Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?!

ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?!


ಪ್ರಾಪ್ತ ವಯಸ್ಕರಿಬ್ಬರು ‘ಕೂಡಿ’ ಬಾಳಲು ಬಯಸಿದರೆ ತಪ್ಪೇನು?

ಅದೇನು ಅಪರಾಧವೇ? ಪುರಾಣಗಳ ಪ್ರಕಾರ ಕೃಷ್ಣ-ರಾಧೆ ಒಟ್ಟಿಗೆ ಬಾಳ್ವೆ ನಡೆಸುತ್ತಿದ್ದರು. ಒಟ್ಟಿಗೆ ಬಾಳುವುದು ಅಪರಾಧವಲ್ಲ ಹಾಗೂ ಅಪರಾಧವಾಗುವುದಕ್ಕೂ ಸಾಧ್ಯವಿಲ್ಲ. ಕೂಡಿ ಬಾಳುವಿಕೆಯನ್ನು ಹಾಗೂ ವಿವಾಹಪೂರ್ವ ಲೈಂಗಿಕ ಸಂಬಂಧವನ್ನು ಯಾವ ಕಾನೂನೂ ತಡೆಯುವುದಿಲ್ಲ. ನಮ್ಮ ಸಂವಿಧಾನದ 21ನೇ ವಿಧಿ ಎಲ್ಲರಿಗೂ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಿದೆ. ದಯವಿಟ್ಟು ಹೇಳಿ, ಯಾವ ಕಾನೂನಿನ ಯಾವ ಸೆಕ್ಷನ್‌ನಡಿ ಖುಷ್ಬು ಹೇಳಿಕೆ ಅಪರಾಧವೆನಿಸುತ್ತದೆ? ಆಕೆಯದ್ದು ವೈಯಕ್ತಿಕ ಹೇಳಿಕೆ, ಅಭಿಪ್ರಾಯ. ಅದು ಅಪರಾಧ ಹೇಗಾಗುತ್ತದೆ? ಆಕೆಯ ಹೇಳಿಕೆಯಲ್ಲಿ ನೀವು ತಲೆಕೆಡಿಸಿಕೊಳ್ಳುವಂಥದ್ದೇನಿದೆ? ಒಂದು ವೇಳೆ, ಅದರಿಂದ ನಿಮಗೇನಾದರೂ ತೊಂದರೆ, ಉಪದ್ರವ ಆಗಿದೆ ಎಂದಾದರೆ, ಆಕೆ ಹೇಳಿಕೆ ನೀಡಿದ ನಂತರ ಅದರಿಂದಾಗಿಯೇ ಯಾವುದಾದರೂ ಹುಡುಗಿ ಓಡಿಹೋಗಿದ್ದಾಳೆಂದಾದರೆ ಅದಕ್ಕೆ ಸಾಕ್ಷಿ ಕೊಡಿ? ಎಷ್ಟು ಕುಟುಂಬಗಳು ಆಕೆಯ ಹೇಳಿಕೆಯಿಂದಾಗಿ ಸಂಕಷ್ಟ ಕ್ಕೀಡಾಗಿವೆ? ದಯವಿಟ್ಟು ಹೇಳುತ್ತೀರಾ?

ಮಾರ್ಚ್ 23ರಂದು ಸುಪ್ರೀಂಕೋರ್ಟ್‌ನ ಮುಖ್ಯ ನಾಯ ಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ದೀಪಕ್ ವರ್ಮಾ, ಬಿ.ಎಸ್. ಚವ್ಹಾಣ್ ಅವರನ್ನೊಳಗೊಂಡ ಪೀಠ ಈ ಮೇಲಿನ ಪ್ರಶ್ನೆಗಳನ್ನೆತ್ತಿದೆ.

