Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇದೇನು ಚಿದಂಬರ ರಹಸ್ಯವಲ್ಲ!

ಇದೇನು ಚಿದಂಬರ ರಹಸ್ಯವಲ್ಲ!

ತಮಿಳುನಾಡಿನ ಶಿವಗಂಗಾದಲ್ಲಿ ಪಿ. ಚಿದಂಬರಂಗೆ ಸೋಲು!!

2009, ಮೇ 16. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್‌ನ ಏಕಾಂಗಿ ಬಲಾಬಲವೇ 200 ದಾಟುವುದು ಖಚಿತವಾಗಿತ್ತು, ಯುಪಿಎ ಮತ್ತೆ ಸರಕಾರ ರಚಿಸುವುದೂ ಅಷ್ಟೇ ಸ್ಪಷ್ಟವಾಗಿತ್ತು. ಮೂರೂವರೆ ಗಂಟೆಗೆ ಆಘಾತಕಾರಿ ಸುದ್ದಿ-ಪಿ. ಚಿದಂಬರಂಗೆ ಸೋಲು. ಅವರ ವಿರುದ್ಧ ಎಐಎಡಿಎಂಕೆ ಅಭ್ಯರ್ಥಿ ರಾಜಾ ಕಣ್ಣಪ್ಪನ್ ಮೂರೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬ ಸುದ್ದಿ, ಚಾನೆಲ್‌ಗಳಲ್ಲಿ ಬಿತ್ತರವೂ ಆಯಿತು. ಈ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ಪ್ರತಿಕ್ರಿಯೆಯನ್ನೂ ನೀಡಿತು-ಚಿದಂಬರಂ ಮಂತ್ರಿಯಾಗಿ ಮುಂದುವರಿಯಲಿದ್ದಾರೆ!!

ಅದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹ ವಿಚಾರವಾಗಿತ್ತು. ಆನಂತರ ನಡೆದ ಮರು ಎಣಿಕೆಯಲ್ಲಿ ವಿವಾದಾತ್ಮಕ ರೀತಿಯಲ್ಲಿ ಚಿದಂಬರಂ ಗೆದ್ದರು ಎಂಬುದು ಬೇರೆ ಮಾತು. ಆದರೆ ಕಾಂಗ್ರೆಸ್‌ನಲ್ಲಿ ಸಾಮಾನ್ಯವಾಗಿ ನಿಷ್ಠೆಗೆ ಮಾತ್ರ ಸಿಗುವ ಕೊಡುಗೆಗೆ ಭಾಜನರಾಗಲು ಪಳನಿಯಪ್ಪನ್ ಚಿದಂಬರಂ ಅವರು ಪ್ರಣಬ್ ಮುಖರ್ಜಿಯವರಂತೆ ಎಂದೂ ವಿಧೇಯ ಕಾಂಗ್ರೆಸ್ಸಿಗರಾಗಿದ್ದವರಲ್ಲ. 1945, ಸೆಪ್ಟೆಂಬರ್ 16ರಂದು ಜನಿಸಿದ ಪಿ. ಚಿದಂಬರಂ ವೃತ್ತಿಯಿಂದ ವಕೀಲರು, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. 1969ರಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡ ಅವರು ದೇವರಲ್ಲಿ ನಂಬಿಕೆ ಹೊಂದಿದವರಲ್ಲ. ಆರಂಭದಲ್ಲಿ ಎಡಪಂಥೀಯ ಕಾರ್ಮಿಕ ಒಕ್ಕೂಟಗಳ ಪರವಾದಿಯಾಗಿದ್ದವರು. ಅಂತಹ ವ್ಯಕ್ತಿ ೧೯೮೪ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಗಂಗಾದಲ್ಲಿ ಗೆಲುವು ಸಾಧಿಸುವ ಮೂಲಕ ಲೋಕಸಭೆ ಪ್ರವೇಶಿಸಿದರು. ರಾಜೀವ್ ಗಾಂಧಿಯವರ ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಿತು. ಅದರ ಲಾಭ ಚಿದಂಬರಂಗೂ ದೊರೆಯಿತು. ಮೊದಲ ಬಾರಿಗೇ ಸಂಪುಟದಲ್ಲಿ ವಾಣಿಜ್ಯ ಖಾತೆ ಉಪಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1991ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಪ್ರಧಾನಿ ನರಸಿಂಹರಾವ್ ಅವರು ಚಿದಂಬರಂಗೆ ಸ್ವತಂತ್ರ ಕಾರ್ಯ ನಿರ್ವಹಣೆ ಹೊಂದಿದ ವಾಣಿಜ್ಯ ಖಾತೆ ರಾಜ್ಯ ಸಚಿವನ ಸ್ಥಾನ ನೀಡಿದರು. ಹೀಗೆ ಕಾಂಗ್ರೆಸ್‌ನಿಂದಾಗಿ ರಾಜಕೀಯವಾಗಿ ಮೇಲೆ ಬಂದ ಚಿದಂಬರಂ ಕಾಂಗ್ರೆಸ್‌ಗೆ ನಿಷ್ಠರಾಗಿ ಉಳಿಯಲಿಲ್ಲ. 1996ರಲ್ಲಿ ತಮಿಳುನಾಡು ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಿ ಜಿ.ಕೆ. ಮೂಪನಾರ್ ಅವರು ತಮಿಳು ಮಾನಿಲಾ ಕಾಂಗ್ರೆಸ್(ಟಿಎಂಸಿ) ಕಟ್ಟಿದಾಗ ಚಿದಂಬರಂ ಮೂಪನಾರ್ ಜತೆ ಹೋದರು. ರಜನಿಕಾಂತ್ ನೀಡಿದ ಸಾರ್ವಜನಿಕ ಬೆಂಬಲದ ಅಲೆಯಲ್ಲಿ ಡಿಎಂಕೆ-ಟಿಎಂಸಿ ರಾಜ್ಯದ 39 ಸ್ಥಾನಗಳನ್ನೂ ಗೆದ್ದುಕೊಂಡು ಕೇಂದ್ರದಲ್ಲಿ ಎಚ್.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರಕಾರ ರಚನೆಯಾದಾಗ ಚಿದಂಬರಂ ಹಣಕಾಸು ಸಚಿವರಾದರು. ಸಂಯುಕ್ತ ರಂಗ ಸರಕಾರ ಅಧಿಕಾರದಲ್ಲಿದ್ದಿದ್ದು ಎರಡೇ ವರ್ಷವಾದರೂ ರಾಷ್ಟ್ರದ ಗಮನ ಸೆಳೆಯಲು ಚಿದಂಬರಂಗೆ ಅವಕಾಶವಂತೂ ಸಿಕ್ಕಿತು. ಇತ್ತ ಅವರು ತಮಿಳು ಮಾನಿಲಾ ಕಾಂಗ್ರೆಸ್‌ನಲ್ಲೂ ಹೆಚ್ಚು ಕಾಲ ಉಳಿಯಲಿಲ್ಲ. 2001ರಲ್ಲಿ ಟಿಎಂಸಿ ಬಿಟ್ಟು ‘ಕಾಂಗ್ರೆಸ್ ಜನನಾಯಕ ಪಿರವೈ’ ಎಂಬ ಪ್ರಾದೇಶಿಕ ಪಕ್ಷವನ್ನು ತಾವೇ ಕಟ್ಟಿಕೊಂಡರು.

ಇಲ್ಲೆಲ್ಲೂ ಚಿದಂಬರಂ ಅವರಲ್ಲಿ ಒಂದು ಪಕ್ಷಕ್ಕೆ ನಿಷ್ಠೆ, ವಿಧೇಯತೆಗಳು ಕಂಡುಬರುವುದಿಲ್ಲ.

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಅಧಿಕಾರವನ್ನು ಪಡೆದುಕೊಂಡಿದ್ದಾರೆಯೇ ಹೊರತು ಒಂದಕ್ಕೆ ಅಂಟಿಕೊಂಡಿದ್ದಿಲ್ಲ. ಇಂತಹ ವ್ಯಕ್ತಿ ತಮ್ಮ ಹೊಸ ಪಕ್ಷಕ್ಕೆ ಯಾವ ಭವಿಷ್ಯವೂ ಇಲ್ಲ ಎಂದು ಗೊತ್ತಾದ ಕೂಡಲೇ (2004ರ ಚುನಾವಣೆಗೂ ಸ್ವಲ್ಪ ಮೊದಲು) ಕಾಂಗ್ರೆಸ್ ಜತೆ ವಿಲೀನ ಮಾಡಿಕೊಂಡರು, ಮತ್ತೆ ಶಿವಗಂಗಾದಿಂದ ಆರಿಸಿ ಬಂದರು. ೨೦೦೪ರಲ್ಲಿ ರಚನೆಯಾದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಚಿದಂಬರಂಗೆ ಹಣಕಾಸು ಸಚಿವನ ಸ್ಥಾನ ನೀಡಿತು. ಅದೇನು ಸಾಮಾನ್ಯ ಖಾತೆಯಲ್ಲ. ದುಡ್ಡು ಇರುವುದು, ದುಡ್ಡು ಹರಿದಾಡುವುದೇ ಆ ಖಾತೆ ಮೂಲಕ. ಅಂತಹ ಖಾತೆಯನ್ನು ಚಿದಂಬರಂಗೆ ನೀಡಿದ್ದೇಕೆ?

ಅವರ ನಿಷ್ಠೆಯ ಬಗ್ಗೆ ಅನುಮಾನಪಡಲು ಅವಕಾಶವಿದ್ದರೂ ಸಾಮರ್ಥ್ಯದ ಬಗ್ಗೆ ಶಂಕೆಗಳಿರಲಿಲ್ಲ. 1996ರಲ್ಲಿ ಯುನೈಟೆಡ್ ಫ್ರಂಟ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ತೆರಿಗೆ ಕಳ್ಳರಿಗಾಗಿ ಜಾರಿಗೆ ತಂದಿದ್ದ Voluntary disclosure of income scheme”(VDIS) ವಿವಾದಕ್ಕೆಡೆಯಾದರೂ ಅವರಿಗೆ ಅರ್ಥವ್ಯವಸ್ಥೆಯನ್ನು ಮುನ್ನಡೆಸುವ ತಾಕತ್ತಿದೆ ಎಂಬುದು ಸ್ಪಷ್ಟವಾಗಿತ್ತು. ಅವರ ministerial skills ಬಗ್ಗೆ ಯಾರೂ ಚಕಾರವೆತ್ತಲು ಸಾಧ್ಯವಿರಲಿಲ್ಲ. ಈ ಮಧ್ಯೆ, ಮುಂಬೈ ದಾಳಿಯ ನಂತರ ಚಿದಂಬರಂಗೆ ಮತ್ತೊಂದು ಮಹತ್ವದ ಗೃಹಖಾತೆಯನ್ನು ನೀಡಲಾಯಿತು. ಅರ್ಥವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದ ವ್ಯಕ್ತಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಮಂತ್ರಿಯಾಗಿದ್ದ ಗೃಹ ಖಾತೆಯನ್ನು ನಿಭಾಯಿಸುವ ತಾಕತ್ತಿದೆಯೇ?!

ಈ ರೀತಿಯಾದ ಪ್ರಶ್ನೆಗಳೆದ್ದಿದ್ದವು.

ಅಷ್ಟಕ್ಕೂ ಅವರು ಗೃಹ ಸಚಿವರಾದಾಗ ಎಂತಹ ಸನ್ನಿವೇಶವಿತ್ತು ನೆನಪಿಸಿಕೊಳ್ಳಿ? ಮುಂಬೈ ದಾಳಿಯ ನಂತರ ಇಡೀ ದೇಶವೇ ಕಾಂಗ್ರೆಸ್ ಸರಕಾರಕ್ಕೆ ಥೂ, ಚೀ ಎನ್ನಲಾರಂಭಿಸಿತ್ತು. ರಾಷ್ಟ್ರ ರಕ್ಷಣೆ ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಎಂದು ಜನ ತೀರ್ಮಾನಿಸಿ ಬಿಟ್ಟಿದ್ದರು. ಆಗಿನ ಗೃಹ ಸಚಿವ ಶಿವರಾಜ್ ಪಾಟೀಲರ ಹಳಸಲು ಹೇಳಿಕೆಗಳನ್ನು ಕೇಳಿ ಜನ ಬೇಸತ್ತಿದ್ದರು. ಅಂತಹ ಸಂದರ್ಭದಲ್ಲಿ ಗೃಹಖಾತೆಯನ್ನು(2008, ನವೆಂಬರ್ 30) ವಹಿಸಿಕೊಂಡ ಚಿದಂಬರಂ ಬಗ್ಗೆಯೂ ಜನರಲ್ಲಿ ಯಾವ ಭರವಸೆಗಳಿರಲಿಲ್ಲ. ಯಾರು ತಾನೇ ಭರವಸೆ ಇಡಲು ಸಾಧ್ಯವಿತ್ತು ಹೇಳಿ? ಆದರೆ ಅವರು ಗೃಹಸಚಿವರಾಗಿ 15 ತಿಂಗಳ ನಂತರ ಯಾವ ಸನ್ನಿವೇಶ ವಿದೆ?

“ಆಪರೇಶನ್ ಗ್ರಿನ್ ಹಂಟ್ ನಿಲ್ಲಿಸಿ, ನಾವು ಮಾತುಕತೆಗೆ ಸಿದ್ಧ”!!

