Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!

ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!

ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!

ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಮೊದಲು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ…

ದಿನಾಂಕ: 24-11-2006.

ಕೆ. ವೋಹ್ರಾ, ಹಿರಿಯ ಜಂಟಿ ಆಯುಕ್ತ, ಕೇಂದ್ರ ಜಲಸಂಪನ್ಮೂಲ ಖಾತೆ, ಭಾರತ ಸರಕಾರ, ಶ್ರಮ ಶಕ್ತಿ ಭವನ, ರಫಿ ಮಾಗ೯, ಹೊಸದೆಹಲಿ. ನಾನು ಈ ಮಧ್ಯಂತರ ಅಜಿ೯ಯನ್ನು ಓದಿ, ಅಥೈ೯ಸಿಕೊಂಡು ದೃಢೀಕರಿಸುತ್ತಿದ್ದೇನೆ ಹಾಗೂ ಈ ಅಫಿಡವಿಟ್ಟಿನಲ್ಲಿರುವ ಎಲ್ಲ ಅಂಕಿ ಅಂಶ, ಸನ್ನಿವೇಶಗಳಿಗೆ ಖುದ್ದು ಸಾಕ್ಷೀಭೂತನಾಗಿ ಭಾರತ ಸರಕಾರದ ಪರವಾಗಿ ಪ್ರಮಾಣೀಕರಿಸುತ್ತಿದ್ದೇನೆ.

…..26-04-2006 ರಂದು ಕೇಂದ್ರ ಜಲ ಆಯೋಗದ(ಸಿಡಬ್ಯ್ಲೂಸಿ) ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕನಾ೯ಟಕ, ಗೋವಾ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಬೇರೆಡೆಗೆ ತಿರುಗಿಸುವ ಕನಾ೯ಟಕದ ಪ್ರಸ್ತಾವಕ್ಕೆ ಗೋವಾ ಮುಖ್ಯಮಂತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರಕಾರ(ಜಲಸಂಪನ್ಮೂಲ ಖಾತೆ) ಒಂದು ನಿಧಾ೯ರಕ್ಕೆ ಬಂದಿದೆ. ಈ ವಿವಾದವನ್ನು ಮಾತುಕತೆ ಮೂಲಕ ಸೌಹಾದ೯ಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ಅಂತರ್ ರಾಜ್ಯ ಜಲವಿವಾದ ಕಾಯಿದೆ-1956 ಹಾಗೂ ಅಂತರ್ ರಾಜ್ಯ ಜಲವಿವಾದ ನಿಯಮ 1959ರ ಅನ್ವಯ ಮುಂದಿನ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.
ಹಾಗಂತ ಸುಪ್ರೀಂ ಕೋಟ್‍೯ಗೆ ಅಫಿಡವಿಟ್ ಸಲ್ಲಿಸಲಾಯಿತು. ಆಗಿನ ಕೇಂದ್ರ ಸರಕಾರ ಯಾರದ್ದು? ಕಾಂಗ್ರೆ ಸ್ಸಿನದ್ದು. ಆಗಿನ ಪ್ರಧಾನಿ ಯಾರಾಗಿದ್ದರು? ಡಾ. ಮನಮೋಹನ್ ಸಿಂಗ್. ಆಗಿನ ಗೋವಾ ಸರಕಾರ ಯಾರದ್ದಾಗಿತ್ತು? ಕಾಂಗ್ರೆ ಸ್ಸಿನದ್ದು. ಕಾಂಗ್ರೆಸ್ ಮುಖ್ಯಮಂತ್ರಿ ಯಾರಾಗಿದ್ದರು? ಪ್ರತಾಪ್ ಸಿಂಗ್ ರಾಣೆ. ಇಲ್ಲಿಗೇ ಮುಗಿಯಲಿಲ್ಲ!

