Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಛೇ! ಒಬ್ಬ ಕೈದಿಯಲ್ಲಿರುವ ರೋಷ, ದೇಶ ಅನ್ನೋ ಆತ್ಮಗೌರವ ಆಳುವ ಸರ್ಕಾರಕ್ಕಿಲ್ಲವಾಯಿತೇ?

ಛೇ! ಒಬ್ಬ ಕೈದಿಯಲ್ಲಿರುವ ರೋಷ, ದೇಶ ಅನ್ನೋ ಆತ್ಮಗೌರವ ಆಳುವ ಸರ್ಕಾರಕ್ಕಿಲ್ಲವಾಯಿತೇ?

ಹಾಗಂತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಹಾಲಿ ಸರ್ಕಾರವನ್ನು ಹಾಗೂ ಈ ಹಿಂದಿನ ವಾಜಪೇಯಿ ಸರ್ಕಾರವನ್ನೂ ಕೇಳಲೇಬೇಕಾಗಿದೆ. ಇಷ್ಟಕ್ಕೂ ಒಬ್ಬ ತಂದೆಯಾದವನು, ತಾಯಿಯಾದವಳು ಏಕಾಗಿ ತನ್ನ ಕರುಳ ಕುಡಿಯನ್ನು ದೇಶ ಕಾಯಿ ಎಂದು ಕಳುಹಿಸಬೇಕು? ಏಕಾಗಿ ತನ್ನ ಮಗನ ಪ್ರಾಣ ಯಾವ ಕ್ಷಣದಲ್ಲೂ ಬಲಿಯಾಗುವಂಥ ಕಾರ್ಯಕ್ಕೆ ಕಳುಹಿಸಬೇಕು? “ಯಾವ ಸೈನಿಕನೂ ಭಾರತಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಬಾರದು” ಎಂದು ಡಾ. ಎನ್.ಕೆ. ಕಾಲಿಯಾ 2012, ಡಿಸೆಂಬರ್‌ನಲ್ಲಿ ಏಕಾಗಿ ಹೇಳಿಕೆ ನೀಡಿದ್ದರು? ಅಂಥದ್ದೊಂದು ಹೇಳಿಕೆಯನ್ನು ಕೊಡುವ ಮಟ್ಟಕ್ಕೆ ಕೊಂಡೊಯ್ದ ಅವರ ವೇದನೆ, ಹತಾಶೆ ಹಾಗೂ ನೋವಾದರೂ ಯಾವುದು?

1999ರ ಹೊಸ ವರ್ಷಾಚರಣೆಗೆ ಎರಡು ದಿನ ಮೊದಲು. ಇಪ್ಪತ್ತೆರಡು ವರ್ಷದ ಸೌರಭ್ ಕಾಲಿಯಾ ‘ನಾಲ್ಕನೇ ಜಾಟ್ ರೆಜಿಮೆಂಟ್‌’ ಸೇರಲು ಹೊರಟಿದ್ದ. ಬೀಳ್ಕೊಡುವ ಸಲುವಾಗಿ ಇಡೀ ಕುಟುಂಬವೇ ಅಮೃತಸರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು. ರೈಲು ಚಲಿಸಲಾರಂಭಿಸಿತು. ಬಾಗಿಲ ಬಳಿ ನಿಂತ ಸೌರಭ್, ರೈಲು ಮರೆಯಾಗುವವರೆಗೂ ಅಮ್ಮನತ್ತ ಕೈಬೀಸುತ್ತಲೇ ಇದ್ದ. ಅದು ತನ್ನ ಅಂತಿಮ ವಿದಾಯ ಎಂದು ಬಹುಶಃ ಅವನಿಗೂ ಗೊತ್ತಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗಿ 15 ದಿನಗಳಲ್ಲೇ, ಲೇಹ್‌ಗೆ ಪ್ರಯಾಣ ಬೆಳೆಸಬೇಕಾಗಿ ಬಂತು. ಅವನ ಮೊದಲ ಪೋಸ್ಟಿಂಗ್ ಜಮ್ಮು-ಕಾಶ್ಮೀರದ ಕಾರ್ಗಿಲ್ ಆಗಿತ್ತು.

ಆದರೆ ಸೌರಭ್‌ಗೆ ಡಾಕ್ಟರ್ ಆಗಬೇಕೆಂಬ ಉತ್ಕಟ ಇಚ್ಛೆಯಿತ್ತು.

