Date : 04-03-2010, Thursday | 17 Comments
Independent Media!
ಇಂಟರ್‌ನೆಟ್ ವ್ಯವಸ್ಥೆ ಇಂಥದ್ದೊಂದು ಮುಕ್ತ ವೇದಿಕೆಯನ್ನು ಪ್ರತಿವ್ಯಕ್ತಿಗೂ ಕಲ್ಪಿಸಿಕೊಟ್ಟಿದೆ. ನಿಮ್ಮದೇ ಬ್ಲಾಗ್, ವೆಬ್‌ಸೈಟ್‌ಗಳನ್ನು ಪ್ರಾರಂಭ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸ ಬಹುದು, ಇ-ಮೇಲ್ ಮೂಲಕ ಇತರರ ಜತೆ ಹಂಚಿಕೊಳ್ಳ ಬಹುದು. ಆರ್ಕಟ್, ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಯಾರಿಗೂ ಜಾಡಿಸಬಹುದು. ಅಷ್ಟಕ್ಕೂ Opinion makers ಆಗಿದ್ದ ಮಾಧ್ಯಮಗಳು ಇವತ್ತು Opinion ಅನ್ನು ಬಹಳ ಚೆನ್ನಾಗಿ suppress ಮಾಡಲಾರಂಭಿಸಿವೆ. ಮೊನ್ನೆ ಕೂಡ ಹಾಗೆಯೇ ಆಯಿತು. ಐಪಿಎಲ್ ಆಟಗಾರರ(ಪಾಕಿಸ್ತಾನದ) ಆಯ್ಕೆ ವಿಷಯದಲ್ಲಿ ಶಾರುಖ್ ಖಾನ್ ನೀಡಿದ ಹೇಳಿಕೆಗಳ ಬಗ್ಗೆ ಎನ್‌ಡಿಟಿವಿ, ಸಿಎನ್‌ಎನ್-ಐಬಿಎನ್ ಎಷ್ಟೇ ಹಾಡಿ ಹೊಗಳಿದರೂ, ಪ್ರಚಾರ ನೀಡಿದರೂ, ಜನರ ಮನದ ಇಂಗಿತವನ್ನು ಮರೆಮಾಚಿದರೂ ಇಂಡಿಪೆಂಡೆಂಟ್ ಮೀಡಿಯಾ ತಮ್ಮ ನೋವು, ಹತಾಶೆಗಳನ್ನು ತೋಡಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿತು. ಅವುಗಳಲ್ಲಿ “ಶಾರುಖ್ ಖಾನ್‌ಗೊಂದು ಬಹಿರಂಗ ಪತ್ರ”ವೂ ಒಂದು. ಇಂಟರ್‌ನೆಟ್‌ನಲ್ಲಿ ಬಹಳ ಚರ್ಚೆಗೆ, ಜಿeಸೆಗೆ ಗ್ರಾಸವಾಗಿರುವ ಪತ್ರವಿದು.
ಡಿಯರ್ ಮಿಸ್ಟರ್ ಶಾರುಖ್ ಖಾನ್,
ನಿಮ್ಮ ಹೆಸರು ಭಾರತದ ಮೂಲೆ ಮೂಲೆಗೆ, ಅಷ್ಟೇಕೆ ಗಡಿಯಾಚೆಗೂ ವಿಸ್ತರಿಸಿದೆ. ನಿಮ್ಮ ಪ್ರಸಿದ್ಧಿ ನಿಮ್ಮನ್ನು ಯಾವ ಮಟ್ಟಕ್ಕೇರಿಸಿದೆಯೆಂದರೆ ಖ್ಯಾತ ‘ನ್ಯೂಸ್‌ವೀಕ್’ ನಿಯತಕಾಲಿಕೆ ‘ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ’ಯಲ್ಲಿ ನಿಮ್ಮ ಹೆಸರನ್ನು ಸೇರಿಸಿದೆ! ಆದರೆ, ನಿಮಗೆ ಅಮೆರಿಕದ ನ್ಯೂ ಜೆರ್ಸಿ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಆದ ಅನುಭವ ನೈಜ ಜೀವನ ತೆರೆಗಿಂತ ಭಿನ್ನ ಅನ್ನೋದನ್ನು ಧ್ವನಿಸಿದೆ. ಇಲ್ಲಿ ನಿರ್ದೇಶಕನೋ, ಸ್ಕ್ರಿಪ್ಟ್ ಬರಹಗಾರನೋ ಬರೆದಂತೆ ಎಲ್ಲವೂ ಸುರಳೀತವಾಗಿ ಸಾಗುವುದಿಲ್ಲ. ಬಾಲಿವುಡ್‌ಗೆ ಹೊರತಾಗಿ, ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಇತ್ತೀಚೆಗೆ ಅನೇಕ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೀರಿ. ಅದರಲ್ಲಿ ತಪ್ಪೇನಿಲ್ಲ ಬಿಡಿ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಿಮ್ಮ ಅಭಿಪ್ರಾಯ ಹೊರಹಾಕಲು ನೀವು ಸ್ವತಂತ್ರರು. ಅದೇ ವೇಳೆ, ಇದೇ ಮಣ್ಣಿನಲ್ಲಿ ಒಬ್ಬ ಸಾಮಾನ್ಯ ನಾಗರಿಕನಾಗಿ ಬದುಕುತ್ತಿರುವ ನನಗೂ ನಿಮ್ಮ ಅಭಿಪ್ರಾಯಗಳಿಗೆ ವ್ಯತಿರಿಕ್ತವಾದದ್ದನ್ನು ಹೇಳುವ ಹಕ್ಕು ಇದ್ದೇ ಇದೆಯಲ್ಲ. ಈ ನಿಟ್ಟಿನಲ್ಲಿ ಕೆಲ ಅಂಶಗಳನ್ನು ನಿಮ್ಮ ಗಮನಕ್ಕೆ ತರಬೇಕಿದೆ…
