Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?

ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?

Unparliamentary.
ನಮ್ಮ ಮಾಜಿ ಪ್ರಧಾನಿ ದೇವೇಗೌಡರಂತೆ ‘ಬ್ಲಡಿ ಬ್ಯಾಸ್ಟರ್ಡ್’ ಎಂದು ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯನ್ನೇ ಅಸಭ್ಯ ಹಾಗೂ ಅನೈತಿಕವಾಗಿ ನಿಂದಿಸುವುದು ಬಿಡಿ, ಆಸ್ಟ್ರೇಲಿಯಾ ಸಂಸತ್ತಿನಲ್ಲಿ “ಸುಳ್ಳುಗಾರ” ಎಂದು ಜರಿದರೂ ‘ಅಸಂಸದೀಯ’ (ಅನ್‌ಪಾರ್ಲಿಯಾಮೆಂಟರಿ) ಪದವಾಗುತ್ತದೆ, ಸಭಾಧ್ಯಕ್ಷರಿಂದ ವಾಗ್ದಂಡನೆಗೆ ಗುರಿಯಾಗಬೇಕಾಗುತ್ತದೆ, ಸಂಸತ್ತಿನ ಕಲಾಪಗಳ ದಾಖಲೆಗೆ ಆ ಪದವನ್ನು ಸೇರಿಸುವುದಿಲ್ಲ. ಕೆನಡಾ ಸಂಸತ್ತಿನಲ್ಲಿ “Evil genius’, “Weathervane’ (ಗಾಳಿ ಬಂದ ಕಡೆ ವಾಲುವವನು) ಎಂದೂ ಕುಟುಕುವಂತಿಲ್ಲ. ಹಾಂಕಾಂಗ್‌ನಲ್ಲಿ, “ಕೊಳಚೆ ಕಾಲುವೆಯಲ್ಲಿ ಬೆಳೆಯುವುದು ಕೊಳಕು ಹುಲ್ಲೇ…” ಎಂಬ ಗಾದೆ ಮಾತನ್ನೂ ಹೇಳುವಂತಿಲ್ಲ. ಐರ್ಲೆಂಡ್‌ನಲ್ಲಿ ‘ಫ್ಯಾಸಿಸ್ಟ್’, ‘ಹೇಡಿ’, ‘ಗೋಮುಖವ್ಯಾಘ್ರ’ ಎಂದರೂ ಜೋಕೆ. ನ್ಯೂಜಿಲ್ಯಾಂಡ್‌ನಲ್ಲಂತೂ “Commo” (ಕಮ್ಯುನಿಸ್ಟ್) ಎಂದು ಕರೆದರೂ ಅಸಂಸದೀಯ ಪದವಾಗಿ ಬಿಡುತ್ತದೆ. ಆಧುನಿಕ ಪ್ರಜಾತಂತ್ರದ ಮೂಲಸ್ಥಾನವಾದ ಬ್ರಿಟನ್‌ನಲ್ಲಿ  ‘ಲೈಯರ್’, ‘ರ್‍ಯಾಟ್’, ‘ಪುಂಡ’ ಎಂದು ದೂಷಿಸುವುದಕ್ಕೂ ಅವಕಾಶವಿಲ್ಲ. ವೇಲ್ಸ್‌ನಲ್ಲಿ ಆತ ‘ಸುಳ್ಳು’ ಹೇಳುತ್ತಿದ್ದಾನೆ ಎಂದೂ ಆರೋಪಿಸುವಂತಿಲ್ಲ.

