Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!

ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!

ಅದೊಂದು ಮಧ್ಯರಾತ್ರಿ!

ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ. ತಲೆಯೊಳಗೆ ನಮ್ಮ ವಿಚಾರಣೆಯ ಚಿತ್ರಣಗಳು ಗಿರಕಿ ಹೊಡೆಯುತ್ತಿದ್ದವು. ನನ್ನನ್ನು ಕೊಠಡಿಯೊಂದರೊಳಗೆ ಕೂಡಿಹಾಕಲಾಗಿತ್ತು ಎಲ್ಲರಿಂದ ದೂರದಲ್ಲಿ. ಅದೇ ವೇಳೆಗೆ ಯಾರೋ ಹಾಲ್ ಕಡೆ ಹೆಜ್ಜೆ ಹಾಕುತ್ತಿರುವ ಸಪ್ಪಳ ಕೇಳಿಸಿತು. ಅಷ್ಟರಲ್ಲಿ ಕದ ತಟ್ಟಿದ ಶಬ್ದವಾಯಿತು. ಕಬ್ಬಿಣದ ಸರಳುಗಳ ಮಧ್ಯೆ ಕರ್ನಲ್ ಆಕ್ಯಾಂಪ್ ಅವರ ಮುಖ ಕಂಡಿತು. ‘ಮಂಡೇಲಾ, ಎಚ್ಚರವಿರುವೆಯಾ?’ ಎಂದರು ಪಿಸುಧ್ವನಿಯಲ್ಲಿ.

ಹ್ಞಾಂ! ಅಂದೆ.