ಇದೆಲ್ಲಾ ಶುರುವಾಗಿದ್ದು 2005ರಲ್ಲಿ. ಕಳೆದ ಎಂಟ್ಹತ್ತು ವರ್ಷಗಳಿಂದ ಖ್ಯಾತ ಇಂಗ್ಲಿಷ್ ವಾರಪತ್ರಿಕೆಗಳಾದ ‘ಇಂಡಿಯಾ ಟುಡೆ’, ‘ಔಟ್‌ಲುಕ್’, ‘ದಿ ವೀಕ್’ಗಳು ವರ್ಷಕ್ಕೆ ಎರಡು ಬಾರಿ ರಾಷ್ಟ್ರಮಟ್ಟದ ಆನ್‌ಲೈನ್ ಸೆಕ್ಸ್ ಸರ್ವೆಗಳನ್ನು ನಡೆಸುತ್ತಾ ಬರುತ್ತಿವೆ. ಈಗಿನ ಯುವ ಜನಾಂಗ ಸೆಕ್ಸ್ ವಿಷಯದಲ್ಲಿ ತಳೆಯುತ್ತಿರುವ ಧೋರಣೆ, ಹೊಂದುತ್ತಿರುವ ಅಭಿಪ್ರಾಯ, ಅದರಿಂದಾಗಿ ಬದಲಾ ಗುತ್ತಿರುವ ಸಾಮಾಜಿಕ ಮೌಲ್ಯ ಮುಂತಾದುವುಗಳನ್ನು ಸಮೀಕ್ಷೆಗಳ ಮೂಲಕ ಹೊರತೆಗೆದು ಬೆಳಕು ಚೆಲ್ಲಲಾಗುತ್ತಿದೆ. ಆ ಸಮೀಕ್ಷೆಗಳು ಕೆಲವೊಮ್ಮೆ ಅತಿರೇಕ, ಅಸಹ್ಯಕರವೆನಿಸುತ್ತವಾದರೂ ಬದಲಾಗುತ್ತಿರುವ ಹಾಲಿ ಸನ್ನಿವೇಶವನ್ನಂತೂ ಅವುಗಳಲ್ಲಿ ಕಾಣಬಹುದಾಗಿದೆ. 2005ರಲ್ಲಿ ‘ಇಂಡಿಯಾ ಟುಡೆ’ ಮ್ಯಾಗಝಿನ್ ನಡೆಸಿದ ಇಂಥದ್ದೇ ಸಮೀಕ್ಷೆ ವೇಳೆ ಖ್ಯಾತ ಚಿತ್ರನಟಿ ಖುಷ್ಬು ಅವರ ಸಂದರ್ಶನವನ್ನು ಪ್ರಕಟಿಸಿತ್ತು. ಅದರಲ್ಲಿ “ವಿವಾಹಪೂರ್ವ ಲೈಂಗಿಕತೆ ತಪ್ಪೇನೂ ಅಲ್ಲ. ಆದರೆ ಹುಡುಗಿಯರು ಸೆಕ್ಸ್ ಸಂಬಂಧಿ ರೋಗಗಳು ಹಾಗೂ ಗರ್ಭ ಧರಿಸುವುದರ ಬಗ್ಗೆ ಎಚ್ಚರದಿಂದಿರಬೇಕು” ಎಂದು ಹೇಳಿದರು. ನಮ್ಮ ನೈತಿಕ ಪೊಲೀಸರಿಗೆ ಇಷ್ಟು ಸಾಕಿತ್ತು ನೋಡಿ… ತಮಿಳುನಾಡು ಹಾಗೂ ದೇಶದ ಇತರ ಭಾಗಗಳಲ್ಲಿ ಖುಷ್ಬು ವಿರುದ್ಧ 22 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದರು. ಆಕೆಯ ಜನಪ್ರಿಯತೆ ಉತ್ತುಂಗದಲ್ಲಿದ್ದಾಗ ಅಭಿಮಾನಿಗಳು ನಿರ್ಮಿಸಿದ್ದ ದೇವಾಲಯವನ್ನು ನೆಲಸಮ ಮಾಡಿದರು. ‘ವಿವಾಹಪೂರ್ವ ಲೈಂಗಿಕತೆ ತಪ್ಪೇನೂ ಅಲ್ಲ’ ಎಂದರೆ ವಿದ್ಯಾವಂತ ಯುವಕರು ತಮ್ಮ ವಧು ಕನ್ಯೆ(virgin) ಆಗಿರ ಬೇಕೆಂದು ನಿರೀಕ್ಷಿಸಬಾರದು ಎಂದರ್ಥವಾಗುತ್ತದೆ ಎಂದು ಆಕೆಯ ವಿರೋಧಿಗಳು ಆರೋಪಿಸಿದರು. ಆಕೆಯ ಹೇಳಿಕೆ ಅಪರಾಧ ಹಾಗೂ ಅನುಚಿತವೆಂದು ಪ್ರತಿಪಾದಿಸಿದರು, ಹತ್ತಾರು ಕೇಸು ಹಾಕಿದರು. ಇಂತಹ ಮೊಕದ್ದಮೆಗಳನ್ನು ತಳ್ಳಿಹಾಕಬೇಕೆಂದು ಖುಷ್ಬು ಮದ್ರಾಸ್ ಹೈಕೋರ್ಟ್‌ನ ಮೊರೆ ಹೋದರಾದರೂ 2008, ಏಪ್ರಿಲ್ 30ರಂದು ನೀಡಿದ ತೀರ್ಪಿನಲ್ಲಿ ಮೊಕದ್ದಮೆಗಳನ್ನು ಬರ್ಖಾಸ್ತುಗೊಳಿ ಸಲು ಕೋರ್ಟ್ ನಿರಾಕರಿಸಿತು. ಆಕೆ ಸುಪ್ರೀಂಕೋರ್ಟ್‌ನ ಕದ ತಟ್ಟಬೇಕಾಗಿ ಬಂತು. ಸುಪ್ರೀಂಕೋರ್ಟ್ ಪೀಠ ಮೊನ್ನೆ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿರುವುದು ಹಾಗೂ ಟಿಪ್ಪಣಿ ಮಾಡಿರುವುದು ಖುಷ್ಬು ಪ್ರಕರಣದ ವಿಚಾರಣೆ ವೇಳೆಯಲ್ಲೇ. ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ ಎಂಬ ಖುಷ್ಬು ಅಭಿಪ್ರಾಯ ಅಮಾಯಕ ಯುವಜನತೆ ಹಾಗೂ ಅಪ್ರಾಪ್ತ ವಯಸ್ಕರನ್ನು ದಾರಿತಪ್ಪಿಸುತ್ತದೆ ಎಂಬ ಅರ್ಜಿದಾರರ ಪರ ವಕೀಲರೊಬ್ಬರ ವಾದಕ್ಕೆ ತಿರುಗೇಟು ನೀಡಿದ ಸುಪ್ರೀಂಕೋರ್ಟ್ ಪೀಠ, “ಆಕೆಯ ಹೇಳಿಕೆಯಿಂದಾಗಿ ಯುವಜನತೆ ದಾರಿತಪ್ಪುತ್ತದೆ ಎನ್ನುವ ಸಾಧ್ಯತೆ ತೀರಾ ಕಡಿಮೆ. ಅದರಲ್ಲೂ ಇಂಟರ್‌ನೆಟ್ ಯುಗವಾದ ಇಂದು ನಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಅಥವಾ ಯಾವ ಅಶ್ಲೀಲ ವೆಬ್‌ಸೈಟ್ ವೀಕ್ಷಿಸುತ್ತಿದ್ದಾರೆ ಎಂದು ನಮಗೇ ಗೊತ್ತಾಗುವು ದಿಲ್ಲ” ಎಂದು ಅಭಿಪ್ರಾಯ ಪಟ್ಟಿದೆ.

ನಿಜಕ್ಕೂ ಇದೊಂದು ಸಂದಿಗ್ಧ ಸನ್ನಿವೇಶ.

