Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ!

ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ!

2013ನೇ ಸಾಲಿನ ವಿಂಬಲ್ಡನ್ ಚಾಂಪಿಯನ್‌ಶಿಪ್ ಜೂನ್ 24ರಂದು ಆರಂಭವಾದಾಗ ಭಾರೀ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷೆ ಮಾಡಲಾಗಿತ್ತು. ಗಾಯದ ಸಮಸ್ಯೆಯಿಂದ ಹೊರಬಂದು ಫ್ರೆಂಚ್ ಓಪನ್ ಗೆದ್ದ ರಾಫೆಲ್ ನಡಾಲ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಕಳೆದ ಎರಡು-ಮೂರು ವರ್ಷಗಳಲ್ಲಿ ತೀವ್ರ ಇಳಿಮುಖ ಕಂಡಿರುವ ರೋಜರ್ ಫೆಡರರ್ ವಿಂಬಲ್ಡನ್ ಗೆದ್ದು ಹಳೆಯ ಸ್ಪರ್ಶವನ್ನು ಮತ್ತೆ ತೋರಲು ಪ್ರಾಣವನ್ನೇ ಪಣಕ್ಕಿಟ್ಟಂತೆ ಹೋರಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇನ್ನು ಕಳೆದ ವರ್ಷದ ವಿಂಬಲ್ಡನ್ ಫೈನಲ್‌ನಲ್ಲಿ ಫೆಡರರ್ ಎದುರು ಸೋತರೂ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಆದ ಅಮೆರಿಕನ್ ಓಪನ್ ಗೆದ್ದ ಆ್ಯಂಡಿ ಮರ್ರೆ ಮತ್ತು ಮತ್ತೊಬ್ಬ ನವತಾರೆ ನೋವಾಕ್ ಜೋಕೋವಿಚ್ ಹೀಗೆ C Big Four ವಿಂಬಲ್ಡನ್‌ಗೆ ಮೆರಗು ತರುತ್ತಾರೆ ಎಂದು ಅಂದಾಜಿಸಲಾಗಿತ್ತು.

ಇಷ್ಟಕ್ಕೂ…

ಈ ವಿಂಬಲ್ಡನ್‌ಗೆ ಏನೋ ಒಂದು ಸೆಳೆತವಿದೆ, ಗತ್ತು ಗೈರತ್ತುಗಳಿವೆ. ವಿಂಬಲ್ಡನ್ ಗೆಲ್ಲದಿದ್ದರೆ ಟೆನಿಸ್ ದಂತಕಥೆಯಾದವನೊಬ್ಬನ ಬದುಕೇ ಪರಿಪೂರ್ಣವೆನಿಸುವುದಿಲ್ಲ. ಈ ಮಾತು ಖಂಡಿತ ಅತಿಶಯೋಕ್ತಿಯಲ್ಲ! ವಿಂಬಲ್ಡನ್‌ನಲ್ಲಿ ಆಡುವುದು, ತನ್ನ ಪ್ರಬಲ ಎದುರಾಳಿಯನ್ನು ವಿಂಬಲ್ಡನ್‌ನಲ್ಲೇ ಮಣಿಸಬೇಕೆಂಬ ಹಂಬಲವಿಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಈ ಸಲದ ವಿಂಬಲ್ಡನ್‌ಗೆ ಪೂರ್ವಭಾವಿಯಾಗಿ ಜೂನ್ 22ರಂದು ನೊವಾಕ್ ಜೋಕೋವಿಚ್ ಜತೆ ಖ್ಯಾತ ರಾಯಿಟರ್ಸ್ ಸುದ್ದಿಸಂಸ್ಥೆ ಸಂದರ್ಶನ ನಡೆಸಿದಾಗ ಆತ ಹೇಳಿದ್ದೇನು ಗೊತ್ತೇ?

ಪ್ರಶ್ನೆ: ಒಂದು ವೇಳೆ ಹಳೆಯ ಯಾವುದಾದರೊಬ್ಬ ಆಟಗಾರನ ಜತೆ ಆಡುವುದೇ ಆದರೆ ಆ ಆಟಗಾರ ಯಾರು? ಮತ್ತು ಏಕಾಗಿ ಆತನ ಜತೆ ಆಡಬೇಕೆಂದು ಬಯಸುತ್ತೀರಿ?

ನೊವಾಕ್ ಜೋಕೋವಿಚ್: ಖಂಡಿತ ಆತ ಪೀಟ್ ಸಾಂಪ್ರಾಸ್! ಏಕೆಂದರೆ ಆತ ನನ್ನ ಆರಾಧ್ಯ ದೈವ. ನಾನು ಚಿಕ್ಕವನಿದ್ದಾಗ ಪ್ರೇರಣೆಗಾಗಿ ಆತನತ್ತ ಮುಖಮಾಡುತ್ತಿದ್ದೆ. ಆದರೆ, ಆತನ ಜತೆ ಆಡುವ ಅವಕಾಶವೇ ನನಗೆ ದೊರೆಯಲಿಲ್ಲ. ಒಂದು ವೇಳೆ ಅಂಥ ಅವಕಾಶ ಸಿಗುವುದೇ ಆದರೆ ‘ವಿಂಬಲ್ಡನ್‌’ನಲ್ಲೇ ಆತನನ್ನು ಎದುರಿಸಲು ಬಯಸುತ್ತೇನೆ.

ವಿಂಬಲ್ಡನ್‌ನ ವೈಶಿಷ್ಟ್ಯವೇ ಅದು!

ವಿಂಬಲ್ಡನ್ ಗೆಲ್ಲುವುದು ಪ್ರತಿಯೊಬ್ಬ ಟೆನಿಸ್ ಆಟಗಾರನ ದೊಡ್ಡ ಕನಸು. ಅಲ್ಲಿನ ಹುಲ್ಲು ಹಾಸಿನ ಅಂಕಣಗಳ ಬಗ್ಗೆ ಕುಪಿಸಿಕೊಂಡು Grass is for the cows ಎಂದಿದ್ದ ಸ್ಪೇನ್‌ನ ಮ್ಯಾನ್ಯುವಲ್ ಸಂಟಾನಾ ಕೂಡ 1966ರಲ್ಲಿ ವಿಂಬಲ್ಡನ್ ಗೆದ್ದು ಬೀಗಿದ್ದ. ಸ್ಯಾಂಪ್ರಾಸ್ ತನ್ನ ಕ್ರೀಡಾ ಜೀವನದಲ್ಲಿ ಎಂದೂ ಫ್ರೆಂಚ್ ಓಪನ್ ಗೆಲ್ಲಲಿಲ್ಲ. ಆದರೂ… ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬನೆಂಬ ಹೆಗ್ಗಳಿಕೆ ಗಳಿಸುವುದಕ್ಕೆ ಅದೆಂದೂ ಅಡ್ಡವಾಗಲಿಲ್ಲ. ಒಬ್ಬ ಅತ್ಯುತ್ತಮ ಟೆನಿಸ್ ಆಟಗಾರನೆನಿಸಿಕೊಂಡವನು ಫ್ರೆಂಚ್, ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್‌ಗಳನ್ನು ಎಷ್ಟು ಸಲ ಗೆದ್ದರೂ ವಿಂಬಲ್ಡನ್ ಗೆಲ್ಲದೇ ಹೋದರೆ ಅದು ಅವನನ್ನು ಜೀವನವಿಡೀ ದೊಡ್ಡ ಕೊರಗಾಗಿ ಕಾಡುತ್ತದೆ. ವಿಶ್ವವಿಖ್ಯಾತ ಜೋರ್ನ್ ಬೋರ್ಗ್ 6 ಬಾರಿ ಫ್ರೆಂಚ್ ಓಪನ್ ಗೆದ್ದರೂ ಆತನ ಗ್ರೇಟ್‌ನೆಸ್ ಅನ್ನು ಅಳೆದಿದ್ದು, ಗ್ರೇಟ್ ಆಟಗಾರ ಅಂತ ಕರೆಸಿಕೊಂಡಿದ್ದು 1976ರಿಂದ 1980ರವರೆಗೂ ಸತತ 5 ಬಾರಿಗೆ ವಿಂಬಲ್ಡನ್ ಗೆದ್ದಾಗಲೇ. ಫ್ರೆಂಚ್ ಓಪನ್‌ನಲ್ಲಿ ಆತನಿಗೆ ಸಾಟಿಯೇ ಇರಲಿಲ್ಲ. ಆದರೆ ವಿಂಬಲ್ಡನ್ ಅತ್ಯಂತ ಕಠಿಣ ಸ್ಪರ್ಧೆ, ಪ್ರತಿರೋಧ ಎದುರಾಗುತ್ತಿತ್ತು. ಇದುವರೆಗೂ 8 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ರಾಫೆಲ್ ನಡಾಲ್‌ನನ್ನೂ ಟೆನಿಸ್ ಪ್ರೇಮಿಗಳು ಗೌರವಿಸಲಾರಂಭಿಸಿದ್ದು 2008ರಲ್ಲಿ ಆತ ವಿಂಬಲ್ಡನ್ ಗೆದ್ದ ಮೇಲೆಯೇ. ಫ್ರೆಂಚ್ ಓಪನ್‌ನ ಮಣ್ಣಿನ ಅಂಕಣದ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಕಾಣುವ ರೋಜರ್ ಫೆಡರರ್, ಜೋಕೋವಿಚ್, ಆ್ಯಂಡಿ ಮರ್ರೆ ವಿಂಬಲ್ಡನ್‌ನ ಹುಲ್ಲು ಹಾಸಿನ ಮೇಲೆ ಅತ್ಯಂತ ಕಠಿಣ ಎದುರಾಳಿಗಳಾಗಿ ಬಿಡುತ್ತಾರೆ.

