Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯೇ ಆಗಿದ್ದರೆ ಕಾಂಗ್ರೆಸ್ ವಕ್ತಾರರಿಗೇಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಸಂಕಟ?

ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯೇ ಆಗಿದ್ದರೆ ಕಾಂಗ್ರೆಸ್ ವಕ್ತಾರರಿಗೇಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಸಂಕಟ?

2012, ಫೆಬ್ರವರಿ-ಮಾರ್ಚ್.

ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ಏರ್ಪಾಡಾಗಿತ್ತು. ಅದಕ್ಕೂ ಮುನ್ನ 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನಿರೀಕ್ಷಿತವಾಗಿ 21 ಸ್ಥಾನಗಳು ದೊರೆತಿದ್ದವು. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಗೆಲುವನ್ನು ನೆಹರು ಕುಟುಂಬದ ತಲೆಗೂ, ಸೋಲನ್ನು ಯಾವುದಾದರೂ ರಾಜ್ಯ ನಾಯಕರು ಅಥವಾ ಪಕ್ಷದ ತಲೆಗೆ ಕಟ್ಟುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅಂತೆಯೇ 2009ರ ಗೆಲುವನ್ನು ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿಯವರಿಗೆ ಸಮರ್ಪಿಸಿದರು. ಪಾಪ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ರಾಹುಲ್‌ಗಾಂಧಿಯವರೂ ತಮ್ಮ ಸಾಮರ್ಥ್ಯದ ಬಗ್ಗೆ, ನೆಹರು-ಗಾಂಧಿ ಕುಟುಂಬದ ವರ್ಚಸ್ಸಿನ ಬಗ್ಗೆ ಅತಿಯಾಗೇ ನಂಬಿಕೊಂಡು ಗೆದ್ದೇ ತೀರುತ್ತೇನೆ ಎಂಬಂತೆ 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರಾಂದೋಲನಕ್ಕಿಳಿದರು.

ಅಷ್ಟೇ ಅಲ್ಲ…

ರಾಹುಲ್ ತಂಗಿ ಪ್ರಿಯಾಂಕರ ಗಂಡ ರಾಬರ್ಟ್ ವಾದ್ರಾ ಕೂಡ ಪ್ರಚಾರಕ್ಕೆ ಧುಮುಕಿದರು! ರಾಯ್‌ಬರೇಲಿ ಹಾಗೂ ಅಮೇಥಿಯಲ್ಲಿ ನಡೆದ ಪ್ರಚಾರಸಭೆಗೆ ತಮ್ಮಿಬ್ಬರು ಮಕ್ಕಳನ್ನು ಕರೆತಂದು ಪ್ರಧಾನಿ ಸ್ಥಾನದ ಮುಂದಿನ ವಾರಸುದಾರರು ಎಂಬಂತೆ ಪ್ರದರ್ಶಿಸಿದರು. ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬವರ್ಗದ ಹೆಸರು ಕೇಳಿದರೇ ನಮ್ಮ ಇಂಗ್ಲಿಷ್ ಮಾಧ್ಯಮಗಳು ಉದ್ರೇಕವಾಗುವಂತೆ ವರ್ತಿಸುತ್ತವೆ. ಅವರನ್ನು ನೋಡಿದರಂತೂ ಪುಳಕಗೊಳ್ಳುತ್ತವೆ. ಇಂಥ ಮಾಧ್ಯಮಗಳು ಸೋನಿಯಾ ಗಾಂಧಿಯವರ ಅಳಿಯ ಅನ್ನೋ ಏಕಮಾತ್ರ ಅರ್ಹತೆ ಬಿಟ್ಟರೆ ಬೇರಿನ್ನೇನೂ ಇಲ್ಲದಿದ್ದರೂ ರಾಬರ್ಟ್ ವಾದ್ರಾ ಅವರಿಗೂ ಬಹುವಾದ ಪ್ರಚಾರ ನೀಡತೊಡಗಿದವು. ಅದರಿಂದ ರಾಬರ್ಟ್ ವಾದ್ರಾ ಎಷ್ಟು ಉಬ್ಬಿ ಹೋದರೆಂದರೆ 2012, ಫೆಬ್ರವರಿ 7ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಾತನಾಡುತ್ತಾ, ‘ರಾಜಕಾರಣ ಸೇರುವ ವಿಷಯದಲ್ಲಿ ನಾನು ತೆರೆದ ಮನಸ್ಸು ಹೊಂದಿದ್ದೇನೆ. ಒಂದು ವೇಳೆ, ಜನ ಬಯಸುವುದಾದರೆ ನಾನೇಕೆ ಬೇಡವೆನ್ನಲಿ?’ ಅಂದು ಬಿಟ್ಟರು. ಇದೊಂದು ರೀತಿಯಲ್ಲಿ, ರಾಹುಲ್ ಗಾಂಧಿಯವರ ಬಗಲಲ್ಲಿ ಇದ್ದುಕೊಂಡೇ ಟಾಂಗ್ ಕೊಟ್ಟಂತೆ ಭಾಸವಾಯಿತು. ಕೂಡಲೇ ಮುಜುಗರವನ್ನು ತಪ್ಪಿಸಲು ಮುಂದಾದ ಪತ್ನಿ ಪ್ರಿಯಾಂಕಾ ವಾದ್ರಾ, He is a ‘successful’ businessman, will not enter politics’  ಎಂದು ಬಿಟ್ಟರು.

ಅವತ್ತು ಪ್ರಿಯಾಂಕಾ ವಾದ್ರಾ ಅವರೇ ಹೇಳಿದ  “successful’  ಹಿಂದಿರುವ ರಹಸ್ಯ ಈಗ ಬಯಲಾಗುತ್ತಿದೆ!!

ರಾಬರ್ಟ್ ವಾದ್ರಾ ಬರೀ ಒಬ್ಬ ‘ಯಶಸ್ವಿ’ ಉದ್ಯಮಿಯಲ್ಲ, ‘ಭಾರೀ ಯಶಸ್ವಿ’ ಉದ್ಯಮಿ. 2007ರಲ್ಲಿ ಕೇವಲ 50 ಲಕ್ಷ ಮೂಲ ಬಂಡವಾಳದಿಂದ ಆರಂಭಿಸಿದ ಕಂಪನಿಯನ್ನು 2009ರ ವೇಳೆ 300 ಕೋಟಿ ಮೌಲ್ಯಕ್ಕೆ ಏರಿಸಿದ ಅವರ ಯಶಸ್ಸೇನು ಸಾಮಾನ್ಯದ್ದೇ? 2008ರಲ್ಲಿ ಹರ್ಯಾಣದ ಶಿಕೋಹ್‌ಪುರ್ ಗ್ರಾಮದಲ್ಲಿ 3.4 ಎಕರೆ ಜಮೀನನ್ನು 15.39 ಕೋಟಿಗೆ ಖರೀದಿಸಿ ವರ್ಷ ಕಳೆಯುವ ಮೊದಲೇ ಡಿಎಲ್‌ಎಫ್ ಕಂಪನಿಗೆ 58 ಕೋಟಿಗೆ ಮಾರಿ, 42 ಕೋಟಿ ಲಾಭ ಗಳಿಸಿದ ರಾಬರ್ಟ್ ವಾದ್ರಾರದ್ದೇನು ಕಡಿಮೆ ತಲೆಯೇ? ಮೊನ್ನೆ ಮಂಗಳವಾರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತಾ ‘ನಮ್ಮಲ್ಲಿ ಕೋಟಿ ಕೋಟಿ ಗಳಿಸುವ ಬಗೆ ಹೇಗೆ ಎಂದು ಹೇಳಿಕೊಡುವ ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್‌ಗಳಿವೆ. ಆದರೆ ಇಲ್ಲೊಬ್ಬ ಪ್ರಭಾವಿಗಳ ಸಂಪರ್ಕ ಹೊಂದಿರುವ ವ್ಯಕ್ತಿಯಿದ್ದಾನೆ, ಆತ ಯಾವ ಬ್ಯುಸಿನೆಸ್ ಸ್ಕೂಲ್‌ಗಳಿಗೂ ಹೋಗದೆ ಕೋಟ್ಯಂತರ ರೂಪಾಯಿ ಗಳಿಸಿದ್ದಾನೆ! ಆತ ಮತ್ತಾರೂ ಅಲ್ಲ, ರಾಬರ್ಟ್ ವಾದ್ರಾ. ಈ ವಾದ್ರಾ ಒಂದು ಬ್ಯುಸಿನೆಸ್ ಸ್ಕೂಲ್ ತೆರೆಯುವುದೊಳಿತು ಹಾಗೂ ಯಾವುದೇ ಬಂಡವಾಳ ಹೂಡಿಕೆಯಿಲ್ಲದೆ ಭಾರತದ ಸಾಲದ ಹೊರೆಯನ್ನು ಇಳಿಸುವುದು ಹೇಗೆ ಎಂಬುದನ್ನು ಹಣಕಾಸು ಸಚಿವ ಪಿ. ಚಿದಂಬರಂ ವಾದ್ರಾರಿಂದ ಕಲಿಯಬೇಕು’ ಎಂದು ಸಂಸದ ಯಶವಂತ್ ಸಿನ್ಹಾ ಹೇಳಿರುವುದರಲ್ಲಿ ಯಾವ ಆಶ್ಚರ್ಯವಿದೆ? ಬಂಡವಾಳವೇ ಇಲ್ಲದೆ ಲಾಭ ಮಾಡುವ ತಾಕತ್ತು ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ಸೋನಿಯಾ ಗಾಂಧಿಯವರ ಅಳಿಯನಿಗೆ ಮಾತ್ರ ಎಂಬುದರಲ್ಲಿ ಯಾರಿಗಾದರೂ ಅನುಮಾನವಿದೆಯೇ ಹೇಳಿ? ಇದೆಯಾದರೆ, ಡಿಎಲ್‌ಎಫ್‌ನಂಥ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ತಾನೇ 65 ಕೋಟಿ ಸಾಲ ಕೊಟ್ಟು ತನ್ನ ಫ್ಲಾಟ್‌ಗಳನ್ನು ಖರೀದಿಸಿಲು ಗ್ರಾಹಕನೊಬ್ಬನಿಗೆ ಅವಕಾಶ ಮಾಡಿಕೊಟ್ಟ ಹಾಗೂ ಕೆಲವೇ ಸಮಯದಲ್ಲಿ ಅವುಗಳಲ್ಲಿ ಕೆಲವನ್ನು ದುಪ್ಪಟ್ಟು ಬೆಲೆಗೆ ತಾನೇ ವಾಪಸ್ ಖರೀದಿಸಿ ಗ್ರಾಹಕನಿಗೆ ಪುಕ್ಕಟೆ ಲಾಭ ಮಾಡಿಕೊಟ್ಟ ಉದಾಹರಣೆ ರಾಬರ್ಟ್ ವಾದ್ರಾನದ್ದು ಬಿಟ್ಟರೆ ಬೇರಿನ್ನಾವುದಿದೆ ಸ್ವಾಮಿ?!

