Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆಕೃತಿಗಳನ್ನು ವಿರೂಪಗೊಳಿಸುವ ವಿಕೃತಿಗೆ ಕೊನೆಯೆಂದು?

ಆಕೃತಿಗಳನ್ನು ವಿರೂಪಗೊಳಿಸುವ ವಿಕೃತಿಗೆ ಕೊನೆಯೆಂದು?

ಒಮ್ಮೆ ದೂರದ ಶಾಲೆಯಲ್ಲಿ ಕಲಿಯುತ್ತಿದ್ದ ಸಹೋದರರಿಬ್ಬರಿಗೆ ಅಪ್ಪನನ್ನು ನೋಡುವ ಬಯಕೆಯುಂಟಾಯಿತು. ರೈಲಿನಲ್ಲಿ ಬಂದಿಳಿದ ಅವರು ಕುದುರೆಗಾಡಿಯನ್ನು ಗೊತ್ತುಮಾಡಿ ಮನೆಯತ್ತ ಹೊರಟರು. ಗಾಡಿ ಮುಂದೆ ಮುಂದೆ ಸಾಗಿತು, ಅದರ ಚಾಲಕನ ಜತೆ ಮಾತೂ ಆರಂಭವಾಯಿತು. ಮಾತಿನ ಮಧ್ಯೆ ಆತನಿಗೆ ಬಾಲಕರಿಬ್ಬರು ದಲಿತ(ಮಹರ್) ಸಮುದಾಯಕ್ಕೆ ಸೇರಿದವರು ಎಂದು ತಿಳಿಯಿತು. ಕೂಡಲೇ ಬಂಡಿಯಿಂದ ಕೆಳಗಿಳಿದ ಆತ ನೊಗವನ್ನು ಮೇಲೆತ್ತಿದ. ಆಯತಪ್ಪಿದ ಹುಡುಗರು ಅನಾಮತ್ತಾಗಿ ನೆಲಕ್ಕುರುಳಿದರು. ಅಷ್ಟೇ ಅಲ್ಲ, ಬಾಲಕರು ಅಂಗಲಾಚುತ್ತಿದ್ದರೂ ಬಾಯಿಗೆ ಬಂದಂತೆ ನಿಂದಿಸಿದ ಆತ ಮಾರ್ಗ ಮಧ್ಯದಲ್ಲೇ ಬಿಟ್ಟು ವಾಪಸ್ ಹೊರಟುಹೋದ.
ಒಂದು ದಿನ ಕಿರಿಯ ಸಹೋದರನಿಗೆ ತೀವ್ರ ಬಾಯಾರಿಕೆಯುಂಟಾಯಿತು. ಬಾವಿಯ ಹತ್ತಿರಕ್ಕೆ ಹೋಗಿ ನೀರಡಿಕೆಯನ್ನು ತೀರಿಸಿಕೊಂಡ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದರು. ಹೇರ್ ಕಟ್ ಮಾಡಿಸಿಕೊಳ್ಳಲು ಹೋದರೆ ಕ್ಷೌರಿಕನಿಂದಲೂ ತಿರಸ್ಕಾರ. ಮತ್ತೊಮ್ಮೆ ಶಾಲೆಗೆ ತೆರಳುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ಬದಿಯಲ್ಲೇ ಇದ್ದ ಮನೆಯ ಗೋಡೆಯ ಬಳಿ ನಿಂತಾಗ ಅದನ್ನು ಗಮನಿಸಿದ ಮನೆಯಾಕೆ ಕೋಪದಿಂದ ಕೊಚ್ಚೆಗೆ ತಳ್ಳಿದಳು. ಅದೇ ಬಾಲಕ ಮುಂದೆ ಅಮೆರಿಕಕ್ಕೆ ಹೋಗಿ ಸ್ನಾತಕೋತ್ತರ ಪದವಿ ಪಡೆದುಕೊಂಡು 1917ರಲ್ಲಿ ಭಾರತಕ್ಕೆ ಆಗಮಿಸಿದಾಗ ಬರೋಡಾದ ಮಹಾರಾಜರು ಸೇನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಒಬ್ಬಂಟಿಯಾಗಿದ್ದ ಅವರು ಲಾಡ್ಜ್‌ವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಅದು ಪಾರ್ಸಿಗಳ ವಠಾರವಾಗಿತ್ತು. ಅವರಿಗೆ ಬಾಡಿಗೆಗೆ ಬಂದ ವ್ಯಕ್ತಿಯ ಜಾತಿಯ ಬಗ್ಗೆ ಅನುಮಾನ ಶುರುವಾಯಿತು. ಅಡ್ಡಹಾಕಿ ‘ಯಾರು ನೀನು?’ ಎಂದು ಪ್ರಶ್ನಿಸಿದರು. ‘ನಾನೊಬ್ಬ ಹಿಂದು’ ಎಂದು ಉತ್ತರಿಸಿದಾಗ, ‘ಯಾವ ಜಾತಿಯವನು ಹೇಳು?’ ಎಂಬ ಗದರಿಕೆ. ಅವರು ದಲಿತ ಸಮುದಾಯಕ್ಕೆ ಸೇರಿದ ವರು ಎಂದು ಗೊತ್ತಾದ ಕೂಡಲೇ ಮನೆಯಿಂದಲೇ ಹೊರಹಾಕಿದರು. ಕಚೇರಿಗೆ ಹೋದರೆ ಅವರಿಗಿಂತ ತೀರಾ ಕೆಳದರ್ಜೆಯ ನೌಕರ ನಿಂದಲೂ ತಿರಸ್ಕಾರ. ಹತ್ತಿರಕ್ಕೆ ಬಂದರೆ ಮೈಲಿಗೆಯಾಗುತ್ತದೆ ಎಂಬ ಕಾರಣಕ್ಕೆ ಕಡತಗಳನ್ನು ಮೇಜಿನ ಮೇಲೆ ಎಸೆದು ಹೋಗುತ್ತಿದ್ದ….