ವಿಂಬಲ್ಡನ್‌ನ ಸೊಬಗೇ ಅಂಥದ್ದು!

200, 210, ಕೆಲವೊಮ್ಮೆ 220 ಕಿ.ಮೀ. ವೇಗದಲ್ಲಿ ಬರುವ ಮೊದಲ ಸರ್ವ್‌ಗಳನ್ನು ನೋಡುವುದೇ ಮನಮೋಹಕ. ಸರ್ವ್ ಹಾಕಿ ನೆಟ್ ಬಳಿಗೆ ಧಾವಿಸಿ ವಾಲಿ ಪ್ರತಿಕ್ರಿಯೆ ನೀಡುವುದಂತೂ ಬಣ್ಣಿಸಲಸದಳ. ಟೆನಿಸ್‌ನ ಇತಿಹಾಸದಲ್ಲೇ ಅತಿ ದೊಡ್ಡ Rivalryಗಳು ಸೃಷ್ಟಿಯಾಗಿದ್ದು, ಅತಿ ದೊಡ್ಡ ಸೆಣಸಾಟಗಳು ನಡೆದಿದ್ದು ವಿಂಬಲ್ಡನ್‌ನಲ್ಲಿ ಮೆಕೆನ್ರೊ ಹಾಗೂ ಬೋರ್ಗ್ ನಡುವೆ 1980ರಲ್ಲಿ ನಡೆದ ವಿಂಬಲ್ಡನ್ ಫೈನಲ್ ಪಂದ್ಯವನ್ನು ಯಾವ ಟೆನಿಸ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷದ ವಿಂಬಲ್ಡನ್ ಟೂರ್ನಿಗೆ ಪೂರ್ವಭಾವಿ Build up ಸಮಯದಲ್ಲಿ ಇಎಸ್‌ಪಿಎನ್ ಸ್ಪೋರ್ಟ್ಸ್ ಚಾನೆಲ್‌ನವರು ಕಡ್ಡಾಯವಾಗಿ ಈ ಪಂದ್ಯವನ್ನು ಮರುಪ್ರಸಾರ ಮಾಡಿಯೇ ಮಾಡುತ್ತಾರೆ. ಇಲ್ಲವಾದರೆ ಯು ಟೂಬ್‌ನಲ್ಲೂ ವೀಕ್ಷಿಸಬಹುದು. ಅದನ್ನು ವಿಂಬಲ್ಡನ್ ಇತಿಹಾಸದಲ್ಲೇ ಅತ್ಯುತ್ತಮ ಫೈನಲ್ ಎಂದು ಪರಿಗಣಿಸಲಾಗಿದೆ. 1980ರ ವೇಳೆಗಾಗಲೇ ಬೋರ್ ಟೆನಿಸ್‌ನ ಜೀವಂತ ದಂತಕಥೆಯಾಗಿದ್ದ. ಸತತ 4 ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಆತ, ಐದನೆಯದಕ್ಕಾಗಿ ಕಾಯುತ್ತಿದ್ದ. ಇತ್ತ ಯುವಕ ಜಾನ್ ಮೆಕೆನ್ರೊ ಆಗಿನ್ನೂ ಟೆನಿಸ್ ಅಂಗಳದಲ್ಲಿ ಕಣ್ಣು ಬಿಡುತ್ತಿದ್ದ. ಇವರಿಬ್ಬರೂ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಬೋರ್ ಪ್ರತಿಭೆಯ ಜತೆ ಉತ್ತಮ ನಡತೆಯಿಂದಲೂ ಹೆಸರಾಗಿದ್ದರೆ, ಮೆಕೆನ್ರೊನ ಕ್ಯಾತೆಗಳು ಅದಾಗಲೇ ಆರಂಭವಾಗಿದ್ದವು. ಜಿಮ್ಮಿ ಕಾನರ್ಸ್ ಜತೆಗಿನ ಸೆಮಿಫೈನಲ್ ಹಣಾಹಣಿ ವೇಳೆ ಅಂಪೈರ್ ಹಾಗೂ ಇತರೆ ಅಧಿಕಾರಿಗಳ ಜತೆ ಕಿತ್ತಾಡಿಕೊಂಡಿದ್ದ ಮೆಕೆನ್ರೊ, ಫೈನಲ್ ಆಡಲು ಸೆಂಟರ್ ಕೋರ್ಟ್‌ಗೆ ಕಾಲಿಡುತ್ತಿದ್ದಂತೆಯೇ ಪ್ರೇಕ್ಷಕರು ಅಣಕಿಸಿ ಸ್ವಾಗತ ನೀಡಿದರು. ಆದರೆ ಪಂದ್ಯ ಆರಂಭವಾದ ನಂತರ ಪರಿಸ್ಥಿತಿಯೇ ಬದಲಾಗತೊಡಗಿತು. ಇಪ್ಪತ್ನಾಲ್ಕು ವರ್ಷದ ಬೋರ್ಗ್ ಒಬ್ಬ ಮಾಸ್ಟರ್ ಆದರೆ, 21 ವರ್ಷದ ಮೆಕೆನ್ರೊ ಪ್ರಳಯಾಂತಕ. ಒಬ್ಬ ಸೌಮ್ಯವಾದಿಯಾದರೆ, ಮತ್ತೊಬ್ಬ ಗಲಾಟೆ ಸ್ವಭಾವದವ. ಇವರಿಬ್ಬರ ಸೆಣಸಾಟ ಆಟವನ್ನೇ ರಂಗೇರಿಸಿತು. ಎಲ್ಲರನ್ನೂ ನೇರ ಸೆಟ್‌ಗಳಲ್ಲಿ ಸೋಲಿಸುತ್ತಿದ್ದ ಬೋರ್ಗ್ ಮೊದಲನೇ ಸೆಟ್ ಅನ್ನು 1-6ರಿಂದ ಸೋತು ಬಿಟ್ಟ ಎರಡನೇ ಸೆಟ್ ಟೈ ಬ್ರೇಕರ್‌ಗೆ ಹೋಯಿತು. ಆತನ ನಾಗಾಲೋಟಕ್ಕೆ ಕಡಿವಾಣ ಬಿತ್ತು ಎಂದು ಎಲ್ಲರೂ ಅಂದುಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹೇಗೋ ಪರದಾಡಿ ಎರಡನೆ ಸೆಟ್ ಗೆದ್ದುಕೊಂಡ ಬೋರ್ಗ್, ಮೂರನೇ ಸೆಟ್ ಅನ್ನು 6-3ರಿಂದ ತನ್ನದಾಗಿಸಿಕೊಂಡ. ಮತ್ತೆ ನಿರೀಕ್ಷೆಗಳು ಬೋರ್ಗ್ ಪರ ವಾಲತೊಡಗಿದವು. ಆದರೆ ನಾಲ್ಕನೇ ಸೆಟ್ ವಿಂಬಲ್ಡನ್ ಟೆನಿಸ್ ಇತಿಹಾಸಕ್ಕೆ ಒಂದು ಅದ್ಭುತ ಅಧ್ಯಾಯವನ್ನು ಸೇರ್ಪಡೆ ಮಾಡಲಿದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಾಮೂಲಿನಂತೆ ಬೇಸ್‌ಲೈನ್‌ನಲ್ಲಿ ನಿಂತು ಆಡತೊಡಗಿದ ಬೋರ್ಗ್‌ನ ಪ್ರತಿ ಹೊಡೆತಕ್ಕೂ ಮೆಕೆನ್ರೊ ತಕ್ಕ ಪ್ರತ್ಯುತ್ತರ ನೀಡಲಾರಂಭಿದ. ಆ ಸೆಟ್‌ನಲ್ಲಿ ಬಂದ ಒಟ್ಟು 34 ಪಾಯಿಂಟ್‌ಗಳು ಜಿದ್ದಾಜಿದ್ದಿಯಿಂದ ಕೂಡಿದ್ದವು. ಒಂದೊಂದು ಪಾಯಿಂಟ್‌ಗೂ ದೊಡ್ಡ ಹೋರಾಟವನ್ನೇ ಮಾಡಿದರು. ಹಾಗಾಗಿ ನಾಲ್ಕನೇ ಸೆಟ್ ಕೂಡ ಟೈಬ್ರೇಕರ್‌ಗೆ ಹೋಯಿತು. ಒಂದೇ ಒಂದು ಟೈಬ್ರೇಕರ್ 22 ನಿಮಿಷಗಳ ಕಾದಾಟಕ್ಕೆ ಕಾರಣವಾಯಿತು ಎಂದರೆ ನಂಬುತ್ತೀರಾ? ಈ ಕಾದಾಟದಲ್ಲಿ ಬೋರ್ಗ್‌ಗೆ 5 ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ದೊರಕಿದ್ದವು. ಅಷ್ಟನ್ನೂ ಮೆಕೆನ್ರೊ ನಿಷ್ಫಲಗೊಳಿಸಿದ. ಮೆಕೆನ್ರೊಗೆ 7 ಸೆಟ್ ಪಾಯಿಂಟ್‌ಗಳು ದೊರೆತಿದ್ದವು. ಒಂದನ್ನೂ ಸದುಪಯೋಗಪಡಿಸಿಕೊಳ್ಳಲು ಬೋರ್ಗ್ ಬಿಡಲಿಲ್ಲ. ಕೊನೆಗೆ ಟೈಬ್ರೇಕರ್‌ನಲ್ಲಿ 18-16ರಲ್ಲಿ ಸೆಟ್ ಗೆದ್ದ ಮೆಕೆನ್ರೊ, ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದ. ಐದನೇ ಸೆಟ್ ಮತ್ತೆ ಟೈಬ್ರೇಕರ್‌ಗೆ ಹೋಯಿತು. ಇಷ್ಟಾಗಿಯೂ 8-6ರಲ್ಲಿ ಸೆಟ್ ಗೆದ್ದ ಬೋರ್ಗ್ 5ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಅಷ್ಟರಲ್ಲಿ ಮೆಕೆನ್ರೊ, ಬೋರ್ಗ್‌ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದ. ಆಡಲು ಆಗಮಿಸಿದಾಗ ಯಾವ ಪ್ರೇಕ್ಷಕರು ಅಣಕಿಸಿದ್ದರೋ ಅದೇ ಪ್ರೇಕ್ಷಕರು ಎದ್ದು ನಿಂತು ಮೆಕೆನ್ರೊಗೆ ಗೌರವ ಸೂಚಿಸಿದರು. ಅದೇ ವರ್ಷದ ಕೊನೆಯಲ್ಲಿ ನಡೆದ ಯುಎಸ್ ಓಪನ್ ಫೈನಲ್‌ನಲ್ಲಿ ಮೆಕೆನ್ರೊ-ಬೋರ್ಗ್ ಮತ್ತೆ ಮುಖಾಮುಖಿಯಾದರು. ಆ ಪಂದ್ಯ ಕೂಡ ಐದು ಸೆಟ್‌ಗಳಿಗೆ ಸಾಗಿತು. ಈ ಬಾರಿ ಗೆದ್ದ ಮೆಕೆನ್ರೊ ಸೇಡು ತೀರಿಸಿಕೊಂಡ. ಮರು ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಎರಡರಲ್ಲೂ ಫೈನಲ್‌ನಲ್ಲಿ ಇವರಿಬ್ಬರೇ ಎದುರಾಳಿಗಳಾದರು. ಎರಡರಲ್ಲೂ ಗೆದ್ದ ಮೆಕೆನ್ರೊ ನವತಾರೆಯಾಗಿ ಹೊರಹೊಮ್ಮಿದರೆ ಬೋರ್ಗ್ ನಿವೃತ್ತಿ ಘೋಷಿಸಿಬಿಟ್ಟ.