ಒಂದೆಡೆ ಪ್ರಾಪ್ತ ವಯಸ್ಕ ಹೆಣ್ಣು-ಗಂಡು ವಿವಾಹಪೂರ್ವದಲ್ಲೇ ಲೈಂಗಿಕತೆಯಲ್ಲಿ ತೊಡಗುವುದು ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದರೆ, ಇನ್ನೊಂದೆಡೆ ಗಂಡು-ಹೆಣ್ಣು ಇಚ್ಛಿಸಿ ಕೂಡಿಕೊಳ್ಳುವ ವಯೋಮಾನವನ್ನು ಕೇಂದ್ರ ಸರಕಾರ ಕಳೆದ ವರ್ಷವೇ 18ರಿಂದ 16 ವರ್ಷಕ್ಕಿಳಿಸಿದೆ. ಇಂತಹ ಸಂದರ್ಭದಲ್ಲಿ ಸಮಾಜ ಏನು ಮಾಡಬೇಕು? ನೈತಿಕತೆಯ ಪ್ರಶ್ನೆಯನ್ನು ಮುಂದಿಟ್ಟು ಕೊಂಡು ಹಾಲಿ ಸನ್ನಿವೇಶ, ಬೆಳವಣಿಗೆಯನ್ನು ನೋಡಬೇಕೆ? ಅಥವಾ ಸುಪ್ರೀಂಕೋರ್ಟ್ ಅಭಿಪ್ರಾಯದ ಹಿಂದಿರುವ ವಾಸ್ತವದ ಬಗ್ಗೆ ದೃಷ್ಟಿಹಾಯಿಸಬೇಕೆ?

Idealism ಅಥವಾ Fact…

ಇವೆರಡರ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಇಂತಹ ಆಯ್ಕೆ ಪ್ರಶ್ನೆ ಬರೀ ನೈತಿಕ, ಸಾಮಾಜಿಕ ವಿಷಯಗಳಲ್ಲಿ ಮಾತ್ರ ತಲೆದೋರುವುದಿಲ್ಲ. ಹದಿನೆಂಟು, ಹತ್ತೊಂಬತ್ತು ವರ್ಷಗಳ ಹಿಂದಕ್ಕೆ ಹೋಗಿ. ಪ್ರಧಾನಿ ಪಿ.ವಿ. ನರಸಿಂಹರಾವ್ ಸರಕಾರ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರಲು ಸನ್ನದ್ಧಗೊಳ್ಳುತ್ತಿತ್ತು. ಡಂಕೆಲ್ ರಿಫಾರ್ಮ್ಸ್, ಡಬ್ಯ್ಲೂಟಿಒ ಒಪ್ಪಂದಗಳು ಸೈತಾನನಂತೆ ಕಾಡಹತ್ತಿದ್ದವು. ಸೋಮಾರಿ ಕಟ್ಟೆಯಿಂದ ಹಿಡಿದು ಕ್ಲಾಸ್‌ರೂಮ್, ಕ್ಯಾಂಟೀನ್, ಮದುವೆ ಹೀಗೆ ಪ್ರತಿ ಸಭೆ-ಸಮಾರಂಭಗಳಲ್ಲೂ, ದೇಶದ ಮೂಲೆಮೂಲೆಗಳಲ್ಲೂ ಅವು ಚರ್ಚೆಯ ವಿಷಯವಾಗಿ ಬಿಟ್ಟಿದ್ದವು. ಅವತ್ತು ಬಿಜೆಪಿ ಯಾವ ಆರ್ಥಿಕ ಸುಧಾರಣೆಗಳನ್ನು ವಿರೋಧಿಸುತ್ತಿತ್ತೋ ಅದೇ ಸುಧಾರಣೆಗಳನ್ನು ತಾನು ಅಧಿಕಾರಕ್ಕೆ ಬಂದ ಕೂಡಲೇ ರಾವ್ ಸರಕಾರಕ್ಕಿಂತ ತ್ವರಿತ ಹಾಗೂ ವ್ಯಾಪಕವಾಗಿ ಜಾರಿಗೊಳಿಸಿತು! ಇತ್ತ ಆರ್ಥಿಕ ಉದಾರೀಕರಣವನ್ನು ಇಂದಿಗೂ ವಿರೋಧಿಸುವ ಕಮ್ಯುನಿಸ್ಟರೂ ಇದ್ದಾರೆ. ಅಂದರೆ ಕೆಲವೊಮ್ಮೆ ಕೆಲವೊಂದು ವಿಷಯಗಳ ಬಗ್ಗೆ courage of conviction ಎಷ್ಟೇ ಇದ್ದರೂ ಒಂದು ನಿರ್ಧಾರಕ್ಕೆ ಬರುವುದು ಕಷ್ಟವಾಗಿ ಬಿಡುತ್ತದೆ. ಹಾಗಿರುವಾಗ ಸ್ವಚ್ಛಂದ ಸೆಕ್ಸ್‌ನಂತಹ ತೀರಾ Sensitive ವಿಚಾರದ ಬಗ್ಗೆ ಏಕಾಏಕಿ ಏನನ್ನೂ ಹೇಳುವುದಕ್ಕಾಗುವುದಿಲ್ಲ. ನ್ಯಾಯಾ ಲಯಗಳು ಕಾನೂನನ್ನು ಮುಂದಿಟ್ಟುಕೊಂಡು, ಮೇಲ್ಪಂಕ್ತಿಯಾಗಿಟ್ಟು ಕೊಂಡು ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಸಮಾಜಕ್ಕೆ ಅದರದ್ದೇ ನೀತಿ-ನಿಯಮ, ಕಟ್ಟುಪಾಡುಗಳಿರುತ್ತವೆ. ಈ Social norms ಇವೆಯಲ್ಲಾ ಅವು ವ್ಯಕ್ತಿಗಳ ನಡತೆ, ವರ್ತನೆ ಹೇಗಿರಬೇಕೆಂದು ನಿರ್ಧರಿಸುವ ಅಂಶಗಳಾಗಿವೆ. ಈಗಿನ ಯುವ ಜನತೆ ಮಾತು ಕೇಳಲ್ಲ, ಹಿರಿಯರಿಗೆ ಗೌರವ ಕೊಡುವುದಿಲ್ಲ… ಈ ಗೊಣಗು ಹೊಸದೇನೂ ಅಲ್ಲ. ಇಂಟರ್‌ನೆಟ್, ಸೆಲ್‌ಫೋನ್ ಯುಗ ಆರಂಭವಾದ ನಂತರವಂತೂ ಗೊಣಗು ಹೆಚ್ಚಾಗುತ್ತಲೇ ಇದೆ. Fast eroding values ಬಗ್ಗೆ(ಮೌಲ್ಯಗಳ ಸವಕಳಿ), ವಿವಾಹ, ಕೌಟುಂಬಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವ ವಿಷಯದಲ್ಲಿ, ಹೊಸತಲೆಮಾರು Self centered ಆಗುತ್ತಿರುವ ವಿಚಾರವಾಗಿ ನಮ್ಮ ಹಿರಿಯರು ಆಗಿಂದಾಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅಂದಮಾತ್ರಕ್ಕೆ ಸಾಮಾಜಿಕ ನಿಯಮಗಳು ಕಾಲಾಂತರದಲ್ಲಿ ಬದ ಲಾಗುವುದಿಲ್ಲ, ಬದಲಾಗಬಾರದು ಎಂದಲ್ಲ. ಪ್ರತಿಯೊಂದು ಸಮಾಜವೂ ಪ್ರತಿ ಪರಿಧಿಯಲ್ಲೂ (Sphere) ಒಂದು ಸಂಕ್ರಮಣ (Transition period) ಸ್ಥಿತಿಯನ್ನು ಎದುರಿಸುತ್ತದೆ, ಎದುರಿಸಲೇ ಬೇಕಾಗುತ್ತದೆ.