ಈ ರಾಬರ್ಟ್ ವಾದ್ರಾ ಎಂತಹ ದೊಡ್ಡ ಉದ್ಯಮಿ, ಅವರ ಬಳಿ ಎಂತಹ ಯಶಸ್ಸಿನ ಸೂತ್ರವಿದೆ ಎಂದರೆ ಸಾಲಬಾಧೆಯಿಂದ ವಿಮಾನಗಳನ್ನೆಲ್ಲ ನೆಲಕ್ಕಿಳಿಸಿರುವ ವಿಜಯ್ ಮಲ್ಯ ಅವರ ಕಿಂಗ್‌ಫಿಷರ್ ಅನ್ನು ಆತ ಖರೀದಿಸಿದರೆ ಮಾತ್ರ ಆ ಕಂಪನಿ ಚೇತರಿಸಿಕೊಳ್ಳಲು ಸಾಧ್ಯ ಎಂದು ‘ಫೇಕಿಂಗ್ ನ್ಯೂಸ್‌’ ಜಾಲತಾಣ ಹತ್ತು ತಿಂಗಳ ಹಿಂದೆಯೇ ಒಂದು ಮಜಬೂತಾದ ಅಣಕು ಸುದ್ದಿಯನ್ನು  ಪ್ರಕಟಿಸಿತ್ತು, ಅದು ಇಂದಿಗೂ ಪ್ರಸ್ತುತ ಎನಿಸುತ್ತದೆ. ಓದಿ…

*****

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮುಖ್ಯಸ್ಥ ವಿಜಯ್ ಮಲ್ಯರ ಹೂಡಿಕೆಯೆಲ್ಲ ಗಾಳಿಯಲ್ಲಿ ಹಾರಿಹೋದ ಸಮಯದಲ್ಲೇ ಬ್ಯಾಂಕ್‌ಗಳೆಲ್ಲ ಇನ್ಮುಂದೆ ಅವರಿಗೆ ಸಾಲ ಕೊಡುವುದಿಲ್ಲ ಎಂದು ಕೈ ಎತ್ತಿವೆ. ಹಾಗಾಗೆ ಅವರು ತಮ್ಮ ಕಂಪನಿಯನ್ನು “ದೇಶದ ಅಳಿಯ” ಮತ್ತು ಡಿಎಲ್‌ಎಫ್‌ನ ಒಡನಾಡಿ ರಾಬರ್ಟ್ ವಾದ್ರಾರಿಗೆ ಮಾರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಲ್ಯಾರನ್ನು ಪ್ರಶ್ನಿಸಿದಾಗ-‘ನೋಡಿ, ಈ ಉದ್ಯಮ ಉಳಿಯಬೇಕಂದ್ರೆ ಬೇರೇ ದಾರೀನೇ ಇಲ್ಲ. ನಾನಂತೂ ಕಿಂಗ್‌ಫಿಷರ್ ಅನ್ನು ಉಳಿಸಲು ವಿಫಲನಾಗಿದ್ದೇನೆ. ಹೇಗೆ ವಾದ್ರಾ ಡಿಎಲ್‌ಎಫ್ ಜೊತೆಗೆ ಜಾದೂ ಮಾಡಿದರೋ ಅದೇ ರೀತಿ ಕಿಂಗ್‌ಫಿಷರ್ ಅನ್ನು ಮತ್ತೊಮ್ಮೆ ಕಿಂಗ್ ಆಗಿಸುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎನ್ನುತ್ತಾರೆ.

ಇದಷ್ಟೇ ಅಲ್ಲದೆ ಮಾನ್ಯ ಮಲ್ಯ ಅವರು ತಮ್ಮ ರಾಯಲ್ ಚಾಲೆಂಜರ್ಸ್ ತಂಡವನ್ನೂ ವಾದ್ರಾ ಒಡಲಿಗೆ ಹಾಕುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

‘ವಾದ್ರಾ ನಮ್ಮ ಕ್ರಿಕೆಟ್ ತಂಡವನ್ನು ಖರೀದಿಸಿದರೆ, ಆರ್‌ಸಿಬಿಯಿಂದ ಐಪಿಎಲ್ ಸರಣಿಯನ್ನು ಗೆಲ್ಲಿಸುವುದಷ್ಟೇ ಅಲ್ಲದೆ, ನಮಗೆ ಬಡ್ಡಿ ರಹಿತ ಸಾಲ ಕೊಟ್ಟು ಕಿಂಗ್‌ಫಿಷರ್ ವಿಮಾನವನ್ನು ಮತ್ತೆ ಹಾರಿಸುವುದಕ್ಕೆ ಡಿಎಲ್‌ಎಫ್ ಸಹಕರಿಸಬಹುದು ಎಂಬ ಆಸೆಯಿದೆ’ ಎಂದು ನಗುವ ಮಲ್ಯ, ಕೊನೆಗೆ ‘ಇನ್ಮುಂದೆ  ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬಾರದು’ ಎಂದು ಅಬ್ಬರಿಸುತ್ತಾರೆ.

ಈ ಪ್ರಸ್ತಾಪದ ಬಗ್ಗೆ ಮಾತನಾಡಲು ವಾದ್ರಾ ಲಭ್ಯರಾಗಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಮುಗಿಬಿದ್ದು ಈ ಕುರಿತು ಹೇಳಿಕೆ ನೀಡುತ್ತಿದ್ದಾರೆ.

‘ಕೇವಲ ಕಿಂಗ್‌ಫಿಷರ್ ಮತ್ತು ಆರ್‌ಸಿಬಿ ಅಷ್ಟೇ ಏಕೆ, ವಾದ್ರಾ ಸಾಹೇಬರು ಇಂಡಿಯನ್ ಏರ್‌ಲೈನ್ಸ್ ಅನ್ನೂ ಖರೀದಿಸಬೇಕು. ಅದರ ಪರಿಸ್ಥಿತಿಯೂ ಭಿನ್ನವಾಗಿಲ್ಲವಲ್ಲ?’ ಎಂದು ಫೇಕಿಂಗ್ ನ್ಯೂಸ್‌ನೊಂದಿಗೆ ಮಾತಿಗಿಳಿದ  ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳುತ್ತಾರೆ.

ಆದರೆ ಬಿಜೆಪಿ ಮಾತ್ರ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಈ ಕುರಿತು ಮಾತನಾಡುವವರೆಗೂ ನಾವೇನೂ ಹೇಳುವುದಿಲ್ಲ ಎಂದು ಸುಮ್ಮನಾಗಿದೆ. ಇದನ್ನು ಕೇಳಿದ್ದೇ ತಡ, ಕೇಜ್ರಿವಾಲ್, ವಾದ್ರಾ ಮತ್ತು ಮಲ್ಯಾರ ಮೇಲೆ ಮುಗಿಬಿದ್ದಿದ್ದಾರೆ.

‘ನಾವು ಹೇಳಿದ್ದು ಸತ್ಯ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅಲ್ಲಾ ಈ ವಾದ್ರಾಗೆ ಅಂಥದ್ದೇನು ಅರ್ಹತೆ ಇದೆ ಸ್ವಾಮಿ? ಅವರ ತಟ್ಟೆಯಲ್ಲಿ ಅದ್ಹೇಗೆ ದೊಡ್ಡ ಬಿಸಿನೆಸ್ ಡೀಲ್‌ಗಳು ಬಂದು ಬೀಳುತ್ತವೆ? ಇದರಲ್ಲಿ ಏನೋ ಮಸಲತ್ತಿದೆ’ ಎನ್ನುತ್ತಾರೆ ಕೆರಳಿದ ಕೇಜ್ರಿವಾಲ್.