ವ್ಯಾಸಂಗ ಮಾಡುತ್ತಿರುವಾಗ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಪರೀಕ್ಷೆಗೆ ಅರ್ಜಿ ಕರೆಯಲಾಗಿತ್ತು. ಸೌರಭ್‌ನ ಸ್ನೇಹಿತರು ಪರೀಕ್ಷೆಗೆ ಅರ್ಜಿ ಹಾಕಲು ನಿರ್ಧರಿಸಿದರು. ಪರೀಕ್ಷೆ ನೆಪದಲ್ಲಿ ಚಂಡೀಗಢಕ್ಕೆ ಹೋಗಿ ಒಂದು ದಿನ ಮಜಾ ಮಾಡಬಹುದೆಂಬ ಯೋಚನೆ-ಯೋಜನೆ ಅವರದ್ದು! ಸೌರಭ್ ಕೂಡ ಅರ್ಜಿ ಹಾಕಿದ. ಪರೀಕ್ಷೆಯ ಹಿಂದಿನ ದಿನವೇ ಚಂಡೀಗಢಕ್ಕೆ ಬಸ್ ಹತ್ತಿದರು. ಮರುದಿನ ಎಲ್ಲರೂ ಪರೀಕ್ಷೆಗೆ ಚಕ್ಕರ್ ಹೊಡೆದು ಥಿಯೇಟರ್‌ಗೆ ಹೋದರೆ ಸೌರಭ್ ಮತ್ತು ಇನ್ನೊಬ್ಬ ಸಹಪಾಠಿ ಮಾತ್ರ ಪರೀಕ್ಷೆಗೆ ಹಾಜರಾದರು. ಒಂದು ವೇಳೆ ಪರೀಕ್ಷೆ ಬರೆಯದಿದ್ದರೆ ಮನೆಯಲ್ಲಿ ಯುದ್ಧವೇ ನಡೆಯುತ್ತದೆ ಎಂದು ಸೌರಭ್ ಸ್ನೇಹಿತರಿಗೆ ಕಾರಣ ಹೇಳಿದ್ದ. ರಿಸಲ್ಟ್ ಬಂದಾಗ ಪರೀಕ್ಷೆಗೆ ಹಾಜರಾಗಿದ್ದ ಸೌರಭ್ ಮತ್ತು ಅವನ ಸಹಪಾಠಿ ಇಬ್ಬರೂ ಪಾಸಾಗಿದ್ದರು. ಆದರೆ ಮೆಡಿಕಲ್ ಟೆಸ್ಟ್‌ನಲ್ಲಿ ಸೌರಭ್ ಎರಡು ಬಾರಿ ತಿರಸ್ಕೃತನಾದ. ಮೊದಲ ಬಾರಿ, ಹೃದಯದಲ್ಲಿ ಗೊರ ಗೊರ ಶಬ್ದ ಬರುತ್ತದೆ ಎಂದು ಕಾರಣ ನೀಡಿದರು. ಎರಡನೆ ಬಾರಿ ಟಾನ್ಸಿಲ್ಸ್(ಶೀತಗಡ್ಡೆ) ಅಡ್ಡಿಯಾಯಿತು. ಆದರೆ ಆ ವೇಳೆಗಾಗಲೇ ಸೌರಭ್ ಡಾಕ್ಟರ್ ಆಗುವ ಇಚ್ಛೆಯನ್ನೇ ಮರೆತಿದ್ದ. ಆರ್ಮಿ ಸೇರುವ ಆಸೆ ಮೊಳಕೆಯೊಡೆಯಲಾರಂಭಿಸಿತ್ತು. ಚಿಕಿತ್ಸೆಯ ಮೂಲಕ ದೈಹಿಕ ಸಮಸ್ಯೆಗಳನ್ನು ನಿವಾರಿಸಿಕೊಂಡ ಸೌರಭ್ ಕೊನೆಗೂ ಡೆಹ್ರಾಡೂನ್‌ನಲ್ಲಿನ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರುವಲ್ಲಿ ಯಶಸ್ವಿಯಾದ.

ಡೆಹ್ರಾಡೂನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದು ಸೌರಭ್ ಹೊರಬರುವಾಗ, “ಸೇನೆಗೆ ಸೇರಿದ ಕೂಡಲೇ ನಿನ್ನ ತಲೆಯಿಂದ ಮೆದುಳು ಹೊರತೆಗೆದು ಕೈಗೆ ಗನ್ ಕೊಡುತ್ತಾರೆ. ನೀನು ರಿಟೈರ್ಡ್ ಆದಾಗ ಗನ್ ಕಿತ್ತುಕೊಂಡು ಬ್ರೈನ್ ವಾಪಸ್ ಕೊಡುವುದನ್ನೇ ಮರೆಯುತ್ತಾರೆ’ ಎಂದು ವೈಭವ್ ಕೂಡ ಗೇಲಿ ಮಾಡಿದ್ದ. ಆದರೆ ಅರು ತಿಂಗಳ ನಂತರ ಅಂದರೆ 1999, ಜೂನ್ 6ರ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ, ಸೈನಿಕನ ಜೀವನ ಗೇಲಿಯ ವಸ್ತುವಲ್ಲ ಎಂಬ ವಾಸ್ತವ ವೈಭವ್‌ನನ್ನು ದುರುಗುಟ್ಟಿ ನೋಡುತ್ತಿತ್ತು! ಸೌರಭ್ ಮತ್ತು ಅವನ ಸಹಸೈನಿಕರು ಮೇ 1ರಿಂದ ಕಾಣೆಯಾಗಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ 1999, ಏಪ್ರಿಲ್ 30ರ ಮಧ್ಯಾಹ್ನವಷ್ಟೇ ಮನೆಗೆ ಕರೆ ಮಾಡಿದ್ದ ಸೌರಭ್, ವೈಭವ್‌ನ 20ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ. “ಅಮ್ಮಾ, ಒಂದು ವೇಳೆ ನಾನು ಮತ್ತೆ ಕರೆ ಮಾಡದಿದ್ದರೆ ಗಾಬರಿಯಾಗಬೇಡ. ಮುಂದಿನ ಪೋಸ್ಟಿಂಗ್‌ಗಾಗಿ ದೂರ ತೆರಳಬೇಕಾಗಬಹುದು. ವಾಪಸ್ ಬಂದ ಕೂಡಲೇ ಫೋನ್ ಮಾಡುತ್ತೇನೆ” ಎಂದಿದ್ದ. ಮೇ 10ರ ದಿನಾಂಕ ಹೊಂದಿದ್ದ ಸೌರಭ್‌ನ ಪತ್ರ ಮೇ 24ರಂದು ಬಂದಿತ್ತು. ಅಂದಮೇಲೆ, ಮೇ 1ರಿಂದ ಕಾಣೆಯಾಗಿರಲು ಹೇಗೆ ತಾನೇ ಸಾಧ್ಯ? ಅದೂ ಯಾರ ಗಮನಕ್ಕೂ ಬಾರದೆ 6 ಸೈನಿಕರು ಕಣ್ತಪ್ಪಿಹೋಗಲು ಹೇಗಾದೀತು? ಆದರೂ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅಮ್ಮನಿಗೆ ಹೇಳುವ ಸಂದರ್ಭ ಅದಾಗಿರಲಿಲ್ಲ. ವಿಜಯಾ ಕಾಲಿಯಾಗೆ ಆರೋಗ್ಯ ಸರಿಯಿರಲಿಲ್ಲ. ಅಂದು ಕೆಲಸಕ್ಕೆ ತೆರಳಿರಲಿಲ್ಲ. ‘ಯಾವುದೇ ಫೋನ್ ಬಂದರೂ ಉತ್ತರಿಸಬೇಡ. ರೆಸ್ಟ್ ತೆಗೆದುಕೊ’ ಎಂದು ಅಮ್ಮನಿಗೆ ತಿಳಿಸಿದ ವೈಭವ್, ನೇರವಾಗಿ ಅಪ್ಪನ ಆಫೀಸಿಗೆ ಹೋದ.

ಮಧ್ಯಾಹ್ನವೇ ಡಾ. ಕಾಲಿಯಾ ಮನೆಗೆ ಬಂದರು. ‘ಏನಾಯಿತು?’ ಎಂದು ವಿಜಯಾ ಕೇಳಿದರು. ಅದು ಸೌರಭ್ ವಿಷಯ ಅನ್ನುತ್ತಾ ಪತ್ರಿಕೆಯನ್ನು ತೋರಿಸಿದರು. ಆದರೆ ಮೇ 12ರಂದು ಸೌರಭ್‌ಗೆ ರಜೆ ದೊರೆತಿದೆ. ಬರುವುದಕ್ಕಾಗುವುದಿಲ್ಲ. ಜೂನ್ 29ರಂದು ಮನೆಗೆ ಬಂದೇಬರುತ್ತೇನೆ. ಹೇಗೂ ನನ್ನ ಹುಟ್ಟುಹಬ್ಬವಿದೆಯಲ್ಲ ಎಂದು ಪ್ರಾಮಿಸ್ ಮಾಡಿದ್ದಾನೆ. ಹಾಗಿರುವಾಗ ಪತ್ರಿಕೆಯಲ್ಲಿ ಬಂದಿರುವ ಸುದ್ದಿಯಲ್ಲಿ ನಿಜಾಂಶವಿಲ್ಲ ಎಂದೇ ಆಕೆ ಪ್ರತಿಪಾದಿಸಿದರು. ಇಷ್ಟಕ್ಕೂ ಕಾಣೆಯಾಗಿದ್ದರೆ ಸೇನೆಯಿಂದ ಸಂದೇಶ ಬರುತ್ತಿತ್ತು ಎಂದರು.

ಆ ನಂಬಿಕೆಯನ್ನೇ ನಂಬಿ ಕುಳಿತರು.

ಇತ್ತ ಚಿಂತಿತನಾದ ವೈಭವ್ ಚಂಡೀಗಢದಲ್ಲಿನ ಇಂಡಿಯನ್ ಎಕ್ಸ್‌ಪ್ರೆಸ್ ಕಚೇರಿಗೆ ಕರೆ ಮಾಡಿದಾಗ, ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಗೊಂಡಿರುವ ಸೈನಿಕನೊಬ್ಬ ಈ ವಿಷಯ ತಿಳಿಸಿದ ಎಂಬ ಉತ್ತರ ದೊರೆಯಿತು. ಹತಾಶೆಯಿಂದ ದಿಲ್ಲಿಯಲ್ಲಿರುವ ಮುಖ್ಯ ಕಚೇರಿಗೆ ಫೋನಾಯಿಸಿದರೆ ‘ಸೌರಭ್ ಮೇ 1ರಿಂದಲೇ ಕಾಣೆಯಾಗಿದ್ದಾನೆ’ ಎಂಬ ಪ್ರತಿಕ್ರಿಯೆ. ಆದರೆ ಮೇ 10ರ ದಿನಾಂಕ ಹೊಂದಿರುವ ಪತ್ರ ಬಂದಿರುವಾಗ, ಮೇ 1ರಂದು ಕಾಣೆಯಾಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ. ಹೇಗೋ ಮಾಡಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸಂಪರ್ಕಿಸಿದಾಗ ಭಯ ನಿಜವಾಗಿತ್ತು. ಸೌರಭ್ ಮೇ 15ರಿಂದ ಕಾಣೆಯಾಗಿದ್ದ. ಸೌರಭ್‌ನನ್ನು ಹುಡುಕಲು ಹೋಗಿದ್ದ ಯುವ ಅಧಿಕಾರಿ ಲೆಫ್ಟಿನೆಂಟ್ ಅಮಿತ್ ಭಾರದ್ವಾಜ್ ಕೂಡ ಶತ್ರುಗಳ ಗುಂಡಿಗೆ ಆಹುತಿಯಾಗಿದ್ದ.

