Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!

ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!

ಅವರು ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರನ್ನು ವಿವಾಹವಾಗಿದ್ದು 1968ರಲ್ಲಿ. ರಾಹುಲ್ ಗಾಂಧಿ 1970ರಲ್ಲಿ ಹುಟ್ಟಿದರು. 1972ರಲ್ಲಿ ಪ್ರಿಯಾಂಕಾ ಜನನವಾಯಿತು. 1980ರಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಸಂಜಯ್ ಗಾಂಧಿ ಅಗಲಿದ ಕಾರಣ 1982ರಲ್ಲಿ ರಾಜೀವ್ ಗಾಂಧಿ ಅಧಿಕೃತವಾಗಿ ರಾಜಕಾರಣಕ್ಕಿಳಿದರು. 1968ರಿಂದ 1982ರವರೆಗೆ ಅಂದರೆ ಸುಮಾರು 14 ವರ್ಷ ಕಳೆದರೂ ಸೋನಿಯಾ ಗಾಂಧಿಯವರು ಮಾತ್ರ ಇಟಲಿಯ ನಾಗರಿಕಳೇ ಆಗಿದ್ದರು. ಒಬ್ಬ ಪ್ರಧಾನಿಯೆಂದರೆ ದೇಶದ ಚುಕ್ಕಾಣಿಯಂಥ ಗುರುತರ ಜವಾಬ್ದಾರಿಯನ್ನು ಹೊತ್ತ ವ್ಯಕ್ತಿ ಮಾತ್ರವಲ್ಲ, ನಮ್ಮ ಸಾಮರ್ಥ್ಯ-ದೌರ್ಬಲ್ಯಗಳ ಬಗ್ಗೆ ಮೂಲ ಮಾಹಿತಿ ಹೊಂದಿರುವ ಸ್ಥಾನವದು. ನಮ್ಮ ದೇಶದ ಅತ್ಯಂತ ಗಂಭೀರ ಹಾಗೂ ಗೌಪ್ಯ ವಿಚಾರಗಳ ಮಾಹಿತಿ ಹೊಂದಿರುವ ಗದ್ದುಗೆಯದು. ಅವು ಯಾವ ಕಾರಣಕ್ಕೂ ಯಾರಿಗೂ, ಅದರಲ್ಲೂ ವಿದೇಶಿಯರಿಗೆ ಸೋರಿ ಹೋಗಬಾರದು. ಮನೆಯಲ್ಲಿ, ಜತೆಯಲ್ಲಿ, ಡ್ರಾಯಿಂಗ್ ರೂಮ್‌ನಲ್ಲಿ, ಊಟದ ಟೇಬಲ್‌ನಲ್ಲಿ, ದಿನದ 24 ಗಂಟೆಗಳೂ ಜತೆ ಇರುವ ಪ್ರಧಾನಿಯ ಸೊಸೆಯೇ ವಿದೇಶಿಯರಾಗಿಬಿಟ್ಟರೆ? ಇಂತಹ ಅನುಮಾನ, ಶಂಕೆಗಳ ಹೊರತಾಗಿಯೂ ಸೋನಿಯಾ ಭಾರತೀಯನ ಕೈಹಿಡಿದಿದ್ದರೇ ವಿನಹ ಭಾರತೀಯರಾಗುವ ಆಸಕ್ತಿಯನ್ನೆಂದೂ ತೋರಲಿಲ್ಲ. ಭಾರತದ ಊಟ, ಉಡುಗೆ ಯಾವುದನ್ನೂ ಇಷ್ಟಪಟ್ಟವರಲ್ಲ. ನಮ್ಮ ಪ್ರಧಾನಿ ಸೊಸೆಯಾಗಿ ಬಂದ ಮೇಲೂ ಮಿನಿಸ್ಕರ್ಟ್ ಹಾಕಿ ವಿವಾದಕ್ಕೂ ಒಳಗಾಗಿದ್ದರು. 1980ರಲ್ಲಿ ಮೊಟ್ಟ ಮೊದಲ ಬಾರಿಗೆ ಸೋನಿಯಾ ಗಾಂಧಿಯವರ ಹೆಸರು ದಿಲ್ಲಿಯ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತಾದರೂ ಆಕೆ ಭಾರತದ ನಾಗರಿಕರೇ ಆಗಿರಲಿಲ್ಲ. ಅದು ಭಾರತೀಯ ನಾಗರಿಕರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂಬ 1960ರ ಚುನಾವಣೆ ಸಂಹಿತೆ ನೋಂದಣಿ ಕಾಯಿದೆಯ ಉಲ್ಲಂಘನೆಯಾಗಿತ್ತು. ಕೊನೆಗೂ 1983, ಏಪ್ರಿಲ್‌ನಲ್ಲಿ  ಭಾರತದ ಪೌರತ್ವವನ್ನು ಸ್ವೀಕರಿಸಿದರೂ ಅಲ್ಲೂ ಗೋಲ್‌ಮಾಲ್ ನಡೆದಿತ್ತು. 1983ರ ಮತದಾರರ ಪಟ್ಟಿಯಲ್ಲಿ ಸೋನಿಯಾ ಹೆಸರು ಕಾಣಿಸಿಕೊಂಡಿತು. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೊಸ ಸೇರ್ಪಡೆ ಕಾರ್ಯ ಜನವರಿಯಲ್ಲೇ ಮುಗಿದಿತ್ತು. ಏಪ್ರಿಲ್‌ನಲ್ಲಿ ಪೌರತ್ವ ಪಡೆದುಕೊಂಡ ಆಕೆಯ ಹೆಸರು ಜನವರಿಯಲ್ಲೇ ಅಂತಿಮಗೊಂಡಿದ್ದ ಪಟ್ಟಿಯೊಳಗೆ ಹೇಗೆ ಸೇರಿಕೊಂಡಿತು?

ಇತ್ತ 1992ಕ್ಕೂ ಮೊದಲು ಯಾರು ತಮ್ಮ ಪೌರತ್ವ ಕಳೆದುಕೊಂಡಿದ್ದಾರೋ ಅವರು ಮತ್ತೆ ತಮ್ಮ ಹೆಸರನ್ನು ನೊಂದಾ ಯಿಸಿಕೊಳ್ಳಬಹುದು ಎಂದು ಘೋಷಿಸಿದ ಇಟಲಿ, 1992ರಲ್ಲಿ ದ್ವಿಪೌರತ್ವ ನೀಡಲು ಮುಂದಾಯಿತು. ಅದಕ್ಕೂ ಮೊದಲು ಅಂದರೆ 1991ರಲ್ಲಿ ರಾಜೀವ್ ಗಾಂಧಿಯವರು ಹತ್ಯೆಯಾಗಿದ್ದರು. ಹಾಗಾಗಿ ಸೋನಿಯಾ ಗಾಂಧಿಯವರು ಮತ್ತೆ ಇಟಲಿಯ ಪೌರತ್ವಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡರೆ? ಅದನ್ನು ಸೋನಿಯಾ ಅವರೆಂದೂ ಸ್ಪಷ್ಟಪಡಿಸಿಲ್ಲ. ಹಾಗಾಗಿಯೇ ಆಕೆ 1998ರ ಸಾರ್ವತ್ರಿಕ ಚುನಾವಣಾ ಪ್ರಚಾರೋಂದಲನಕ್ಕಿಳಿದಾಗ ಆಕೆಯ ವಿದೇಶಿ ಮೂಲ ದೊಡ್ಡ ವಿಷಯ, ವಿವಾದಕ್ಕೆಡೆಯಾಯಿತು. ಗಾಂಧಿ, ನೆಹರು ಆಳಿದ ಕಾಂಗ್ರೆಸ್ಸಿಗೆ ಯಾರೂ ಸಿಗಲಿಲ್ಲವೆ? ಎಂಬ ಪ್ರಶ್ನೆ ಎದುರಾಯಿತು. ನಮ್ಮ ದೇಶದ ಪೌರತ್ವ ಪಡೆದುಕೊಳ್ಳುವುದಕ್ಕೇ 15 ವರ್ಷ ಮೀನ-ಮೇಷ ಎಣಿಸಿದ್ದ ಆಕೆಯ ದೇಶನಿಷ್ಠೆಯ ಬಗ್ಗೆ ಇಂತಹ ಸಾಕಷ್ಟು ಅನುಮಾನಗಳೆದ್ದವು, ಅನುಮಾನಗಳಿಗೆ ಬಲವಾದ ಕಾರಣಗಳೂ ಇದ್ದವು. ಒಂದು ವೇಳೆ, ಆಕೆಯೇನಾದರೂ ಈ ದೇಶದ ಪ್ರಧಾನಿಯಾದರೆ ಗತಿಯೇನು? ಎಂಬ ಆತಂಕ ಸೃಷ್ಟಿಯಾಯಿತು. 1998ರಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಹಾಲಿ ಅಧ್ಯಕ್ಷ ಸೀತಾರಾಮ್ ಕೇಸರಿಯವರನ್ನು ಪದಚ್ಯುತಗೊಳಿಸಿ, ಸೋನಿಯಾ ಗಾಂಧಿಯವರನ್ನು ಪಕ್ಷದ ಅಧ್ಯಕ್ಷೆ ಎಂದು ಏಕಾಏಕಿ ಘೋಷಣೆ ಮಾಡಲಾಯಿತು. ಸಭೆ ಬಿಟ್ಟು ಹೋಗಲೊಪ್ಪದ ಸೀತಾರಾಮ್ ಕೇಸರಿಯವರನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಹೊರಕ್ಕೆ ಹಾಕಲಾಯಿತು. ಪಕ್ಷದ ಸದಸ್ಯರಾದ  69 ದಿನಗಳಲ್ಲಿಯೇ ಸೋನಿಯಾ ಅಧ್ಯಕ್ಷರಾಗಿ ಬಿಟ್ಟರು. 1999ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಅತ್ಯಂತ ಜನಪ್ರಿಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ‘ಗದ್ದಾರ್’ (ದೇಶದ್ರೋಹಿ), ‘ಸುಳ್ಳುಗಾರ’ ಎಂದು ಕರೆಯುವ ಮೂಲಕ ದೇಶ ವಾಸಿಗರ ಮುಂದೆ ಕುಬ್ಜರಾಗಿ ಬಿಟ್ಟಿದ್ದರು. ಪರಿಣಾಮವಾಗಿ ಕಾಂಗ್ರೆಸ್ ಹೀನಾಯವಾಗಿ ಸೋತು 114 ಸ್ಥಾನಗಳಿಗೆ ಇಳಿಯಿತು. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂತಾದರೂ ಕಾಂಗ್ರೆಸ್ ಪಾಲು 145 ಸ್ಥಾನಗಳಷ್ಟೇ ಆಗಿತ್ತು. ಬಿಜೆಪಿ ದ್ವೇಷವೆಂಬ ಏಕೈಕ ಸಾಮಾನ್ಯ ಅಂಶ ಉಳಿದೆಲ್ಲ ಪಕ್ಷಗಳು ಕಾಂಗ್ರೆಸ್ ತೆಕ್ಕೆ ಸೇರಿ ಸೋನಿಯಾ ಕೈಗೆ ಅಧಿಕಾರ ದಕ್ಕುವಂತೆ ಮಾಡಿತು.

ಆದರೆ…

2009ರ ಲೋಕಸಭೆ ಚುನಾವಣೆಯ ನಂತರವೂ ಹಾಗೇ ಹೇಳುವುದಕ್ಕಾಗುತ್ತದೆಯೇ? 2004 ಹಾಗೂ ಅದಕ್ಕಿಂತ ಮೊದ ಲಿದ್ದ ಸೋನಿಯಾ ಗಾಂಧಿಯವರಿಗೂ ಈಗಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಯಾವುದಾದರೂ ವ್ಯತ್ಯಾಸಗಳಿವೆಯೇ? ಅಥವಾ ವ್ಯತ್ಯಾಸಗಳಾಗಿವೆಯೇ? ಸೋನಿಯಾ ಬಗ್ಗೆ ಪ್ರಾರಂಭದಲ್ಲಿದ್ದ ಅಪಸ್ವರ, ಅಪನಂಬಿಕೆ ಈಗ ತಕ್ಕಮಟ್ಟಿಗೆ ದೂರವಾ ಗಿದೆ ಎನಿಸುತ್ತಿಲ್ಲವೆ? ಅಸಹನೀಯವಾಗಿದ್ದ ನಮ್ಮ ಮನಸುಗಳು ಸಹ್ಯಗೊಳ್ಳುತ್ತಿವೆಯೇ? How she endeared herself to the masses? ಆಕೆ ಜನರಿಗೆ ಹೇಗೆ ಹತ್ತಿರವಾದರು? ಅಥವಾ ತಮ್ಮನ್ನು ಹೇಗೆ ಹತ್ತಿರ ಮಾಡಿಕೊಂಡರು?

ಒಬ್ಬ ರಾಜಕಾರಣಿಯಾಗಿ ಸೋನಿಯಾ ಗಾಂಧಿಯವರು 1994 ರಿಂದ 2010ರವರೆಗೂ ನಡೆದುಕೊಂಡು ಬಂದ ದಾರಿ, ಬೆಳೆದು ಬಂದ ಬಗೆಯನ್ನು ಗಮನಿಸಿ. ಗಾಂಧಿ-ನೆಹರು ಕುಟುಂಬ ಎಂದ ಕೂಡಲೇ ಡೈನಾಸ್ಟಿ, ವಂಶಾಡಳಿತ ಅಂತ ಎಷ್ಟೇ ದೂರಬಹುದು. ಆದರೂ ಗಾಂಧಿ ಸರ್‌ನೇಮ್ ಹೊಂದಿರುವ ಈ ನೆಹರು ವಂಶ ಇಲ್ಲದಿದ್ದರೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಇಷ್ಟು ಕಾಲ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿತ್ತೆ? ಕಾಂಗ್ರೆಸ್‌ಗೆ ನೆಹರು ಕುಟುಂಬ ಹಾಗೂ ಗಾಂಧಿ ಸರ್ ನೇಮ್ ಬೇಕು. ಅದೇ ಕಾಂಗ್ರೆಸ್‌ನ ಬೈಂಡಿಂಗ್ ಫೋರ್ಸ್, ಫ್ಯಾಕ್ಟರ್. ನೆಹರು ಕುಟುಂಬ ರಹಿತ ಕಾಂಗ್ರೆಸ್ 1991ರಿಂದ 1998ರವರೆಗೂ ಹೇಗಿತ್ತು ನೋಡಿ? ನರಸಿಂಹರಾವ್ ಅವರು ಪ್ರಧಾನಿಯಾಗಿ 5 ವರ್ಷ ಅಧಿಕಾರ ನಡೆಸಿದರೂ ಪಕ್ಷ ಹಾಗೂ ಸರಕಾರದ ಕಥೆ ಎತ್ತು ಏರಿಗೆ, ಕೋಣ ನೀರಿಗೆ ಎಳೆ ಯಿತು ಎಂಬಂತಿತ್ತು. ಎನ್‌ಡಿ ತಿವಾರಿ, ಅರ್ಜುನ್ ಸಿಂಗ್, ಮಾಧವ್ ರಾವ್ ಸಿಂದ್ಯಾ, ಶರದ್ ಪವಾರ್ ಎಲ್ಲರೂ ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗುವ ಮೂಲಕ ಪಕ್ಷ ಧೂಳೀಪಟವಾಗುವ, ಛಿದ್ರ ಛಿದ್ರವಾಗುವ ಮಟ್ಟಕ್ಕೆ ಹೋಯಿತು. ಕಟ್ಟಾ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ದುಂಬಾಲು ಬಿದ್ದು ಪಕ್ಷಕ್ಕೆ ಎಳೆದುತಂದು ಅಧ್ಯಕ್ಷಗಾದಿ ಮೇಲೆ ಕೂರಿಸಿದರು. ಸೋನಿಯಾ ಗಾಂಧಿಯವರಿಗೂ ಕೂಡ ಗಾಂಧಿ ಎಂಬ ಸರ್‌ನೇಮ್‌ನೊಂದಿಗೆ ಬೈ ಡೀಫಾಲ್ಟ್ ಅಥವಾ ಆಯಾಚಿತವಾಗಿ ಕೆಲವು ಅಧಿಕಾರಗಳು, ಹಕ್ಕುಗಳು ಸಿಕ್ಕಿದ್ದು ನಿಜ. ಹಾಗಂತ ವಂಶಾಡಳಿತ ಎನ್ನುವುದಕ್ಕಾಗುವುದಿಲ್ಲ. ನೆಹರು ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಉಳಿಯುತ್ತದಾ ಎಂಬುದೇ ಇಲ್ಲಿರುವ ಪ್ರಶ್ನೆ. ಕಾಂಗ್ರೆಸ್ ತೆಗಳುವ ಮುನ್ನ ವಾಜಪೇಯಿ ನಿವೃತ್ತಿಯ ನಂತರ ಬಿಜೆಪಿಯ ಗತಿಯೇನಾಯಿತು ನೋಡಿ? ಅಧಿಕಾರ ಕಳೆದುಕೊಂಡು ೬ ವರ್ಷಗಳಾದರೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲಗೊಂಡು ಬಿಟ್ಟಿದೆ. ಸೋನಿಯಾ ಅಧ್ಯಕ್ಷರಾದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲು 6 ವರ್ಷ ತೆಗೆದುಕೊಂಡರಾದರೂ ಆನಂತರದ ಅವಧಿಯನ್ನು ಗಮನಿಸಿ… 2004ರಲ್ಲಿ ಯುಪಿಎ ಎಂಬ ವ್ಯವಸ್ಥೆ ಮೂಲಕ ಸರಕಾರ ರಚಿಸಿದಾಗ ಕಮ್ಯುನಿಸ್ಟರನ್ನು ಸಂಭಾಳಿಸುವುದು ಸುಲಭವಲ್ಲ ಎಂಬುದು ಅವರಿಗೂ ಗೊತ್ತಿತ್ತು. ಕಾಂಗ್ರೆಸ್ ಜಾಣ್ಮೆ ತೋರಿತು. ನಾಗರಿಕ ಅಣು ಸಹಕಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ೨೦೦೫, ಜುಲೈನಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಜತೆ ಪ್ರಧಾನಿ ಮನಮೋಹನ್ ಸಿಂಗ್ ಮಾತುಕತೆ ಆರಂಭಿಸಿದರು. ಅಮೆರಿಕದ ಕಟ್ಟಾ ವಿರೋಧಿಗಳಾದ ಕಮ್ಯುನಿಸ್ಟರು ಕುಪಿತಗೊಳ್ಳುತ್ತಾರೆಂಬುದು ಕಾಂಗ್ರೆಸ್‌ಗೆ ತಿಳಿದಿತ್ತು. ಆದರೂ ಬುಷ್ ಜತೆ ಕೈಜೋಡಿಸುವ ಮೂಲಕ ಕಮ್ಯುನಿಸ್ಟರು ತಮ್ಮ ಗಮನ, ಶ್ರಮ ಎಲ್ಲವನ್ನೂ ವಿರೋಧದಲ್ಲೇ ಹಾಳು ಮಾಡುವಂತೆ ಮಾಡಿತು. ಒಂದು ಕಡೆ ಒಪ್ಪಂದ ಮಾತುಕತೆಯನ್ನು ಜೀವಂತವಾಗಿಟ್ಟಿತು, ಇನ್ನೊಂದೆಡೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಆರೋಗ್ಯ ಕಾರ್ಯಕ್ರಮ,  ಸರ್ವ ಶಿಕ್ಷಾ ಅಭಿಯಾನ್ (ವಾಜಪೇಯಿ ಆರಂಭಿಸಿದ್ದು) ಮುಂತಾದ ಜನಪರ ಕಾರ್ಯಕ್ರಮಗಳನ್ನು ವ್ಯಾಪಕ ಪ್ರಮಾಣದಲ್ಲಿ ಹಮ್ಮಿಕೊಳ್ಳುವ ಮೂಲಕ ತಾವು ಬಡವರ ಪರ ಎಂದು ಕೊಚ್ಚಿಕೊಳ್ಳುವ ಕಮ್ಯುನಿಸ್ಟರನ್ನು ಜಾಣತನದಲ್ಲಿ ಮೀರಿಸಿತು. ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಇಂತಹ ಯೋಜನೆಗಳೇ. ಅದರಲ್ಲೂ ೨೦೦೯ರ ಲೋಕಸಭೆ ಚುನಾವಣೆ ವೇಳೆ ಎಲ್ಲರಿಗಿಂತ ಮೊದಲೇ ಚುನಾವಣಾ ಪ್ರಣಾಳಿಕೆ ಹೊರಡಿಸಿದ ಕಾಂಗ್ರೆಸ್, ಪ್ರತಿ ಪಡಿತರ ಚೀಟಿಗೆ 25 ಕೆ.ಜಿ. ಅಕ್ಕಿ, ಸಕ್ಕರೆ, ಗೋಧಿ ಹಾಗೂ ಸೀಮೆಎಣ್ಣೆ  ನೀಡುವ ವಾಗ್ದಾನ ಮಾಡುವ ಮೂಲಕ ಬಿಜೆಪಿ ಜಾರಿ ಬೀಳುವಂತೆ ಮಾಡಿತು.

