Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೊಟ್ಟ ಊಟ ಇನ್ನೂರು ಕೋಟಿ, ಇದೇ ಹಸಿದವರ ಪಾಲಿನ ಪುಣ್ಯಕೋಟಿ!

ಕೊಟ್ಟ ಊಟ ಇನ್ನೂರು ಕೋಟಿ, ಇದೇ ಹಸಿದವರ ಪಾಲಿನ ಪುಣ್ಯಕೋಟಿ!

ಕೊಟ್ಟ ಊಟ ಇನ್ನೂರು ಕೋಟಿ, ಇದೇ ಹಸಿದವರ ಪಾಲಿನ ಪುಣ್ಯಕೋಟಿ!

ಸಿಎನ್‍ಎನ್ ಚಾನೆಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಸೇವೆ ಮಾಡಿದವರನ್ನು ಕರೆಸಿ ಅವರಿಗೆ ಸಿಎನ್‍ಎನ್ ಹೀರೋಸ್ ಪ್ರಶಸ್ತೀ ಕೊಟ್ಟು ವಿಶ್ವದ ಎಲ್ಲ ಕ್ಷೇತ್ರದ ಗಣ್ಯರ ಮುಂದೆ ಗೌರವ ಸಲ್ಲಿಸಿ, ಅವರ ಹೋರಾಟದ ದಾರಿಯ ಕತೆಯನ್ನು ವಿಡಿಯೊ ಮೂಲಕ ಪ್ರದಶಿ೯ಸಲಾಗುತ್ತದೆ. ಇಂಥ ಕಾಯ೯ಕ್ರಮದಲ್ಲಿ ಒಮ್ಮೆ ತಮಿಳುನಾಡಿನ ನಾರಾಯಣನ್ ಕೃಷ್ಣನ್ ಅವರನ್ನು ಹೀರೋ ಆಗಿ ಕರೆಸಲಾಗಿತ್ತು. ಆ ಕಾಯ೯ಕ್ರಮ ನೋಡಿದವರಿಗೆ ಹಸಿವು ಎಷ್ಟು ಘೋರವಾದದ್ದೆಂದು ಅರಿವಿಗೆ ಬಾರದೇ ಇರದು. ನಾರಾಯಣನ್ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಅವರು ಒಮ್ಮೆ ತಮಿಳುನಾಡಿನಲ್ಲಿರುವ ತಮ್ಮ ಹುಟ್ಟೂರಿಗೆ ಬಂದಾಗ ಜನರ ಹಸಿವು ಹೇಗಿದೆ ಎಂಬುದನ್ನು ಕಣ್ಣಾರೆ ಕಂಡರು. ಒಬ್ಬ ವೃದ್ಧನಂತೂ ತಿನ್ನಲು ಏನೂ ಸಿಗದೇ ಹಸಿವನ್ನು ತಡೆಯಲಾಗದೆ ತಾನು ವಿಸಜಿ೯ಸಿದ ಮಲವನ್ನೇ ತಿನ್ನುತ್ತಿದ್ದ. ಇದನ್ನು ನೋಡಿ ನಾರಾಯಣನ್‍ಗೆ ತಡೆಯುವುದಕ್ಕಾಗಲಿಲ್ಲ. “ನಾನು ಮಾತ್ರ ಫೈವ್ ಸ್ಟಾರ್ ಹೋಟೆಲ್ ನಲ್ಲಿದ್ದೇನೆ, ಆದರೆ ನನ್ನ ಊರಿನವರು ಹಸಿವಿನಿಂದ ತಮ್ಮ ಮಲವನ್ನೇ ತಿನ್ನುತ್ತಿದಾರೆ ಎಂದರೆ, ನಾನು ಜೀವನದಲ್ಲಿ ಏನು ಮಾಡುತ್ತಿದ್ದೇನೆ? ಹಸಿದವರ ಹೊಟ್ಟೆ ತಂಪಾಗಿಡದ ನನ್ನ ಬದುಕು ವ್ಯಥ೯’ ಎಂದು ಅಂದೇ ತೀಮಾ೯ನ ತೆಗೆದುಕೊಂಡು, ತಾನು ಕೆಲಸ ಮಾಡುತ್ತಿದ್ದ ಸ್ಟಾರ್ ಹೋಟೆಲ್‍ಗೆ ರಾಜೀನಾಮೆ ಸಲ್ಲಿಸಿ, ಬಡವರ ಸೇವೆಗೆ ನಿಂತರು. ಮೊದಲು ತಮ್ಮ ಊರಿನಿಂದ ಶುರು ಮಾಡಿದ ಕಾಯ೯ ಇಂದು ತಮಿಳು ನಾಡಿನ ಬೀದಿ ಬೀದಿಯಲ್ಲಿ, ಮೋರಿಯ ಪ್ಯೆಪ್‍ಗಳ ಒಳಗೆ ಇರುವ ಬುದ್ಧಿಮಾಂದ್ಯರು, ಕಡು ಬಡವರು, ಭಿಕ್ಷುಕರು ಎಲ್ಲರಿಗೂ ಇವರದ್ದೇ ಆಹಾರ ಸರಬರಾಜು ಮಾಡುವಲ್ಲಿಗೆ ಬಂದಿದೆ. ಈ ವಿಡಿಯೊವನ್ನು ನೋಡುತ್ತಿದ್ದ ವಿಶ್ವದ ಹಲವೆಡೆಯ ಮಂದಿ ಒಮ್ಮೆ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾ ನಾರಾಯಣನ್ ಕೃಷ್ಣನ್‍ರನ್ನು ಸ್ಟೇಜ್ ಮೇಲೆ ಸ್ವಾಗತಿಸಿದಾಗ ಮ್ಯೆ ರೋಮಾಂಚನಗೊಂಡಿತ್ತು. ಆದರೆ, ನಾರಾಯಣನ್ ಹೇಳಿದ ಆ ಅಜ್ಜನ ಚಿತ್ರಣ ಮಾತ್ರ ಕಣ್ಣ ಮುಂದೆ ಬಂದು, ಆ ಖುಷಿಯೆಲ್ಲವೂ ಮಾಸುವಂತೆ ಮಾಡಿತ್ತು. ಆ ಒಬ್ಬ ಅಜ್ಜನನ್ನು ನಾರಾಯಣನ್ ಅಂದು ಬಚಾವ್ ಮಾಡಿ, ಅನ್ನ ನೀಡಿದರು, ಆದರೆ ಇಂದಿಗೂ ಅಂಥವರು ಅದೆಷ್ಟಿಲ್ಲ? ಅವರಿಗೆಲ್ಲ ಅನ್ನ ಕೊಡುವವರು ಯಾರು? ಎಷ್ಟು ಜನ ಹಾಗೇ ಹಸಿವಿನಿಂದ ಸತ್ತಿರಬಹುದು? ಹೀಗೆಲ್ಲ ಆಲೋಚನೆಗಳು ಕಾಡುತ್ತವೆ.