ದಿನಾ೦ಕ: 29-05-2007. ಗೋವಾದಲ್ಲಿ ವಿಧಾನಸಭೆ ಚುನಾವಣೆ ಏಪಾ೯ಡಾಗಿತ್ತು. ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಲು ಕಾಂಗ್ರೆ ಸ್‍ನ ಅಧಿನಾಯಕಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಿದ್ದರು. ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಹಳ ವೀರಾವೇಶದಿಂದ ಮಾತಿಗಿಳಿದರು. “ಯಾವುದೇ ಕಾರಣಕ್ಕೂ ಮಹದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ’ ಎಂದರು. ಮುಂದುವರಿದು, “ಈ ಮಾತಿಗೆ ನಾನು ಬದ್ಧಳಾಗಿದ್ದೇನೆ’ ಎಂದು ಸಾವ೯ಜನಿಕವಾಗಿ ಶಪಥ ಮಾಡಿದರು! ಪರಿಣಾಮವಾಗಿ ಮತ್ತೆ ಗೋವಾದಲ್ಲಿ ಕಾಂಗ್ರೆ ಸ್ ಸರಕಾರ ಬಂತು! ಸೋನಿಯಾ ಗಾಂಧಿಯವರ ವಾಗ್ದಾನ ಹಾಗೂ ತಂತ್ರಗಾರಿಕೆ ಫಲ ಕೊಟ್ಟಿತು. ದಿಗಂಬರ್ ಕಾಮತ್ ಮುಖ್ಯಮಂತ್ರಿಯಾದರು. 2005ರಿಂದ 2012ರವರೆಗೂ ಗೋವಾದಲ್ಲಿ ಇದ್ದಿದ್ದು ಕಾಂಗ್ರೆ ಸ್ ಸರಕಾರವೇ. ಇಷ್ಟೂ ಕಾಲ ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಇದ್ದಿದ್ದೂ ಕಾಂಗ್ರೆ ಸ್ ಸರಕಾರವೇ. ಕೋಟಿ೯ನಾಚೆ ಸೌಹಾದ೯ಯುತ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಸುಪ್ರೀಂ ಕೋಟಿ೯ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದ್ದು, ಕನಾ೯ಟಕ ಸರಕಾರದ ಅಭೀಪ್ರಾಯ ಕೇಳದೆ, ಗಮನಕ್ಕೆ ತಾರದೆ ನ್ಯಾಯಮಂಡಳಿ ಅಥವಾ ನ್ಯಾಯಾಧಿಕರಣವನ್ನು (ಟ್ರಿಬ್ಯೂನಲ್) ಕೇಂದ್ರ ಸರಕಾರ ಸ್ಥಾಪನೆ ಮಾಡಿದ್ದೂ ಇದೇ ಕಾಲದಲ್ಲಿ!

ಹಾಗಿರುವಾಗ, ಈಗ ಮತ್ತ್ಯಾರನ್ನೋ ಏಕೆ ದೂಷಿಸುತ್ತಿದ್ದೀರಿ ಕಾಂಗ್ರೆ ಸ್ಸಿಗರೇ?!

ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದೀರಲ್ಲ, ನಿಮ್ಮ ಪ್ರಧಾನಿ ಮನಮೋಹನ್‍ಸಿಂಗರು 2006ರಿಂದ 2014ರವರೆಗೂ ನಿದ್ರೆ ಮಾಡುತ್ತಿದ್ದರಾ? ಕೋಟಿ೯ನಾಚೆ ಸೌಹಾದ೯ಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋಟ್‍೯ ಮುಂದೆ ಹೇಳಿದವರು ಈಗೇಕೆ ನರೇಂದ್ರ ಮೋದಿಯವರತ್ತ ಬೆರಳು ತೋರುತ್ತಿದ್ದೀರಿ? ಟ್ರಿಬ್ಯೂನಲ್ ರಚನೆಯಾದಾಗ ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಐವರು ಕನಾ೯ಟಕ ಕಾಂಗ್ರೆ ಸ್ಸಿಗರು (ಮೋಯ್ಲಿ, ಕೃಷ್ಣ, ಖಗೆ೯, ಮುನಿಯಪ್ಪ, ಆಸ್ಕರ್) ಏಕೆ ಧ್ವನಿಯೆತ್ತಿರಲಿಲ್ಲ? ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದು ಆಗೇಕೆ ಒತ್ತಾಯಿಸಿರಲಿಲ್ಲ? ನ್ಯಾಯಮಂಡಳಿ ರಚಿಸುವ ಮೊದಲು ನಮ್ಮನ್ನು ಸಂಪಕಿ೯ಸಿ, ನಮ್ಮ ಗಮನಕ್ಕೆ ತನ್ನಿ, ಕಳಸ-ಬಂಡೂರಿ ಕಾಮಗಾರಿ ಮುಂದುವರಿಯುವುದಕ್ಕೆ ಅಡ್ಡಿಪಡಿಸಬೇಡಿ ಎಂದು ಆಗಿನ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರೂ ಗಮನಕ್ಕೇ ತಾರದೆ ಏಕಾಏಕಿ ನ್ಯಾಯಮಂಡಳಿಯನ್ನು ಕಾಂಗ್ರೆ ಸ್ ರಚನೆ ಮಾಡಿದ್ದೇಕೆ? 2010ರಲ್ಲಿ ನ್ಯಾಯಮಂಡಳಿಯನ್ನು ರಚನೆ ಮಾಡಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದ್ದೇನೋ ಸರಿ. ಆದರೆ ಅದಕ್ಕೆ ಬೇಕಾದ ಸ್ಥಳ, ಸಿಬ್ಬಂದಿ, ಸಲಕರಣೆ ನೀಡಲು 2012ರವರೆಗೂ, ಸುಮಾರು 3 ವಷ೯ಗಳ ಕಾಲ ವಿಳಂಬ ಮಾಡಿದ್ದೇಕೆ? ಇದೆಲ್ಲಕ್ಕಿಂತ ಮುಖ್ಯವಾಗಿ 2012ರಲ್ಲಿ ನ್ಯಾಯಮಂಡಳಿಯ ಕಲಾಪ ಆರಂಭವಾದ ಮೇಲೆ ಗೋವಾ ಸರಕಾರ ಮಧ್ಯಂತರ ಅಜಿ೯ ಸಲ್ಲಿಸಿ ಕಳಸಾ-ಬಂಡೂರಿ ಕಾಮಗಾರಿಯನ್ನು ತಡೆಯಲು ಯತ್ನಿಸಿದಾಗ ನ್ಯಾಯಮಂಡಳಿ ಅಂತಿಮ ತೀಪು೯ ಕೊಡುವವರೆಗೂ ಒಂದು ಹನಿ ನೀರನ್ನೂ ಕಳಸಾ-ಬಂಡೂರಿ ಯೋಜನೆಯಿಂದ ಮಲಪ್ರಭಕ್ಕೆ ಹರಿಸುವುದಿಲ್ಲ ಎಂದು 2014, ಏಪ್ರಿಲ್ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದೇಕೆ?

ಹಾಗ೦ತ ಕಾಂಗ್ರೆ ಸ್‍ನತ್ತ ಬೆರಳು ತೋರಿಸಿ ಬಿಜೆಪಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಖಂಡಿತ ಸಾಧ್ಯವಿಲ್ಲ! ಈ ವಿವಾದವೇ ಕಾಂಗ್ರೆ ಸ್ಸಿನ ಪಾಪದ ಕೂಸು ಎಂದು ಕೈತೊಳೆದುಕೊಳ್ಳುವುದಕ್ಕೂ ಆಗುವುದಿಲ್ಲ!