ವಿಂಬಲ್ಡನ್‌ನ ಒಂದು ಉಲ್ಲೇಖಾರ್ಹ ವಿಶೇಷತೆಯೆಂದರೆ ಇಂಗ್ಲಿಷರು ಇಂದಿಗೂ Puristಗಳು, ಮಡಿವಂತಿಕೆ ಬಿಟ್ಟಿಲ್ಲ!

ಆಸ್ಟ್ರೇಲಿಯನ್, ಫ್ರೆಂಚ್, ಯು.ಎಸ್. ಓಪನ್‌ಗಳಲ್ಲಿ ಆಟಗಾರರು ತಮಗಿಷ್ಟ ಬಂದ ಬಣ್ಣದ ಉಡುಪು ಧರಿಸಬಹುದು. ಆದರೆ ವಿಂಬಲ್ಡನ್‌ನಲ್ಲಿ White-only!! ಬಿಳಿ ದಿರಿಸನ್ನೇ ಧರಿಸಬೇಕು. ವೀಕ್ಷಕರೂ ಎಲ್ಲೆ ಮೀರದ ಉಡುಪು ಧರಿಸಿ ವಿಶಿಷ್ಟವಾದ ಫ್ಯಾಷನ್ ಸ್ಟೇಟ್‌ಮೆಂಟ್ ಕೊಡುತ್ತಾರೆ. ಇತರ ಗ್ರಾನ್‌ಸ್ಲಾಮ್‌ಗಳಲ್ಲಿ  ವಿಮೆನ್ ಸಿಂಗಲ್ಸ್, ಮೆನ್ಸ್ ಸಿಂಗಲ್ಸ್ ಎಂದರೆ ವಿಂಬಲ್ಡನ್‌ನಲ್ಲಿ ಮಾತ್ರ ಲೇಡೀಸ್ ಸಿಂಗಲ್ಸ್ ಹಾಗೂ  ಜೆಂಟಲ್‌ಮೆನ್ ಸಿಂಗಲ್ಸ್ ಎನ್ನಲಾಗುತ್ತದೆ. ಟೆನಿಸ್ ನೋಡಲು ಬರುವವರೂ ಜೆಂಟಲ್‌ಮನ್‌ಗಳಂತೆಯೇ ವರ್ತಿಸುತ್ತಾರೆ. ರಾಯಲ್ ಹ್ಯಾಟ್ ಹಾಕಿಕೊಂಡು ಬರುವುದು, ಮುಂಗಾರು ಆರಂಭವಾದ ಮೇಲೆ ಬಿಟ್ಟು ಬಿಟ್ಟು ಸುರಿಯುವ ಮಳೆಯಂತೆ Rhythmical ಆಗಿ ಚಪ್ಪಾಳೆ ತಟ್ಟುವುದು ಕಣ್ಣು, ಕಿವಿಗಳಿಗೊಂದು ಹಬ್ಬ. ಅಷ್ಟೇ ಅಲ್ಲ, ಬಾಲ್‌ಬಾಯ್ ಕೂಡ ಬಾಲನ್ನು ಮೇಲಿಂದ ಬಿಸಾಡುವಂತಿಲ್ಲ, ನೆಲದಿಂದಲೇ ಟಾಸ್ ಮಾಡಬೇಕು. ಬಾಲನ್ನು ಹೆಕ್ಕಿ ಹಿಂದಿರುಗುವಾಗಲೂ ಬ್ಯಾಕ್ವರ್ಡ್ ಸ್ಟೆಪ್ ಹಾಕಬೇಕು, ಬೆನ್ನು ತೋರಿಸುವಂತಿಲ್ಲ. ಸ್ಕೋರ್ ಬೋರ್ಡ್ ಮೇಲೆ ಆಟಗಾರರ ಹೆಸರು ಬರೆಯುವಾಗಲೂ ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್, ಮಿಸ್ ಶರಪೋವಾ, ಮಿಸೆಸ್ ಕಿಮ್‌ಕ್ಲೈಸರ್ಸ್ ಹೀಗೆ ಬಹಳ ಡಿಗ್ನಿಫೈಡ್ ಆಗಿ ಬರೆಯುತ್ತಾರೆ. ಆಟ ಚಾಲ್ತಿಯಲ್ಲಿರುವಾಗಲೂ ಪಾಯಿಂಟ್ಸ್ ಹೇಳುವಾಗ ಫೆಡರರ್, ನಡಾಲ್ ಎನ್ನುವುದಿಲ್ಲ. ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್ ಎಂದೇ ಸಂಬೋಧಿಸುತ್ತಾರೆ.

