Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ! ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವು ದಿಲ್ಲವೆ ದೇಶಕ್ಕೆ ವಿಷ ಹಿಂಡಲು?
ವಂದೇ ಮಾತರಂಗೆ ವಿರೋಧಿಸಿದ್ದಾಯಿತು. ಈಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೆ ತಕರಾರು ಎತ್ತಲಾಗುತ್ತಿದೆ. ಇಂಥ ವಿರೋಧಗಳನ್ನು ಯಾರೋ ಧರ್ಮಾಂಧನೋ, ಅವಿವೇಕಿಯೋ, ಕಿಡಿಗೇಡಿಯೋ ಮಾಡಿದ್ದಾರೆ ಎಲ್ಲಾ ಧರ್ಮಗಳಲ್ಲೂ ಇಂತಹ ವ್ಯಕ್ತಿಗಳಿರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಜಮಾತೆ ಉಲೆಮಾ ಇ ಹಿಂದ್‌ನಂತಹ ಮುಸಲ್ಮಾನ ಸಮಾಜಕ್ಕೇ ಮಾರ್ಗದರ್ಶನ ನೀಡುವ ವ್ಯವಸ್ಥೆಗಳು ವಂದೇ ಮಾತರಂಗೆ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರೆ, ಈ ನಡುವೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜವಾಬ್ದಾರಿ ವಹಿಸಿಕೊಂಡಿರುವ ಸಂಸದ ಅಸಾದುದ್ದೀನ್ ಓವೈಸಿ ಕುತ್ತಿಗೆ ಮೇಲೆ ಖಡ್ಗವಿಟ್ಟರೂ ಭಾರತ್ ಮಾತಾ ಕೀ ಜೈ ಎನ್ನವುದಿಲ್ಲ ಎಂದಿದ್ದಾನೆ.
ಆದರೆ ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀ ಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ!
ಈ ಹಿಂದಕ್ಕೆ ಹೋಗಿ ಘಟನೆಯೊಂದನ್ನು ನೆನಪಿಸಿ ಕೊಳ್ಳೋಣ. ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂಬತ್ತನೇ ಶತಮಾ ನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದಲ್ಲಿ ಭೀಷ್ಮ ಪಿತಾಮಹನಂತಿದ್ದರು. ಮಹಾತ್ಮ ಗಾಂಧಿಜಿಯವರ ಪ್ರೀತಿಯ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತಗಾರ ಅವರು. ನಮ್ಮ ಶಾಸ್ತ್ರಿಯ ಸಂಗೀತವನ್ನು ಕಲಿಸಲೆಂದು 1901ರಲ್ಲಿ ಲಾಹೋರ್‌ನಲ್ಲಿ ‘ಗಂಧರ್ವ ಮಹಾವಿದ್ಯಾಲಯ’ ಸ್ಥಾಪಿಸಿದ್ದರು. ಸಾರ್ವಜನಿಕರು ನೀಡಿದ ದೇಣಿಗೆ ಮೇಲೆ ನಡೆಯುತ್ತಿದ್ದ ಮೊದಲ ಸಂಗೀತ ಶಾಲೆಯದು. ಆನಂತರ ಮುಂಬೈನಲ್ಲೂ ಅದರ ಒಂದು ಶಾಖೆಯನ್ನು ತೆರೆದಿದ್ದರು. ಪಂಡಿತ್ ಡಿ.ವಿ. ಪಲುಸ್ಕರ್, ಪಂಡಿತ್ ನಾರಾಯಣರಾವ್ ವ್ಯಾಸ್ ಮತ್ತು ಪಂಡಿತ್ ಓಂಕಾರನಾಥ್ ಠಾಕೂರ್ ಮುಂತಾದ ಸಂಗೀತ ಕ್ಷೇತ್ರದ ದಿಗ್ಗಜರಿಗೆ ಪಲುಸ್ಕರ್ ಅವರೇ ಗುರುಗಳಾಗಿದ್ದರು.