ಇತ್ತೀಚೆಗೆ ಪಾಕಿಸ್ತಾನದ ಆಟಗಾರರು ಐಪಿಎಲ್‌ಗೆ ಆಯ್ಕೆಯಾಗದೇ ಇದ್ದಾಗ ಸಹಜವಾಗಿಯೇ ಭಾರತೀಯ ಸ್ವತಂತ್ರ ಮಾಧ್ಯಮದ ಮುಖವಾಣಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಎನ್‌ಡಿಟಿವಿ ನಿಮ್ಮ ಅಭಿಪ್ರಾಯ ಕೇಳಿತು. ನೀವು ಪ್ರಮಾಣ ಪತ್ರ ಕೊಟ್ಟೇ ಬಿಟ್ಟಿರಿ. ‘ಪಾಕಿಸ್ತಾನವನ್ನು ನಮ್ಮ ನೆರೆಯವರಾಗಿ ಹೊಂದಿರುವುದು ಅನನ್ಯ. ಭಾರತ-ಪಾಕಿಸ್ತಾನಗಳು ಅದ್ಭುತ ನೆರೆಹೊರೆಯವರಾಗಿದ್ದಾರೆ. They are good neighbours ಅಂದಿರಲ್ಲ? ಈ ನಿಮ್ಮ ಹೇಳಿಕೆಯ ಬಗ್ಗೆ ಕೆಲ ಮಾತು ಹೇಳಲೇಬೇಕಾಗಿದೆ. ನೆನಪು ಕೆಲ ದಿನಗಳ ಹಿಂದೋಡುತ್ತದೆ… ಮೊಟ್ಟಮೊದಲ ಟಿ-20 ಕ್ರಿಕೆಟ್ ವಿಶ್ವಕಪ್ ವೇಳೆ ಪಾಕಿಸ್ತಾನ ತಂಡದ ನಾಯಕ ಶೊಯೆಬ್ ಮಲಿಕ್ ಪರ ನೀವು ವಕೀಲಿಕೆಗೆ ಇಳಿದಿದ್ದು ಗಮನಿಸಬೇಕಾಗುತ್ತದೆ. ಭಾರತದ ವಿರುದ್ಧ ಫೈನಲ್ ಪಂದ್ಯವನ್ನು ಗೆಲ್ಲಲಾಗದೇ ಇದ್ದಿದ್ದಕ್ಕೆ ಅವತ್ತು ಶೊಯೆಬ್ ಜಗತ್ತಿನ ಎಲ್ಲ ಮುಸ್ಲಿಮರ ಕ್ಷಮೆ ಕೋರಿದ್ದ! ಆತನ ಈ ವರ್ತನೆಯು ಪಂದ್ಯ ಪುರುಷೋತ್ತಮನಾಗಿದ್ದ ನಮ್ಮ ಇರ್ಫಾನ್ ಪಠಾಣ್ ತಾಯಿ ಶಮಿನ್ ಬಾನೋ ಸೇರಿದಂತೆ ಹಲವಾರು ಭಾರತೀಯ ಮುಸ್ಲಿಮರಿಗೆ ಇರಸು ಮುರಸು ಉಂಟುಮಾಡಿತ್ತು. ಆದರೆ ಅದಕ್ಕಿಂತ ಇರಸು ಮುರಸಾಗಿದ್ದು ಯಾವಾಗ ಗೊತ್ತಾ ಖಾನ್? ನೀವು ಸಂದರ್ಶನದಲ್ಲಿ ವಿನಾಕಾರಣವಾಗಿ ಶೊಯೆಬ್‌ನನ್ನು ಸಮರ್ಥಿಸಿಕೊಳ್ಳತೊಡಗಿದಿರಲ್ಲಾ ಆಗ. ‘ಹಿಂದುಗಳು, ಮುಸ್ಲಿಮರು, ಕ್ರೈಸ್ತರ ನಡುವೆ ಪ್ರತ್ಯೇಕತೆ ತರುವ ನಿಟ್ಟಿನಲ್ಲಿ ಶೊಯೆಬ್ ಈ ಮಾತನಾಡಿಲ್ಲ. ಪಂದ್ಯವಿದ್ದಿದ್ದು ಇಸ್ಲಾಂ ಹಾಗೂ ಹಿಂದು ನಡುವೆ ಎಂಬುದು ಅವನ ಮಾತಿನ ಅರ್ಥವಿರಲಿಕ್ಕಿಲ್ಲ. ಐ ಡೋಂಟ್ ಥಿಂಕ್ ದಟ್..’ ಅಂತೆಲ್ಲ ಬಾಲಿಶವಾಗಿ ಬಡಬಡಿಸುವ ದರ್ದು ಅದೇನಿತ್ತು ಶಾರುಖ್? ಶೊಯೆಬ್ ಏನು ತಮ್ಮ ಪರವಾಗಿ ಮಾತನಾಡಲು ಕೇಳಿಕೊಂಡಿದ್ದರಾ? ಉಹುಂ, ನಿಮಗೆ ನಿಮ್ಮ ‘ಭ್ರಾತೃತ್ವ’ ಭಾವನೆ ಹೊರಹಾಕುವುದನ್ನು ತಡೆದುಕೊಳ್ಳಲಾಗಲಿಲ್ಲ ಅಲ್ವಾ?
ಡಾ. ಅಂಬೇಡ್ಕರ್ ಅವರು ಹೇಳಿದ್ದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. The brotherhood of Islam is not the universal brotherhood of man. It is brotherhood of Muslims for Muslims only! ದೇಶವಿಭಜನೆ ಪಾಕಿಸ್ತಾನದ ಇಚ್ಛೆಯಾಗಿತ್ತು. ಅದನ್ನದು ಪಡೆಯಿತು. ಕೋಟ್ಯಂತರ ಜನರ ಪಾಲಿಗೆ ವಿಭಜನೆಯ ಪ್ರಕ್ರಿಯೆ ಯಾತನಾಮಯವಾಗಿತ್ತು. ಅವತ್ತಿನಿಂದ ಇಲ್ಲಿಯವರೆಗೆ ದ್ವೇಷವನ್ನಲ್ಲದೇ ಇನ್ನೇನನ್ನೂ ಪಾಕಿಸ್ತಾನ ನಮಗೆ ಕೊಟ್ಟಿಲ್ಲ. ಮೂರು ಯುದ್ಧಗಳು, ಲೆಕ್ಕವಿಲ್ಲದಷ್ಟು ಸರಣಿ ಬಾಂಬ್ ಸ್ಫೋಟಗಳು, ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ, ಸಂಸತ್ ಭವನದ ಮೇಲೆ ದಾಳಿ, ಮೊನ್ನೆ ಮುಂಬಯಿ ಮೇಲೆ ದಾಳಿ…ಇವೇ ಅಲ್ಲವಾ ಪಾಕಿಸ್ತಾನ ನಮಗೆ ಕೊಡುತ್ತಿರುವುದು? ಪಾಕಿಸ್ತಾನ ನಮ್ಮ ಅತ್ಯುತ್ತಮ ನೆರೆಮನೆ ಎಂದು ಸೋಗು ಹಾಕುವಾಗ ನಿಮಗೆ ಇದ್ಯಾವುದೂ ನೆನಪೇ ಆಗಲಿಲ್ಲವಾ ಶಾರುಖ್?