ನೀವು ಸೋನಿಯಾ ಗಾಂಧಿಯವರನ್ನು ಇಷ್ಟಪಡಿ, ಬಿಡಿ. ಆದರೆ ಆಕೆಯ conviction ಇದೆಯಲ್ಲಾ ಆ ಅಚಲ ನಂಬಿಕೆ, ದೃಢತೆಯನ್ನು ಮಾತ್ರ ಮೆಚ್ಚಲೇಬೇಕು. ಸರಕಾರದ ಭವಿಷ್ಯವನ್ನೇ ಪಣಕ್ಕಿಟ್ಟು ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲು ಮುಂದಾದರು. ಇಷ್ಟೆಲ್ಲಾ ನಿರ್ಧಾರಗಳನ್ನು ಏಕಾಂಗಿಯಾಗಿ ಅಥವಾ ಸ್ವಂತ ಸಾಮರ್ಥ್ಯದಿಂದ ತೆಗೆದುಕೊಳ್ಳುವ ತಾಕತ್ತು ಸೋನಿಯಾ ಗಾಂಧಿಯವರಿಗಿಲ್ಲ ಎಂಬುದು ಸತ್ಯವೇ ಆಗಿದ್ದರೂ ಅವರ ಸುತ್ತ ಭಟ್ಟಂಗಿಗಳೇ ತುಂಬಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಭಟ್ಟಂಗಿಗಳ ಮಾತು ಕೇಳಿದರೆ ಹಾಳಾಗುವುದೇ ಹೆಚ್ಚು. ಸೋನಿಯಾ ಅವರಿಗೆ ಒಳ್ಳೆಯ ಸಲಹೆಗಾರರಿದ್ದಾರೆ ಹಾಗೂ ಅವರ ಯಾವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬ ಜಾಣ್ಮೆ ಆಕೆಗಿದೆ. ೨೦೦೯, ಮೇ ೧೬ರಂದು ಪ್ರಕಟವಾದ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸೋನಿಯಾ ನಡೆದುಕೊಂಡ ರೀತಿ, ರಚಿಸಿದ ಕ್ಯಾಬಿನೆಟ್ ಅನ್ನು ಒಮ್ಮೆ  ನೋಡಿ…  ಕಾಂಗ್ರೆಸ್ ೨೦೬ ಸ್ಥಾನ ಗಳಿಸಿದ್ದೇ ತಡ ಸೋನಿಯಾ ಗಡುಸಾದರು. ಲಾಲು ಕಾಲು ಹಿಡಿದುಕೊಳ್ಳುವಷ್ಟು ದೀನರಾಗಿ ನಿಂತಿದ್ದರೂ ಕ್ಯಾಬಿನೆಟ್‌ಗೆ ತೆಗೆದುಕೊಳ್ಳಲಿಲ್ಲ, ರಾಮ್‌ವಿಲಾಸ್ ಪಾಸ್ವಾನ್‌ಗೂ ಮಣೆಹಾಕಲಿಲ್ಲ. ೧೯ ಸೀಟು ತೆಗೆದುಕೊಂಡಿದ್ದರೂ ಮಮತಾಗೆ ಕೊಟ್ಟಿದ್ದು ಒಂದೇ ಕ್ಯಾಬಿನೆಟ್ ಸೀಟು. ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕಿದ ಉಳಿದ ೯, ರಾಜ್ಯ ಸಚಿವರ ಸ್ಥಾನ. ಇನ್ನು ಹಿಂದಿನ ಸರಕಾರಕ್ಕೆ ತಲೆನೋವು ಕೊಡುತ್ತಿದ್ದವರ ಕಥೆ ಕೇಳಿ… ಅರ್ಜುನ್ ಸಿಂಗ್ ಮತ್ತೆ ಮಂತ್ರಿಯಾಗುವುದು ಬಿಡಿ, ಅವರ ಮಗಳಿಗೇ ಅಪ್ಪನ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದರು. ಕಾಂಗ್ರೆಸ್ಸಿಗರೇ, ನಿಷ್ಠಾವಂತರೇ ಆಗಿದ್ದರೂ ಗಿರಿಜಾ ವ್ಯಾಸ್‌ರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಾಡುವ ಮೂಲಕ ಕ್ಯಾಬಿನೆಟ್‌ನಿಂದ ದೂರ ಹಾಕಿದರು. ಅಗಲ ಬಾಯಿಯ ರೇಣುಕಾ ಚೌಧುರಿ ಅವರಿಗೆ ಸಂಪುಟದಲ್ಲಿ ಸ್ಥಾನವನ್ನೇ ನೀಡಲಿಲ್ಲ. ತಲೆಹರಟೆಗೆ ಹೆಸರಾಗಿದ್ದ ಮಣಿಶಂಕರ್ ಅಯ್ಯರ್ ಅವರ ಬಾಲ ಕಟ್ ಮಾಡಿ ಬರೀ ಸಂದಸರನ್ನಾಗಿ ಉಳಿಸಿಕೊಂಡಿದ್ದಾರೆ. ಶಶಿ ತರೂರ್ ಎಂಬ ಅಪ್ರಭುದ್ಧ ಇಂಗ್ಲಿಷ್ ರಾಜಕಾರಣಿಯ ತಲೆಗೆ ಮೊಟಕಿದರು. ಬಿಜೆಪಿ ಹಾಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ತರೂರ್‌ರನ್ನು ಕಿತ್ತುಹಾಕಿದರು ಎಂದು ತಪ್ಪು ತಿಳಿದುಕೊಳ್ಳಬೇಡಿ. ಪಾಕಿಸ್ತಾನಿಯರಿಗೆ ವೀಸಾ ನೀಡುವ ವಿಷಯದಲ್ಲಿ ಇರುವ ಕಠಿಣ ನಿಯಮಗಳನ್ನು ಸಾರ್ವಜನಿಕವಾಗಿ ಟೀಕಿಸಿದ್ದ ಹಾಗೂ ಆಡಳಿತ ವೆಚ್ಚ ಕಡಿತಕ್ಕೆ ‘ಕ್ಯಾಟಲ್ ಕ್ಲಾಸ್’ ಎಂದು ಕುಟುಕಿದ್ದ ತಲೆಹರಟೆಗೆ ದಂಡಿಸಲು ಸೋನಿಯಾ ಸೂಕ್ತ ಸಂದರ್ಭ ಹುಡುಕುತ್ತಿದ್ದರು. ಐಪಿಎಲ್ ವಿವಾದ ಅದಕ್ಕೊಂದು ಅವಕಾಶ ಕಲ್ಪಿಸಿತಷ್ಟೇ.