ಡಾ. ಬಿ.ಆರ್. ಅಂಬೇಡ್ಕರ್ ಬದುಕಿನ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಇಂತಹ ನೂರಾರು ಘಟನೆಗಳನ್ನು ಕಾಣಬಹುದು.

ಬಹಳ ಬೇಸರದ ಸಂಗತಿಯೆಂದರೆ ಅಂಬೇಡ್ಕರ್ ಅವರನ್ನು ಕೆಟ್ಟ ದಾಗಿ ನಡೆಸಿಕೊಳ್ಳುವ ಚಾಳಿಯನ್ನು ನಮ್ಮ ಸಮಾಜ ಇನ್ನೂ ಬಿಟ್ಟಿಲ್ಲ. ಹಂಪಿ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ವರ್ಗದ ಹಾಸ್ಟೆಲ್‌ನಲ್ಲಿರುವ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಮ್ ಭಾವಚಿತ್ರಕ್ಕೆ  ಏಪ್ರಿಲ್ 12ರ ರಾತ್ರಿ ಯಾರೋ ಕಿಡಿಗೇಡಿಗಳು ಮಸಿ ಬಳಿದು ಅವಮಾನ ಮಾಡಿದ್ದಾರೆ. ಹಿಂದೊಮ್ಮೆ ಡಾ. ಬಿ.ಟಿ. ಲಲಿತಾ ನಾಯಕ್ ಅವರ ಸುಪುತ್ರ, ಅಂಬೇಡ್ಕರ್ ಪ್ರತಿಮೆಗೆ ಮದ್ಯ ಅಭಿಷೇಕ ಮಾಡಿ ಅವಮಾನ ಮಾಡಿದ್ದ. ಇವೇನು ಒಂದೋ ಎರಡೋ ವಿರಳ ಘಟನೆಗಳಲ್ಲ. ನಮ್ಮ ಕರ್ನಾಟಕ ರಾಜ್ಯದಲ್ಲೇ ನಡೆದ ಇಂತಹ ಹತ್ತಾರು ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಅದರಿಂದ ಗಲಾಟೆಗಳಾಗಿವೆ, ಮನಸ್ಸಿಗೆ ನೋವಾಗಿದ್ದಿದೆ. ಆದರೆ ಒಬ್ಬ ರಾಷ್ಟ್ರನಾಯಕನನ್ನು ನಡೆಸಿಕೊಳ್ಳುವ ರೀತಿ ಇದೇನಾ? ಯಾರದ್ದೋ ಮೇಲಿನ ಸಿಟ್ಟು, ಕೋಪ, ಮತ್ಸರವನ್ನು ಮಹಾನ್ ನಾಯಕರ ಪ್ರತಿಮೆ, ಭಾವಚಿತ್ರಗಳ ಮೇಲೆ ತೀರಿಸಿಕೊಳ್ಳುವ ಮನಸ್ಸಿನ ವಿಕೃತಿಗೆ ಏನನ್ನಬೇಕು? ಏಕಾಗಿ ಇಂತಹ ಘಟನೆಗಳು ಸಂಭವಿಸುತ್ತವೆ? ರಾಷ್ಟ್ರ ನಾಯಕರಾದ ಗಾಂಧೀಜಿ, ಅಂಬೇಡ್ಕರ್ ಏತಕ್ಕಾಗಿ ಒಂದು ಪಕ್ಷ, ಒಂದು ಧೋರಣೆ ಅಥವಾ ಒಂದು ಜಾತಿ/ವರ್ಗದ ನಾಯಕರಾಗಿ ಬಿಡುತ್ತಾರೆ? ಅಥವಾ ಅವರನ್ನು ಒಂದು ಜಾತಿ/ವರ್ಗ ಅಥವಾ ಸಿದ್ಧಾಂತ/ಪಕ್ಷದ ಪ್ರವಾದಿಗಳನ್ನಾಗಿ ಪರಿವರ್ತಿಸಿರುವವರು ಯಾರು? ಇಲ್ಲಿ ಯಾರನ್ನು ದೂರಬೇಕು?

