*/
Date : 04-09-2013 | 17 Comments. | Read More
ಯಾಸಿನ್ ಭಟ್ಕಳ್ ರಿಯಾಝ್ ಭಟ್ಕಳ್ ಇಕ್ಬಾಲ್ ಭಟ್ಕಳ್ ಬಿಹಾರದ ಬಳಿಯ ನೇಪಾಳದ ಗಡಿಯಲ್ಲಿ ‘ಇಂಡಿಯನ್ ಮುಜಾಹಿದ್ದೀನ್’ ಎಂಬ ಭಯೋತ್ಪಾದಕ ಸಂಘಟನೆಯ ಸಹಸಂಸ್ಥಾಪಕ ಯಾಸಿನ್ ಭಟ್ಕಳನನ್ನು ಬಂಧಿಸಿರುವ ವಿಷಯ ಗುರುವಾರ ಬೆಳಗ್ಗೆ ಹೊರಬಿದ್ದ ನಂತರ ಸತತವಾಗಿ ಈ ಹೆಸರುಗಳು ನಮ್ಮ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇ ಪದೆ ಪ್ರಸ್ತಾಪವಾಗುತ್ತಿವೆ. ಯಾಸಿನ್ ಭಟ್ಕಳ್ ಎಂತಹ ಖತರ್ನಾಕ್ ಮನುಷ್ಯ ಎಂಬುದನ್ನು ವಿವರಿಸಲಾಗುತ್ತಿದೆ. ಆತನ ಬಂಧನ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಎಷ್ಟು ದೊಡ್ಡ ಯಶಸ್ಸು ಎಂಬುದನ್ನು ಬಿಡಿಸಿ ಹೇಳಲಾಗುತ್ತಿದೆ. ‘ರಾ’, ‘ಐಬಿ’, ‘ಸಿಬಿಐ’ನ […]
Date : 26-08-2013 | 18 Comments. | Read More
2013, ಜುಲೈ 3ರಂದು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೋರ್ಸಿಯವರನ್ನು ಕಿತ್ತೊಗೆದ ನಂತರ ಮೋರ್ಸಿಯವರ ಬೆಂಬಲಕ್ಕೆ ನಿಂತಿರುವ ‘ಮುಸ್ಲಿಂ ಬ್ರದರ್ಹುಡ್’ ಹಾಗೂ ಪ್ರತಿಪಕ್ಷಗಳು-ಉದಾರವಾದಿಗಳ ನಡುವೆ ಆರಂಭವಾದ ಸಂಘರ್ಷಕ್ಕೆ ಇದುವರೆಗೂ 850ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ! ಮತ್ತೊಂದು ಅರಬ್ ರಾಷ್ಟ್ರವಾದ ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸೇನೆ ಮುಸ್ಲಿಂ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಮೊನ್ನೆ ಬುಧವಾರ ನಡೆಸಿದ ವಿಷಾನಿಲ ದಾಳಿಯಲ್ಲಿ ಮಹಿಳೆಯರು, ಮಕ್ಕಳೆನ್ನದೇ 1300 ಸ್ವಧರ್ಮೀಯರು ಇದ್ದಲ್ಲೇ ಹೆಣವಾಗಿದ್ದಾರೆ!!
Date : 18-08-2013 | 30 Comments. | Read More
2012, ಫೆಬ್ರವರಿ-ಮಾರ್ಚ್. ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ಏರ್ಪಾಡಾಗಿತ್ತು. ಅದಕ್ಕೂ ಮುನ್ನ 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅನಿರೀಕ್ಷಿತವಾಗಿ 21 ಸ್ಥಾನಗಳು ದೊರೆತಿದ್ದವು. ಸಾಮಾನ್ಯವಾಗಿ ಕಾಂಗ್ರೆಸ್ನಲ್ಲಿ ಗೆಲುವನ್ನು ನೆಹರು ಕುಟುಂಬದ ತಲೆಗೂ, ಸೋಲನ್ನು ಯಾವುದಾದರೂ ರಾಜ್ಯ ನಾಯಕರು ಅಥವಾ ಪಕ್ಷದ ತಲೆಗೆ ಕಟ್ಟುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅಂತೆಯೇ 2009ರ ಗೆಲುವನ್ನು ಕಾಂಗ್ರೆಸ್ಸಿಗರು ರಾಹುಲ್ಗಾಂಧಿಯವರಿಗೆ ಸಮರ್ಪಿಸಿದರು. ಪಾಪ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ರಾಹುಲ್ಗಾಂಧಿಯವರೂ ತಮ್ಮ ಸಾಮರ್ಥ್ಯದ ಬಗ್ಗೆ, ನೆಹರು-ಗಾಂಧಿ ಕುಟುಂಬದ ವರ್ಚಸ್ಸಿನ […]
