Date : 22-08-2010 | 24 Comments. | Read More
Yellow Journalism. ಹಾಗೆಂದು ಕೂಡಲೇ ತಟ್ಟನೆ ನೆನಪಾಗುವುದು ವಿಲಿಯಂ ರ್ಯಾಂಡಾಲ್ಫ್ ಹರ್ಸ್ಟ್. ‘ದಿ ಸ್ಯಾನ್ ಫ್ರಾನ್ಸಿಸ್ಕೋ ಎಕ್ಷಾಮಿನರ್’ ಎಂಬ ಪತ್ರಿಕೆಯನ್ನು ಅಪ್ಪನಿಂದ ಪಡೆದುಕೊಂಡ ಹರ್ಸ್ಟ್, 1897ರಲ್ಲಿ ಅಧಿಕೃತವಾಗಿ ಮುದ್ರಣ ಕ್ಷೇತ್ರಕ್ಕೆ ಕಾಲಿಟ್ಟ. ಅದರ ಬೆನ್ನಲ್ಲೇ ‘ದಿ ನ್ಯೂಯಾರ್ಕ್ ಜರ್ನಲ್’ ಎಂಬ ಮತ್ತೊಂದು ಪತ್ರಿಕೆಯನ್ನು ಖರೀದಿ ಮಾಡಿದ. ಈ ‘ದಿ ನ್ಯೂಯಾರ್ಕ್ ಜರ್ನಲ್’ಗೂ ಹಾಗೂ ಜೋಸೆಫ್ ಪುಲಿಟ್ಝರ್ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಗೂ ತೀವ್ರ ಸೆಣಸಾಟ ಆರಂಭವಾಯಿತು. ಪ್ರಸಾರ ಸಂಖ್ಯೆಯಲ್ಲಿ ಮೇಲುಗೈ ಸಾಧಿಸುವ ಸಲುವಾಗಿ ಪತ್ರಿಕೋದ್ಯಮದ ಮೂಲತತ್ತ್ವಗಳನ್ನೇ ಗಾಳಿಗೆ ತೂರಲಾ […]
Date : 15-08-2010 | 20 Comments. | Read More
ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ ರಸೂಲುಲ್ಲ್ಲಾಹ್… ಅವನ ತುಟಿಗಳು ಕಂಪಿಸಿದ್ದು ಅದೇ ಕಡೇ ಸಲ. ಅಲ್ಲಾಹುವಿಗೆ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಿ, ಕಣ್ಣು ತೆರೆದ. ಅಷ್ಟರೊಳಗೆ ಮುಖದ ಸುತ್ತ ಕಪ್ಪು ಚೀಲ ಆವರಿಸಿತ್ತು. ಕುಣಿಕೆ ಶಿರವನ್ನು ಸುತ್ತಿತ್ತು. ಕಾಲ ಕೆಳಗಿನ ಹಲಗೆ ಸರಿಯಿತು. ಶರೀರ ಬಾವಿಯೊಳಕ್ಕೆ ಧುಮುಕಿತು. ಹಗ್ಗ ಬಿಗಿಯಿತು, ಉಸಿರು ನಿಂತಿತು. ಅಲ್ಲಿಗೆ ಆಶ್ಫಾಕುಲ್ಲಾ ಖಾನ್ ಎಂಬ ಕ್ರಾಂತಿಕಾರಿಯ ವಿರೋಚಿತ ಹೋರಾಟ ಅಂತ್ಯವಾಯಿತು. ಎಲ್ಲರೂ ಒಂದಲ್ಲ ಒಂದು ದಿನ ಈ ಬುವಿಯನ್ನು ಬಿಟ್ಟುಹೋಗಲೇ ಬೇಕು. ಸಾವು ಅನಿವಾರ್ಯ. […]
Date : 09-08-2010 | 26 Comments. | Read More
2008ರ ಒಲಿಂಪಿಕ್ಸ್ ನಡೆದಿದ್ದು ಚೀನಾದ ಬೀಜಿಂಗ್ನಲ್ಲಿ. 2012ರ ಒಲಿಂಪಿಕ್ಸ್ ನಡೆಯುವುದು ಇಂಗ್ಲೆಂಡ್ನ ಲಂಡನ್ನಲ್ಲಿ. 2016ರ ಒಲಿಂಪಿಕ್ಸ್ ಬ್ರೆಝಿಲ್ನ ರಯೋ ಡಿ ಜನೈರೋದಲ್ಲಿ ನಡೆಯಲಿದೆ. 2020ರ ಒಲಿಂಪಿಕ್ಸ್ ಎಲ್ಲಿ ನಡೆಯಲಿದೆ ಎಂಬುದು ಲಂಡನ್ ಒಲಿಂಪಿಕ್ಸ್ ವೇಳೆಗೆ ಅಖೈರಾಗಲಿದೆ. 2024 ಹಾಗೂ 2028ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಜಗತ್ತಿನ ಹತ್ತಾರು ದೇಶಗಳು ನಾ ಮುಂದು, ತಾ ಮುಂದು ಎಂಬಂತೆ ಧಾವಿಸುತ್ತಿವೆ. ಅದಕ್ಕಾಗಿ ಬಿಡ್ಡಿಂಗ್ ಕೂಡ ಆರಂಭವಾಗಿದೆ. ಅಧಿಕೃತವಾಗಿ ಘೋಷಣೆ ಮಾಡುವುದು 8 ವರ್ಷ ಮೊದಲಾದರೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಕನಿಷ್ಠ 12 […]