ಎಲ್ಲಾ ರಾಜಕೀಯ, ಎಲ್ಲಾ ಲೆಕ್ಕಾಚಾರ…

ಇದೆಲ್ಲಾ ಪ್ರಾರಂಭವಾಗಿದ್ದು 1989-90ರಲ್ಲಿ. ಒಂದೆಡೆ ಅಯೋಧ್ಯೆ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿದ್ದ ಚಳವಳಿ ಜಾತಿ ತಾರತಮ್ಯ ವನ್ನು ಬದಿಗೆ ತಳ್ಳಿ ಹಿಂದೂಗಳನ್ನು ಧ್ರುವೀಕರಣ ಮಾಡಲಾರಂಭಿಸಿತ್ತು. ಅದನ್ನು ತಡೆಯದೆ, ಒಡೆಯದೇ ಉಳಿಗಾಲವಿಲ್ಲ ಎಂದರಿತ ಪ್ರಧಾನಿ ವಿ.ಪಿ. ಸಿಂಗ್  ಬಿಜೆಪಿಯ ‘ಕಮಂಡಲ’ಕ್ಕೆ ಪ್ರತಿಯಾಗಿ ‘ಮಂಡಲ’ ವನ್ನು ಕೈಗೆತ್ತಿಕೊಂಡರು. ಪರಿಶಿಷ್ಟ ಜಾತಿ/ವರ್ಗಗಳಿಗೆ ೨೨ ಪರ್ಸೆಂಟ್ ಮೀಸಲು ನೀಡುವ ಮಂಡಲ್ ಆಯೋಗದ ವರದಿ ಬಗ್ಗೆ ಮಧ್ಯಮ ವರ್ಗ, ಅದರಲ್ಲೂ ನಗರವಾಸಿಗಳು ಸಹಜವಾಗಿಯೇ ಕುಪಿತ ಗೊಂಡರು. ಸರಕಾರಿ ಕೆಲಸ ಪಡೆದುಕೊಳ್ಳುವುದೇ ಜೀವನದ ಪರಮೋದ್ದೇಶ ಎಂದು ಭಾವಿಸಿದ್ದ ಕಾಲವದು. ಅಲ್ಲಿಯವರೆಗೂ ಮೀಸಲು ಇರಲಿಲ್ಲ ಎಂದಲ್ಲ. ಆದರೆ ೨೨ ಪರ್ಸೆಂಟ್ ಪಾಲು ಕೊಡುವುದಕ್ಕೆ ಮಧ್ಯಮ ವರ್ಗ ನಕಾರ ವ್ಯಕ್ತಪಡಿಸಿತು. ಹೀಗೆ ಮೀಸಲು ಹೆಸರಿನಲ್ಲಿ ಹಿಂದೂ ಸಮುದಾಯವನ್ನು ಮತ್ತೊಂದು ರೀತಿಯಲ್ಲಿ ಒಡೆಯುವಲ್ಲಿ, ಜಾತಿ ಕಂದಕವನ್ನು ಮತ್ತಷ್ಟು ಹೆಚ್ಚು ಮಾಡುವಲ್ಲಿ ವಿ.ಪಿ. ಸಿಂಗ್ ಸಫಲರಾದರು. ಆನಂತರ ಕಾನ್ಷಿರಾಮ್ ಬಂದರು. ದಲಿತರನ್ನು ಒಟ್ಟುಗೂಡಿಸಲು, ಒಂದೇ ಸೂರಿನಡಿ ತರಲು ಪ್ರಯತ್ನಿಸಿದರು. ದಲಿತರ ವೋಟು ಮಾರಾಟಕ್ಕಿಲ್ಲ ಎಂಬ ಸಂದೇಶವನ್ನು ಮುಟ್ಟಿಸುವಲ್ಲಿಯೂ ಯಶಸ್ವಿಯಾದರು. ದಲಿತರನ್ನು ಸಂಘಟಿಸುವ ಮೂಲಕ ಗದ್ದುಗೆಗೆ ತರುವ ಅವರ ಪ್ರಯತ್ನ ಸರಿಯಾಗಿಯೇ ಇತ್ತು. ಆದರೆ ಕಾನ್ಷಿರಾಮ್ ಪ್ರಯತ್ನದಿಂದಾಗಿ ಸಿಕ್ಕ ಅಧಿಕಾರದ ಫಲ ಮಾತ್ರ ಮಾಯಾವತಿಯವರ ಪಾಲಾಯಿತು. ದುರದೃಷ್ಟವಶಾತ್, ಆಕೆ ಅಧಿಕಾರ ಸಿಕ್ಕಿದ ಮೇಲೂ ಜಾತಿ ಸಂಘರ್ಷದ ಮಾತು ಬಿಡಲಿಲ್ಲ..

ಠಾಕೂರ್, ಬನಿಯಾ, ಬ್ರಾಹ್ಮಣ್ ಚೋರ್
ಬಾಕಿ ಸಬ್ ಹೈ ದುಶ್ವರ್
ತಿಲಕ್, ತರಾಜು ಔರ್ ತಲ್ವಾರ್
ಇನ್‌ಕೋ ಮಾರೋ ಜೂತಾ ಚಾರ್

ಎನ್ನಲಾರಂಭಿಸಿದ ಮಾಯಾವತಿಯವರು ಮೇಲ್ಜಾತಿಯವರ ಮೇಲೆ ದ್ವೇಷವನ್ನು ಹೆಚ್ಚಿಸುತ್ತಲೇ ಹೋದರು. ಠಾಕೂರ್, ಬನಿಯಾ, ಬ್ರಾಹ್ಮಣರೆಲ್ಲ ಕಳ್ಳರು ಎಂದು ಮಾಯಾವತಿಯವರು ಅದ್ಯಾವ ಬಾಯಲ್ಲಿ ಹೇಳಿದರೋ ಗೊತ್ತಿಲ್ಲ. ಆದರೆ ಮಂಡಲ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ದಲಿತರಿಗೆ 22 ಪರ್ಸೆಂಟ್ ಮೀಸಲು ಕೊಡಲು ಹೊರಟ ವಿ.ಪಿ. ಸಿಂಗ್ ಅವರೇ ಒಬ್ಬ ಠಾಕೂರ್! ವರದಿಯನ್ನು ಜಾರಿಗೊಳಿಸಿದ ನರಸಿಂಹರಾವ್ ಬ್ರಾಹ್ಮಣ!! ಮೀಸಲು ಪ್ರಮಾಣವನ್ನು 49 ಪರ್ಸೆಂಟ್‌ಗೇರಿಸಿದ ಅರ್ಜುನ್ ಸಿಂಗ್ ಕೂಡ ಒಬ್ಬ ಜಾಟ್!!!