Date : 11-08-2013 | 62 Comments. | Read More
ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ? ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡದೇ ಇರುತ್ತಿದ್ದರೇ? ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳದೆ, ಎಚ್ಚರಿಕೆ ಕೊಡದೆ, ಧಮಕಿ ಹಾಕದೆ ಸುಖಾಸುಮ್ಮನೆ ಕುಳಿತುಕೊಳ್ಳುತ್ತಿದ್ದರೇ? ಇಷ್ಟಕ್ಕೂ, ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಧಾನಿಯೇಕೆ ಬಾಯ್ಬಿಡುತ್ತಿಲ್ಲ? 2013 ಜನವರಿ 8ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಮ್ಮ ಒಬ್ಬ ಸೈನಿಕನ ಕುತ್ತಿಗೆ ಕಡಿದು ಬರೀ […]
Date : 09-08-2013 | 22 Comments. | Read More
ಹಾಗಂತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಹಾಲಿ ಸರ್ಕಾರವನ್ನು ಹಾಗೂ ಈ ಹಿಂದಿನ ವಾಜಪೇಯಿ ಸರ್ಕಾರವನ್ನೂ ಕೇಳಲೇಬೇಕಾಗಿದೆ. ಇಷ್ಟಕ್ಕೂ ಒಬ್ಬ ತಂದೆಯಾದವನು, ತಾಯಿಯಾದವಳು ಏಕಾಗಿ ತನ್ನ ಕರುಳ ಕುಡಿಯನ್ನು ದೇಶ ಕಾಯಿ ಎಂದು ಕಳುಹಿಸಬೇಕು? ಏಕಾಗಿ ತನ್ನ ಮಗನ ಪ್ರಾಣ ಯಾವ ಕ್ಷಣದಲ್ಲೂ ಬಲಿಯಾಗುವಂಥ ಕಾರ್ಯಕ್ಕೆ ಕಳುಹಿಸಬೇಕು? “ಯಾವ ಸೈನಿಕನೂ ಭಾರತಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಬಾರದು” ಎಂದು ಡಾ. ಎನ್.ಕೆ. ಕಾಲಿಯಾ 2012, ಡಿಸೆಂಬರ್ನಲ್ಲಿ ಏಕಾಗಿ ಹೇಳಿಕೆ ನೀಡಿದ್ದರು? ಅಂಥದ್ದೊಂದು ಹೇಳಿಕೆಯನ್ನು ಕೊಡುವ ಮಟ್ಟಕ್ಕೆ ಕೊಂಡೊಯ್ದ ಅವರ […]
Date : 28-07-2013 | 20 Comments. | Read More
ಕ್ಯಾಪ್ಟನ್ ವಿಕ್ರಂ ಬಾತ್ರಾ ಕ್ಯಾಪ್ಟನ್ ಹನೀಫುದ್ದೀನ್ ಲೆಫ್ಟಿನೆಂಟ್ ಸೌರಭ್ ಕಾಲಿಯಾ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮೇಜರ್ ಮರಿಯಪ್ಪನ್ ಸರವಣನ್ ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್ ರೈಫಲ್ಮನ್ ಮೊಹಮದ್ ಅಸ್ಲಾಂ
Date : 22-07-2013 | 18 Comments. | Read More
ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ ಹತ್ತು ಮಕ್ಕಳಿಗಾಗುವಷ್ಟು ವಿಟಮಿನ್ಯುಕ್ತ ಆಹಾರವನ್ನು ತಟ್ಟೆತುಂಬಾ ತುಂಬಿಕೊಂಡು ಅಯ್ಯೋ ನನ್ನ ಮಗ ತಿನ್ನಲ್ಲ, ಅಯ್ಯೋ ನನ್ನ ಮಗಳು ಬಾಯಿಗೇ ಹಾಕಿಸಿಕೊಳ್ಳುವುದಿಲ್ಲ ಎಂದು ಹಳಹಳಿಸುವ, ಕೊನೆಗೆ ಬಿಸಾಡುವ ತಾಯಂದಿರು ಒಂದು ಕಡೆ, ಇನ್ನೊಂದು ಕಡೆ ಊಟಕ್ಕೂ ಗತಿಯಿಲ್ಲದೆ ತಮ್ಮ ಮಕ್ಕಳಿಗಾದರೂ ಒಂದು ಹೊತ್ತಿನ ಊಟ ಸಿಗಲಿ ಎಂದು ಹಪಾಹಪಿಸುವ ಬಡ ತಾಯಂದಿರು. ಹಾಗೆಯೇ, ಶಾಲೆಗೆ ಕಟ್ಟಿಕೊಟ್ಟ ಡಬ್ಬ ಹಾಗೇ ವಾಪಸ್ ಬಂದೀತು ಎಂಬ ಚಿಂತೆಯಿಂದ, ಚೆನ್ನಾಗಿ ತಿನ್ನಲಿ ಎಂಬ ಬಯಕೆಯಿಂದ ಬಗೆ ಬಗೆಯ […]