ಇನ್ನೊಂದು ಸಂದರ್ಶನದಲ್ಲಿ ನೀವು ಜಿಹಾದ್‌ನ ವ್ಯಾಖ್ಯಾನಕ್ಕೆ ಇಳಿದಿರಿ. ‘ನಾವು ಜಿಹಾದ್‌ನ ಸರಿಯಾದ ಅರ್ಥವನ್ನು ತಿಳಿದುಕೊಳ್ಳ ಬೇಕಿದೆ ಅಂತನಿಸುತ್ತೆ. ಜಿಹಾದ್ ಅಂದರೆ ಬೇರೆಯವರನ್ನು ಕೊಲ್ಲು ವುದು ಅಂತಲ್ಲ. ನಿಮ್ಮೊಳಗಿನ ಕೆಟ್ಟದ್ದನ್ನು ಕೊಲ್ಲುವುದು’ ಎಂದಿರಿ. ಇರಬಹುದು. ಆದರೆ, ಇಸ್ಲಾಂನ ಹೆಸರಲ್ಲಿ ಬಿಚ್ಚಿಕೊಳ್ಳುತ್ತಿರುವ ಧಾರ್ಮಿಕ ಹಿಂಸೆಯಿಂದ ತತ್ತರಿಸಿಹೋಗಿರುವ ನಮ್ಮಂಥ ಯಕಃಶ್ಚಿತ್ ಮನುಷ್ಯರಿಗೆ ನಿಮ್ಮ ಸುಶಿಕ್ಷಿತ ವ್ಯಾಖ್ಯಾನವನ್ನು ಒಪ್ಪಿಕೊಳ್ಳುವಲ್ಲಿ ವಾಸ್ತವ ಇರಿಯುತ್ತಿದೆ. ಕಂಠಪಾಠದ ಜಿಹಾದ್‌ಗೆ, ಪೆನ್‌ನ ಮೂಲಕ ಸಾಧಿಸುವ ಜಿಹಾದ್‌ಗೆ ಹಾಗೂ ಖಡ್ಗದ ಮೂಲಕ ನಡೆಸುವ ಜಿಹಾದ್‌ಗೆ ವ್ಯತ್ಯಾಸವೇ ತಿಳಿಯದಂತಾಗಿದೆ. ಜಿಹಾದ್‌ನ ಅರ್ಥ ವನ್ನು ನೀವು ಹೇಗೆ ವ್ಯಾಖ್ಯಾನಿಸಿದರೂ ಜಗತ್ತಿನಾದ್ಯಂತ ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ನರಮೇಧವನ್ನು ನಿಲ್ಲಿಸುವುದಕ್ಕೆ ಅದು ಸಹಾಯಕವಾಗುತ್ತದೆಯೇ? ಪವಿತ್ರ ಯೋಧರೆನ್ನಿ, ಮುಜಾಹಿದೀನ್‌ಗಳೆನ್ನಿ, ಫಿದಾಯೀನ್‌ಗಳೆನ್ನಿ ಇಲ್ಲವೇ ಆತ್ಮಹತ್ಯೆ ಬಾಂಬರ್‌ಗಳು ಎನ್ನಿ.. ಅದು ಪಾತಕಿಗಳ ಮನಸ್ಥಿತಿಯನ್ನೇನಾದರೂ ಬದಲಿಸುತ್ತಿದೆಯೇ? ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ನಿಮ್ಮ ಮಾತನ್ನು ಒಪ್ಪಿಕೊಳ್ಳೋಣ. ಆದರೆ, ಇವತ್ತು ಜಗತ್ತಿನಾದ್ಯಂತ ಉಗ್ರರು ಇಸ್ಲಾಂನ ಸಾಲುಗಳನ್ನು ಉಲ್ಲೇಖಿಸುತ್ತಲೇ ಪಾತಕ ನಡೆಸುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ? ಅವರೇ ನೈಜ ಮುಸ್ಲಿಮರು ಎಂದು ನಂಬಿಕೊಂಡಿದ್ದಾರೆ. Moderate ಎನಿಸಿಕೊಂಡಿರುವ ಮುಸ್ಲಿಮರು ಜಿಹಾದಿಗಳನ್ನು ಪ್ರಶ್ನಿಸುವ ಧೈರ್‍ಯ ಮಾಡುತ್ತಿಲ್ಲ. ತಸ್ಲೀಮಾ ನಸ್ರಿನ್ ಇಲ್ಲವೇ ಸಲ್ಮಾನ್ ರಶ್ದಿಯ ಉದಾಹರಣೆ ಗಮನಿಸಿದರೆ ಸಾಕು. ಇಸ್ಲಾಂನಲ್ಲಿ ನಂಬಿಕೆ ಹೊಂದಿರುವವನೂ ಆ ಬಗ್ಗೆ ಏನಾದರೂ ವಿಮರ್ಶೆಗಿಳಿದರೆ ಅದು ದೈವನಿಂದೆಯಾಗುತ್ತದೆ ಹಾಗೂ ಮರಣವೇ ಅದಕ್ಕೆ ಶಿಕ್ಷೆ ಎನ್ನಲಾಗುತ್ತದೆ.
ಅಂದಮೇಲೆ ಇಸ್ಲಾಂ ಅನ್ನು ಅನುಸರಿಸದವರ ಪಾಡನ್ನು ಪ್ರತ್ಯೇಕ ವಾಗಿ ಹೇಳಬೇಕಿಲ್ಲ ಅಲ್ಲವಾ?