ಇಂತಹ ವಾಸ್ತವದ ಹೊರತಾಗಿಯೂ ಜಾತಿ ವಾದಕ್ಕೆ ತೆರೆಬೀಳಲಿಲ್ಲ. ಮೇಲು-ಕೀಳು ಹೆಸರಿನಲ್ಲಿ, ಜಾತಿ-ಜಾತಿಗಳ ನಡುವೆ ಸಂಘರ್ಷ, friction ಮುಂದುವರಿಯುತ್ತಲೇ ಹೋಯಿತು. ಇನ್ನೊಂದೆಡೆ ನಾವೆಷ್ಟೇ ಓದಿದರೂ, ಮಾರ್ಕ್ಸ್ ತೆಗೆದರೂ ಸೀಟು ಸಿಗುವುದಿಲ್ಲ. ದಲಿತರಿಗೆ 45 ಪರ್ಸೆಂಟ್ ಇದ್ದರೆ ಸಾಕು ಯಾವ ಕಾಲೇಜಿನಲ್ಲಿ ಬೇಕಾದರೂ ಸೀಟು ಸಿಗುತ್ತದೆ ಎಂಬ ಹತಾಶೆ ಮೇಲ್ಜಾತಿಯವರಲ್ಲಿ. ದುರದೃಷ್ಟವಶಾತ್, eನದೇಗುಲಗಳೂ ಜಾತಿವಾದದಿಂದ ಮುಕ್ತವಾಗಲಿಲ್ಲ. ಒಬ್ಬ ವಿದ್ಯಾರ್ಥಿ ಪದವಿ, ಸ್ನಾತಕೋತ್ತರ ಪದವಿಗೆ ಅರ್ಜಿಹಾಕಿದ ಕೂಡಲೇ ಮಾರ್ಕ್ಸ್‌ಗಿಂತ ಮೊದಲು ಜಾತಿಯನ್ನು ನೋಡುವ ಪ್ರವೃತ್ತಿ ಕಾಣತೊಡಗಿತು. ತಮ್ಮ ಜಾತಿಯವನಾ? ಎಂದು ಖಾತ್ರಿಯಾದ ಕೂಡಲೇ ಮಾರ್ಕ್ಸ್ ಕಡಿಮೆಯಿದ್ದರೂ ಆತನಿಗೆ ಹೇಗೆ ಸೀಟು ಕೊಡಬಹುದು ಎಂಬ ಮಾರ್ಗ ಶೋಧನೆಗಳೂ ಆರಂಭವಾದವು. ಹೀಗಾಗಿ ಇಂದು ವಿವಿಗಳು eನದಾನ ಮಾಡುವ ಬದಲು ಜಾತಿವಾದಿಗಳನ್ನು ರೂಪಿಸುವ ಕೇಂದ್ರಗಳಾಗಿ ಬಿಟ್ಟಿವೆ. ಒಬ್ಬ ವಿವಿ ಸೇರಿದರೇ ಆತ ಯೂನಿವರ್ಸಿಟಿಯಿಂದ ಹೊರಬರುವ ವೇಳೆಗೆ ಒಂದಿಷ್ಟು ಜಾತಿಗಳ ಬಗ್ಗೆ ಅತಿಯಾದ ವ್ಯಾಮೋಹ, ಉಳಿದವರ ಬಗ್ಗೆ ವಿನಾಕಾರಣ ದ್ವೇಷ ಬೆಳೆಸಿಕೊಂಡಿರುತ್ತಾನೆ. ಒಂದು ಕಡೆ ಅತಿರೇಕದ ಆರಾಧನೆ, ಅದು ಅನ್ಯ ಸಮುದಾಯದಲ್ಲಿ ಹುಟ್ಟುಹಾಕುವ ದ್ವೇಷ ಮತ್ತೊಂದು ಕಡೆ. ಕೆಲವರು ಮೀಸಲು ಲಾಭ ಪಡೆದು ಅಧಿಕಾರಿಗಳು, ಉಪನ್ಯಾಸಕರು ಆದ ಮೇಲೂ ಜಾತಿವಾದ ಬಿಡಲಿಲ್ಲ. ಕಚೇರಿ, ಕ್ಲಾಸ್‌ರೂಮ್‌ಗಳಲ್ಲಿ ಮೇಲ್ಜಾತಿಯವರನ್ನು ಸಾರಾಸಗಟಾಗಿ ತೆಗಳುವುದು, ಸ್ವಜಾತಿಯ ವರಲ್ಲಿ ದ್ವೇಷ ಹುಟ್ಟುಹಾಕುವುದು ಆರಂಭವಾಯಿತು. ಇನ್ನೊಂದಡೆ ಮೀಸಲನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂಬೇಡ್ಕರ್ ಅವರನ್ನು ಜರಿಯುವ ಪ್ರವೃತ್ತಿಯೂ ಪ್ರಾರಂಭವಾಯಿತು.

ತಪ್ಪು ಯಾರದ್ದು?