ಆದರೆ ಅರವಿಂದ್ ಕೇಜ್ರಿವಾಲ್ ಅವರ ಆರೋಪ ಮತ್ತು ಊಹೆಗಳೆಲ್ಲವೂ ಬಾಲಿಶವಾಗಿವೆ ಎಂಬುದು ಪರಿಣತರ ಅಭಿಪ್ರಾಯ. ‘ನಿಸ್ಸಂಶಯವಾಗಿಯೂ ವಾದ್ರಾಗೆ ಬಹಳ ಅರ್ಹತೆ ಇದೆ. ಏಕೆಂದರೆ ಅವರು ನೆಹರು-ಗಾಂಧಿ ಕುಟುಂಬದವರಿಗೆ ಸೇರಿದವರಲ್ಲವೇ?’ ಎಂದು ವಾದಿಸುವ ಪರಿಣತರೊಬ್ಬರು ‘ಆ ಕುಟುಂಬದ ಸದಸ್ಯರು ಎನ್ನುವುದಕ್ಕಿಂತ ಹೆಚ್ಚೇನು ಅರ್ಹತೆ ಬೇಕು? ಇದೇ ಅರ್ಹತೆಯ ಆಧಾರದ ಮೇಲೆಯೇ ಪ್ರಧಾನಿ ಅಥವಾ ಸೂಪರ್ ಪ್ರಧಾನಿಯೂ ಆಗಬಹುದಾದರೆ, ಅದೇ ಕುಟುಂಬದ ಅಳಿಯನೊಬ್ಬನಿಗೆ ಕೇವಲ 65 ಕೋಟಿ ಬಡ್ಡಿ ರಹಿತ ಅಥವಾ ಉಚಿತ ಸಾಲ ಪಡೆಯುವ ಅರ್ಹತೆಯಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ!

