Date : 25-04-2010, Sunday | 28 Comments
ತಮಿಳುನಾಡಿನ ಈ ಮುತ್ತಜ್ಜಿಯ ಹೆಸರು ಕರುಪ್ಪಾಯಿ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (NREGS) ಕಚೇರಿ ಎದುರು ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವ ಮೊದಲಿಗರಲ್ಲಿ ಆಕೆಯೂ ಒಬ್ಬಳಾಗಿರುತ್ತಾಳೆ. ವರ್ಷಕ್ಕೆ 100 ದಿನ ಕೆಲಸ ಕೊಡುವ ಈ ಯೋಜನೆಯ ಕೆಲಸಗಾತಿಯ ವಯಸ್ಸು 101!! ಆಕೆಯ ನಿರ್ದಿಷ್ಟ ವಯಸ್ಸನ್ನು ತೋರಿಸುವ ಯಾವುದೇ ದಾಖಲೆಗಳಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಬಂದಾಗ ತನಗೆ 110 ವರ್ಷ ಎಂದಿದ್ದಳು. ಆಕೆಯ ಹಿರಿಯ ಮಗನ ವಯಸ್ಸು 82. ಅದನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿ ಆಕೆಯ ವಯಸ್ಸು 100 ಎಂದು ದಾಖಲು ಮಾಡಿಕೊಳ್ಳಲಾಗಿತ್ತು. ಈ ಘಟನೆ ನಡೆದು ವರ್ಷ ಕಳೆದಿದೆ. ಈಗ ಆಕೆಗೆ 101 ವರ್ಷ. ಕರುಪ್ಪಾಯಿ ಮದುರೈ ಜಿಲ್ಲೆಯ ತಿರುಪರಣಕುಡ್ರಂ ಪಂಚಾಯಿತಿಗೆ ಸೇರಿದ ತನ್ಕಣಕುಲಂ ಗ್ರಾಮದವಳು. ಸ್ಥಳೀಯರು ಆಕೆಯನ್ನು “ಸುರು ಸುರುಪು ಪಾಟಿ” (ಚೂಟಿ ಅಜ್ಜಿ) ಎನ್ನುತ್ತಾರೆ. ಮುದಿ ಪ್ರಾಯವನ್ನೂ ಮೀರಿದ ವಯಸ್ಸಾದರೂ ಅಜ್ಜಿ ದುಡಿಯುವುದನ್ನು ಮಾತ್ರ ನಿಲ್ಲಿಸಿಲ್ಲ. 2009 ಏಪ್ರಿಲ್‌ನಿಂದ 2010 ಮಾರ್ಚ್ ಅವಧಿಯಲ್ಲಿ 60 ದಿನ ಕೆಲಸ ಮಾಡಿದ್ದಾಳೆ. ಅದರಿಂದಾಗಿ ನಾನು ಗೌರವಯುತವಾಗಿ ಬದುಕಲು ಸಾಧ್ಯವಾಗಿದೆ ಎನ್ನುತ್ತಾಳೆ ಕರುಪ್ಪಾಯಿ.
ಆಕೆಗೆ ಒಟ್ಟು 7 ಮಕ್ಕಳು. ಅವರಲ್ಲಿ ಮೂವರು ಬದುಕಿದ್ದಾರೆ. 15 ಮೊಮ್ಮಕ್ಕಳಿದ್ದಾರೆ. ಹಲವಾರು ಮರಿಮಕ್ಕಳೂ ಇದ್ದಾರೆ. ಮಗ ವಿರುಮಾಂಡಿಯ ಸೂರಿನ ಕೆಳಗಿನ ಸಣ್ಣ ಭಾಗದಲ್ಲಿ ಆಕೆ ನೆಲೆಸಿದ್ದಾಳೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸವಿಲ್ಲದಾಗ ಅಥವಾ ನಿಗದಿತ ದಿನಗಳು ಮುಗಿದ ನಂತರ ಅಜ್ಜಿ ತರಕಾರಿ, ಮೀನು ಮಾರುತ್ತಾಳೆ. ಸಣ್ಣ ಕಾಯಿಲೆಗೂ ತಾನು ಆಸ್ಪತ್ರೆಗೆ ಹೋಗಿಲ್ಲ ಎನ್ನುವ ಆಕೆಗೆ ಜ್ವರ ಬಂದರೂ ಮನೆಯ ಮದ್ದೇ ಗತಿಯಂತೆ. ಅಡುಗೆ ಉಪ್ಪಿನ ಮೂಲಕ ಜ್ವರವನ್ನು ಕಡಿಮೆ ಮಾಡಿಕೊಳ್ಳುತ್ತಾಳಂತೆ. ನಾನು ವೈದ್ಯರ ಬಳಿಗೆ ಹೋದ ಏಕೈಕ ಸಂದರ್ಭವೆಂದರೆ ನನಗೆ ಕ್ಯಾಟರಾಕ್ಟ್ (ಪೊರೆ) ಬಂದಿದ್ದಾಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಕೆಲಸದ ವಿಷಯದಲ್ಲೂ ಹಾಗೆ, ಇತರರಂತೆಯೇ ದುಡಿಯುತ್ತಾಳೆ. ಬಿರು ಬೇಸಿಗೆಯಲ್ಲಿ ಮಣ್ಣು ಅಗೆಯುವ ಕೆಲಸ ಮಾತ್ರ ಮಾಡುತ್ತಾಳೆ, ಇತರರು ಆಕೆಯ ಪಾಲಿನ ಮಣ್ಣನ್ನು ಸಾಗಿಸುವ ಕೆಲಸ ಮಾಡುತ್ತಾರೆ. ಆಕೆ ಯಾವ ಸಂದರ್ಭದಲ್ಲಾದರೂ, ಯಾರದ್ದಾದರೂ ಸಹಾಯ ತೆಗೆದುಕೊಂಡಿದ್ದರೆ ಅದೊಂದೇ. ಕರುಪ್ಪಾಯಿಯ ಗಂಡನ ಹೆಸರು ಚೋಕನ್‌ವಿರುಮಾಂಡಿ. ಜವಳಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಆತ ನಾಯಿ ಕಡಿತಕ್ಕೊಳಗಾಗಿ ರೇಬಿಸ್‌ನಿಂದ ಮಡಿದು ೫೦ ವರ್ಷಗಳು ಕಳೆದಿವೆ. ಆದರೆ ಕರುಪ್ಪಾಯಿ ಮಾತ್ರ ಯಾರ ಮುಂದೆಯೂ ಊಟಕ್ಕಾಗಲಿ ಅಥವಾ ಇನ್ನಾವುದೇ ಸಹಾಯಕ್ಕಾಗಲಿ ಕೈಚಾಚಿಲ್ಲ. “ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕಬೇಕು ಎಂದು ನನ್ನ ಗಂಡ ಯಾವಾಗಲೂ ಹೇಳುತ್ತಿದ್ದ, ನಾನು ಅದನ್ನೇ ಮಾಡುತ್ತಿದ್ದೇನೆ. ನಾನೇ ದುಡಿಯುತ್ತೇನೆ, ನಾನೇ ಬೇಯಿಸಿಕೊಂಡು ತಿನ್ನುತ್ತೇನೆ. ಉಸಿರು ಇರುವವರೆಗೂ ಕೆಲಸ ಮಾಡುತ್ತೇನೆ ಹಾಗೂ ಯಾರ ಬಾಗಿಲ ಮುಂದೆಯೂ ಹೊಟ್ಟೆಗಾಗಿ ಬಟ್ಟಲು ಹಿಡಿದು ನಿಲ್ಲುವುದಿಲ್ಲ” ಎನ್ನುತ್ತಾಳೆ!!
ಮೊನ್ನೆ ಏಪ್ರಿಲ್ 21ರಂದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಇಂಥದ್ದೊಂದು ಮನಮುಟ್ಟುವ ವರದಿ ಪ್ರಕಟವಾಗಿದೆ. ಅಬ್ಬಾ… ಎಂತಹ ಜೀವನಾಸಕ್ತಿ, ಎಂತಹ ಸ್ವಾಭಿಮಾನ!! ವಯಸ್ಸು ನೂರಾವೊಂದಾದರೂ ಬದುಕುವ ಆಸಕ್ತಿಯೂ ಕ್ಷೀಣಿಸಿಲ್ಲ, ಸ್ವಾವಲಂಬಿಯಾಗಿ ಬದುಕಬೇಕೆಂಬ ಛಲವನ್ನೂ ಕಳೆದುಕೊಂಡಿಲ್ಲ. ಅನಕ್ಷರಸ್ಥ, ಬಡ ಮಹಿಳೆಯಾಗಿದ್ದರೂ ಆಕೆಯ ಬದುಕೇ ಒಂದು ಸಂದೇಶ. ಗಂಡಸು-ಹೆಂಗಸರೆನ್ನದೆ ಆಕೆ ನಮ್ಮೆಲ್ಲರಿಗೂ ಆದರ್ಶ ಪ್ರಾಯ. ಆಕೆ ಒಬ್ಬ ಮಹಿಳೆಯಾಗಿರುವುದರಿಂದ ಹೆಣ್ಣುಕುಲವನ್ನು ದೃಷ್ಟಿಯಾಗಿಟ್ಟುಕೊಂಡು ನಿರ್ದಿಷ್ಟವಾಗಿ ಹೇಳುವುದಾದರೆ, ನಮ್ಮ ಕೆಲವು ಮಧ್ಯಮ ವಯಸ್ಕ ಗೃಹಿಣಿಯರು ಈ ಮುತ್ತಜ್ಜಿ ಯನ್ನು ನೋಡಿಯಾದರೂ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎನಿಸುತ್ತಿದೆ. ಖಂಡಿತ ಎಲ್ಲರನ್ನೂ ದೃಷ್ಟಿಯಲ್ಲಿಟ್ಟು ಕೊಂಡಾಗಲಿ ಅಥವಾ ಜನರಲೈಸ್ ಮಾಡಿಯಾಗಲಿ ದೂರುತ್ತಿಲ್ಲ. ಅತ್ಯಂತ ಕ್ರಿಯಾಶೀಲರಾಗಿರುವ, ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಮಾದರಿ ಬದುಕು ನಡೆಸುತ್ತಿರುವ ಕೋಟ್ಯಂತರ ಮಹಿಳೆಯರು ಈ ದೇಶದಲ್ಲಿದ್ದಾರೆ. ಆದರೆ ನಮ್ಮ ಬಹುತೇಕ ನಗರ, ಪಟ್ಟಣವಾಸಿ ಗೃಹಿಣಿಯರ ದಿನಚರಿ ಹೇಗಿದೆ?