ಒಬ್ಬ ಬಿಜೆಪಿ ಸಂಸದನಾಗಿ ಹೇಳುತ್ತಿಲ್ಲ, ಇವತ್ತು ಬಹಳಷ್ಟು ಸಂಘ-ಸಂಸ್ಥೆಗಳು ಕಳಸಾ-ಬಂಡೂರಿ ಹೋರಾಟಕ್ಕೆ ಕೈಜೋಡಿಸಿರಬಹುದು, ಚಲನಚಿತ್ರತಾರೆಗಳು ಧರಣಿಯಲ್ಲಿ ಕುಳಿತೆದ್ದು ಹೋಗಿರಬಹುದು. ಆದರೆ ಈ ಯೋಜನೆಯ ಜಾರಿಗೆ ಇದುವರೆಗೂ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇ ಬಿಜೆಪಿ. 2002, ಏಪ್ರಿಲ್ 30ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದೇ ಅಟಲ್ ಬಿಹಾರಿ ವಾಜಪೇಯಿ ಸರಕಾರ! ಈ ಯೋಜನೆಗೆ 100 ಕೋಟಿ ರು. ಹಣ ನೀಡಿ ಶಂಕುಸ್ಥಾಪನೆ ಮಾಡಿ, ಯೋಜನೆ 75 ಪರ್ಸೆಂಟ್   ಪ್ರಗತಿಯಾಗಲು ಕಾರಣೀಭೂತರಾಗಿದ್ದೇ ಆಗಿನ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿಎಸ್ ಯಡಿಯೂರಪ್ಪನವರು. ಅವರ ಜತೆಗೆ ನಿಂತವರು ನೀರಾವರಿ ಸಚಿವ ಈಶ್ವರಪ್ಪ, ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಬೊಮ್ಮಾಯಿಯವರು.

ಮೊದಲೇ ಹೇಳಿದಂತೆ ಇದೇನು ಬಗೆಹರಿಸಲಾಗದಂಥ ಸಮಸ್ಯೆಯಲ್ಲ. ಮಹದಾಯಿ ನದಿ ಹುಟ್ಟುವುದು ಮುಖ್ಯವಾಗಿ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ. ಹರಿದು ಅರಬ್ಬೀ ಸಮುದ್ರ ಸೇರುವುದು ಗೋವಾದ ಪಣಜಿ ಬಳಿ. ಕನಾ೯ಟಕದಲ್ಲಿ ಇವಳು ಮಹದಾಯಿಯಾದರೆ ಗೋವಾದಲ್ಲಿ ಮಾಂಡೋವಿಯಾಗುತ್ತಾಳೆ. ಸುಮಾರು 2032 ಚದರ ಕಿ.ಮೀ. ಅಚ್ಚುಕಟ್ಟು ಪ್ರದೇಶದಿಂದ ನೀರನ್ನು ಪಡೆದುಕೊಳ್ಳುವ ಮಹದಾಯಿ ಕನಾ೯ಟಕದಲ್ಲಿ 375, ಮಹಾರಾಷ್ಟ್ರದಲ್ಲಿ 77 ಹಾಗೂ ಗೋವಾದಲ್ಲಿ 1580 ಚದರ ಕಿ.ಮೀ. ಅಚ್ಚುಕಟ್ಟು ಹೊಂದಿದ್ದಾಳೆ. ಕೇಂದ್ರ ಜಲ ಆಯೋಗದ ಅಂದಾಜಿನ ಪ್ರಕಾರ ಇಡೀ ಜಲಾನಯನ ಪ್ರದೇಶ ಸುಮಾರು 200 ಟಿಎಂಸಿ ನೀರನ್ನು ಹೊಂದಿದೆ, ಅದರಲ್ಲಿ ಕನಾ೯ಟಕದಿಂದ ಸೇರುವುದು 45 ಟಿಎಂಸಿ.