ಡೈ ನಿಂಗ್ ಟೇಬಲ್ ಮೇಲೆ ಅಮ್ಮ ಊಟ ಇಟ್ಟಿರುತ್ತಾಳೆ. ಅತ್ಯಂತ ರುಚಿ, ಶುಚಿಯ ಊಟ. ಮಕ್ಕಳು ಹೋಗಿ ಅಧ೯ ತಿನ್ನುತ್ತಿದ್ದಂತೆ, “ನನಗೆ ಇನ್ನು ಊಟ ಬೇಡಮ್ಮಾ, ಸಾಕು’ ಎನ್ನುತ್ತಾರೆ. ಅಡುಗೆ ಮನೆಯಲ್ಲಿದ್ದ ಅಮ್ಮನೂ, ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಂಡಿರುವ ಅಪ್ಪನೂ ಒಂದೇ ಒಂದು ತಕರಾರು ಮಾಡದೇ “ಆಯ್ತು ಮಗು ಹೋಗಿ ಕೈ ತೊಳೆ’ ಎನ್ನುತ್ತಾರೆ. ಮಕ್ಕಳೂ ಎದ್ದು ಹೋಗುತ್ತವೆ. ಇದು ಭಾರತದ ಚಿತ್ರಣ ಎಂದುಕೊಂಡರೆ, ಅದು ನಮ್ಮ ಮೂಖ೯ತನವೇ ಸರಿ. ನಮಗೆಲ್ಲ ತಿನ್ನುವುದಕ್ಕೆ ಅನ್ನ ಸಿಗುವುದಲ್ಲದೇ, ಕಸದ ಬುಟ್ಟಿಗೆ ಹಾಕುವುದಕ್ಕೂ ಅನ್ನ ಸಿಗುತ್ತದೆ. ಆದರೆ, ನೆನಪಿರಲಿ ಅಲ್ಲೆಲ್ಲೋ ಇನ್ನೊಬ್ಬನಿಗೆ ಕಸದ ಬುಟ್ಟಿಯೇ ಊಟದ ಸ್ಥಳವಾಗಿ ಬಿಟ್ಟಿರುತ್ತದೆ. ಭಾರತದ ಚಿತ್ರಣ ಅನ್ನವನ್ನು ಕಸದಬುಟ್ಟಿಗೆ ಹಾಕುವು ದರಿಂದ ಶುರುವಾಗುವುದಿಲ್ಲ, ಕಸದ ಬುಟ್ಟಿಯಲ್ಲೇ ಅನ್ನ ತಿನ್ನುವವನಿಂದ ಶುರುವಾಗುತ್ತದೆ.