ನೀನು ನಿಜಕ್ಕೂ ಅದೃಷ್ಟವಂತ! ನಿನ್ನನ್ನು ಎಂಥಾ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆಂದರೆ ಅಲ್ಲಿ ನಿನಗೆ ಎಲ್ಲ ಸ್ವಾತಂತ್ರ್ಯಗಳೂ ಇರುತ್ತವೆ. ನೀನು ಮನಬಂದಂತೆ ವಿಹರಿಸಬಹುದು. ಸಮುದ್ರ, ಆಕಾಶಗಳನ್ನು ಕಾಣಬಹುದು, ಬರೀ ಸುಣ್ಣ ಬಳಿದ ಗೋಡೆಗಳನ್ನಷ್ಟೇ ಅಲ್ಲ! ಹಾಗೆಂದರು ಆಕ್ಯಾಂಪ್. ಅವರ ಧ್ವನಿಯಲ್ಲಿ ಕೊಂಕು ಇರಲಿಲ್ಲ. ಆದರೆ ಆತ ಹೇಳುತ್ತಿರುವ ಜಾಗದಲ್ಲಿ ನನಗೆ ಬೇಕಾದ ಸ್ವಾತಂತ್ರ್ಯ ಖಂಡಿತ ಇರುವುದಿಲ್ಲ ಎಂದು ನನಗೆ ಗೊತ್ತಿತ್ತು. ಅದರ ಬೆನ್ನಲ್ಲೇ, “ನೀನು ಎಲ್ಲಿಯವರೆಗೂ ತೊಂದರೆ ಕೊಡುವುದಿಲ್ಲವೋ ಅಲ್ಲಿಯವರೆಗೂ ನಿನಗೆ ಎಲ್ಲವೂ ಸಿಗುತ್ತವೆಎಂಬ ಎಚ್ಚರಿಕೆಯ ಮಾತುಗಳೂ ಹೊರಬಂದವು. ಆನಂತರ ಆಕ್ಯಾಂಪ್ ಉಳಿದವರನ್ನೂ ಎಬ್ಬಿಸಿದರು, ಕೂಡಲೇ ಗಂಟುಮೂಟೆ ಕಟ್ಟಿಕೊಳ್ಳಿ ಎಂದರು. ಹದಿನೈದು ನಿಮಿಷಗಳಲ್ಲಿ ನಾವೆಲ್ಲರೂ ಉಕ್ಕಿನ ಸರಳುಗಳ ಪ್ರಿಟೋರಿಯಾ ಜೈಲಿನಿಂದ ಹೊರಹೋಗುವ ಹಾದಿಯಲ್ಲಿದ್ದೆವು. ಕಬ್ಬಿಣದ ಬಾಗಿಲುಗಳ ರಿಂಗಣ ಕಿವಿಗೆ ಅಪ್ಪಳಿಸುತ್ತಿತ್ತು. ಬಂದೀಖಾನೆಯಿಂದ ಹೊರಬಂದ ಕೂಡಲೇ ವಾಲ್ಟರ್, ರೇಮಂಡ್, ಗೋವಾನ್, ಕ್ಯಾಥಿ, ಆ್ಯಂಡ್ರೆ, ಎಲಿಯಾಸ್ ಹಾಗೂ ನಾನು ಹೀಗೆ ಏಳೂ ಜನರ ಕೈಗಳಿಗೆ ಬೇಡಿ ತೊಡಿಸಿ, ಧೂಳು ತುಂಬಿದ್ದ ಪೊಲೀಸ್ ವ್ಯಾನಿಗೆ ತುಂಬಿದರು. ಅಷ್ಟರೊಳಗೆ ಮಧ್ಯರಾತ್ರಿ ಕಳೆದಿತ್ತು. ಆದರೆ ನಮಗಾರಿಗೂ ನಿದ್ರೆ ಬಂದಿರಲಿಲ್ಲ, ಬರುವ ಸೂಚನೆಯೂ ಇರಲಿಲ್ಲ. ವ್ಯಾನಿನ ಹಿಂಬದಿಯಲ್ಲಿ ಕುಳಿತು ಹಾಡು, ಘೋಷಣೆಯಲ್ಲಿ ತಲ್ಲೀನರಾಗಿ ವಿಚಾರಣೆಯ ಕೊನೆಯ ಹಂತವನ್ನು ಇದಿರು ನೋಡುತ್ತಿದ್ದೆವು. ನಮ್ಮ ಹಿಂದಿನಿಂದ ಲೆಫ್ಟಿನೆಂಟ್ ವ್ಯಾನ್ ವಿಕ್ ಆಗಮಿಸಿದರು. “ಹುಡುಗರೇನೀವು ಇನ್ನು ಹೆಚ್ಚು ದಿನ ಜೈಲಿನಲ್ಲಿರುವುದಿಲ್ಲ. ನಿಮ್ಮನ್ನು ಬಿಡುಗಡೆ ಮಾಡಬೇಕೆಂಬ ಧ್ವನಿ ಬಲವಾಗುತ್ತಿದೆ. ಇನ್ನು ಒಂದೆರಡು ವರ್ಷಗಳಲ್ಲಿ ನೀವು ಬಿಡುಗಡೆಯಾಗುತ್ತೀರಿ. ಕೈದಿಗಳಾಗಿ ಜೈಲು ಸೇರಿದ ನೀವು ರಾಷ್ಟ್ರೀಯ ಹೀರೊಗಳಾಗಿ ಮರಳುತ್ತೀರಿ. ಜನಸ್ತೋಮ ನಿಮ್ಮನ್ನು ಹುಚ್ಚೆದ್ದು ಸ್ವಾಗತಿಸುತ್ತದೆ. ಎಲ್ಲರೂ ನಿಮ್ಮ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಯುವತಿಯರು ನಿಮಗಾಗಿ ತುಡಿಯುತ್ತಾರೆ. ನೀವು ನಿಜಕ್ಕೂ ಸಾಧಿಸಿ ಬಿಟ್ಟಿರಿಎಂದರು. ವ್ಯಾನ್ ವಿಕ್. ಆದರೆ ನಾವು ಮಾತ್ರ ಯಾವ ಪ್ರತಿಕ್ರಿಯೇಯನ್ನೂ ಕೊಡದೆ ಕೇವಲ ಆಲಿಸಿದೆವು, ನಿಜ ಹೇಳಬೇಕೆಂದರೆ ಆತನ ಮಾತುಗಳು ನನ್ನ ಮನಸ್ಸಿಗೆ ಉತ್ಸಾಹ ಕೊಟ್ಟಿದ್ದಂತೂ ಹೌದು.

ಆದರೆ

ದುರದೃಷ್ಟವಶಾತ್, ವ್ಯಾನ್ ವಿಕ್ ಅವರ ಮಾತುಗಳು ನಿಜವಾಗಲು ಮುಂದಿನ ಮೂರು ದಶಕಗಳೇ ಬೇಕಾದವು!!