ಇವಿಷ್ಟೇ ಅಲ್ಲ, ಸೋನಿಯಾ ಯೋಗ್ಯರಿಗೆ ಮಣೆಯನ್ನೂ ಹಾಕಿದ್ದಾರೆ. ಕಪಿಲ್ ಸಿಬಲ್, ಪಿ. ಚಿದಂಬರಂ, ಪ್ರಣಬ್ ಮುಖರ್ಜಿ, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರಂತಹವರಿಗೆ ಯೋಗ್ಯತೆಯ ಆಧಾರದ ಮೇಲೆ ತಕ್ಕುದಾದ ಖಾತೆ ನೀಡಿದ್ದಾರೆ. ಇಂತಹ ಸಚಿವರ ಸಂಖ್ಯೆ ಇನ್ನೊಂದಿಷ್ಟು ಹೆಚ್ಚಾದರೆ ಕಾಂಗ್ರೆಸ್ ಮುಂದಿನ ಬಾರಿಯೂ ಅಧಿಕಾರಕ್ಕೇರಿದರೆ ಆಶ್ಚರ್ಯವಿಲ್ಲ. ಕಾಂಗ್ರೆಸ್ಸಿಗರ ಮಟ್ಟಿಗೆ ಸೋನಿಯಾ ಗಾಂಧಿ ಎಂಬುದು ಒಂದು ‘ಫಿಯರ್ ಫ್ಯಾಕ್ಟರ್’. ಹಾಗಾಗಿಯೇ ಬಾಲ ಮುದುರಿಕೊಂಡಿರುತ್ತಾರೆ. ಅಂತಹ ನಾಯಕತ್ವ ಖಂಡಿತ ಬೇಕು. ವಾಜಪೇಯಿ ಸರಕಾರದಲ್ಲಿ ಸಾರಿಗೆ ಸಚಿವರಾಗಿ ಒಳ್ಳೆಯ ಹೆಸರು ಮಾಡಿದ್ದ ಬಿ.ಸಿ. ಖಂಡೂರಿಯವರ ವಿರುದ್ಧ ಉತ್ತರಾಂಚಲದಲ್ಲಿ ಬಂಡಾಯವೆದ್ದಾಗ ಬೆನ್ನುಹುರಿಯೇ ಇಲ್ಲದಂತೆ ವರ್ತಿಸಿದ ಬಿಜೆಪಿಯ ಕೇಂದ್ರ ನಾಯಕರು ಖಂಡೂರಿಯಂಥ ಪ್ರಾಮಾಣಿಕ ವ್ಯಕ್ತಿಯನ್ನೇ ಮನೆಗೆ ಕಳುಹಿಸಿದರು. ಆದರೆ ವೈಎಸ್‌ಆರ್ ರಾಜಶೇಖರ ರೆಡ್ಡಿಯವರ ದುರ್ಮರಣದ ಬೆನ್ನಲ್ಲೇ ಆಂಧ್ರದಲ್ಲಿ ಭುಗಿಲೆದ್ದ ಗಲಾಟೆಯನ್ನು ತೆಗೆದುಕೊಳ್ಳಿ. ಆಂಧ್ರದ ಸಮಸ್ಯೆಯನ್ನು ಸೋನಿಯಾ ಹೇಗೆ ಹ್ಯಾಂಡಲ್ ಮಾಡಿದರು? ಅಷ್ಟೆಲ್ಲಾ ಮಂತ್ರಿಗಳು, ಶಾಸಕರು, ಸಂಸದರು ಸಾಮೂಹಿಕವಾಗಿ ರಾಜೀನಾಮೆ ನೀಡಿದರೂ ಜಗನ್ಮೋಹನ ರೆಡ್ಡಿಯನ್ನು ಮಟ್ಟಹಾಕಿದ್ದು, ರೋಶಯ್ಯರನ್ನು ಮುಂದುವರಿಸಿದ್ದು ಸೋನಿಯಾ ಅವರ ನಾಯಕತ್ವ ಗುಣವನ್ನು ತೋರಿಸುವುದಿಲ್ಲವೆ? ಉದ್ಯೋಗ ಖಾತ್ರಿ ಯೋಜನೆಗೆ ಸೋನಿಯಾ ಅವರ ಮುಕ್ತ ಬೆಂಬಲವಿದೆ, ನಿತ್ಯ ರಾಜಕಾರಣ, ಮಿತ್ರಪಕ್ಷಗಳ ನಿಭಾವಣೆ ಮುಂತಾದ ಜವಾಬ್ದಾರಿಯನ್ನು ತಾವು ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್ ನಿಶ್ಚಿಂತೆಯಿಂದ ಆಡಳಿತ ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನ್ಯೂಕ್ಲಿಯರ್ ಡೀಲ್ ಬಗ್ಗೆ ಯಾರೇನೇ ಹೇಳಿದರೂ ಅದು ಫ್ಯೂಚರ್ ಎನರ್ಜಿ. ನಂದನ್ ನಿಲೇಕಣಿಯಂಥ ಉದ್ಯಮಿಗಳನ್ನು ಇನ್ಫೋಸಿಸ್‌ನಿಂದ ಬಿಡಿಸಿಕೊಂಡು ಬಂದು ದೇಶವಾಸಿಗಳಿಗೆ ವಿಶಿಷ್ಟ ಗುರುತಿನ ಚೀಟಿ ಹಂಚುವ ಕಾರ್ಯಕ್ಕೆ ಹಚ್ಚಿರುವುದು ಸಾಮಾನ್ಯ ಸಾಧನೆಯೇನು? ಜತೆಗೆ ಸಿಬಿಐ ಅನ್ನು ಎಷ್ಟು ಚೆನ್ನಾಗಿ ಬಳಸಿಕೊಂಡು ಮಾಯಾವತಿ, ಲಾಲು, ಮುಲಾಯಮ್‌ರನ್ನು ಮಟ್ಟಹಾಕುತ್ತಿದ್ದಾರೆ ನೋಡಿ?!

ಇನ್ನೊಂದೆಡೆ ಮಗನನ್ನು ಪ್ರಧಾನಿ ಗಾದಿಯಲ್ಲಿ ಕೂರಿಸುವ ವಿಷಯದಲ್ಲೂ ಆಕೆ ಆತುರ ಮಾಡುತ್ತಿಲ್ಲ. ಬಿಜೆಪಿ ಸರಕಾರ ರಚಿಸಿದ ಕೂಡಲೇ ಪಕ್ಷ ಸಂಘಟನೆಯನ್ನೇ ಮರೆತು ಅಧಿಕಾರದ ಮದದಲ್ಲಿ ಮೈಮರೆಯಿತು. ಅಧಿಕಾರದ ಚುಕ್ಕಾಣಿಯನ್ನು ಸೋನಿಯಾ ಗಾಂಧಿಯವರು ಹಿಡಿದಿದ್ದರೆ, ಮಗ ರಾಹುಲ್ ಗಾಂಧಿಯವರನ್ನು ಪಕ್ಷದ ಬಲವೃದ್ಧಿ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮುಂಬರುವ ಬಿಹಾರ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಖಂಡಿತ, ಸೋನಿಯಾ ಜಾಣೆ ಕೂಡ ಹೌದು. ಅಧಿಕಾರ ನಡೆಸುತ್ತಿರುವುದು ತಾವೇ ಆಗಿದ್ದರೂ ನಾಮ್ ಕೇ ವಾಸ್ಥೆಗೆ ಮನಮೋಹನ್ ಸಿಂಗ್ ಇದ್ದಾರೆ. ಒಂದು ವೇಳೆ ಎಡವಿದರೆ ದೋಷ ಪ್ರಧಾನಿ ತಲೆಗೆ, ಗೆದ್ದರೆ ಕೀರ್ತಿ ಸೋನಿಯಾಗೆ. ಅವರಿಗೆ ಸಾರ್ವಜನಿಕ ಸಂಪರ್ಕ ಕಲೆ ಚೆನ್ನಾಗಿ ಗೊತ್ತಿದೆ. ರಾಜೀವ್ ಹತ್ಯೆ ಆರೋಪಿ ನಳಿನಿಗೆ ವೈಯಕ್ತಿಕವಾಗಿ ಕ್ಷಮಾದಾನ ನೀಡುವ ಮೂಲಕ ತಮಿಳರ ಮನಗೆಲ್ಲುವ, ಅವರ ಮತಕ್ಕೆ ಕೈಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಮಾಧ್ಯಮಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದೂ ತಿಳಿದಿದೆ. ನಿಷ್ಠೆಗೆ ಪ್ರತಿಫಲವನ್ನು ಕೊಡುವಾಗಲೂ ಮರೆಯುವುದಿಲ್ಲ. ಎನ್‌ಡಿಟಿವಿಯ ಬರ್ಖಾ ದತ್ ಹಾಗೂ ಸಿಎನ್‌ಎನ್-ಐಬಿಎನ್‌ನ ರಾಜ್‌ದೀಪ್ ಸರ್ದೇಸಾಯಿಗೆ ಪದ್ಮಶ್ರೀ ಕೊಡಿಸಿದ್ದಾರೆ! ಸೋನಿಯಾ ಗಾಂಧಿಯವರನ್ನು ಸಂದರ್ಶನ ಮಾಡಲು ಇವತ್ತಿಗೂ ವೀರ್ ಸಾಂಘ್ವಿಯವರೇ ಬೇಕು. ಆತ ಸದಾ ಪುಳಕಿತವಾಗುವ ಪ್ರಶ್ನೆಗಳನ್ನೇ ಕೇಳುತ್ತಾರೆ!!

ಒಟ್ಟಾರೆ ಸೋನಿಯಾ ಗಾಂಧಿಯವರನ್ನು ಗಮನಿಸುತ್ತಾ ಬಂದವರಿಗೆ she comes of an age ಎಂದು ಖಂಡಿತ ಅನಿಸುತ್ತದೆ. ಮನಮೋಹನ್ ಸಿಂಗ್ ಎರಡನೇ ಭಾರಿ ಪ್ರಧಾನಿಯಾಗಿ ಇಂದಿಗೆ(ಮೇ.22) ಒಂದು ವರ್ಷವಾಯಿತು. ಅದರ ನಿಜವಾದ ಕೀರ್ತಿ ಸಲ್ಲಬೇಕಾಗಿದ್ದು ಸೋನಿಯಾ ಗಾಂಧಿಯವರಿಗೆ.

41 Responses to “ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!”

 1. ಸೋನಿಯಾ ಗಾಂಧಿಯ ಕಾರ್ಯಶೈಲಿಯನ್ನು ಒಂದೇ ದೃಷ್ಟಿಕೋನ ಇರಿಸಿಕೊಂಡು ವಿಶ್ಲೇಷಿಸಿರುವುದನ್ನು ಓದುವಾಗ, ಇದನ್ನು ಬರೆದವರು ಪ್ರತಾಪ ಸಿಂಹನೇ ಅನ್ನುವ ಅನುಮಾನ ಮೂಡುವಂತಾಯ್ತು. ತಪ್ಪು ಒಪ್ಪುಗಳ ನಿಷ್ಪಕ್ಷಪಾತ ವಿಶ್ಲೇಷಣೆ ಮಾಡದೇ ಬರೆದಿರುವ ಶೈಲಿ ನೋಡಿದ ನನಗೆ, ಮುಂದಿನ ವರುಷದ ಪದ್ಮಶ್ರೀ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಆಶ್ಚರ್ಯ ಎನಿಸದು.

  ಜೀವಮಾನದುದ್ದಕ್ಕೂ ಅನುಮಾನಾಸ್ಪದ ಘಟನೆಗಳನ್ನೇ ಹೆಣೆದುಕೊಂಡು ಬಾಳುತ್ತಿರುವ ಆಕೆಯ ಜೀವನಶೈಲಿ ಮತ್ತು ಕಾರ್ಯಶೈಲಿಯನ್ನು ಹೊಗಳಲು ನಮ್ಮ ಪ್ರತಾಪ ಸಿಂಹನ ಅಗತ್ಯ ಇತ್ತೇ ಅನ್ನುವುದೇ ಪ್ರಶ್ನೆ.

