Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹಾಲುಣಿಸಿದ ಆ ತಾಯಿಯ ಎದೆಯ ವೇದನೆ ಏನಿತ್ತೋ?

ಹಾಲುಣಿಸಿದ ಆ ತಾಯಿಯ ಎದೆಯ ವೇದನೆ ಏನಿತ್ತೋ?

ಪ್ರತಿ ಶನಿವಾರ ನಾನು ಆಫೀಸಿಗೆ ಬರುವುದಿಲ್ಲ. ನನಗದು ವಾರದ ರಜಾ ದಿನ. ಮತ್ತೆ ವಾರದ ಕೆಲಸ ಆರಂಭವಾಗುವುದು ಭಾನುವಾರದಿಂದ. ಕಳೆದ ಭಾನುವಾರ ಎಂದಿನಂತೆ ಕಚೇರಿಗೆ ಕಾಲಿಡುತ್ತಲೇ ನಮ್ಮ ಸೆಕ್ಯುರಿಟಿ ಯವರು ಮಾತು ಆರಂಭಿಸಿದರು. “ಸಾರ್, ನಿನ್ನೆ ನೀವು ರಜೆ ಇದ್ರಲ್ಲಾ, ತುಂಬಾ ಫೋನ್‌ಗಳು ಬಂದಿದ್ದವು. ಅಶ್ವಿನಿ ಪ್ರೇಮ ಪ್ರಕರಣದ ಬಗ್ಗೆ ನೀವು ಬರೆದಿದ್ದ ಲೇಖನ ಓದಿ ಸುಮಾರು ಜನ ಕಾಲ್ ಮಾಡಿದ್ದರು. ನಿಮ್ಮ ಜತೆ ಮಾತನಾಡಬೇಕು ಎಂದು ಕೇಳಿದರು. ನಾಳೆ ಹನ್ನೆರಡೂವರೆ ಗಂಟೆ ನಂತರ ಕಾಲ್ ಮಾಡಿ, ಕನೆಕ್ಟ್ ಮಾಡುತ್ತೇನೆ ಎಂದು ಹೇಳಿದ್ದೇನೆ”.

ಹಾಗೆಂದರು.

ಸ್ವಲ್ಪ ಹೊತ್ತಿನಲ್ಲೇ ಫೋನೊಂದು ಬಂತು. ಅದು ದೂರದ ಧಾರವಾಡದಿಂದ ಬಂದಿತ್ತು. ‘ಸಾರ್, ನೀವು ನಿನ್ನೆ ಬರೆದಿದ್ದ ಲೇಖನ ಮನಮುಟ್ಟುವಂತಿತ್ತು. ಬಹಳ ಖರೇ ಬರೆದಿದ್ದೀರಾ…” ಎನ್ನುತ್ತಾ ಮಾತು ಆರಂಭಿಸಿದರು. ನಾವು ಜೈನ್ ಪಂಗಡದವರು. ಏಳು ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲೇ ಇಂಥದ್ದೊಂದು ಘಟನೆ ನಡೆದಿತ್ತು. ನಮ್ಮ ಹುಡುಗಿ ಹಾಗೂ ಮುಸ್ಲಿಮ್ ಹುಡುಗನೊಬ್ಬನ ನಡುವೆ ಲವ್ ನಡೆಯುತ್ತಿತ್ತು. ಆಕೆ ಹೋಗುತ್ತಿರುವ ದಾರಿ ಸರಿಯಲ್ಲಾ ಎಂದು ನಮಗನಿಸಿತು. ಕೂಡಲೇ ಬೇರೊಂದು ಮದುವೆ ಮಾಡುವುದೇ ಸರಿ ಎಂದು ಭಾವಿಸಿ ನಮ್ಮ ಪಂಗಡದ ವರನೊಬ್ಬನನ್ನು ಗುರುತು ಮಾಡಿ ಮದುವೆಗೆ ಸಿದ್ಧತೆ ನಡೆಸತೊಡಗಿದೆವು. ನಾಳೆ ‘ಬಾರಾತ್’(ದಿಬ್ಬಣ) ಇದೆ, ಇತ್ತ ನಮ್ಮ ಹುಡುಗಿ ಆತನ ಜತೆ ಓಡಿ ಹೋಗಲು ಪ್ಲಾನ್ ಮಾಡುತ್ತಿದ್ದಾಳೆ. ಈ ವಿಷಯ ಹೇಗೋ ನಮಗೆ ಗೊತ್ತಾಯಿತು. ಆಕೆಯೇನಾದರೂ ಓಡಿ ಹೋದರೆ ಮಾನಮರ್ಯಾದೆ ಹೋಗುತ್ತದೆ ಎಂದು ನಮ್ಮ ಹುಡುಗಿಯನ್ನು ಎಬ್ಬಿಸಿಕೊಂಡು ಹುಬ್ಬಳ್ಳಿಗೆ ಬಂದೆವು. ಪರಿಪರಿಯಾಗಿ ಹೇಳಿದರೂ ಆಕೆ ಮಾತು ಕೇಳಲು ಸಿದ್ಧಳಿರಲಿಲ್ಲ. ಕೊನೆಗೆ ಒಂದು ಉಪಾಯ ಮಾಡಿದೆವು. ಆಯ್ತು, ಆ ಹುಡುಗನ ಜತೆಯೇ ನಿನಗೆ ಲಗ್ನ ಮಾಡಿಕೊಡುತ್ತೇವೆ. ಆದರೆ ಆತ ನಿನ್ನನ್ನು ನಿಜವಾಗಿಯೂ ಲವ್ ಮಾಡುತ್ತಿದ್ದಾನಾ ಎಂಬುದು ನಮಗೆ ಖರೆ ಆಗಬೇಕು. ನಾವು ಫೋನ್ ಮಾಡಿದರೆ ಅವನು ಕಟ್ ಮಾಡುತ್ತಾನೆ, ನೀನೇ ಕಾಲ್ ಮಾಡಿ ನಾವು ಹೇಳಿಕೊಟ್ಟಿದ್ದನ್ನೆಲ್ಲಾ ಕೇಳು ಎಂದೆವು. ನಾವೇ ಫೋನ್ ಹಚ್ಚಿದೆವು, ಪ್ಯಾರಲಲ್ ಲೈನ್‌ನಲ್ಲಿ ಆಕೆ ಮಾತು ಆರಂಭಿಸಿದಳು.