ಪ್ರಪಂಚದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಅಂದರೆ 27 ವರ್ಷಗಳ ಕಾಲ ರಾಜಕೀಯ ಕೈದಿಯಾಗಿ ಕಂಬಿಗಳ ಹಿಂದೆ ಬದುಕು ಕಳೆದ ನೆಲ್ಸನ್ ಮಂಡೇಲಾ ತಮ್ಮ ಆತ್ಮಚರಿತ್ರೆ ‘A long walk to freedom”ನಲ್ಲಿ ಹೃದಯವಿದ್ರಾವಕ ಘಟನೆಯನ್ನು ಹೀಗೆ ವಿವರಿಸಿದ್ದಾರೆ.

ನೆಲ್ಸನ್ ರೊಲಿಹ್ಲಾಹ್ಲಾ ಮಂಡೇಲಾ ಮೂಲತಃ ಒಬ್ಬ ಹೆವಿವೈಟ್ ಬಾಕ್ಸರ್. ಆದರೆ ತುಳಿದಿದ್ದು ಗಾಂಧೀ ಹಾದಿ. 1918, ಜುಲೈ 18ರಂದು ದಕ್ಷಿಣ ಆಫ್ರಿಕಾದ ಟ್ರಾನ್‌ಸ್ಕಿನಲ್ಲಿ ಜನಿಸಿದ ಅವರು 1990ರಲ್ಲಿಭಾರತ ರತ್ನದಿಂದಲೂ ಸಮ್ಮಾನಿತರಾಗಿದ್ದಾರೆ. ಅವರೂ ನಮ್ಮಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದವರು. ಆದರೆ ಸಂದರ್ಭಗಳು ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಿದವು. ರೊಲಿಹ್ಲಾಹ್ಲಾ ಮಂಡೇಲಾ ಎಂಬುದು ಅವರ ಮೂಲ ಹೆಸರು. ರೊಲಿಹ್ಲಾಹ್ಲಾ ಎಂದರೆ ಸಮಸ್ಯೆ ಸೃಷ್ಟಿಸುವಾತ! ಅವರ ಶಾಲಾ ಶಿಕ್ಷಕರೊಬ್ಬರಿಂದ ನೆಲ್ಸನ್ ಎಂಬ ಹೆಸರು ಪಡೆದರು. ಮಂಡೇಲಾ ತಂದೆ ಥೆಂಬುಲ್ಯಾಂಡ್‌ನ ನ್ಯಾಯಾಲಯದ ಮುಖ್ಯ ಕೌನ್ಸಿಲರ್ ಆಗಿದ್ದರು. ಆದರೆ ಅವರ ಅಕಾಲಿಕ ಮರಣದಿಂದಾಗಿ ಮಂಡೇಲಾ ತಮ್ಮ ತಂದೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂತು. ಅಲ್ಲಿ ವಿಚಾರಣೆಗೆ ಬರುತ್ತಿದ್ದ ಪ್ರಕರಣಗಳನ್ನು ಕಂಡ ಮಂಡೇಲಾ ಮನದಲ್ಲಿ ವಕೀಲನಾಗಬೇಕೆಂಬ ಆಸೆ ಚಿಗುರೊಡೆಯಿತು. ಅಲ್ಲದೆಪಿತೃಭೂಮಿ ರಕ್ಷಣೆಗಾಗಿ ಅವರ ಪೂರ್ವಜರು ಮಾಡಿದ ತ್ಯಾಗ ಬಲಿದಾನಗಳ ಬಗೆಗಿನ ಕಥೆಗಳನ್ನು ಕೇಳುತ್ತಿದ್ದ ಮಂಡೇಲಾರಲ್ಲಿ ತಮ್ಮ ಜನರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂಬ ಆಶಯವೂ ಉಂಟಾಗಿತ್ತು. ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಮಂಡೇಲಾ ಕಲಾ ಪದವಿ ಪಡೆಯಲುಪೋರ್ಟ್ ಹರೆನಲ್ಲಿದ್ದ ವಿ.ವಿ. ಕಾಲೇಜು ಸೇರಿದರು. ವಿದ್ಯಾರ್ಥಿ ಸಂಘದ ಸದಸ್ಯರಾಗಿಯೂ ಆಯ್ಕೆಯಾದರು. ಆದರೆ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡ ಸಲುವಾಗಿ ಮಂಡೇಲಾ ಕಾಲೇಜಿನಿಂದ ಅಮಾನತ್ತುಗೊಳ್ಳಬೇಕಾಗಿ ಬಂತು. ಜೊಹಾನ್ನೆಸ್‌ಬರ್ಗ್ ಸೇರಿ, ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವಿ ಪೂರೈಸಿದ ಮಂಡೇಲಾ ವಕೀಲರಾಗುವ ಬಯಕೆಯಿಂದ ಕಾನೂನು ವ್ಯಾಸಂಗಕ್ಕೆ ಮುಂದಾದರು. ಜೊಹಾನ್ನೆಸ್‌ಬರ್ಗ್‌ನಲ್ಲಿದ್ದ ಮಂಡೇಲಾ ಸಹಜವಾಗಿಯೇ ವರ್ಣಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನತ್ತ ಆಕರ್ಷಿತರಾದರು. ಕೊನೆಗೆ 1942ರಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯೂ ಆದರು. ಆಗ ದ್ವಿತೀಯ ಮಹಾಯುದ್ಧ ತುತ್ತ ತುದಿಗೇರಿತ್ತು. ಆ್ಯಂಟನ್ ಲೆಂಬೆಡೆ ಅವರ ನೇತೃತ್ವದಲ್ಲಿ ಯುವಕರ ಸಣ್ಣ ಗುಂಪೊಂದು ಸೇರಿತ್ತು. ಅವರಲ್ಲಿ ವಿಲಿಯಂ ನೋಮೋ, ವಾಲ್ಟರ್ ಸಿಸುಲು, ಅಲಿವರ್ ಆರ್. ತಂಬೂ, ಆ್ಯಸ್ಟಿ ಪಿ. ಮಾ ಮತ್ತು ನೆಲ್ಸನ್ ಮಂಡೇಲಾ ಸೇರಿದ್ದರು. ಆಫ್ರಿಕನ್ ನ್ಯಾಷನಲ್ ಪಕ್ಷಕ್ಕೆ ಜನಾಂದೋಲನ ರೂಪ ನೀಡುವ ಉದ್ದೇಶ ಅವರದ್ದಾಗಿತ್ತು. ಗ್ರಾಮ, ಪಟ್ಟಣ ಮತ್ತು ಕೃಷಿಭೂಮಿಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಅನಕ್ಷರಸ್ಥರನ್ನು ಒಗ್ಗೂಡಿಸುವ ಗುರಿ ಹೊಂದಿದ್ದರು. ಹೀಗೆ ಸ್ವಾವಲಂಬನೆ ಮತ್ತು ಸಮಾನತೆಯ ತತ್ವದ ಆಧಾರದ ಮೇಲೆ ಕಟ್ಟಾ ರಾಷ್ಟ್ರೀಯವಾದವನ್ನು ಮಂಡಿಸಲಾರಂಭಿಸಿದರು. ಅಂತಿಮವಾಗಿ 1944ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಯೂತ್ ಲೀಗ್ ಸ್ಥಾಪಿಸಿದರು.

