Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!

‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!

paa-6
‘ಪಾ‘!

ಒಂದು ವೇಳೆ ನೀವು ಈಗಾಗಲೇ ಈ ಚಿತ್ರವನ್ನು ನೋಡಿದ್ದರೆ ನಿಮಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲವಾದರೆ ಅದರ ಒಂದೊಂದು ದೃಶ್ಯಗಳಲ್ಲೂ ಮೈತೆರೆದುಕೊಳ್ಳುತ್ತಾ ಹೋಗುವ ಜೀವನ ಪ್ರೀತಿಯ ಬಗ್ಗೆ ತಿಳಿದುಕೊಳ್ಳುವ ಮೊದಲು ಸ್ವಲ್ಪ ಚಿತ್ರಕಥೆಯನ್ನೂ ಕೇಳಿ. ಹೆಸರು ಆರೋ. ವಯಸ್ಸು 13. ‘ಪ್ರೊಜೇರಿಯಾ’ ಅಂದರೆ ಎಳೆಯ ವಯಸ್ಸಿನಲ್ಲೇ ಮುದಿತನ ತರುವ ಒಂದು ವಿಚಿತ್ರ ಕಾಯಿಲೆ. ಆರೋ ನರಳುತ್ತಿದ್ದುದು ಅದೇ ಕಾಯಿಲೆಯಿಂದ. ಆದರೆ ನೋಡಲು 70 ವರ್ಷದ ಮುದುಕನಂತೆ ಕಂಡರೂ ಅವನ ವರ್ತನೆಯಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. ಒಬ್ಬ ಸಾಮಾನ್ಯ, ಸಹಜ 13 ವರ್ಷದ ಬಾಲನಂತೆಯೇ ಆಡುತ್ತಾನೆ, ಹಾಡುತ್ತಾನೆ, ಕುಣಿಯುತ್ತಾನೆ, ಕೋತಿಯಾಟವಾಡುತ್ತಾನೆ, ಶಾಲೆಗೂ ಹೋಗುತ್ತಿರುತ್ತಾನೆ, ಕಲಿಕೆಯಲ್ಲೂ ಹುಷಾರು. ಒಮ್ಮೆ ಶಾಲೆಯ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿರುತ್ತದೆ. ಅದರ ಅಂಗವಾಗಿ ವಸ್ತುಪ್ರದರ್ಶನ ಏರ್ಪಾಡಾಗಿರುತ್ತದೆ. ವಾರ್ಷಿಕೋತ್ಸವ ಸಮಾರಂಭಕ್ಕೆ ಆಗಮಿಸಿದ ಸ್ಥಳೀಯ ಸಂಸದ ಅಮೋಲ್ ಆರ್ತೆ, ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಾ ಹೋಗು ತ್ತಾರೆ. ಕೊನೆಯಲ್ಲಿ ಒಂದು ಭೂಗೋಳ(ಗ್ಲೋಬ್) ಕಾಣುತ್ತದೆ. ಅದೊಂದು ಬಿಳಿ ಭೂಗೋಳ. ಕುತೂಹಲಭರಿತರಾಗುವ ಅಮೋಲ್ ಆರ್ತೆ ಮನದಲ್ಲಿ ಏನೆಲ್ಲಾ ಯೋಚಿಸುತ್ತಾರೆ. ಕೊನೆಗೆ ಈ ಭೂಗೋಳವನ್ನು ರಚಿಸಿದವನಿಗೇ ಬಹುಮಾನ ನೀಡಬೇಕೆಂದು ಆಯೋಜಕರಿಗೆ ತಮ್ಮ ಒತ್ತಾಸೆಯನ್ನು ಅರಿಕೆ ಮಾಡಿಕೊಳ್ಳುತ್ತಾರೆ. ವೇದಿಕೆಯ ಮೇಲಿಂದ ಆರೋ… ಆರೋ… ಎಂಬ ಕರೆ ಮೊಳಗತೊಡಗುತ್ತದೆ.
ಆರೋಗೆ ಮೊದಲ ಬಹುಮಾನ!