ಸ್ವಾತಂತ್ರ್ಯ ಆಂದೋಲನದ ನೇರ ಸಂಪರ್ಕವಿದ್ದ ಅವರಿಗೆ ಲೋಕಮಾನ್ಯ ತಿಲಕ್, ಲಾಲಾ ಲಜಪತ್ ರಾಯ, ಮಹಾತ್ಮ ಗಾಂಧಿಜಿ ಮುಂತಾದವರು ಚಿರಪರಿಚಿತರಾಗಿದ್ದರು. 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಕಾಂಗ್ರೆಸ್ ಅಧಿವೇಶನ ಆಯೋಜನೆಯಾಗಿತ್ತು.‘ವಂದೇ ಮಾತರಂ’ ಹಾಡಲೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ಆಗಮಿಸಿದ್ದರು. ಕಾಂಗ್ರೆಸ್ ಅಧಿವೇಶನಗಳಲ್ಲ ವಂದೇ ಮಾತರಂ ಹಾಡುವ ಪರಂಪರೆಯನ್ನು 1915ರಿಂದ ಪಲುಸ್ಕರರೇ ಹುಟ್ಟುಹಾಕಿದ್ದರು. ತಾವೇ ರಾಗ ಹಾಕಿದ್ದ ಧಾಟಿಯಲ್ಲಿ ವಂದೇ ಮಾತರಂ ಹಾಡುವುದು ಅವರ ರೂಢಿ. ಅದನ್ನು ತಿಲಕ್, ಗಾಂಧಿಜಿ ಸೇರಿದಂತೆ ನಾಡೇ ಒಪ್ಪಿಕೊಂಡಿತ್ತು. ಅಂದು ಕಾಕಿನಾಡದಲ್ಲಿ ಪಲುಸ್ಕರರು ‘ವಂದೇ ಮಾತರಂ’ ಹಾಡಲು ನಿಂತಾಗ ಕಾಂಗ್ರೆಸ್ ಅಧ್ಯಕ್ಷ ರಾಗಿದ್ದ(ಮುಸ್ಲಿಂ ಲೀಗ್ ಸ್ಥಾಪಕರಲ್ಲಿಯೂ ಒಬ್ಬರಾಗಿದ್ದ) ಮೌಲಾನಾ ಅಹಮದ್ ಅಲಿ ಮಧ್ಯದ ತಡೆದರು. ಅವರ ಸೋದರ ಶೌಕತ್ ಅಲಿ ಕೂಡ ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂದರು!ಆ ಮಾತನ್ನು ಕೇಳಿದ್ದೇ ತಡ, ಪಂಡಿತ ಪಲುಸ್ಕರರು ಕೆರಳಿ ಕೆಂಡವಾದರು. ಸ್ವಾಮಿ ಇದು ಕಾಂಗ್ರೆಸ್‌ನ ರಾಷ್ಟ್ರೀಯ ಮಹಾಸಭೆ. ಇದು ಯಾವುದೇ ಒಂದು ಕೋಮಿನ ಗುತ್ತಿಗೆ ಅಲ್ಲ. ಮುಸ್ಲಿಮರ ಮಸೀದಿಯೂ ಅಲ್ಲ. ಹೀಗಿರುವಾಗ ಈ ರಾಷ್ಟ್ರೀಯ ವೇದಿಕೆಯ ಮೇಲೆ ‘ವಂದೇ ಮಾತರಂ’ ಹಾಡಲು ಅಡ್ಡಿಪಡಿಸಲು ನಿಮಗ್ಯಾವ ಅಧಿಕಾರವಿದೆ? ಸಂಗೀತ ನಿಮ್ಮ ಮತಕ್ಕೆ ನಿಷಿದ್ಧ ಎಂಬುದಾದರೆ ನಿಮ್ಮ ಅಧ್ಯಕ್ಷ ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಬಾಜಾ ಭಜಂತ್ರಿ ನಡೆದಾಗ ಅದು ಮಾತ್ರ ಮೌಲಾನಾ ಸಾಹೇಬರಿಗೆ ಹೇಗೆಹಿಡಿಸಿತು? ಎಂದು ಪಲುಸ್ಕರ್ ಸವಾಲು ಹಾಕಿದರು.
ವಂದೇ ಮಾತರಂಗೆ ವಿರೋಧ ಹೊಂದಿರುವವರು ಧಾರಾಳವಾಗಿ ಅಧಿವೇಶನದಿಂದ ಹೊರಹೋಗಬಹುದು ಎಂದು ಜಾಡಿಸಿದರು! ಇಂತಹ ಪ್ರತಿಕ್ರಿಯೆಯಿಂದ ಕಕ್ಕಾಬಿಕ್ಕಿಯಾದ ಮೌಲಾನಾ ಮಹಮದ್ ಅಲಿ ನಿರುತ್ತರರಾಗಿ ನಿಂತಿದ್ದರು. ಪಲುಸ್ಕರ್ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಿ, ಭಾರತಾಂಬೆಗೆ ವಂದಿಸಿ ಕೆಳಗಿಳಿದರು. ಅವತ್ತು ಯಾವ ವಿದ್ರೋಹಿ ಮನಸ್ಸುಗಳು ವಿಭಜನೆಯ ವಿಷಬೀಜ ಬಿತ್ತಿ, 1947ರಲ್ಲಿ ದೇಶವನ್ನು ಒಡೆದವೋ ಆ ಮನಸುಗಳು ಇಂದಿಗೂ ಭಾರತದಲ್ಲಿವೆ!‘ನಾವು ದೇಶವನ್ನು ಪ್ರೀತಿಸುತ್ತೇವೆ. ಆದರೆ ಪೂಜಿಸುವುದ ಕ್ಕಾಗುವುದಿಲ್ಲ. ವಂದೇ ಮಾತರಂ ಮಾತೃಭೂಮಿಯನ್ನು ಆರಾಧಿಸುತ್ತದೆ, ನಾವು ಅಹುನನ್ನು ಬಿಟ್ಟರೆ ಬೇರಾರನ್ನೂ ಆರಾಧಿಸುವಂತಿಲ್ಲ.’ ‘ಮುಸ್ಲಿಮರಾರೂ ವಂದೇ ಮಾತರಂ ಹಾಡಕೂಡದು’. ‘ಒಂದು ವೇಳೆ ಈ ಹಾಡನ್ನು ಕಡ್ಡಾಯ ಮಾಡಿದರೆ ಅಂತಹ ಶಾಲೆಗಳಿಂದ ಮುಸ್ಲಿಮರು ತಮ್ಮ ಮಕ್ಕಳನ್ನು ಹಿಂತೆಗೆದುಕೊಳ್ಳಬೇಕು.’ಹಾಗೆಂದು ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆ ‘ಜಮಾತೆ ಉಲೆಮಾ ಇ ಹಿಂದ್’ ಹಿಂದೊಮ್ಮೆ ನಿರ್ಣಯ ವೊಂದನ್ನು ಮಂಡಿಸಿ, ಅಂಗೀಕರಿಸಿತ್ತು. ಆ ಮೂಲಕ ತನ್ನ ವಿದ್ರೋಹಿ ಮನಸ್ಥಿತಿಯನ್ನು ಹೊರಹಾಕಿತ್ತು. ಇದಕ್ಕೆ ಎಸ್‌ಕ್ಯುಆರ್ ಇಲ್ಯಾಸಿ, ಝಫರ್ಯಾಬ್ ಜಿಲಾನಿ ಮುಂತಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರೂ ಕೂಡ ಸಹಮತ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡರಂತೂ ಮನಸಿಗೆ ಕಸಿವಿಸಿಯಾಗುತ್ತದೆ. ಈ ದೇಶದಲ್ಲಿ ಜೈನರಿದ್ಧಾರೆ, ಬೌದ್ಧರಿದ್ಧಾರೆ, ಕ್ರೈಸ್ತರಿದ್ಧಾರೆ. ಇವರ್ಯಾರಿಗೂ ಚುಚ್ಚದ ವಂದೇ ಮಾತರಂ ಮುಸ್ಲಿಮರಿಗೇ ಏಕೆ ನೋವು ತರುತ್ತದೆ? ತಾಯಿ ಭಾರತಿಯನ್ನು ಭಜಿಸುವ ಗೀತೆಯನ್ನೇ ಹಾಡದವರು ದೇಶಕ್ಕಾಗಿ ಪ್ರಾಣ ತೆತ್ತಾರೆ? ಇದೆಂತಹ ಕೃತಘ್ನ ಮನಃಸ್ಥಿತಿ? ಮಾತೃಭೂಮಿಗೆ ನಮಿಸುವುದಿಲ್ಲ ಎಂದರೆ ಇನ್ನಾರಿಗೆ ನಮಸ್ಕರಿಸುತ್ತಾರೆ? ಭಾರತ ಮಾತೆಗೆ ನಮಿಸಲು ಧರ್ಮವೇಕೆ ಅಡ್ಡ ಬರಬೇಕು? ಅನ್ನ, ನೆಲೆ ನೀಡಿದ ಭೂಮಿಗೇ ನಮಸ್ಕರಿಸದವರು ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ದೇಶರಕ್ಷಣೆಗೆ ಮುಂದಾಗುತ್ತಾರೆ ಎಂದು ಹೇಗೆತಾನೇ ನಿರೀಕ್ಷಿಸುವುದು? ದೇಶಕ್ಕಿಂತ ಧರ್ಮವೇ ಮೇಲು ಎಂದಾದರೆ ಸ್ವಧರ್ಮೀಯರಾದ ಪಾಕಿಸ್ತಾನಿಯರ ಜತೆ ಕೈಜೋಡಿಸುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಎಲ್ಲ ಮುಸ್ಲಿಮರೂ ಜಮಾತೆ ಉಲೇಮಾ ಮಾತು ಕೇಳುತ್ತಾರೆ, ದೇಶಕ್ಕೆ ವಂದಿಸಲು ನಕಾರ ವ್ಯಕ್ತಪಡಿಸುತ್ತಾರೆ ಅಂತ ಹೇಳುತ್ತಿಲ್ಲ. ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ದೇಶಪ್ರೇಮಿಗಳಿದ್ಧಾರೆ, ಈ ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆಯೂ ಸಾಕಷ್ಟಿದೆ.
ಆದರೆ ವಂದೇ ಮಾತರಂ ಅನ್ನೇ ವಿವಾದದ ವಸ್ತುವನ್ನಾಗಿಸಿಕೊಂಡು, ಆ ಮೂಲಕ ಧರ್ಮದ ಆಧಾರದ ಮೇಲೆ ದೇಶ ಒಡೆದು ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ನಂತರವೂ ಜಮಾತೆ ಉಲೇಮಾದಂತಹ ಸಂಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿದ್ದ ವಿದ್ರೋಹಿ ಮನಸ್ಥಿತಿಯನ್ನು ಏಕೆ ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ? ಏಕೆ ಧರ್ಮವನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ಎಂಬಂತೆ ವರ್ತಿಸುವುದಿಲ್ಲ? ಏಕೆ ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಹಾಗೂ ಪ್ರತ್ಯೇಕವಾಗಿರಲು ಪ್ರಯತ್ನಿಸುತ್ತಿವೆ? ಮುಸ್ಲಿಮರೇ ಆದ ಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್‌ಗೆ, ಖ್ಯಾತ ಸಿನಿಮಾ ಸಾಹಿತ್ಯ ರಚನೆಕಾರ ಜಾವೆದ್ ಅಖ್ತರ್‌ಗೆ ಹಾಡಲು ಅವಮಾನವೆನಿಸದ ವಂದೇ ಮಾತರಂ ಉಳಿದವರಿಗೇಕೆ ಅದೇ ದೊಡ್ಡ ಅಡಚಣೆಯಾಗುತ್ತದೆ?
ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಮುಸ್ಲಿಮರಿಗೆ ನೋವುಂಟಾಗುವಂಥದ್ದೇನಿದೆ?ವಂದೇ ಮಾತರಂಸುಜಲಾಂ ಸುಫಲಾಂ ಮಲಯಜ ಶೀತಲಾಂಸಸ್ಯಶ್ಯಾಮಲಾಂ ಮಾತರಂಈ ಹಾಡನ್ನು ಹಾಡಲು ಏಕೆ ಧರ್ಮ ಅಡ್ಡಬರಬೇಕು? ‘ಅನ್ನ, ನೆಲೆ ನೀಡಿದ ಭಾರತಾಂಬೆಗೆ, ತಾಯೆ ನಿನಗೆ ವಂದಿಸುವೆ’(ವಂದೇ ಮಾತರಂ) ಎಂದು ಹಾಡಲು ಏನು ತ್ರಾಸ? ಬಂಕಿಮಚಂದ್ರರು ಇಂಥದ್ಧಾಂದು ದೇಶಪ್ರೇಮ ಉಕ್ಕಿಸುವ ಗೀತೆಯನ್ನು ಬರೆದಿದ್ಧಾದರೂ ಏಕೆ?ಈಗಿನ ಪಶ್ಚಿಮ ಬಂಗಾಳದ, 24 ಪರಗಣ ಜಿಯ, ಕಾಂತಲ ಪದದಲ್ಲಿ ಬಂಕಿಮಚಂದ್ರರು ಜನಿಸುವ ವೇಳೆಗೆ (1828, ಜೂನ್ 27ರಂದು) ದೇಶಕ್ಕೆ ನಿಧಾನವಾಗಿ ಸ್ವಾತಂ ತ್ರ್ಯದ ಜ್ವರವೇರತೊಡಗಿತ್ತು. ಅಂತಹ ಕಾಲದ ಶಿಶುವಾದ ಬಂಕಿಮಚಂದ್ರರಲ್ಲೂ ದೇಶಪ್ರೇಮ ಮಿಳಿತ ಗೊಂಡಿತ್ತು. 1875ರಲ್ಲಿ ಅವರು ರಜೆಗೆಂದು ರೈಲನ್ನೇರಿ ಮನೆಗೆ ಹೊರಟಿದ್ದರು. ಹಾಗೆ ಹಾದುಹೋಗುವಾಗ ನಗರವನ್ನು ದಾಟಿ ರೈಲು ಪ್ರಕೃತಿಯ ಮಡಿಲಲ್ಲಿ ಪ್ರಯಾಣಿಸತೊಡಗಿತು. ಆ ಬೆಟ್ಟ-ಗುಡ್ಡ, ಹಸಿರಿನಿಂದ ಮೈದುಂಬಿದ್ದ ಬಯಲು, ಚಳಿಗಾಲದಲ್ಲಿ ಅರಳಿನಿಂತಿದ್ದ ಬಣ್ಣಬಣ್ಣದ ಹೂವುಗಳು, ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದ ನದಿ, ಸರೋವರ ಗಳು, ಒಟ್ಟಾರೆ ಪ್ರಕೃತಿ ಸೌಂದರ್ಯ. ಹೀಗೆ ಭಾರತಮಾತೆಯ ಸಿರಿ ಬಂಕಿಮಚಂದ್ರರ ಮನಸೂರೆಗೊಳಿಸಿತು. ಕವಿಹೃದಯ ತುಂಬಿತು, ಭಾವನೆಗಳು ಉಕ್ಕಿಹರಿಯಲಾರಂಭಿಸಿದವು.ಆಗ ಹುಟ್ಟಿದ್ದೇ ‘ವಂದೇ ಮಾತರಂ’!‘ತಾಯೆ ನಿನಗೆ ವಂದಿಸುವೆ’ ಎಂಬ ಕವಿಯ ಒಂದೊಂದು ಸಾಲುಗಳಲ್ಲೂ ಭರತಖಂಡ ಸೌಂದರ್ಯವನ್ನು ಹಿಡಿದಿಟ್ಟರು, ತನಗೆ ಜನ್ಮ ನೀಡಿದ್ದಕ್ಕಾಗಿ ಈ ಭೂಮಿಗೆ ಧನ್ಯತೆಯನ್ನು ಸೂಚಿಸಿದರು. ಇದರಲ್ಲಿ ಖಂಡಿತ ಪೂಜ್ಯಭಾವನೆಯಿದೆ, ತಾಯಿಯ ಆರಾಧನೆ ಇದೆ. ಅದರಲ್ಲಿ ತಪ್ಪೇನಿದೆ? ಒಬ್ಬ ಹೆಣ್ಣಲ್ಲಿ ಹೆಂಡತಿ, ಮಗಳು, ಜನ್ಮದಾತೆ ಎಲ್ಲವನ್ನೂ ಕಂಡುಕೊಳ್ಳುವ ಸಂಸ್ಕೃತಿ ನಮ್ಮದು. ದುರ್ಗೆ, ಲಕ್ಷ್ಮೀ ಎಲ್ಲರನ್ನೂ ಭಾರತಮಾತೆಯ ಕಂಡುಕೊಳ್ಳಲು ಬಂಕಿಮಚಂದ್ರರು ಪ್ರಯತ್ನಿಸಿದ್ಧಾರೆ ಅಷ್ಟೇ. ವಂದೇ ಮಾತರಂನ ಹೀರೋ ಭಾರತಮಾತೆಯೇ ಹೊರತು ಯಾವ ದೇವ-ದೇವತೆಗಳೂ ಅಲ್ಲ. ಹಾಗಾಗಿಯೇ ಅದು ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರೇರಣೆಯಾಯಿತು.ಬಾರಿಸಾಲ್ ಕೂಡ ಪಶ್ಚಿಮ ಬಂಗಾಳದಲ್ಲಿದೆ. 1906, ಏಪ್ರಿಲ್ 14ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬಾರಿಸಾಲ್‌ನಲ್ಲಿ ಆಯೋಜನೆಯಾಗಿತ್ತು. ಭಾರತಮಾತೆ ಯನ್ನು ದಾಸ್ಯಮುಕ್ತಳನ್ನಾಗಿ ಮಾಡುವ ಶಪಥ ತೆಗೆದುಕೊಳ್ಳುವ ಇರಾದೆ ಅಲ್ಲಿತ್ತು. ಭಾರೀ ಜನಸ್ತೋಮವೇ ನೆರೆದಿತ್ತು. ಸುರೇಂದ್ರನಾಥ್ ಬ್ಯಾನರ್ಜಿ, ಬಿಪಿನ್ ಚಂದ್ರಪಾಲ, ಶ್ರೀ ಅರವಿಂದರ ನೇತೃತ್ವದಲ್ಲಿ ಜನ ಬಾರಿಸಾಲ್ನ ಬೀದಿ ಬೀದಿಗಳಲ್ಲಿ ಸಾಗುತ್ತಾ ಅಧಿವೇಶನ ನಡೆಯುವ ಸ್ಥಳಕ್ಕೆ ಹೊರಟಿದ್ದರು.
ಲಾರ್ಡ್ ಕರ್ಝನ್ನನ ಪ್ರತಿಕೃತಿ ದಹನ ಮಾಡಿದ ಜನಸ್ತೋಮ ಇದ್ದಕ್ಕಿದ್ದಂತೆಯೇ ‘ವಂದೇ ಮಾತರಂ’ ಹಾಡತೊಡಗಿತು. ಆ ಹಾಡಿನ ಧ್ವನಿಗೆ ಇಡೀ ನಗರವೇ ರೋಮಾಂಚನಗೊಂಡಿತು, ರೋಮಗಳು ಸೆಟೆದುನಿಂತವು, ರಕ್ತನಾಡಿಗಳಲ್ಲಿ ದೇಶಪ್ರೇಮ ಉಕ್ಕಿಹರಿಯತೊಡಗಿತು. ಸ್ವಾಮಿ ವಿವೇಕಾನಂದರು ಯಾವುದನ್ನು ‘ಅಧ್ಯಾತ್ಮಿಕ, ಸಾಂಸ್ಕೃತಿಕ ರಾಷ್ಟ್ರೀಯವಾದ’ ಎಂದು ಕರೆದಿದ್ದರೋ ಅದು ಹೊರಹೊಮ್ಮಿದ್ದೇ ವಂದೇ ಮಾತರಂ ಗೀತೆಯಿಂದ! ಆ ಕಾರಣಕ್ಕಾಗಿಯೇ ಅದು ಸಕಲರಿಗೂ ಸೂರ್ತಿಯಾಯಿತು.ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಎಲ್ಲರೂ ಹೊರಟರಾದರೂ ಎಲ್ಲರ ಹಾದಿಯೂ ಒಂದೇ ಆಗಿರಲಿಲ್ಲ, ಎಲ್ಲರೂ ಒಂದೇ ಸಂಘಟನೆಯ ಅಡಿಯೂ ಒಂದಾಗಿರಲಿಲ್ಲ. ಆದರೆ ಸೌಮ್ಯವಾದಿಗಳು, ಉಗ್ರವಾದಿಗಳು, ಅಹಿಂಸಾವಾದಿಗಳು, ಕ್ರಾಂತಿಕಾರಿಗಳು, ಅದು ಯಾರೇ ಆಗಿರಲಿ ಎಲ್ಲರಿಗೂ ಪ್ರೇರಣೆಯಾಗಿದ್ದ ಸಮಾನ ಅಂಶ ಮಾತ್ರ ‘ವಂದೇ ಮಾತರಂ’. ಈ ನೆಲ, ಜಲ, ಪ್ರಕೃತಿ ಸಿರಿಯನ್ನು ಹಾಡಿಹೊಗ ಳುವ ಹಾಡು