ಇರ್ಫಾನ್ ಹುಸೇನ್ ಎಂಬ ಬರಹಗಾರ ನೀಡುವ ಐತಿಹಾಸಿಕ ಒಳನೋಟವನ್ನು ಒಮ್ಮೆ ಓದಿಕೊಳ್ಳಿ. ‘ಇತಿಹಾಸದ ಪುಸ್ತಕಗಳಲ್ಲಿ ಹೀರೊಗಳಂತೆ ಚಿತ್ರಿಸಲಾಗಿರುವ ಮುಸ್ಲಿಂ ಆಡಳಿತಗಾರರ ಕೈಗಳ ಮೇಲೆಲ್ಲ ರಕ್ತದ ಕಲೆಯಿದೆ. ಅವರು ಸತ್ತ ನಂತರವೂ ಬದುಕುವಂತೆ ಮಾಡಿರುವುದರಲ್ಲಿ ಅವರೊಂದಿಗೆ ಯಾವಾಗಲೂ ಇರುತ್ತಿದ್ದ ಮುಸ್ಲಿಂ ಇತಿಹಾಸಕಾರರ ಪಾತ್ರವಿದೆ. ಇವರು ಹೇಳುವ ಶೌರ್‍ಯದ ಕತೆಗಳೆಲ್ಲ, ಹಿಂದುಗಳ ಪಾಲಿಗೆ ತಮ್ಮ ತಾಯ್ನಾಡಿನ ಮೇಲಾದ ಆಕ್ರಮಣ. ಅದೊಂದು ವಿಧ್ವಂಸ.’ ಅಂದ ಮೇಲೆ ಇಸ್ಲಾಂ ಅನುಯಾಯಿಗಳಲ್ಲದವರು ಅವರನ್ನು ಒಪ್ಪಿಕೊಳ್ಳುವ ಕರ್ಮವೇಕೆ? ಭಾರತದ ಬಹುಸಂಖ್ಯಾತರು ಮತ್ತೊಮ್ಮೆ ಮಹಾ ವಿಧ್ವಂಸವನ್ನು ಸ್ವಾಗತಿಸಬೇಕೆ? ದೇಶ ವಿಭಜನೆಯ ನಂತರದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಹಾಕಿದ ಹೆಜ್ಜೆ ಗಮನಾರ್ಹವಾದುದು. ಒಂದೆಡೆ ಎಕನಾಮಿಕ್ ಸೂಪರ್‌ಪವರ್ ಎಂದು ಗುರುತಿಸಿಕೊಳ್ಳುವ ಮಟ್ಟಕ್ಕೆ ಭಾರತ ಬೆಳೆದಿದ್ದರೆ ಇನ್ನೊಂದೆಡೆ ಪಾಕಿಸ್ತಾನ ಗತಿಗೆಟ್ಟ ರಾಷ್ಟ್ರ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಹಿಂಸೆಯೇ ದಿನಚರಿಯಾಗಿರುವ ಅಂಥದೊಂದು ವಿಫಲ ದೇಶಕ್ಕೆ ನೆರೆಮನೆಯವರು ಎಂದು ಸ್ನೇಹಹಸ್ತ ಚಾಚಿ ಭಾರತಕ್ಕೆ ಆಗಬೇಕಾಗಿರುವುದಾದರೂ ಏನು? ಭಾರತ ಯಾವತ್ತೂ ಒಂದು ಆಕ್ರಮಣಕಾರಿ ರಾಷ್ಟ್ರವಾಗಿಲ್ಲ. ಯಾವ ಮುಸ್ಲಿಂ ರಾಷ್ಟ್ರಗಳೊಂದಿಗೂ ಅದು ಕದನಕ್ಕೆ ಬಿದ್ದಿಲ್ಲ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘರ್ಷಣೆ- ಸಮರಗಳ್ಯಾವವೂ ಭಾರತ ಪ್ರಚೋದಿಸಿರುವಂಥದ್ದಲ್ಲ. ಪಾಶ್ಚಾತ್ಯರ ವಿರುದ್ಧ, ಇಸ್ರೇಲ್ ಹಾಗೂ ಅಮೆರಿಕಗಳ ವಿರುದ್ಧ ಮುಸ್ಲಿಂ ಜಗತ್ತಿನ ಕೋಪವನ್ನು ತುಸು ಮಟ್ಟಿಗೆ ಅರ್ಥೈಸಿಕೊಳ್ಳಬಹುದು. ಆದರೆ, ಭಾರತವೇಕೆ ಪೆಟ್ಟು ತಿನ್ನುವ ಜಾಗದಲ್ಲಿ ನಿಂತಿದೆ?
ಪ್ರತಿ ಬಾರಿ ಉಗ್ರರ ದಾಳಿಯಾದಾಗಲೂ ಆರೋಪಿಗಳಾಗುವುದು ಪಾಕಿಸ್ತಾನದವರು ಹಾಗೂ ಪಾಕ್ ಮೂಲದವರೇ. ಪ್ರಮುಖ ಭಯೋತ್ಪಾದಕ ದಾಳಿಗಳಿಗೆ ಐಎಸ್‌ಐ ಸಹಕಾರವಿತ್ತು ಎಂಬ ಆರೋಪವೂ ದಟ್ಟವಾಗಿದೆ. ಇವೆಲ್ಲ ಒಳ್ಳೆ ನೆರೆಮನೆಯವರ ಲಕ್ಷಣಗಳಾ ಶಾರುಖ್? ಪಾಕಿಸ್ತಾನವನ್ನು ಪ್ರೀತಿಸಿ ಎಂಬ ನಿಮ್ಮ ಉಪದೇಶದ ನೈಜ ಉದ್ದೇಶವಾದರೂ ಏನು? ನಿಮ್ಮ ಪೂರ್ವಿಕರ ನೆಲ ಅದಾಗಿದ್ದರಿಂದ ನಿಮಗೆ ಪಾಕಿಸ್ತಾನದ ಮೇಲೆ ಮೃದು ಭಾವ ಎಂದು ನೀವೇ ಹಿಂದೊಮ್ಮೆ ಹೇಳಿಕೊಂಡಿದ್ದಿರಿ. ಬ್ರಿಟಿಷ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಸಂದರ್ಭದಲ್ಲಿ ‘ನಮ್ಮಿಬ್ಬರಲ್ಲೂ ಭೇದವೇ ಇಲ್ಲ. ಭಾರತ ಇಲ್ಲವೇ ಪಾಕಿಸ್ತಾನದಿಂದ ಹೊರಗಡಿಯಿಟ್ಟಾಗ ತಿಳಿಯುತ್ತದೆ, ಭಾರತೀಯ ಅಥವಾ ಪಾಕಿಸ್ತಾನಿ ಎಂಬುದೇ ಇಲ್ಲ, ನಾವೆಲ್ಲ ಒಂದೇ ಅಂತ. ನಾವು ಸಾಂಸ್ಕೃತಿಕವಾಗಿ, ಮಾನವರಾಗಿ, ಸ್ನೇಹಿತರಾಗಿ ಒಂದಾಗಿದ್ದೇವೆ ’ ಎಂದು ಭಾಷಣ ಬಿಗಿದಿರಿ.
ನೀವು ಯಾವ ಪಾಕಿಸ್ತಾನಿಗಳ ಬಗ್ಗೆ ಮಾತನಾಡುತ್ತಿದ್ದೀರಿ?
