Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸೊಹ್ರಾಬುದ್ದೀನ್‌ನೇನು ಕಾಂಗ್ರೆಸ್‌ನ ಸುಭಾಷ್‌ಚಂದ್ರ ಬೋಸಾ?

ಸೊಹ್ರಾಬುದ್ದೀನ್‌ನೇನು ಕಾಂಗ್ರೆಸ್‌ನ ಸುಭಾಷ್‌ಚಂದ್ರ ಬೋಸಾ?

Alas!

1931ರಲ್ಲಿ ಭಗತ್ ಸಿಂಗ್‌ನನ್ನು ನೇಣಿಗೆ ಹಾಕಿದಾಗಲೂ, 1945ರಲ್ಲಿ ಸುಭಾಷ್‌ಚಂದ್ರ ಬೋಸ್ ಅನುಮಾ ನಾಸ್ಪದವಾಗಿ ಸಾವಿಗೀಡಾದಾಗಲೂ, 1948ರಲ್ಲಿ ಗಾಂಧೀಜಿ ಹತ್ಯೆಯಾದಾಗಲೂ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದಾ ಗಲೂ ನಮ್ಮ ಮಾಧ್ಯಮಗಳು ಈ ಪರಿ ಬೊಬ್ಬೆಹಾಕಿರಲಿಲ್ಲ! ಇತ್ತ ದಿಲ್ಲಿಯ ಬೀದಿ ಬೀದಿಗಳಲ್ಲಿ ೩ ಸಾವಿರ ಸಿಖ್ಖರನ್ನು ಹತ್ಯೆ ಮಾಡಿದ, ಅದನ್ನು ಒಂದು ದೊಡ್ಡಮರ ಉರುಳಿದಾಗ ಭೂಮಿ ಅಲು ಗುವುದು ಸಹಜ ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರ ಕಾಂಗ್ರೆಸ್ ಪಕ್ಷ, ಒಬ್ಬ ಸೊಹ್ರಾಬುದ್ದೀನ್‌ಹತ್ಯೆಗೆ ಈಗ ಪ್ರತಿಕ್ರಿಯಿಸುತ್ತಿರುವ ರೀತಿಯಾದರೂ ಹೇಗಿದೆ? ಮೂರು ಸಾವಿರ ಸಿಖ್ಖರನ್ನು ಕೊಂದವರಿಗೆ ಸೊಹ್ರಾಬುದ್ದೀನ್ ಎನ್‌ಕೌಂಟರನ್ನು ‘Cold blooded murder’ ಎಂದು ವರ್ಣಿಸುವ ನೈತಿಕ ಹಕ್ಕಿದೆಯೆ? ಸೊಹ್ರಾಬುದ್ದೀನ್ ಶೇಕ್ ವಿಷಯದಲ್ಲಿ ಮಾತ್ರ ಕಾನೂನು ಮಾತನಾಡುವ ಕಾಂಗ್ರೆಸ್, ಬೇರೆ ವಿಷಯಗಳಲ್ಲಿ ನಿದ್ದೆ ಮಾಡಿದ್ದೇಕೆ? ಭೋಪಾಲ್ ಅನಿಲ ದುರಂತದ ರೂವಾರಿ ಹಾಗೂ 15 ಸಾವಿರ ಜನರ ಮಾರಣಹೋಮಕ್ಕೆ ಕಾರಣನಾದ ವಾರೆನ್ ಆಂಡರ್‌ಸನ್ ಅಮೆರಿಕಕ್ಕೆ ವಾಪಸಾಗಲು ಅವಕಾಶ ಕೊಟ್ಟ ಕಾಂಗ್ರೆಸ್, ಒಬ್ಬ ಕ್ರಿಮಿನಲ್‌ನನ್ನು ಕೊಂದಿದ್ದಕ್ಕೆ ಏಕೆ ಮೈಪರಚಿಕೊಳ್ಳುತ್ತಿದೆ?

ಕಳೆದ ಒಂದು ವಾರದಿಂದ ಮಾಧ್ಯಮಗಳು ಹಾಗೂ ಆಳುವ ಕಾಂಗ್ರೆಸ್ ಪಕ್ಷ ವರ್ತಿಸುತ್ತಿರುವ ರೀತಿಯನ್ನು ನೋಡಿದಾಗ ಇಂತಹ ಪ್ರಶ್ನೆಗಳೇಳುತ್ತಿವೆ. ಸೊಹ್ರಾಬುದ್ದೀನ್‌ನ ಹಣ ವಸೂಲಿ ದಂಧೆಯಲ್ಲಿ ಪೊಲೀಸರೂ ಭಾಗಿಯಾಗಿದ್ದರೆ? ಬಿಲ್ಡರ್‌ಗಳಿಗೆ ದುಃಸ್ವಪ್ನವಾಗಿದ್ದ ಸೊಹ್ರಾಬುದ್ದೀನ್‌ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದಕ್ಕೆ ಪ್ರತಿಯಾಗಿ ಅಮಿತ್ ಶಾ ಉದ್ಯಮಿಗಳಲ್ಲಿ ಹಣ ಕೇಳಿದರೆ? ಇವೆಲ್ಲ ಉತ್ತರ ಸಿಗಬೇಕಾದ ಪ್ರಶ್ನೆಗಳೇ. ಖಂಡಿತ ಕಾನೂನು ಎಲ್ಲಕ್ಕಿಂತ ಎತ್ತರದಲ್ಲಿರುವಂಥದ್ದು. ಅದೇ ಅಂತಿಮ. ಹೀಗಾಗಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿಯೂ ಅದರ ಎಲ್ಲ ಆಯಾಮಗಳ ಬಗ್ಗೆ ತನಿಖೆ ಆಗಬೇಕು.

ಆದರೆ….

2005ರಲ್ಲಿ ಹತ್ಯೆಯಾದ ಸೊಹ್ರಾಬುದ್ದೀನ್ ಬಗ್ಗೆ  ಕಾಂಗ್ರೆಸ್ ಏಕೆ ಈ ಪರಿ ಸಂತಾಪ ಪಡುತ್ತಿದೆ? ಸೊಹ್ರಾಬುದ್ದೀನ್ ಎಂಬ ಹಾರ್ಡ್‌ಕೋರ್ ಕ್ರಿಮಿನಲ್ ಸತ್ತರೆ ಕಣ್ಣೀರು ಸುರಿಸಬೇಕಾಗಿದ್ದು ಯಾರ ಪ್ರಾರಬ್ಧ? ಅಷ್ಟಕ್ಕೂ ಆತ ಯಾರು?