ಹುಡುಗಿ: ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತೀಯಾ?
ಹುಡುಗ: ಹೌದು, ನಿನಗಾಗಿ ನಾನು ಏನೂ ಮಾಡಲು ಸಿದ್ಧನಿದ್ದೇನೆ.
ಹುಡುಗಿ: ನಿನ್ನನ್ನು ಮದುವೆಯಾಗುವುದಕ್ಕೆ ಒಪ್ಪಿಗೆ ಕೊಡಲು ನಮ್ಮ ಮನೆಯವರು ಸಿದ್ಧರಿದ್ದಾರೆ, ಆದರೆ ನೀನೊಂದು ಷರತ್ತಿಗೆ ಒಪ್ಪಬೇಕಂತೆ…
ಹುಡುಗ: ಏನದು?
ಹುಡುಗಿ: ಅವರಿಗೆ ತನ್ನ ಮಗಳು ಮತಾಂತರಗೊಳ್ಳುವುದು ಇಷ್ಟವಿಲ್ಲವಂತೆ, ನೀನೇ ಹಿಂದೂ ಆಗಬೇಕಂತೆ….
ಹುಡುಗ: ಅದ್ಹೇಗೆ ಆಗುತ್ತೆ?
ಹುಡುಗಿ: ನನಗೋಸ್ಕರ ಏನೂ ಮಾಡಲು ಸಿದ್ಧ, ಜೀವನ, ಪ್ರಾಣ ಕೊಡುತ್ತೇನೆ ಎನ್ನುತ್ತೀಯಲ್ಲಾ, ಪ್ರಾಣ ಬೇಡ, ಧರ್ಮವನ್ನು ಬಿಡಬಹುದಲ್ಲವೆ?
ಹುಡುಗ: ವೋ ಕೈಸೆ ಹೋ ಸಕ್ತಾ ಹೈ?

ಹಾಗಂತ ಆತ ಉಲ್ಟಾ ಹೊಡೆದ. ನಮ್ಮ ಹುಡುಗಿಯೇ ಫೋನ್ ಕಟ್ ಮಾಡಿದಳು. ಅವಳಿಗೆ ‘ಅವನ’ ಪ್ರೀತಿ ಎಷ್ಟು ಎಂಬುದು ಗೊತ್ತಾಗಿತ್ತು. “ನಿನಗೇ ಗೊತ್ತಾಯಿತಲ್ಲಾ ಅವನ ಪ್ರೀತಿ ಎಂಥದ್ದು ಅಂತ. ನೀನು ಅವನಿಗಾಗಿ ಧರ್ಮವನ್ನೇ ಬಿಟ್ಟು ಹೋಗಲು ಸಿದ್ಧಳಾಗಿದ್ದೀಯಾ. ಆದರೆ ಅವನು? ನಿನಗಾಗಿ ಪ್ರಾಣ ಕೊಡಲು ಸಿದ್ಧನಿರುವವನಿಗೆ ಧರ್ಮವನ್ನು ಬಿಡಲು ಸಾಧ್ಯವಿಲ್ಲವೆ? ಸರ್ವಸ್ವವನ್ನೂ ತ್ಯಾಗ ಮಾಡುತ್ತೇನೆನ್ನುವವನು, ಧರ್ಮವನ್ನೇ ಬಿಟ್ಟುಕೊಡಲು ಸಿದ್ಧನಿಲ್ಲ. ಇಂಥವನ ಮಾತನ್ನು ಹೇಗೆ ನಂಬಿ, ಆತನ ಜತೆ ಬದುಕು ನಡೆಸಲು ಮುಂದಾಗುತ್ತೀಯಾ? ವರ್ಷಕ್ಕೊಂದು ಮಕ್ಕಳನ್ನು ಹುಟ್ಟಿಸಿ ನಾಲ್ಕು ವರ್ಷವಾದ ಮೇಲೆ ಮತ್ತೊಬ್ಬಳನ್ನು ಕಟ್ಟಿಕೊಳ್ಳುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಆಗ ನಿನ್ನ ಕಥೆಯೇನಾಗುತ್ತದೆ? ಏನು ಮಾಡುತ್ತೀಯಾ? ತಲಾಕ್ ಕೊಡುವುದಿಲ್ಲ, ಬೇರೆ ಮದುವೆಯಾಗುವುದಿಲ್ಲ ಎಂದು ಆತ ಬರೆದುಕೊಡುತ್ತಾನಾ? ಎಂದು ನಾನು ಆಕೆಯನ್ನು ಪ್ರಶ್ನಿಸಿದೆ. ಅಷ್ಟರಲ್ಲಿ ಆಕೆಗೂ ಅರಿವಾಗಿತ್ತು, ಮನಪರಿವರ್ತನೆಯೂ ಆಗಿತ್ತು. ಮರುದಿನ ಮದುವೆ ಸುಸೂತ್ರವಾಗಿ ನಡೆಯಿತು. ಈಗ ಇಬ್ಬರೂ ಸುಖವಾಗಿದ್ದಾರೆ. ನಿನಗಾಗಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಚಾಂದ್, ಸಿತಾರೆ ತೋರಿಸುತ್ತಾರೆ. ಅದನ್ನು ನಂಬಿ ಮದುವೆಯಾಗಿ ಇಸ್ಲಾಂಗೆ ಕನ್‌ವರ್ಟ್ ಆದ ಮೇಲೆ ಯಾವ ಲಿಬರ್ಟಿ, ಈಕ್ವಲ್ ರೈಟ್ಸ್ ಸಿಗುತ್ತದೆ ಈ ಹುಡುಗಿಯರಿಗೆ?” ಎಂದರು ಚಂದುಲಾಲ್.