  ವಿಜಯಕರ್ನಾಟಕ ಬೋರಿಬಂದರಿನ ಮುದುಕಿಯ ತೆಕ್ಕೆಗೆ ಹೋದ ದಿನಗಳಿಂದೀಚೆಗೆ ನಾ ಓದಿದ ಏಕಮುಖವಾದ ಮತ್ತು ಮುಖಸ್ತುತಿಯ ಲೇಖನವಿದು.

  ತಾವು ತಮ್ಮ ಅಮೂಲ್ಯ ಸಮಯವನ್ನು ಮತ್ತು ತಮ್ಮ ಬುದ್ಧಿಮತ್ತೆಯನ್ನು ಪೋಲು ಮಾಡಿದ್ದೀರಿ ಅನಿಸುತ್ತಿದೆ.

 2. Kiran says:

  You have mounted this topic on “ಆದರೆ ಆಕೆಯ conviction ಇದೆಯಲ್ಲಾ ಆ ಅಚಲ ನಂಬಿಕೆ, ದೃಢತೆಯನ್ನು ಮಾತ್ರ ಮೆಚ್ಚಲೇಬೇಕು.” – from that percpective, this is an excellent articulation.

  But you have slackly circumvented to describe the grotesque scam-culture got seeded in her regime and how important politicians have been protected. No mention of telecom Raja or no mention of howmuch was plundered in AP during YSR’s time. A little mention of Bofors could also have made some relevance.

  And the last sentenses looked just mild
  “ಎನ್‌ಡಿಟಿವಿಯ ಬರ್ಖಾ ದತ್ ಹಾಗೂ ಸಿಎನ್‌ಎನ್-ಐಬಿಎನ್‌ನ ರಾಜ್‌ದೀಪ್ ಸರ್ದೇಸಾಯಿಗೆ ಪದ್ಮಶ್ರೀ ಕೊಡಿಸಿದ್ದಾರೆ! ಸೋನಿಯಾ ಗಾಂಧಿಯವರನ್ನು ಸಂದರ್ಶನ ಮಾಡಲು ಇವತ್ತಿಗೂ ವೀರ್ ಸಾಂಘ್ವಿಯವರೇ ಬೇಕು.”

  And you are true with “ಇವಿಷ್ಟೇ ಅಲ್ಲ, ಸೋನಿಯಾ ಯೋಗ್ಯರಿಗೆ ಮಣೆಯನ್ನೂ ಹಾಕಿದ್ದಾರೆ. ಕಪಿಲ್ ಸಿಬಲ್, ಪಿ. ಚಿದಂಬರಂ, ಪ್ರಣಬ್ ಮುಖರ್ಜಿ, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರಂತಹವರಿಗೆ ಯೋಗ್ಯತೆಯ ಆಧಾರದ ಮೇಲೆ ತಕ್ಕುದಾದ ಖಾತೆ ನೀಡಿದ್ದಾರೆ.”

 3. sharath says:

  This article clearly shows that Prathap has become an OPPORTUNIST along with Vijaya Karnataka.

 4. Meena Spoorthy says:

  Reason for our politician not to be a leader due to their lack of discipline, promptness , efficiency and confidence, all most all are corrupted, they are busy with self-growth not interested to serve for public n country.. Therefore they prefer a 3rd [may be a foreigner also okay for them] person to command them who is more prompt compare to them.
  These politicians are very much helped our so called famous leader to command over them and to become successful leaders, The so called famous leaders are not interested in building confidence in politician, but indirectly they have encouraged them to be corrupted, So that they can continue their ruling.. This is still in continuing process. Until unless our politician never come to know the value of their position, they will act like dummies not a real politician.

 5. Meena Spoorthy says:

  The appreciable point in this article is you have written about merits as well as demerits of her. this will help a reader to analyse about our politician.

  thanx pratap.

 6. Santhosh Hugar says:

  Guys, what Pratap has told is 100% true. He has appreciated the changes that have taken place in her over time. Also her leadership qualities deserve this appreciation. We can’t think of any BJP leader currently who can match her leadership. So what Sonia did to Congress from 1999 has to be done to BJP now. Lets wait n see who is going to be that leader to BJP.

 7. harsha says:

  Pratap, u have decided to praise Sonia even before u started writing this article!!
  ur talking only abt those issues using which u can praise her…
  What happened to u?
  What about all that scams UPA has done? it may be telecom, it may be involvement in IPL or it may be anything else…. Look how she is sheltering all those!
  What abt Xian conversions that have picked up d momentum?
  What happened to u?
  do u also need some filthy award? look at the way u r praising her for giving those cheap awards to those cheap-journos!

 8. Viveka Shankara says:

  ಪ್ರತಾಪ ಸಿಂಹರೆ,
  ತಿಳಿದ ಮಟ್ಟಿಗೆ, ಈಗ್ಗೆ ಬಹಳ ವರ್ಷಗಳಿಂದ , ಮೊನಚಾದ, ತಿದ್ದಿ ತೀಡುವ ಅರ್ಥಗರ್ಭಿತ ಸಮಯೋಚಿತವಾದ ನಿಮ್ಮ ಲೇಖನಕ್ಕೆ ಮಾರು ಹೋಗಿದ್ದೆ. ಆದ್ರೆ ವಿಪರ್ಯಾಸ ಈಗ್ಗೆ ಕೆಲವು ತಿಂಗಳಿಂದ ನಿಮ್ಮ ಲೇಖನವು ಈ ಮೊದಲು ತಿಳಿಸಿದ ಗುಣವಿಶೇಷಣರಹಿತವಾಗಿ ಸತ್ವಹೀನವಾಗಿದೆ.
  ನಮ್ಮ ದೇಶದ ದುರ್ದೈವ , ದೇಶವನ್ನು ಆಳುವ ಪಕ್ಷದ ನಾಯಕನಿಗೆ ಸ್ವಂತ ಬುದ್ಧಿ ಇಲ್ಲದಿರುವ ಕಾರಣ ಈ ಹೀನ ಸ್ಥಿತಿಗೆ ಕಾರಣೀಭೋತವಾಗಿದೆ . ಅಲ್ಪಸಂಖ್ಯಾತರ ವೈಭವೀಕರಣ, ಮತಾಂತರಕ್ಕೆ ಕುಮ್ಮಕ್ಕು, ದೇಶದ ಗಡಿ ಬಗ್ಗೆ ಅಸಡ್ಡೆ, ಅತಿಕ್ರಮಣಕಾರರ ( ಬಂಗಾಲ ದೇಶದ ನಿರಾಶ್ರಿತರು ) ಮೇಲಿನ ಮೃದುತ್ವ ಇವುಗಳು ಈ ಅಧಿನಾಯಕಿಯ ಸುಪರ್ದಿನಲ್ಲಿ ಚೆನ್ನಾಗಿದೆ. ಬೆಲೆ ಏರಿಕೆ, ದೇಶದ ರಕ್ಷಣೆ ಬಗ್ಗೆ ಅಸಡ್ಡೆ, ನಕ್ಸಲ್ ಎಂಬ ಮಹಾ ಮಾರಿ ಇವು ಇವರ ಕೊಡುಗೆಯಾಗಿದೆ. ಉತ್ತಮ ಮಂತ್ರಿ ಎಂದು ಕೆಲವರನ್ನ ಹೆಸರಿಸಿದ್ದೀರ, ಆ ಮಹಾಪುರುಷರಲ್ಲಿ ಒಬ್ಬರು ೧೮ ತಿಂಗಳು ಒಬ್ಬ ಕ್ರಿಮಿಯನ್ನ ಪಂಚತಾರ ವ್ಯವಸ್ಥೆಯಲ್ಲಿ ನೋಡಿಕೊಂಡರು ( ನಿಮ್ಮದೇ ಪತ್ರಿಕೆಯ ಪ್ರಧಾನ ಸಂಪಾದಕರ ಅಂಕಣದಲ್ಲಿ ಬಂದಿರುವುದು ), ನಮ್ಮ ರಾಜ್ಯದ ಇನ್ನೊಬ್ಬ ಮಹಾಪುರುಷರು ಇನ್ನೊಂದು ವರ್ಷದಲ್ಲಿ ಗಲ್ಲಿಗೆರಿಸುತ್ತೇವೆ ಎಂದು ಮುತ್ತನ್ನ ಉದರಿಸಿದ್ದಾರೆ, ಇಂಥದನ್ನು ನೋಡಿಯು ನೀವು ಹೋಗಳನುವಾಗಿದ್ದೀರ ಎಂದರೆ, ಭೇಷ್ ಮೆಚ್ಬೇಕು ನಿಮ್ಮ ದೃಷ್ಟಿಯನ್ನ. ಯಾಕೋ ಕೆಲ ತಿಂಗಳಿಂದ ನಿಮ್ಮ ಪತ್ರಿಕೆ ( ಇಂದಿಗೂ ನಿಮ್ಮ ಪತ್ರಿಕೆಯನ್ನ ಓದದಿದ್ದರೆ ಏನೋ ಕಳೆದುಕೊಂಡ ಅನುಭವ , ದುರ್ದೈವ . ನಿಮ್ಮ ಪತ್ರಿಕೆ ಅಂಕಣಗಳ ಸರದಾರ ಎಂಬುದರಿಂದ ವಿಶೇಷತೆಯನ್ನ ಸಂಪಾದಿಸಿತ್ತು ) ತನ್ನ ಮಾರ್ಗವನ್ನ ಬದಲಿಸಿ ನಡೆದಾಗಲೇ ಅನುಮಾನವಾಯ್ತು, ಇಂದು ದೃಢಪಟ್ಟಿತು. ಒಂದು ಅಂಕಣದಲ್ಲಿ ( ನಿಮ್ಮ ಸಹೋದ್ಯೋಗಿ ) ಭಾ.ಜ.ಪ ಅಧ್ಯಕ್ಷ ನಿತಿನ್ ಗಡ್ಕರಿ ಬಗ್ಗೆ ಬರೆಯುವಾಗ, ಪಾಪ ಭಾ.ಜ.ಪ ದ ಮಾಜಿ, ಮತ್ತು ಹಾಲಿ ನಾಯಕರ ಭಾಷಣಗಳ ಸಂಸ್ಕೃತಿಯನ್ನ ಬರೆದರು, ಆದರೆ ಈ ಅಧಿನಾಯಕಿಯು ಅಜಾತಶತ್ರು “ಅಟಲ್ ಬಿಹಾರಿ ವಾಜಯಪೇಯಿ” ಯವರಿಗೆ “ಗದ್ದಾರ್” ಬಿರುದನ್ನ ಕೊಟ್ಟಿದ್ದು ನೆನಪಾಗಲ್ಲಿಲ್ಲ !!!!. ಹೋಗಲಿ,ನೀವೇ ಬರೆದ ನರೇಂದ್ರ ಮೋದಿಯವರನ್ನ ಹೊಗಳಿದ “ಸಾವಿನ ಸರದಾರ ” ಪದ ನೆನಪಾಗಿಲ್ಲ. ಬಹುಷಃ ಈಗ ಆಟ ಮತ್ತು ತಂತ್ರ ಬದಲಾಗಿದೆ. “All are joined the party “.

  ಭಲೇ, ಭಪ್ಪರೇ, what a paradigm shift indeed….??? ನೀವು ಈ ಲೇಖನವನ್ನ ಆಂಗ್ಲ ಭಾಷೆಗೆ ಭಾಷಾಂತರ ಮಾಡಿ, ಯಾರಿಗೆ ಗೊತ್ತು, ನೀವು “ಭಾರತ ರತ್ನ” ಕ್ಕೆ ಭಾಜನರಾಗಬಹುದು.

  ಕೊನೆ ಹನಿ : ನಿಮ್ಮ ದೃಷ್ಟಿ ಬದಲಾಗಿದ್ದಾರೆ (ಈ ವಿಷಯದಲ್ಲಿ ನೀವು ಸ್ವತಂತ್ರರು ) ಇವತ್ತಿಗೆ ನಿಮ್ಮ ಅಂಕಣಕ್ಕೆ ದೊಡ್ಡ ನಮಸ್ಕಾರ ( ನನ್ನ ನಿಲುವು, ನಿಮ್ಮ ಅಂಕಣದ ಅಭಿಮಾನಿಯಾಗಿ), ಇಲ್ಲ ಸ್ಥಳ ಮಹಾತ್ಮೆ ಎಂದರೆ, ದಯವಿಟ್ಟು ದಾರಿ ಬದಲಾಯಿಸಿ ( ಇದು ಸಲಹೆ !! )

 9. Chethan, Coorg says:

  Hi,

  Adene agli, Namma karnatakadalli matte Congress Ruling ge barbeku andre…. Rahul Ghandi ne bandu Tikani Hoodbeku….

  Karge, Dharamsingh, Deshpande and now DK Shivakumar avra muka nodi yaru vote hakolla…

  Future karnataka CM Mr. Krishna Byregowda. 🙂

 10. NAvin says:

  Fantastic Pratap….as usual great post. ..keep rokin… 🙂

 11. Arpana Hegde says:

  Open Mindedness is the basic reuirement for a journalist i feel and you have it . I remember the article ” Ella Kashtagaligu karan shaneeshwaranalla, Sonia” There you had written , many negative points about Sonia. The current article was entirely opposite – which talks only positive points.

  I know little about politics. But i felt you have written the article objectively and able to observe postive changes which happened in Sonia.

  I respect Sonia in one matter. If she had thought of her personal pleasure , she would have gone back to her country and would have got married to someone according to their culture. I felt proud about Rajiv Gandhi, who had chosen right partner. Because when he was married to her she was no one.

  My concern is different. Many famous journalists in their young age , had supported the people with integrity. But in their old age they became disintegrated. They compromised with their values. Hope you won’t become one among them.

 12. Suresh nair says:

  No point in commenting on the article.Not worth commenting too.
  This is for those who commented.Please read this…http://indiatoday.intoday.in/site/Story/98451/India/Sonia+bats+for+Muslim+reservation+timeframe.html

 13. moksha says:

  @Viveka Shankara .. Well said..

  Yet another disappointing article.. 🙁
  looks like you have taken contract of praising Sonia..!!??

  What happened to you these days???

  since 2 months, ondakkinta ondu kalape lekhanagalu!!!
  ( i’m feeling really sorry to say so 🙁 )

  Is this the beginning of an ‘end’?

 14. Ajit says:

  Excellent article!!! Even though I am rightist I appreciate her conviction , determination and leadership qualities. In the last 4-5 years she is able to take Congress party’s image to a higher level. We have to appreciate the fact that she has taken good, honest, intelligent personalities in the cabinet like P chdambaram, Mukhergi, moily and Nilekani
  I dont agree that Manmohan singh is weak as you written. His looks may be weak but he is good econinmist due to his policies india’a economy is gone high.

 15. Keshav says:

  Sorry Pratap,
  I am not expected from this type of articles from uuuu….,

 16. Vinobha says:

  ನಮಸ್ಕಾರ,
  ಪ್ರತಾಪ್ ಅವರ ಈ ಲೇಖನದಲ್ಲಿ ಏನು ತಪ್ಪಿದೆ ನನಗೆ ತಿಳಿಯುತ್ತಿಲ್ಲ ,
  ಅವರು ಸೋನಿಯ ಕಾಂಗ್ರೆಸ್ ಪಕ್ಷ ಹಾಗೂ ಯು ಪೀ ಎ ಸರ್ಕಾರ ವನ್ನ ಬಲಗೊಳಿಸಿದ್ದಾರೆ ಅಂತ ಬರೆದಿದ್ದರೆ ಹೊರತು
  ಸೋನಿಯ ಮೇಡಮ್ ಗುಣಗಾನ ಮಾಡಿಲ್ಲ,

  ನಮ್ಮೆಲ್ಲರ ಪ್ರೀತಿಪಾತ್ರವಾಗಿದ್ದ ವಾಜಪೇಯಿ ಅಂತ ಮಹಾನ್ ದೇಶಭಕ್ತರು ಪ್ರಾಮಾಣೀಕರು ಮುನ್ನಡೆಸಿದ್ದ ಭಾಜಪ ಇಂದು ಅಸ್
  ಯಾವ ದಾರಿಯಲ್ಲಿ ನಡೀತಿದೆ ನಮಗೂ ಗೊತ್ತು,

  ಪ್ರತಾಪ್ ಸೋನಿಯ ಮುಖಸ್ತುತಿ ಮಾಡಿದರೆ ಅಂತ ಎಲ್ಲೂ ಅನಿಸ್ತಿಲ್ಲ , ಅವರು ಯು ಪೀ ಎ ಸರ್ಕಾರಕ್ಕೆ ಎಸ್ಟು ಅನಿವಾರ್ಯವಾಗಿದ್ದಾಳೆ
  ಅಂತ ಬರ್ದಿದ್ದಾರೆ ಅಸ್ಟೆ .

  , ಪ್ರತಾಪ್ ಮೇಲೆ ನನಗೆ ನಂಬಿಕೆ ಇದೆ ಅವರು ಪ್ರಾಮಾಣಿಕತೆ ಕಳೆದುಕೊಂಡಿಲ್ಲ ಎಂದು.

 17. geetanjali says:

  every has different vision different perception n i feel that rite now there is no leader equivalent to soniya gandhi.n i agree with ur article keep writting ……………

 18. sowmya says:

  Instead of writing about celebrity please write some thing about the country, make people to get aware about the current things and current problems, unite the people for good cause.
  Good Luck

 19. Smitha says:

  DISSAPOINTED…after seeing the title,i reconfirmed the day and columnist name.bcos this is something unexpected from Pratap.Unbelieveble….
  i could notice the changes in VK from past few months..now its pratap..dont understand what happened…….
  Plzzzzzz reply pratap……………

 20. Keshav b a says:

  After reading the above GRATEeeeeeee!? i am very much DISAPPOINTED prathap.

  After reading the above article I am really wondering if the above article is written by prathap or someone else.

 21. Meena Spoorthy says:

  Why people wants politicians to be portrait as villains, baddie..all the time irrespective of their good work, a real journalist is who reveals merits n demerits of any issue/ person, irrespective of other influence able points. The same has been done here in this week BJ I believe. But some reader’s narrow view should change here, otherwise we only responsible for our politicians condition, since if we do not recognise & encourage their good work they will lose interest in doing that even though the % of good work is very less what they are doing..
  Therefore there is need to encourage our “Netas” who really worth for it, at the same time we have to condemn their misconduct then only all politicians will come to know that there are people who are auditing very closely their good n bad activities at each point. It will create more competition to do good work towards social welfare.

  Rgds
  mina

 22. Viveka Shankara says:

  An article by Tarun Vijay:

  Weakening the warrior and ignoring Mao’s orphans ( http://tarun-vijay.blogspot.com/ )

 23. Anantharama Shetty says:

  Dear Mr.Pratap Simha,

  Its a very nice article. I dont think you have blindly appreciated her like rajdeep and barkha. We must accept the fact that she is doing good and has taken control of all party members. Which is most important for a stable govt. She could able to attract lot of people in last 6 years.
  I completely agree with you .

 24. ಅಭಿನಂದನ್ ಕಮತರ್ says:

  ಕ್ಷಮಿಸಿ ಪ್ತತಾಪರೇ. . . .
  ನಿಮ್ಮಿಂದ ಇಂಥ ಲೇಖನ ನಿರೀಕ್ಷಿಸರಲಿಲ್ಲ . . …

 25. Shiva Kumar says:

  DEPRESSING NONSENCE…………

  sorry to write this………..

  u know,we know , every citigen of india know, how badly she is misusing the innocent PM Mr.Manmohan Singh and CBI.

  and one more thing congress is on power not because of its popularity of this italian women nor her “MUSLIM and DALIT” wooing son its only because of the week opposition.

 26. PRASHANTH B GOWDA says:

  HI PRATAP. DNT WRRY ABOUT PEOPLE TALKS . U R 100% RIGHT ABOUT DIS ARTICLE . …………………. BUT FRM LAST 2 MONTHS UR ARTICLES R NOT SO MUCH GOOD …………………….I KNOW IT S DIFFICULT WRIGHT GOOD ARTICLE EVERY WEEK. . . . BUT U CAN PRATAP, U CAN …………………

 27. Kiran says:

  FEW DAYS BEFORE HE HAS PRAISED CHIDAMBARAM NOW HE IS PRAISING SONIA… MAY BE HE IS PLANNING TO JOIN CONGRESS!