*****

Jokes apart…ಇದು ನಗುವಂಥ ವಿಚಾರವೂ ಅಲ್ಲ ಬಿಡಿ. ಆದರೆ ಕೇಂದ್ರವನ್ನಾಳುತ್ತಿರುವ ಕಾಂಗ್ರೆಸ್ಸಿಗರು ವರ್ತಿಸುತ್ತಿರುವ ರೀತಿಯಾದರೂ ಹೇಗಿದೆ? ಬರೀ ಐದಾರು ವರ್ಷಗಳಲ್ಲಿ ಒಬ್ಬ ವ್ಯಕ್ತಿ ಕೇವಲ ತನ್ನ ಸಂಬಂಧದ ಬಲದಿಂದಾಗಿ ಸಾವಿರ ಕೋಟಿಗೂ ಅಧಿಕ ಅಕ್ರಮ ಸಂಪತ್ತು ಗಳಿಸಿದ್ದಾನೆ ಎಂದರೆ ಅದು ನಗುವ ಅಥವಾ ಲಘುವಾಗಿ ತೆಗೆದುಕೊಳ್ಳುವ ವಿಚಾರವೇ ಹೇಳಿ? ಇಷ್ಟಾಗಿಯೂ ರಾಬರ್ಟ್ ವಾದ್ರಾ ಹಗರಣವನ್ನು ಮೊನ್ನೆ ಸಂಸತ್ತಿನಲ್ಲಿ ಯಶವಂತ್ ಸಿನ್ಹಾ ಪ್ರಸ್ತಾಪಿಸಲು, ಅದೂ ಸ್ಪೀಕರ್ ಅನುಮತಿ ಪಡೆದು ಮಾತನಾಡಲು ಮುಂದಾದಾಗ ಸಂಸದೀಯ ಸಚಿವ ಕಮಲ್‌ನಾಥರೇ ಅಡ್ಡಿಪಡಿಸಲು ಮುಂದಾಗುತ್ತಾರೆಂದರೆ ಇವರ ನಿಜವಾದ ಉದ್ದೇಶವಾದರೂ ಏನು? ‘ರಾಬರ್ಟ್ ವಾದ್ರಾ ಒಬ್ಬ ಖಾಸಗಿ ವ್ಯಕ್ತಿ. ಖಾಸಗಿ ವ್ಯಕ್ತಿಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ’ ಎಂದು ಮತ್ತೊಬ್ಬ ಸಚಿವ ಮನೀಶ್ ತಿವಾರಿ ಸಮಜಾಯಿಷಿ ನೀಡುತ್ತಿದ್ದರಲ್ಲಾ ಇವರು ಯಾರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ? ಒಂದು ವೇಳೆ, ಆತ ಖಾಸಗಿ ವ್ಯಕ್ತಿ ಎನ್ನುವುದೇ ಆಗಿದ್ದರೆ 2012, ಅಕ್ಟೋಬರ್‌ನಲ್ಲಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿ ಕರೆದು ರಾಬರ್ಟ್ ವಾದ್ರಾ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿದಾಗ ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್‌ಗೇನಿತ್ತು ಅಂತಹ ದರ್ದು? ಮಂತ್ರಿಗಳಾದ ನಂತರ ಟಿವಿ ಚರ್ಚೆಗಳಿಂದ ದೂರವೇ ಉಳಿದಿದ್ದ ಸಚಿವ ಮನೀಶ್ ತಿವಾರಿ ಹಾಗೂ ಜಯಂತಿ ನಟರಾಜನ್ ಅಂದು ಯಾಕಾಗಿ ಏಕಾಏಕಿ ಟಿವಿ ಡಿಬೇಟ್‌ಗೆ ಬಂದು ವಾದ್ರಾರ ಸಮರ್ಥನೆಗೆ ನಿಂತಿದ್ದರು? ಭಾರತ ಸರ್ಕಾರದಲ್ಲಿ ಸಚಿವರಾಗಿರುವವರಿಗೂ ಯಾರದ್ದೋ ಅಳಿಯನಿಗೂ ಏನು ಸಂಬಂಧ? ರಾಬರ್ಟ್ ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯಾಗಿದ್ದರೆ ಆತನಿಗೆ ದೇಶದ ಖಜಾನೆಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎನ್‌ಎಸ್‌ಜಿ ಪ್ರೊಟೆಕ್ಷನ್ ಕೊಟ್ಟಿರುವುದಾದರೂ ಏಕೆ? ಹಾಗೂ ಈಗಲೂ ಕೊಡುತ್ತಿರುವುದೇಕೆ? ಇನ್ನು 2012ರಲ್ಲಿ ಲೋಕಸಭೆಯಲ್ಲಿ ಅಣ್ಣಾ ಹಝಾರೆಯವರ ವಿಷಯ ಪ್ರಸ್ತಾಪಿಸುವಾಗ ಹಾಗೂ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬೆದರಿಕೆ ಹಾಕುವಾಗ ಅಣ್ಣಾ ಹಝಾರೆಯೂ ಖಾಸಗಿ ವ್ಯಕ್ತಿ ಎಂದು ತಿಳಿದಿರಲಿಲ್ಲವೆ? ಅದಿರಲಿ, ಇಂಥದ್ದೊಂದು ಗಂಭೀರ ಆರೋಪ, ಸಾಕ್ಷ್ಯಗಳ ಹೊರತಾಗಿಯೂ ವಾದ್ರಾ ಏಕೆ ಬಾಯ್ಬಿಡುತ್ತಿಲ್ಲ? ಆತನೇ ಮುಂದೆ ಬಂದು ಏಕೆ ತನ್ನ ಬಗ್ಗೆ ಸ್ಪಷ್ಟೀಕರಣ ಕೊಡಬಾರದು?  ಒಬ್ಬ ಸಣ್ಣ ಚರ್ಮದ ವ್ಯಾಪಾರಿಯಾಗಿದ್ದ ಅವರು ಕೋಟ್ಯಧಿಪತಿಯಾದ ಬಗೆಯನ್ನು ವಿವರಿಸಬಹುದಲ್ಲವೇ? ಅದನ್ನು ಬಿಟ್ಟು ಕಳ್ಳರಂತೆ ಭೂಗತವಾಗಿರುವುದೇಕೆ? ಇದೆಲ್ಲ ಏನನ್ನು ಸೂಚಿಸುತ್ತದೆ ಕಾಂಗ್ರೆಸ್ಸಿಗರೇ?

ಕೋಲ್‌ಗೇಟ್
ರೈಲ್‌ಗೇಟ್
ಕಾಪ್ಟರ್‌ಗೇಟ್
ಸ್ಯಾಂಡ್‌ಗೇಟ್
ಲ್ಯಾಂಡ್‌ಗೇಟ್

ಇನ್ನೂ ಎಷ್ಟು ಅಂತ ದೇಶ ಲೂಟಿ ಮಾಡುತ್ತೀರಿ?

30 Responses to “ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯೇ ಆಗಿದ್ದರೆ ಕಾಂಗ್ರೆಸ್ ವಕ್ತಾರರಿಗೇಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಸಂಕಟ?”

