಲೇಬೇಕಾಗಿದೆ. ಅಂತಹ ಕೆಲಸವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಮಾಡಿದ್ದಾರೆ. ಕಳೆದ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಸಾಮಾಜಿಕ ವಿಚಾರಗಳ ಮೇಲಿನ 10ನೇ ‘ಎಡಿಟರ್ಸ್ ಕಾನ್ಫರೆನ್ಸ್’ನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅವರು, “ಈ ಡೀಮ್ಡ್ ಯೂನಿವರ್ಸಿಟಿಗಳೆಂಬ ಪರಿಕಲ್ಪನೆಯನ್ನೇ ಬರ್ಖಾಸ್ತು ಗೊಳಿಸಲಾಗುವುದು’ ಎಂದಿದ್ದಾರೆ. ಅದಕ್ಕಿಂತ ಒಂದು ದಿನ ಮೊದಲು, 44 ವಿವಿಗಳ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನವನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಈ ವಿವಿಗಳು […]
Date : 19-01-2010 | 25 Comments. | Read More
Don’t live in past! ನಮ್ಮ ಭಾರತೀಯ ಹಾಕಿಯ ಹಾಲಿ ಸ್ಥಿತಿಗತಿಯನ್ನು ನೋಡಿ ಹೀಗೆ ಹೇಳುವವರು ಸಾಕಷ್ಟಿದ್ದಾರೆ. Cricket has become a religion in India, ಕ್ರಿಕೆಟ್ ಅನ್ನೇ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯನ್ನಾಗಿ ಏಕೆ ಘೋಷಿಸ ಬಾರದು? ಎಂದು ವಾದಿಸುವವರಿಗೂ ಕಡಿಮೆಯಿಲ್ಲ. Should Cricket be made National game? ಎಂಬ ಚರ್ಚೆ, ಸಮೀಕ್ಷೆಗಳೂ ನಡೆದಿವೆ. ಎಲ್ಲಾ ಸರಿ… But what kind of past both Cricket and Hockey have?
Date : 11-01-2010 | 116 Comments. | Read More
1893 ಭಾರತೀಯರಾದ ನಾವು ಈ ವರ್ಷ ವನ್ನು ಮರೆಯಲು ಸಾಧ್ಯವೇ? “Sisters and Brothers of America” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ […]
Date : 11-01-2010 | 10 Comments. | Read More
ಏನು ಬರೆಯಲಿ ಚೆನ್ನ ಹೇಗೆ ತೋರಲಿ ನಿನ್ನ ಸಂಪನ್ನ ಸದ್ಗುಣದ ಪೂರ್ಣರೂಪ ಸೋತುಹೋಗುವ ಸ್ವರ ಓತು ಕಾಣದ ಮನ ಸೊರಗಿ ಸೊಕ್ಕುವ ವಾಕ್ಯ-ವ್ಯಾಕರಣದಲಿ ಕರಗಿ ಕಾಳಿಕೆ ಹಿಡಿವ ಶಬ್ದ ಶಾಹಿಯಲಿ ನಿಶ್ಶಬ್ದನೇ ನಿನ್ನ ಹೇಗೆ ಬರೆಯಲಿ? ಅವರ ಸಾಧನೆ, ನಾಡು- ನುಡಿ-ಭಾಷೆಗೆ ನೀಡಿದ ಕೊಡುಗೆ, ಬಡ-ನಿರ್ಗತಿಕ ಮಕ್ಕಳ ವಿದ್ಯಾರ್ಜನೆಗೆ ಕೊಟ್ಟ ಕಾಣಿಕೆಯನ್ನು ಸ್ತುತಿಸುವ ಇಂತಹ ನೂರಾರು ಪದ್ಯಗಳೇ ರಚನೆಯಾಗಿವೆ. ‘ಅಪ್ಪಾವರಿದ್ದಾರಲ್ರಿ, ಹೈದರಾಬಾದ್ ನಿಜಾಮನ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಹೇಳಿ ಕೊಡುತ್ತಿದ್ದರು’ ಎಂದು […]