Unparliamentary, Unbecoming ಎಂದರೆ ಸಂಸತ್ತಿನ ನಿಯಮ ಅಥವಾ ನಡಾವಳಿಗೆ ವಿರುದ್ಧವಾದುವು.  Not in accord with parliamentary procedure ಅಥವಾ ಸಂಸತ್ತಿನಲ್ಲಿ ಬಳಕೆ ಮಾಡಲು ತಕ್ಕನಲ್ಲದ, ಅವಿಧೇಯ ಪದಗಳು ಎಂದರ್ಥ. ಇತಿಹಾಸವನ್ನು ಕೆದಕುತ್ತಾ ಹೋದರೆ ೧೭೮೦ರಲ್ಲೇ ಬ್ರಿಟನ್ ಸಂಸತ್ತಿನಲ್ಲಿ ಸುಳ್ಳುಗಾರ, ಮೋಸಗಾರ, ದೇಶದ್ರೋಹಿ ಎಂಬ ಪದಪ್ರಯೋಗಗಳಾಗಿವೆ! ಅದರ ಬೆನ್ನಲ್ಲೇ ಯಾವ ಯಾವ ಪದಗಳನ್ನು ಪ್ರಯೋಗ ಮಾಡಬಾರದು ಎಂದು ಸಭಾಧ್ಯಕ್ಷರು ಲಕ್ಷ್ಮಣ ರೇಖೆ ಹಾಕಿದ, ಅವುಗಳನ್ನು ಅಸಂಸದೀಯ ಪದಗಳೆಂದು ಪಟ್ಟಿ ಮಾಡಿದ ಬೆಳವಣಿಗೆಗಳಾಗಿವೆ. ಪ್ರಜಾತಂತ್ರ ಎಂಬುದು ಹೇಗಿರಬೇಕೆಂದು ಸಭಾಧ್ಯಕ್ಷರು ಸದನದಲ್ಲಿ ಪಾಠವನ್ನೇ ಮಾಡಿದ್ದಾರೆ. Democracy should generate debate based on thoughts, not on emotions. When you are abusive, you are being emotional and not thougtful….. ಎಂದು ಬಹಳ ಚೆನ್ನಾಗಿ ಸಂಸದೀಯ ಪ್ರಜಾತಂತ್ರ ಹೇಗಿರಬೇಕೆಂದು ತಿಳಿ ಹೇಳಿದ್ದಾರೆ. ಇದರ ನಡುವೆಯೂ ಕೆಲವು ಬ್ರಿಟಿಷ್ ಸಂಸದರು ತಮ್ಮ ಬುದ್ಧಿಮತ್ತೆ ಮತ್ತು ವಾಕ್ಚಾತುರ್ಯದ ಮೂಲಕ ವಿಶಿಷ್ಟ  ವಾಕ್ಯ ರಚನೆ ಮಾಡಿ ಕಳ್ಳ, ಸುಳ್ಳ ಎಂದು ದೂರಿದ್ದೂ ಇದೆ. ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅದರಲ್ಲಿ ದೊಡ್ಡ ಪಂಟರಾಗಿದ್ದರು. “Terminological inexactitude” ಎಂದು ಹೇಳುವ ಮೂಲಕ ಸಂಸದರೊಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಕುಟುಕಿದ್ದರು. ಆನಂತರ ಬ್ರಿಟನ್‌ನ ಮಾಜಿ ಸಂಪುಟ ಕಾರ್ಯದರ್ಶಿ ರಾಬರ್ಟ್ ಆರ್ಮ್‌ಸ್ಟ್ರಾಂಗ್, ಲೇಬರ್ ಪಕ್ಷದ ಸಂಸದೆ ಕ್ಲೋರ್ ಶಾರ್ಟ್ ‘ಸುಳ್ಳು’ ಹೇಳುತ್ತಿದ್ದಾರೆ, ‘ಮೋಸ’ ಮಾಡುತ್ತಿದ್ದಾರೆ ಎಂಬುದಕ್ಕೆ “Economical with the truth” ಎಂಬ ಮತ್ತೊಂದು ಹೊಸ ಪದಗುಚ್ಚವನ್ನೇ ಸೃಷ್ಟಿಸಿದರು. ಈ ಮಧ್ಯೆ, ಟಿವಿ ಚಾನೆಲ್ಲೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಸಂಸದರಿಬ್ಬರು “You are a bloody Rat” ಹಾಗೂ “You are a filthy Cat” ಎಂದು ಪರಸ್ಪರ ನಿಂದಿಸಿಕೊಂಡಾಗ ಅದನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಯಿತೆಂದರೆ ಅವರ ಸದಸ್ಯತ್ವವನ್ನೇ ರದ್ದು ಮಾಡಲಾಯಿತು.

ಇಂತಹ ಇತಿಹಾಸ ಮುಂದಿದ್ದರೂ ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಈ ರಾಜ್ಯಕ್ಕೆ ಎಂತಹ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದಾರೆ?

* ಅವನ್ಯಾರು, ಬ್ಲಡಿ ಬ್ಯಾಸ್ಟರ್ಡ್!
-ಎಚ್.ಡಿ. ದೇವೇಗೌಡ, 2010, ಜನವರಿ 10. ನೈಸ್ ವಿರುದ್ಧ ನಡೆದ ಪ್ರತಿಭಟನೆ ವೇಳೆ.

ಮಾಜಿ ಪ್ರಧಾನಿ ಇಂಥದ್ದೊಂದು ತೀರಾ ಅವಹೇಳನಕಾರಿ, ಅನೈತಿಕ, ಅಸಭ್ಯ ಮಾತನಾಡಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಕಾಂಗ್ರೆಸ್ ಸಿದ್ದರಾಮಯ್ಯನವರು ಕಳೆದ ಶುಕ್ರವಾರ ಮುಖ್ಯಮಂತ್ರಿಯವರ ವಿರುದ್ಧ ತೀರಾ ಕೆಳಮಟ್ಟದ ಮಾತನಾಡಿದ್ದಾರೆ.

