Date : 29-08-2016 | no Comment. | Read More
ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು! ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ. […]
Date : 27-08-2016 | no Comment. | Read More
ಕೊಟ್ಟ ಊಟ ಇನ್ನೂರು ಕೋಟಿ, ಇದೇ ಹಸಿದವರ ಪಾಲಿನ ಪುಣ್ಯಕೋಟಿ! ಸಿಎನ್ಎನ್ ಚಾನೆಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಸೇವೆ ಮಾಡಿದವರನ್ನು ಕರೆಸಿ ಅವರಿಗೆ ಸಿಎನ್ಎನ್ ಹೀರೋಸ್ ಪ್ರಶಸ್ತೀ ಕೊಟ್ಟು ವಿಶ್ವದ ಎಲ್ಲ ಕ್ಷೇತ್ರದ ಗಣ್ಯರ ಮುಂದೆ ಗೌರವ ಸಲ್ಲಿಸಿ, ಅವರ ಹೋರಾಟದ ದಾರಿಯ ಕತೆಯನ್ನು ವಿಡಿಯೊ ಮೂಲಕ ಪ್ರದಶಿ೯ಸಲಾಗುತ್ತದೆ. ಇಂಥ ಕಾಯ೯ಕ್ರಮದಲ್ಲಿ ಒಮ್ಮೆ ತಮಿಳುನಾಡಿನ ನಾರಾಯಣನ್ ಕೃಷ್ಣನ್ ಅವರನ್ನು ಹೀರೋ ಆಗಿ ಕರೆಸಲಾಗಿತ್ತು. ಆ ಕಾಯ೯ಕ್ರಮ ನೋಡಿದವರಿಗೆ ಹಸಿವು ಎಷ್ಟು ಘೋರವಾದದ್ದೆಂದು ಅರಿವಿಗೆ ಬಾರದೇ ಇರದು. ನಾರಾಯಣನ್ ಫೈವ್ […]
Date : 20-08-2016 | no Comment. | Read More
ಮಪ್ಳಾ ದಂಗೆ, ಮರಾಡ್ ಹತ್ಯಾಕಾಂಡ ಮತ್ತು ಮಲಬಾರ್ ಗೋಲ್ಡ್ನ ದೇಶದ್ರೋಹ! ಅದು ಇಪ್ಪತ್ತನೆಯ ಶತಮಾನದ ಎರಡನೆಯ ದಶಕದ ಆರಂಭ. ಮಧ್ಯಪ್ರಾಚ್ಯದಲ್ಲಿ ಅಟೋಮನ್ ಸಾಮ್ರಾಜ್ಯದ ಖಲೀಫನನ್ನು ಮತ್ತೆ ಕೂರಿಸಬೇಕು ಎನ್ನುವ ಕೂಗು ಏಳುತ್ತಿತ್ತು. ಅದು ಚಳವಳಿಯ ರೂಪಕ್ಕೂ ಬಂತು. ಸಾಗರದಾಚೆ ಆರಂಭವಾದ ಈ ಚಳವಳಿ ಸಂಪೂರ್ಣ ಪ್ಯಾನ್ ಇಸ್ಲಾಮ್ನ ವಿಚಾರಧಾರೆಯಾಗಿ ಬದಲಾಯಿತು. ಅಂದರೆ ಈ ಉದ್ದೇಶದ ಈಡೇರಿಕೆಗಾಗಿ ಜಗತ್ತಿನ ಮುಸ್ಲಿಮರೆಲ್ಲರೂ ಒಂದೇ ಸೂರಿನಡಿಯಲ್ಲಿ ಬರಬೇಕು, ಬೆರೆಯಬೇಕು ಎನ್ನುವ ಧೋರಣೆಯನ್ನು ಇಸ್ಲಾಂ ಜಗತ್ತು ಹೊಂದಿತ್ತು. ಚಳವಳಿ ಶೀಘ್ರವಾಗಿ ಹಬ್ಬುತ್ತಿತ್ತು. ಆದರೆ […]
Date : 13-08-2016 | no Comment. | Read More
ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು! ಅಮ್ಮಾ ನಿನ್ನ ಎದೆಯಾಳದಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು ಕಡಿಯಲೊ ನೀ ಕರುಳ ಬಳ್ಳಿ-ಒಲವೂಡುತ್ತಿರುವ ತಾಯೆಬಿಡದ ಬುವಿಯ ಮಾಯೆ? ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್ರಾವ್ ತಮ್ಮ ಕವಿತೆಯೊಂದರಲ್ಲಿ ಹಿಡಿದಿಟ್ಟ ರೀತಿ ಇದು. ಮಗುವೊಂದು ಜಾರಿ ಬಿದ್ದಾಗ ಬಾಯಲ್ಲಿ ಬರುವ ಮೊದಲನೇ ಕೂಗು ಅದೇ ‘ಅಮ್ಮಾ?’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ […]