  2015ರಲ್ಲಿ ಒಂದು ಆಘಾತಕಾರಿ ಸುದ್ದಿಯೊಂದು ಹೊರಬಂದಿತ್ತು, ಯುನೈಟೆಡ್ ನೇಷನ್ಸ್ ನ ಪುಡ್ ಎಂಡ್ ಅಗ್ರಿಕಲ್ಚರ್ ಆಗ೯ನೈಸೇಷನ್‍ನ ಕೈಗೊಂಡ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಹತ್ತೊಂಬತ್ತು ಕೋಟಿ ನಲವತ್ತಾ ರು ಲಕ್ಷ ಜನ ಕೇವಲ ಹಸಿವಿನಿಂದ ಮತ್ತು ಅಪೌಷ್ಟಿಕತೆಯಿಂದ ಪ್ರಾಣ ಬಿಟ್ಟಿದ್ದಾರೆ. ಇದರಲ್ಲಿ ಇನ್ನು ಅಚ್ಚರಿಯ ಮತ್ತು ಖೇದಕರ ಸಂಗತಿಯೆಂದರೆ, ದಿನವೊಂದಕ್ಕೆ ದೇಶದಲ್ಲಿ 3,000 ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಇದೆಲ್ಲ ನೋಡಿದಾಗ ಕರುಳು ಕಿತ್ತು ಬರುವುದಂತೂ ನಿಜ.