* ನೆರೆ ಸಂತ್ರಸ್ತರಿಗೆ ಸ್ಪಂದಿಸದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾನ-ಮರ್ಯಾದೆ ಇದೆಯೇ? ಸುಳ್ಳು ಹೇಳುತ್ತಾ ಊರೂರು ತಿರುಗುತ್ತಿರುವ ಯಡಿಯೂರಪ್ಪ ಹಿಪಾಕ್ರೈಟ್.
-ಸಿದ್ದರಾಮಯ್ಯ, 2010, ಮೇ 21, ರಾಜೀವ್ ಪುಣ್ಯತಿಥಿ ಸಂದರ್ಭದಲ್ಲಿ.

* ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಬಂದರೆ ನಮಸ್ಕರಿಸುವ ಬದಲು ಜಾಡಿಸಿ ಒದೆಯಿರಿ. ಪರಿಹಾರ ಬೇಕಿದ್ದರೆ ಒದ್ದು ಬುದ್ಧಿ ಕಲಿಸಿ.
-ಕುಮಾರಸ್ವಾಮಿ, 2010, ಮೇ 21, ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ.
ಏನಾಗಿದೆ ಇವರಿಗೆಲ್ಲ?

ಸಜ್ಜನರು ರಾಜಕಾರಣಕ್ಕೆ ಬರಬೇಕು ಎಂಬ ಕೂಗು ಜೋರಾಗುತ್ತಿರುವ ಈ ಕಾಲದಲ್ಲಿ ಕುಮಾರಸ್ವಾಮಿ, ಸಿದ್ದು ಅವರ ಮಾತುಗಳು ಯಾವ ಸಂದೇಶವನ್ನು ಕೊಟ್ಟಾವು? ನೆರೆ ಸಂತ್ರಸ್ತರ ಬಗ್ಗೆ ಧ್ವನಿಯೆತ್ತಿರುವುದು ಸರಿಯಾದುದೇ ಆಗಿದ್ದರೂ ನಿಮ್ಮ ಕಾಳಜಿ ಸಾತ್ವಿಕವಾದದ್ದೇ ಸ್ವಾಮಿ? ಕನಿಷ್ಠ ಪೌರಪ್ರeಯಾದರೂ ಇದೆಯೇ? ಕಳೆದ ಎರಡು ವರ್ಷಗಳಿಂದ ಪ್ರತಿಪಕ್ಷಗಳ ಸ್ಥಾನದಲ್ಲಿ ಸುಖಾಸುಮ್ಮನೆ ಕುಳಿತುಕೊಂಡಿರುವ ನಿಮ್ಮ ಹಸಿವು, ಅದು ತಂದಿರುವ ಹತಾಶೆ ಅರ್ಥವಾಗುವಂಥವೇ. ಆದರೆ ಈ ರೀತಿ ನಿಂದಿಸುವುದರಿಂದ, ಅವಹೇಳನಕಾರಿಯಾಗಿ ಮಾತನಾಡುವುದರಿಂದ ಅಧಿಕಾರ ಕೈಗೆಟುಕುತ್ತದಾ ಕುಮಾರಸ್ವಾಮಿ? ರಾಜ್ಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನ ಸಿಗುವವರೆಗೂ ಪಕ್ಷದ ನಾಯಕರನ್ನೇ ಟೀಕಿಸುತ್ತಾ ಬಂದ ಸಿದ್ದು ಅವರೇ, ಈಗ ಮುಖ್ಯಮಂತ್ರಿಯವರನ್ನು ನಿಂದಿಸುತ್ತಿದ್ದೀರಿ. ಹಾಗಂತ ಅಧಿಕಾರ ದಕ್ಕುತ್ತಾ? ನಿಮ್ಮ ಅಧಿಕಾರದ ತುಡಿತದ ತೀವ್ರತೆ ಎಷ್ಟೇ ಇದ್ದರೂ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಆಯಾಚಿತವಾಗಿ ಬಂದಿದ್ದಲ್ಲ. ಜನ ವೋಟು ಕೊಟ್ಟು ಆ ಸ್ಥಾನದಲ್ಲಿ ಅವರನ್ನು ಕೂರಿಸಿದ್ದಾರೆ. ಅವರೇನಾದರೂ ತಪ್ಪು ಮಾಡಿದರೆ, ಭ್ರಷ್ಟ ಕಾರ್ಯದಲ್ಲಿ ತೊಡಗಿದರೆ ಪತ್ತೆ ಹಚ್ಚಿ ಜನರ ಗಮನಕ್ಕೆ ತಂದು ಬಣ್ಣಬಯಲು ಮಾಡಿ. ಅಷ್ಟಕ್ಕೂ ಹೇಗ್ಹೇಗೆ ಭ್ರಷ್ಟಾಚಾರ ಮಾಡಬಹುದು ಎಂಬುದು ಸಿದ್ದು ಹಾಗೂ ಕುಮಾರಸ್ವಾಮಿಯವರಿಗೆ ‘ಅನುಭವ’ದಿಂದಲೇ ಚೆನ್ನಾಗಿ ಗೊತ್ತಿದೆ. ಕಳ್ಳರಿಗೆ ಯಾವ ಭಾಗದಲ್ಲಿ ಒಳನುಗ್ಗಬಹುದು, ಎಲ್ಲಿ ಏನು ಸಿಗುತ್ತದೆ ಎಂಬುದು ಗೊತ್ತಿರುತ್ತದೆ. ಹಾಗಿರುವಾಗ ಯಡಿಯೂರಪ್ಪನವರನ್ನು ಹಿಡಿಯುವುದು ಬಹಳ ಸುಲಭ. ಆ ಕೆಲಸ ಮಾಡಿ ಸಾರ್. ಏಕೆ ವೈಯಕ್ತಿಕ ನಿಂದನೆಗಿಳಿಯುತ್ತೀರಿ?