ಹೌದು, ಮೇ 15ರಂದು ಗಸ್ತು ತಿರುಗಲು ಹೋಗಿದ್ದ ಕ್ಯಾಪ್ಟನ್ ಸೌರಭ್ ಕಾಲಿಯಾ, ಸಿಪಾಯಿಗಳಾದ ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾರಾಮ್, ಮೂಲಾರಾಮ್ ಮತ್ತು ನರೇಶ್ ಸಿಂಗ್ ಅವರನ್ನು ಕಕ್ಸರ್ ಸೆಕ್ಟರ್‌ನ ಬಜ್ರಂಗ್ ಪೋಸ್ಟ್ ಬಳಿ ಪಾಕಿಸ್ತಾನಿ ಸೈನಿಕರು ಬಂಧಿಸಿದ್ದರು. ಮುಂದಿನದ್ದು ಕ್ರೂರ ಅಧ್ಯಾಯ. ಭಾರತೀಯ ಸೇನೆಗೆ ಶವಗಳನ್ನು ಹಸ್ತಾಂತರಿಸುವ ಮೊದಲು ಸತತ 22 ದಿನಗಳ ಕಾಲ ಅತ್ಯಂತ ಅಮಾನುಷವಾಗಿ ಹಿಂಸಿಸಲಾಗಿತ್ತು! ಹಿಮಾಚಲ ಪ್ರದೇಶದ ಪಾಲಂಪುರಕ್ಕೆ ಶವ ಬಂದಾಗ ಅದು ಸೌರಭ್‌ನದ್ದೇ ಎಂದು ಗುರುತಿಸಲೂ ಸಾಧ್ಯವಾಗದಷ್ಟು ಹೀನಾಯ ರೂಪದಲ್ಲಿತ್ತು. ಅಂದು ತ್ರಿವರ್ಣ ಧ್ವಜದಲ್ಲಿ ಬಂದಿದ್ದು ಮಾಂಸದ ಮುದ್ದೆಯಾಗಿತ್ತು. ಸೌರಭ್‌ನ ಹುಬ್ಬುಗಳನ್ನು ಬಿಟ್ಟರೆ ಬೇರಾವುದೇ ಭಾಗಗಳನ್ನೂ ಗುರುತಿಸುವಂತಿರಲಿಲ್ಲ. ಕಣ್ಣು, ಕಿವಿ, ಮೂಗು, ದವಡೆ, ಗುಪ್ತಾಂಗ ಯಾವುವೂ ಇರಲಿಲ್ಲ, ಎಲ್ಲೆಡೆಯೂ ಸಿಗರೇಟಿನಿಂದ ಸುಟ್ಟ ಗುರುತುಗಳಿದ್ದವು. ಶತ್ರುವೇ ಆಗಿದ್ದರೂ ಅಂತಾರಾಷ್ಟ್ರೀಯ ನಿಯಮದಂತೆ ಬಂಧಿತ ಸೈನಿಕರಿಗೆ ನೀಡಬೇಕಾದ ಕನಿಷ್ಠ ಗೌರವವನ್ನು ಕೊಡುವುದು ಬಿಡಿ, ಪಾಕಿಸ್ತಾನ ಮಾನವೀಯತೆಯನ್ನೇ ಮರೆತಿತ್ತು.

ಈ ಬಗ್ಗೆ ಪ್ರಶ್ನಿಸಿದಾಗ “ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಮತ್ತಿತರು ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಸತ್ತಿರಬಹುದು” ಎಂದರು ಪಾಕಿಸ್ತಾನದ ಮಾಜಿ ಆಂತರಿಕ ಭದ್ರತಾ ಸಚಿವ ರೆಹ್ಮಾನ್ ಮಲ್ಲಿಕ್! ಆದರೆ ಮಾಂಸದ ಮುದ್ದೆಯಾಗಿ ಬಂದಿದ್ದ ಮಗನನ್ನು ಕಣ್ಣಾರೆ ಕಂಡಿದ್ದ ಡಾ. ಎನ್.ಕೆ. ಕಾಲಿಯಾ ಮಾತ್ರ ಅಂತಹ ಪೊಳ್ಳು ಮಾತುಗಳನ್ನು ನಂಬಲಿಲ್ಲ, ಹಾಗೆಯೇ ಸುಮ್ಮನಾಗಲೂ ಇಲ್ಲ. ಪುತ್ರ ವಿಯೋಗದ ನೋವನ್ನೂ ನುಂಗಿಕೊಂಡು ಪಾಕಿಸ್ತಾನದ ಧೂರ್ತತನವನ್ನು, ಕ್ರೌರ್ಯವನ್ನು ಬಯಲಿಗೆಳೆಯಲು ಹೊರಟರು. ಪಾಕಿಸ್ತಾನವನ್ನು ಪ್ರಶ್ನಿಸಬೇಕೆಂದು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಬೇಕೆಂದು ಮನಮೋಹನ್ ಸಿಂಗ್ ಸರ್ಕಾರಕ್ಕೆ ಮನವಿ ಮಾಡಿದರು. ಡಾ. ಕಾಲಿಯಾ ಮನವಿಗೆ ಓಗೊಟ್ಟ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಸೌರಭ್ ಕಾಲಿಯಾಗೆ ನೀಡಿದ ಚಿತ್ರಹಿಂಸೆ ಹಾಗೂ ಬರ್ಬರ ಕೊಲೆಯ ವಿಚಾರವನ್ನು ವಿಶ್ವಸಂಸ್ಥೆ ಎದುರು ಪ್ರಸ್ತಾಪಿಸಿದರು. ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಂದೆಯೂ ಅಹವಾಲು ಇಟ್ಟರು. ಆದರೆ ಏನೂ ಪ್ರಯೋಜನವಾಗಲಿಲ್ಲ. “ಕಷ್ಟ ಪರಿಹಾರವಾದ ಮೇಲೆ ಜನ ದೇವರನ್ನು, ಯುದ್ಧ ಮುಗಿದ ಮೇಲೆ ಸರ್ಕಾರ ಸೈನಿಕನನ್ನು ಮರೆಯುತ್ತದೆ” ಎಂಬ ಮಾತಿನಂತೆಯೇ ಆಯಿತು.