Date : 03-08-2010 | 24 Comments. | Read More
Alas! 1931ರಲ್ಲಿ ಭಗತ್ ಸಿಂಗ್ನನ್ನು ನೇಣಿಗೆ ಹಾಕಿದಾಗಲೂ, 1945ರಲ್ಲಿ ಸುಭಾಷ್ಚಂದ್ರ ಬೋಸ್ ಅನುಮಾ ನಾಸ್ಪದವಾಗಿ ಸಾವಿಗೀಡಾದಾಗಲೂ, 1948ರಲ್ಲಿ ಗಾಂಧೀಜಿ ಹತ್ಯೆಯಾದಾಗಲೂ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದಾ ಗಲೂ ನಮ್ಮ ಮಾಧ್ಯಮಗಳು ಈ ಪರಿ ಬೊಬ್ಬೆಹಾಕಿರಲಿಲ್ಲ! ಇತ್ತ ದಿಲ್ಲಿಯ ಬೀದಿ ಬೀದಿಗಳಲ್ಲಿ ೩ ಸಾವಿರ ಸಿಖ್ಖರನ್ನು ಹತ್ಯೆ ಮಾಡಿದ, ಅದನ್ನು ಒಂದು ದೊಡ್ಡಮರ ಉರುಳಿದಾಗ ಭೂಮಿ ಅಲು ಗುವುದು ಸಹಜ ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರ ಕಾಂಗ್ರೆಸ್ ಪಕ್ಷ, ಒಬ್ಬ ಸೊಹ್ರಾಬುದ್ದೀನ್ಹತ್ಯೆಗೆ ಈಗ ಪ್ರತಿಕ್ರಿಯಿಸುತ್ತಿರುವ ರೀತಿಯಾದರೂ ಹೇಗಿದೆ? ಮೂರು […]
Date : 25-07-2010 | 30 Comments. | Read More
Death… ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny. ಎಷ್ಟು ನಿಜ ಅಲ್ವಾ? ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…
Date : 18-07-2010 | 54 Comments. | Read More
Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ […]
Date : 12-07-2010 | 15 Comments. | Read More
ಗುಜರಾತ್ ಪೊಲೀಸರು ನಡೆಸಿದ ಮತ್ತೊಂದು ಎನ್ಕೌಂಟರ್ ಕೂಡ “ನಕಲಿ” ಎಂದು ಮಹಾನಗರ ಮ್ಯಾಜಿಸ್ಟ್ರೇಟ್ ವರದಿ ಸಾಬೀತು ಮಾಡಿದೆ. ಇನ್ನೂ ಎಷ್ಟು ಅಮಾನವೀಯರಾದಾರು ಇವರು? No limits… ಇಶ್ರತ್ ಜಹಾನ್ ಶಮೀಮ್ ರಾಝಾಳ ಹತ್ಯೆ ಒಂದು ನಕಲಿ ಎನ್ಕೌಂಟರ್ ಎಂದು ಮಹಾನಗರ ನ್ಯಾಯಾಧೀಶ ಎಸ್ಪಿ ತಮಾಂಗ್ ಅವರು 2009, ಸೆಪ್ಟೆಂಬರ್ 7ರಂದು 240 ಪುಟಗಳ ವರದಿಯನ್ನು ನೀಡಿದಾಗ ಇಂಗ್ಲಿಷ್ ಮಾಧ್ಯಮಗಳು ಈ ಮೇಲಿನಂತೆ ವರ್ಣಿಸಿದ್ದವು. ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್ನನ್ನು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ […]
Date : 28-06-2010 | 28 Comments. | Read More
ಅಂದು ನಡುರಾತ್ರಿ ಕಳೆದು 2 ಗಂಟೆಯಾಗಿದೆ. ಆ ಹೊತ್ತಿ ನಲ್ಲಿ ಮೊಬೈಲ್ ರಿಂಗ್ ಆಗುತ್ತಿದೆ. ಅತ್ತ ಕಡೆ ಹೆಣ್ಣು ಧ್ವನಿಯೊಂದು ಗದ್ಗದಿತವಾಗಿ ಕೇಳುತ್ತಿದೆ. ತನ್ನ 8 ತಿಂಗಳ ಕಂದಮ್ಮನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಅಮ್ಮನ ಧ್ವನಿ ಯದು. “ನೀವು ಹೇಳಿ ಸಾರ್, ಅವರು ನಿಮ್ಮ ಮಾತನ್ನು ಕೇಳುತ್ತಾರೆ” ಎಂದು ಅಂಗಲಾಚುತ್ತಿದ್ದಾಳೆ. ಅನಾರೋಗ್ಯದಿಂದ ಮಗು ನರಳುತ್ತಿ ದ್ದರೂ ಬಳ್ಳಾರಿ ಸರಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಕೊಡಲು ಮುಂದಾಗುತ್ತಿಲ್ಲ. ಆಗ ಆಕೆಗೆ ಕಂಡ ಕಡೆಯ ಆಶಾಕಿರಣ ಯಾವುದೆಂದು ತಿಳಿದಿದ್ದೀರಿ? ಆ […]
Date : 25-06-2010 | 32 Comments. | Read More
ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅದರಲ್ಲಿ ಎನ್ಡಿಎ ಬಲಾಬಲ 143. ಎನ್ಡಿಎ ಅನ್ನು ಒಡೆದು ನೋಡಿದರೆ ಜೆಡಿಯು ಪಾಲು 88 ಹಾಗೂ ಬಿಜೆಪಿ ಸಂಖ್ಯೆ 55. 2005ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಲಾಲು ಪ್ರಸಾದ್ ಯಾದವ್ ಅವರ ಆರ್ಜೆಡಿ ಬಳಿ 54 ಶಾಸಕರಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕತಾಂತ್ರಿಕ ಜನತಾ ಪಾರ್ಟಿಗೆ ಸಿಕ್ಕಿದ್ದು ಕೇವಲ 10 ಸೀಟುಗಳು! ಲಾಲು ಹಾಗೂ ಪಾಸ್ವಾನ್ ಅವರಂತೂ ನಿತೀಶ್ ಕುಮಾರ್ ಅವರ ಬದ್ಧವೈರಿಗಳು. […]
Date : 13-06-2010 | 29 Comments. | Read More
ಮಾವೋಯಿಸಂ ಅಂದರೆ ಏನು? ಇಂಥದ್ದೊಂದು ‘ಇಸಂ’ ಹುಟ್ಟಿಕೊಂಡಿದ್ದಾದರೂ ಹೇಗೆ? ಹಾಗೂ ಏಕೆ? ಅದು ಜನ್ಮತಳೆಯುವುದಕ್ಕೂ ಮುನ್ನ ಜರುಗಿದ ಘಟನೆಗಳಾದರೂ ಯಾವುವು? ಅದು ಬೆಳೆದು ಬಂದ ರೀತಿಯನ್ನು ನೋಡಿದರೆ, ಅದರ ಪರಂಪರೆಯನ್ನು ಗಮನಿಸಿ ದರೆ ಮುಂದೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು? ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ನಕ್ಸಲಿಸಂನ(ಹಿಂಸೆ) ಇನ್ನೊಂದು ಹೆಸರಾಗಿರುವ ಮಾವೋಯಿಸಂನ ಅಗತ್ಯ ನಿಜಕ್ಕೂ ನಮ್ಮ ದೇಶಕ್ಕಿದೆಯೇ? ಮಾವೋಯಿಸಂ ಎಂಬುದು ಯಾವ ವ್ಯಕ್ತಿಯ ಹೆಸರನ್ನು ಹೊಂದಿದೆ? ಅದು ಯಾವ ವ್ಯಕ್ತಿಯಿಂದ ಪ್ರೇರಣೆ ಪಡೆಯುತ್ತಿದೆ? ಮಾವೋ ಝೆಡಾಂಗ್ […]