ಆದರೂ….

ಇಂದಿಗೂ ಸೆಕ್ಸ್ ಅನ್ನು taboo (ನಿಷಿದ್ಧ)ಎಂಬಂತೆ ಕಾಣುವ ನಮ್ಮ ಸಮಾಜಕ್ಕೆ pre-marital sex ಅಥವಾ ವಿವಾಹ ಪೂರ್ವ ಲೈಂಗಿಕತೆ ಎಂಬುದು ದಿಟ್ಟನೆ ಎದುರಾದ “Rude Awakening”ನಂತಾಗಿ ಬಿಟ್ಟಿದೆ. ಹಾಗಂತ ಏನು ಮಾಡುತ್ತೀರಿ? ಏನು ಮಾಡುವುದಕ್ಕಾಗುತ್ತದೆ? ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗಿ ದ್ದಾದರೂ ಏಕೆ? ಗಡಿಯಾರವನ್ನು ಒಂದಿಪ್ಪತೈದು ಮೂವತ್ತು ವರ್ಷಗಳ ಹಿಂದಕ್ಕೆ ತಿರುಗಿಸಿ. ನಮ್ಮ ಅಮ್ಮಂದಿರು, ಅದಕ್ಕೂ ಮೊದಲು ಅಜ್ಜಿಯರು ಯಾವ ವಯಸ್ಸಿನಲ್ಲಿ ವಿವಾಹವಾಗುತ್ತಿದ್ದರು ಎಂಬುದನ್ನು ಯೋಚಿಸಿ? ಸಾಮಾನ್ಯವಾಗಿ ಮೈ ನೆರೆತ ಕೂಡಲೇ ಅಥವಾ ಮೂರ್ನಾಲ್ಕು ವರ್ಷಗಳಲ್ಲಿ ಮದುವೆ ಮಾಡಿಕೊಟ್ಟುಬಿಡುತ್ತಿದ್ದರು. ಅದಕ್ಕೆ ಕಾರಣ ಏನು? ಏಕೆ? ಎಂಬುದು ನಮಗಿಲ್ಲಿ ಬೇಡ. ಆದರೆ ನಮ್ಮ ಅಜ್ಜಿ, ಅಮ್ಮಂದಿರು 14ರಿಂದ 18-19 ವರ್ಷದೊಳಗೆ ವಿವಾಹ ಬಂಧನದಲ್ಲಿ ಸಿಲುಕಿ ಬಿಡುತ್ತಿದ್ದರು. ಈಗಿರುವ ಬಹಳಷ್ಟು ಒತ್ತಡಗಳು ಆ ಕಾಲದಲ್ಲಿರಲಿಲ್ಲ. ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತಿತ್ತು. ಗಂಡ ದುಡಿದರೆ ಸಾಕು, ಹೆಂಡತಿಯಾದವಳು ಮನೆಯಲ್ಲಿದ್ದುಕೊಂಡು ಅಡುಗೆ ಮಾಡಿ ಹಾಕಿದರೆ, ಮಕ್ಕಳನ್ನು ಹೆತ್ತು-ಹೊತ್ತು, ಶಾಲೆಗೆ ಸಿದ್ಧಗೊಳಿಸಿ ಕಳುಹಿಸಿ ಮನೆಗೆಲಸ ನೋಡಿಕೊಂಡರೆ ಆಯಿತು ಎಂಬ ಕಾಲವದು. ಜತೆಗೆ ಹೆಣ್ಣೂ ಕೂಡ ಸಣ್ಣಪ್ರಾಯದಲ್ಲೇ ವಿವಾಹವಾಗುತ್ತಿದ್ದ ಕಾರಣ companionship, ಭಾವನಾತ್ಮಕ ಅಗತ್ಯ, ಸಾಮಾಜಿಕ-ಆರ್ಥಿಕ ಭದ್ರತೆ ಹಾಗೂ ದೈಹಿಕ ಅಗತ್ಯ ಎಲ್ಲವನ್ನೂ ಗಂಡನಲ್ಲೇ ಕಂಡುಕೊಳ್ಳುತ್ತಿದ್ದಳು. ಈಗಿನಂತೆ ವಿಧವಿಧವಾದ provocationಗಳಿಗೆ ಒಳಗಾಗುವ ಮಾತು ಹಾಗಿರಲಿ, ಲೈಂಗಿಕತೆ ಬಗ್ಗೆ ಸರಿಯಾದ eನ ಬೆಳೆಯುವ ಮೊದಲೇ ತಾಯ್ತನ ಬಂದುಬಿಟ್ಟಿರುತ್ತಿತ್ತು. ಅಂತಹ ಪರಿಸ್ಥಿತಿ ಈಗಲೂ ಇದೆಯೇ? ‘ಉದ್ಯೋಗಂ ಪುರುಷ ಲಕ್ಷಣಂ’ ಎಂದು ಈಗಲೂ ಅನ್ನುವುದಕ್ಕಾಗುತ್ತದೆಯೇ? ನಮ್ಮ ಹೆಮ್ಮೆಯ ಕೌಟುಂಬಿಕ ವ್ಯವಸ್ಥೆ, ವಿವಾಹದ ಪದ್ಧತಿ ಬಗ್ಗೆ ಖಂಡಿತ ಗೌರವ ಇಟ್ಟುಕೊಳ್ಳೋಣ. ಆದರೆ ಗಂಡನನ್ನು, ಗಂಡನ ದುಡಿಮೆಯನ್ನು, ಗಂಡನೇ ಸರ್ವಸ್ವ ಎಂದು ನಂಬಿಕೊಂಡು ಇರುವಂಥ ಕಾಲ ಈಗಿದೆಯೆ? ಇವತ್ತು ವ್ಯಾಸಂಗ ವೆಂಬುದು eನಾರ್ಜನೆಗೆ ಸೀಮಿತವಾಗಿಲ್ಲ. ಒಬ್ಬ ಹೆಣ್ಣೂ ಕೂಡ ಓದಿ ಪದವಿ ಪಡೆದು, ಉದ್ಯೋಗಕ್ಕೆ ಸೇರಿ ದುಡಿಯಲೇಬೇಕಾದ ಅನಿವಾರ್ಯತೆ ಇದೆ. ಯಾವ ಹೆಣ್ಣೂ ಕೂಡ ‘ರೀ ಸೀರೆ ತೆಗೆದು ಕೊಳ್ಳಬೇಕು, ಸರ ತೆಗೆದುಕೊಳ್ಳಬೇಕು ದುಡ್ಡು ಕೊಡಿ…’ ಎಂದು ಗಂಡನ ಎದುರು ಹಲ್ಲುಗಿಂಜಲು ಇಷ್ಟಪಡುವುದಿಲ್ಲ. ಸ್ವಾಭಿಮಾನದ ಪ್ರe ಹೆಣ್ಣಲ್ಲೂ ಜಾಗೃತವಾಗಿದೆ. ಕಲಿಯುವಾಗ ಅಪ್ಪ-ಅಮ್ಮನ ಹಂಗಿನಲ್ಲಿರಬಹುದು, ಆದರೆ ಸ್ವಾಭಿಮಾನದಿಂದ ಮುಂದಿನ ಬದುಕು ನಡೆಸಬೇಕಾದರೆ ಹೆಣ್ಣಿಗೂ ವಿದ್ಯೆ ಅನಿವಾರ್ಯ. ಒಂದು ಪದವಿಯನ್ನೋ, ಸ್ನಾತ್ತಕೋತ್ತರ ಪದವಿಯನ್ನೋ ಮುಗಿಸಬೇಕೆಂದರೆ ವಯಸ್ಸು ಕನಿಷ್ಠ ೨೨-೨೩ ಆಗಿರುತ್ತದೆ. ಆನಂತರ ಕೆಲಸಕ್ಕೆ ಸೇರಿ, ಸೆಟ್ಲ್ ಆಗಬೇಕೆಂದರೆ ಇನ್ನೂ ಎರಡು-ಮೂರು ವರ್ಷಗಳಾಗುತ್ತವೆ. ಕೋರ್ಸ್ ಮುಗಿದ ಕೂಡಲೇ ಯಾರೂ ವಿವಾಹವಾಗಲು ಬಯಸು ವುದಿಲ್ಲ. ಒಂದಷ್ಟು ದಿನ ಸ್ವತಂತ್ರವಾಗಿರಬೇಕು ಎಂಬ ಭಾವನೆ ಮೂಡಿರುತ್ತದೆ.