ಇತ್ತ ಕೃಷಿ ಪ್ರದೇಶ ಬಿಡಿ ಕುಡಿಯುವ ನೀರಿಗೇ ಹಾಹಾಕಾರ ಎದುರಿಸುತ್ತಿರುವ ಧಾರವಾಡ, ಗದಗ, ಬೆಳಗಾವಿಗಳು ಬಗಲಲ್ಲೇ ಇವೆ. ಹಾಗಾಗಿ ಕಳಸಾ ನಾಲೆಯಿಂದ 3.56 ಹಾಗೂ ಬಂಡೂರಿ ನಾಲೆಯಿಂದ 4 ಟಿಎಂಸಿ ನೀರನ್ನು ಮಹದಾಯಿಯಿಂದ ಮಲಪ್ರಭಾಕ್ಕೆ ತಿರುಗಿಸಿ ಈ ನಗರಗಳಿಗೆ ಕುಡಿಯುವ ನೀರು ನೀಡುವ ಕೂಗು ಆರಂಭವಾಗಿ ಮೂರೂವರೆ ದಶಕಗಳೇ ಆದವು. ಆದರೆ ಅದಕ್ಕೆ ನಿಜವಾಗಿಯೂ ಒತ್ತು ಸಿಕ್ಕಿದ್ದು 2002ರಲ್ಲಿ ಅಟಲ್ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ ನಂತರ. ಅದಾದ ಬಳಿಕ ಗೋವಾದ ಕಾಂಗ್ರೆ ಸ್ ಸರಕಾರ ಸುಪ್ರೀಂಕೋಟ್‍೯ನ ಮೊರೆ ಹೋಗಿದ್ದು, ಕೇಂದ್ರದ ಕಾಂಗ್ರೆ ಸ್ ಸರಕಾರ ಅಫಿಡವಿಟ್ಟು ಕೊಟ್ಟಿದ್ದು, ಸೋನಿಯಾ ಗಾಂಧಿಯವರು ಗೋವಾದ ಪರ ನಿಲುವು ತಳೆದಿದ್ದು, ಹೇಳದೇ ಕೇಳದೇ ನ್ಯಾಯಾಧಿಕರಣ ರಚನೆ ಮಾಡಿದ್ದು ಹಾಗೂ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದು ಎಲ್ಲವೂ ನಡೆದುಹೋದವು.

ಆದರೆ….