1. ಅಡುಗೆ
2. ಟಿವಿ-ಧಾರಾವಾಹಿ, ಇನ್ನಿತರ ಕಾರ್ಯಕ್ರಮಗಳ ವೀಕ್ಷಣೆ
3. ಗಾಸಿಪಿಂಗ್(ಗುಸುಗುಸು)
ಬೆಳಗ್ಗೆ ಗಂಡ ಕಚೇರಿಗೆ ತೆರಳುವುದನ್ನೇ, ಮಕ್ಕಳು ಶಾಲೆಗೆ ಹೋಗುವುದನ್ನೇ ಕಾಯುತ್ತಿರುತ್ತಾರೆ ಎಂಬಂತಿದೆ ಪರಿಸ್ಥಿತಿ. ಒಂದಿಷ್ಟು ಮನೆಗೆಲಸ. ಮಷೀನುಗಳ ಆವಿಷ್ಕಾರದಿಂದ ಅಥವಾ ಆಗಮನದಿಂದ ಅದೂ ಸುಲಭವಾಗಿದೆ. ಜತೆಗೆ ಕೆಲಸಕ್ಕೊಬ್ಬಳು. ಇನ್ನು ಮಧ್ಯಾಹ್ನಕ್ಕೆ ಒಂದಿಷ್ಟು ಅಡುಗೆ ಮಾಡಿಟ್ಟು ಅಪರಾಹ್ನ ಪ್ರಸಾರವಾಗುವ ಧಾರಾವಾಹಿಗಳಿಗಾಗಿ ಕಾಯುವಿಕೆ ಆರಂಭ. ಧಾರಾವಾಹಿಯ ನಂತರ ಊಟ, ನಂತರ ಸಣ್ಣ ನಿದ್ರೆ. ಸಂಜೆ ಟೀ-ಕಾಫಿ ನಂತರ ಮತ್ತೊಂದಿಷ್ಟು ಮನೆಗೆಲಸ ಮುಗಿಸಿ ಧಾರಾವಾಹಿಗಳು ಏಳು ಅಥವಾ ಏಳೂವರೆ ಗಂಟೆಗೆ ಆರಂಭವಾಗಲಿವೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ರಾತ್ರಿ ಅಡುಗೆ ಸಿದ್ಧ. ಮತ್ತೆ ಟಿವಿ ಮುಂದೆ ಕುಳಿತರೆ ಏಳುವುದು 10 ಅಥವಾ 10.30ಕ್ಕೆ. ಧಾರಾವಾಹಿ ಮುಗಿದ ಮೇಲೆಯೇ. ಆ ಜನ್ಮಾಂತರ, ಸ್ವಯಂವರ, ಕಟಕಟೆಯ ಕಥೆಗಳು, ಬಾಲ eನಿ, ಅತ್ತೆ-ಸೊಸೆ ಕಿತ್ತಾಟ-ವಿವಾಹೇತರ ಸಂಬಂಧ ಮುಂತಾದುವು ಗಳನ್ನೇ ಹೊಟ್ಟೆಯೊಳಗಿಟ್ಟುಕೊಂಡಿರುವ ಹಾಳೂ-ಮೂಳು ಧಾರಾ ವಾಹಿಗಳನ್ನು ನೋಡಿದರೆ ಮನುಷ್ಯ ಏನಾಗಲು ಸಾಧ್ಯ? An idle mind is devils workshop ಎಂಬಂತೆ ಮನುಷ್ಯ-ಮನುಷ್ಯರ ನಡುವೆ, ಸಂಬಂಧಗಳೊಳಗೇ ಅನುಮಾನವೆಂಬ ಪಿಶಾಚಿ ಹೊಕ್ಕಿ, ಕಾಡಲಾರಂಭಿಸುತ್ತದೆ. ಇನ್ನು ಅಡುಗೆ, ಊಟ, ಧಾರಾವಾಹಿಯ ನಂತರ ಬಾಯಿಚಪ್ಪರಿಸಲು ಏನಾದರೂ ಬೇಕಲ್ಲವೆ? ಆಗ ಆರಂಭವಾಗುತ್ತದೆ ಗಾಸಿಪಿಂಗ್. ನಿಮ್ಮ ಮನೆಗೆ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದು ನಿಮಗಿಂತ ಪಕ್ಕದ ಮನೆಯ ಆಂಟಿಗೇ ಚೆನ್ನಾಗಿ ಗೊತ್ತಿರುತ್ತದೆ. ಅನ್ಯರ ಬದುಕು ಸೋಮಾರಿ ಮನಸುಗಳ ಗುಸುಗುಸು ಪ್ರಚಾರಾಂದೋಲನಕ್ಕೆ ಸಿಕ್ಕಿ ಬೀದಿ ಮಾತಾಗಿ ಬಿಡುತ್ತದೆ. ಇವೆಲ್ಲವೂ ಈಗ ನಡೆಯುತ್ತಿರುವ ಸಂಗತಿಗಳೇ ಅಲ್ಲವೆ? ಮದುವೆಯಾದ ನಂತರ ಬಹಳಷ್ಟು ಗೃಹಿಣಿಯರು ಏಕೆ ‘ಆಂಟಿ’ಯಾಗುತ್ತಾರೆಂದರೆ ಇದೇ ಕಾರಣಕ್ಕೆ. ಅಡುಗೆ, ಟಿವಿ, ಗಾಸಿಪಿಂಗ್‌ಗೆ ಬದುಕು ಸೀಮಿತವಾಗಿ ಬಿಟ್ಟರೆ ಸೊಂಟ ನಾಲ್ಕು ಸುತ್ತು ದಪ್ಪವಾಗದೇ ಇದ್ದೀತೆ? ಗಜ ಕಟಿ, ಡೊಳ್ಳು ಹೊಟ್ಟೆ, ಡಯಾಬಿಟಿಸ್, ಬೊಜ್ಜು ಬಾರದೆ ಇನ್ನೇನು ಬಂದೀತು? ಆನಂತರ ಅಡುಗೆ ಮಾಡುವುದನ್ನೂ ಬಿಟ್ಟು ಕಿರಿದಾದ ಪಾರ್ಕ್‌ಗಳಲ್ಲಿ ಗಜಗಾತ್ರದ ದೇಹವನ್ನು ಉಸ್ಸಪ್ಪಾ ಎಂದು