  ಇವತ್ತಿಗೂ ಮದುವೆ ಇತ್ಯಾದಿ ಶುಭಕಾಯ೯ಕ್ರಮಗಳು ನಡೆದ ಕಲ್ಯಾಣಮಂಟಪಗಳಲ್ಲಿ ಪ್ರತಿ ಪಂಕ್ತಿಯಲ್ಲಿ ಊಟವಾದ ನಂತರವೂ ಆ ಬಾಳೆ ಎಲೆಯಲ್ಲಿ ಬಿಟ್ಟ ಅನ್ನವನ್ನು ಎಸೆಯುತ್ತಾರೆ. ಆ ಎಂಜಲು ಬಾಳೆಗಳ ಮಧ್ಯೆಯೇ ಕುಳಿತು ಸಿಕ್ಕಿದ್ದನ್ನು ತಿನ್ನುತ್ತಾ, ಬೇರೆ ಎಲ್ಲವನ್ನೂ ಪೊಟ್ಟಣದ ಒಳಗೆ ತುಂಬಿಕೊಳ್ಳುತ್ತಿರುವವರನ್ನು ನೋಡಿದರೆ, ಭಾರತದ ಹಸಿವಿನ ಚಿಂತೆ ದೂರದ ಮಾತು, ಕನಾ೯ಟಕದ ಹಸಿವಿನ ಅರಿವಾಗುತ್ತದೆ. ಇತ್ತೀಚಿನ ಒಂದು ಉದಾಹರಣೆಯೆಂದರೆ, ಕನಾ೯ಟಕದ ಒಂದು ಊರಿನಲ್ಲಿ ಗಣರಾಜ್ಯೋತ್ಸವ ಆಚರಿಸಿ, ಭಾರತದ ಧ್ವಜ ಏರಿಸುವಾಗ, ಆ ಧ್ವಜದ ಕಂಬದೆದುರೇ ಹಸಿವೆಂದು ಮಲಗಿದ್ದ ವ್ಯಕ್ತಿಯನ್ನು ಎತ್ತಿ ಪಕ್ಕಕ್ಕೆಸೆದು ಧ್ವಜ ಏರಿಸಲಾಯ್ತು. ಆ ಮನುಷ್ಯ, ತನಗೆ ಹಸಿವಾಗುತ್ತಿದೆ, ತಿನ್ನುವುದಕ್ಕೆ ಏನಾದ್ರೂ ಕೊಡಿ ಎಂದು ಗೋಗರೆದರೂ ಯಾರಿಗೂ ಅಥ೯ವಾಗಲೇ ಇಲ್ಲ. ಮಾರನೇ ದಿನವೇ ಆತ ಬೀದಿ ಹೆಣವಾದ. ರಾಜ್ಯವನ್ನು ಹಸಿವು ಮುಕ್ತವಾಗಿಸಲು ರಾಜ್ಯ ಸರಕಾರವೇನೊ 1 ರು.ಗೆ ಕೆ.ಜಿ. ಅಕ್ಕಿ ನೀಡುವ ಯೋಜನೆ ಜಾರಿ ಮಾಡಿದೆ. ಆದರೆ ಆ ಅಕ್ಕಿ ಪಡೆಯಲು ರೇಶನ್ ಕಾಡ್‍೯ ಇರಬೇಕು. ರೇಶನ್ ಕಾಡ್‍೯ ಇಲ್ಲವೆಂದರೆ ಆತ ಹಸಿವುಮುಕ್ತವಾಗಲಾರ!

  ಇಂಥ ಹಸಿವಿನ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು. ಹಾಗೆಯೇ ಹಸಿವು ನೀಗಿಸುವುದು ಸುಲಭದ ಕೆಲಸವಲ್ಲ ಹಾಗೂ ಸಾಧಾರಣ ಜವಾಬ್ದಾರಿಯೂ ಅಲ್ಲ. ಹಸಿವಿನಿಂದ ಬಳಲುತ್ತಿರುವವರನ್ನು ಕಂಡು ನಾವೆಲ್ಲ ಮರುಗುತ್ತೇವೆಯೇ ವಿನಃ ಹಸಿದವರಿಗೆ ಅನ್ನ ನೀಡಲು ಯಾರೂ ಮುಂದೆ ಬರುವುದಿಲ್ಲ. ನಾರಾಯಣನ್‍ರಂಥ ಕೆಲವೇ ಕೆಲವು ಜನ ಹಸಿದವರ ಕಷ್ಟಕ್ಕೆ ಸ್ಪಂದಿಸುತ್ತಾರಷ್ಟೇ. ಆದರೆ ಒಂದು ಸಂಸ್ಥೆಯೇ ಹಸಿದವರ ಹೊಟ್ಟೆ ತುಂಬಿಸಲು ಮುಂದೆ ಬಂದರೆ ಅವೆಷ್ಟೋ  ಜೀವಗಳನ್ನು ಬದುಕಿಸಬಹುದಲ್ಲವೇ? ಇಸ್ಕಾನ್‍ನ ಅಕ್ಷಯ ಪಾತ್ರ ಯೋಜನೆ ಅಂತಹ ಕೆಲಸ ಮಾಡುತ್ತಿದೆ.