ನಮ್ಮನ್ನಾಳುವವರು ಸಂವೇದನೆಯನ್ನೇ ಕಳೆದುಕೊಂಡರು!

2004ರಲ್ಲಿ ವಾಜಪೇಯಿ ಸರ್ಕಾರ ಪತನಗೊಳ್ಳುವುದರೊಂದಿಗೆ ಬಿಜೆಪಿ ಸ್ವಾರ್ಥಿಗಳ ಕೂಪವಾಗಿ ದೇಶವನ್ನು ಮರೆತರೆ, ಇತ್ತ ಕಾರ್ಗಿಲ್ ವಿಜಯಾಚರಣೆಯನ್ನೇ ಕೈಬಿಟ್ಟ ಕಾಂಗ್ರೆಸ್ಸಂತೂ ಅಧಿಕಾರ ಹಾಗೂ ಅಹಂಗಾಗಿ ತಾನು  ಯಾವ ಮಟ್ಟಕ್ಕೂ ಇಳಿಯುವ ಪಕ್ಷವೆಂಬುದನ್ನು ಸಾಬೀತು ಮಾಡತೊಡಗಿತು. ಹಾಗಾಗಿ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ನಮ್ಮ ಇನ್ನಿತರ ಐವರು ಸೈನಿಕರನ್ನು ಬರ್ಬರ ಹಿಂಸೆಗೆ ಗುರಿ ಮಾಡಿ ಕೊಲ್ಲಲಾಗಿರುವ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ಪ್ರಸ್ತಾಪಿಸಬೇಕೆಂದು ನಮ್ಮ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಸೌರಭ್ ಕಾಲಿಯಾ ತಂದೆ ಎನ್.ಕೆ. ಕಾಲಿಯಾ ಸುಪ್ರೀಂಕೋರ್ಟ್‌ನಲ್ಲಿ ಕೇಸು ಹಾಕಬೇಕಾಗಿ ಬಂತೆಂದರೆ, ನಮ್ಮ ದೇಶವನ್ನು ಈಗ ಆಳುತ್ತಿರುವವರ ಮನಸ್ಥಿತಿ, ಧೋರಣೆ ಎಂಥದ್ದು ಎಂದು ಅರ್ಥವಾಗುವುದಿಲ್ಲವೆ? “ಇದು ಭಾರತ-ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಚಾರ. ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತೆಗೆದುಕೊಂಡು ಹೋಗುವುದಕ್ಕಾಗುವುದಿಲ್ಲ” ಎಂದು ಕಳೆದ ಡಿಸೆಂಬರ್‌ನಲ್ಲಿ ನಮ್ಮ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು. ಕಾಶ್ಮೀರ ವಿಷಯವನ್ನು ವಿನಾಕಾರಣ ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದ ನೆಹರು ಮಹಾಶಯರ ಪಕ್ಷದ ವಿದೇಶಾಂಗ ಸಚಿವರಿಂದ ಎಂಥಾ ಸಮಜಾಯಿಷಿ ನೋಡಿ?!

ಇದನ್ನೆಲ್ಲಾ ಏಕೆ ಈಗ ಪ್ರಸ್ತಾಪಿಸಲಾಗುತ್ತಿದೆಯೆಂದರೆ…

ಪ್ರತಿ ವರ್ಷ ಜುಲೈ 26 ಬಂತೆಂದರೆ ದರಿದ್ರ ಕಾಂಗ್ರೆಸ್ ಮನಸ್ಥಿತಿ ಎಂಥದ್ದೇ ಆಗಿದ್ದರೂ ದೇಶವಾಸಿಗಳಾದ ನಾವು ಮಾತ್ರ “ಕಾರ್ಗಿಲ್ ವಿಜಯ ದಿವಸ”ವನ್ನು ಆಚರಿಸುತ್ತೇವೆ, ನಮ್ಮ ಗಡಿ ರಕ್ಷಣೆಗಾಗಿ ಮಡಿದ 527 ಸೈನಿಕರನ್ನು ನೆನಪಿಸಿಕೊಳ್ಳುತ್ತೇವೆ. ಹಾಗೆಯೇ, 1999ರಲ್ಲಿ ಅತಿಕ್ರಮಣಕಾರರ ರೂಪದಲ್ಲಿ ಭಾರತದೊಳಕ್ಕೆ ನುಸುಳಿ, ನಮ್ಮ ಪರ್ವತ ಶ್ರೇಣಿಗಳನ್ನು ಆಕ್ರಮಿಸಿ ಕಾರ್ಗಿಲ್ ಯುದ್ಧಕ್ಕೆ ಕಾರಣರಾದ ತನ್ನ ಸೈನಿಕರನ್ನೂ ಪಾಕಿಸ್ತಾನ ನೆನಪಿಸಿಕೊಳ್ಳುತ್ತದೆ, ಸಮ್ಮಾನಿಸುತ್ತದೆ. ಇತ್ತೀಚೆಗೆ ನಡೆದ ಅಂಥದ್ದೊಂದು ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಸೈನಿಕ ‘ಭುಲೆ ಖಂದನ್‌’ ಎಂಬುವನು ತನ್ನ ಪರಾಕ್ರಮವನ್ನು ಹಾಡಿಹೊಗಳಿಕೊಳ್ಳುವ, ಕ್ರೌರ್ಯವನ್ನು ಕೊಚ್ಚಿಕೊಳ್ಳುವ ಭರದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಐವರು ಸೈನಿಕರಿಗೆ ತಾವು ಕೊಟ್ಟ ಹಿಂಸೆಯನ್ನು ಹೊರಗೆಡವಿದ್ದಾನೆ!