ಮನೆಗೆ ಬಂದ ಆರೋನನ್ನು ಕಂಡು ಆಶ್ಚರ್ಯಚಕಿತಳಾದ ಅಮ್ಮ, ‘ಏಕಾಗಿ ನಿನಗೆ ಬಹುಮಾನ ಕೊಟ್ಟರು?’ ಎಂದು ಪ್ರಶ್ನಿಸು ತ್ತಾಳೆ. ಆಗ ಬಹುಮಾನದ ಹಿಂದಿನ ರಹಸ್ಯವನ್ನು ಆರೋ ಹೊರ ಗೆಡವುತ್ತಾನೆ. ಬಿಳಿ ಭೂಗೋಳವನ್ನು ಕಂಡ ಅಮೋಲ್ ಆರ್ತೆ, ಅದು ರಾಜ್ಯ, ದೇಶ, ಖಂಡ ಯಾವ ಗಡಿಗಳೂ ಇಲ್ಲದ, ವಿಶ್ವವೇ ಒಂದು ಎಂಬ ಸಂದೇಶ ಸಾರುತ್ತಿದೆ ಎಂದು ಭಾವಿಸಿರುತ್ತಾರೆ. ಹಾಗಾಗಿ ಆರೋಗೆ ಮೊದಲ ಬಹುಮಾನ ನೀಡಬೇಕೆಂದು ಒತ್ತಾಯಿಸಿ, ಕೊಡಿಸಿರುತ್ತಾರೆ. ಆದರೆ ಅದರ ಹಿಂದೆ ಬೇರೆಯೇ ಕಥೆಯಿರುತ್ತದೆ. ವಸ್ತುಪ್ರದರ್ಶನಕ್ಕೆಂದು ವಿದ್ಯಾರ್ಥಿಗಳೆಲ್ಲರೂ ಒಂದಿಲ್ಲೊಂದು ಚಿತ್ರ, ಸ್ತಬ್ಧಚಿತ್ರಗಳನ್ನು ರೂಪಿಸಿರುತ್ತಾರೆ. ಪ್ರೊಜೇರಿಯಾದಿಂದ ನರಳುತ್ತಿದ್ದ ಆರೋಗೆ ಅಂತಹ ಏನನ್ನೂ ರೂಪಿಸಲು ಸಾಧ್ಯವಾಗಿರಲಿಲ್ಲ. ಶಾಲೆಯಲ್ಲಿದ್ದ ಭೂಗೋಳವೊಂದು ಆತನ ಕಣ್ಣಿಗೆ ಬಿತ್ತು, ಪಕ್ಕದಲ್ಲೇ ಬಣ್ಣದ ಡಬ್ಬಿಯೂ ಕಂಡಿತು. ಆ ಭೂಗೋಳಕ್ಕೆ ಸುಖಾಸುಮ್ಮನೆ ಬಿಳಿ ಬಣ್ಣವನ್ನು ಬಳಿದ ಆರೋ, ವಸ್ತುಪ್ರದರ್ಶನದಲ್ಲಿಟ್ಟಿರುತ್ತಾನೆ!!

“ಪಾ” ಚಿತ್ರದಲ್ಲಿ ಎರಡೆರಡು ಅರ್ಥವನ್ನು ಕೊಡುವ ಇಂತಹ ಹಲವಾರು ದೃಶ್ಯಗಳಿವೆ.

ಆ ಹುಚ್ಚ ಎಂಪಿಗೆ(ಸಂಸದನಿಗೆ) ತಲೆಯೇ ಇಲ್ಲ, ನಾನು ಮಾಡಿದ್ದೇನೋ, ಆತ ಅಂದುಕೊಂಡಿದ್ದೇನೋ ಎಂದು ಗೇಲಿ ಮಾಡುತ್ತಾ ಆರೋ ಮಲಗಲು ಹೋಗುತ್ತಾನೆ. ಇತ್ತ ಅಮ್ಮ ಟಿವಿ ಆನ್ ಮಾಡುತ್ತಾಳೆ. ಚಾನೆಲ್ಲೊಂದರಲ್ಲಿ ಆರೋನ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಸುದ್ದಿ ಬಿತ್ತರವಾಗುತ್ತಿರುವುದು ಕಾಣುತ್ತದೆ. ಅಂದು ಮೆಚ್ಚಿ ಬಹುಮಾನ ಕೊಡಿಸಿದ್ದ ಆ ಹುಚ್ಚು ಸಂಸದ ಅಮೋಲ್ ಆರ್ತೆ ಮತ್ತಾರೂ ಅಲ್ಲ ಆರೋನ ಅಪ್ಪ!