ಮುಂದುವರಿದು…

“ಸಾರ್, ನೀವು ಉಲ್ಲೇಖಿಸಿರುವಂತೆ ಕೆಲವರು ಹಿಂದೂ ಹುಡುಗಿಯರನ್ನು ಮದುವೆಯಾಗಿ ಸಂಸಾರ ನಡೆಸುತ್ತಿರಬಹುದು. ಆದರೆ ಮತೀಯ ಭಾವನೆ ಬಿಟ್ಟಿದ್ದಾರಾ? ಶಾರುಖ್ ಖಾನ್ ಒಬ್ಬನನ್ನು ಬಿಟ್ಟು ಉಳಿದ ಸೈಫ್ ಅಲಿಖಾನ್ ಇರಬಹುದು, ಆಮೀರ್ ಖಾನ್ ಆಗಿರಬಹುದು ಅಥವಾ ಇನ್ಯಾರೇ ಇರ ಬಹುದು. ಹುಟ್ಟಿದ ಮಕ್ಕಳಿಗೆ ಹೆಸರು ಆಯ್ಕೆ ಮಾಡುವ ಹಕ್ಕನ್ನು ತಮ್ಮ ಹೆಂಡತಿಯರಿಗೆ ಬಿಟ್ಟುಕೊಟ್ಟಿದ್ದಾರಾ? ಹಿಂದೂ ಹೆಂಡತಿಗೆ ಹುಟ್ಟುವ ಮಕ್ಕಳಿಗೆ ಮುಸ್ಲಿಂ ಹೆಸರನ್ನೇ ಏಕೆ ಇಡುತ್ತಾರೆ? ಇದು ಮತೀಯ ಭಾವನೆಯಲ್ಲವೆ? ಟೆನಿಸ್ ಆಟಗಾರ್ತಿ ಸಾನಿಯಾ ಸ್ಕರ್ಟ್ ಹಾಕಬಾರದೆಂದು ಫತ್ವಾ ಹೊರಡಿಸುವವರು ಯಾವ ಲಿಬರ್ಟಿ ಕೊಟ್ಟಾರು?” ಎಂದರು.

***
“ಡಿಯರ್ ಪ್ರತಾಪ್, ನಾನು ನಿಮ್ಮ ಅಂಕಣದ ಕಾಯಂ ಓದುಗ. ಶಿವಮೊಗ್ಗದ ವೈ.ಎಸ್. ಶ್ರೀನಿವಾಸ್ ಅವರಂತೆ ನಾನೂ ಒಬ್ಬ ತಂದೆ. ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅಶ್ವಿನಿ ಪ್ರಕರಣವನ್ನು ನಾನು ಗಮನಿಸುತ್ತಾ ಬಂದಿದ್ದೆ. ‘ಅಶ್ವಿನಿ-ಇರ್ಫಾನ್’ ಪ್ರಕರಣ ಸುಖಾಂತ್ಯ ಕಂಡಿದೆ(ಹ್ಯಾಪಿ ಎಂಡಿಂಗ್) ಎಂದು ಟಿವಿ ಚಾನೆಲ್ಲೊಂದು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತು. ಆದರೆ ಈ ‘ಸುಖ’, ‘ಹ್ಯಾಪಿ’ ಹಾಗೂ ‘ಅಂತ್ಯ’ ಪದಗಳ ಅರ್ಥಗೊತ್ತಾಗಲಿಲ್ಲ! ಈ ಢೋಂಗಿ ಪ್ರೇಮ-ಪ್ರೀತಿ ಪ್ರತಿಪಾದಕರಿಗೆ ತಮ್ಮ ಮಕ್ಕಳು ಯಾವುದೋ ಪಡಪೋಸಿಗಳನ್ನು ಕಟ್ಟಿಕೊಂಡು ಓಡಿಹೋದಾಗ ಮಾತ್ರ ಒಬ್ಬ ತಂದೆಯ ನೋವು ಅರ್ಥವಾಗಲು ಸಾಧ್ಯ. ಮುಂದೊಂದು ದಿನ ಇರ್ಫಾನ್‌ನೇನಾದರೂ ಅಶ್ವಿನಿಯನ್ನು ಕೆಟ್ಟದಾಗಿ ನಡೆಸಿ ಕೊಂಡರೆ, ಆಕೆಯನ್ನು ಪರ್ಮನೆಂಟಾಗಿ ಬುರ್ಖಾದೊಳಕ್ಕೆ ತುರುಕಿದರೆ, ತಲಾಕ್ ಕೊಟ್ಟು ಮತ್ತೊಬ್ಬಳನ್ನು ಕಟ್ಟಿಕೊಂಡರೆ ಇವರು ಸಹಾಯಕ್ಕೆ ಬರುತ್ತಾರಾ? ಅಶ್ವಿನಿಗೆ ಒಳ್ಳೆಯದಾಗಲಿ ಎಂದಷ್ಟೇ ನಾವು ಹಾರೈಸಬಹುದು. ಆದರೆ ಶ್ರೀನಿವಾಸ್ ಹಾಗೂ ಸರಸ್ವತಿ ದಂಪತಿಗೆ ಬಂದ ಸ್ಥಿತಿ ಯಾವ ಅಪ್ಪ-ಅಮ್ಮನಿಗೂ ಬರಬಾರದು”