ಇಲ್ಲಿ ಜಾತಿವಾದವೆಂಬುದು ಯಾವುದೋ ಒಂದು ಜಾತಿ/ಸಮುದಾಯಕ್ಕೆ ಸೀಮಿತವಾಗಿಲ್ಲ. ಅಂತಹ ರಸಋಷಿ ಕುವೆಂಪು ಅವರನ್ನೇ ತೆಗೆದುಕೊಳ್ಳಿ. ಅವರನ್ನು ಒಕ್ಕಲಿಗರ ಕವಿಯಾಗಿ ಮಾಡಿದ್ದೇ ದೇ. ಜವರೇಗೌಡ ಹಾಗೂ ಅವರ ಕೆಲವು ಹಿಂಬಾಲಕರು. ಸ್ವಂತ ಶಕ್ತಿಯಿಂದ ಮೇಲೆ ಬರಲು ತಾಕತ್ತಿಲ್ಲದವರು ಕುವೆಂಪು ಅವರ ಹೆಸರನ್ನು ಹೇಳಿ ಹೇಳಿ, ವೈಯಕ್ತಿಕ ಹಿತಾಸಕ್ತಿಗಾಗಿ ಕುವೆಂಪು ಹೆಸರನ್ನು ಅತಿಯಾಗಿ ಬಳಸಿಕೊಂಡ ಕಾರಣ ಕುವೆಂಪು ಅಂದ ಕೂಡಲೇ ಅವರ ಜಾತಿ ನೆನಪಾಗುವಷ್ಟು ಕೆಳಕ್ಕಿಳಿಸಿಬಿಟ್ಟಿದ್ದಾರೆ. ರಾಷ್ಟ್ರನಾಯಕ ಅಂಬೇಡ್ಕರ್ ಪರಿಸ್ಥಿತಿಯೂ ಇದೇ ಆಗಿದೆ. ದಲಿತರಲ್ಲೇ ಇರುವ ನಾನಾ ಬಣಗಳು, ಪವರ್ ಬ್ರೋಕರ್‍ಸ್ ಅಂಬೇಡ್ಕರ್ ಫೋಟೋ, ಹೆಸರನ್ನು ದುರುಪಯೋಗಪಡಿಸಿಕೊಂಡು ಬಂದ ಕಾರಣ ವಿಜಾತಿಯವರ ಮನದಲ್ಲಿನ ಕಂದಕ ಮತ್ತೂ ದೊಡ್ಡದಾಗುವಂತಾಗಿದೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್ ಮೇಲಿನ ಭ್ರಷ್ಟಾಚಾರ ಆರೋಪಕ್ಕೂ ‘ದಲಿತ’ ಎಂಬು ದನ್ನು ಗುರಾಣಿಯಾಗಿ ಬಳಸಲು ಪ್ರಯತ್ನಿಸಿದಾಗ ಅನ್ಯಜಾತಿ ಯವರಲ್ಲಿ ದಲಿತರ ಬಗ್ಗೆ ಯಾವ ಭಾವನೆಯುಂಟಾಗುತ್ತದೆ ಯೋಚನೆ ಮಾಡಿ? ಅದರಲ್ಲೂ ದಲಿತ ದೌರ್ಜನ್ಯ ತಡೆ ಕಾಯಿದೆ ಯಾವ ಪರಿ ದುರುಪಯೋಗವಾಗುತ್ತಿದೆಯೆಂದರೆ ಎಂತಹ ಸಾತ್ವಿಕ ಮನಸುಗಳೂ ರೊಚ್ಚಿಗೆದ್ದುಬಿಡುತ್ತವೆ. ಹೀಗೆ ರಾಷ್ಟ್ರ ನಾಯಕರನ್ನು ಜಾತಿ ನಾಯಕರನ್ನಾಗಿ ಮಾಡುತ್ತಿರುವವರು ಯಾರು? ಸ್ವಜಾತಿ ಯವರೇ ಅಲ್ಲವೆ?