Date : 14-07-2013 | 49 Comments. | Read More
Brother, can you spare a dime? ಇಡೀ ಅಮೆರಿಕವನ್ನೇ ತಲ್ಲಣಗೊಳಿಸಿದ ಈ ಹಾಡನ್ನು “Buddy, Can You Spare a Dime?’ ಎಂದೂ ಹಾಡಲಾಗುತ್ತದೆ. ಅದು 1929, ಆಕ್ಟೋಬರ್. ಅಮೆರಿಕದ ಶೇರು ಮಾರುಕಟ್ಟೆ ಕುಸಿದು ಬಿದ್ದಿತ್ತು, ಶೇರುಗಳ ಬೆಲೆ ಒಂದೇ ಕ್ಷಣದಲ್ಲಿ 40 ಪರ್ಸೆಂಟ್ ಮೌಲ್ಯ ಕಳೆದುಕೊಂಡಿದ್ದವು. ಇದಾದ ಬಳಿಕವೂ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಚೇತರಿಕೆಯ ಭರವಸೆಯನ್ನು ನೀಡುತ್ತಲೇ ಇದ್ದರು. ಆದರೇನಂತೆ ದೇಶದ ಅರ್ಥವ್ಯವಸ್ಥೆ ಮಾತ್ರ ಪಾತಾಳ ಸೇರಲಾರಂಭಿಸಿತು, ಭರವಸೆಯ ಹನಿಗಳು ಆವಿಯಾಗಿ ಹೋದವು, ಬಹಳಷ್ಟು ಜನ […]
Date : 07-07-2013 | 6 Comments. | Read More
2013ನೇ ಸಾಲಿನ ವಿಂಬಲ್ಡನ್ ಚಾಂಪಿಯನ್ಶಿಪ್ ಜೂನ್ 24ರಂದು ಆರಂಭವಾದಾಗ ಭಾರೀ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷೆ ಮಾಡಲಾಗಿತ್ತು. ಗಾಯದ ಸಮಸ್ಯೆಯಿಂದ ಹೊರಬಂದು ಫ್ರೆಂಚ್ ಓಪನ್ ಗೆದ್ದ ರಾಫೆಲ್ ನಡಾಲ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಕಳೆದ ಎರಡು-ಮೂರು ವರ್ಷಗಳಲ್ಲಿ ತೀವ್ರ ಇಳಿಮುಖ ಕಂಡಿರುವ ರೋಜರ್ ಫೆಡರರ್ ವಿಂಬಲ್ಡನ್ ಗೆದ್ದು ಹಳೆಯ ಸ್ಪರ್ಶವನ್ನು ಮತ್ತೆ ತೋರಲು ಪ್ರಾಣವನ್ನೇ ಪಣಕ್ಕಿಟ್ಟಂತೆ ಹೋರಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇನ್ನು ಕಳೆದ ವರ್ಷದ ವಿಂಬಲ್ಡನ್ ಫೈನಲ್ನಲ್ಲಿ ಫೆಡರರ್ ಎದುರು ಸೋತರೂ ವರ್ಷದ […]
Date : 01-07-2013 | 11 Comments. | Read More
ಅದೊಂದು ಮಧ್ಯರಾತ್ರಿ! ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ. ತಲೆಯೊಳಗೆ ನಮ್ಮ ವಿಚಾರಣೆಯ ಚಿತ್ರಣಗಳು ಗಿರಕಿ ಹೊಡೆಯುತ್ತಿದ್ದವು. ನನ್ನನ್ನು ಕೊಠಡಿಯೊಂದರೊಳಗೆ ಕೂಡಿಹಾಕಲಾಗಿತ್ತು ಎಲ್ಲರಿಂದ ದೂರದಲ್ಲಿ. ಅದೇ ವೇಳೆಗೆ ಯಾರೋ ಹಾಲ್ ಕಡೆ ಹೆಜ್ಜೆ ಹಾಕುತ್ತಿರುವ ಸಪ್ಪಳ ಕೇಳಿಸಿತು. ಅಷ್ಟರಲ್ಲಿ ಕದ ತಟ್ಟಿದ ಶಬ್ದವಾಯಿತು. ಕಬ್ಬಿಣದ ಸರಳುಗಳ ಮಧ್ಯೆ ಕರ್ನಲ್ ಆಕ್ಯಾಂಪ್ ಅವರ ಮುಖ ಕಂಡಿತು. ‘ಮಂಡೇಲಾ, ಎಚ್ಚರವಿರುವೆಯಾ?’ ಎಂದರು ಪಿಸುಧ್ವನಿಯಲ್ಲಿ.