ರೌಂಡ್ ಹೊಡೆಸಬೇಕಾಗುತ್ತದೆ. ಮೊದಲೆಲ್ಲ ಬಟ್ಟೆ ತೊಳೆಯುವ, ಕಸ ಗುಡಿಸುವ ನೆಪದಲ್ಲಾದರೂ ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಗುತ್ತಿತ್ತು. ವಾಷಿಂಗ್ ಮಷೀನ್ ಹಾಗೂ ವ್ಯಾಕ್ಯೂಮ್ ಕ್ಲೀನರ್‌ಗಳು ಅದನ್ನೂ ಸುಲಭ ಮಾಡಿಬಿಟ್ಟಿವೆ. ಇದರ ಮಧ್ಯೆ, ಮಗಳ-ಮಗನ ಜಾತಕ ಕಳುಹಿಸಿ ಟಿವಿ ಜ್ಯೋತಿಷಿಗಳೆಂಬ ಪ್ರಚಾರಪ್ರಿಯ ದುಡ್ಡಿನ ಪೀಡೆಗಳ ಸಲಹೆ ಕೇಳುವ ಚಟ. ನನ್ನ ಮಗ/ಮಗಳು ಯಾವ ಕೋರ್ಸಿಗೆ ಸೇರಬೇಕು ಎಂಬುದನ್ನೂ ಉನ್ನತ ಶಿಕ್ಷಣದ ಅರಿವೇ ಇಲ್ಲದ ಪಂಚಾಗ ಪಂಡಿತರನ್ನು ಕೇಳುವ ತೆವಲು. ಮಗ/ಮಗಳಿಗೆ ಒಳ್ಳೆಯ ವಿದ್ಯೆ ನೀಡಿದರೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂಬ ಸಾಮಾನ್ಯeನವೂ ಇಲ್ಲದವರಂತೆ ಒಳ್ಳೆಯ ವರ ಸಿಗುತ್ತಾನಾ, ಯಾವಾಗ ಕೆಲಸ ಸಿಗುತ್ತದೆ ಎಂದು ಪರದೆ ಪೂರ್ಣ ಕಾಣುವ ದಢೂತಿ ಜ್ಯೋತಿಷಿಗಳನ್ನು ಕೇಳುವುದು. ಈ ವಿಷಯದಲ್ಲಿ ಬಹಳಷ್ಟು ಗಂಡಸರೂ ಹಿಂದೆಬಿದ್ದಿಲ್ಲ ಬಿಡಿ. ಆದರೆ ಮನಸು ಸೋಮಾರಿಯಾದರೆ, ಮೈಗೆ ಜಡತ್ವ ಅಂಟಿಕೊಂಡರೆ ಇನ್ನೇನಾದೀತು?
ಕರುಪ್ಪಾಯಿಯ ಬದುಕು ಮುಖ್ಯವಾಗುವುದು ಇದೇ ಕಾರಣಕ್ಕೆ.
ನಮ್ಮ ಗೃಹಿಣಿಯರೆಲ್ಲ ಕರುಪ್ಪಾಯಿಯಂತೆ ಹೊಲ-ಗದ್ದೆಗಳಲ್ಲೇ ದುಡಿಯಬೇಕು, ದೇಹವನ್ನು ಆ ರೀತಿ ದಂಡಿಸಿಕೊಳ್ಳಬೇಕು ಎಂದು ಹೇಳುತ್ತಿಲ್ಲ. ಆದರೆ ಅಡುಗೆ, ಧಾರಾವಾಹಿ, ಗಾಸಿಪಿಂಗ್‌ನಲ್ಲೇ ಕಾಲಹರಣ ಮಾಡುವುದು ಎಷ್ಟು ಸರಿ? ಅದರಿಂದ ಲಾಭ ಯಾರಿಗೆ? ಧಾರಾವಾಹಿಗಳ ನಿರ್ಮಾಪಕರು ಹಾಗೂ ಚಾನೆಲ್‌ಗಳು ಉದ್ಧಾರವಾಗುತ್ತವೆ. ಗಾಸಿಪಿಂಗ್‌ನಿಂದಾಗಿ ಸಮಯವೂ ವ್ಯರ್ಥ, ಅನ್ಯರ ಮರ್ಯಾದೆಯೂ ಹರಣ. ಇಂದಿನ ಯುವ ಜನತೆ ಹೇಗಿದೆ ನೋಡಿ? ಹುಡುಗಿಯರು ಹದ್ದು ಮೀರಿ ನಡೆದುಕೊಳ್ಳುತ್ತಾರೆ ಎಂದು ದೂರಬಹುದು. ಆದರೆ ಮದುವೆಯಾದ ಮೇಲೆ ದುಡ್ಡಿಗಾಗಿ ಗಂಡನ ಬಳಿ ಕೈಚಾಚಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ವ್ಯಾಸಂಗ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರಲು ಬಯಸುತ್ತಾರೆ. ನಾನೂ ಕೆಲಸಕ್ಕೆ ಸೇರಬೇಕು, ದುಡಿಯಬೇಕು, ಅದರಲ್ಲಿ ಒಂದಿಷ್ಟನ್ನು ತಾನೇ ಖರ್ಚು ಮಾಡಬೇಕೆಂಬ ಮನಸ್ಥಿತಿ ಹೊಂದಿದ್ದಾರೆ. ಸೋಮವಾರದಿಂದಲೇ ಶುಕ್ರವಾರವನ್ನು ನಿರೀಕ್ಷಿಸಲು ಆರಂಭಿಸಿ ದರೂ, ಶುಕ್ರವಾರ ಬಂದ ಕೂಡಲೇ Thank God it’s Friday(TGIF) ಎಂದು ನಿಟ್ಟುಸಿರು ಬಿಟ್ಟರೂ ವಾರದ ಐದು ದಿನ ಕತ್ತೆಯಂತೆ ದುಡಿಯುತ್ತಾರೆ. ವಾರಾಂತ್ಯದಲ್ಲಿ ಒಂದಿಷ್ಟು ವಿಶ್ರಾಂತಿ, ಮನರಂಜನೆ ಬಯಸುತ್ತಾರೆ. ಆದರೆ ಸೋಮಾರಿಗಳಂತೆ ಕಳೆಯಲು, ಯಾರದ್ದೋ ಬಗ್ಗೆ ಗಾಸಿಪಿಂಗ್, ಧಾರಾವಾಹಿ ವೀಕ್ಷಣೆ, ಕಾಡುಹರಟೆಯಲ್ಲೇ ಕಾಲಹರಣ ಮಾಡಲು ಯಾರೂ ಬಯಸುವುದಿಲ್ಲ. ಹಾಗಂತ ಮಧ್ಯ ವಯಸ್ಸು ಮೀರಿರುವ ಅಥವಾ ಮೂವತ್ತು ತುಂಬುವ ಮೊದಲೇ ಮಧ್ಯ ವಯಸ್ಕ ಮಹಿಳೆಯ ಮನಸ್ಥಿತಿ ಅಂಟಿಸಿಕೊಂಡಿರುವ ಮಹಿಳೆಯರು ಏಕಾಏಕಿ ದುಡಿಯಲು ಹೊರಡಬೇಕು ಎಂದಲ್ಲ. ಗೃಹನಿರ್ವಹಣೆಯೂ ಗುರುತರ ಜವಾಬ್ದಾರಿಯೇ. ಮಕ್ಕಳ ಪಾಲನೆ, ಪೋಷಣೆಯೂ ದೊಡ್ಡ ಹೊಣೆಯೇ. ಆದರೆ ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸಿ ಕಳುಹಿಸುವುದು, ಊಟ ಬಡಿಸುವುದು, ಪಾಠ ಓದಿಕೋ ಎಂದು ಗದರಿಸುವುದು ಹಾಗೂ ಮಕ್ಕಳ ಭವಿಷ್ಯಕ್ಕೆಂದು ದುಡ್ಡು ಕೂಡಿಡುವುದೇ parenting ಎಂದು ಭಾವಿಸಿದರಾಯಿತೆ? ಮನೆಯೇ ಮೊದಲ ಪಾಠ ಶಾಲೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದೀತು ಎಂಬ ಮಾತಿವೆ. ಡ್ರಾಯಿಂಗ್ ರೂಮ್‌ನಲ್ಲಿ ಧಾರಾವಾಹಿ ಹಾಕಿಕೊಂಡು, ಮಕ್ಕಳು ಓದಿಕೊಳ್ಳಬೇಕೆಂದು ಬಯಸಿದರೆ ಸಾಧ್ಯವಾದೀತೆ? ಈ ಟಿವಿ, ಧಾರಾವಾಹಿ, ರಿಯಾಲಿಟಿ ಶೋಗಳ ಹಾವಳಿಯಿಲ್ಲದ ಕಾಲದಲ್ಲಿ ಸಂಜೆಯಾಯಿತೆಂದರೆ ಅಮ್ಮನಾದವಳು ಮಕ್ಕಳಿಗೆ ಚಹಾ-ಕಾಫಿ ಕೊಟ್ಟು ಓದಿಗೆ ಹಚ್ಚುತ್ತಿದ್ದಳು. ಗೀತೆ, ಶ್ಲೋಕ ಪಠನೆ, ಮಗ್ಗಿಯ ಬಾಯಿಪಾಠ ಆರಂಭವಾಗುತ್ತಿತ್ತು. ಇವತ್ತು ಎಷ್ಟು ಜನ ತಂದೆ-ತಾಯಂದಿರು ಸಣ್ಣ ಸಣ್ಣ ಕಥೆಗಳ ಮೂಲಕ ನೀತಿ ಪಾಠ ಹೇಳಿ ಕೊಡುತ್ತಾರೆ? ಹಾಗೆ ಮಾಡಬಾರದು, ಹೀಗೆ ಮಾಡಬಾರದು, ಅದು ತಪ್ಪು- ಇದು ತಪ್ಪು ಎಂದು ಕಿವಿಮಾತು ಹೇಳುವುದಕ್ಕಿಂತ, ಕಿವಿ ಹಿಂಡುವುದಕ್ಕಿಂತ ತೋಳ ಬಂತು ತೋಳ ಕಥೆ ಹೇಳಿದರೆ ಸಾಕಲ್ಲವೆ? ಮಕ್ಕಳಲ್ಲಿ ಪ್ರೀತಿ ಅನುಕಂಪ ತುಂಬಲು ಗೋವಿನ ಹಾಡಿಗಿಂತ ದೊಡ್ಡ ಗೀತೆ ಬೇಕೆ? ಮಕ್ಕಳಿಗೆ ಪಂಚತಂತ್ರದ ಕಥೆಗಳನ್ನು ಹೇಳಿಕೊಡುವುದಕ್ಕಿಂತ ದೊಡ್ಡ ನೀತಿ ಪಾಠ ಯಾವುದಿದೆ? We cannot always build the future for our youth, but we can build our youth for the future- ಎಂದಿದ್ದರು ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್. ಮಕ್ಕಳ ಭವಿಷ್ಯ ರೂಪಿಸಲು ಆಗದಿದ್ದರೂ ಭವಿಷ್ಯದ ಬದುಕಿಗೆ ಮಕ್ಕಳನ್ನು ಅಣಿಗೊಳಿಸಬೇಕು ಎಂಬ ಅವರ ಮಾತನ್ನು ಮುಖ್ಯವಾಗಿ ನಮ್ಮ ಗೃಹಿಣಿಯರು, ಧಾರಾವಾಹಿ ದಾಸರು, ಸೋಮಾರಿಗಳು ಅರ್ಥಮಾಡಿಕೊಳ್ಳಬೇಕು.