ಇದೇನೇ ಇರಲಿ, ಯಾವುದೇ ಒಂದು ಆಟ ರಂಗೇರಬೇಕಾದರೆ, ಆಟವನ್ನೇ ಎತ್ತರಿಸುವಂಥ ಸೆಣಸಾಟಗಳನ್ನು ಏರ್ಪಡಿಸುವಂಥ ಕ್ರೀಡಾಂಗಣದ ವೈರತ್ವಗಳಿರಬೇಕು. ಬೋರ್ಗ್, ಮೆಕೆನ್ರೊ, ಕಾನರ್ಸ್, ಲೆಂಡ್‌ಮೆಕೆನ್ರೊ, ಬೆಕರ್-ಎಡ್ಬರ್ಗ್, ಫೆಡರರ್-ನಡಾಲ್, ಕ್ರಿಸ್ ಎವರ್ಟ್, ಮಾರ್ಟಿನಾ ನವ್ರಾಟಿಲೋವಾ-ಸ್ಟೆಫಿ-ಸೆಲೆಸ್, ಹಿಂಗಿಸ್-ಡೆವನ್‌ಪೋರ್ಟ್, ಸ್ಯಾಂಪ್ರಾಸ್ ಒಂದು ಕಡೆಯಾದರೆ, ಆತನ ಪಟ್ಟು ಹಾಕಿ ಬೀಳಿಸಲು ಒಬ್ಬರ ನಂತರ ಒಬ್ಬರಂತೆ ಮುಗಿಬೀಳುತ್ತಿದ್ದ ಆ್ಯಂಡ್ರೆ ಅಗಾಸಿ, ಗೊರಾನ್ ಇವಾನಿಸೆವಿಚ್, ಪ್ಯಾಟ್ರಿಕ್ ರಾಫ್ಟರ್, ಏಸ್‌ಗಳೇ ತಮ್ಮ ಆಟದ ಜೀವಾಳವಾಗಿಟ್ಟುಕೊಂಡಿದ್ದ ಮಾರ್ಕ್ ಫಿಲಿಫ್ಪೋಸಿಸ್, ಸೆಮಿಫೈನಲ್‌ನವರೆಗಷ್ಟೇ ಬರುತ್ತಿದ್ದ ಟಿಮ್ ಹೆನ್ಮನ್ ಆಟವನ್ನು ರಂಗೇರಿಸಿದ್ದರು. ಇವರೆಲ್ಲರಿಗಿಂತ ಮುಖ್ಯವಾಗಿ ಅತಿಸುಂದರ ಬೋರಿಸ್ ಬೆಕರ್, ಸ್ಟೀಫನ್ ಎಡ್ಬರ್ಗ್, ಜಿಮ್ ಕುರಿಯರ್ ಹಾಗೂ ಸತತ ಎರಡು ಭಾರಿ ಫೈನಲ್‌ನಲ್ಲಿ ಸೋತ ಇವಾನ್ ಲೆಂಡ್ಲ್ ವಿಂಬಲ್ಡನ್‌ಗೆ ಒಂದು ಕಳೆ ತಂದುಕೊಟ್ಟಿದ್ದರು. ಇಲ್ಲಿ ತಾರೆಗಳ ಆಟದ ಸೊಗಸೇ ಬೇರೆ. ವಿಂಬಲ್ಡನ್ ಗೆಲ್ಲಲು ಬೇಕಾದ ಅತ್ಯಂತ ದೊಡ್ಡ ಅಸ್ತ್ರ ಯಾವುದು ಅಂತ ಕೇಳಿದ್ದಕ್ಕೆ “You need big second serve’ ಎಂದಿದ್ದರು ಸ್ಯಾಂಪ್ರಾಸ್. ಅಂದರೆ ವಿಂಬಲ್ಡನ್‌ನಲ್ಲಿ ಒಳ್ಳೆಯ ಆಟಗಾರರ ಫಸ್ಟ್ ಸರ್ವ್‌ಗಳು ಸಾಮಾನ್ಯವಾಗಿ 200 ಕಿ.ಮೀ. ವೇಗವನ್ನು ದಾಟುತ್ತವೆ. ಒಂದು ವೇಳೆ ಫಸ್ಟ್ ಸರ್ವ್ ವಿಫಲವಾದರೆ ಡಬಲ್ ಫಾಲ್ಟ್ ಭಯದಿಂದ ಸೆಕೆಂಡ್ ಸರ್ವ್ ಅನ್ನು ನಿಧಾನವಾಗಿ ಹಾಕುತ್ತಾರೆ. ಹಾಗಾಗಿ ಎದುರಾಳಿಗಳು ಸೆಕೆಂಡ್ ಸರ್ವ್ ಅನ್ನು ಅಟ್ಯಾಕ್ ಮಾಡುತ್ತಾರೆ. ಆದರೆ ಸ್ಯಾಂಪ್ರಾಸ್‌ನ ಸೆಕೆಂಡ್ ಸರ್ವ್‌ಗಳೇ ಬಲಿಷ್ಠವಾಗಿರುತ್ತಿದ್ದವು, ಸೆಕೆಂಡ್ ಸರ್ವ್‌ನಲ್ಲಿ ಏಸ್ ಹಾಕಿಬಿಡುತ್ತಿದ್ದ. ಆತನ ಆಟದ ಬಗ್ಗೆ ಖ್ಯಾತ ಕ್ರೀಡಾ ವಿಶ್ಲೇಷಕ ನಿರ್ಮಲ್ ಶೇಖರ್ ಎಷ್ಟು ಮನಸೋತಿದ್ದರೆಂದರೆ, Federer all class, but Sampras the king on grass  ಎಂದು ಒಂದು ಲೇಖನವನ್ನೇ ಬರೆದು ಹೊಗಳಿದ್ದರು. ವಿಂಬಲ್ಡನ್‌ಲ್ಲಿ ಸರ್‌ಪ್ರೈಸ್ ವಿನ್ನರ್ಸ್ ಬಹಳ ವಿರಳ, ಶಾಕ್ ಡಿಫೀಟ್‌ಗಳು ಇಲ್ಲಿ ತುಂಬಾ ಕಡಿಮೆ. ಒಳ್ಳೆಯ ಆಟಗಾರರು ಮಾತ್ರ ಸೆಮಿಫೈನಲ್, ಫೈನಲ್‌ಗೆ ತಲುಪುತ್ತಾರೆ. ಇಲ್ಲಿನ ಮತ್ತೊಂದು ಗಮನಾರ್ಹ ಅಂಶವೆಂದರೆ ಗ್ರೇಟ್ ರೈವಲ್ರಿ ಜತೆಗೆ ಸಸ್ಟೈನ್ಡ್ ರೈವಲ್ರಿಯನ್ನು ಕಾಣಬಹುದು. ವರ್ಷಕ್ಕೊಮ್ಮೆ ಹೊಸ ಹೊಸ ಎದುರಾಳಿಗಳು ಉದ್ಭವಿಸುವುದಿಲ್ಲ. ಅತ್ಯುತ್ತಮ ಆಟಗಾರರೇ ವರ್ಷಂಪ್ರತಿ ಜಿದ್ದಾಜಿದ್ದಿಗೆ ಬೀಳುತ್ತಾರೆ.

ಆದರೆ…

ಈ ವರ್ಷ ಮಾತ್ರ ಹಾಗೆ ಹೇಳಲು ಕಷ್ಟವಾಗುತ್ತಿದೆ. ಏಕೋ ಈ ಬಾರಿಯ ವಿಂಬಲ್ಡನ್ ತೀರಾ ಸಪ್ಪೆಯೆನಿಸಿತು. ದುರದೃಷ್ಟವಶಾತ್,  ‘ಬಿಗ್ ಫೋರ್‌’ಗಳಲ್ಲಿ ಇಬ್ಬರಾದ ನಡಾಲ್ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ರೋಜರ್ ಫೆಡರರ್ ಎರಡನೇ ಸುತ್ತಿನಲ್ಲಿ ಸೋಲು ಕಂಡು ಹೊರನಡೆಯುವುದರೊಂದಿಗೆ ವಿಂಬಲ್ಡನ್ ರಂಗೇರುವ ಸಾಧ್ಯಾಸಾಧ್ಯತೆಯೇ ದೂರವಾಗಿಬಿಟ್ಟಿತು. ಸಾಲದ್ದಕ್ಕೆ ಈ ಬಾರಿ ಅಂಥ ಪ್ರತಿಭಾನ್ವಿತ ಯುವತಾರೆಗಳೆನಿಸಿಕೊಳ್ಳುವಂಥ ಯಾರೂ ಹೊರಹೊಮ್ಮಲಿಲ್ಲ. ಇತ್ತ ಮಹಿಳೆಯರ ವಿಭಾಗದಲ್ಲೂ ಸೆರೆನಾ ವಿಲಿಯಮ್ಸ್, ಶರಪೋವಾ ಕೂಡ ಈಗಾಗಲೇ ಸೋಲುವುದರೊಂದಿಗೆ ಅಲ್ಲೂ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲದಂತಾಗಿದೆ. ಬಹುಶಃ ಕಳೆದೆರಡು ದಶಕಗಳಲ್ಲಿ ಇಂಥದ್ದೊಂದು ಸಪ್ಪೆಯ ವಿಂಬಲ್ಡನ್ ಯಾವ ವರ್ಷವೂ ನಡೆದಿರಲಿಲ್ಲ. ನಾಳೆ ನಡೆಯುವ ಫೈನಲ್‌ನಲ್ಲಿ ಯಾರೇ ಗೆಲ್ಲಬಹುದು. ಆದರೆ ವಿಂಬಲ್ಡನ್‌ನಲ್ಲಿ ಸಾಮಾನ್ಯವಾಗಿ ಕಾಣುವ ಒಟ್ಟಾರೆ ಮೆರಗು, ಬೆರಗು ಮಾತ್ರ ಈ ಬಾರಿ ಕಾಣುತ್ತಿಲ್ಲ.