‘ಪಾ’ ಚಿತ್ರ ಗರಿಗೆದರುತ್ತಾ ಹೋಗುವುದೇ ಇಲ್ಲಿ. ಅಮೋಲ್ ಆರ್ತೆ ಒಬ್ಬ ರಾಜಕಾರಣಿಯ ಮಗ. ಆಕ್ಸ್‌ಫರ್ಡ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುತ್ತಾನೆ. ವಿದ್ಯಾ ಕೂಡ ಅಲ್ಲೇ ಮೆಡಿಸಿನ್ ಕಲಿಯುತ್ತಿರುತ್ತಾಳೆ. ಇಬ್ಬರ ನಡುವೆ ಸ್ನೇಹ ಮೊಳಕೆಯೊಡೆದು ಹಾಸಿಗೆವರೆಗೂ ಕರೆದೊಯ್ಯುತ್ತದೆ. ವಿದ್ಯಾ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ಅಮೋಲ್‌ನನ್ನು ನಿದ್ದೆಗೆಡಿಸುತ್ತದೆ. ನನಗೆ ಈ ಹೆಂಡತಿ, ಮಕ್ಕಳು ಇದ್ಯಾವುದರಲ್ಲಿಯೂ ಆಸಕ್ತಿಯಿಲ್ಲ. ನಾನೊಬ್ಬ ಒಳ್ಳೆಯ ರಾಜಕಾರಣಿಯಾಗಬೇಕು. ಅದೇ ನನ್ನ ಇಚ್ಛೆ ಹಾಗೂ ಮಹತ್ವಾಕಾಂಕ್ಷೆ. ಗರ್ಭಪಾತ ಮಾಡಿಸು ಎಂದು ಒತ್ತಾಯಿಸುತ್ತಾನೆ. ಮಗು ಹಾಗೂ ಬಾಯ್‌ಫ್ರೆಂಡ್ ಇಬ್ಬರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಇಕ್ಕಟ್ಟಿನ ಪ್ರಸಂಗ ಬಂದಾಗ ಬಾಯ್‌ಫ್ರೆಂಡ್‌ನನ್ನೇ ಬಿಟ್ಟು ಭಾರತಕ್ಕೆ ಮರಳುವ ವಿದ್ಯಾ, ಅಮ್ಮನ ಮನೆ ಸೇರಿ ಆರೋನಿಗೆ ಜನ್ಮ ಕೊಡುತ್ತಾಳೆ. ದುರದೃಷ್ಟವಶಾತ್, ಆರೋನಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ಪ್ರೊಜೇ ರಿಯಾ ರೋಗವಿರುತ್ತದೆ. ಈ ವಿಷಯ ಗೊತ್ತಾದಾಗ ವಿದ್ಯಾ, ತೀವ್ರ ಬೇಸರಕ್ಕೊಳಗಾದರೂ ನಿಜವಾದ ಜೀವನ ಪ್ರೀತಿ ಅನಾವರಣ ಗೊಳ್ಳುತ್ತಾ ಹೋಗುವುದು ಅಲ್ಲಿಂದಲೇ. ಮುಂದೇನಾಯಿತು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ದಯವಿಟ್ಟು ಚಿತ್ರವನ್ನೇ ನೋಡಿ. ಆದರೆ ಆ ಚಿತ್ರವನ್ನು ನೋಡುತ್ತಿದ್ದರೆ ಒಬ್ಬ ತಾಯಿಯ ಪ್ರೀತಿ ಎಂಥದ್ದು, ಅಪರಿಮಿತ ಪ್ರೀತಿ ರೋಗಪೀಡಿತರ ಬದುಕನ್ನೂ ಹೇಗೆ ಅರ್ಥಪೂರ್ಣಗೊಳಿಸಬಲ್ಲದು ಎಂಬುದಕ್ಕೆ ‘ಪಾ’ ಚಿತ್ರ ಒಂದು ಅತ್ಯುತ್ತಮ ಉದಾಹರಣೆ. ತಮ್ಮ ಮಕ್ಕಳು ಅನುಭವಿಸುತ್ತಿರುವ ನೋವನ್ನು ಕಂಡು ಪ್ರತಿಕ್ಷಣವೂ ನರಳುವ, ಸಾಯುವ ತಂದೆತಾಯಂದಿರನ್ನು ನಾವು ನೋಡಿದ್ದೇವೆ. ಆದರೆ ‘ಪಾ’ದಲ್ಲಿ ರೋಗವನ್ನಾಗಲಿ, ಅದರ ತೀವ್ರತೆಯನ್ನಾಗಲಿ, 13ನೇ ವರ್ಷಕ್ಕೇ ಬದುಕನ್ನು ಮೊಟಕುಗೊಳಿಸಲಿರುವ ವಿಧಿಯ ಲೀಲೆಯನ್ನಾಗಲಿ ನೀವು ಕಾಣುವುದಿಲ್ಲ. Life is a celebration! ಅದು ಎಷ್ಟೇ ಕ್ಷಣಿಕವಾಗಿರಲಿ ಅಲ್ಪ ಬದುಕನ್ನೂ ಹೇಗೆ ಅರ್ಥಪೂರ್ಣವಾಗಿ ಕಳೆಯಬಹುದು ಎಂಬುದು ಆರೋನಲ್ಲಿ ಕಾಣಬಹುದಾದರೆ, ನತದೃಷ್ಟ ಮಕ್ಕಳ ಬದುಕನ್ನೂ ಹೇಗೆ ಅರ್ಥಪೂರ್ಣಗೊಳಿಸಬಹುದು ಎಂಬುದು ವಿದ್ಯಾ ಎಂಬ ಅಮ್ಮ ತೋರಿಸುತ್ತಾಳೆ. ಅದರಲ್ಲೂ ಎರಡು ದೃಶ್ಯಗಳಂತೂ ತೀರಾ ಮನಮುಟ್ಟುವಂತಿವೆ. ಆರೋ ತನ್ನ ಮಗನೆಂಬುದು ಅಮೋಲ್‌ಗೆ ಗೊತ್ತಾದ ಬಳಿಕ ಮರಳಿ ವಿದ್ಯಾಳ ಜತೆ ಸೇರಲು ಮುಂದಾಗುತ್ತಾನೆ. ವಿದ್ಯಾ ಮಾತ್ರ ಯಾವ ಆಸಕ್ತಿಯನ್ನೂ ತೋರುವುದಿಲ್ಲ. ಗರ್ಭದಲ್ಲಿದ್ದ ತನ್ನ ಕುಡಿಯನ್ನೇ ತೆಗೆಸಿಹಾಕು, ನನಗೆ ಕರಿಯರ್ರೇ ಮುಖ್ಯ ಎಂದಿದ್ದ ಅಮೋಲ್ ಬಗ್ಗೆ ಅವಳ ಮನದಲ್ಲಿ ಯಾವ ಪ್ರೀತಿಯೂ ಉಳಿದಿರಲಿಲ್ಲ. ಆ ಸಂದರ್ಭವನ್ನು ಅತ್ತೆ ‘ಬಮ್’(ಅರುಂಧತಿ ನಾಗ್) ಒಂದೇ ಮಾತಿನಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಡುತ್ತಾಳೆ.