‘ಬ್ಲಡಿ’ ಎಂಬ ಪದವೇ ಅನ್‌ಪಾರ್ಲಿಯಾಮೆಂಟರಿ, ಇನ್ನು ಬ್ಲಡಿ ಬ್ಯಾಸ್ಟರ್ಡ್ ಎಂದರೆ ಏನಾದೀತು? ಬ್ಯಾಸ್ಟರ್ಡ್ ಅಂದ್ರೆ ಏನರ್ಥ? ಇಂತಹ ಕುಲಹೀನ ಮಾತನಾಡಿದರೂ ದೇವೇಗೌಡರ ವಿರುದ್ಧ ಜನ ರೊಚ್ಚಿಗೇಳಲಿಲ್ಲ. ಏಕೆಂದರೆ ಜನರೆಂದೂ ಗೌಡರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಅದರ ಹಿಂದೆ ಯಾವುದೋ ಹಿತಾಸಕ್ತಿ ಖಂಡಿತ ಇದ್ದೇ ಇರುತ್ತದೆ, ಅವರಿಗೆ ಜನಪರ ಕಾಳಜಿ ಇಲ್ಲ ಎಂಬುದು ಕರ್ನಾಟಕದ ಮಹಾಜನತೆಗೆ ಎಂದೋ ಅರ್ಥವಾಗಿ ಬಿಟ್ಟಿದೆ. ನನ್ನ ಹೆಸರಲ್ಲಿ ಒಂದು ಗುಂಟೆ ಜಾಗವಿಲ್ಲ ಎಂದು ಹೇಳುವ ದೇವೇಗೌಡರ ಸತ್ಯಸಂಧತೆ ಬಗ್ಗೆ ಬಿಡಿಸಿ ಹೇಳಬೇಕಾ?! ನೀವೂ ಕೂಡ ಗೌಡರಂತೆ ಮಾತನಾಡಲು, ವರ್ತಿಸಲು ಆರಂಭಿಸಿದರೆ ನಿಮ್ಮ ಬಗ್ಗೆಯೂ ಜನ ಹಾಗೇ ಅಂದುಕೊಂಡಾರು! ಬಿಜೆಪಿಯವರೇನು ಜನಾನುರಾಗಿಗಳು ಎಂದಲ್ಲ. ಕಾಂಗ್ರೆಸ್‌ನವರು ಈ ರಾಜ್ಯವನ್ನು 45ರಿಂದ 50 ವರ್ಷ ಆಳಿದ್ದಾರೆ, ತಮ್ಮ ‘ಬಡತನ’ವನ್ನು ಪರಿಹರಿಸಿಕೊಂಡಿದ್ದಾರೆ. ಜೆಡಿಎಸ್(ಜನತಾ ಪರಿವಾರ)ನವರು 10ರಿಂದ 15 ವರ್ಷ ಆಡಳಿತ ನಡೆಸಿದ್ದಾರೆ, ರೈತರ ಬಗ್ಗೆ ಮಾತನಾಡುತ್ತಾ ರಿಯಲ್ ಎಸ್ಟೇಟ್ ಮಾಲೀಕರಾಗಿದ್ದಾರೆ. ಐವತ್ತು-ಅರವತ್ತು ವರ್ಷದಿಂದ ಹಸಿದುಕೊಂಡಿದ್ದ ಬಿಜೆಪಿಗೆ ಈಗ ಅಧಿಕಾರ ದಕ್ಕಿದೆ, ಹಸಿವು ತೀರಿಸಿಕೊಳ್ಳುತ್ತಿದೆ ಅಷ್ಟೇ! ಹಾಗಂತ ನೀವು ಬೇಸರಿಸಿಕೊಂಡರೆ, ಹತಾಶೆಗೊಂಡರೆ ಏನು ಏನು ಫಲ? ಪ್ರತಿಪಕ್ಷಗಳ ಸ್ಥಾನದಲ್ಲಿದ್ದಾಗ ರಚನಾತ್ಮಕವಾಗಿ ಕಾರ್ಯನಿರ್ವಹಿಸಿ, ಆಡಳಿತ ಪಕ್ಷದ ಜನವಿರೋಧಿ ಧೋರಣೆಯನ್ನು ಬಯಲು ಮಾಡಿದರೆ ಮುಂದಿನ ಬಾರಿ ಜನ ನಿಮಗೆ ವೋಟು ಕೊಡಬಹುದು.