“1999, ಮೇ 13ರಂದು ಕಾಲಿಯಾ ಮತ್ತು ಐವರು ಸೈನಿಕರು ನಮ್ಮ ಪೋಸ್ಟ್‌ನತ್ತ ಆಗಮಿಸಲಾರಂಭಿಸಿದರು. ಅವರಿಗೆ ನಮ್ಮ ಪೋಸ್ಟನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು. ಆದರೆ ಅವರ ಯೋಜನೆ ವಿಫಲವಾಗಿ ಪಲಾಯನ ಮಾಡತೊಡಗಿದರು. ನಾವು ಬೆನ್ನಟ್ಟಿ ಹೋದೆವು, ಗುಂಡಿನ ಸುರಿಮಳೆಗೈದೆವು. ಅವರನ್ನು ಕೊಂದು, ಗಡಿರೇಖೆ ಬಳಿ ನಿಂತು ಕೂಗಿದರೂ ಹೆಣ ತೆಗೆದುಕೊಂಡು ಹೋಗುವ ಧೈರ್ಯವೂ ಭಾರತದ ಕಡೆಯವರಿಗಿರಲಿಲ್ಲ” ಎಂದಿದ್ದಾನೆ. ಹೀಗೆ ಆತ ಸಮಾರಂಭದಲ್ಲಿ ಹೇಳುತ್ತಿರುವುದನ್ನು ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದಾರೆ, ಅದು ಮಾಧ್ಯಮಗಳನ್ನು ಬುಧವಾರ ತಲುಪಿದೆ. ಅಲ್ಲಿಗೆ ಪಾಕಿಸ್ತಾನ ಇದುವರೆಗೂ ಹೇಳಿಕೊಂಡು ಬರುತ್ತಿದ್ದ ಸುಳ್ಳು ಬಯಲಾದಂತಾಗಿದೆ. ಸೌರಭ್ ಕಾಲಿಯಾಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಪಾಕಿಸ್ತಾನಿಯನ ಬಾಯಿಂದಲೇ ಹೊರಬಿದ್ದಿದೆ. ಇಷ್ಟಾಗಿಯೂ ಭಾರತ ಸರ್ಕಾರವೇಕೆ ಮೂಕನಂತೆ ಕುಳಿತಿದೆ? ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಗುರುವಾರ ಅಧಿಕಾರ ವಹಿಸಿಕೊಂಡ ಸುಜಾತಾ ಸಿಂಗ್ ಹೇಳಿಕೆಯೊಂದನ್ನು ನೀಡಿದ್ದು ಬಿಟ್ಟರೆ ಬೇರಾವ ಮಂತ್ರಿಮಹೋದಯರು ಏಕೆ ಧ್ವನಿಯೆತ್ತುತ್ತಿಲ್ಲ? ಪಾಕಿಸ್ತಾನದ ದುರುಳತೆಯನ್ನು ಅದರ ಸೈನಿಕನೇ ಹೊರಹಾಕಿದ್ದರೂ ಏಕೆ ಯಾರೂ ಮಾತನಾಡುತ್ತಿಲ್ಲ? ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಪಡೆಗಳು ಅತಿಕ್ರಮಣ ಮಾಡಿವೆ ಎಂಬುದನ್ನು ಮೊದಲಿಗೆ ಪತ್ತೆ ಮಾಡಿದವನೇ ಸೌರಭ್ ಕಾಲಿಯಾ. ಅಂತಹ ಧೀರಪುತ್ರನ ಬರ್ಬರ ಸಾವೂ ನಮ್ಮವರ ಅಂತಃಕರಣ ಕಲಕುವುದಿಲ್ಲವೆ?