  ಇವರಿಗೆ ಈ ಹಸಿವನ್ನು ನಿವಾರಿಸುವ ಒಂದು ಆಲೋಚನೆ ಹೇಗೆ ಬಂತು ಮತ್ತು ಅದು ಒಂದು ಗಟ್ಟಿ ನಿಧಾ೯ರ ಹೇಗಾಯ್ತು ಎಂದು ಹುಡುಕಿದಾಗ ಮತ್ತೆ ನಾರಾಯಣನ್ ಕೃಷ್ಣನ್‍ರೇ ಕಾಣುತ್ತಾರೆ.

ಜನರ ಹಸಿವನ್ನು ನೀಗಿಸುವ ಇಸ್ಕಾನ್ ಕಾಯ೯ ಮೊದಲು ಬೆಂಗಳೂರಿನಲ್ಲಿ ಆರಂಭಗೊಂಡಿದ್ದು 2000ನೇ ಇಸವಿಯಲ್ಲಿ. ಹಸಿದವರಿಗೆ ಊಟ ನೀಡುವುದು ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಕನಸು. ಒಮ್ಮೆ ಅವರು ಕೋಲ್ಕತ್ತಾ ಬಳಿಯ ಮಾಯಾಪುರ ಎಂಬಲ್ಲಿಗೆ ಹೋಗಿದ್ದರು. ಅಲ್ಲಿ ವಿಹರಿಸುತ್ತಿದ್ದಾಗ ಅವರು ಒಂದು ಘಟನೆಗೆ ಸಾಕ್ಷಿಯಾದರು. ಅಲ್ಲಿ ಮಕ್ಕಳ ಒಂದು ಗುಂಪು ಬೀದಿ ನಾಯಿಗಳ ಜತೆ ಕಿತ್ತಾಡುತ್ತಿತ್ತು. ಇದು ಸಹಜ ಎನಿಸಬಹುದು ಕೆಲವರಿಗೆ, ಆದರೆ ಮಕ್ಕಳು ಸುಮ್ಮನೆ ಕಿತ್ತಾಡುತ್ತಿರಲಿಲ್ಲ, ಬದಲಿಗೆ ನಾಯಿಗಳ ಬಳಿಯಿದ್ದ ರೊಟ್ಟಿ ಚೂರಿಗಾಗಿ ಕಾದಾಟ ನಡೆಯುತ್ತಿತ್ತು. ರೊಟ್ಟಿ ಬಿಟ್ಟು ಕೊಡದ ನಾಯಿಗಳು ಮತ್ತು ಹೇಗಾದರೂ ಮಾಡಿ, ರೊಟ್ಟಿ ಚೂರನ್ನು ತಿಂದೇ ತಿನ್ನುತ್ತೇವೆ ಎಂದು ಮಕ್ಕಳು. ನಾಯಿ ಮತ್ತು ಮಕ್ಕಳು ಇಬ್ಬರಲ್ಲೂ ಇದ್ದದ್ದು ಒಂದೇ ಒಂದು, ಅದು ಹಸಿವು ಮಾತ್ರ. ಒಂದು ರೊಟ್ಟಿಗಾಗಿ ಮಕ್ಕಳು ತಮ್ಮ ಜೀವವನ್ನೇ ಅಡವಿಟ್ಟು ನಾಯಿಗಳ ಜತೆ ಕಿತ್ತಾಡುತ್ತಿರುವ ದೃಶ್ಯ ಕಂಡು ಪ್ರಭುಪಾದರ ಮನ ಕಲಕಿತು. ಜಗತ್ತಿನ ಜನರ ಹಸಿವನ್ನು ನೀಗಿಸಲಾಗದಿದ್ದರೂ ಭಗವಂತನ ದಯೆಯಿಂದ ತಮ್ಮ ಕೈಲಾದ ಮಟ್ಟಿಗೆ ಹಸಿದವರಿಗೆ ಅನ್ನ ನೀಡೋಣವೆಂದು ಶಪಥ ಮಾಡಿದವರು. ಆ ಒಂದು ಘಟನೆ “ಅನ್ನಯಾತ್ರೆ’ಗೆ ನಾಂದಿ ಹಾಡಿತು.