“ಫೆಬ್ರವರಿ 25ರಿಂದ ಮೇ 7ರವರೆಗೂ ಸುಮಾರು 72 ದಿನಗಳ ಕಾಲ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ನಾವು ಅದಕ್ಕೆ ಸ್ಪಂದಿಸುತ್ತೇವೆ. ಸರಕಾರ ಹಿಂಸೆಯನ್ನು ಕೈಬಿಟ್ಟರೆ ಬಂಡುಕೋರರು(ನಕ್ಸಲರು) ಶಸ್ತ್ರತ್ಯಾಗ ಮಾಡಲು ಸಿದ್ಧರಿದ್ದೇವೆ”. 2010, ಫೆಬ್ರವರಿ 22ರಂದು ಮಾವೋವಾದಿ ನಾಯಕ ಕಿಶನ್‌ಜಿ ನೀಡಿದ ಹೇಳಿಕೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಿತ್ತು. ನಕ್ಸಲರು ನಿರ್ದಯತೆಗೆ ಹೆಸರಾದವರು. ಮುಯ್ಯಿಗೆ ಮುಯ್ಯಿ(tit-for-tat) ಎಂಬ ಧೋರಣೆ ಅನುಸರಿಸುವವರು. ಅಂತಹ ರಕ್ತಪಿಪಾಸುಗಳ ಬಾಯಲ್ಲಿ ಶಸ್ತ್ರತ್ಯಾಗದ ಮಾತೇ? ಹೌದು, ಚಿದಂಬರಂ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಛತ್ತೀಸ್‌ಗಢ, ಜಾರ್ಖಂಡ್, ಆಂಧ್ರಪ್ರದೇಶ, ಮಹಾರಾಷ್ಟ್ರ ಮುಂತಾದ ಮಧ್ಯ ಭಾರತದಲ್ಲಿ “ಆಪರೇಶನ್ ಗ್ರೀನ್ ಹಂಟ್” ಎಂಬ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಳೆದ ಆರೇಳು ತಿಂಗಳಿನಿಂದಲೂ ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಅರೆಸೇನಾ ಪಡೆಗಳು ಹಾಗೂ ರಾಜ್ಯ ಪೊಲೀಸ್ ಪಡೆ ಸಂಯುಕ್ತವಾಗಿ ಇಂಥದ್ದೊಂದು ಕಾರ್ಯಾಚರಣೆಯನ್ನು ಗೌಪ್ಯವಾಗಿ ನಡೆಸುತ್ತಿವೆ ಎಂಬ ವರದಿಗಳು ಬರುತ್ತಿವೆ. ಇತ್ತ ಅರೆಸೇನೆ ಹಾಗೂ ಪೊಲೀಸ್ ತಾಣಗಳ ಮೇಲೆ ನಕ್ಸಲರು ದಾಳಿ ಮಾಡಿ ಕೊಲೆಗೈಯ್ಯುವ ಮೂಲಕ ಏನೋ ಸಮರ ನಡೆಯುತ್ತಿದೆ ಎಂಬುದನ್ನೂ ಜಗಜ್ಜಾಹೀರುಗೊಳಿಸುತ್ತಿದ್ದಾರೆ. ಆದರೆ ಚಿದಂಬರಂ ಅವರನ್ನು ಪ್ರಶ್ನಿಸಿದರೆ, “ಆಪರೇಶನ್ ಗ್ರೀನ್ ಹಂಟ್ ಎನ್ನುವುದು ಮಾಧ್ಯಮಗಳ ಸೃಷ್ಟಿ(Media invention)” ಎನ್ನುತ್ತಾರೆ! ಎಷ್ಟು ಜನ ನಕ್ಸಲರನ್ನು ಹತ್ಯೆಗೈಯ್ಯಲಾಯಿತು ಎಂಬುದನ್ನೂ ಬಹಿರಂಗ ಮಾಡುತ್ತಿಲ್ಲ. ಛತ್ತೀಸ್‌ಗಢದ ಬಸ್ತರ್‌ನಲ್ಲಿ ತೀವ್ರ ಕದನ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ, CRPF, ITBP, BSF ಹಾಗೂ SSB  ಸೇರಿದಂತೆ 60 ಸಾವಿರ ಯೋಧರು ಹೋರಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆಪರೇಶನ್ ಗ್ರೀನ್ ಹಂಟ್ 2009 ಜುಲೈನಲ್ಲೇ ಆರಂಭವಾಗಿದೆ ಎಂಬ ಅನುಮಾನಗಳೂ ಇವೆ. ಆದರೆ ಚಿದಂಬರಂ ಯಾವುದನ್ನೂ ಬಾಯಿಬಿಟ್ಟು ಹೇಳುತ್ತಿಲ್ಲ. ಮಾವೋವಾದಿಗಳ ಕದನ ವಿರಾಮ, ಶಸ್ತ್ರತ್ಯಾಗ ಕೊಡುಗೆಯ ಬಗ್ಗೆ ಗಮನ ಸೆಳೆದಾಗ “ವಿಚಿತ್ರ” ಎಂದಷ್ಟೇ ಅವರು ಪ್ರತಿಕ್ರಿಯಿಸಿದ್ದಾರೆ. ಅದರ ಬಗ್ಗೆ ತೀರಾ ಪಟ್ಟು ಹಿಡಿದು ಪ್ರಶ್ನಿಸಿದರೆ- “We will abjure violence”(ನಾವು ಹಿಂಸೆಯನ್ನು ಕೈಬಿಡುತ್ತೇವೆ) ಎಂಬ ನಾಲ್ಕು ಪದಗಳನ್ನು ನಕ್ಸಲರು ಪೂರ್ವಷರತ್ತಿಲ್ಲದೆ ಸ್ಪಷ್ಟವಾಗಿ ಹೇಳಬೇಕು ಎನ್ನುತ್ತಾರೆ. ಮತ್ತೂ ಕೇಳಿದರೆ, “ಶಸ್ತ್ರತ್ಯಾಗದ ಆಹ್ವಾನ ನೀಡಿ 3 ಗಂಟೆ ಕಳೆಯುವಷ್ಟರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪಡೆಯ(CRPF) ನೆಲೆ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ. ಇದಕ್ಕೇನೆನ್ನುತ್ತೀರಿ?” ಎಂದು ಮರುಪ್ರಶ್ನೆಹಾಕುವ ಮೂಲಕ ನಿರುತ್ತರರನ್ನಾಗಿ ಮಾಡುತ್ತಾರೆ.

ನಿಮಗನಿಸಬಹುದು, ಆಪರೇಶನ್ ಗ್ರೀನ್ ಹಂಟ್ ನಡೆಯುತ್ತಿದೆ ಎಂದಾದ ಮೇಲೆ ಅದನ್ನು ಒಪ್ಪಿಕೊಳ್ಳುವುದಕ್ಕೇಕೆ ಅಂಜಿಕೆ?