“ಏಕ್ ಔರತ್ ಅಕೇಲಿ ಅಪ್ನೆ ಬಚ್ಚೇ ಕೋ ಪಾಲ್ತಿ ಹೈ, ಉಸ್ಕಾ ದಿಲ್ ಸಕ್ತ್ ಹೋ ಜಾತಾ ಹೈ, ನರ್ಮ್ ಸಿರ್ಫ್ ಅಪ್ನೇ ಬಚ್ಚೇ ಕೆ ಲಿಯೇ”!

ಒಂದು ಹೆಣ್ಣು ಏಕಾಂಗಿಯಾಗಿ ತನ್ನ ಮಗುವನ್ನು ಸಾಕುತ್ತಾ ಹೋದಂತೆ ಆಕೆಯ ಮನಸ್ಸು ಎಲ್ಲರ ವಿಷಯದಲ್ಲೂ ಕಲ್ಲಾಗುತ್ತಾ ಹೋಗುತ್ತದೆ ತನ್ನ ಮಗುವೊಂದನ್ನು ಬಿಟ್ಟು. ಎಂಥ ಅರ್ಥಗರ್ಭಿತ ಮಾತು! ಗಂಡನನ್ನು ಕಳೆದುಕೊಂಡು, ಗಂಡನಿಂದ ತಿರಸ್ಕೃತಳಾಗಿ ಅಥವಾ ಪರಿಸ್ಥಿತಿಯ ಪ್ರಕೋಪಕ್ಕೆ ಒಳಗಾಗಿ ಏಕಾಂಗಿಯಾಗಿ ಮಕ್ಕಳನ್ನು ಸಾಕಿ-ಸಲಹುವ ಅಮ್ಮಂದಿರ ಮನಸ್ಥಿತಿಯೂ ಹೀಗೆ ಇರುತ್ತದೆ. ಮಕ್ಕಳ ಬಗ್ಗೆ ಅಂತಹ ಪೊಸೆಸಿವ್‌ನೆಸ್ ಬೆಳೆಸಿಕೊಂಡಿ ರುತ್ತಾರೆ, ಅದರ ಹಿಂದೆ ಅಂತಹ ಉತ್ಕಟ ಪ್ರೀತಿ ಅಡಗಿರುತ್ತದೆ. ಅದರಲ್ಲೂ “ಆರೋ ನನ್ನ ಮಗನೂ ಹೌದು” ಎಂದು ಅಮೋಲ್ ಹಕ್ಕು ಪ್ರತಿಪಾದಿಸುವಂತೆ ಮಾತನಾಡಿದಾಗ, ಕೆರಳಿ ಕೆಂಡಾಮಂಡಲವಾಗುವ ವಿದ್ಯಾ, “ಹುಟ್ಟಿಸಿದ ಮಾತ್ರಕ್ಕೆ ನೀನು ಅಪ್ಪನಾಗುವುದಿಲ್ಲ”(By lending your bloody sperm you cannot become his father) ಎನ್ನುತ್ತಾಳೆ. ಈ ಮಾತು ಇಡೀ ಗಂಡು ಕುಲವೇ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ.

ಅಂದಮಾತ್ರಕ್ಕೆ ಚಿತ್ರ ಬಹಳ ಫಿಲಾಸಫಿಕಲ್ ಆಗಿದೆ ಎಂದು ಭಾವಿಸಬೇಡಿ. ರೋಗವನ್ನಿಟ್ಟುಕೊಂಡು ನಿಮ್ಮ ಕಣ್ಣಲ್ಲಿ ನೀರು ತರಿಸಲು, ಅನುಕಂಪವನ್ನುಂಟುಮಾಡಲು ಕಿಂಚಿತ್ತೂ ಪ್ರಯತ್ನಿಸಿಲ್ಲ. ಅರ್ಥಪೂರ್ಣ ತಿಳಿಹಾಸ್ಯವೇ ಅದರಲ್ಲಿ ಎದ್ದು ಕಾಣುವ ಅಂಶ. ಒಮ್ಮೆ ನಮ್ಮ ಪಾರ್ಲಿಮೆಂಟ್ ನೋಡಲು ಆರೋ ಅಮೋಲ್ ಜತೆ ದಿಲ್ಲಿಗೆ ಹೋಗುತ್ತಾನೆ. ಅಮೋಲ್ ಯುವ ಸಂಸದ. ಸದಾ ಶುಭ್ರ ಬಿಳಿ ಕುರ್ತಾ, ಪೈಜಾಮ ಧರಿಸಿರುತ್ತಾನೆ. ಸಾಮಾನ್ಯವಾಗಿ ನಮ್ಮ ರಾಜಕಾರಣಿಗಳು ಧರಿಸುವುದೂ ಬಿಳಿ ವಸ್ತ್ರಗಳನ್ನೇ. ಅದನ್ನು ಗಮನಿಸಿದ ಆರೋಗೆ ಕುತೂಹಲವುಂಟಾಗುತ್ತದೆ.
ಆರೋ: ನಮ್ಮ ರಾಜಕಾರಣಿಗಳೇಕೆ ಯಾವಾಗಲು ಬಿಳಿ ಬಟ್ಟೆ ಹಾಕುತ್ತಾರೆ?
ಅಮೋಲ್: ಅದು… ಅದು… ಪರಿಶುದ್ಧತೆಯ ಸಂಕೇತ.
ಆರೋ ಸುಮ್ಮ ನಾಗುವುದಿಲ್ಲ….
ಆರೋ: ನೋಡು… ಯಾರಾದರೂ ಸತ್ತಾಗ ಮನೆಯವರು ಸೂತಕದ ಸಂಕೇತವಾಗಿ ಬಿಳಿ ಬಟ್ಟೆ ಧರಿಸುತ್ತಾರೆ. ನಮ್ಮ ರಾಜಕಾರಣಿ ಗಳೇಕೆ ಬಿಳಿ ಬಟ್ಟೆ ಧರಿಸುತ್ತಾರೆಂದರೆ ದೇಶ ಸಾಯುತ್ತಿದೆ!!