ದಕ್ಷಿಣ ಆಫ್ರಿಕಾ ನೂರಾರು ವರ್ಷಗಳಿಂದಲೂ ಸಾಮ್ರಾಜ್ಯ ಶಾಹಿಗಳ ಹಿಡಿತದಲ್ಲಿತ್ತು. ದೇಶದ ಸಂಪತ್ತು ಅಲ್ಪಸಂಖ್ಯಾತ ಶ್ವೇತವರ್ಣೀಯರ ನಿಯಂತ್ರಣದಲ್ಲಿತ್ತು. ಧ್ವನಿಯೆತ್ತಿದರೆ ಸೈನಿಕರ ಬಂದೂಕುಗಳು ಬಾಯ್ದೆರೆಯುತ್ತಿದ್ದವು. ಕ್ರಾಂತಿಯ ಕಹಳೆಯೂದಿದರೆ ಯಶಸ್ಸು ದೊರೆಯುವ ಯಾವುದೇ ಸೂಚನೆಗಳಿರಲಿಲ್ಲ. ಆದರೆ ಕ್ರಾಂತಿಯ ಹೊರತಾಗಿ ಬೇರೆ ಮಾರ್ಗವೂ ಇರಲಿಲ್ಲ. ಮಂಡೇಲಾರಿಗೆ ಕಟು ವಾಸ್ತವ ಎಂದೋ ಅರಿವಿಗೆ ಬಂದಿತ್ತು. ಆದರೂ ಅವರು ಅಹಿಂಸಾ ಮಾರ್ಗವನ್ನು ತುಳಿದಿದ್ದರು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಕ್ಕಾಗಿ ಅವರ ವಕೀಲಿ ವೃತ್ತಿಗೂ ಕುತ್ತು ಬಂತು. 1960ರಲ್ಲಿ ಸಂಭವಿಸಿದ ಶಾರ್ಪ್‌ವಿಲ್ಲೆ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆಂಬ ಆರೋಪವೂ ಕೇಳಿಬಂತು. ದೇಶದ್ರೋಹದ ಆರೋಪದ ಮೇಲೆ ಮಂಡೇಲಾ ವಿಚಾರಣೆಗೊಳಗಾದರು. ಇತ್ತ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಿಷೇಧಕ್ಕೊಳಗಾಯಿತು. 1961,