ಮೊನ್ನೆ ಫೆಬ್ರವರಿ ೨೨ರಂದು ಕದನ ವಿರಾಮ ಕೊಡುಗೆಯ ಘೋಷಣೆ ಮಾಡಿದ ಕಿಶನ್‌ಜಿ, “ಜನರ ಅಭ್ಯುದಯದ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಎಲ್ಲ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ಸಂಘಟನೆಗಳು ನಮ್ಮ ಪರವಾಗಿ ಸರಕಾರದ ಜತೆ ಮಧ್ಯಸ್ಥಿಕೆ ವಹಿಸಬೇಕು” ಎಂದು ಕರೆಕೊಟ್ಟಿದ್ದಾರೆ. ಚಿದಂಬರಂ ಏಕೆ ಬಾಯಿಬಿಡುತ್ತಿಲ್ಲ ಎಂದರೆ ಪಟ್ಟಣಗಳಲ್ಲಿರುವ, ಕಾಲೇಜು, ವಿವಿಗಳಲ್ಲಿ ಸಭ್ಯ ನಾಗರಿಕರ ಸೋಗಿನಲ್ಲಿರುವ Intellectual Naxalಗಳ ಬೊಬ್ಬೆ, ಅಪಾಯದ ಅರಿವು ಅವರಿಗಿದೆ. ಇವತ್ತು ನಕ್ಸಲರು ಶಸ್ತ್ರತ್ಯಾಗ, ಶಾಂತಿಯ ಮಾತನಾಡುತ್ತಿದ್ದಾರೆ ಎಂದರೆ ಚಿದಂಬರಂ ಸದ್ದಿಲ್ಲದೆ ರಾಷ್ಟ್ರವಿರೋಧಿಗಳನ್ನು ಹೇಗೆ ಮಟ್ಟಹಾಕುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಕದನ ವಿರಾಮವೆಂಬ ಹುಸಿ ಕೊಡುಗೆಗೂ ಅವರು ಸೊಪ್ಪುಹಾಕುತ್ತಿಲ್ಲ. ಅವರನ್ನು ಕಟ್ಟಾ ವಿರೋಧಿಗಳೂ ಮೆಚ್ಚಬೇಕಾಗಿ ಬಂದಿದೆ. ಕಾಂಗ್ರೆಸ್ಸನ್ನು “Soft on terror” ಎಂದು ಸದಾ ಹಂಗಿಸುವ, ಜರಿಯುವ, ಟೀಕಿಸುವ ಬಿಜೆಪಿಯ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚವ್ಹಾಣ್, ರಮಣ್‌ಸಿಂಗ್ ಅವರೇ “swift and positive” ಎಂದು ಹೊಗಳಿದ್ದಾರೆ. ಫೆಬ್ರವರಿ ೮ರಂದು ಆಂತರಿಕ ಭದ್ರತೆ ವಿಚಾರದ ಮೇಲೆ ದಿಲ್ಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ, “ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಸಹಾಯ ಕೇಳಿದರೆ ಗೃಹ ಸಚಿವ ಚಿದಂಬರಂ ಹಾಗೂ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ತ್ವರಿತ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ” ಎಂದು ಬಿಜೆಪಿ ಮುಖ್ಯಮಂತ್ರಿಗಳೇ ಮೆಚ್ಚುಗೆ ಸೂಚಿಸಿದ್ದಾರೆ.

“ಬಾಂಗ್ಲಾದೇಶಿ ಅತಿಕ್ರಮಣಕಾರರಿಗೆ ಯಾವುದೇ ಕಾರಣಕ್ಕೂ ವಿಶಿಷ್ಟ ಗುರುತಿನ ಚೀಟಿ(Unique ID cards) ಸಿಗದಂತೆ ನೋಡಿಕೊಳ್ಳಬೇಕು. ಭಾರತ-ಬಾಂಗ್ಲಾ ಗಡಿಯಲ್ಲಿ ಮಾತ್ರ ಬೇಲಿ ಇಲ್ಲದ ಕಾರಣ ಕಾನೂನುಬಾಹಿರ ಅತಿಕ್ರಮಣಕಾರರ ಸಮಸ್ಯೆ ಅಲ್ಲಿ ಹೆಚ್ಚಿದೆ. ಅವರಿಗೆ ಗುರುತಿನ ಚೀಟಿ ಸಿಗದಂತೆ ಕೇಂದ್ರ ಮುಂಜಾಗ್ರತೆ ತೆಗೆದುಕೊಳ್ಳಬೇಕು” ಎಂದು ಮಾರ್ಚ್ ೪ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅತಿಕ್ರಮಣಕಾರರು ಯಾರು, ಯಾವ ಧರ್ಮೀಯರು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಇಷ್ಟಾಗಿಯೂ ವೋಟ್‌ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಚಿದಂಬರಂ ಇಂತಹ ಗಟ್ಟಿ ಹೇಳಿಕೆ ನೀಡಿದ್ದಾರೆ. ಅವರೆಂದೂ ತಮ್ಮನ್ನು ಸರ್ದಾರ್ ಪಟೇಲ್ ಎಂದು ಕರೆದುಕೊಳ್ಳಲಿಲ್ಲ, ಹಾಗೆಂದು ಹಿಂಬಾಲಕರಿಂದಲೂ ಕರೆಸಿಕೊಳ್ಳುತ್ತಿಲ್ಲ. ಆದರೆ ಪಟೇಲರ ದೃಢತೆ ಅವರ ಮಾತು, ಕೃತಿಯಲ್ಲಿದೆ.

Yes, He is the most professional Home minister India ever had.