2013ನೇ ಸಾಲಿನ ವಿಂಬಲ್ಡನ್ ಚಾಂಪಿಯನ್‌ಶಿಪ್ ಜೂನ್ 24ರಂದು ಆರಂಭವಾದಾಗ ಭಾರೀ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷೆ ಮಾಡಲಾಗಿತ್ತು. ಗಾಯದ ಸಮಸ್ಯೆಯಿಂದ ಹೊರಬಂದು ಫ್ರೆಂಚ್ ಓಪನ್ ಗೆದ್ದ ರಾಫೆಲ್ ನಡಾಲ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಕಳೆದ ಎರಡು-ಮೂರು ವರ್ಷಗಳಲ್ಲಿ ತೀವ್ರ ಇಳಿಮುಖ ಕಂಡಿರುವ ರೋಜರ್ ಫೆಡರರ್ ವಿಂಬಲ್ಡನ್ ಗೆದ್ದು ಹಳೆಯ ಸ್ಪರ್ಶವನ್ನು ಮತ್ತೆ ತೋರಲು ಪ್ರಾಣವನ್ನೇ ಪಣಕ್ಕಿಟ್ಟಂತೆ ಹೋರಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇನ್ನು ಕಳೆದ ವರ್ಷದ ವಿಂಬಲ್ಡನ್ ಫೈನಲ್‌ನಲ್ಲಿ ಫೆಡರರ್ ಎದುರು ಸೋತರೂ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಆದ ಅಮೆರಿಕನ್ ಓಪನ್ ಗೆದ್ದ ಆ್ಯಂಡಿ ಮರ್ರೆ ಮತ್ತು ಮತ್ತೊಬ್ಬ ನವತಾರೆ ನೋವಾಕ್ ಜೋಕೋವಿಚ್ ಹೀಗೆ C Big Four ವಿಂಬಲ್ಡನ್‌ಗೆ ಮೆರಗು ತರುತ್ತಾರೆ ಎಂದು ಅಂದಾಜಿಸಲಾಗಿತ್ತು. ಇಷ್ಟಕ್ಕೂ…ಈ ವಿಂಬಲ್ಡನ್‌ಗೆ ಏನೋ ಒಂದು ಸೆಳೆತವಿದೆ, ಗತ್ತು ಗೈರತ್ತುಗಳಿವೆ. ವಿಂಬಲ್ಡನ್ ಗೆಲ್ಲದಿದ್ದರೆ ಟೆನಿಸ್ ದಂತಕಥೆಯಾದವನೊಬ್ಬನ ಬದುಕೇ ಪರಿಪೂರ್ಣವೆನಿಸುವುದಿಲ್ಲ. ಈ ಮಾತು ಖಂಡಿತ ಅತಿಶಯೋಕ್ತಿಯಲ್ಲ! ವಿಂಬಲ್ಡನ್‌ನಲ್ಲಿ ಆಡುವುದು, ತನ್ನ ಪ್ರಬಲ ಎದುರಾಳಿಯನ್ನು ವಿಂಬಲ್ಡನ್‌ನಲ್ಲೇ ಮಣಿಸಬೇಕೆಂಬ ಹಂಬಲವಿಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಈ ಸಲದ ವಿಂಬಲ್ಡನ್‌ಗೆ ಪೂರ್ವಭಾವಿಯಾಗಿ ಜೂನ್ 22ರಂದು ನೊವಾಕ್ ಜೋಕೋವಿಚ್ ಜತೆ ಖ್ಯಾತ ರಾಯಿಟರ್ಸ್ ಸುದ್ದಿಸಂಸ್ಥೆ ಸಂದರ್ಶನ ನಡೆಸಿದಾಗ ಆತ ಹೇಳಿದ್ದೇನು ಗೊತ್ತೇ?ಪ್ರಶ್ನೆ: ಒಂದು ವೇಳೆ ಹಳೆಯ ಯಾವುದಾದರೊಬ್ಬ ಆಟಗಾರನ ಜತೆ ಆಡುವುದೇ ಆದರೆ ಆ ಆಟಗಾರ ಯಾರು? ಮತ್ತು ಏಕಾಗಿ ಆತನ ಜತೆ ಆಡಬೇಕೆಂದು ಬಯಸುತ್ತೀರಿ?ನೊವಾಕ್ ಜೋಕೋವಿಚ್: ಖಂಡಿತ ಆತ ಪೀಟ್ ಸಾಂಪ್ರಾಸ್! ಏಕೆಂದರೆ ಆತ ನನ್ನ ಆರಾಧ್ಯ ದೈವ. ನಾನು ಚಿಕ್ಕವನಿದ್ದಾಗ ಪ್ರೇರಣೆಗಾಗಿ ಆತನತ್ತ ಮುಖಮಾಡುತ್ತಿದ್ದೆ. ಆದರೆ, ಆತನ ಜತೆ ಆಡುವ ಅವಕಾಶವೇ ನನಗೆ ದೊರೆಯಲಿಲ್ಲ. ಒಂದು ವೇಳೆ ಅಂಥ ಅವಕಾಶ ಸಿಗುವುದೇ ಆದರೆ ‘ವಿಂಬಲ್ಡನ್‌’ನಲ್ಲೇ ಆತನನ್ನು ಎದುರಿಸಲು ಬಯಸುತ್ತೇನೆ.ವಿಂಬಲ್ಡನ್‌ನ ವೈಶಿಷ್ಟ್ಯವೇ ಅದು!ವಿಂಬಲ್ಡನ್ ಗೆಲ್ಲುವುದು ಪ್ರತಿಯೊಬ್ಬ ಟೆನಿಸ್ ಆಟಗಾರನ ದೊಡ್ಡ ಕನಸು. ಅಲ್ಲಿನ ಹುಲ್ಲು ಹಾಸಿನ ಅಂಕಣಗಳ ಬಗ್ಗೆ ಕುಪಿಸಿಕೊಂಡು Grass is for the cows ಎಂದಿದ್ದ ಸ್ಪೇನ್‌ನ ಮ್ಯಾನ್ಯುವಲ್ ಸಂಟಾನಾ ಕೂಡ 1966ರಲ್ಲಿ ವಿಂಬಲ್ಡನ್ ಗೆದ್ದು ಬೀಗಿದ್ದ. ಸ್ಯಾಂಪ್ರಾಸ್ ತನ್ನ ಕ್ರೀಡಾ ಜೀವನದಲ್ಲಿ ಎಂದೂ ಫ್ರೆಂಚ್ ಓಪನ್ ಗೆಲ್ಲಲಿಲ್ಲ. ಆದರೂ… ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬನೆಂಬ ಹೆಗ್ಗಳಿಕೆ ಗಳಿಸುವುದಕ್ಕೆ ಅದೆಂದೂ ಅಡ್ಡವಾಗಲಿಲ್ಲ. ಒಬ್ಬ ಅತ್ಯುತ್ತಮ ಟೆನಿಸ್ ಆಟಗಾರನೆನಿಸಿಕೊಂಡವನು ಫ್ರೆಂಚ್, ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್‌ಗಳನ್ನು ಎಷ್ಟು ಸಲ ಗೆದ್ದರೂ ವಿಂಬಲ್ಡನ್ ಗೆಲ್ಲದೇ ಹೋದರೆ ಅದು ಅವನನ್ನು ಜೀವನವಿಡೀ ದೊಡ್ಡ ಕೊರಗಾಗಿ ಕಾಡುತ್ತದೆ. ವಿಶ್ವವಿಖ್ಯಾತ ಜೋರ್ನ್ ಬೋರ್ಗ್ 6 ಬಾರಿ ಫ್ರೆಂಚ್ ಓಪನ್ ಗೆದ್ದರೂ ಆತನ ಗ್ರೇಟ್‌ನೆಸ್ ಅನ್ನು ಅಳೆದಿದ್ದು, ಗ್ರೇಟ್ ಆಟಗಾರ ಅಂತ ಕರೆಸಿಕೊಂಡಿದ್ದು 1976ರಿಂದ 1980ರವರೆಗೂ ಸತತ 5 ಬಾರಿಗೆ ವಿಂಬಲ್ಡನ್ ಗೆದ್ದಾಗಲೇ. ಫ್ರೆಂಚ್ ಓಪನ್‌ನಲ್ಲಿ ಆತನಿಗೆ ಸಾಟಿಯೇ ಇರಲಿಲ್ಲ. ಆದರೆ ವಿಂಬಲ್ಡನ್ ಅತ್ಯಂತ ಕಠಿಣ ಸ್ಪರ್ಧೆ, ಪ್ರತಿರೋಧ ಎದುರಾಗುತ್ತಿತ್ತು. ಇದುವರೆಗೂ 8 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ರಾಫೆಲ್ ನಡಾಲ್‌ನನ್ನೂ ಟೆನಿಸ್ ಪ್ರೇಮಿಗಳು ಗೌರವಿಸಲಾರಂಭಿಸಿದ್ದು 2008ರಲ್ಲಿ ಆತ ವಿಂಬಲ್ಡನ್ ಗೆದ್ದ ಮೇಲೆಯೇ. ಫ್ರೆಂಚ್ ಓಪನ್‌ನ ಮಣ್ಣಿನ ಅಂಕಣದ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಕಾಣುವ ರೋಜರ್ ಫೆಡರರ್, ಜೋಕೋವಿಚ್, ಆ್ಯಂಡಿ ಮರ್ರೆ ವಿಂಬಲ್ಡನ್‌ನ ಹುಲ್ಲು ಹಾಸಿನ ಮೇಲೆ ಅತ್ಯಂತ ಕಠಿಣ ಎದುರಾಳಿಗಳಾಗಿ ಬಿಡುತ್ತಾರೆ.