Date : 06-08-2016 | no Comment. | Read More
ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು? ಕೊಡಗಿನಲ್ಲೀಗ ನಾಟಿ ಕೆಲಸದ ಬಿರುಸು. ಗದ್ದೆ ಕೆಲಸದ ಹೊತ್ತಲ್ಲಿ ಕೊಡಗಿನ ಪೇಟೆಗಳು ಎಂದಿಗಿಂತ ಖಾಲಿಯಾಗಿ ಕಾಣುತ್ತವೆ. ಏಕೆಂದರೆ ಮಳೆ ಇದ್ದಾಗಲೇ ಗದ್ದೆಗಿಳಿದುಬಿಡಬೇಕು ಎನ್ನುವ ರೈತರ ತುರಾತುರಿ. ಅಂಥ ತುರಾತುರಿಯ ನಡುವೆ ಕೊಡಗಿನ ಮಾಜಿ ಸೈನಿಕರು ಬೇರೊಂದು ಕಾಯ೯ದಲ್ಲಿ ತುರಾತುರಿಯಲ್ಲಿದ್ದರು. ಈ ತುರಾತುರಿಯಲ್ಲಿ ಅವರಿಗೆ ಕೃಷಿ ಮರೆತುಹೋಗಿತ್ತು. ಮನೆಗೆ ಮರಳುವುದು ತಡವಾಗುತ್ತಿತ್ತು. ಪೇಟೆಯ ಸ್ಮಾರಕಗಳ ಅಲಂಕಾರ, ಪ್ರತಿಮೆಗಳಿಗೆ ಬಣ್ಣ, ಆಗಮಿಸುವ ಅತಿಥಿಗಳ ಸತ್ಕಾರಕ್ಕೆ ಸಮಿತಿಗಳ ರಚನೆ ಕಳೆದೊಂದು ತಿಂಗಳ […]
Date : 30-07-2016 | no Comment. | Read More
ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ! ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಮೊದಲು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ… ದಿನಾಂಕ: 24-11-2006. ಕೆ. ವೋಹ್ರಾ, ಹಿರಿಯ ಜಂಟಿ […]
Date : 23-07-2016 | no Comment. | Read More
ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್! ಅದುವರೆಗೆ ತಣ್ಣಗಿದ್ದ ಕ್ರೀಡಾಲೋಕಕ್ಕೆ 80ರ ದಶಕದ ಆರಂಭದಲ್ಲಿ ಹೊಸ ಅಲೆಯೊಂದು ಅಪ್ಪಳಿಸಿತು. ಒಂದು ರೀತಿಯ ಕ್ರೇಜ್, ಮೇನಿಯಾ ಆವರಿಸಿಕೊಂಡಿತು. ಅದಕ್ಕೆ ಒಂದು ಕಾರಣ, ಟಿವಿ ಪೆಟ್ಟಿಗೆ ಮನೆಮನೆಗೆ ಬಂದು ಕ್ರೀಡಾಪ್ರೇಮಿಗಳ ಕುತೂಹಲವನ್ನು ಏರಿಸಿದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆ ಹೊತ್ತಲ್ಲಿ ಟಿವಿ ಪ್ರವೇಶಿಸಿರದಿದ್ದರೂ ರೇಡಿಯೋ ಕಾಮೆಂಟರಿ ಗಳು ಕ್ರೀಡೆಗಳ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ್ದವು. ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತೊಂದು […]