  GOOD…. YOUNG BLOOD IN POLITICS!

  WISH YOU ALL THE BEST PRATAP

 28. ಶ್ರೀದೇವಿ ತೇಲಿ says:

  I agree with Vinobha….
  Good one!!

 29. Arun ram says:

  Couple of people is blaming pratap unneccsarily , here n in his website.

  Wat yu expect him to write every saturday ?

  1.Muslim bashing n more muslim bashing
  2.Articles abt bhagat sing , veer savrkar, shubhas chandra bose.
  3.Blaming congress ,nehru , gandhi for mistakes.
  4.Articles supporting R S S , n bajrang dal.
  5.or asking questions to missionaries n moulvis .

  This is wat yu expect every week from his pen .

  He is a journolist n let him write watever he feels rite.

  He has asked to set up a meeting lets set up a meeting

 30. manju pai says:

  I think Vijaya Karnataka , V.Bhat and Pratap are trying for some awards. So, there is a complete U turn. Mr.V Bhat enjoyed a FREE TRIP TO CHINA with SM Krishna.

 31. Harish Rao says:

  Dear Pratap…….u ‘ve written good article….keep going, no matter how people ‘ll react to ur articles. If u want to aware the people regarding Country, Culture, Rights u may be face their negative commends don’t worry about it….

 32. D.M.Sagar,Dr. says:

  I find some truth in what Pratap was saying. Undoubtedly, Sonia gandhi has grown up, however, I am not surprised by people’s adverse comments who expect Pratap to write pro BJP and blast congress/Muslims/seculars or similar.

  Ha ha! People are funny and without brains!.

 33. gautam shetty says:

  hello pratap……now a days you r becoming defense batsman….but we need attackin player……remember once u told same about sachin…..dont try to balance your view about congrs and bjp….i dont tell you to hate congress o sonia ….but y u act blindly….like that each and evry human good for one or another,even kasab was good for LeT….see writer like u should not forget converting and god mother of convertion……JAI HIND…

 34. Harsha says:

  ಡಿಯರ್ ಪ್ರತಾಪ ಸಿಂಹ
  ನಿಮ್ಮ ಅಂಕಣಗಳ ಆಭಿಮಾನಿ, ಪ್ರತಿ ವಾರ ತಪ್ಪದೆ ಅಂಕಣ ಓದುತ್ತೇನೆ, ನಿಮಗಿಂತಾ ಹೆಚ್ಚಾಗಿ ರವಿ ಬೆಳಗೆರೆ ಯವರ ಓದುಗ ಮತ್ತು ಅವರ ಬರಹಗಳ ಅಭಿಮಾನಿ, ಬಹುಶ್ಹ ನಾನು ಇದನ್ನ ಇಲ್ಲಿ ಬರೆಯುತ್ತಿರಲಿಲ್ಲ ಅನ್ನಿಸುತ್ತೆ ಯಾಕೆಂದರೆ ಎಲ್ಲಾ ಬರೆದ ಹಾಗೆಯೇ ಪ್ರತಾಪ್ ಕೂಡ ಬರೆದಿದ್ದಾನೆ ಎಂದುಕೊಳ್ಳುತಿದ್ದೆ ಆದರೆ ಈ ನಿಮ್ಮ ಬರಹವನ್ನು ಓದುವ ಮುಂಚೆ ತಾವೆ ಅನಂತ ಮೂರ್ತಿಯವರ ಬಗ್ಗೆ ಬರೆದ ಅಂಕಣವೊಂದನ್ನು ಓದಿದೆ, ಅದರಲ್ಲಿ ಅನಂತ ಮೂರ್ತಿಯವರ ಬಗ್ಗೆ ನೀವು ಬರೆಯುತ್ತಾ ತನ್ನ ತಾಯಿಯ ಬಗ್ಗೆ ಬರೆದರು ಎಂಬ ಕಾರಣಕ್ಕೆ ಅಗ್ನಿ ಪತ್ರಿಕೆಯ ಕಛೇರಿ ಮುಂದೆ ಧರಣಿ ಕುಲಿತಿದ್ದರು ಈಗ ಅದೆ ಅಗ್ನಿ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ ಎಂದು ಬರೆದಿದ್ದದ್ದು ನನ್ನ ಗಮನ ಸೆಳೆಯಿತು ಅದಕಾಗಿ ಈ ನನ್ನ ಅನಿಸಿಕೆ ಅಷ್ಟೇ. ಮುಂಚಿತವಾಗಿ ಒಂದು ಮಾತು ನಾನು ಯಾವುದೆ ಪಕ್ಷವನ್ನು ನಂಬುವುದಿಲ್ಲ ಮತ್ತು ಅಭಿಮಾನಿಯಲ್ಲ, ನನಗೀಗ ೩೦ ವರ್ಷ ವಯಸ್ಸು,ಇಲ್ಲಿಯವರೆಗೆ ನನ್ನನ್ನು ಯಾವ ರಾಜಕಾರಣಿಯೂ ನನ್ನನ್ನು ತಮ್ಮ ಕೆಲಸಗಳಿಂದ ನನ್ನನ್ನು ವಿಚಾರ ಧಾರೆಗಳಿಂದ ಮೆಚ್ಚುಗೆಗಳಿಸಿಲ್ಲ (ಸಧ್ಯದ ಪರಿಸ್ತಿತಿಯಲ್ಲಿ ಅದು ನನಗೆ ಬೇಕಾಗಿಯೂ ಇಲ್ಲ ಬಿಡಿ), ಒಬ್ಬ ವಾಜಪೇಯಿಯವರನ್ನು ಹೊರತು ಪಡಿಸಿ, ನಿಜಕ್ಕೂ ನನ್ನನ್ನ impress ಮಾಡಿದವರು ಅವರೊಬ್ಬರೆ. ಇರಲಿ ಸೋನಿಯಾ ಗಾಂಧಿ ವಿಷಯಕ್ಕೆ ಬರೋಣ ಮುಂಚಿತವಾಗಿ ಸೋನಿಯ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸುತ್ತಾರೆ ಎಂದಾಕ್ಷಣ ನೀವು ಅದನ್ನು ದಿಕ್ಕರಿಸಿ ಪ್ರಧಾನ ಮಂತ್ರಿ ಆಗಲು ಒಬ್ಬ ಭಾರತೀಯನಿಲ್ಲವೆ ಎಂಬ ಅರ್ಥದ ಲೇಖನ ಬರೆದಿದ್ದ ನೆನಪು. ಈಗ ಅಂತಹ ನೀವೆ ಹೊಗಳಿ ಬರೆದಿದ್ದೀರಿ ಎಂದರೆ ನಿಮ್ಮ ಪತ್ರಿಕಾ ನಿಷ್ಟೆಯನ್ನೆ ಅನುಮಾನದ ದ್ರಷ್ಟಿಯಿಂದ ನೋಡುವಂತಾಗುತ್ತದೆ. ನಿಮ್ಮ ಸಿದ್ಧಾಂತಗಳು ನಿಜಕ್ಕೂ ಅಚಲವಾಗಿರುತ್ತವೆಯೆ ಎಂದು ಯೋಚಿಸುವಂತಾಗುತ್ತದೆ.

  ಇನ್ನೂ ಕೆಲವೊಂದು ವಿಷಯಗಳಿವೆ, ಅನಂತ ಮೂರ್ತಿಯವರು ಏನನ್ನು ಬರೆದಿದ್ದಾರೊ ನಾನು ಯಾವುದೆ ಬರಹಗಳನ್ನು ಓದಿಲ್ಲ, ಓದಲು ತೆಗೆದುಕೊಂಡವನ್ನು ಓದಬೇಕು ಅನಿಸದೆ ಎತ್ತಿಟ್ಟದ್ದು ನೆನಪಿದೆ, ನಿಜಕ್ಕೂ ಅವರಿಗೆ ಜ್ನಾನಪೀಠ ಬಂದಿದ್ದು ನನಗೂ ಆಶ್ಚರ್ಯಕರ, ಆತ ಸಾಹಿತಿ ಎಂದು ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ರಾಜಕೀಯ, ರಾಜಕೀಯದ ಮಾತುಗಳಲ್ಲೆ ಹೆಚ್ಚು ಹೆಸರು ಮಾಡಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಮತ್ತೊಂದು ಮಾತು ಇತ್ತೀಚೆಗೆ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಮತ್ತು ಮರಳಿ ಮಣ್ಣಿಗೆ ಕ್ರತಿಗಳನ್ನು ಓದಲು ತಂದುಕೊಂಡೆ ನಿಜಕ್ಕೂ ಓದಲಿಕ್ಕೆ ಶುರು ಮಾಡಿದ ಮೇಲೆ ಅದರ ತಲೆ ಬುಡವೆ ಅರ್ಥವಾಗದಂತಾಗಿ ಮುಚ್ಚಿಟ್ಟೆ ಮತ್ತೆ ತೆಗೆದು ಓದುವ ಪ್ರಯತ್ನ ಮಾಡಿಲ್ಲ, ಅದರಲ್ಲಿ ನನ್ನ ಬಾಷಾ ಪಾಂಡಿತ್ಯದ ಕೊರತೆಯದೂ ತಪ್ಪಿರಬಹುದು. ಆದರೆ ನಾನು ಕಂಡಂತೆ ಪ್ರಶಸ್ತಿ ಪಡೆದಂತಹ ಪುಸ್ತಕಗಳನ್ನು ಹೆಚ್ಚಾಗಿ ಯಾರು ಓದುವುದೆ ಇಲ್ಲ ಹಾಗೂ ಪ್ರಶಸ್ತಿ ಪಡೆದ ಚಿತ್ರಗಳನ್ನು ಯಾರೂ ನೋಡುವುದೆ ಇಲ್ಲ (ಹೆಚ್ಚಾಗಿ ಓದುವವರು ಮತ್ತು ನೋಡುವವರು ಅಂದರೆ ವಿಮರ್ಶಕರು, ಸಾಹಿತಿಗಳು, ಮತ್ತು ಪ್ರಶಸ್ತಿ ನೀಡುವವರು ಅಷ್ಟೆ).