ವಿಂಬಲ್ಡನ್‌ನ ಸೊಬಗೇ ಅಂಥದ್ದು!200, 210, ಕೆಲವೊಮ್ಮೆ 220 ಕಿ.ಮೀ. ವೇಗದಲ್ಲಿ ಬರುವ ಮೊದಲ ಸರ್ವ್‌ಗಳನ್ನು ನೋಡುವುದೇ ಮನಮೋಹಕ. ಸರ್ವ್ ಹಾಕಿ ನೆಟ್ ಬಳಿಗೆ ಧಾವಿಸಿ ವಾಲಿ ಪ್ರತಿಕ್ರಿಯೆ ನೀಡುವುದಂತೂ ಬಣ್ಣಿಸಲಸದಳ. ಟೆನಿಸ್‌ನ ಇತಿಹಾಸದಲ್ಲೇ ಅತಿ ದೊಡ್ಡ Rivalryಗಳು ಸೃಷ್ಟಿಯಾಗಿದ್ದು, ಅತಿ ದೊಡ್ಡ ಸೆಣಸಾಟಗಳು ನಡೆದಿದ್ದು ವಿಂಬಲ್ಡನ್‌ನಲ್ಲಿ ಮೆಕೆನ್ರೊ ಹಾಗೂ ಬೋರ್ಗ್ ನಡುವೆ 1980ರಲ್ಲಿ ನಡೆದ ವಿಂಬಲ್ಡನ್ ಫೈನಲ್ ಪಂದ್ಯವನ್ನು ಯಾವ ಟೆನಿಸ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷದ ವಿಂಬಲ್ಡನ್ ಟೂರ್ನಿಗೆ ಪೂರ್ವಭಾವಿ Build up ಸಮಯದಲ್ಲಿ ಇಎಸ್‌ಪಿಎನ್ ಸ್ಪೋರ್ಟ್ಸ್ ಚಾನೆಲ್‌ನವರು ಕಡ್ಡಾಯವಾಗಿ ಈ ಪಂದ್ಯವನ್ನು ಮರುಪ್ರಸಾರ ಮಾಡಿಯೇ ಮಾಡುತ್ತಾರೆ. ಇಲ್ಲವಾದರೆ ಯು ಟೂಬ್‌ನಲ್ಲೂ ವೀಕ್ಷಿಸಬಹುದು. ಅದನ್ನು ವಿಂಬಲ್ಡನ್ ಇತಿಹಾಸದಲ್ಲೇ ಅತ್ಯುತ್ತಮ ಫೈನಲ್ ಎಂದು ಪರಿಗಣಿಸಲಾಗಿದೆ. 1980ರ ವೇಳೆಗಾಗಲೇ ಬೋರ್ ಟೆನಿಸ್‌ನ ಜೀವಂತ ದಂತಕಥೆಯಾಗಿದ್ದ. ಸತತ 4 ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಆತ, ಐದನೆಯದಕ್ಕಾಗಿ ಕಾಯುತ್ತಿದ್ದ. ಇತ್ತ ಯುವಕ ಜಾನ್ ಮೆಕೆನ್ರೊ ಆಗಿನ್ನೂ ಟೆನಿಸ್ ಅಂಗಳದಲ್ಲಿ ಕಣ್ಣು ಬಿಡುತ್ತಿದ್ದ. ಇವರಿಬ್ಬರೂ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಬೋರ್ ಪ್ರತಿಭೆಯ ಜತೆ ಉತ್ತಮ ನಡತೆಯಿಂದಲೂ ಹೆಸರಾಗಿದ್ದರೆ, ಮೆಕೆನ್ರೊನ ಕ್ಯಾತೆಗಳು ಅದಾಗಲೇ ಆರಂಭವಾಗಿದ್ದವು. ಜಿಮ್ಮಿ ಕಾನರ್ಸ್ ಜತೆಗಿನ ಸೆಮಿಫೈನಲ್ ಹಣಾಹಣಿ ವೇಳೆ ಅಂಪೈರ್ ಹಾಗೂ ಇತರೆ ಅಧಿಕಾರಿಗಳ ಜತೆ ಕಿತ್ತಾಡಿಕೊಂಡಿದ್ದ ಮೆಕೆನ್ರೊ, ಫೈನಲ್ ಆಡಲು ಸೆಂಟರ್ ಕೋರ್ಟ್‌ಗೆ ಕಾಲಿಡುತ್ತಿದ್ದಂತೆಯೇ ಪ್ರೇಕ್ಷಕರು ಅಣಕಿಸಿ ಸ್ವಾಗತ ನೀಡಿದರು. ಆದರೆ ಪಂದ್ಯ ಆರಂಭವಾದ ನಂತರ ಪರಿಸ್ಥಿತಿಯೇ ಬದಲಾಗತೊಡಗಿತು. ಇಪ್ಪತ್ನಾಲ್ಕು ವರ್ಷದ ಬೋರ್ಗ್ ಒಬ್ಬ ಮಾಸ್ಟರ್ ಆದರೆ, 21 ವರ್ಷದ ಮೆಕೆನ್ರೊ ಪ್ರಳಯಾಂತಕ. ಒಬ್ಬ ಸೌಮ್ಯವಾದಿಯಾದರೆ, ಮತ್ತೊಬ್ಬ ಗಲಾಟೆ ಸ್ವಭಾವದವ. ಇವರಿಬ್ಬರ ಸೆಣಸಾಟ ಆಟವನ್ನೇ ರಂಗೇರಿಸಿತು. ಎಲ್ಲರನ್ನೂ ನೇರ ಸೆಟ್‌ಗಳಲ್ಲಿ ಸೋಲಿಸುತ್ತಿದ್ದ ಬೋರ್ಗ್ ಮೊದಲನೇ ಸೆಟ್ ಅನ್ನು 1-6ರಿಂದ ಸೋತು ಬಿಟ್ಟ ಎರಡನೇ ಸೆಟ್ ಟೈ ಬ್ರೇಕರ್‌ಗೆ ಹೋಯಿತು. ಆತನ ನಾಗಾಲೋಟಕ್ಕೆ ಕಡಿವಾಣ ಬಿತ್ತು ಎಂದು ಎಲ್ಲರೂ ಅಂದುಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹೇಗೋ ಪರದಾಡಿ ಎರಡನೆ ಸೆಟ್ ಗೆದ್ದುಕೊಂಡ ಬೋರ್ಗ್, ಮೂರನೇ ಸೆಟ್ ಅನ್ನು 6-3ರಿಂದ ತನ್ನದಾಗಿಸಿಕೊಂಡ. ಮತ್ತೆ ನಿರೀಕ್ಷೆಗಳು ಬೋರ್ಗ್ ಪರ ವಾಲತೊಡಗಿದವು. ಆದರೆ ನಾಲ್ಕನೇ ಸೆಟ್ ವಿಂಬಲ್ಡನ್ ಟೆನಿಸ್ ಇತಿಹಾಸಕ್ಕೆ ಒಂದು ಅದ್ಭುತ ಅಧ್ಯಾಯವನ್ನು ಸೇರ್ಪಡೆ ಮಾಡಲಿದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಾಮೂಲಿನಂತೆ ಬೇಸ್‌ಲೈನ್‌ನಲ್ಲಿ ನಿಂತು ಆಡತೊಡಗಿದ ಬೋರ್ಗ್‌ನ ಪ್ರತಿ ಹೊಡೆತಕ್ಕೂ ಮೆಕೆನ್ರೊ ತಕ್ಕ ಪ್ರತ್ಯುತ್ತರ ನೀಡಲಾರಂಭಿದ. ಆ ಸೆಟ್‌ನಲ್ಲಿ ಬಂದ ಒಟ್ಟು 34 ಪಾಯಿಂಟ್‌ಗಳು ಜಿದ್ದಾಜಿದ್ದಿಯಿಂದ ಕೂಡಿದ್ದವು. ಒಂದೊಂದು ಪಾಯಿಂಟ್‌ಗೂ ದೊಡ್ಡ ಹೋರಾಟವನ್ನೇ ಮಾಡಿದರು. ಹಾಗಾಗಿ ನಾಲ್ಕನೇ ಸೆಟ್ ಕೂಡ ಟೈಬ್ರೇಕರ್‌ಗೆ ಹೋಯಿತು. ಒಂದೇ ಒಂದು ಟೈಬ್ರೇಕರ್ 22 ನಿಮಿಷಗಳ ಕಾದಾಟಕ್ಕೆ ಕಾರಣವಾಯಿತು ಎಂದರೆ ನಂಬುತ್ತೀರಾ? ಈ ಕಾದಾಟದಲ್ಲಿ ಬೋರ್ಗ್‌ಗೆ 5 ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ದೊರಕಿದ್ದವು. ಅಷ್ಟನ್ನೂ ಮೆಕೆನ್ರೊ ನಿಷ್ಫಲಗೊಳಿಸಿದ. ಮೆಕೆನ್ರೊಗೆ 7 ಸೆಟ್ ಪಾಯಿಂಟ್‌ಗಳು ದೊರೆತಿದ್ದವು. ಒಂದನ್ನೂ ಸದುಪಯೋಗಪಡಿಸಿಕೊಳ್ಳಲು ಬೋರ್ಗ್ ಬಿಡಲಿಲ್ಲ. ಕೊನೆಗೆ ಟೈಬ್ರೇಕರ್‌ನಲ್ಲಿ 18-16ರಲ್ಲಿ ಸೆಟ್ ಗೆದ್ದ ಮೆಕೆನ್ರೊ, ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದ. ಐದನೇ ಸೆಟ್ ಮತ್ತೆ ಟೈಬ್ರೇಕರ್‌ಗೆ ಹೋಯಿತು. ಇಷ್ಟಾಗಿಯೂ 