ಬರೀ ಭಾರತ ಹಾಗೂ ಅಮೆರಿಕಗಳಿಂದ ಮಾತ್ರವಲ್ಲ, ತನ್ನ ಮಿತ್ರರಾಷ್ಟ್ರವಾದ ಇರಾನ್ ಹಾಗೂ ಚೀನಾಗಳಿಂದಲೂ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂದು ಕರೆಸಿಕೊಂಡ ನೆಲಕ್ಕೆ ಸೇರಿದ ಪಾಕಿಸ್ತಾನಿಯರ ಬಗ್ಗೆಯೇ ತಾನೇ? ಅಥವಾ ತಾನೇ ಸೃಷ್ಟಿಸಿಕೊಂಡ ತಾಲಿಬಾನ್ ವ್ಯವಸ್ಥೆಯಲ್ಲಿರುವ, ಇಸ್ಲಾಂ ನಂಬದವರ ಮೇಲೆ ಜೆಝಿಯಾ(ತೆರಿಗೆ) ಹಾಕುವ, ಹೆಣ್ಣುಮಕ್ಕಳ ಶಾಲೆ ಮೇಲೆ ಬಾಂಬ್ ಇಡುವ ಪಾಕಿಸ್ತಾನದ ಕುರಿತೇ ನೀವು ಮಾತಾಡುತ್ತಿರುವುದೇ? ಅಥವಾ, ಗಣ್ಯರ ಯಾದಿಯಲ್ಲಿರುವವರನ್ನೇ ಪಾಕಿಸ್ತಾನಿಯರು ಎಂದು ಮಾತನಾಡುತ್ತಿದ್ದೀರಾ? ಇನ್ನೂ ಸಾವಿರ ವರ್ಷಗಳವರೆಗೂ ಭಾರತದ ವಿರುದ್ಧ ಯುದ್ಧ ನಡೆಸುತ್ತೇವೆ ಎಂದ ಆಸಿಫ್ ಅಲಿ ಜರ್ದಾರಿ, ಕಾಶ್ಮೀರದಲ್ಲಿ ಜಿಹಾದ್‌ಗೆ ಮುನ್ನುಡಿ ಬರೆದು ಆ ಮೂಲಕ ಭಾರತದ ಮುಸ್ಲಿಂ ಬಹುಸಂಖ್ಯಾತ ರಾಜ್ಯದಿಂದ ಹಿಂದುಗಳನ್ನು ಹೊರಗಟ್ಟಿದ ದಿವಂಗತ ಬೆನಜೀರ್ ಭುಟ್ಟೋ ಅಂಥವರ ಬಗ್ಗೆ ಮಾತನಾಡುತ್ತಿದ್ದೀರಾ?ಹಿಂದು ಭಾರತದೊಂದಿಗೆ ಕದನಕ್ಕಿಳಿಯಲೆಂದೇ ಯೋಧರನ್ನು ತರಬೇತುಗೊಳಿಸುವ ಐಎಸ್‌ಐಗೆ ನಿಷ್ಠರಾಗಿರುವ ಪಾಕಿಸ್ತಾನಿಯರ ಬಗೆಗಾ ನೀವು ಹೇಳುತ್ತಿರುವುದು? ಇದ್ಯಾವುದೂ ಅಲ್ಲದ ಅನಾಮಧೇಯ ಪಾಕಿಸ್ತಾನಿಗಳ ಬಗ್ಗೆ ನಿಮ್ಮ ಕಾಳಜಿ ಎಂದಾದರೆ ಅದರಲ್ಲಿ ನಶಿಸುತ್ತಿರುವ ಅಲ್ಪಸಂಖ್ಯಾತರೂ ಇದ್ದಾರಾ?
ನಿಜ ಶಾರುಖ್, ನಾವಿಬ್ಬರೂ ಮಾನವ ಕುಲಕ್ಕೆ ಸೇರಿದವರು. ಆದರೆ ಅವರಿಗೂ ನಮಗೂ ಹೋಲಿಕೆ ಹುಡುಕಿಕೊಳ್ಳುವುದು ತ್ರಾಸದ ಕೆಲಸವಾಗುತ್ತದೆ. ಭಾರತವೆಂಬ ನೆಲಕ್ಕೆ ಸೇರಿದ ನಾವು ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಬಯಸಿದ್ದೇವೆ. ಇದನ್ನೇ ಅವರು ಸಾವಿರ ತುಂಡುಗಳನ್ನಾಗಿ ಮಾಡಲು ಬಯಸಿದ್ದಾರೆ. ನಮ್ಮ ಪೂರ್ವಿಕರು ಒಂದೇ. ಅದನ್ನು ಗೌರವಿಸುವ ನಾವು ಆ ಪರಂಪರೆ ಮುಂದುವರಿಸಲು ಪಣ ತೊಟ್ಟಿದ್ದರೆ ಅದನ್ನು ತುಂಡರಿಸಲು ಅವರು ಕಟಿಬದ್ಧರಾಗಿದ್ದಾರೆ. ಸಾಂಸ್ಕೃತಿಕವಾಗಿ ನಾವು ಒಂದು. ಶತಮಾನಗಳ ಕಾಲ ಸಂಸ್ಕೃತಿಯನ್ನು ಕಟ್ಟಿದವರು ನಾವಾದರೆ, ಒಂದು ಕ್ಷಣಕ್ಕೆ ಅದನ್ನು ಮಣ್ಣುಮಾಡಬೇಕು ಎಂದು ಅವರು ಹವಣಿಸಿದ್ದಾರೆ. ನಮ್ಮದು ೧೦ ಸಾವಿರ ವರ್ಷಗಳ ನಾಗರಿಕತೆ. ಅವರದ್ದು ನಾಗರಿಕತೆಯನ್ನೇ ನುಂಗಲು ನಿಂತಂತಿರುವ ೬೨ರ ಪ್ರಾಯದ ದೇಶ. ಸ್ನೇಹ ಹಾಗೂ ಪ್ರೀತಿಯ ವಿನಿಮಯಕ್ಕೆ ನಾವು ಪದೇ ಪದೆ ಕೈಚಾಚಿದೆವು. ಪ್ರತಿಯಾಗಿ ಅವರು ನಮಗೆ ಕೊಟ್ಟಿದ್ದು ಐಎಸ್‌ಐ, ಲಷ್ಕರ್, ಹರ್ಕತ್, ಕಾಶ್ಮೀರ ಯುದ್ಧ, ಕಾರ್ಗಿಲ್ ಸಮರ ಹಾಗೂ ೨೬/೧೧. ಈ ಎಲ್ಲ ಸಂಘರ್ಷಗಳಲ್ಲಿ ಗತಿಸಿಹೋದ ಭಾರತೀಯ ನಾಗರಿಕರು, ಭಾರತದ ಯೋಧರು, ಐಎಸ್‌ಐ ಪ್ರೇರಿತ ಸ್ಫೋಟಗಳಲ್ಲಿ ಮರಣಿಸಿದ ಸಾಮಾನ್ಯರು ನೆರೆಮನೆಯವರ ಸ್ನೇಹಕ್ಕೆಂದು ಪ್ರಾಣ ತೊರೆದರಾ? ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಮಡಿದ ನಾಗರಿಕರ ಕುಟುಂಬ ಹಾಗೂ ಕಾರ್ಗಿಲ್ ಹುತಾತ್ಮರ ಮನೆಯವರ ಬಳಿ ತೆರಳಿ, ‘ಪಾಕಿಸ್ತಾನದವರು ಒಳ್ಳೆಯ ನೆರೆಮನೆಯವರು. ನಾವಿಬ್ಬರೂ ಪ್ರೀತಿಸಿಕೊಳ್ಳೋಣ’ ಎಂದರೆ ಹೇಗಿರಬಹುದು ಎಂದು ಯೋಚಿಸಿದ್ದೀರಾ ಶಾರುಖ್?