ಇಷ್ಟಾಗಿಯೂ ನೀವು ಮಾಡುತ್ತಿರುವುದೇನು? ನಿಮ್ಮ ಬಾಯಿಂದ ಹೊರಬರುತ್ತಿರುವ ಮಾತುಗಳಾದರೂ ಎಂಥವು?

ಸುಭಾಷ್ ಚಂದ್ರ ಬೋಸ್ ಮಾಡುತ್ತಿದ್ದ ರೇಡಿಯೋ ಭಾಷಣಗಳು, 1947, ಆಗಸ್ಟ್ 14ರ ಮಧ್ಯರಾತ್ರಿ ಜವಾಹರಲಾಲ್ ನೆಹರು ಮಾಡಿದ ‘ಟ್ರೈಸ್ಟ್ ವಿತ್ ಡೆಸ್ಟಿನಿ’ ಭಾಷಣ, ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್ತಿನಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳಿ ದೇಶವಾಸಿಗಳು ಪ್ರೇರೇಪಣೆ ಪಡೆಯುತ್ತಿದ್ದರು. ನಿಮ್ಮ ಮಾತುಗಳು ಯಾರಿಗೆ ಪ್ರೇರೇಪಣೆ ನೀಡುತ್ತಿವೆ ಸಿದ್ದು ಹಾಗೂ ಸ್ವಾಮಿಯವರೇ? ಬೆನ್ನ ಹಿಂದೆ ಬೈದುಕೊಳ್ಳುವ ಮಾತುಗಳನ್ನು ಬೀದಿಯಲ್ಲಿ ನಿಂತು ಆಡಿದರೆ ಸಮಾಜದ ಗತಿಯೇನು? ಮುಖ್ಯಮಂತ್ರಿಯವರನ್ನು ಈ ರೀತಿ ಸಾರ್ವಜನಿಕವಾಗಿ ನಿಂದಿಸಿದರೆ ಆ ಸ್ಥಾನದ ಘನತೆ ಏನಾದೀತು? ನಮ್ಮ ಮಹಾನ್ ನಾಯಕರೇ ಹೀಗೆ ಮಾತನಾಡಿದರೆ ಅವರ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ, ಒಬ್ಬ ಸಾಮಾನ್ಯ ಪ್ರಜೆಗೆ ಯಾವ ಸಂದೇಶ ಸಿಕ್ಕೀತು? ಯಾವ ಪ್ರೇರಣೆ, ಪ್ರಚೋದನೆ ಕೊಟ್ಟಂತಾದೀತು? ಓದೆಯಿರಿ, ಹೊಡೆಯಿರಿ ಎನ್ನುವುದಕ್ಕೆ ನೀವ್ಯಾರು ಕುಮಾರಸ್ವಾಮಿ? ನೀವು ಯಾವ ಉತ್ತರ ಕರ್ನಾಟಕದ ಜನರಿಗೆ ಒದೆಯಿರಿ ಎಂದು ಕರೆ ಕೊಡುತ್ತಿದ್ದೀರೋ, ಅದೇ ಜನರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಒದ್ದು ಕಳುಹಿಸಿದ್ದಾರೆ. ನಿಮ್ಮ ಸ್ಥಾನ ಯಾವುದು ಎಂಬುದನ್ನು, ನಿಮಗೆ ಯಾವ ಬೆಲೆ ಇದೆ ಎಂಬುದನ್ನು ೨೦೦೮ರ ಚುನಾವಣೆಯಲ್ಲಿ ಮತದಾರ ಸ್ಪಷ್ಟ ಪಡಿಸಿದ್ದಾನೆ. ಒಳ್ಳೆಯ ಕೆಲಸ ಮಾಡಿ, ಐದು ವರ್ಷ ಕಾಯಿರಿ. ಅದು ಬಿಟ್ಟು, ನಿಂದನೆಗಿಳಿಯುವುದು ಸರಿಯೇ? ನೀವು ಹೀಗೆ ಮಾತನಾಡುತ್ತಿದ್ದರೆ ಜನ ನಿಮಗೇ ಒದೆಯುತ್ತಾರೆ.