8-6ರಲ್ಲಿ ಸೆಟ್ ಗೆದ್ದ ಬೋರ್ಗ್ 5ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಅಷ್ಟರಲ್ಲಿ ಮೆಕೆನ್ರೊ, ಬೋರ್ಗ್‌ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದ. ಆಡಲು ಆಗಮಿಸಿದಾಗ ಯಾವ ಪ್ರೇಕ್ಷಕರು ಅಣಕಿಸಿದ್ದರೋ ಅದೇ ಪ್ರೇಕ್ಷಕರು ಎದ್ದು ನಿಂತು ಮೆಕೆನ್ರೊಗೆ ಗೌರವ ಸೂಚಿಸಿದರು. ಅದೇ ವರ್ಷದ ಕೊನೆಯಲ್ಲಿ ನಡೆದ ಯುಎಸ್ ಓಪನ್ ಫೈನಲ್‌ನಲ್ಲಿ ಮೆಕೆನ್ರೊ-ಬೋರ್ಗ್ ಮತ್ತೆ ಮುಖಾಮುಖಿಯಾದರು. ಆ ಪಂದ್ಯ ಕೂಡ ಐದು ಸೆಟ್‌ಗಳಿಗೆ ಸಾಗಿತು. ಈ ಬಾರಿ ಗೆದ್ದ ಮೆಕೆನ್ರೊ ಸೇಡು ತೀರಿಸಿಕೊಂಡ. ಮರು ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಎರಡರಲ್ಲೂ ಫೈನಲ್‌ನಲ್ಲಿ ಇವರಿಬ್ಬರೇ ಎದುರಾಳಿಗಳಾದರು. ಎರಡರಲ್ಲೂ ಗೆದ್ದ ಮೆಕೆನ್ರೊ ನವತಾರೆಯಾಗಿ ಹೊರಹೊಮ್ಮಿದರೆ ಬೋರ್ಗ್ ನಿವೃತ್ತಿ ಘೋಷಿಸಿಬಿಟ್ಟ. ವಿಂಬಲ್ಡನ್‌ನ ಒಂದು ಉಲ್ಲೇಖಾರ್ಹ ವಿಶೇಷತೆಯೆಂದರೆ ಇಂಗ್ಲಿಷರು ಇಂದಿಗೂ Puristಗಳು, ಮಡಿವಂತಿಕೆ ಬಿಟ್ಟಿಲ್ಲ!ಆಸ್ಟ್ರೇಲಿಯನ್, ಫ್ರೆಂಚ್, ಯು.ಎಸ್. ಓಪನ್‌ಗಳಲ್ಲಿ ಆಟಗಾರರು ತಮಗಿಷ್ಟ ಬಂದ ಬಣ್ಣದ ಉಡುಪು ಧರಿಸಬಹುದು. ಆದರೆ ವಿಂಬಲ್ಡನ್‌ನಲ್ಲಿ White-only!! ಬಿಳಿ ದಿರಿಸನ್ನೇ ಧರಿಸಬೇಕು. ವೀಕ್ಷಕರೂ ಎಲ್ಲೆ ಮೀರದ ಉಡುಪು ಧರಿಸಿ ವಿಶಿಷ್ಟವಾದ ಫ್ಯಾಷನ್ ಸ್ಟೇಟ್‌ಮೆಂಟ್ ಕೊಡುತ್ತಾರೆ. ಇತರ ಗ್ರಾನ್‌ಸ್ಲಾಮ್‌ಗಳಲ್ಲಿ  ವಿಮೆನ್ ಸಿಂಗಲ್ಸ್, ಮೆನ್ಸ್ ಸಿಂಗಲ್ಸ್ ಎಂದರೆ ವಿಂಬಲ್ಡನ್‌ನಲ್ಲಿ ಮಾತ್ರ ಲೇಡೀಸ್ ಸಿಂಗಲ್ಸ್ ಹಾಗೂ  ಜೆಂಟಲ್‌ಮೆನ್ ಸಿಂಗಲ್ಸ್ ಎನ್ನಲಾಗುತ್ತದೆ. ಟೆನಿಸ್ ನೋಡಲು ಬರುವವರೂ ಜೆಂಟಲ್‌ಮನ್‌ಗಳಂತೆಯೇ ವರ್ತಿಸುತ್ತಾರೆ. ರಾಯಲ್ ಹ್ಯಾಟ್ ಹಾಕಿಕೊಂಡು ಬರುವುದು, ಮುಂಗಾರು ಆರಂಭವಾದ ಮೇಲೆ ಬಿಟ್ಟು ಬಿಟ್ಟು ಸುರಿಯುವ ಮಳೆಯಂತೆ Rhythmical ಆಗಿ ಚಪ್ಪಾಳೆ ತಟ್ಟುವುದು ಕಣ್ಣು, ಕಿವಿಗಳಿಗೊಂದು ಹಬ್ಬ. ಅಷ್ಟೇ ಅಲ್ಲ, ಬಾಲ್‌ಬಾಯ್ ಕೂಡ ಬಾಲನ್ನು ಮೇಲಿಂದ ಬಿಸಾಡುವಂತಿಲ್ಲ, ನೆಲದಿಂದಲೇ ಟಾಸ್ ಮಾಡಬೇಕು. ಬಾಲನ್ನು ಹೆಕ್ಕಿ ಹಿಂದಿರುಗುವಾಗಲೂ ಬ್ಯಾಕ್ವರ್ಡ್ ಸ್ಟೆಪ್ ಹಾಕಬೇಕು, ಬೆನ್ನು ತೋರಿಸುವಂತಿಲ್ಲ. ಸ್ಕೋರ್ ಬೋರ್ಡ್ ಮೇಲೆ ಆಟಗಾರರ ಹೆಸರು ಬರೆಯುವಾಗಲೂ ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್, ಮಿಸ್ ಶರಪೋವಾ, ಮಿಸೆಸ್ ಕಿಮ್‌ಕ್ಲೈಸರ್ಸ್ ಹೀಗೆ ಬಹಳ ಡಿಗ್ನಿಫೈಡ್ ಆಗಿ ಬರೆಯುತ್ತಾರೆ. ಆಟ ಚಾಲ್ತಿಯಲ್ಲಿರುವಾಗಲೂ ಪಾಯಿಂಟ್ಸ್ ಹೇಳುವಾಗ ಫೆಡರರ್, ನಡಾಲ್ ಎನ್ನುವುದಿಲ್ಲ. ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್ ಎಂದೇ ಸಂಬೋಧಿಸುತ್ತಾರೆ.ಇದೇನೇ ಇರಲಿ, ಯಾವುದೇ ಒಂದು ಆಟ ರಂಗೇರಬೇಕಾದರೆ, ಆಟವನ್ನೇ ಎತ್ತರಿಸುವಂಥ ಸೆಣಸಾಟಗಳನ್ನು ಏರ್ಪಡಿಸುವಂಥ ಕ್ರೀಡಾಂಗಣದ ವೈರತ್ವಗಳಿರಬೇಕು. ಬೋರ್ಗ್, ಮೆಕೆನ್ರೊ, ಕಾನರ್ಸ್, ಲೆಂಡ್‌ಮೆಕೆನ್ರೊ, ಬೆಕರ್-ಎಡ್ಬರ್ಗ್, ಫೆಡರರ್-ನಡಾಲ್, ಕ್ರಿಸ್ ಎವರ್ಟ್, ಮಾರ್ಟಿನಾ ನವ್ರಾಟಿಲೋವಾ-ಸ್ಟೆಫಿ-ಸೆಲೆಸ್, ಹಿಂಗಿಸ್-ಡೆವನ್‌ಪೋರ್ಟ್, ಸ್ಯಾಂಪ್ರಾಸ್ ಒಂದು ಕಡೆಯಾದರೆ, ಆತನ ಪಟ್ಟು ಹಾಕಿ ಬೀಳಿಸಲು ಒಬ್ಬರ ನಂತರ ಒಬ್ಬರಂತೆ ಮುಗಿಬೀಳುತ್ತಿದ್ದ ಆ್ಯಂಡ್ರೆ ಅಗಾಸಿ, ಗೊರಾನ್ ಇವಾನಿಸೆವಿಚ್, ಪ್ಯಾಟ್ರಿಕ್ ರಾಫ್ಟರ್, ಏಸ್‌ಗಳೇ ತಮ್ಮ ಆಟದ ಜೀವಾಳವಾಗಿಟ್ಟುಕೊಂಡಿದ್ದ ಮಾರ್ಕ್ ಫಿಲಿಫ್ಪೋಸಿಸ್, ಸೆಮಿಫೈನಲ್‌ನವರೆಗಷ್ಟೇ ಬರುತ್ತಿದ್ದ ಟಿಮ್ ಹೆನ್ಮನ್ ಆಟವನ್ನು ರಂಗೇರಿಸಿದ್ದರು. ಇವರೆಲ್ಲರಿಗಿಂತ ಮುಖ್ಯವಾಗಿ ಅತಿಸುಂದರ ಬೋರಿಸ್ ಬೆಕರ್, ಸ್ಟೀಫನ್ ಎಡ್ಬರ್ಗ್, ಜಿಮ್ ಕುರಿಯರ್ ಹಾಗೂ ಸತತ ಎರಡು ಭಾರಿ ಫೈನಲ್‌ನಲ್ಲಿ ಸೋತ ಇವಾನ್ ಲೆಂಡ್ಲ್ ವಿಂಬಲ್ಡನ್‌ಗೆ ಒಂದು ಕಳೆ ತಂದುಕೊಟ್ಟಿದ್ದರು. ಇಲ್ಲಿ ತಾರೆಗಳ ಆಟದ ಸೊಗಸೇ ಬೇರೆ. ವಿಂಬಲ್ಡನ್ ಗೆಲ್ಲಲು ಬೇಕಾದ ಅತ್ಯಂತ ದೊಡ್ಡ ಅಸ್ತ್ರ ಯಾವುದು ಅಂತ ಕೇಳಿದ್ದಕ್ಕೆ “You need big second serve’ ಎಂದಿದ್ದರು ಸ್ಯಾಂಪ್ರಾಸ್. ಅಂದರೆ ವಿಂಬಲ್ಡನ್‌ನಲ್ಲಿ ಒಳ್ಳೆಯ ಆಟಗಾರರ ಫಸ್ಟ್ ಸರ್ವ್‌ಗಳು ಸಾಮಾನ್ಯವಾಗಿ 200 ಕಿ.