ಅಷ್ಟಕ್ಕೂ ಯಾವುದೇ ಒಂದು ದೇಶ ಸಮಗ್ರ ಅಭಿವೃದ್ಧಿ ಯನ್ನು ಕಾಣಬೇಕಾದರೆ ನಾವೆಲ್ಲರೂ ಸಾಂಘಿಕವಾಗಿ ಪ್ರಯತ್ನಿಸ ಬೇಕಲ್ಲವೆ?
ಇಂದು ನಾವು ಹುಬ್ಬೇರಿಸಿ ನೋಡುವ ಅಮೆರಿಕವನ್ನೇ ತೆಗೆದುಕೊಳ್ಳಿ. ಎಂಬತ್ತು, ನೂರು ವರ್ಷಗಳ ಹಿಂದೆ ಅಮೆರಿಕ ಕೌಬಾಯ್ಸ್, ರಾಬರ್‍ಸ್ ನೇಶನ್ ಎಂಬ ಕುಖ್ಯಾತಿ ಪಡೆದಿತ್ತು. ಒಂದು ಕಾಲದಲ್ಲಿ ಜಗತ್ತಿನ ಯುವತಿಯರ ಕನಸಿನ ರಾಜಕುಮಾರನಾಗಿದ್ದ ಗ್ರೆಗರಿ ಪೆಕ್ ನಟಿಸಿದ್ದ ‘ಮೆಕೆನಾಸ್ ಗೋಲ್ಡ್’ ಚಿತ್ರವನ್ನು ನೋಡಿದ್ದೀರಾ? ಅದರಲ್ಲಿ ಒಂದು ದೃಶ್ಯ ಬರುತ್ತದೆ. ಪೊಲೀಸ್ ಅಧಿಕಾರಿ ಹೇಳುತ್ತಾನೆ- “ಅಮೆರಿಕದಲ್ಲಿ ಇರುವುದು ಎರಡೇ ಉದ್ಯೋಗಗಳು-One who robs and the one who catches!! (ಕಳ್ಳ ಹಾಗೂ ಪೊಲೀಸ್ ಕೆಲಸ ಮಾತ್ರ) ಆದರೆ ಇವತ್ತು ಅಮೆರಿಕ ಏನಾಗಿದೆ? ಇನೋವೇಶನ್, ಆಂತ್ರಪ್ರೆನರ್‌ಶಿಪ್ ಹಾಗೂ ಹಾರ್ಡ್‌ವರ್ಕ್ ಇವು ಅಮೆರಿಕವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿಸಿವೆ. ನಾವೂ ಕೂಡ ಅದನ್ನು ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕರುಪ್ಪಾಯಿಯ ಬದುಕಿನಲ್ಲೇ ಸ್ವಾವಲಂಬನೆಯ ಸಂದೇಶವಿದೆ. ಪ್ರೇರಣೆ ಪಡೆದುಕೊಳ್ಳಲು ದೊಡ್ಡ ದೊಡ್ಡ ಸಾಧಕರೇ ಬೇಕಿಲ್ಲ. ಎಲ್ಲರೂ ಇಂದಿರಾ ನೂಯಿ, ಕಿರಣ್ ಬೇಡಿ, ಸುಧಾಮೂರ್ತಿಯಾಗಬೇಕಂದಲ್ಲ, ಕನಿಷ್ಠ ಜೀವನಾಸಕ್ತಿಯನ್ನಾದರೂ ಇಟ್ಟುಕೊಳ್ಳಬಹುದಲ್ಲವೆ? ದುಡಿಮೆಯ ಅಗತ್ಯ, ಅರ್ಥಪೂರ್ಣ ಬದುಕಿನ ಮಹತ್ವ ವನ್ನು ಅರಿತುಕೊಳ್ಳಬಹುದಲ್ಲವೆ? ರಾಮ ರಾಮ ಅಂತ ಭಜನೆ ಮಾಡಬೇಕಾದವಳೇ ಬೆವರು ಸುರಿಸುತ್ತಿರುವಾಗ ಇವರೇಕೆ ಟಿವಿಗೆ ಜೋತುಬಿದ್ದಿದ್ದಾರೆ? ಜನ್ಮಾಂತರ, ಜ್ಯೋತಿಷ್ಯ, ಸ್ವಯಂ ವರದ ಜಡ ಮನಸ್ಸುಗಳಿಗೆ ಕರುಪ್ಪಾಯಿ ಜೀವನೋತ್ಸಾಹದ ಪಾಠವಾದಾಳೆ?
Think it over!