ಆತನೊಬ್ಬ ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್. ಸೊಹ್ರಾ ಬುದ್ದೀನ್‌ನ ಕ್ರಿಮಿನಲ್ ಹಿನ್ನೆಲೆ ಸಂದೇಹಗಳಿಗೆ ಜಾಗವೇ ಇಲ್ಲದಂತೆ ಸಾಬೀತಾಗಿದೆ. ಆತನ ಬೆನ್ನ ಹಿಂದೆ ಬಿದ್ದಿದ್ದು ಬರಿ ಗುಜರಾತ್ ಮಾತ್ರವಲ್ಲ. ಆಂಧ್ರ ಪ್ರದೇಶವೂ ಈತನನ್ನು ಹಣಿಯುವ ಕಾರ್‍ಯದಲ್ಲಿ ತೊಡಗಿಸಿಕೊಂಡಿತ್ತು. ಹಾಗಂತ, ಅಲ್ಲಿಯ ಗೃಹ ಸಚಿವ ಯಾರಾಗಿದ್ದ ಎಂದು ಕೇಳದಿರಿ ಜೋಕೆ. ಅಲ್ಲಿರುವುದು ಕಾಂಗ್ರೆಸ್ ಸರಕಾರ! ಇನ್ನು, ಮಧ್ಯ ಪ್ರದೇಶಕ್ಕೂ ಸೊಹ್ರಾಬುದ್ದೀನ್ ವಾಂಟೆಡ್ ಕ್ರಿಮಿನಲ್. ಒಟ್ಟಿನಲ್ಲಿ ಸೊಹ್ರಾಬುದ್ದೀನ್ ಎಂಬಾತ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಈ ನಾಲ್ಕೂ ರಾಜ್ಯಗಳಿಗೆ ಬೇಕಾಗಿದ್ದ. ಅಹಮದಾಬಾದ್‌ನ ಕ್ರೈಂ ಬ್ರಾಂಚ್ ನಡೆಸಿದ್ದ ದಾಳಿ ಒಂದರಲ್ಲೇ 24 ಎಕೆ-56 ರೈಫಲ್‌ಗಳನ್ನು, 27 ಹ್ಯಾಂಡ್ ಗ್ರೆನೇಡ್‌ಗಳನ್ನು, 5250 ಕಾಡತೂಸುಗಳನ್ನು ಹಾಗೂ 81 ಮ್ಯಾಗಜಿನ್‌ಗಳನ್ನೂ ಸೊಹ್ರಾಬುದ್ದೀನ್‌ನ ಮಧ್ಯಪ್ರದೇಶದ ಒಡೆತನದ ಜಾಗದಿಂದ ವಶಪಡಿಸಿಕೊಳ್ಳಲಾಗಿತ್ತು ಅಂದರೆ ಅಪರಾಧ ಪ್ರಪಂಚದಲ್ಲಿ ಆತನ ವ್ಯಾಪ್ತಿಯನ್ನು ಊಹಿಸಿಕೊಳ್ಳಬಹುದು. ಮಾಫಿಯಾ ಡಾನ್‌ಗಳಾದ ದಾವೂದ್ ಇಬ್ರಾಹಿಂ ಹಾಗೂ ದಿವಂಗತ ಅಬ್ದುಲ್ ಲತೀಫ್ ಜತೆಯೂ ಆತನ ಲಿಂಕ್‌ಗಳಿದ್ದವು ಎಂಬ ಗುರುತರ ಆರೋಪವಿತ್ತು. ಗುಜರಾತ್‌ನಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಬಾಬರಿ ಮಸೀದಿ ಧ್ವಂಸದ ನಂತರ ಒಟ್ಟುಗೂಡಿದ ಸೊಹ್ರಾಬುದ್ದೀನ್ ಹಾಗೂ ಇತರ ಆರೋಪಿಗಳು ದೇಶದ ವಿರುದ್ಧ ಸಮರಕ್ಕೆ ಯೋಜನೆ ಹೂಡಿದ್ದರು. ಇದಕ್ಕಾಗಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಿತರಿಸುವ ಕಾರ್‍ಯದಲ್ಲಿದ್ದ ಈ ಗುಂಪು 1993ರ ಜಗನ್ನಾಥ ಯಾತ್ರೆಯ ಮೇಲೆ ದಾಳಿ ಮಾಡುವ ಗುರಿ ಹೊಂದಿತ್ತು. 1995ರಲ್ಲಿ ಸೊಹ್ರಾಬುದ್ದೀನ್ ಬಂಧನಕ್ಕೆ ಒಳಗಾದ. ಈ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಜತೆ ಇತರ 60 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿತ್ತು. ಇವರ ಪೈಕಿ ಬಂಧನಕ್ಕೆ ಸಿಗದವರು ಎಂದರೆ ದಾವೂದ್ ಇಬ್ರಾಹಿಂ, ಮಮ್ಮು ಮಿಯಾ ಪಂಜು ಮಿಯಾ, ಫಾರೂಕ್, ಅಹಮದ್ ಮುಂತಾದವರಿದ್ದರು. ಇವರಲ್ಲಿ ಬಹಳಷ್ಟು ಮಂದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ವಿಚಾರಣೆಯ ವೇಳೆ ಸೊಹ್ರಾಬುದ್ದೀನ್ ತನ್ನ ದುಷ್ಕೃತ್ಯದ ಯೋಜನೆಗಳನ್ನು ಒಪ್ಪಿಕೊಂಡಿದ್ದಲ್ಲದೇ, ಆರೋಪಪಟ್ಟಿಯಲ್ಲಿ ಹೆಸರಿಸಲಾದವರೊಂದಿಗೆ ತನ್ನ ಸಂಬಂಧ ಇರುವುದಾಗಿಯೂ ತಪ್ಪೊಪ್ಪಿಗೆ ಕೊಟ್ಟಿದ್ದ. ಐದು ವರ್ಷದ ಕಠಿಣ ಜೈಲುಶಿಕ್ಷೆ ಹಾಗೂ ದಂಡ ನೀಡಿ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.

ಅಹಮದಾಬಾದ್‌ನ ವೇಜಾಲ್ಪುರ ಪೊಲೀಸ್ ಠಾಣೆಯಲ್ಲೇ ದಾಖಲಾದ ಇನ್ನೊಂದು ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಹಾಗೂ ಅವನ ಸಹಚರರ ಮೇಲೆ, ಸಾಲ ಚುಕ್ತಾ ಮಾಡಲು ವಿಫಲನಾದವನಿಂದ ಹಣ ವಸೂಲಿ ಮಾಡಲು ಶಸ್ತ್ರಾಸ್ತ್ರ ಗಳೊಂದಿಗೆ ನಿಯುಕ್ತಿಗೊಂಡಿದ್ದ ಆರೋಪವಿದೆ. ಈ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಜತೆಯಲ್ಲಿ ಆರೋಪ ಹೊತ್ತಿರುವ ಶರೀಫ್‌ಖಾನ್ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ. ಛೋಟಾ ದಾವೂದ್ ಎಂದೇ ಕುಖ್ಯಾತನಾಗಿರುವ ಅವನಿಗೆ ಇಂಟರ್‌ಪೋಲ್‌ನ ರೆಡ್‌ಕಾರ್ನರ್ ನೋಟಿಸ್ ಜಾರಿಯಾಗಿದೆ. ಶಹಾಪುರ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಕಾಯಿದೆ ಅಡಿ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಹಾಗೂ ಇನ್ನೂ 32 ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಸಾಗಿಸುವುದಕ್ಕೆ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ದಾಖಲೆಗಳನ್ನು ಫೋರ್ಜರಿ ಮಾಡಿದ ಆರೋಪವಿದೆ. ಸೊಹ್ರಾಬುದ್ದೀನ್ ಜತೆ ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ರಸೂಲ್ ಪಾರ್ಟಿ ಸಹ ದೇಶದಿಂದ ಪರಾರಿಯಾಗಿದ್ದು, ಆತನಿಗೂ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಈ ಪ್ರಕರಣದಲ್ಲಿ ಸೆಶನ್ ಕೋರ್ಟ್ ಆರೋಪಿಗಳನ್ನು ದೋಷಮುಕ್ತರೆಂದಿತ್ತು. ಇದರ ವಿರುದ್ಧ ರಾಜ್ಯ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಹೋದ ನಂತರ ವಿಚಾರಣೆಯಿನ್ನೂ ಪ್ರಗತಿಯಲ್ಲಿತ್ತು.