ಮೀ. ವೇಗವನ್ನು ದಾಟುತ್ತವೆ. ಒಂದು ವೇಳೆ ಫಸ್ಟ್ ಸರ್ವ್ ವಿಫಲವಾದರೆ ಡಬಲ್ ಫಾಲ್ಟ್ ಭಯದಿಂದ ಸೆಕೆಂಡ್ ಸರ್ವ್ ಅನ್ನು ನಿಧಾನವಾಗಿ ಹಾಕುತ್ತಾರೆ. ಹಾಗಾಗಿ ಎದುರಾಳಿಗಳು ಸೆಕೆಂಡ್ ಸರ್ವ್ ಅನ್ನು ಅಟ್ಯಾಕ್ ಮಾಡುತ್ತಾರೆ. ಆದರೆ ಸ್ಯಾಂಪ್ರಾಸ್‌ನ ಸೆಕೆಂಡ್ ಸರ್ವ್‌ಗಳೇ ಬಲಿಷ್ಠವಾಗಿರುತ್ತಿದ್ದವು, ಸೆಕೆಂಡ್ ಸರ್ವ್‌ನಲ್ಲಿ ಏಸ್ ಹಾಕಿಬಿಡುತ್ತಿದ್ದ. ಆತನ ಆಟದ ಬಗ್ಗೆ ಖ್ಯಾತ ಕ್ರೀಡಾ ವಿಶ್ಲೇಷಕ ನಿರ್ಮಲ್ ಶೇಖರ್ ಎಷ್ಟು ಮನಸೋತಿದ್ದರೆಂದರೆ, Federer all class, but Sampras the king on grass  ಎಂದು ಒಂದು ಲೇಖನವನ್ನೇ ಬರೆದು ಹೊಗಳಿದ್ದರು. ವಿಂಬಲ್ಡನ್‌ಲ್ಲಿ ಸರ್‌ಪ್ರೈಸ್ ವಿನ್ನರ್ಸ್ ಬಹಳ ವಿರಳ, ಶಾಕ್ ಡಿಫೀಟ್‌ಗಳು ಇಲ್ಲಿ ತುಂಬಾ ಕಡಿಮೆ. ಒಳ್ಳೆಯ ಆಟಗಾರರು ಮಾತ್ರ ಸೆಮಿಫೈನಲ್, ಫೈನಲ್‌ಗೆ ತಲುಪುತ್ತಾರೆ. ಇಲ್ಲಿನ ಮತ್ತೊಂದು ಗಮನಾರ್ಹ ಅಂಶವೆಂದರೆ ಗ್ರೇಟ್ ರೈವಲ್ರಿ ಜತೆಗೆ ಸಸ್ಟೈನ್ಡ್ ರೈವಲ್ರಿಯನ್ನು ಕಾಣಬಹುದು. ವರ್ಷಕ್ಕೊಮ್ಮೆ ಹೊಸ ಹೊಸ ಎದುರಾಳಿಗಳು ಉದ್ಭವಿಸುವುದಿಲ್ಲ. ಅತ್ಯುತ್ತಮ ಆಟಗಾರರೇ ವರ್ಷಂಪ್ರತಿ ಜಿದ್ದಾಜಿದ್ದಿಗೆ ಬೀಳುತ್ತಾರೆ.ಆದರೆ…ಈ ವರ್ಷ ಮಾತ್ರ ಹಾಗೆ ಹೇಳಲು ಕಷ್ಟವಾಗುತ್ತಿದೆ. ಏಕೋ ಈ ಬಾರಿಯ ವಿಂಬಲ್ಡನ್ ತೀರಾ ಸಪ್ಪೆಯೆನಿಸಿತು. ದುರದೃಷ್ಟವಶಾತ್,  ‘ಬಿಗ್ ಫೋರ್‌’ಗಳಲ್ಲಿ ಇಬ್ಬರಾದ ನಡಾಲ್ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ರೋಜರ್ ಫೆಡರರ್ ಎರಡನೇ ಸುತ್ತಿನಲ್ಲಿ ಸೋಲು ಕಂಡು ಹೊರನಡೆಯುವುದರೊಂದಿಗೆ ವಿಂಬಲ್ಡನ್ ರಂಗೇರುವ ಸಾಧ್ಯಾಸಾಧ್ಯತೆಯೇ ದೂರವಾಗಿಬಿಟ್ಟಿತು. ಸಾಲದ್ದಕ್ಕೆ ಈ ಬಾರಿ ಅಂಥ ಪ್ರತಿಭಾನ್ವಿತ ಯುವತಾರೆಗಳೆನಿಸಿಕೊಳ್ಳುವಂಥ ಯಾರೂ ಹೊರಹೊಮ್ಮಲಿಲ್ಲ. ಇತ್ತ ಮಹಿಳೆಯರ ವಿಭಾಗದಲ್ಲೂ ಸೆರೆನಾ ವಿಲಿಯಮ್ಸ್, ಶರಪೋವಾ ಕೂಡ ಈಗಾಗಲೇ ಸೋಲುವುದರೊಂದಿಗೆ ಅಲ್ಲೂ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲದಂತಾಗಿದೆ. ಬಹುಶಃ ಕಳೆದೆರಡು ದಶಕಗಳಲ್ಲಿ ಇಂಥದ್ದೊಂದು ಸಪ್ಪೆಯ ವಿಂಬಲ್ಡನ್ ಯಾವ ವರ್ಷವೂ ನಡೆದಿರಲಿಲ್ಲ. ನಾಳೆ ನಡೆಯುವ ಫೈನಲ್‌ನಲ್ಲಿ ಯಾರೇ ಗೆಲ್ಲಬಹುದು. ಆದರೆ ವಿಂಬಲ್ಡನ್‌ನಲ್ಲಿ ಸಾಮಾನ್ಯವಾಗಿ ಕಾಣುವ ಒಟ್ಟಾರೆ ಮೆರಗು, ಬೆರಗು ಮಾತ್ರ ಈ ಬಾರಿ ಕಾಣುತ್ತಿಲ್ಲ.

6 Responses to “ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ!”

  1. Dheeraj says:

    Respected Sir.
    The article is good. But I feel this is not the right situation to discuss about the wimbledon cup.When the nation is facing a serious disaster,an economic downfall and many other issues I was expecting an article regaurding those issues.Or atleast about the exploitation of the CBI by the congress in the case of Ishrath Jahan’s encounter.
    my expectations have been made false

  2. Pradeep Jadhav says:

    Nice one but this week we were hoping for an artical on ‘ishrat jahan case’

  3. shamanth says:

    Ur articles will always provide a good information…. I think u ll do lot of research work for a simple article

  4. Subhist Subedar says:

    Sir I want u to write an article on CR7 and Messi rivalry..
    plzzzz..
    Its my humble request..
    thank you..

  5. Raghavendra.L says:

    Prathap sir Maradon bagge vandu article bariri.. Nanu avara dodda abhimani..

  6. Raghavendra.L says:

    Prathap sir Maradona bagge vandu article bariri.. Nanu avara dodda abhimani..waiting for your article..