***
“ಜನವರಿ 20ರಂದು ನ್ಯಾಯಾಲಯದ ಹೊರಗಡೆ ಮುಸ್ಲಿಮರ ಒಂದು ಗುಂಪು ನೆರೆದಿತ್ತು. ಅಶ್ವಿನಿ ಪ್ರಕರಣದ ಬಗ್ಗೆ ಹೈಕೋರ್ಟ್ ತೀರ್ಪು ಹೊರಬಿದ್ದ ಕೂಡಲೇ, ‘ಖಾಝಿ’ ಕೆಲಸ ಮಾಡಿದ ಆ ‘ಹಿಂದೂ ಮೌಲ್ವಿ’ಯನ್ನು ಅವರು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು. ಒಂದು ವೇಳೆ ಹುಡುಗಿ ಮುಸ್ಲಿಮಳಾಗಿದ್ದು, ಆಕೆಯನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದ್ದರೆ ‘ಆತ’ ಮದುವೆ ಮಾಡಿಸುವ ತಾಕತ್ತು ತೋರುತ್ತಿದ್ದನೆ? Never ever! Such are the humbug culture vultures eating into the vitals of Hinduism”

***
ಇಂತಹ ನೂರಾರು ಇ-ಮೇಲ್‌ಗಳೂ ನನ್ನ ಇನ್‌ಬಾಕ್ಸ್‌ಗೆ ಬಂದು ಕುಳಿತಿವೆ. ಓದುಗರಾದ ನಿಮಗೇ ಇಷ್ಟು ನೋವಾಗಬೇಕಾದರೆ ಆಕೆಗೆ ಹಾಲುಣಿಸಿದ ಆ ತಾಯಿಯ ಎದೆಯೊಳಗಿನ ವೇದನೆ ಏನಿತ್ತೋ? ಮಕ್ಕಳಾದ ನಾವು ಆವೇಶದಲ್ಲಿ, ಅವಸರದಲ್ಲಿ ಏಕಿಂಥಾ ನಿರ್ಧಾರಗಳನ್ನು ತೆಗೆದುಕೊಂಡು ಹೆತ್ತು-ಹೊತ್ತವರನ್ನು ದುಃಖದ ಮಡುವಿಗೆ ದೂಡಿ ಬಿಡುತ್ತೇವೆ? ನೂತನ ಮಾಹಿತಿ ಸಂಪರ್ಕ ತಂತ್ರeನ (ನ್ಯೂ ಇನ್‌ಫಾರ್ಮೇಶನ್ ಕಮ್ಯುನಿಕೇಶನ್ ಟೆಕ್ನಾಲಜಿ) ಕ್ರಾಂತಿಯ ಈ ಕಾಲದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಒಂದೊಂದು ಯುಗ ಬದಲಾಗುತ್ತಿದೆ. ಸೆಲ್‌ಫೋನ್ಸ್, ಕಂಪ್ಯೂಟರ್‍ಸ್, ಇಂಟರ್‌ನೆಟ್, ಸೋಷಿಯಲ್ ನೆಟ್‌ವರ್ಕ್‌ಗಳು ನಮ್ಮ ಪೋಷಕರ ಕಲ್ಪನೆಗೂ ನಿಲುಕದ ಕಾಲ, ಪರಿಸ್ಥಿತಿ ಸೃಷ್ಟಿಸಿವೆ. ಟೆಲಿಫೋನ್ ಎಕ್ಸೇಂಜ್‌ಗೆ ಫೋನ್ ಮಾಡಿ, ಟ್ರಂಕ್ ಕಾಲ್ ಬುಕ್ ಮಾಡಿ ರಿಂಗಣ ಕೇಳುವುದಕ್ಕಾಗಿ ದಿನವಿಡೀ ರಿಸೀವರ್ ಮುಂದೆ ಕುಳಿತಿರುತ್ತಿದ್ದ ಅಪ್ಪ-ಅಮ್ಮನಿಗೆ ಸೆಲ್‌ಫೋನ್‌ನಿಂದ ಆರಂಭವಾಗುವ ಪ್ರೀತಿ ಊಹೆ, ಕಲ್ಪನೆಗೂ ನಿಲುಕದ್ದು ಎನಿಸುವುದಿಲ್ಲವೆ? ಹಾಗಿರುವಾಗ ನಮ್ಮ ಮನದ ತುಡಿತ, ಆತುರ, ಆವೇಶಗಳನ್ನು 1950, 60ರ ದಶಕದಲ್ಲಿ ಜನಿಸಿದ, 20-25 ವರ್ಷಗಳ ಹಿಂದೆ ಮದುವೆಯಾದ ನಮ್ಮ ಅಪ್ಪ-ಅಮ್ಮ ಅರ್ಥಮಾಡಿಕೊಳ್ಳಬೇಕೆಂದು ಬಯಸುವುದು ಸರಿಯೆ? ಕೈಗೆ ಮೊಬೈಲ್ ಕೊಟ್ಟರೂ ಡಯಲ್ ಮಾಡಲು ತಡವರಿಸುವ ಪೋಷಕರು, ಭಾಗ್ಯಜ್ಯೋತಿ ಯೋಜನೆಯಿಂದಾಗಿ ವಿದ್ಯುತ್ ದೀಪ ಕಂಡ ಹಳ್ಳಿ, ಮನೆ, ಕುಟುಂಬಗಳಿವೆ. ಅವರಿಗೆ 21ನೇ ಶತಮಾನದ ಕಾಲದ ಓಟ ಹೇಗೆ ಅರ್ಥವಾದೀತು? ಅವರು 20 ವರ್ಷ ಮುಂದಕ್ಕೆ ಬಂದು ಯೋಚಿಸಬೇಕೆಂದು ಹೇಗೆ ನಿರೀಕ್ಷಿಸುತ್ತೀರಿ? ಬದಲಿಗೆ 21ನೇ ಶತಮಾನದಲ್ಲಿ ಪ್ರೀತಿ-ಪ್ರೇಮ ಮಾಡುವ ನಾವೇ ಏಕೆ 20 ವರ್ಷ ಹಿಂದೆ ಹೋಗಿ, ಅಪ್ಪ-ಅಮ್ಮನ ಆತಂಕಗಳನ್ನು ಅರ್ಥಮಾಡಿಕೊಳ್ಳಬಾರದು, ಅವರಿಗೆ ಮನವರಿಕೆ ಮಾಡಿಕೊಡಲು, ವಿಶ್ವಾಸಕ್ಕೆ ತೆಗೆದುಕೊಳ್ಳಲು ಏಕೆ ಪ್ರಯತ್ನಿಸಬಾರದು?