ಅಂತಾರಾಷ್ಟ್ರೀಯ ನಿಯಮದಂತೆ ಬಂಧಿತ ಸೈನಿಕರಿಗಾಗಲಿ, ಪ್ರಜೆಗಳಿಗಾಗಲಿ ಹಿಂಸೆ ನೀಡುವಂತಿಲ್ಲ. ಅಂತಹ ಪಾತಕಿ ಅಬೂ ಸಲೇಂನನ್ನು ಭಾರತಕ್ಕೆ ಹಸ್ತಾಂತರಿಸುವ ಮೊದಲು ಆತನಿಗೆ ಹಿಂಸೆ ನೀಡಬಾರದು ಹಾಗೂ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಪೋರ್ಚುಗಲ್ ಪೂರ್ವಷರತ್ತು ಹಾಕಿದ್ದು ನಿಮಗೆ ನೆನಪಿರಬಹುದು. ನಾವೂ ಕೂಡ ಕಾಶ್ಮಿರದಲ್ಲಿ ಸತ್ತ ದೇಶದ್ರೋಹಿ ಭಯೋತ್ಪಾದಕರನ್ನೂ ಅವರ ಧರ್ಮದ ವಿಧಿವಿಧಾನಗಳಿಗೆ ಅನುಗುಣವಾಗಿ ಸಂಸ್ಕಾರ ಮಾಡುತ್ತೇವೆ. ಆದರೆ ಏಕೆ ಮಾಡಬೇಕು ಹೇಳಿ? ನಮ್ಮ ದೇಶದ ಸಮವಸ್ತ್ರ ತೊಟ್ಟ ಸೈನಿಕ ಸೆರೆಯಾದಾಗ ಗೌರವಯುತವಾಗಿ ನಡೆಸಿಕೊಳ್ಳುವುದು ಬಿಡಿ, ಚಿತ್ರಹಿಂಸೆ ಕೊಡುವ, ಮಾಂಸದ ಮುದ್ದೆಯಾಗಿ ಗಡಿಯೊಳಕ್ಕೆ ಬಿಸಾಡುವ, ತಲೆ ಕಡಿದು ಬರೀ ದೇಹ ಕಳುಹಿಸುವವರಿಗೆ ನಾವೇಕೆ ಮರ್ಯಾದೆ ಕೊಡಬೇಕು? ಒಸಾಮ ಬಿನ್ ಲಾಡೆನ್‌ನನ್ನು ಕುಕ್ಕಿ ಕೊಂದು ಸಮುದ್ರಕ್ಕೆ ಬಿಸಾಡಿತಲ್ಲಾ ಅಮೆರಿಕ, ಅಂಥ ಧಾಡಸಿತನ ನಮ್ಮ ನಾಯಕರಿಗೇಕಿಲ್ಲ ? 1999, 9ರಂದು ಸೌರಭ್ ಕಾಲಿಯಾ ಪಾರ್ಥಿವ ಶರೀರ ವಾಪಸ್ ಬಂದಾಗ ಕಾದ ಕಬ್ಬಿಣದ ಸಲಾಕೆಯನ್ನು ಕಿವಿಯ ತಮಟೆಯೊಳಕ್ಕೆ ಹಾಕಿ ಹಿಂಸಿಸಿರುವ ಗುರುತು ಕಾಣುತ್ತಿತ್ತು. 2013, ಜನವರಿಯಲ್ಲೂ ಜಮ್ಮ-ಕಾಶ್ಮೀರದ ಮೆಂಧರ್ ಸೆಕ್ಟರ್‌ನಲ್ಲಿ ಗಡಿ ಕಾಯುತ್ತಿದ್ದ ಇಬ್ಬರು ಸೈನಿಕರನ್ನು ಬಂಧಿಸಿ ಒಬ್ಬನ ತಲೆಯನ್ನೇ ಕತ್ತರಿಸಿ ಬರೀ ದೇಹವನ್ನು ಕಳುಹಿಸಿದರೆ, ಇನ್ನೊಬ್ಬ ಸೈನಿಕನ ದೇಹ ಮಾಂಸದ ಮುದ್ದೆಯಾಗಿ ಬಂತು. ಆಗಲೂ ಭಾರತದ ಪ್ರತಿಕ್ರಿಯೆ ಟೀಕೆಗಷ್ಟೇ ಸೀಮಿತವಾಯಿತು. ನಮ್ಮ ಜನರಲ್ಲಾಗಲಿ, ನಮ್ಮನ್ನಾಳುವವರಲ್ಲಾಗಲಿ ಪ್ರತೀಕಾರ ತೆಗೆದುಕೊಳ್ಳುವ ತಾಕತ್ತು, ಕ್ಷಾತ್ರ ಗುಣಗಳೇ ಸತ್ತುಹೋಗಿವೆಯೇ? 2013, ಮೇ 2ರಂದು ನಮ್ಮ ದೇಶದ ಸರಬ್‌ಜಿತ್ ಸಿಂಗ್‌ನನ್ನು ಪಾಕಿಸ್ತಾನದ ಜೈಲಿನಲ್ಲಿ ಹತ್ಯೆ ಮಾಡಿದ ಮರುದಿನವೇ ಬಾಂಬ್ ಸ್ಫೋಟದ ಆರೋಪದ ಮೇಲೆ ಜಮ್ಮು-ಕಾಶ್ಮೀರದ ಜೈಲಿನಲ್ಲಿದ್ದ ಪಾಕಿಸ್ತಾನಿ ಪ್ರಜೆ ಸನಾವುಲ್ಲಾನನ್ನು ವಿನೋದ್ ಕುಮಾರ್ ಎಂಬ ಕೈದಿ ಬಡಿದು ಸಾಯಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ. ಒಬ್ಬ ಕೈದಿಯಲ್ಲಿರುವ ರೋಷ, ದೇಶ ಅನ್ನೋ ಆತ್ಮಗೌರವ 120 ಕೋಟಿ ಜನರನ್ನಾಳುತ್ತಿರುವ ಸರ್ಕಾರಕ್ಕಿಲ್ಲವಾಗಿದೆಯೇ? ಯಾವ ಸೈನಿಕನೂ ದೇಶಕ್ಕಾಗಿ ಪ್ರಾಣ ಕೊಡಬಾರದು ಎಂದು ಡಾ. ಎನ್.ಕೆ. ಕಾಲಿಯಾ ಮನನೊಂದು ಹೇಳಿದ್ದರಲ್ಲಿ ಯಾವ ತಪ್ಪಿದೆ ಹೇಳಿ?