 

ಆಗ….

ಅಂದರೆ ಹೆಚ್ಚೂಕಡಿಮೆ ಮೂರು ದಶಕಗಳ ನಂತರ ವ್ಯಾನ್ ವಿಕ್ ಮಾತುಗಳು ನಿಜವಾಗುವ, ಮಂಡೇಲಾ ಬಿಡುಗಡೆಯಾಗುವ ಸಂದರ್ಭ ಸೃಷ್ಟಿಯಾಯಿತು.

 

ಹಾಗೆಂದು 1990, ಫೆಬ್ರವರಿ 11ರಂದು ಜೈಲಿನಿಂದ ಹೊರಬಂದ ಮಂಡೇಲಾ ಗದ್ಗದಿತರಾಗಿ ಹೇಳಿದರು!

ಜೈಲಿನಿಂದ ಹೊರಬಂದ ಮಂಡೇಲಾ ಮತ್ತೆ ಗಾಂಧೀ ಹಾದಿ ತುಳಿದರು. ಪ್ರಚೋದನೆ ಮತ್ತು ಒತ್ತಡಗಳ ನಡುವೆಯೂ, ಕಪ್ಪುವರ್ಣೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ನೂರಾರು ವರ್ಷಗಳ ಚಿತ್ರಹಿಂಸೆ ನೀಡಿದ್ದ ಅಲ್ಪಸಂಖ್ಯಾತ ಶ್ವೇತವರ್ಣೀಯರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿಲ್ಲ. ಬದಲಿಗೆ ಎಲ್ಲ ವರ್ಣಗಳನ್ನೂ ಸಮಾನವಾಗಿ ಕಾಣುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ಹರಿಕಾರನಾದರು. 1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡೇಲಾ ಅಧ್ಯಕ್ಷರಾಗಿ ಆಯ್ಕೆಯಾದರು. ಹೀಗೆ ದೇಶ, ವ್ಯವಸ್ಥೆಯನ್ನು ಸರಿದಾರಿಗೆ ತಂದ ಅವರು 1999ರಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದಿದರು. ಇಚ್ಚಿಸಿದ್ದರೆ ತದನಂತರವೂ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿರಬಹುದಿತ್ತು. ಅವರು ಬಯಸಿದ್ದರೆ ಜೈಲಿನಲ್ಲಿ ಕೊಳೆಯಬೇಕಾದ ಅಗತ್ಯವೂ ಇರಲಿಲ್ಲ. ಅಲ್ಲಿನ ಶ್ವೇತವರ್ಣೀಯ ಸರಕಾರ ಬಿಡುಗಡೆ ಮಾಡಿ ಅಜ್ಞಾತವಾಸಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಮಂಡೇಲಾ ಕಗ್ಗತ್ತಲೆಯ ನಾಡಿಗೆ ಬೆಳಕು ಚೆಲ್ಲಬೇಕೆಂಬ ಆಶಯದಿಂದ ನಾಲ್ಕುಗೋಡೆಗಳ ಮಧ್ಯೆ 27 ವರ್ಷಗಳ ಮೌನ ಹೋರಾಟ ಮಾಡಿದರು.