ಅವನ ಹಾಸ್ಯಪ್ರeಯಂತೂ ಹೇಳಿತೀರದು. ಸಾವನ್ನು ಪಕ್ಕದಲ್ಲೇ ಇಟ್ಟುಕೊಂಡು ಕುಳಿತಿದ್ದರೂ ಆರೋ ಮಾತ್ರ ಶಾಶ್ವತವಾಗಿ ಬದುಕಿರುವವರಂತೆ ಇರುತ್ತಾನೆ. ಕೊನೆಯ ದೃಶ್ಯ. ಆರೋ ಮರಣಶಯ್ಯೆಯ ಮೇಲೆ ಮಲಗಿರುತ್ತಾನೆ. ಅಜ್ಜ(ಅಮೋಲ್‌ನ ತಂದೆ) ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದಿರುತ್ತಾನೆ.

ಅಜ್ಜ: ಮಗು… ಬೇಗ ಹುಷಾರಾಗು… ನಾವು ಆಟ ಆಡೋಣ, ದೇಶ ಸುತ್ತೋಣ.
ಆರೋ: ನನ್ನ ಹತ್ತಿರ ಟೈಮ್ ಇಲ್ಲ!
ಅಜ್ಜ: ಯಾರು ಹೇಳಿದ್ದು, ನಿನಗೆ ಏನೂ ಆಗುವುದಿಲ್ಲ.
ಆರೋ: ಟೈಮ್ ಇಲ್ಲ. ವಿಸಿಟಿಂಗ್ ಟೈಮ್ ಮುಗಿದಿದೆ!!
ಅಂದರೆ ರೋಗಿಗಳನ್ನು ನೋಡಲು ಆಸ್ಪತ್ರೆಯಲ್ಲಿ ನಿಗದಿಪಡಿಸ ಲಾಗಿರುವ ‘ವಿಸಿಟಿಂಗ್ ಅವರ್‍ಸ್’ ಬಗ್ಗೆ ಆರೋ ಹೇಳುತ್ತಿದ್ದಾನೆ ಎಂದು ಗೊತ್ತಾಗಿ ನೀವು ನಕ್ಕರೂ ಅದರ ಗೂಢಾರ್ಥ(ಸಾವು ಸನ್ನಿಹಿತ) ಅರ್ಥವಾದ ಕೂಡಲೇ ಮನಸ್ಸು ಭಾರವಾಗುತ್ತದೆ. ಇಡೀ ಚಿತ್ರದಲ್ಲಿ ಕಣ್ಣಲ್ಲಿ ನೀರು ತುಂಬಿಕೊಳ್ಳುವುದು ಇದೊಂದೇ ಸಂದರ್ಭದಲ್ಲಿ ಮಾತ್ರ. ಆರೋ ಮೊಟ್ಟಮೊದಲ ಬಾರಿಗೆ ಶಾಲೆಗೆ ಹೋದಾಗ ಅಚಾನಕ್ಕಾಗಿ ಆರೋನನ್ನು ನೋಡಿದ ಬಾಲಕಿ ಯೊಬ್ಬಳು ಚೀರಿಕೊಂಡು ಓಡಿಹೋಗುತ್ತಾಳೆ. ಅವನ ವಿಚಿತ್ರ ರೂಪವನ್ನು ಒಮ್ಮೆಲೆ ಕಂಡ ಅವಳು ದಿಗಿಲುಗೊಂಡು ಓಡಿ ಹೋಗಿರುತ್ತಾಳೆ. ಆರೋ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ವಿದ್ಯಾರ್ಥಿಗಳೆಲ್ಲರ ಜತೆಯಲ್ಲೂ ಬೆರೆಯುತ್ತಿದ್ದ ಆರೋ, ಅವಳನ್ನು ಮಾತ್ರ ಎಂದೂ ಮಾತನಾಡಿಸುವುದಿಲ್ಲ. ಆರೋ ಕೊನೆ ಕ್ಷಣವನ್ನು ಎದುರು ನೋಡುತ್ತಾ ಆಸ್ಪತ್ರೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಬರುವ ಆ ಬಾಲಕಿ, ‘ಸಾರಿ’ ಎಂಬ ಪದದಲ್ಲೇ ಆರೋನ ಚಿತ್ರವನ್ನು ಬರೆದಿರುವುದನ್ನು ಮುಂದೆ ಹಿಡಿಯುತ್ತಾಳೆ. ಆಗಲೂ ಆರೋನ ಮನಸ್ಸು ಕರಗುವುದಿಲ್ಲ. ಆಗ ಅವಳೊಂದು ಮಾತು ಹೇಳುತ್ತಾಳೆ.

“ಗಲತಿ ಕರ್‍ನೆ ವಾಲಾ ಗಲತಿ ಸೆಹ್ನೆ ವಾಲೆ ಸೆ ಜ್ಯಾದಾ ಸೆಹನ್ ಕರ್ತಾ ಹೈ”.

ತಪ್ಪಿನಿಂದ ಸಂಕಷ್ಟ ಎದುರಿಸುವವರಿಗಿಂತ ತಪ್ಪು ಮಾಡುವವರೇ ಹೆಚ್ಚು ನೋವುಣ್ಣುತ್ತಾರೆ ಎಂಬ ಅವಳ ಮಾತು ನಿಜಕ್ಕೂ ಅದ್ಭುತ. “ಪಾ” ಚಿತ್ರವನ್ನು ನೋಡಿದ ನಂತರ ಅದರಲ್ಲಿನ ಸಂದೇಶ ಮತ್ತು ಜೀವನ ಪ್ರೀತಿಯನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆನಿಸಿತು. ನಮ್ಮೆಲ್ಲರ ಮನೆ, ಕುಟುಂಬ, ನೆಂಟರಿಷ್ಟರಲ್ಲೂ ಕೂಡ ಆರೋಗ್ಯವನ್ನೋ, ಅಂಗಾಂಗಗಳನ್ನೋ, ಇಂದ್ರಿಯಗಳನ್ನೋ ಕಳೆದುಕೊಂಡವರಿರುತ್ತಾರೆ. ನಾವು ಹೇಗೆ ವರ್ತಿಸಿ ಬಿಡುತ್ತೇವೆಂದರೆ ಯಾರಾದರೂ ಹಾಸಿಗೆ ಹಿಡಿದಿದ್ದಾರೆ ಎಂದರೆ ಉಳಿದವರು ಕೊರಗಲು ಆರಂಭಿಸಿ ಅವರ ಜೀವನವನ್ನು ಇನ್ನೂ ನರಕ ಮಾಡಿ ಬಿಡುತ್ತೇವೆ. ಒಂದು ಸಾರಿ ಆರೋ ಪ್ಲೇ ಗ್ರೌಂಡ್‌ನಲ್ಲಿ ಆಟವಾಡುತ್ತಿರುತ್ತಾನೆ. ಅವನ ವಿಚಿತ್ರ ರೂಪವನ್ನು ಕಂಡ ಒಬ್ಬಾಕೆ ಬಂದು, “ಇವನ್ಯಾರು?’ ಎಂದು ಪ್ರಶ್ನಿಸುತ್ತಾಳೆ.