ಮುಂಬಯಿ ವಿಧ್ವಂಸದ ವೇಳೆ ಕಾಮಾ ಆಸ್ಪತ್ರೆಯ ಬಳಿ ಇಬ್ಬರು ಉಗ್ರರು ತಮಗೆ ನೀರು ಕೊಟ್ಟ ವ್ಯಕ್ತಿಯನ್ನು ನಿನ್ನ ಧರ್ಮ ಯಾವುದು ಎಂದು ಕೇಳಿ, ಹಿಂದೂ ಎಂದ ಕೂಡಲೇ ಗುಂಡಿಕ್ಕಿ ಕೊಂದಿದ್ದೇಕೆ ಎಂದು ಸ್ವಲ್ಪ ವಿವರಿಸುತ್ತೀರಾ? ಇಲ್ಲ ಎಂದಾದರೆ ಬಹುತೇಕ ಭಾರತೀಯರೇಕೆ ಪಾಕಿಸ್ತಾನವನ್ನು ಒಳ್ಳೆಯ ನೆರೆರಾಷ್ಟ್ರ ಎಂದು ಏಕೆ ಭಾವಿಸುವುದಿಲ್ಲ ಎಂಬುದು ಬಹುಶಃ ನಿಮಗೆ ಅರ್ಥವಾಗಬಹುದು. ನೀವು ನಿಮ್ಮ ಮನೆಯಲ್ಲಿ ಸ್ಥಾಪಿಸಿರುವ ಧಾರ್ಮಿಕ ಸೌಹಾರ್ದತೆಯನ್ನು ಹೊರಗಿನ ಜಗತ್ತಿಗೂ ವಿಸ್ತರಿಸಬಹುದು ಎಂದು ನೀವು ಭಾವಿಸಿರಬಹುದು. ನೀವು ಸರಿಯಾಗಿಯೇ ಹೇಳಿದಂತೆ, ಭಾರತೀಯರಾದ ನಾವು ಎಲ್ಲ ಮತ-ಧರ್ಮದವರನ್ನೂ ಒಪ್ಪಿಕೊಳ್ಳುತ್ತೇವೆ, ವಿಶ್ವಾಸವಿಡುತ್ತೇವೆ. ಆದರೆ ಅದು ಇಸ್ಲಾಂ ಉದಯಕ್ಕೂ ಮೊದಲೇ ಇದ್ದ ಹಿಂದೂ ಮೌಲ್ಯಗಳಿಂದ ಬಂದ ಭಾರತೀಯ ಪರಂಪರೆ. ಅದನ್ನು ನೀವು ಉಲ್ಲೇಖಿಸಲು ವಿಫಲರಾಗಿದ್ದೀರಿ! ಇದು ನಿಜವಲ್ಲಾ ಎಂದಾದರೆ, ಇತರ ಧರ್ಮೀಯರಿಗೂ ಸಮಾನ ಹಕ್ಕು-ಅವಕಾಶ ನೀಡಿದ ಒಂದೇ ಒಂದು ಇಸ್ಲಾಮಿಕ್ ದೇಶವನ್ನು ತೋರಿಸಿ ನೋಡೋಣ?
ಮಿಸ್ಟರ್ ಖಾನ್, ನೀವೇ ನೀಡಿದ್ದ ನಿಮ್ಮದ್ದೊಂದು ಹೇಳಿಕೆಯನ್ನು ನೆನಪಿಸಿಕೊಡಲು ಅವಕಾಶ ಕೊಡಿ-“ನಾನು ಭಾರತವೆಂಬ ದೇಶದಲ್ಲಿ ರುವ ಮುಸ್ಲಿಂ. ಅದೊಂದು ಹಿಂದೂ ದೇಶ ಎಂಬ ಭಾವನೆ ನಮ್ಮ ಲ್ಲೆಂದೂ ಮೂಡುವಂತೆ ಮಾಡಿಲ್ಲ”. ಆದರೆ ಪಾಕಿಸ್ತಾನದಲ್ಲಿ ಇದೇ ರೀತಿ ಹೇಳಿಕೆ ನೀಡುವ ಒಬ್ಬನೇ ಒಬ್ಬ ಹಿಂದೂವನ್ನು ತೋರಿಸಬಲ್ಲಿರಾ?
ಆದ್ದರಿಂದ ಪಾಕಿಸ್ತಾನವನ್ನು ಪ್ರೀತಿಸಿ ಎಂದು ದಯವಿಟ್ಟು ಉಪದೇಶ ಕೊಡಬೇಡ. ಭಾರತವನ್ನು ಸಾವಿರ ಚೂರು ಮಾಡಲು ಬಯಸುತ್ತಿರುವ ದೇಶವನ್ನು ‘ಮಹಾನ್ ನೆರೆರಾಷ್ಟ್ರ’ ಎಂದು ಪ್ರತಿಪಾದಿಸುವ ಮೂಲಕ ನಿಮಗೆ ಜನ್ಮ, ಹೆಸರು, ಕೀರ್ತಿ ಕೊಟ್ಟ ಭರತಖಂಡಕ್ಕೆ ದಯವಿಟ್ಟು ಅವಮಾನ ಮಾಡಬೇಡಿ. ದೇಶಕ್ಕಿಂತ ಧರ್ಮಕ್ಕೇ ಮೊದಲ ಆದ್ಯತೆ ನೀಡಿದ ವ್ಯಕ್ತಿ ಎಂದು ನಿಮ್ಮ ಬಗ್ಗೆ ಯಾರಾದರೂ ಆರೋಪ ಮಾಡು ವಂತಾದರೆ ನಿಜಕ್ಕೂ ಬೇಸರವಾಗುತ್ತದೆ.