ಅಹಮದಾಬಾದ್‌ನ ನವರಂಗಪುರ ಪೊಲೀಸ್ ಠಾಣೆ ಯಲ್ಲಿ ಸೋಹ್ರಾಬುದ್ದೀನ್ ಹಾಗೂ ಇನ್ನೂ ೯ ಮಂದಿ ವಿರುದ್ಧ ಪಾಪ್ಯುಲರ್ ಕನ್‌ಸ್ಟ್ರಕ್ಷನ್ ಲಿಮಿಟೆಡ್‌ನಲ್ಲಿ ಗುಂಡು ಹಾರಿಸಿದ ಪ್ರಕರಣ ದಾಖಲಾಗಿದೆ. ಆಸ್ತಿ ವಿವಾದವೊಂದರಲ್ಲಿ ಮಧ್ಯಪ್ರವೇಶಿಸಿ ಬಗೆ ಹರಿಸಲು ಶಸ್ತ್ರ ಬಲ ತೋರಿಸಿದರು ಎಂಬ ಆಪಾದನೆ ಇದೆ. ಈ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಬಂಧನಕ್ಕೆ ಒಳಗಾಗಿದ್ದ. ಈತನ ಸಹೋದರ ನಿಯಾಬುದ್ದೀನ್ ಮೇಲೂ ಈ ಪ್ರಕರಣದ ಸಂಬಂಧ ಆರೋಪಪಟ್ಟಿ ದಾಖಲಾಗಿದೆ. ಇವೆಲ್ಲ ಗುಜರಾತ್‌ನಲ್ಲಿ ದಾಖಲಾದ ಪ್ರಕರಣಗಳಲ್ಲವೇ ಎಂದು ಅಲ್ಲೂ ರಾಜಕಿಯ ವಾಸನೆ ಹುಡುಕುವವರಿಗೆ ಬೇರೆ ಪ್ರಕರಣಗಳ ವಿರುದ್ಧವೂ ಗಮನವಹಿಸಬಹುದು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೊಹ್ರಾಬುದ್ದೀನ್ ಹಾಗೂ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ೮.೧೧.೨೦೦೦ದಂದು ಮೋಟಾರ್ ಸೈಕಲ್ ಮೇಲಿದ್ದ ಈ ಆರೋಪಿಗಳು ಓಲ್ಡ್ ಎಸ್‌ಟಿ ಸ್ಟ್ಯಾಂಡ್ ಬಳಿ ಗುಂಡು ಹಾರಿಸಿ ಇಬ್ಬರನ್ನು ಗಾಯಗೊಳಿಸಿದ ಪ್ರಕರಣವಿದು. ಇದರಲ್ಲಿ ಸೊಹ್ರಾಬುದ್ದೀನ್‌ನನ್ನು ತಲೆಮರೆಸಿಕೊಂಡವನು ಎಂದು ಪರಿಗಣಿಸಲಾಗಿತ್ತು.

ಮಹಾರಾಷ್ಟ್ರದಲ್ಲೇ ಇನ್ನೂ ವಿಚಾರಣೆಯಲ್ಲಿರುವ ಇನ್ನೊಂದು ಪ್ರಕರಣದಲ್ಲಿ ಗೋಪಾಲ್ ತುಕಾರಾಮ ಬಡಿವಾಡೇಕರ ಎಂಬುವರ ಕೊಲೆಗೆ ಸಂಚು ರೂಪಿಸಿದ ಆರೋಪ ಸೊಹ್ರಾಬುದ್ದೀನ್ ಹಾಗೂ ಇನ್ನೂ ಐವರ ಮೇಲೆ ಇದೆ. ಈ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಬಂಧನಕ್ಕೊಳಗಾದ. ಉಳಿದ ಐವರು ತಲೆಮರೆಸಿಕೊಂಡರು. ಪ್ರಕರಣವಿನ್ನೂ ವಿಚಾರಣೆಯ ಹಾದಿಯಲ್ಲಿದೆ. ಈಗ ಮಧ್ಯ ಪ್ರದೇಶದಲ್ಲಿ ಸೊಹ್ರಾಬುದ್ದೀನ್ ಹೆಜ್ಜೆ ಜಾಡು ಸ್ವಲ್ಪ ನೋಡೋಣ. ಉಜ್ಜಯಿನಿಯ ನಾಗಡಾ ಪೊಲೀಸ್ ಠಾಣೆಯಲ್ಲೂ ಸೊಹ್ರಾ ಬುದ್ದೀನ್ ವಿರುದ್ಧ ಆರೋಪ ದಾಖಲಾಗಿದೆ. ಶಸ್ತ್ರಗಳನ್ನು ಮಾರುವಾಗ ಸೊಹ್ರಾಬುದ್ದೀನ್ ಸಿಕ್ಕುಬಿದ್ದಿದ್ದ. ಸ್ಥಳೀಯ ಪೊಲೀಸರು ಹಾಗೂ ಸಿಬಿಐಗಳೆರಡೂ ಈ ಪ್ರಕರಣದ ತನಿಖೆ ಮಾಡುತ್ತಿವೆ. ಈತನಿಂದ ಶಸ್ತ್ರಗಳನ್ನು ವಶಪಡಿಸಿಕೊಂಡು ಉಜ್ಜಯಿನಿಯ ಮಹೀದ್‌ಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪ್ರಾರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಈಗ ಸಿಬಿಐ ಅದನ್ನು ಕೈಗೆತ್ತಿಕೊಂಡಿದೆ. 6.7.1999ರಂದು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸೊಹ್ರಾಬುದ್ದೀನ್ ವಿರುದ್ಧ ಮಧ್ಯಪ್ರದೇಶ ಸರಕಾರ ಪ್ರಕರಣ ದಾಖಲಿಸಿ ಬಂಧಿಸಿತ್ತು. ಜಾಮೀನಿನ ಮೇಲೆ ಹೊರಬಂದ ಸೊಹ್ರಾಬುದ್ದೀನ್ ನಂತರ ಸಿಗಲಿಲ್ಲ. ರಾಜಸ್ಥಾನದ ಪೊಲೀಸ್ ದಾಖಲೆಗಳನ್ನೂ ತಡವಿಬಿಡೋಣ. ಉದಯಪುರ ಪಟ್ಟಣದ ಹೃದಯಭಾಗದಲ್ಲೇ ನಡೆಯುತ್ತಿದ್ದ ಜಾತ್ರೆಯೊಂದರಲ್ಲಿ ಸೊಹ್ರಾಬುದ್ದೀನ್ ಹಾಗೂ ಇನ್ನು ಆರು ಮಂದಿ ಗುಂಡಿನ ಚಕಮಕಿ ಆರಂಭಿಸಿ ಹಮೀದ್ ಲಾತಾ ಎಂಬುವರನ್ನು ಹತ್ಯೆ ಮಾಡಿದರು. ಈ ಸಂಬಂಧ ೨೦೦೪ರಲ್ಲೇ ಹಾಥಿಪೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಹ್ರಾಬುದ್ದೀನ್‌ನನ್ನು ಹಿಡಿದುಕೊಟ್ಟರೆ 25 ಸಾವಿರ ಇನಾಮು ಎಂಬ ಸುತ್ತೋಲೆ ರಾಜಸ್ಥಾನದ ಎಲ್ಲ ಠಾಣೆಗಳಿಗೂ ರವಾನೆಯಾಗಿತ್ತು.