  ಕೋನೆಯ ಮಾತು, ಇತ್ತೀಚೆಗೆ ರವಿ ಬೆಳಗೆರೆಯವರ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ನಿಮ್ಮ ಬಗ್ಗೆ ಬರೆಯುವುದನ್ನು ಲೇವಡಿ ಮಾಡುವುದನ್ನು ನೋಡಿದ್ದೇನೆ,ಇರಲಿ ಪತ್ರಿಕೊದ್ಯಮ ಅಂದಮೇಲೆ, ಪತ್ರಿಕೋದ್ಯಮವೇ ಅಂತಲ್ಲ ಯಾವುದೆ ವ್ರತ್ತಿಯಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯಗಳು, ಸ್ಪರ್ಧೆ ಅನಿವಾರ್ಯ ಹಾಗು ನಿರಂತರ ಅದನ್ನ ಯಾರು ತಡೆಯುವದಕ್ಕಾಗುವುದಿಲ್ಲ. ಮುಂಚಿನಿಂದಲೂ ನಾನು ರವಿ ಅವರ ಬರಹಗಳನ್ನ ಬಹುಶ ನನ್ನ ೧೫ ನೆ ವಯಸ್ಸಿನಿಂದಲೂ ಓದುತ್ತ ಬಂದಿದ್ದೇನೆ ಅವರ ನಿಲುವು, ಸಿದ್ಧಾಂತಗಳು ಇಂದಿಗೂ ಬದಲಾಗಿಲ್ಲ ಎಂಬುದು ನನ್ನ ಅಭಿಪ್ರಾಯ (ನನ್ನ ಅಭಿಪ್ರಾಯ). ರವಿ ಬಂದ ಹೊಸತರಲ್ಲಿ ಅವರು ಮತ್ತು ಲಂಕೇಶ್ ಮಧ್ಯೆಯೂ ಇಂತಹ ಸ್ಪರ್ಧೆ ಏರ್ಪಟ್ಟಿತ್ತು, ರವಿಗಿಂತ ಮುಂಚೆ ನಾನು ಲಂಕೇಶ್ ಪತ್ರಿಕೆ ಓದುತ್ತಿದ್ದೆ, ನೆನಪಿರಲಿ ಅವತ್ತಿಗೆ ನಾನು ಹೈ ಸ್ಕೂಲ್ ಪಡ್ಡೆ, ನನ್ನಂತವರನ್ನೆ ಸೆಳೆಯುವ ಮೊನಚು ಲಂಕೇಶ್ ಬರಹಕ್ಕಿತ್ತು, ಆದರೆ ಈವತ್ತು ಏನಾಗಿದೆ ಎಂದರೆ ಲಂಕೇಶ್ ಪತ್ರಿಕೆ ತೆರೆದರೆ ಬಯ್ಯುವುದು, ಹೀಯಾಳಿಸುವುದು, ಕಾಲೆಳೆಯುವುದು ಬರಿ ಇಂತವೆ ಬರಹಗಳು, ಇರಲಿ ಲಂಕೇಶ್ ತೀರಿ ಹೋದ ಮೇಲೆ ಪತ್ರಿಕೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ನಿಮಗೆ ನನ್ನ ಸಲಹೆ ಇಷ್ಟೆ ನಿಮ್ಮ ನಿಲುವನ್ನು ಸಿದ್ಧಾಂತಗಳನ್ನು ಯಾವ ಕಾರಣಕ್ಕೂ ಬದಲಾಯಿಸಬೇಡಿ, ಹಾಗೆಂದು ಕೆಟ್ಟ ದಾರಿಯಲ್ಲಿದ್ದ ಮನುಷ್ಯ ಒಳ್ಳೆಯ ದಾರಿ ತುಳಿಯುತ್ತೆನೆಂದಾಗ ಆತನನ್ನು ಬೆಂಬಲಿಸಬರದು ಎಂದು ನಾನು ಹೇಳುತ್ತಿಲ್ಲ…………………………………………………………..
  ಆದರೆ ರಾಜಕಾರಣಿಗಳ ವಿಷಯ ಬಂದಾಗ ಎಚ್ಚರಿಕೆಯಿಂದ ಇರಬೇಕಾದುದು, ಬರೆಯ ಬೇಕಾದುದು ಮುಖ್ಯ, ೧೫ ವರ್ಷ ಭಾರತದಲ್ಲಿದ್ದೂ ದೇಶದ ಪೌರತ್ವ ಪಡೆಯದ ಸೋನಿಯಾ ನಂತರ ಪೌರತ್ವ ಪಡೆದು ರಾಜೀವ್ ಹತ್ಯೆಯ ಕೆಲ ವರ್ಷಗಳ ನಂತರ ರಾಜಕಾರಣಕ್ಕೆ ಬಂದು, ಬಂದ ೬ ತಿಂಗಳಲ್ಲೆ ಅಧ್ಯಕ್ಷ ಸ್ಥಾನಕ್ಕೆ ಬಂದರು ಎಂದರೆ, ಮತ್ತು ಇಷ್ಟೆಲ್ಲಾ ರಿಸ್ಕ್ ಗಳನ್ನು (ಅಣುಬಂಧ, ಮಹಿಳಾ ಮೀಸಲು ಮಸೂದೆ) ತೆಗೆದುಕೊಂಡು ಜನಪ್ರಿಯತೆ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ, ಅದರ ಹಿಂದೆ ತಮ್ಮ ಕುಟುಂಬದ ಕುಡಿಯನ್ನು ಪ್ರಧಾನಿ ಗಾದಿಯ ಮೇಲೆ ಕೂರಿಸಬೇಕು ನಂತರ ಸಾಯುವ ವರೆವಿಗು ಅದನ್ನು ಕಣ್ಣಿಂದ ನೋಡಬೇಕು ಎಂಬ ದುರಾಸೆ ಅಲ್ಲದೆ ಮತ್ತೆನಿಲ್ಲ. ಬೇಕಿದ್ದರೆ ಮುಂದೆ ನೋಡಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ, ಅವರು ಪ್ರಧಾನಿಯಗುವ ಸಮಯದಲ್ಲಿ ಅವರಿಗಿಂತ ಹಿರಿಯರು, ಅನುಭವಿಗಳು, ಸಜ್ಜನರು ಇದ್ದರೂ ಅವೆಲ್ಲ ರಾಹುಲ್ ಗಾಂಧಿಯ ಮುಂದೆ ಗೌಣವಾಗುತ್ತದೆ. ಇದು ಇಂಡಿಯಾ, ಹ್ಯಾಟ್ಸ್ ಆಫ್ ಟು ಇಂಡಿಯಾ. ಈಗ ಹೇಳಿ ನಾನು ಹೇಳಿದ್ದರಲ್ಲಿ ತಪ್ಪೆನಾದರೂ ಇದೆಯ??

 35. Amar Shereddy says:

  i felt very bad about this article brother……!!!
  i started reading your articles on suggestion of our warden of siddavana gurukula….
  at first i really like to read ur articles…. but now seeing your articles i’m loosing intrest…. i really like that old prathap who is as sharp as knife in his writings but i think now that this knife had lost its sharpness and it should sharpen…….

  so please become my old prathap….
  i’m waiting for your articles as good as old again………!!!

 36. Kavya says:

  i completely agree with mr.amar.

 37. Govind says:

  Sir,

  Its indeed good article but it didnt bring 2 sides of UPA and Sonia. You have just given the positives of her leadership n performance over last 6 years. What about price rise,terrorism,naxalism,threat from other neigbour country.etc and list goes on. The biggest is price rise issue,have u seen how a middle class n lower middle class people living in this country today? Price rise will not affect upper class cos they can afford it, it wont affect poors because they get food at subsidized rate on green card and other government facilities..What about middle class people sir? they are the one who are suffering. Its disapointing to see such article wherein u didnt give clear picture and mis guided the middle class people which is majority in karnataka. I dont mind you praising Sonia cos indeed she has done good things for Congress,but not to India at broad level. Hope we dont get to see such articles again.

  Govind

 38. veeresh kumbara j k says:

  hi sir…….
  i am fan of u.i seen every articles of urs.
  sir nivu innu hechu hechu hindutvada paravagi bareyabeku sir………….
  urs jkvk……..

 39. Raghavendra says:

  I don’t what was the outcome of this article.. I wonder why you wrote this ?
  Sonia might have some good qualities.. that doesn’t mean she is improving with her age.. She is a foreigner and she will always be.. and so does her son. By the way they don’t even know how to rule the country..
  Whatever.. I am so pissed of with this article.. I feel shame of u …. I thought you had ur own principles and ideas.

  Yendigu yavattigu nimma vichargalanna balikodabedi Pratap..

 40. Shashank says:

  I have started reading all your articles recently and no doubt the fire is catching into all of your articles which i wish to complete as soon as possible but no where did i feel like commenting until i read this one.

  I must admit you are an impulsive writer, i don’t know what makes you choose a subject but of all the wonderful features in this magnificently diverse country, did u choose to write about someone whom, i believe, you yourself hate. Sonia Gandhi and her conviction? I don’t know if you read it once again now you might regret for what have given into your impulse. May be there is no good alternative to congress after ATAL Sir but that doesn’t mean you have to sympathize Sonia.

  Do you ever believe after Indira(Whom also i sternly hate) their lineage is capable of taking their own decisions? How can you whom i started to respect so much change your state just because she started playing the game smartly after initial blunders. How can you be so sharp in other articles and act blinder in this one?

  I hate to guess that even you might have been a victim of external forces.Did you?If not, Why, in the name of God, you chose to make Sonia an icon?

  God,I hate to fill bad feelings about you after readings all the recent ones which are much mature and not impulsive.

 41. Rama says:

  Moral of the story: A Ring Master(Mistress?) is required to control ‘The Herd of Leaders’. It is preferable if it is lady that too a foreigner