ಪ್ಲೀಸ್ ಈ ಬಗ್ಗೆ ಯೋಚನೆ ಮಾಡಿ…
ಓದುಗರಾದ ನೀವೂ ಕೂಡ ಬಲ-ಎಡ ಎಂಬ ಪೂರ್ವಗ್ರಹಗಳನ್ನು ತಲೆಯಿಂದ ಕಿತ್ತುಹಾಕಿ ಈ ದೇಶದ ಬಗ್ಗೆ ಒಂದು ಕ್ಷಣ ಯೋಚಿಸಿ…
ಕೊನೆಯದಾಗಿ, ಏನನ್ನೂ ರಿಪೇರಿ ಮಾಡುವ ಬೋರ್ಡ್ ಹಿಡಿದು ಕೊಂಡು ಡ್ಯಾಮೇಜ್ ಮಾಡಿದ್ದು ಸರೀನಾ ಶಾರುಖ್?
ತà³à²‚ಬಾ ಸಾಂಧರà³à²à²¿à²• ಹಾಗೂ ಸರಿಯಾದ ಪತà³à²° ಶಾರà³à²•ೠಗೆ….ದಯವಿಟà³à²Ÿà³ ಇದನà³à²¨à³ ಬಹಳಷà³à²Ÿà³ ಜನರಿಗೆ ತಲà³à²ªà²¿à²¸à³à²µ ವà³à²¯à²µà²¸à³à²¥à³† ಮಾಡಿ.
ಸರೠ, ಕಲೆ , ಸಂಸà³à²•ೃತಿ ವಿಚಾರಗಳಲà³à²²à²¿ ಜಾತಿ ಧರà³à²® , ರಾಜಕೀಯ ನà³à²¸à²¿à²³à²¿à²¦à³à²¦à²° ಪà³à²°à²à²¾à²µ ಇಂದೠದೇಶದ ಸà³à²¥à²¿à²¤à²¿ ಈ ರೀತಿ ಹದಗೆಟà³à²Ÿà³ ಹೋಗಿದೆ . ಎಲà³à²²à²µà²¨à³à²¨à³ ಮೀರಿ ಸಮಾಜಕà³à²•ೆ ಮಾದರಿಯಗಬೇಕಾದ ಇಂತಹವರೠಸಮಾಜದ ದಿಕà³à²•ೠತಪà³à²ªà²¿à²¸à²²à³ ಹೊರಟà³à²Ÿà²¿à²¦à³à²¦à²¾à²°à³† . ಹಣ , ಹೆಸರೠà²à²¾à²°à²¤à²¦à³à²¦à³ ನಿಷà³à²Ÿà³† ಪà³à²¹à²¾à²•ಿಸà³à²¤à²¾à²¨à²•à³à²• ? ಗಡಿ ಪಾರೠಮಾಡಬೇಕೠಇಂತವರನà³à²¨ ಅದಕà³à²•ಿಂತಲೂ ಮೊದಲೠನಮà³à²®à²µà²°à³ ಸರಿಯಾಗಲಿ . ಇಂತಹ ಲೇಖನಗಳ ಮೂಲಕ ದೇಶಾà²à²¿à²®à²¾à²¨ ಬೆಳೆಸà³à²¤à³à²¤à²¿à²°à³à²µà³à²¦à²•à³à²•ೆ ಧನà³à²¯à²µà²¾à²¦à²—ಳೠ.
gr8 article, if sharukh acts in the same manner then he will face the same that has happened to M F Hussain….
Shah Rukh Khan has proved this several times that he just another Pakistani left over in India. The last 2 paragraphs of the letter must be put into the brain of Mr. Khan (if he has one). He is the perfect example for “Vinashakaale Vipareeta Buddhi”. One of my friends was a big fan of Shah Rukh. She had a big Wall poster in her bedroom where she can she it first the moment she wakes up from sleep. Last week after all these statements from Mr. Khan and reading this letter in VK.. she has burnt all the posters and pictures she had of Shah Rukh.
This is just a begining. There could be somemore and one day there would be no one to admire him. Mr. Khan – Aap ko kutte ke saath bhi compare nahi kar sakta. Agar karronga to woh kutta bhi khudkhushi kar lega!!!!
brave answer to a cowardly.
ಹಿಂದಿ ಚಿತà³à²° ರಂಗ ಒಂದೠದೊಡà³à²¡ ಉದà³à²¦à²¿à²®à³†,ಇಲà³à²²à²¿ ಹಿಂದà³à²¯à³‡à²¤à²°à²°à³ ಪà³à²°à²à²²à²µà²¾à²—à³à²¤à³à²¤à²¿à²¦à³à²¦à²¾à²°à³†,ನಿರà³à²®à²¾à²£à²¦à²²à³à²²à²¿,ನಿರà³à²¦à³‡à²¶à²¨à²¦à²²à³à²²à²¿,ಕಲಾವಿದರಲà³à²²à²¿,ತಾಂತà³à²°à²¿à²• ತಜà³à²žà²°à²²à³à²²à²¿.ನಮà³à²®à²µà²°à³ ದಡà³à²¡à²°à³,ಇತರರೠಬà³à²¦à³à²¦à²¿à²µà²‚ತರೠಇದಕà³à²•ೆ ಉದಾಹರಣೆ ಹಿಂದಿ ನಾಯಕ ನಟರà³à²—ಳೠನಮà³à²®à²µà²°à³ ದà³à²¡à³à²¡à³ ಕಳೆದà³à²•ೊಂಡೠಹಿಂದà³à²¯à³‡à²¤à²°à²°à²¨à³à²¨à³ ಬೆಳೆಸà³à²¤à³à²¤à²¿à²¦à³à²¦à²¾à²°à³†.ಹಿಂದà³à²—ಳೇ,ಹಿಂದà³à²—ಳನà³à²¨à³ ಮಾತà³à²° ಬೆಳೆಸಿ.