ಇಂತಹ ಮಂಡೇಲಾ ಇಂದು ಮರಣಶಯ್ಯೆಯಲ್ಲಿದ್ದಾರೆ. ಯಾವ ಕ್ಷಣಕ್ಕೂ ಅವರ ಪ್ರಾಣಪಕ್ಷಿ ಹಾರಿಹೋಗಬಹುದು. ತೊಂಬತ್ನಾಲ್ಕು ವರ್ಷ ವಯೋವಾನದ ಅವರದ್ದು ತುಂಬು ಬದುಕೇ ಆಗಿದ್ದರೂ ದೀವಿಗೆ ಆರುವ ಹೊತ್ತು ಬಂದಿರುವ ಸಂದರ್ಭದಲ್ಲಿ ಮನಸ್ಸು ಮಾತ್ರ ಆರ್ದ್ರವಾಗುತ್ತಿದೆ.

 

ಬಿಡುಗಡೆಯ ವೇಳೆ ಆಗಮಿಸಿತ್ತು. ಜೈಲು ಅಧಿಕಾರಿಗಳು, ಅವರ ಕುಟುಂಬದವರು ಮತ್ತು ಕೆಲವು ಬಂಧುಗಳು ಹೊರಗೆ ಕಾದಿರಬಹುದು ಎಂದು ಭಾವಿಸಿದ್ದೆ. ಅದಕ್ಕಿಂತ ಹೆಚ್ಚಿನದ್ದೇನನ್ನೂ ನಿರೀಕ್ಷಿಸಿರಲಿಲ್ಲ. ಜೈಲಿನಿಂದ ಹೊರಬಂದಾಗ ಮುಖ್ಯ ದ್ವಾರ ಇನ್ನೂ 150 ಮೀಟರ್ ದೂರದಲ್ಲಿತ್ತು. ಒಂದು ಕ್ಷಣ ನನ್ನ ಕಣ್ಣನ್ನು ನಾನೇ ನಂಬದಾದೆ. ನೂರಾರು ಛಾಯಾಗ್ರಾಹಕರು, ಟೀವಿ ಕ್ಯಾಮೆರಾಮನ್‌ಗಳು. ಅವರ ಹಿಂದೆ ಜನಸಾಗರ! ಐವತ್ತು ಮೀಟರ್‌ನಷ್ಟು ಹತ್ತಿರಕ್ಕೆ ಆಗಮಿಸಿದೆ. ಕಂಡಿದ್ದು ಕ್ಯಾಮೆರಾಗಳು ಎಡಬಿಡದೇ ಹೊರಚೆಲ್ಲುತ್ತಿದ್ದ ಬೆಳಕು. ಅಂದು ನಾನು ಸ್ವಾತಂತ್ರ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದೆ. ಬರಿದಾಗಿದ್ದ ಮನದಲ್ಲಿ ಭಾವನೆಗಳು ಉಕ್ಕಿ ಹರಿಯಲಾರಂಭಿಸಿದವು. ಎದುರಿಗಿದ್ದ ಜನಸಾಗರದಲ್ಲಿ ಒಂದಾದೆ. ಇದ್ದಕ್ಕಿದ್ದಂತೆ ಆಗಸದತ್ತ ಚಾಚಿದ ಬಲಗೈ ಮುಷ್ಠಿ ಗಾಳಿಗೆ ಗುದ್ದು ನೀಡಿತು. ಇಪ್ಪತ್ತೇಳು ವರ್ಷಗಳ ಕಾಲ ತಡೆದುಕೊಂಡಿದ್ದೆ. ಮೌನವಾಗಿ ನೋವುಂಡಿದ್ದೆ. ಆದರೆ ದಿನ ನನ್ನ ಕೈಗಳಿಗೆ ಬಲ ಬಂದಿತ್ತು. ಜೊತೆಗೆ ಅತೃಪ್ತಿಯೂ ಇತ್ತು. ಆಗ ನನಗೆ 71 ವರ್ಷ. ವಯಸ್ಸಿನಲ್ಲೂ ಹೊಸ ಜೀವನ ಪ್ರಾರಂಭವಾಗುತ್ತಿದೆಯೇನೋ ಎಂದನಿಸಿತು. 10 ಸಾವಿರ ದಿನಗಳ ಬಂಧನಕ್ಕೂ ತೆರೆಬಿತ್ತು, ಮತ್ತೆ ಹಿಂದಿರುಗಿ ನೋಡಲಿಲ್ಲ.”