ಆದರೆ…

ನೀವು ಯಾವುದೇ ದೃಷ್ಟಿಯಲ್ಲಿ ನೋಡುತ್ತಾ ಹೋದರೂ ಅಂಬೇಡ್ಕರ್ ಗಾಂಧೀಜಿಗಿಂತ ದೊಡ್ಡ ವ್ಯಕ್ತಿ, ದೊಡ್ಡ ಸ್ಕಾಲರ್. ಸಾವರ್ಕರ್‌ಗಿಂತ Futuristic thinking ಇದ್ದ ವ್ಯಕ್ತಿ. ಅವರ ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕ ಓದಿ. ಅಂಬೇಡ್ಕರ್ ಜಾತಿಯನ್ನು ಮೀರಿದ ಮಹಾನ್ ರಾಷ್ಟ್ರವಾದಿ ಎಂಬುದು ಗೊತ್ತಾಗುತ್ತದೆ. ಅವರನ್ನು ಮೇಲ್ಜಾತಿಯವರೂ ಗೌರವಿಸುವ, ತಮ್ಮ ನಾಯಕ ಎಂದು ಒಪ್ಪಿಕೊಳ್ಳುವ ಮನಸು ಮಾಡಿದರೂ ಚುನಾವಣೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಸ್ವಜಾತಿಯವರು ಮಾಡಿದ ರಾಜಕೀಯ, ಉದ್ದೇಶ ಪೂರ್ವಕ ಗಲಾಟೆಗಳು ನೆನಪಾಗಿ ಮತ್ತೆ ದ್ವೇಷ ಹೊಗೆಯಾಡಲಾರಂಭಿಸುತ್ತದೆ. 1967ರಲ್ಲಿ ನಕ್ಸಲ್‌ಬಾರಿಯಲ್ಲಿ ಕ್ರಾಂತಿಯ ಕಹಳೆ ಯೂದಿದ ಕಾನು ಸನ್ಯಾಲ್ ಅವರನ್ನು ನೆನಪಿಸಿಕೊಳ್ಳಿ. “ಇವತ್ತು ನಡೆಯುತ್ತಿರುವುದು Politics of Poor  ಅಲ್ಲ, Politics of Power” ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತು ಜಾತಿ, ಹೆಸರು, ಪ್ರತಿಮೆ, ಪಾರ್ಕ್, ಸ್ಲೋಗನ್‌ಗಳಲ್ಲೇ ಎಲ್ಲ ಹಿತಾಸಕ್ತಿ, ಎಲ್ಲ ಥರದ ರಾಜಕೀಯ ಅಡಗಿದೆ. ಹಾಗಾಗಿ ಅಂದು ಇಡೀ ದೇಶದ ನಾಯಕರಾಗಿದ್ದವರು ಈಗ ಒಂದು ಸಮುದಾಯದ ನಾಯಕರಾಗಿ ಬಿಡುತ್ತಿದ್ದಾರೆ. ಸ್ವಜಾತಿಯವರೇ ಅವರನ್ನು “Exclusive” ಮಾಡಿಕೊಂಡಿದ್ದಾರೆ. ಹಾಗಾಗಿ ಅನ್ಯಜಾತಿಯ ವರಿಗೆ ಸಿಟ್ಟು ಬಂದಕೂಡಲೇ ಪ್ರತಿಮೆಯನ್ನು ವಿರೂಪಗೊಳಿಸುವುದು, ಮಸಿ ಬಳಿಯುವುದು ಇಂತಹ ಮಾರ್ಗಗಳ ಮೂಲಕ ಮತ್ತೊಂದು ಸಮುದಾಯದ ಮನ ನೋಯಿಸುವ ಕೆಲಸಕ್ಕೆ ಕೈಹಾಕುತ್ತಾರೆ.  ಮೊನ್ನೆ ಹಂಪಿಯಲ್ಲಿ ನಡೆದಿರುವುದೂ ಅಂಥದ್ದೇ ರಾಜಕೀಯ, ಪಟ್ಟಭದ್ರ ಹಿತಾಸಕ್ತಿ ಹಾಗೂ ಮಾನಸಿಕ ವಿಕೃತಿ. ನಮ್ಮಲ್ಲಿ ಎಂಥೆಂಥ ವಿಚಾರಗಳು ವಿವಾದ ಸೃಷ್ಟಿಸುತ್ತವೆ ಗೊತ್ತಾ? ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಮುಖ್ಯಮಂತ್ರಿ ಚೇಂಬರ್‌ಗೆ ಸುಣ್ಣಬಣ್ಣ ಬಳಿಸುವ ಸಲುವಾಗಿ ಅಲ್ಲಿದ್ದ ಭಾವಚಿತ್ರ ಗಳನ್ನು ಕೆಲಕಾಲ ಬೇರೆಡೆಗೆ ಸಾಗಿಸಲಾಗಿತ್ತು. ಅವುಗಳಲ್ಲಿ ಅಂಬೇಡ್ಕರ್ ಭಾವಚಿತ್ರವೂ ಇತ್ತು. ಆದರೆ  “ಮುಖ್ಯಮಂತ್ರಿಯಾದ ಕೂಡಲೇ ತಮ್ಮ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿಹಾಕಿದ ಯಡಿಯೂರಪ್ಪ” ಎಂದು ಮುಖಪುಟದಲ್ಲಿ ದೊಡ್ಡ ವರದಿ ಮಾಡಿದ ಕಿಡಿಗೇಡಿ ಪತ್ರಕರ್ತನೊಬ್ಬ ವಿನಾಕಾರಣ ವಿವಾದ ಸೃಷ್ಟಿಸಿ ಬಿಟ್ಟ! ಇವತ್ತು ಯಡಿಯೂರಪ್ಪನವರು ಈ ರಾಜ್ಯ ಕಂಡ ಮಹಾನ್ ಜಾತಿವಾದಿಯಾಗಿ ಪರಿಣಮಿಸಿದ್ದಾರೆ ಎಂಬುದು ಬೇರೆ ಮಾತು ಬಿಡಿ. ಆದರೆ ಗಾಂಧೀ, ಅಂಬೇಡ್ಕರ್ ಅಥವಾ ಯಾವುದೇ ಮಹಾನ್ ನಾಯಕರಿರಬಹುದು. ಅವರನ್ನು ಕೇವಲ “ಕಲ್ಚರಲ್ ಸಿಂಬಲ್” ಗಳನ್ನಾಗಿ ಮಾಡಿಕೊಳ್ಳುವುದು ಎಷ್ಟು ಸರಿ? ಟೊಪ್ಪಿ ಹಾಕಿದ ಕೂಡಲೇ ಯಾರೂ ಗಾಂಧೀವಾದಿಯಾಗುವುದಿಲ್ಲ, ಬರೀ ಬಾಯುಪಚಾರ ದಿಂದ ಯಾರೂ ದಲಿತ ನಾಯಕನಾಗುವುದಿಲ್ಲ. ಸಾಧ್ಯವಾದರೆ ಗಾಂಧೀ, ಅಂಬೇಡ್ಕರ್ ಅವರಂತೆ ಬದುಕಬೇಕು. ಸಮಾಜದ ಕೊಳೆ ತೊಳೆಯಲು ಯತ್ನಿಸಬೇಕು. ಈ ವಿಷಯದಲ್ಲಿ ಯಾವುದೋ ಒಂದು ವರ್ಗ/ಸಮುದಾಯವನ್ನು ಮಾತ್ರ ತಪ್ಪಿತಸ್ಥರನ್ನಾಗಿ ಮಾಡಲಾಗದು. ಮೇಲ್ಜಾತಿಯವರೂ ಕೂಡ ದಲಿತರ ನೋವನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ದಲಿತ ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಏರಿದರೂ ಜಾತಿಯೆಂಬ ‘ಸ್ಟಿಗ್ಮಾ’ ಇದ್ದೇ ಇರುತ್ತದೆ. ಆ ನೋವನ್ನು ಹೋಗಲಾಡಿಸುವ ಕೆಲಸವೂ ನಡೆಯಬೇಕು. ಜತೆಗೆ ದಲಿತರ ಬಗ್ಗೆ ಸಹಾನುಭೂತಿ ಇಟ್ಟುಕೊಂಡಿರುವ, ದಲಿತರ ದಾಸ್ಯ ವಿಮೋಚನೆಗಾಗಿ ಹೋರಾಡಿದ ಸಾಕಷ್ಟು ಮೇಲ್ಜಾತಿಯವರೂ ಇದ್ದಾರೆ. ಅದನ್ನು ದಲಿತರೂ ಅರ್ಥ ಮಾಡಿಕೊಳ್ಳಬೇಕು.