ಸೂಕ್ಷ್ಮಇರುವುದೇ ಇಲ್ಲಿ.

ನಮ್ಮ ಅಜ್ಜಿ-ಅಮ್ಮಂದಿರು ೧೮ರೊಳಗೆ ಮದುವೆಯಾದರೆ ನಮ್ಮ ತಲೆಮಾರಿನವರು ವಿವಾಹಕ್ಕೆ ಮನಸು ಮಾಡುವುದು 25-26ರ ಆಸುಪಾಸಿನಲ್ಲಿ. ಅಂದರೆ ವಿವಾಹದ ಅಂತರ ೮ರಿಂದ 10 ವರ್ಷ! ಈ ಎಂಟ್ಹತ್ತು ವರ್ಷಗಳಲ್ಲಿ ತನ್ನ ಕಾಲಮೇಲೆ ತಾನು ನಿಲ್ಲುವ ಗುರಿಯನ್ನು ಬೆನ್ನಟ್ಟಿ ವ್ಯಾಸಂಗ ಮಾಡುವುದು, ಉದ್ಯೋಗ ಬೇಟೆ ಎಲ್ಲಾ ಸರಿ. ಆದರೆ ಈ ಕಂಪ್ಯಾನಿಯನ್‌ಶಿಪ್, ಭಾವನಾತ್ಮಕ ಅಗತ್ಯ, ದೈಹಿಕ ಅಗತ್ಯಗಳ ಕಥೆಯೇನು? ಸಂಯಮ ರೂಢಿಸಿಕೊಳ್ಳಿ, ಪಥ್ಯ ಮಾಡಿ ಎನ್ನುವುದು ಸುಲಭ. ಅದು ಎಷ್ಟರ ಮಟ್ಟಿಗೆ ಸಾಧ್ಯ? ಸಾಧು?

Enter Boyfriend/Girl Friend!!