ಅಟಲ್ ಬಿಹಾರಿ ವಾಜಪೇಯಿಯವರ ಬಯೋಗ್ರಫಿ ‘ಅಜಾತಶತ್ರು’ವನ್ನು ಬರೆದಿರುವ ನಮ್ಮ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಹಿಂದೊಮ್ಮೆ ತಮ್ಮ ಲೇಖನದಲ್ಲಿ ಘಟನೆಯೊಂದನ್ನು ಪ್ರಸ್ತಾಪಿಸಿದ್ದರು. ಅದು ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ಸಮಯ. ಅದರ ವಿರುದ್ಧ ದೇಶವೇ ರೊಚ್ಚಿಗೆದ್ದಿತ್ತು. ಆಗಿನ ಜನಸಂಘ ಇಂದಿರಾ ಗಾಂಧಿಯವರಿಗೆ ಪ್ರಶ್ನೆಗಳ ಹೊತ್ತಗೆಯೊಂದನ್ನು ಸಿದ್ಧಪಡಿಸಿತ್ತು. ಮುದ್ರಣಕ್ಕೆ ಕಳುಹಿಸುವ ಮೊದಲು ಒಮ್ಮೆ ಕಣ್ಣಾಡಿಸಿ, ಯಾವುದಾದರೂ ಬದಲಾವಣೆ ಇದ್ದರೆ ಸೂಚಿಸಿ ಎಂದು ಅಟಲ್ ಬಿಹಾರಿ ವಾಜಪೇಯಿಯವರಿಗೆ ನೀಡಲಾಯಿತು. ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ಸರಿಯಾಗಿದೆ ಎಂದ ವಾಜಪೇಯಿಯವರು, ಕೈಪಿಡಿಯ ಶೀರ್ಷಿಕೆ “ಇಂದಿರಾ, ಜವಾಬ್ ದೋ” ಎಂಬುದನ್ನು “ಇಂದಿರಾಜಿ, ಜವಾಬ್ ದೀಜಿಯೇ” ಎಂದು ಬದಲಾಯಿಸಿ ಕೊಟ್ಟಿದ್ದರು! ಇಂದಿರಾಗಾಂಧಿಯವರ ಸೊಸೆ ಸೋನಿಯಾ ಅಂತಹ ಮಹಾನ್ ನಾಯಕನನ್ನೇ “ಗದ್ದಾರ್”, “ಲೈಯರ್” ಎಂದು ಸಾರ್ವಜನಿಕವಾಗಿ ನಿಂದಿಸಿ ತಮ್ಮ ಕೀಳು ಅಭಿರುಚಿಯನ್ನು ತೋರಿಸಿದ್ದು, ಈ ಮಧ್ಯೆ ಸಂಸತ್ತಿನಲ್ಲಿ ಲಾಲು ಅವರನ್ನು ಅಂತಹದ್ದೇ ಹೊಲಸು ಶಬ್ದದ ಮೂಲಕ ನಿಂದಿಸಿ ಸಂಸದ ಅನಂತ್‌ಕುಮಾರ್ ಮಂಗಳಾರತಿ ಮಾಡಿಸಿಕೊಂಡಿದ್ದು ಬೇರೆ ಮಾತು.

ದುರದೃಷ್ಟವಶಾತ್, ಇವತ್ತು ಹೊಲಸು ಪದಗಳ ಬಳಕೆಯನ್ನೇ ಕಟು ಟೀಕೆ ಎಂದು ಭಾವಿಸಿದಂತಿದೆ.