ಆಗ ಇಂತಹ ವಿಕೃತಿಗಳು ನಿಂತಾವು…

19 Responses to “ಆಕೃತಿಗಳನ್ನು ವಿರೂಪಗೊಳಿಸುವ ವಿಕೃತಿಗೆ ಕೊನೆಯೆಂದು?”

 1. rahul hajare says:

  sir,

 2. P Santhosh Shetty says:

  Uththama Lekhana… Ambedkar jeevisida avadhi & prasthutha paristhithige ajagajaanthara vyathyasavide. Indu dalitharige sahaaya maaduva nepadalli thamma raajakeeya uddeshakkoskaravagi avarannu upayogisikolluva raajakaaranigala sankye hechchaguththide. Dalitha mukhandaruu saha amishakke olagaagi thamma samaajada hithavannu balikoduththiruvudu ellariguu thilida vishaya. Aadudarinda dalitharu thakshanada laabakkagi yochanne maadade, thamma naayakara & raajakaaranigala hinde goththu guriyillade thirugade, swalpa duuradhrustiyullavaraagi yochisi thamma kaarya chatuvatike & gunamattadalli sudhaaraneyannu tharuvaththa gamanaharisabekaagide. Dalitharennuva manobaavavannu bittu, elladdakkuu reservationgagiye kaayade thaavu yellaa reethiyalluu ithararige sarisamaanarendu thorisikodabekaagide. Haagadaaga maathra Ambedkar dalitharige Aadarshavaagaballaru…..

 3. Srinivasa says:

  There is a mistake in the article:

  Mandel commission’s recommendation was to have 27% reservations for OBCs. (not 22% reservations for Scs/STs as it is said in the article).

  -Srinivasa S S

 4. rajesh b says:

  kudos to u mr pratap…the article is an excellent depiction of the current political system which still inherits the attitude of divide and rule left by the britishers…i hope u will write more articles on this issue which can change the mindstes of the youths and hope everybody will contribute to develop ourselves as a secular nation….

 5. rahulhajare says:

  nice article on last saturday but u hav to giv soln for these kind prob such as reservation

 6. ಜನರನ್ನು ಒಡೆದು ವೋಟು ಪಡೆಯುವ ನೀತಿಯು ಭಾರತದಲ್ಲಿ ಎಲ್ಲೆಲ್ಲೂ ಚಲಾವಣೆಯಲ್ಲಿದೆ. ನಮ್ಮ ರಾಷ್ಟ್ರೀಯ ನಾಯಕರನ್ನು ಒಂದು ಪಂಗಡಕ್ಕೆ ಮೀಸಲು ಮಾಡುವ ನೀತಿಯಂತೂ ಶುದ್ಧ ಅವಿವೇಕತನ. ರಾಣಾ ಪ್ರತಾಪಸಿಂಹ, ಶಿವಾಜಿ ಇವರೆಲ್ಲರನ್ನು ಪರಕೀಯರ ವಿರುದ್ಧ ಹೋರಾಡಿದ ಭಾರತೀಯ ಹೋರಾಟಗಾರರೆಂದು ಗುರುತಿಸದೆ, ಕೇವಲ ಸಮುದಾಯ, ಧರ್ಮ ಹಾಗು ಭೂಪ್ರದೇಶಗಳಿಗೆ ಸೀಮಿತಗೊಳಿಸುವದು ಇದಕ್ಕೊಂದು ಉದಾಹರಣೆ. ಅದರಂತೆಯೇ, ಅಂಬೇಡಕರರು ಉಜ್ವಲ ಮಾನವತಾವಾದಿ. ಅವರು ಎಲ್ಲ ಭಾರತೀಯರಿಗೂ ಪೂಜ್ಯರು. ಅವರು ಕೇವಲ ದಲಿತ ನಾಯಕರಲ್ಲ.

 7. Anand Hegde says:

  you are right pratap…ಎಲ್ಲಿಯವರೆಗೆ ಮೀಸಲಾತಿ ಅನ್ನೋ ಅಸ್ತ್ರ politicians ಹತ್ರ ಇರತ್ತೋ, ಅಲ್ಲಿಯವರೆಗೆ ಈ ವಿಕ್ರುತಿ ತಪ್ಪಿದ್ದಲ್ಲ… i hope at-least in future A WELL EDUCATED person not in degree but in HUMANITY will understand these problems and try to solve this.

 8. Shiva says:

  Yes Pratap am agree with you this politicians are played divide and rule method on all Indians after Freedom, it is still going. If we look past history all politicians are used this policy to boil their food ,at present example is the mayavati ,she completely forgot the development of Uttar Pradesh ,but she had more than thousand million worth of jewels and recently she got 4 thousand crore rupees Money Mala . This divide and rule method will lead people to convert to another cast (Christianity) after converting they still getting the facilities of state and central govt facilities ,So the Government bodies have to stop or block the facilities to Dalit Christian and even dalit Muslim also. The BJP is the one party who have a plan to make this law , but the congress govt will not making this law ,because all about vote bank .