ಅವರು ಭಾವುಕರಾಗಿ ಮಾತನಾಡುವುದೂ ಇಲ್ಲ, ನಡೆದು ಕೊಳ್ಳುವುದಿಲ್ಲ. ಎಲ್ಲದರಲ್ಲೂ ವೃತ್ತಿಪರತೆಯನ್ನು ಕಾಣಬಹುದು. ಮುಂಬೈ ದಾಳಿಯ ಮುಖ್ಯ ಪಿತೂರಿದಾರ ಡೆವಿಡ್ ಹೆಡ್ಲಿಯ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ನ್ಯಾಯಾಲಯಕ್ಕೆ ಅಮೆರಿಕ ಸರಕಾರ ದಾಖಲೆ ಸಲ್ಲಿಸುವುದಾಗಿ ಹೇಳಿದ್ದನ್ನು ಈ ಹಿಂದೆ ಎಂದಾದರೂ ಕೇಳಿದ್ದೀರಾ? ಆದರೆ ಡೆವಿಡ್ ಹೆಡ್ಲಿ ವಿಚಾರಣೆಯ ಮಾಹಿತಿಯನ್ನು ನಮ್ಮ ನ್ಯಾಯಾಲಯಕ್ಕೆ ಸಲ್ಲಿಸುವ ವಾಗ್ದಾನ ಮಾಡಿದೆ. ಅದಕ್ಕೆ ಮುಖ್ಯ ಕಾರಣ ಪಿ. ಚಿದಂಬರಂ. ಅವರು ಹಿಂದಿನ ಗೃಹ ಸಚಿವ ಶಿವರಾಜ್ ಪಾಟೀಲರಂತೆ ಹೇರ್ ಡೈ, ಡ್ರೆಸ್ಸಿಂಗ್ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಾ ಕುಳಿತಿಲ್ಲ. ಮಾಮೂಲಿ ಪಂಚೆ, ಕುರ್ತಾ, ಶಾಲು ಹಾಕಿಕೊಂಡರೂ ಅವರದ್ದು professional attitude. ಇಂಗ್ಲಿಷ್‌ನಲ್ಲಿ ಮಾತನಾಡುವಾಗ ತಡವರಿಸುವುದಿಲ್ಲ, ಪದಗಳಿಗಾಗಿ ತಡಕಾಡುವುದಿಲ್ಲ. ಮಾತು ಬಹಳ Eloquent. ಹಾಗಾಗಿಯೇ ಮುಂಬೈ ದಾಳಿ ವಿಚಾರದಲ್ಲಿ ಪಾಕಿಸ್ತಾನ ಎಷ್ಟೇ ಮೊಂಡುತನ ಪ್ರದರ್ಶಿಸಿದರೂ ಅಂತಾರಾಷ್ಟ್ರೀಯ ಒತ್ತಡ ತಂದು ಪಾಕಿಸ್ತಾನ ಆರೋಪಿಗಳ ವಿಚಾರಣೆ ಆರಂಭಿಸುವಂತೆ ಮಾಡಿದ್ದಾರೆ. ಭಯೋತ್ಪಾದನೆ ವಿಷಯದಲ್ಲಿ ಬಹಳ ಪರಿಣಾಮಕಾರಿಯಾಗಿ ಅಂತಾರಾಷ್ಟ್ರೀಯ ಅಭಿಪ್ರಾಯ ಮೂಡಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟಿನಲ್ಲಿ ತಾವೊಬ್ಬ No nonsense minister ಎಂಬುದನ್ನು ಇದುವರೆಗೂ ಸಾಬೀತು ಮಾಡಿದ್ದಾರೆ. ಮುಂದೇನೋ ಗೊತ್ತಿಲ್ಲ.

ಈ ಕ್ಷಣದಲ್ಲಿ, ಚಿದಂಬರಂಗೊಂದು ಸಲಾಂ!

16 Responses to “ಇದೇನು ಚಿದಂಬರ ರಹಸ್ಯವಲ್ಲ!”

  1. ARJUN GOWDA says:

    En GURU neenu, hogi hogi yaranna yarige holista iddiya?

    EE Chidambaram monne monne tane kashmira mukya mantrige ondu niyoga rachisodakke heliddare.
    ADU yaake gotta?

    kaashmira bittu bhayotbadakate kaliyalu hoda UGRARIGE kashmiradalli PUNARVASATI kalpisodakke!!!

    intaa CHIDAMBARAMNA neevu PATEL avarige holisbardittu.
    Neeve heli, PATEL avru iddidre kashmiradalli PUNARVASATI kalpista iddiddu KASMIRI PANDITARGO, illa UGRARIGO?

    illiya HINDUgalige hedari hodida M F HUSAIN anta boli magange 24hr rakshane kodtivi anta helo ee chidambaram yavattadru PANDITRIGE rakshane kodtivi anta, beda atleast DHaIRYAnaadru heliddana(ra).

    BARI NAKSHAL ASTANNE MATTA HAKODALLA, ASTE NIRDAYAVAGI BHAYOTPADAKATEYANNU MATTA HAKLI AVVAG HELONA VOTE BANK INDA DOORA IDDARE ANTA. MATTE……………….
    MATTOBBA PATEL SIKKIDRU ANTA KUSHI PADONA.

  2. Thippeswamy N R says:

    ಏನೆ ಆಗಲಿ ಸರ್ , ಭಯೋತ್ಪಾದನೆ ವಿಚಾರದಲ್ಲಿ ನಮ್ಮವರು ಹಿಂದೇನೆ . ಈ ವಿಚಾರದಲ್ಲಿ ಈಗಿನ ಯಾವ ನಾಯಕರನ್ನು ಧೀಮಂತರು ಎಂದು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ , ದೇಶದ ರಕ್ಷಣೆ ವಿಚಾರದಲ್ಲಿ ನೀವು , ಏಕೆ ರಾಜಿಯಾದಿರೋ ತಿಳಿಯುತ್ತಿಲ್ಲ . . .?

  3. bharath says:

    Really we should appreciate his some decision and his dress code also shows what such a person and he is best compare to other congress , rjd , samajavadi ,jds leaders……………..

  4. suguresh says:

    I Agree with Arjun

    He should talk about Pandits those who left the valley also

    Note: When compared to shivaraj patel( Madam Toilet cleaner and looks good outside with white dress outside, inside he does toilet clean)
    Chidambaram is good and capable also if he has given free hand by the congress