ಇಂತಹ ವ್ಯಕ್ತಿಯನ್ನು ಠಾಣೆಗೆ ಎಳೆದು ತಂದು, ಪೆಟ್ಟಿ ಕೇಸ್ ಹಾಕಿ ಬಿಡುಗಡೆ ಮಾಡಬೇಕಿತ್ತೆ? ಅಥವಾ ಜೈಲಿಗಟ್ಟಿ ಕಸಬ್‌ಗೆ ನೀಡಿದಂತೆ ಬಿರಿಯಾನಿ ತಿನ್ನಿಸಬೇಕಿತ್ತೆ?

ಹಾರ್ಡ್‌ಕೋರ್ ಕ್ರಿಮಿನಲ್‌ಗಳನ್ನು ಕೋರ್ಟು-ಕಚೇರಿಯ ಜಂಜಾಟ ಬೇಡ ಎಂದು ಎನ್‌ಕೌಂಟರ್ ಮಾಡುವುದು ಸರ್ವೇ ಸಾಮಾನ್ಯ. 2005, ನವೆಂಬರ್ 26ರಂದು ಗುಜರಾತ್-ರಾಜಸ್ಥಾನ ಪೊಲೀಸರು ಮಾಡಿದ್ದೂ ಅದನ್ನೇ. ಆದರೆ ಕಳೆದ ವಿಧಾನಸಭೆ ಚುನಾವಣೆ ವೇಳೆ, ‘ಮೌತ್ ಕಾ ಸೌದಾಗರ್’ ಎಂದು ಸೋನಿಯಾ ಗಾಂಧಿ, ಮೋದಿಯವರನ್ನು ಜರಿದಾಗಲೇ ಕಾಂಗ್ರೆಸ್‌ನ ಸೊಹ್ರಾಬುದ್ದೀನ್ ಪ್ರೇಮವೂ ಜಾಹೀರಾಗಿತ್ತು. ಗುಜರಾತ್ ಗಲಭೆಯಲ್ಲಿ ಆದ ಸಾವುಗಳಿಗೆ ನರೇಂದ್ರ ಮೋದಿಯವರನ್ನು ಹೊಣೆಯಾಗಿಸಿ ಆರೋಪಿಸಿದ್ದರ ಜತೆಗೆ ‘ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್’ ಬಗ್ಗೆಯೂ ಸೋನಿಯಾ ಬೊಬ್ಬೆ ಹಾಕಿದ್ದರು. ನಂತರ ರ್‍ಯಾಲಿಯೊಂದರಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನರ ಬಾಯಿಂದಲೇ ಸೋನಿಯಾ ಗಾಂಧಿಗೆ ಉತ್ತರ ದೊರಕಿಸಿದ್ದರು. ತುಂಬಿದ ಸಭೆಯಲ್ಲಿ ಅವರು ಕೇಳಿದ್ದು- ‘ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಸೊಹ್ರಾಬುದ್ದೀನ್ ಶೇಖ್‌ನನ್ನು ಏನು ಮಾಡಬೇಕಿತ್ತು?’. ಅದಕ್ಕೆ ಜನಸ್ತೋಮ ‘ಕೊಂದು ಹಾಕ್ಬೇಕು’ ಅಂತ ಅರಚಿಕೊಂಡಿತ್ತು. ‘ನಮ್ಮ ಪೊಲೀಸರು ಮಾಡಿದ್ದು ಅದನ್ನೇ’ ಎಂದಿದ್ದರು ಮೋದಿ.

ಅವರ ಮಾತಿನಲ್ಲಿ ತರ್ಕವಿಲ್ಲವೆ?

ದೇಶಾದ್ಯಂತ ಇದುವರೆಗೂ 1700 ಜನರನ್ನು ಎನ್‌ಕೌಂಟರ್‌ನಲ್ಲಿ ಕೊಲೆಗೈಯ್ಯಲಾಗಿದೆ. 1699 ಪ್ರಕರಣಗಳಿಗೆ ಸಿಗದ ಪ್ರಾಮುಖ್ಯತೆ ಸೊಹ್ರಾಬುದ್ದೀನ್‌ಗೇಕೆ ಸಿಗುತ್ತಿದೆ? ಕಳೆದ 20 ವರ್ಷಗಳಲ್ಲಿ ಗುಜರಾತ್‌ನಲ್ಲಿ ನಡೆದ ಯಾವ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಗೆಲುವು ದೊರೆತಿಲ್ಲ. ಒಂದು ಮುನ್ಸಿಪಾಲಿಟಿ ಚುನಾವಣೆಯಲ್ಲಿ ಗೆಲುವು ಸಾಧಿಸಲೂ ಅದರಿಂದಾಗಿಲ್ಲ. ಇತ್ತ ಪುತ್ರ ರಾಹುಲ್ ಗಾಂಧಿಯವರನ್ನು 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿರುವ ಸೋನಿಯಾ ಗಾಂಧಿಯವರಿಗೆ ಇರುವ ಒಂದೇ ಹೆದರಿಕೆ ಹಾಗೂ ಸವಾಲೆಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. 2014ರೊಳಗೆ ಹೇಗಾದರೂ ಮಾಡಿ ಮೋದಿಯವರನ್ನು ಕೋರ್ಟ್ ತೀರ್ಪುಗಳ ಮೂಲಕ ಚುನಾವಣಾ ಕಣದಿಂದಲೇ ದೂರ ಮಾಡುವ ಹುನ್ನಾರದ ಅಂಗವೇ ಅಮಿತ್ ಶಾ ಬಂಧನ. ಅವರ ಕಡೆಯ ಯಾವ ವಿವರಣೆಗಳನ್ನೂ ಕೇಳದೆ ಜೈಲಿಗಟ್ಟಿರುವ ಧಾವಂತದಲ್ಲೇ ಸಿಬಿಐ ಅನ್ನು ಸೋನಿಯಾ ಗಾಂಧಿ ಆಡಿಸುತ್ತಿರುವ ಸ್ಪಷ್ಟ ಚಿತ್ರಣ ಅನಾವರಣವಾಗುತ್ತದೆ. ಕಠೋರ ವ್ಯಂಗ್ಯ ಏನೆಂದರೆ ಅಮಿತ್ ಶಾ ಮೇಲೆ ಈ ಪಾಟಿ ಮುರಿದುಕೊಂಡು ಬಿದ್ದಿರುವ ಸಿಬಿಐ, ಮೂರುಸಾವಿರ ಸಿಖ್ಖರನ್ನು ಮಾರಣಹೋಮ ಮಾಡಿದ 1984ರ ಹತ್ಯಾಕಾಂಡದ ಪ್ರಮುಖ ಆರೋಪಿ ಜಗದೀಶ್ ಟೈಟ್ಲರ್ ವಿರುದ್ಧ ತನ್ನ ಬಳಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ ಎಂದಿದೆ! ಇದೇ ಸಿಬಿಐ ತೀರ ಇತ್ತಿತ್ತಲಾಗಿ ಲಾಲು ಹಾಗೂ ಮಾಯಾವತಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಕೈಬಿಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ. ಖೋತಾ ನಿರ್ಣಯದಿಂದ ಯುಪಿಎ ಸರಕಾರವನ್ನು ಪಾರು ಮಾಡಲೆಂದೇ ಈ ನಡೆ ಅನುಸರಿಸಿದ್ದೂ ಖುಲ್ಲಂಖುಲ್ಲಾ ಸಂಗತಿಯೇ. ಮತ್ತೆ ಮಾಯಾವತಿ ಹಾಗೂ ಲಾಲುರನ್ನು ಬಾಯಿಮುಚ್ಚಿಸಬೇಕಾದ ಪ್ರಸಂಗ ಬಂದರೆ ಇದೇ ಪ್ರಕರಣವನ್ನು ಸಿಬಿಐ ಪುನಃ ಕೆದಕುತ್ತದೆ ಎಂಬುದೂ ಸ್ಪಷ್ಟ. ಹೀಗಿರುವಾಗ ಸಿಬಿಐ ಸಂಸ್ಥೆಯನ್ನು ನಾವು ದುರು ಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಸುಳ್ಳೆ ನಗೆಯಾಡಿ ದರೆ ನಂಬುವರಾರು? ಸೊಹ್ರಾಬುದ್ದೀನ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದು ಸುಪ್ರೀಂಕೋರ್ಟೇ ಎಂಬುದು ನಿಜ ಸಂಗತಿಯಾದರೂ, ಅದನ್ನು ಅಸ್ತ್ರದಂತೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಎಂಬುದೂ ಅಷ್ಟೇ ಸತ್ಯ.