ಜೂನ್, ದೇಶದಲ್ಲಿ ನೆಲೆಗೊಂಡಿದ್ದ ಪರಿಸ್ಥಿತಿಯ ಅಂದಾಜು ನಡೆಸಿದ ಮಂಡೇಲಾ, ಹಿಂಸಾಮಾರ್ಗಕ್ಕೆ ಕೈ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು. ಏಕೆಂದರೆ ನಾವು ಶಾಂತಿಯುತ ಬೇಡಿಕೆಗಳನ್ನು ಮುಂದಿಡುತ್ತಿದ್ದರೂ ಸರಕಾರ ಬಲಪ್ರಯೋಗ ಮಾಡುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಾಯಕರು ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಭಾವಿಸಿದರು. ತಮ್ಮ ಹೋರಾಟಕ್ಕೆ ಬೆಂಬಲ ಗಳಿಸುವುದಕ್ಕಾಗಿ ವಿದೇಶ ಪ್ರವಾಸ ಕೈಗೊಂಡರು. 1962ರಲ್ಲಿ ಅವರು ಮರಳಿದಾಗ, ಅನುಮತಿಯಿಲ್ಲದೆ ಗಡಿದಾಟಿದ ಮತ್ತು ಕ್ರಾಂತಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತನಾದರು. ಮಂಡೇಲಾ ವೇಳೆಗಾಗಲೇ ದಕ್ಷಿಣ ಆಫ್ರಿಕಾದ ಏಕಮೇವ ನಾಯಕರಾಗಿ ಹೊರಹೊಮ್ಮಿದ್ದರು. ಜೀವಾವಧಿ ಶಿಕ್ಷೆಗೆ ಒಳಗಾದ ಮಂಡೇಲಾ ಕೇಪ್‌ಟೌನ್‌ನಿಂದ 7 ಕಿ.ಮೀ. ದೂರದಲ್ಲಿರುವ ರಾಬೆನ್ ದ್ವೀಪದಲ್ಲಿರುವ ಬಂದಿಖಾನೆ ಸೇರಿದರು. ಹೀಗೆ ಮಂಡೇಲಾ ಅವರ ಹೋರಾಟದ ಬದುಕಿಗೆ ಕಗ್ಗತ್ತಲು ಕವಿಯಿತು. 1984ರಲ್ಲಿ ಕೇಪ್‌ಟೌನ್‌ನ ಪೋಲ್ಸ್‌ಮೂರ್ ಬಂದಿಖಾನೆಗೆ ವರ್ಗಾಯಿಸಲಾಯಿತು. 1988ರಲ್ಲಿ ಅಲ್ಲಿಂದಲೂ ವರ್ಗಾಯಿಸಿ ವಿಕ್ಟರ್ ವರ್ಸ್ಟರ್ ಜೈಲಿಗೆ ಕಳುಹಿಸಲಾಯಿತು. ಮಧ್ಯೆ 1990, ಫೆಬ್ರವರಿ 2 ರಂದು ಆಗಿನ ಅಧ್ಯಕ್ಷ ಎಫ್.ಡಬ್ಲ್ಯೂ. ಡಿ ಕ್ಲರ್ಕ್ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಿದರು.

11 Responses to “ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!”

 1. girija says:

  incomplete article

 2. Manjunatha Gouda. A says:

  8000 independent candidates nomination for the M P elections in one constancy its
  possible to do the election sir .

 3. ramu aladakatti says:

  s sir

 4. Vishwa says:

  He is really inspiring personality… write more about him next week… thank you

 5. asha sriram says:

  it is very informative and its insipiring us

 6. Dheeraj says:

  Really Inspiring

 7. sandeep s says:

  27 years of jail..ooff….. so cruel..
  I am great and True fan of u “PRATAP”.. Take Care Sir..

 8. suhas says:

  really inspiring…want to know more abt him….

 9. Intresting Nd Inspireing says:

  Intresting nd Inspireing

 10. krishna says:

  really heart touching