ಇವತ್ತು ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ (ಬೆಳಗ್ಗೆ 10.30) ನನ್ನ ಮೂರು ಪುಸ್ತಕಗಳ ಬಿಡುಗಡೆ ಇದೆ. ಲೋಕಾಯುಕ್ತ ಎಸ್ಪಿ ಕೆ. ಮಧುಕರ್ ಶೆಟ್ಟಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋಗಿದ್ದೆ. ಅವರು ನಯಾಪೈಸೆ ಲಂಚವನ್ನೂ ಮುಟ್ಟದ ಕರ್ನಾಟಕದ ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಭ್ರಷ್ಟ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರೂ ಹೇಗೆ ತಪ್ಪಿಸಿಕೊಳ್ಳುತ್ತಾರೆಂಬುದಕ್ಕೆ ಇತ್ತೀಚೆಗೆ ತಲೆದೋರುತ್ತಿರುವ ಒಂದು ವಿಚಿತ್ರ ಸವಾಲಿನ ಬಗ್ಗೆ ವಿವರಿಸಿದರು.

“ನೋಡಿ… ಅಪ್ಪ-ಅಮ್ಮ ಎರಡೋ, ಮೂರೋ ಎಕರೆ ಹೊಲ ಗದ್ದೆಗಳಲ್ಲಿ ಕಷ್ಟ ಪಟ್ಟು ದುಡಿದು, ಮಕ್ಕಳನ್ನು ಓದಿಸಿ, ಮೇಲೆ ತರುತ್ತಾರೆ. ಅದೇ ಮಕ್ಕಳು(ಕೆಲವರು) ಸರಕಾರಿ ಕೆಲಸಕ್ಕೆ ಸೇರಿ, ಒಳ್ಳೆಯ ಸಂಪಾದನೆ ಮಾಡಿ ಮದುವೆಯಾದ ನಂತರ ಎಷ್ಟು ಬದಲಾಗುತ್ತಾರೆಂದರೆ ಹಳ್ಳಿಯಿಂದ ಮಗನ್ನು ನೋಡಲು ಅಪ್ಪ-ಅಮ್ಮ ಬಂದರೆ ಹೆಂಡತಿ ಕಿರಿಕಿರಿ ಮಾಡುತ್ತಾಳೆ, ಇಲ್ಲವೆ ಟಾಯ್ಲೆಟ್ ಗಲೀಜು ಮಾಡುತ್ತಾರೆ ಎಂದು ಔಟ್‌ಹೌಸ್‌ನಲ್ಲಿ ಇರಿಸುತ್ತಾರೆ.  ಅಣಕವೆಂದರೆ ಲೋಕಾಯುಕ್ತ ದಾಳಿಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡಾಗ ಮಕ್ಕಳಿಗೆ ಮತ್ತೆ ನೆನಪಾಗುವುದು, ಕಷ್ಟಕಾಲದಲ್ಲಿ ಮತ್ತೆ ಸಹಾಯಕ್ಕೆ ಬರುವುದು ಅಪ್ಪ-ಅಮ್ಮನ ಆ ಮೂರು ಎಕರೆ ಜಮೀನೇ! ಅಂದರೆ ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಬಂಗಲೆ ಕಟ್ಟಿಸಿರುವುದು ಅಪ್ಪನ ಮೂರು ಎಕರೆ ಕೃಷಿ ಭೂಮಿಯಲ್ಲಿ ಗಳಿಸಿದ ಆದಾಯದಿಂದಲೇ ಎನ್ನುತ್ತಾರೆ. ಇತ್ತೀಚೆಗೆ ಬಹಳಷ್ಟು ಪ್ರಕರಣಗಳಲ್ಲಿ ಭ್ರಷ್ಟ ಅಧಿಕಾರಿಗಳು ಕೊಡುತ್ತಿರುವ ಅತ್ಯಂತ ಸ್ಟ್ರಾಂಗ್ ಡಿಫೆನ್ಸ್ ಇದೇ” ಎಂದರು. ಅಪ್ಪನನ್ನು ವಿಚಾರಿಸಿದರೆ, ‘ಹೌದು ಸ್ವಾಮಿ… ಹೊಲದಲ್ಲಿ ಶೇಂಗಾ ಹಾಕಿದ್ದೆ, ಪಕ್ಕದಲ್ಲೇ ಸೂರ್ಯಕಾಂತಿ ಬೀಜ ಬೆಳೆದಿದ್ದೆ, ಅದರ ಬುಡದಲ್ಲೇ ಎಳ್ಳು ಹಾಕಿದ್ದೆ, 10 ಲಕ್ಷ ಲಾಭ ಬಂತು’ ಎನ್ನುತ್ತಾರೆ!!