ಇದನ್ನೆಲ್ಲಾ ಗಮನಿಸಿದಾಗ ಸಿಬಿಐ ಅನ್ನು ‘ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’ ಎನ್ನದೆ ಇರಲಾದೀತೆ?

ನರೇಂದ್ರ ಮೋದಿಯವರನ್ನು ಹಣಿಯಲು ಮುಂದಾಗುವ ಮೊದಲು ಒಂಬೈನೂರು ಕೋಟಿ ಮೇವು ಹಗರಣ ಮಾಡಿದ ಲಾಲು ಯಾದವ್, ತಾಜ್ ಕಾರಿಡಾರ್ ಹಗರಣದ ರೂವಾರಿ ಮಾಯಾವತಿ, ಶಿಬುಸೊರೇನ್, ಸಜ್ಜನ್ ಕುಮಾರ್ ಅವರನ್ನು ಏಕೆ ಕಟಕಟೆಗೆ ತಂದು ನಿಲ್ಲಿಸಬಾರದು? ಭಾರತದ ಇತಿಹಾಸದಲ್ಲೇ ಅತಿದೊಡ್ಡ ಟೆಲಿಕಾಂ ಹಗರಣವನ್ನು ಸೃಷ್ಟಿಸಿರುವ ಡಿ. ರಾಜಾ ಅವರನ್ನು ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿ ಮನಮೋಹನ್‌ಸಿಂಗ್ ಯಾವ ಮುಖ ಇಟ್ಟುಕೊಂಡು ಸಿಬಿಐಗೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ? ಮುಂಬೈ ದಾಳಿಯ ಪಾತಕಿ ಕಸಬ್‌ಗೆ ಸರಕಾರಿ ಖರ್ಚಿನಲ್ಲಿ ವಕೀಲರನ್ನು ನೇಮಿಸಿಕೊಟ್ಟು ಸಮರ್ಥಿಸಿಕೊಳ್ಳಲು ಅವಕಾಶ ಮಾಡಿಕೊಡುವ ಕಾಂಗ್ರೆಸ್ ಸರಕಾರ, ಅಮಿತ್ ಶಾಗೆ ಸಮನ್ಸ್ ನೀಡಿದ ೨ ಗಂಟೆಗಳಲ್ಲಿ ಸಿಬಿಐ ಮುಂದೆ ಹಾಜರಾಗಬೇಕೆಂದು ತಾಕೀತು ಹಾಕಿದ್ದೇಕೆ? 168 ಜನರನ್ನು ಕೊಂದ ಪಾಕಿಸ್ತಾನದ ಪಾತಕಿಗೆ ಸಿಗುವ ಕಾನೂನು ನೆರವು, ಕಾಲಾವಕಾಶ, ಕೇವಲ ಆರೋಪ ಹೊತ್ತಿರುವ ಒಬ್ಬ ಭಾರತೀಯ ಪ್ರಜೆ ಹಾಗೂ ರಾಜ್ಯವೊಂದರ ಗೃಹ ಸಚಿವರಿಗೆ ಏಕೆ ಸಿಗುವುದಿಲ್ಲ?

ಅದಿರಲಿ, ಸೊಹ್ರಾಬುದ್ದೀನ್ ಬಗ್ಗೆ ಇಷ್ಟೆಲ್ಲಾ ಅನುಕಂಪ ತೋರಿ ಸಲು ಸೊಹ್ರಾಬುದ್ದೀನ್ ಪ್ರಸ್ತುತ ಕಾಂಗ್ರೆಸ್‌ನ ಸುಭಾಷ್ ಚಂದ್ರ ಬೋಸಾ?!

24 Responses to “ಸೊಹ್ರಾಬುದ್ದೀನ್‌ನೇನು ಕಾಂಗ್ರೆಸ್‌ನ ಸುಭಾಷ್‌ಚಂದ್ರ ಬೋಸಾ?”

 1. sunaath says:

  ಸೊಹ್ರಾಬುದ್ದೀನನನ್ನು ಪೋಲೀಸರು ಮುಗಿಸಿದರು ಎಂದು ದಯವಿಟ್ಟು ಹೇಳಬೇಡಿ. ಅದರರ್ಥ fake encounter ಎಂದೇ ಆಗುತ್ತದೆ. ಹಾಗೆ ಅನ್ನುವದು pre-judging ಆಗುತ್ತದೆ. ಇದು ಒಂದು ನಿಜವಾದ encounter death ಆಗಿರಬಹುದಲ್ಲವೆ?

 2. adarsh says:

  everybody watch sohrubbuddin ki kahani in you tube…..this congress is making india weak

 3. Rathish Acharya says:

  Perfect article, must reach more people, please publish in english

 4. vijay says:

  Soniya madam nan obbale jani antha ankondiddale.. adre avlige desha prema nishte swalpanadru edya (little 0.00001%)….? adre nam modi sir mattu advani sir avalige takka pata kalisuttare adu ellarigu gottiediyo elvo gottilla adre ondu dina ellarigu gottagli……..

 5. Prashanth Shetty says:

  These informations are very much look like “Prastutha Vidhyamanakke Kannadi Hididanthe”…….Superb..

 6. manoj says:

  pratapji,

  Good atricle. But not use in so-called buddijivis.

  but tital is bad. becoz that crinimal to compare to the great bose?????????

  Please change title ” sohrabuddinenu cogressda sambadiya???? (adyakashara) aliyana?????????

 7. HAGADURAPPA says:

  VERY GOOD…..

 8. Sumanth Sharma says:

  ಎಲ್ಲಾ ನಾಮಪದ’ದ ಮಹಿಮೆ

  ಅಫ್ಜ಼ಲ್-ಗುರು, ಸೊಹ್ರಾಬುದ್ದೀನ್, ಬಾಟ್ಲಾ’ಹೌಸ್, ಆಜ಼ಮಗಡ್ ತನಿಖೆಗಳು, ಇವೆಲ್ಲಾದನ್ನುವೆ ಒ೦ದೇ ದಾರದಲ್ಲಿ ಪೋಣಿಸಿನೋಡಿ !!

