Date : 16-04-2016 | no Comment. | Read More
ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?! ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬೇಕಲ್ಲವೆ? ಈ ಬಾರಿ, ಅಂದರೆ 2015ರಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರುವುದಿಲ್ಲ, ಮಾನ್ಸೂನ್ ದುರ್ಬಲವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 2015 ಮೇನಲ್ಲಿ. ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಸೂನ್ ದುರ್ಬಲವಾದರೆ, ಕೃಷಿ ಉತ್ಪನ್ನ ಕಡಿಮೆಯಾದರೆ ರಾಜ್ಯದ ಅರ್ಥವ್ಯವಸ್ಥೆ, ಹಣಕಾಸು ಸ್ಥಿತಿ ಮೇಲೆ ಆಗುವ ದುಷ್ಪರಿಣಾಮ, ಬೊಕ್ಕಸದ ಮೇಲಿನ ಹೊರೆ ಹಾಗೂ […]
Date : 14-04-2016 | no Comment. | Read More
ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ! ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬ್ಯೆಗುಳಗಳ ಸುರಿಮಳೆಗೈದ […]
Date : 02-04-2016 | no Comment. | Read More
ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ! ಅಮೆರಿಕದಂದು ರಿಮೋಟ್ ವಿಲೇಜ್ . ಆ ದೂರದ, ದುರ್ಗಮ ಹಳ್ಳಿಯಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ‘ಅಜ್ಜಿ ಹಾಗೆ.. ಅಜ್ಜಿ ಹೀಗೆ…’ ಅಂತೆ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಬಿಳಿಯರ ಮುಖ […]
Date : 26-03-2016 | no Comment. | Read More
ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು! ಮಡಿಕೇರಿಯ ಶ್ರೀಮಂತ ದಂಪತಿಯೊಬ್ಬರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಪ್ರಿನ್ಸಿಪಾಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ನರಿಗೆಂದೇ ಕಟ್ಟಲಾಗಿದ್ದ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದರು. ಎಂಥೆಂಥಾ ಶಿಫಾರಸ್ಸುಗಳಿದ್ದರೂ ಅದುವರೆಗೆ ಯಾವೊಬ್ಬ ಭಾರತೀಯನಿಗೂ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಹುಡುಗರಿಬ್ಬರು ಆಫೀಸಿನ ಹೊರಗೆ ಗೋಡೆಗೊರಗಿ ನಿಂತು ಬಿಳಿಯ ಹುಡುಗರನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ದೇಸೀ ಹುಡುಗರನ್ನು ಯಾವುದೋ ಅನ್ಯಗ್ರಹಜೀವಿಗಳಂತೆ ನೋಡುತ್ತಾ ಬಂದ ಬಿಳಿಹುಡುಗರ ಒಂದು […]
Date : 19-03-2016 | no Comment. | Read More
ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ? ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ! ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವು ದಿಲ್ಲವೆ ದೇಶಕ್ಕೆ ವಿಷ ಹಿಂಡಲು? ವಂದೇ ಮಾತರಂಗೆ ವಿರೋಧಿಸಿದ್ದಾಯಿತು. ಈಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೆ ತಕರಾರು ಎತ್ತಲಾಗುತ್ತಿದೆ. ಇಂಥ ವಿರೋಧಗಳನ್ನು ಯಾರೋ ಧರ್ಮಾಂಧನೋ, ಅವಿವೇಕಿಯೋ, ಕಿಡಿಗೇಡಿಯೋ ಮಾಡಿದ್ದಾರೆ ಎಲ್ಲಾ ಧರ್ಮಗಳಲ್ಲೂ […]
Date : 12-03-2016 | no Comment. | Read More
ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ! ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ. ಅದು 2011, ಜೂನ್ 29. ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಲೇಸು ಎಂದು ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯಭೀತರಾಗಿ ಮೌನ ಮುರಿದಿದ್ದರು. ಐದು ಪ್ರಮುಖ ಮಾಧ್ಯಮ […]
Date : 05-03-2016 | no Comment. | Read More
ಹಾಗಾದರೆ ಮೋದಿಯವರನ್ನು ಮುಗಿಸಲು ನಡೆದಿತ್ತೇ ಯತ್ನ? ಹೇಗೆ ಆಗಿನ ಗೃಹ ಸಚಿವ ಪಿ. ಚಿದಂಬರಂ ನೇರವಾಗಿ ಮೋದಿಯವರನ್ನು ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯನ್ನಾಗಿಸುವ ಪಿತೂರಿಯಲ್ಲಿ ಭಾಗಿಯಾದ್ದರು ಎಂಬ ವಿಚಾರವನ್ನು ಕಳೆದ ಒಂದು ವಾರದಿಂದ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿನ ಕಾರ್ಯದರ್ಶಿ ಆರ್ವಿಎಸ್ ಮಣಿ ಹೊರಹಾಕುತ್ತಿರುವ ಒಂದೊಂದು ಅಂಶಗಳೂ ಬಯಲುಗೊಳಿಸುತ್ತಿವೆ. ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿ ನ […]
Date : 27-02-2016 | no Comment. | Read More
ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ! ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ […]
Date : 20-02-2016 | no Comment. | Read More
ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು? ಇಂಧೋರ್, ಗ್ವಾಲಿಯರ್, ಸಿಂಧ್ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್ಎಂವಿ ರೂಪಿಸಿದರು. ಅದಕ್ಕೆಲ್ಲಾ ಮಾದರಿ, ಪ್ರೇರಣೆಯಾಗಿದ್ದು ನಮ್ಮ ಮೈಸೂರು. ಜನನಿಬಿಡ ಪಟ್ಟಣಗಳಾದರೂ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್ನಗರಗಳು ಕುಡಿಯುವ ನೀರಿನ ಕೊರತೆ ಅನುಭವಿಸದೆ ಇರುವುದಕ್ಕೆ ಕಾರಣ ಮೈಸೂರು ಮಾದರಿ. ಮೊದಲು ಮೈಸೂರುನಂತರ ಚಂಡೀಗಢಕಳೆದ ಎರಡು ವರ್ಷಗಳಿಂದ ಹೊರಬೀಳುತ್ತಿರುವ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಸ್ವಚ್ಛನಗರಿ ಎಂದು ನಮ್ಮ ಮೈಸೂರು ಹೆಗ್ಗಳಿಕೆಯನ್ನು ಪಡೆಯುತ್ತಾ ಬರುತ್ತಿದೆ. ವಾಸ್ತವದಲ್ಲಿ ಮೈಸೂರಿನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದ್ದರೂ […]
Date : 13-02-2016 | no Comment. | Read More
ಐಪಿಸಿ ಮುನ್ನೂರೆಪ್ಪತ್ತೇಳು, ಇದೇನು ಹೊಸ ಗೋಳು? ಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿ ದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ,ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಚೀ… ಥೂ… ಗಲೀಜು… ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೆಕು? ಇದೂ ಕೂಡ ಒಂದು Fad . Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad […]