Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು!

ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು!

ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು!

ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ.

ಅವರ ಹೆಸರು ರಾಮಕೃಷ್ಣ ಹೆಗಡೆ!

      ಅವರನ್ನು ಒಬ್ಬ ಮುಖ್ಯಮಂತ್ರಿ ಎನ್ನಬೇಕೋ, ಜನನಾಯಕ ಎನ್ನಬೇಕೋ ಎಂಬ ಗೊಂದಲವುಂಟಾಗುತ್ತದೆ . ಸಂಸದೀಯ ಪ್ರಜಾತಂತ್ರದಲ್ಲಿ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿಯಾಗಬಹುದು, ಸಂಖ್ಯಾಬಲದ ಮೇಲೆ ನಡೆಯುವ, ನಿಂತಿರುವ ಈ ಪ್ರಕ್ರಿಯೆಯಲ್ಲಿ ಜಯಿಸಿ ಯಾರೂ ಅಧಿಕಾರ ಚಲಾಯಿಸ ಬಹುದು, ಎಂಥೆಂಥವರೂ ಗದ್ದುಗೆ ಏರಬಹುದು ಎಂಬುದನ್ನು ನಾವು ಕಾಣುತ್ತಿದ್ದೇವೆ. ಈ ರಾಜ್ಯ 22 ಮುಖ್ಯ ಮಂತ್ರಿಗಳನ್ನು ಕಂಡಿದ್ದರೂ ಗದ್ದುಗೆ ಏರಿದ ಮೇಲೂ ಜನನಾಯಕರೆಂಬಂತೆ ಕಂಡವರು, ಜನರ ಭಾವನೆಗಳಿಗೆ ಬಹುವಾಗಿ ಸ್ಪಂದಿಸಿದವರು, ಜನರ ಅಭ್ಯುದಯಕ್ಕೆ ಬಹುವಾದ ಆದ್ಯತೆ ಕೊಟ್ಟವರು ಇಬ್ಬರು ಮಾತ್ರ-ಡಿ. ದೇವರಾಜ್ ಅರಸು ಹಾಗೂ ರಾಮಕೃಷ್ಣ ಹೆಗಡೆ.

      ನಿಮಗೆ ಬೆಂಡಿಗೆರಿ ಪ್ರಕರಣ ನೆನಪಿರಬಹುದು. ದಲಿತನೊಬ್ಬನಿಗೆ ಮಲ ತಿನ್ನಿಸಿದ ಘಟನೆ ನಡೆದಾಗ ಮುಖ್ಯಮಂತ್ರಿಗಾದಿಯಲ್ಲಿ ಕುಳಿತಿದ್ದ ಹೆಗಡೆಯವರು ಎಷ್ಟು ಕುಪಿತರಾದರೆಂದರೆ ಇನ್ನು ಮುಂದೆ ಇಂತಹ ಪ್ರಕರಣ ನಡೆದರೆ ತಪ್ಪಿತಸ್ಥನಿಗೆ ದೌಜ೯ನ್ಯಕ್ಕೊಳಗಾದ ದಲಿತನಿಂದಲೇ ಮಲ ತಿನ್ನಿಸುತ್ತೇನೆ ಎಂದು ಗುಡುಗಿದರು. ಆಯಾ ಜಿಲ್ಲೆಗಳ ಎಸ್ಪಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದರು. ಅದರಿಂದ ದಲಿತರ ಆತ್ಮಸ್ಧೈಯ೯ ಹೆಚ್ಚಾಯಿತು. ಅಷ್ಟೇ ಅಲ್ಲ, ದಲಿತರಲ್ಲಿನ ಪ್ರತಿಭೆಗೆ ಮಣೆಹಾಕಲು, ಅಹ೯ತೆಯನ್ನು ಗುರುತಿಸಲು ಹಿಂದೆಂದೂ ಕಂಡುಕೇಳರಿಯದ ಕ್ರಮವೊಂದನ್ನು ಕೈಗೊಂಡರು. ದಲಿತ ವಿದ್ಯಾಥಿ೯ಯೊಬ್ಬ ಪದವಿ ಅಥವಾ ಎಂಎ, ಎಂಎಸ್ಸಿ, ಎಂಕಾಂ  ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದರೆ ಆತನನ್ನು ಪ್ರೊಬೆಷನರಿ ಅವಧಿಗೆ ವಿವಿಧ ಇಲಾಖೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪದ್ಧತಿ ಜಾರಿಗೆ ತಂದರು. ಆತ ಸ್ಪಧಾ೯ತ್ಮಕ ಪರೀಕ್ಷೆ, ಸಂದಶ೯ನ ಎದುರಿಸುವ ಪ್ರಮೇಯವೇ ಇಲ್ಲದಂತೆ ಮಾಡಿದರು. ಇವು ದಲಿತರ ಮಾನಸಿಕ ಸ್ಧೈಯ೯ವನ್ನು ವೃದ್ಧಿಸುವ ತೀಮಾ೯ನಗಳಾಗಿದ್ದವು. ಅವರು ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಯೂನಿಫಾ ಮ್‍೯ ಕೊಡಮಾಡಿದ ಹಿಂದೆಯೂ ತಾರತಮ್ಯ ಭಾವನೆಯನ್ನು ತೊಡೆದುಹಾಕುವ, ಎಲ್ಲರೂ ಸಮಾನ ಎಂಬ ಭಾವನೆಯನ್ನು ಮೂಡಿಸುವ ಯೋಚನೆಯಿತ್ತು. ಈ ರೀತಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ಉಚಿತವಾಗಿ ನೀಡುವ ಯೋಜನೆ ದೇಶದಲ್ಲಿಯೇ ಮೊದಲ ಪ್ರಯೋಗವಾಗಿತ್ತು!

  1983ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆಯವರು ತೆಗೆದುಕೊಂಡ ಕೆಲ ನಿಧಾ೯ರಗಳು ಹೇಗೆ ಮಾದರಿಯಾಗಿದ್ದವೆಂದರೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರೇ ಅನುಕರಣೆಗೆ ಹೊರಟರು. ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕನಾ೯ಟಕ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಜಾರಿ ಮಾಡಲು ಹೊರಟ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಗಡೆಯವರ ಮಾದರಿಯೇ ಪ್ರೇರಣೆಯಾಗಿತ್ತು. ಇನ್ನು ಬಂಜರು, ಒಣಭೂಮಿ ಅಭೀವೃದ್ಧಿ ವಿಚಾರಕ್ಕೆ ಬರೋಣ. ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದರೆ ಶೇ.20ರಷ್ಟು ಭೂಮಿಗೆ ಮಾತ್ರ ನೀರಾವರಿ ಅನುಕೂಲವಿತ್ತು. ಉಳಿದ 80 ಪರ್ಸೆಂಟ್ ಜಾಗವನ್ನೂ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ವೇಸ್ಟ್ ಲ್ಯಾಂಡ್ ಡೆವೆಲಪ್‍ಮೆಂಟ್ ಆ್ಯಕ್ಟಿವಿಟಿಗೆ ಚಾಲನೆ ನೀಡಿದರು. ಅಂದರೆ ತೋಟಗಾರಿಕೆ ಬೆಳೆ, ಫಾ ರೆಸ್ಟ್, ಡ್ರೈಕ್ರಾಪ್‍ಗಳಿಗೆ ಉತ್ತೇಜ ನ ಕೊಟ್ಟರು. ಪ್ರತಿ ಜಿಲ್ಲೆಗೊಂದರಂತೆ ತೋಟಗಾರಿಕಾ ನಿಗಮ ಸ್ಥಾಪನೆ ಮಾಡಿದರು. ಇದರಿಂದ ಪ್ರೇರಿತರಾದ ರಾಜೀವ್ ಗಾಂಧಿಯವರು “ನ್ಯಾಷನಲ್ ಹಾಟಿ೯ಕಲ್ಚರ್ ಬೋಡ್‍೯’ ಸ್ಥಾಪನೆ ಮಾಡಿದರು.

ನಿಜಕ್ಕೂ ಅವರೊಬ್ಬ ಪ್ರೇರಣಾದಾಯಿಕ ನಾಯಕ!

          ಉತ್ತರ ಕನಾ೯ಟಕದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿ ದ್ದರೂ ಅವರು ತಮ್ಮ ಜಾತಿ ನಾಯಕರಿಗಿಂತ ಹೆಗಡೆಯವರ ಮೇಲೆ ಹೆಚ್ಚು ವಿಶ್ವಾಸವಿಟ್ಟಿ ದ್ದರು, ಗೌರವ ಹೊಂದಿದ್ದರು. ಅವರಲ್ಲಿದ್ದ ಮೇನೇಜಿರಿಯಲ್ ಸ್ಕಿಲ್ ಅನ್ನು ಈಗಿನವರು ಕಲಿಯಬೇಕು. ಲಿಂಗಾಯತರು , ಒಕ್ಕಲಿಗರನ್ನು ಸಂಭಾಳಿಸುವ ಜತೆಗೆ ಬಿ. ಸೋಮಶೇಖರ್, ರಾಚಯ್ಯ, ನಜೀರ್ ಸಾ ಬ್, ಪಿಜಿಆರ್ ಸಿಂಧ್ಯಾ, ಸಿದ್ದರಾಮಯ್ಯ (ಹಾಲಿ ಮುಖ್ಯಮಂತ್ರಿ), ಬಿ.ರಘುಪತಿ, ಜೀವರಾಜ್ ಆಳ್ವ ಅವರಂಥ ಅನ್ಯ ಜಾತಿ, ಧರ್ಮೀಯರನ್ನೂ ಪ್ರೋತ್ಸಾಹಿಸಿದರು. ಬಹುಶಃ ಕ್ಯಾಬಿನೆಟ್ ಮೇಲೆ ಅವರಿಗಿದ್ದ ಹಿಡಿತ ಮುಂದೆ ಯಾರಲ್ಲೂ ಕಾಣಲಿಲ್ಲ ಎನ್ನಬಹುದು. ಆರೋಪ ಎದುರಾದಾಗ ದೇವೇಗೌಡರು, ಜೀವಿಜಯ, ಬಿ. ಸೋಮಶೇಖರ್‍ರಿಂದ ರಾಜೀನಾಮೆ ಪಡೆದು ವಿಚಾರಣೆ ಎದುರಿಸುವಂತೆ ಸೂಚಿಸಿದ ಅವರ ಎದೆಗಾರಿಕೆಯನ್ನು ಈಗಿನವರಲ್ಲಿ ಕಾಣುವುದಕ್ಕಾದರೂ ಸಾಧ್ಯವಿದೆಯೇ? ಇವತ್ತು ಎಲ್ಲರೂ ಜನಲೋಕಪಾಲ, ಲೋಕಾಯುಕ್ತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಲೋಕಾಯುಕ್ತ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೆ ತಂದವರೇ ರಾಮಕೃಷ್ಣ ಹೆಗಡೆ ಎಂದರೆ ನಂಬುತ್ತೀರಾ?

      ಆಡಳಿತದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದ್ದು ಮಾತ್ರವಲ್ಲ, ಸ್ವ ಇಚ್ಚೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಪವರ್ ಕೊಟ್ಟರು! ಕೊನೆಗೆ ಪಕ್ಷದೊಳಗೆ ಎದುರಾದ ಭಾರೀ ಒತ್ತಡಕ್ಕೆ ಮಣಿದು ಅದನ್ನು ಹಿಂತೆಗೆದುಕೊಂಡಿದ್ದು ಬೇರೆ ಮಾತು. ಆದರೆ ಹೆಗಡೆಯವರಲ್ಲಿ ದ್ದ ಪ್ರಾಮಾಣಿಕ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ. ಎ.ಡಿ. ಕೌಶಲ್ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡರು. ಮಂತ್ರಿಗಳನ್ನು ವಿಚಾರಣೆ ನಡೆಸುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಕೊಡಲಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾಹ೯ ಅಂಶವೆಂದರೆ ಸ್ವಜನಪಕ್ಷಪಾತ, ಪ್ರಭಾವಗಳಿಂದ ಲೋಕಾಯುಕ್ತವ ನ್ನು ದೂರವಿಡುವ ಸಲುವಾಗಿ ಲೋಕಾಯುಕ್ತರಾಗಿ ಅನ್ಯರಾಜ್ಯದ ನ್ಯಾಯಾಧೀಶರನ್ನು ನೇಮಕ ಮಾಡುವ ಸಂಪ್ರದಾಯ ಆರಂಭೀಸಿದರು ಹೆಗಡೆ. ರಾಮಕೃಷ್ಣ ಹೆಗಡೆಯವರು ಎಂತಹ ವ್ಯಕ್ತಿಯೆಂದರೆ ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ಸ್ವಂತ ಮಗನ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದರು. ಹಾಗೆ ಮಾಡಿದ ದೇಶದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿ ಅವರು! ಅವರ ಸಹೋದರ ಗಣೇಶ್ ಹೆಗಡೆ ಅಂತಾರಾಜ್ಯ ಅಕ್ಕಿ ಸಾಗಣೆ, ದಾಸ್ತಾನಿನಲ್ಲಿ ಭಾಗಿಯಾಗಿ ದ್ದಾರೆ ಎಂದು ಆರೋಪಿಸಿದಾಗ ಒಡಹುಟ್ಟಿದವನ ವಿರುದ್ಧವೂ ತನಿಖೆ ಮಾಡಿಸಿದರು. ಹೀಗೆ ಆಡಳಿತದಲ್ಲಿ ಮೌಲ್ಯಾಧಾರಿತ ನಿಲುವು, ನಿಧಾ೯ರಗಳನ್ನು ತೆಗೆದುಕೊಂಡರು!

    ಇದು ಆಡಳಿತ ಹಾಗೂ ಜನಮಾನಸದಲ್ಲಿ ಒಳ್ಳೆಯ ಪರಿಣಾಮ ಬೀರಿತು. ಹಾಗಾಗಿ ಹೆಗಡೆ ಆಡಳಿತದ ಬಗ್ಗೆ ಜನರಲ್ಲಿ ಒಳ್ಳೆಯ ಇಂಪ್ರೆಷನ್ ಬಂತು. ಅವರ ಆಡಳಿತದಲ್ಲಿ ಜಾರಿಗೆ ಬಂದ ಸಮಗ್ರ ಶಿಕ್ಷಣ ಕಾಯಿದೆಯನ್ನು ಮರೆಯಲು ಸಾಧ್ಯವೆ? ಇವತ್ತು ನಾವು ಕಾಣುವ ಸಿಇಟಿ ಮತ್ತು ಅದರ ಮೂಲಕ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ದೊರೆಯುತ್ತಿರುವ ಉಚಿತ ಸೀಟು ಸೌಲಭ್ಯಕ್ಕೆ ಹೆಗಡೆಯವರ ಜನತಾ ಸರಕಾರ ಜಾರಿಗೆ ತಂದ ಈ ಕಾಯಿದೆಯೇ ಕಾರಣ. ರಾಷ್ಟ್ರದಲ್ಲೇ ಮೊದಲ ಬಾರಿಗೆ ರ್ಯಾಗಿಂಗ್ ನಿಷೇಧ ಮಾಡಲಾಯಿತು. ಅದನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸಲಾಯಿತು. 1985ರಲ್ಲಿ ಕ್ಯಾಪಿಟೇಷನ್ ಫೀ ಅನ್ನು ನಿಷೇಧ ಮಾಡಿದ್ದು ದೇಶದಲ್ಲೇ ಪ್ರಥಮ. ಗುಂಡೂರಾವ್ ಕಾಲದಲ್ಲಿ ಆರಂಭವಾಗಿದ್ದ ಗೂಂಡಾಗಿರಿಯನ್ನು ಮಟ್ಟಹಾಕಿದ್ದು, ಆಲ್ಟರ್ನೇಟಿವ್ ವಾಟರ್ ಸೋಸ೯ಸ್ ಅಂದರೆ ಬಾವಿ ಬದಲು ವ್ಯಾಪಕವಾಗಿ ಬೋರ್ ನಿಮಾ೯ಣ ಕಾಯ೯ ಆರಂಭೀಸಿದ್ದೂ ಹೆಗಡೆಯವರ ಆಡಳಿತದಲ್ಲೇ. ಜತೆಗೆ ಐಎಎಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾಯ೯ನಿವ೯ಹಿಸಲು ಅನುವು ಮಾಡಿಕೊಡುವ ಮೂಲಕ ಒಳ್ಳೆಯ ಆಡಳಿತ ಕೊಡುವುದಕ್ಕೂ ಪ್ರಯತ್ನಿಸಿದರು, ಪಂಚಾಯತ್ ರಾಜ್ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೂ ದಾರಿ ಮಾಡಿಕೊಟ್ಟರು. ಆಗಿನ ಕಾಲದಲ್ಲಿ ಈಗಿನಂತೆ ಹಣಬಲ, ತೋಳ್ಬಲದ ಪ್ರಭಾವ ಇರಲಿಲ್ಲ ಅಂದುಕೊಳ್ಳಬೇಡಿ. ಈಗಿನ ಗಣಿಧಣಿಗಳಂತೆ ಆಗ ಖೋಡೆ, ಕೇಶವಲು ರೂಪದಲ್ಲಿ ಹೆಂಡದ ದೊರೆಗಳಿದ್ದರು. ಆದರೆ ಹೆಗಡೆಯವರು ಅವರನ್ನೆಂದೂ ತೊಡೆಮೇಲೆ ಕೂರಿಸಿಕೊಳ್ಳಲಿಲ್ಲ.

        ಹಾಗಂತ ಹೆಗಡೆಯವರಲ್ಲಿ ದೌಬ೯ಲ್ಯಗಳೇ ಇರಲಿಲ್ಲವೆಂದಲ್ಲ. ಸದ್ಗುಣಗಳ ಜತೆ ಕೆಲ ದೌಬ೯ಲ್ಯ, ಚಾಲಾಕಿತನಗಳು ಸೇರಿಕೊಂಡಿದ್ದವು. ಒಬ್ಬ ಚತುರ ರಾಜಕಾರಣಿಯಂತೆಯೇ ರೈತ ಹಾಗೂ ದಲಿತ ಸಂಘಟನೆಗಳ ಸದ್ದಡಗಿಸಿದರು. ಸಿದ್ದಲಿಂಗಯ್ಯನವರನ್ನು ಎಂಎಲ್‍ಸಿ ಮಾಡಿದರೆ, ದೇವನೂರು ಮಹಾದೇವ ಅವರ ಸಹೋದರ ದೇವನೂರ ಶಿವಮಲ್ಲರನ್ನು ರಾಜಕಾರಣಕ್ಕೆ ತಂದು ವಯಸ್ಕ ಶಿಕ್ಷಣ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿ ದಲಿತರನ್ನು ಒಡೆದರು.

ಆದರೂ ಒಬ್ಬ ಮುಖ್ಯಮಂತ್ರಿಯಾಗಿ ಅವರು ಮಾಡಿದ ಕಾಯ೯ಗಳು ಮುಂದಿನ ಹಲವು ತಲೆಮಾರು ನೆನಪಿನಲ್ಲಿಟ್ಟು ಕೊಳ್ಳುವಂಥವಾಗಿದ್ದವು. ಅವರಂಥ ಸೂಕ್ಷ್ಮಜೀವಿ, ಸಂವೇದನಾಶೀಲ ವ್ಯಕ್ತಿ ಮತ್ತೆ ಕನಾ೯ಟಕದ ಮುಖ್ಯಮಂತ್ರಿ ಯಾಗಲಿಲ್ಲ ಎಂದರೂ ತಪ್ಪಾಗುವುದಿಲ್ಲ. ಇಂತಹ ರಾಮಕೃಷ್ಣ ಹೆಗಡೆಯವರು ಜನಿಸಿದ್ದು 1926, ಆಗಸ್ಟ್ 29ರಂದು. ಅವರಿದ್ದಿದ್ದರೆ 90 ತುಂಬುತ್ತಿತ್ತು. ಪ್ರಸ್ತುತ ಹೊಲಸೆದ್ದಿರುವ ರಾಜಕಾರಣವನ್ನು ಕಂಡಾಗ ಹೆಗಡೆ ನೆನಪಾದರು.

 Ramakrishna Hegde

Comments are closed.