 9. ಭಾರತೀಯ says:

  ಇಷ್ಟು ಸತ್ಯಗಳು ಕಣ್ಮುಂದೆ ಇರೋವಾಗ ನಮ್ಮ ಕೈಲಿ ಏನೂ ಮಾಡೋಕೆ ಅಗ್ತಿಲ್ಲವಲ್ಲ ಅನ್ನೋದೇ ದುಃಖಕರ ಸಂಗತಿ….. ಲೇಖನಿ ಖಡ್ಗಕ್ಕಿಂತ ಹರಿತ ಆದರೆ ಏನೂ ಪ್ರಯೋಜನ ಆಗ್ತಾ ಇಲ್ವಲ್ಲ….

 10. Vinay says:

  U have written what we feel….I cant say anything else….

 11. Girish Kumar says:

  Dear Pratap,

  When this will comes to end? When will Mr.Modiji become as our Prime minister? When will this terrorism in our india come to end?

  Waiting for that movement

  Girish Kumar.c
  Mangalore

 12. ಬೆಳ್ಳಾಲ ಗೋಪಿನಾಥ ರಾವ್ says:

  ಪ್ರತಾಪ್ ನಿಮ್ಮ ಬೆತ್ತಲೆ ಜಗತ್ತು ಲೇಖನ ನಾನು ಮೊದಲಿನಿಂದಲೂ ಓದುತ್ತಿರುವೆನು.
  ಚೆನ್ನಾಗಿ ನಿರ್ಭಿಡೆಯಿಂದ ಬರೆಯುತ್ತಿರುವಿರಿ. ಧನ್ಯವಾದಗಳು
  ಇಷ್ಟು ಬರೆದರೂ ಅವರಿಗೆ ಬುದ್ದಿ ಬಂದೀತಾ?

 13. narahari says:

  until congress is there in the country….there is no end for this stupidity……good article sir…..hats of to your bravery………

 14. ಜೀತದಾಳಿನ ರಕ್ತ ನಮ್ಮ ಕಾಂಗ್ರೆಸ್ಸಿಗರ ದೇಹದಲ್ಲಿ ಹರಿಯುತ್ತಿದೆ, ಬೂಟ್ ಪಾಲಿಶ್ ಮಾಡಲು ಮಾತ್ರ ಲಾಯಕ್ಕಾದ ರಾಜಕಾರಣಿಗಳು ಇವರು.ಎಲ್ಲಿಯವರೆಗೆ ನಮ್ಮ ಜನಗಳು ಇಂತಹವರನ್ನು ಚುನಾಯಿಸುತ್ತಾರೋ ಅಲ್ಲಿಯವರೆಗೂ ಸತ್ಯಕ್ಕೆ ಜಯವಿಲ್ಲ.

 15. ಸೊಹ್ರಾಬುದ್ದೀನನ ಕೊಲೆಯನ್ನು ಸಮರ್ಥಿಸಿಕೊಳ್ಳಲಾಗದು.
  ಆತ ಅಪರಾಧಿ ಎನ್ನುವುದು ನಿಜವಾದರೂ, ರಾಜಕೀಯ ಮತ್ತು ವ್ಯಾವಹಾರಿಕ ಕಾರಣಗಳಿಗಾಗಿ ಕೊಲೆಮಾಡಿರುವುದು ಸಮರ್ಥನೀಯ ಅಲ್ಲವೇ ಅಲ್ಲ. ಹಾಗೊಮ್ಮೆ, ಆತನ ಕ್ರಿಮಿನಲ್ ಹಿನ್ನೆಲೆಯನ್ನು ನೀಡಿ ಸಮರ್ಥಿಸಿಕೊಂಡರೂ, ಆತನ ಪತ್ನಿಯ ಕೊಲೆಯನ್ನು ಸಮರ್ಥಿಸಿಕೊಳ್ಳಲಾದೀತೇ? ತಾವು ಆತನ ಪತ್ನಿಯ ಕೊಲೆಯ ಬಗ್ಗೆ ಏನನ್ನುತ್ತೀರಿ ಪ್ರತಾಪ್?

 16. Pinky says:

  Sir, Your articles are at the ‘Topic’. And truely concerned……..!

 17. deeps says:

  poor pratap…
  why your friend n d koushik revealed the stuff in different and opposite way in your own paper? u have given details about sohrabuddin but not about amit sha.does he is a frank and honest politician?he dont have any links with land and real estate mafia in gujarat?dont create confusions. i was in gujarat as an officer for 6 years.i know better about gujarat when it was burning and aftermath.how hindu rationalists(vhp,rss,bhajarangadal) behaved..modi fixed his persona after the riots. and stop supporting any politicians though modi is good leader.wat is your answer for his wife’s murder… she was also a terrorist…????????????????????????!!!!!!!! i am observing ur articles.

 18. puneeth says:

  ಪ್ರತಾಪ್ ನಿಮ್ಮ ಬೆತ್ತಲೆ ಜಗತ್ತು ಲೇಖನ ನಾನು ಮೊದಲಿನಿಂದಲೂ ಓದುತ್ತಿರುವೆನು.
  ಚೆನ್ನಾಗಿ ನಿರ್ಭಿಡೆಯಿಂದ ಬರೆಯುತ್ತಿರುವಿರಿ. ಧನ್ಯವಾದಗಳು
  ಇಷ್ಟು ಬರೆದರೂ ಅವರಿಗೆ ಬುದ್ದಿ ಬಂದೀತಾ?

 19. vinay says:

  Eternal truth.

  Congress loves muslim People.

 20. r g patil says:

  article is very good. congress is not honest to country congress must think country first

 21. chetan says:

  Good article….
  I dont no why congress is making drama over such silly matter as national tragedy? but rather congress has treated many national tragedies as silly matters. i think if congress stands in front of a MIRROR, it will feel ashamed itself as if wearing nothing and tearing others shirts. Congress is treating all of us as only VOTERS.
  AND PRATAP YOU KEEP ON WRITING SUCH ARTICLES. THESE MAY BE LIKE SMALL PINCHINGS OVER CONGRESS.BUT I AM SURE ONE FINE DAY THESE PINCHINGS WILL CAUSE CONGRESS TO BLEED

 22. Gangaraju says:

  namma desha uddara agalla
  Janare olleyavarige otu kodi

 23. THOMAS says:

  Interview of a Christian Evangelist in India

  By: Bandyopadhyay Arindam
  The world today could have been a much better place for all of us, had we all refrained from trying to prove the superiority of our own religion………..

  This is an interview of “Father Johnson’ after his award by the Government of India for his exemplary work in India in enlightening the people in the path of the ONLY God. Father Johnson returned to the USA after 10 years of service, to uplift the people of India in the name of God. The interview was taken in July 2005 by a journalist in Houston, USA……

  Welcome home Father. You have been in India for 10 years, where “our mission’ is still going on. Tell me Father, how is India?

  India is a fascinating country, a land of contrasts. Modern India is the largest democracy, the budding economic superpower, with the second-largest pool of scientists and engineers in the world. India is also the only surviving ancient civilization with over one sixth of the world population. At one time, not so long ago, when Europe was in the “dark ages’ and America was not even “discovered’, India was a far advanced and developed country with a contribution of over 25% of world GDP till the 17th century and far advanced in all aspects of life, be it knowledge, philosophy, science, mathematics, arts, astronomy or navigation.

  Ella Wheeler Wilcox, (1850-1919), American poet and journalist, wrote “India – The land of Vedas, the remarkable works contain not only religious ideas for a perfect life, but also facts which science has proved true. Electricity, radium, electronics, airship, all were known to the seers who founded the Vedas.”

  Dick Teresi, American author of “Lost Discoveries’ mentioned “Some one thousand years before Aristotle, the Vedic people asserted that the earth was round and circled the sun….Two thousand years before Pythagoras, philosophers in northern India had understood that gravitation held the solar system together, and that therefore the sun, the most massive object, had to be at its center….Twenty-four centuries before Isaac Newton, the Hindu Rig-Veda asserted that gravitation held the universe together….. The Sanskrit speaking people subscribed to the idea of a spherical earth in an era when the Greeks believed in a flat one…..The Indians of the fifth century A.D. calculated the age of the earth as 4.3 billion years; scientists in 19th century England were convinced it was 100 million years…”

  Despite all its riches, history says that India never invaded any country. On the contrary, India has been repeatedly assaulted and conquered by numerous invaders and has been ruled by “foreigners’, first the Muslims and then the British for over a thousand years. India, before the advent of the British rulers, was a rich and prosperous country.
  Rev. Jabez T. Sunderland (1842-1936), Unitarian minister and reformer, wrote that “…when the British first appeared on the scene, India was one of the richest countries of the world; indeed, it was her great riches that attracted the British to her shores. For 2,500 years before the British came on the scene and robbed her of her freedom, India was self-ruling and one of the most influential and illustrious nations of the world ….. This wealth was created by the Hindus’ vast and varied industries.”

  What about Hinduism as a religion?

  Hinduism has a deep philosophical and spiritual heritage that has repeatedly mesmerized the world including western scientists, leaders and philosophers. Despite propaganda to the contrary, Hindus, like us, believes in one Supreme God but they do so in many forms, that helps to develop personalized relations. Hinduism is the oldest major religion in the earth with 900 million followers. Unlike monotheistic institutionalized, religions like Judaism, Islam or Christianity, it is not based on any single prophet or scripture, but allows its followers all the freedom to pursue God and Truth in their own way, while living harmoniously with all creation.

  We know that the Hindus are tolerant of other religions. Recently, UNESCO pointed out that out of 128 countries where Jews lived before Israel was created, only one, India, did not persecute them and allowed them to prosper and practice Judaism in peace. Similarly the Zoroastrians, when driven out of Persia by Islam were given shelter by the Hindus in India and still coexist in India peacefully. Very recently, the Dalai Lama, driven from Buddhist Tibet, has been accepted with open arms. Such is the ethos of Hinduism and India.

  I have heard that Mark Twain once said that “In religion all other countries are paupers; India is the only millionaire’. I have also read Arnold Toynbee’s writing “…at the religious level, India has not been a recipient; she has been a giver. About half the total number of the living, higher religions are of Indian origin’. What do you think about it?

  We know India gave birth to religions like Hinduism, Buddhism, Sikhism, and Jainism. Hinduism, though the predominant religion, has, to quote Aldous Huxley, “never been a persecuting faith, have preached almost no holy wars and have refrained from that proselytizing religious imperialism which has gone hand in hand with political and economic oppression of colored people.’

  What many do not know and I will not elaborate further for obvious reasons, is that there are researchers who think that the teachings of Jesus Christ have something to do with the ancient wisdom of Vedas. The Hindu concepts of “karma’, and “reincarnation’, which are part of the New Age Movement that we see today, were not unknown to Jesus.

  Then Father, why do we need to convert people in India?

  You see, we in the western world, have the “white man’s burden’ of civilizing the rest of the world. We also have the need and desire to spread the message of Christ, since we believe that it is the ONLY way to salvation and all other nonbelievers will go to hell. The faith in Christianity is being eroded in Europe and America. That is why our Pope on his visit to India said, “Just as in the first millennium, the Cross was planted on the soil of Europe, and in the second on that of the Americas and Africa, we can pray that in the third Christian millennium a great harvest of faith will be reaped in this vast and vital continent.’

  Why do you target India?

  India is the right country because Hindu Indians are generally peace-loving tolerant, law abiding people who are truthful and virtuous. India”s devotion to being good rather than being clever comes nearer the heart of a true civilization, said W. J. Grant, in his book,
  “The spirit of India’. The unsuspecting Indians have always welcomed everybody on their shore and still keep on doing so. You cannot say the same about a Muslim country or of communist China. You see Hindus are such naive – they go out of their way to say that “all religions are same – they all lead to God’. Christians and for that matter, no other religion, says that.

  Where does your resource come from?

  There are five major aid-giving countries, viz., USA, Germany, Britain, Italy and the Netherlands. According to the available data, in the last decade alone, foreign aid organizations received more than 2.5 billion dollars. This is only official statistics. According to the record and report of the Ministry of Home Affairs, Government of India, the statistics about the foreign aid being received by Indian Non Government Organizations shows that 80% of it is meant only for the Christian organizations that have been buying their ways into the Indian society and converting unsuspecting people under the guise of social service.

  How powerful is Christianity in India?

  Oh, though we are only 2.4% of the population officially, we have a large control over the country because of our economic invasion. You see, the present leader of the main political party-The Congress Party of India is a Roman Catholic with close contact with the Vatican. There are Christian Chief ministers in 5 out of 29 states. Because of the British rule of India, we have a large section of the leaders of India who look up to us. Believe me, we are the second largest land owners in India. We own and control 80% of the Indian media and newspapers .The best example is how these media made a huge hue and cry over the Gujarat riots. Riots have happened everywhere in India. But in case of Gujarat riots, the reports were deliberately inflated, stories were built up and a systematic, planned malicious and slanderous campaign was launched against the NDA government.

  Inspite of the fact that India took giant leaps in progress in every field and there was a surge in National pride and self confidence for every Indian during their tenure,India’s Most Popular Government led by India’s Finest Prime Minister Atal Bihari Vajpayee was made to suffer shock defeat. We overtly or covertly have alliance with key political associations. So it is very easy for us to influence the right people.

  You must have a very organized system?

  Yes, we do. Have you heard about the Joshua Project? It identifies and highlights the people groups of the world that have the least exposure to the Gospel and the least Christian presence and shares this information to encourage pioneer church-planting movements among every ethnic group. The Joshua Project has identified the North India Hindi belt as “the core of the core of the core” because of its population density (40% of the Indian population- the states of Bihar, Madhya Pradesh, Rajasthan and Uttar Pradesh lies in this region); it is the religious hub of India; and it has the smallest Christian presence in India. Thus detailed plans have been drawn up to target India’s 75,000 Pin Codes.

  The Seventh Day Adventists owes its Indian success to Canadian evangelist Ron Watts, President for the South Asian Division. When he entered India, in 1997, the Adventist Church had 225,000 members after 103 years of operations. In five years, he took it to 700,000.