ಬಹಳ ವಿಷಾದದ ಸಂಗತಿಯೆಂದರೆ ಬುಧವಾರ ನ್ಯಾಯಾಧಿಕರಣ 7.56 ಟಿಎಂಸಿ ನೀರು ಬಿಡುವಂತೆ ಮಧ್ಯಂತರ ಆದೇಶ ನೀಡುವುದಕ್ಕೆ ನಕಾರ ವ್ಯಕ್ತಪಡಿಸಿದ ಕೂಡಲೇ ನಿದ್ರೆಯಿಂದೆದ್ದ ಕಾಂಗ್ರೆ ಸ್ಸಿಗರು ಪ್ರಧಾನಿ ಮೋದಿಯವರನ್ನು ದೂರಲು ಆರನಭೀಸಿದ್ದಾರೆ! ಮ್ಯೆಕಾ’ಸುರರೂ ಮೋದಿಯವರನ್ನು ದೂಷಿಸುತ್ತಿದ್ದಾರೆ. ಹಾಗೆ ದೂರುವ ಮೊದಲು ಸ್ವಲ್ಪ ಅಥ೯ ಮಾಡಿ- ಕೊಳ್ಳಿ. ಕಳೆದ ವಷ೯ ಬರದ ಹಿನ್ನೆಲೆಯಲ್ಲಿ ಮಹದಾಯಿ ವಿಚಾರ ಮತ್ತೆ ನನೆಗುದಿಗೆ ಬಿದ್ದಾಗ 2015, ಅಗಸ್ಟ್ 25ರ೦ದು ಪ್ರಧಾನಿ ಬಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸವ೯ಪಕ್ಷ ನಿಯೋಗವನ್ನು ಕೊಂಡೊಯ್ದಿದ್ದರು. ಕೋಟಿ೯ನಾಚೆ ಬಗೆಹರಿಸಿಕೊಡಿ ಎಂದು ಕೇಳಿದಾಗ ನೀವು ಮೊದಲು ಗೋವಾ ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷಗಳ(ಕಾಂಗ್ರೆ ಸ್) ಜತೆ ಮಾತನಾಡಿ ಮನವೊಲಿಸಿ, ನಂತರ ನಾನು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಮತ್ತೆ ತನ್ನ ವರಸೆ ತೋರಿಸಿದ ಕಾನಗ್ರೆ ಸ್, ಪ್ರಧಾನಿ ಹೇಳಿದ ಕೆಲಸವನ್ನು ಮರೆತು ಮಧ್ಯಸ್ಥಿಕೆ ವಹಿಸಲು ಮೋದಿ ನಕಾರ ಎಂದು ಹೇಳಿಕೆ ಕೊಟ್ಟರು. ಗೋವಾ, ಮಹಾರಾಷ್ಟ್ರಗಳ ವಿರೋಧ ಪಕ್ಷಗಳ ಜತೆ ಕನಿಷ್ಠ ನೀವಾದರೂ ಮಾತನಾಡಿ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾಜು೯ನ ಖಗೆ೯ಯವರಿಗೆ ರಾಜ್ಯ ಬಿಜೆಪಿ ಮನವಿ ಮಾಡಿ- ಕೊಂಡರೆ, ಆಯಾ ರಾಜ್ಯಗಳಲ್ಲಿ ವಿರೋಧ ಪಕ್ಷಗಳು(ಕಾಂಗ್ರೆ ಸ್) ತಮ್ಮ ರಾಜಕಾರಣಕ್ಕಾಗಿ ವಿರೋಧ ಮಾಡಿಯೇ ಮಾಡುತ್ತವೆ ಎಂದು ಪ್ರತಿಕ್ರಿಯಿಸಿದ್ದರು!

ಇಂಥ ಮನಸ್ಥಿತಿ ಏನನ್ನು ತೋರಿಸುತ್ತದೆ ಹೇಳಿ?

ಈ ಮಧ್ಯೆ, ಯಾವುದಾದರೂ ವಿಷಯ ನ್ಯಾಯಾಧಿಕರಣದ ಮುಂದಿರುವಾಗ ಅಹವಾಲು ಸಲ್ಲಿಸಿರುವ ಎಲ್ಲ ರಾಜ್ಯಗಳೂ ಒಪ್ಪಿದರೆ ಮಾತ್ರ ಸಂಧಾನ ಪ್ರಕ್ರಿಯೆಯನ್ನು ಆರಂಭೀಸಬಹುದು ಎಂದು ಕೇನದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಕನಾ೯ಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಇತ್ತ ದೆಹಲಿಯ ಕನಾ೯ಟಕ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ರೈತನಾಯಕರಾದ ಬಿ.ಎಸ್. ಯಡಿಯೂರಪ್ಪನವರು “ಕಾಂಗ್ರೆ ಸ್ಸಿಗರು ಗೋವಾ ಹಾಗೂ ಮಹಾರಾಷ್ಟ್ರದಲ್ಲಿರುವ ಪ್ರತಿಪಕ್ಷದವರ(ಕಾಂಗ್ರೆ ಸ್) ಮನವೊಲಿಸಿ, ನಾವು ಬಿಜೆಪಿ ಮುಖ್ಯಮಂತ್ರಿಗಳ ಮನವೊಲಿಸುತ್ತೇವೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ತಡವೇಕೆ ಕಾಂಗ್ರೆ ಸ್ಸಿಗರೇ?! ಅಥವಾ ಬಿಜೆಪಿಯನ್ನು ದೂಷಿಸುತ್ತಾ ಇನ್ನೆರಡು ವಷ೯ ಕಳೆಯುತ್ತೀರಾ?

mahadayi

Comments are closed.