ಯಾರಿಗೆ ತಾನೇ ಪ್ರೇರಣೆ ನೀಡುವುದಿಲ್ಲ? ವಿದೇಶಿ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿದ ಮೊದಲ ಮಹಿಳೆ ಮೇಡಮ್ ಕಾಮಾ, ಪ್ಯಾರಿಸ್ ಹಾಗೂ ಬರ್ಲಿನ್‌ನಲ್ಲಿ ಹಾರಿಸಿದ ಬಾವುಟದಲ್ಲಿ ‘ವಂದೇ ಮಾತರಂ’ ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿತ್ತು. ವಂದೇ ಮಾತರಂ ಎಂದು ಹೇಳಿಯೇ ಮದನ್‌ಲಾಲ್ ಧಿಂಗ್ರಾ ನೇಣಿಗೆ ತಲೆಕೊಟ್ಟ. ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಕವಿಯತ್ರಿ ಸರಳಾದೇವಿ ವಂದೇ ಮಾತರಂ ಹಾಡಿದರು.
 ‘ವಂದೇ ಮಾತರಂ’ನಿಂದ ಪ್ರೇರಣೆಗೊಂಡು ಬ್ರಿಟಿಷ್ ಸೇನೆಯ ಮದ್ರಾಸ್ ರೆಜಿಮೆಂಟ್‌ನಲ್ಲಿ ದಂಗೆ ಎಬ್ಬಿಸಲು ಪ್ರಯತ್ನಿಸಿದರೆಂಬ ಕಾರಣಕ್ಕೆ 14 ಸೈನಿಕರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಮಲೇಷಿಯಾದಲ್ಲಿ ಇಂಡಿಯನ್ ಇಂಡಿಪೆಂಡೆ ಲೀಗ್ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಕ್ರಾಂತಿಕಾರಿಗಳಾದ ಆನಂದನ್, ಸತ್ಯೇಂದ್ರ ಬರ್ಧನ್, ಅಬ್ದುಲ್ ಕಾರ್ದಿ ಮತ್ತು ಫೌಝ ಬಾಯಲ್ಲಿ ವಂದೇ ಮಾತರಂ ಪಠಿಸುತ್ತಲೇ ನೇಣಿಗೇರಿದರು. ಅದರಲ್ಲೂ ನೇತಾಜಿ ಸುಭಾಷ್ಚಂದ್ರ ಬೋಸರಂತೂ ವಂದೇ ಮಾತರಂ ಅನ್ನು ಆಝಾದ್ ಹಿಂದ್ ಫೌಜ್‌ನ (ಭಾರತ ರಾಷ್ಟ್ರೀಯ ಸೇನೆ) ರಾಷ್ಟ್ರಗೀತೆಯೆಂದು ಘೋಷಿಸಿದರು. ಖುದಿರಾಮನಿಂದ ಭಗತ್‌ಸಿಂಗ್, ರಾಜಗುರು, ಸುಖದೇವ್‌ನವರೆಗೂ ಎಲ್ಲ ಕ್ರಾಂತಿಕಾರಿಗಳೂ ತುಟಿಯಲ್ಲಿ ‘ವಂದೇ ಮಾತರಂ’ ಎನ್ನುತ್ತಲೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು.ಅಂದು ಇಡೀ ದೇಶಕ್ಕೇ ಪ್ರೇರಣೆ ನೀಡಿದ ಗೀತೆಯ ಬಗ್ಗೆ ಇಂದಿಗೂ ತಕರಾರು ಎತ್ತುವುದೇಕೆ? ಕುತ್ತಿಗೆ ಮೇಲೆ ಖಡ್ಗ ಇಟ್ಟರೂ ಭಾರತ್ ಮಾತಾ ಕೀ ಜೈ ಎನ್ನುತ್ತಿದ್ದಾರಲ್ಲಾ ಅಸಾದುದ್ದೀನ್ ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವುದಿಲ್ಲವೆ ದೇಶಕ್ಕೆ ವಿಷ ಹಿಂಡಲು?
ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರತ್ಯೇಕ ರಾಷ್ಟ್ರ ಪಡೆದುಕೊಂಡು ಧರ್ಮಾಂಧ ಜಿನ್ನಾ ಅವರೇನೋ ಭಾರತದಿಂದ ಕಾಲ್ತೆಗೆದರು. ಆದರೆ ಅವರು ನೆಟ್ಟ ಪ್ರತ್ಯೇಕತೆಯ ಮರದ ಬೇರುಗಳು ಇಲ್ಲಿಯೇ ಉಳಿದವು. ಜಮಾತೆ ಉಲೇಮಾ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಓವೈಸಿ ರೂಪದಲ್ಲಿ ಆ ಬೇರುಗಳು ಈಗ ಚಿಗುರೊಡೆದಿವೆ. ಆದರೆ ನಮ್ಮನ್ನು ಕಾಡುವ ಪ್ರಶ್ನೆಯಿಷ್ಟೇ, ಇವರಿಗೆ ಧರ್ಮವೇ ಅಂತಿಮ, ಈ ದೇಶಕ್ಕಿಂತ ಧರ್ಮವೇ ಮೇಲು ಎನ್ನುವುದಾರೆ 1947ರ ಭಾರತ ಬಿಟ್ಟು ತೊಲಗಬಹುದಿತ್ತ ಲ್ಲವೆ? ಯಾರು ಬೇಡವೆಂದಿದ್ದರು? ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಪಡೆದುಕೊಂಡ ಮೇಲೂ ಇಲ್ಲಿಯೇ ಉಳಿದುಕೊಂಡಿದ್ದೇಕೆ? ಸಂಗೀತಕ್ಕೆ ಜಾತಿ, ಧರ್ಮ, ಗಡಿಗಳ ಭೇದವಿಲ್ಲ ಎನ್ನುತ್ತೇವೆ. ಅಂತಹ ಸಂಗೀತವನ್ನು ಒಲಿಸಿಕೊಂಡಿದ್ದ ವ್ಯಕ್ತಿ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್. ಅವತ್ತು ಮೌಲಾನಾ ಅಹಮದ್ ಅಲಿ ವಂದೇ ಮಾತರಂ ಹಾಡಲು ಅಡ್ಡಿಪಡಿಸಿದಾಗ ಪಂಡಿತ ಪಲುಸ್ಕರರಂತಹ ಸಂಗೀತದ ರಸದೌತಣ ಉಣಿಸುವ ಕವಿ ಮನಸ್ಸೇ ರೊಚ್ಚಿಗೆದ್ದು, ವಂದೇ ಮಾತರಂ ಹಾಡಬೇಡಿ ಎನ್ನಲು ಇದು ಮಸೀದಿಯಲ್ಲ. ಹಿಡಿಸದವರು ಧಾರಾಳವಾಗಿ ಅಧಿ ವೇಶನದಿಂದ ಹೊರಹೋಗಬಹುದು ಎಂದು ಅಧ್ಯಕ್ಷನಿಗೇ ಹೇಳಿದಂತೆ, ಓವೈಸಿಯಂಥವರಿಗ ದೇಶದಿಂದ ತೊಲಗು ಎಂದು ಈಗ ಹೇಳುವವರಾರು?!

owaisi

Comments are closed.