Date : 16-07-2016 | no Comment. | Read More
ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ ! ಡಿವೈಎಸ್ಪಿ ಎಂ.ಕೆ ಗಣಪತಿ ಉಟ್ಟ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಾಗ ತಕ್ಷಣ ಮನಸ್ಸು ಓಡಿದ್ದು 20 ವಷ೯ಗಳ ಹಿಂದೆ. ಆ ಘಟನೆಗೂ ಇಂದಿನ ಗಣಪತಿ ಪ್ರಕರಣಕ್ಕೂ ದಶಕ ಎರಡು ಕಳೆದರೂ ಎಷ್ಟೋಂದು ಸಾಮ್ಯತೆಯಿದೆ ಹಾಗೂ ದೇಶ ಕಾಂಗ್ರೆ ಸ್ ಮುಕ್ತವಾಗದ ಹೊರತು ವಷ೯ ಇಪ್ಪತ್ತಲ್ಲ, ನೂರಿಪ್ಪತ್ತಾದರೂ ದಕ್ಷರ ಜೀವಕ್ಕೆ ಬೆಲೆಯಿಲ್ಲ ಎಂದೇ ಮನಸ್ಸು ಹೇಳುತ್ತಿತ್ತು. 20 ವಷ೯ಗಳ ಹಿಂದೆ ಇದ್ದ ಅದೇ ರಾಜಕೀಯ ಒತ್ತಡ, ಪೊಲೀಸ್ […]
Date : 09-07-2016 | no Comment. | Read More
ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ! ಮಣಿಶಂಕರ್ ಐಯ್ಯರ್ಗೆ ಸದಾ ಒಂದು ಚಾಳಿ ಇದ್ದೇ ಇದೆ. ಮೋದಿಯನ್ನು ವಿರೋಧಿಸುವುದು. ಲೋಕಸಭೆ ಚುನಾವಣೆಗೆ ಮುನ್ನ ಮಣಿಶಂಕರ್ ಐಯ್ಯರ್ರನ್ನು ಎಬಿಪಿ ನ್ಯೂಸ್ ಮಾತನಾಡಿಸಿದಾಗ, ‘ಮೋದಿ ಪ್ರಧಾನಿಯಾಗುವುದೇ ಇಲ್ಲ’ ಎಂದು ಬುರುಡೆ ಭವಿಷ್ಯ ನುಡಿದಿದ್ದರು. ಐಯ್ಯರ್ ಸಾಹೇಬರ ಹೆಸರು ಸುದ್ದಿಯಲ್ಲಿದ್ದದ್ದು ಇಂಥದ್ದೇ ಮಾತುಗಳಿಂದ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರಾಗಿದ್ದ ಪಿವಿ ನರಸಿಂಹ ರಾವ್ ಬಗ್ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ರಾವ್ ‘ಭಾರತ ಹಿಂದೂ ರಾಷ್ಟ್ರ’ ಎಂದು […]
Date : 02-07-2016 | no Comment. | Read More
ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ! ಒಂದೆರಡು ತಿಂಗಳ ಹಿಂದೆ ದೆಹಲಿಯಿಂದ ವಿಮಾನದಲ್ಲಿ ವಾಪಸಾಗುವಾಗ ‘ಇಂಡಿಯಾ ಟುಡೆ’ ಮ್ಯಾಗಝಿನ್ ಕೈಗೆ ಸಿಕ್ಕಿತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಾಗ ಅಚಾನಕ್ಕಾಗಿ ಒಬ್ಬ ಪೊಲೀಸ್ ಅಧಿಕಾರಿಯ -ಪೋಟೋ ಕಣ್ಣಿಗೆ ಬಿತ್ತು. ‘ಈ ಐಪಿಎಸ್ ಅಧಿಕಾರಿ ರಾಜಸ್ಥಾನದ ಅತಿ ದೊಡ್ಡ ಲಂಚ ಪ್ರಕರಣವನ್ನು ಬಯಲಿಗೆಳೆಯುವ ಮೊದಲು 7 ವರ್ಷ ಜೈಲಿನಲ್ಲಿದ್ದರು’ ಎಂಬ ಶೀರ್ಷಿಕೆಯಡಿ ಒಂದು ಕುತೂಹಲಕಾರಿ ಸ್ಟೋರಿ ಇತ್ತು. ಆದರೆ ಬಹಳ ಖುಷಿಕೊಟ್ಟ ಸಂಗತಿಯೇನೆಂದರೆ ಆ ಐಪಿಎಸ್ ಅಧಿಕಾರಿ ನಮ್ಮ […]