ಮಗನನ್ನು ನೋಡಲು ಪಟ್ಟಣಕ್ಕೆ ಬಂದಾಗ ಮಾಡಿದ್ದ ಅವಮಾನ ವನ್ನೂ ಮರೆತು ಪೋಷಕರು ಮಕ್ಕಳ ರಕ್ಷಣೆಗೆ ಬರುತ್ತಾರೆ ಎಂದು ಅವರು ನಕ್ಕರು.
ಇದೊಂದು ಬೇಸರದ ಬೆಳವಣಿಗೆಯೇ ಆಗಿದ್ದರೂ ಅಪ್ಪ-ಅಮ್ಮನ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೆ? We are all blessed with such parents. ಅದಕ್ಕಾದರೂ ಖುಷಿ ಪಡೋಣ. ಹಾಗಂತ ಯಾರೂ ಲವ್ವೇ ಮಾಡಬೇಡಿ ಎನ್ನುತಿಲ್ಲ. ಖಂಡಿತ ಜಾತಿ-ಧರ್ಮಗಳು ಬಹಳಷ್ಟು ಬಾರಿ ಪ್ರೀತಿ-ಪ್ರೇಮಕ್ಕೆ ದೊಡ್ಡ ಅಡಚಣೆಯಾಗುತ್ತವೆ. ಆದರೂ ತನ್ನ ಮಗಳು ಪ್ರೀತಿಸಿರುವುದು ಒಬ್ಬ ಯೋಗ್ಯ, ಸ್ವಾವಲಂಬಿ ಹಾಗೂ ಉದ್ಯೋಗಸ್ಥ ಯುವಕನನ್ನು ಎಂಬುದು ಮನವರಿಕೆಯಾದರೆ, ಆತ ಯೋಗ್ಯ ವ್ಯಕ್ತಿ ಎಂದು ಪ್ರೀತಿಸಿದ ಹುಡುಗಿ ಮನವರಿಕೆ ಮಾಡಿಕೊಟ್ಟರೆ ಪೋಷಕರೂ ವಿರೋಧವನ್ನು ಬಿಟ್ಟುಕೊಡುವ ಬೆಳವಣಿಗೆ ಇತ್ತೀಚಿನ ವರ್ಷ ಗಳಲ್ಲಿ ಕಂಡುಬರುತ್ತಿದೆ. ಹಾಗಾಗಿ ಆವೇಶ, ಆತುರ ಬಿಟ್ಟು, ಓದಿ, ಉದ್ಯೋಗಕ್ಕೆ ಸೇರಿ ಅನುರೂಪ ಸಂಗಾತಿಯನ್ನು ಆಯ್ಕೆ ಮಾಡಿ ಕೊಂಡಿದ್ದೇನೆಂದು ಮನವರಿಕೆ ಮಾಡಿಕೊಟ್ಟರೆ ಮಕ್ಕಳು ಹಾಗೂ ಪೋಷಕರು ಇಬ್ಬರಿಗೂ ಹಿತವಲ್ಲವೆ?

ಈ ನಿಟ್ಟಿನಲ್ಲಿ ಏಕೆ ಯೋಚನೆ ಮಾಡಬಾರದು….?

35 Responses to “ಹಾಲುಣಿಸಿದ ಆ ತಾಯಿಯ ಎದೆಯ ವೇದನೆ ಏನಿತ್ತೋ?”

  1. Sumanth BS says:

    Very True, Pratap. The first call you recieved on Sunday!! Hats Off those parents who gave it a perfect ending to the Love Story!! Each and Every parent in this nation has to read through this article and make their children read it.

    Especially, Girls who are the mothers of Future who write the fortune of India Tomorrow has to be aware of this. If they do not understand this today, I doubt if we can find a single Hindu in India or anywhere in the World in next 100 years!!!

    It becomes a responsibility of every Indian to stop these kind of unethical (I can not say illeagal) activities.

    People take Shah Rukh Khan – Gauri as a role model when it comes to “Hindu-Muslim” married couple. Damn them!!! Shah Rukh Khan – He is just another Paki living in India. If he really repsects the other religion then why did he add Khan in front of Gauri’s name? And it looks nice to people because her name is still Gauri!! These are just publicity gimics of these bloody celebrities!! These people are just hypocrates and its better not take example of such people.

    I hope people understand the consequence and get into action right away, at least at their individual levels. Before we show any symapthy to Ms. Ashwini in this case, everyone has think twice – “What will I do if I my daughter do this?, will I support this?” and so on!!!

  2. Sowmya says:

    Pratap,

    Let her be with him for some time she will come to know what is life.
    What i request with all the Indian parents, when your child start to grow up you should sit with them and need to tell your life story itself so that you child can understand you before some one else so that she/he can have a capacity to think what is her/his own dreams and what the Parents do expect.You have to make your child to dream the best thing. Lot of Parents think if they give college fee that is enough.Common If you can’t take care of Children who can else then.

  3. VASANTH says:

    Great article

  4. Sree Harshavardhana says:

    ಪ್ರತಾಪ್ ರವರೆ,

    ನಿಮ್ಮ ಕಳೆದ ಎರಡು ವಾರಗಳ ಲೇಖನ ಎಲ್ಲ ತಂದೆ-ತಾಯಿಯರ, ಪೋಷಕರ ಹಾಗೂ ಯುವಜನರ ಕಣ್ಣುತೆರೆಸುಂತಿದೆ. ನಿಮ್ಮ ಲೇಖನಗಳು ಇದೇ ರೀತಿ ಮುಂದುವರಿಯಲಿ.