ಒಮ್ಮೆ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್ ಮಾಡಿಕೊಂಡ ನಂತರ ಅವರು ಬರಿ ಜತೆಗಾರ/ಜತೆಗಾತಿಯಾಗಿ  ಉಳಿಯುತ್ತಾರೆ, ಉಳಿಯಬೇಕು ಎನ್ನುವುದಕ್ಕಾಗುತ್ತದೆಯೆ? ಕಂಪ್ಯಾನಿಯನ್‌ಶಿಪ್ ಸಿಕ್ಕನಂತರ ಎಲ್ಲೋ ಒಂದು ಕಡೆ ದೈಹಿಕ ಕಾಮನೆಗಳು ಅಗತ್ಯವಾಗಿ ಕಾಡಬಹುದು. ಜತೆಗೆ ಉನ್ನತ ವ್ಯಾಸಂಗಕ್ಕಾಗಿ ದೂರದ ಪೇಟೆ, ಪಟ್ಟಣಗಳಿಗೆ ಬರುವ ಕಾರಣ, ಹಾಸ್ಟೆಲ್, ಪಿ.ಜಿ.ಗಳಲ್ಲಿ ತಂಗುವ ಕಾರಣ ಕೆಲವೊಮ್ಮೆ ವಯಸ್ಸಿನ, ಮನಸ್ಸಿನ ತುಡಿತಗಳಿಗೆ ಅಂಕುಶ ಹಾಕಿಕೊಳ್ಳುವುದಕ್ಕಾಗದೇ ಹೋಗಬಹುದು. ವಿವಾಹಪೂರ್ವ ಲೈಂಗಿಕತೆಗೆ ಈ ಎಲ್ಲ ಅಂಶಗಳು ದಾರಿಮಾಡಿಕೊಡುತ್ತಿವೆ. ಹೀಗಾಗಬಾರದು ಎಂದು ಯಾರೆಷ್ಟೇ ಹೇಳಿದರೂ ಆಗುತ್ತಿದೆ ಎಂಬ ವಾಸ್ತವವನ್ನು ಮರೆಮಾಚಲು ಎಷ್ಟು ದಿನ ಸಾಧ್ಯ? ಅದಕ್ಕೇ ಹೇಳಿದ್ದು ಇದೊಂದು Rude Awakening! ಬ್ರಹ್ಮಚರ್ಯವನ್ನು ಒಂದು virtue(ಸದ್ಗುಣ) ಎಂಬಂತೆ ನೋಡುವ ನಮ್ಮ ಸಮಾಜಕ್ಕೆ ಇಂಥದ್ದೊಂದು ವಾಸ್ತವವನ್ನು ಜೀರ್ಣಿಸಿಕೊಳ್ಳುವುದು ಖಂಡಿತ ಕಷ್ಟವಾಗುತ್ತದೆ. ಆದರೆ ಹೀಗೂ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಈಗಿನ ಪೋಷಕರು. So come out of the denial World. ಇನ್ನೂ ಎಷ್ಟು ದಿನ ಅಂತ ಅಲ್ಲೇ ಇರುವುದಕ್ಕಾಗುತ್ತದೆ? ಈಗಿನ ಯುವ ಜನಾಂಗದ ಮೇಲೆ ತಂತ್ರeನ, peer pressure, ಮೀಡಿಯಾ ಇನ್‌ಫ್ಲುಯೆನ್ಸ್ ಎಂತಹ ಒತ್ತಡಗಳನ್ನು ಹೇರುತ್ತಿವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಜತೆಗೆ ಚಿಕ್ಕ ವಯಸ್ಸಿಗೇ ಸಿಕ್ಕಿರುವ ಫೈನಾನ್ಷಿಯಲ್ ಇಂಡಿಪೆಂಡೆನ್ಸ್ ಮನಸ್ಸಿಗೆ ಬಂದಂತೆ(Free will) ನಡೆದುಕೊಳ್ಳುವ ಅವಕಾಶ ಸೃಷ್ಟಿಸಿಕೊಟ್ಟಿದೆ. ಹಾಗಂತ one cannot turn the clock back. ವಾಸ್ತವವನ್ನು ಒಪ್ಪಿಕೊಂಡೇ ಸಾಧ್ಯವಾದಷ್ಟು ಜಾಗ್ರತೆ ಯನ್ನು ವಹಿಸಬೇಕಾಗುತ್ತದೆ. ನಿಮ್ಮ ಮಕ್ಕಳಿಗೆ ರೇಪ್ ಮಾಡಬೇಡ ಎಂದು ಕಿವಿಮಾತು ಹೇಳಬಹುದು, ಆದರೆ You should celibate ಎಂದು ಖಡಕ್ ಆಗಿ ಹೇಳುವುದಕ್ಕಾಗುವುದಿಲ್ಲ, ಹೇಳಿ ದರೂ ಅಷ್ಟು ಸುಲಭವಾಗಿ ಕೇಳಿಸಿಕೊಳ್ಳುವುದಿಲ್ಲ. ಸುರಕ್ಷಿತ ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ ಎಂಬ ಖುಷ್ಬು ಹೇಳಿಕೆಯನ್ನು ಈ ಹಿನ್ನೆಲೆ ಯಲ್ಲೇ ನೋಡಬೇಕಾಗುತ್ತದೆ. ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ನಿಮಗೇ ಗೊತ್ತಿರುವುದಿಲ್ಲ ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದ ಬಗ್ಗೆಯೂ ತಾಳ್ಮೆಯಿಂದ ದೃಷ್ಟಿಹಾಯಿಸಬೇಕಾಗುತ್ತದೆ. ವಯಸ್ಸಿಗೆ ಬಂದ ಹುಡುಗ ಹುಡುಗಿಯನ್ನು, ಹುಡುಗಿ ಹುಡುಗನನ್ನು ಬಯಸುವುದು ತಪ್ಪು ಎಂದು ಕಡ್ಡಿಮುರಿದಂತೆ ಹೇಳುವುದಕ್ಕಾಗುತ್ತದೆಯೇ? ಪೋಷಕರಾದವರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಥವ್ಯವಸ್ಥೆಯಂತೆ ದೈಹಿಕ ಆರೋಗ್ಯ, ಸಾಮಾಜಿಕ ಆರೋಗ್ಯವನ್ನೂ (ಸೋಷಿಯಲ್ ಹೆಲ್ತ್) ಕಾಪಾಡಿಕೊಳ್ಳಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕೇ ಹೊರತು ದಂಡನಾಧಿಕಾರಿಯಂತೆ ವರ್ತಿಸಿದರೆ ಯಾವ ಲಾಭವೂ ಇಲ್ಲ.