  “ಅಕ್ಷಯ ಪಾತ್ರ ಪ್ರತಿಷ್ಠಾನ’ ಹುಟ್ಟಿದ್ದು ಹೀಗೆ. ‘No child shall be deprived of education because of hunger’ (ಯಾವ ಮಗುವೂ ಕೂಡ ಹಸಿವಿನ ಕಾರಣದಿಂದ ಶಿಕ್ಷಣದಿಂದ ವಂಚಿತವಾಗಬಾರದು) ಎಂಬುದನ್ನೇ ತಮ್ಮ ಧ್ಯೇಯೋದ್ದೇಶ ವನ್ನಾಗಿಸಿಕೊಂಡು ಪ್ರತಿಷ್ಠಾನ ಮುಂದೆ ಸಾಗಿತು. ಅಂದು ಮೊದಲನೇ ಊಟದಿಂದ ಶುರುವಾದ ಇವರ ಪಯಣ ಇಂದು ಇನ್ನೂರು ಕೋಟಿ ಊಟಗಳನ್ನು ಪೂರೈಕೆ ಮಾಡಿದೆ. ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ, ಒಂದು ದಿನವೂ ತಪ್ಪಿಸದಂತೆ, ರುಚಿ, ಸ್ವಚ್ಛತೆಯಲ್ಲಿ ಕೊರತೆಯಾಗದಂತೆ ಅಷ್ಟು ಊಟಗಳನ್ನು ಒದಗಿಸುವುದು ಸಣ್ಣ ಮಾತಲ್ಲ.

  2000ರ ಜೂನ್‍ನಿಂದ ಅಕ್ಷಯಪಾತ್ರ ಫೌಂಡೇಶನ್ ಬೆಂಗಳೂರಿನ 5 ಸರಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲು ಪ್ರಾರಂಭಿಸಿತು. ನಿಧಾ೯ರವನ್ನೇನೋ ಮಾಡಿಯಾಗಿತ್ತು. ಆದರೆ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಶಾಲೆಗಳಿಗೆ ಊಟ ಒದಗಿಸುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. “ಅನ್ನಸೇವೆ’ಗೆ ದಾನಿಗಳೂ ಕೈ ಜೋಡಿಸಿದರು. ಮಣಿಪಾಲ್ ಗ್ಲೋಬಲ್ ಎಜುಕೇಶನ್‍ನ ಚೇರ್‍ಮನ್ ಸಿಎ ಮೋಹನದಾಸ್ ಪ್ಯೆ ಅವರು ಶಾಲೆಗಳಿಗೆ ಊಟ ಸಾಗಿಸಲು ಮೊದಲ ವಾಹನವನ್ನು ನೀಡಿದರು. ಅಭಯ್ ಜೈನ್ ಅವರು ದಾನಿಗಳಿಂದ ಹಣ ಸಂಗ್ರಹಿಸಿ ಇನ್ನಷ್ಟು ಶಾಲೆಗಳಿಗೆ ಈ ಅನುಕೂಲ ಸಿಗುವಂತೆ ಮಾಡುವ ಪಣ ತೊಟ್ಟರು. ಮೊದಲಿಗೆ 5 ಶಾಲೆಗಳ 1500 ಮಕ್ಕಳಿಗೆ ಊಟ ನೀಡಲಾಗುತ್ತಿತ್ತು. ಆದರೆ ಇಂದು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದಿಂದ ವಿಶ್ವದಲ್ಲೇ ಅತಿಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಸಂಸ್ಥೆಯಾಗಿ ಬೆಳೆದಿದೆ.