  5. Shridhar says:

    ‘ಮೂಗ್ ಇಲ್ಲದೆ ಇರೋ ಊರಲ್ಲಿ ಮೂಗ್ ಇರೋನೋ ರಾಜಾ ‘ ಇದು ಹಳೆ ಗಾದೆ ಈಗ ಪಿ.ಚಿದಂಬರಂ ಅನ್ವಯಿಸುತ್ತದೆ .
    ಯಾಕೆ ಈ ರಾಜಕಾರಣಿಗಳು Brave Decesion ಗಳನ್ನ ತಕೊಳಲ್ಲಾ , ಇವರು ತಕೊಲೋ Decesion ಗಳೆಲ್ಲಾ ‘ ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ ‘ ಎಲ್ಲಾ ವೋಟ್ ಬ್ಯಾಂಕ್ ರಾಜಕೀಯಾ. ಈ ದೇಶದಲ್ಲಿರುವ ಕಟ್ಟ ಕಡೆಯ ಪ್ರಜೆಗೂ ಗೊತ್ತಿದೆ ಭಯೋದ್ಪಾದನೆ ಯನ್ನು ಒಂದು ಸಮುದಾಯದ ಜನರೇ ಮಾಡ್ತಾ ಇದ್ದಾರೆ ಅಂತಾ ಇದು ಎಲ್ಲಾರಿಗೂ ಗೊತ್ತಿರೋ ‘ Open Secret’ ಆದರೆ ಈ ರಾಜಕಾರಣಿಗಳಿಗೆ ಗೊತ್ತಿಲ್ವಾ, ಇಲ್ಲಾ ಗೊತ್ತಿಲ್ದೆ ಇರೋ ತರ ನಾಟಕಾನಾ .
    ನಂಗೆ ಯಾವಾಗಲೂ ಒಂದ್ ಚಿಂತೆ ಕಾಡುತ್ತೆ ಈ ದೇಶದ ಜನ ತಮ್ಮ ಪ್ರಾಣ ರಕ್ಷಣೆಗೆ ದಂಗೆ ಹೇಳೋತನಕ ಈ ಸಮಸ್ಯೆಗೆ ಪರಿಹಾರ ಇಲ್ಲಾ ಅಂತಾ ….

    ಚಿದಂಬರಂ ಬಗ್ಗೆ ಹೇಳಬೇಕಾದರೆ …….. ‘ He is a Very good Politician ‘ ಅಂತ ಮಾತ್ರ ಹೇಳಬಹುದು ….

    ಕಾಶ್ಮೀರದ ಕಣಿವೆ ಗಳಲ್ಲಿ ನುಸುಳುತಿರುವ ಬಯೋದ್ಪಾದಕರನ್ನು ….. ಈಗಾಗಲೇ ದೇಶದಲ್ಲಿ ನೆಲೆಯೂರಿರುವ ಬಯೋದ್ಪಾದಕರನ್ನು ಮಟ್ಟ ಹಾಕಲು ಕಾರ್ಯಕ್ರಮಗಳನ್ನು ರೂಪಿಸಲಿ ಆಗ ಹೇಳ್ತೀನಿ
    ಚಿದಂಬರಂ is Great ಅಂತಾ ……………
    ಅಲ್ಲಿ ತನಕ ಮೇರಾ ಭಾರತ……………………. ಮಹಾನ್ ಅನ್ನೋಣ ಅಷ್ಟೇ ಸಾಕು ……..?

    ಇಂತಿ….

    ಕನ್ನಡಿಗ ಶ್ರೀದರ್ .

  6. Meena Spoorthy says:

    Hie Pratap,

    The article abt PC ‘s Green Hunt operation was well written, by this article I had felt that Still the real journalists are there in India, to appreciate Good work instead of sticking to any particular party. I hope other leaders will get motivated to take sensible decision in time in his way, defenitely these type of articles will give encouragement to our politician who are really wanted to do good work, Since their good work is going to be identified/ appreciated by the common man through media,

    As Roosevelt sayings..
    “Don’t hit at all if it is honorably possible to avoid hitting; but never hit softly” .
    it seems the same way PC doing action towards Naxals, and it has to be done in the same way who are dealing with voilent course of action for justice.
    The hit was so hard that we have seen naxal’s reply to this.

    As of now we can see if any favouring articles of politician will be a pay-for-article or the every work of a politician instead of good or wrong it has been critized by journalists, I have read very few articles which is written impartially and only with guaging ones ability. n I must say the above artilce will come in the last category.

    Thanks & Regards
    Meena.

  7. mahesh hiremath says:

    hi prathap
    nivu hellidu nija adare obba adarsha hondiro rajakarani ella tharahada samasyagaligu parihara odagisuthane adare keval 30 % kalasagalige hats of heluva avashyakathe illa hagu pramuka samasya ada terrorisam annu mata hakade sanna putta kelasa madi prachara padeuvude kangresigar kelasa anda hage naxslits annodu sanna vishaya alla terrerist ge compare madidare bahala sanndu

  8. Prashant M B says:

    hi… pratapji…
    Excellent!..your article about PC is good. But it is concentrates on only few works of PC’s . but please do not match him with sardar patel..

  9. Chethan, Coorg says:

    ಈಗೀನ ಕಾಲದಲ್ಲಿ ಒಬ್ಬ educated person politics ಗೆ ಬರೋದು ಹಿಂದೂ ಮುಂದು ನೋಡ್ತಾರೆ. ಇರೋ politics nalli ಒಬ್ಬ ಒಳ್ಳೆಯ educated ರಾಜಕಾರಣಿ ಅಂದರೆ Namma PM, HM. Atleast they can add values in building relationship across coutries.
    I too heard that he lost his election. Still many has doubt and confusion abt his win during last MP election. I am happy that we got one prominent to leader in UPA govt. Sadden if he has done something in his election result. If S, hard to digest for me

    ಅಯ್ಯೋ ನಮ್ಮ ಕೊಡಗು district ಅಲ್ಲೂ ಇದ್ದಾರೆ Hopeless Politicians. ಅವರಿಗೆ ಅವರ ಮೇಲೆ ಜಿಗುಪ್ಸೆ ಆಗಿದೆ.