ಅಷ್ಟಕ್ಕೂ, ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?! (ಹುಡುಗ-ಹುಡುಗಿ ಒಪ್ಪಿಕೊಂಡರೆ ಯಾರೇನು ಮಾಡುವುದಕ್ಕಾಗುತ್ತದೆ?).

27 Responses to “ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?!”

 1. arjun gowda says:

  Swami vivekanandara aadarshagalanna tagondre yenan control madodu saha kasta agolla.
  JEEVANDAGE ONDU KELASA,DUDDU,ANTASTU,HESARU………EVISTIDRE SAAKAGOLLA. MUKYAVAAGI BEKAGIRODU SHEELA ANNODU YELLARIGU ARIVIRBEKU.

  NEEVU IDE ANKANADALLI YENAN BEKADRU MANUSHYA TANNA HIDITADALLI ITKOBAHUDU ANTA BARDIDRE CHANNAGITTU.
  YAKANDRE NIMM LEKHANA ODHO ONDU DODDA BALAGAANE IDE.
  AVRIGE NIMMA LEKANA YAVATTU MADARI HAAGIRLI ANTA HAASISTINI.

  DINAALU HEEGE ONDONDU VISHYADALLI RAAJI HAGTA BANDRE,NAM SAMSKRUTINA NAAVU MUNDONDU DINA PALEYULIKEYAGI NODBEKAGUTTE.
  ADU NEEV RAAJI AGTIRO(AGBEKANDIRO) VISHYA EE SAMAJAKKE ASTONDU SANNA VISHYANU ALLA,ASTONDU HOLLEYA VISHYANU ALLA.

  HOSTEL,PAYING -GUEST AGBITRE ELLO ONDONDU TIMENALLI NIYANTRISKOLOKAGOLLA ANTA BARI KELAVARANNU NODI TIRMANAKKE BANDBIDBEDI. 5%NEEVELO HAAG NADIBAHUDU.AADRE YALLA HAGE IROLLA.
  ADU YANTA SANNIVESHA BANDRU ADANNA NIBAYISODIKKE SHEELA PRAGNE(PRAJNE) ANNODU NAM HENNU MAKLIGE KANDITA IRUTTE.

  ESTELLA HAADRU NAAVIBRU OPPIDDIVI,NAAVU MUNDE MADVE AAGORIDDIVI IDRALLI YENU TAPPU ANNORU DHAARALAVAGI MUNDUVARILI,
  AADRE ADAKKU MUNCHE AVRA BHVISHYAD BAGGE,APPA-AMMA BAGGE SWALPA YOCHNE MADLI.
  KONELOND MAATU: TANNA MANASANNA CONTRONALLI ITKOLDE IDRE(ADYAVDE VISHYA HAAGIRLI) AVNU MANUSHYA HAAGI IDDU YEN PRAYOJANA. MANUSHYANGE ONDU MADUVE ANNODU IRUTTE,ADU PRANIGALIGE IROLLA.

 2. Shiva says:

  Hello Pratap,

  This is some thing unexpected from you!. We need proper understanding of the culture and body needs. Bramcharya is still can be maintained( at least till marriage). If you provide legal support to our youth the number of pre matrial sex would increase. Please do not mention about “Krishna and Radha” here, because they lived in different yuga(not Kaliyuga). And we need lot of culture and muscles(like swami vivekananda) to understand Krishna and his relations. Finally it is up the youth whether they want to lead a dignified (to their soul) life or dog’s life. However human has thinking power so he can utilize his semen to think more than wasting it(lust).

  Shiva.

 3. Guru says:

  What did you want to do

  Convey a message?
  Do analysis?
  Do commentary?

  ನಿಮ್ಮ ಮಕ್ಕಳಿಗೆ ರೇಪ್ ಮಾಡಬೇಡ ಎಂದು ಕಿವಿಮಾತು ಹೇಳಬಹುದು, ಆದರೆ You should celibate ಎಂದು ಖಡಕ್ ಆಗಿ ಹೇಳುವುದಕ್ಕಾಗುವುದಿಲ್ಲ,

  OMG.. ! at lease me or my friends were never instructed by parents “not to rape someone”. Though abstention was choice, parents could talk about it.

 4. sajas says:

  very nice pratap. well done. it’s really happening in the society.but no one ready to accept it LOUDLY. how funny yaar. you are right. i really wonder,why the society hesitate to listen/read the truth yaar? khusbu madam is right.many people are having the same opinion,but they can’t express.but she did.well done pratap to being supporter to the today’s truth.so again you made me to beg your best companion,YOUR PEN. give me please……

 5. P Santhosh Shetty says:

  We we go through the system of living in our “Hindu Society” , there we can find so many self made rules. These are only to improve the standard of living. May SC accept pre-marital sex, Diverse, thalak even more than one time for an individual. But we should understand because of this who will suffer & who’s family relationship will going to collapse…

 6. Anil Raj says:

  Its all about we the youth has to decide whether to be a MAN(Woman) or DOG!!

 7. Savitha says:

  Pratap,

  Amazing article !!! Kudos !!

  Now, thats what we call “Bold and beautiful”. Moral policing has been a much spoken about topic.

  Well, there is no surprise that people find it difficult to digest such a write up. May be its our bringing or the environment or “society” such topics would be catagorized as taboo.

  You have potrayed it well without as much as taking a stand.

 8. Kavitha says:

  Hi,

  This has been an interesting read. Your write-up has everything that I’ve thought over the years. As in, it is ethically correct to have a sexual relationship with your spouse after getting married, but its wrong do have the same relationsip without getting married? Around 30yrs ago it was fine to make babies at early age of 15 but its now wrong to even have a sexual relationship at the age of 20+? Its only perspective which makes things look good/bad & you have clearly made an attempt to make sure that people look at both sides of the coin. I hope people see it through… I think people are more exposed to the world now & cant make decisions on their own. At the end of the day, its upto each individual to make a choice since one knows what’s best for one self.