  Thanks and regards
  Shiva
  Shiv4all1@hotmail.com

 9. Poornima N says:

  Hi Pratap…. I respect your thoughts. but nimma thoughts na e vicharadalli opkolodu swalpa kashta. Reservation anno bhootha ondu ilde iddidre ivathu namma samaja ishtu bhrashtavagi irtha irlilla ansathe. AA Reservation ge mukhya karanane Ambedkar antha nanna Bhavane. Arhathe illade iro kade adhikara siktha ide. alpara kayyalli adhikara ide. adhikaradinda ahankara. ahankaradinda dwesha. So e samaja kalyana aagbeku andre Reservation tholagabeku. Hagantha AMbedkar prathimege avamana madiddu sari antha alla, ondondu sala depress aagi kooda heege madthareno jana antha nanna bhavane.

 10. good article..liked the narration

 11. rohith says:

  ambedkar bagge janarigiruva keelu bhavane nimma lekana odida melu kadime agilla anta nanna bhavane poornima avru helida matugale idakke sakshi nimma hindina lekanagalige holisidaga e lekana yako dull agide innu parinamakariyagi bareyabahudittu antha anistu nimma lekana allarigu thumbane ista prsakta visayagala nijya chitrana nimma lekanadallide . . . .
  nimma lekanagalige navu shanivaradavaregu kayabeka ? varadalli kanista 2-3 lekana nimmade irbeku anistade . . .

 12. Narayan says:

  Good article, especially its an eye opener to both, who supports reservation and who hates reservation. Please correct the facts like whom VP Singh gave the reservation. Yes education and jobs are mainly based on talents not on reservations. If you are giving some lenience to economically backward class then it is more realistic. Always it is true that you will get bad output if you give bad input. Today talentented people don’t join the government organisation because of reservation. No doubt in a short while all universities in India will not get good professors because of this cast based selection. With all these problems how oragnisations like DRDO, HAL will survive? India need a big revolution…

 13. Chethan, Coorg says:

  Personally I bow to Mr. Ambedkar to his confidence level that he faced many obstacles in his life. For me, everyone belongs to a single caste – HUMAN. Few say there are two – MEN and WOMEN. In today’s world both men and women have same rights in all prospective.

  I am not telling that govt should not give more benefits for low caste people. But my question is, all the benefits should be given to the right person.

  Till today I am confused why we have this system in my country.
  My CET ranking was 6000. My friend’s was 26,000. One fine day we met each other. He told me that he got BE seat in Ambedkar college Of Eng, Bangalore and he asked me in which college you got? I was surprised and was shocked whether I missed CET council or what. Because my ranking was 6000 and I should opt seat before him. I told him that my CET council is next month and with lot of surprise I asked him, how come you finished counseling before mine. He told me that he is SC. I was shocked that till that day I did not know that he is SC (his family condition was very good in all directions. His dad was a govt official who earns handful of money. I am not blaming here). I got in xyz college which is not much good compare to his college.

  Now my question, Is it right to give him that benefit?

  If yes, what is the difference between my ranking and his ranking?
  I encourage govt to implement these kinds of benefits to the right person. In the above case, I would have been happy if he deserved to get that benefit (If his family income is less than certain amount or some measures). His father has already used the benefit for his job, now my friend, tmr his son. This continues ever and he himself competes with another guy/gal of his own community who don’t have all facilities.

 14. Raghu says:

  good article

 15. Ian says:

  ambedkar bagge janarigiruva keelu bhavane nimma lekana odida melu kadime agilla anta nanna bhavane poornima avru helida matugale idakke sakshi nimma hindina lekanagalige holisidaga e lekana yako dull agide innu parinamakariyagi bareyabahudittu antha anistu nimma lekana allarigu thumbane ista prsakta visayagala nijya chitrana nimma lekanadallide . . . .
  nimma lekanagalige navu shanivaradavaregu kayabeka ? varadalli kanista 2-3 lekana nimmade irbeku anistade . . .

 16. roopashree says:

  ur view is true. can say these reservation system can be overcome through challenge among the persons who are eligible for reservation not to take reserved seat but taking seat through competition.i feel this will never happen

 17. Dave says:

  ambedkar bagge janarigiruva keelu bhavane nimma lekana odida melu kadime agilla anta nanna bhavane poornima avru helida matugale idakke sakshi nimma hindina lekanagalige holisidaga e lekana yako dull agide innu parinamakariyagi bareyabahudittu antha anistu nimma lekana allarigu thumbane ista prsakta visayagala nijya chitrana nimma lekanadallide . . . .
  nimma lekanagalige navu shanivaradavaregu kayabeka ? varadalli kanista 2-3 lekana nimmade irbeku anistade . . .

 18. niharika says:

  wonderful article

 19. rr says:

  hi pratap…
  there is a significant misconceiving with ur abut manadal issues or reservation ……
  history is most imporatnt ….everything based on history….mandal was about OBC reservation 27 % …that is not at all related to SC/ST reservation……
  One-thing we must understand ’till so called hindu caste system survives reservation exists……sc/st reservation is related to human rights issues. the very root of reservation is Caste System ……destroying caste system untcohabilty racism ….we can’t remove reservation….. Since the social the social religious system denies human rights and equality….Constitution provides the those denied rights…….. so. you ahve vry good wrintg skill… my suggestion you must read true indian history

  ಎಲ್ಲಾ ರಾಜಕೀಯ, ಎಲ್ಲಾ ಲೆಕ್ಕಾಚಾರ… What does it mean?