  10. Chethan, Coorg says:

    ಈಗೀನ ಕಾಲದಲ್ಲಿ ಒಬ್ಬ educated person politics ಗೆ ಬರೋದು ಹಿಂದೂ ಮುಂದು ನೋಡ್ತಾರೆ. ಇರೋ politics nalli ಒಳ್ಳೆಯ educated ರಾಜಕಾರಣಿ ಅಂದರೆ Namma PM, HM. Atleast they can add values in building relationship across countries.

    I too heard that he has lost in the last election. Still many has doubt and confusion about his win during last MP election. I am happy that we got one prominent leader in UPA govt. Sadden if he has done something wrong in the result (election). If its true, hard to digest.

    ಅಯ್ಯೋ ನಮ್ಮ ಕೊಡಗು district ಅಲ್ಲೂ ಇದ್ದಾರೆ Hopeless Politicians. ಅವರಿಗೆ ಅವರ ಮೇಲೆ ಜಿಗುಪ್ಸೆ ಆಗಿದೆ.

  11. Ashok Kumar.S says:

    Namaskara Pratap Sir,

    You have translated all our thoughts in a very appropriate way and put it across in this article.

    ನನಗೆ ನಿಮ್ಮ ಅರ್ತಿಕ್ಲೆಸ್ ತುಂಬಾ ಇಷ್ಟ . ನಿಮ್ಮಂಥ ಪತ್ರಕರ್ತರು ನಮ್ಮ ದೇಶಕ್ಕೆ ಬಹಳ ಅವಶ್ಯಕ.

    ನಮಗೆ (ಹಿಂದುಗಳಿಗೆ) ಎಲ್ಲೂ security ಇಲ್ಲ. ಎಲ್ಲ ಕಡೆ 3rd rate politicians ಪದವಿ ಆಸೆಗೆ ಜಾತಿ, ದುಡ್ಡು ಅಂತ VoteBank ಪೊಲಿಟಿಕ್ಸ್ ಮಾಡ್ತಾರೆ. After reading this article I dont think any educated and a person with common sense will justify what Shahrukh Khan has done.

    Anyway keep up the good spirit and I will eagerly be waiting for similar articles from you.

    I didnt watch MNIK and Im thankful that Im saved from the horror. I would start hating Muslims even more if I would have watched this movie.

    What I want to say here is “Not all Muslims are terrorists, but all the world famous terrorists that we know are Muslims”.

  12. Ashok Kumar.S says:

    Sorry to comment in the wrong article. Could you please remove my comment?

  13. Rajesh says:

    I agree with this article. Chidambaram is simple and able minister. I hope he stays as Homeminister for next 10 years. Till Rahul Ghandhi becomes Prime Minister.

  14. Yashwanth says:

    Pratap,
    I am reading your articles regularly. But, I am not in sync with you from few of your last articles. Its your view, but you should not have compared Chidambaram to Sardar Patel. At least Patel would have tackled the Naxal issue before they would have taken 76 lives of our CRPF Yodha’s. So sad….!

    Regards,
    Yashwanth

  15. Ravi says:

    Yes, He is the most professional Home minister India ever had.

    ಅವರು ಭಾವುಕರಾಗಿ ಮಾತನಾಡುವುದೂ ಇಲ್ಲ, ನಡೆದು ಕೊಳ್ಳುವುದಿಲ್ಲ. ಎಲ್ಲದರಲ್ಲೂ ವೃತ್ತಿಪರತೆಯನ್ನು ಕಾಣಬಹುದು. ಮುಂಬೈ ದಾಳಿಯ ಮುಖ್ಯ ಪಿತೂರಿದಾರ ಡೆವಿಡ್ ಹೆಡ್ಲಿಯ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ನ್ಯಾಯಾಲಯಕ್ಕೆ ಅಮೆರಿಕ ಸರಕಾರ ದಾಖಲೆ ಸಲ್ಲಿಸುವುದಾಗಿ ಹೇಳಿದ್ದನ್ನು ಈ ಹಿಂದೆ ಎಂದಾದರೂ ಕೇಳಿದ್ದೀರಾ? ಆದರೆ ಡೆವಿಡ್ ಹೆಡ್ಲಿ ವಿಚಾರಣೆಯ ಮಾಹಿತಿಯನ್ನು ನಮ್ಮ ನ್ಯಾಯಾಲಯಕ್ಕೆ ಸಲ್ಲಿಸುವ ವಾಗ್ದಾನ ಮಾಡಿದೆ. ಅದಕ್ಕೆ ಮುಖ್ಯ ಕಾರಣ ಪಿ. ಚಿದಂಬರಂ. ಅವರು ಹಿಂದಿನ ಗೃಹ ಸಚಿವ ಶಿವರಾಜ್ ಪಾಟೀಲರಂತೆ ಹೇರ್ ಡೈ, ಡ್ರೆಸ್ಸಿಂಗ್ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಾ ಕುಳಿತಿಲ್ಲ. ಮಾಮೂಲಿ ಪಂಚೆ, ಕುರ್ತಾ, ಶಾಲು ಹಾಕಿಕೊಂಡರೂ ಅವರದ್ದು professional attitude. ಇಂಗ್ಲಿಷ್‌ನಲ್ಲಿ ಮಾತನಾಡುವಾಗ ತಡವರಿಸುವುದಿಲ್ಲ,

    Howda? EEga enaagide nodi.

  16. shivaraj says:

    these idiots do not know what they are talking about.. they don know what it means do an mba in harvard .. even after doing that pc has come back to India.. he is one of the biggest patriots of our generation..