ಬಿ.ಎಸ್. ಯಡಿಯೂರಪ್ಪನವರು ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿರಬಹುದು. ಆದರೆ ಅದರ ಹಿಂದೆ ಸಾಕಷ್ಟು ಪರಿಶ್ರಮ ಇದೆ. ಪಂಚಾಯಿತಿ ಮಟ್ಟದಿಂದ ಇಲ್ಲಿಯವರೆಗೂ ಸಾಗಿ ಬಂದಿರುವ ಅವರೂ ಕೂಡ ಹುಟ್ಟುಹೋರಾಟಗಾರರು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ತಿಳಿದುಕೊಳ್ಳಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡು ಎಂಬ ಮಾತಿದೆ. ಇಂದು ಬಿಜೆಪಿ ನಾಯಕ, ಹೋರಾಟಗಾರ ಯಡಿಯೂರಪ್ಪನವರಿಗೂ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಬಹಳ ವ್ಯತ್ಯಾಸ ಕಾಣುತ್ತಿರಬಹುದು. ಆಧಾರಸಮೇತ ಅವರನ್ನು ಭ್ರಷ್ಟಾಚಾರಿ, ಸ್ವಜನಪಕ್ಷಪಾತಿ ಏನು ಬೇಕಾದರೂ ಹೇಳಿ, ಯಾವುದರಲ್ಲೂ ತಪ್ಪಿಲ್ಲ. ಆದರೆ ಯಡಿಯೂರಪ್ಪನವರು ಯಾವತ್ತೂ ಅಸಭ್ಯವಾಗಿ ಮಾತನಾಡಿದವರಲ್ಲ. ದೇವೇಗೌಡರು ಮತ್ತು ಅವರ ಪುತ್ರರತ್ನ ವಚನಭ್ರಷ್ಟ ಕೆಲಸ ಮಾಡಿದಾಗಲೂ ಯಡಿಯೂರಪ್ಪನವರು, ‘ಸನ್ಮಾನ್ಯ ದೇವೇಗೌಡರು, ಸನ್ಮಾನ್ಯ ಕುಮಾರಸ್ವಾಮಿಯವರು….” ಎಂದೇ ಸಂಬೋಧಿಸುತ್ತಿದ್ದರು. ಯಡಿಯೂರಪ್ಪನವರು ಈಗ ಅಲಂಕರಿಸಿರುವ ಸ್ಥಾನ ಹಾಗೂ ಈ ಹಿಂದೆ ಅವರು ನಡೆದುಕೊಂಡಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡಾದರೂ ಕನಿಷ್ಠ ಗೌರವ ಕೊಡುವುದನ್ನು ಕಲಿತುಕೊಳ್ಳಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರೇ.

ಇಲ್ಲವಾದರೆ ನಿಮಗೆ ಮರ್ಯಾದೆ ಇದೆಯೇ ಎಂದು ಕೇಳುವ ಕೆಲಸವನ್ನು ಜನರೇ ಮಾಡುತ್ತಾರೆ. ಜೋಕೆ…

20 Responses to “ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?”

  1. geetanjali says:

    e article channagide adre ede article bareyodakke swalpa tadt maadodoreno anta nanag anastha ide yakandre [pratapsinha andre sadhyad paristiti bagge bareyovantha barahagara]……………..adru paravagilla tadavadru barediralla ade nange santosha.e mahana nayakarige vayassadantella naitika javabdari marita idare annode viparyyasa

  2. geetanjali says:

    e aricle eno channagide adre ede article bariyodakke swalpa tada maadidireni antha nanag annista ide yakendre [pratasimha yavaglu sadhyadd paristiti bagge bareyovantha barahagaara] adru paravagilla …………..tadavadreu barediralla ade nange santhosha. e mahan nayakaru tamma saamajika javabdari,naitika hone maritidaralla annode viparyyasa

  3. Chethana says:

    Hi Pratap, Hope u r fine… Firstly let me tell you that i liked the new version of the website… i am visiting after a long time…Secondly your article is really true…The other party members should learn to give respect to CM… first of all they have no respect in the eyes of public…I am not telling that our CM is good or bad… but i really respect our CM for the respect he gives to “ALL” the politicians even though they speak badly about him..this shows his simplicity….

  4. Nataraj Javali says:

    Hi..
    It is very meaningful article. Any debate in parliment should be thoughtful and it should not be emotional. Political leaders should not talk emotionally in public, which will give a bad message to the society and will create a bad environment.

  5. ಆನೇ says:

    ಇವರಿಗೆ Unparliamentary ಬಗ್ಗೆ ಕೇಳ್ತಾ ಇದ್ದಿರಲ್ಲ ಸ್ವಾಮಿ ಪಾಪ ಇವರು parliamentನಲ್ಲಿ ನಿದ್ದೆ ಹೊಡದ್ರೆ ಎನ್ ಗೊತ್ತಾಗುತ್ತೆ ಇವರಿಗೆ ಅಯ್ಯೊ ಪಾಪ!!