  ದೊಡ್ಡ ಸಂಸ್ಥೆಯಾಗಿ ಬೆಳೆದಿರುವುದು ದೊಡ್ಡ ಮಾತಲ್ಲ. ಆದರೆ “ಅಕ್ಷಯ ಪಾತ್ರ’ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದು ದೊಡ್ಡ ಸವಾಲು. ಇಷ್ಟು ದೊಡ್ಡ ಮಟ್ಟದ ಯೋಜನೆ ಎಲ್ಲೂ ಚಾಚೂತಪ್ಪದಂತೆ ನಡೆಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ ಉಂಡು ಅಸ್ವಸ್ಥರಾದ ಸುದ್ದಿಯನ್ನು ಬೇಕಾದಷ್ಟು ಓದಿದ್ದೇವೆ. ಆದರೆ “ಅಕ್ಷಯ ಪಾತ್ರ’ ಪೂರೈಸುವ ಊಟದ ಬಗ್ಗೆ ಅಂತಹ ಒಂದೇ ಒಂದು ದೂರು ಸಹ ಇಲ್ಲ. ಗುಣಮಟ್ಟದ ಬಗ್ಗೆ ಅಷ್ಟು ಕಾಳಜಿ. ಉಚಿತವಾಗಿ ನೀಡುವ ಊಟ ಎಂಬ ತಾತ್ಸಾರದ ಅಂಶ ಸಾಸಿವೆಯಷ್ಟೂ ಕಾಣುವುದಿಲ್ಲ. ಇದರ ನಿವ೯ಹಣೆ ಕಾಯ೯ದಲ್ಲಿ ಎಂಬಿಎ, ಐಐಟಿ ಮಾಡಿದ ವ್ಯಕ್ತಿಗಳಿದ್ದಾರೆ ಎಂಬುದು ಆ ಯೋಜನೆಗೆ ಸಂಸ್ಥೆ ಎಷ್ಟು ಮಹತ್ವ ನೀಡಿದೆ ಎಂಬುದರ ಅರಿವಾಗುತ್ತದೆ. ಒಂದು ಮದುವೆ ಮನೆ ಅಡುಗೆಗೆ ಸರಂಜಾಮುಗಳನ್ನು ಹೊಂದಿಸಲು ಎಷ್ಟು ಕಷ್ಟವಾಗುತ್ತದೆ ಎಂಬುದು ಆ ಕೆಲಸ ಮಾಡುವವರಿಗೆ ಗೊತ್ತು. ಹೀಗಿರುವಾಗ ವಷ೯ಪೂತಿ೯ ಅಡುಗೆಗೆ ಬೇಕಾದ ಸರಂಜಾಮುಗಳನ್ನು ಹೊಂದಿಸಿ, ಅವುಗಳನ್ನು ಸಂಸ್ಕರಿಸಿ, ಮಳೆ, ಬಿಸಿಲು, ಚಳಿ ಏನೇ ಇದ್ದರೂ ಲೆಕ್ಕಿಸದೇ ಸರಿಯಾದ ಸಮಯಕ್ಕೆ ರುಚಿಕಟ್ಟಾದ ಊಟ ತಪ್ಪದೇ ತಲುಪಿಸುವ ಕಾಯ೯ ಅಂದುಕೊಂಡಷ್ಟು ಸುಲಭದ್ದಲ್ಲ. ಮಾನವ ಕಾಯ೯ದ ಜತೆಗೆ ದೇವಾಂಶವೂ ಇದರಲ್ಲಿ ಬೆರೆತಿದೆ ಎಂಬುದರಲ್ಲಿ ಅನುಮಾನವಿಲ್ಲ.

  ಇಸ್ಕಾನ್‍ನ “ಅಕ್ಷಯಪಾತ್ರ’ ಯೋಜನೆ ಅಕ್ಷಯವಾಗಲಿ ಎಂದು ಹಾರೈಸೋಣ.

  ISKCON

Comments are closed.