 9. geetanjali says:

  hello sir this article is exclusive! naitikate bagge allaru maatadtare adre avashyakate vishaya bandaga avararu avara baggene vichara maadtare anno vishaya bahuteka janarige gottilla athava gottiddu gottilladante natistare……………………………………………………………….. e article nanna vicharadharegaligage ondu roopureshe thank u sir 4 such an acceptable article i think everybody must read this article

 10. Ashwini M.C says:

  Hello Pratap..

  This article is really unexpected from you..we are living in the Great “HINDUSTAN”..its not like a foreign country.. we are giving and we will give great respect and value to our culture.. thats why we are different from others..ours is the country where THE GREAT LEGEND “SWAMI VIVEKANANDA” WAS BORN.. its all depends on our family environment..and more than that our attitude..yeah off-course its a natural phenomenon…but we have a ability to control it..

  please don write these articles …

 11. venkatesh says:

  Hi Pratap,
  I appriciate all the works you have done. I follow your column. ‘Narendra Modi’ is really good book. Keep up the good work. Thanks for making people read columns in namma kannada.

  In this particular issue, consider few points:
  1. marriage age is 18
  2. SC asked govt to make prostitution legle if they cant stop it.
  3. LGBT practice is allowed for adults.
  4. Consensual sex minimum age limit reduced to 16.
  ..etc..
  many more are legal issues.
  Did they make any change till date(at least after 1947):
  1.Child marriages have reduced but must have been eradicated.
  2.Prostitution will be there, legalizing will only help reduce work(bribe) to police!!
  3. You cant stop/stare people in their bedroom, you cant stop it, create stringent marriage and adoptation laws for them.
  4. Age doesnt matter for police, catch any unmarried couple in a hotel peel out all the money they have. …..

  Even if the pre marital sex is made legal-
  If some unmarried couple caught having sex, they can win the battle legally,
  they would have been thrashed socially. House owner will through you out, police will harrass you.
  In india nothing changes with a law/act/consitutional amendment.

  Moral of the story: Everything immoral is not illegal.

 12. Srini says:

  Hi,
  Please get this article translated in English so that even others can understand.
  Thanks

 13. unknown says:

  we dint expect this kind article from u…..

 14. Super article sir…………..
  Continue your great work……..
  t.c

 15. Mahendra says:

  Brother, you talked and informed so much about our country and religion. I loved your articles. i wouldn’t had read this article. we are the people who love relations, who love sentiments, who love morality, who love the respect and dignity. And do you think such short term enjoyment make our existence, life worth. I feel History is tending to reverse. We were like animals, we are turning animals. Wander naked earlier, no far is that day. Our elders(ancestors) gave a meaningful route for everything. And we intelligent people, people of modern era, people with rational thinking want to change it into reality (of animal-ism of human beings). If such things are being accepted by well educated, civilized Indians then it is time we should stop admiring Swamy Vivekanand like people full of proud about their country, religion and culture. Let us not keep India as India anymore, We will turn it a western country. Really SAD..

 16. harsha says:

  How can u even think like this? are u trying to pose as a moderate thinker?
  Totally unexpected from your pen…

 17. Raghavendra K says:

  Hi pratap, its not so good article as your previus ones…….

 18. Sudarshan says:

  Dear Pratap Simha,

  Some things like Truth, Courage, Honesty are eternal virtues. They are never out-dated. Like that, celibacy is also a virtue. When our ancestors prescribed 4 ashrams, like Brahmacharya, Grihasta, Vanaprastha and Sanyasa, it was well thought out. For everything there is a time and there is a path. If you read more and more ancient scriptures even a minute thing prescribed by them makes lot of sense. They prescribed a ‘Life Style’ that is useful for society.
  Always there will be some aberrations and from time to time the eternal values have to be re-enforced. For that we need some people who live their lives like that. There are lot of people out there to spread the message of free sex, gay rights etc. But, why you have to accept such things ?
  “Enu maduvadakkaguttade ?” This is coming out from the position of helplessness. Are you one of them who have already fallen from grace in personal life and do not have moral courage to stand to the right things ? A young man like you at least try to live the life of value and spread right message to the society. I am not saying everything will change, but at least it will support few people to continue in the right direction.

  Nadigedureesuta hoguvudadare jeevanta matsave beku
  Honalina dikkali saguvudadare koletondu kasa kaddi saku

  Strength is life, weakness is death.

 19. Prakash says:

  Thanks Pratap You gave me green signal

 20. I was Shocked……………!I din’t expect from u………Related to sex….

 21. Chethan, Coorg says:

  In this generation, all good things looks bad and bad things looks good. If this continues like this, then we dont get virgin bride or groom hereafter. Dont be shock at that time.

 22. Michelle says:

  I was Shocked……………!I din’t expect from u………Related to sex….

 23. rohith says:

  very good article but i dont know why some are saying that they dont expect this article?!!!!!
  bahusaha suprim court order gottillade irorige nim article unexpected ansirbahudu
  nijavagiu unexpected ansodu nim article alla suprim . . court order alli kootu teerpu kodoru tavu yava stanadalli kulitu matadta iddeve annodanna marta hagide
  avrige example kododakke sikkiddu krisna radhe!!!! realy judgment is hopless
  i like ur article very much

 24. soumya says:

  ಸಂಕ್ರಮಣ (Transition period) bandirodu samajakkalla… pratap ge..!

 25. Shilpa says:

  hi prathap….. ellarigu badukuva hakku & swatantrya ide….. agreed…….but there shud be a limit for everything right……sumtimes u write abt culture & traditions & sumtimes u write like this….confusing…….ur article…..ur wish……..u dont reply to any comments……. atleast make ur point clear…..ppl shud not take ur article as a green signal…….anyways…..hav a grt day…….expecting gud articles frm u in future…..we feel gud to read when u write abt morality, culture, patriotism & all……..

 26. Pallavi says:

  I Completely agree with what pratap is telling. In our society no one ready to accept what is happening in front of them.They will never.

 27. geetanjali says:

  i have seen the above comments,i think the who hav given -ve comments must hav nt undrestood the article just want to say them that this article written by pratapsimha is nt immoral its fact which is going on in this society.you can not stop anybody to make premarital relation or extramarital relation, pratap is just showing the mirror of this society so try to understand and accept the things as these are…If something has to be changed we hav to change after al we the society