Hi Guru,
E varada article thumba effective agide, iddanna odidavaru nijavaglu enadaru kaliyabeku
ವಾಹೠಚೆನà³à²¨à²¾à²—ಿದೆ. ಆದರೆ ನನಗೆ ಕೆಲವೠಪà³à²°à²¶à³à²¨à³†à²—ಳಿವೆ. ವಿಜಯಕರà³à²¨à²¾à²Ÿà²• ಪತà³à²°à²¿à²•ೆಗೂ ಜà³à²¯à³‹à²¤à²¿à²·à²¿,ವಸà³à²¤à³ ತಜà³à²ž,ಮà³à²‚ತಾದ ಮà³à²‚ತಾದ ಬಿರà³à²¦à²¾à²¨à³à²•ಿತ ಚಂದà³à²° ಶೇಖರ ಸà³à²µà²¾à²®à²¿à²—ೂ à²à²¨à³ ಸಂಬಂಧ? ಅದೠಯಾಕೆ ಅಷà³à²Ÿà³Šà²‚ದೠಹೋಗಳà³à²¤à³à²¤à³€à²°à²¿? ಇತà³à²¤à³€à²šà³†à²—ೆ ಆತನ ಫೋಟೋ ಮತà³à²¤à²¦à²° ಶೀರà³à²·à²¿à²•ೆ ನೋಡಿ ಬೆಚà³à²šà²¿ ಬಿದà³à²¦à³†. ಅಂಥ ವಂಚಕ ಅದೠಯಾವಾಗ ಹಾಗೆಲà³à²²à²¾ ಆದ? ಜತೆಗೆ ಆತನ ಪತà³à²¨à³€ ಕಂಡೂ ಕಾಣದ ಹಾಗೆ ದೂರ ಇದà³à²¦à²°à³‚ ಆಕೆಯ ಹೆಸರೠಬೇರೆ. ಬರೆಯೋದೠಒಂದà³,ಬದà³à²•ೋದೠಒಂದೠಆದರೆ ಹೀಗೇನೆ.
God had very good time while fixing network in ur brain. What a connection, awesome.
e chooty ajjy swabhimaaniyagi badukabekendavarige maadari………
ವಾಹೠಚೆನà³à²¨à²¾à²—ಿದೆ. ಆದರೆ ನನಗೆ ಕೆಲವೠಪà³à²°à²¶à³à²¨à³†à²—ಳಿವೆ. ವಿಜಯಕರà³à²¨à²¾à²Ÿà²• ಪತà³à²°à²¿à²•ೆಗೂ ಜà³à²¯à³‹à²¤à²¿à²·à²¿,ವಸà³à²¤à³ ತಜà³à²ž,ಮà³à²‚ತಾದ ಮà³à²‚ತಾದ ಬಿರà³à²¦à²¾à²¨à³à²•ಿತ ಚಂದà³à²° ಶೇಖರ ಸà³à²µà²¾à²®à²¿à²—ೂ à²à²¨à³ ಸಂಬಂಧ? ಅದೠಯಾಕೆ ಅಷà³à²Ÿà³Šà²‚ದೠಹೋಗಳà³à²¤à³à²¤à³€à²°à²¿? ಇತà³à²¤à³€à²šà³†à²—ೆ ಆತನ ಫೋಟೋ ಮತà³à²¤à²¦à²° ಶೀರà³à²·à²¿à²•ೆ ನೋಡಿ ಬೆಚà³à²šà²¿ ಬಿದà³à²¦à³†. ಅಂಥ ವಂಚಕ ಅದೠಯಾವಾಗ ಹಾಗೆಲà³à²²à²¾ ಆದ? ಜತೆಗೆ ಆತನ ಪತà³à²¨à³€ ಕಂಡೂ ಕಾಣದ ಹಾಗೆ ದೂರ ಇದà³à²¦à²°à³‚ ಆಕೆಯ ಹೆಸರೠಬೇರೆ. ಬರೆಯೋದೠಒಂದà³,ಬದà³à²•ೋದೠಒಂದೠಆದರೆ ಹೀಗೇನೆ.
Sir. u r talking about midle age group people. Think about Youths they r 60% in our country what they r doing- pub club love etc. The only aim of youths is to enjoy the golden period of their life. They r not at all bother about future of our country really shame on us.
Sir. u r talking about midle age group people. Think about Youths they r 60% in our country but what they r doing- pub club love etc. The only aim of youths is to enjoy the golden period of their life. They r not at all bother about future of our country really shame on us.
Hi Pratap,
Elladarallu namage jasti meesalu sikkare saku endukondu kayuva janagalu, chooty ajjiya taraha swabhimanigalagi, navugalu namagoskara, namma manegoskara mattu namma samajakkoskara enadaru namminda sadhyavadaddanu needabeku ennuvudakke pratiyobba samanyanigu tiliyuva hage neediruva nimma baravanigege nanna vandanegalu.
ಪà³à²°à²¤à²¾à²ªà³, ನೀನೠಹೊಗಳಿ ಬರೆದಿರà³à²µ ಅಮೆರಿಕದಲà³à²²à³‡ ವಿಶà³à²µà²¦ ಅತà³à²¯à²‚ತ ಬೊಜà³à²œà³ ದೇಹದ ಜನರಿದà³à²¦à²¾à²°à³†.
e chooty ajjy swabhimaaniyagi badukabekendavarige maadari………
Hey,
You know how to cold shoulder in a warm way. Master in it. Nice strategy!!! Its working for you , Huh?