ವಿದ್ಯಾ: ನನ್ನ ಮಗ
ಆಕೆ: ಏನಾಗಿದೆ?
ವಿದ್ಯಾ: ಅವನಿಗೆ ಪ್ರೊಜೇರಿಯಾ ಎಂಬ ರೋಗವಿದೆ. ಅದು ಕೋಟಿಗೊಬ್ಬರಿಗೆ ಮಾತ್ರ ಬರುತ್ತದೆ. He is a lucky boy!! ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.

ಒಮ್ಮೆ ‘ಪಾ’ ಚಿತ್ರವನ್ನು ನೋಡಿ, ನೀವು ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡಬಹುದು.

Hats off to Amitabh Bachchan and R. Balki!

18 Responses to “‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!”

 1. Yogesh says:

  Mother: one who knows all about us, and still likes us.
  Mother: one who believes in us when we have ceased to believe in ourself.
  Mother: one who walks in when the rest of the world walked out.
  Mother: one who is there for us when she’d rather be anywhere else.
  Dear Mom,
  ”To the world you might be a person, but to me you are the world.”

 2. racthitha says:

  nijavaglu e artticle nodi tumba feel aithu neev helidhu curect sir

 3. Padmalatha says:

  Sir, Paa bagge nimma artticle odi nijavaglu ondu sala e film nodbeku antha anisuthidhe, and kandithavaglu naan nodthene.

 4. Puneeth says:

  ತುಂಬ ಒಳ್ಳೆ article

 5. nivedita says:

  Hello!
  One of the imp symptom of progeria is dwarfism(stunted physical growth).Auro’s 6ft 2″ ht,looks slightly odd in Paa and looks like the director is being influenced by Benjamin Button though there the 7yr old with age appropriate mental development wil have 80 yr old physique(the make up and looks were fantastic).
  Paa story line is good but somehow i could’t feel as much as your article projects.

 6. Indu says:

  Hi,

  Agree with your thoughts……thats exactly what i felt coming out of the theater….. love for life!!

 7. panduranga says:

  Hello, this is pandu sir .I am very good fan of urs pls one sincere request that pls pls i lost the article about gandhi on accation oct 2nd may b (2005)
  heli gandhiyavare uttarisi e prashnegalige,

 8. sams khan says:

  sorry…i dont have any comment y to ur all artical is ultimate….

 9. Soujanya N Jain says:

  Yes..its really good Movie , ‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು! ನಿಜವಾದ ಮಾತು…!

 10. Manju says:

  Really i am hard Fan of UR ALL Articles….
  PAA – No More Words Abt Boss,Nag & Vidya……….

 11. ranganth swamy says:

  good article

 12. Very good article sir..

 13. vinutha says:

  Sir i’m not reading your articles through your series books all are very good articles

 14. vinutha says:

  Sorry there is a mistake it is reading your article

 15. vinutha says:

  Sir i’m reading your articles through your book series of articles, all are very good articles and this one among it.

 16. Mallanagouda says:

  Hi sir.. Your article is superb.. I am eager to watch paa now.. Thank you for ur article.. I read many of ur articles.. All articles are superb.. Dhanyvadagalu..

 17. sathya says:

  hi sir im following u sir ” sir nimma lekhaniyolagiruvudu kevala shahiyalla adodndu deshakkagi praana thettha adesto mahaan vyakthigala desha premada raktha ” hats of u sir nimma lekhani khadgadanthe horadi naavu nimmondige sadaa idde irutheve
  “jai hind”
  “jai bharath maatha ”

  ur follower
  ~SATHYA~

 18. ADRUSH says:

  Respected sir,
  im a BIG FAN of your books & article.
  In your web site bettale jagattu 1,3,4 not openning
  please take action

  Your books & articles BIG FAN
  adrush