 1. ಹರೀಶ says:

  ಅವರೊಬ್ಬ ಸೂಪರ್ ಮ್ಯಾನ್. ಅವನ ಸುಪರ್ದಿಗೆ ಇನ್ನು ಕೆಲವು ಸರಕಾರಿ ಸ್ವಾಮ್ಯದ ಕಂಪನಿಗಳನ್ನು ನೀಡಬಹುದು!!!!!

 2. Ravikumara Kadumane says:

  Nonsense congress..M.Ployees..

 3. Ravikumara Kadumane says:

  Nonsense congress M.Ployees..

 4. VIJAY KUMAR B says:

  HI PRATAP SIR I AGREE WITH UR EACH WORD WHAT U WRITTEN IN UR ARTICLE.
  SONIA,RAHUL AND VADRA ALL ARE LOOTING OUR COUNTRY.I DONT KNOW WHO WILL RESOLVE THIS PROBLEM.STILL V R IN BRITISH RULE IN THE FORM OF SONIA.
  OUR SHAMELESS CONGRESS MP’S SUPPORTING HER SO SHE DOMINATES EVERYTHING IN OUR COUNTRY.

 5. magendran says:

  great write-up. circastic to the core.

 6. magendran says:

  great write-up. circastic to the core. pls introduce forward option ?

 7. Vinayaka BC says:

  Its better to open VADRA’s University of Business

 8. Hey good one pratap… I like all ur articles .. but couldnt get time .. the last one about sonia n mms silence was very gud.. keep it up n all the best. . U will soon become national editor. . Ofcourse on social media u r already!!!

 9. Sunil Shivarudraswamy says:

  Really good article, Plz elect Mr. Modi.

 10. Siddu says:

  Nicely written sir,…:)…Sir please write about Mohammed Ali Jinnah and Nehru relationship. Even though initially Jinnah was for Hindu-Muslim Alliance, What made him to go for establishment of Pakistan. It will be resourceful.

 11. indian says:

  Like how some ppl indirectly got g category sites in Mysore Vijaynagar:)
  Similarly Robert Vadra would have done some tricks..may RB can answer properly

 12. Sudarshan Kalkeri says:

  Dear Sir, I have downloaded book on Narendra Modi form your website.
  But it is not having pages with even numbers. Please make the correction of the copy.

 13. mahendra says:

  Nijavagalu gantu kallare alli iddare. Avaru bayi bidalu soniyas madom biduttila.

 14. ashok says:

  this shows the hypocrisy of the congress. unless this family is out of indian politics, there is no way out for the indian public. these congress people will go to any extent to lick the asses of the gandhi family..

 15. marulu Siddesha says:

  Congress is here to loot the nation.. :)!!

 16. Mugali Bhimappa says:

  ಸಮಾಜ ಒಂದು ಅಭಯಾರಣ್ಯ.ಕುರಿಗಳು ಇದ್ದಲ್ಲಿ ತೋಳಗಳು ಇದ್ದೇ ಇರ್ತವೆ.ಓಟ ಹಾಕುವ ಕುರಿಗಳಿಗೆ ಬೈಯುವವರು ಯಾರು.ಬಹುಶಃ ಮತ್ತೊಂದು ಸ್ವಾತಂತ್ರ ಹೋರಾಟ ಹತ್ತಿರ ಇದೆ ಅಂತ ಅನಿಸುತ್ತೆ.

  ಬುದ್ದು.

 17. Mugali Bhimappa says:

  ಸಮಾಜ ಒಂದು ಅಭಯಾರಣ್ಯ.ಕುರಿಗಳು ಇದ್ದಲ್ಲಿ ತೋಳಗಳು ಇದ್ದೇ ಇರ್ತವೆ.ಓಟ ಹಾಕುವ ಕುರಿಗಳಿಗೆ ಬೈಯುವವರು ಯಾರು.ಬಹುಶಃ ಮತ್ತೊಂದು ಸ್ವಾತಂತ್ರ ಹೋರಾಟ ಹತ್ತಿರ ಇದೆ ಅಂತ ಅನಿಸುತ್ತೆ.

  ಸಾಮಾನ್ಯ ಸರಕಾರಿ ನೌಕರನ ಲಂಚಾವತಾರ ತನ್ನ ಮನೆಯವರನ್ನು ತಿಂದ ಬಳಿಕ ಬಹುಶಃ ಸುಧಾರಿಸಬಹುದು.
  ದೇಶದ ಬದ್ರತೆ ಅರಿಯದ ಮಂಗಗಳ ಕೈಯಲಿ ಕೈ ಓಟು ಹಾಕಿದವರನು ಸುಧಾರಿಸುವದು ಯ್ಯಾವಾಗ.
  ರಾಜಕಾರಣಿ ಬಯಸುವದು ಬಡತನ ಮತ್ತು ಓದದವನ ಓಟು ಕಾರಣ ಆತನ ಊಟದ ಬಂಡವಾಳ ಅದು.