With Love,
Arpana
Good article pratap…. nanoo dharavahigalannu ishtapadavara gumpinalli obbalu. specially e udaya TV dharavahigalanthu arthaheenavagiruthave. Devaru noduvavarige adu yava tharahada sahaneyannu kottiruthano gothilla. Ondondu dharavahi 2000 episode oduthade. Reality shows anthu eegina trend aagi bittide. Idelladakku anthya illa annuthheera???????????
Good article pratap….. Dharavahi dweshisuva gumpinalli nanoo obbalu…. Reality shows anthu eegina trend aagibittide. Adaralli ella thumba artificial ansathe…. Idelladakku ondu anthya ide annuthhera???
Hi,
Pratap
Hw r u ? ?
Seena andare Nenapenali iddina Pratap ?? odnhu sari nimma orkut community li mathu phone nali mathanadide naxalisum bage……? ? ? ?
E article anthu Thuma superb agi idhe……e articleannu nanu thuma jana nana gelatiyarige/sister galige ondhodake hellidene…………
idhe rithi bareyutha irru……keep it up
VIYA KARNATAdalliya obba High tech swamy Bareyuthane………. adara bage tamma abhipraya yennu antha tilisutira ? Mr. Pratap ?
nice yaar . . . .
sir nanu nimma abhimani, mundondu janma ant iddare nanu srujanshil patrakartanagi huttuv ase, e badavan mele nimma ashirvad irali, and hage nimm barahgalann vimarshe maduv humba dairaya nanu madalare
Really a good and appropriate article…….everyone knew what u told but the people had forgotten why they r changing themselves………..if they can sit for a while and analyse how they had groomed and how they r grooming ………they vl feel ashamed………..article is worth reading sir..thanks again
Hi!
there are two extreme group of women in our current society.
1. Misusing medias and modern amenities(group u have mentioned) and lacking optimum family responsibilities,
2. overusing modern amenities(ex. crazy about browsing) and overly career conscious group and again lacking required family responsibilities.
I think, one has to move with time, change with time and redefine everything and move on.
ಇದೊಂದೠಪà³à²°à³‡à²°à²£à²¾à²¤à³à²®à²• ಲೇಖನ. ಉತà³à²¤à²®à²µà²¾à²—ಿದೆ. ಪà³à²°à²•ಟಿಸಿದà³à²¦à²•à³à²•ೆ ಧನà³à²¯à²µà²¾à²¦à²—ಳà³.
Thanks……….
not a words 2 express…
so thanks……
Fantastic.
OMG!!!! I just can’t control the laugh after reading what you wrote about Middle age women. 😀
Even in Japan many Old age Men and Women work till the end of their life.
neevu bareda ee msg tumba chennagide but estu jana alavadisikoltare kaadu nodabeku yaakandre yavaglu kooda olleyadanna janaru bega accept madikolladilla addarinda…… naan alavadikondiddini adara bagge sandeha beda.
THIS IS MY QUESTION TOO SINCE MANY DAYZ…. Plz ans it…
ವಾಹೠಚೆನà³à²¨à²¾à²—ಿದೆ. ಆದರೆ ನನಗೆ ಕೆಲವೠಪà³à²°à²¶à³à²¨à³†à²—ಳಿವೆ. ವಿಜಯಕರà³à²¨à²¾à²Ÿà²• ಪತà³à²°à²¿à²•ೆಗೂ ಜà³à²¯à³‹à²¤à²¿à²·à²¿,ವಸà³à²¤à³ ತಜà³à²ž,ಮà³à²‚ತಾದ ಮà³à²‚ತಾದ
ಬಿರà³à²¦à²¾à²¨à³à²•ಿತ ಚಂದà³à²° ಶೇಖರ ಸà³à²µà²¾à²®à²¿à²—ೂ à²à²¨à³ ಸಂಬಂಧ? ಅದೠಯಾಕೆ ಅಷà³à²Ÿà³Šà²‚ದೠಹೋಗಳà³à²¤à³à²¤à³€à²°à²¿? ಇತà³à²¤à³€à²šà³†à²—ೆ ಆತನ ಫೋಟೋ
ಮತà³à²¤à²¦à²° ಶೀರà³à²·à²¿à²•ೆ ನೋಡಿ ಬೆಚà³à²šà²¿ ಬಿದà³à²¦à³†. ಅಂಥ ವಂಚಕ ಅದೠಯಾವಾಗ ಹಾಗೆಲà³à²²à²¾ ಆದ? ಜತೆಗೆ ಆತನ ಪತà³à²¨à³€ ಕಂಡೂ ಕಾಣದ
ಹಾಗೆ ದೂರ ಇದà³à²¦à²°à³‚ ಆಕೆಯ ಹೆಸರೠಬೇರೆ. ಬರೆಯೋದೠಒಂದà³,ಬದà³à²•ೋದೠಒಂದೠಆದರೆ ಹೀಗೇನೆ.
Good one!!
Nice one i like this article and her mind power and enthusiasm great….,
Pratap avare nivu heliddanu swlpa mattige oppiko bahudu.. Ella hennu makkalu maneyalli kulithu kalaharana madabekendu bayisodilla.. adare kela gandasare idakke ani maadi koduttare.. karuppayi ya gandanathe ellaru swabhimaniyaagi dudibeku antha gandasru helodo kadime yakendre gandasara egoisam adda agutte.. nale avlu dudidu avnigintha ondu kai mele beledu bittre.. gandasara adhikarakke adda barutte alave ? Prapancha nadithirodu hege allave.. ? hennu makkalu maduve adamele ganda, mane, makkalu ishte agirabeku, jasti adre tale mele haati kuruttare annodu gandasare allave.. ? idakkenu antheere…