  5. Chandramohan Gowda says:

    Pratap simharige,
    Tamma lekhana samayochitha sandarbhadalle bandide. Nammantha yuvakaru idannu tadegattalu upaya hudukuvadikke daarideepadantide. Aadare neevu yarannu ”HINDU MOULVI” endu karediruviro, avara guna nimma e lekhanadalli kandu bandiruvudu ”anireekshitha” belavanige aagide. Saadhyavaadshtu vaiyaktika nindanegalu & swarathi illade iddare bahala olleyadu embudu nanna anisike.

  6. Sumanth BS says:

    Very true. A major responsibility is in the hands of parents. The School and College education is just to get a degree cirtificate. Other than that, there is no ethics taught in that.

    Pratap, I have heard that there is a major revolution in the Madhya Pradesh Primary School Text. It has been told that the texts revolve around the moral ethical aspects of Indian Culture. Request you to please share some info about this.

  7. Umashankar says:

    ಆ ಹುಡುಗಿಯ ಬಗ್ಗೆ ಕನಿಕರ ಪಡೋದು ಬಿಟ್ರೆ ಇನ್ನೇನು ಉಳಿದಿಲ್ಲ. ಆ ಹುಡುಗಿಗೆ ಒಳ್ಳೆಯದಾಗಲಿ ಅಂತ ಹಾರೈಸೋಣ!

  8. AmbikaRavi says:

    Great article. A big salute to all parents.

  9. Shriram Hegde says:

    Recently these type of cases became tomuch……

    Really our Hindu Girls Should think about it……

    Dear Sir,

    continue these type of writings………
    you writing style is very nice & superb…………..

  10. lodyaashi says:

    ಹೆತ್ತು-ಹೊತ್ತು ಹರಸಿದ ಪೋಷಕರಿಗೇ ಅಪಮಾನ.
    ಪ್ರೇಮಿಸಿ ವರಿಸಿದ ಗೆಳಯನೇ ಬಹುಮಾನ!
    ಸಿಗಲ್ಲ ಕೂಡಲೇ ಯಾರಿಗೂ ಸಮಾಧಾನ.
    ಅವಳಿಗೂ ಆಗಲಿ ಒಂದು ಹೆಣ್ಣು ಸಂತಾನ
    ಆಗ ತಿಳಿವುದು ಎಲ್ಲಾ ತನ್‌ತಾನ
    ( ತನ್‌ತಾನ = ತನ್ನಿಂದ ತಾನೇ & ಅವಳು = ಕಥಾನಾಯಕಿ)

  11. naveen says:

    sir, ravi avara kajji kelasa vannu thummba chenaggi explain madidiri, thumba thanks nimma 2 episoda gallige,sir nijawagillu namma janna yavage artha madkothara, hogi hogi sabi na manegallige sarusthare , avara athra bussiness maduthara, sir yen madthira, a jain sahebru heldange chanda nodisthra, nama hudugiru yamari hogthara, sir nijawagilu nimantha avruge yestu thx helludru sallala.

  12. vijay says:

    Hi Pratap,

    The download option in Books section is not working. Can you please get it fixed.

    Thanks,
    Vijay

  13. vishal says:

    awsome article,

  14. NAGARAJ says:

    hello pratap,iduvarege nanu odiddakinta bhinnavada artile… naleya articlegagi weight madya iddene..

  15. Jagadish says:

    I second the above article.
    I have one point which I would like to call it out here and it’s about the people and media who support the young couple.
    24×7 news channels are becoming a major disgusting and ridiculous factors for the society. They are blowing the all issues out of the proportion just to run their business. They don’t want to understand the reality or any other factor for that matter other than TRP which they want on top.
    In all cases they just say “ಸುಖಾಂತ್ಯ” and leave/forget the issue then and there itself. The people or media who support how can they vouch for these young couple’s future life without even knowing their past, present? Do they ever check back or even think about those couple once in their life span? Do they ever understand the how the parents lead life with their part of their body… Ok… while they accept when it happens to their own daughter ….
    When these young couple’s see media and people behind them they feel whole world (except their parent) is being them. Those fools don’t understand that here to enjoy fun at a cost of your own life.
    I have sincere request to our media that they are the 4th part of our constitution after the executive, the legislative and the judiciary. Media should keep that in mind always and work respectfully. I would also suggest them to refrain from supporting or telecasting any issue where Love and affection is involved. In those cases you entering to a person’s private life and exposing to public which should be the case.
    Thanks and that’s all your honor … 

  16. channu says:

    Dear prathap,

    tande N tayi kannali niru tarisidale avalige holedu agutaaaaaaaaa…??????? madida kelasake prayechita kanditaaaa…….

  17. ravi says:

    good, i like it

  18. ಗೌಡ,R says:

    ಅಶ್ವಿನಿ ಯ೦ತ ಮತಿಗೇಡಿ ಹುಡುಗಿ ಇ೦ದ ಆದ ಅವಮಾನ , ನೋವು ಇತರೇ ಯಾವ ಅಪ್ಪ-ಅಮ್ಮನಿಗೂ ಆಗಬಾರದು ಎ೦ದಾದರ‍ೆ ಈ ಢೋಂಗಿ ಪ್ರೇಮ-ಪ್ರೀತಿ ಪ್ರತಿಪಾದಕರನ್ನು ನಡು ರ‍ಸ್ತೆ ಯಲ್ಲೀ ನಿಲ್ಲಿಸಿ ಗು೦ಡಿಕ್ಕಿ ಸಾಯಿಸಬೇಕು,
    keep it up pratap,

  19. love says:

    hey can you write this in english i wanna read it…

  20. prithvi says:

    superb article sir…ella hindu hudugeeru odbekadadde….

  21. Savitha says:

    Hello All,

    I mean no offense to anyone, but I think we i.e. youth should unify the society. Our ancessotors worked really hard in bringing us together.