  Some methods used include the 10-Village and the 25-Village Programs, which involve five sets of laymen, under guidance from a regular pastor, who identify 10 or 25 villages in close proximity. Once the villages were selected, the teams would approach the leaders of each village and invite them to send two leaders to a 10-day seminar at a nearby resort, at the organization’s expense. It is before no time that the local leaders will then start working for our faith and organization. In 1998, there were seventeen 10-Village Programs and 9,337 were baptized. In 1999, forty programs were held and nearly 40,000 people baptized.
  Under the Christian Andhra Pradesh Chief Minister Y. Samuel Rajashekar Reddy, the Adventists shifted to a 50-village plan. They began baptizing at the rate of 10,000 persons per month and have increased it to 5,000 persons per day all over India.

  The US-based Maranatha Volunteers International provides buildings for the Seventh-day Adventist Church. They are committed to build 750 churches in 2 years in India. The Oregon based, Fjarli family have a goal to build 1000 churches at a rate of 1 per day.

  How do you carry out conversion attempts?

  You see the local people are so simple and naïve that they do not have any clue as what out motive or means are. We target mostly the poor, illiterate, tribal people because they are the easiest to convert. We do that by various means – we establish schools, hospitals that overtly or subtly promote our faith, we allure them with money or goods to the needy when they convert, we “stage’ miracle cures, we use our influence on the media, we use our experts in propaganda, we promote the influential people and so on. We use the money sent to us by unsuspecting religious and faithful Christians from all over the world. We have numerous NGO and AID organizations to funnel the money into the country. There are a great number of missionaries of various denominations who are working there, all literally competing for the most number of converts. The Southern Baptists alone are a group that has nearly 100,000 career missionaries in North India, all working to spread our “good word.”

  We convince the “natives’ by our appearances and even use their own culture. A native converted person will continue to use his Hindu name so as not to alienate himself. Some of the numerous Catholic priests in Southern India dress like “sannyasis’ (monks), and call their organizations “ashramas’ (hermitage). This is to make Christianity more similar to the Vedic traditions. Bharat Natyam, the classical dance of India, is also taught in the Christian schools, but with Christian symbols and meanings replacing the Vedic. This is all in the attempt to actively sway Hindus over to Christianity. The Evangelical Church of India (ECI), established in 1954, targets the slums, scheduled castes and scheduled tribes, in cities and villages. Its logo depicts a cross struck deep in a lotus, the seat of Hindu divinity.

  Is the so called caste system in India an advantage?

  The “Caste-ism in India’ is a boon to us. Though Varna or caste was once an essential part of the culture, based on occupation and vocational skills, which kept the civilization going for over 5000 years, caste-ism is a degenerated socio-political system now that has been declared illegal. However it is one big weapon against Hinduism. We have learnt from the colonial British that it is very easy to divide the population on the basis of caste and religion based politics and we use it to our own interest to the maximum. We join the anti-Hindu forces and help to keep the stigma of caste-ism alive for our own benefit. We target the “untouchables’ (the unprivileged people, that has so marvelously crafted to be a result of the Hindu religion and not the social system) and convert them in the lure of “liberating’ them. However I must confess that we maintain their “untouchability’ by not allowing them to mix with the general Christians, maintaining separate entry to churches and even giving them separate churches and cemeteries.

  We also use opportunities that God gives us. During natural disasters like floods, earthquakes and the recent Tsunami, taking advantage of the need, we were able to convert successfully entire low caste villages in Tamil Nadu to Christianity with the lure of money and aid.

  How successful are you in your conversion attempts.

  Oh we are doing a good job. The Northeast Indian states like Assam, Nagaland, and Manipur, have witnessed a surge of nearly 200% in their Christian population in the past 25 years. Their grasp is so strong now that practicing Hinduism is forbidden in some areas. Hindus can no longer do worship or “puja’ in the open because of our influence.
  In another northeast state, Tripura, where there were no Christians at the time of India’s independence, 55 years ago, there are now over 120,000 today. The figures are even more striking in Arunachal Pradesh, where there were only 1710 Christians in 1961, but over 1 million today, along with over 780 churches. In the southern state of Andhra Pradesh, churches are coming-up every day in far flung villages and there is an attempt to set-up one near Tirupati, the world famous Hindu temple. Many of the North-East separatist movements, such as the Mizo or the Bodos, are not only Christian dominated, but also sometimes function with the covert backing of the missionaries. Christian Nagaland terrorists have been killing non-Christians for decades on end. More than 20,000 people have lost their lives to insurgency in Assam and Manipur in the past two decades. We understand that there are some social problems that crept up – the northeast states are the highest in India in terms of drugs and AIDS related problem – but we accept that as “casualties of war” –that should not deter us from our goal.

  Do you face any resistance?

  Of course we do. But we brand any resistance as “Hindu fundamentalism or militancy” and the media and our favorite leaders take care of the rest. We have set the mind of the unsuspecting population in a way, that whenever any of our people are harassed, attacked or killed, from any reason including their own faults, the blame automatically goes to these so called “Hindu fundamentalist and Communal Elements” and even though almost all of these instances are later proved to have nothing to do with these Hindu groups, the initial hue and cry that is raised makes sure the memories persist in the mind of the populace and the sympathy stays with us. There are instances when nuns have been proved to be raped by Christians, but the blames continues to stay with the Hindus.

  Is there any legal barrier?

  Yes there are some rules and laws that sometimes impair our activities. The Indian Supreme Court had declared that: “The right to propagate religion does not mean the right to convert… Conversion done under allurement, use of force and fraud in which the poverty or ignorance of the individual is taken advantage of, is not only undemocratic but also unconstitutional…Respect for all religions is the foundation of secularism whereas the seeds of conversion lie in religious intolerance.”. Anti conversion laws have been passed in various states. But as I said, we have our ways.

  Sometimes the law does get us though. We had some instances where members of our faith have been convicted with resultant imprisonment or expulsion. As in churches all over the world, some clergymen have been penalized for cases of sexual exploitation, including pedophilia. But that does not deter us from our goal and our almighty Lord takes care of our soul.

  How satisfied are you with the progress of the missions?

  It is really satisfying. We find enormous pleasure in converting the Hindu “pagans’. However I wish we could do more. I wish I could say like St Francis Xavier, during the Goa Inquisition in 1560, “When I have finished baptizing the people, I order them to destroy the huts in which they keep their idols; and I have them break the statues of their idols into tiny pieces, since they are now Christians. I could never come to an end describing to you the great consolation which fills my soul when I see idols being destroyed by the hands of those who had been idolaters.”

  Thank you, Father for your time and honesty.
  Thank you, my son. God bless you.

  Epilogue

  “Christianity offers nothing that is not already available somewhere in the many forms of Hinduism. Hinduism never rejected the teachings of Jesus. Those who have converted either agreed with a gun pressed at their skulls as in Goa, or because it provided an escape from caste tyranny, as well as a guaranteed professional advancement. Through its Vedic legacy, Hinduism respects all faiths. It clearly states that God is one, but has many forms”.
  (Paul William Roberts, author of, “Empire of the Soul: Some journeys in India’)

 24. Guruprasad says:

  congress navarana hinge bitre ,only sohraddin obne alla nale kal nanmaga KASaB nu releas madtara…. namage manmohansingh avra talelnt bagge hemme ide,adre avara ee baalangositanada bagge nachike agutte iverana nam PRADHANI anta,ega kashmirana bharatadinda seperate madlike hogtidare…,plz buck up BHARATEEYARE namagiruvdu onde “HINDU”STHANA… adanna adannage ulislikke pana todona…start to QUIT CONGRESS from our BHARTH plz…. hatsaf pratap sir///….