  ಜ್ಞಾನನ ಮಾತು ನೂರಕ್ಕೆ ನೂರು ಸತ್ಯ ಎನೆಂದರೆ ಸಮಾಜ ಸತ್ತ ಹೊಂಡ ಅದರಲಿ ಮುಳುಗಿದವರು ಬದುಕಿಲ್ಲ ಹೀಗಾಗಿ ನೀನು ನಿನಗಾಗಿ ಈಜು ಆಗ ಸಮಾಜ ನಿನಗೆ ಸುಂದರ ನದಿಯಾಗುವದು.

  ಬುದ್ದು.

 18. Nandeesh soraturu says:

  ಸೂಪರ್ ಸರ್…….!

 19. Prakash says:

  innu yenen madtaro e UPA brasta janagalu..

 20. doddesh says:

  This is actual position of India…., we need eminent leader…. like Modi………..

 21. anna says:

  Nice article sir…bt im nt gettng y still people supporting this congress party evn though it made so much f corruptions ,,,,,,,??? im waiting fr d change……..

 22. ram says:

  good one sir……….

 23. sanjay says:

  In the 1960s, poor governance was identified as a problem in India by a Swedish economist, Gunner Myrdahl. He called India a ‘soft state’, his euphemism for a confused and ineffective governance.

  As now, then too, India was ruled by a congress party led government. The difference between then and now is merely that the scams by members of this party and government were then on a smaller scale but now, especially, between 2003 and 2008, on a much larger scale.

  India now, as in the 1960s, remains wedded to ideology and ‘populism in order to win elections’ rather than giving due weight to economic rationality or, at least, economic purpose.

  China dropped ideology when it recognised economic purpose. India has not. Her politicians remain strongly wedded to winning elections by ‘hook or by crook’ – the hook of caste-based reservation or by the crook of ‘secularism’, which in India means, ‘Hullo Muslims of India, please vote for us, without our ‘protection’ you will not survive’.

  The present mood in the congress party is to win elections on the back of grand, expensive schemes, such as ‘Rural Employment Guarantee Scheme’ – unveiled in 2009 and credited for congress’ success in the elections that year – but a failure, according to a few impartial studies because of huge corruption and waste of most of the allocated funds.

  In the same vein, congress’ hopes now ride on the ‘Food Security Law’.

  Congress is not interested in a good economy for India – either because it is clueless as to how to usher one in or because it is scared that it will not be able to win elections if it deviates form its old habits, which, after all, have kept the party in power for over 58 years of India’s 67 years of independence. For some, this is more a reflection of the gullible or ignorant electorate.

  Congress party and its governments have not been able to shed their ideology and dead habits. No signs of any change at all in them.

  Should they win in 2014, India can expect very serious deterioration in the condition of its weaker sections, leading to a break down of civil order.

 24. Yogish Shetty says:

  @Pratap I am your big fan.
  “Deshada yavado mooleyalli nadeyuva brastachara da bagge dwani yattuva niv.. nammde S C D C C Bank Na Rajendra prasad maduva Lanchada vyvahara da bagge yake barith ella. employee galu Kotta Lancha(Money) endale employee galige salary kodtha eddane e Lofar. Please write one article about “Lancha Kora Rajendra ” Anth.

 25. Pratap Simha says:

  Pls contact out local reporter Jintendra Kundeshwar

 26. Yogish Shetty says:

  Okay i will Contact him. But my question is why media people are not exposing his illegal activities, from last 2-3 years nearly 300 employee are joined to SCDCC but single employee not get the job by his talent just by bribe. “Every one knows but no one open their mouth” . Once again i am kindly requesting you if possible please write one article about him.

 27. nagaraj says:

  Dear Prathap,

  I am a great fan of your articles from years. today i got an oppertinity to write my feedback. You are the only person who writes perfect articles against UPA with all supporting records with nos. I stronlgy wish Mr Modi becomes our next PM and he through all UPA people into jail for all their scams. And Modi has to retaine all the scam properties to the nation. Request you to tell this to modi when you meet him. UPA is the worst govt this nation ever seen.

 28. ravi bannadi says:

  O Prathap Ji, you are grate, i like your article very much. i am reading your articles since several years. Shameless govt. is ruling our country. we are with you. keep writing.

 29. sachin says:

  my suggestion to congi leaders..congress can stand without gandi family ,,,think once ..u can do it to save our nation..

 30. arun says:

  deshavannu looti maduvude congress na mukhya karya . innu 5 years adhikara kottare mundina dinagalalli namma bharata vannu huduka bekada stiti barabahudu