    Lets stop building barriers in the names of religion. Inter-caste and inter-religion marriages are one way of bringing unity.

    Well, about the comments of having “Khan” included in Gauri’s name (Mrs. Shah Rukh Khan), what can I say! Even if she married anyone else she wouls have added her husband’s family name, to her name, so its no different and no claims of “hypocrisy” please.

    Once again, I repeat I mean no offense to anyone, it is a public forum and I think we should not make comments to bias anyone or any religion.

    Pratap sir, it is very nice that you pointed out the angle of parents. Yes, one should never forget our parents. There is nothing in this world that could not be sorted by talking out. So I suggest, we take the step of speaking out and sorting among ourselves.

    Thank you.

  22. kiran says:

    great article

  23. VINAYAK KALLANNAVAR says:

    Great article……..

  24. Keshav says:

    Hi Pratap, Good article,
    ನಿಮ್ಮ ee ಲೇಖನ ಎಲ್ಲ ತಂದೆ-ತಾಯಿಯರ, ಪೋಷಕರ ಹಾಗೂ ಯುವಜನರ ಕಣ್ಣುತೆರೆಸುಂತಿದೆ
    keep it up…., all youths are must read this artiles..,

    Then… ಈ ಢೋಂಗಿ ಪ್ರೇಮ-ಪ್ರೀತಿ ಪ್ರತಿಪಾದಕರನ್ನು ನಡು ರ‍ಸ್ತೆ ಯಲ್ಲೀ ನಿಲ್ಲಿಸಿ ಗು೦ಡಿಕ್ಕಿ ಸಾಯಿಸಬೇಕು…,

  25. Kodihalli Bheemappa says:

    ¥ÀævÁ¥ï ¸Àgï,
    gÀ«¨É¼ÀUÉgÉAiÀÄAvÀºÀ C£ÉÊwPÀvÉAiÀÄ »£Àß¯É G¼ÀîªÀgÀÄ EA¢£À ¸ÀªÀiÁdzÀ°è d£À¸ÉêÀPÀgÀÄ, £ÁªÉà 100% ¸ÁZÁUÀ¼ÀÄ JA§AvÉ ªÀwð¸ÀĪÀÅzÀ£Àß £ÉÆÃrzÀgÉ vÀÄA¨Á C¸ÀºÀåªÁUÀÄvÀÛzÉ. CªÀ£ÀÄ §¼ÁîjAiÀÄ°è G¥À£Áå¸ÀPÀ£ÁV ªÀiÁrzÁÝzÀgÀÆ K£ÀÄ? §jà ºÉtÄÚ¨ÁPÀ£ÀAvÉ ªÀwð¹ C°è£À d£ÀjAzÀ UÀƸÁ wAzÀ, EªÀ£À PÁl vÀrAiÀįÁUÀzÉ ªÀÄAiÀiÁðzÀ¸ÀÜ ºÉtÄÚ ªÀÄPÀ̼ÀÄ PÁ¯ÉÃfUÉ ºÉÆÃUÀzÁzÀzÀgÀÄ, ¥ÉÆõÀPÀgÀÄ ºÉtÄÚ ªÀÄPÀ̼À£ÀÄß PÁ¯ÉÃfJ PÀ¼ÀÄ»¸ÀzÁzÀgÀÄ DªÁUÀ¯Éà F PÀÄqÀÄPÀ ªÀĺÁ±ÀAiÀÄ£ÀߣÀÄß PÁ¯ÉÃf¤AzÀ¯Éà ºÉÆgÀ ºÁQzÀÄÝ. EAvÀªÀ£ÀÄ ¦æÃw ¥ÉæêÀÄzÀ ªÀiÁvÀ£ÁqÀÄvÁÛ£É.
    EªÀ£À ºÀÄZÁÑlUÀ½UÉ ¤ªÀÄäAvÀªÀgÀ PÀrªÁt CUÀvÀå.

  26. Chethan, Coorg says:

    Appa hagu Amma na chennagi nodikolli…. kone vayasinalli avara manasanna novisa bedi….E matugalanna nimma wife gu manadattu madi….plz?

  27. Thippeswamy N R says:

    hello sir, nimma baravanige samajamukhiyavu prstutavu agiruvudarinda pratiyobbaru aritukolluvantavu. eegina hadi vayassinavarige prema geelagide yuvakaru adaraache yochisabekide.

  28. Thippeswamy N R says:

    nimma baravanige samajamukhiyavu .

  29. Arun Kashyap says:

    SUPERB ARTICLE PRATAP 🙂
    Every HINDU should read this article.
    Hats off to you Pratap.

  30. Nandu says:

    this articl very good sir..a good lesson for youth…

  31. Sowmya M P says:

    Hello Prathap,

    I am fan of your articles and I read almost all article of yours.

    Now the situation here is most of the people who born and brought up in karnataka don’t know how to read and write kannada. So if the article is published in english also along with kannada more people can read your articles and enjoy your writting style, gutts. More over they wont miss this kind of good articles.

  32. sandeep says:

    its one of the heart touching article i ever heard.every girl wil must read this
    article.i wish this article change the mindset of hindu girls

  33. suhas says:

    ಛೆ ಮಕ್ಕಳೇಕೆ ಈಗೆ ಹೆತ್ತವರ ಆಶಾಸೌಧಕ್ಕೆ ಬೆಂಕಿ ಹಚ್ಚುತ್ತಾರೆ ????

  34. ಚಂದ್ರಶೇಖರ್ (ಕನಕಪುರ) says:

    ಧರ್ಮಾಂದತೆಗೆ.. ಹಿಡಿದ… ಕನ್ನಡಿಯಂತಿದೆ.. ನಿಮ್ಮ ಲೇಖನ….!