  6. M Reddy says:

    Hi Pratap,

    Whatever you said is absolutely true, i totally agree with you.
    But this time you took very light weighted topic, topic should have better.
    this topic would have explained in one stanza itself.

    –MHM Reddy

  7. Smitha says:

    good article sir.thanks a lot.

  8. vivek rc says:

    sir,thank you

  9. vivek rc says:

    sir thank you

  10. Prasanna says:

    Decency does not exist where there is jealousy. We can not expect such good qualities from the people who are made for ‘Politics’. The most embarrassing thing is that , their supporters cheer such comments, they encourage leaders to utter such words.. We can not blame only politicians who make such statements, there are few more persons to blame (acha kannadadalli bhattangigalu antaralla avru)

  11. veenus says:

    hello pratap sir
    u r true ,.. very true
    even though no politician now a days is respectful in public’s eyes(almost).
    but atleast for the sake of there position (CM of Karnataka) .. all have to give respect. but none other than our own other politicians are scolding like this means…. what kind of a messege they are imparting on public’s mind.
    some one like u is needed to point out them.
    if they can’t behave properly then let it be… but atleast for the sake of public ,, there followers ,, they should behave properly infront of others

  12. Prashanth Somanna says:

    Hi,

    I am your reader, the website site is good.

    Usually I read news paper in the evening But saturday’s I read in the morning because your articles imprresed me.

    Comments,

    your article is lesson for these bad politicians.

    What you have said, absolutely correct.

    e nalkane dharje rajakaranigalige dikkaravirali

    &

    Nijavagalu nivu simha ne bareyuvudaralli,

    Thanks,

    Prashanth

  13. Mahesh Soratur says:

    As much as we need a prosperous economy, we also need a prosperity of kindness and decency… To test the voting percentage of India…. polling should be reversed… Vote for whom you don’t want to be elected…And the winner should not contest for next 2 terms… It solves the problem of 1. less polling percentages(People now have rights vote for loser) 2. Contestants stop doing non-sense/Scandals …

    We get GOOD, DECENT and intelligent leaders …

    Sounds funny but interesting rite..

  14. manju says:

    Pls write one article about SACHIN TENDULKAR,

  15. manju says:

    Pls write one article about SACHIN TENDULKAR, PLS WROTE SIR pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls pls plssssssssssssssssssssss

  16. Anantharama Shetty says:

    Very nice article. I could not control my laugh while reading the paragraph, where in u have mentioned about what the different parties done during their tenure. Sab log chor hein. Only thing voter has to find out best among the worst.

    Regarding Kumar swamy, “Simhada hotteyalli simhave huttuvudu”. They donot even know the meaning of parlimentarian.

    In one article, u cover diffrent stories, which is an indication of your indeapth knowledge. One of my friends sent your website link to me 15 days back. Then onwards I started reading ur articles.

    Its really coming up very nicely.

    Anantharama Shetty
    Abu Dhabi

  17. Keshav says:

    Hi Pratap,
    Well, gud article……,
    ಕಾಂಗ್ರೆಸ್‌ನವರು ಈ ರಾಜ್ಯವನ್ನು 45ರಿಂದ 50 ವರ್ಷ ಆಳಿದ್ದಾರೆ, ತಮ್ಮ ‘ಬಡತನ’ವನ್ನು ಪರಿಹರಿಸಿಕೊಂಡಿದ್ದಾರೆ. ಜೆಡಿಎಸ್(ಜನತಾ ಪರಿವಾರ)ನವರು 10ರಿಂದ 15 ವರ್ಷ ಆಡಳಿತ ನಡೆಸಿದ್ದಾರೆ, ರೈತರ ಬಗ್ಗೆ ಮಾತನಾಡುತ್ತಾ ರಿಯಲ್ ಎಸ್ಟೇಟ್ ಮಾಲೀಕರಾಗಿದ್ದಾರೆ…,
    intavarinda olle maatannu or olle kelasavannu nirikshisalu sadyave pratap…..,
    dikkaravirali inta ayogya raajakaranigalige..,

  18. chetan shetty says:

    good article…it is late but best…swami and sidhu should read this article to learn how to give politicle statement in public..realy nice article

  19. Amar Shereddy says:

    its a very good article brother……..!!!
    As a ex-prime minister that DEVEGOWDA hadn’t have a general common sence…..!!!
    its very rude to talk like that…….!!! i really happied by ur consult for this matter now…. its slight late but ok…….

  20. anudeep says:

    i think dey dont knw d abcd of constitution,dey r elected coz dey belong to majority group. india will only improve if dey withdraw reservation on d basis of caste n give it to d bpl families