ಹೆಲೋ ಸಿಂಹ ಸರà³, ನಿಮà³à²® ಲೇಖನ ಇದೇ ಮೊದಲ ಬಾರಿ ಓದà³à²¤à³à²¤à²¿à²°à³à²µà³à²µà³ ತà³à²‚ಬಾ ಚೆನà³à²¨à²¾à²—ಿದೆ, ಹಾಗೂ ನಿಮà³à²® ಹೆಸರಿನಂತೆಯೇ ಸಿಂಹದಂತೆಯೇ ಘರà³à²œà²¿à²¸à³à²µà²‚ತಿದೆ ಹಾಗೂ ಎಲà³à²²à²° ಹà³à²°à²¦à²¯ ಮà³à²Ÿà³à²¤à³à²µà²‚ತಿದೆ. ಪà³à²°à²¤à²¿à²¯à³Šà²¬à³à²¬ à²à²¾à²°à²¤à³€à²¯à²¨à²¿à²—ೂ ಇದೠತಿಳಿದಿರà³à²µ ವಿಷಯ ಸರà³, ಮà³à²¸à³à²²à²¿à²®à²°à³ à²à²¾à²°à²¤à³€à²¯à²°à²¨à³à²¨à³ ಮಟà³à²Ÿà²¹à²¾à²•à³à²¤à³à²¤à²¿à²°à³à²µà³à²¦à³ ಇಂದಿನ ಜೀವನದಲà³à²²à²‚ತೂ ಸರà³à²µà³‡ ಸಾಮಾನà³à²¯à²µà²¾à²—ಿಬಿಟà³à²Ÿà²¿à²¦à³†, ನಮà³à²® ಸà³à²¤à³à²¤à²®à³à²¤à³à²¤à²²à³‚ ಅವರೇ ಹೆಮà³à²®à²°à²µà²¾à²—ಿ ಬೆಳೆದೠನಿಂತಿದà³à²¦à²¾à²°à³†. ಪà³à²°à²¤à²¿à²¯à³Šà²¬à³à²¬ ನಾಗರೀಕನೠಮà³à²¸à³à²²à²¿à²‚ಮರ ವಿರà³à²¦à³à²§ ಎಚà³à²šà³†à²¤à³à²¤à³à²•ೊಂಡರೆ ನಮಗೆ ಮà³à²‚ದದೊಗಬಹà³à²¦à²¾à²¦ ಸಮಸà³à²¯à³†à²¯à²¨à³à²¨à³ ಸà³à²µà²²à³à²ªà²®à²Ÿà³à²Ÿà²¿à²—ಾದರೂ ನೀಗಿಸಬಹà³à²¦à²²à³à²²à³à²²à²µà³‡…..
ಸà³à²µà²¾à²¤à²‚ತà³à²°à³à²¯ ಮಾಧà³à²¯à²®à²¦ ಬಗà³à²—ೆ ಉತà³à²¤à²®à²µà²¾à²¦ ಮಾಹಿತಿ ಕೊಟà³à²Ÿà²¿à²¦à³à²¦à³€à²°à²¿.ಇನà³à²¨à³ ಶಾರà³à²–ೠನ ಕà³à²°à²¿à²¤ ನಿಮà³à²® ಬರಹ ಮಾಮೂಲಿನಂತೆ ಇದೆ.
Hello Pratap Simha,
Naanu nimma mattu nimma lekhanagala abhimani.
The theme you select every week & the methodology you use to descride the good & bad are too good & convincing to all. I would love to read more on your articles & pass the information to my surroundings.
For a moment I thought Mr. sharukh was right at sportsmenship point of view.
when I saw the movie reviews, related reviews by you & other fellows my eyes are opened & start thinking again on the subject. You are very right on the below statement “ಮಿಸà³à²Ÿà²°à³ ಖಾನà³, ನೀವೇ ನೀಡಿದà³à²¦ ನಿಮà³à²®à²¦à³à²¦à³Šà²‚ದೠಹೇಳಿಕೆಯನà³à²¨à³ ನೆನಪಿಸಿಕೊಡಲೠಅವಕಾಶ ಕೊಡಿ-“ನಾನೠà²à²¾à²°à²¤à²µà³†à²‚ಬ ದೇಶದಲà³à²²à²¿ ರà³à²µ ಮà³à²¸à³à²²à²¿à²‚. ಅದೊಂದೠಹಿಂದೂ ದೇಶ ಎಂಬ à²à²¾à²µà²¨à³† ನಮà³à²® ಲà³à²²à³†à²‚ದೂ ಮೂಡà³à²µà²‚ತೆ ಮಾಡಿಲà³à²²â€. ಆದರೆ ಪಾಕಿಸà³à²¤à²¾à²¨à²¦à²²à³à²²à²¿ ಇದೇ ರೀತಿ ಹೇಳಿಕೆ ನೀಡà³à²µ ಒಬà³à²¬à²¨à³‡ ಒಬà³à²¬ ಹಿಂದೂವನà³à²¨à³ ತೋರಿಸಬಲà³à²²à²¿à²°à²¾?”.
Probably this the not the right forum to divert to other issue, but as a fact that all need to accept that is, what mr.nityananda did also is wrong to the society.
I admire what Vidyabushan (kukke subramanya swamy) did. Atleast he came out of the temple premises & openly declared him self as he cannot serve as “SANYASI” and want divert himself towards normal family life.
I believe you are the one who knows better/best of all these things.
All the best & awaiting more & more motivational & patriotism related articles in future
Sincerely,
Kiran Patankar
pratap, please stop spreading hatred. there is not much difference between u and the english media. they are in the left extreme, u r in the right.
Nice article
hello sir this article is just exellent.actually people just aware of what media reveals thats true especially with celebrities.But ur articles are making people to think about wheather the news is really right . how such celebrities misguide the common people.inpresent scenario ur articles r really making to realise patriotism,keep writting such articles sir bcoz such articles ssimha sir e gharjane munduvareyali
E SIMHA GHARJANE SHARUKH NIDDEGEDISALI
Thank u sir for givin the knowledge of present situation
this one was a good artical in india every one as the freedom to speak wat they feel but some one who is famous will turn his popularity or use it and make peoples thinkining change it should be changed y dont people change the way they look at the stars?
they should be seen as just a good actor. and stop supporting them saying he is my fav wat ever he says i will follow
Good Noon Simha sir,
Today first time i wred ur artical. It was Very good. i dont how to reply you from next time i will prepare myself and reply you.
JAI HIND
i also stopped liking that idiot guy after his statements .
just bull shit