22 Responses to “ಛೇ! ಒಬ್ಬ ಕೈದಿಯಲ್ಲಿರುವ ರೋಷ, ದೇಶ ಅನ್ನೋ ಆತ್ಮಗೌರವ ಆಳುವ ಸರ್ಕಾರಕ್ಕಿಲ್ಲವಾಯಿತೇ?”

 1. sandeep says:

  bhrasta , honegedi, nirveerya, ranahedi maththu paradesheeyara kaiyyalli deshavannu kottu , naayiyanthe baala aadisuva , eee UPA (CONGRESS) sarkaara iruva varegoo BHAARATEEYA endure hemmeyinda ede tatti helikollalagada avamanavu edeyolage jwaalamukhiyante suttu killuttide , nannannu matravalla 77 koti HINDUgalanno Saha …. nirbhayanaagi heluttene CONGRASS math HORADESHSDA adhikaarinige MURDABAAD………. VANDE MATHARAM……

 2. ananth says:

  bhrasta , honegedi, nirveerya, ranahedi maththu paradesheeyara kaiyyalli deshavannu kottu , naayiyanthe baala aadisuva , eee UPA (CONGRESS) sarkaara iruva varegoo BHAARATEEYA endure hemmeyinda ede tatti helikollalagada avamanavu edeyolage jwaalamukhiyante suttu kolluttide , nannannu matravalla 77 koti HINDUgalanno Saha …. nirbhayanaagi heluttene CONGRASS math HORADESHSDA adhikaarinige MURDABAAD………. VANDE MATHARAM……

 3. Dheeraj says:

  Really inspiring and it brings out the truth about our government

 4. Congress is no more a Political party!! Its just a Corporate firm to loot India and Indianness.

  Small Country like Pakistan which emerged from India, now it is threatening Indians, Indian Govt. and Indian Defence force must be punished.

  India Bangladesh Borders has no secured borders, govt. should deploy more force to check illegal migration, intruders, infiltration, later they become Indians by getting voter Card from our greedy politicians.

  India China Borders – China occupied, occupying large area of our country and Indian Govt. is hiding the actual map of India, In actual map there is no Kashmir, Kashmir now shared between Pakistan and China.(PoK and China occupied Kashmir)

  No Secured Borders, No Patriotism, Only appeasement for their vote banks, no ruling only fooling, Patriotic Indians show their power in 2014 Loksabha Elections.

  ಗಜೇಂದ್ರಕುಮಾರ್. ಎಂ

 5. Congress is no more a Political party!! Its just a Corporate firm to loot India and Indianness.

  Small Country like Pakistan which emerged from India, now it is threatening Indians, Indian Govt. and Indian Defence force. Pakistan must be punished.

  India Bangladesh Borders has no secured borders, govt. should deploy more force to check illegal migration, intruders, infiltration, later they become Indians by getting voter Card from our greedy politicians.

  India China Borders – China occupied, occupying large area of our country and Indian Govt. is hiding the actual map of India, In actual map there is no Kashmir, Kashmir now shared between Pakistan and China.(PoK and China occupied Kashmir)

  No Secured Borders, No Patriotism, Only appeasement for their vote banks, no ruling only fooling, Patriotic Indians show their power in 2014 Loksabha Elections.

  ಗಜೇಂದ್ರಕುಮಾರ್. ಎಂ

 6. Gautham says:

  It really boils our blood but these polticians they play for self desires it can be only corrected when rule must be applied that polticians sons and heirs should be in miltary and serve for country then will know th pain

 7. Shiva says:

  Rahul Gandhi he have madidare hegirathe….

 8. Shiva says:

  Rahul gandige hage madidare hegirathe..???

 9. Nishitha says:

  Hello Pratap ji,
  its a very touching article. Every Indian should read this article.Its shame on us people that we elect such govt to rule our country which does not even bother to give a proper protection to our soldiers who sacrifice everything for the sake of our country.
  even pakistan knows the fact that whatever it will do to India n its soldiers, our politicians will still be talking about settling the issues peacefully!!! our great politicians do not have time for these kind of serious issues. they are just concerned with fulfilling their selfish needs and busy fighting for power and position..

 10. Umesh JR says:

  Pratapji,

  I am speechless about this article.

  At any cost, in this election BJP should come to rule & Narendra Modiji should become PM.

  Or else many more Sourab Kalliya will sacrifice thier lives to our country.

 11. manjunath says:

  feels bad to say the soals of our soldiers will be highly UNSATISFIED because of the reason that inspite of giving their life the result is only grieving of their family and also as there is no strong reaction from our side which resulted to feel his country people more weaker than before..,if these are the results of his death then how can be his soal be in peace…??

 12. naveen nayak says:

  indian government is a worst government and indian peopies are also worst

 13. Prakash says:

  Dayavittu e gandu congress sarkarana tegedakle bekuu…

  yella bharathiyaru hodagi e kelsa madle beku,..

  Jai Bharatambe

 14. Sharath says:

  Salute to Saurabh Kalia and many more brave Jawan’s

 15. Kiran Kumar says:

  che….very shameful…. Indian’s are famous for Brave and Courage…. But our central govt not even speaking a single word….???? only only only to please some religion people….. Bloody hell with these politicians…

 16. Gautham says:

  it really boils our blood why they cant understand it

 17. sathpraje says:

  Illi comment bareyodindra athava congress partyna bayyuvudarinda enu sigalla…nimge nijakku e sarkara beda andre banni beedige iliyona sayo thanka deshadalli iro brashtachara kith hakoke horadona…e kelsa yarindanadru madok aguttha???? navu namma mane matha bittu intha kelasakke ki hakthiva???? illa thane and mele comment bardu time yake waste madthira??? enanthira???

 18. harsha rao says:

  Salute

 19. Gunapala says:

  if i would get chance i will burn all those people who have done this for our solders !!

 20. Gunapala says:

  we all know that this govt has done many mistakes ..still its goes on every day…!! some ppl still vote them nd ,made them rule us …!! what to tell those nonsense ppl

 21. chandru says:

  shedige shede horatu shedige baliyadawarige santwana heludalla namma sainikara kaige pakistani sainika(saitan) sikkag awanannu bandisi chitra himseyanna kottu runda munda berpadisi awarige utara kodabeku